ತುರುವೇಕೆರೆ: 2023-24 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ 81.24 ಗಳಿಸಿ ಜಿಲ್ಲೆಗೆ ತುರುವೇಕೆರೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದರು.
ಪಟ್ಟಣದ ಬಿಇಒ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದರು.
ತಾಲ್ಲೂಕಿನ 57 ಶಾಲೆಗಳಿಂದ ಒಟ್ಟು 1999 ವಿದ್ಯಾರ್ಥಿಗಳಲ್ಲಿ 1017 ಬಾಲಕರು, 982 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 1624 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಇವರಲ್ಲಿ 762 ಬಾಲಕರು, 864 ಬಾಲಕಿಯರು ತೇರ್ಗಡೆಯಾಗುವ ಮೂಲಕ ಈ ಬಾರಿಯೂ ಗ್ರಾಮೀಣ ಪ್ರದೇಶದ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಹಾವಾಳ(ಮಣಿಚೆಂಡೂರು) ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ದೀಪಿಕ 613 ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಡೆದುಕೊಂಡಿದ್ದಾಳೆ.
ಇದೇ ವಸತಿ ಶಾಲೆಯ ಮೊತ್ತೊರ್ವ ವಿದ್ಯಾರ್ಥಿನಿ ಅಮೂಲ್ಯ 612 ಅಂಕ ಗಳಿಸಿ ಎರಡನೇ ಸ್ಥಾನ ಗಳಿಸಿದ್ದಾರೆ. ಪಟ್ಟಣದ ಪ್ರಿಯ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಬಿ.ಸಿಂಚನಾ 607 ಪಡೆದು ಮೂರನೆ ಸ್ಥಾನದಲ್ಲಿದ್ದಾರೆ.
ಪಟ್ಟಣದ ಜೆ.ಪಿ ಆಂಗ್ಲ ಪ್ರೌಢಶಾಲೆ ಕೆ.ಎ.ಗಾನವಿ ಹಾಗೂ ಎಂ.ಜೆ.ಜಮುನಾ ಇಬ್ಬರು ವಿದ್ಯಾರ್ಥಿಗಳು ತಲಾ 603 ಅಂಕಗಳಿಸಿದ್ದಾರೆ.
ತಾಲ್ಲೂಕಿನಲ್ಲಿ 9 ಶಾಲೆಗಳು 100 ಫಲಿತಾಂಶ ಪಡೆದುಕೊಂಡಿವೆ.
ಕಿತ್ತೂರು ರಾಣಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಡಾ.ಆಂಬೇಡ್ಕರ್ ವಸತಿ ಶಾಲೆ, ಪಟ್ಟಣದ ಪ್ರಿಯಾ ಇಂಗ್ಲೀಷ್ ಪ್ರೌಢಶಾಲೆ, ಸರ್ಕಾರಿ ಶಾಲೆ ಆಲದಹಳ್ಳಿ, ಪಟ್ಟಣದ ಮಯೂರ ಶಾಲೆ, ದೊಡ್ಡೇನಹಳ್ಳಿ ಸೆಂಟ್ ಮೇರೀಸ್ ಶಾಲೆಯು ಶೇಕಡಾ ನೂರರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.
ಈ ಬಾರಿ ತಾಲ್ಲೂಕಿನಲ್ಲಿ ಶೇಕಡವಾರು ಫಲಿತಾಂಶ ಹೆಚ್ಚಾಗಿದ್ದು ತುಮಕೂರು ಶೈಕ್ಷಣಿಕ ಜಿಲ್ಲೆಗೆ ತುರುವೇಕೆರೆ ಎರಡನೇ ಸ್ಥಾನ ಲಭಿಸಿದೆ.
ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಇಒ ತಿಳಿಸಿದರು ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದಪ್ಪ, ಶರತ್ ಇದ್ದರು.
ತುರುವೇಕೆರೆ ತಾಲ್ಲೂಕಿನ ಹಾವಾಳ(ಮಣಿಚೆಂಡೂರು) ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ದೀಪಿಕ 613 ಶೇ.98.08 ಅಂಕ
ತುರುವೇಕೆರೆ ತಾಲ್ಲೂಕಿನ ಹಾವಾಳ(ಮಣಿಚೆಂಡೂರು) ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿ ಅಮೂಲ್ಯ 612 ಶೇ97.92 ಅಂಕ
ಪಟ್ಟಣದ ಪ್ರಿಯ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಬಿ.ಸಿಂಚನಾ 607 ಶೇ.97.12