Saturday, May 9, 2026
Google search engine
Home Blog Page 124

ತುರುವೇಕೆರೆ ಪಟ್ಟಣ ಕೆರೆ ರಕ್ಷಣೆಗೆ ಟೊಂಕಕಟ್ಟಿದ ಸಮಾನ ಮನಸ್ಕರು

ತುರುವೇಕೆರೆ: ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಸದ್ಯ ಹೂಳು ತುಂಬಿ ಒತ್ತುವರಿಗೆ ಒಳಗಾಗಿರುವ ಪಟ್ಟಣದ ಕೆರೆ ಸಂರಕ್ಷಣೆಗೆ ತಾಲ್ಲೂಕಿನ ಕೆರೆ ಹಿತರಕ್ಷಣೆಯ ಸಮಾನ ಮನಸ್ಕರ ಗುಂಪೊಂದು ಚಾಲನೆ ನೀಡಿದೆ
ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದಲ್ಲಿ ನಡೆದ ಕೆರೆ ಸಂರಕ್ಷಣೆ ಹಿತಾಸಕ್ತರ ಪೂರ್ವಭಾವೀ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಟಿ.ವಿ.ನಟರಾಜ್ ಪಂಡಿತ್ ‘ ಕೆರೆಯಲ್ಲಿ ನೂರಾರು ವರ್ಷಗಳಿಂದ ಸುಮಾರು 40 ಅಡಿ ಮೀರಿ ಹೂಳು ತುಂಬಿ ನಿಂತಿದೆ. ಸಮರ್ಪಕ ನಿರ್ವಹಣೆಯಿಲ್ಲದೆ ಕೆರೆ ನೀರು ಮಾಲಿನ್ಯಕ್ಕೊಳಗಾಗಿದೆ. ಕೆರೆಯ ನೀರು ಸಂಗ್ರಹಣಾ ಸಾಮಥ್ರ್ಯ ಕುಸಿದಿದೆ. ಈ ಹಿನ್ನಲೆಯಲ್ಲಿ ಕೆರೆಗೆ ತುರ್ತು ಕಾಯಕಲ್ಪ ಮಾಡುವ ಅಗತ್ಯವಿದೆ ಎಂದು ಹಲವು ಅಂಕಿ ಅಂಶಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಕೃಷಿಕ ಟಿ.ಆರ್.ಪಾಂಡುರಂಗ ಮಾತನಾಡಿ ಕೆರೆಯ ಅಚ್ಚುಕಟ್ಟು ಸಾಕಷ್ಟು ಒತ್ತುವರಿಯಾಗಿದ್ದು ಕೆರೆ ಅಂಗಳವನ್ನು ಅವೈಜ್ಞಾನಿಕವಾಗಿ ಅಗೆದು ಕೆರೆಯ ಅಂದ ಹಾಗೂ ಸ್ವರೂಪ ಹಾಳುಗೆಡವಲಾಗಿದೆ. ಪ್ರಾಥಮಿಕ ಹಂತದಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡು ಆ ನಂತರ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದರು
ವರ್ತಕ ಎಸ್.ಎಂ. ಕುಮಾರಸ್ವಾಮಿ ಮಾತನಾಡಿ ಕೆರೆ ಸಂರಕ್ಷಣೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ವರ್ತಕರು, ಗುತ್ತಿಗೆದಾರರು ಹೀಗೆ ಎಲ್ಲಾ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳನ್ನು ಸಂಘಟಿಸುವ ಮೂಲಕ ಕೆರೆ ಕಾಯಕಲ್ಪಕಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿಯೂ ಸೇರಿದಂತೆ ಎಲ್ಲಾ ಸಂಬಂಧಿಸಿದ ಇಲಾಖೆಗಳು ಹಾಗೂ ಸಂಘ, ಸಂಸ್ಥೆಗಳ ಸಹಭಾಗಿತ್ವ ಮುಖ್ಯ ಎಂದರು.
ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಕೆರೆ ಸಂರಕ್ಷಣಾ ಸಮಿತಿ ರಚಿಸಿ ಸಮಿತಿಯ ನೇತೃತ್ವದಲ್ಲಿ ಕೆರೆ ಸಂರಕ್ಷಣೆ ಕುರಿತು ಮುಂದಿನ ಯೋಜನೆ ರೂಪಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ನಂಜುಂಡಸ್ವಾಮಿ, ಟಿ.ಎನ್.ರಾಜೀವ್, ಡಿ.ಆರ್.ಸೋಮಶೇಖರ್, ಸಿ.ಎಸ್.ಗಂಗಾಧರಸ್ವಾಮಿ, ಪಾಲ್ ಕುಮಾರ್, ಟಿ.ಎಚ್.ರಾಮಕೃಷ್ಣಯ್ಯ, ಅಶ್ವಿನ್, ಸುರೇಶ್ ಪಟೇಲ್,ಕೊಟ್ರೇಶ್,ಬರಹಗಾರ ತುರುವೇಕೆರೆ ಪ್ರಸಾದ್ ಇತರರು ಭಾಗವಹಿಸಿದ್ದರು.

ಗಝಲ್: ಚಿತ್ರ ಚಿತ್ತ

0

ಡಾ‌ ರಜನಿ ಅವರ ಇದುವರೆಗಿನ ಕವನಗಳಲ್ಲಿ ಅಧ್ಯಾತ್ಮ, ವಾಸ್ತವ, ಆರೋಗ್ಯ, ಪ್ರಕೃತಿ. ನವರಾತ್ರಿ ಬಣ್ಣ ಗಳ ಮೇಲೆ ಕಾವ್ಯ ಕಟ್ಟಿದರು. ಮೊದಲಬಾರಿಗೆ ರೊಮ್ಯಾಂಟಿಕ್ ಗಝಲ್ ಗಳ ಪ್ರಯೋಗ ಮಾಡಿದ್ದಾರೆ. ಅದರ ಸವಿಯನ್ನು ಸವಿಯೋಣ.ಇನ್ನೂ ಹೆಚ್ಚಿನ ಚಿತ್ರ- ಚಿತ್ತ ಗಳನ್ನು ನಿರೀಕ್ಷಿಸಿ .

ಹೈಕುಗಳು

0

ಜ್ವರ


ಅದು ಹಾಗೆ ಬರಬಾರದು
ಬಂದರೆ ಕೆಂಡದಂತೆ
ಸುಟ್ಟು ಹೋಗಿ ಬಿಟ್ಟು ಬಿಡಬೇಕು…

ಸಣ್ಣಗೆ ಬಿಟ್ಟು ಬಿಡದಂತೆ ಇರಬಾರದು
ಅಂಗಾಲು ಹಣೆ ಬಿಸಿ ಆದಂತೆ….
ಅಮ್ಮ ತಾನೆ ಎಷ್ಟು ಸಾರಿ
ಹಣೆ ಮುಟ್ಟಿ ನೋಡುವಂತೆ
ತನ್ನ ಕೆನ್ನೆಗೆ
ಅಂಗೈ
ಸೋಗಿಸಿ ಕೊಂಡಂತೆ

ಮೊಬೈಲ್


ಮೊಬೈಲ್
ಮಟ್ಟಿದರೆ ಸಾಕು
ಹತ್ತಿಕೊಳ್ಳುತ್ತದೆ ….
ಕೆಲವೊಮ್ಮೆ
ಹತ್ತಿರ ಸುಳಿದರೂ ಸಾಕು…
ನೀನು ಹೇಗೆ
ಪಾಠ ಹೇಳಿ ಕೊಟ್ಟಿದ್ದೀಯೋ
ಹಾಗೆ….

ಡಾII ರಜನಿ

ನವರಾತ್ರಿಯ ಕವನ :ನೇರಳೆ

0

ದಸರಾ ಹಬ್ಬದ ಹತ್ತನೆಯ ದಿನ ದಶಮಿ. ವಿಜಯದ ಸಂಕೇತವಾಗಿ ಆಚರಿಸುವ ವಿಜಯ ದಶಮಿ. ಇಂದು ಮಾತಾ ಸಿದ್ದಿ ಧಾತ್ರಿಯನ್ನು ಪೂಜಿಸಲಾಗುತ್ತದೆ ದೇವಿಗೆ ಪ್ರಿಯವಾದ ಬಣ್ಣ ನೇರಳೆ. ನೇರಳೆ ರಂಗನ್ನು ಕುರಿತ ಕವನ.


ಜಂಬು ನೇರಳೆಗೆ🍇🍇
ಗಗನದ
ಬೆಲೆ

ನೇರಳೆ ಸುಂದರಿ
ಪೌಷ್ಟಿಕಾಂಶಗಳ
ಆಗರ

ನೇರಳೆ ಬಣ್ಣದ
ಕ್ಯಾರೆಟ್
ಕ್ಯಾಬೇಜ್ ..🍇🍆

ನೇರಳೆ ಬಣ್ಣ🍆
Anthocyanin ನಿಂದ ಬಂದದ್ದು
ಒಳ್ಳೆ
Antioxidant

ನೇರಳೆ ಹೃದಯದ emoji💜
ಪ್ರೀತಿಗಿಂತ …
ಅನುಭೂತಿ ಹೆಚ್ಚು

ನೇರಳೆ ದೀಪ🌆
ಒಳ್ಳೆ
ನಿದ್ರೆ

ನೇರಳೆ ನಿಜವಾದ
ಬಣ್ಣವೇ
ಅಲ್ಲವಂತೆ

ತನ್ನ ಸ್ವಂತ
Wave length
ಇಲ್ಲವಂತೆ !

ಕೆಂಪು ನೀಲಿ
ಮಿಶ್ರ ಮಾಡಿದರೆ
ನೇರಳೆ ಬಣ್ಣ ತಯಾರು

ನೇರಳೆಗೂ
Lavender ಗೂ
ಸುಗಂಧದ ಸಂಬಂಧ

Purple tape
ಅಂತರಾಷ್ಟ್ರೀಯ ಮಹಿಳಾ ದಿನದ
ಬಣ್ಣ

ಗೌರವವನ್ನು
ನ್ಯಾಯವನ್ನೂ..
ಆಗ್ರಹಿಸಲು

ನೇರಳೆ ತಿಂದು
ನಾಲಿಗೆ
ನೇರಳೆ ….

ಇದು Purple prose ಅಲ್ಲ
ಎಲ್ಲರಿಗೂ ಬೇಕೂ
Purple patch 😊

Dr ರಜನಿ

ನವರಾತ್ರಿ ಕವನಗಳು: ಗುಲಾಬಿ ಬಣ್ಣ

0
ನವರಾತ್ರಿಯ 8ನೇ ದಿನ ಮಹಾ ಗೌರಿಯನ್ನು ಪೂಜಿಸಲಾಗುತ್ತದೆ. ಗುಲಾಬಿ ಬಣ್ಣವನ್ನು ಮಹಾಗೌರಿ ಪ್ರತಿನಿಧಿಸುತ್ತಾಳೆ. ಗುಲಾಬಿ ಬಣ್ಣ ಯಾರಿಗೆ ಇಷ್ಟವಿಲ್ಲ. ಗುಲಾಬಿ ಬಣ್ಣದೊಂದಿಗೆ ಬದುಕು ಹಾಸುಹೊಕ್ಕಾಗಿರುವುದನ್ನು ಡಾ. ರಜನಿ ಅವರ ಈ ಕವನ ಸಾರುತ್ತದೆ.


ಗುಲಾಬಿ ಬಣ್ಣ
***********

ಎಳೆ ಕಂದನ
ತುಟಿ..
ಅಂಗಾಲು

ಪುಟ್ಟಿಯ
ನೆರಿಗೆ
ಫ್ರಾಕು

ಕೆಸರಿನಲ್ಲಿ
ಅರಳಿದ
ಕಮಲ

ರಕ್ತ
ಚಿಮ್ಮುವ
ಉಗುರು

ಆಗ ತಾನೆ
ಜನಿಸಿದ
ಮರಿ ಹಂದಿ

ಪ್ರೀತಿ
ತುಂಬಿದ
Valentine
ಹೃದಯ

ಪ್ರೀತಿ,
ಎಳೆ ಚಿಗುರು,
ಹುಡುಗಿಗೇ ಏಕೆ…?
ಗುಲಾಬಿ ಬಣ್ಣ

ಕೆಂಪು ಬಿಳಿಗಳ
ಮಿಶ್ರಣ
ಗುಲಾಬಿ

ಗುಲಾಬಿ
ಶುದ್ಧ
ಪ್ರೀತಿಯ ಬಣ್ಣ

ಅಮ್ಮನ
ಗುಲಾಬಿ ರೇಶ್ಮೆ
ಸೀರೆ

ಗುಲಾಬಿ
ರಿಬ್ಬನ್
Breast Cancer
ಅರಿವಿಗಾಗಿ


ಡಾII ರಜನಿ

ನವರಾತ್ರಿ ಕವನಗಳು: ನೀಲಿ

0
ನವರಾತ್ರಿಯ ಏಳನೇಯ ದಿನ ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ಮಾತೆಗೆ ಪ್ರಿಯವಾದ ಬಣ್ಣ ನೀಲಿ. ನೀಲಿ ಬಣ್ಣದ ಪ್ರಸ್ತುತತೆ ಸಾರುವ ಕವಿತೆ ಇದಾಗಿದೆ. ನೀಲಿಯ ಜಗತ್ತು ಜೀವ ಜಗತ್ತಿನ ಜತೆ ಹಾಸು ಹೊಕ್ಕಾಗಿರುವುದನ್ನು ಡಾ. ರಜನಿ ಅವರ ಈ ಕವಿತೆ ಸಾರುತ್ತದೆ.

ನೀಲಿ
******
ಅಗಾಧ
ಆಕಾಶ ..
ಸಮುದ್ರ

ಶಾಂತತೆ
ಅಚಲತೆಗೆ
ನೀಲಿ

ಆಳ
ಅಗಲ
ನಿಲುಕದ್ದು

ಒಳಗೆ
ಅನಂತಾನಂತ
ಜೀವಿಗಳು

ನೀಲಾಕಾಶ ಸ್ಥಿರವೆ?
ಒಳಗೆ
ಸದಾ ಚಲನೆ

ಕ್ರೂರತೆ
ಸಾವು ,ನಗ್ನತೆ
ನೀಲಿ

ವಿಷ ನುಂಗಿದ
ನೀಲ
ಕಂಠ

ನೀಲ
ಮೇಘ
ಶ್ಯಾಮ

ಅರ್ಥವಾಗದ್ದು
ಅಮಿತವಾದದ್ದು
ನೀಲಿ

ಮಧುರವಾದದ್ದು
ಘೋರವಾದರೆ..
ನೀಲಿ

ಮುಕ್ತಿ
ನೀಡುವವನು
ನೀಲಿ

ವಿಷ ನುಂಗಿ
ಉಳಿಸುವವನು
ನೀಲಿ

ನೀಗುವುದು
ನಿಲುಕದ್ದು…
ನೀಲಿ …


ಡಾII ರಜನಿ

ನವರಾತ್ರಿ ಕವನಗಳು: ನೀಲಿ

0
ನವರಾತ್ರಿಯ ಏಳನೇಯ ದಿನ ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ಮಾತೆಗೆ ಪ್ರಿಯವಾದ ಬಣ್ಣ ನೀಲಿ. ನೀಲಿ ಬಣ್ಣದ ಪ್ರಸ್ತುತತೆ ಸಾರುವ ಕವಿತೆ ಇದಾಗಿದೆ. ನೀಲಿಯ ಜಗತ್ತು ಜೀವ ಜಗತ್ತಿನ ಜತೆ ಹಾಸು ಹೊಕ್ಕಾಗಿರುವುದನ್ನು ಡಾ. ರಜನಿ ಅವರ ಈ ಕವಿತೆ ಸಾರುತ್ತದೆ.

ನೀಲಿ
******
ಅಗಾಧ
ಆಕಾಶ ..
ಸಮುದ್ರಶಾಂತತೆ
ಅಚಲತೆಗೆ
ನೀಲಿಆಳ
ಅಗಲ
ನಿಲುಕದ್ದುಒಳಗೆ
ಅನಂತಾನಂತ
ಜೀವಿಗಳುನೀಲಾಕಾಶ ಸ್ಥಿರವೆ?
ಒಳಗೆ
ಸದಾ ಚಲನೆಕ್ರೂರತೆ
ಸಾವು ,ನಗ್ನತೆ
ನೀಲಿವಿಷ ನುಂಗಿದ
ನೀಲ
ಕಂಠನೀಲ
ಮೇಘ
ಶ್ಯಾಮಅರ್ಥವಾಗದ್ದು
ಅಮಿತವಾದದ್ದು
ನೀಲಿಮಧುರವಾದದ್ದು
ಘೋರವಾದರೆ..
ನೀಲಿಮುಕ್ತಿ
ನೀಡುವವನು
ನೀಲಿವಿಷ ನುಂಗಿ
ಉಳಿಸುವವನು
ನೀಲಿನೀಗುವುದು
ನಿಲುಕದ್ದು…
ನೀಲಿ …

ನವರಾತ್ರಿ ಕವನಗಳು: ನೀಲಿ

0
ನವರಾತ್ರಿಯ ಏಳನೇಯ ದಿನ ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ಮಾತೆಗೆ ಪ್ರಿಯವಾದ ಬಣ್ಣ ನೀಲಿ. ನೀಲಿ ಬಣ್ಣದ ಪ್ರಸ್ತುತತೆ ಸಾರುವ ಕವಿತೆ ಇದಾಗಿದೆ. ನೀಲಿಯ ಜಗತ್ತು ಜೀವ ಜಗತ್ತಿನ ಜತೆ ಹಾಸು ಹೊಕ್ಕಾಗಿರುವುದನ್ನು ಡಾ. ರಜನಿ ಅವರ ಈ ಕವಿತೆ ಸಾರುತ್ತದೆ.

ನೀಲಿ
******
ಅಗಾಧ
ಆಕಾಶ ..
ಸಮುದ್ರಶಾಂತತೆ
ಅಚಲತೆಗೆ
ನೀಲಿಆಳ
ಅಗಲ
ನಿಲುಕದ್ದುಒಳಗೆ
ಅನಂತಾನಂತ
ಜೀವಿಗಳುನೀಲಾಕಾಶ ಸ್ಥಿರವೆ?
ಒಳಗೆ
ಸದಾ ಚಲನೆಕ್ರೂರತೆ
ಸಾವು ,ನಗ್ನತೆ
ನೀಲಿವಿಷ ನುಂಗಿದ
ನೀಲ
ಕಂಠನೀಲ
ಮೇಘ
ಶ್ಯಾಮಅರ್ಥವಾಗದ್ದು
ಅಮಿತವಾದದ್ದು
ನೀಲಿಮಧುರವಾದದ್ದು
ಘೋರವಾದರೆ..
ನೀಲಿಮುಕ್ತಿ
ನೀಡುವವನು
ನೀಲಿವಿಷ ನುಂಗಿ
ಉಳಿಸುವವನು
ನೀಲಿನೀಗುವುದು
ನಿಲುಕದ್ದು…
ನೀಲಿ …


ಡಾII ರಜನಿ

ನವರಾತ್ರಿ ಕವನ :ಕೆಂಪು

1

ಕೆಂಪು ಬಣ್ಣ ಪ್ರೀತಿಯ ಸಂಕೇತ. ಕೆಂಪು ಕಾತ್ಯಾಯನಿ ದೇವಿಗೆ ಪ್ರಿಯವಾದದ್ದು. ಕೆಂಪು ಬಣ್ಣದ ಕಂಪು ಹೇಗೆಲ್ಲಾ ಪಸರಿಸಿದೆ.
ಸಂಸಾರದ ಜಂಜಾಟದಲ್ಲಿ
ಬಡತನ, ಗಂಡನ ಕುಡಿತ, ಬಡಿತ
ಬೆಳೆದ ಮಗಳು..
ಅಸಹಾಯಕತೆ
ಇವುಗಳನ್ನು ನೋಡಿ
ಕೆಂಪು ಬಣ್ಣ ಬಡ ಸ್ತ್ರೀಗೆ ಹೇಗೆ
ಕಾಡಿದೆ ಎನ್ನುವುದೇ ದುರಂತವೆಂದು ಕವಯತ್ರಿ ಇಲ್ಲಿ ವ್ಯಕ್ತಪಡಿಸಿದ್ದಾರೆ.


ಕೆನ್ನೆ ಕೆಂಪೇರಿದ್ದನ್ನು
ನೋಡಿ
ತಂದು ಕೊಟ್ಟ ಕೆಂಪು ಗುಲಾಬಿ..

ತೊಂಡೆ ತುಟಿ,
ಅಂಗಾಲ
ತಿಳಿಗೆಂಪು ಬರು ಬರುತ್ತಾ ಮಾಸಿ..

ಮಧ್ಯೆ ….ಕೆಂಪು ಚಟ್ನಿ
ಟಮೋಟೋ ಗೊಜ್ಜು
ದಾಳಿಂಬೆ ಸುಳಿದು ..

ರೂಬಿ ಉಂಗುರದ ಡಂಗುರ
ಹಾಗೇ ಉಳಿದು ಹೋಗಿ
ಕುಡಿದು . ಕೆಂಗಣ್ಣು..

ಒಮ್ಮೊಮ್ಮೆ
ಕೆಂಪು
ಬಾಸುಂಡೆ …

ಮೂರನೇ
ಕಣ್ಣು ಬಿಟ್ಟು … ಕೆಂಪು
ಮೆಣಸಿನ ಕಾಯಿ ಖಾರ…

ಪುಟ್ಟ ಮಗಳಿಗೆ
ಕೆಂಪು
ಫ್ರಾಕು ..

ರೆಡ್ ವೆಲ್ವೆಟ್
ಕೇಕ್ … ಮೇಲೆ
ರೆಡ್ ಚೆರ್ರಿ ..

ಹಬ್ಬಕ್ಕೆ
ಕೆಂಪು ಉಗುರು
ಬಣ್ಣ… ಬ್ರೋಚು.. ಲಿಪ್ ಸ್ಟಿಕ್

ಗುಲಗಂಜಿ ಪ್ರೀತಿಗೆ
ಕಾದು ಕಾದು
ರೊಟ್ಟಿ ಹೆಂಚು ಕೆಂಪು..

ಮಗಳು
ಮೈ ನೆರೆದು
ಕೆಂಪು ಗುಲಾಬಿಗೆ ಕಾಯುತ್ತಾ …

ದಿನ ಸರಿದು
ದಿನ ಹುಟ್ಟಿ
ಆಕಾಶದಲ್ಲಿ ಪ್ರತಿ ನಿತ್ಯ ಕೆಂಪು..

ಸಂಸಾರದ ಜಂಜಾಟದಲ್ಲಿ
ಪ್ರೀತಿ ಸೇರಿತು..ಮಂಗಳ
ಗ್ರಹ..

ನಿರಂತರ ಕಾಯುವಿಕೆ
ಪ್ರೀತಿಗಾಗಿ
ಕೆಂಪು ಗುಲಾಬಿಗಾಗಿ

ಕೆಂಪು ಅನ್ನುವುದೇ ವಿಷ ಚಕ್ರ
ಬದುಕಿನಲ್ಲಿ
ನಿತ್ಯ ದಾಹ..

ಕಾಲ ಸರಿದು
ಕೆಂಪು ಗುಲಾಬಿ
ಬಿಳಿ ಯಾಗಿ
ಪಕಳೆ ಉದುರಿ

ರಕ್ತ ತಿಲಕ…
ಉರಿಗಣ್ಣು
ಸಿಡಿದು
ಜ್ವಾಲಾಮುಖಿ

ಡಾ|| ರಜನಿ

ನವರಾತ್ರಿ ಕವನಗಳು: ಬಿಳಿ

0
ನವರಾತ್ರಿಯ ಐದನೇ ದಿನ ಅಂದರೆ, ಪಂಚಮಿಯಂದು ದೇವಿಯ ಅನುಗ್ರಹ, ಹಬ್ಬದ ಸಂಭ್ರಮಕ್ಕೆ ಬಿಳಿ ಬಣ್ಣದ ಉಡುಪು ಧರಿಸಬಹುದು. ಬಿಳಿ ಬಣ್ಣವು ಶುದ್ಧತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಈ ದಿನದಂದು ಸ್ಕಂದಮಾತಾ ದೇವರನ್ನು ಪೂಜೆ ಮಾಡಲಾಗುತ್ತದೆ. ಡಾ.ರಜನಿ ಅವರ ಈ ಕವನ ಬದುಕಿನೊಂದಿಗೆ ಬಿಳಿಯ ಮಹತ್ವವನ್ನು ಸಾರುತ್ತದೆ

ಬಿಳಿ
****

ಬಿಳಿ ಬಣ್ಣ ಶಾಂತತೆ,
ತಾಳ್ಳೆ, ಶುದ್ಧತೆಯ ಪ್ರತೀಕವೇ?

ಅದು ಹೇಗೆ..?.
ಒಳಗೆ ಏಳು
ಬಣ್ಣಗಳಿಲ್ಲವೆ!

ಏಳು ಬಣ್ಣಗಳನ್ನೂ
ಭಾವನೆಗಳನ್ನು
ಹಿಡಿತದಲ್ಲಿ ಹಿಡಿದರೆ ಬಿಳಿ
ಹೊಮ್ಮುವುದು…

ಬಿಳಿಯದೆಲ್ಲ ಶ್ರೇಷ್ಠವೇ?
ಬಿಳಿ ಗುಲಾಬಿ, ಬಿಳಿ ಹುಲಿ
ಬಿಳಿ ನವಿಲು…
ಬಿಳಿ ಪಾರಿವಾಳ…

ಬಿಳೀ ಹಾಳೆ
ಏನು ಚೆನ್ನ?
ಕಪ್ಪು ಅಕ್ಷರ ಮೂಡದ ಮೇಲೆ…

ಬಿಳೀ ಗುಲಾಬಿ
ಮಲ್ಲಿಗೆಗೆ
ಹಸಿರು ತೊಟ್ಟು ಇಲ್ಲದ ಮೇಲೆ…

ಕಪ್ಪು ಕೂದಲ ಮೇಲೆ
ಮಲ್ಲಿಗೆ
ಮುಡಿಯದೆ ….

ಕಪ್ಪು ಕಳೆದು ಬಿಳಿ ಆಗುವುದೇ?
ಮಳೆ ಸುರಿದ
ಬಿಳಿ ಮೋಡ….?

ಕೊರೆಯುವ ಹಿಮ
ಕೊಲ್ಲುವ
ಹಿಮ ಕರಡಿ …

ಹಸಿರು ಹುಲ್ಲು ತಿಂದು
ಬಂದ ಬಿಳಿ
ಬೆಣ್ಣೆ…

ಕಡೆಯದೇ
ಬೆಣ್ಣೆ ಆಗದು….

ಹಸಿರು
ಉಟ್ಟು
ಬಿಳಿಯಾಗಬೇಕು…

ಬಿಳಿ ಇನ್ನೂ
ಬಿಳಿಯಾಗಲಾರದು…

ಬಿಳಿ ಕುದುರೆ
ಟೂ… ಟೂ..


ಡಾ II ರಜನಿ