Saturday, May 9, 2026
Google search engine
Home Blog Page 125

ಭಾನುವಾರದ ಕವಿತೆ: ಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿ

0

ಪ್ರೊ. ಗಿರಿಜಾ


ಕೇಳಿಸಲೇ ಇಲ್ಲ ನಿಮಗೆ
ನಮ್ಮ ದನಿ

ಸಾಗರೋಪಾದಿಯಲ್ಲಿ ನಾವು ನಡೆದುಬಂದರೂ
ಕೇಳಿಸಲೇ ಇಲ್ಲ ನಿಮಗೆ
ನಮ್ಮ ದನಿ

ಸಾವುನೋವುಗಳ ಕಂಡು ಹೈರಾಣರಾದ ನಾವು ನ್ಯಾಯ
ಕೇಳಲು ಬಂದರೆ
ತಿಳಿಯಲೇ ಇಲ್ಲ ನಿಮಗೆ
ನಮ್ಮ ಅಳಲು

ನಮ್ಮ ದುಃಖ ದುಮ್ಮಾನಗಳ
ಹತಾಶೆಯ ಬದಿಗೊತ್ತಿ
ನೋವು ಸಂಕಟಗಳ ಮರೆತು
ದನಿ ಎತ್ತಿ ತಲೆ ಎತ್ತಿ ಮುನ್ನಡೆದರೊ
ಕೇಳಿಸಲೇ ಇಲ್ಲವೇ ನಮ್ಮ ಕೂಗು ನಿಮಗೆ

ಮಾರ್ದನಿಸುವುದು ನಮ್ಮ ದನಿಯೊ ನೊರ್ಪಟ್ಟು
ಇಂದಲ್ಲ ನಾಳೆ,
ಮತ್ತೆ ಬಂದೇ ಬರುವೆವು
ಮತ್ತಷ್ಟು ಶಕ್ತಿಯ ಹೊತ್ತು
ಇಂದು ಕೇಳಿಸದ ದನಿಯು
ಅಂದು ಕೇಳಲೇಬೇಕು
ಕೇಳಸಿಗದಿದ್ದರೆ ಮೇಳೈಸುವುದು
ಹೊಸ ಅಲೆಯೊಂದು
ನವ ಪೀಳಿಗೆಯೊಂದು
ಕೇಳಲೇ ಬೇಕು ಆಗ ನೀವು
ನಮ್ಮ ದನಿಯ

ನವರಾತ್ರಿ ಕವನಗಳು: ಕಿತ್ತಳೆ

0
ಇಂದು ನವರಾತ್ರಿಯ ನಾಲ್ಕನೇ ದಿನ. ನವರಾತ್ರಿ ಎಂದರೆ ನವ ದುರ್ಗೆಯರ ಹಬ್ಬ. ಒಬ್ಬೊಬ್ಬ ದುರ್ಗೆಯೂ ಒಂದೊಂದು ಬಣ್ಣದ ಸಂಕೇತ. ಒಂದೊಂದು ಬಣ್ಣವೂ ಒದೊಂದರ ಸಂಕೇತ. ಹೀಗೆ ಬಣ್ಣಗಳ, ಮಾತೆಯರ ಸಂಕೇತವನ್ನು ಪ್ರಕೃತಿ, ಮಾನವನ ಬದುಕಿನೊಂದಿಗೆ ಬೆಸೆದು ಕಟ್ಟುತ್ತಿರುವ ಕವನಗಳೇ ನವರಾತ್ರಿ ಕವನಗಳು. ಇದೊಂದು ಅದ್ಯಾತ್ಮ ಸಾಹಿತ್ಯದ ಹೊಸ ಪ್ರಯೋಗ ಮಾಡಿದವರು ಡಾ. ರಜನಿ ಅವರು.
ಇದು ಅವರ ನಾಲ್ಕನೇ ಕವಿತೆ. ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವತೆಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವತೆ ಕೇಸರಿ ಬಣ್ಣದ ಪ್ರತೀಕ. ಕೇಸರಿ ಬಣ್ಣವು ಶಕ್ತಿ ಮತ್ತು ಸಂತೋಷವನ್ನು ತೋರಿಸುತ್ತದೆ. ಅಂದ ಹಾಗೆ ಕೂಷ್ಮಾಂಡ ದೇವಿಗೆ ಎಂಟು ಕೈಗಳು.


ಕಿತ್ತಳೆ
****

ಹಳದಿ ಕೆಂಪು
ಹದವಾಗಿ ಬೆರೆಸಿ
ಆದ ಬಣ್ಣವೋ…

ಅದಾವ ಊಹೆ ನಿನ್ನದು?
ಇಷ್ಟು ಬಣ್ಣಗಳ
ಸರದಾರ…

ಸಮುದ್ರದ ನೀಲಿಯೊಳಗೆ
ಕಡು ಕಿತ್ತಳೆ
ಮೀನುಗಳು…

ಆಕಾಶದ ನೀಲಿಯಲ್ಲಿ
ಕಿತ್ತಳೆ , ಹಳದಿ, ಕೆಂಪು
ರಂಗಿನಾಟ ..
ಎರಡು ಬಾರಿ ದಿನಕ್ಕೆ

ಹಚ್ಚ ಹಸಿರ ಗಿಡದಲ್ಲಿ
ಕಿತ್ತಳೆ ಹೂವು
ಹಣ್ಣುಗಳು…

ಅತಿ ಮಾಗಿ ಕೆಂಪಾಗುವ
ಮುನ್ನ ತುಸು
ಮಾಗಿದ ಬಣ್ಣವೆ?…

ತ್ಯಾಗದ ಸಂಕೇತವೇ?
ವಿರಕ್ತಿಯ
ಕುರುಹೇ ?…

ಬಿರು ಬೇಸಿಗೆಯ
ಹಣ್ಣುಗಳಿಗೆಲ್ಲಾ
ಇದೇ ಬಣ್ಣವೇ ?…

ಕಣ್ಣಿಗೆ ಹಿತ
ರೋಗಗಳಿಗೆ
ನಿಯಂತ್ರಣವೇ?…

ಬಂಡಾರ ತಿಲಕ
ಕೇಸರಿ ಹಣೆ
ಬಟ್ಟು …

ಹಸಿರಲ್ಲಿ, ನೀಲಿಯಲ್ಲಿ
ತಕ್ಷಣ ಕಿತ್ತಳೆ..
ನಿನ್ನ ಕುಂಚ ದಾಟವೇ?…

ಊಹಾತೀತ ಬಣ್ಣಗಳ
ಜೀವ ಸೃಷ್ಟಿಗಳ
ನೇಯ್ದ ಕಲಾಕಾರನೇ…

ಒಂದೊಂದು ಬಣ್ಣಕ್ಕೂ
ಒಂದೊಂದು
ಬೆರಗು…

ಅಷ್ಟು ಬಣ್ಣಗಳ
ನಿನ್ನ ಚಿತ್ರಪಟಕ್ಕೆ
ಶರಣು…

ಡಾII ರಜನಿ


ನವರಾತ್ರಿ ಕವನಗಳು: ಊದಾ ಬಣ್ಣ

0
ನವರಾತ್ರಿಯ ಈ ದಿನ ಚಂದ್ರಘಟ್ಟಾ ದೇವಿಯ ದಿನವಾಗಿದೆ. ಚಂದ್ರಘಟ್ಟಾ ದೇವಿಯು ಕಂದು‌ ಬಣ್ಣದ ಪ್ರತೀಕವಾಗಿದೆ. ಕಷ್ಟಗಳನ್ನು ನಿವಾರಿಸುವ ದೇವತೆ. ಊದಾ ಬಣ್ಣದ ಪ್ರತೀಕವೇ ಶ್ರಮ ಜೀವಿಗಳು. ಶ್ರಮಜೀವಿಗಳ ಬದುಕನ್ನು ದೇವಿಯೊಂದಿಗೆ ಸಮೀಕರಿಸಿದ್ದಾರೆ ಈ ಕವನದಲ್ಲಿ ಡಾ. ರಜನಿಯವರು.

ಊದಾ ಬಣ್ಣ
***********

ಊದಾ ಬಣ್ಣವೋ, ಕಂದು ಬಣ್ಣವೋ
ಸ್ಲೇಟ್ ಬಣ್ಣವೋ,
ಬೂದಿ ಬಣ್ಣವೋ….

ಇದು ಪರಿಶ್ರಮದ ಸಂಕೇತವಂತೇ
ಅದಕ್ಕೆ ಇರಬೇಕು
ಕಬ್ಬಿಣ, ಸಲಾಕೆ, ಗುದ್ದಲಿ
ಗರಗಸ ಎಲ್ಲವೂ …

ಮೋಡ, ಚಂದಿರ
ಮಳೆ ಆಕಾಶ
ರಾತ್ರಿ ಸಮುದ್ರ…

ದೊಡ್ಡ ತಿಮಿಂಗಿಲ, ಆನೆ
ಸಣ್ಣ ಇಲಿ
ಕಿತ್ತು ತಿನ್ನುವ ತೋಳ

ಭಾವನೆಗಳ ಹಿಡಿತಕ್ಕೆ
ಬಣ್ಣವಿಲ್ಲದೇ
ತಟಸ್ಥವೇ ?

ಎಳೆಯದೆಲ್ಲಾ ಹಸಿರು
ವಯಸ್ಸಾಗಿದ್ದೆಲ್ಲಾ
ಊದಾ ಬಣ್ಣವೆ?

ನೆರೆತ ಕೂದಲು, ಒಣ ಹುಲ್ಲು
ಒಣಗಿದುದೆಲ್ಲಾ?

ಬೂದಿ ಮುಚ್ಚಿದ ಕೆಂಡವೇ?
ಆಗಾಗ ಸಿಡಿದು ಚಿಮ್ಮುವ
ಲಾವಾ ರಸವೇ ಆರಿ ..

ಹಿಡಿ ಬೂದಿ
ಹಣೆ ವಿಭೂತಿ

ಜೀವನ ಪರ್ಯಂತ ಪರಿಶ್ರಮಿಸಿ
ಆರುವಾಗ
ಹೊಗೆ
ಬೂದಿ

ಇದು ಸತ್ಯವೇ….


ಡಾII ರಜನಿ

ನವರಾತ್ರಿ ಕವನಗಳು: ಹಸುರು

0
ನವರಾತ್ರಿಯ ಮೊದಲ ದಿನ ಹಳದಿ ಆಗಿದೆ. ಪ್ರಕೃತಿ, ಹಳದಿ ಬಣ್ಣದ ಜೀವ ಸೆಲೆಯನ್ನು ಎಲ್ಲೆಲ್ಲಿ ಇಟ್ಟಿದೆ ಎಂಬುದನ್ನು ಸಾಂಕೇತಿಕವಾಗಿ ಕವನದಲ್ಲಿ ಡಾ. ರಜನಿ ಹೇಳಿದ್ದಾರೆ.
ಆಡು ಭಾಷೆ ಸೊಗಡಿನ ಈ ಕವನವು ಪ್ರಕೃತಿಯು ಎಲ್ಲೆಲ್ಲಿ ಹಳದಿ ಬಣ್ಣವನ್ನು ಇಟ್ಟಿದೆ ಎಂಬುದನ್ನು ಹೇಳುವುದರ ಜತೆಗೆ ಜೀವದ ಹುಟ್ಟು, ನಿರ್ಗಮದ ಅಂತಸತ್ವದ ಬಗೆಗೂ ಹೇಳುತ್ತದೆ.
ನವ ರಾತ್ರಿಯೆಂದರೆ ಒಂಬತ್ತು ರಂಗುಗಳ ಹಬ್ಬ. ಪ್ರತಿ ದಿನವೂ ಒಂದೊಂದು ಬಣ್ಣಗಳ ರಂಗು.‌ ಈ ಒಂದೊಂದು ಬಣ್ಣದ ಬಗ್ಗೆಯೂ ಡಾ.ರಜನಿ ಅವರಿಂದ‌ ನಿರೀಕ್ಷಿಸಬಹುದು

ಹಸುರು
******

ಹಸಿರು ಹಸಿರೇ
ಉಸಿರು

ಪ್ರಕೃತಿಯ ಒಡಲು ಹಸಿರು
ಅಂಚು ನೀಲಿ

ಎಲೆ ಹಸಿರು
ಗಿಣಿ ಹಸಿರು

ಪಚ್ಚೆ ಹಸಿರು
ಪೈರು ಹಸಿರು

ಹುಲ್ಲು ಹಸಿರು
ಹಸಿರ ಬಸಿರು

ಹುಳ ಹಸಿರು
ಕಪ್ಪೆ ಹಸಿರು

ಹಾವು ಹಸಿರು
ಬಟಾಣಿ ಹಸಿರು

ಬಸಿರಿಗೆ ಬಳೆ ಹಸಿರು
ಹಸಿರು ಸೀರೆ

ಸಸ್ಯ ಶಾಮಲೆ ಹಸಿರು
ಪ್ರೀತಿ ಹಸಿರು

ಸ್ನೇಹ ಹಸಿರು
ಎಳೆಯದೆಲ್ಲ ಹಸಿರು

ಹಸಿರು ಫಲ ಬೆಳೆ
ಸಮೃದ್ಧಿ

ಹಸಿರಿಲ್ಲದೆ
ಉಸಿರಿಲ್ಲ

ಉಸಿರಿಲ್ಲದೆ
ಹೆಸರಿಲ್ಲ

ಬಿಡು ..ಹಸಿರು ವಿಷ
ಕಣ್ಣ ಪಿಸುರು

ಹಸಿರು ಕಂಬಳಿ ಹುಳ ಚಿಟ್ಟೆಯಾಗಿ
ಹಸಿರು ಹಣ್ಣಾಗಿ ಕೆಂಪಾದ ಹಾಗೆ.


ಡಾII ರಜನಿ

ನವರಾತ್ರಿ ಕವನಗಳು: ಹಳದಿ

0
ನವರಾತ್ರಿಯ ಎರಡನೇ ದಿನ ಹಸಿರು ಆಗಿದೆ. ಪ್ರಕೃತಿ, ಹಸಿರು ಬಣ್ಣದ ಜೀವ ಸೆಲೆಯನ್ನು ಎಲ್ಲೆಲ್ಲಿ ಇಟ್ಟಿದೆ ಎಂಬುದನ್ನು ಸಾಂಕೇತಿಕವಾಗಿ ಕವನದಲ್ಲಿ ಡಾ. ರಜನಿ ಹೇಳಿದ್ದಾರೆ.
ಆಡು ಭಾಷೆ ಸೊಗಡಿನ ಈ ಕವನವು ಪ್ರಕೃತಿಯು ಎಲ್ಲೆಲ್ಲಿ ಹಸಿರು ಬಣ್ಣವನ್ನು ಇಟ್ಟಿದೆ ಎಂಬುದನ್ನು ಹೇಳುವುದರ ಜತೆಗೆ ಜೀವದ ಹುಟ್ಟು, ನಿರ್ಗಮದ ಅಂತಸತ್ವದ ಬಗೆಗೂ ಹೇಳುತ್ತದೆ.
ನವ ರಾತ್ರಿಯೆಂದರೆ ಒಂಬತ್ತು ರಂಗುಗಳ ಹಬ್ಬ. ಪ್ರತಿ ದಿನವೂ ಒಂದೊಂದು ಬಣ್ಣಗಳ ರಂಗು.‌ ಈ ಒಂದೊಂದು ಬಣ್ಣದ ಬಗ್ಗೆಯೂ ಡಾ.ರಜನಿ ಅವರಿಂದ‌ ನಿರೀಕ್ಷಿಸಬಹುದು

ಹಳದಿ

******

ನವರಾತ್ರಿಯ ಮೊದಲ ದಿನ
ಹಳದಿ

ಸೂರ್ಯ ಹುಟ್ಟುತ್ತಾ
ಮುಳುಗುತ್ತಾ

ದೇವಿಗೆ ಪ್ರಿಯ ನಿಂಬೆ..
ಕೆನ್ನೆಯ ಅರಿಶಿನ

ಸೂರ್ಯಕಾಂತಿ ಹೂವು
ಹೊಳೆವ ಹೊನ್ನು..

ಮೊಟ್ಟೆಯ ಭಂಡಾರ
ಜೀವ ಜೀವದ ಅಣು..

ಉರಿಯುವ ಬೆಂಕಿ
ದುರ್ಗೆಯ ಉರಿಗಣ್ಣು..

ದೀಪದ ಬೆಳಕು
ಸ್ನೇಹದ ಬಣ್ಣ..

ಜ್ಞಾನದ ಸಂಕೇತ
ವಿಷ್ಣುವಿನ ಉಡುಗೆ..

ಹಳದಿ ಶಾಮಂತಿಗೆ
ಕನ್ನಡದ ಬಾವುಟ

ಬಾಳೆ ಹಣ್ಣು, ಚಂಡು ಹೂವ,
ಹಲಸು ,ಕುಂಬಳ,ಹುಗ್ಗೆದನ್ನ,ಹುಚ್ಚೆಳ್ಳುವ್ವ

ಮತ್ಸರದ ಹೊಗೆ
ಕಾಮಾಲೆಯ ರಂಗು ..

ಹಳದಿ…. ಕಿತ್ತಳೆಯಾಗಿ
ಕೆಂಪಾಗಿ ಮಾಗಿ

ಎಲ್ಲಿಲ್ಲ ಹಳದಿ?
ಮತ್ತೆ ಸೂರ್ಯ ಅಸ್ತಂಗತ..


ಡಾII ರಜನಿ

ಅಮ್ಮನ ಚಿತ್ರಾನ್ನ

0

ಡಾII ರಜನಿ ಎಂ


ಚಿತ್ರಾನ್ನ ತಿಳಿ ಹಳದಿ
ಇರಬೇಕು …

ಕಡ್ಲೆಬೇಳೆ ಹಸಿಯೂ
ಇರಬಾರದೂ
ಸೀಯಲೂ ಬಾರದು

ತಿಂದರೆ ಬಾಯಿಗೆ
ಹುಳಿ ಹೊಡೆಯಬಾರದು

ತಿಂದಾದ ಮೇಲೆ
ಕಾರದ ತೇಗು ಬರಬಾರದು

ಈರುಳ್ಳಿ ಹೆಚ್ಚಾಗಿ
ಮಧ್ಯಾಹ್ನ ವಾಸನೆ ಬರಬಾರದು

ಹಸೀ ಕೊತ್ತಂಬರಿ
ಮೇಲೆ ಉದುರಿಸಬಾರದು

ಹಬ್ಬದ ದಿನದ ಚಿತ್ರಾನ್ನ
ದಿನದ ತಿಂಡಿಗಿಂತ ವಿಶೇಷವಾಗಿರಬೇಕು

ಮರದ ಮಗೆಯಲ್ಲಿ ಕಲಸಬೇಕು
ಚೆನ್ನಾಗಿ ಹುರಿಯಬೇಕು

ಎಣ್ಣೆ ಹೆಚ್ಚಾಗಬಾರದು
ಅನ್ನ ಉದುರಾಗಿರಬೇಕು

ಮೇಲೆ ಒಂದಿಷ್ಟು ತುಪ್ಪ ಹಾಕಿ
ಮಿದ್ದು ತಿಂದರೆ..ಆಹಾ

ಅದು ಅಮ್ಮನ ಚಿತ್ರಾನ್ನ

ಅಷ್ಟಕ್ಕೂ

ಹಳದಿ, ಹಸಿರು, ಕೇಸರಿ,ಕೆಂಪು ಬಣ್ಣ
ಗುಂಡು, ಕಡ್ಡಿ ಆಕಾರ
ಬೀಜ, ಎಲೆ, ಹೂವು

ಎಲ್ಲ ಇರುವ ಚಿತ್ರಾನ್ನ

ಅಡಿಗೆಮನೆಯ
ಅನ್ನ ಚಿತ್ತಾರ
ತಾನೆ?

ಹಬ್ಬದ ದಿನ ಚಿತ್ರಾನ್ನ ಮಾಡಿದಾಗ
ಅಮ್ಮನ ಚಿತ್ರಾನ್ನ
ಜ್ಞಾಪಕ ಬಂದು …. ಎನ್ನುವ ಕವಯತ್ರಿ.
ಚಿತ್ರಾನ್ನದ ಸೋಜಿಗವನ್ನು ಈ ಕವಿತೆಯಲ್ಲಿ ಕವಯತ್ರಿ ತೆರೆದಿಟ್ಟಿದ್ದಾರೆ.

ಗಾಂಧೀಜಿಯನ್ನು ಕೊಂದದ್ದು ಗೋಡ್ಸೆ ಅಲ್ಲ………..!?

0
ರಾಷ್ಟ್ರಪಿತ ಗಾಂಧೀಜಿ ಅವರು ಹುಟ್ಟಿದ ದಿನದ ನೆನಪಿನಲ್ಲಿ ವಕೀಲರಾದ ಕೋಳಾಲ ಚಿನ್ಮಯ ಅವರು ಗಾಂಧೀಜಿ ಆಶಯಗಳ ನಿಜ ಭಾರತದ ಕಡೆ ಬೆಳಕು ಚೆಲ್ಲುವ ಬರಹವನ್ನು ಪಬ್ಲಿಕ್ ಸ್ಟೋರಿ ಓದುಗರಿಗಾಗಿ ಬರೆದಿದ್ದಾರೆ. ಗಾಂಧೀಜಿ ನಮ್ಮ ನಡುವೆ ಬದುಕಿರಲು ನಾವು ಮಾಡಬೇಕಾದದ್ದು ಏನು ಎಂಬುದರತ್ತ ಬೆಳಕು ಚೆಲ್ಲಿದ್ದಾರೆ.


ಮಹಾತ್ಮಾ ಗಾಂಧೀಜಿಯವರ ಜನ್ಮ ದಿನದಂದು ದೇಶವ್ಯಾಪಿ ಗಾಂಧೀಜಿಯವರ ಗುಣಗಾನದ ಜೊತೆ ಖಳನಾಯಕನಾಗಿ , ಮಹಾದುಷ್ಟನಾಗಿ, ಕೊಲೆಗಾರನಾಗಿ ಇಡೀ ಭಾರತೀಯರು ನೆನಪಿಸಿಕೊಳ್ಳೋ ಮತ್ತೊಂದು ಹೆಸರೇ ನಾಥುರಾಮ್ ಗೋಡ್ಸೆ…..

ಹೌದಾ? ನಿಜವಾಗಿಯೂ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದದ್ದು ನಾಥುರಾಮ್ ಗೋಡ್ಸೆ ನಾ? ಎಂಬ ಕಾಲ್ಪನಿಕ ಹಾಗೂ ಅತಿಶಯೋಕ್ತಿಎನಿಸುವ ಪ್ರಶ್ನೆ ಯೊಂದು ನಮ್ಮನ್ನು ಗಾಂಧಿ ಜಯಂತಿಯಂದು ನಮ್ಮನ್ನು ಕಾಡಲು ಪ್ರಾರಂಭಿಸುತ್ತದೆ. ವಿಚಿತ್ರ ಆದರೂ ಕಹಿ ಸತ್ಯಎನಿಸುವ, ಆಲೋಚನೆಗೀಡು ಮಾಡುವ ವಿಚಾರವಿದು.

ಕೆಲವೊಂದು ಮಹಾನ್ ಚೇತನಗಳು ನಮ್ಮನ್ನು ಅಗಲಿ ದೈಹಿಕವಾಗಿ ದೂರಾದರೂ ಸಹ ಅವರ ತತ್ವ ಆದರ್ಶ ಗಳು, ಅವರು ಹಾಕಿಕೊಟ್ಟ ಸನ್ಮಾರ್ಗದ ಹೆಜ್ಜೆ ಗುರುತುಗಳನ್ನು ಹಿಡಿದು ನಡೆಯುವ ಮೂಲಕ ಅವರನ್ನು ಅಮರರನ್ನಾಗಿಸುವ, ಅಜರಾಮರರನ್ನಾಗಿಸುವ ಕಾಯಕವನ್ನು ಪ್ರಚಲಿತ ಕಾಲಘಟ್ಟದ ನಾವುಗಳು ಮಾಡಿದಾಗ ಅಂತಹ ಚೇತನಗಳು ನಮ್ಮೊಂದಿಗೆ ಜೀವಂತ ಬದುಕು ಸಾಗಿಸುತ್ತವೆ ಎಂಬುದು ಸದಾಶಯ.

ಆದರೆ ಮಹಾತ್ಮಾ ಗಾಂಧೀಜಿ ಯವರನ್ನು ಗೋಡ್ಸೆ ಕೇವಲ ಒಂದು ಭಾರಿ ಬಂದೂಕಿನಿಂದ ಗುಂಡಿಕ್ಕಿ ಕೊಂದು ಅವರನ್ನು ಹುತಾತ್ಮರನ್ನಾಗಿ ಮಾಡಿದ…., !!!!!
ಅಂದು ಹುತಾತ್ಮ ರಾದ ಗಾಂಧೀಜಿಯವರ ದ್ಯೇಯೋದ್ದೇಶಗಳನ್ನು ಪ್ರತಿ ನಿತ್ಯ ಗುಂಡಿಕ್ಕಿ ಕೊಲ್ಲುತ್ತಿರುವರಾರು?

ಅಂದು ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸನ್ನು ಗುಂಡಿಕ್ಕಿ ನುಚ್ಚುನೂರು ಮಾಡಿದವರಾರು?
ಅಂದು ಗಾಂಧೀಜಿ ಅವರು ಮದ್ಯಪಾನದಿಂದ ಸರ್ವನಾಶ, ಮದ್ಯಪಾನ ನಿಷೇಧ ಮಾಡಿ ಅಂದರು, ಆದರೆ ಕೇವಲ ಅವರ ಜಯಂತಿಯಂದು ಮಾತ್ರ ಮದ್ಯ ನಿಷೇಧ ಮಾಡಿ ಅವರ ಆಶಯಗಳನ್ನು ಕೊಲ್ಲುತ್ತಿರುವವರು ಯಾರು?

ಒಂದು ಹೆಣ್ಣು ಮಧ್ಯರಾತ್ರಿ ಒಬ್ಬಂಟಿಯಾಗಿ ಓಡಾಡುವಂತಾಗಬೇಕು ಎಂಬ ಅವರ ಕನಸಿಗೆ ವಿರುದ್ಧವಾಗಿ ಒಂದು ಹೆಣ್ಣು ಹೊರಗೆ ಓಡಾಡಲಾಗದಂತೆ ಅವರ ಕನಸನ್ನು ಭಸ್ಮಗೊಳಿಸಿದವರಾರು?

ಭಾರತ ಹಳ್ಳಿಗಳ ದೇಶ, ಹಳ್ಳಿಗಳ ಪ್ರಗತಿಯೇ ದೇಶದ ಪ್ರಗತಿ ಅಂದವರ ಇಷ್ಟಕ್ಜೆ ವಿರುದ್ಧವಾಗಿ ಹಳ್ಳಿಗಳನ್ನು, ಹಳ್ಳಿಗರನ್ನು ಶೂದ್ರರನ್ನಾಗಿಸಿ ಗಾಂಧೀಜಿಯವರ ಆದರ್ಶಗಳನ್ನು ಗುಂಡಿಕ್ಕಿ ಕೊಂದವರು, ಕೊಳ್ಳುತ್ತಿರುವರು ಯಾರು?

ಭ್ರಷ್ಟಾಚಾರ ರಹಿತ, ಸ್ವಚ್ಛಂದ, ಪ್ರಾಮಾಣಿಕ ಆಡಳಿತದ ಕನಸು ಕಂಡ ಗಾಂಧೀಜಿಯವರ ಫೋಟೋ ವನ್ನು ಸರ್ಕಾರಿ ಕಚೇರಿಯಲ್ಲಿ ಮೊಳೆ ಹೊಡೆದು ನೇತು ಹಾಕಿ ಅದರ ನೆರಳಲ್ಲಿ ಲಂಚ, ಭ್ರಷ್ಟ ಆಡಳಿತ ನಡೆಸುವ ಮೂಲಕ ಅವರ ಆದರ್ಶಗಳಿಗೂ ಮೊಳೆ ಹೊಡದವರಾರು…?
…………………..

ಒಮ್ಮೆ ಮಾತ್ರ ದೈಹಿಕವಾಗಿ ಗಾಂಧೀಜಿಯವರನ್ನು ಕೊಂದ ಮಹಾ ಕ್ರೂರಿ ಗೋಡ್ಸೆ ಗಿಂತಲೂ, ಅವರ ನೆನಪುಗಳನ್ನು, ಅವರು ಕಂಡ ಕನಸುಗಳನ್ನು, ಆದರ್ಶಗಳನ್ನು ಆಳುವವರು ಹಾಗೂ ಆಳಿಸಿಕೊಳ್ಳುತ್ತಿರುವ ಪ್ರಜೆಗಳು ಒಂದಿಲ್ಲೊಂದು ರೀತಿಯಲ್ಲಿ ದಿನಂಪ್ರತಿ, ಪ್ರತಿಕ್ಷಣ ಕೊಲ್ಲುತ್ತಿದ್ದು,ನಿಜವಾದ ಹಂತಕರು ಯಾರು ಎಂಬ ಪ್ರಶ್ನೆಗೆ ಉತ್ತರ ನಮ್ನಲ್ಲೇ ಇದೆ ಎನಿಸುತ್ತದೆ.

ಗಾಂಧೀಜಿಯವರ ಕನಸಿನ ಭಾರತ ಇಂದು ಕೇವಲ ಕಾಲ್ಪನಿಕ ಕಥೆಯಾಗಿ, ಗಾಂಧೀಜಿ ಎಂಬ ಹೆಸರು ವ್ಯಂಗ್ಯದ ವಸ್ತುವಾಗಿ, ಸಿನಿಮಾ ಥಿಯೇಟರ್ ನ ಗಾಂಧಿ ಕ್ಲಾಸ್ ಆಗಿ, ಸರ್ಕಾರಿ ಕಛೇರಿಯಲ್ಲಿ ಜೋತು ಬಿದ್ದ ಫೋಟೋ ಆಗಿ, ಭ್ರಷ್ಟಾಚಾರವೇ ತುಂಬಿರುವ ಗ್ರಾಮಪಂಚಾಯಿತಿಯ ಉದ್ಯೋಗ ಖಾತ್ರಿಯ ಹೆಸರಾಗಿ, ಮೋದೀ ಬದಲಾವಣೆ ಮಾಡಿದ ಬಣ್ಣ ಬಣ್ಣದ ನೋಟಿನ ಮೇಲೆ ಮುಗ್ದ ನಗುವಿನೊಂದಿಗೆ ಇರೋ ಅವರ ಚಿತ್ರ, ದೇಶದ ಪ್ರಸ್ತುತ ವ್ಯವಸ್ಥೆಯನ್ನು, ಭ್ರಷ್ಟಾಚಾರವನ್ನು, ಅದೋಗತಿ ಯನ್ನು ಕಂಡು ಅಣಕಿಸಿ ನಗುವಂತಿದೆ.

ಯಾವ ದೇಶದಲ್ಲಿ ಮದ್ಯ ನಿಷೇದದ ಕನಸು ಕಂಡಿದ್ದರೋ ಅದೇ ದೇಶದಲ್ಲಿ ಕೊರೋನಾ, ಲಾಕ್ ಡೌನ್ ಸಂದರ್ಭದಲ್ಲಿ ದೇವಾಲಯ, ಶಾಲೆಗಳಿಗಿಂತ ಮೊದಲು ಬಾರ್ ವೈನ್ ಶಾಪ್ ಗಳನ್ನು ತೆರೆಯಲು ತವಕಿಸಿದ ಸರ್ಕಾರವನ್ನು ಕಂಡು ನಗುತ್ತಿರಬಹುದೇ ಎನಿಸುತ್ತದೆ ಆ ಗಾಂಧೀಜಿಯವರ ಮುಗ್ದ ನಗು.

ಗಾಂಧೀಜಿ ಹಾಗೂ ಮಹಾನ್ ಹೋರಾಟಗಾರರಿಂದ ಭಾರತವನ್ನು ಪರಕೀಯರಿಂದ ಪಾರುಮಾಡಿ ಈ ಕೆಲ ಭ್ರಷ್ಟ ರಾಜಕಾರಣಿಗಳ ಕೈಗೆ ಇಟ್ಟು, ಅಳುವವ ಸರ್ವಾಧಿಕಾರಿಯಂತೆ, ಪ್ರಜೆಗಳು ಗುಲಾಮ ರಂತೆ, ದೇಶ, ಹಾಗೂ ದೇಶದ ಸಂಪತ್ತನ್ನು ಸ್ವಯಾರ್ಜಿತ ಆಸ್ತಿಯಂತೆ ಭಾವಿಸಿಕೊಂಡಿರುವ ಗಾಂಧೀ ಕನಸಿನ ರಾಮರಾಜ್ಯದಲ್ಲಿನ ರಾವಣರಾಗಿ ಸೀತಾಪಹರಣದ ಬದಲಿಗೆ ಪ್ರಜಾಪ್ರಭುತ್ವದ ಅಪಹರಣ, ಸಾರ್ವಜನಿಕ ಅಸ್ತಿ ಅಪಹರಣ ಮಾಡಲು ತವಕಿಸುತ್ತಿರುವ ಭ್ರಷ್ಟ ರಾಜಕೀಯ ವ್ಯವಸ್ಥೆಯೇ ಗಾಂಧೀಜಿಯವರನ್ನು ಕೊಂದದ್ದು….. !

ಸಾರ್ವಜನಿಕ ಅಸ್ತಿ ಪಾಸ್ತಿ ಯ ಕಾವಲುಗಾರ ರಂತೆ ಮುಖವಾಡ ಹೊತ್ತು, ಆ ಭ್ರಷ್ಟ ರಾಜಕೀಯ ವ್ಯವಸ್ಥೆಯ ಕೈಗೊಂಬೆಯಂತೆ ವರ್ತಿಸುವ, ಪರವಾನಿಗೆ ಪಡೆದ ಭ್ರಷ್ಟ ರಂತೆ, ಗೂಂಡಾಗಳಂತೆ ವರ್ತಿಸುವ, ಉಳ್ಳವರ, ಪ್ರಭಾವಿಗಳ ಬೂಟು ನೆಕ್ಕುವ ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳೇ ಗಾಂಧೀಜಿ ಕೊಂದದ್ದು…..! ಕೊಳ್ಳುತ್ತಿರುವುದು….. !!
ಈಗ ಹೇಳಿ ಗಾಂಧೀಜಿಯನ್ನು ಕೊಂದದ್ದು ಯಾರು…..?

ನನ್ನೊಳಗಿನ ಕನಸು ಸಾಕಾರಗೊಂಡಿತು: ʻಕನ್ನಡತಿʼ ರಂಜನಿ

0

ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್‌ ತಿಳಿಸಿದರು.

ಬಹುರೂಪಿ ಹಮ್ಮಿಕೊಂಡಿದ್ದ ರಂಜನಿ ರಾಘವನ್ ಅವರ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ಕತೆ ಡಬ್ಬಿ ರೂಪುಗೊಂಡಿತು. ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ. ಬರವಣಿಗೆಯ ಲೋಕದಲ್ಲಿ ದಿಗ್ಗಜರ ನಡುವೆ ʻಪುಟ್ಟಗೌರಿʼಯ ಕಥಾ ಸಂಕಲನಕ್ಕೆ ಸೊಗಸಾದ ಸ್ವಾಗತ ಸಿಕ್ಕಿದ್ದು ಸಂತಸ ತಂದಿದೆ ಎಂದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ, ಲೇಖಕ ಜೋಗಿ ಮಾತನಾಡಿ ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.

ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ಅತಿಥಿಯಾಗಿದ್ದ ಚಿತ್ರ ನಿರ್ದೇಶಕ ಜಯತೀರ್ಥ ಮಾತನಾಡಿ, ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ ಎಂದರು. ಚಿತ್ರ ನಟ ಋಷಿ ಮಾತನಾಡಿ, ಶೂಟಿಂಗ್‌ ಟೈಂನಲ್ಲಿ ಕತೆಗಳನ್ನು ಹೇಳುತ್ತಿದ್ದ ರಂಜನಿ, ಇದೀಗ ಕತೆಗಾರ್ತಿಯಾಗಿ ರೂಪುಗೊಂಡಿದ್ದಕ್ಕೆ ಹೆಮ್ಮೆಪಡುವೆ ಎಂದರು.

‘ಬಹುರೂಪಿ’ ಯ ಜಿ ಎನ್‌ ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್‌ ಹನುಮೇಶ್ ಉಪಸ್ಥಿತರಿದ್ದರು.

ಈ ಕೃತಿಯನ್ನು ಕೊಳ್ಳಲು 70191 82729 ಸಂಪರ್ಕಿಸಿ

ನನ್ನೊಳಗಿನ ಕನಸು ಸಾಕಾರಗೊಂಡಿತು: ʻಕನ್ನಡತಿʼ ರಂಜನಿ

ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್‌ ತಿಳಿಸಿದರು.

ಬಹುರೂಪಿ ಹಮ್ಮಿಕೊಂಡಿದ್ದ ರಂಜನಿ ರಾಘವನ್ ಅವರ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ಕತೆ ಡಬ್ಬಿ ರೂಪುಗೊಂಡಿತು. ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ. ಬರವಣಿಗೆಯ ಲೋಕದಲ್ಲಿ ದಿಗ್ಗಜರ ನಡುವೆ ʻಪುಟ್ಟಗೌರಿʼಯ ಕಥಾ ಸಂಕಲನಕ್ಕೆ ಸೊಗಸಾದ ಸ್ವಾಗತ ಸಿಕ್ಕಿದ್ದು ಸಂತಸ ತಂದಿದೆ ಎಂದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ, ಲೇಖಕ ಜೋಗಿ ಮಾತನಾಡಿ ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.

ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ಅತಿಥಿಯಾಗಿದ್ದ ಚಿತ್ರ ನಿರ್ದೇಶಕ ಜಯತೀರ್ಥ ಮಾತನಾಡಿ, ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ ಎಂದರು. ಚಿತ್ರ ನಟ ಋಷಿ ಮಾತನಾಡಿ, ಶೂಟಿಂಗ್‌ ಟೈಂನಲ್ಲಿ ಕತೆಗಳನ್ನು ಹೇಳುತ್ತಿದ್ದ ರಂಜನಿ, ಇದೀಗ ಕತೆಗಾರ್ತಿಯಾಗಿ ರೂಪುಗೊಂಡಿದ್ದಕ್ಕೆ ಹೆಮ್ಮೆಪಡುವೆ ಎಂದರು.

‘ಬಹುರೂಪಿ’ ಯ ಜಿ ಎನ್‌ ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್‌ ಹನುಮೇಶ್ ಉಪಸ್ಥಿತರಿದ್ದರು.

ಈ ಕೃತಿಯನ್ನು ಕೊಳ್ಳಲು 70191 82729 ಸಂಪರ್ಕಿಸಿ

ಹೃದಯ

0
ಹೃದಯವನ್ನು ನಿಯಮಿತವಾಗಿ ಪರಿಶೀಲಿಸಿ ಕೊಳ್ಳಬೇಕು. ಕೋವಿಡ್ ನಂತರ ಹೃದಯ ತಪಾಸಣೆ ಅಗತ್ಯ. ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬಾರದು. ಬಿಪಿ ಮತ್ತು ಸಕ್ಕರೆ ಯನ್ನು ನಿಯಂತ್ರ ಣದಲ್ಲಿ ಇಡಬೇಕು.. ಈ ಸಂದೇಶವನ್ನು ಭಾವನೆಗಳಿಗೆ ಸಮೀಕರಿಸಿ ತಿಳುವಳಿಕೆ ನೀಡಿದ್ದಾರೆ ಡಾ. ರಜನಿ

ಹೃದಯದಲಿ
ನದಿ ಓಡಿದರೆ ಆಗದು❤️

ರಕ್ತ ಸಲೀಸಾಗಿ
ಸಾಗಬೇಕು😊

ನಲ್ಲನ ನೆನೆದಾಗ
ಬಡಿತ 150 ಆದರೇನು🤗

ಬೆಟ್ಟ ಹತ್ತಿದಾಗ
ಬಡಿದು ಸುಸ್ತಾಗ ಬಾರದು😩

ಎಷ್ಟೇ ಇದ್ದರೂ ಕೊಬ್ಬು
ಹೃದಯದ ಧಮನಿಯಲ್ಲಿ ಕಿಟ್ಟ
ಕಟ್ಟಬಾರದು😉

ನಲ್ಲೆ ಸಿಕ್ಕಾಗ ಎದೆ ಬಡಿತ ತಪ್ಪಬಹುದು
ಅದಾಗಿ ಅದೇ ತಪ್ಪಬಾರದು🥰

I love you too ಅಂದಾಗ ಉಬ್ಬು
ಆದರೆ ಇಸಿಜಿ ಯಲ್ಲಿ ST wave ಉಬ್ಬಬಾರದು😐

ಏದುಸಿರು….😁
ಮೆಟ್ಟಿಲು ಹತ್ತಿದಾಗ ಬರಬಾರದು😐

ಸಿಹಿಮುತ್ತು ಉಂಡಾಗಲೂ
ಸಕ್ಕರೆ ಹೆಚ್ಚಾಗಬಾರದು😘

ರಾಧೆ ಸಿಕ್ಕಾಗಲೂ
BP ಸಮವಾಗಿರಬೇಕು😊

ದಿನಾ ಓಡಬೇಕು
ಓಡಿ ಓಡಿ ಹೃದಯ💜💟

ಪ್ರೀತಿಯ ಬೆವರ ಹನಿ ಬೇಕು
ಸುಮ್ಮನೆ ಬೆವೆತು ಹಣ್ಣಾಗ ಬಾರದು😏

ಗ್ಯಾಸ್ಟ್ರಿಕ್ ಎಂದು
ಹೃದಯವನ್ನು ಮುಚ್ಚಿಡಬಾರದು😦

ಕೋವಿಡ್ ನಂತರ ಹೃದಯ
ಚೆಕ್ ಅಪ್ ಬೇಕು🙏

ನಲ್ಲೆಗಾಗಿ ಸೋಲು
ಬೆಟ್ಟ ಹತ್ತಲು ಸೋಲ ಬೇಡ ಓ ಹೃದಯವೇ😍

ಹೃದಯದಲಿ ಇದೇನಿದು
ನದಿಯೊಂದು ಓಡಿದೆ.


ಡಾ.ರಜನಿ