Thursday, May 7, 2026
Google search engine
Home Blog Page 109

ಸಿಪಿಐ ಹಿರಿಯ ಮುಖಂಡ ಎನ್. ಶಿವಣ್ಣ ಇನ್ನಿಲ್ಲ

Publicstory


ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಕಾರ್ಮಿಕ ಮುಖಂಡ ಎನ್.ಶಿವಣ್ಣ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಸೀಮೆಂಟ್ ಫ್ಯಾಕ್ಟರಿಯ ಕಾರ್ಮಿಕರಾಗಿ, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಿವಣ್ಣ ಕೆಲಸ ಮಾಡಿದರು. 1962ರಲ್ಲಿ ಹೋರಾಟಕ್ಕೆ ಧುಮುಕಿದ ಎನ್.ಶಿವಣ್ಣ ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟ ಮಾಡಿದರು.

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದರು. ಜೊತೆಗೆ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿ ಕಾರ್ಮಿಕರು, ರೈತರು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ಅಹರ್ನಿಶಿ ಹೋರಾಟ ಮಾಡಿದರು.

2002ರಲ್ಲಿ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಎನ್.ಶಿವಣ್ಣ ಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದರು. ಎಡ ಚಳವಳಿಯಲ್ಲಿ ಶಿವಣ್ಣ ಅವರ ಹೆಸರು ಪ್ರಮುಖವಾದುದು.

ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ಸಂಘಟನೆಯ ಕಾರ್ಯದರ್ಶಿಯಾಗಿ ಮತ್ತು ಬೆಂಗಳೂರಿನ ಆರೋಗ್ಯ ಕಾರ್ಯಕರ್ತೆಯರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದರು.

ಅಷ್ಟೇ ಅಲ್ಲ ಎಐಟಿಯುಸಿಯ ತುಮಕೂರು ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿ ಮತ್ತು ಬೆಂಗಳೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಹಲವು ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಕಾರ್ಮಿಕ, ರೈತ, ಅಂಗನವಾಡಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಎನ್. ಶಿವಣ್ಣ ಜೀವಿತದ ಕೊನೆಯವರೆಗೂ ಹೋರಾಟದಲ್ಲೇ ಇದ್ದರು. ಎನ್.ಶಿವಣ್ಣ ನಿಧನಕ್ಕೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಎಐಟಿಯುಸಿ ಮುಖಂಡ ಕಂಬೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಮತ್ತೆ ಮಳೆಯಾಗುತ್ತಿದೆ…

0
ಮಳೆ ಬರೇ ಪ್ರೇಮಿಗಳಿಗೆ ನೆನಪನ್ನು ನೀಡುವುದಿಲ್ಲಾ.
ಕೂಲಿ ಮಾಡುವ ಜನರಿಗೆ ಒಂದು ಥರಾ, ಮಗುವಿನ
ತಾಯಿಗೆ ಒಂದು ಥರಾ, ವೈದ್ಯರಿಗೆ ಒಂದು ರೀತಿ, ಕಾಯಿಲೆ ತಾಯಿ ನರಳುವಾಗ ಒಂದು ರೀತಿ …. ಮಳೆ ಕಾಡುತ್ತದೆ ನಾನಾ ಥರ.

ಮತ್ತೆ ಮಳೆಯಾಗುತ್ತಿದೆ

******************

ಹುಯ್ಯುವ
ಮಳೆಯಲ್ಲಿ
ಅಮ್ಮನನ್ನು
ಆಸ್ಪತ್ರೆಗೆ ಕರೆದೊಯ್ಯುವಾಗ
ಉಂಟಾದ
ಅವ್ಯಕ್ತ ಭಯ…

ಸೋರುತ್ತಿದ್ದ
ಹಂಚಿನ ಮನೆಯಲ್ಲಿ
ಸೊಳ್ಳೆ ಪರದೆ ಮೇಲೆ
ಹಾಕುತ್ತಿದ್ದ
ಗೋಣಿ ಚೀಲಗಳು…

ಅಣ್ಣ ಬಂತಾ
ಎಂದು
ರಾತ್ರಿ ಮಳೆ ಸದ್ದಿನ ನಡುವೆ
ಕಾಯುತ್ತಿದ್ದ
ಲೂನಾ ಸದ್ದು …

ಬರೇ ಸಣ್ಣ
ಜ್ವರಕ್ಕೆ
ಸುರಿಯುವ ಮಳೆಯಲ್ಲಿ
ಬಾಗಿಲು ತಟ್ಟಿದ
ಕಂದಮ್ಮನನ್ನು ಎತ್ತಿಕೊಂಡ
ತಲೆಗೆ ಸೆರಗು ಸುತ್ತಿದ
ತಾಯಿ…

ಮಳೆಗೆ ನೆನೆದ
ಕುರಿ ತುಪ್ಪಟದ
ವಾಸನೆ..

ಮಳೆಯಲ್ಲಿ
ಸಿಕ್ಕಿಕೊಂಡ
ಕಾರಿಗೆ
ಬ್ಯಾಟರಿ ಬೆಳಕು ಬಿಟ್ಟ
ಆಗಂತುಕ…

ತಿರುಪತಿ ಬೆಟ್ಟದ
ಮೇಲೆ ನೀರಲ್ಲಿ ಕೊಚ್ಚಿ
ಬಂದ ಬಳೆ ಸರಗಳು…

ಸಿಡಿಲಿಗೆ
ನಡುಗಿದ
ಕಿಟಕಿಯ ಗಾಜು …

ಸಿಡಿಲಿಗೂ ..
ಜಡಿ ಮಳೆಗೂ ಜಗ್ಗದ
ಅಮ್ಮನ ಪಕ್ಕ
ಮಲಗಿದ ನಂತರ
ಬಂದ

ನಿದ್ರೆ…


ಡಾII ರಜನಿ

ಓದಲೇಬೇಕಾದ‌ ಕವಿತೆಗಳು: ಬುದ್ಧ

1

ಆಸೆ ಬಿಟ್ಟರೆ
ಬುದ್ಧ…
ಬುದ್ಧನಿಗೂ
ಬುದ್ಧನಾಗುವ ಆಸೆ.


ಎಲ್ಲಾ ಬಿಟ್ಟು


ಎಲ್ಲಾ ಬಿಟ್ಟು
ಬುದ್ಧನಾಗುವ
ಎಂದು
ಎಣಿಸಿ ದೊಡನೆ
ಕವಿತೆ ಬರೆಯುವ
ಆಸೆ.


ಕಣ್ಣು

ಅರ್ಧ ಮುಚ್ಚಿದ
ಅಥವಾ
ಅರ್ಧ ತೆರೆದ?
ಹೊರಗೂ
ಒಳಗೂ
ದೃಷ್ಟಿ ನೆಟ್ಟು
ಎರಡನ್ನೂ ಬಿಟ್ಟು
ಅಂತರಾತ್ಮವ
ಬಗೆದು
ಒಳಗಣ್ಣು ತೆರೆದು
ಅರ್ಧ ನಿಮಿಲಿತ
ಕಣ್ಣುಗಳು
ತೆರೆಸಲಿ
ನಮ್ಮ ಕಣ್ಣು.


ಕವಯತ್ರಿ: ಡಾ. ರಜನಿ

ಬುದ್ದನಾಗುವ ಆಸೆ

0

ಕಣ್ಣು


ಅರ್ಧ ಮುಚ್ಚಿದ
ಅಥವಾ
ಅರ್ಧ ತೆರೆದ?
ಹೊರಗೂ
ಒಳಗೂ
ದೃಷ್ಟಿ ನೆಟ್ಟು
ಎರಡನ್ನೂ ಬಿಟ್ಟು
ಅಂತರಾತ್ಮವ
ಬಗೆದು
ಒಳಗಣ್ಣು ತೆರೆದು
ಅರ್ಧ ನಿಮಿಲಿತ
ಕಣ್ಣುಗಳು
ತೆರೆಸಲಿ
ನಮ್ಮ ಕಣ್ಣು.

ಬುದ್ಧ


ಆಸೆ ಬಿಟ್ಟರೆ
ಬುದ್ಧ…
ಬುದ್ಧನಿಗೂ
ಬುದ್ಧನಾಗುವ ಆಸೆ.

ಎಲ್ಲಾ ಬಿಟ್ಟು


ಎಲ್ಲಾ ಬಿಟ್ಟು
ಬುದ್ಧನಾಗುವ
ಎಂದು
ಎಣಿಸಿ ದೊಡನೆ
ಕವಿತೆ ಬರೆಯುವ
ಆಸೆ.


ಅದೆಂತಹ

ಗುಂಗುರು ಕೂದಲು ?
ಸುತ್ತುವ
ಆಲೋಚನೆಗಳೆ?

ಉದ್ದಕಿವಿ…
ಕೇಳಿ ಕೇಳಿ
ದುಃಖ ದುಮ್ಮಾನಗಳನ್ನು…

ನಮ್ಮ ಎಲ್ಲ
ಮೂರ್ಖತನಗಳನ್ನು
ನೋಡಿಯೊ? ನಿನ್ನ ನಗು ..

ಯಾಕೆ ಹೀಗೆ
ಎಲ್ಲಿಗೆ
ಓಡುತ್ತಿದ್ದೀರಾ?

ಸ್ವಲ್ಪ ಕುಳ್ಳಿರಿ
ಕುಳಿತು
ಆಲೋಚಿಸಿ…

ಕೇಳಿಸಿಕೊಳ್ಳಿ
ಎಲ್ಲಾ
ಕೇಳಿಸಿಕೊಳ್ಳಿ…

ನಿಮ್ಮ
ಉತ್ತರ
ನಸುನಗುವಾಗಲಿ…

ನೋಡಿದರೂ
ನೋಡದಂತೆ
ಇರಿ ….

ಅಗೋ
ಜ್ಞಾನೋದಯವಾಗುವುದು..

ಆ ಬುದ್ಧ
ಹೇಳಿದ್ದು

ಎಷ್ಟು ಸತ್ಯ
ಎಂದು.

ಡಾ || ರಜನಿ

ಜೀವನ:ಯಾರಿಗಾಗಿ?/

0

ನಮಗರಿವಿಲ್ಲದೆ ಹುಟ್ಟಿದ ಒಂದೇ ಕಾರಣಕ್ಕೆ ಕೆಲವು ಸಲ ನಮಗೆ ನಾವೇ ನಮ್ಮ ಭುಜ ಹಾಗೂ ಬೆನ್ನನ್ನು ತಟ್ಟಿಕೊಳ್ಳಬೇಕು!

ಯಾಕಂದ್ರೆ?
ಈ ಜಗದಲ್ಲಿ ಬೆನ್ನು ತಟ್ಟುವವರಿಗಿಂತ ತಲೆಮೇಲೆ ಕುಟ್ಟಿ ಹಳ್ಳಕ್ಕೆ ತಳ್ಳುವವರೇ ಜಾಸ್ತಿ.
ಕೆಲವು ಸಲ ನಮಗೆ ನಾವೇ ಸಂತೋಷದಿಂದ ನಗಬೇಕು!
ಯಾಕಂದ್ರೆ?

ನಗಿಸುವವರಿಗಿಂತ ನಗೆಪಾಟಲು ಮಾಡುವವರೇ ಹೆಚ್ಚು ಈ ಲೋಕದಲ್ಲಿ..
ಕೆಲವು ಸಲ ನಮಗೆ ನಾವೇ ಸುಧಾರಿಸಿಕೊಳ್ಳಬೇಕು! ಯಾಕಂದ್ರೆ? ಸುಧಾರಿಸುವವರಿಗಿಂತ ಯಾಮಾರಿಸುವವರೇ ಜಾಸ್ತಿ,
ಕೆಲವು ಸಲ ನಮ್ಮನ್ನ ನಾವೇ
ಸಮಾಧಾನಿಸಿಕೊಳ್ಳಬೇಕು!
ಇಲ್ಲದಿದ್ದರೆ ಎಲ್ಲರ ಮುಂದೆ ಅವಮಾನಿಸಿಕೊಳ್ಳಬೇಕು.
ಈ ಲೋಕದಲ್ಲಿ.!

ಕೊನೆಯವರೆಗೂ ನಮ್ಮನ್ನು ನಾವು ಮಾತ್ರವೇ ಇಷ್ಟಪಡಬೇಕು.
ಇಲ್ಲದಿದ್ದರೆ ಅವರಿವರಿಗೋಸ್ಕರ
ಸುಮ್ಸುಮ್ನೆ ಕಷ್ಟಪಡಬೇಕು.
ಕೆಲವು ಸಲ ನಮಗೆ ನಮ್ಮವರೇ ಖೆಡ್ಡಾ ತೋಡಿ ಕೆಡವುತ್ತಾರೆ,

ಹಾಗಾಗಿ ಎಡವುದ ತಡೆದು ದಿಟ್ಟವಾಗಿ ನಿಷ್ಠೆಯಿಂದ ನಿಂತು ನಡೆಯಬೇಕು.
ಕೆಲವರು ನಮ್ಮನ್ನು ಇಷ್ಟಪಡುವುದಿಲ್ಲ!
ಹಾಗೆಂದ ಮಾತ್ರಕ್ಕೆ ಅವರಿಗೋಸ್ಕರ ಕಷ್ಟಪಡದೆ ನಮ್ಮಿಷ್ಟಕ್ಕನುಗುಣವಾಗಿ
ನಮ್ಮ ಜೀವನದಲ್ಲಿ ಶ್ರೇಷ್ಟವಾಗಿ ಬದುಕಬೇಕು.
ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ!

“ಈ ಪ್ರಪಂಚ ಒಳ್ಳೆಯವರನ್ನ ಒಳ್ಳೆಯವರಂತ ಯಾವತ್ತಿಗೂ
ಒಪ್ಪಿಕೊಳ್ಳುವುದು ಇಲ್ಲ, ಒಳ್ಳೆಯವರಂತೆ ನಟಿಸುವವರನ್ನ ಮಾತ್ರವೇ?ಇವರು ತುಂಬಾ ಒಳ್ಳೆಯವರು!ಅನ್ನುತ್ತೆ ಈ ಪ್ರಪಂಚ.

ಒಳ್ಳೆತನವನ್ನು ಗುರುತಿಸೋ ಒಳ್ಳೆಯತನ ತುಂಬಾ ಜನಗಳಲ್ಲಿ ಯಾವಾಗಲೂ ಇರೋದಿಲ್ಲ.ನಮ್ಮ ಜೀವನದಲ್ಲಿ ಎಲ್ಲರೊಂದಿಗೆ ಕಲಿತು,ಕಲೆತು,ಬೆರೆತು,
ನುರಿತು ಅರಿತು ಕನಿಷ್ಠ ಸಾವು ತಾನಾಗೇ ಬರುವವರೆಗೂ ನೆಮ್ಮದಿ ಹಾಗೂ ಶಾಂತಿಯುತವಾಗಿ ಒಟ್ಟಾಗಿ ಇರೋಣ,
ಒಟ್ಟಾಗಿ ಇರಲು ಇಷ್ಟ ಪಡದವರ ಜೊತೆ ಕಷ್ಟ ಪಟ್ಟಾದರೂ,ನಮಗೆ ನಷ್ಟವಾದರೂ ಚಿಂತೆಪಡದೆ ಎಲ್ಲರಂತೆ ಎಲ್ಲರೊಂದಿಗೆ ಎಲ್ಲಾ ಸಮಯ ಸಂದರ್ಭದಲ್ಲಿ ನಗುತ್ತಿರೋಣ,
ಇಷ್ಟೇ ಹೊರತು..,

ಎಲ್ಲರೂ ನಮ್ಮವರೇ!ಎಂದೂ ಯಾವತ್ತೂ ಅಂದುಕೊಳ್ಳಬಾರದು,
ಅವರು ನಮ್ಮಿಂದ ದೂರಾದರೂ ನೊಂದು
ಕೊಳ್ಳಬಾರದು.
ಎಲ್ಲಾ ನನ್ನವರೇ?ಅಂತಲೂ ಸಂಭ್ರಮಿಸಬಾರದು..
ಸದಾ ಮುಖವಾಡ ಧರಿಸಿ ನಟನೆಯಿಂದ ಕೂಡಿದ ಪ್ರತಿ ಮಾನವನ ಪ್ರೇಮ,ಪ್ರೀತಿ,
ಅನುಕಂಪ,ಅನುಭಂದ,
ಅಪ್ಯಾಯತೆ ವಿಷಕ್ಕಿಂತ
ಹೆಚ್ಚು ಪ್ರಮಾದ ಹಾಗೂ ಪ್ರಮಾಣವಿದ್ದು ನಷ್ಟವಂತೂ ಪರಿಣಾಮಕಾರಿಯಾಗಿಯೇ
ಇರುತ್ತದೆ.
ನೆನಪಿಟ್ಟುಕೊಳ್ಳಿ

ಹುಟ್ಟಿದ ತಪ್ಪಿಗೆ ಬದುಕಬೇಕು..,
ನಮಗಾಗಿ ಬದುಕಬೇಕು.
ಕೇವಲ ನಮಗಾಗಿ ಮಾತ್ರವೇ ಬದುಕಬೇಕು.


ಪುಲಿ.ಮಂಜುನಾಥಜೋಗಿ.
ರಾಜ್ಯಶಾಸ್ತ್ರ ಉಪನ್ಯಾಸಕರು.

ಸಿಎಂ ಜತೆ ಮಕ್ಕಳ ನೇರಾ ನೇರ ಪ್ರಶ್ನೆ: ಶಾಲಾ ಕಟ್ಟಡ ಸೋರುತ್ತಿದೆ ಏನ್ ಮಾಡ್ಲಿ?

Publicstory


Tumkuru: ತುಮಕೂರಿನ ಎಂಪ್ರೆಸ್ ಶಾಲೆಗೆ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲು ಬಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಕ್ಕಳೊಂದಿಗೆ ನಡೆಸಿದ ಸಂವಾದದ ವೇಳೆ ಮಕ್ಕಳಿಂದ‌ ತೂರಿಬಂದ ಪ್ರಶ್ನೆಗಳಿವು.

ತುಮಕೂರು(ಕವಾ)ಮೇ.16: ಎಂಪ್ರೆಸ್ ಶಾಲೆಯ ನಿಶ್ಮಿತಾ :
ಕಳೆದ ಎರಡು ವರ್ಷಗಳಿಂದ ವಿದ್ಯಾಭ್ಯಾಸ ಜೊತೆಗೆ ಆಟವಾಡಲು
ಕ್ರೀಡಾ ಸಾಮಗ್ರಿಗಳ ಕೊರತೆ ಇರುವುದರಿಂದ ಕ್ರೀಡಾ
ಸಾಮಗ್ರಿಗಳನ್ನ ನೀಡಬೇಕು ಎಂದು ಮನವಿ.
ಸಿ.ಎಂ.- ಆಟದ ಜೊತೆ ಪಾಠವು ಇರಬೇಕು. ಪ್ರತಿ ಭಾರಿ ಕ್ರೀಡಾ
ಚಟುವಟಿಕೆಗಳಿಗೆ 5 ಕೋಟಿ ವ್ಯಯ ಮಾಡಲಾಗುತ್ತಿದ್ದು, ಈ ವರ್ಷ
ಕ್ರೀಡಾ ಚಟುವಟಿಕೆಗಳಿಗೆ 10 ಕೋಟಿ ವೆಚ್ಚಮಾಡಿ ಕ್ರೀಡಾ
ಸಾಮಗ್ರಿಗಳನ್ನು ಕೊಡಿಸಲು ವಿಶೇಷವಾದ ವ್ಯವಸ್ಥೆ ಮಾಡುವ
ಭರವಸೆ ನೀಡಿದರು.
ಕೊರಟಗೆರೆ ಸಕರ್ಾರಿ ಪ್ರೌಢ ಶಾಲೆಯ ರಾಕೇಶ್:- ಅಕ್ಷರ
ದಾಸೋಹದ ಮೂಲಕ ಪೌಷ್ಟಿಕಾಂಶ ಆಹಾರವನ್ನು
ಒದಗಿಸಲಾಗುತ್ತಿದೆ, ಮತ್ತಷ್ಟು ಪೌಷ್ಟಿಕಾಂಶಗಳನ್ನು ನೀಡಿ ಎಂದು
ಮನವಿ.

ಸಿಎಂ :- ಪೌಷ್ಟಿಕಾಂಶ ಆಹಾರದ ಕೊರತೆ ಇರುವ ಮಕ್ಕಳಿಗೆ
ಈಗಾಗಲೇ ಆಹಾರಗಳನ್ನು ನೀಡಲಾಗುತ್ತಿದೆ, ಈ ವರ್ಷದ ಬಜೆಟ್ನಲ್ಲಿ
ಮತ್ತಷ್ಟು ಸಿರಿಧಾನ್ಯಗಳನ್ನು ಹೆಚ್ಚಿಸಲಾಗಿದೆ ಎಂದರು.
ಬೆಳ್ಳಾವಿ ಸಕರ್ಾರಿ ಪ್ರೌಢಶಾಲೆ ಅಮೂಲ್ಯ :- ಕಳೆದ ಎರಡು
ವರ್ಷಗಳಿಂದ ಬೈಸಿಕಲ್ ನೀಡುವ ಯೋಜನೆಯನ್ನು
ನಿಲ್ಲಿಸಿರುವುದರಿಂದ ಬೈಸಿಕಲ್ ವಿತರಿಸಲು ಮನವಿ ಸಲ್ಲಿಸಿದರು.
ಸಿಎಂ.:- ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಶಾಲೆಗಳಲ್ಲಿ
ಬೈಸಿಕಲ್ ವಿತರಿಸಲಾಗಿಲ್ಲ, ಈ ಬಾರಿ ವಿತರಿಸುತ್ತೇವೆ ಎಂದು ತಿಳಿಸಿದರು.
ಚಿಕ್ಕನಹಳ್ಳಿ ಸಕರ್ಾರಿ ಹಿರಿಯ ಪ್ರಾತಮಿಕ ಪಾಠಶಾಲೆ ಭರತ್:- 4
ಶಾಲಾ ಕೊಠಡಿಗಳಿದ್ದು, ಈ ಪೈಕಿ 2 ಕಟ್ಟಡಗಳು ಸೋರುತ್ತಿವೆ.
ಹೊಸ ಶಾಲಾ ಕಟ್ಟಡಗಳನ್ನು ನಿಮರ್ಿಸುವಂತೆ ಮನವಿ ಮಾಡಿದರು.
ಸಿ.ಎಂ. :- ಈ ಸಮಸ್ಯೆ ಎಲ್ಲ ಶಾಲೆಗಳಲ್ಲಿಯೂ ಇದೆ.
ಸಾಧ್ಯವಾದಷ್ಟು ಬೇಗ ಶಾಲಾ ಕಟ್ಟಡಗಳನ್ನು ನಿಮರ್ಾಣ ಮಾಡಲು
ಪ್ರಾರಂಭಿಸಿ ಈ ವರ್ಷದ ಅಂತ್ಯದೊಳಗೆ 6500 ಶಾಲಾ
ಕಟ್ಟಡಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಚೈತನ್ಯ ಎಂಬ ಯುವಕ ತನ್ನ ತಂದೆ ತಾಯಿಯರು
ಕೋವಿಡ್ನಿಂದ ಮೃತ ಪಟ್ಟಿದ್ದು, ಸಕರ್ಾರ ತಿಂಗಳಿಗೆ 3500 ಹಣ
ನೀಡುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳಿದನು.
ಸಿ.ಎಂ. :- ಕೋವಿಡ್ನಿಂದ ಮೃತಪಟ್ಟ ಮಕ್ಕಳ ಸಂಪೂರ್ಣ
ವಿದ್ಯಾಭ್ಯಾಸಕ್ಕೆ ವಿಶೇಷವಾದ ನೆರವನ್ನು ನಮ್ಮ ಸಕರ್ಾರ ನೀಡಲಿದೆ
ಎಂದು ತಿಳಿಸಿದರು.
ಕ್ಯಾತ್ಸಂದ್ರ ಸಕರ್ಾರಿ ಪ್ರೌಢಶಾಲೆಯ ಜ್ಯೋತಿ :- ಜಿಲ್ಲೆಯ
ಮಕ್ಕಳಿಗೆ ಜಿಲ್ಲಾ ದರ್ಶನ ಹಾಗೂ ಕನರ್ಾಟಕ ಪ್ರವಾಸಕ್ಕೆ ಅವಕಾಶ

15 ಸಾವಿರ ಶಿಕ್ಷಕರ ನೇಮಕ: ಮುಖ್ಯಮಂತ್ರಿ ಬೊಮ್ಮಾಯಿ

Publicstory


ತುಮಕೂರು: 2022-23ನೇ ಶೈಕ್ಷಣಿಕ
ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿದೆ ಎಂದು
ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರು
ತಿಳಿಸಿದರು.

ಅವರಿಂದು ನಗರದ ಎಂಪ್ರೆಸ್ ಪಬ್ಲಿಕ್ ಶಾಲೆ
ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ
ಕನರ್ಾಟಕ ವತಿಯಿಂದ ಏರ್ಪಡಿಸಲಾಗಿದ್ದ 2022-23ನೇ ಸಾಲಿನ ಶೈಕ್ಷಣಿಕ
ವರ್ಷದ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯ ಪುಸ್ತಕ ವಿತರಣೆ
ಹಾಗೂ ಕಲಿಕಾ ಚೇತರಿಕೆ ವರ್ಷದ ಉದ್ಘಾಟನೆಯನ್ನು ನೆರವೇರಿಸಿ
ಮಾತನಾಡುತ್ತಿದ್ದರು.

ಶಾಲಾ ಪ್ರಾರಂಭೋತ್ಸವ ಒಂದು ಮಹತ್ವದ ಕಾರ್ಯಕ್ರಮ. ಮಕ್ಕಳಿಗೆ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನದ ಕೊರತೆ ಉಂಟಾಗಬಾರದು. ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ ಪಡೆದಂತಹ
ಮಕ್ಕಳು ಭವಿಷ್ಯದಲ್ಲಿ ಯಾವುದೇ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆಯಬಲ್ಲರು. ವಿಶೇಷ ಪಠ್ಯ ಕ್ರಮದ
ಮೂಲಕ 2 ವರ್ಷದಿಂದ ಕಲಿಯದ್ದನ್ನು ಕಲಿಸಿ, ಭದ್ರ ಶೈಕ್ಷಣಿಕ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ವಿಶೇಷತೆಯಾಗಿರುತ್ತದೆ
ಎಂದರು.
ರಾಜ್ಯದಲ್ಲಿ ಈ ವರ್ಷ ಅತಿ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಾಣ
ಮಾಡಲಾಗುವುದು ಎಂದ ಅವರು, 15ಸಾವಿರ ಶಿಕ್ಷಕರ ನೇಮಕ
ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಜ್ಞಾನ ನೀಡುವ ಕಾಯಕ ಮಧ್ಯದಲ್ಲಿ ನಿಲ್ಲಬಾರದು. ಒಂದು ದೇಶ ಮುಂದೆ ಬರಬೇಕಾದರೆ, ಪ್ರಗತಿಯ ಹಾದಿಯಲ್ಲಿ
ಸಾಗಬೇಕಾದರೆ ಆ ದೇಶದ ಸುಶಿಕ್ಷಿತ ಜನತೆ ಎಷ್ಟು ಕೌಶಲ್ಯಾಧಾರಿತ ಜ್ಞಾನ ಹೊಂದಿದ್ದಾರೆ, ತಂತ್ರಜ್ಞಾನಾಧಾರಿತ ಶಿಕ್ಷಣ ಪಡೆದಿದ್ದಾರೆ
ಎಂಬುದರ ಮೇಲೆ ನಿಧರ್ಾರವಾಗುತ್ತದೆ ಎಂದು ಅಭಿಪ್ರಾಯ
ವ್ಯಕ್ತಪಡಿಸಿದರು.

ಈ ಹಿಂದೆ ಅಪಾರ ಭೂಮಿಯುಳ್ಳವನೇ, ವ್ಯಾಪಾರ ಬಂಡವಾಳ ಹೂಡುವವನೇ ಶಕ್ತಿಶಾಲಿ ಎಂಬ ಪ್ರತೀತಿ ಇತ್ತು. ಆದರೆ ಇಂದು 21ನೇಶತಮಾನದಲ್ಲಿ ಯಾರ ಹತ್ತಿರ ಜ್ಞಾನವಿದೆಯೋ ಅವರು
ಜಗತ್ತನ್ನೇ ಆಳುತ್ತಾರೆ ಎಂದ ಮುಖ್ಯಮಂತ್ರಿಗಳು, ವಿದೇಶಿ
ಮಕ್ಕಳಿಗಿಂತ ನಮ್ಮ ಹಳ್ಳಿಯ ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದೆ ಎಂದರು.

ನಮ್ಮ ಹಳ್ಳಿಯ ಮಕ್ಕಳು 2ನೇ ತರಗತಿಯಿಂದಲೇ ಗುಣಾಕಾರ,
ಭಾಗಾಕಾರ ಮಾಡಲು ಪ್ರಾರಂಭಿಸುತ್ತಾರೆ. ವಿದೇಶದಲ್ಲಿ ಈ ಪ್ರಕ್ರಿಯೆ 6ನೇ ತರಗತಿಯಿಂದ ಆರಂಭವಾಗುತ್ತದೆ. ನಮ್ಮ
ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸೂಕ್ತ ವೇದಿಕೆಯನ್ನು ನಾವುಗಳು ಕಲ್ಪಿಸಿಕೊಡಬೇಕಿದೆ. ನಮ್ಮ
ಮಕ್ಕಳಲ್ಲಿ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ ಎಂದರು.

ನಮ್ಮಲ್ಲಿ ಶಿಶು ವಿಹಾರದಿಂದ ಶಿಕ್ಷಣ ನೀತಿ ಪ್ರಾರಂಭವಾಗುತ್ತದೆ. ಈ
ಹಂತದಿಂದ ಮಕ್ಕಳ ಮನೋಜ್ಞಾನ ವಿಕಸನ ಮಾಡಲು ಪಠ್ಯಕ್ರಮ ಅಳವಡಿಸಿಕೊಳ್ಳಲಾಗುತ್ತದೆ. ಪ್ರಶ್ನೆ ಕೇಳುವ
ಮಕ್ಕಳ ಕುತೂಹಲವನ್ನು ನಾವು ತಣಿಸಬೇಕಿದೆ. ಮಕ್ಕಳು ವಿಷಯಧಾರಿತವಾಗಿ ಎಲ್ಲಿ, ಏಕೆ, ಎಷ್ಟು, ಏನು ಎಂದು ಯೋಚಿಸಿದಾಗ ಮಾತ್ರ ಅವರಲ್ಲಿ ತಾಂತ್ರಿಕ ಹಾಗೂ ಜ್ಞಾಪಕ ಶಕ್ತಿ ಹೆಚ್ಚುತ್ತದೆ
ಎಂದರು.

ಜೀವನದಲ್ಲಿ ಒಮ್ಮೆ ವಿದ್ಯಾಭ್ಯಾಸ ಮುಗಿದರೆ ಕಲಿಕೆ ಮುಗಿಯಿತು ಎನ್ನುವ ಭಾವನೆ ಬೇಡ, ಕಲಿಕೆ ನಿರಂತರ. ಜೀವನ ಪೂರ್ತಾ ನಾವು
ವಿದ್ಯಾಥರ್ಿಯಾಗಿ ಜ್ಞಾನದ ದಾಹವನ್ನು ಬೆಳೆಸಿಕೊಳ್ಳಬೇಕು ಎಂದರು.
ನಮ್ಮೊಳಗಿನ ಜ್ಞಾನದ ಬಾಗಿಲನ್ನು ತೆರೆದಾಗ ಮಾತ್ರ ಜ್ಞಾನದ ದಾಹ ತೀರುತ್ತದೆ. ಮಕ್ಕಳು ಜೀವನದಲ್ಲಿ ಸಾಧನೆಯ ಹಾದಿಯಲ್ಲಿ
ದೊಡ್ಡ ಗುರಿ ಇಟ್ಟುಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಕರೆ
ನೀಡಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸಕರ್ಾರದ ಸಮೀಕ್ಷೆಯ
ಪ್ರಕಾರ ಕೋವಿಡ್-19ನಿಂದ ಕಳೆದ ಎರಡು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಹೊಡೆತ ಬಿದ್ದಿರುತ್ತದೆ. ಈ ಹಿನ್ನೆಲೆಯಲ್ಲಿ
ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆಗೆ ಸರ್ವ ರೀತಿಯ ನೆರವು ನೀಡಲು ಮಾನ್ಯ ಮುಖ್ಯ ಮಂತ್ರಿಗಳು
ಸಮ್ಮತಿಸಿರುತ್ತಾರೆ ಎಂದು ತಿಳಿಸಿದರು.

ಕಲಿಕಾ ಚೇತರಿಕೆ ಕೇವಲ 15 ದಿನಗಳ
ಕಾರ್ಯಕ್ರಮವಲ್ಲ, ಇದು ಇಡೀ ವರ್ಷದ ಕಾರ್ಯಕ್ರಮ. ಹತ್ತನೇ ತರಗತಿಯ ಮಕ್ಕಳಿಗೆ ಮತ್ತಷ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು
ತಿಳಿಸಿದರು.

ಇದೇ ಸಂದರ್ಭ ಶಾಲಾ ಪ್ರಾರಂಭೋತ್ಸವದ ‘ಮಾರ್ಗದರ್ಶಿ ಬಿಡುಗಡೆ ಮಾಡಲಾಯಿತು, ‘ಕಲಿಕಾ ಚೇತರಿಕೆ ಕೈಪಿಡಿ’ಯನ್ನು ಅನಾವರಣಗೊಳಿಸಲಾಯಿತು ಮತ್ತು ಸಾಂಕೇತಿಕವಾಗಿ 6-10ನೇ
ತರಗತಿಯವರೆಗಿನ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕವನ್ನು ವಿತರಿಸಲಾಯಿತು.
ಇದಕ್ಕೂ ಮುನ್ನ ಸನ್ಮಾನ್ಯ ಮುಖ್ಯ ಮಂತ್ರಿಗಳು ಸ್ಮಾಟರ್್ ಸಿಟಿ
ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಆಲದ ಮರದ ಪಾರ್ಕ್
ನಿರ್ವಹಣೆಯ ಜವಾಬ್ದಾರಿಯನ್ನು ಪ್ರೆಸ್ ಕ್ಲಬ್ ಇವರಿಗೆ ಹಸ್ತಾಂತರಿಸುವ
ಕಾರ್ಯಕ್ರಮ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ ತುಮಕೂರು ಇವರ ಪತ್ರಿಕಾ ಭವನ
ನವೀಕರಣ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಸಂಸದರಾದ ಜಿ.ಎಸ್. ಬಸವರಾಜು, ಮುಖ್ಯ ಸಚೇತಕರಾದ ವೈ.ಎ. ನಾರಾಯಣಸ್ವಾಮಿ, ಶಾಸಕರುಗಳಾದ ಡಾ. ಸಿ.ಎಂ. ರಾಜೇಶ್ ಗೌಡ, ಚಿದಾನಂದ ಎಂ ಗೌಡ, ರೇಷ್ಮೆ ಉದ್ಯಮ ನಿಗಮದ ಅಧ್ಯಕ್ಷರಾದ ಎಸ್.ಆರ್.ಗೌಡ,
ಮಹಾಪೌರರಾದ ಬಿ.ಜಿ. ಕೃಷ್ಣಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದಶರ್ಿಗಳಾದ ಎಸ್. ಸೆಲ್ವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕಿತರಾದ ಡಾ. ವಿಶಾಲ್ ಆರ್, ಸಮಗ್ರ
ಶಿಕ್ಷಣ ಕನರ್ಾಟಕದ ರಾಜ್ಯ ಯೋಜನಾ ನಿದರ್ೇಶಕರಾದ ಪಲ್ಲವಿ ಅಕುರಾತಿ,
ಜಿಲ್ಲಾಧಿಕಾರಿ ಡಾ. ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸಿಇಓ ಡಾ. ಕೆ.
ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್
ಶಹಪೂರ್ವಾಡ್,
ಹಾಜರಿದ್ದರು.

ಬುದ್ಧ ಬೋಧಿಸಿದ್ದು ಧರ್ಮವಲ್ಲ; ಪ್ರೊ.ಪ್ರಶಾಂತ್ ನಾಯಕ

Publicstory


ತುಮಕೂರು: ಬುದ್ಧ ದೇವರೂ ಅಲ್ಲ , ಭೋಧಿಸಿದ್ದು ಧರ್ಮವೂ ಅಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಮುಖ್ಯಸ್ಥ ಪ್ರೊ.ಪ್ರಶಾಂತ್ ನಾಯಕ ಅಭಿಪ್ರಾಯಪಟ್ಟರು.

ನಗರದ ತುಮಕೂರು ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ‘ಗೌತಮ ಬುದ್ಧ ಅಧ್ಯಯನ ಪೀಠ’‌ದಿಂದ ಸೋಮವಾರ ನಡೆದ ೨೫೬೬ನೇ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಬುದ್ಧ ಮತ್ತು ಸಮಕಾಲೀನ ಸಂದರ್ಭ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು.
ಮೌನದ ಮೂಲಕ ಜಗತ್ತನ್ನು ಅರ್ಥೈಸಿಕೊಂಡು ಸಮುದಾಯದ ಸಂಕಟಗಳಿಗೆ ಪರಿಹಾರ ಹುಡುಕಿದ ಬುದ್ಧ, ಎದೆಯ ಕತ್ತಲಿಗೆ ಬೆಳಕಿನ ರೂಪಕ ಕೊಟ್ಟ ದಾರ್ಶನಿಕ. ಭಾರತದ ಎಲ್ಲಾ ವಿಚಾರವಾದಿಗಳು ಬುದ್ಧನ ಬೆಳಕಿನ ಜೊತೆಗೆ ಬಂದವರು. ಚಾರ್ವಾಕರಿಂದ ಕುವೆಂಪುವರೆಗೂ ಕತ್ತಲಿಂದ ಬೆಳಕಿಗೆ ಬರುತವಂತೆ ಮಾತನಾಡಿದ್ದಾರೆ ಎಂದರು.
ಅಗೋಚರ ಶಕ್ತಿಗಳ ಬಗ್ಗೆ ಮಾತನಾಡುವವರಿಂದ ಬದುಕಿನ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ನಮ್ಮನ್ನು ನಾವು ಅರ್ಥೈಸಿಕೊಳ್ಳುವ ಕ್ರಮವನ್ನು ಅಳವಡಿಸಿಕೊಂಡಾಗ ಕಣ್ಣೊಳಗಿನ ಕತ್ತಲೆಗೆ ಬೆಳಕು ಮೂಡುತ್ತದೆ. ಸ್ವಂತಿಕೆ ಕಳೆದುಕೊಂಡಿರುವ ನಮಗೆ ಬುದ್ಧನ ಬೆಳಕು ಬೇಕು ಎಂದು ತಿಳಿಸಿದರು.

ಗೌತಮ ಬುದ್ಧ ಅಧ್ಯಯನ ಪೀಠದ ಸಂಚಾಲಕ ಡಾ.ನಾಗಭೂಷಣ ಬಗ್ಗನಡು ಮಾತನಾಡಿ, ಬುದ್ಧ ಈ ನೆಲದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿ. ಅರಮನೆ ತೊರೆದು ಕಾಡು ಮೇಡು ಅಲೆದು ವಿದ್ವಾಂಸರನ್ನು ಭೇಟಿಯಾಗಿ, ಉಪವಾಸ ಕೈಗೊಳ್ಳುತ್ತಾನೆ. ಆದರೂ, ಜ್ಞಾನ ಲಭಿಸುವುದಿಲ್ಲ. ಜನರ ಸಂಕಟಗಳನ್ನು ಕಂಡಾಗ ತನ್ನಲ್ಲಿ ಮೂಡಿದ ಅರಿವನ್ನು ಅಲ್ಲಲ್ಲಿ ಬೋಧಿಸುತ್ತಾ ಹೋಗುತ್ತಾನೆ. ಬುದ್ಧನು ತನ್ನ ಅನುಭವದ ಮೂಲಕ ಬದುಕಿನ ನಾಲ್ಕು ಅಂಶಗಳನ್ನು ಕಂಡುಕೊಂಡನು ಎಂದು ಅವರು ಹೇಳಿದರು.

ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಟಿ.ಡಿ.ವಿನಯ್ ಮಾತನಾಡಿ, ಬುದ್ಧ ವಿಶ್ವಕ್ಕೆ ಬೆಳಕಾಗಿದ್ದಾನೆ. ನಮ್ಮ ನಡುವೆ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡುವುದರ ಮೂಲಕ ಬುದ್ಧನನ್ನು ಕಾಣಬೇಕಿದೆ. ಬುದ್ಧನೆಂದರೆ ಪ್ರೆಶ್ನೆಗೆ ಬರೆಯುವ ಉತ್ತರವಾಗಬಾರದು, ನಮ್ಮೊಳಗಿನ ಪ್ರಜ್ಞೆಯಾಗಬೇಕು. ಆಲೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಈ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಶಿರಾ ತಹಶೀಲ್ದಾರ್ ಮಮತಾ ಮಾತನಾಡಿ, ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟ ತತ್ವಜ್ಞಾನಿಗಳು ನಮ್ಮ ಮುಂದಿದ್ದಾರೆ. ಅದರಲ್ಲಿ ಬುದ್ಧನೂ ಒಬ್ಬ. ಅವರ ತತ್ವಾದರ್ಶಗಳಲ್ಲಿ ಒಂದಂಶವನ್ನಾದರೂ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಪ್ರಭಾರ ಕುಲಪತಿ ಪ್ರೊ.ಕೇಶವ, ಕುಲಸಚಿವ ಡಾ.ಕೆ.ಶಿವಚಿತ್ತಪ್ಪ, ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿ ಕನ್ನಡ ಬಳಕೆ ಮಾಡಿ

ತುರುವೇಕೆರೆ: ನ್ಯಾಯಾಕಾಂಕ್ಷಿಯ ಮನಸ್ಸಾಕ್ಷಿಯ ಉಳಿವು ಮತ್ತು ಕಾನೂನಿನ ಅರಿವು ಎರಡೂ ಸಾಧ್ಯವಾದಾಗಲಷ್ಟೇ ಅವನಿಗೆ ನ್ಯಾಯ ಸಿಗುತ್ತದೆ. ಇದಕ್ಕೆ ಮಾಧ್ಯಮವಾಗಿ ನ್ಯಾಯಾಲಯದಲ್ಲಿ ಮಾತೃಭಾಷೆಯಾದ ಕನ್ನಡದ ಬಳಕೆ ಮಾತ್ರವೇ ಅನಿವಾರ್ಯ ಮಾರ್ಗ ಎಂದು ಹಿರಿಯಶ್ರೇಣಿ ನ್ಯಾಯಾಧೀಶ ಪಿ.ಎಂ.ಬಾಲಸುಬ್ರಹ್ಮಣಿ ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ ‘ನ್ಯಾಯಾಂಗದಲ್ಲಿ ಕನ್ನಡ ಬಳಕೆ ಮತ್ತು ಕಾನೂನು ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ ವಿವಿಧ ಭಾಷೆಗಳ ನಡುವೆ ಸಂವಹನದ ಕೊರತೆ ಉಂಟಾದಾಗ ಮಾತ್ರ ಉನ್ನತ ಶ್ರೇಣಿಯ ನ್ಯಾಯಾಲಯಗಳಲ್ಲಿ ಆಂಗ್ಲಭಾಷೆಯನ್ನು ಬಳಸಲಾಗುತ್ತಿದೆ. ಆದರೆ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಹುತೇಕ ಕನ್ನಡವನ್ನೇ ಬಳಸಲಾಗುತ್ತಿದೆ. ನಾನು ನನ್ನ ಪೂರಾ ವ್ಯಾಸಂಗವನ್ನು ಕನ್ನಡ ಶಾಲೆಯಲ್ಲೇ ಮಾಡಿದ್ದು, ನ್ಯಾಯಾಲಯ ಕಲಾಪಗಳನ್ನು ಕನ್ನಡದಲ್ಲೇ ನಡೆಸಿ ತೀರ್ಪನ್ನು ಸಹ ಕನ್ನಡದಲ್ಲೇ ನೀಡುತ್ತಿದ್ದೇನೆ. ಆರ್ಥಿಕವಾಗಿ ಹಿಂದುಳಿದವರು ಮತ್ತು ಮಹಿಳೆಯರು ಉಚಿತ ಕಾನೂನಿನ ನೆರವು ಪಡೆಯಬಹುದು ಎಂದರು.

ಪ್ರಸ್ತಾವಿಕವಾಗಿ ಮಾತನಾಡಿದ ವಕೀಲ ಎಸ್.ಕೆ. ಉಮೇಶ್ ‘ ಬೇರೆ ಇಲಾಖೆಗಳಂತೆ ನ್ಯಾಯಾಲಯಗಳಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕು. ನ್ಯಾಯಾಲಯಗಳಿಗೆ ಕನ್ನಡವನ್ನು ವ್ಯವಹಾರಿಕ ಭಾಷೆಯಾಗಿ ಬಳಸುವ ಇಚ್ಛಾಶಕ್ತಿ ಇದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳು ಹಾಗೂ ಶೀಘ್ರಲಿಪಿಕಾರರ ಕೊರತೆಯಿಂದ ಇದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಇದರಿಂದ ಕಕ್ಷಿದಾರರು ಮತ್ತು ನ್ಯಾಯಾಲಯಗಳ ಮಧ್ಯೆ ಸಂಪರ್ಕ ಸಂಹವನದ ಕೊರತೆಯಾಗಿ ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಆನಂದವಾಡೇಕರ್ ಅವರಿಗೆ ಹೃದಯಸ್ಪರ್ಶಿ ಸನ್ಮಾನ ನೀಡಿ ಬೀಳ್ಕೊಡಲಾಯಿತು. ಆನಂದವಾಡೇಕರ್ ತಮ್ಮ ವೃತ್ತಿಜೀವನದ ಸಾರ್ಥಕ ಕ್ಷಣಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡರು. ನ್ಯಾಯಾಲಯ ಕಲಾಪಗಳಲ್ಲಿ ವೃತ್ತಿಯುದ್ದಕ್ಕೂ ಕನ್ನಡವನ್ನೇ ಬಳಸುತ್ತಾ ಬಂದಿರುವ ವಕೀಲ ಎಸ್.ಕೆ.ಉಮೇಶ್ ಅವರನ್ನು ಸನ್ಮಾನಿಸಲಾಯಿತು.

ಕಸಾಪ ನಗರ ಘಟಕದ ಅಧ್ಯಕ್ಷ ವಿ.ಎನ್.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಪಿ.ರಾಜು, ಗಂಗರಂಗಯ್ಯ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಕೆ.ಎಸ್.ನಾಗರಾಜಪ್ಪ ಸ್ವಾಗತಿಸಿದರು. ತುಕಾರಾಮ್ ವಂದಿಸಿದರು. ಕನ್ನಡ ಉಪನ್ಯಾಸಕ ಪ್ರಕಾಶ್ ನಿರೂಪಿಸಿದರು.

ಅಪಘಾತದಲ್ಲಿ ಪ್ರಿಯಕರ ಸಾವು,   ಸಾವು ಹಿಂಬಾಲಿಸಿದ ಪ್ರಿಯತಮೆ

0

Publicstory


ತುಮಕೂರು: ಪ್ರಿಯತಮನ ಸಾವು ಅರಗಿಸಿಕೊಳ್ಳಲಾಗದ ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲ್ಲೂಕಿನಲ್ಲಿ ನಡೆದಿದೆ.

ಅರೆಹಳ್ಳಿ ಗ್ರಾಮದ ಸುಷ್ಮಾ ಮತ್ತು ಮಸ್ಕಲ್ ಗ್ರಾಮದ ತನುಷ್ ಈ ದುರ್ದೈವಿ ಪ್ರೇಮಿಗಳು.

ಸುಷ್ಮಾ , ಧನುಷ್ ಇಬ್ಬರೂ ಪ್ರೀತಿಸುತ್ತಿದ್ದರು.
ಸುಷ್ಮಾ ಅವರನ್ನು ಮದುವೆಯಾಗಲು ಧನುಷ್ ಅವರು ಸುಷ್ಮಾ ಅವರ ಕುಟುಂಬದವರು ಒಪ್ಪಿಸಿ ಒಪ್ಪಿಗೆ ಪಡೆದಿದ್ದರು.

ಇಬ್ಬರೂ ಮದುವೆಯಾಗಲು ಎರಡೂ ಮನೆಯವರು ಕೂಡ ಒಪ್ಪಿಗೆ ನೀಡಿದ್ದರು. ಇನ್ನೇನು ಮದುವೆಯಾಗಬೇಕಿದ್ದ ಜೋಡಿ ಈಗ ಮಸಣ ಸೇರಿದ್ದಾರೆ.

ಸುಷ್ಮಾ ಅವರು ತುಮಕೂರಿನಲ್ಲಿ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರು. ಧನುಷ್ ಅವರು ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ನಡೆಸುತ್ತಿದ್ದರು.

ಇಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು.
ಧನುಷ್ ಅವರು ಊರಿನ ಜಾತ್ರೆಗೆಂದು ಬರುವಾಗ ನೆಲಮಂಗಲದ ಕುಲಾನ ಹಳ್ಳಿ ಬಳಿ ಅಪಘಾತದಿಂದ ಸಾವಿಗೀಡಾಗಿದ್ದರು.

ಧನುಷ್ ಅವರ ಸಾವಿನಿಂದ ತೀವ್ರ ದುಃಖಿತರಾದ ಸುಷ್ಮಾ ಧನುಷ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಧನುಷ್ ಅವರ ಅಂತ್ಯಕ್ರಿಯೆ ನೆರವೇರಿಸಿ ಮನೆಗೆ ಬಂದ ಸುಷ್ಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ವಿಷ ಸೇವಿಸಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಮೇ ಹನ್ನೊಂದು ರಂದು ಈ ಘಟನೆ ನಡೆದಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸುಷ್ಮಾ ಅವರು ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ.

ಈ ಘಟನೆಯಿಂದ ಎರಡೂ ಗ್ರಾಮಗಳ ಜನರು ದುಃಖಭರಿತರಾಗಿ ದ್ದಾರೆ. ಪ್ರೇಮಿಸಿ ಮದುವೆ ಕನಸು ಕಂಡಿದ್ದ ಜೋಡಿಯ ಈ ದಾರುಣ ಅಂತ್ಯ ಜನರನ್ನು
ದುಃಖದ ಮಡಿಲಲ್ಲಿ ಕೆಡವಿದೆ.