Saturday, May 9, 2026
Google search engine
Home Blog Page 133

‌ಭಾನುವಾರದ ಕವಿತೆ : ಮೋಡ

ಡಾII ರಜನಿ.ಎಂ


ಕಪ್ಪು ಮೋಡದ
ಹಿಂದೆ ಉರಿಯುವ ಸೂರ್ಯ..
ಅವನೊಂದಿಗಿನ ದುಗುಡ ಹರಿದು

ನೀರಾಗಿ ತುಂತುರು
ಜಡಿ ಜಿಟಿ ಜಿಟಿ..
ಜಗಳ ತಾರಕಕ್ಕೇರಿ ಗುಡುಗು ಸಿಡಿಲು

ಎಲ್ಲೋ ಒಮ್ಮೊಮ್ಮೆ ಮಿಂಚು
ಹುಯ್ದು ಹುಯ್ದು ಬರಿದಾಗಿ..
ದಿನ ದಿನ ಕಳೆದು ಬಿಳಿಯಾಗಿ

ಹಗುರಾಗಿ ಟಪಟಪನೆ
ಬೀಳುವ ಹನಿ ಒಂದೊಂದು ಥರಾ..
ಬಿದ್ದಾಗಲೇ ಗೊತ್ತಾಗುವುದು

ನೆನೆಯದೇ ನಿಂತು ಕಿಟಕಿಯಿಂದ
ನೋಡಿ ನಡುಗಿ ತಣ್ಣನೆ ಗಾಳಿಗೆ ..
ಸಿಡಿದ ನೀರಿಗೆ

ನಿಂತು ಸುರಿವ ಮಳೆಯಲ್ಲಿ
ಮುಖದ ಮೇಲೆ ಬಿದ್ದ ನೂರಾರು ಹನಿ..
ಕೈಲಿ ಹಿಡಿದ ಆಣಿಕಲ್ಲು

ಕಣ್ಣಿಗೆ ಕೆನ್ನೆಗೆ ಬಿದ್ದಹನಿ
ಹರಿದು ಬಾಯಿಗೆ..
ನುಂಗಿ ನೀರಾಗಿ

ಹನಿಯ ರಭಸ
ಕೂಡಿಟ್ಟ ದುಃಖಕ್ಕೆ ..
ಪ್ರೀತಿಗೆ ಅಳತೆಗೋಲು

ಸುರಿದು ಬರಿದಾಗಿ
ಕರಗಿದ ಮೋಡ..
ಕಾಣೆಯಾಗಿ

ಕಾದು ಪ್ರೀತಿ
ಮತ್ತೊಮ್ಮೆ ..
ಮಡುಗಟ್ಟಿ ಮೋಡವಾಗಲು

ಒಲವು ಭಾರವಾಗಿ
ಕುಸಿದು ..
ಸುರಿಸಿದ ಮಳೆ

ಹರಿವ ನೀರಲ್ಲಿ
ಮೂಡಿದ ಚಿತ್ರ..
ತಿರುಗಾ ಮರುಗಾ

ಕಪ್ಪನೆ ಮೋಡ ಮಡುಗಟ್ಟಿ ಮಳೆ ಮಿಂಚು ಗುಡುಗು, ಮನದಲ್ಲಿ ದುಃಖ ಮಡುಗಟ್ಟಿದರೂ ಹಾಗೆಯೇ, ಹೃದಯದಲ್ಲಿ ಪ್ರೀತಿ ಮಡುಗಟ್ಟಿದರೂ ಹಾಗೆಯೇ ಸುರಿಯಬೇಕು. ಈ ಸಮೀಕರಣದಲ್ಲಿ ಸುರಿಯುತ್ತಿರುವ
ಮಳೆಗೆ ಹೇಳಿ ಮಾಡಿಸಿದಂತೆ ಇದೆ ಕವನ .

ರಾಜಕಿಯ ವಿಚಾರದಲ್ಲಿ ಸ್ವಾಮಿಜಿಗಳು ಪ್ರವೇಶ ಸರಿಯಲ್ಲ ಎಂದು ಸಿ.ಕೆ.ಪ್ರಕಾಶ್ ಹೇಳಿಕೆ.

0

ಗುಬ್ಬಿ :
ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಪಕ್ಷಕ್ಕೆ,
ವರಿಷ್ಠರಿಗೆ ಬಿಟ್ಟ ವಿಚಾರ ಇದರಲ್ಲಿ ಸ್ವಾಮಿಜಿಗಳು ಮಧ್ಯಪ್ರವೇಶ ಮಾಡುತ್ತಿರುವುದು
ಮಠ ಹಾಗೂ ಸ್ವಾಮೀಜಿಗಳ ಮೇಲೆ ಅಪಾರವಾದ ಗೌರವ ಮತ್ತು ಭಕ್ತಿ
ಇಟ್ಟುಕೊಂಡಿರುವ ಭಕ್ತರ ಮನಸ್ಸಿಗೆ ಬಹಳ ನೋವಾಗಿದೆ. ಸ್ವಾಜೀಗಳು ಯಾರೇ
ಮುಖ್ಯಮಂತ್ರಿಯಾದರು ಸ್ವಾಗತಿಸಬೇಕೇ ಹೊರತು ಇಂತಹವರನ್ನೇ
ಮುಖ್ಯಮಂತ್ರಿಯಾಗಿ ಮುಂದುವರೆಸಿ ಎಂದು ಹೇಳುವುದು ಸರಿಯಲ್ಲ ಎಂದು ರೈತ
ಸಂಘದ ಜಿಲ್ಲಾ ಸಂಚಾಲಕ ಸಿ.ಕೆ. ಪ್ರಕಾಶ್ ಹೇಳಿಕೆ ನಿಡಿದರು
ತಾಲ್ಲೂಕಿನ ಚಂಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ
ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಸ್ವಾಮೀಜಿಗಳು ತುಂಬಾ
ಶ್ರಮತೆಗೆದುಕೊಂಡಿದ್ದಾರೆ. ಸಮಾಜದ ಉಳಿವಿಗಾಗಿ, ಸಮಾಜದ ಕಾರ್ಮಿಕರು, ರೈತರು
ಸೇರಿದಂತೆ ಹಲವು ವರ್ಗದ ಜನರ ಒಳಿತಿಗೆ ಸ್ವಾಮಿಜಿಗಳು ಶ್ರಮಿಸಬೇಕು.
ಪ್ರೆಟ್ರೋಲ್ ಬೆಲೆ ಏರಿಕೆ, ಕಾರ್ಮಿಕರು, ರೈತರು ಕೋವಿಡ್ ನಿಂದ ಸಂಕಷ್ಟಕ್ಕೆ
ಒಳಗಾದಗ ಸ್ವಾಮೀಜಿಗಳು ಇಷ್ಟು ಅಸಕ್ತಿ ತೋರಿಸಲಿಲ್ಲ, ಈಗ ಮುಖ್ಯಮಂತ್ರಿ
ಬದಲಾವಣೆ ವಿಚಾರವಾಗಿ ಇಷ್ಟೋಂದು ಆಸಕ್ತಿ ತೋರುತಿರುವುದು ಸ್ವಾಮೀಜಿಗಳ ಬಗ್ಗೆ
ಸಮಾಜದಲ್ಲಿ ತಪ್ಪು ಸಂದೇಶ ಹೊಗುತ್ತದೆ ಇದನ್ನು ಪೂಜ್ಯರು ಮನಗಾಣಬೇಕಿದೆ
ಎಂದರು.
ಮಠಗಳಬಗ್ಗೆ ಮತ್ತು ಸ್ವಾಮೀಜಿಗಳ ಬಗ್ಗೆ ಭಕ್ತವೃಂಧಕ್ಕೆ ಮತ್ತು
ಸ್ವಾಮೀಜಿಗಳ ಬಗ್ಗೆ ಸಮಾಜದಲ್ಲಿ ಅಪಾರ ಗೌರವ ಇದೆ ಹಾಗಾಗಿ ಸ್ವಾಮೀಜಿಗಳು ರಾಜಕಾರಣ
ಮಾಡಬಾರದು ಯಾರೇ ಮುಖ್ಯಮಂತ್ರಿ ಆದರೂ ಸ್ವಾಗತಿಸಬೇಕು.ಮುಖ್ಯಮಂತ್ರಿ
ಬದಲಾವಣೆ ಅವರ ಪಕ್ಷಕ್ಕೆ, ವರಿಷ್ಠರಿಗೆ ಬಿಟ್ಟ ವಿಚಾರ ಆದರೆ ಸ್ವಾಮೀಜಿಗಳಿಗೆ ಅಲ್ಲ ಹಾಗಾಗಿ
ಸ್ವಾಮೀಜಿಗಳು ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಮಾಧ್ಯಗಳಲ್ಲಿ ಬರುವ ವರದಿಗಳನ್ನು ನೋಡಿದರೆ ಅಚ್ಛರ್ಯವಾಗುತ್ತದೆ
ಸ್ವಾಮೀಜಿಗಳು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಬೇಡಿ ಎಂದು ಹೇಳುವುದು
ಸರಿಯಲ್ಲ ಸ್ವಾಮೀಜಿಗಳು ಬೇಕಾದರೆ ಮಠಗಳಿಗೆ ಏನು ಬೇಕಾದರು
ಕೇಳಿಕೊಳ್ಳಲಿ.ಮಠಮಾನ್ಯಗಳು ಉಳಿಯಬೇಕು. ಸ್ವಾಮೀಜಿಗಳು ರಾಜಕೀಯ
ಮಾಡಿದರೆ ಭಕ್ತರು ನೀಡುವ ಗೌರವಕ್ಕೆ ಚುತಿಯಾಗಬಾರದು ಎಂದರು.
24 ಗುಬ್ಬಿ ಪೋಟೋ01: ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಕೆ. ಪ್ರಕಾಶ್
ಮಾತನಾಡಿದರು.

ಭಕ್ತರಿಗೆ ಬೇಸರ ತರಿಸಿದ ಸ್ವಾಮೀಜಿ ನಡೆ

Public story


ಗುಬ್ಬಿ : ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲವಣೆ ವಿಚಾರ ಅವರ ಪಕ್ಷಕ್ಕೆ,
ವರಿಷ್ಠರಿಗೆ ಬಿಟ್ಟ ವಿಚಾರ ಇದರಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶ ಮಾಡುತ್ತಿರುವುದು
ಮಠ ಹಾಗೂ ಸ್ವಾಮೀಜಿಗಳ ಮೇಲೆ ಅಪಾರವಾದ ಗೌರವ ಮತ್ತು ಭಕ್ತಿ
ಇಟ್ಟುಕೊಂಡಿರುವ ಭಕ್ತರ ಮನಸ್ಸಿಗೆ ಬಹಳ ನೋವಾಗಿದೆ. ಸ್ವಾಜೀಗಳು ಯಾರೇ
ಮುಖ್ಯಮಂತ್ರಿಯಾದರು ಸ್ವಾಗತಿಸಬೇಕೇ ಹೊರತು ಇಂತವರನ್ನೇ
ಮುಖ್ಯಮಂತ್ರಿಯಾಗಿ ಮುಂದುವರೆಸಿ ಎಂದು ಹೇಳುವುದು ಸರಿಯಲ್ಲ ಎಂದು ರೈತ
ಸಂಘದ ಜಿಲ್ಲಾ ಸಂಚಾಲಕ ಸಿ.ಕೆ. ಪ್ರಕಾಶ್ ಹೇಳಿದರು.

ತಾಲೂಕಿನ ಚಂಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ
ಮುಖ್ಯಮಂತ್ರಿಗಳ ಬದಲಾವಣೆ ವಿಚಾರವಾಗಿ ಸ್ವಾಮೀಜಿಗಳು ತುಂಬಾ
ಶ್ರಮತೆಗೆದುಕೊಂಡಿದ್ದಾರೆ. ಸಮಾಜದ ಉಳಿವಿಗಾಗಿ, ಸಮಾಜದ ಕಾರ್ಮಿಕರು, ರೈತರು
ಸೇರಿದಂತೆ ಹಲವು ವರ್ಗದ ಜನರ ಒಳಿತಿಗೆ ಸ್ವಾಮಿಜಿಗಳು ಶ್ರಮಿಸಬೇಕು.
ಪ್ರೆಟ್ರೋಲ್ ಬೆಲೆ ಏರಿಕೆ, ಕಾರ್ಮಿಕರು, ರೈತರು ಕೋವಿಡ್ ನಿಂದ ಸಂಕಷ್ಟಕ್ಕೆ
ಒಳಗಾದಗ ಸ್ವಾಮೀಜಿಗಳು ಇಷ್ಟು ಮುತವರ್ಜಿ ತೋರಿಸಲಿಲ್ಲ, ಈಗ ಮುಖ್ಯಮಂತ್ರಿ
ಬದಲಾವಣೆ ವಿಚಾರವಾಗಿ ಇಷ್ಟೋಂದು ಆಸಕ್ತಿ ತೋರುತಿರುವುದು ಸ್ವಾಮೀಜಿಗಳ ಬಗ್ಗೆ
ಸಮಾಜದಲ್ಲಿ ತಪ್ಪು ಸಂದೇಶ ಹೊಗುತ್ತದೆ ಇದನ್ನು ಪೂಜ್ಯರು ಮನಗಾಣಬೇಕಿದೆ
ಎಂದರು.

ಮಠಗಳಬಗ್ಗೆ ಮತ್ತು ಸ್ವಾಮೀಜಿಗಳ ಬಗ್ಗೆ ಭಕ್ತವೃಂಧಕ್ಕೆ ಮತ್ತು
ಸ್ವಾಮೀಜಿಗಳ ಬಗ್ಗೆ ಸಮಾಜದಲ್ಲಿ ಅಪಾರ ಗೌರವ ಇದೆ ಹಾಗಾಗಿ ಸ್ವಾಮೀಜಿಗಳು ರಾಜಕಾರಣ
ಮಾಡಬಾರದು ಯಾರೇ ಮುಖ್ಯಮಂತ್ರಿ ಆದರೂ ಸ್ವಾಗದಿಸಬೇಕು.ಮುಖ್ಯಮಂತ್ರಿ
ಬದಲಾವಣೆ ಅವರ ಪಕ್ಷಕ್ಕೆ, ವರಿಷ್ಠರಿಗೆ ಬಿಟ್ಟ ವಿಚಾರ ಆದರೆ ಸ್ವಾಮೀಜಿಗಳಿಗೆ ಅಲ್ಲ ಹಾಗಾಗಿ
ಸ್ವಾಮೀಜಿಗಳು ರಾಜಕೀಯ ಮಾಡುವುದು ಸಲ್ಲದು ಎಂದರು.

ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿದರೆ ಅಚ್ಛರ್ಯವಾಗುತ್ತದೆ
ಸ್ವಾಮೀಜಿಗಳು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಬೇಡಿ ಎಂದು ಹೇಳುವುದು
ಸರಿಯಲ್ಲ ಸ್ವಾಮೀಜಿಗಳು ಬೇಕಾದರೆ ಮಠಗಳಿಗೆ ಏನು ಬೇಕಾದರು
ಕೇಳಿಕೊಳ್ಳಲಿ.ಮಠಮಾನ್ಯಗಳು ಉಳಿಯಬೇಕು. ಸ್ವಾಮೀಜಿಗಳು ರಾಜಕೀಯ
ಮಾಡಿದರೆ ಭಕ್ತರು ನೀಡುವ ಗೌರವಕ್ಕೆ ಚುತಿಯಾಗಬಾರದು ಎಂದರು.

ಟೊಕಿಯೊ ಒಲಿಂಪಿಕ್ಸ್ ವರ್ಣರಂಜಿತ ಪ್ರಾರಂಭ

ಟೋಕಿಯೊದಲ್ಲಿ ಶುಕ್ರವಾರ ನೆಡೆದ ಒಲಿಂಪಿಕ್ಸ್ ಉದ್ಘಾಟನೆ ಸಮಾರಂಭದ ಪಥಸಂಚಲನದಲ್ಲಿ ಪಾಲುಗೊಂಡಿದ್ದ  ಭಾರತ ತಂಡದ ಮನ್‌ಪ್ರೀತ್ ಸಿಂಗ್ ಮತ್ತು ಮೇರಿ ಕೋಮ್ ಅವರು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದರು .

ಟೋಕಿಯೊ (ಪಿಟಿಐ): ಕೋವಿಡ್ ಕಾಲ ಘಟ್ಟದ ಸವಾಲುಗಳನ್ನು ಎದುರಿಸುವ ಗಟ್ಟಿ ವಿಶ್ವಾಸದೊಂದಿಗೆ ಶುಕ್ರವಾರ ಟೋಕಿಯೊ ಒಲಿಂಪಿಕ್ –2020 ಉದ್ಘಾಟನೆಯಾಯಿತು.

ಆತಿಥೇಯ ದೇಶದ ಟೆನಿಸ್ ತಾರೆ ನವೊಮಿ ಒಸಾಕಾ ಅವರು ಕ್ರೀಡಾ ಜ್ಯೋತಿಯನ್ನು ಪ್ರಜ್ವಲಿಸಿದರು. ಜಪಾನಿನ ಚಕ್ರವರ್ತಿ ನರುಹಿಟೊ ಕೂಟವನ್ನು ಉದ್ಘಾಟಿಸಿದರು.

ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಪಾನ್‌ ದೇಶದ ಅಭಿವೃದ್ಧಿಯ ಕಥೆ ಹೇಳುವ ರೂಪಕಗಳು ಪ್ರದರ್ಶನಗೊಂಡವು. ಈ ಸಂದರ್ಭದಲ್ಲಿ ನಡೆದ ತಂಡಗಳ ಪಥಸಂಚಲನದಲ್ಲಿ ಭಾರತ ತಂಡದ 19 ಅಥ್ಲೀಟ್‌ಗಳು ಭಾಗವಹಿಸಿದ್ದರು.  ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸಿಂಗ್ ತಾರೆ ಮೇರಿ ಕೋಮ್ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿದರು.

ಭಾರತ ತಂಡದಲ್ಲಿ 228 ಸದಸ್ಯರಿ ದ್ದಾರೆ. ಅದರಲ್ಲಿ 120 ಕ್ರೀಡಾಪಟುಗಳು ಇದ್ದಾರೆ. ಕೂಟವು ಆಗಸ್ಟ್ 8ರಂದು ಮುಕ್ತಾಯವಾಗಲಿದೆ. ಹೋದ ವರ್ಷದ ಜುಲೈನಲ್ಲಿ ಆಯೋಜನೆಗೊಳ್ಳಬೇಕಿದ್ದ ಟೂರ್ನಿಯನ್ನು ಕೋವಿಡ್‌ ಪಿಡುಗಿನ ಕಾರಣ ಮುಂದೂಡಲಾಗಿತ್ತು.

ಮದ್ಯಂತರ ಚುನಾವಣೆ ಸೂಚನೆ, ರಾಜ್ಯ ಕಾಂಗ್ರೆಸ್ ನಾಯಕರು ತುಮಕೂರಲ್ಲಿ ಸಭೆ

ತುಮಕೂರು:

ನಗರದಲ್ಲಿ ಶನಿವಾರ ಐದು ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಭೆ ಆರಂಭವಾಗಿದೆ.

ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಪರಿಷತ್ ಚುನಾವಣೆಗೆ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಗುತ್ತದೆ.

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆ ಆರಂಭಕ್ಕೂ ಮುನ್ನ ಮಾತನಾಡಿ, ಸಭೆಯಲ್ಲಿ ಚುನಾವಣೆ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗುತ್ತದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಕಡಿಮೆ. ಒಬ್ಬ ಭ್ರಷ್ಟ ಮುಖ್ಯಮಂತ್ರಿ ಹೋಗಿ ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಅಧಿಕಾರಕ್ಕೆ ಬರುತ್ತಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನೆರೆ ಸಂತ್ರಸ್ತರಿಗೆ ನೆರವಾಗಲು ಸತೀಶ್ ಜಾರಕಿಹೊಳಿ, ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಪಕ್ಷದ ವತಿಯಿಂದ ಸಮಿತಿ ರಚಿಸಲಾಗಿದೆ. ಈ ತಂಡ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ನೆರವಾಗಲಿದೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಪಾವಗಡ ಶಾಸಕ ವೆಂಕಟರವಣಪ್ಪ ಸೇರಿದಂತೆ ಜಿಲ್ಲೆ ಹಾಗೂ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇಡೀ ದಿನ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ದ್ವಿತೀಯ ಪಿಯು : ಶೇಷಾದ್ರಿಪುರಂ ಕಾಲೇಜಿಗೆ ಹೆಚ್ಚು ಡಿಸ್ಟಿಂಕ್ಷನ್

ತುಮಕೂರು: ನಗರದ ಶೇಷಾದ್ರಿ ‌ಪುರಂ‌ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮೆರೆದಿದೆ.

ಉತ್ತಮ, ಗುಣಮಟ್ಟದ ಶಿಕ್ಷಣಕ್ಕೆ ನಗರದಲ್ಲಿ ಹೆಸರುವಾಸಿಯಾಗಿರುವ ಶೇಷಾದ್ರಿಪುರಂ‌ ಶಿಕ್ಷಣ ಸಂಸ್ಥೆಯು ಈ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜಿನ 114 ವಿದ್ಯಾರ್ಥಿಗಳು ಡಿಸ್ಟಿಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ ಎಂದು‌ ಪ್ರಾಂಶುಪಾಲರಾದ‌ ಬಿ.ವಿ.ಬಸವರಾಜು ಅವರು ತಿಳಿಸಿದ್ದಾರೆ.

317‌‌ ವಿದ್ಯಾರ್ಥಿಗಳು ಪ್ರಥಮ ದರ್ಜೆ ಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ, ವಾಣಿಜ್ಯ ವಿಭಾಗ, ಈ ಎರಡೂ ವಿಭಾಗಳಲ್ಲಿ ಅದ್ವಿತೀಯ ಸಾಧನೆ ತೋರಲಾಗಿದೆ.‌ಕಳೆದ ವರ್ಷವೂ ಕಾಲೇಜು ಫಲಿತಾಂಶದಲ್ಲಿ ಸಾಧನೆ ಮೆರೆದಿತ್ತು ಎಂದು ಹೇಳಿದರು.

ಸಂಸ್ಥೆಯ ಗೌರವ ಪ್ರಧಾನ ಕಾರ್ಯ‌ದರ್ಶಿಗಳಾದ‌ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶೈಕ್ಷಣಿಕ‌ ಸಂಸ್ಥೆ ಅನೇಕ ಹೆಗ್ಗಳಿಕೆಯನ್ನು ಹೊಂದಿದೆ. ನೈತಿಕ ಶಿಕ್ಷಣದ ವಿಷಯದಲ್ಲೂ ಕಾಲೇಜು ಇಡೀ ರಾಜ್ಯಕ್ಕೆ ಹೆಸರುವಾಸಿಯಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ.‌ ಇದು ಕಾಲೇಜಿನ ಹೆಗ್ಗಳಿಕೆ ಎನಿಸಿದೆ.

ಪ್ರತಿ‌ವರ್ಷ ಇಲ್ಲಿನ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಸರ್ಕಾರಿ ಕೋಟಾದ ಸೀಟು ಪಡೆದು ಕೊಳ್ಳುತ್ತಿದ್ದಾರೆ. ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿನ ದೇಗುಲವಾಗಿದೆ. ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಶೇಷಾದ್ರಿಪುರಂ
ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಅಟೊ ಚಾಲಕರಗೆ ಡಿಲ್ ವಿತರಣೆ

0

ಆಟೋ ಚಾಲಕರಿಗೆ ಡಿ.ಎಲ್ ವಿತರಣೆ : ಡಿ. ವೈ. ಎಸ್. ಪಿ. ರಾಮಕೃಷ್ಣ
ಪಾವಗಡ ಜು 22: ಪೊಲೀಸ್ ಇಲಾಖೆ ಹಾಗೂ ಆಟೋ ಚಾಲಕರು ಉತ್ತಮ ಬಾಂದವ್ಯ ಹೊಂದಿದಾಗ ಮಾತ್ರ ಕಾನೂನು ಸುವ್ಯವಸ್ಥೆ ತಡೆಗಟ್ಟಲು ಮಾತ್ರ ಸಾಧ್ಯ ಎಂದು ಮಧುಗಿರಿ ಡಿ ವೈ ಎಸ್ ಪಿ ರಾಮಕೃಷ್ಣ ಕರೆ ನೀಡಿದರು.
ಪಾವಗಡ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ವತಿಯಿಂದ ಆಟೋ ಚಾಲಕರಿಗೆ
ಡಿ. ಎಲ್ ವಿತರಿಸಿ ಮಧುಗಿರಿ ಡಿ.ವೈ.ಎಸ್. ಪಿ.ರಾಮಕೃಷ್ಣ ರವರು ಮಾತನಾಡುತ್ತ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಾವಗಡ ಪಟ್ಟಣದಲ್ಲಿ ಆಟೋ ದಾಖಲಾತಿಗಳ ನವೀಕರಣ ಗೊಳಿಸುವ ಶಿಬಿರವನ್ನು ಏರ್ಪಡಿಸಲು ಸಾರಿಗೆ ಇಲಾಖೆ ಯೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡುವಾಗಿ ತಿಳಿಸಿದರು.
ಪಾವಗಡ ಆರಕ್ಷಕ ವೃತ್ತ ನೀರಿಕ್ಷಕರಾದ ಲಕ್ಷ್ಮಿಕಾಂತ್ ರವರು ಮಾತನಾಡುತ್ತ ಪಾವಗಡ ಪಟ್ಟಣದ ಆಟೋ ನಿಲ್ದಾಣಗಳ ಸರಥಿ ಸಾಲಿನ ವ್ಯವಸ್ಥೆಗಾಗಿ ಬ್ಯಾರಿಕೆಡ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹಾಗೂ ಆಟೋ ಚಾಲಕರು ಕಡ್ಡಾಯವಾಗಿ ದಾಖಲಾತಿಗಳನ್ನು ಹೊಂದಿ ಪೊಲೀಸ್ ಇಲಾಖೆ ವತಿಯಿಂದ ಡಿಸ್ ಪ್ಲೇ ಕಾರ್ಡ್ ನೀಡುವುದಾಗಿ ತಿಳಿಸಿದರು.


ಸಮಾಜ ಸೇವಕರು ನೇರಳಕುಂಟೆ ನಾಗೇಂದ್ರಕುಮಾರ್ ಮಾತನಾಡುತ್ತ ಆಟೋ ಚಾಲಕರು ಕಷ್ಟದಲ್ಲಿದ್ದರು ಸಹ ಲಾಕ್ ಡೌನ್ ಸಂಕಷ್ಟದಲ್ಲಿ ಭಾಗಿಯಾಗಿ ಪ್ರತಿನಿತ್ಯ ಉಪಹಾರ ನೀಡುರುವುದನ್ನು ಶ್ಲಾಘೀಸುತತ್ತಾ , ವಾಲ್ಮೀಕಿ ಆಟೋ ನಿಲ್ದಾಣದ ಕನ್ನಡ ಧ್ವಜ ಸ್ಥoಭದ ಕಾಮಗಾರಿಯನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸಿ ಧ್ವಜಾರೋಹಣ ಮಾಡುವುದಾಗಿ ಹಾಗೂ ವಾಲ್ಮೀಕಿ ಆಟೋ ನಿಲ್ದಾಣ ಒಂದು ಭಾಗದ ಬ್ಯಾರಿಕೆಡ್ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡುತ್ತ ಆಟೋ ಚಾಲಕರು ಸಂಯಮದಿಂದ ಆಟೋ ಚಾಲನೆ ಮಾಡಿಕೊಂಡು ಕಾನೂನು ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕರೆ ನೀಡಿದರು.ಮುಂದಿನ ದಿನಗಳಲ್ಲಿ ಆಟೋ ಚಾಲಕರ ಕಷ್ಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು


ನೂತನ ರೋಟರಿ ಅಧ್ಯಕ್ಷರಾದ ಶ್ರೀಧರ್ ಗುಪ್ತ ರವರು ಕಾರ್ಮಿಕ ಇಲಾಖೆ ಹಾಗೂ ರೋಟರಿ ಸಂಸ್ಥೆ ವತಿಯಿಂದ ಕಾರ್ಮಿಕ ಕಾರ್ಡ್ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಆಟೋ ಚಾಲಕರ ಕೋರಿಕೆಯ ಮೇರೆಗೆ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರು ಹಾಗೂ ಸಮಾಜ ಸೇವಕರು ಚಿಕ್ಕಜಾಳ ಆರಕ್ಷಕ ವೃತ್ತ ನೀರಿಕ್ಷಕರಾದ ಎಸ್. ಆರ್. ರಾಘವೇಂದ್ರ ರವರು ಪಾವಗಡದ ಸುಮಾರು 250 ಚಾಲಕರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಸಮವಸ್ತ್ರ ವಿತರಣೆ ಮಾಡುವ ಬರವಸೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್ ರವರಿಗೆ ನೀಡಿರುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್ ಕಾರ್ಯಕ್ರಮವನ್ನು ನೀರೂಪಿಸಿ ಎಲ್ಲಾ ಅತಿಥಿಗಳಿಗೆ ಆಟೋ ಚಾಲಕರ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿದರು

ಆಟೋ ಚಾಲಕರಿಗೆ ಡಿ ಎಲ್ ವಿತರಣೆ

ಪಾವಗಡ: ಕಾನೂನು ಸುವ್ಯವಸ್ಥೆ ಕಾಪಾಡಲು ಆಟೋ ಚಾಲಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿ ವೈ ಎಸ್ ಪಿ ಕೆ.ಜಿ.ರಾಮಕೃಷ್ಣ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಪೊಲೀಸ್ ಇಲಾಖೆ, ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆ ವತಿಯಿಂದ  ಪಟ್ಟಣದಲ್ಲಿ ಆಟೋ ದಾಖಲಾತಿಗಳ ನವೀಕರಣ   ಶಿಬಿರ  ಏರ್ಪಡಿಸಲು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಚಾಲಕರು ಅಸಹಾಯಕರ ಬಗ್ಗೆ ಕಾಳಜಿ ತೋರಿ ಮಾನವೀಯತೆ ಮೆರೆಯಬೇಕು. ದುಡಿಮೆ ಜೊತೆ ಜೊತೆಗೆ ಸೇವೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದರು.

ಇನ್ ಸ್ಪೆಕ್ಟರ್ ಲಕ್ಷ್ಮಿಕಾಂತ್,  ಪಟ್ಟಣದ ಆಟೋ ನಿಲ್ದಾಣಗಳ ಬಳಿ    ಬ್ಯಾರಿಕೇಡ್ ಅಳವಡಿಸಿ ಸರದಿಯಂತೆ ಬಾಡಿಗೆಗೆ ಹೋಗುವ ವ್ಯವಸ್ಥೆ ಮಾಡಲಾಗುವುದು.   ಆಟೋ ಚಾಲಕರು ಖಡ್ಡಾಯವಾಗಿ ದಾಖಲಾತಿಗಳನ್ನು ಹೊಂದಿರಬೇಕು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ನೇರಳಕುಂಟೆ ನಾಗೇಂದ್ರಕುಮಾರ್, ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ   ಕಷ್ಟದಲ್ಲಿದ್ದರೂ ಸಹ ಚಾಲಕರ ಸಂಘದ ವತಿಯಿಂದ ಬಡ ಜನತೆಗೆ, ಅಗತ್ಯವಿರುವವರಿಗೆ ಆಹಾರ ವಿತರಿಸಿರುವುದು ಶ್ಲಾಘನೀಯ. ವಾಲ್ಮೀಕಿ ಆಟೋ ನಿಲ್ದಾಣಕ್ಕೆ ಬ್ಯಾರಿಕೇಡ್ ಅಳವಡಿಸಿ ಕೊಡುವುದಾಗಿ ತಿಳಿಸಿದರು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್,  ರೋಟರಿ ಸಂಸ್ಥೆ  ಅಧ್ಯಕ್ಷ ಶ್ರೀಧರ್ ಗುಪ್ತ,  ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

ಕೋವಿಡ್ನಿಂದ ಮೃತ ಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬಕ್ಕೆ ಪರಿಹಾರ

0

ಕೋವಿಡ್ನಿಂದ ಮೃತಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬಕ್ಕೆ 10 ಸಾವಿರ ನೀಡಲು ಚಿಂತನೆ : ಡಾ.ವೈ.ಎ.ನಾರಾಯಣಸ್ವಾಮಿ

ತುರುವೇಕೆರೆ: ಕೋವಿಡ್ನಿಂದ ಶಾಲೆಗಳು ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ ಮಕ್ಕಳು ಮೊಬೈಲ್ ದಾಸರಾಗಿದ್ದು, ಲಕ್ಷಾಂತರ ಮಂದಿ ಖಾಸಗಿ ಶಾಲಾ ಶಿಕ್ಷಕರು ಮತ್ತು ಸು.1 ಕೋಟಿಗೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರಗೊಂಡಿದ್ದು ಇವೆಲ್ಲಕ್ಕೂ ಪರಿಹಾರವಾಗಿ ಆಗಸ್ಟ್ ಮೊದಲ ವಾರದಿಂದಲೇ ರಾಜ್ಯದ ಎಲ್ಲ ಶಾಲಾಗಳನ್ನು ತೆರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ಮತ್ತು ಚಿದಾನಂದ್ ಎಂ.ಗೌಡ ಸ್ನೇಹಿತರ ಬಳಗವು ಹಮ್ಮಿಕೊಂಡಿದ್ದ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.


ಬಿಜೆಪಿ ಸಕರ್ಾರ ಖಾಸಗಿ ಶಾಲಾ ಶಿಕ್ಷಕರ ಹಿತ ಕಾಪಾಡಲು ನ್ಯೂ ಎಜುಕೇಷ್ ಪಾಲಿಸಿಯಲ್ಲಿ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ನೀಡಲು ಹೆಚ್ಚಿನ ಚಿಂತನೆ ನಡೆಸಿದೆ. ಆಯುಷ್ಮಾನ್ ಭಾರತ್ ಕಾರ್ಡ್ನ್ನು ಸರ್ಕಾರ ಸಾಕಷ್ಟು ಜನರಿಗೆ ನೀಡಿದೆ. ಅದೇ ರೀತಿ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ, ಚಿಕಿತ್ಸೆ ನೀಡುವ ಚಿಂತನೆಯನ್ನು ಮುಂದಿನ ದಿನಗಳಲ್ಲಿ ನಡೆಸಲಿದೆ.
ಕೋವಿಡ್ನಿಂದ ಸಾವನ್ನಪ್ಪಿದ ಖಾಸಗಿ ಶಾಲಾ ಶಿಕ್ಷಕರ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವಾನ ಹೇಳಿ ಕನಿಷ್ಠ 10 ಸಾವಿರ ಹಣ ನೀಡುವ ಚಿಂತನೆಯನ್ನು ನಾನು ಮತ್ತು ಎಂ.ಎಲ್.ಸಿ ಚಿದಾನಂದ್ ಎಂ.ಗೌಡ ಇಬ್ಬರೂ ಒಟ್ಟಿಗೆ ನೀಡುವ ಭರವಸೆ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ಎಲ್ಲ ರಾಜ್ಯಗಳಲ್ಲೂ ಶಿಕ್ಷಕರ, ನೌಕರರ ತಿಂಗಳ ವೇತನದಲ್ಲಿ ಅರ್ಧ ಹಣವನ್ನು ಕಟಾಯಿಸಿ ನೀಡಿವೆ. ಆದರೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರು ನೌಕರರು ಮತ್ತು ಶಿಕ್ಷಕರ ಕುಟುಂಬಕ್ಕೆ ತೊಂದರೆಯಾಗದಂತೆ ಪೂರ್ಣ ಪ್ರಮಾಣದ ಸಂಬಳವನ್ನು ನೀಡಿದೆ. ಸರ್ಕಾರ ಇನ್ನು ಎರಡು ವರ್ಷ ಸುಭದ್ರವಾಗಿ ನಡೆಯಲಿದ್ದು ಶಿಕ್ಷಣಕ್ಕೆ, ಶಿಕ್ಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದರು.
ವಿಧಾನ ಪರಿಷತ್ ಸದಸ್ಯ ಚಿಂದಾನಂದ್ ಎಂ.ಗೌಡ ಮಾತನಾಡಿ, ಕೋವಿಡ್ ವೇಳೆ ಖಾಸಗಿ ಶಾಲಾ ಶಿಕ್ಷಕರು ಮತ್ತು ಅವರ ಕುಟುಂಬ 17 ತಿಂಗಳು ಸಂಬಳವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದವು. ಇದನ್ನರಿತು. ನಾನು ಮತ್ತು ವೈ.ಎನ್.ನಾರಾಯಣಸ್ವಾಮಿ ಇಬ್ಬರೂ ಕನಿಷ್ಠ 25 ಸಾವಿರ ನೀಡಬೇಕೆಂದು ಶಿಕ್ಷಣ ಸಚಿವರು ಮತ್ತು ಸಿಎಂ ಅವರ ಬಳಿ ಕೇಳಿಕೊಂಡಾಗ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ 5 ಸಾವಿರ ನೀಡುವುದಾಗಿ ಒಪ್ಪಿಕೊಂಡರು. ಇದಕ್ಕೆ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಈಗಾಗಲೇ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸು.15 ಸಾವಿರ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರಾದ ಕೆ.ನಾಗರಾಜಪ್ಪ ಮತ್ತು ಭೈರಪ್ಪಾ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಾಯಣ್ಣಗೌಡ, ರೆಡ್ಡಿ, ವಕೀಲ ಧನಪಾಲ್, ವಿದ್ಯಾರಣ್ಯ ಶಾಲೆಯ ಆಡಳಿತಾಧಿಕಾರಿ ಜಯಣ್ಣ, ಇಂಡಿಯನ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್.ನಾಗರಾಜಪ್ಪ, ಪಾಪಣ್ಣ, ಚಂದ್ರಶೇಖರ್ ಇದ್ದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ

ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಸ್ಪಷ್ಟಪಡಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪಕ್ಷ ಆಲೋಚಿಸಿಲ್ಲ. ಮಾಧ್ಯಮದಲ್ಲಿ ಮಾತ್ರ ಚರ್ಚೆ ನಡೆಯುತ್ತಿದೆ. ದೆಹಲಿಯ ನಾಯಕರೇ ಈ ಗೊಂದಲಗಳಿಗೆ ತೆರೆಯಳೆಯಲಿದ್ದಾರೆ’ ಎಂದು ಹೇಳಿದರು.

‘ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಕಾರಣಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಕೋವಿಡ್‌ ನಿರ್ವಹಣೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುವ ಉದ್ದೇಶವಿತ್ತು. ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದ್ದರಿಂದ ಸಭೆ ರದ್ದುಪಡಿಸಲಾಗಿದೆ. ಔತಣಕೂಟ ಮಾತ್ರ ನಡೆಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಪಕ್ಷ ಹಾಗೂ ಮುಖ್ಯಮಂತ್ರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವವರನ್ನು ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. ಬಸವನಗೌಡ ಪಾಟೀಲ ಯತ್ನಾಳ ಸೇರಿ ಅನೇಕರಿಗೆ ನೋಟಿಸ್ ನೀಡಲಾಗಿದೆ. ಸೂಕ್ತ ಸಂದರ್ಭದಲ್ಲಿ ಪಕ್ಷ ನಿರ್ಧಾರ ಕೈಗೊಳ್ಳಲಿದೆ’ ಎಂದರು.

ರಾಜ್ಯ ಪದಾಧಿಕಾರಿಗಳ ಸಭೆ 24ಕ್ಕೆ

 

ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜುಲೈ 24ರಂದು ಚಿತ್ರದುರ್ಗದಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ತಿಳಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ, ಹಾನಗಲ್‌ ಮತ್ತು ಸಿಂದಗಿ ಉಪಚುನಾವಣೆಯ ರೂಪುರೇಷಗಳ ಬಗ್ಗೆ ಚರ್ಚೆ ನಡೆಯಲಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯ ಬಗ್ಗೆಯೂ ಕಾರ್ಯತಂತ್ರ ರೂಪಿಸಲಾಗುವುದು’ ಎಂದು ಹೇಳಿದರು.