Tuesday, May 5, 2026
Google search engine
Home Blog Page 113

ಪತ್ರಕರ್ತ ಚಿದುಗೆ ವೈ.ಕೆ.ರಾಮಯ್ಯ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತುಮಕೂರು ಜಿಲ್ಲಾ ಘಟಕದ ವೈ.ಕೆ.ರಾಮಯ್ಯ ಪ್ರಶಸ್ತಿಗೆ ಕೊರಟಗೆರೆ ಪ್ರಜಾವಾಣಿ ವರದಿಗಾರರಾದ ಎ.ಆರ್.ಚಿದಂಬರ್ (ಚಿದು) ಆಯ್ಕೆಯಾಗಿದ್ದಾರೆ.

2019-20 2020-21 ನೇ ಸಾಲುಗಳ ದತ್ತಿ ಪ್ರಶಸ್ತಿಯನ್ನು ಈಚೆಗೆ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪ್ರಶಸ್ತಿ ಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪಡೆದವರ ವಿವರ‌ ಹೀಗಿದೆ.

1) ಚಂದ್ರಕಾಂತ್ ಮಧುಗಿರಿ 2019-20ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)

2) ಎಚ್ ವಿ ವೆಂಕಟಾಚಲ 2019-20ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್) (ಉತ್ತಮ ಪರಿಸರ ವರದಿ)

3) ಎಚ್ ಐ ಶಾಂತಿನಾಥ್ ಈಟಿವಿ ಭಾರತ್ ತುಮಕೂರು 2019- 20ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)

4) ಮಂಜುನಾಥ್ ಅರಸ್ ಚಿಕ್ಕನಾಯಕನಹಳ್ಳಿ 2020-21ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)

5) ಎ ಆರ್ ಚಿದಂಬರ ಪ್ರಜಾವಾಣಿ ಕೊರಟಗೆರೆ 2020-21ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್)
(ಉತ್ತಮ ಪರಿಸರ ವರದಿ)

6) ಟಿ ಎ ವಿಜಯಕುಮಾರ್ ತುಮಕೂರು ವಾರ್ತೆ ಸಿರಾ ತಾಲೂಕು 2020- 21ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)

ಕವಿತೆ ಓದಿ: ಮುಳುಗಿದ ನೇಸರ

0

ಡಾ.‌ರಜನಿ


ಏನು ಮಾಡಿದೆ ಎಂದು
ನುಸುಳಿ ಹೋಗುತ್ತಿರುವೆ…
ಪ್ರೀತಿಸಿ ಬಸವಳಿದೆಯಾ?

ನನಗೆ ಗೊತ್ತು
ವಿರಮಿಸಿ,
ರಾತ್ರಿ ಸೊಬಗ ಹೊತ್ತು …

ಪ್ರತಿ ದಿನ ಹೊಸ ರೂಪ
ತಾಳಿ ಬರುವೆ
ನನ್ನ ರಮಿಸಲು ….

ಬಾಲ ಚಂದಿರನಿಂದ
ಪೂರ್ಣ ಚಂದಿರನಾಗಿ…

ಸದಾ ಉರುಟಾಗಿ
ಹಿರಿತನದ
ಉರಿ ಬಿಸಿಲು ಏನು ಚೆನ್ನ ಹೇಳು..

ಅದಕ್ಕೆಂದೇ ನಾನು ಬೆಳಗ್ಗೆ
ಕಾದು ಕಾದು ….

ರಾತ್ರಿ ಬರಲು
ಹೇಳಿದ್ದು

ಗೊತ್ತಾಗಿ ಈಗಲೇ
ಕೆಂಪಾಗಿ….

ಉ….ಸರಿ
ಹೋಗಿ ಬಾ
ತಣ್ಣಗೆ
ಬೆಳದಿಂಗಳಾಗಿ

ರಜನಿ

ಪ್ರಯತ್ನದಿಂದಷ್ಟೆ ಬದಲಾವಣೆ ಸಾಧ್ಯ

Publicstory


ತುಮಕೂರು: ಸಂಘಟಿತರಾಗಿ ಕೆಲಸಗಳನ್ನು ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ವಿದ್ಯೋದಯ ಕಾನೂನು ಕಾಲೇಜಿನ ಸಿಇಒ ಪ್ರೊ. ಚಂದ್ರಣ್ಣ ತಿಳಿಸಿದರು.

ನಗರದ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಬಾರ್ಡ್ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ನಿರಂತರ ಪ್ರಯತ್ನ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಘಟಿತರಾಗಿ ಕೃಷಿ ಚಟುವಟಿಕೆಗಳನ್ನು ಮಾಡಿ, ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ಜಲಭಿವೃದ್ದಿ ಪ್ರಾಧಿಕಾರದ ನಿವೃತ್ತ ನಿರ್ದೇಶಕರಾದ ವಿ.ಎಸ್.ಪ್ರಕಾಶ್ ಮಾತನಾಡಿ, ರೈತರು ಜಾಗತಿಕ ತಾಪಮಾನವನ್ನು ನೋಡಿಕೊಂಡು ಕೃಷಿ ಮಾಡಿದರೆ ನೀರು, ಗೊಬ್ಬರವನ್ನು ಕಡಿಮೆ ಮಾಡಲು ಪೂರಕವಾಗುತ್ತದೆ. ರೈತರು ಸಾವಯವ ಕೃಷಿ ಮಾಡಿಕೊಂಡು ತೇವಾಂಶವನ್ನು ಕಾಪಾಡಿ. ಹಸಿರು ಬೇಳೆಗಳನ್ನು ತಮ್ಮ ಜಮಿನಿನಲ್ಲಿ ಬೇಳೆದರೆ ಬೇಳೆಯು ಉತ್ತಮ ರೀತಿಯಲ್ಲಿ ಬರುತ್ತೆ. ಜೋತೆಗೆ ತೇವಾಂಶಕೂಡ ಹೆಚ್ಚು ದಿನ ಇರಲು ಸಾಧ್ಯವಾಗುತ್ತದೆ. ನೀರಿನ ಸಂರಕ್ಷಣಕ್ರಮಗಳನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು. ಇವುಗಳನ್ನು ಅಳವಡಿಸಿಕೊಳ್ಳಲು ರೈತರಲ್ಲಿ ವೈಜ್ಞಾನಿಕ ಮನೋಭಾವ ಬದಲಾವಣೆಯಾಗಬೇಕು. ಎಲ್ಲರೂ ಅವಿಷ್ಕಾರಕ್ಕೆ ಹೊಂದಿಕೊAಡು ತಂತ್ರಜ್ಞಾನ ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

ನಬಾರ್ಡ್ ಉಪಮಹಾಪ್ರಬಂದಕರಾದ ಕೀರ್ತಿಪ್ರಭ ಮಾತನಾಡಿ, ನಬಾರ್ಡ್ ಅತ್ಯಂತ ಹೆಚ್ಚಿನ ಮಟ್ಟದ ಸಾಲ ಮತ್ತು ಸಹಾಯ ಧನ ನೀಡಿ ಸ್ವಾತಂತ್ರö್ಯ ಅಭಿವೃದ್ದಿಶೀಲ ಭಾರತ ನಿರ್ಮಾಣಕ್ಕೆ ಕಾರಣೀಭೂತವಾಗಿದೆ. ಜಿಲ್ಲೆಯಲ್ಲಿ ನಬಾರ್ಡ್ ಸಂಸ್ಥೆಯ ಧನ ಸಹಾಯ ಯೋಜನೆಗಳನ್ನು ಜಾರಿಗೊಳಿಸಿ ಸ್ತಿçÃಸಾಮಾನ್ಯ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸತ್‌ಕುಮಾರ್ ಕೃಷಿ ಆ್ಯಪ್ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿ ಜಗದೀಶ್, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿದಿಗಳು, ರೈತ ಉತ್ಪಾದಕರ ಕಂಪನಿಯ ಸಿಇಒಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಮತ್ತಿತರರು ಹಾಜರಿದ್ದರು.

ಕೊಳಲ ಕರೆ

2

ಡಾ.ರಜನಿ ಎಂ


ನನಗಾಗಿ
ನವಿಲು ಗರಿ
ಮುಡಿದ ಚೆನ್ನಿಗ

ಯಾರಿಗೂ ಕೇಳದೆ
ನನಗೆ ಮಾತ್ರ
ಕೇಳುವ ಹಾಗೆ ನುಡಿಸುವೆಯಲ್ಲಾ..

ನಿನ್ನ ಕೊಳಲಿನಿಂದ
ನನ್ನ ಹಿಡಿದಿಡಬೇಕೆ?

ನಿನ್ನಲ್ಲೆ ಇರುವ
ನನಗೆ ಹೊರಗಿನ
ನಾದ ಬೇಕೆ?

ನೀನು ಕರೆಯದಿದ್ದರೂ
ನಾ
ಬರುವೆ …

ಕೊಳಲನೂದುವಾಗ
ನಿನ್ನ ಮನಸ್ಸಿನಲ್ಲಿ
ನಾನಿದ್ದೆ ನಲ್ಲವೆ..

ನಾ ನಿನ್ನ ನೆನೆದರೆ…

ಜಗವೆಲ್ಲಾ ನಿನ್ನ
ನೆನೆದರೆ..

ನೀ ನನ್ನ
ನೆನೆವೆಯಲ್ಲಾ.

ನನ್ನ ಕರೆದೆಯಲ್ಲಾ..
ಓ ಶಾಮ

ರಾಧೆ ಕೃಷ್ವನಿ ಗಿಂತ
ಹೆಚ್ಚೆ ?

ಶಿರಾದಲ್ಲಿ ಆ್ಯಪ್ ಸದಸ್ಯತ್ವ ಅಭಿಯಾನ‌ಕ್ಕೆ ಸಿಕ್ಕಿತು ಬೆಂಬಲ

0

Publicstory


ಶಿರಾ: ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವ ಅಭಿಯಾನಕ್ಕೆಶಿರಾ ನಗರದ ಮಂಗಳವಾರ ಸಂತೆಯಲ್ಲಿ ಆಪ್ತ ಸ್ಪಂದನೆ ಸಿಕ್ಕಿದೆ ಎಂದು ತಾಲ್ಲೂಕು ಆಮ್ ಆದ್ಮಿ ಪಾರ್ಟಿ ಹರ್ಷ ವ್ಯಕ್ತಪಡಿಸಿದೆ.

ನಗರದ ಎಪಿಎಂಸಿ ಮಾರುಕಟ್ಟೆ, ಐಬಿ ಸರ್ಕಲ್, ರಂಗನಾಥ ಕಾಲೇಜು ಸರ್ಕಲ್, ಬಸ್ ಸ್ಟಾಂಡ್ ಹಾಗೂ ಮಲ್ಲಿಕಾ ರಹಾನ್ ದರ್ಗಾ ಗೇಟ್ ನಲ್ಲಿ ಎಎಪಿ ಸದಸ್ಯತ್ವ ಅಭಿಯಾನ ನಡೆಸಿದ ನಂತರ ತಾಲ್ಲೂಕು ಆಮ್ ಆದ್ಮಿ ಪಕ್ಷ ಪತ್ರಿಕಾ ಹೇಳಿಕೆ ನೀಡಿದೆ.
ಸ್ವಯಂ ಆಸಕ್ತಿಯಿಂದ ನೂರಾರು ಜನರು ಸದಸ್ಯತ್ವ ನೋಂದಣಿ ಮಾಡಿಕೊಂಡಿದ್ದಲ್ಲದೆ, ಜೆಡಿಎಸ್ ಕಾಂಗ್ರೆಸ್ ಬಿಜೆಪಿಯೆಂಬ ಜೆಸಿಬಿ ಪಕ್ಷಗಳಿಗೆ ಆಮ್ ಆದ್ಮಿ ಪಕ್ಷವೇ ಪರ್ಯಾಯ ಎಂದು ಘೋಷಿಸಿದರು.

ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಾಲ್ಲೂಕಿನಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ತಳಮಟ್ಟದಲ್ಲಿ ಕಟ್ಟಲು ಸಂಕಲ್ಪ ತೊಡುವುದಾಗಿ ನೂತನ ಆಮ್ ಆದ್ಮಿ ಪಾರ್ಟಿ ಸದಸ್ಯರು ಭರವಸೆ ನೀಡಿದರು.

ಎಎಪಿಯ ಸದಸ್ಯತ್ವ ಅಭಿಯಾನದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ವೀಕ್ಷಕ ಅಂಕಸಂದ್ರ ಪ್ರೇಮ ಕುಮಾರ್, ಜಿಲ್ಲಾ ಮಾಧ್ಯಮ ಸಂಯೋಜಕ ನಾಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್ ಆರ್, ಕಾರ್ಯದರ್ಶಿ ಸಜೀರ್, ತಾಲ್ಲೂಕು ಮಾಧ್ಯಮ ಸಂಯೋಜಕ ಗೋಮಾರದಹಳ್ಳಿ ಪಿ ಮಂಜುನಾಥ್, ಸಾಧಿಕ್, ಉತ್ಪುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.

ಡಾಕ್ಟರ್‌‌ ಹೆಂಡತಿ! : ಬಿಡುಗಡೆಯ ಒಂದು ಝಲಕ್

ಬಹುರೂಪಿ’ ಕೃತಿ ಬಿಡುಗಡೆಯಲ್ಲಿ ಡಾ ಮಿರ್ಜಾ ಬಷೀರ್

ಬೆಂಗಳೂರು: ಗ್ರಾಮೀಣ ಭಾರತದ ಕನಸುಗಳು ಮುರುಟಿ ಹೋಗುತ್ತಿರುವ ಈ ಸಮಯದಲ್ಲಿ ಅದರ ತಲ್ಲಣಗಳಿಗೆ ಲೇಖಕರು ಕನ್ನಡಿ ಹಿಡಿಯಬೇಕು ಎಂದು ಸಾಹಿತಿ, ವೈದ್ಯ ಡಾ ಮಿರ್ಜಾ ಬಷೀರ್ ಅವರು ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಸರೋಜಿನಿ ಪಡಸಲಗಿ ಅವರ ಕೃತಿ ‘ಡಾಕ್ಟರ್ ಹೆಂಡತಿ’ಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಗ್ರಾಮೀಣ ಭಾರತದಲ್ಲಿಯೇ ಸೇವೆ ಮಾಡಬೇಕೆಂದು ಆಯ್ಕೆ ಮಾಡಿಕೊಂಡು ಹೊರಟ ವೈದ್ಯರ ಅನುಭವ, ಹಾಗೆಯೇ ಅವರ ಕುಟುಂಬದ ಆತಂಕ, ತಲ್ಲಣಗಳು ಇದರಲ್ಲಿ ಮಡುಗಟ್ಟಿವೆ ಎಂದು ಅವರು ತಿಳಿಸಿದರು.

ವೈದ್ಯ ವೃತ್ತಿ ಇಂದು ವ್ಯಾಪಾರವಾಗಿರುವ ಸಂದರ್ಭದಲ್ಲಿ ಗ್ರಾಮೀಣ ಜನರ ಬದುಕು ಉಳಿಸಲು ಹೊರಟ ಈ ವೈದ್ಯ ಕುಟುಂಬದ ತಲ್ಲಣಗಳ ಈ ಕೃತಿ ಶ್ಲಾಘನಾರ್ಹ ಎಂದು ಕೃತಿ ಕುರಿತು ಮಾತನಾಡಿದ ಲೇಖಕಿ ವಾಸಂತಿ ಪ್ರಭಾಕರ ನಾಯಕ್ ಅಭಿಪ್ರಾಯಪಟ್ಟರು.

ಆರೋಗ್ಯದ ಬೆಳಕಿನ ಕಿರಣಗಳು ಇಂದು ಎಲ್ಲರಿಗೂ ಸಿಗದ ಹತಾಶ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ಈ ಕೃತಿ ಭರವಸೆ ಮೂಡಿಸುತ್ತದೆ ಎಂದರು.

ಕೃತಿಯ ಲೇಖಕಿ ಸರೋಜಿನಿ ಪಡಸಲಗಿ ಅವರು ಮಾತನಾಡಿ ಈ ಕೃತಿ ನನ್ನ ಒಳಗನ್ನು ಕಲಕಿದೆ. ಇಲ್ಲಿ ನನ್ನ ಸಂಭ್ರಮ, ತಲ್ಲಣ ಎರಡೂ ಮಡುಗಟ್ಟಿದೆ ಎಂದರು.

‘ಬಹುರೂಪಿ’ಯ ಮುಖ್ಯಸ್ಥರಾದ ಜಿ ಎನ್ ಮೋಹನ್, ವೈದ್ಯ ಸುರೇಶ್ ಪಡಸಲಗಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೃತಿ: ಡಾಕ್ಟರ್ ಹೆಂಡತಿ
ಲೇಖಕರು: ಸರೋಜಿನಿ ಪಡಸಲಗಿ
ಪುಟ: 144
ಬೆಲೆ: ರೂ 180
ಪ್ರಕಾಶಕರು: ಬಹುರೂಪಿ
70191 82729

ಹೇಮಾವತಿ ಅಮ್ಮನವರಿಗೆ ಡಾಕ್ಟರೇಟ್: ಮಹಾವೀರ ಜೈನ್ ಅಭಿನಂದನೆ

Public story


ಧರ್ಮಸ್ಥಳದ ಹೇಮಾವತಿ ಅಮ್ಮನವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿದ್ದು, ಚಿಕ್ಕನಾಯಕನಹಳ್ಳಿ ಸಾಮಾಜಿಕ ಕಾರ್ಯಕರ್ತರಾದ, ವಕೀಲರಾದ ಮಹಾವೀರ್ ಜೈನ್ ಅಭಿನಂದಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಧರ್ಮಪತ್ನಿ ಆಗಿರುವ ಹೇಮಾವತಿ ಅಮ್ಮನವರು ಮಹಿಳಾ ಸಬಲೀಕರಣಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ಹೇಳಿದ್ದಾರೆ.

ಧರ್ಮಸ್ಥಳದ ಸಿರಿ ಸಂಸ್ಥೆಯ ಮೂಲಕ ಮಹಿಳೆಯರ ಸ್ವಾವಲಂಬನೆ ಅವರು ಮಾಡಿರುವ ಕೆಲಸ ಅಪಾರವಾದದ್ದು. ಮಂಜುವಾಣಿ ಪತ್ರಿಕೆ ಮೂಲಕ ಅವರು ಜನರಲ್ಲಿ ಧಾರ್ಮಿಕತೆ, ನೈತಿಕತೆ ಹೆಚ್ಚಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನ ಟ್ರಸ್ಟಿಯಾಗಿ ಗ್ರಾಮೀಣಾಭಿವೃದ್ಧಿ ಗೆ ಅವರು ಕೊಟ್ಟಿರುವ ಕೊಡುಗೆ ಅಗಾಧವಾದದ್ದು. ತುಮಕೂರು ಜಿಲ್ಲೆಯಲ್ಲೂ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಹೊಸ ಮನ್ವಂತರಕ್ಕೆ ಕಾರಣರಾಗಿದ್ದಾರೆ. ಅವರಿಗೆ ಜಿಲ್ಲೆಯ ಜನತೆ ಪರವಾಗಿಯೂ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.

ಭಾನುವಾರ ಹೆಡಗರಹಳ್ಳಿ ಜಾತ್ರೆ

0

Publicstory


ತಿಪಟೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೆಡಗನಹಳ್ಳಿ ಗ್ರಾಮದ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಇದೇ ಭಾನುವಾರ ನಡೆಯಲಿದೆ .

ಶನಿವಾರ ಬೆಳಗ್ಗೆ 8ಗಂಟೆಗೆ ಹರಿಸೇವೆ ಯೊಂದಿಗೆ ಆರಂಭವಾಗುವ ಜಾತ್ರೆಯು ಸಂಜೆ 4ಗಂಟೆಗೆ ಗಂಗಾ ಸ್ನಾನ ನಡೆಯಲಿದೆ .
ಮರುದಿನ ಭಾನುವಾರ ಮಧ್ಯಾಹ್ನ 1ನಲವತ್ತ ಕ್ಕೆ ಸರಿಯಾಗಿ ಮಹಾಮಂಗಳಾರತಿ ಮತ್ತು ಮಹಾರಥೋತ್ಸವ ನಡೆಯಲಿದೆ .

ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಅವರು ರಥಕ್ಕೆ ಪುಷ್ಪಾರ್ಚನೆ ನೆರೆವೇರಿಸುವ ಮುಖಾಂತರ ಜಾತ್ರೋತ್ಸವಕ್ಕೆ ಚಾಲನೆ ನೀಡುವರು.

ರಾತ್ರಿ 8ಗಂಟೆಗೆ ಓಕಳಿ ಉತ್ಸವ ನಡೆಯಲಿದೆ .
ಜಾತ್ರೆಯ ಅಂಗವಾಗಿ ಆಲದಹಳ್ಳಿ ಗ್ರಾಮಸ್ಥರಿಂದ ಮುತ್ತಿನ ಪ್ರದರ್ಶನ ಇರಲಿದೆ.

ಕರ್ನಾಟಕದಲ್ಲಿ ಆಮ್ ಆದ್ಮಿ ಸರ್ಕಾರ: ಕ್ರೇಜಿವಾಲ್ ವಿಶ್ವಾಸ

Publicstory


Bengaluru: ದೆಹಲಿ, ಪಂಜಾಬ್ ನಂತರ ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಆಮ್ ಆದ್ಮಿ ಸರ್ಕಾರ ರಚನೆ ಮಾಡಲಿದೆ ಎಂದು ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ರೈತ ಸಮಾವೇಶದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, ಕರ್ನಾಟಕದಲ್ಲಿ ಈ ಹಿಂದೆ ಶೇಕಡಾ ಇಪ್ಪತ್ತು ಕಮಿಷನ್ ಪಡೆಯುವ ಸರ್ಕಾರ ಇತ್ತು. ಈಗ ನಲವತ್ತು ಪರ್ಸೆಂಟೇಜ್ ಪಡೆಯುವ ಸರಕಾರವಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್, ಬಿಜೆಪಿ ಸರ್ಕಾರವನ್ನು ಟೀಕಿಸಿದರು.

ನಮ್ಮದೂ ಪ್ರಾಮಾಣಿಕ ಸರ್ಕಾರ. ಭ್ರಷ್ಟಾಚಾರದ ದುಡ್ಡನ್ನು ಉಳಿಸಿ ಜನಸಾಮಾನ್ಯರ ಒಳಿತಿಗೆ ಬಳಸಲಾಗುವುದು ಎಂದು ಹೇಳಿದರು.
ನನಗೆ ರಾಜಕಾರಣ ಗೊತ್ತಿಲ್ಲ. ಆದರೆ ಜನಸಾಮಾನ್ಯರ ನೋವು ಅರ್ಥವಾಗಲಿದೆ ಎಂದು ಹೇಳಿದರು .
ಕರ್ನಾಟಕದ ಜನ ಎಎಪಿ ಬೆಂಬಲಿಸಬೇಕು ಎಂದರು.

ಮಾಜಿ ಸಚಿವ ಜಯಚಂದ್ರಗೆ ಅಪಘಾತ ಆಸ್ಪತ್ರೆಗೆ ದಾಖಲು

Publicstory


ಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ಕಾರು ಅಪಘಾತಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ
ಮಂಗಳವಾರ ರಾತ್ರಿ ಅಪಘಾತವಾಗಿದೆ. ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ .

ತುಮಕೂರು ಸಮೀಪದ ಸೀಬಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದಿದೆ ಇದರಿಂದ ಜಯಚಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ . ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಗನ್ ಮ್ಯಾನ್ ಗೆ ಯಾವುದೇ ಗಾಯಗಳಾಗಿಲ್ಲ .