Saturday, December 6, 2025
Google search engine
Home Blog Page 16

ಡಾ ಪ್ರಕಾಶ ಭಟ್ ಅವರ’ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಬಿಡುಗಡೆ

ಖ್ಯಾತ ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್ ಅವರ ಮಹತ್ವದ ಕೃತಿ, ‘ಬಹುರೂಪಿ’ಯ ಪ್ರಕಟಣೆ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಬಿಡುಗಡೆಯನ್ನು ಈ ಭಾನುವಾರ ( ಮೇ 19) ರಂದು ಧಾರವಾಡದಲ್ಲಿ, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಂಗಣದಲ್ಲಿ ಬೆಳಗ್ಗೆ 10 -30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ‘ಬಹುರೂಪಿ’ ಹಾಗೂ ಸೂರಶೆಟ್ಟಿಕೊಪ್ಪದ ‘ಸರ್ವೋದಯ ಮಹಾಸಂಘ’ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲಿ ಹೊಸ ಕಾಣ್ಕೆಯನ್ನು ನೀಡುವ ಕೃತಿ ಇದು. ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಹಾಗೂ ಶಿರಸಿ ತಾಲೂಕಿನ ದಾಸನಕೊಪ್ಪದ 50 ಹಳ್ಳಿಗಳು ಹೊಸ ಬೆಳಕಿನತ್ತ ಹೆಜ್ಜೆ ಹಾಕಿದ ಕಥನ ಇದು. ಈ ಕೃತಿಯನ್ನು ಈ ಹಳ್ಳಿಗಳವರೇ ಬಿಡುಗಡೆಗೊಳಿಸುತ್ತಿದ್ದಾರೆ ಎನ್ನುವುದು ವಿಶೇಷ ಎಂದು ಬಹುರೂಪಿಯ ಸ್ಥಾಪಕರಾದ ಶ್ರೀಜಾ ವಿ ಎನ್ ಹಾಗೂ ಸರ್ವೋದಯ ಮಹಾಸಂಘದ ರೇಣಪ್ಪಗೌಡ ಭಾವಿಕಟ್ಟಿ ಅವರು ತಿಳಿಸಿದ್ದಾರೆ. .

ಖ್ಯಾತ ವಿಜ್ಞಾನ ಅಂಕಣಕಾರ, ಸಾಹಿತಿ ಹಾಗೂ ಹಳ್ಳಿಗಳ ಈ ಮಾರ್ಪಾಟನ್ನು ಸ್ವತಃ ಕಂಡ ನಾಗೇಶ ಹೆಗಡೆ ಅವರು ಈ ಕೃತಿಯ ವಿಶೇಷತೆಯ ಬಗ್ಗೆ ಮಾತನಾಡಲಿದ್ದಾರೆ. ಆ ನಂತರದಲ್ಲಿ ಡಾ ಪ್ರಕಾಶ ಭಟ್ ಅವರೊಂದಿಗೆ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖದ ಬಗ್ಗೆಯೇ ಸಂವಾದ ಜರುಗಲಿದೆ.

ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ಆಂಧ್ರ ಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ತೇಜಸ್ವಿ ಕಟ್ಟೀಮನಿ, ಹಿರಿಯ ಸಾಹಿತಿ, ಶಿಕ್ಷಣ ತಜ್ಞ ಡಾ ಬಿಳಿಗೆರೆ ಕೃಷ್ಣಮೂರ್ತಿ ಅವರು ಸಂವಾದದಲ್ಲಿ ಭಾಗವಹಿಸುತ್ತಾರೆ. ಸುನಂದಾ ಪ್ರಕಾಶ್ ಅವರು ಈ ಇಡೀ ಹಳ್ಳಿ ಕಟ್ಟುವ ಪ್ರಕ್ರಿಯೆಗೆ ಪ್ರತಿಕ್ರಿಯಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸೂರಶೆಟ್ಟಿಕೊಪ್ಪ ಹಾಗೂ ದಾಸನಪುರದ ಹಲವಾರು ಗ್ರಾಮಸ್ಥರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಬಹುರೂಪಿಯ ಪ್ರಕಟಣೆಗಳ ಪ್ರದರ್ಶನ-ಮಾರಾಟವಿರುತ್ತದೆ.

ಕೆರೆಯ ಮಣ್ಣು: ಮಾಜಿ ಶಾಸಕರು ಗರಂ

0

ತುರುವೇಕೆರೆ: ರೈತರು ಕೆರೆಯಿಂದ ಮಣ್ಣು ತೆಗೆದರೆ ವಾಹನ ಜಪ್ತಿ ಮಾಡಿ, ಮಾಲೀಕರ ವಿರುದ್ದ ಪ್ರಕಣ ದಾಖಲಿಸಲಾಗುವುದೆಂದು ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭುರವರು ಹೊರಡಿಸಿರುವ ಆದೇಶವನ್ನು ಹಿಂಪಡೆಯ ಬೇಕು. ಇಲ್ಲವಾದರೆ ಸಾವಿರಾರು ರೈತರೊಡಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಟ್ರ್ಯಾಕ್ಟರ್ ಚಳವಳಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಎಚ್ಚರಿಕೆ ನೀಡಿದರು.


ಪಟ್ಟಣದ ಚಿಕ್ಕೋನಹಳ್ಳಿ ಗೇಟ್ನಲ್ಲಿ ಗುರುವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರವೇ ಕೆರೆಗಳಲ್ಲಿ ಹತ್ತಾರು ವರ್ಷಗಳಿಂದ ತುಂಬಿರುವ ಹೂಳೆತ್ತಿ ಆ ಮೂಲಕ ಕೆರೆಯಲ್ಲಿ ನೀರಿನ ಸಾಮರ್ಥವನ್ನು ಹೆಚ್ಚಿಸಬೇಕೆಂದು ಅಭಿಯಾನ ಮಾಡುತ್ತಿರುವಾಗ ಈ ಅಧಿಕಾರಿಗಳ ಆದೇಶ ರೈತ ವಿರೋಧಿಯಾಗಿದೆ ಎಂದರು.


ಕೆರೆಯ ಮಣ್ಣನ್ನು ತೆಗೆಯುವಾಗ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಳ್ಳಬೇಕು ಎನ್ನುವ ಅಧಿಕಾರಿಗಳು ತುರುವೇಕೆರೆ ಸೇರಿದಂತೆ ಜಿಲ್ಲೆಯಲ್ಲೇ ಸಣ್ಣಹಿಡುವಳಿದಾರ ರೈತರ ಸಂಖ್ಯೆನೇ ಹೆಚ್ಚು. ಇವರಲ್ಲಿ ಎಷ್ಟು ಮಂದಿ ರೈತರಿಗೆ ಅನುಮತಿ ಪಡೆಯಬೇಕೆಂಬ ತಿಳವಳಿಕೆ ಇದೆ‌ ಎಂದರು.


ಹತ್ತಿಪ್ಪತ್ತು ಲೋಡ್ ಮಣ್ಣು ಹೊಡೆದುಕೊಳ್ಳಲು ಜಿಲ್ಲೆಗೆ ದಣಿಯಬೇಕೆ ಈಗಾಗಲೇ ನೀರಿಲ್ಲದೆ ರೈತರು, ತೆಂಗು, ಅಡಿಕೆ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ, ತಾಲ್ಲೂಕಿನಲ್ಲಿ ಯಾರೂ ಕಮರ್ಷಿಯಲ್ ಆಗಿ ಮಣ್ಣು ಹೊಡೆದುಕೊಳ್ಳುತ್ತಿಲ್ಲ. ರೈತರ ಕಷ್ಟ ಅಧಿಕಾರಿಗಳಿಗೇನು ಗೊತ್ತು. ಒಂದು ವೇಳೆ ಕೆರೆಯ ಮಣ್ಣನ್ನು ರೈತರು ತೆಗೆಯುವಾಗ ಯಾವ ಯಾವ ನಿಯಮಗಳನ್ನು ಪಾಲಿಸಬೇಕೆಂದು ಸೂಚನೆಗಳನ್ನಾದರೂ ಜಿಲ್ಲಾಧಿಕಾರಿಗಳು ಮತ್ತ ಸಿಇಒ ನೀಡಲಿ ಅದು ಬಿಟ್ಟು ರೈತರ ಮೇಲೆ ಗದಾಪ್ರಹಾರ ನಡೆಸಬಾರದು ಎಂದರು.


ಜಿಲ್ಲಾಡಳಿತದ ಆದೇಶದಿಂದ ಪೊಲೀಸರಿಗೆ, ಕಂದಾಯ ಇಲಾಖಾ ಅಧಿಕಾರಿಗಳಿಗೆ ದುಡ್ಡುಮಾಡಲು ರಹದಾರಿಕೊಟ್ಟಂತೆ ಆಗುತ್ತಿದೆಯೇ ವಿನಹ ರೈತರಿಗೆ ಅನುಕೂವಾಗುತ್ತಿಲ್ಲ,

ಸುಕಾಸುಮ್ಮನೆ ರೈತರ ಮೇಲೆ ಜಿಲ್ಲಾಧಿಕಾರಿ ಮತ್ತು ಸಿಇಒ ಸರ್ವಾಧಿಕಾರಿ ಧೋರಣೆ ಎಂದು ದೂರಿದರು.
ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ಪ್ರಾರಂಭ ಮಾಡುವ ಬಗ್ಗೆ ರೈತರಿಗೆ ಸರಿಯಾಗಿ ಜಿಲ್ಲಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್ ಆಗಲಿ ಪ್ರಚಾರನೇ ನಡೆಸಿಲ್ಲ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಕೊಳವೆ ಬಾವಿಯಲ್ಲಿ ನೀರಿಲ್ಲದೆ ಜನ ಟ್ಯಾಂಕರ್ ಮೊರೆ ಹೋಗಿದ್ದಾರೆ ಬರಗಾಲದಿಂದ ರೈತರು, ಜನರು ತತ್ತರಿಸಿ ಹೋಗಿದ್ದಾರೆ ಇದಕ್ಕೆ ಜಿಲ್ಲಾಧಿಕಾರಿಗಳು, ಸಿಇಒ ಏನು ಕ್ರಮ ಕೈಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.


ಹೇಮಾವತಿ ನಾಲೆಗೆ ಎಕ್ಸ್ ಪ್ರೆಸ್ ಲೈನ್ ಮಾಡಿ ಇಲ್ಲಿಂದ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಜಿಲ್ಲೆಯ ಜನ ಬಿಡುವುದಿಲ್ಲ. ರಕ್ತಕೊಟ್ಟರೂ ನೀರು ಕೊಡುವುದಿಲ್ಲ ಇದಕ್ಕೆ ನನ್ನ ವಿರೋಧವಿದೆ. ಹೇಮಾವತಿ ನಾಲಾ ನೀರು ಬೇರೆಡೆ ಬಿಟ್ಟರೆ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುತ್ತೀರಿ ಈ ಕಾಮಗಾರಿಯನ್ನು ಇಲ್ಲಿಗೆ ನಿಲ್ಲಿಸಿ. ಇಲ್ಲವಾದಲ್ಲಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಹೋರಾಟಕ್ಕೆ ಇಳಿಯಾಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್ ಮುಖಂಡರುಗಳಾದ, ದಿನೇಶ್, ಸುರೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ, ವಿ.ಬಿ.ಸುರೇಶ್, ನಡವನಹಳ್ಳಿ ಚಂದ್ರಣ್ಣ, ಜಗದೀಶ್, ಮದುಸೂದನ್ ಇನ್ನಿತರರು ಇದ್ದರು.

SSLC ಪರೀಕ್ಷೆ: ಮಾದರಿಯಾದ ತುರುವೇಕೆರೆ

0

ತುರುವೇಕೆರೆ: 2023-24 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ 81.24 ಗಳಿಸಿ ಜಿಲ್ಲೆಗೆ ತುರುವೇಕೆರೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದರು.


ಪಟ್ಟಣದ ಬಿಇಒ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದರು.

ತಾಲ್ಲೂಕಿನ 57 ಶಾಲೆಗಳಿಂದ ಒಟ್ಟು 1999 ವಿದ್ಯಾರ್ಥಿಗಳಲ್ಲಿ 1017 ಬಾಲಕರು, 982 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 1624 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಇವರಲ್ಲಿ 762 ಬಾಲಕರು, 864 ಬಾಲಕಿಯರು ತೇರ್ಗಡೆಯಾಗುವ ಮೂಲಕ ಈ ಬಾರಿಯೂ ಗ್ರಾಮೀಣ ಪ್ರದೇಶದ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.


ಹಾವಾಳ(ಮಣಿಚೆಂಡೂರು) ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ದೀಪಿಕ 613 ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಡೆದುಕೊಂಡಿದ್ದಾಳೆ.

ಇದೇ ವಸತಿ ಶಾಲೆಯ ಮೊತ್ತೊರ್ವ ವಿದ್ಯಾರ್ಥಿನಿ ಅಮೂಲ್ಯ 612 ಅಂಕ ಗಳಿಸಿ ಎರಡನೇ ಸ್ಥಾನ ಗಳಿಸಿದ್ದಾರೆ. ಪಟ್ಟಣದ ಪ್ರಿಯ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಬಿ.ಸಿಂಚನಾ 607 ಪಡೆದು ಮೂರನೆ ಸ್ಥಾನದಲ್ಲಿದ್ದಾರೆ.

ಪಟ್ಟಣದ ಜೆ.ಪಿ ಆಂಗ್ಲ ಪ್ರೌಢಶಾಲೆ ಕೆ.ಎ.ಗಾನವಿ ಹಾಗೂ ಎಂ.ಜೆ.ಜಮುನಾ ಇಬ್ಬರು ವಿದ್ಯಾರ್ಥಿಗಳು ತಲಾ 603 ಅಂಕಗಳಿಸಿದ್ದಾರೆ.
ತಾಲ್ಲೂಕಿನಲ್ಲಿ 9 ಶಾಲೆಗಳು 100 ಫಲಿತಾಂಶ ಪಡೆದುಕೊಂಡಿವೆ.

ಕಿತ್ತೂರು ರಾಣಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಡಾ.ಆಂಬೇಡ್ಕರ್ ವಸತಿ ಶಾಲೆ, ಪಟ್ಟಣದ ಪ್ರಿಯಾ ಇಂಗ್ಲೀಷ್ ಪ್ರೌಢಶಾಲೆ, ಸರ್ಕಾರಿ ಶಾಲೆ ಆಲದಹಳ್ಳಿ, ಪಟ್ಟಣದ ಮಯೂರ ಶಾಲೆ, ದೊಡ್ಡೇನಹಳ್ಳಿ ಸೆಂಟ್ ಮೇರೀಸ್ ಶಾಲೆಯು ಶೇಕಡಾ ನೂರರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.


ಈ ಬಾರಿ ತಾಲ್ಲೂಕಿನಲ್ಲಿ ಶೇಕಡವಾರು ಫಲಿತಾಂಶ ಹೆಚ್ಚಾಗಿದ್ದು ತುಮಕೂರು ಶೈಕ್ಷಣಿಕ ಜಿಲ್ಲೆಗೆ ತುರುವೇಕೆರೆ ಎರಡನೇ ಸ್ಥಾನ ಲಭಿಸಿದೆ.

ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಇಒ ತಿಳಿಸಿದರು ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಪ್ಪ, ಶರತ್ ಇದ್ದರು.

ತುರುವೇಕೆರೆ ತಾಲ್ಲೂಕಿನ ಹಾವಾಳ(ಮಣಿಚೆಂಡೂರು) ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ದೀಪಿಕ 613 ಶೇ.98.08 ಅಂಕ
ತುರುವೇಕೆರೆ ತಾಲ್ಲೂಕಿನ ಹಾವಾಳ(ಮಣಿಚೆಂಡೂರು) ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಅಮೂಲ್ಯ 612 ಶೇ97.92 ಅಂಕ
ಪಟ್ಟಣದ ಪ್ರಿಯ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಬಿ.ಸಿಂಚನಾ 607 ಶೇ.97.12

ತಿಪಟೂರು: ಮಹಿಳೆ ಸಾವು: ತನಿಖೆಗೆ ಒತ್ತಾಯ

ತಿಪಟೂರು: ಸಾಲ ವಸೂಲಿಗೆ

ಹೆದರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಪಟೂರು ತಾಲ್ಲೂಕಿನಲ್ಲಿ ಅರಳಗುಪ್ಪೆ ಗ್ರಾಮದಲ್ಲಿ ನಡೆದಿದೆ.

ತಿಪಟೂರು ತಾಲೂಕು ಕಿಬ್ಬನಹಳ್ಳಿ ಹೋಬಳಿಯ ಅರಳಗುಪ್ಪೆ ಗ್ರಾಮದ ನಿವಾಸಿ ಭಾಗ್ಯಮ್ಮ(51) ಮೃತ ಮಹಿಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಕ್ರೋ ಫೈನಾನ್ಸ್ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಸುಮಾರು 5 ಲಕ್ಷ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಮಹಿಳೆಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಇದೇ ಗ್ರಾಮದಲ್ಲಿ ಈವರೆಗೆ ಒಟ್ಟು ಮೂವರು ಮಹಿಳೆಯರು ಬಲವಂತದ ಸಾಲ ವಸೂಲಾತಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ‌ ತನಿಖೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೈಕ್ರೋ ಫೈನಾನ್ಸ್

4G

42

ಓದಿದ ಪುಸ್ತಕ: ಧ್ಯಾನಕ್ಕೆ ಕೂತ ನದಿ

0

ರಾಜ್ಯ, ರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿರುವ ಬಹುರೂಪಿ ಪ್ರಕಾಶನದ ಧ್ಯಾನಕ್ಕೆ ಕೂತ ನದಿ ಕಥಾ ಸಂಕಲನ ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಹಲವು ಕಥೆಗಳ ಒಂದು ಸಂಕಲನ.

ಕಥೆಗಾರ ಸದಾಶಿವ ಸೊರಟೂರು ಕಥೆಗಳ ಮೂಲಕವೇ ಪರಿಚಿತರು. ಒಂದಿಷ್ಟು ಕುತೂಹಲ, ಮನಕ್ಕೆ ಸಿಗದ ಉತ್ತರಗಳ, ಮಾನವೀಯತೆಯ ಗೆಲವು, ತತ್ತರಗೊಂಡ ಬದಕು, ಜತೆಗೊಂದಿಷ್ಟು ಪ್ರೀತಿ ಅನೇಕ ಕತೆಗಳ ಜೀವಾಳ.

ಪ್ರತಿಯೊಂದು ಕತೆಯೂ ಓದಿಸಿಕೊಳ್ಳುವ ಕುತೂಹಲವನ್ನು ಮೂಡಿಸುತ್ತವೆ. ಹೀಗಾಗಿ ಓದಬಹುದಾದ ಕಥಾ ಸಂಕಲನ. ಅಪ್ಪನ ಕುರಿತ ವ್ಯಾಮೋಹಿಗಳಿಗೆ ಹರಿದ ಕುಪ್ಪಸದ ಬೆಳಕು ಕತೆ ಇಷ್ಟವಾಗುತ್ತದೆ. ಇಲ್ಲಿರುವ ಎಲ್ಲ ಕತೆಗಳ ಬಗ್ಗೆ ಪತ್ರಕರ್ತ ದೇವು ಪತ್ತಾರ್ ಒರೆದಿದ್ದಾರೆ.

ಜಾಹೀರಾತು

ಹರಿದ ಕುಪ್ಪಸದ ಬೆಳಕು ಕತೆಯ ಕೆಲವು ಸಾಲುಗಳು ಹೀಗಿವೆ. ಓದೂಗರ ಕುತೂಹಲಕ್ಕಾಗಿ ಇಲ್ಲಿ ನೀಡಲಾಗಿದೆ. ಪುಸ್ತಕ ಬೇಕಿದ್ದವರು ಬಹುರೂಪಿಯ ಅಂತರ್ಜಾಲದ ಮೂಲಕವೂ ತರಿಸಿಕೊಳ್ಳಬಹುದು.

ಹರಿದ ಕುಪ್ಪಸದ ಬೆಳಕು ಕತೆಯ ತುಣುಕು

ಬಣ್ಣದ ಟೀ ಶರ್ಟ್, ಮಂಡಿ ಮೇಲೆ ಹರಿದ ಜೀನ್ಸ್ ತೊಟ್ಟಿದ್ದ.

ಅವನು ಬೆಂಗಳೂರಿಗೆ ಬರುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಬೆಂಗಳೂರಿನಲ್ಲಿ ಒಂದು ವರ್ಷ ಕಾಲ ಆನ್‌ಲೈನ್ ಮ್ಯಾಗಜೀನೊಂದರಲ್ಲಿ ಕೆಲಸ ಮಾಡಿ, ‘ನಿಮ್ಮಪ್ಪ ಹೋಗಿಬಿಟ್ರಪ’ ಅನ್ನುವ ಸುದ್ದಿ ಹೊತ್ತುಕೊಂಡು, ಕಣ್ಣಲ್ಲಿ ನೀರು ತುಂಬಿಕೊಂಡು ಬಸ್ಸು ಹತ್ತಿದ್ದ. ಹೊರಡುವ ಮುನ್ನ ಗೆಳತಿ ನೀತಾಗೆ ‘ಅಪ್ಪ ಹೋಗಿಬಿಟ್ರು ನೀತಾ’ ಅನ್ನುವ ಮೆಸೇಜ್ ಹಾಕಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಅಕ್ಷರಶಃ ಮೌನಿಯಾಗಿದ್ದ. ನಂತರ ಸುಮಾರು ಒಂದು ವರ್ಷ ಕಾಲ ಅವನಿಗೊಂದು ಕೆಲಸ ಅನ್ನುವುದೂ ಇರಲಿಲ್ಲ. ಇದರ ನಡುವೆ ಮೂರಾಲ್ಕು ಬಾರಿ ಪತ್ರಿಕೆಗಳಲ್ಲಿ ಕೆಲಸಕ್ಕೆ ಸೇರಲು ಸಂದರ್ಶನಕ್ಕೆಂದು ಬಂದು ಹೋಗಿದ್ದ. ಇವನು ಹೇಳುವುದಕ್ಕೂ ಅವರು ಕೇಳುವುದಕ್ಕೂ ಹೊಂದದೆ ಕೆಲಸ ಕೈ ಹಿಡಿದಿರಲಿಲ್ಲ. ಸೆಂಟ್ರಲ್ ಕಾಲೇಜು ಮುಂದಿನ ರಸ್ತೆಯಲ್ಲಿ ಏನನ್ನೋ ಹುಡುಕುತ್ತಿದ್ದ. ಹುಡುಕಿ- ಹುಡುಕಿ ಸೋತು ಮತ್ತೆ ಊರಿನ ಬಸ್ಸು ಹತ್ತುತ್ತಿದ್ದ.


ಮಗದೊಂದು ಪ್ಯಾರಾ

ನನ್ನ ಸಾವು ಸಾವಷ್ಟೆ ಅದಕ್ಕೆ ಕಾರಣಗಳು ಅಂತ ಇಲ್ಲ..’

ಎಂಬ ಒಂಟಿ ಸಾಲೊಂದು ಒಂದು ಪುಟದ ತುಂಬೆಲ್ಲಾ ಅನಾಥವಾಗಿತ್ತು. ಅಪ್ಪ ಒಂದೇ ಸಾಲನ್ನು ಬರೆದು ಬದುಕು ಮುಗಿಸಿದ್ದರು. ಅಪ್ಪ ‘ವ’ ಬರೆಯುವ ಶೈಲಿ ಶರ್ವನಿಗೆ ಗೊತ್ತಿತ್ತು. ವ ಬರೆಯುವಾಗ ಮೊದಲ ಆರಂಭದ ಸುರುಳಿ ಕೆಳಗೆ ಬಚ್ಚಿಟ್ಟುಕೊಳ್ಳುತ್ತಿತ್ತು. ಸ್ಕೂಲಿಗೆ ಪತ್ರ ಬರೆಯುವಾಗ ಅದರಲ್ಲಿ ‘ಶರ್ವ ಹುಷಾರು, ಶರ್ವ ಅರಾಮಾಗಿ ಓದು ಟೆನ್ನನ್ ಬೇಡ.. ಶರ್ವ ದುಡ್ಡು ಏನಾದ್ರೂ ಬೇಕಿತ್ತಾ..’ ಅಂತ ಬರೆಯುವಾಗಲೆಲ್ಲಾ ಅವರು ವ ಬರೆಯುತ್ತಿದ್ದ ಶೈಲಿ ಅವನಿಗೆ ಮನದಟ್ಟಾಗಿತ್ತು.

‘ಹೌದು ಸರ್.. ಈ ಅಕ್ಷರಗಳು ಅಪ್ಪನವೇ..’ ಶರ್ವ ಖಚಿತಪಡಿಸಿದ್ದ.

ಅವನ ಹೇಳಿಕೆ ದಾಖಲಿಸಿಕೊಂಡು ಸಹಿ ಪಡೆದು ಅವರು ಹೊರಟು ಹೋಗಿದ್ದರು.

ಅಪ್ಪನ ನೆನಪುಗಳೊಂದಿಗೆ ಬದುಕಿನ ಚಿತ್ರಣ ತೆರೆದುಕೊಳ್ಳುವ ಕಥಾ ಶೈಲಿ ಕುತೂಹಲ ಹುಟ್ಟಿಸುತ್ತದೆ.

ಪಿಯುಸಿ: ಶೇಷಾದ್ರಿಪುರಂ ಕಾಲೇಜಿಗೆ RANK ಸುರಿಮಳೆ

0

ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ನಾಡೋಜ ವೂಡೇ ಪಿ. ಕೃಷ್ಣ

ಬೆಂಗಳೂರು: ಶೇಷಾದ್ರಿಪುರಂ ಶೈಕ್ಷಣಿಕ ಸಂಸ್ಥೆಯು ಕಾಲೇಜುಗಳಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರ್ಯಾಂಕ್ (RANK)ಗಳ ಸುರಿಮಳೆಯಾಗಿದೆ.

ಅದ್ವಿತೀಯ ಸಾಧನೆ ತೋರಿದ್ದು, ರಾಜ್ಯದಲ್ಲಿ ಒಟ್ಟು 80 ವಿದ್ಯಾರ್ಥಿಗಳು ರಾಜ್ಯಮಟ್ಟದ ರಾಂಕ್ (RANK) ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

ಗುಣಮಟ್ಟ, ನೈತಿಕ ಶಿಕ್ಷಣಕ್ಕೆ ಈ ಮೊದಲಿನಿಂದಲೂ ಹೆಸರುವಾಸಿಯಾಗಿರುವ ದರದ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿಗಳು ಕಾಮರ್ಸ್, ಸೈನ್ಸ್ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಸಾಧನೆಯ ಪಟ್ಟಿಯನ್ನು ಹಿರಿದಾಗಿಸುತ್ತಾ ಹೋಗುತ್ತಿದ್ದಾರೆ.

ನೈತಿಕ ಶಿಕ್ಷಣ ಮಾತ್ರವಲ್ಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ವಿದ್ಯೆ, ನೈತಿಕತೆ ಎರಡು ಒಗ್ಗೂಡಿದಾಗ ಮಾತ್ರ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ ಶೇಷಾದ್ರಿಪುರಂ ಶಿಕ್ಷಣ ಧತ್ತಿ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ, ನಾಡೋಜ ವೂಡೇ ಪಿ. ಕೃಷ್ಣ ಅವರು.

ತುಮಕೂರು ಶೇಷಾದ್ರಿಪುರ ಕಾಲೇಜಿನ ಸೈನ್ಸ್ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯದ ಮಟ್ಟದ ರ್ಯಾಂಕ್ (rank) ಪಟ್ಟಿಯಲ್ಲಿ ಸೇರಿದ್ದಾರೆ. ಕಾಮರ್ಸ್ ನಲ್ಲಿ ಮೂವರು ಈ ಪಟ್ಟಿಯಲ್ಲಿದ್ದಾರೆ.

ಕಾಮರ್ಸ್ ನಲ್ಲಿ ರಾಜ್ಯದ 3 ನೇ rank ಅನ್ನು ಬೆಂಗಳೂರಿನ‌ ಕಾಂಪೋಸಿಟ್ ಕಾಲೇಜು ಪಡೆದುಕೊಂಡಿದೆ.

‘ಬಹುರೂಪಿ’ಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

ಬೆಂಗಳೂರು

‘ಬಹುರೂಪಿ’ ಪ್ರಕಟಿಸಿದ ‘ಕೆರೆ-ದಡ’ ಕೃತಿ ಪ್ರಕಾಶನ ರಂಗದ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

‘ಪಬ್ಲಿಷಿಂಗ್ ನೆಕ್ಸ್ಟ್’ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಹಿರಿಯ ಕಲಾವಿದ ಸುಧಾಕರ ದರ್ಬೆ ರೂಪಿಸಿದ ಮುಖಪುಟ ಮೊದಲ ಸ್ಥಾನ ಪಡೆದಿದೆ.

ಪ್ರತೀ ವರ್ಷ ಪ್ರಕಾಶನ ರಂಗದ ವಿವಿಧ ವಿಭಾಗಗಳಲ್ಲಿ ‘ಪಬ್ಲಿಷಿಂಗ್ ನೆಕ್ಸ್ಟ್’ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದು ಇದೇ ಮೊದಲ ಬಾರಿಗೆ ಕನ್ನಡದ ಕೃತಿಯೊಂದು ತನ್ನ ಮುಖಪುಟ ವಿನ್ಯಾಸಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದೆ.

ಭಾರತದ ಎಲ್ಲಾ ಭಾಷೆಗಳನ್ನು ಒಳಗೊಂಡು ಜರುಗಿದ ಈ ಮುಖಪುಟ ಸ್ಪರ್ಧೆಯಲ್ಲಿ ಅನೇಕ ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು. ಈ ಹಿಂದೆ ಬಹುರೂಪಿಯ ‘ದುಪ್ಪಟ್ಟು’ ‘ಛೂಮಂತ್ರಯ್ಯನ ಕಥೆಗಳು’ ಹಾಗೂ ‘ಅಕ್ಕಯ್’ ಕೃತಿಗಳು ರನ್ನರ್ ಅಪ್ ಆಗಿದ್ದವು

ಪತ್ರಿಕಾ ವಿನ್ಯಾಸಕಾರರಾದ ಸುಧಾಕರ ದರ್ಬೆ ಅವರು ಪುತ್ತೂರು ಮೂಲದ ದರ್ಬೆ ಗ್ರಾಮದವರು. ಅನೇಕ ಕೃತಿಗಳಿಗೆ ಇವರು ರಚಿಸಿರುವ ಮುಖಪುಟ ಹಾಗೂ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

ರೈಲ್ವೆ ಕೆಲಸ ಕೊಡಿಸುವ ಆಮಿಷ: ನೂರಕ್ಕೂ ಹೆಚ್ಚು ಮಂದಿಗೆ ವಂಚನೆ, ಆರೋಪಿ ವಶಕ್ಕೆ

0

ತುರುವೇಕೆರೆ: ಸರ್ಕಾರಿ ರೈಲ್ವೆ ಕೆಲಸ ಕೊಡಿಸುವುದಾಗಿ ಸುಮಾರು 120 ಹೆಚ್ಚು ಯುವಕರಿಂದ ಲಕ್ಷಾಂತರ ರೂಪಾಯಿಗಳ ಹಣ ಪಡೆದು ವಂಚನೆಮಾಡಿರುವ ಆರೋಪದಡಿ ತಾಲ್ಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಹೊಸಹಳ್ಳಿ ಗ್ರಾಮದ ರಮೇಶ್(44)ನನ್ನು ದಂಡಿನಶಿವರ ಪೊಲೀಸರು ಶನಿವಾರ ವಶಕ್ಕೆ ಪಡೆಯುವಲ್ಲಿ ಯಶ್ವಿಯಾಗಿದ್ದಾರೆ.


ಆರೋಪಿ ರಮೇಶ್ ಸ್ವ ಗ್ರಾಮದಲ್ಲಿ ಶನಿಮಹಾದೇವರ ಪೂಜೆ ಮಾಡುತ್ತಿದ್ದನು. ಮೊದಲೆ ಹೆಂಡತಿ ಮದುವೆಯಾದ ನಂತರ ಶೋಕಿಯ ಆಸೆಗೆ ಬಿದ್ದು ಕುಟುಂಬ ಬಿಟ್ಟು ಬೆಂಗಳೂರು ಸೇರಿದ.


ಆರೋಪಿ ರಮೇಶ್ ಬೆಂಗಳೂರಿನಲ್ಲಿ ನಳಿನಾ ಎಂಬಾಕೆಯನ್ನು ಮದುವೆಯಾಗಿದ್ದ. ಈತನ ತಂದೆ ರೈಲ್ವೆ ಕೆಲಸದಲ್ಲಿ ಇದ್ದು ನಿವೃತ್ತರಾಗಿದ್ದರು. ಆಗ ಒಂದಿಷ್ಟು ರೈಲ್ವೆ ಇಲಾಖೆಯ ರೀತಿ ನೀತಿಗಳನ್ನು ಅರಿತುಕೊಂಡಿದ್ದ ಅದನ್ನೇ ಲಾಭ ಮಾಡಿಕೊಂಡ ಆರೋಪಿ ದಂಪತಿಗಳಿಬ್ಬರೂ ರೈಲ್ವೆ ಇಲಾಖೆಯ ನೌಕರರೆಂದು ಹೇಳಿಕೊಂಡು ನಕಲಿ ಐಡಿ ಕಾರ್ಡ್ ಮಾಡಿಸಿಕೊಂಡು ವಂಚನೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು.


ಆರೋಪಿ ರಮೇಶನು ನಾನು ರೈಲ್ವೆ ಕೆಲಸದಲ್ಲಿ ಇರುವುದಾಗಿ ಹೇಳಿಕೊಂಡು ತನಗೆ ಪರಿಚಯ ವಿರುವ ವ್ಯಕ್ತಿಗಳ ಮೂಲಕ ಸರ್ಕಾರಿ ರೈಲ್ವೆ ಕೆಲಸ ಕೊಡಿಸುವುದಾಗಿ ನಿರುದ್ಯೋಗಿ ಯುವಕರು ಮತ್ತು ಅವರ ಕುಟುಂಬದವರಿಂದ ವಿದ್ಯಾಭ್ಯಾಸದ ದಾಖಲೆ ಪಡೆದು ರೈಲ್ವೆ ಮೇಲಾಧಿಕಾರಿಗಳಿಗೆ ಲಂಚಕೊಡಬೇಕು ಅದಕ್ಕಾಗಿ ಲಕ್ಷಾಂತರ ರೂಪಾಯಿಗಳು ಬೇಕಾಗುತ್ತದೆಂದು ಮುಂಗಡವಾಗಿ ಹಣ ಕೀಳುತ್ತಿದ್ದರು.


ಹಣಕೊಟ್ಟವರು ಕೆಲಸಕೊಡಿಸುವುದು ವಿಳಂಬವಾದಾಗ ಒತ್ತಾಯ ಮಾಡಿದವರಿಗೆ ಆರೋಪಿ ರಮೇಶ್ ನಕಲಿ ನೇಮಕಾತಿ ಪತ್ರ ಕೊಟ್ಟು ತಲೆ ಮರೆಸಿಕೊಳ್ಳುತ್ತಿದ್ದು ಮತ್ತೆ ಕೆಲವರಿಗೆ ಹಣ ಪಡೆದು ನೇಮಕಾತಿ ಪತ್ರ ತಡವಾಗಿ ಬರುತ್ತದೆ ಎಂದು ಸಬೂಬು ಹೇಳಿ ದೂರವಾಣಿ ಕರೆ, ವಾಸದ ಮನೆ ಬದಲಾಯಿಸಿ ಬಿಡುತ್ತಿದ್ದ ಇದರಿಂದ ಹಣ ಕೊಟ್ಟವರಿಗೂ ಆರೋಪಿ ಸಿಗುತ್ತಿರಲಿಲ್ಲ.


ಹೀಗೆ ಆರೋಪಿ ಮೈಸೂರು, ಬೆಂಗಳೂರು, ತುಮಕೂರು, ಗುಬ್ಬಿ, ತಿಪಟೂರು ಬೇರೆ ಬೇರೆ ಜಿಲ್ಲೆ, ತಾಲ್ಲೂಕು ಸೇರಿದಂತೆ ಸುಮಾರು 120 ಕ್ಕೂ ಹೆಚ್ಚು ವ್ಯಕ್ತಿಗಳಿಂದ ಸರ್ಕಾರಿ ರೈಲ್ವೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಲಕ್ಷ ಲಕ್ಷ ಹಣ ಪೀಕಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು.


ಆರೋಪಿ ಹುಡುಕಿಕೊಂಡು ಮನೆಗೆ ಬರುವ ಪೊಲೀಸರ ಮೇಲೆ ಸಾಕು ನಾಯಿ ಬಿಟ್ಟು ಓಡಿಸುವುದು, ಇನ್ನೂ ಹಣ ಕೊಟ್ಟ ಕೆಲವರು ಮನೆಗೆ ಬಂದು ಹಣ ಕೊಡುವಂತೆ ಒತ್ತಾಯ ಮಾಡಿದವರಿಗೆ, ದಮ್ಕಿ ಹಾಕಿ ಮಾತ್ರೆ ನುಂಗಿ ಸಾಯುವುದಾಗಿ ಬೆದರಿಕೆ ಹಾಕುತ್ತಿದ್ದ ದಂಪತಿಗಳಿಬ್ಬರು.


ಈತನ ಮೇಲೆ ವಂಚನೆ ಆರೋಪದಡಿ ಬೆಂಗಳೂರು, ಶಂಕರಪುರ, ಮಾದನಾಯಕನಹಳ್ಳಿ, ತುಮಕೂರು, ದಂಡಿನಶಿವರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸೆರೆಗಾಗಿ ಕಳೆದ ಒಂದು ವಷಗಳಿಂದ ಪೊಲೀಸರು ಹುಡಕಾಟ ನಡೆಸಿದ್ದರೂ ವಾರವಾರಕ್ಕೊಮ್ಮೆ ತಂಗುವ ಸ್ಥಳವನ್ನು ಬದಲಾಯಿಸುತ್ತಿದ್ದರಿಂದ ಸುಲಭವಾಗಿ ಪೊಲೀಸರಿಗೆ ದಕ್ಕುತ್ತಿರಲಿಲ್ಲ.


ದಂಡಿನಶಿವರ ಎಸ್.ಐ ಚಂದ್ರಕಾಂತ್ ತುರುವೇಕೆರೆ ಸಿಪಿಐ ಲೋಹಿತ್ ಅವರ ಮಾರ್ಗದರ್ಶನ ಪಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಎರಡನೇ ಪತ್ನಿ ನಾಪತ್ತೆಯಾಗಿದ್ದು ಈ ಬಗ್ಗೆ ದಂಡಿನಶಿವರ ಪೊಲೀಸರು ತನಿಖೆ ಮುಂದು ವರೆಸಿದ್ದು ಈತನ ಮೇಲೆ ಇನ್ನಷ್ಟು ವಂಚನೆ ಪ್ರಕರಣಗಳ ಬೆಳಕಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಖ್ಯಾತ ನಿರ್ದೇಶಕ ಶ್ರೀಪಾದ ಭಟ್ ಗೆ ‘ರಂಗ ಭೂಪತಿ’ ಪ್ರಶಸ್ತಿ

ಕೃಪೆ: ಅವಧಿ

ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ಖ್ಯಾತ ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ರಂಗ ಭೂಪತಿ’ ಮೊದಲ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ, ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಸಂಸ್ಥೆಗಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಮಾರ್ಚ್ 30 (ಶನಿವಾರ) ಸಂಜೆ 6-30 ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಹಿರಿಯ ಸಾಹಿತಿ ಡಾ ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ರಂಗಕರ್ಮಿ ಧನಂಜಯ ಕುಲಕರ್ಣಿ ಹಾಗೂ ಹಿರಿಯ ಪತ್ರಕರ್ತ, ಬಹುರೂಪಿ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಜಿ ಎನ್ ಮೋಹನ್, ರವಿ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಂ, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರೂ, ಗೋ.ವಾ. ರಂಗ-ಸಂಗದ ರಾಜಕುಮಾರ ಮಡಿವಾಳರ ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದ ಶ್ರೀಪಾದ ಭಟ್ ಅವರು ಕನ್ನಡ ರಂಗಭೂಮಿಯ ಮಹತ್ವದ ಹೆಸರು. ರಂಗಭೂಮಿಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಗಳಲ್ಲಿ ನುರಿತವರು. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜಾನಪದ ಅಧ್ಯಯನ, ಸಂಗೀತ, ಸಂಘಟನೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಣ, ಕಾವ್ಯ ಹಾಗೂ ಮಕ್ಕಳ ರಂಗಭೂಮಿಯಲ್ಲಿ ಇವರು ನಡೆಸಿದ ಪ್ರಯೋಗಗಳು ದೇಶಾದ್ಯಂತ ಹೆಸರುವಾಸಿಯಾಗಿದೆ. ಗಾಂಧಿ- 150 ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ‘ಪಾಪು-ಬಾಪು’ ನಾಟಕವು 2 ಸಾವಿರ ಪ್ರಯೋಗ ಕಂಡಿದೆ. ಇದುವರೆಗೂ ಸುಮಾರು 150 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ದಡವ ನೆಕ್ಕಿದ ಹೊಳೆ’ ನಟನೆಯ ಕೈಪಿಡಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿ ಎಚ್ ಡಿ ಪಡೆದಿದ್ದಾರೆ.

ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬರಹದ ಮೂಲಕ ಪ್ರಭಾವಿಸಿದವರು ಗೋಪಾಲ ವಾಜಪೇಯಿ ಅವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರ.

ಮಾರ್ಚ್ 25ಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಸಭೆ

0

ತುರುವೇಕೆರೆ: ಹೇಮಾವತಿ ಜಲಾಶಯದಿಂದ ಎನ್.ಬಿ.ಸಿ ನಾಲೆಯ ಮೂಲಕ ತಾಲ್ಲೂಕಿನ ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಗೆ ಕುಡಿಯುವ ನೀರು ಹರಿಸಬೇಕೆಂದು ಆಗ್ರಹಿಸಿ ಮಾ.25ರಂದು ಪಟ್ಟಣದ ಹೇಮಾವತಿ ಕಚೇರಿ ಎದುರು ಅಪಾರ ಸಂಖ್ಯೆಯ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್.ಬಿ.ಸಿ ನಾಲಾ ನೀರನ್ನು ಬಹು ಗಾಮ ಕುಡಿಯುವ ನೀರಿನ ಯೋಜನೆಯಡಿ ಮಾಯಸಂದ್ರ, ತಂಡಗ ಮತ್ತು ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಬೇಕಿತ್ತು ಆದರೆ 2023ರಿಂದ ಇಲ್ಲಿಯ ತನಕ ಎನ್.ಬಿ.ಸಿ ನಾಲೆಯಿಂದ ಒಂದು ಹನಿ ನೀರು ಹರಿಸಿಲ್ಲ. ಇದರಿಂದ ಜನ ಜಾನುವಾರುಗಳು ನೀರಿಗಾಗಿ ಹಾಹಾಕಾರ ಎದುರಿಸುತ್ತಿವೆ.

ಎನ್.ಬಿ.ಸಿ ನಾಲೆಯಿಂದ ನೀರು ಹರಿಸುವಂತೆ ಹಲವು ಬಾರಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣರಿಗೂ ಮನವಿ ಮಾಡಲಾಗಿದೆ ಆದರೂ ನೀರು ಹರಿಸಿಲ್ಲ. ಕೂಡಲೇ ನೀರನ್ನು ಸೋಮವಾರದೊಳಗೆ ಹರಿಸಬೇಕು ಇಲ್ಲವಾದರೆ ಮಾ.25ರಂದು ಪಟ್ಟಣದ ಜೆಡಿಎಸ್ ಕಚೇರಿಂದ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ಮೇರವಣಿಗೆ ಹೊರಟು ಹೇಮಾವತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ನೀರು ಬಿಡುವವರೆವಿಗೂ ಧರಣಿ ಕೂರಲಾಗುವುದೆಂದು ಎಚ್ಚರಿಸಿದರು. ಈಗಾಗಲೇ ಟಿ.ಬಿ.ಸಿ ನಾಲೆಯಿಂದ ದಂಡಿನಶಿವರ ಮತ್ತು ಕಸಬಾ ಹೋಬಳಿಯ ಕೆರೆಗಳಿಗೆ 5.5 ಟಿಎಂಸಿ ನೀರು ಹರಿಸಿರುವುದು ಸಂತೋಷದಾಯಕ.

ಜೆಡಿಎಸ್- ಬಿಜೆಪಿ ಜಂಟಿ ಸಭೆ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ 11 ಗಂಟೆಗೆ ಜೆಡಿಎಸ್ ಕಚೇರಿಯಿಂದ ವಿರಕ್ತಮಠದವರೆಗೆ ಜೆಡಿಎಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ ಇದೆ. ಅಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಕಾರ್ಯಕರ್ತರ ಸಭೆ ಕರೆಯಲಾಗಿದ್ದು ಸಭೆಗೆ ಅಭ್ಯರ್ಥಿ ವಿ.ಸೋಮಣ್ಣ ಆಗಮಿಸಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಎಸ್.ಪಿ.ಎಂ ಸ್ಪಷ್ಟನೆ ನೀಡಲಿ: ಮೇಕೆದಾಟು ಯೋಜನೆ ಜಾರಿಗಾಗಿ ಈ ಹಿಂದೆ ಕಾಂಗ್ರೆಸ್ ನವರು ಪಾದಯಾತ್ರೆ ನಡೆಸಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ನವರು ತಮಿಳುನಾಡಿ ಸರ್ಕಾರದ ಜೊತೆ ಶಾಮೀಲಾಗಿ ಮೇಕೆದಾಟು ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಹಾಗಾಗಿ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದಾರೆ. ಅವರು ಐಎನ್.ಡಿಎಯಲ್ಲೇ ಇರುತ್ತಾರೆಯೇ ಅಥವಾ ಅದರಿಂದ ಹೊರಗೆ ಬರುತ್ತಾರೆಯೇ ಎಂಬು ನಿಲುವನ್ನು ಮೊದಲು ಜನತೆಯ ಎದುರು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವೆಂಕಟಾಪುರ ಯೋಗೀಶ್, ಮುನಿಯೂರು ರಂಗಸ್ವಾಮಿ, ಹೊನ್ನೇನಹಳ್ಳಿ ಕೃಷ್ಣಪ್ಪ, ಹೆಡಗಿಹಳ್ಳಿವಿಶ್ವನಾಥ್ ಇತರರು ಇದ್ದರು.