Saturday, May 9, 2026
Google search engine
Home Blog Page 120

ಕುವೆಂಪು ದಿನಾಚರಣೆಯಲ್ಲಿ ಅನುರಣಣಿಸಿದ ತುಮಕೂರು ರೈತ ಹೋರಾಟದ ನೆನಪು

ಮಂಜುನಾಥ್ ತಿಪಟೂರು


ತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಆಡಿಟೋರಿಯಂನ #ಬೆನ್ನಾಯಕನಹಳ್ಳಿ_ದೇವರಾಜು_ವೇದಿಕೆಯಲ್ಲಿ #ಕುವೆಂಪು_ಯುವ_ಬಳಗದ ಕುವೆಂಪು ಯುವ ಬಳಗದ ವತಿಯಿಂದ ‘ವಿಶ್ವಮಾನವ ದಿನಾಚರಣೆ ಯನ್ನು ಆಚರಿಸಲಾಯಿತು.

ಪ್ರಾಸ್ತಾವಿಕ ನುಡಿಗಳ ನ್ನಾಡಿದ ಅಲ್ಲಾಬಕಾಷ್ ರವರು ಇಂದಿನ ಸಮಾರಂಭವನ್ನು ರೈತ ಹೋರಾಟಗಾರ ಬೆನ್ನನಾಯಕನಹಳ್ಳಿ ದೇವರಾಜು, ದೆಹಲಿ ಹೋರಾಟದಲ್ಲಿ ಹುತಾತ್ಮರಾದ ರೈತರು, ನಟ ಪುನೀತ್ ರಾಜಕುಮಾರ್ ಹಾಗೂ ಕೋವಿಡ್ ನಿಂದ ಮಡಿದ ಲಕ್ಷಾಂತರ ಜನರಿಗೆ ಅರ್ಪಿಸಿರುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಬಿ.ಡಿ. ಕುಮಾರ್ ಉಪನ್ಯಾಸಕರು, ಕೋಡಿಮಠ ಕಾಲೇಜು ಅರಸೀಕೆರೆ ಇವರು ‘ಕುವೆಂಪು ಕಾವ್ಯಗಳಲ್ಲಿ ರೈತ’ ಎಂಬ ವಿಷಯವಾಗಿ ಮಾತನಾಡುತ್ತಾ ಕುವೆಂಪು ರವರ ರೈತ ಪರ ಕಾಳಜಿ ನೈಜವಾದುದಾಗಿದ್ದು, ‘ಉಳುವಾ ಯೋಗಿಯ ನೋಡಲ್ಲಿ’ ಕವನ ರೈತಗೀತೆ ಯಾಗಿದ್ದು ಸಂತಸದ ವಿಷಯ, ‘ಜಲಗಾರ’ ನಾಟಕದ ರೈತ – ಜಲಗಾರನ ಮುಖಾಮುಖಿಯ ಸಂದರ್ಭದ ಸನ್ನಿವೇಶವನ್ನು ವರ್ಣಿಸಿದರು.

ಮತ್ತೋರ್ವ ಅತಿಥಿ ಡಾ. ನಾಗಭೂಷಣ ಬಗ್ಗನಡು ರವರು ಕು ವೆಂಪು ರವರು ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆಯನ್ನು ಎತ್ತಿ ಹಿಡಿದಿರುವುದು ಮಾತ್ರವಲ್ಲದೆ ತಮ್ಮ ಭಾಷಣಗಳಲ್ಲಿ ಅದನ್ನೇ ಪ್ರತಿಪಾದಿಸಿ ಸ್ವತಃ ಆಚರಿಸುತ್ತಾ ನುಡಿದಂತೆ ನಡೆದವರೆಂದರು.

ಕಾಡುಶೆಟ್ಟಿಹಳ್ಳಿ ಸತೀಶ್, ಕಾರ್ಯದರ್ಶಿ, ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟ, ಇವರು ಮಾತನಾಡುತ್ತಾ ವಿಶ್ವಮಾನವ ಸಂದೇಶ ಗ್ರಾಮ ಮಟ್ಟದಲ್ಲಿ ಮುಟ್ಟಬೇಕಾದರೆ ನಮ್ಮ ದೇಶದ ಸಂವಿಧಾನದ ಆಶಯಗಳನ್ನು ದೇಶದ ಪ್ರತಿ ಗ್ರಾಮದಲ್ಲಿ ಗ್ರಾಮ ಸಭೆಗಳನ್ನು ನಡೆಸುವ ಮೂಲಕ, ಭಾಗವಹಿಸುವ ಮೂಲಕ ಕೈಗೂಡಿಸಿಕೊಳ್ಳಬೇಕು ಎಂದರು.

ತಾಲ್ಲೂಕಿನ ಹಿರಿಯ ರೈತ ನಾಯಕರಾದ ಶ್ರೀ ಯೋಗೀಶ್ವರಸ್ವಾಮಿ ಮತ್ತು ಶ್ರೀ ಶಿವಶಂಕರಪ್ಪ ತಿಮ್ಲಾಪುರ ಇವರನ್ನು ಬಳಗದ ಸದಸ್ಯ ಶ್ರೀಕಾಂತ್ ಕೆಳಹಟ್ಟಿ ಗೌರವಿಸಿ ಸನ್ಮಾನಿಸಿದರು.

ಸನ್ಮಾನಿತರು ತಿಪಟೂರು ತಾಲ್ಲೂಕಿನಲ್ಲಿ ರೈತ ಹೋರಾಟದ ದಿನಗಳನ್ನು ಸ್ಮರಿಸಿಕೊಳ್ಳುತ್ತಾ, ತಾಲ್ಲೂಕು ಹಂತದ ಅಧಿಕಾರಿಗಳನ್ನು ಮಾತನಾಡಿಸಲು ಹೆದರುತ್ತಿದ್ದ ನಮ್ಮಂತಹವರಲ್ಲಿ ಆತ್ಮವಿಶ್ವಾಸ, ಹೋರಾಟ, ಪ್ರತಿಭಟನೆಗಳ ಮೂಲಕ ಅನ್ಯಾಯವನ್ನು ಪ್ರಶ್ನಿಸುವ ಕೆಚ್ಚನ್ನು ತುಂಬಿದವರು ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಎಂದರು.

ಕುವೆಂಪು ಯುವ ಬಳಗ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಆಯೋಜಿಸಿದ್ದ ಭಿತ್ತಿಚಿತ್ರ, ಪ್ರಬಂಧ, ಭಾವಗೀತೆ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಕುವೆಂಪು ರವರ ಪುಸ್ತಕಗಳ ಬಹುಮಾನ ವಿತರಣೆಯನ್ನು ಮಂಜುನಾಥ್, ನಿವೃತ್ತ ಶಿಕ್ಷಕರು, ಸಾದತ್, ಶಿಕ್ಷಣ ಕಾರ್ಯಕರ್ತರು ಹಾಗೂ ಬಳಗದ ಸದಸ್ಯರು ನೆರವೇರಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ‘ಜನಸ್ಪಂದನ’ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸಿ.ಬಿ.ಶಶಿಧರ್ (ಟೂಡ) ರವರು ಕುವೆಂಪು ನನ್ನ ಮೇಲೆ ವೈಚಾರಿಕ ಪ್ರಭಾವ ಬೀರಿದವರು ಅವರ ಸಾಹಿತ್ಯ ಸಾರ್ವಕಾಲಿಕ ಶ್ರೇಷ್ಠವಾದುದು. ನಮ್ಮ ಟ್ರಸ್ಟ್ ಇಂತಹ ಪ್ರಗತಿಪರ ಚಟುವಟಿಕೆಗಳನ್ನು ಸದಾ ಬೆಂಬಲಿಸುತ್ತದೆ. ಇಂದಿನ ಯುವ ಜನಾಂಗ ಕುವೆಂಪು ರವರ ವಿಚಾರಧಾರೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು.

ಯುವ ಬಳಗದ ಮನೋಹರ ಪಟೇಲ್ ರವರು ಬಳಗದ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಪ್ರಗತಿಪರ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ಹೇಳುತ್ತಾ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರೆಲ್ಲರಿಗೂ ವಂದನೆ ಸಲ್ಲಿಸಿದರೆ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಯುವ ಬಳಗದ ಸ್ವಾಮಿ.ಕೆ.ಆರ್. ಮಾಡಿದ್ದರು.

ನಂತರ ಕುವೆಂಪು ಭಾವಗೀತೆಗಳನ್ನು ಶ್ರೀ ಹನುಮಪ್ಪ ಶಿಕ್ಷಕರು, ಪುರುಷೋತ್ತಮ್ ಹಾಗೂ ವಿಮಲಾ – ಲಕ್ಷ್ಮಿ ಸುಶ್ರಾವ್ಯವಾಗಿ ಹಾಡಿದರು.

ಬಳಗದಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಶ್ರೀಹರ್ಷ ಗಂಗನಘಟ್ಟ, ಮಂಜ್ಯ ನಾಯಕ್ ಕ.ರ.ಸಾ.ನಿ. ಮಂಡಳಿ ತಿಪಟೂರು., ಚಂದನ್ ರಾಜ್ ಬೂಕರ್ ತಿಮ್ಮಾಪುರ, ವಿಶ್ವನಾಥ್ ಹೊಸಹಳ್ಳಿ, ತಾಸಿನ್ ಮೈಸೂರಿ, ಸಿದ್ದೇಶ್ ಬಳವನೇರಲು, ಹರೀಶ್ ಯಗಚಿಕಟ್ಟೆ, ಸಂತೋಷ್ ಮತ್ತಿಘಟ್ಟ ಹಾಗೂ ಸ್ವಾಮಿ.ಕೆ.ಅರ್. ಇವರುಗಳನ್ನು ದೇವರಾಜ್ ತಿಮ್ಮಾಪುರ , ಕ.ರಾ.ರೈ.ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಹಾಗೂ ಸಿ. ಬಿ. ಶಶಿಧರ್ (ಟೂಡ) ಗೌರವಿಸಿದರು.

ಇದು ನನ್ನ ಕೊನೆ ಚುನಾವಣೆ: ಎಂ.ಟಿ.ಕೃಷ್ಣಪ್ಪ

Publicstory

ತುರುವೇಕೆರೆ: ‘ಕ್ಷೇತ್ರದ ಜನತೆ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿದ್ದು ಇದು ನನ್ನ ಕೊನೆಯ ವಿಧಾನಸಭಾ ಚುನಾವಣೆಯಾಗಿದ್ದು ಮುಸ್ಲಿಂ ಬಾಂಧವರು ಈ ಬಾರಿ ನನ್ನ ಗೆಲುವಿಗೆ ಕೈಹಿಡಿಯ ಬೇಕು’ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುಸ್ಲಿಂ ಕಾರ್ಯಕರ್ತರಿಗೆ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜೆಡಿಸ್ ಪಕ್ಷ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಫ್ರಲ್ಲಾ ಖಾನ್ ಸೇರಿದಂತೆ ತಾಲ್ಲೂಕಿನ ಅಪಾರ ಸಂಖ್ಯೆಯ ಮುಸ್ಲಿಂಬಾಂಧವರು ಜೆಡಿಎಸ್ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಈ ಸಲ ಗೆದ್ದರೆ ಜಿಲ್ಲಾ ವಕ್ಫ್ ಬೋರ್ಡ್ಗೆ ಜಫ್ರಲ್ಲಾ ಖಾನ್ ಅವರನ್ನು ಆಯ್ಕೆ ಮಾಡುವೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆಂಬ ತಪ್ಪು ಗ್ರಹಿಕೆಯಿಂದ ಮುಸ್ಲಿಂರು ವೋಟ್ ಹಾಕಿದರು. ಆದರೆ ತದ್ವಿರುದ್ದವಾಗಿ ಬಿಜೆಪಿ ಗೆದ್ದಿತು. ಈಗ ಎಲ್ಲರಿಗೂ ತಪ್ಪಿನ ಅರಿವಾಗಿದೆ‌ ಎಂದರು.

ಈ ಬಾರಿ ಯಾರೋ ಹೊಸಬರು ಬಂದಿದ್ದಾರೆಂದು ಕಾಂಗ್ರೆಸ್ ಕಡೆ ವಾಲದಿರಿ ಎಂದು ಹೆಸರು ಹೇಳದೇ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ಗೆ ವೋಟ್ ಹಾಕಿದರೆ ಪುನಃ ಬಿಜೆಪಿ ಗೆಲುವಿಗೆ ದಾರಿ ಸುಗಮವಾಗುತ್ತದೆ. ಬಿಜೆಪಿ ಸಂಸ್ಕೃತಿ ಎಂತಹದು ಎಂಬುದು ದೇಶದ ಜನತೆಗೆ ಗೊತ್ತಿದೆ. ಆಹಾರ ವಿಚಾರಗಳು ಸೇರಿದಂತೆ ಬಿಜೆಪಿಯ ಅಜೆಂಡಾಗಳನ್ನು ಮುಸ್ಲಿಂರು ಸೇರಿದಂತೆ ದೇಶದ ಜನತೆಯ ಮೇಲೆ ಹೇರಲು ಮುಂದಾಗಿರುವುದು ಖಂಡನೀಯ.
ಇಂತಹ ವಿರೋಧಗಳಿಂದಲೇ ದಿನಕಳೆದಂತೆ ಬಿಜೆಪಿಯ ಅವಸಾನದ ಕಾಲ ಸಮೀಪಿಸುತ್ತಿದೆ. ಹೀಗಾಗದಿದ್ದರೆ ಬಿಜೆಪಿ ದೇಶವನ್ನೇ ಇಬ್ಬಾಗ ಮಾಡೀತು ಎಂದು ಎಚ್ಚರಿಸಿದರು.

ಬಿಜೆಪಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವ ಉಮೇದಿನಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಂರ್ತಜಾತಿ ವಿವಾಹಕ್ಕೆ ಸರ್ಕಾರ ಪ್ರೋತ್ಸಾಹ ಧನ ಕೊಡುವುದಾಗಿ ಹೇಳಿದೆ. ಹೀಗಿರುವಾಗ ಮತಾಂತರ ಕಾಯಿದೆ ಏಕೆ ಜಾರಿ ಮಾಡಬೇಕು. ಯಾರು ಯಾವ ಧರ್ಮಕ್ಕಾದರೂ ಸೇರಲಿ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಬಿಜೆಪಿಗೇನಿದೆ.
ಶಾಸಕ ಮಸಾಲಜಯರಾಂ ನಾಲ್ಕು ವರ್ಷ ಅಧಿಕಾರ ನಡೆಸಿದ್ದಾರೆ ಅವರದೇ ಸರ್ಕಾರವಿದೆ ಹೀಗಿದ್ದರೂ ತಾಲ್ಲೂಕಿನ ಜನಪರವಾದ ಕನಿಷ್ಠ ಒಂದು ಸರ್ಕಾರಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆಗಿಲ್ಲವೆಂದು ಛೇಡಿಸಿದರು.

ಕೋಳಘಟ್ಟ ಸಮೀಪ ಜಲ್ಲಿ ಕ್ರಷರ್ ಮಾಡದಂತೆ ಗ್ರಾಮಸ್ಥರು ಶಾಸಕರಲ್ಲಿಗೆ ಅಹ್ವಾಲ ತೆಗೆದುಕೊಂಡು ಹೋದರೆ ಇದು ಕೇಂದ್ರದ ಗಡ್ಕರಿಯವರ ಆದೇಶ ಎನ್ನುತ್ತಾರೆ. ಇಲ್ಲಿ ಜಲ್ಲಿ ಒಡೆಯಲು ರಾಜ್ಯ ಸರ್ಕಾರ ಅನುಮತಿ ನೀಡ ಬೇಕೆ ವಿನಹ ಕೇಂದ್ರ ಸರ್ಕಾರವಲ್ಲ. ಈ ವಿಚಾರದಲ್ಲಿ ಶಾಸಕರು ಗ್ರಾಮಸ್ಥರನ್ನು ದಾರಿತಪ್ಪಿಸುತ್ತಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಸು.20ಕ್ಕೂ ಹೆಚ್ಚು ಮುಸ್ಲಿಂ ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ವಿಜಯೇಂದ್ರ, ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಬಾಣಸಂದ್ರ ರಮೇಶ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಫ್ರಲ್ಲಾ ಖಾನ್, ಮುಖಂಡರುಗಳಾದ ವೆಂಕಟಾಪುರ ಯೋಗೀಶ್, ರಾಗು, ಕಲ್ಲಬೋರನಹಳ್ಳಿ ಜಯರಾಂ, ವಿ.ಕೆ.ಗೌಡ ಮತ್ತು ಮುಸ್ಲಿಂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕವನ: ಸವಿ ಹೂರಣ

0

ವೆನ್ನಲ ಕೃಷ್ಣ


ಹೊಸ ವರ್ಷದ ಪ್ರತಿ ಕ್ಷಣ
ಆತ್ಮ ವಿಶ್ವಾಸವೆ ನೀನಿರುವೆ
ನೀ ಬರುವೆ ಜೊತೆ ಜೊತೆಗೆ

ಏರು ಪೇರುಗಳನ್ನು ದಾಟಿ
ಜೀವ ನದಿ ನಮ್ಮ ಜೀವನದಿ
ಸಾಗುತ್ತಿದೆ ಹೊತ್ತು ಹೊತ್ತಿಗೆ

ಮುಖ ಚಿತ್ರ ಬರೆದವರೊಬ್ಬರು
ಅಕ್ಷರಗಳ ಜೋಡಣೆಯೊಬ್ಬರು
ಒಳಗಿರುವುದು ನಮ್ಮ ಬರವಣಿಗೆ

ಮುನ್ನುಡಿ ಬರೆದವರೊಬ್ಬರು
ಬೆನ್ನುಡಿ ಹಾರೈಸಿದವರೊಬ್ಬರು
ನಮ್ಮದೇ ಹೂರಣ ಹೊತ್ತಿಗೆಗೆ

ಹಿಂದಿನ ನಡೆಯ ಅನುಭವ
ಇಂದು ಬರೆದ ಭಾವಕ್ಕೆ ತೋರಣ
ಆದರ್ಶವಾಗಲಿ ನಾಳಿನ ಬದುಕಿಗೆ

ಹೊಸ ವರ್ಷದ ಹೊಸ್ತಿಲಲ್ಲಿ
ದೃಢವಾದ ಸಂಕಲ್ಪ ನನ್ನದು
ನಾನೇ ಪಠ್ಯವಾಗಬೇಕು ಓದಿಗೆ. ||

ಡಾ. ರಜನಿ ಕವಿತೆ: ಹೊಸ ವರುಷ

2
ಹೊಸ ವರುಷದ ಆಚರಣೆ ಬದಲಾದರೂ
ಗೆಳೆಯರು ಇರ ಬೇಕು ಬದುಕಲ್ಲಿ ಹಾಗೂ
ಈಗಲೂ ಎರಗುತ್ತಿರುವ ಪಿಡುಗು ಮತ್ತು
ಮೂಕನಾಗೇ ಭರವಸೆ ಕೊಡುವ ದೇವರು
ಎಂಬ ಅರ್ಥದ ಕವನ ಡಾII ರಜನಿ ಅವರಿಂದ.

ಹೊಸ ಹರುಷ

0


ಹೊಸ ವರುಷದ
ಹರುಷ
ಹೊಸದೇನು?

ಕತ್ತರಿಸಿ ಹಂಚಿದ
ಕೇಕ್
ಹಂಚಬೇಕು
ಸಿಹಿಯನ್ನು..

ಮಧ್ಯರಾತ್ರಿ
ಬರ
ಮಾಡಿದ
ಸ್ವಾತಂತ್ರ್ಯ …

ಸುರಿದ ಶುಭಾಶಯಗಳು
ನೆನಪಿರಲಿ ನನ್ನ
ಹಿತೈಷಿಗಳು…

ಈಡೇರಲಾಗದ ಆಸೆಗಳು
ನುಂಗಿದ
ದುಃಖ
ದುಮ್ಮಾನಗಳು…

ಹೆಚ್ಚಿದ ಮುಖದ ಗೆರೆಯನ್ನು
ನೆರೆಯನ್ನು
ನುಂಗಿದ ನೊರೆ ಪಾನೀಯದ
ಮತ್ತು..

ಪಿಡುಗಿನ ಮಧ್ಯೆಯೂ
ಉಳಿದಿರುವ
ಜೀವಗಳು…

ಏರಿಸಿದ ತಂಪು
ಕನ್ನಡಕಗಳು
ಕಾಲ್ಕೆಳಗೆ ನುಣ್ಣನೆ
ಉಸುಕುಗಳು…

ಮತ್ತೆ
ಬಂದೆರಗುತ್ತಿರುವ
ಹೆಮ್ಮಾರಿ
ಪ್ರವಾಹ…

ಆದರೇನು
ಇದ್ದರಲ್ಲವೆ
ಮಧ್ಯರಾತ್ರಿ
ನನ್ನ ಕೈ ಹಿಡಿದು…

ಹೊಸ ವರುಷವ
ಆಹ್ವಾನಿಸಿದ
ಜೊತೆಗಾರರು..

ಬೆಳಗ್ಗೆ ಎದ್ದು
ಬೇಡಿದ ಕೈ
ದಿಟ್ಟಿಸಿ ನೋಡಿದ
ದೇವರು…

ಡಾ|| ರಜನಿ

ಸ್ಥಳೀಯತೆಗೆ ಹೆಚ್ಚು ಒತ್ತು ಸಿಗಲಿ: ಕಾರದ ಮಠದ ಶ್ರೀ

Public story


ಬೆಳ್ಳಾವಿ: ಸ್ಥಳೀಯತೆಗೆ, ಸ್ಥಳೀಯ ವಿಚಾರಗಳಿಗೆ ಹೆಚ್ಚು ಆದ್ಯತೆ ಸಿಗಬೇಕು ಎಂದು ಇಲ್ಲಿನ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು.

ಮಠದಲ್ಲಿ ಸ್ವದೇಶಿ ಪತ್ತಿನ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಎಲ್ಲರೂ ಏಕ ಪ್ರಕಾರವಾಗಿಯೇ ಯೋಚಿಸುತ್ತಾರೆ. ಭಿನ್ನ ಯೋಚನೆಗಳು ಇರಬೇಕು. ವ್ಯಕ್ತಿಗತ ವಿಜೃಂಭಣೆಗಿಂತಲೂ ವಿಷಯ ವಿಜೃಂಭಣೆಗೆ ಹೆಚ್ಚು ಒತ್ತು ಸಿಗಬೇಕು ಎಂದರು.

ಪತ್ರಕರ್ತ, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ ಮಾತ ಮಾಡಿ, ಮಠದ‌ ಬೆಳವಣಿಗೆ, ಜನಪರ ಕೆಲಸಗಳು ಬೆರಗು ಮೂಡಿಸುವಂತಿವೆ ಎಂದರು.

ಇದೇ ಸಂದರ್ಭ ಸಂಘದ ವತಿಯಿಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.

ಸ್ವದೇಶಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎನ್.ಮಹಾದೇವಯ್ಯ, ನಿರ್ದೇಶಕರಾದ ಸುನಿಲ್ ಕುಮಾರ್, ವಸಂತ ಕುಮಾರ್, ಕಾರ್ಯನಿರ್ವಾಹನಾಧಿಕಾರಿ ಮೋಹನ್ ಕುಮಾರಿ G S ಇದ್ದರು.

ಕವನ: ಹೆಚ್ಚೇನೂ ಹೇಳಲಾರೆ

0

ಡಾ.ಗಿರಿಜಾ


ನೋವು ತುಂಬಿದ ಕಂಗಳಲ್ಲಿ
ಜೀವದ ಆಸೆ ಬತ್ತಿಹೋಗಿ
ಆಗಸದಿ ನೋಡುತ್ತಾ ಮಲಗಿಹ
ಅವಳ ವೇದನೆ ನೋಡಿ
ಹೆಚ್ಚೇನೂ ಹೇಳಲಾರೆ…..

ಮೈ ಮನಸ್ಸಿಗಾದ ಗಾಯ
ತ್ರಾಣವಿಲ್ಲದ ಜೀವ
ಬದುಕಲು ಹೋರಾಡುವ
ಪುಟ್ಟ ಕಂದನ ನೋಡಿ
ಹೆಚ್ಚೇನೂ ಹೇಳಲಾರೆ…..

ಅವಳ ಆರ್ತನಾದ ಕೇಳಿಸದೆ
ಕಿವುಡಾಗಿಹ
ಅವಳಂತರಂಗವನ್ನರಿಯದೆ
ಚೇಡಿಸುವ
ಹಾಸ್ಯ ಬರಿತ ಮಾತಾಡಿ ಮನ ನೋಯಿಸುವ ಮಂದಿಯ ನೋಡಿ
ಹೆಚ್ಚೇನೂ ಹೇಳಲಾರೆ…..

ಕೂಗಿ ಹೇಳಲು ಬಹಳಷ್ಟು ಇದೆ
ಕೇಳುವ ಮಂದಿ
ದನಿ ಗೂಡಿಸಿಹರು
ಬದಲಾವಣೆಯ ಹಾದಿಯಲ್ಲಿ
ಮುನ್ನಡೆಯುತ್ತಿಹರು
ಹೊಸ ಬದುಕು, ಹೊಸ ನೋಟ
ಹೊಸ ಅಲೆಯ ಸೃಜಿಸುತ್ತಾ
ನಡೆಯುತಿಹರು
ಭರವಸೆಯ ನಾಳೆಗಾಗಿ
ಹೆಚ್ಚೇನೂ ಹೇಳಲಾರೆ…..


ಗಿರಿಜಾ

ಕವನ: ಹೊಸ ವರುಷ

0
ಕೊರೋನಾ ಪಿಡುಗು ಜನ ಸಾಮಾನ್ಯರ ,
ಉಳ್ಳವರ , ಮಕ್ಕಳ ವಯಸ್ಸಾದವರ ಜೀವನದಲ್ಲಿ
ಒಂದೊಂದು ರೀತಿ ತನ್ನ ಆಟ ತೋರಿಸಿದೆ.
ಮುಂದಿನ ಹೊಸ ವರ್ಷ ಒಳ್ಳೆ ದಿನಗಳು ಬರಲಿ
ಎಂಬ ಹಾರೈಕೆಯ ಕವನ ಡಾII ರಜನಿ ಅವರಿಂದ.

ಒಂದು ವರುಷವ
ಹಿಂದಕ್ಕೆ ತಳ್ಳುವುದೆಂದರೆ
ಸುಮ್ಮನಲ್ಲ….

ಹಣ ,ಅಂತಸ್ತು
ಮೀರಿ
ಎದೆಗೂಡು ಹೊಕ್ಕ
ವೈರಿ ವೈರಸ್ಸು…

ಬಂದ ನೆಗಡಿಯೆಲ್ಲಾ
ಕೊರೋನಾ ಆಗದಿರಲಿ
ಎಂಬ ಪ್ರಾರ್ಥನೆಗಳು…

ಕಣ್ಣೆದುರು ವಯಸ್ಸಲ್ಲದ
ವಯಸ್ಸಲ್ಲಿ ಸತ್ತದ್ದನ್ನು ನೋಡಿ
ಎದೆ ಭಾರವಾದ ದಿನಗಳು…

ಬೆಳಗ್ಗೆ
ಬಾಯಿ ತುಂಬ ನಗು ಉಕ್ಕಿ
ರಾತ್ರಿ ದಿಂಬು
ನೆನೆದ ರಾತ್ರಿಗಳು…

ಮಗು ಮಾಸ್ಕ್
ಧರಿಸಿ ..
ಮುದ್ದಿಸಲೂ
ಹೆದರಿ …

ಶತ್ರು, ಮಿತ್ರ
ಪ್ರೇಮ ಪ್ರೀತಿ
ಪಿಡುಗು ಎದುರು
ಮಂಡಿಯೂರಿ ..

ಶತಮಾನದ
ದುಃಖ ದುಮ್ಮಾನ
ನೋವಿಗೆ
ಸಾಕ್ಷಿಯಾಗಿ ನಿಂತು …

ಹಗೆ, ದ್ವೇಷ
ಮಳೆಯಲ್ಲಿ
ಕೊಚ್ಚಿ
ಹೋಗಿ…

ಕಾಸು ಕೊಳ್ಳಲಾಗದ
ವಸ್ತು
ಮನುಜನ ಹತೋಟಿ
ಮೀರಿದ ವಸ್ತು…

ಯಾವುದೆಂದು
ತಿಳಿದು …

ಹೂ ಮುತ್ತು
ಎಳೆ ಬಿಸಿಲು
ಶುದ್ಧ ನಗೆ
ಅಂಗೈ ಕಾವು…

ತುಟಿ ತೇವಕ್ಕೆ
ಕಾದು
ಬಾ ವರುಷವೇ …

ತಂಗಾಳಿಯಾಗಿ
ತಂಪಾಗಿ
ನನ್ನೆಲ್ಲಾ
ತಪ್ಪುಗಳ…

ಸಮಾಧಿ ಮೇಲೆ
ನೆಟ್ಟಿರುವೆ
ಕೆಂಪು ಗುಲಾಬಿ.


ಡಾ|| ರಜನಿ

ರೈತರಿಲ್ಲದಿದ್ದರೆ ಪ್ರಪಂಚವಿಲ್ಲ

0

ಗುಬ್ಬಿ : ರೈತರಿಲ್ಲದೆ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿದಿನ ರೈತರ ದಿನಾಚರಣೆಗಳು ನಡೆಯಬೇಕು ಎಂದು ಸುಜೀವನ ಒಕ್ಕೂಟದ ಅಧ್ಯಕ್ಷ ಗುರುದತ್ ತಿಳಿಸಿದರು.
ತಾಲ್ಲೂಕಿನ ದ್ಯಾವಣ್ಣನಪಾಳ್ಯ ಗ್ರಾಮದ ರುದ್ರೇಶ್‌ರವರ ಜಮೀನಿನಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಸುಜೀವನ ಒಕ್ಕೂಟ ಗುಬ್ಬಿ ಮತ್ತು ಸಿಎಸ್ ಪುರ ರೈತ ಉತ್ಪಾದಕರ ಕಂಪನಿವತಿಯಿAದ ಏರ್ಪಡಿಸಿದ್ದ ವಿಶ್ವ ರೈತರ ದಿನ ಹಾಗೂ ಬದನೆ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ರೈತರಿಗೆ ಸರ್ಕಾರ ಹಲವು ಯೋಜನೆಗಳನ್ನು ನರೇಗಾ ಯೋಜನೆಯಡಿ ತಂದಿದೆ. ಅವುಗಳನ್ನು ಬಳಸಿಕೊಂಡು ಜಮೀನನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬೇಕು.
ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾವಯವ ಕೃಷಿ ಪರಿಕರಗಳನ್ನು ಬಳಸಿ ಕೃಷಿ ಮಾಡಿದಾಗ ಮಾತ್ರ ಮನುಷ್ಯರ ಆರೋಗ್ಯ ಕಾಪಾಡಬಹುದು ಎಂದು ತಿಳಿಸಿದರು.
ಭಾರತ ದೇಶದ ಐದನೇ ಪ್ರಧಾನಮಂತ್ರಿ ಚರಣ್‌ಸಿಂಗ್ ಚೌಧರಿರವರ ಹೆಸರಲ್ಲಿ ವಿಶ್ವ ರೈತ ದಿನಾಚರಣೆ ಮಾಡಲಾಗುತ್ತದೆ. ಇವರ ಕಡಿಮೆ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು ಸಹ ಇವರು ರೈತರ ಜೀವನ ಸುಧಾರಣೆಗೆ ಅನೇಕ ಯೋಜನೆಗಳನ್ನು ತಂದು ರೈತರ ಯಶಸ್ವಿಗೆ ಕಾರಣರಾಗಿದ್ದರು ಎಂದರು.
ನಿರ್ದೇಶಕ ಅಸ್ಲಾಂ ಪಾಷ ಮಾತನಾಡಿ, ರೈತರು ತಮ್ಮ ಜಮೀನಿಗೆ ಕಳೆನಾಶಕವನ್ನು ಒಡೆಯದೆ ಕಳೆಯನ್ನು ನಿಯಂತ್ರಣ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿ ರೈತ ರುದ್ರೇಶ್, ಮುಖಂಡ ಗುರುಚನ್ನಬಸಪ್ಪ, ಸಿಎಸ್ ಪುರ ರೈತ ಉತ್ಪಾದಕರ ಕಂಪನಿಯ ಸಿಬ್ಬಂದಿಗಳಾದ ಲೋಕೇಶ.ಡಿ, ವಿನೋದಮ್ಮ, ಬಿಸಿಎ ಗಂಗಮ್ಮ, ಆರ್ಥಿಕ ಸೆರ್ಪಡೆ ಅಧಿಕಾರಿ, ಶ್ರೀನಿವಾಸ್, ರಾಘವೇಂದ್ರ ಹಾಗೂ ಕೃಷಿಕ, ಮಹಿಳಾ ಸಂಘದವರು ಹಾಜರಿದ್ದರು.
ಪೋಟೋ : ಗುಬ್ಬಿ ತಾಲ್ಲೂಕಿನ ದ್ಯಾವಣ್ಣನಪಾಳ್ಯ ಗ್ರಾಮದ ರುದ್ರೇಶ್‌ರವರ ಜಮೀನಿನಲ್ಲಿ ಸುಜೀವನ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಿಶ್ವ ರೈತ ದಿನಾಚಣೆಯಲ್ಲಿ ಪ್ರಗತಿ ರೈತ

ಮಣ್ಣಿನ ಮುಚ್ಚಳ, ಒಂದು ಅಂಕ ಮುಗಿದು ಕೃತಿಗಳ ಬಿಡುಗಡೆ

0

ಮಂಜುನಾಥ ತಿಪಟೂರು


ತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಸಭಾಂಗಣದಲ್ಲಿ ಕನ್ನಡದ ಮಹತ್ವದ ಕಥೆಗಾರ ರಲ್ಲೊಬ್ಬರಾದ ಎಸ್. ಗಂಗಾಧರಯ್ಯನವರ ‘ಮಣ್ಣಿನ ಮುಚ್ಚಳ’ ಕಥಾ ಸಂಕಲನ, ಮತ್ತು ಅವರ ಮಗಳು ಸ್ಮಿತಾ ಮಾಕಳ್ಳಿಯವರ ‘ ಒಂದು ಅಂಕ ಮುಗಿದು’ ಕವನ ಸಂಕಲನ ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.

ಮುಖ್ಯ ಅತಿಥಿ ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಕನ್ನಡ ಸಾಹಿತ್ಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲುವಂತಿದ್ದವು. ಸಾಮಾಜಿಕ ಸಂಕಷ್ಟಗಳು, ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗು ತ್ತಿರುವ ಸಂಬಂಧಗಳು, ನಗರಕ್ಕೆ ಒಗ್ಗದ ಮನಸ್ಸುಗಳು ಅನುಭವಿ ಸುವ ತಲ್ಲಣಗಳನ್ನು ಎಳೆ ಎಳೆ ಯಾಗಿ ಬಿಡಿಸಿ, ಈ ಅಂಶಗಳೇ ಗಂಗಾಧರಯ್ಯ ನವರ ಕಥೆ ಗಳಲ್ಲಿ ರೂಪುತಳೆದಿರುವುದನ್ನು ವಿವರಿಸಿದರು.

ಅಪ್ಪಟ ಗ್ರಾಮ್ಯ ಭಾಷೆ ಯನ್ನು ಸಹಜವಾಗಿಯೇ ಬಳಸುತ್ತಲೇ ನಟರಾಜು ಬೂದಾಳು ತಿಪಟೂರಿನ ಸುತ್ತಲಿನ ೨೦ ಕಿ.ಮೀ. ವ್ಯಾಪ್ತಿಯ ಪ್ರದೇಶದ ನೆಲದ ಭಾಷೆಯ ಸೊಗಡು ಕಥಾ ಸಂಕಲನದಲ್ಲಿ ಬಳಕೆಯಾಗಿ ರುವುದನ್ನು ವಾಚಿಸುತ್ತಾ, ಇದು ಕಥೆಯೊಂದರ ಪಾತ್ರದ ಮಾತಾಗದೆ ನನ್ನ ಹಿರಿಯರ ಮಾತುಗಳೇ ಅನುರಣಿಸಿದಂತಾ
ಗುತ್ತದೆ ಎಂದರು.

ರಾಜಕೀಯದಲ್ಲಿ ಕುಟುಂಬ ರಾಜಕಾರಣ ಎಂದಾಗ ಪ್ರತಿರೋಧಿಸುವ ನಾವು ಸಾಹಿತ್ಯದಲ್ಲಿ ಮಗಳ, ಅಪ್ಪನ ಕೃತಿಗಳು ಒಂದೇ ದಿನ ಬಿಡುಗಡೆಯಾಗುವುದನ್ನು ಸಂಭ್ರಮಿಸುತ್ತೇವೆ. ಸ್ಮಿತಾರವರ ಕಾವ್ಯಾಭಿವ್ಯಕ್ತಿಯ ಗುಣ ಪ್ರಖರವಾಗಿದ್ದು, ಬಳಸಿದ ವಸ್ತು, ವಿಷಯಗಳು ಮನ ಮುಟ್ಟುವಂತಿವೆ ಎಂದರು.

ಸುಪ್ರಸಿದ್ಧ ಕತೆಗಾರ ಸುಬ್ಬು ಹೊಲೆಯಾರ್ ರವರು ಸ್ಮಿತಾ ರವರ ಹಲವು ಕವಿತೆಗಳನ್ನು ಉಲ್ಲೇಖಿಸಿ, ಸಮಕಾಲೀನ ಬೆಳವಣಿಗೆಗಳನ್ನು ಒರೆಗೆ ಹಚ್ಚುತ್ತಲೇ ಸಾಮಾಜಿಕ, ಕೌಟುಂಬಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ರೀತಿ ಅನನ್ಯವಾಗಿದೆ ಎಂದರು.

ಕಲ್ಪತರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗೀತಾಲಕ್ಷ್ಮಿಯವರು ‘ಒಂದು ಮುಗಿದ ಅಂಕ’ದ ಕವನಗಳು ಕನ್ನಡದ ಇತರೆ ಶ್ರೇಷ್ಠ ಕವಿಗಳ ಕವನ ಗಳೊಂದಿಗೆ ಹೇಗೆ ಪೂರಕವಾಗಿ, ಮುಖಾಮುಖಿಯಾಗಿ ನಿಲ್ಲುತ್ತವೆಂಬುದನ್ನು ಸ್ವಾರಸ್ಯ ಕರವಾಗಿ ವಿವರಿಸಿದರು.

ಆರಂಭದಲ್ಲಿ ಕನ್ನುಘಟ್ಟದ ಕಾಂತರಾಜು ತಂಡದಿಂದ ತತ್ತ್ವ ಪದಗಳ ಹಾಡುಗಾರಿಕೆ ಸೊಗಸಾಗಿತ್ತು. ಸುಮಾರು ಎರಡು ನೂರು ವರ್ಷಗಳಷ್ಟು ಹಳೆಯದಾದ ಸಾಂಪ್ರದಾಯಿಕ ‘ಗಣೆ’ (ಕೊಳಲು) ನುಡಿಸಿದ್ದು ವಿಶೇಷವಾಗಿತ್ತು.

ಉಜ್ಜಜ್ಜಿ ರಾಜಣ್ಣ ಕಾರ್ಯಕ್ರಮ ನಿರೂಪಿಸಿ, ಗಂಗಾಧರಯ್ಯ ನವರು ವಂದನೆ ಸಲ್ಲಿಸಿದರು. ‘ಪಲ್ಲವ’ ಪ್ರಕಾಶನದ ವೆಂಕಟೇಶ್ ಕಾರ್ಯಕ್ರಮ ದಲ್ಲಿ
ಹಾಜರಿದ್ದರು.