Saturday, May 9, 2026
Google search engine
Home Blog Page 112

ಪಾವಗಡ: ಬೈಕ್ ಸವಾರ ಬಲಿ

Publicstory


ಪಾವಗಡ: ಗೂಡ್ಸ್ ವಾಹನ(ಬೋಲೆರೋ)-ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಾವಗಡ ಪಟ್ಟಣದ ಕಣಿವೇನಹಳ್ಳಿ ಗೇಟ್ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

ರಾಜಶೇಖರ (40) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮತ್ತೊರ್ವ ಸವಾರ ರಾಘವೇಂದ್ರ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತ ವ್ಯಕ್ತಿ ಹಾಗೂ ಗಾಯಾಳುಗಳನ್ನು ಆಂಧ್ರದ ಮಡಕಶಿರಾ ತಾಲೂಕಿನ ಎಗುವ ರಾಮಗಿರಿ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿ ಪಿ ಐ ಲಕ್ಷ್ಮಿಕಾಂತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

ಕಾರ್ಯಕರ್ತರಿಗಾಗಿ ‘ಜನತಾ ಕಾರ್ಯಾಲಯ’: ಮಾಜಿ ಶಾಸಕ ಸುರೇಶಗೌಡ

Publicstory


Tumakuru: ತುಮಕೂರು ಗ್ರಾಮಾಂತರದ ನನ್ನ ಕ್ಷೇತ್ರದ ಜನರೇ ನನ್ನ ಜೀವಾಳ. ಅವರ ಸೇವೆಗಾಗಿ ನಾನು ಸದಾ ಬದ್ಧ. ಹೀಗಾಗಿಯೇ ಜನರ ಸಂಪರ್ಕಕ್ಕೆ ಯಾವಾಗಲೂ ಲಭ್ಯವಾಗುವಂತೆ ಕಾರ್ಯಾಲಯವನ್ನು ನಿರ್ಮಿಸುತ್ತಿರುವುದಾಗಿ ಮಾಜಿ ಶಾಸಕ ಬಿ. ಸುರೇಶ್ ಗೌಡರು ತಿಳಿಸಿದರು.

ಮಂಗಳವಾರ ಬಾಣಾವರ ಗೇಟ್ ಬಳಿ ಜನತಾ ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ ಜನರೊಟ್ಟಿಗೆ ಯಾವಾಗಲು ಇರಬೇಕೆಂಬುದು ನನ್ನ ಆಸೆ.
ಜನರು ಯಾವಾಗಲೂ ನೆನಪಿಟ್ಟುಕೊಳ್ಳು ವಂಥ ಸೇವೆ ಮಾಡಬೇಕೆಂಬುದು ನನ್ನ ಗುರಿಯಾಗಿದೆ. ಕ್ಷೇತ್ರ ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನಡೆಯಬೇಕು. ಜನತೆಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬುದೇ ನನ್ನ ಗುರಿ ಎಂದರು.

ಕುಡಿಯಲು ಹೇಮಾವತಿ ನೀರು, ಒಳ್ಳೆಯ ಶಿಕ್ಷಣ, ಒಳ್ಳೆಯ ರಸ್ತೆ, ಒಳ್ಳೆಯ ಆರೋಗ್ಯ ಇವೇ ನನ್ನ ಗುರಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ ಮೋಜು ಮಸ್ತಿಗಾಗಿ ಕಚೇರಿ ಮಾಡುವುದಲ್ಲ ಜನರ ಸೇವೆಗಾಗಿ ಇರಬೇಕು ಎಂದು ಹೇಳುತ್ತ ಪರೋಕ್ಷವಾಗಿ ಶಾಸಕ ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು .

ಮೋಜು ಮಸ್ತಿ ಮಾಡಿಸುತ್ತಾ ಯುವಕರನ್ನು ಹಾಳು ಮಾಡಬಾರದು. ಇದರಿಂದ ಕುಟುಂಬಗಳು, ಸಮಾಜವು ಹಾಳಾಗುತ್ತದೆ. ಜನರ ಅಭಿವೃದ್ಧಿಗಾಗಿ ನಾವು ದುಡಿಯಬೇಕಾಗಿದೆ. ಸುರೇಶ್ ಗೌಡರು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವ, ದುಡಿಯುವ ನಾಯಕರಾಗಿದ್ದಾರೆ ಎಂದರು .

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ. ಶಂಕರ್, ಜಿ.ಪಂ,ಮಾಜಿ ಸದಸ್ಯ ಗೂಳೂರುಶಿವಕುಮಾರ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಘುನಾಥಪ್ಪ, APMC ಅಧ್ಯಕ್ಷರಾದ ಉಮೇಶ್ ಗೌಡ, ಮುಖಂಡರಾದ ಸಿದ್ದೇಗೌಡ, ಹೊಳಕಲ್ ಗ್ರಾ,ಪಂಚಾಯತ್ ಅಧ್ಯಕ್ಷೆ ಕಲ್ಪನ, ತಾಲ್ಲೂಕು & ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ನೂರಾರು ಜನ ಕಾರ್ಯಕರ್ತ ಬಂದುಗಳು ಉಪಸ್ಥಿತರಿದ್ದರು.

ತುಮಕೂರು ಶಂಕರಮಠ ದೋಚಿದ ಕಳ್ಳರು

Publicstory


ತುಮಕೂರು : ನಗರದ ಜನನಿಬಿಡ ರಸ್ತೆ ಬಸ್ ರಸ್ತೆಗೆ ತಾಗಿಕೊಂಡಂತಿರುವ ಶಂಕರಮಠದಲ್ಲಿ ಕಳ್ಳತನ ನಡೆದಿದೆ.
ಶಂಕರಮಠದ ನಡೆಯುವ ಕಳ್ಳತನ ಇಂದು ಬೆಳಿಗ್ಗೆ ಬೆಳಕಿಗೆ ಬಂದಿತ್ತು ಜನರನ್ನು ಭಯಭೀತರನ್ನಾಗಿಸಿದೆ.
ಯಾವಾಗಲೂ ರಸ್ತೆಯಲ್ಲಿ ವಾಹನ ಸಂಚಾರ ಇದ್ದರೂ ಕೂಡ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿಯಾಗಿದೆ.
ಮಠಕ್ಕೆ ನುಗ್ಗಿರುವ ಕಳ್ಳರು ಮಠದ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ.

ಕಳ್ಳತನಕ್ಕೂ ಮುನ್ನ ದೇವಸ್ಥಾನದ ಪಕ್ಕದಲ್ಲಿರುವ ಅರ್ಚಕರ ಮನೆಯ ಬಾಗಿಲಿಗೆ ಬೀಗ ಹಾಕಿರುವ ಕಳ್ಳರು ನಂತರ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಎಸಗಿ ಪರಾರಿಯಾಗಿದ್ದಾರೆ.

ಮುಂಜಾನೆ 5ಗಂಟೆಗೆ ಎಂದಿನಂತೆ ಬಾಗಿಲು ತೆರೆದು ಎದ್ದು ಅರ್ಚಕರು ನೋಡಿ ಮಠದ ವ್ಯವಸ್ಥಾಪಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಂತರ ಭದ್ರತಾ ಸಿಬ್ಬಂದಿ ಬಂದು ಅರ್ಚಕರ ಮನೆ ಬಾಗಿಲು ತೆಗೆದಿದ್ದಾರೆ.
ಆ ನಂತರ ದೇವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಎನ್ ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.
ಸಿದ್ದರಾಮೇಶ್ವರ ಬಡಾವಣೆ ಒಂದೇ ದಿನ 7ಮನೆಗಳ ಕಳ್ಳತನ ನಡೆದ ಬೆನ್ನಲ್ಲೇ ಈ ಘಟನೆ ನಗರದ ಜನರನ್ನು ಭಯಭೀತರನ್ನಾಗಿಸಿದೆ.

ಪರೀಕ್ಷೆಗಳ ಹಗರಣವೂ ,ಮೊಬೈಲ್ ತುಳಿದಾಡುವಿಕೆಯೂ…

0

Publicstory


ಈಗಾಗಲೆ ಪಿಎಸ್ಐ ನೇಮಕಾತಿ ಹಗರಣದಿಂದ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಬೀದಿ ಪಾಲಾಗಿದೆ.
ಈ ಹಿಂದೆಯೂ ಸರಕಾರಿ ಹುದ್ದೆಗಳನ್ನು ಕೊಂಡು ಕೊಂಡಿರುವವರನ್ನು ಪತ್ತೆ ಹಚ್ಚಬೇಕಾಗಿದೆ.

SDA FDA , ಪರೀಕ್ಷೆಯ ಸತ್ಯಾಸತ್ಯತೆ ಒರೆಗೆ ಹಚ್ಚಬೇಕಾಗಿದೆ.

ಕಿಂಗ್ ಪಿನ್ ಗಳನ್ನು ಹೊರತು ಪಡಿಸಿ ಸರಕಾರಿ ವ್ಯವಸ್ಥೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹಂತದಿಂದ ಪರೀಕ್ಷಾ ಕೇಂದ್ರಗಳನ್ನು ಗೊತ್ತು ಪಡಿಸಲು ಇರುವ ಅಧಿಕಾರಿಗಳನ್ನು ಬಲೆಗೆ ಕೆಡವಬೇಕಾಗಿದೆ.

ಎಲ್ಲಾ ಅಭ್ಯರ್ಥಿಗಳ omr ಪರಿಶೀಲಿಸಿ ಹೊಂದಿಕೆ ಆಗದ OMR ಅಭ್ಯರ್ಥಿಗಳನ್ನು ಅಕ್ರಮ ಎಂದು
ಪರಿಗಣಿಸಲಿ.

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿರುವವರ ಭಾವನೆ ಗಳ ಜೊತೆ ಚೆಲ್ಲಾಟ ಆಡಿರುವವರಿಗೆ ನ್ಯಾಯಾಲಯ
ಸರಿಯಾದ ಶಿಕ್ಷೆ ವಿಧಿಸಲಿ .

ಎದುರಿಗೇ ಮೊಬೈಲ್ ತುಳಿದರೆ ಪುಡಿ ಪುಡಿ ಆದರೆ ಏಕೆ
ತಡೆ ಗಟ್ಟಿಲ್ಲ. ಮೊಬೈಲ್ ಲೊಕೇಷನ್ ಹಿಡಿದು ಇಷ್ಟು ದಿನ ಬೇಕ ಹಾಗರಗಿ ಇಡಿಯಲು. ತುಳಿದರೂ Sim ಪುಡಿಯಾಗಲ್ಲ, ತುಳಿದು ನೋಡಿ. ಎಲ್ಲಿ ಲಿಂಕ್ ತಪ್ತಿಸುತ್ತಾ ಇದ್ದಾರೆ , ಯಾರು ಯಾರನ್ನ ರಕ್ಷಿಸುತ್ತಿದ್ದಾರೆ
ದೇವರಿಗೆ ಗೊತ್ತು

ಇಂಟರ್ ವ್ಯೂ, ವೈವಾ ಎಂಬ ಕೆಪಿಎಸ್ಸಿ ಗೋಲ್ ಮಾಲ್
ಈಗ ಲಿಖಿತ ಪರೀಕ್ಷೆಯೂ ಗೋಲ್ ಮಾಲ್.
ಮುಂದೆ ನಡೆಯಲಿರುವ NEET ಮೇಲೆ ನಿಗಾ ಇಡಬೇಕಾಗಿದೆ. ಸರಕಾರದ ಅವ್ಯವಸ್ಥೆ ಇಂದ ಭವಿಷ್ಯದ ಮೇಲೆ ನಂಬಿಕೆ ಕಳೆದು ಕೊಳ್ಳುವಂತಾಗಿದೆ. ವಿದ್ಯೆಗೆ ಬೆಲೆ ಇಲ್ಲ. ಇದು ಸಾಮಾಜಿಕ ವ್ಯವಸ್ಥೆಯ ಅವನತಿ .
ಬರೇ ಪರೀಕ್ಷೆ ಪಾಸು ಕೆಲಸ ಅಲ್ಲ.
ಇದನ್ನು ನಾವೆಲ್ಲರು ಅರ್ಥ ಮಾಡಿಕೊ ಬೇಕು.

50 ಲಕ್ಷ ಕೊಟ್ಟು ಬರೊ ಪಿಎಸ್ಐ ಯಾವ ರೀತಿ ನೂಂದು ಬರುವವರಿಗೆ ನ್ಯಾಯ ನೀಡುತ್ತಾನೆ?

ಶಿಕ್ಷಣ ತಜ್ಞರು ಪೂರ್ಣ ಬಲಿಷ್ಠ ವ್ಯವಸ್ಥೆಗೆ ಪರೀಕ್ಷೆಗಳಿಗೆ
ನಾಂದಿ ಹಾಡಬೇಕಿದೆ.

ಇಲ್ಲವಾದಲ್ಲಿ ಉದ್ಯೋಗ ಉಳ್ಳವರ ಪಾಲಾದರೆ
ವಿದ್ಯೆ ಅರ್ಥಹೀನವಾಗಿ ವ್ಯವಸ್ಥೆ ಬುಡಮೇಲಾಗುತ್ತದೆ.

Real time on line Exam without interview ಮತ್ತು VIVA ಪರಿಹಾರವೇ ಎಂದು ಪರಿಶೀಲಿಸಿ.
BANK EXAM ಗಳ ಉದಾಹರಣೆ ತೆಗೆದು ಕೊಳ್ಳಿ.
ಅಂಥಾ ಪರೀಕ್ಷಾ ಕೇಂದ್ರ ನೀಡುವಷ್ಟು ಕಲಬುರ್ಗಿ
ಹಾಳು ಬಿದ್ದಾಗಿತ್ತೇ?

ಚಿದು, ವೆಂಕಟಾಚಲ‌ ಪ್ರಶಸ್ತಿ ಸ್ವೀಕಾರ: ಸಚಿವರಿಂದ ಸಲಹೆ

ಶಿರಾ: ಪತ್ರಿಕೋದ್ಯಮದ ಜವಾಬ್ದಾರಿ ಹೆಚ್ಚಿದ್ದು, ನೈತಿಕತೆ ಹೆಚ್ವಿಸುವ ಕೆಲಸ ಪತ್ರಕರ್ತರು ಮಾಡನೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಶಾಖೆ ಹಾಗೂ ಶಿರಾ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಸಮಾಜ ಸೇವಾ ರತ್ನ ಹಾಗೂ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಮಹಾರಾಜ್ ಜೀ ದ್ವೇಷ, ಅಸೂಯೆಗಳಿಂದ ಸಮಾಜವನ್ನು ಹೊಡೆಯುವ ಕೆಲಸ ಮಾಡುವುದನ್ನು ಬಿಡಬೇಕು, ಸಮಾಜವನ್ಮು ಬದಲಾಯಿಸುವ ಶಕ್ತಿ ಪತ್ರಿಕೆಗೆ ಇದೆ. ನಿಮ್ಮ ಒಂದು ವರದಿ ಸಮಾಜವನ್ನು ಸರಿ ದಾರಿಗೆ ತರುವುದು ಅದ್ದರಿಂದ ಹೊಸ ಸಮಾಜವನ್ನು ನಿರ್ಮಾಣ ಮಾಡುವ ಕೆಲಸ ಮಾಡಬೇಕು. ನಮ್ಮ ಜೀವನದಲ್ಲಿ ಬಂದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವವರೆ ನಿಜವಾದ ಸಮಾಜ ಸೇವಕರು ಎಂದರು.

ದತ್ತಿ ಪ್ರಶಸ್ತಿ: 2019-20 ನೇ ಸಾಲಿನಲ್ಲಿ ಚಂದ್ರಕಾಂತ್, ಎಚ್.ವಿ.ವೆಂಕಟಾಚಲ, ಎಚ್.ಐ.ಶಾಂತಿನಾಥ್, 2019-20 ನೇ ಸಾಲಿನಲ್ಲಿ ಕೊರಟಗೆರೆ ಪ್ರಜಾವಾಣಿ ವರದಿಗಾರ ಎ.ಆರ್.ಚಿದಂಬರ, ಮಂಜುನಾಥ ಅರಸ್, ಟಿ.ಎ.ವಿಜಯಕುಮಾರ್ ಅವರಿಗೆ ದತ್ತಿ ಪ್ರಶಸ್ತಿ ಹಾಗೂ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಮಹಾರಾಜ್ ಜೀ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಐಯುಡಬ್ಲ್ಯೂಜೆ ರಾಷ್ಟ್ರಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿದರು.
ಸಂಸದ ಪಿ.ಸಿ.ಮೋಹನ್, ನಗರಸಭೆ ಅಧ್ಯಕ್ಷ ಅಂಜಿನಪ್ಪ, ತಹಶೀಲ್ದಾರ್ ಎಂ.ಮಮತ, ಮುಡಿಮಡು ಮಂಜುನಾಥ್, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ರಘುರಾಮ್, ತಾಲ್ಲೂಕು ಅಧ್ಯಕ್ಷ ಜಯಪಾಲ್ , ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದಲಿಂಗಸ್ವಾಮಿ, ಆರ್.ನಾಗರಾಜು, ಚಿಕ್ಕೀರಪ್ಪ, ವಿನೋದ್ ಕುಮಾರ್, ದಶರಥ, ಬಾಲಕೃಷ್ಣೇಗೌಡ, ಶಿವಕುಮಾರ್ ಇದ್ದರು.

ಸೋಮವಾರವೇ ರಮ್ಜಾನ್: ಸರ್ಕಾರಿ ರಜೆ ಘೋಷಣೆ

Public story


ಒಂದು ದಿನ ಮುಂಚಿತವಾಗಿ ರಮ್ಜಾನ್ ಆಚರಣೆ ಹಿನ್ನೆಲೆಯಲ್ಲಿ ಮೇ ಎರಡರಂದು ಹಬ್ಬದ ಆಚರಣೆ ನಡೆಯಲಿದೆ. ಹೀಗಾಗಿ ಮೇ 2 ರಂದು ರಾಜ್ಯ ಸರ್ಕಾರ ರಜೆಯನ್ನು ಘೋಷಿಸಿ ಆದೇಶ ಹೊರಡಿಸಿದೆ.

ರಜೆ ಹಿನ್ನೆಲೆಯಲ್ಲಿ ಮೇ 2ರಂದು ನಡೆಯಬೇಕಿದ್ದ ಕಾನೂನು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ .

ಮೇ 3ರಂದು ಬಸವ ಜಯಂತಿಗೂ ಸರ್ಕಾರಿ ರಜೆ ಘೋಷಿಸಲಾಗಿದೆ.

ಸೋಮವಾರ ನಡೆಯಬೇಕಿದ್ದ ಪದವಿ ಕಾನೂನು ಪದವಿ ಪರೀಕ್ಷೆಯ ಮುಂದಿನ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು ಎಂದು ವಿಶ್ವವಿದ್ಯಾನಿಲಯ ಹೇಳಿದೆ.
ಭಾನುವಾರವೂ ರಜೆ ದಿನವಾಗಿದ್ದರಿಂದ ಒಟ್ಟು 3 ದಿನಗಳ ಸಾಲು, ಸಾಲು ರಜೆ ಸಿಕ್ಕಂತಾಗಲಿದೆ.

ಅಬ್ಬಾ! ಸ್ಮಾರ್ಟ್ ಸಿಟಿಯಲ್ಲಿ ಹೀಗೂ ಉಂಟು!!

0

ಪಬ್ಲಿಕ್ ಸ್ಟೋರಿ


ತುಮಕೂರು: ನಗರದಲ್ಲಿ ಎಲ್ಲೆಲ್ಲೂ ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು ಅತಿಕ್ರಮಣ ಮಾಡಿಕೊಳ್ಳುತ್ತಿದ್ದು ಮಹಾನಗರ ಪಾಲಿಕೆಯ ಸಿಬ್ಬಂದಿ‌ ಮಾತ್ರ ನಿದ್ದೆಯಲ್ಲಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ವೆಚ್ಚ ಮಾಡಿ ಫುಟ್ ಪಾತ್ ಗಳ ಮರು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹೀಗೆ ನಿರ್ಮಾಣವಾಗುತ್ತಿರುವ ಫುಟ್ ಪಾತ್ ಗಳು ಜನಸಾಮಾನ್ಯರಿಗೆ ಮಾತ್ರ ಬಳಕೆಗೆ ಬರುತ್ತಿಲ್ಲ. ಅಂಗಡಿ ಮಾಲೀಕರು ತಮ್ಮದೇ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ.

ಅಂಗಡಿ ಮಾಲೀಕರು, ಹೋಟೆಲ್ ಉದ್ಯಮಿಗಳು, ಜ್ಯೂಸ್ ಸೆಂಟರ್ಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದರು ಕೂಡ ಯಾರೂ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ .

ಟೌನ್ ಹಾಲ್ ವೃತ್ತದಲ್ಲಿ ಟಿಎಚ್ ಎಸ್ ಡಯಾಗ್ನಾಸ್ಟಿಕ್ ಸಮೀಪ ಇದೇ ರೀತಿಯಾಗಿದೆ.
ಇಲ್ಲಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಇಡೀ ಜಾಗವನ್ನೂ ಕಬಳಿಸಲಾಗಿದೆ.
ಎಲ್ಲಾ ಖಾಸಗಿ, ಸರ್ಕಾರಿ ಬಸ್ಸುಗಳು ಇಲ್ಲಿ ನಿಲುಗಡೆ ನೀಡುತ್ತವೆ. ಬಸ್ ಕೇಳಿದವರು ಫುಟ್ ಪಾತ್ ಬಳಕೆಗೆ ಅವಕಾಶವೇ ಇಲ್ಲದಂತಾಗಿದೆ. ಫುಟ್ ಪಾತ್ ಬದಲಿಗೆ ರಸ್ತೆ ರೆ ಬಳಸಬೇಕಾಗುವುದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚಿವೆ.

ಕೂಡಲೇ ಇಲ್ಲಿಯ ಫುಟ್ ಪಾತ್ ತೆರವು ಗೊಳಿಸಬೇಕು ಜನಸಾಮಾನ್ಯರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಫುಟ್ ಪಾತ್ ಗಳ ಅತಿಕ್ರಮಣ
—————————————


ಟಾನ್ ಹಾಲ್ ಸರ್ಕಲ್ ನಲ್ಲಿ ಬಸ್ ಇಳಿದು ನಡೆಯಲು
ಇರುವ ಫುಟ್ ಪಾತ್ ಅನ್ನು ಬೇಲಿ ನಿರ್ಮಾಣ ಮಾಡಿ
ಆಕ್ರಮಿಸಿಕೊಂಡಿದ್ದಾರೆ. ರಾಜ ಕಾಲುವೆ. ಫುಟ್ ಪಾತ್ ಆಕ್ರಮಿಸಿ ಕೊಳ್ಳುವಾಗ ಕಣ್ಣುಮುಚ್ಚಿ ಕುಳಿತು, ಆಕ್ರಮಿಸಿದವರು ಬಲಿತು ಕೊಂಡಾಗ ಅದು ಬೇರೆಯದೇ ರೂಪ ಪಡೆಯುತ್ತದೆ. ತಕ್ಷಣವೇ ಟೌನ್ ಹಾಲ್ ಬಳಿಯ ಜ್ಯೂಸ್ ಅಂಗಡಿ ಎದುರು ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸಿ ಜನರಿಗೆ ಬಸ್ ಇಳಿದು ಸುರಕ್ಷಿತವಾಗಿ ರಸ್ತೆ ದಾಟಲು ಕ್ರಮ ವಹಿಸಬೇಕು.
ನವೀನ್ ಕುಮಾರ್, ತುಮಕೂರು


1450 ಕಾನೂನುಗಳು ರದ್ದು: ಪ್ರಧಾನಿ ನರೇಂದ್ರ ಮೋದಿ

0

Publicatory


Newdelhi: ದೇಶದಲ್ಲಿ ಒಟ್ಟು ಇವತ್ತು ಕಾನೂನುಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು
ನವದೆಹಲಿಯಲ್ಲಿ ನಡೆಯುತ್ತಿರುವ ದೇಶದ ಎಲ್ಲಾ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ಸಮಾವೇಶದಲ್ಲಿ ನರೇಂದ್ರ ಮೋದಿ ಮಾತನಾಡಿದರು.

2015ರಲ್ಲಿ ನಾವು ಅನುಪಯುಕ್ತ ಕಾಯ್ದೆಗಳನ್ನು ಗುರುತಿಸಿದ್ದೆವು. ಇವುಗಳಲ್ಲಿ 1450 ಕಾನೂನುಗಳನ್ನು ರದ್ದುಪಡಿಸಲಾಗಿದೆ. ಆದರೆ ರಾಜ್ಯಗಳು ಇವುಗಳಲ್ಲಿ ಕೇವಲ ಎಪ್ಪತ್ತೈದು ಕಾನೂನುಗಳನ್ನು ಮಾತ್ರ ರದ್ದುಪಡಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಆಯಾ ಸ್ಥಳೀಯ ಭಾಷೆಯಲ್ಲಿ ನ್ಯಾಯದಾನ ಸಿಕ್ಕಾಗ ಬಡವರಿಗೆ ಬಡವರಿಗೆ ಸಹಾಯ ವಾಗಲಿದೆ ಎಂದರು .

ಬಡವರಿಗೆ ತಾಂತ್ರಿಕ ತಾಂತ್ರಿಕ ಶಿಕ್ಷಣವನ್ನು ಆಯಾ ಸ್ಥಳೀಯ ಭಾಷೆಯಲ್ಲಿ ಒದಗಿಸಲು ಪ್ರಯತ್ನ ಮಾಡಲಾಗುತ್ತಿದೆ ಅದೇ ರೀತಿ ಸಾಯಗಾಂವ್ ಉಡಾಯಿಸಿ ಬಡವರಿಗೆ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಂಗ ವ್ಯವಸ್ಥೆ ಮತ್ತು ಬಡವರ ನಡುವಿನ ಅಂತರ ಹೋಗಲಾಡಿಸಲು ಸ್ಥಳೀಯ ಭಾಷೆಯ ಅಗತ್ಯ ಹೆಚ್ಚಿದೆ ಎಂದು ಹೇಳಿದರು .

ಪಿಡಿಓ ಆತ್ಮಹತ್ಯೆ

0

Public story


Kanakapura: ಅಕ್ರಮದ ಆರೋಪ ಎದುರಿಸಿದ್ದ ಪಿಡಿಒ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕೊಳಿಗ್ಗನಹಳ್ಳಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಪಿಡಿಒ ಅವರನ್ನು ರವಿ ಎಂದು ಗುರುತಿಸಲಾಗಿದೆ. ಅಕ್ರಮದ ಹಿನ್ನೆಲೆಯಲ್ಲಿ ಇವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಗ್ರಾಮದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಕ್ರಮವಾಗಿ ಈ ಖಾತೆ ಮಾಡಿಕೊಟ್ಟ ಆರೋಪ ಇವರ ಮೇಲಿತ್ತು. ಹಾರೋಹಳ್ಳಿ ಬೈರಮಂಗಲ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಆಗಿ ಕೆಲಸ ನಿರ್ವಹಿಸಿದ್ದರು. ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೈರಮಂಗಲ ಗ್ರಾಮ ಪಂಚಾಯಿತಿ ಮೇಲೆ ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಇದಾದ ಬಳಿಕ ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ ಅವರು ರವಿಯವರನ್ನ ಅಮಾನತುಗೊಳಿಸಿದ್ದರು.

ಪಿಎಸೈ ಮರುಪರೀಕ್ಷೆ : ಎಚ್.ಡಿ.ಕೆ.‌ ವಿರೋಧ, ರೂಪಾ ಪರ

Publicstory


ವ್ಯಾಪಕ ಅಕ್ರಮದ ಹಿನ್ನೆಲೆಯಲ್ಲಿ ಪಿಎಸ್ ಐ ಪರೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಪರ ವಿರೋಧ ವ್ಯಕ್ತವಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮರುಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಡಿ ರೂಪಾ ಅವರ ಟ್ವೀಟ್ ಅನ್ನು ಬೆಂಬಲಿಸಿ ಮಾಜಿ ಪೊಲೀಸ್ ಅಧಿಕಾರಿ ರಾಜಕಾರಣಿ ಕಿರಣ್ ಬೇಡಿಯವರು ಇಂಥವರೇ ಇರಬೇಕು ಎಂದು ಹೇಳಿದ್ದಾರೆ.

ಮರುಪರೀಕ್ಷೆಯಿಂದ ಕಡುಬಡವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಮರು ಪರೀಕ್ಷೆ ಆಡದಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.

ಅಭ್ಯರ್ಥಿಗಳ ನೋವನ್ನು ಆಲಿಸಿದ ಕುಮಾರಸ್ವಾಮಿ ಮರುಪರೀಕ್ಷೆ ನಡೆಸದಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.

ಮರು ಪರೀಕ್ಷೆ ಮಾಡಿದರೆ ಮಾತ್ರ ಅನ್ಯಾಯ ಸರಿಪಡಿಸಿದಂತಾಗುವುದಿಲ್ಲ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ವರ್ಗಾವಣೆ ಮಾತ್ರವೇ ಸಾಲದು ಎಂಬ ಡಿ. ರೂಪಾ ಹೇಳಿಕೆ ಪೊಲೀಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತ, ಮರು ಪರೀಕ್ಷೆಯಲ್ಲೂ ಅಕ್ರಮ ಆಗದು ಎಂಬ ಭರವಸೆ ಏನಿದೆ ಎಂದು ಎಚ್ಡಿಕೆ ಕೇಳಿದ್ದಾರೆ.