Saturday, May 9, 2026
Google search engine
Home Blog Page 128

ಭಾನುವಾರದ ಕವಿತೆ: ದೀಪದ ಶಾಸ್ತ್ರ

ಸತೀಶ್ ಯಲಚಗೆರೆ


ಇ‌ನ್ನೂ, ಇನ್ನೂ ಕಾಯಲಾಗದು

ಇವರೇಕೆ ಇಷ್ಟು ತಡ

ತಡಬಡ ಸದ್ದು

ಹೂವು, ಹಣ್ಣುಗಳ ಸರಪರ

ನನಗೋ ಕಾತರ!

ದೀಪದ ಶಾಸ್ತ್ರ ಎಂದರೆ ಇದೇಕೋ ಇಷ್ಟು ತಡವೇ?

ಎಲ್ಲ ಪಕ್ಕ ಕೂತು ಹರಟುವವರೇ?

ನಮ್ಮಿಬ್ಬರನ್ನೂ ಬಿಟ್ಟರೆ!

ಅಲ್ಲಿ ಹೊಸ್ತಿಲಿಗೆ ಪೂಜೆ

ಐದೇ ಜನ ಸೇರಿ ಮಾಡಬೇಕಂತೆ

ಆರು ಜನ ಬೇಕಿಲ್ಲ… ಎನ್ನುವವರ ಮಾತು!

ಆರೋ, ಏಳೋ ಬೇಗಾದರೆ ಬೇಡವೇನು?

ದೊಡ್ಡ ಸೊಸೆಯೇ ಆಗಬೇಕಂತೆ ಹಣ್ಣಿನ ತಟ್ಟೆ ಹಿಡಿಯಲು…

ಅಯ್ಯೋ! ಈ ಮಾಸ್ಕ್ ಬೇರೆ ಜಾರುತ್ತದೇ?

ಕೊರೊನಾ ನಡುವೆಯೋ ಮದುವೆ ಕನಸುಗಳು!

ಕೊನೆಗೂ ಸೇರಿದರು, ಹಚ್ಚಿದರು ದೇವರ ದೀಪ

ಇನ್ನೂ ನಾವಿಬ್ಬರೂ ಹಚ್ಚಬೇಕು ಬದುಕಿನ ದೀಪ..

ಹಚ್ಚಿದವು ಕನಸಿನ ದೀಪ

ಬೆಳಗಲಿ, ಬೆರಗು ಮೂಡಿಸಲಿ,

ಕನಸ ದಾರಿಗೆ ಬೆಳಕಿನ ಹಣತೆ….

ಇಬ್ಬರ ಕಣ್ಣಲ್ಲೂ ದೀಪದ ಬಿಂಬ

ಎದೆಯಲ್ಲಿ ಸಾವಿರ ಕುಣಿತ….

ಬ್ಯಾಂಕ್ ಗೆ ವಂಚನೆ: ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ 3 ವರ್ಷ ಜೈಲು ಶಿಕ್ಷೆ

0

Publicstory.in

ತುಮಕೂರು: ಡಿಸಿಸಿ ಬ್ಯಾಂಕ್ ಗೆ 34‌ ಲಕ್ಷದ 85 ಸಾವಿರ ರೂಪಾಯಿ ವಂಚನೆ ಮಾಡಿದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ತೀರ್ಪು ನೀಡಿದ್ದಾರೆ.

ಆರೋಪಿಗಳಾದ ಅಶ್ವತ್ಥನಾರಾಯಣ

ಈತನ ಸ್ನೇಹಿತ ಬಶೀರ್ ಅಹ್ಮದ್, ಸಂಬಂಧಿಕರಾದ ಶಾಂತ ಲಕ್ಷ್ಮಮ್ಮ ಅವರು ಶಿಕ್ಷೆಗೆ ಗುರಿಯಾದವರು. ಶಿಕ್ಷೆಯ ಜತೆಗೆ 25 ಸಾವಿರ ದಂಡ ಸಹ ವಿಧಿಸಲಾಗಿದೆ.

ಅಶ್ವತ್ಥನಾರಾಯಣ ಅವರು ಬ್ಯಾಂಕಿನ ಲೆಕ್ಕಪತ್ರ ನಿರ್ವಹಣೆಯ ಕೆಲಸ ಮಾಡುತ್ತಿದ್ದು, ವಿನಿಮಯ ಹುಂಡಿಗಳನ್ನು ಕಳವು ಮಾಡಿ ಬ್ಯಾಂಕಿನ ಮ್ಯಾನೇಜರ್ ನಕಲಿ ಸಹಿ ಬಳಸಿ ಈ ಇಬ್ಬರ ಹೆಸರಿನಲ್ಲಿ ಹಣ ಲಪಾಟಾಯಿಸಿದ್ದರು.

ಸುದೀರ್ಘ ವಿಚಾರಣೆಯ ಬಳಿಕ ಆರೋಪಿಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ವಕೀಲರಾದ ವೈ.ಎ.ಕವಿತಾ ಅವರು ಸರ್ಕಾರದ ಪರ ವಾದಿಸಿದ್ದರು.

ಬಗೆದಷ್ಟೂ ಕಗ್ಗಂಟಾಗುತ್ತಿರುವ ; ಕರ್ದಾದಲ್ಲಿನ ಬೀಳು ,ಪಢಾ,ಬಂಜರು ಪ್ರಕರಣಗಳು.

0

ಲಕ್ಷ್ಮೀಕಾಂತರಾಜು ಎಂಜಿ.

 

ಐಎಲ್,ಪಹಣಿ,ಆರ್ ಆರ್ ಸೇರಿದಂತೆ ಇನ್ನಿತರ ಕಂದಾಯ ಇಲಾಖೆಯ ದಾಖಲೆಗಳು ಇದ್ದ ಮಾತ್ರಕ್ಕೆ ಜಮೀನನ ಅಳತೆ ಕಾರ್ಯ ನಿರ್ವಹಿಸಲಾಗದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು ಸ್ಪಷ್ಠೀಕರಣ ನೀಡಿದ್ದಾರೆ‌.

ಹೌದು,ಕರ್ದಾದಲ್ಲಿನ ಬೀಳು,ಫಡಾ,ಖರಾಬು,ಬಂಜರು ಪ್ರಕರಣಗಳ ವಿಲೇವಾರಿ ಸಂಬಂಧ ಸ್ಪಷ್ಠೀಕರಣ ಕೋರಿ ಚಿಂತಾಮಣಿಯ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಬರೆದ ಪತ್ರಕ್ಕೆ ಸ್ಪಷ್ಠೀಕರಣ ನೀಡಿರುವ ಅವರು, ಕೇವಲ ಕಂದಾಯ ದಾಖಲೆಗಳಿಂದ ಭೂಮಿಯ ಮಾಲೀಕರನ್ನ ಗುರ್ತಿಸಲಾಗದು,ಅದಕ್ಕೆ ಪೂರಕವಾಗಿ ಸರ್ವೇ ದಾಖಲೆಗಳಲ್ಲಿಯೂ ಖಾಸಗಿ ಮಾಲೀಕರ ಹೆಸರು ದಾಖಲಾಗಿದ್ದಾಗ ಮಾತ್ರ ಅಳತೆ ಕಾರ್ಯ ನಿರ್ವಹಿಸಲು ಸಾಧ್ಯವೆಂದಿದ್ದಾರೆ.

ಕರ್ದಾದಲ್ಲಿನ ಬೀಳು,ಫಡಾ,ಬಂಜರು ಪ್ರಕರಣಗಳ ವಿಲೇವಾರಿ ಸಂಬಂಧ ಕ್ರಮಕೈಗೊಳ್ಳಲು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತರು ಹೊರಡಿಸಿದ್ದ sslr/ 11028/025/2016 ಪತ್ರದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಪ್ರಕರಣ 163 ರ ಉಪಪ್ರಕರಣ 2 ರ ಅನ್ವಯ ಕ್ರಮವಹಿಸಿ ಎಂದು ಎಲ್ಲ ತಹಸೀಲ್ದಾರ್ ಅವರುಗಳಿಗೆ ಸೂಚಿಸಲಾಗಿತ್ತು.

ಈ ಭೂ ಮಾಪನ ಇಲಾಖೆಯ ಆಯುಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದ ನಿಯಮದಡಿ ಕರ್ದಾದಲ್ಲಿನ ಬೀಳು ,ಫಡಾ,ಖರಾಬು,ಬಂಜರು ಪ್ರಕರಣಗಳಲ್ಲಿನ ಜಮೀನುಗಳ ಅಳತೆ ಮಾಡಿ ತತ್ಕಾಲ್, 11 e ನಕಾಶೆ ಮಾಡಲು ಚಿಂತಾಮಣಿ ತಹಸೀಲ್ದಾರ್ ಅವರು ಅಲ್ಲಿನ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಆದೇಶಿದಾಗ ಈ ಎಲ್ಲ ಬೆಳವಣಿಗೆಗಳು ನಡೆದು ಚಿಕ್ಕಬಳ್ಳಾಪುರ ಜಿಲ್ಲೆಯ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು 22 ಪುಟಗಳ ಸವಿಸ್ತಾರವಾಗಿ ವಿವರಣೆ ಬರೆದಿರುವುದು ನೋಡಿದಾಗ ಈ ಪ್ರಕರಣಗಳಿಗೆ ಮುಕ್ತಿ ಅಷ್ಟು ಸುಲಭವಲ್ಲ ಎಂಬುದು ತಿಳಿಯುತ್ತಿದೆ.

ಸರ್ವೇಯ ಕರ್ದಾದಲ್ಲಿ ಅಥವಾ ರೀ ಸರ್ವೇಯ ದಾಖಲೆಯಲ್ಲಿ ಖಾಸಗಿ ಮಾಲೀಕನ ಹೆಸರು ಇಲ್ಲದ ಜಮೀನುಗಳ ರೈತರು ತತ್ಕಾಲ್ ಪೋಡಿಗೆ ಅಥವಾ 11e ನಕಾಶೆ ತಯಾರಿಸಲು ಅರ್ಜಿ ಸಲ್ಲಿಸಿ ಅಳತೆಗಾಗಿ ಸರ್ವೇಯರ್ ಗಳನ್ನ ಕಾಯುತ್ತಿದ್ದ ರೈತರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಸ್ಪಷ್ಠೀಕರಣ ರೈತರ ಈ ಸಮಸ್ಯೆ ಸಧ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲವೆಂದು ರೈತರು ಬೇಸರಿಸಿಕೊಳ್ಳುತ್ತಿದ್ದಾರೆ.

1964 ರ ಭೂ ಕಂದಾಯ ಅಧಿನಿಯವು ಜಾರಿಗೆ ಬರುವ ಮುನ್ನ ಭೂಮಿಗೆ ಸಂಬಂಧಿಸಿದಂತೆ ಮೈಸೂರು ರೆವೆನ್ಯೂ ಕೋಡ್ 1888 ಜಾರಿಯಲ್ಲಿದ್ದು, ಈ ಕಾಯ್ದೆಯಡಿಲ್ಲಿಯೇ ಭೂ ಮಾಪನ ಮತ್ತು ಕಂದಾಯ ವ್ಯವಸ್ಥೆಯ ಕಾನೂನು ಜಾರಿಯಲ್ಲಿರುತ್ತದೆ. ಆಗ ಕಂದಾಯ ನಿಗದಿಯಾಗಿದ್ದ ಸರ್ಕಾರಿ ಭೂಮಿಗಳೂ ಇದ್ದು ವ್ಯವಸಾಯದ ಉದ್ದೇಶಕ್ಕಾಗಿ ಆಸಕ್ತಿ ಉಳ್ಳವರಿಗೆ ನೀಡಿ ಕಂದಾಯ ಸಂಗ್ರಹಿಸಲಾಗುತ್ತಿತ್ತು. ಆದರೆ ,ಮಾಲೀಕತ್ವ ಸರ್ಕಾರದ್ದೇ ಆಗಿರುತ್ತದೆ. ಆದ್ದರಿಂದ ಈ ಪ್ರಕರಣಗಳ ಭೂಮಿಗಳು ಸರ್ಕಾರದ್ದೇ ಎಂಬುದು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳ ವಾದವಾಗಿದೆ.

ಸರ್ವೇ ದಾಖಲೆ ಕರ್ದಾದಲ್ಲಿ ನಮೂದಾಗಿರುವ ಸರ್ಕಾರಿ ಖರಾಬು,ಕರ್ದಾ ಇಲ್ಲ ಬೀಳು ,ಬಂಜರು ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಹೇಗೆ ಬಂದಿತು ಎಂಬ ನಡಾವಳಿಯ ಆದೇಶದ ಕಡತವಿಲ್ಲದೆ ಸರ್ವೆ ದಾಖಲೆಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರನ್ನ ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲವೆಂದು ಅಧಿಕಾರಿಗಳು ಹೊರಡಿಸಿರುವ ಸ್ಪಷ್ಠೀಕರಣದಲ್ಲಿ ತುಂಬಾ ಸ್ಪಷ್ಟಪಡಿಸಿರುವ ಕಾರಣ ಈ ಪ್ರಕರಣಗಳಲ್ಲಿ ಬಾಕಿ ಇರುವ ಅರ್ಜಿಗಳಿಗೆ ಮುಕ್ತಿ ಸಿಗುವುದು ಅಷ್ಟು ಸುಲಭವಲ್ಲ ಎಂಬುದು ರೈತಾಪಿ ವರ್ಗದಿಂದ ಕೇಳಿಬರುತ್ತಿದೆ.

ಈ ಪ್ರಕರಣಗಳ ತಾಂತ್ರಿಕ ಸಮಸ್ಯೆಯನ್ನ ಬಗೆಹರಿಸಲು ನಮ್ಮ ಇಲಾಖೆಯಲ್ಲಿನ ನಿಯಮಗಳಲ್ಲಿ ತೊಡಕಿವೆ. ಈ ಸಂಬಂಧ ಸರ್ಕಾರ ಮಧ್ಯಪ್ರವೇಶ ಮಾಡಿ ನಿಯಮಗಳನ್ಬ ಮಾರ್ಪಡಿಸಬೇಕು. ಜಿಲ್ಲಾಧಿಕಾರಿಗಳಿಗೆ ಕುಲಕಂಶವಾಗಿ ಪರಿಶೀಲಿಸಿ ನೈಜ ಮಾಲೀಕನನ್ನ ಗುರ್ತಿಸಿ ಆದೇಶ ಮಾಡುವ ವಿವೇಚನಾಧಿಕಾರವನ್ನ ನೀಡಿದರೆ ಬಗೆಹರಿಸಲು ಸಾಧ್ಯ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಸರ್ವೇ ಅಧಿಕಾರಿಗಳು.

ಬಹಳಷ್ಟು ವರ್ಷಗಳಿಂದ ಕೆಲ ರೈತರು ತಮ್ಮ ಜಮೀನುಗಳನ್ನ ಪೋಡಿ ಮಾಡಿಸಿಕೊಳ್ಳಲು ಛಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಸರ್ವೆ ದಾಖಲೆಗಳಲ್ಲಿ ಹಿಡುವಳಿ ಜಮೀನಾಗಿರದೇ ಸರ್ಕಾರಿ ಮಾಲೀಕತ್ವ( ಪಡಾ,ಖರಾಬು,ಬಂಜರು,ಬೀಳು) ಗುರುತಿಸಿರುವ ಜಮೀನುಗಳನ್ನ ಅಳತೆ ಮಾಡಿ ನಕಾಶೆ ಮಾಡಿಕೊಡುತ್ತಿಲ್ಲ. ಈಗಲಾದರೂ ಬಗೆಹರಿದೀತು ಎಂದು ಆಶಾವಾದಿಯಾಗಿದ್ದ ಈ ಪ್ರಕರಣಗಳಲ್ಲಿ ರಾಜ್ಯ ವ್ಯಾಪಿ ಅರ್ಜಿದಾರರಾಗಿರುವ ರೈತರಿಗಳಿಗೆ ಅಧಿಕಾರಿಗಳ ಸ್ಪಷ್ಠೀಕರಣ ನೋಡಿದ ಮೇಲೆ ಮತ್ತಷ್ಟು ವಿಳಂಬವಾಗುವುದನ್ನ ಅರಿತು ಕಂಗಲಾಗಿರುವುದಂಥೂ ಸತ್ಯ.

…………

ಈ ಪ್ರಕರಣಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಡಿಎಲ್ ಆರ್ ಅವರು ಹೊರಡಿಸಿರುವ ಸ್ಪಷ್ಠೀಕರಣ ನನ್ನ ಗಮನಕ್ಕೆ ಬಂದಿಲ್ಲ. ರೈತರಿಂದ ಲಿಖಿತವಾಗಿ ಮನವಿ ಬಂದರೆ ಗಮನವಹಿಸಿ ನಿಯಾಮನುಸಾರ ಪರಿಹರಿಸಲು ಪ್ರಯತ್ನಿಸುತ್ತೇನೆ.

ಮನೀಷ್ ಮೌದ್ಗಿಲ್.
ಆಯುಕ್ತರು, ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ,ಬೆಂಗಳೂರು.
………………….

ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಒಳ್ಳೆಯದು ಬರಹಗಾರ ತುರುವೇಕೆರೆ ಪ್ರಸಾದ್

0

ತುರುವೇಕೆರೆ-ಆಗಸ್ಟ್ 12
ಮಕ್ಕಳಲ್ಲಿ ಮತ್ತು ಯುವಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಅಕ್ಷರ ಹಾಗೂ ಪುಸ್ತಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ತುರ್ತು ಅಗತ್ಯವಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು
ಸ್ಥಳೀಯ ಗ್ರಂಥಾಲಯದಲ್ಲಿ ಗುರುವಾರ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವಮಾಧ್ಯಮಗಳ ಪರಿಣಾಮವಾಗಿ ಮಕ್ಕಳು ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ದೂರಿ ಪ್ರಯೋಜನವಿಲ್ಲ. ಅನ್‍ಲೈನ್ ಕನ್ನಡ ವೇದಿಕೆಗಳ ಮೂಲಕವೇ ಮಕ್ಕಳಿಗೆ ಪುಸ್ತಕ ಪರಿಚಯ ಮಾಡಿಕೊಟ್ಟು ಕನ್ನಡದ ಸಾರಸ್ವತ ಲೋಕಕ್ಕೆ ಅವರನ್ನು ಸೆಳೆಯಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದಲ್ಲಿ ಶಾಶ್ವತ ಗ್ರಂಥಾಲಯ ಭವನಕ್ಕೆ ಒಂದು ಸೂಕ್ತ ನಿವೇಶನ ದೊರಕಿಸಿಕೊಟ್ಟು ಸುಸಜ್ಜಿತ ಗ್ರಂಥಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಾಪಕ ಶೈಲೇಶ್ ಮಾತನಾಡಿ ಸಾರ್ವಜನಿಕರಲ್ಲಿ ಪುಸ್ತಕಗಳ ಅರಿವು ಮೂಡಿಸಲು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಅಭಿಯಾನಗಳು ನಡೆಯಬೇಕು. ಹಳೆಯ ಪೀಳಿಗೆಯ ಸಾಹಿತಿಗಳ ಜೊತೆಗೆ ಸಮಕಾಲೀನ ಬರಹಗಾರರ ಮೌಲಿಕ ಕೃತಿಗಳ ಕುರಿತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದರು.
ಗ್ರಂಥಪಾಲಕರಾದ ಎಂ.ಎಸ್.ಪ್ರಭಣ್ಣ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಹಾಗೂ ಓದುಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಗತ್ತಿನ ಶಕ್ತಿದೇವತೆಗಳ ಮಹಾಸಂಗಮ ಶಕ್ತಿಪೀಠಕ್ಕೆ ಶಿಲಾನ್ಯಾಸ‌ ನೆರವೇರಿಸಿದ ಶಾಸಕ ಜ್ಯೋತಿ ಗಣೇಶ್

0

Publicstory.in


ಬಗ್ಗನಡು: ಶಕ್ತಿಪೀಠ ಕ್ಯಾಂಪಸ್ ವಿಶ್ವದ, ದೇಶದ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುವ ಬುದ್ದಿಜೀವಿಗಳ ತಾಣವಾಗಲಿ ಎಂದು ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಕರೆ ನೀಡಿದರು.

ಅವರು ದಿನಾಂಕ:22.08.2021 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆದ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವದ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳ ಸ್ಥಾಪನೆ ಶಕ್ತಿಪೀಠದಲ್ಲಿ ಆಗಲಿದೆ.

ಶಕ್ತಿಪೀಠದಲ್ಲಿ ಧಾರ್ಮಿಕವಾಗಿ ಮಾತ್ರವಲ್ಲದೇ ದೇಶದ 30 ನದಿ ಜೋಡಣೆಗಳ ಪ್ರಾತ್ಯಾಕ್ಷಿಕೆ ಯೊಂದಿಗೆ , ದೇಶದ 37 ರಾಜ್ಯಗಳ ಮತ್ತು ರಾಜ್ಯದ 31 ಜಿಲ್ಲೆಗಳ ಪರಿಣಿತರು ಒಂದೇ ವೇದಿಕೆಯಲ್ಲಿ ಸೇರಿ ಅಭಿವೃದ್ಧಿ ಯೋಜನೆಗಳ ಚಿಂಥನ– ಮಂಥನ ನಡೆಸುವ ಆಲೋಚನೆ ಬಹಳ ಉತ್ತಮವಾಗಿದೆ ಎಂದರು.

ಧಾರ್ಮಿಕ, ಜ್ಞಾನ, ವಿಜ್ಞಾನ ಮತ್ತು ಅಭಿವೃದ್ಧಿಯ ಸಂಗಮವಾಗಲಿದೆ ಈ ಕ್ಷೇತ್ರ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ ಶಾಸಕರು, ಕೇಂದ್ರ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಹಳ ಒತ್ತು ನೀಡಿದೆ. ಅದನ್ನು ಗ್ರಾಮೀಣ ಮಟ್ಟದಲ್ಲಿ ಬಳಸಿಕೊಂಡು ರೈತರ ಮತ್ತು ಬಡವರ ಅಭಿವೃದ್ಧಿಗೆ ಅನೂಕೂಲ ಮಾಡುವಂತಹ ಚಿಂತನೆಗಳ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.

ನಮ್ಮಲ್ಲಿ ನೂರಾರು ಯೋಜನೆಗಳು ಜಾರಿಯಾಗಲಿವೆ, ಯೋಜನೆ ಜಾರಿಯಾದ ನಂತರ ಅವುಗಳಿಂದ ಯಾರಿಗೆ ಎಷ್ಟರ ಮಟ್ಟಿಗೆ ಅನೂಕೂಲವಾಗಿವೆ ಎಂಬ ಮೌಲ್ಯಮಾಪನ ಅಗತ್ಯ ಎಂದು ಪ್ರತಿ ಪಾದಿಸಿದರು. ಈ ಕ್ಯಾಂಪಸ್ ಒಂದು ‘ಕಾಮನ್ ಫೆಸಿಲೇಟಿ ಸೆಂಟರ್’ ಆಗುವ ಲಕ್ಷಣಗಳಿವೆ. ಸಂಶೋಧಕರು ಇದರ ಪ್ರಯೋಜನ ಪಡೆದುಕೊಳ್ಳ ಬೇಕಿದೆ ಎಂದರು.

ಕುಂದರನಹಳ್ಳಿ ರಮೇಶ್ ರವರು ನಮ್ಮ ತಂದೆಯವರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜೊತೆಯಲ್ಲಿ ಧೀರ್ಘ ಕಾಲದ ಒಡನಾಟದ ಅನುಭವಗಳನ್ನು ಸಾಕಾರಗೊಳಿಸುವ ಕಾರ್ಯ ಆರಂಭ ಮಾಡಲು ಪ್ರಥಮ ಹೆಜ್ಜೆ ಇಟ್ಟಿದ್ದಾರೆ. ಶಕ್ತಿಪೀಠ ಫೌಂಡೇಷನ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಂದಿಗೆ ವಿವಿಧ ಯೋಜನೆಗಳ ‘ಪರಿಣಿತರ, ಬುದ್ದಿವಂತರ, ಚಿಂತಕರ ಕಣಜವಾಗಲಿ ‘ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ನಂತರ ಕ್ಯಾಂಪಸ್ ನ ಲೇ ಔಟ್ ನಲ್ಲಿ ಸುತ್ತಾಡಿ ಮಾಹಿತಿ ಪಡೆದರು. ನೀರು ಮತ್ತು ಪರಿಸರಕ್ಕೆ ಬಹಳ ಒತ್ತು ನೀಡಲಾಗಿದೆ. ‘ಬರದ ನಾಡಿನಲ್ಲಿ ಇದೊಂದು ಮಲೆನಾಡಿನ ವಾತಾವಾರಣ’ ವಾಗುವ ಆಶಾಭಾವನೆ ವ್ಯಕ್ತ ಪಡಿಸಿದರು.

ದಾನಿಗಳು, ಭಕ್ತರು, ಚಿಂತಕರು ಭಾಗವಹಿಸಿದ್ದರು.

ಬಾಣಸಂದ್ರ: ತೊಡೆ ತಟ್ಟಿದ ಕಾಂಗ್ರೆಸ್ !

Public story


ತುರುವೇಕೆರೆ: ‘ಕಾಂಗ್ರೆಸ್ ಒಂದು ಕುಟುಂಬವಾಗಿದ್ದು, ಜಿಲ್ಲಾ ಹಾಗು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನಿಂದ ಚುನಾವಣೆ ಎದುರಿಸಿ ಗೆಲುವು ಸಾದಿಸೋಣ’ ಎಂದು ಕೆ.ಪಿ.ಸಿ.ಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಕಾರ್ಯಕರ್ತರುಗಳಿಗೆ ಕರೆಕೊಟ್ಟರು.

ತಾಲ್ಲೂಕಿನ ಮಲ್ಲಾಘಟ್ಟದ ಹೊರವಲಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಣಸಂದ್ರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾರ ಶಿಫಾರಸ್ಸು ನಡೆಯದು. ಕ್ಷೇತ್ರದ ಕಟ್ಟಕಡೆಯ ಕಾರ್ಯಕರ್ತರುಗಳ ಅಭಿಪ್ರಾಯ ಸ್ವೀಕರಿಸಿ, ಜನಪರ ಆಡಳಿತಕ್ಕಾಗಿ ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಸನ್ನಧರಾಗಬೇಕು.
ಉಪಸಭಾಪತಿ ಬಸವರಾಜ್ ಹೊರಟ್ಟಿಯವರಿಗೆ ಮಾಜಿ ಮಂತ್ರಿ ಸಿ.ಪಿ.ಯೋಗೀಶ್ವರ್ ಮನೆಯನ್ನು ಖಾಲಿ ಮಾಡಿಸಿಕೊಡಿಸಲು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಂದ ಸಾಧ್ಯವಾಗದೆ ನಿತ್ಯವೂ ಬಿ.ಎಸ್.ವೈ.ಯಡಿಯೂರಪ್ಪರ ಮನೆಗೆ ನಿಸ್ಸಹಾಯಕರಂತೆ ತೆರಳುತ್ತಿದ್ದಾರೆ. ಯಾವ ಸಂದರ್ಭದಲ್ಲಾದರೂ ಚುನಾವಣೆ ಎದುರಾಗಬಹುದು ಇನ್ನೂ ಹೇಳುವುದಾದರೆ ಮುಖ್ಯಮಂತ್ರಿಯೇ ಬದಲಾಗಬಹುದೆನೋ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಮುಖಂಡ ಚೌದ್ರಿರಂಗಪ್ಪ ಮಾತನಾಡಿ, ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಯನ್ನು ಆಲೋಚನೆಯಲ್ಲಿಟ್ಟುಕೊಂಡು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ, ಪಕ್ಷಕ್ಕೆ ಮತ್ತಷ್ಟು ಕಸುವು ತುಂಬಲು ಎಲ್ಲರೂ ಸಂಕಲ್ಪ ಮಾಡೋಣವೆಂದರು.

ಬಾಣಸಂದ್ರ ಜಿಲ್ಲಾ ಪಂಚಾಯಿತಿ ಟಿಕೀಟ್ ಪ್ರಬಲ ಆಕಾಂಕ್ಷಿ ವಸಂತಕುಮಾರ್ ಮಾತನಾಡಿ, ಹಿಂದಿನಿಂದಲೂ ಬಾಣಸಂದ್ರ ಕ್ಷೇತ್ರವೂ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ಈ ಬಾರಿಯೂ ಸಹ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸುವ ಸಾದ್ಯತೆ ಹೆಚ್ಚಿದೆ. ವಿರೋಧ ಪಕ್ಷಗಳಿಂದಲೂ ತಮ್ಮ ಪಕ್ಷದಿಂದ ಅಭ್ಯರ್ಥಿಗಳ ವಿರುದ್ದ ಪ್ರತಿಸ್ಪರ್ಧೆಗಿಳಿಸುವುದು ಸವಾಲಾಗಿದೆ. ಕಾರ್ಯಕರ್ತರು ಸಂಘಟಿತರಾಗಿ ಹೆಚ್ಚಿನ ಮತಗಳಿಂದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಣಿಯಾಗಿ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ನಾಗೇಶ್, ಜಿ.ಪಂ. ಆಕಾಂಕ್ಷಿ ಗುಡ್ಡೇನಹಳ್ಳಿಮಂಜುನಾಥ್, ಯುವ ಕಾಂಗ್ರೆಸ್ನ ವಿನಯ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜೋಗಿಪಾಳ್ಯ ಶಿವರಾಜ್, ಮುಖಂಡರಾದ ವಿಶ್ವೇಶ್ವರಯ್ಯ, ನಾರಾಯಣಗೌಡ, ದಾನಿಗೌಡ, ಕೊಳಾಲನಾಗರಾಜ್, ಉಮೇಶ್, ಕೃಷ್ಣಮೂರ್ತಿ, ನಂಜುಂಡಪ್ಪ, ಸ್ವರ್ಣಕುಮಾರ್ ಮತ್ತು ಕಾರ್ಯಕ್ತರುಗಳು ಭಾಗವಹಿಸಿದ್ದರು.

ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮ್ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ

Public story


ತುಮಕೂರು: ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಕೆ.ಜಿ.ಪರಶುರಾಮ್ ಅವರಿಗೆ ನಾಡಧ್ವನಿ ಪತ್ರಿಕಾ ಮತ್ತು ಸಾಹಿತ್ಯ ಬಳಗದಿಂದ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.

ನಗರದ ಕನ್ನಡ ಭವನದಲ್ಲಿ ಭಾನುವಾರ ನಾಡಧ್ವನಿ ಪ್ರಥಮ ಸಾಹಿತ್ಯೋತ್ಸವ ಸಮಾರಂಭದಲ್ಲಿ ಡಾ. ಕೆ.ಜಿ.ಪರಶುರಾಮ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಪ್ರೊಫೆಸರ್ ಅವರು ಕ್ರಿಯಾಶೀಲರು, ಸದಾ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಹಲವರ ಸಾಧನೆಗೆ ನೆರವಾಗಿದ್ದಾರೆ. ವಿದ್ಯಾರ್ಥಿಗಳ ಪ್ರೇರಕ ಶಕ್ತಿಯಾಗಿದ್ದಾರೆ.

ತುಮಕೂರು ವಿವಿ ಪ್ರಾಧ್ಯಾಪಕರಾಗಿರುವ ಅವರು, ಸಮಾಜ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಸಾಧನೆ ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವ ಪುರಸ್ಕಾರ ನೀಡಿವೆ. ಇವುಗಳ ಸಾಲಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಯ ಗರಿಯೂ ಮುಡಿಗೇರಿದೆ.

ತುಮಕೂರು ವಿ.ವಿ. ಸಮಾಜಕಾರ್ಯ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಶೇ ನೂರರಷ್ಟು ಉದ್ಯೋಗ ಹೆಗ್ಗಳಿಕೆಯಾಗಿದೆ.

ಭಾನುವಾರದ ಕವಿತೆ: ಸಾವು

ಆಗಸ್ಟ್ 17 ರಂದು ನಿಧನರಾದ ಖ್ಯಾತ ವೈದ್ಯೆ, ಸಾಹಿತ್ಯ ಲೇಖಕಿ ಡಾ. ಗಿರಿಜಮ್ಮ ಅವರಿ ಡಾ. ರಜನಿ ಅವರ ಕಾವ್ಯ ನಮನ.

ಸಾವು
*****

ಸಾವಿಗೆ ಕಣ್ಣಿಲ್ಲ
ಹೃದಯ ಮೊದಲೇ ಇಲ್ಲ…

ಸಾವಿಗೆ ಗೊತ್ತೆ?
ಇದು ಹೃದಯವಂತಳಾಗಿದ್ದ ಡಾಕ್ಟರ್ ಎಂದು..

ಮಧ್ಯರಾತ್ರಿ ಮಂಚದಲ್ಲಿ ಒಬ್ಬಳೇ ಕುಳಿತು
ಬರೆದಳು ಸ್ತ್ರೀಗಾಗಿ ಎಂದು …

ತನ್ನ ಚಿತ್ರವ ಬಿಟ್ಟು ನೊಂದ
ಸ್ತ್ರೀಯರ ಬದುಕ ಚಿತ್ರಿಸಿದಳೆಂದು ?

ಹೆರಿಗೆ ಬ್ಯಾನೆ ತಿಂದ ತಾಯರಿಗೆ
ತಾಯದಳೆಂದು ..

ಶ್ಯಾಮಲ ವರ್ಣದ ಸ್ತೀಯ
ಹೃದಯ ಕಾಮನ ಬಿಲ್ಲು ಆಗಿತ್ತೆಂದು …

ಕಥೆ ಬರೆದವಳ ಜೀವನ
ಮುಗಿಯದ ಕಥೆ ಆಗಿತ್ತೆಂದು…

ನೆನಪುಗಳಿಂದ ಕಾಡಿದ ಜೀವನ
ಚಿತ್ರ ಮಸುಕಾಗಲು ಬಿಟ್ಟಳೆಂದು…

ಬಿಟ್ಟಿದ್ದರೆ ಇನ್ನೂ ಬಾಡದ
ಹೂವು ಆಗಿತ್ತೆಂದು…

ಮೋಸ ಮಾಡದೇ
ಮೋಸ ಹೋದವಳೆಂದು…

ಹೇಳದೇ ಹೋದ ಕಥೆಗಳು
ನೂರಿವೆಯೆಂದು…

ಗರಿಗರಿ ಹತ್ತಿ ಸೀರೆಯಲ್ಲಿ
ಸುತ್ತಿದ್ದ ಪಿಸುಗುಡುವ ಆತ್ಮವಿತ್ತೆಂದು..

ಓದಿ ಮನಸ್ಸುಗಳನ್ನು
ಅರಿಯಲಾದಳು ಕ್ರೂರಿ ಹೃದಯಗಳನ್ನು..

ಹೋಗಿ ಬಾ, ಯಾರೂ ಹಿಂಸಿಸದ
ನೆನಪು ಉಂಟು ಮಾಡದ

ದೇವ ಸನ್ನಿದಿಗೆ
ಶ್ಯಾಮಲ ರಾಧೆ…

ಯಾರಿಗೆ ಬಂತು ಸ್ವಾತಂತ್ರ್ಯ?

0

ಹೆತ್ತೇನಹಳ್ಳಿ ಮಂಜುನಾಥ್


ದೇಶಕೆ ದುಡಿದ ತೋಳಿಗೆ,
ಬೆವರ ಸುರಿಸಿದವರ ಕೈಯಿಗೆ,
ಹೊತ್ತು ಸಲಹಿದ ತಾಯಿಯ ಮಡಿಲಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ,
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಮಲವ ಹೊತ್ತ ತಲೆಗಳಿಗೆ,
ಕಲ್ಲು ಕುಟ್ಟುವ ಕೈಗಳಿಗೆ,
ಉತ್ತಿ ಬಿತ್ತಿದ ರೈತನಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಚಪ್ಪಲಿ ಹೊಲೆದ ಚನ್ನನಿಗೆ,
ಮೂಟೆ ಹೊರುವ ಮುನಿಯನಿಗೆ,
ರದ್ದಿಯ ಆಯ್ದು ಶುದ್ದಿಗೊಳಿಸಿದವಗೆ
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಸ್ವಚ್ಛಗೊಳಿಸಿದ ಸ್ವಚ್ಛಂದ ಮನಸ್ಸಿಗೆ,
ಕಂಬಳಿ ಮಾಡಿ ಬೆಚ್ಚಗಿರಿಸಿದ ಸಿದ್ದಯ್ಯನಿಗೆ,
ಮಡಿಯ ಮಾಡಿದ ಮಾದೇವನಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಕೂಗಿ ಕರೆದರೂ, ಸಾರಿ ಕೂಗಿದರೂ ಸಿಗದೇ ಇದ್ದ ಸ್ವಾತಂತ್ರ್ಯ,
ಹಸಿದ ಹೊಟ್ಟೆಗೆ, ಬೆತ್ತಲ ಮೈಗೆ ಸಿಗದೇ ಇದ್ದ ಸ್ವಾತಂತ್ರ್ಯ
ನೆಟ್ಟಗೋಯ್ತು ಮೈಗಳ್ಳರ ಮನೆಗೆ,
ಬಂಡವಾಳ ಶಾಹಿಯ ತಿಜೋರಿಗೆ,
ಅಧಿಕಾರಸ್ಥರ ಜೇಬೊಳಗೆ….!!!!

ನನ್ನಮ್ಮನಿಗೊಂದು ಕಡೆಯ ಪತ್ರ

0

2014 ರಲ್ಲಿ ಇರಾನಿನಲ್ಲಿ ಅತ್ಯಚಾರಕ್ಕೆ ಒಳಗಾದಾಕೆ ಆರೋಪಿಯನ್ನು ಕೊಂದ ಆರೋಪದ ಮೇಲೆ ಬಂಧನಕ್ಕೆ ಒಳಗಾಗುವಳು. ಗಲ್ಲು ಶಿಕ್ಷೆ ಪ್ರಕಟವಾದಾಗ ಆಕೆ ತನ್ನ ತಾಯಿಗೆ ಒಂದು ಪತ್ರ ಬರೆಯುವಳು. Time of India ದಲ್ಲಿ ಪ್ರಕಟವಾಗಿದ್ದ ಈ ಕವನದ ಭಾವಾನುವಾದವನ್ನು ತುಮಕೂರು ವಿ.ವಿ. ಪ್ರಾಧ್ಯಾಪಕಿಯಾದ ಕವಯತ್ರಿ ಡಾ. ಗಿರಿಜಾ ಅವರು ಮಾಡಿದ್ದಾರೆ.


ಅಮ್ಮ, ಓ ಅಮ್ಮ,
ನನ್ನ ಪ್ರೀತಿಯ ಅಮ್ಮ
ನಾನಿಂದು ಪತ್ರ ಬರೆಯುವ ಹೊತ್ತು
ಸರಪಳಿಗಳ ಹಿಂದೆ ಒಬ್ಬೊಂಟಿಯಾಗಿ
ಸಾವ ಎದುರು ನೋಡುತ್ತಾ
ಕುಳಿತಿಹೆನು….

ಜಗವ ತೊರೆಯುವ ಮುನ್ನ
ನನ್ನ ಮನದಾಳದಿಂಗಿತವ
ನಿನ್ನೊಂದಿಗೆ ಹೇಳುವ ಇರಾದೆ
ಕೊನೆಯ ಕ್ಷಣ ಕಳೆಯುವ ಆಸೆ
ಆದರೆ….
ನಾನಿರುವೆ ಸರಳುಗಳ ಹಿಂದೆ

ಕೈಹಿಡಿದು ಮುನ್ನಡೆಸಿ
ಕುಗ್ಗದೆ ಜಗವ ನೋಡುವ ಪರಿ
ಕಲಿಸಿದೆ ನೀನಂದು
ಮುಗ್ಗರಿಸಿ ಎಡವಿದಾಗ
ದಾರಿ ತೋರಿ ಬದುಕುವುದ ಕಲಿಸಿದಾಕೆ…
ಆದರಿಂದು ನಾನಿರುವೆ ಸರಳುಗಳ ಹಿಂದೆ…..

ಏನೆಂದು ಹೇಳಲಿ..‌
ನನ್ನ ಮೈಮನಗಳ ಘಾಸಿಗೊಳಿಸಿ
ನನ್ನಂತರಂಗದ ಕೂಗು ಕೇಳಿಸಿಕೊಳ್ಳದ
ನನ್ನ ಕಣ್ಣೀರಿಗೂ ಕರಗದವನ
ನಾ ಕೊಂದುಬಿಟ್ಟೆ
ಹಾಗಾಗಿ ನಾನಿರುವೆ ಸರಳುಗಳ ಹಿಂದೆ…..ಇಂದು

ಅಮ್ಮ ನಿನಗೆ ಗೊತ್ತೇ
ನಾ ಬಿಟ್ಟು ಬಿಡೆಂದು ಬೇಡಿದೆ
ಕಾಲು ಹಿಡಿದು ಕಣ್ಣೀರಿಟ್ಟೆ
ಕೋಪಗೊಂಡೆ
ಕಾರಣ ಕೇಳಿದೆ
ನ್ಯಾಯ ನೀಡಿರೆಂದೆ….

ಆದರೆ,
ಕಣ್ಣಿಲ್ಲದ, ಕಿವಿಯಿಲ್ಲದ
ಮನವಿಲ್ಲದ ಜನವೆಂದರು
ಜಗದ ನಿಯಮ ಪಾಲಿಸದವಳೆಂದು
ನಾ ಬದುಕಬಾರದೆಂದು….

ನಾ ಕೇಳುವೆ ಅಮ್ಮ
ನನ್ನಂತರಂಗಕ್ಕಾದ ನೋವು
ಯಾತನೆ, ಕೂಗು
ಯಾಕೆ ಅರ್ಥವಾಗದು
ಯಾಕೆ ಕೇಳಿಸದು
ನನಗಿಲ್ಲವೇ ಬದುಕು
ನನಗಿಲ್ಲವೇ ಆತ್ಮ ಗೌರವ
ನನಗೆ ಬೇಡವೇ ನ್ಯಾಯ

ಅದಕ್ಕೆಂದರವರು,
ನೀ ಹೆಣ್ಣು….

ನೀನಾದರೂ ಕೊಡಿಸುವೆಯಾ
ನನಗೆ ನ್ಯಾಯ
ಕ್ಷಮಿಸಿಬಿಡು ಕೊನೆಯ ಬಾರಿಗೆ
ಈ ನಿನ್ನ ಮಗಳ…..
ಕ್ಷಮಿಸುವೆಯಾ……