Tuesday, May 5, 2026
Google search engine
Home Blog Page 114

ಮರಿಯಾಂಬಿಗೆ ದತ್ತಿನಿಧಿ ಪ್ರಶಸ್ತಿ

0

Publicstory


ತುಮಕೂರು: ಉದಯೋನ್ಮು‌ಕ ಕವಯತ್ರಿ ಮರಿಯಾಂಬಿ ಅವರ ಕವಿತೆಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ 2020ರ ಸಾಲಿನ ಡಾ.ನಿರ್ಮಲಾ ಎಲಿಗಾರ್ ದತ್ತಿನಿಧಿ ಪ್ರಶಸ್ತಿ ದೊರಕಿದೆ.

ಮರಿಯಾಂಬಿ ಅವರು ಎಂ.ಎ ಹಾಗೂ ಎಂ.ಇ.ಡಿ ಪದವೀಧರೆಯಾಗಿದ್ದು, ವೃತ್ತಿಯಲ್ಲಿ ಉಪನ್ಯಾಸಕಿ, ಗ್ಲೋಬಾಲ್ ಶಾಹಿನ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಹಂಪಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾರ್ಥಿಯಾಗಿದ್ದು, ಹೆಣ್ಣು ಮತ್ತು ಸೌಜನ್ಯ ಇವರ ಎರಡು ಕವಿತೆಗಳಾಗಿವೆ.

ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರ ದಿಢೀರ್ ರಾಜಿನಾಮೆ

0

Publicstory


ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ.ಬಿಜೆಪಿಯ ನೂತನ ಅಧ್ಯಕ್ಷ ಲಕ್ಷ್ಮೀಶ ಅವರು ದಿಢೀರ್ ರಾಜಿನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಮಾಜಿ ಅಧ್ಯಕ್ಷ, ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಬಿಜೆಪಿಯಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ.

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹೇಮಾವತಿ ನೀರನ್ನು ಬಿಡಲಿಲ್ಲ ಎಂಬ ಸಿಟ್ಟಿನಲ್ಲಿ ಸುರೇಶ್ ಗೌಡ ಅವರು ರಾಜಿನಾಮೆ ನೀಡಿದ್ದರು. ಈ ಕಾರಣದಿಂದ ಜಿಲ್ಲಾ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಸುರೇಶ್ ಗೌಡ ರಾಜಿನಾಮೆ ನಂತರ ಜಿಲ್ಲೆಯನ್ಮೇ ಎರಡು ಭಾಗ ಮಾಡಿದ ಪಕ್ಷವು ಇಬ್ಬರು ಅಧ್ಯಕ್ಷರ ನೇಮಕ ಮಾಡುವ ಮೂಲಕ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿತು. ಇದು ಅಚ್ಚರಿಗೂ ಕಾರಣವಾಗಿತ್ತು. ಇದರ ಹಿಂದೆಯೂ ಬಣ ರಾಜಕೀಯ ಕೆಲಸ ಮಾಡಿದೆ ಎಂದೇ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದರು.

ತುಮಕೂರು ಜಿಲ್ಲೆಯನ್ನು 2 ಜಿಲ್ಲೆಗಳಾಗಿ ವಿಭಾಗ ಮಾಡಬೇಕು ಎಂಬ ಜನರ ಹಕ್ಕೊತ್ತಾಯ ನಡುವೆಯೇ ಬಿಜೆಪಿ ತಾನೇ ಮುಂದಾಗಿ ಇಬ್ಬರು ಅಧ್ಯಕ್ಷರನ್ನು ನೇಮಿಸಿದ್ದು, ಆ ಪಕ್ಷದ ಕಾರ್ಯಕರ್ತರಲ್ಲಿ ರಾಜಕೀಯ ಹೊಸ ಹುರುಪನ್ನು ತಂದಿತ್ತು.

ಈಗ ದಿಢೀರನೆ ತುಮ್ಕೂರ್ ಜಿಲ್ಲಾಧ್ಯಕ್ಷ ಲಕ್ಷ್ಮೀಶ ಅವರು ರಾಜಿನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ .
ರಾಜಿನಾಮೆ ರಾಜಿನಾಮೆ ನೀಡಿರುವ ಯಾರ ಕೈಗೂ ಸಿಗದಂತೆ ದೂರವಾಗಿದ್ದಾರೆ ಅವರ ದೂರವಾಣಿ ಅವರಿಗೆ ಮೊಬೈಲ್ ಕರೆ ಮಾಡಿದರೆ ನಾಟ್ ರೀಚಬಲ್ ಎಂದು ಬರುತ್ತಿತ್ತು.
ಆರೆಸ್ಸೆಸ್ ನಾಯಕರೊಬ್ಬರು ಎಲ್ಲದಕ್ಕೂ ಮೂಗು ತೂರಿಸಿಕೊಂಡು ಬರುತ್ತಿರುವ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂಬ ಗುಸುಗುಸು ಪಕ್ಷದಲ್ಲಿ ಕೇಳಿಬರುತ್ತಿದೆ.
ರಾಜಿನಾಮೆ ನೀಡಿರುವ ಲಕ್ಷ್ಮೀಶ ಅವರು ರಾಜ್ಯ ಕಾರ್ಯಕಾರಿಣಿ ಸಭೆಗೆ ಗೈರಾಗಿದ್ದಾರೆ ಇದು ಪಕ್ಷಕ್ಕೆ ಇರುಸುಮುರುಸು ಉಂಟುಮಾಡಿದೆ.

ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈ ಮೂಲಕ ಕೇಳಿ ಬಂದಿದೆ. ಈಗಾಗಲೇ ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಲೋಕಸಭಾ ಸದಸ್ಯ ಜಿ ಎಸ್ ಬಸವರಾಜ್ ಅವರ ನಡುವೆ ಮುನಿಸು ಬಹಿರಂಗಗೊಂಡಿದೆ.

ಪಕ್ಷದಲ್ಲಿ ಬಸವರಾಜ್ ಗುಂಪು, ಮಾಧುಸ್ವಾಮಿ ಗುಂಪು, ಸೊಗಡು ಶಿವಣ್ಣ ಅವರ ಗುಂಪು ಹೀಗೆ ಗುಂಪುಗಳಾಗಿ ಒಡೆದು ಹೋಗಿರುವ ಬಿಜೆಪಿ ಗೆ ಅಧ್ಯಕ್ಷರ ರಾಜಿನಾಮೆ ಹೊಸ ತಲೆನೋವಾಗಿ ಪರಿಣಮಿಸಿದೆ .

ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯುವ ಹೊತ್ತಿನಲ್ಲೇ ಪಕ್ಷದ ಈ ಬೆಳವಣಿಗೆಗಳು ಮುಂದಿನ ಚುನಾವಣೆ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಲಕ್ಷ್ಮೀಶ ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಪಕ್ಷಕ್ಕೆ ಒಬ್ಬ ದಕ್ಷ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡುವಷ್ಟು ಪಕ್ಷ ಜಿಲ್ಲೆಯಲ್ಲಿ ಸೊರಗಿ ಹೋಗಿದೆ ಎಂಬುದು ಕಾರ್ಯಕರ್ತರ ಅಳಲು.

ಲಕ್ಷ್ಮೀಶ್ ಅವರ ಮೊಬೈಲ್ ನಾಟ್ ರೀಚಬಲ್ ಆಗಿದ್ದು, ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದರೆ ಅದರ ಕಾರಣವನ್ನು ಸುದ್ದಿಯಲ್ಲಿ ಸೇರಿಸಲಾಗುವುದು.

ಇಲ್ಲಿದೆ ನೋಡಿ ತುರುವೇಕೆರೆ ಉಡುಸಲಮ್ಮ‌‌ ಸಿರಿ‌ ಆಚರಣೆ‌ ಹಿನ್ನೆಲೆ…

0

ಡಾ. ವಡ್ಡಗೆರೆ ನಾಗರಾಜಯ್ಯ


ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಉಡುಸಲಮ್ಮ ದೇವಿ ಜಾತ್ರೆಯಲ್ಲಿ ನಿನ್ನೆ ದಿನ (16-04-2022) ನಡೆದಿರುವ ಸಿಡಿ ಉತ್ಸವದ ವಿಡಿಯೋ ತುಣುಕು ಇದು. ಇಂತಹ ಸಿಡಿ ಆಚರಣೆಯನ್ನು ಕುರಿತು ಜನ್ನ ಕವಿ ‘ಯಶೋಧರ ಚರಿತೆ’ ಕಾವ್ಯದಲ್ಲಿ ಹೀಗೆ ಹೇಳಿದ್ದಾನೆ :

ಆ ದೇವಿಯ ಜಾತ್ರೆಗೆ ಮೊಳೆ|
ವೋದೆಳವೆರೆ ಸಿರದ ಗಾಳಮುರಿಯುಯ್ಯಲೆ‌ ಕೈ||
ವೋದಸುಕೆ ಕೋಕಿಲಧ್ವನಿ|
ಮೂದಲೆಯುಲಿಯಾಗೆ ಬಂದನಂದು ವಸಂತಂ||

ತಾಳುಗೆಯ ನುರ್ಚಿ ನೆತ್ತಿಯ
ಗಾಳಂ ಗಗನದೊವಿಲ್ವ ವಾರಿಯ ಬೀರರ್|
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ||

ವಸಂತ ಮಾಸದಲ್ಲಿ ಬರುವ ಮಾರಿಜಾತ್ರೆಯ ಸಂದರ್ಭದಲ್ಲಿ ಚಂಡಮಾರಿ ದೇವತೆಗೆ ಅದೇ ದೇವಮಂದಿರದ ಆವರಣದಲ್ಲಿ ನಡೆಯುವ ಸಿಡಿ ಆಚರಣೆಯನ್ನು ಜನ್ನ ಕವಿ ವಿವರಿಸುತ್ತಾನೆ. ಬಾಲಚಂದ್ರನು ಸಿರದ ಗಾಳದಂತೆ (ಸಿಡಿ ಆಚರಣೆಯಲ್ಲಿ ಬಳಸುವ ಕಬ್ಬಿಣದ ಕೊಕ್ಕೆಯಂತೆ), ಚಿಗುರಿದ ಅಶೋಕ ವೃಕ್ಷವು ಉರಿಯ ಉಯ್ಯಾಲೆಯಂತೆ, ಕೋಕಿಲಧ್ವನಿಯು ಮೂದಲೆಯ ಉಲಿಯಂತೆ ತೋರುತ್ತಿರಲು ವಸಂತಮಾಸ ಆಗಮಿಸುತ್ತದೆ. ಇದೇ ವಸಂತ ಮಾಸದಲ್ಲಿ ನಡೆಯುವ ಮಾರಿ ಜಾತ್ರೆಯ ಆಚರಣಾ ವಿಧಿಗಳಾದ ‘ಸಿರದ ಗಾಳ’, ‘ಉರಿಯ ಉಯ್ಯಲೆ’, ‘ಮೂದಲೆಯ ಉಲಿ’, ‘ನೆತ್ತಿಯ ಗಾಳ’ ಮುಂತಾದ ಜನಪದ ಚಟುವಟಿಕೆಗಳನ್ನು ಜನ್ನ ಕವಿ ನಿರುದ್ವಿಗ್ನವಾಗಿ ದಾಖಲಿಸಿರುತ್ತಾನೆ. ಸಿರ ಎಂದರೆ ನಮ್ಮ ಕುತ್ತಿಗೆಯ ಹಿಂಬದಿಯ ಭಾಗ. ಇದನ್ನು ಸಿರಪಟ್ಟಿ, ಪಟ್ಟೆಸಿರ, ಎಕ್ಕತ್ತು, ಎಕ್ಸಿರ ಮುಂತಾದ ಪದಗಳಿಂದ ಕರೆಯುತ್ತೇವೆ. ದೇವಿ ಜಾತ್ರೆಯ ಭಾಗವಾಗಿ ನಡೆಯುವ ಸಿಡಿ ಉತ್ಸವದಲ್ಲಿ ಸಿಡಿಗಂಬವನೇರಿ ಸಿಡಿ ಆಟ ಪ್ರದರ್ಶಿಸುವ ವ್ಯಕ್ತಿಯ ಕುತ್ತಿಗೆಯ ಹಿಂಬದಿಯಲ್ಲಿರುವ ಸ್ನಾಯುಗಳ ಮೇಲೆ ಮುಷ್ಟಿಯಿಂದ ಗುದ್ದಿ ನರಗಳನ್ನು ಸಡಿಲಿಸಲಾಗುತ್ತದೆ. ಸಡಿಲಿಸಿದ ಮುಖ್ಯ ನರಗಳಿಗೆ ಕಬ್ಬಿಣದ ಗಾಳವನ್ನು (ಸಿರಗಾಳ) ಸಿಕ್ಕಿಸಿ, ಅವನನ್ನು ಸಿಡಿಗಂಬಕ್ಕೇರಿಸಿ ಆಕಾಶದಲ್ಲಿ ತೂಗಾಡಿಸಲಾಗುತ್ತದೆ. ಸಿರದ ನರಗಳ ಬದಲು ನೆತ್ತಿಯ ನರಗಳಿಗೆ ಸಿಕ್ಕಿಸುವ ಕೊಕ್ಕೆಯನ್ನು ‘ನೆತ್ತಿಯ ಗಾಳ’ ಎಂದು ಕರೆಯುತ್ತಾರೆ.

ಜನ್ನ ಕವಿ ತಾನು ಬದುಕಿದ್ದ ಕಾಲದಲ್ಲಿ ಸುದತ್ತನಪುರದ ಚಂಡಮಾರಿ ದೇವತೆಯ ಜಾತ್ರೆಯಲ್ಲಿ ನಡೆಯುವ ಸಿಡಿ ಆಚರಣೆಯ ಪ್ರತಿಯೊಂದು ವಿಧಿಗಳನ್ನು ಶ್ರದ್ಧೆಯಿಂದ ಗಮನಿಸಿ ತನ್ನ ಕಾವ್ಯದಲ್ಲಿ ದಾಖಲಿಸಿದ್ದಾನೆ. ಹಿಂಸೆಯ ಪರಿಕಲ್ಪನೆಯನ್ನು ವಿವರಿಸುವ ಮೂಲಕವೇ ಅಹಿಂಸೆ ಎಂಬ ಮೌಲ್ಯದ ಮಹತ್ವವನ್ನು ಓದುಗರಿಗೆ ಮನಗಾಣಿಸುತ್ತಾನೆ. ರಾಜಸತ್ತೆಯ ಅಂದಿನ ಕಾಲದಿಂದಲೂ ಪ್ರಜಾಸತ್ತೆಯ ಇಂದಿನ ಕಾಲದವರೆಗೂ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಇಂತಹ ರುದ್ರಭೀಷಣ ಆಚರಣೆಗಳಲ್ಲಿ ‘ಉತ್ತಮರು’ ಎನ್ನಿಸಿಕೊಂಡವರಿಗೆ ಮನರಂಜನೆ ನೀಡಲು ಪಾಲ್ಗೊಳ್ಳುತ್ತಿರುವ ‘ವಾರಿಯ ಬೀರರ್’ ಮಾತ್ರ ಕೆಳ ಜಾತಿಗಳ ಜನ. ಜನ್ನ ಕವಿ ಹೇಳುವ ‘ಉರಿಯ ಉಯ್ಯಲೆ’ ಎಂಬುದು ಕೊಂಡೋತ್ಸವ ಅಥವಾ ಅಗ್ನಿಗೊಂಡ ಆಚರಣೆಯಾಗಿರುತ್ತದೆ. ಕೊಂಡ ಹಾಯುವ ಆಚರಣದಯಲ್ಲಿ ಬೆಂಕಿಗೆ ಬಿದ್ದು ಸತ್ತ ‘ವಾರಿಯ ಬೀರರ್’ ಗಳಿಗೆ ಲೆಕ್ಕವಿಲ್ಲ. ಕೆಳಜಾತಿಗಳ ‘ವಾರಿಯ ಬೀರರ್’ ತೋರಿಸುವ ವೀರತ್ವದ ಬಾಳು ಎಂಥದ್ದೆಂದರೆ, ಜನ್ನನೇ ಹೇಳುವಂತೆ ‘ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆರೆದಿಂ’. ಇಂತಹ ಆಚರಣೆಗಳನ್ನು ನಮ್ಮ ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನದ ಅಗ್ನಿಕುಂಡದಲ್ಲಿ ಸುಡುವುದೇ ಲೇಸು. ಏನಂತೀರಿ?

ಇನ್ನು ಮುಂದೆ ಪಿಡಿಒಗಳಿಗೆ ಮದುವೆ ಜವಾಬ್ದಾರಿ

ಚಿತ್ರ ಸಾಂರ್ಧಭಿಕ

publicstory


ರಾಜ್ಯ ಸರ್ಕಾರ ಹೊಸ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮದುವೆ ಮಾಡಿಸಬಹುದಾಗಿದೆ.

ಕರ್ನಾಟಕ ವಿವಾಹ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸರ್ಕಾರ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದೆ. ಹೀಗಾಗಿ ಇಷ್ಟು ಇಷ್ಟು ದಿನಗಳ ಕಾಲ ನೋಂದಣಾಧಿಕಾರಿ ಅಧಿಕಾರವನ್ನು ಈಗ ಪಿಡಿಒಗಳಿಗೆ ನೀಡಿದೆ .

ಸಬ್ ರಿಜಿಸ್ಟರ್ ಆಫೀಸ್ ಗಳಲ್ಲಿ ಮದುವೆ ಮಾಡಿಸುವುದು ಕಷ್ಟದ ಕೆಲಸವಾಗಿತ್ತು. ಮದುವೆ ಮಾಡಿಸುವಾಗ ಲಂಚಗುಳಿತನ ವಿಳಂಬ ಧೋರಣೆ ಮತ್ತು ಅಧಿಕಾರಿಗಳ ಅಸಡ್ಡೆತನ ಎದ್ದು ಕಾಣುತ್ತಿತ್ತು. ಇದು ಕೂಡ ಮದುವೆಯಾಗುವವರಿಗೆ ಕಷ್ಟದಾಯಕವಾಗುತ್ತಿತ್ತು .

ಮದುವೆ ನೋಂದಣಿಗೆ ಮುನ್ನ ಹಾಕುತ್ತಿದ್ದ ಪ್ರಕಟನೆಗಳು ಕೂಡ ತುಂಬ ಜನರಿಗೆ ಗೊತ್ತಾಗದೆ ಕೆಲವು ವಿವಾಹಗಳು ಕಾನೂನು ಬಾಹಿರವಾಗಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು .

ಇನ್ನೂ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮದುವೆ ನೋಂದಣಿ ಮಾಡುವುದರಿಂದ ಹೊಸ ವಧು ವರರಿಗೆ ಮದುವೆ ನೋಂದಣಿ ಮಾಡಿಸುವುದು ಸುಲಭವಾಗಲಿದೆ .

ಗ್ರಾಪಂ ಅಧಿಕಾರಿಗಳು ಕೂಡ ಮದುವೆ ಕೆಲಸ 1ಹೊಸ ಅನುಭವ ವಾಗಲಿವೆ ಮದುವೆ ಹಳ್ಳಿಗಳಲ್ಲಿ ನೋಂದಣಿ ಮಾಡುವುದರಿಂದ ಸುಲಭ ಸರಳ ಮದುವೆಗೂ ಕೂಡ ಅವಕಾಶ ಸಿಕ್ಕಂತಾಗಲಿದೆ .

ಸರ್ಕಾರದ ಈ ಹೊಸ ಸುತ್ತೋಲೆಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂದು ನಿರೀಕ್ಷಿಸಲಾಗಿದೆ .
ಗ್ರಾಮ ಪಂಚಾಯಿತಿಗಳೇ ಮದುವೆಯಾಗುವುದರಿಂದ ಹೊಸ ಓದುವರು ನೋಂದಣಾಧಿಕಾರಿಗಳಿಗೆ ಅಲೆಯುವುದು ತಪ್ಪಲಿದೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೊಸ ಪುರ್ಸೊತ್ತಲ್ಲಿ ಅಧಿಕಾರವನ್ನು ನೀಡಿದ್ದು ಇನ್ನು ಮುಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಮದುವೇನ ಮಾಡಿಸಬಹುದಾಗಿದೆ .

ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮದುವೆ ನೋಂದಣಿ ಆಗುವುದರಿಂದ ಸರಳ ವಿವಾಹಕ್ಕೆ ಚಕ್ಕೋತಾ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಮಣ್ಣಕುಪ್ಪೆಯಲ್ಲಿ‌ ನಾರಸಿಂಹಸ್ವಾಮಿ ಬ್ರಹ್ಮರಥೋತ್ಸವ: ವಿಶೇಷ ಏನೇನು?

Publicstory


ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಮಣಿಕುಪ್ಪೆ ಗ್ರಾಮದ ಆರಾಧ್ಯ ದೈವ ಶ್ರೀ ನಾರಸಿಂಹಸ್ವಾಮಿ ಮತ್ತು ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಕಳೆದ ಮೂರು ದಿನಗಳಿಂದ ಅಂಕುರಾರ್ಪಣೆ, ಕಲಾಶರೋಹಣ, ಚಂದ್ರಮಂಡಲೋತ್ಸವ ಕಾರ್ಯಕ್ರಮ ನಡೆದಿತ್ತು. ಒಟ್ಟು ೬ ದಿನಗಳ ಜಾತ್ರೆಯಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದು ಶನಿವಾರ ಚಿತ್ತಾ ನಕ್ಷತ್ರದಲ್ಲಿ ಮದ್ಯಾಹ್ನ ೩ ಕ್ಕೆ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ನಾನಾ ಭಾಗದಿಂದ ಆಗಮಿಸಿದ ಸಾವಿರಾರು ಭಕ್ತರು ತಮ್ಮ ಹರಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಪಾನಕ ಫಲಹಾರ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಇಡೀ ಜಾತ್ರಾ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು ಸಾಕ್ಷಿಯಾದರು.

ಏ.೧೭ ರಂದು ಬೆಲ್ಲದೋತ್ಸವ, ಪಲ್ಲಕ್ಕಿ ಉತ್ಸವ ನಡೆಸಿ, ಏ. ೧೮ ರಂದು ವಸಂತೋತ್ಸವ, ಇಂದ್ರಜೀತೋತ್ಸವ ನಡೆಸಿ ಏ.೧೯ ರ ರಾತ್ರಿ ಕಂಚಿನ ಕುದುರೆ ಉತ್ಸವದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ಗಮನ ಸೆಳೆದ‌ ಬೆಳ್ಳಿ ಪಲ್ಲಕ್ಕಿ ಉತ್ಸವ

ಗುಬ್ಬಿ : ತಾಲೂಕಿನ ಸಿಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳ್ಳಿಪಲ್ಲಕ್ಕಿ ಉತ್ಸವವು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವÀದ ಅಂಗವಾಗಿ ನಡೆಯುವ ಅತ್ಯಾಕರ್ಷಕವಾದ ಬೆಳ್ಳಿಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಭಾಗಗಳಿಂದ ಮತ್ತು ತಾಲೂಕಿನ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.

ಬೆಳ್ಳಿಪಲ್ಲಕ್ಕಿ ಉತ್ಸವದ ಅಂಗವಾಗಿ ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಬೆಳ್ಳಿಪಲ್ಲಕ್ಕಿಯನ್ನು ವಿವಿಧ ಹೊಗಳಿಂದ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಿ ಉತ್ಸವಮೂರ್ತಿಯನ್ನು ಅತ್ಯಾಕರ್ಷಕವಾಗಿ ಅಲಂಕರಿಸಿದ್ದ ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಲಿಂಗವೀರರ ಕುಣಿತ, ವೀರಗಾಸೆ, ಧ್ವಜಕುಣಿತ, ನಾದಸ್ವರ ಸೇರಿದಂತೆ ವಿವಿಧ ಜನಪದ ಪ್ರಕಾರಗಳ ನೃತ್ಯಗಳು ನಡೆದವು.
ಬೆಳ್ಳಿಪಲ್ಲಕ್ಕಿ ಉತ್ಸವದಲ್ಲಿ ದೇವಾಲಯದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಿ,ಪುಟ್ಟಸ್ವಾಮಿ ಕಾರ್ಯಾಧ್ಯಕ್ಷ ಎಂ.ವಿ.ಬಸವರಾಜು, ಕಾರ್ಯದರ್ಶಿ ಟಿ.ಎನ್.ಶಿವರುದ್ರಯ್ಯ, ಖಜಾಂಚಿ ನಂಜುಡAಪ್ಪ, ಅರ್ಚಕ ಶ್ರೀಧರದೀಕ್ಷಿತ್ ಸೇರಿದಂತೆ ಭಕ್ತಾಗಳು ಭಾಗವಹಿಸಿದ್ದರು.

ಶ್ರೀರಾಮರೆಡ್ಡಿ ಹೋರಾಟದ ಹಾದಿ ನೂರು…

0
ಲೇಖಕರು: ಈ.ಶಿವಣ್ಣ, ವಕೀಲರು ಹಾಗೂ ಸಿಪಿಎಂ ಹೋರಾಟಗಾರರು

ಅಧಿವೇಶನದಲ್ಲಿ ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ರಾಜ್ಯದ ಬಗೆಗಿನ ಮಾಹಿತಿಗೆ ಇಡೀ ಸದನ ತಲೆದೂಗುತ್ತಿತ್ತು.

ಎತ್ತಿನಹೊಳೆ ಹೋರಾಟದಲ್ಲಿ ಅವರದು ಎತ್ತಿದ ಕೈ. ಹೀಗಾಗಿ ಅವರ ತುಮಕೂರಿನ ನಂಟು ಬಿಡಿಸಲಾಗದ್ದು.


ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ, ಜನಪರ ಹೋರಾಟಗಾರ ಜಿ ವಿ ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಳಗ್ಗೆ 4 ಗಂಟೆಗೆ ಶ್ರೀರಾಮರೆಡ್ಡಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬೆಳಗ್ಗೆ 7.28ಕ್ಕೆ ಮೃತಪಟ್ಟಿರುವುದಾಗಿ ತಾಲೂಕು ವೈದ್ಯಾಧಿಕಾರಿಗಳು ಘೋಷಿಸಿದರು.

ಎರಡು ಬಾರಿ ಶಾಸಕ : ಜಿ ವಿ ಶ್ರೀರಾಮರೆಡ್ಡಿ ಸಿಪಿಐಎಂ ಪಕ್ಷದಿಂದ 1999, 2004ರಲ್ಲಿ ಬಾಗೇಪಲ್ಲಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು.

ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಸಂಸದೀಯ ಪಟು ಎನ್ನಿಸಿಕೊಂಡಿದ್ದರು. ಅಧಿವೇಶನದಲ್ಲಿ ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ರಾಜ್ಯದ ಬಗೆಗಿನ ಮಾಹಿತಿಗೆ ಇಡೀ ಸದನ ತಲೆದೂಗುತ್ತಿತ್ತು.

ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಎಂಬ ದನದ ವ್ಯಾಪಾರಿಗಳನ್ನು ಹಿಂದೂ ಸಂಘಟನೆಗಳು ಬೆತ್ತಲೆ ಮಾಡಿ ರಸ್ತೆಯಲ್ಲಿ ಕೂರಿಸಿದಾಗ ಅದನ್ನು ಸದನದಲ್ಲಿ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದವರು ಜಿ ವಿ ಶ್ರೀರಾಮ ರೆಡ್ಡಿಯವರು. ಆ ಬಳಿಕ ಆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಆರೋಪಿಗಳ ಬಂಧನವಾಯ್ತು. ಆ ಬಳಿಕ ಉಡುಪಿ ಮಠದ ಮಫಕ್ತಿಬೇದ, ಕುಕ್ಕೆ ಸುಬ್ರಹ್ಮಣ್ಯದ ಮಡೆಮಡೆಸ್ನಾನದ ವಿರುದ್ಧ ಚಳುವಳಿ ಹಮ್ಮಿಕೊಂಡು ಲಾಟಿಚಾರ್ಜ್ಗೆ ಒಳಗಾದರು.

ಶಾಶ್ವತ ನೀರಾವರಿಗಾಗಿ ಹೋರಾಟ : ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕು ಎಂದು ಚಿಕ್ಕಬಳ್ಳಾಪುರ ದಿಂದ ವಿಧಾನಸೌಧದ ವರೆಗೆ ಕಾಲ್ನೆಡಿಗೆ ಜಾತಾ ಹಮ್ಮಿ ಕೊಂಡಿದ್ದರು.ಮತ್ತು ಪಾವಗಡ ತಾಲೂಕಿನ ನೀರಾವರಿ ಹೋರಾಟ ರೊಪಿಸಿ ಪಕ್ಷ ಕಟ್ಟುವಲ್ಲಿ ಯಶಸ್ವಿಯಾಗಿದರು

ಡಾ. ಪರಮಶಿವಯ್ಯ ನೀಡಿರುವ ವರದಿಯ ಸಮಗ್ರ ಜಾರಿಗಾಗಿ ಆಗ್ರಹಿಸಿ ಹತ್ತಾರು ಬಾರಿ ಬೃಹತ್ ಪ್ರತಿಭಟನೆ ಧರಣಿಗಳನ್ನು ನಡೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜನಪರ ನಾಯಕ : ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಸ್ಥಾಪಕ ಮುಖಂಡರಲ್ಲಿ ಒಬ್ಬರಾದ ಶ್ರೀರಾಮರೆಡ್ಡಿಯವರು ಸಾರ್ವಜನಿಕ ಬದುಕನ್ನು ಆರಂಭಿಸಿದರು. ಯುವಜನ, ಮಹಿಳೆ, ರೈತ, ಕಾರ್ಮಿಕ ಸಂಘಟನೆಗಳ ಬೆಳವಣಿಗೆಗೆ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಿದ್ದರು.

ಐದು ದಶಕಕ್ಕೂ ಹೆಚ್ಚುಕಾಲ ಸಿಪಿಐಎಂ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದ ಶ್ರೀರಾಮರೆಡ್ಡಿ ಪಕ್ಷದಳೊಗಡೆ ಜಿವಿಎಸ್ ಎಂದೇ ಖ್ಯಾತರಾಗಿದ್ದರು. 2013 ರಿಂದ 2018 ರ ವರೆಗೆ ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ರಾಜ್ಯದಲ್ಲಿ ಸಾಕಷ್ಟು ಹೋರಾಟ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಜಿ ವಿಶ್ರೀರಾಮ ರೆಡ್ಡಿಯವರು ಲೇಖಕರಾಗಿಯೂ ಈ ನಾಡಿಗೆ ಕೊಡುಗೆ ನೀಡಿದ್ದಾರೆ.

KSRTC ಚಾಲಕ ಆತ್ಮಹತ್ಯೆ

Public story


Pavagada: ಕೆ ಎಸ್ ಆರ್ ಟಿ ಸಿ ಚಾಲಕನ್ನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಪಾವಗಡ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಶಶಿದರ್ ಆತ್ಮಹತ್ಯೆ ಮಾಡಿಕೊಂಡವ. ಮೂಲತಃ ಹೊಸದುರ್ಗ ಮೂಲದವರು.

ಡಿಪೋದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರಣ ತಿಳಿದುಬಂದಿಲ್ಲ.

ನಾವು ಹುಡುಗಿಯರು ಅಂಬೇಡ್ಕರ್ ಆಗೋಕೆ ಆಗಲ್ವಾ?

0

ನಿತ್ಯಾನಂದ ಬಿ. ಶೆಟ್ಟಿ


ತುಮಕೂರು ಗ್ರಾಮಾಂತರದ ವ್ಯಾಪ್ತಿಯಲ್ಲಿರುವ ದಿಬ್ಬೂರು ಗ್ರಾಮಪಂಚಾಯತ್ ವಲಯದ ಹೊಸಳ್ಳಿ ಎಂಬ ಹಳ್ಳಿಯಲ್ಲಿ ನನ್ನ ವಾಸ್ತವ್ಯ.

ಎರಡು ದಿನದ ಹಿಂದೆ ರಾತ್ರಿ ಸುಮಾರು 9.00 ಗಂಟೆಗೆ ನನ್ನ ಮನೆಗೆ ಬಂದ ಹೊಸಳ್ಳಿಯ ದಲಿತ ಸಮುದಾಯದ ಹಿರಿಯರಾದ ಕೃಷ್ಣಮೂರ್ತಿ, ವೆಂಕಟೇಶ್, ವಿಠಲಣ್ಣ ಮತ್ತು ಕೆಲವು ತರುಣರು; “ಮೇಷ್ಟ್ರೆ, ನಮ್ಮ ಕಾಲೊನಿಯಲ್ಲಿ ಅಂಬೇಡ್ಕರ್ ಜಯಂತಿ ಮಾಡ್ತಾ ಇದೀವಿ. ನೀವು ಬಂದು ಮಾತಾಡಬಹುದೇ” ಎಂದು ಕೇಳಿಕೊಂಡಿದ್ದರು.

ಸಂತೋಷದಿಂದ ಒಪ್ಪಿಕೊಂಡು ಇವತ್ತು ಮಾತಾಡಿ ಬಂದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಅವರ ಅಮ್ಮಂದಿರೇ ಹೆಚ್ಚು ಇದ್ದ ಆ ಸಭೆಯಲ್ಲಿ ನಾನು ಒಟ್ಟಾರೆಯಾಗಿ ಹೇಳಿದ್ದು ಇಷ್ಟು-

“ವಿದೇಶೀ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ಸಂಶೋಧನೆ ಮಾಡಿದ ಮೊತ್ತಮೊದಲ ಭಾರತೀಯ ಸಂಶೋಧನಾರ್ಥಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್. ಪ್ರಪಂಚದಲ್ಲೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಹೆಸರು ಪಡೆದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರು ತಮ್ಮ ಹೆಚ್ಚಿನ ಓದು ಮತ್ತು ಅಧ್ಯಯನವನ್ನು ನಡೆಸಿದರು.

ಈ ಕೊಲಂಬಿಯಾ ಯೂನಿವರ್ಸಿಟಿ ಎಷ್ಟು ದೊಡ್ಡ ಉನ್ನತ ಶಿಕ್ಷಣ ಸಂಸ್ಥೆ ಅಂದರೆ, ಇಲ್ಲಿಯ ಒಟ್ಟು 84 ಜನರು ಇದುವರೆಗೆ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಭೌತಶಾಸ್ತ್ರದಲ್ಲಿ 29, ರಸಾಯನ ಶಾಸ್ತ್ರದಲ್ಲಿ 13, ಶಾಂತಿಗಾಗಿ 4, ವೈದ್ಯಕೀಯ ಶಾಸ್ತ್ರದಲ್ಲಿ 20, ಸಾಹಿತ್ಯದಲ್ಲಿ 5, ಅರ್ಥಶಾಸ್ತ್ರದಲ್ಲಿ 15 ಮಂದಿ ಸಾಧಕರು, ಬುದ್ಧಿಜೀವಿಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ‌

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಲಾಗಾಯ್ತಿನಿಂದಲೂ ಅಗ್ರಸ್ಥಾನದಲ್ಲಿರುವ ಇಂತಹ ಯೂನಿವರ್ಸಿಟಿಯಲ್ಲಿ ತನ್ನ ಮೂರು ವರ್ಷದ ಅಧ್ಯಯನವನ್ನು ಅಂಬೇಡ್ಕರ್ ಮಾಡ್ತಾರೆ. ಅದು ಎಷ್ಟು ಚಾಲೆಂಜಿಂಗ್ ಆಗಿರಬಹುದು ಎಂಬುದನ್ನು ನನ್ನಂಥವನಿಗೆ ಊಹಿಸುವುದೂ ಕಷ್ಟ.‌

ಅಂಬೇಡ್ಕರ್ ಅವರು ಇಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅರ್ಥಶಾಸ್ತ್ರದಲ್ಲಿ 29, ಇತಿಹಾಸ ಅಧ್ಯಯನದಲ್ಲಿ 11, ಸಾಮಾಜಿಕ ಶಾಸ್ತ್ರ ದಲ್ಲಿ 6, ತತ್ವ ಶಾಸ್ತ್ರ ದಲ್ಲಿ 5, ಮಾನವಶಾಸ್ತ್ರ ಅಧ್ಯಯನದಲ್ಲಿ 4, ರಾಜಕೀಯ ಶಾಸ್ತ್ರಗಳ ಅಧ್ಯಯನದಲ್ಲಿ 3 ಕೋರ್ಸ್ ಗಳನ್ನು ಮಾಡಿ, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳನ್ನೂ ಅಧ್ಯಯನ ಮಾಡಿದ್ದರು. ನೆನಪಿಡಿ ಈ ಪ್ರಮಾಣದ ಅಧ್ಯಯನ ನಡೆಸಿದ ವಿಶ್ವದ ಏಕೈಕ ವಿದ್ಯಾರ್ಥಿ ಅಂಬೇಡ್ಕರ್. ಇದು ಈಗಲೂ ವಿಶ್ವದಾಖಲೆಯೇ ಆಗಿ ಉಳಿದಿದೆ.‌

ಇಂತಹ ಅಪಾರ ಪ್ರತಿಭೆಯ ಬುದ್ಧಿಜೀವಿಯಾದ ಡಾ. ಬಿ ಆರ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಬಹಳ ದೊಡ್ಡ ಕೊಡುಗೆ ಎಂದರೆ ಅದು ಭಾರತೀಯ ಸಂವಿಧಾನ. ನಮ್ಮ ಸಂವಿಧಾನ ನಮಗೆ ಸ್ವಾತಂತ್ರ್ಯದ ಮತ್ತು ಸಮಾನತೆಯ ಅರ್ಥ ಹಾಗೂ ಮಹತ್ವವನ್ನು ಮಾಡಿಕೊಟ್ಟಿದೆ.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ವಿದೇಶದ ಕೆಲವು ಶಕ್ತಿಗಳು ನಮ್ಮನ್ನು ಒತ್ತೆ ಇರಿಸಿಕೊಂಡಿದ್ದರು. ಮಹಾತ್ಮ ಗಾಂಧಿಯವರ ನಾಯಕತ್ವದಲ್ಲಿ ನಮ್ಮ ದೇಶದ ಧೀಮಂತ ನಾಯಕರು ಮತ್ತು ನಮ್ಮೆಲ್ಲರ ಹಿರೀಕರು ನಡೆಸಿದ ಸ್ವಾತಂತ್ರ್ಯ ಹೋರಾಟದಿಂದ ನಾವು ನಮ್ಮನ್ನು ಆ ಒತ್ತೆಸೆರೆಯಿಂದ ಬಿಡಿಸಿಕೊಂಡಿದ್ದೇವೆ.

ಇಷ್ಟು ಕಷ್ಟ ಪಟ್ಟು ಗಳಿಸಿದ ಸ್ವಾತಂತ್ರ್ಯವನ್ನು ದೇಶದ ಒಳಗಿನ ಕೆಲವು ಹಿತಾಸಕ್ತಿಗಳು ಮತ್ತು ಶಕ್ತಿಗಳು ಕಸಿಯುವ ಸಾಧ್ಯತೆ ಇದೆ ಎಂಬುದನ್ನು ಮನಗಂಡ ಬಾಬಾಸಾಹೇಬರು ಅಂತಹ ಅಪಾಯದಿಂದ ಜನರನ್ನು ರಕ್ಷಿಸುವುದಕ್ಕಾಗಿ ಇಂತಹ ಸಂವಿಧಾನವನ್ನು ಕೊಟ್ಟರು.

ಕಷ್ಟ ಪಟ್ಟು ಗಳಿಸಿದ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಮತ್ತೆ ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು ಎಂಬುದು ಬಾಬಾಸಾಹೇಬರು ಕೊಟ್ಟ ಸಂವಿಧಾನದ ಹಿಂದಿರುವ ಕಾಳಜಿ.

“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಹಳೆಯ ಕಾಲದ ಮಾತನ್ನು ಈಗಿನ ಕಾಲದಲ್ಲಿ ನಾವು “ಸಂವಿಧಾನೋ ರಕ್ಷತಿ ರಕ್ಷಿತಃ” ಎಂದು ಬದಲಾಯಿಸಬೇಕಾಗಿದೆ. ಅಂದರೆ ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ.

ಸಂವಿಧಾನ ಎಂದರೆ ಕಾಯ್ದೆ ಕಾನೂನುಗಳನ್ನು ರೂಪಿಸುವುದಕ್ಕೆ ಅವಕಾಶ ಮಾಡಿಕೊಡುವ ಪುಸ್ತಕವಲ್ಲ, ಸಾಮುದಾಯಿಕ ಒಳಿತನ್ನು ಬಯಸುವ ಮನುಷ್ಯ ವಿವೇಕದ ಗ್ರಂಥರೂಪ. ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ಈ ಕಾಲದ ವಿವೇಕವಾಣಿ.”

ಇಷ್ಟು ಮಾತಿನ ಬಳಿಕ ಕಾರ್ಯಕ್ರಮದಿಂದ ಹೊರಡುವಾಗ ಆರನೇ ತರಗತಿಯಲ್ಲಿ ಕಲಿಯುವ ಹುಡುಗಿಯೊಬ್ಬಳು ನನ್ನ ಬಳಿ ಬಂದಳು.
“ಸರ್, ಹುಡುಗರು ಮಾತ್ರ ಅಂಬೇಡ್ಕರ್ ಆಗಬಹುದಾ? ನಾವು ಹುಡುಗಿಯರು ಅಂಬೇಡ್ಕರ್ ಆಗೋಕೆ ಆಗಲ್ವಾ?” ಎಂದಳು.

ನಾನಂದೆ, “ಮಗುವೇ, ಹುಡುಗರು ಅಂಬೇಡ್ಕರ್ ರವರನ್ನು ಓದಿದರೆ ಖಂಡಿತವಾಗಿಯೂ ಇನ್ನೊಬ್ಬ ಅಂಬೇಡ್ಕರ್ ಆಗಬಹುದು. ಆದರೆ ಹೆಣ್ಣು ಮಕ್ಕಳು ಅಂಬೇಡ್ಕರ್ ಅವರನ್ನು ಓದಿ, ಅರ್ಥ ಮಾಡಿಕೊಂಡು, ಅವರ ಚಿಂತನೆಗಳನ್ನು ಮುಂದುವರಿಸಿದರೆ ಪ್ರತಿದಿನ ಅಂಬೇಡ್ಕರ್ ಹುಟ್ಟುತ್ತಾರೆ ಕಂದ”.

ಆ ಪುಟ್ಟ ಹುಡುಗಿಯ ಕಣ್ಣುಗಳಲ್ಲಿ ಆಗಲೇ ಅವಳಿ ಸೂರ್ಯರು ಉದಯಿಸಿ ಬಂದಷ್ಟು ಬೆಳಕು.

ಎಲ್ಲ ಸಂಕಟಗಳ ನಡುವೆಯೂ ನನ್ನ ದೇಶದ ನಾಳೆಯ ದಿನಗಳ ಬಗ್ಗೆ ನನಗೆ ಹೊಸ ಭರವಸೆ ಹುಟ್ಟಿತು.

ವೀರಣ್ಣನಗುಡಿಯಲ್ಲಿ ಬ್ರಹ್ಮರಥೋತ್ಸವದ ಪುಳಕ

ಪಬ್ಲಿಕ್ ಸ್ಟೋರಿ

ಗುಬ್ಬಿ : ತಾಲೂಕಿನ ಸಿ.ಎಸ್.ಪುರ ಹೋಬಳಿ ಅಂಕಲಕೊಪ್ಪ ಮಜರೆ ವೀರಣ್ಣನಗುಡಿ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಯವರ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.
ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು ಪ್ರತಿ ವರ್ಷದಂತೆ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭÀಕ್ತಾಧಿಗಳು ತಮ್ಮ ಇಷ್ಠಾರ್ಥ ಪೂಜೆಗಳನ್ನು ಸಲ್ಲಿಸುವುದರ ಜತೆಗೆ ಭಕ್ತಾಧಿಗಳಿಗೆ ವಿಶೇಷವಾಗಿ ಪಾನಕ.ಫಲಹಾರಗಳನ್ನು ವಿತರಿಸಿದರು. ದೇವಾಯಲಯ ಸಮಿತಿವತಿಯಿಂದ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು. ರಥೋತ್ಸವದ ಅಂಗವಾಗಿ ಗಂಗಾ ಪೂಜೆ. ನವಗ್ರಹ ಪೂಜೆ, ಕಳಶ ಸ್ಥಾಪನೆ, ಗಣಪತಿ ಹೋಮ, ಭದ್ರಕಾಳಿ ಅಮ್ಮನವರಿಗೆ ಕುಂಕುಮಾರ್ಚನೆ, ಪೂರ್ಣಹುತಿ, ಸುಮಂಗಳಿಯವರ ಪೂಜೆ, ಶ್ರೀವೀರಭದ್ರಸ್ವಾಮಿಗೆ ಕುಂಭಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಕುಂಭಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಲಿರುವ ಭಕ್ತಾಧಿಗಳು ರಥೋತ್ಸವಕ್ಕೆ ದವನ ಸಿಕ್ಕಿಸಿದ ಬಾಳೆ ಹಣ್ಣು ಮತ್ತು ವೀಳ್ಯದೆಲೆ ಎಸೆಯುವ ಮೂಲಕ ತಮ್ಮ ಭಕ್ತಿ ಬಾವ ಸಮರ್ಪಿಸಿದರು.
ರಥೋತ್ಸವದಲ್ಲಿ ಶಿಲ್ಪಾ ತಂಡದವರಿAದ ಆಕರ್ಷಕ ವೀರಗಾಸೆ ಕುಣಿತ, ನಂದೀಧ್ವಜ ಕುಣಿತ, ಕರಡಿ ವಾಧ್ಯ, ಲಿಂಗದ ವೀರರ ಕುಣಿತ, ಸೇರಿದಂತೆ ವಿವಿಧ ಸಾಂಸ್ಕೃತಿಕ ಜನಪದ ಕಲಾತಂಡದಿAದ ಮೇರವಣಿಗೆ ಮಾಡಲಾಯಿತು. ಜಾತ್ರಾಮಹೋತ್ಸವಕ್ಕೆ ಅಗಮಿಸಿದ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ದೇವಾಲಯ ಸಮಿತಿವತಿಯಿಂದ ವ್ಯವಸ್ಥಿತವಾಗಿ ಮಾಡಲಾಗಿತ್ತು. ಜಾತ್ರಾಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಹೆಬ್ಬೂರಿನಿಂದ ವಿಶೇಷವಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ರಥೋತ್ಸವದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಸಕ ಮಸಾಲೆಜಯರಾಮು, ಗುತ್ತಿಗೆದಾರ ರಮೇಶ್‌ಕೌಲಗಿ, ಎಪಿಎಂಸಿ ಸದಸ್ಯೆ ಪದ್ಮ.ವಿ.ಡಿ, ಬೆಂಗಳೂರು ದಕ್ಷಿಣ ಶಾಸಕ ಹೆಚ್.ಕೆ.ಕೃಷ್ಣ, ಗೋಪಾಲಕೃಷ್ಣಶರ್ಮ ಸ್ವಾಮಿಜಿ, ಶ್ರೀವೀರಭದ್ರಸ್ವಾಮಿ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿ.ಪುಟ್ಟಸ್ವಾಮಿ, ಉಪಾಧ್ಯಕ್ಷ ಗಂಗಣ್ಣ, ಕಾರ್ಯದರ್ಶಿ ಟಿ.ಎನ್.ಶಿವರುದ್ರಯ್ಯ, ಕಾರ್ಯಾಧ್ಯಕ್ಷ ಎಂ.ವಿ.ಬಸವರಾಜು, ಖಜಾಂಚಿ ವಿ.ಎನ್.ನಂಜುAಡಯ್ಯ, ಪದಾಕಾರಿಗಳಾದ ಫಣೀಂದ್ರ, ಹೆಚ್.ಆರ್.ಶಿವಶಂಕರ್, ಅರ್ಚಕ ಶ್ರೀಧರ್ ದೀಕ್ಷಿತ್, ಮತ್ತು ಭಕ್ತರು ಮುಖಂಡರು ಇನ್ನಿತರರು ಹಾಜರಿದ್ದರು.