Saturday, May 9, 2026
Google search engine
Home Blog Page 152

ಕವಿತೆಯಾಗದೇ ಉಳಿದ ಅನೇಕ ಭಾವ

0

ಡಾ//ರಜನಿ ಎಂ

ಹೃದಯದಲ್ಲಿ
ಮೂಡಿ…

ಕವಿತೆಯಾಗದೇ ಉಳಿದ
ಅನೇಕ ಭಾವ

ಹೇಳಲಾಗದ ಮಾತುಗಳು
ಕವಿತೆಗಳಾಗುತ್ತವೆ
ಅವರವರ ಭಾವಕ್ಕೆ

ಭಾಷೆಯ ಭಗೆಯಿಲ್ಲ
ಛಂದಸ್ಸಿನ ಗೋಜಿಲ್ಲ

ಕಾಲದ ಹ೦ಗಿಲ್ಲ
ಹಾಡಬೇಕಾದ ಹಸಿವಿಲ್ಲ

ಕಣ್ಣ ಒದ್ದೆ
ತುಟಿಯ ಮೃದು
ತುಂಟ ನೆನಪು

ಕವಿಯದೋ
ನಿನ್ನದೋ?

ಕವಿತೆಯಲಿ
ಅಡಗಿಸಿಯೂ

ಹೇಳಲಾಗದ
ಮಧುರ ಮೆಲುಕು

ಅಧರದ ಮೇಲಿನ
ಗುಲಾಬಿ ಪಕಳೆ

ನಿನ್ನದೇ ಸೆ೦ಟಿನ
ಕರ್ಚಿಫು

ಅದೇ ಹಾಡು..
ಮಿಡಿದು ನಿನ್ನ ಕವನ

ನನ್ನ ಹೃದಯದಲಿ

ಮಾರ್ಚ್ 21 ವಿಶ್ವ ಕವಿತೆಯ ದಿನದ ಅಂಗವಾಗಿ ನೀವು ಬರೆದ ಕವಿತೆಗಳನ್ನು ಪಬ್ಲಿಕ್ ಸ್ಟೋರಿಯ. ವಾಟ್ಸಪ್ ನಂಬರ್ ಗೆ ಕಳುಹಿಸಿ.

ಕವಿತೆಯಾಗದೇ ಉಳಿದ ಅನೇಕ ಭಾವ

0

ಡಾ//.ರಜನಿ ಎಂಹೃದಯದಲ್ಲಿ
ಮೂಡಿ…ಕವಿತೆಯಾಗದೇ ಉಳಿದ
ಅನೇಕ ಭಾವಹೇಳಲಾಗದ ಮಾತುಗಳು
ಕವಿತೆಗಳಾಗುತ್ತವೆ
ಅವರವರ ಭಾವಕ್ಕೆಭಾಷೆಯ ಭಗೆಯಿಲ್ಲ
ಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲ
ಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆ
ತುಟಿಯ ಮೃದು
ತುಂಟ ನೆನಪುಕವಿಯದೋ
ನಿನ್ನದೋ?ಕವಿತೆಯಲಿ
ಅಡಗಿಸಿಯೂಹೇಳಲಾಗದ
ಮಧುರ ನೆನಪುಅಧರದ ಮೇಲಿನ
ಗುಲಾಬಿ ಪಕಳೆನಿನ್ನದೇ ಸೆ೦ಟಿನ
ಕರ್ಚಿಫುಅದೇ ಹಾಡು..
ಮಿಡಿದು ನಿನ್ನ ಕವನನನ್ನ ಹೃದಯದಲಿ

*ಗುಬ್ಬಿ*

ಬಿ. ನಾಗರತ್ನ

ಅಮ್ಮ ಅಕ್ಕಿ ಹೆಗ್ಗಳಿಸಿ

ಎಲ್ಲ ಮಕ್ಕಳಿಗೂ ಕಲ್ಲು ಆರಿಸಲು

ನೆಲದ ಮೇಲೆ ಸುರಿಯುತ್ತಿದ್ದಾಗ

ಅದೆಲ್ಲಿಂದ ಹಿಂಡು ಹಿಂಡಾಗಿ ಹಾರಿ ಬರೀತ್ತಿದ್ದಿರಿ ??

ನಾವೆಲ್ಲರೂ ಕಲ್ಲು ಹೆಕ್ಕಿದರೆ

ನೀವೆಲ್ಲರೂ ಅಕ್ಕಿ ಹೆಕ್ಕುತ್ತಿದ್ದಿರಿ ಪುಟ್ಟ ಕೊಕ್ಕಲ್ಲಿ

ಹಿಡಿಯಲು ಹೋದರೆ ಕೈಗೆ ಸಿಗದೆ
ಪುರ್ಎಂದು ಹಾರಿಬಿಡುತ್ತಿದ್ದಿರಿ

ಮತ್ತೆ ಬನ್ನಿ
ಮೊಮ್ಮಕ್ಕಳ ಕಣ್ಣಿಗೆ ಹಬ್ಬ ತರಲು ಗುಬ್ಬಿ
ಎಂದು ನಾ ಕೇಳಲು

ನೀವಿತ್ತ ಉತ್ತರ

ಮೊರದಲ್ಲಿ ಅಕ್ಕಿ
ಒನದು ಹೆಗ್ಗಳಿಸಿ ಕೇರದವಳಿಗೆ ಹಬ್ಬ ಯಾಕೆಂದು ಹಂಗಿಸದಿರಿ

ಫೋನಿನಲ್ಲಿ ಟೈಪಿಸಿದವಳಿಗೆ ಹಬ್ಬ
ಯಾಕೆಂದು ಹಂಗಿಸದಿರಿ

ಎಲ್ಲ ತಪ್ಪು ನನದೆ
ನನ್ನ ಮನ್ನಿಸಿ ಕ್ಷಮಿಸಿ

ಮೊಮ್ಮಕ್ಕಳಿಗೆ ಪುಟ್ಟ ಮುದ್ದು ಸುಂದರ
ಗುಬ್ಬಿ ಗುಬ್ಬಚ್ಚಿ ಕಥೆ ಹೇಳುವೆ

*ವಿಶ್ವ ಗುಬ್ಬಚ್ಚಿ ದಿನ*
20-3-2021

ಜಿಲ್ಲಾ‌ಪ್ರವಾಸಕ್ಕೆ‌ ಸಿದ್ಧತೆ ನಡೆಸಿದ‌ ಮುಖ್ಯಮಂತ್ರಿ ಬಿ.ಎಸ್.ವೈ

ತುಮಕೂರು: ಏಪ್ರಿಲ್‌ನಿಂದ ಜಿಲ್ಲಾ ಪ್ರವಾಸ ಮಾಡಲಾಗುವುದು. ಜನರ ಸಮಸ್ಯೆ ಕೇಳಿ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ತಿಪಟೂರಿನಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

, ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುವಂತೆ ಮುಖ್ಯ ಕಾರ್ಯದರ್ಶಿಗೂ ಸೂಚಿಸಲಾಗುವುದು ಎಂದರು.

ಕೊರೊನಾ ಸೋಂಕು ಇದ್ದರೂ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದು ವಾರ ಪರಿಸ್ಥಿತಿಯನ್ನು ಗಮನಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಜನರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಬೇಕು. ಉಪಚುನಾವಣೆ ಕಾರ್ಯಕ್ರಮ, ಸಭೆಗಳಿಗೂ ಇದು ಅನ್ವಯವಾಗುತ್ತದೆ ಎಂದರು.

ನೀರಾವರಿ ಯೋಜನೆಗಳಿಗೂ ಹಣ ಒದಗಿಸಿದ್ದು, ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಆಧಾರ ರಹಿತವಾಗಿ ಆರೋಪ ಮಾಡುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದರು.

ಚಂದ್ರಶೇಖರ. ಚಿ.ತೋಟದ ಇನ್ನಿಲ್ಲ

0

ತುರುವೇಕೆರೆ, ಮಾರ್ಚ್-19; ಪಟ್ಟಣದ ಹಿರಿಯ ಸಾಹಿತಿ ಚಂದ್ರಶೇಖರ.ಚಿ.ತೋಟದ ಅಲ್ಪಕಾಲದ ಅಸ್ವಸ್ಥತೆಯಿಂದ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಶ್ರೀಯುತರು ಮೂಲತಃ ಗದಗ ಜಿಲ್ಲೆಯ ನರಗುಂದದವರಾಗಿದ್ದು ಕಳೆದ 25 ವರ್ಷಗಳಿಂದ ಪಟ್ಟಣದಲ್ಲೇ ನೆಲೆಸಿದ್ದರು. ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ತೋಟದ ಅವರು 3 ಕಥಾ ಸಂಕಲನ, ಒಂದು ಕವನ ಸಂಕಲನ, ಒಂದು ಪ್ರಬಂಧ ಸಂಕಲನ, 4ಮಕ್ಕಳ ನಾಟಕಗಳು ಹೀಗೆ ಹಲವಾರು ಕೃತಿಗಳನ್ನು ರಚಿಸಿದ್ದರು.

ಅವುಗಳಲ್ಲಿ ನಂದಗೋಕುಲದಲ್ಲೊಂದು ಪಾಪಪ್ರಜ್ಞೆ ( ಕಥಾ ಸಂಕಲನ), ತೆಂಗಿನಮರ(ಕವನ ಸಂಕಲನ) ಕೃತಿಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಇಳಿವಯಸ್ಸಿನಲ್ಲೂ ತೀವ್ರ ಪರಿಶ್ರಮದಿಂದ ಹಲವು ದಾಖಲೆಗಳನ್ನು ಸಂಗ್ರಹಿಸಿ ಸಮೀಪದ ತಾವರೆಕೆರೆಯ ಇತಿಹಾಸ ಪ್ರಸಿದ್ಧ ‘ಅಚ್ಛರಿಯ ಅಘೋರೇಶ್ವರ ಚರಿತೆ’ ಬರೆಯುವ ಮೂಲಕ ತಾಲ್ಲೂಕಿನ ಶಿಲ್ಪಕಲಾವೈಭವ, ದೇವಾಲಯಗಳ ಮಹಿಮೆ, ಇತಿಹಾಸ ಇವುಗಳ ಪರಿಚಯ ಮಾಡಿಕೊಟ್ಟಿದ್ದರು.

ಹಲವು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದರು. ತಾಲ್ಲೂಕಿನ 5ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ತೋಟದ ಅವರನ್ನು ಸನ್ಮಾನಿಸಲಾಗಿತ್ತು. ಶೀಯುತರು ಪತ್ನಿ ಜಯಶ್ರೀ, ಪುತ್ರರಾದ ವಿಜಯಕುಮಾರ್, ಶಿವಯೋಗಿ, ಮಂಜುನಾಥ್ ಹಾಗೂ ಅಪಾರ ಬಂಧುಬಳಗ,ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.ಶ್ರೀಯುತರ ಅಂತ್ಯಕ್ರಿಯೆ ಶನಿವಾರ ತಿಪಟೂರಿನಲ್ಲಿ ನಡೆಯಲಿದೆ.

ಚಂದ್ರಶೇಖರ ತೋಟದ ಅವರ ನಿಧನಕ್ಕೆ ಕಸಾಪ ಅಧ್ಯಕ್ಷ ನಂ.ರಾಜು, ಬರಹಗಾರ ತುರುವೇಕೆರೆ ಪ್ರಸಾದ್, ಕಸಾಪ ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜು, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್ ಹಾಗೂ ಸಾಹಿತ್ಯಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಕಟ್ಟೆ ಆಯ್ಕೆ

ಚಿಕ್ಕನಾಯಕನಹಳ್ಳಿ : ಪಟ್ಟಣದ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾ ಮುಂಭಾಗದಲ್ಲಿ ಇರುವ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು ಕಟ್ಟೆ ಹಾಗೂ ಉಪಾಧ್ಯಕ್ಷರಾಗಿ ಕೋಕಿಲ G ರವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ರಾಮು ( ಮಣಿದಿರ್ ), ಆಟೋ ಸಂಘದ ಅಧ್ಯಕ್ಷರು ಮಂಜುನಾಥ್, ಗಿರೀಶ್ ( ಇಟ್ಟಿಗೆ ) ಹಾಗೂ ಇನ್ನಿತರರು ಇದ್ದರು.

ಮಹಿಳೆಯರು ಹೋರಾಟ ನಡೆಸಬೇಕು; ವೀಣಾ

ತುರುವೇಕೆರೆಯ ಕನ್ನಡ ಭವನದಲ್ಲಿ ಕಸಾಪ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಕಸಾಪ ಅಧ್ಯಕ್ಷ ನಂ.ರಾಜು, ಬರಹಗಾರ ಪ್ರಸಾದ್, ಷಣ್ಮುಖಪ್ಪ, ಸಾ.ಶಿ.ದೇವರಾಜ್ ಇತರರು ಚಿತ್ರದಲ್ಲಿದ್ದಾರೆ.

ತುರುವೇಕೆರೆ: ಮಹಿಳೆಯರು ತಮ್ಮ ಸಬಲೀಕರಣಕ್ಕಾಗಿ ರೂಪಿಸಿರುವ ಕಾಯಿದೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದರ ಜೊತೆಗೆ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸಬೇಕು. ಮೀಸಲಾತಿಯ ಮೇಲೆ ಅವಲಂಭಿತರಾಗದೆ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ತಮ್ಮನ್ನು ತಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮರ್ಥರನ್ನಾಗಿ ರೂಪಿಸಿಕೊಳ್ಳಬೇಕು ಎಂದು ಕೊಡಗೀಹಳ್ಳಿಯ ಮುಖ್ಯಶಿಕ್ಷಕಿ ವೀಣಾ ಅಭಿಪ್ರಾಯಪಟ್ಟರು
ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ಸಂಯುಕ್ತವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮುಖ್ಯಭಾಷಣಕಾರರಾಗಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ ತಾಲ್ಲೂಕಿನ ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಸಾಧನೆಗಳು ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಲ್ಲುತ್ತವೆ ಎಂದು ಮಹಿಳಾ ಸಾಧಕಿಯರನ್ನು ಅಭಿನಂದಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ ಮಹಿಳೆಯರು ತಮ್ಮ ಅವಕಾಶಗಳನ್ನು ತಾವೇ ಕಲ್ಪಿಸಿಕೊಳ್ಳಬೇಕು.ತಮ್ಮಗಿರುವ ಸಾಂವಿಧಾನಿಕ ಸ್ವಾತಂತ್ಯ್ರದ ಅಭಿವ್ಯಕ್ತಿಗೆ ಯಾರನ್ನೂ ಯಾಚಿಸುವ ಅಗತ್ಯವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಆರ್. ಸತ್ಯನಾರಾಯಣ್ ಕಸಾಪದ ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜ್ ಅವರು ಮಹಿಳಾಪರ ಕಳಕಳಿ ಹೊಂದಿದ್ದಾರೆ. ಹಾಗಾಗಿ ಮುಂಬರುವ ಪರಿಷತ್ತಿನ ಚುನಾವಣೆಯಲ್ಲಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ಮಹಿಳಾ ಸಾಧಕಿಯರಾದ ಲಲಿತಾ ರಾಮಚಂದ್ರ, ದೇವಮ್ಮ ಶಂಕರಪ್ಪ, ರೂಪಶ್ರೀ, ಶರಿತಾ ದೇವರಮನೆ, ಹನುಮಕ್ಕ ಚಂದ್ರಯ್ಯ,ಭಾರತಿ ಪರಮೇಶ್ವರಯ್ಯ, ಜ್ಯೋತಿ ಸುಂಕಲಾಪುರ, ಪುಷ್ಪ ನಟೇಶ್,ವೀಣಾ, ಬಿ.ಪೂಜಾ ಇವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ನಂ.ರಾಜು, ಖಜಾಂಚಿ ಪರಮೇಶ್ವರಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಸಾ.ಶಿ.ದೇವರಾಜು, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ತುರುವೇಕೆರೆ ಪ್ರಸಾದ್, ಷಣ್ಮುಖಪ್ಪ, ದಿನೇಶ್, ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು. ಟಿ.ರಾಮಚಂದ್ರ ಸ್ವಾಗತಿಸಿದರು. ವರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ

Publicstory


ತುರುವೇಕೆರೆ: ಕವಿತೆ ಹೃದಯ ಮತ್ತು ಬುದ್ದಿಪೂರ್ವಕವಾಗಿ ಮಂಥನಗೊಂಡ ಭಾವನಾಧಾರೆಯನ್ನು ಅಕ್ಷರರೂಪಕ್ಕಿಳಿಸುವ ಒಂದು ಅಪೂರ್ವ ಸೃಷ್ಟಿ. ಹಾಗಾಗಿ ಕವಿ ಸಂವೇದನಾಶೀಲನಾಗಿರಬೇಕು ಮತ್ತು ಆಯಾ ಕಾಲಘಟ್ಟದ ಸೂಕ್ಷ್ಮತೆಗಳನ್ನು, ಸಮಕಾಲೀನ ನೋವು, ತಲ್ಲಣಗಳನ್ನು ದಾಖಲಿಸುವ ಎಚ್ಚರದ ಮನಸ್ಥಿತಿಯನ್ನು ಹೊಂದಿರಬೇಕು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಹಾಗೂ ಕಸಾಪ ಗೌರವಾಧ್ಯಕ್ಷ ಪ್ರೊ. ಕೆ.ಪುಟ್ಟರಂಗಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಭಾನುವಾರ ನಡೆದ ಉದಯೋನ್ಮುಖ ಕವಿ ಕೃಷ್ಣಚೈತನ್ಯ ವಿರಚಿತ ‘ಒಂದೇ ಬೇರು, ಭಾವ ನೂರು’ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕವಿಯ ಕೃತಿಯ ಕುರಿತು ಮಾತನಾಡಿದ ಬರಹಗಾರ ತುರುವೇಕೆರೆ ಪ್ರಸಾದ್ ಕವಿ ಕೇವಲ ಕಂಡದ್ದಷ್ಟನ್ನೇ ನೋಡಿ ದಾಖಲಿಸುವ ಛಾಯಾಗ್ರಾಹಕನಲ್ಲ, ಅವನು ಕಂಡ ಸಂಗತಿಯಿಂದ ಕಾಣದ್ದನ್ನು ಕಲ್ಪಿಸುವುದರ ಜೊತೆಗೆ ತಾನು ಕಾಣದ್ದನ್ನೂ ತನ್ನೊಳಗೆ ನೋಡುವ ನೋಟ ಮೀರಿದ ದರ್ಶನ ಶಕ್ತಿ ಹೊಂದಿರಬೇಕು. ಕಣ್ಣೀರು ಮತ್ತು ವಿಷಾಧದ ಅನುಭವಗಳು ಕಾವ್ಯದ ಶ್ರೇಷ್ಠತೆಯನ್ನು ಹೆಚ್ಚಿಸುತ್ತವೆ. ಕವಿ ಕೃಷ್ಣಚೈತನ್ಯ ಸಮೃದ್ಧಿಯ ಜೊತೆ ಸಾರ್ಥಕತೆಯನ್ನೂ ತೋರುವ ಪ್ರಯತ್ನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಿ ವ.ಚ. ಚನ್ನೇಗೌಡ, ಕಸಾಪ ಅಧ್ಯಕ್ಷ ನಂ.ರಾಜು, ಪ್ರೊ.ಪುಟ್ಟರಂಗಪ್ಪ, ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು.

ದೇವಮ್ಮ ಶಂಕರಪ್ಪ, ಶರಿತಾ ದೇವರಮನೆ, ವಾಸವಿ ಸತೀಶ್, ಸುನಿತಾ ಮಹೇಶ್ ರೇಖಾಕುಮಾರಸ್ವಾಮಿ, ವಿರೂಪಾಕ್ಷ ಒಂದೇ ಬೇರು, ಭಾವ ನೂರು ಸಂಕಲನದ ಹಲವು ಕವಿತೆಗಳಿಗೆ ಸ್ವರ ಸಂಯೋಜನೆ ಮಾಡಿ ಹಾಡಿದರು. ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ಲಲಿತಾ ರಾಮಚಂದ್ರ ದಂಪತಿ, ಲೇಖಕಿ ಉಷಾಶ್ರೀನಿವಾಸ್, ಶ್ರೀನಿವಾಸ್, ಸುಷ್ಮಾ, ಬೋರಲಿಂಗಯ್ಯ, ಸಂಸ್ಕೃತ ವಿಶ್ವವಿದ್ಯಾಲಯದ ಸಂತೋಷ್ ಹಾನಗಲ್, ರತಲ್ ರಾಜು, ದಿನೇಶ್, ಜಯಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ವೆಂಕಟೇಶ್, ಕಸಾಪ ಖಜಾಂಚಿ ಎಂ.ಆರ್.ಪರಮೇಶ್ವರಸ್ವಾಮಿ, ಡಿ.ಜೆ.ರಂಗಸ್ವಾಮಿ ಇತರರು ಭಾಗವಹಿಸಿದ್ದರು. ಶಿಕ್ಷಕ ಶೈಲೇಶ್ ಸ್ವಾಗತಿಸಿದರು. ಆನಂದವಾಡೇಕರ್ ವಂದಿಸಿದರು.
ಫೋಟೋ: ತುರುವೇಕೆರೆಯ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಭಾನುವಾರ ಕವಿ ಕೃಷ್ಣಚೈತನ್ಯ ಅವರ ಒಂದೇ ಬೇರು ಭಾವ ನೂರು ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಪ್ರೊ.ಕೆ.ಪುಟ್ಟರಂಗಪ್ಪ, ಬರಹಗಾರ ಪ್ರಸಾದ್, ಕವಿ ಕೃಷ್ಣಚೈತನ್ಯ, ಸಂಸ್ಥಾಪಕ ರಾಮಚಂದ್ರು ಇತರರು ಚಿತ್ರದಲ್ಲಿದ್ದಾರೆ.

ಶಾಸಕ‌ ಜ್ಯೋತಿಗಣೇಶ್ ಎದುರಲ್ಲೇ ತಾರತಮ್ಯದ ಬಗ್ಗೆ ದನಿ ಎತ್ತಿದ ಕಾರ್ಪೋರೇಟರ್ ಮಂಜುನಾಥ್

ತುಮಕೂರು: ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗೆ ರಾಜ್ಯ ಬಜೆಟ್ ನಲ್ಲಾಗಿರುವ ತಾರತಮ್ಯ ನೀತಿಯನ್ನು ಶಾಸಕ ಜ್ಯೋತಿ ಗಣೇಶ್ ಖಂಡಿಸಿಲ್ಲ ಎಂದು ಕಾರ್ಪೋರೇಟರ್ HDK ಮಂಜುನಾಥ್ ಜ್ಯೋತಿಗಣೇಶ್ ಅವರಿಗೆ ವೇದಿಕೆಯಲ್ಲೇ ಹೇಳಿದರು.

ತುಮಕೂರು ಮಹಾನಗರದ ಪೂಜ್ಯ ಮಹಾಪೌರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ತುಮಕೂರು ನಗರದ ಮರಳೂರು ಗ್ರಾಮದಲ್ಲಿ ಮರಳೂರು ಹಿತರಕ್ಷಣಾ ಸಮಿತಿ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ನಗರ ಶಾಸಕರಾದ ಜ್ಯೊತಿ ಗಣೇಶ್, ಸಹಕಾರಿ ರತ್ನ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಶಾಸಕರಾದ ಕೆ.ಎನ್ ರಾಜಣ್ಣ, ಉಪಮಹಾಪೌರರಾದ ನಾಜೀಮಾ ಬೀ, ಕಾರ್ಪೋರೇಟರ್ ಧರಣೇಂದ್ರ ಕುಮಾರ ಭಾಗವಹಿಸಿದ್ದರು.

ಸಮಾರಂಭದ ಸಭೆಯಲ್ಲಿ ಅಭಿನಂಧನಾ ನುಡಿಗಳನ್ನೇಳಿದ ಕಾರ್ಪೋರೇಟರ್ HDK ಮಂಜುನಾಥ್ ಶಾಸಕರಾದ ಜ್ಯೊತಿ ಗಣೇಶ್ ರವರು ತಳಸಮುದಾಯದ ಮೇಲೆ ಅತ್ಯಂತ ಪ್ರೀತಿ & ಕಾಳಜಿ ಹೊಂದಿದ್ದಾರೆ ಆಗಾಗಿ ಪ್ರತಿಯೊಂದು ತಳಸಮುದಾಯ ಕಾರ್ಯಕ್ರಮಗಳಿಗೆ & ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಹಾಗೇಯೇ ಬಿಜೆಪಿ ಸರ್ಕಾರದ ಅವಿಭಾಜ್ಯ ಅಂಗವಾಗಿರುವ ಶಾಸಕರು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗಾಗಿರುವ ತಾರತಮ್ಯ ನೀತಿಯನ್ನು ಖಂಡಿಸಬೇಕಿತ್ತು & ನಾನಂತೂ ಈ ನೀತಿಯನ್ನು ಖಡಖಂಡಿತವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಈ ಅಭಿನಂಧನಾ ಸಮಾರಂಭದಲ್ಲಿ ಮಹಾಪೌರರಿಗೆ ಅರ್ಥಪೂರ್ಣವಾಗಿ ಶಾಸಕರು ಅಭಿನಂಧನೆ ಸಲ್ಲಿಸಬೇಕಾದರೇ, ಮೊನ್ನೆಯ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳಿಗಾಗಿರುವ ತಾರತಮ್ಯ ನೀತಿಯನ್ನು ಶಾಸಕರಾದ ಜ್ಯೊತಿಗಣೇಶ್ ರವರು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ & ಸರಿಯಾದ ಪ್ರಮಾಣದಲ್ಲಿ ಹಣ ಮೀಸಲಿರಿಸುವ ಮೂಲಕ ಅಭಿನಂದನೆ ಸಲ್ಲಿಸಬೇಕೆಂದು ತಾಕೀತು ಮಾಡಿದರು.

ಶಾಸಕರ ಸಾಮಾಜಿಕ ನ್ಯಾಯದ ಹಾದಿಯನ್ನು ನೋಡುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ನಗರದ ತಳ ಸಮುದಾಯಗಳನ್ನು ಸೇರಿಸಿ ಸರ್ಕಾರದ ವಿರುದ್ಧ ನಮ್ಮ ಪಾಲಿಗಾಗಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಪ್ರತಿಭಟಿಸಬೇಕಾಗುವುದು ಎಂದು ಎಚ್ಚರಿಸಿದರು. ಈ ಪ್ರತಿಭಟನೆಗೆ ಸನ್ಮಾನ್ಯ ಕೆ. ಎನ್ ರಾಜಣ್ಣನವರನ್ನು ಸೇರಿದಂತೆ ತಳಸಮುದಾಯದ ನಾಯಕರನ್ನು ಹೋರಾಟಕ್ಕೆ ಆಹ್ವಾನಿಸಿದರು.

ವಿದ್ಯಾವಂತರಿಗಿಂತ. ಪ್ರಜ್ಞಾವಂತರು ಇಂದು ಬೇಕಿರುವುದು

ಜಾಗತೀಕರಣದ ಕಾಲದಲ್ಲಿ , ಲಿಂಗಸಮಾನತೆ ,ರಾಜಕೀಯ ,ಸಾಮಾಜಿಕ ಮತ್ತು ಕೌಟುಂಬಿಕ ಸಮಾನತೆಯನ್ನು ಕುರಿತು ನಾವು ಎಷ್ಟೇ ಮಾತನಾಡಿದರೂ ,ಗತವೊಂದನ್ನು ಕಾಪಾಡಿಕೊಳ್ಳುವ ಪುರುಷ ಸಂಸ್ಕೃತಿಯೊಂದು ನಮ್ಮ ಜೊತೆ ಇದೆ. ಇದು ಮಹಿಳೆ ಹೀಗೇ ಇರಬೇಕು ಎಂದು ನಿರ್ದೇಶಿಸುತ್ತದೆ.
ಇದಕ್ಕೆ ನಾವು ಗೊತ್ತಿದ್ದೊ ,ಗೊತ್ತಿಲ್ಲದೆಯೊ ಬದ್ದರಾಗಿ ನಡೆದುಕೊಳ್ಳುವೆವು.
ಭಾವನಾತ್ಮಕ ನೆಲೆಯಲ್ಲಿ ಹೆಣ್ಣನ್ನು ಉಬ್ಬಿಸಿ ತೊಟ್ಟಿಲಿನ ನೆಪದಲ್ಲಿ ,ಕುಟುಂಬದ ನೆಪದಲ್ಲಿ ಹೆಣ್ಣನ್ನು ನಿಯಂತ್ರಿಸುವ ಕೆಲಸ ನಡೆಯುತ್ತಲೇ ಇದೆ.ಇದನ್ನೆಲ್ಲಾ ಮೀರಿ ಸಮಾನತೆಯನ್ನು ಸಾಧಿಸಲು ನಮಗೆ ಇಂದು ವಿಧ್ಯಾವಂತರಿಗಿಂತ ,ಹೆಚ್ಚು ಹೆಚ್ಚು ಪ್ರಜ್ಞಾವಂತರು ಬೇಕಿದೆ .
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾವು ಉಮೇದು ಇಟ್ಟುಕೊಂಡು ಸಮಾನತೆಯ ಬಗ್ಗೆ ಬರೀ ಬಾಯಿ ಮಾತಿನಲ್ಲಿ ಹೇಳುವ ಬದಲು ಅದರ ಆಶಯ ಏನಾಗಬೇಕೆಂದರೆ ,ಸಹಜವಾಗಿ ನಾವು ಮಾತುಕತೆಗೆ ನಿಂತಾಗ ,ಸಣ್ಣ ಸಣ್ಣ ಗುಂಪುಗಳಲ್ಲಿ ಸಂವಾದಿಸುವಾಗ ,ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ತುಂಬಾ ಎಚ್ಚರವನ್ನು ,ಜಾಗ್ರತೆಯನ್ನು ಸೂಕ್ಷ್ಮವಾಗಿ ಸ್ಥಾಪಿಸಿಕೊಳ್ಳಬೇಕಾಗುತ್ತದೆ.ಎಚ್ಚರ ಇಲ್ಲದೇ ಹೋದರೆ ,ಯಾರೊ ನಿರ್ದೇಶಿಸಲ್ಪಟ್ಟ ,ಯಾರೊ ಹೇಳಿದ ನಿಯಮಗಳಿಗೆನಾವು ಬದ್ದರಾಗಿ ವರ್ತಿಸುತ್ತಾ ನಮ್ಮ ಅಸ್ಮಿತೆಯನ್ನು ಕಳೆದುಕೊಳ್ತೀವಿ .ಆ ಎಚ್ಚರ,ಜಾಗ್ರತೆ ಹೇಗಿರಬೇಕೆಂದರೆ ಕವಿವಾಣಿಯೊಂದರಲ್ಲಿ ಹೇಳಿರುವಂತೆ ನಿದ್ದೆಯಲ್ಲೂ ಇಬ್ಬನಿ ಸದ್ದಿಗೆ ಕಣ್ತೆರೆಯಬಲ್ಲ ಜಾಗ್ರತೆ ಇರಬೇಕು .
ಎಂದು ಗೀತಾಲಕ್ಷಮಿ ರವರು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾಶಾಖೆ ತುಮಕೂರಿನ IMA ಹಾಲ್ ನಲ್ಲಿಹಮ್ಮಿಕೊಂಡಿದ್ದ ,ವಿಶ್ವಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮುಖ್ಯಭಾಷಣಕಾರರಾಗಿ ಬಂದಿದ್ದ ,ಅಂಕಣ ಬರಹಗಾರ್ತಿ ಲೇಖಕಿ ಗೀತಾ ಲಕ್ಷ್ಮಿ ರವರು ಮೇಲಿನಂತೆ ಮಾತನಾಡುತ್ತಾ ,ಮುಂದುವರಿದು ಸಮಾನತೆಯ ಬಗ್ಗೆ ಮಾತನಾಡವ ಪ್ರತಿ ಮಹಿಳೆಯೂ ಅಂಬೇಡ್ಕರ್ ಮತ್ತುಸಾವಿತ್ರಿಬಾಯಿ ಫುಲೆರವರನ್ನು ನೆನೆಯಲೇ ಬೇಕು.ಮಕ್ಕಳನ್ನು ಹೆಚ್ಚು ಹೆಚ್ಚಾಗಿ ನಾವು ಸಮಾನತೆ ಕಡೆ ತೊಡಗಿಸಬೇಕಿದೆ .ಮೋಜಿನ ಕಲ್ಪನೆಗಳನ್ನು ಬಿಟ್ಟು ಆಚೆ ಬರುವಂತೆ ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು ಇದೇ ಕಾರ್ಯಕ್ರಮದಲ್ಲಿ, ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ , ಸೋಮಾವತಿ ಮತ್ತುಇಂದಿರಮ್ಮ ನೆನಪಿನ ಸಾಧಕ ಮಹಿಳೆ ಪ್ರಶಸ್ತಿ ಯನ್ನು , ವಿಶೇಷವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಪರಿಸರ ಹೋರಾಟಗಾರ್ತಿ ಎನ್ .ಇಂದಿರಮ್ಮ ಚಿ.ನಾ.ಹಳ್ಳಿ ರವರಿಗೆ ನೀಡಿ ಅಭಿನಂದಿಸಲಾಯ್ತು .
ಹಾಗೂ
,ಲೇಖಕಿಯರ ಸಂಘವು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಜಿ.ಮಲ್ಲಿಕಾ ಬಸವರಾಜು ವಹಿಸಿದ್ದರು .
ಪ್ರೇಮಾಮಲ್ಲಣ್ಣರವರು ಉದ್ಘಾಟಿಸಿ ,ಡಾ/ಅರುಂಧತಿ ರವರು ಪ್ರಸ್ತಾವನೆ ಮಾಡಿದರು .
ಸಿ.ಎ.ಇಂದಿರಮ್ಮರವರು ಅಭಿನಂದನಾ ನುಡಿಗಳನ್ನಾಡಿದರು .
ಡಾ/ರಜನಿ ,ಕವಯತ್ರಿ ಮತ್ತು ಪ್ರಾಂಶುಪಾಲರು ,ಜಿಲ್ಲಾ ಆರೋಗ್ಯ ತರಬೇತಿ ಸಂಸ್ಥೆ ತುಮಕೂರು ರವರು ಉಪಸ್ಥಿತರಿದ್ದರು .
ಪಾರ್ವತಮ್ಮು ಮತ್ತು ತಂಡದವರು ಜಾಗೃತಿ ಗೀತೆಗಳನ್ನು ,ಕುಸುಮಾ ಜೈನ್ ರವರು ವಚನಗಳನ್ನು ಹಾಡಿದರು . ರಾಣಿ ಚಂದ್ರಶೇಖರ್ ರವರು ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಹಿಂದಿನ ಅಧ್ಯಕ್ಷ ರುಗಳಾದ ,ಅನ್ನಪೂರ್ಣ ವೆಂಕಟನಂಜಪ್ಪ ಎಂ.ಸಿ.ಲಲಿತಾ ,ಸುಗುಣಾ ದೇವಿ ಮತ್ತು ಕಾರ್ಯ ಕಾರಿ ಸಮಿತಿ ಸದಸ್ಯರು ಹಾಜರಿದ್ದರು