Tuesday, May 12, 2026
Google search engine
Home Blog Page 129

ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಯೂನುಸ್ ಆಯ್ಕೆ

ಪಾವಗಡ: ಜೆಡಿಎಸ್ ಅಲ್ಪಸಂಖ್ಯಾತ ತಾಲ್ಲೂಕು ಘಟಕದ ಅಧ್ಯಕ್ಷರಾಗಿ  ಆಯ್ಕೆಯಾದ ಯುನುಸ್ ಅವರಿಗೆ  ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಗುರುವಾರ ಆದೇಶ ಪ್ರತಿ ಹಸ್ತಾಂತರಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಮಾತನಾಡಿ, ಅಲ್ಪ ಸಂಖ್ಯಾತ ಮುಖಂಡರ ಒಮ್ಮತದ ಮೇರೆಗೆ ಯುನುಸ್ ಅವರನ್ನು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಯೂನುಸ್ ಅವರು ಪಕ್ಷ ಸಂಘಟನೆ ಜೊತೆಗೆ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.

ಯೂನುಸ್ ಮಾತನಾಡಿ, ನನ್ನ ಮೇಲೆ  ವಿಶ್ವಾಸವಿಟ್ಟು ಇಂತಹ  ಸ್ಥಾನ ನೀಡಿದ್ದು, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಾಗುವುದು. ಈಗಾಗಲೆ ಬಡ ಜನರ ಸೇವೆಯಲ್ಲಿ ನಿರತರಾಗಿದ್ದು ಸಮಾಜ ಸೇವೆಯೊಂದಿಗೆ, ಪಕ್ಷದ ಏಳ್ಗೆಗಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಅಲ್ಪಸಂಖ್ಯಾತ ಮುಖಂಡರು, ಅಧ್ಯಕ್ಷ ಬಲರಾಮರೆಡ್ಡಿ ಸೇರಿದಂತೆ ಎಲ್ಲ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಯೂನುಸ್ ಅವರ ಅಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿ ಸಂತೋಷ ಹಂಚಿಕೊಂಡರು.

ಮಾಜಿ ಪುರಸಭೆ ಸದಸ್ಯ ಗೋಪಾಲ್, ಜಿ.ಎ. ವೆಂಕಟೆಶ್, ಮುಖಂಡ ಶಿವಕುಮಾರ್, ಖಾಲಿದ್, ಷಾಕಿರ್, ತಮೀಜ್, ಅಮ್ಜು, ಕಾವಲಗೆರೆ ರಾಮಾಂಜಿ, ನಿಸಾರ್, ಸುಹೇಲ್, ಸಾದಿಕ್ ಉಪಸ್ಥಿತರಿದ್ದರು.

ವರಲಕ್ಷ್ಮೀ ಪೂಜೆಸುವಾಗ ಹೇಳಲೇಬೇಕಾದ ಶ್ಲೋಕಗಳಿವು

0

ವಿ‍ಷ್ಣುವಿನ ಶಕ್ತಿರೂಪಿಣಿ ದೇವಿ ವರಮಹಾಲಕ್ಷ್ಮಿ ವ್ರತ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತಿದೆ. ಹಬ್ಬ ಆಚರಿಸುವವರು, ಇಲ್ಲ ಅಚರಿಸದೇ ಕೇವಲ ಪೂಜೆ ಮಾಡುವವರು ಯಾವೆಲ್ಲಾ ಮಂತ್ರ, ಶ್ಲೋಕಗಳಿಂದ ಭಜಿಸಬೇಕು.

ಈ ಶ್ಲೋಕ, ಮಂತ್ರಗಳನ್ನು ಭಜಿಸುತ್ತಾ ಲಕ್ಷ್ಮೀ ಮನೆಯಲ್ಲೇ ನೆಲೆಯೂರುವಂತೆ ಮಾಡಬೇಕು. ಐಶ್ವರ್ಯ, ಸಕಲ ಸಂಪತ್ತು, ನೆಮ್ಮದಿ, ಆರೋಗ್ಯ ಪ್ರಾಪ್ತಿಯಾಗಲಿದೆ.

ಮಹಾಲಕ್ಷ್ಮೀ ಅಷ್ಟಕಂ


ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |

ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ‖

ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |

ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ | ಸ

ಸರ್ವದುಃಖ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ |

ಮಂತ್ರ ಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರಿ |

ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮಿ ನಮೋಸ್ತುತೇ ‖

ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ |

ಮಹಾ ಪಾಪ ಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ ‖

ಪದ್ಮಾಸನ ಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ |

ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖

ಶ್ವೇತಾಂಬರಧರೇ ದೇವಿ ನಾನಾಲಂಕಾರ ಭೂಷಿತೇ |

ಜಗಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತುತೇ ‖

ಮಹಾಲಕ್ಷ್ಮಷ್ಟಕಂ ಸ್ತೋತ್ರಂ ಯಃ ಪಠೇದ್ ಭಕ್ತಿಮಾನ್ ನರಃ |

ಸರ್ವ ಸಿದ್ಧಿ ಮವಾಪ್ನೋತಿ ರಾಜ್ಯಂ ಪ್ರಾಪ್ನೋತಿ ಸರ್ವದಾ ‖

ಏಕಕಾಲೇ ಪಠೇನ್ನಿತ್ಯಂ ಮಹಾಪಾಪ ವಿನಾಶನಂ |

ದ್ವಿಕಾಲಂ ಯಃ ಪಠೇನ್ನಿತ್ಯಂ ಧನ ಧಾನ್ಯ ಸಮನ್ವಿತಃ ‖

ತ್ರಿಕಾಲಂ ಯಃ ಪಠೇನ್ನಿತ್ಯಂ ಮಹಾಶತ್ರು ವಿನಾಶನಂ |

ಮಹಾಲಕ್ಷ್ಮೀ ರ್ಭವೇನ್-ನಿತ್ಯಂ ಪ್ರಸನ್ನಾ ವರದಾ ಶುಭಾ ‖

ಲಕ್ಷ್ಮಿ ಬೀಜ ಮಂತ್ರ


ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ

ಮಹಾಲಕ್ಷ್ಮಿ ಮಂತ್ರ

ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲಾಯೆ ಪ್ರಸೀದ

ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಿಯೇ ನಮಃ

ಲಕ್ಷ್ಮಿ ಗಾಯತ್ರಿ ಮಂತ್ರ

ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ

ವಿಷ್ಣು ಪತ್ನಯೇ ಚ ಧೀಮಹಿ

ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ

ವರಮಹಾಲಕ್ಷ್ಮಿ ವ್ರತ ಮಂತ್ರ

ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋ ಪಾಂತ್ಯ ಭಾಗವೇ

ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ

ಆಟೋ ಚಾಲಕನಿಗೆ ಜೈಲು ಶಿಕ್ಷೆ, ಆಟೋ ಚಾಲಕನಿಗೆ ಜೈಲು ಶಿಕ್ಷೆ, ದಂಡ

ಪಾವಗಡ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರನ ಸಾವಿಗೆ ಕಾರಣನಾದ ಆಟೋ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾದೀಶರಾದ ಜಗದೀಶ್ ಬಿಸೆರೊಟ್ಟಿ 1 ವರ್ಷ 2 ತಿಂಗಳು ಜೈಲು ಶಿಕ್ಷೆ, 10 ಸಾವಿರ ರೂ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.
ತಾಲ್ಲೂಕಿನ ಅರಸೀಕೆರೆ-ಲಿಂಗದಹಳ್ಳಿ ರಸ್ತೆಯಲ್ಲಿ ಅಕ್ಟೋಬರ್-10, 2014 ರಂದು ಆಟೋ ಚಾಲಕ ಕುಮಾರಸ್ವಾಮಿ ಎಂಬುವರು ಅತೀ ವೇಗ, ಅಜಾಗರೂಕತೆಯಿಂದ ಆಟೋ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಮಂಜುನಾಥ್ ಅವರು ಮೃತಪಟ್ಟಿದ್ದರು.
ಸರ್ಕಲ್ ಇನ್ ಸ್ಪೆಕ್ಟರ್ ಆರ್.ಭಾನುಪ್ರಸಾದ್ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವಿ.ಮಂಜುನಾಥ್ ವಾದ ಮಂಡಿಸಿದ್ದಾರೆ.

ವಕೀಲರಲ್ಲಿ ವೃತ್ತಿ ಗೌರವ, ಬದ್ಧತೆ ಹೆಚ್ಚಾಗಲಿ: ಗೋವಿಂದರಾಜು

Public story.in


ತುಮಕೂರು: ವಕೀಲರಲ್ಲಿ ವೃತ್ತಿ ಗೌರವ, ಕೆಲಸದ ಬದ್ಧತೆ, ಸಂಘಟನೆಯ ಬಲ ಹೆಚ್ಚಾಗಬೇಕಾಗಿದೆ ಎಂದು ಹಿರಿಯ ವಕೀಲರೂ ಆದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಜ ಸೇವೆ, ಕಾನೂನು ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಹಿರಿಯ ವಕೀಲರಾದ ಬಿಳಿಗೆರೆ ಶಿವಕುಮಾರ್ ಹಾಗೂ ಶಿವಮೊಗ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ, ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರ ಹೋರಾಟದಲ್ಲಿ ನಾನು ಕಳೆದುಕೊಂಡಿದ್ದೆ ಹೆಚ್ಚು. ಹಣ, ನನ್ನ ಕುಟುಂಬದ ಸಮಯ, ಯೌವನ ಎಲ್ಲವನ್ನು ಕಳೆದುಕೊಂಡೆನು. ಪ್ರಾಮಾಣಿಕತೆಯ ಹೋರಾಟಗಾರರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಆದರೂ ಪ್ರಾಮಾಣಿಕತೆಯನ್ನು ಬಿಡಬಾರದು ಎಂದರು.

ವಕೀಲ ಬಿಳಿಗೆರೆ ಶಿವಕುಮಾರ್ ಮಾತನಾಡಿ, ತಮ್ಮ ಮೂವತ್ತು ನಾಲ್ಕು ವರ್ಷಗಳ ವಕೀಲ ವೃತ್ತಿಯಲ್ಲಿ ಕಲಿಯಬೇಕಾದದ್ದು ಇನ್ನೂ ಇದೆ. ವಕೀಲರಲ್ಲಿ ಕಲಿಕೆಗೆ ಕೊನೆ ಎಂಬುದಿಲ್ಲ ಎಂಬುದನ್ನು ಕಿರಿಯ ವಕೀಲರು ಮರೆಯಬಾರದು ಎಂದರು.

ವಕೀಲರಲ್ಲಿ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಕಾಳೆಲೆಯುವ ಗುಣ ಹೆಚ್ಚುತ್ತಿದೆ ಎಂದು ವಿಷಾದಿಸಿದ ಅವರು ಇದು ಸಲ್ಲದು. ಇದನ್ನು ಬಿಡಬೇಕು. ಸಹೋದರತೆಯೇ ವಕೀಲ ವೃತ್ತಿಯ ಜೀವಾಳ ಎಂಬುದನ್ನು ಮರೆಯಬಾರದು ಎಂದರು.

ವಕೀಲ ವೃತ್ತಿಯ ಆರಂಭದ ಕಷ್ಟಗಳನ್ನು ಮೆಲುಕು ಹಾಕಿದ ಅವರು ಜತೆಗೆ ರೋಟರಿ, ಜಿಲ್ಲಾ ಕಮಾಂಡೆಂಟ್ ಆಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.

ವಕೀಲರಾದ ಎಸ್. ರಮೇಶ್ ಮಾತನಾಡಿ, ಬದ್ಧತೆ ಮತ್ತು ವೃತ್ತಿ ಘನತೆ ಮೆರೆಯಬೇಕು. ಈ ಎರಡನ್ನು ಬಿಡಬಾರದು. ಇಂತಹ ವಕೀಲರೊಂದಿಗೆ ಜನರು ಯಾವಾಗಲೂ ನಿಲ್ಲುತ್ತಾರೆ ಎಂದರು.

ಅತ್ಯಂತ ಕಷ್ಟ ಬಂದರೂ ಶ್ರೀರಾ‌ಮ ಪ್ರಾಮಾಣಿಕತೆ, ನೈತಿಕತೆ ಬಿಡಲಿಲ್ಲ. ತನ್ನಲ್ಲಿ ಕಡಿಮೆ ಸೈನ್ಯ ಇದ್ದರೂ ರಾವಣನ ಅಗಾಧ ಸೈನ್ಯ ಸೋಲಿಸಿದ. ರಾಮನ ಪ್ರಾಮಾಣಿಕತೆ, ನೈತಿಕತೆ ನೋಡಿ ಕಪಿಗಳು ರಾಮನ ಪರ ನಿಂತವು. ನಿಜ ಜೀವನದಲ್ಲೂ ಪ್ರಾಮಾಣಿಕರಿಗೆ ಕಷ್ಟಗಳು, ಸವಾಲುವಳು ಹೆಚ್ಚು. ಅವರೇ ಸಹ ಗೆಲ್ಲುವರು ಎಂದರು.

ನ್ಯಾಯಾಂಗದ ಬದ್ಧತೆ, ಕ್ರಿಯಾಶೀಲತೆಯ ಬಗ್ಗೆ ಯಾರಿಗೂ ಅನುಮಾನ ಬೇಡ. ನ್ಯಾಯಾಂಗವನ್ನು ಸಡಿಲಗೊಳಿಸಲು ಯಾರಿಂದಲೂ ಸಾಧ್ಯವಾಗದು. ಅಂತಹ ಅಡಿಪಾಯವನ್ನು ನಾನೀ ಪಾಲ್ಕಿವಾಲ ಸೇರಿದಂತೆ ಹಲವರು ಹಾಕಿಕೊಟ್ಟಿದ್ದಾರೆ. ನ್ಯಾಯಾಂಗ ಉಳಿಸುವ ದೊಡ್ಡ ಪಡೆಯೇ ನಮ್ಮ ನಿಮ್ಮೆಲ್ಲರ ನಡುವೆ ಇದೆ. ನ್ಯಾಯಾಂಗದ ಬಗ್ಗೆ ಕಳವಳ ಪಡುವ ಅಗತ್ಯವೇನಿಲ್ಲ ಎಂದರು.

ಹಿರಿಯ ವಕೀಲರಾದ ಜಯಣ್ಣ, ಕಾಂತರಾಜು, ನವೀನ್, ಮನೋಹರ್, ಕರಿಬಸವಯ್ಯ ಇದ್ದರು.

ವಕೀಲರಾದ ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ ವಂದಿಸಿದರು.

ಗೊಂದಲ ಮೂಡಿಸುತ್ತಿರುವ ಬೆಮೆಲ್ ಕಾಂತರಾಜ್ ಕಚೇರಿ ಉದ್ಘಾಟನೆಗೆ ತೆರಳಬೇಡಿ: ಎಂ.ಟಿ.ಕೃಷ್ಣಪ್ಪ

Public story.in


ತುರುವೇಕೆರೆ: ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಪಟ್ಟಣದಲ್ಲಿ ತಮ್ಮ ಕಚೇರಿ ಉದ್ಘಾಟಿಸುವ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಬಳಿ ಕಾಂಗ್ರೆಸ್ ಕಚೇರಿ ಎಂತಲೂ, ಜೆಡಿಎಸ್ ನವರ ಬಳಿ ಜೆಡಿಎಸ್ ಕಚೇರಿ ಎಂದು ಹೇಳಿಕೊಂಡು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದು ಇದ್ದಕ್ಕೆ ಕ್ಷೇತ್ರದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಬಾರದೆಂದು ಮಾಜಿ ಶಾಸಕ ಎಂ.ಟಿ.ಕಷ್ಣಪ್ಪ ಕಿವಿ ಮಾತು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಬೆಮೆಲ್ ಕಾಂತರಾಜು ಅವರು ಜೆಡಿಎಸ್ ನಿಂದ ಗೆದ್ದು ಎಂಎಲ್ಸಿ ಆಗಿದ್ದಾರೆ. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಪಕ್ಷವನ್ನು ತಾಯಿ ಸಮನಾಗಿ ಕಾಣದೆ ಇವರು ತಾಲ್ಲೂಕಿನ ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಹೇಳಿದರು.

ಇವರು ಪಕ್ಷ ವಿರೋಧಿ ಚಟುವಟಿಕೆ ಮಾಡುವ ಬದಲು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಹೋಗಿ ಸೇರಲಿ ನಮ್ಮದೇನೂ ಅಭ್ಯಂತರವಿಲ್ಲ. ಇವರು ಎಂಎಲ್ಸಿ ಆಗಲು ಜಿಲ್ಲೆಯ ಹತ್ತು ತಾಲ್ಲೂಕಿನ ಜನರು ವೋಟ್ ಹಾಕಿದ್ದಾರೆ. ಆದರೆ ಬೆಮೆಲ್ ಕಾಂತರಾಜ್ ಅವರು ಬೇರೆ ತಾಲ್ಲೂಕಿನಲ್ಲಿ ಇಲ್ಲದ ಕಚೇರಿ ಉದ್ಘಾಟನೆ ಈ ತಾಲ್ಲೂಕಿನಲ್ಲಿ ಏಕೆ ಬೇಕಿತ್ತು. ಅದರಲ್ಲೂ ಬೆಮೆಲ್ ಕಾಂತರಾಜ್ ಅವರ ಕೊಡುಗೆ ಏನಿದೆ ಈ ತಾಲ್ಲೂಕಿಗೆ, ಯಾವ ಅಭಿವೃದ್ದಿ ಕೆಲಸ ಮಾಡಿದ್ದಾರೆ. ನಮ್ಮ ತಾಲ್ಲೂಕಿನ ಬಗ್ಗೆ ಅವರಿಗೇನು ಗೊತ್ತು ಎಂಬುದರ ಬಗ್ಗೆ ತಾಲ್ಲೂಕಿನ ಜನತೆಗೆ ಚನ್ನಾಗಿ ಅರಿವಿದೆ ಎಂದರು.

ಪ್ರಜಾಪ್ರಭುತ್ವ ಗೊತ್ತಿಲ್ಲದ ಶಾಸಕ: ಶಾಸಕ ಮಸಾಲ ಜಯರಾಂ ಪೊಲೀಸ್ ದುರ್ಬಳಕೆ ಮಾಡಿಕೊಂಡಿದ್ದು ತಾಲ್ಲೂಕಿನಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಸಿದರು. ವಿರೋಧ ಪಕ್ಷದ ಸ್ಥಾನದಲ್ಲಿರುವ ನಾನು ತಾಲ್ಲೂಕಿನಲ್ಲಿನ ದುರಾಡಳಿವನ್ನು ಖಂಡಿಸಿ ಗುಡ್ಡೇನಹಳ್ಳಿ ತೆಂಗಿನ ಸಸಿ ಕೀಳಿಸಿದ ಪ್ರಕರಣ, ಕೆಎಸ್ಆರ್ಟಿಸಿ ಸಿಬ್ಬಂದಿಗಳ ಪ್ರತಿಭಟನೆಗೆ ಸಾಥ್ ನೀಡಿ ನ್ಯಾಯಕ್ಕಾಗಿ ಪ್ರತಿಭಟನೆ, ಹೋರಾಟ ಮಾಡಿರುವುದು ಸಹಜ.
ಇದನ್ನೇ ಮಹಾ ಅಪರಾಧವೆಂದು ಭಾವಿಸಿರುವ ಅವರೊಬ್ಬ ಪ್ರಜಾಪ್ರಭುತ್ವ ಗೊತ್ತಿಲ್ಲದ ಶಾಸಕ ಎಂದು ಲೇವಡಿಗೈದರು.

ಪಿಎಸ್ಐ ಪ್ರೀತಂ ಬಳಸಿಕೊಂಡು ಶಾಸಕರು ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಕೇಸ್ ಹಾಕುವ ಮೂಲಕ ನನ್ನ ಹೋರಾಟವನ್ನು ದಮನಿಸಬಹುದು ಅಂದುಕೊಂಡಿದ್ದರೆ ಅದು ಶಾಸಕರ ದಡ್ಡತನ. ಇವಕ್ಕೆಲ್ಲ ನಾನು ಸೊಪ್ಪು ಹಾಕುವನಲ್ಲವೆಂದು ತರಾಟೆಗೆ ತೆಗೆದುಕೊಂಡರು.

2018ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮ್ಮ ಬೇಡಿಕೆಗಾಗಿ ಧರಣಿ ಮಾಡಿದ್ದಕ್ಕಾಗಿ 14 ಮಂದಿ ಮೇಲೆ ಕೇಸ್ ಹಾಕಿಸಿ ಅವರನ್ನು ಕೋರ್ಟ್ಗೆ ಅಲೆಯುವಂತೆ ಮಾಡಿದ್ದಾರೆ. ಸಿಎಸ್ಪುರದಲ್ಲಿ ಶಾಸಕರ ಹಿಂಬಾಲಕರು ಮಹಿಳೆಯನ್ನು ನಡುಬೀದಿಯಲ್ಲಿ ಅರೆಬೆತ್ತಲುಗೊಳಿಸಿ ಹಲ್ಲೆಮಾಡಿದ ಪ್ರಮುಖ ಆರೋಪಿಯ ಮೇಲೆ 307 ಪ್ರಕರಣದಡಿಯಲ್ಲಿ ಕೇಸ್ ದಾಖಲಾಗಿದ್ದು ಇದುವರೆಗೂ ಆರೋಪಿಯನ್ನು ಬಂದಿಸಿಲ್ಲ ಕೂಡಲೇ ಬಂಧಿಸಿಬೇಕೆಂದು ಎಸ್ಪಿಯವರನ್ನು ಒತ್ತಾಯಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರುಗಳಾದ ವಿಜಯೇಂದ್ರ, ಕೊಳಾಲ್ ಗಂಗಾಧರ್, ವೆಂಕಟಾಪುರ ಯೋಗೀಶ್ ಮತ್ತಿತರರು ಇದ್ದರು.

ಮದರಸದಲ್ಲಿ ಭಾನುವಾರ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು.

0

ಪಾವಗಡ ಶಿರಾ ರಸ್ತೆಯ ಮಿಫ್ ತಾ ಹುಲ್ ಉಲುಂ ಮದರಸದಲ್ಲಿ ಭಾನುವಾರ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು. ಹಪೀಜ್ ಪರೀದ್, ಯೂನುಸ್, ಷಾಕೀರ್, ಇದಾಯತ್, ನಿಸಾರ್ ಸಾಬ್, ಅಜ್ಜು, ಸದ್ದಾಂ, ರೋಷನ್, ಇಂತು, ಜಾಕೀರ್ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆ

0

ಪಾವಗಡ: ರಕ್ತ ಹರಿಸಿ ಸ್ವಾತಂತ್ರ್ಯ ತಂದು ಕೊಟ್ಟ  ಹೋರಾಟಗಾರರನ್ನು ಪ್ರತಿಯೊಬ್ಬರು ಸ್ಮರಿಸಿ ಗೌರವಿಸಬೇಕು ಎಂದು  ಶಾಸಕ ವೆಂಕಟರವಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಮಹನೀಯರು ಪ್ರಾಣ ಬಲಿದಾನ ಮಾಡಿದ್ದಾರೆ. ಇಲ್ಲವಾದಲ್ಲಿ ಆಂಗ್ಲರ ಗುಲಾಮರಾಗಿ ಬದುಕಬೇಕಿತ್ತು. ಅಂತಹ ಮಹನೀಯರಿಗೆ   ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.

ತಾಲ್ಲೂಕು ಅಭಿವೃದ್ಧಿಯತ್ತ ಸಾಗುತ್ತಿದೆ. ತಾಲ್ಲೂಕಿನ ಜ್ವಲಂತ ಸಮಸ್ಯೆಯಾದ ನೀರಿನ ಸಮಸ್ಯೆ ಶೀಘ್ರ ಬಗೆಹರಿಯಲಿದೆ. ಭದ್ರಾ ಮೇಲ್ದಂಡೆ, ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ತಹಶೀಲ್ದಾರ್ ಕೆ.ಆರ್.ನಾಗರಾಜು, ಭಾರತೀಯರು ಎಲ್ಲರೂ ಒಂದೆ ಎಂಬ ಭಾವನೆ ಪ್ರತಿಯೊಬ್ಬರು ಹೊಂದಬೇಕು. ಜಾತಿ, ಧ‍ರ್ಮ, ಭಾಷೆ, ಪ್ರದೇಶದ ಎಲ್ಲೆ ಮೀರಿ ಎಲ್ಲರೂ ಸಹೋದರರಂತೆ ಸಹಬಾಳ್ವೆ ನಡೆಸಬೇಕು ಎಂದರು.

ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಬೇಕು. ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲು ಒಬ್ಬರಿಗೊಬ್ಬರು ನೆರವಾಗಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್, ಪುರಸಭೆ ಮುಖ್ಯಾಧಿಕಾರಿ ಅರ್ಚನಾ,  ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ, ಉಪಾದ್ಯಕ್ಷೆ ಸುಧಾಲಕ್ಷ್ಮಿ ಪ್ರಮೋದ್, ಸದಸ್ಯ ಎಂ.ಎ.ಜಿ.ಇಮ್ರಾನ್, ವೇಲು, ನಾಗಬೂಷಣರೆಡ್ಡಿ, ರೈತ ಮುಖಂಡರಾದ ನರಸಿಂಹರೆಡ್ಡಿ, ಪುಜಾರಪ್ಪ, ಕೃಷ್ಣಾರಾವ್, ಆರ್.ಟಿ.ಖಾನ್ ಉಪಸ್ಥಿತರಿದ್ದರು.

ಬಂತು, ಬಂತು 80 ಸಾವಿರ ವಿದ್ಯುತ್ ಬಿಲ್ !

Public story


ತುರುವೇಕೆರೆ; ಸ್ಥಳೀಯ ಬೆಸ್ಕಾಂ ಕಛೇರಿ ಹಲವು ಗ್ರಾಹಕರಿಗೆ ಸಾವಿರಾರು ರೂಪಾಯಿಗಳ ಯದ್ವಾತದ್ವಾ ವಿದ್ಯುತ್ ಬಿಲ್ ನೀಡುವ ಮೂಲಕ ಶಾಕ್ ನೀಡಿದೆ.

ಬೆಸ್ಕಾಂ ಕಛೇರಿಯ ಹಿಂಭಾಗದ ಸುಬ್ರಹ್ಮಣ್ಯ ನಗರ ಬಡಾವಣೆಯ ಹಲವು ಗ್ರಾಹಕರು ಈ ಬಾರಿಯ (ಆಗಸ್ಟ್ 2021)ಬೆಸ್ಕಾಂ ವಿದ್ಯುತ್ ಬಿಲ್ ನೋಡಿ ಆಘಾತಕ್ಕೊಳಗಿದ್ದಾರೆ.

ಮಾಹೆಯಾನ ರೂ.200 ರಿಂದ ರೂ.300 ವಿದ್ಯುತ್ ಬಿಲ್ ಬರುತ್ತಿದ್ದ ಮನೆಗಳಿಗೆ ರೂ.20 ಸಾವಿರದಿಂದ 80 ಸಾವಿರದವರೆಗೆ ಬಿಲ್ ನೀಡಲಾಗಿದ್ದು ನಾಗರಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ನಾವು ಒಂದು ತಿಂಗಳಲ್ಲಿ 18 ರಿಂದ 30 ಯೂನಿಟ್‍ನಷ್ಟು ಮಾತ್ರ ವಿದ್ಯುತ್ ಬಳಕೆ ಮಾಡುತ್ತಿದ್ದೆವು. ಆದರೆ ಈ ಬಾರಿ 2480 ಯೂನಿಟ್ ವಿದ್ಯುತ್ ಬಳಕೆ ಮಾಡಿರುವುದಾಗಿ ತಿಳಿಸಿ ರೂ.20,401 ರೂಪಾಯಿಗಳಿಗೆ ಬಿಲ್ ನೀಡಲಾಗಿದೆ. ಇಷ್ಟೊಂದು ಅಗಾಧ ಪ್ರಮಾಣದ ಬಿಲ್ ಕಂಡು ಅಚ್ಚರಿಯಾಗಿದೆ ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡರು.

ಹಲವು ಗ್ರಾಹಕರು ಬೆಸ್ಕಾಂ ಕಛೇರಿಯನ್ನು ಸಂಪರ್ಕಿಸಿ ವಿವರಣೆ ಕೇಳಿದಾಗ ಹಿಂದಿನ ಬಾಕಿಯನ್ನು ಈಗ ಸೇರಿಸಿ ಬಿಲ್ ಕೊಡಲಾಗಿದೆ ಎಂಬ ಸಮಜಾಯಿಸಿ ನೀಡಿರುವುದು ಗ್ರಾಹಕರನ್ನು ಮತ್ತೂ ಗೊಂದಲಕ್ಕೆ ತಳ್ಳಿದೆ. ಪ್ರತಿ ತಿಂಗಳು ತಪ್ಪದೆ ಬಿಲ್ ಕಟ್ಟುತ್ತಿರುವಾಗ ಇಷ್ಟೊಂದು ಭಾರೀ ಬಾಕಿ ಎಲ್ಲಿಂದ ಬಂತು? ಇಷ್ಟು ದಿನ ಬೆಸ್ಕಾಂ ಬಾಕಿ ವಸೂಲಿ ಮಾಡದೆ ಏಕೆ ಸುಮ್ಮನೆ ಬಿಟ್ಟಿತ್ತು ?ಎಂಬ ಪ್ರಶ್ನೆಗಳೂ ಎದುರಾಗಿವೆ. ಆದರೆ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಿದಾಗ ಮೀಟರ್ ಓದುವ ಸಿಬ್ಬಂದಿಯ ತಪ್ಪಿನಿಂದಾಗಿ ಈ ಗೊಂದಲ ಉಂಟಾಗಿದ್ದು ಶೀಘ್ರ ಪರಿಷ್ಕøತ ಬಿಲ್ ನೀಡುವ ಭರವಸೆ ನೀಡಿದ್ದಾರೆ.

ಮಕ್ಕಳು ಮತ್ತು ಯುವಕರು ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯ

ತುರುವೇಕೆರೆ-ಆಗಸ್ಟ್ 12
ಮಕ್ಕಳಲ್ಲಿ ಮತ್ತು ಯುವಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಅಕ್ಷರ ಹಾಗೂ ಪುಸ್ತಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ತುರ್ತು ಅಗತ್ಯವಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು
ಸ್ಥಳೀಯ ಗ್ರಂಥಾಲಯದಲ್ಲಿ ಗುರುವಾರ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವಮಾಧ್ಯಮಗಳ ಪರಿಣಾಮವಾಗಿ ಮಕ್ಕಳು ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ದೂರಿ ಪ್ರಯೋಜನವಿಲ್ಲ. ಅನ್‍ಲೈನ್ ಕನ್ನಡ ವೇದಿಕೆಗಳ ಮೂಲಕವೇ ಮಕ್ಕಳಿಗೆ ಪುಸ್ತಕ ಪರಿಚಯ ಮಾಡಿಕೊಟ್ಟು ಕನ್ನಡದ ಸಾರಸ್ವತ ಲೋಕಕ್ಕೆ ಅವರನ್ನು ಸೆಳೆಯಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದಲ್ಲಿ ಶಾಶ್ವತ ಗ್ರಂಥಾಲಯ ಭವನಕ್ಕೆ ಒಂದು ಸೂಕ್ತ ನಿವೇಶನ ದೊರಕಿಸಿಕೊಟ್ಟು ಸುಸಜ್ಜಿತ ಗ್ರಂಥಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಾಪಕ ಶೈಲೇಶ್ ಮಾತನಾಡಿ ಸಾರ್ವಜನಿಕರಲ್ಲಿ ಪುಸ್ತಕಗಳ ಅರಿವು ಮೂಡಿಸಲು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಅಭಿಯಾನಗಳು ನಡೆಯಬೇಕು. ಹಳೆಯ ಪೀಳಿಗೆಯ ಸಾಹಿತಿಗಳ ಜೊತೆಗೆ ಸಮಕಾಲೀನ ಬರಹಗಾರರ ಮೌಲಿಕ ಕೃತಿಗಳ ಕುರಿತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದರು.
ಗ್ರಂಥಪಾಲಕರಾದ ಎಂ.ಎಸ್.ಪ್ರಭಣ್ಣ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಹಾಗೂ ಓದುಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0

ತುರುವೇಕೆರೆ-ಆಗಸ್ಟ್
ಮಕ್ಕಳಲ್ಲಿ ಮತ್ತು ಯುವಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಅಕ್ಷರ ಹಾಗೂ ಪುಸ್ತಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ತುರ್ತು ಅಗತ್ಯವಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು
ಸ್ಥಳೀಯ ಗ್ರಂಥಾಲಯದಲ್ಲಿ ಗುರುವಾರ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವಮಾಧ್ಯಮಗಳ ಪರಿಣಾಮವಾಗಿ ಮಕ್ಕಳು ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ದೂರಿ ಪ್ರಯೋಜನವಿಲ್ಲ. ಅನ್‍ಲೈನ್ ಕನ್ನಡ ವೇದಿಕೆಗಳ ಮೂಲಕವೇ ಮಕ್ಕಳಿಗೆ ಪುಸ್ತಕ ಪರಿಚಯ ಮಾಡಿಕೊಟ್ಟು ಕನ್ನಡದ ಸಾರಸ್ವತ ಲೋಕಕ್ಕೆ ಅವರನ್ನು ಸೆಳೆಯಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದಲ್ಲಿ ಶಾಶ್ವತ ಗ್ರಂಥಾಲಯ ಭವನಕ್ಕೆ ಒಂದು ಸೂಕ್ತ ನಿವೇಶನ ದೊರಕಿಸಿಕೊಟ್ಟು ಸುಸಜ್ಜಿತ ಗ್ರಂಥಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಾಪಕ ಶೈಲೇಶ್ ಮಾತನಾಡಿ ಸಾರ್ವಜನಿಕರಲ್ಲಿ ಪುಸ್ತಕಗಳ ಅರಿವು ಮೂಡಿಸಲು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಅಭಿಯಾನಗಳು ನಡೆಯಬೇಕು. ಹಳೆಯ ಪೀಳಿಗೆಯ ಸಾಹಿತಿಗಳ ಜೊತೆಗೆ ಸಮಕಾಲೀನ ಬರಹಗಾರರ ಮೌಲಿಕ ಕೃತಿಗಳ ಕುರಿತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದರು.
ಗ್ರಂಥಪಾಲಕರಾದ ಎಂ.ಎಸ್.ಪ್ರಭಣ್ಣ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಹಾಗೂ ಓದುಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.