Saturday, May 9, 2026
Google search engine
Home Blog Page 123

ಪುನಿತ್ ರಾಜ್ ಕುಮಾರ್ ಸ್ಮರಣಾರ್ಥ ನಾಳೆ ಅನ್ನದಾನ, ನೇತ್ರದಾನ

ತುಮಕೂರಿನಲ್ಲಿ ಸೋಮವಾರ ಎಸ್.ಎಸ್. ಸರ್ಕಲ್ ಅಂಬುಲೆನ್ಸ್ ವಾಹನ ಚಾಲಕರ, ಮಾಲೀಕರ ಸಂಘದಿಂದ ನಟ ಪುನಿತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಸಿದ್ದಲಿಂಗಪ್ಪ, ಎಂ.ಹೆಚ್. ನಾಗರಾಜ್, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ, ಸಂಘದ ಪದಾಧಿಕಾರಿಗಳಾ ಸಂದೀಪ, ಮಂಜು, ವಿಶ್ವಾಸ್, ಇನ್ಫ್ಯಾಂಟ್ ಸಂದೀಪ್. Venktesh, ಸಂತೋಷ್ ಇತರರು ಇದ್ದಾರೆ.

ತುರುವೇಕೆರೆ: ಚಿತ್ರನಟ ಪುನಿತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ತಾಲ್ಲೂಕಿನ ಪುನಿತ್ ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಅನ್ನದಾನ ಮತ್ತು ನೇತ್ರದಾನ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಎಂದು ಕಾಸ್ಮೋಪಾಲಿಟನ್ ಕ್ಲಬ್ ನ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಹಾಗೂ ಕಲಾವಿದ ವಿ.ಬಿ.ಸುರೇಶ್ ತಿಳಿಸಿದರು.

ಪಟ್ಟಣದ ಹೊರವಲಯದ ಕಾಸ್ಮೋಪಾಲಿಟನ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಕೊಡುಗೈ ದಾನಿಯಾಗಿದ್ದ ಪುನಿತ್ ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ಕಾರಣಕರ್ತರಾಗಿದ್ದರು. ಅನಾಥಾಶ್ರಮ, ವೃದ್ದಾಶ್ರಮದ ಬೆಳವಣಿಗೆಗೆ ಅವರು ಸಾಕ್ಷಿಯಾಗಿದ್ದರು. ಇಂತಹ ನಟನನ್ನು ಕಳೆದುಕೊಂಡ ರಾಜ್ಯದ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿ.ಬಿ.ಸುರೇಶ

ಪುನಿತ್ ಅವರ ಸ್ಮರಣಾರ್ಥ ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಹಾರೈಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಮಂಗಳವಾರ ಪಟ್ಟಣದ ರಂಗಮಂದಿರದ ಬಳಿ ಅನ್ನದಾನವನ್ನು ಏರ್ಪಡಿಸಲಾಗಿದೆ.

ಮಾಂಸಾಹಾರಿ ಮತ್ತು ಶಾಖಾಹಾರಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 11.30 ರಿಂದ ಸು. 15 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ.
ಪುನಿತ್ ಅವರ ಸ್ಮರಣಾರ್ಥ ನಡೆಯಲಿರುವ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ತಾಲ್ಲೂಕಿನ ಎಲ್ಲ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ ನೂರಾರು ಮಂದಿ ತಮ್ಮ ನೇತ್ರವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ.
ಕಾಸ್ಮೋಪಾಲಿಟನ್ ಕ್ಲಬ್ ವತಿಯಿಂದ 46 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದರು.

ಸಮಾರಂಭಕ್ಕೆ ಜ್ಯೂನಿಯರ್ ಪುನಿತ್ ರಾಜಕುಮಾರ್, ಜ್ಯೂನಿಯರ್ ರಾಜಕುಮಾರ್ ಮತ್ತು ಮಿಮಿಕ್ರಿ ಗೋಪಿ ಆಗಮಿಸಲಿದ್ದಾರೆ. ಅಂದು ಪುನಿತ್ ರಾಜ್ ಕುಮಾರ್ ರವರ ಹಲವಾರು ಚಲನ ಚಿತ್ರಗಳ ಹಾಡುಗಳನ್ನು ಕಲಾವಿದರು ಹಾಡಲಿದ್ದಾರೆ ಕಲಾವಿದ ವಿ.ಬಿ.ಸುರೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಈಡಿಗರ ಸಮಾಜದ ಅಧ್ಯಕ್ಷ ಎಸ್ ಎಲ್.ಎನ್.ರಾಜಣ್ಣ, ಉಮೇಶ್, ಗೋಪಾಲ್, ಶ್ರೀನಿವಾಸ್, ಮುಖಂಡರಾದ ಗುಡ್ಡೇನಹಳ್ಳಿ ಗಿರೀಶ್, ಅರಳೀಕೆರೆ ಲೋಕೇಶ್, ಹಾವಾಳ ಶಿವಕುಮಾರ್, ಹೊಸಹಳ್ಳಿ ದೇವರಾಜು, ಬಾವಿಕೆರೆ ಅಶೋಕ್, ಹುಲಿಕಲ್ ಶಂಕರೇಗೌಡ, ಶ್ರೀರಾಮ್ ಪುರ ಜನಾರ್ಧನ್ ಮೊದಲಾದವರು ಇದ್ದರು.

ಲಾಭಕ್ಕಾಗಿ ಪುಸ್ತಕೋದ್ಯಮ ಸಲ್ಲದು

0

ತುರುವೇಕೆರೆ: ಪ್ರಕಾಶನ ಸಂಸ್ಥೆಗಳು ಪುಸ್ತಕೋದ್ಯಮದ ಲಾಭದಾಯಕ ಆಸಕ್ತಿ ಬಿಟ್ಟು ಸಮುದಾಯದಲ್ಲಿ ಅಕ್ಷರ ಮತ್ತು ಜ್ಞಾನ ಬಿತ್ತುವ ಚಳುವಳಿಗಳ ರೂಪ ಪಡೆಯಬೇಕು ಎಂದು ಖ್ಯಾತ ಬರಹಗಾರ, ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.

ಪಟ್ಟಣದ ಸರಸ್ವತೀ ಬಾಲಿಕಾ ಪೌಢಶಾಲೆಯಲ್ಲಿ ತಾಲ್ಲೂಕು ಕಸಾಪದ ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು ಅವರು ನೂತನವಾಗಿ ಸ್ಥಾಪಿಸಿರುವ ಶನಯ ಪ್ರಕಾಶನವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕಾಶನ ಸಂಸ್ಥೆಗಳು ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿದ ಜ್ಞಾನಶಾಖೆಗಳಾಗಬೇಕು. ಹೊಸ ಆಲೋಚನಾ ಕ್ರಮಗಳ,ನಾವೀನ್ಯತೆಯನ್ನು ಅವಿಷ್ಕರಿಸುವ, ಸತ್ಯಗಳನ್ನು ಆನ್ವೇಷಿಸುವ ಕೃತಿಗಳನ್ನು ಪ್ರಕಟಿಸಬೇಕು. ಪ್ರಕಾಶನ ಸಂಸ್ಥೆಗಳಿಗೆ ಸಾಮಾಜಿಕ ಚಳುವಳಿಗಳಿಗೆ ಕಾರ್ಯಸೂಚಿ ರೂಪಿಸುವ ಬದ್ಧತೆ ಇರಬೇಕಷ್ಟೇ ಅಲ್ಲದೆ ಅವು ಆರೋಗ್ಯಕರ ಚರ್ಚೆಗಳಿಗೆ ವೇದಿಕೆಯಾಗಬೇಕು. ಅನನ್ಯತೆ ಇಲ್ಲದ ಅಗ್ಗದ ಕೃತಿಗಳನ್ನು ಪ್ರಕಟಿಸುವುದರಿಂದ ಅವು ರದ್ದಿ ಸರಕಾಗುತ್ತವೆಯೇ ಹೊರತು ಬುದ್ದಿ ಚುರುಕಾಗಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಪ್ರಕಾಶನ ಸಂಸ್ಥೆಯ ಸ್ಥಾಪಕ ಸಾ.ಶಿ.ದೇವರಾಜ್ ಮಾತನಾಡಿ ನಮ್ಮ ಪ್ರಕಾಶನ ಸಂಸ್ಥೆ ಮೌಲ್ಯಯುತ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಮಹತ್ವ ನೀಡಲಿದೆ.ಜಿಲ್ಲಾ ಸಾಹಿತ್ಯ ಕುರಿತ ಸಮಗ್ರ ಸಂಪುಟವೊಂದನ್ನು ಪ್ರಕಟಿಸಲಾಗುವುದು. ಜೊತೆಯಲ್ಲೇ ಶಿಕ್ಷಣ, ಆರೋಗ್ಯ ಮತ್ತು ಆಹಾರ ಕ್ರಮಗಳನ್ನು ಕುರಿತಾದ ಕೃತಿಗಳನ್ನೂ ಪ್ರಕಟಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ಮುಖಂಡ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ ದೇವರಾಜ್ ಕಳೆದ 2 ದಶಕಗಳಿಂದ ಸಾಹಿತ್ಯವಲಯದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಕನ್ನಡದ ಕುರಿತಾದ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಲಾಭದಾಯಕವಲ್ಲದ ಉದ್ಯಮಗಳನ್ನು ಬಿಟ್ಟು ಗ್ರಾಮೀಣ ಪ್ರದೇಶದಲ್ಲಿ ಪ್ರಕಾಶನ ಸಂಸ್ಥೆ ಹುಟ್ಟುಹಾಕುತ್ತಿರುವ ಅವರ ಕನ್ನಡ ಪರ ಕಾಳಜಿ ಅನುಕರಣೀಯ ಮಾದರಿ ಎಂದು ಶ್ಲಾಘಿಸಿದರು.

ಶಯನ ಪ್ರಕಾಶನದ ಚೊಚ್ಚಲ ಕೃತಿ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅವರ ಗೇಯಗೀತೆಗಳ ಸಂಗ್ರಹ ‘ಸ್ವರಾಂಜಲಿ’ಯ ರಕ್ಷಾಪುಟವನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಲೇಖಕಿ ಉಷಾಶ್ರೀನಿವಾಸ್, ಕವಯತ್ರಿಯರಾದ ಜ್ಯೋತಿ ಸುಂಕಲಾಪುರ, ಜಲಜಾಕ್ಷಿ, ರೈತ ಮುಖಂಡ ಶ್ರೀನಿವಾಸ ಗೌಡ, ಲಕ್ಷ್ಮಣ್, ಸಮಾಜಸೇವಕ ಬಾಣಸಂದ್ರದ ಸ್ನೇಕ್ ರವಿಕುಮಾರ್, ಇವರನ್ನು ಸನ್ಮಾನಿಸಲಾಯಿತು. ಕಸಾಪ ನಿಕಟಪೂರ್ವ ಅಧ್ಯಕ್ಷ ನಂ.ರಾಜು, ಬೆಂಗಳೂರು ನಗರ ಕಸಾಪ ಮಾಜಿ ಅಧ್ಯಕ್ಷ ಮಾಯಣ್ಣ, ಬರಹಗಾರ ತುರುವೇಕೆರೆ ಪ್ರಸಾದ್, ದಿನೇಶ್, ರಾಮಚಂದ್ರು, ಕೇಶವಮೂರ್ತಿ ಇತರರು ಉಪಸ್ಥಿತರಿದ್ದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯೋತ್ಸವದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ತಂ.ಪಾ.ಚಂದ್ರಕೀರ್ತಿ, ಕೃಷ್ಣಮೂರ್ತಿ ಇತರರು ಕಾವ್ಯವಾಚನ ಮಾಡಿದರು.
ಫೋಟೋ: ತುರುವೇಕೆರೆಯ ಸರಸ್ವತೀ ಬಾಲಿಕಾ ಪೌಢಶಾಲೆಯಲ್ಲಿ ತಾಲ್ಲೂಕು ಕಸಾಪದ ಮಾಜಿ ಅಧ್ಯಕ್ಷ ಸಾ.ಶಿ.ದೇವರಾಜು ಅವರು ನೂತನವಾಗಿ ಸ್ಥಾಪಿಸಿರುವ ಶನಯ ಪ್ರಕಾಶನದ ಉದ್ಘಾಟನಾ ಸಮಾರಂಭದಲ್ಲಿ ಡಾ.ಕವಿತಾಕೃಷ್ಣ ಅವರ ಸ್ವರಾಂಜಲಿ ಕೃತಿಯ ಮುಖಪುಟವನ್ನು ಅನಾವರಣಗೊಳಿಸಲಾಯಿತು.

ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ಕೊಂಡಜ್ಜಿ ವಿಶ್ವನಾಥ್, ಸಾ.ಶಿ.ದೇವರಾಜು ಇತರರು ಚಿತ್ರದಲ್ಲಿದ್ದಾರೆ.

ಹೃದಯ ಹೃದಯ

0

ಡಾ.ರಜನಿ
*****”””””””*****

ಸಾವಿನಲ್ಲೂ
ಸಾರ್ಥಕತೆ
ಮೆರೆದೆಯಾ?
ಅಪ್ಪು.🙏🙏

ದೇಹ ದಂಡಿಸಲೂ🏋️🤸
ರೀತಿ🧘
ನೀತಿ
ಬೇಕೆಂದು ಸಾರಿದೆಯಾ?

ಕಣ್ಣನ್ನು ನೀಡಿ👀
ನಾಲ್ಕು ಜನರಿಗೆ
ಕಣ್ಣಾದೆಯಾ?

ಹೃದಯವನ್ನು🫀
ಪರೀಕ್ಷಿಸಿ ಕೊಳ್ಳಲು
ಕರೆ ಕೊಟ್ಟೆಯಾ ?

ಅಪ್ಪು💖💖
ಅಪ್ಪು

ನಿನ್ನಿಂದಲೇ
ನಿನ್ನಿಂದಲೇ
ನನ್ನ ಹೃದಯದ🫀
ತಪಾಸಣೆ🩺

ನಡೆದಿದೆ.🙏

ಡಾII ರಜನಿ

ಕನ್ನಡ ಹಾ ಸವಿಗನ್ನಡ

0


ಮಾತಾಡಿ ಕನ್ನಡದಲ್ಲೇ
ಎಲ್ಲೇ ಇದ್ದರೂ…
ಎದುರು ಇರುವವರು
ಯಾವುದೇ
ಭಾಷಿಕರಾಗಿದ್ದರೂ …..

ಬರಬಹುದು ನಿಮಗೆ
ಅವರ ಭಾಷೆ…
ಆದರೂ ಮಾತಾಡಿ
ಅಚ್ಚ ಕನ್ನಡದಲ್ಲಿ.

ಕನ್ನಡದಲ್ಲಿ ಬರೆಯಿರಿ..
ಬಯ್ಯಿರಿ…
ಕನ್ನಡದಲ್ಲಿ
ಪ್ರೀತಿಸಿರಿ…

ಯಾವ ಕನ್ನಡ
ಮೈಸೂರು ಕನ್ನಡ
ಮಂಗಳೂರು ಕನ್ನಡ
ಮಂಡ್ಯ ಕನ್ನಡ

ಕನ್ನಡ ಯಾವ
ಕಡೆಯದು
ಆದರೇನು ?
ಒಟ್ಟಿನಲ್ಲಿ ಕನ್ನಡ …

ಆಯಾ ಸೊಗಸು
ಆಯಾ ಸೊಗಡು
ಅಲ್ಲಿಯ
ಕನ್ನಡಕ್ಕೆ…

ಕಲಿತರೆ
ಕನ್ನಡದಲ್ಲಿ
ಮರೆಯಲಾರೆ
ಯಾವತ್ತೂ…

ಬರೆದರೆ
ದುಂಡು ಮಲ್ಲಿಗೆ
ಉರುಟು
ಕನ್ನಡ…

ಮನೆಯಲ್ಲಿ
ಕನ್ನಡ
ಕಛೇರಿಯಲ್ಲಿ
ಕನ್ನಡ…

ನಡೆ
ನುಡಿ
ಸವಿಗನ್ನಡ
ಸಿರಿಗನ್ನಡ…

ಬಳಸ್ರೊ
ಬರೀರ್ರೊ
ಬರಕೊಳ್ರೋ
ಭುವಿ ಕನ್ನಡ ..

ಡಾII ರಜನಿ

ಅಪ್ಪು

0


ಸಣ್ಣವರು
ದೊಡ್ಡವರು..
ಎಲ್ಲರನ್ನೂ ಅಪ್ಪಿ …

ವಿನಯವನ್ನೇ
ಕಾಳಜಿಯನ್ನೇ
ಅಪ್ಪಿ

ಎಲ್ಲ ಇದ್ದೂ
ಅಷ್ಟು
ಸರಳ ಹೇಗೆ?

ಅಣ್ಣಾವ್ರಿಗೆ
ತಕ್ಕ ಮಗ

ಕನ್ನಡದ
ಕುವರ

ಎಲ್ಲೂ ಕಪ್ಪು
ಚುಕ್ಕೆ ಇಲ್ಲದ
ಕಸ್ತೂರಿ.

ನಿನ್ನ ಚಿತ್ರಗಳಲ್ಲೂ
ಸಂಸ್ಕಾರ

ಎಲ್ಲೆಲ್ಲೂ
ಇದ್ದಾನೆ
ನಿನ್ನ ಹರಿ

ನರ ನರಗಳಲ್ಲಿ
ರೋಮಾಂಚನ..

ಅಷ್ಟು ಸ್ನಿಗ್ಧ
ನಗು

ಅಪ್ಪು…
ಆ ಹರಿ ಯನ್ನು
ಸೇರಿದೆಯಾ?
ಪ್ರಹ್ಲಾದ ?

ಡಾII ರಜನಿ

ಚಿತ್ರ-ಚಿತ್ತ: ರಜನಿ ಕವನಗಳು

0
  • ಡಾII ಬೆಸಗರಹಳ್ಳಿ ರಾಮಣ್ಣ ಅವರು ಡಾII ರಜನಿ ಅವರಿಗೆ ಕನ್ನಡ ಭಾಷೆಯ ಮೇಲೆ ಇರುವ ಹಿಡಿತವನ್ನು ಮೊದಲು ಗಮನಿಸಿ ಸಣ್ಣ ಕಥೆ ಬರೆಯಲು ಸೂಚಿಸಿದರು. ಅದರಂತೆ ಹೆಚ್ .ಎಲ್ . ಕೇಶವ ಮೂರ್ತಿಯವರ ಪತ್ರಿಕೆಗೆ ತುಂಬಾ ವರುಷಗಳ ಕಾಲ ಪ್ರತೀ ಭಾನುವಾರ ತಮ್ಮ ಅನುಭವಗಳನ್ನೇ ಸಣ್ಣ ಕಥೆಯಾಗಿಸಿದರು. ಅವು ಬಹಳ ಜನಪ್ರಿಯ ವಾಗಿದ್ದವು. ಡಾII ಬೆಸಗರಹಳ್ಳಿ ರಾಮಣ್ಣ ಅವರನ್ನು ತಮ್ಮ ಗುರು ಎಂದೇ ಹೇಳುತ್ತಾರೆ ಡಾII ರಜನಿ. ಸಾಹಿತ್ಯದ ಮೇಲೆ ಓಲವು ಮೂಡಿಸಿದವರು ಮತ್ತು ಮಂಡ್ಯ ಭಾಷೆಯ ಸೊಗಡನ್ನು ಉಳಿಸಿಕೊಳ್ಳಲು ಪ್ರೇರೆಪಣೆ ಅವರೇ ಎಂದು ಕೂಡ ಹೇಳುತ್ತಾರೆ.

ತುರುವೇಕೆರೆ ಸಬ್ ಇನ್ಸ್ ಪೆಕ್ಟರ್ ಗೆ ಆಣೆ, ಪ್ರಮಾಣಕ್ಕೆ ಆಹ್ವಾನ

ತುರುವೇಕೆರೆ: ‘ನಾನು ಪ್ರಾಮಾಣಿಕನಾಗಿದ್ದು ಎಲ್ಲಿಯೂ ದಲ್ಲಾಳಿ ಕೆಲಸ ಮಾಡಿಲ್ಲ ಪಟ್ಟಣದ ಉಡಿಸಲಮ್ಮ ದೇವಸ್ಥಾನದಲ್ಲಿ ತಂದೆ-ತಾಯಿ ಹೆಸರಿನಲ್ಲಿ ಕರ್ಪೂರ ತೆಗೆದುಕೊಳ್ಳುವೆ; ಅದೇ ರೀತಿ ಸಬ್ ಇನ್ಸ್ಪೆಕ್ಟರ್ ಕೂಡ ಸರ್ಕಾರದ ಸಂಬಳದ ಹೊರತಾಗಿ ಯಾರಿಂದಲೂ ಬಿಡಿಗಾಸು ಹಣ ಪಡೆಯದೆ ಪ್ರಾಮಾಣಿಕನಾಗಿರುವೆನೆಂದು ದೇವಾಲಯದಲ್ಲಿ ಕರ್ಪೂರ ತೆಗೆದುಕೊಳ್ಳಲೆಂದು’ ಮುಖಂಡ ಅರಳೀಕೆರೆ ರವಿಕುಮಾರ್ ಆಹ್ವಾನ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘಟನೆ, ಜಯಕರ್ನಾಟ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಸಾರ್ವಜನಿಕರು, ರೈತರು ತಮ್ಮ ಸಮಸ್ಯೆಗಳನ್ನು ಹೊತ್ತು ಪಟ್ಟಣದ ಪೊಲೀಸ್ ಠಾಣೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇಲ್ಲಿನ ಸಬ್ ಇನ್ಸ್ಪೆಕ್ಟರ್ ಅವರು ಹೊಸದಾಗಿ ತಾಲ್ಲೂಕಿಗೆ ಬಂದ ವೇಳೆ ನಾನು ಬಹಳ ಶಿಸ್ತು, ಪ್ರಾಮಾಣಿಕ, ಭ್ರಷ್ಟಾಚಾರದ ವಿರೋಧಿ ಎಂದು ಬಿಂಬಿಸಿಕೊಂಡು ಈಗ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.

ಜನರ ಸಮಸ್ಯೆಗಳು ಠಾಣೆಯಲ್ಲಿ ಬಗೆಹರಿದರೆ ನಮ್ಮಂತಹ ಮುಖಂಡರು, ಜನಪ್ರತಿನಿಧಿಗಳನ್ನು ಠಾಣೆಗೆ ಕರೆದುಕೊಂಡು ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.
ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯಗಳು, ಮನೆಗಳು, ಬೈಕ್ ಗಳು ಹಾಗು ಸರ ಕಳ್ಳತನ ನಡೆಯುತಿದ್ದರೂ ಈ ಬಗ್ಗೆ ಸಾರ್ವಜನಿಕರಲ್ಲಿ ಇವರು ಜಾಗೃತಿ ಮೂಡಿಸಿಲ್ಲ. ಜೊತೆಗೆ ಕಳ್ಳರನ್ನು ಹಿಡಿಯುವ ಕೆಲಸವೂ ಆಗಿಲ್ಲ. ಸಾರ್ವಜನಿಕರೇ ಹೇಳುವಂತೆ ಸಬ್ ಇನ್ಸ್ಪೆಕ್ಟರ್ ಅವರ ಮೇಲೆ ಮಾಡುತ್ತಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಬ್ ಇನ್ಸ್ಪೆಕ್ಟರ್ ಅವರು ಕಳ್ಳರನ್ನು ಹಿಡಿಯುವುದರಲ್ಲಿ ಪ್ರಾಮಾಣಿಕತೆ ತೋರಲಿ. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಲಿ.
ಈಚೆಗೆ ನಡೆದ ತೊರೆಮಾವಿನಹಳ್ಳಿ ಹಲ್ಲೆ ಪ್ರಕರಣದಲ್ಲಿಯೂ ನೊಂದವರಿಗೆ ನ್ಯಾಯಕೊಡಿಸದೆ ಉಡಾಫೆ ಉತ್ತರಕೊಡುತ್ತಾರೆ. ನನ್ನನ್ನು ದಲ್ಲಾಳ್ಳಿ ಮಾಡುತ್ತಿದ್ದೀಯೆಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.

ತಾಲ್ಲೂಕಿನ ಜನತೆಗೆ ನನ್ನ ಬಗ್ಗೆ ಗೊತ್ತಿದೆ. ನನ್ನ ಮನೆ ಹಣದಿಂದ ರಾಜಕೀಯ ಮಾಡುತ್ತಿದ್ದೇನೆ. ಹಣ ಮಾಡುವ ಉದ್ದೇಶವಿಲ್ಲ. ಸಬ್ ಇನ್ಸ್ಪೆಕ್ಟರ್ ದುರ್ವತನೆಯ ಬಗ್ಗೆ ಎಸ್ಪಿ, ಸಚಿವರು, ಮುಖ್ಯಮಂತ್ರಿಗಳು, ಶಾಸಕರಿಗೆ ಪತ್ರ ಬರೆದು ಇಂತಹ ಅಧಿಕಾರಿಗಳ ವರ್ಗಾ ಮಾಡುವಂತೆ ಒತ್ತಾಯಿಸುವುದಾಗಿ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆ ಸುರೇಶ್, ರೈತ ಸಂಘದ ಶ್ರೀನಿವಾಸ್, ಅಸ್ಲಾಂಪಾಷಾ, ಮುಖಂಡ ಕೊಳಾಲಗಂಗಾಧರ್, ಪುಟ್ಟರಾಜು, ಕಾಂತರಾಜು, ಬುಗಡನಹಳ್ಳಿ ಕೃಷ್ಣಮೂರ್ತಿ, ನಂದೀಶ್ ತೊರೆಮಾವಿನಹಳ್ಳಿ ಗ್ರಾಮಸ್ಥರು ಇದ್ದರು.