Thursday, May 7, 2026
Google search engine
Home Blog Page 153

ಇದ್ದುದೇ ಗೊತ್ತಾಗುತ್ತಿರಲಿಲ್ಲ

0

ಕಿಡ್ನಿ

ಇದ್ದುದೇ ಗೊತ್ತಾಗುತ್ತಿರಲಿಲ್ಲ
ಹೃದಯದಂತೆ ಬಡಿತವಿಲ್ಲ
ಶ್ವಾಸಕೋಷದಂತೆ ಉಸಿರಾಟವಿಲ್ಲ
ಯಾವುದೇ ತರದ ನೋವಿಲ್ಲ
ಎಲ್ಲೊ ಅವಿತು ತಣ್ಣಗೆ, ನುಣ್ಣಗೆ
ರಕ್ತವನ್ನು ಸೋಸಿ ಸೋಸಿ ಬಸಿಯುತ್ತಿದ್ದ
ನೀನು
ಹೀಗೆ ಏಕಾ ಏಕೀ ಸೋತು ಸುಣ್ಣವಾಗಿ
ವಾರಕ್ಕೆ ಮೂರು ಬಾರಿ

ನಿನ್ನ ಕೆಲಸವ ಮೆಷಿನ್ ಮಾಡಿ
ಇರೋ ಬರೋ ಲವಣಗಳೆಲ್ಲ
ಸೋರಿ ಹೋಗಿ
ಬಳಿಚಿಕೊಂಡು
ಆ ದೇವರ ಮೇಲೆ ಹೂ ತಪ್ಪಿದರೂ
ಡಯಾಲಿಸಿಸ್ ತಪ್ಪದಂತೆ ಇದ್ದರೂ
ಬಾಯಿಗೆ ರುಚಿ ಇಲ್ಲ
ಉಪ್ಪಿಲ್ಲ,ಹಣ್ಣಿಲ್ಲ
ಬರೇ ಒಣ ರೊಟ್ಟಿ

ಡಯಿಲಿಸಿಸ್ ದೋಸ್ತಿಗಳು
ಹೇಳುವ ಟಿಪ್ಸ್ಗಳು
ಮನೆಯವರ ಮೆದುಳು ಡಯಾಲಿಸಿಸ್ ಆಗಿ
ಇದಕ್ಕೆ ಕೂನೆ?

ಕಿಡ್ನಿ ಕಸಿ,ರಿಜೆಕ್ಷನ್,ಬಯೋ ಕಿಡ್ನಿ
ಎಲ್ಲಾ ಆ ದೇವರು ಕೊಟ್ಟ ಕಿಡ್ನಿಯ ಸಮವೇ??

ಮೆದುಳಿಗಿಂತ ಕಿಡ್ನಿ ಮೇಲು
ಎಂಬ ಹೊಸ ಗಾದೆ
ಓ ನನ್ನ ಕಿಡ್ನಿಯೇ ನೀ ಸೋಲದಿರು 🙏
ಎಂದು ಬೇಡಿ ಕೊಂಡು
ಹೃದಯವೇ❤️ ನೀ ಬೇಕಾದರೆ ಸೋಲು
ಎಂದು ಹೇಳೀ
ಸ್ಟಂಟಾಗೀ ಕಿಡ್ನಿಯೇ ನಮಂ

ಡಾ ರಜನಿ
(ಅಮ್ಮನ ಡಯಾಲಿಸಿಸ್ ಕಾಯುವಾಗ ಬರೆದದ್ದು)

ವಿಶ್ವ ಕಿಡ್ನಿ ದಿನ: ಕಿಡ್ನಿಯ ಆರೊಗ್ಯ ಕಾಪಾಡಿಕೊಳ್ಳುವುದು ಹೇಗೆ.

0

ಡಾ. ರಜನಿ. ಎಂ


ಇಂದು ವಿಶ್ವ ಕಿಡ್ನಿ ದಿನ. ಪ್ರತಿ ವರ್ಷಮಾರ್ಚ 11ರಂದು ವಿಶ್ವ ಕಿಡ್ನಿ ದಿನವನ್ನು ಆಚರಿಸುತ್ತಾರೆ

‘ಕಿಡ್ನಿ ಕಾಯಿಲೆಯ ಜೊತೆಗೆ ಚೆನ್ನಾಗಿ ಬಾಳುವುದು’ ಈ ವರ್ಷದ ವಿಶ್ವ ಕಿಡ್ನಿ ದಿನದ ಘೋಷಣೆಯಾಗಿದೆ.

ಅಂದರೆ ಕಿಡ್ನಿ ರೋಗಿಗೆ
ಉಂಟಾಗುವ
1.ನೋವು
2.ರಕ್ತ ಹೀನತೆ
3.ಕಾಲುಗಳ ಸೆಳೆತ
4.ನಿದ್ರಾ ಹೀನತೆ
5.ಸೋಂಕುಗಳು
6.ಖಿನ್ನತೆ
7.ಸಾಮಾಜಿಕ ಚಟುವಟಿಕೆಗಳ ಕೊರತೆ
8.ವಿಶೇಷ ಆಹಾರದ ಅವಶ್ಯಕತೆ
9.ಇತರೇ ವೆಚ್ಚಗಳು
10.ಸಾಗಾಣಿಕೆ ವೆಚ್ಚಗಳು
11.ಮನೆಯಲ್ಲೆ ಡಯಾಲಿಸಿಸ್
12.ಆಂಬುಲೆಟರಿ ಡಯಾಲಿಸಿಸ್
13.ಪೆರಿಟೂನಿಯಲ್ ಡಯಾಲಿಸಿಸ್
14.ಸಹಾಯಕರ ಅವಶ್ಯಕತೆ
ಇವುಗಳನ್ನು ಮನಗಂಡು ಅವರು ಸಮಾಜದಲ್ಲಿ ಪರಿಪೂರ್ಣ ವಾಗಿ ಜೀವಿಸುವಂತೆ ಸಹಕಾರವನ್ನು ನೀಡುವುದು ಆಗಿದೆ.

ಕಿಡ್ನಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು.

1.ಉಪ್ಪುಕಡಿಮೆ ತಿನ್ನಬೇಕು.. ದಿನಕ್ಕೆ 5 ಗ್ರಾಮ್
2.ರಕ್ತದೂತ್ತಡ ಮತ್ತು ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು
3.ನಿಯಮಿತ ವ್ಯಾಯಾಮ
4.ಕಿಡ್ನಿ ಟೆಸ್ಟ್ ಗಳನ್ನು ವರ್ಷಕ್ಕೆ ಒಮ್ಮೆ ಪರಿಶೀಲಿಸಿ ಕೊಳ್ಳಬೇಕು
5.ನೋವಿನ ಮಾತ್ರೆಗಳನ್ನು ನುಂಗುವ ಅಭ್ಯಾಸ ಮಾಡಿಕೊಳ್ಳಬಾರದು
6.ಇತರೆ ಪದ್ಧತಿಗಳ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವ ಅಭ್ಯಾಸ ಬಿಡಬೇಕು.
7.ಮೂತ್ರ ಸೋಂಕಿಗೆ ಸರಿಯಾಗಿ ಪೂರ್ಣವಾಗಿ ಚಿಕಿತ್ಸೆ ತೆಗೆದುಕೊಳ್ಳಿ.
8.ಕುಟುಂಬದಲ್ಲಿ ಇತರರಿಗೆ ಪರಿಶೀಲನೆ ಮಾಡಿಸಿ
9.ಗಂಡಸರಲ್ಲಿ ವಯಸ್ಸಾದ ಮೇಲೆ ಬರುವ ಪ್ರಾಸ್ಟೇಟ್ ಊತಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿ.
10.ಆರೋಗ್ಯ ವಿಮೆ ಮಾಡಿಸಿ
11.ಸರಕಾರದ ಆಯುಷ್ ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಯು ಸದುಪಯೋಗ ಪಡೆದುಕೊಳ್ಳಬೇಕು.

ಈ ನಿಯಮಗಳನ್ನು ಪಾಲಿಸಿ. ನಿಮ್ಮ ಕಿಡ್ನಿಗಳು

ಅತ್ಯಮೂಲ್ಯ… ಅವುಗಳನ್ನು

ಕಾಪಾಡಿ..

ಪೂಜೆಗೂ ಮುನ್ನ ನೀವು ತಿಳಿಯಲೇಬೇಕಾದ ಶಿವರಾತ್ರಿ ವಿಶೇಷ

0

ಲೇಖನ ಓದುವ ಮುನ್ನ ಸ್ತ್ರೋತ್ರ ಪಠಿಸಿ


#ದ್ವಾದಶ_ಜ್ಯೋತಿರ್ಲಿಂಗ_ಸ್ತೋತ್ರಂ
ಸೌರಾಷ್ಟ್ರೇ ಸೋಮನಾಧಂಚ ಶ್ರೀಶೈಲೇ ಮಲ್ಲಿಕಾರ್ಜುನಂ ।
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಂ ॥
ಪರ್ಲ್ಯಾಂ ವೈದ್ಯನಾಧಂಚ ಢಾಕಿನ್ಯಾಂ ಭೀಮ ಶಂಕರಂ ।
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ॥
ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ ।
ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ ॥

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ ।
ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ॥


ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಸಂಕ್ರಾಂತಿಯ ನಂತರ ಬರಯವುದೇ ಶಿವರಾತ್ರಿ. ಶಿವ ಭಕ್ತರ ಪ್ರಿಯ, ಭಕ್ತರೆಂದರೆ ಶಿವನಿಗೆ ವಿಶೇಷ ಪ್ರೀತಿ. ಭಕ್ತಿಯೇ ಪ್ರಧಾನ. ಉಳಿದೆಲ್ಲವೂ ಗೌಣ. ಶಿವನಿಗೆ ಭಕ್ತರಲ್ಲಿ ಬೇಧವಿಲ್ಲ, ಹಾಗೆಯೇ ಪೂಜೆಯಲ್ಲೂ. ಹೀಗೆ ಪೂಜೆ ಮಾಡಬೇಕು ಎಂದು ಶಿವ ಕೇಳುವುದಿಲ್ಲ. ಗಾಢ ಭಕ್ತಿಯನ್ನು ತೋರಿಸುವುದೇ ಶಿವನಿಗೆ ಮಾಡುವ ಪೂಜೆಯ ದಾನ.

ಶಿವನಿಲ್ಲದ ಜಾಗವೇ ಇಲ್ಲ ಎನ್ನಬಹುದೇನೋ. ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕ್ಕೆ ಅಳಿವಿಲ್ಲ. ಶಿವನ ವೈಭವಗಳಿಗೆ, ಶಕ್ತಿ, ಸಾಹಸಗಳಿಗೆ ಕೊನೆ ಮೊದಲಿಲ್ಲ. ಆದರೂ ಶಿವ ಇಷ್ಟವಾಗುವುದು ಭಕ್ತರನ್ನು ಕೇಳುವುದನ್ನು ಕೊಡುವ ಕರುಣಾಮಯಿ ಎಂದು. ಹಾಗಾದರೇ, ಹೇಗೆಲ್ಲ ಪೂಜಿಸಿದರೆ ಶಿವ ಮೆಚ್ಚುತ್ತಾರೆ. ಅದರಲ್ಲೂ ಶಿವರಾತ್ರಿಯ ಪೂಜಾ ವಿಧಾನಗಳು ಹೇಗಿರಬೇಕು.

ಶಿವರಾತ್ರಿಯ ಇಡೀ ದಿನ ಶಿವನನ್ನು ಜಪಿಸುತ್ತಾ ಕಾಲ ಕಳೆಯಬೇಕು. ಶಿವರಾತ್ರಿಯಂದು ಜಾಗರಣೆಗೆ ಹೆಚ್ಚು ಮಹತ್ವವಿದೆ. ಅಂದರೆ ರಾತ್ರಿಯೆಲ್ಲ ಜಾಗರಣೆಯ ಜತೆಜತೇಗೆ ಶಿವನನ್ನು ದ್ಯಾನಿಸಬೇಕು. ಶಿವನ ಲೀಲೆಗಳ ಕುರಿತಾದ ಸಾಹಿತ್ಯವನ್ನು ಓದಬೇಕು. ಬೆಳಿಗ್ಗೆ, ರಾತ್ರಿ ಶಿವನ ದೇವಸ್ಥಾನಗಳಿಗೆ ತೆರಳಿ ಪೂಜೆಯಲ್ಲಿ ಭಾಗಿಯಾಗಬೇಕು. ದೇವಸ್ಥಾನಗಳಲ್ಲಿ ಹೋಗಲು ಆಗದವರೂ ಮನೆಯಲ್ಲಿಯೇ ಶಾಂತವಾಗಿಟ್ಟುಕೊಂಡು ಪೂಜೆಯನ್ನು ಸಲ್ಲಿಸಬೇಕು.

ಏನೆಲ್ಲ ಇಷ್ಟ


ಭಕ್ತರು ಶಿವನಿಗೆ ಹಾಲಿನ ಅಭಿಷೇಕ, ಹಣ್ಣುಗಳ ನೇವೈದ್ಯ, ಶಿವನಿಗೆ ಮೀಸಲಾದ ಮಂತ್ರಗಳನ್ನು ಜಪಿಸುತ್ತಾ ಪೂಜೆ ಮಾಡಬೇಕು.

ಧಾರ್ಮಿಕ ಗ್ರಂಥಗಳ ಪ್ರಕಾರ ಶಿವನಿಗೆ ಪೂಜೆ ಸಲ್ಲಿಸುವಾಗ ಕೆಲವು ವಿಧಾನಗಳನ್ನು ಅನುಸರಿಸಬೇಕು. ಆಗ ಶಿವನು ಸಂತುಷ್ಟನಾಗುತ್ತಾನೆ ಎಂದು ಹೇಳುತ್ತಾರೆ.

ಮುಂಜಾನೆಯೇ ಶಿವನಿಗೆ ಬಿಲ್ವಪತ್ರೆ, ಹಣ್ಣು, ಧಾತುರಾ ಹಾಲಿನ ಅಭಿಷೇಕ ಅರ್ಪಿಸುವರು. ನೀರು, ಹಣ್ಣು ಸೇವಿಸಿ ಇಡೀ ದಿನ ಉಪಾವಾಸ ಇರುವರು.

ಉಪಾವಾಸದ ಮೂಲಕ ಶಿವನನ್ನು ಒಲಿಸಿಕೊಳ್ಳಬಹುದು. ಶಿವರಾತ್ರಿ ದಿನ ಇಡೀ ದಿನ ಉಪವಾಸ ಮಾಡುವರು. ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ಉರಿದ ಅಕ್ಕಿಯ ತಂಬಿಟ್ಟು (ತಮ್ಟ) ಮಾಡಿ ರಾತ್ರಿ ಪೂಜೆಯ ಬಳಿಗ ತಮ್ಟದ ಜತೆಗೆ ಬಾಳೆಹಣ್ಣು, ತುಪ್ಪ ಬೆರೆಸಿಕೊಂಡು ಕಲಸಿ ತಿನ್ನುವವರು. ಬೆಳಿಗ್ಗೆ ವಿವಿಧ ಬಗೆಯ ಭಕ್ಷ್ಯಗಳನ್ನು ದೇವರಿಗೆ ನೇವೇದ್ಯ ಇಡಲಾಗುತ್ತದೆ. ನಂತರ ಮನೆಯವರೆಲ್ಲರೂ ಸೇರಿ ಊಟ ಮಾಡುತ್ತಾರೆ.

ಸಿದ್ದಗಂಗಾ ಮಠದಲ್ಲಿ…


ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ದಿನ ಎಲ್ಲ ಮಕ್ಕಳಿಗೆ ತಮ್ಟ ನೀಡುತ್ತಾರೆ. ಹತ್ತಿರ ಹತ್ತಿರ 25 ಸಾವಿರದವರೆಗೂ ತಮ್ಟದ ಹುಂಡೆಗಳನ್ನು (ಅದು ದೊಡ್ಡವು) ಕಟ್ಟುವುದು ಇಲ್ಲನ ವಿಶೇಷ. ಈ ದಿನ ಜಾತ್ರೆಯ ಕಾರಣ ಸಿದ್ದಗಂಗೆಯಲ್ಲಿ ಶಿವರಾತ್ರಿ ಪೂಜೆಗೆ ವಿಶೇಷ ಮಹತ್ವ.

ಸಿದ್ದಗಂಗೆ ಅಲ್ಲದೇ, ಶಿವಗಂಗೆಯಲ್ಲೂ ಈ ದಿನ ಪೂಜೆಗೆ ವಿಶೇಷ ಮಹತ್ವವಿದೆ. ಕೋಲಾರ ಜಿಲ್ಲೆಯ ಕೋಟೆಲಿಂಗೇಶ್ವರದಲ್ಲೂ ವಿಶೇಷ ಪೂಜೆ ಮಾಡುತ್ತಾರೆ.

ಬೆಳಿಗ್ಗೆ ಸ್ನಾನ ಹೀಗಿರಲಿ:


ಬೆಳಿಗ್ಗೆ ಸ್ನಾನ ಮಾಡುವಾಗ ನೀರಿಗೆ ಕಪ್ಪು ಎಳ್ಳು ಹಾಕಿ ಸ್ನಾನ ಮಾಡಿದರೆ ಆತ್ಮ, ಭಾವ ಶುದ್ಧಿಯಾಗಲಿದೆ. ಕೆಲವರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವರು.

ರಾತ್ರಿ ಪೂಜೆಗೆ ಹೆಚ್ಚು ಮಹತ್ವ: ಶಿವರಾತ್ರಿ ದಿನ ಬೆಳಿಗ್ಗೆ ಪೂಜೆಗಿಂತಲೂ ರಾತ್ರಿ ಪೂಜೆಗೆ ಹೆಚ್ಚು ಮಹತ್ವವಿದೆ. ರಾತ್ರಿ ನಾಲ್ಕು ಆಯಮಾದಲ್ಲೂ ಶಿವನಿಗೆ ಪೂಜೆ ನಡೆಸಬೇಕು., ಉಪವಾಸ ವ್ರತ ಕೈಗೊಳ್ಳುವವರು ಉಪವಾಸ ಮುರಿಯಬಾರದು,

ಸಂಕಲ್ಪ ಈಡೇರುವುದು

ಶಿವರಾತ್ರಿ ದಿನ ವಿಶೇಷವಾಗಿ ದೇವರಿಗೆ ಭಕ್ತಿಯಿಂದ ಪೂಜೆ ಮಾಡಿ ಸಂಕಲ್ಪ ಮಾಡಿದರೆ ಆ ಸಂಕಲ್ಪ ಈಡೇರುತ್ತದೆ.

ಅಳಿವಿನಂಚಿನಲ್ಲಿ ಜಾನಪದ ಕಲೆ

0

ಚೇತನ್. ಕೆ. ಆರ್


ಜಾನಪದ ಕಲೆಗಳು ಮನುಷ್ಯರಷ್ಟೇ ಪ್ರಾಚೀನವಾದವು, ಎಷ್ಟು ಅನಕ್ಷರಸ್ಥ ಜನರಿಗೆ ಬದುಕು ಕಟ್ಟಿಕೊಟ್ಟ ಮಹಾನ್ ವೇದಿಕೆ.
ಈ ಕಲೆಗೆ ವಯೋಮಾನದ ಮಿತಿ ಇಲ್ಲ.

ಈ ಕಲೆಗೆ ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲ, ಜಾನಪದ ಕಲೆಗಳು ಒಂದು ನಿರ್ದಿಷ್ಟ ಪ್ರದೇಶದ ಪರಿಚಿತ ಮತ್ತು ಪ್ರಚಲಿತ ಸ್ಥಳೀಯ ಭಾಷೆಯ ಶೈಲಿಯಲ್ಲಿ ನಡೆಯುವುದರಿಂದ ಈ ಕಲೆಗಳು ಜನರಿಗೆ ಬೇಗ ಮುಟ್ಟುತ್ತವೆ.

ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಸೊಗಡಿನ ಬೇರುಗಳು ಇದ್ದಂತೆ.
ಕವಿ ಸಿದ್ದಲಿಂಗಯ್ಯ ಅವರ ಅಭಿಪ್ರಾಯದಂತೆ ಜಾನಪದ ಕಲೆಗಳು ಉಳಿದಾಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆ ಉಳಿಯುತ್ತದೆ, ಎಂಬ ಅವರ ಹೇಳಿಕೆಯು ಜನಪದ ಕಲೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಯುವಜನತೆ ಪಾಶ್ಚಾತ್ಯ ಕಲೆಗಳಿಗೆ ಮಾರುಹೋಗಿ ದೇಸಿ ಕಲೆಗಳ ಕಡೆಗೆ ಆಸಕ್ತಿ ತೋರದಿರುವುದು ಬೇಜಾರಿನ ಸಂಗತಿ ಆಗಿದೆ.
ಇಂತಹ ಜಾನಪದ ಕಲೆಯನ್ನು ಸಂರಕ್ಷಣೆ ಮಾಡುವುದು ಜಾನಪದ ಕಲೆ, ಮತ್ತು ಕಲೆಗಾರರನ್ನು ಪ್ರೋತ್ಸಾಹಿಸುವುದು ಸರ್ಕಾರ ಮತ್ತು ನಮ್ಮೆಲ್ಲರ ಹೊಣೆ ಮತ್ತು ಕರ್ತವ್ಯ ಆಗಿದೆ ಎಂಬುದು ನನ್ನ ಅಭಿಪ್ರಾಯ


ಪತ್ರಿಕೋದ್ಯಮ ವಿದ್ಯಾರ್ಥಿ
ತುಮಕೂರು ವಿಶ್ವವಿದ್ಯಾನಿಲಯ

ಲಿಂಗ ಸಮಾನತೆ ಅರಿವು ಇನ್ನೂ ಮೂಡಿಲ್ಲ: ಉಷಾ ಶ್ರೀನಿವಾಸ್ ಆತಂಕ

ತುರುವೇಕೆರೆಯ ಚಿದಂಬರೇಶ್ವರ ಉಚಿತ ಗ್ರಂಥಾಯಲದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಣಸಂದ್ರದ ವೈದ್ಯಾಧಿಕಾರಿ ಡಾ.ಟಿ.ಆರ್.ಕೃತಿ ಮತ್ತು ದಂಡಿನಶಿವರದ ನರ್ಸಿಂಗ್ ಆಫೀಸರ್ ಕೆ.ಎಚ್.ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು ಸಂಸ್ಥಾಪಕರಾದ ಲಲಿತಾ ರಾಮಚಂದ್ರ ದಂಪತಿ,ಲೇಖಕಿ ಉಷಾಶ್ರೀನಿವಾಸ್, ಬರಹಗಾರ ತುರುವೇಕೆರೆ ಪ್ರಸಾದ್, ಉದ್ಯಮಿ ವಿದ್ಯಾಕೃಷ್ಣ ಚಿತ್ರದಲ್ಲಿದ್ದಾರೆ.

Publicstory


Thuruvekere: ಕಳೆದೆರೆಡು ದಶಕಗಳಿಂದ ಸ್ತ್ರೀ ಸಬಲೀಕರಣಕ್ಕೆ ವಿಶೇಷ ಮಹತ್ವ ನೀಡಲಾಗಿದೆಯಾದರೂ ಸಾಮಾಜಿಕ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ ಕುರಿತು ಸಮಾಧಾನಕರ ಅರಿವು ಮತ್ತು ಜಾಗೃತಿ ಮೂಡಿಲ್ಲ. ಸ್ತ್ರೀ ಸಮುದಾಯ ತನ್ನನ್ನು ತಾನು ಪುನರ್ ರೂಪಿಸಿಕೊಳ್ಳುವ ಮಾದರಿಗಳನ್ನು ಸ್ತ್ರೀ ಸಂವೇದನೆಯ ನೆಲೆಯಲ್ಲೇ ಪರಿಶೋಧಿಸಬೇಕು ಎಂದು ಲೇಖಕಿ ಉಷಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಯಲದ ವತಿಯಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆಯರ ಮೂಲಭೂತ ಶಿಕ್ಷಣ ಕುರಿತ ಕಾರ್ಯಕ್ರಮಗಳಿಗೆ ಅದ್ಯತೆ ನೀಡಬೇಕಿದೆ. ಸಾಂಸ್ಕøತಿಕ ತಿಳುವಳಿಕೆ, ಮನರಂಜನೆಯ ಜೊತೆಗೆ ಮಹಿಳೆಯರ ಆರೋಗ್ಯ ಕುರಿತು ಕಾರ್ಯಕ್ರಮಗಳನ್ನು ರೂಪಿಸಬೇಕು. ಹೆಣ್ಣನ್ನು ವೈಭವೀಕರಿಸಿ ವ್ಯಾಪಾರ ದೃಷ್ಟಿಯಿಂದ ನೋಡುವ ತಂತ್ರಗಳು ಅತಿರೇಕಕ್ಕೆ ಹೋಗದಂತೆ ಸ್ವಯಂ ನಿಯಂತ್ರಣ ಹೊಂದಬೇಕು ಎಂದ ಅವರು ಹಲವು ಮಾಧ್ಯಮಗಳು ದೇಶಕ್ಕೆ ಮಹಿಳೆಯರು ನೀಡಿದ ಕೊಡುಗೆಯ ಬಗ್ಗೆ ಬೆಳಕು ಚೆಲ್ಲದೆ ರೂಢಿಬದ್ದ ಮನೋರಂಜನೆಯ ವಸ್ತುವಾಗಿ ಬಳಸುವುದರ ಬಗ್ಗೆ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬಾಣಸಂದ್ರದ ವೈದ್ಯಾಧಿಕಾರಿ ಡಾ.ಟಿ.ಆರ್.ಕೃತಿ ಮತ್ತು ದಂಡಿನಶಿವರದ ನರ್ಸಿಂಗ್ ಆಫೀಸರ್ ಕೆ.ಎಚ್.ಗಿರಿಜಮ್ಮ ಅವರನ್ನು ಸನ್ಮಾನಿಸಲಾಯಿತು.

ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕರಾದ ಲಲಿತಾ ರಾಮಚಂದ್ರ ದಂಪತಿ, ಬರಹಗಾರ ತುರುವೇಕೆರೆ ಪ್ರಸಾದ್, ರಂಗಕರ್ಮಿ ಟಿ.ಎನ್.ಸತೀಶ್, ಸಾಹಿತಿ ಬೋರಲಿಂಗಯ್ಯ, ವಿಠ್ಠಲ ದೀಕ್ಷಿತ್, ಆನಂದ್ ವಾಡೇಕರ್, ರಾಮಕೃಷ್ಣಯ್ಯ, ಉದ್ಯಮಿ ವಿದ್ಯಾಕೃಷ್ಣ, ವಾಸವಿ ಸತೀಶ್, ವಿರೂಪಾಕ್ಷ, ಯೋಗಾನಂದ್ ಇತರರು ಭಾಗವಹಿಸಿದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ಸಾಧಕ ಮಹಿಳೆಯರ ಚಿತ್ರ ಪ್ರದರ್ಶನ

Publicstory


ಚಿಕ್ಕನಾಯಕನಹಳ್ಳಿ: ಪ್ರಥಮ ದರ್ಜೆ ಕಾಲೇಜು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಭಿನಂದನಾ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕ ಮತ್ತು ಜೆಂಡರ್ ಚಾಂಪಿಯ ಶಿಪ್ ಘಟಕ ಹಾಗೂ IQAC ಸಹಯೋಗದೊಂದಿಗೆ ವಿಭಿನ್ನವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ್ ವಹಿಸಿದ್ದರು. ತಾಲೂಕು ದಂಡಾಧಿಕಾರಿಗಳಾದ ತೇಜಸ್ವಿನಿ ಕಾರ್ಯಕ್ರಮ ಉದ್ಘಾಟಿಸಿ ಜೀವನದಲ್ಲಿ ಹೆಣ್ಣುಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳು ಅವರ ಜೀವನ ಹಾಗೂ ಶೈಲಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೂ ಹೆಣ್ಣು ಮಾನಸಿಕವಾಗಿ ಧೈರ್ಯವಾಗಿ ಎಲ್ಲವನ್ನು ಎದುರಿಸುವ ಗುಣ ಬೆಳಸಿಕೊಳ್ಳಿ ಎಂದು ತಿಳಿಸಿದರು.

ಮಹಿಳಾ ಘಟಕದ ಸಂಯೋಜಕರಾದ ಪದ್ಮ , ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೂಪ ವೆಂಕಟೇಶ , ಅಶ್ವಥ್ ನಾರಾಯಣ ಗುಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜು. ಶೆಟ್ಟಿಕೆರೆ. ಇವರು ಮಹಿಳಾ ಹಕ್ಕುಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದ ವಿಭಿನ್ನತೆಯನ್ನು ರೂಪಿಸಲು ಪ್ರಾಧ್ಯಾಪಕರಾದ ಪದ್ಮಶ್ರೀ ಜಿ ರವರು ವಿವಿಧ ವಲಯಗಳ ಮಹಿಳೆಯರನ್ನು ಸಂದರ್ಶನ ಮಾಡಿ ಹೆಣ್ಣಿನ ಕುರಿತು ಅವರ ಪರಿಕಲ್ಪನೆಗಳನ್ನು ಸಾಕ್ಷ್ಯಚಿತ್ರದ ಮೂಲಕ ಸಾದರಪಡಿಸಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಯಶಸ್ಸಿನ ಏಣಿಯನ್ನು ಏರಲು ಮಹಿಳೆ ಸ್ವತಂತ್ರಳು. ಮಹಿಳೆ ತನ್ನನ್ನು ಪ್ರೀತಿಸಿ ಗೌರವಿಸಿದರೆ ತನ್ನ ಕಾರ್ಯಗಳನ್ನು ಪ್ರಶಂಸಿಸುವುದನ್ನು ಕಲಿತರೆ ಹೆಣ್ಣಿನ ಸಬಲೀಕರಣವಾದಂತೆ ಎಂದು ಸಂದೇಶ ನೀಡಲಾಯಿತು.

ಅಶ್ವತ್ಥನಾರಾಯಣ ಗುಟ್ಟೆ ರವರು ಮಹಿಳಾ ದಿನಾಚರಣೆಯನ್ನು ಮಹಿಳಾ ಹಕ್ಕಿನ ದಿನಾಚರಣೆ ಎಂದು ಹೇಳಿದರು. ನಿರಂತರವಾಗಿ ಶೋಷಣೆಗೆ ಒಳಗಾದ ಮಹಿಳೆಯರ ಬಗ್ಗೆ ಮಾತನಾಡಿದರು.

ಪ್ರಾಧ್ಯಾಪಕ ಶಿವರಾಮಯ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಗೋವಿಂದಯ್ಯ ಸ್ವಾಗತಿಸಿದರು.

ಪ್ರಾಧ್ಯಾಪಕರಾದ ವಿಶ್ವನಾಥ್, ಮಮತಾ c h,. ಶಶಿರೇಖಾ, ಪುಷ್ಪ, ಮತ್ತು ಮಹಿಳಾ ಉಪನ್ಯಾಸಕರು ಹಾಗೂ ಎಲ್ಲಾ ಭೋದಕರು ಇದ್ದರು.

ಹೆಣ್ಣು ಭ್ರೂಣವ ಉಳಿಸೋಣ ಬನ್ನಿ…

0

ದೀಕ್ಷಾ ತುಮಕೂರು


ಬನ್ನಿ ಸ್ನೇಹಿತರೆ ಬನ್ನಿ ಮೂಢನಂಬಿಕೆಯಂಬ ಕೆಟ್ಟ ಚರ್ಮವ ಸುಲಿದು ಬನ್ನಿ ಜಾತಿ – ಮತಗಳೆಂಬ ಕೆಟ್ಟ ಭಾವವ ತೊರೆದು ಬನ್ನಿ ಅನಕ್ಷರತೆಯನ್ನು ಅಳಿಸೋಣ ಬನ್ನಿ ಅಕ್ಷರವ ಕಲಿತು ಬೆಳೆಸೋಣ ಬನ್ನಿ……. ಹೆಣ್ಣು ಭ್ರೂಣವ ಉಳಿಸೋಣ ಬನ್ನಿ ಹೆಣ್ಣನ್ನು ಗೌರವಿಸುವ ಮನವ ಹೊತ್ತು ಬನ್ನಿ ನಮ್ಮ ಸಂಸ್ಕೃತಿಯ ಮಹತ್ವವನ್ನು ಎಲ್ಲೆಡೆ ಚೆಲ್ಲಾಡ ಬನ್ನಿ ಮನುಷ್ಯಧರ್ಮದ ದೀವಿಗೆಯನ್ನು ಹಚ್ಚೋಣ ಬನ್ನಿ ಮಾನವೀಯತೆಯನ್ನು ಮೆರೆಸೋಣ ಬನ್ನಿ….

ನಮ್ದೂ ಒಂದು ಬಾಳು…!

ಮಹೇಂದ್ರ ಕೃಷ್ಣಮೂರ್ತಿ


ದಲಿತ ಸಂವೇದನೆಗಳಷ್ಟೇ ಅಲ್ಲದೇ ಅಹಿಂದ‌ ಜಾತಿಗಳ ಜನರ ಬದುಕಿನ ನೋವಿನ ದನಿಯಾಗಿ ಸಾಹಿತ್ಯಲೋಕದಲ್ಲಿ ಹೊಸ ಛಾಪು ಮೂಡಿಸುತ್ತಿರುವ ಡಾ.ಓ.ನಾಗರಾಜ್ ಅವರ ನೀಳ್ಗತೆಗಳ ಸಂಗ್ರಹವೇ ನಮ್ದೂ ಬಂದು ಬಾಳು.

ಹೆಸರೇ ಸೂಚಿಸುವಂತೆ ಇದೊಂದು ನೋವುಂಡವರ ಕಥನ. ಸಾಮಾನ್ಯವಾಗಿ ನಮ್ದೂ ಒಂದು ಬಾಳೇ ಎಂಬ ಎದೆಯಾಳದ ನೋವಿನ ದನಿ, ಆಕ್ರೋಶ ಬರುವುದು ಬಡವರ ಬಾಯಿಂದಲೇ.

ನಾವೆಲ್ಲ ಸೇರಿ ತುಮಕೂರು ಜಿಲ್ಲೆಯ ಬಂಜರು ಬರಡು ಮಾಡಿರುವ ಕೃಷ್ಣಾ ಕೊಳ್ಳದ ಜನ ಜೀವನದ ನಾಡಿಯಾಗಿ ಇಲ್ಲಿಯ ಕಥೆಗಳು ಮೂಡಿವೆ.

ಸಾಮಾನ್ಯವಾಗಿ ನಾಗರಾಜ್, ತಮ್ಮ ಬದುಕಿನ ನೆಲೆಯಿಂದಲೇ ಕಥೆಗಳನ್ನು ಹೆಕ್ಕುತ್ತಾರೆ. ಹಾಗಾಗಿಯೇ ಅವರ ಕಥೆಗಳಲ್ಲಿ ಊರುಗಳು ಮಾತ್ರವಲ್ಲ ಕೆಲವೊಮ್ಮೆ ನಮ್ಮ ನಿಮ್ಮ‌ ನಡುವಿನ ಜನರ ಅವರ ಹೆಸರುಗಳಲ್ಲೇ ಇಲ್ಲಿ ಪಾತ್ರವಾಗಿ ಬಿಡುತ್ತಾರೆ. ಹೀಗಾಗಿಯೇ ಇಲ್ಲಿಯ ಎಲ್ಲಾ ಕತೆಗಳ‌ನ್ನು ಓದುವುದು ಹೆಚ್ಚು ಆಪ್ತವಾಗುತ್ತವೆ.

ಮೂರು ಕತೆಗಳದು ವಿಭಿನ್ನ. ಹಂದರಗಳಿವೆ. ಅದರೆ ಪ್ರೀತಿಯ ಬದುಕಿನ ಚಿತ್ರಣಗಳಿವೆ.

ನಮ್ದೂ ಒಂದು ಬಾಳು ಕಥಾ ಸಂಕಲನದ ಮೊದಲ ಕಥೆ. ಬದುಕಿ‌ನ ಸಂಘರ್ಷ ಎದುರಿಸುವ ಜನರು ಓದಿದರೆ ಕಣ್ಣೀರಾಗುವುದರಲ್ಲಿ ಎರಡು ಮಾತಿಲ್ಲ.

ತುಂಬಾಡಿ ಹಾಲುಮತದವರ ಹುಡುಗಿಯನ್ನು ಅದೇ ಮನೆಯಲ್ಲಿ ಜೀತಕ್ಕಿದ್ದ ದಲಿತ ಸಮುದಾಯದ ಹುಡುಗ ಮದುವೆಯಾಗುವ ಮೂಲಕ ಆರಂಭವಾಗುವ ಕಥನ ಕೊನೆಗೆ ಮುಟ್ಟುವುದು ನೋವಿನ ಕಡಲಿಗೆ.

ಪ್ರೀತಿಗೆ ಗೆಲುವು ಸಿಕ್ಕರೂ ಕೊನೆಯಲ್ಲಿ ಇಡೀ ಬದುಕು ಎತ್ತತ್ತ ಸಾಗಿಸುತ್ತದೆ ಎಂಬುದೇ ಕತೆಯ ಕೂತೂಹಲ.

ಸಾಯುವುದಕ್ಕೆ ಅಲ್ಲ ನಾವು ಹುಟ್ಟಿರೋದು, ಬಾಳು ಬದುಕೋಗೆ ಎಂಬ ಮಾತುಗಳು ಬದುಕಿ ತೋರಿಸುವ ಛಲದ ಬಗ್ಗೆ ಹೇಳುತ್ತದೆ.

ಅವರು ಸಾಬರ ಜಾತಿಗೆ ಸೇರ್ಕಂಡವ್ರೆ ನಾವು ಹೆಂಗೆ ಹೋಗಾಲ ಆಗೈತಿ ಎಂಬ ಮಾತುಗಳು ಮತಾಂತರ ಬದುಕಿನ ಸಂಬಂಧಗಳ ನಡುವೆ ಸೃಷ್ಟಿಸುವ ಬಿಕ್ಕಟ್ಟನ್ನು ಹೇಳುತ್ತದೆ.

ಹೀಗೆ ಇಲ್ಲಿನ ಎಲ್ಲ ಕತೆಗಳ ಪಾತ್ರಗಳು ಕಷ್ಟದಲ್ಲೇ ಕೈ ತೊಳೆಯುತ್ತವೆ. ಆದರೂ ಬದುಕು ತೋರಿಸುವ ಛಲವನ್ನು ಪ್ರದರ್ಶನ ಮಾಡುತ್ತವೆ.

ಕನ್ನಡ ತೆಲುಗಿನ ಸಂಬಂಧ, ಮಾತುಕತೆಗಳು, ಸಂಭಾಷಣೆಗಳು, ಪಾತ್ರಗಳು ಎಲ್ಲವೂ ಮಧುಗಿರಿ, ಶಿರಾ, ಕೊರಟಗೆರೆಯ ಜನಜೀವನದಿಂದ ಮೇಲೆದ್ದ ಪಾತ್ರಗಳೇ ಆಗಿರುವುದರಿಂದ ಇಲ್ಲಿ ಸಾಮಾಜಿಕ ಆರ್ಥಿಕ ನೆಲೆಗಟ್ಟಿನಿಂದಲೂ ಇಲ್ಲಿಯ ಕಥೆಗಳು ಓದಿಗೆ, ಸಂಶೋಧನಾ ಅಧ್ಯಯನಕ್ಕೂ ಪೂರಕವಾಗಿದೆ.

ನಾನೇನು ಕೇಳಿದೆ

0

ಡಾ \\ ರಜನಿ

ಮುದ್ದಾದ
ಕಿರು ಬೆರಳ ಒಮ್ಮೆ
ಮುತ್ತಿಡಲು

ಕೆಂಪು ತುಟಿಗಳ
ಇನ್ನೂ ಕೆಂಪಾಗಿಸಲು

ಗುಲಾಬಿ ಹಿಮ್ಮಡಿಗಳ
ಧೂಳ್ ಆಗಿಸದೆ ಇರಲು

ರೇಷ್ಮೆ ಕೂದಲಲ್ಲಿ
ಕಾಡು ಹಳದಿ ಹೂವ ಮುಡಿಸಲು

ನನ್ನ ಮೂಗಿಗೆ ನಿನ್ನ ಅಂಗಳದ
ಪಾರಿಜಾತದ ಗಂಧ ಅಡರಲು

ನಿನ್ನ ಹೊಲದಲ್ಲಿ ..ಆಕಾಶದ
ಕೆಳಗೆ ..
ಕಾದ ಬಂಡೆಯ ಮೇಲೆ

ನೀನು ಕೊಡಿಸಿದ ಸೀರೆಯ
ಎದೆ ಮೇಲೆ ಹರಡಿ ಒಮ್ಮೆ ತಿರುಗಲು

ಕಮಲದ ಕಾಲುಗಳು
ಭೂಮಿಗೆ ಇಡವುದ . . ಕಾದು..
ಹೆಮ್ಮೆಯಿಂದ ನೋಡಲು

ಸಂಜೆ ಕೆಂಬಳಗಲ್ಲಿ….ದೇವಸ್ಥಾನದ
ಬೀದಿಗಳಲ್ಲಿ
ಬಣ್ಣದ ಬಳೆಗಳ ಆರಿಸಲು

ಗುಟ್ಟಾದ ಹೆಸರಿಟ್ಟು
ನಮ್ಮದೇ ಗಳಿಗೆಯಲ್ಲಿ
ರಮಿಸಲು

ನೀನಂದು ಕೊಂಡಿದನ್ನು
ನಾನು ಕೇಳಿಲ್ಲ…..

ಕೃಷಿ ರಂಗದ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಅಗತ್ಯ’

ಬೆಂಗಳೂರು: ಕೃಷಿ ರಂಗ ಎದುರಿಸುತ್ತಿರುವ ನಾನಾ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದ್ದಾರೆ.

ಅವರು ನಗರದ ಬಹುರೂಪಿ ಬುಕ್ ಹಬ್ ನಲ್ಲಿಂದು ಶ್ರೀ ಪಡ್ರೆ ಅವರ ‘ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ’ ಹಾಗೂ ಆನಂದತೀರ್ಥ ಪ್ಯಾಟಿ ಅವರ ‘ಥಾಯ್ಲೆಂಡ್ ಕೃಷಿ ಪ್ರವಾಸ’ ಪುಸ್ತಕಗಳನ್ನು ಬಿಡುಗಡೆಮಾಡಿ ಮಾತನಾಡಿ, ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮುಷ್ಕರದ ಆಚೆಗೂ ಗಮನಿಸಬೇಕಿದೆ ಎಂದರು. ‘ಒಂದೊಮ್ಮೆ ಕೇಂದ್ರ ಸರಕಾರ ನೂತನ ಮಸೂದೆಗಳನ್ನು ಹಿಂಪಡೆದುಕೊಂಡರೂ ಕೃಷಿ ರಂಗದ ಸಮಸ್ಯೆಗಳು ಬಗೆಹರಿಯುವುದಿಲ್ಲ; ರೈತರು ವಿವಿಧ ಒಳಸುರಿಗಳಿಗಾಗಿ ಬಹುರಾಷ್ಟ್ರೀಯ ಕಂಪೆನಿಗಳನ್ನು ನೆಚ್ಚಿಕೊಳ್ಳುವುದು ಮುಂದುವರಿಯುತ್ತದೆ. ಹೀಗಾಗಿ ರೈತರ ಪ್ರತಿಭಟನೆ ಕೊನೆಗೊಂಡರೂ ಅವರ ಸಂಕಷ್ಟಗಳಿಗೆ ಪರಿಹಾರ ಯಾವುದು ಎಂಬ ಬಗ್ಗೆ ಆಲೋಚಿಸಬೇಕಿದೆ ಎಂದರು.

ಹೇರಳ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಪೀಡೆನಾಶಕಗಳನ್ನು ಆಮದುಮಾಡಿಕೊಳ್ಳುತ್ತಿರುವ ಥಾಯ್ಲೆಂಡಿನಲ್ಲಿ ತುಂಬ ಸಣ್ಣ ಮಟ್ಟದಲ್ಲಿ ಸಾವಯವ ಕೃಷಿ ಕೈಗೊಂಡಿದ್ದು, ಈ ವಲಯದಲ್ಲಿ ಹಲವಾರು ನಾವಿನ್ಯಪೂರ್ಣ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ನಾವು ಕಲಿಯುವುದು ಬಹಳಷ್ಟಿದೆ; ಪ್ಯಾಟಿ ಅವರ ಕೃತಿ ಈ ಬಗ್ಗೆ ಬೆಳಕುಚೆಲ್ಲುತ್ತದೆ ಎಂದರು.

ಹಿರಿಯ ಬರಹಗಾರ ನಾಗೇಶ ಹೆಗಡೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರೇರಣಾದಾಯಕ ಪುಸ್ತಕಗಳು ಗ್ರಾಮೀಣ ಯುವಜನತೆಗೆ ಹೆಚ್ಚುಹೆಚ್ಚಾಗಿ ತಲುಪಬೇಕಿದೆ; ಈ ಮೂಲಕ ಅವರು ನಗರಗಳತ್ತ ಮುಖಮಾಡುವ ಬದಲು ಗ್ರಾಮೀಣ ಭಾಗದಲ್ಲೇ ಉಳಿಯುವಂತೆ ಪ್ರೋತ್ಸಾಹಿಸಬೇಕು ಎಂದರು.

ಹಾಸನ ಕೃಷಿ ಕಾಲೇಜಿನ ಡೀನ್ ಡಾ. ಎನ್. ದೇವಕುಮಾರ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇಂತಹ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು; ಇದರಿಂದ ಕೃಷಿ ರಂಗದ ಹೊಸ ವಿದ್ಯಮಾನಗಳ ಬಗ್ಗೆ ಅರಿವಿನ ಜತೆಗೆ ಪರಿಣಾಮಕಾರಿಯಾಗಿ ಬರೆಯುವ ಕ್ರಮದ ಕುರಿತು ಕೂಡ ಮಾರ್ಗದರ್ಶನ ದೊರೆಯುತ್ತದೆ ಎಂದರು.

‘ಸಹಜ ಸಮೃದ್ಧ’ ನಿರ್ದೇಶಕ ಜಿ. ಕೃಷ್ಣಪ್ರಸಾದ್ ‘ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ’ ಬಗ್ಗೆ ಸಂವಾದ ನಡೆಸಿಕೊಟ್ಟರು. ಕೋವಿಡ್ ಸಂದರ್ಭದಲ್ಲಿ ರೈತ ಸಮುದಾಯ ಹೆಚ್ಚಿನ ಸಂಕಟ ಅನುಭವಿಸಿತು. ಆದರೂ ಮೌಲ್ಯವರ್ಧನೆ, ಬೀಜೋತ್ಪಾದನೆ, ಗೃಹೋದ್ಯಮದಂತಹ ಚಟುವಟಿಕೆಗಳು ಅಲ್ಲಲ್ಲಿ ತುಸು ನೆಮ್ಮದಿಯನ್ನು ತಂದುಕೊಟ್ಟವು ಎಂದರು.

ಪತ್ರಕರ್ತ ಗಾಣಧಾಳು ಶ್ರೀಕಂಠ ಪುಸ್ತಕ ಪರಿಚಯ ಮಾಡಿದರು. ಬಹುರೂಪಿ ಬುಕ್ ಹಬ್ ನಿರ್ದೇಶಕ ಜಿ.ಎನ್. ಮೋಹನ್, ಪುಸ್ತಕ ಸಂಸ್ಕೃತಿಯನ್ನು ಹೆಚ್ಚು ವ್ಯವಸ್ಥಿತ ಮತ್ತು ವೈವಿಧ್ಯಮಯವಾಗಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಲೇಖಕ ಆನಂದತೀರ್ಥ ಪ್ಯಾಟಿ, ಡಾ.ಜಿ. ಕರುಣಾಕರನ್, ವಿಶಾಲಾಕ್ಷಿ ಶರ್ಮ, ಸಾವಯವ ಕೃಷಿಕರಾದ ಶಿವನಾಪುರ ರಮೇಶ್, ನಂದೀಶ್ ಚುರ್ಚಿಗುಂಡಿ, ಶಿವಪುತ್ರ ಚೌಧರಿ, ಶ್ರೀಪಾದ ರಾಜ ಮುರಡಿ ಮತ್ತಿತರರು ಉಪಸ್ಥಿತರಿದ್ದರು.
***