Monday, May 11, 2026
Google search engine
Home Blog Page 163

ಏರೋ ಇಂಡಿಯಾ: ರಕ್ಷಣಾ ಸಚಿವರ ಯೋಜನೆಗಳೇನು ಗೊತ್ತಾ?

Publicstory. in


ನವದೆಹಲಿ: ಏರೋ ಇಂಡಿಯಾ-21 ಯೋಜನೆಗಳನ್ನು ಇಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಪರಿಶೀಲಿಸಿದರು. ಕಾರ್ಯಕ್ರಮ ಪ್ರಸ್ತುತ ಅಂತಾರಾಷ್ಟ್ರೀಯ ಪ್ರದರ್ಶನಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಮತ್ತು ಈ ಕಾರ್ಯಕ್ರಮವನ್ನು ವ್ಯಾಪಾರ ಉದ್ದೇಶಿತ ಪ್ರದರ್ಶನದ ರೂಪದಲ್ಲಿ ಆಯೋಜಿಸಲಾಗಿದೆ ಎಂದು ರಕ್ಷಣಾ ಇಲಾಖೆ ಮತ್ತು ರಕ್ಷಣಾ ಸಚಿವಾಲಯ ಸಚಿವರಿಗೆ ತಿಳಿಸಿದೆ.

ಸಾಮಾನ್ಯವಾಗಿ, ಪ್ರತ್ಯಕ್ಷವಾಗಿ ಈ ವೈಮಾನಿಕ ಕಾರ್ಯಕ್ರಮವನ್ನು ವೀಕ್ಷಿಸಿ ಹರ್ಷಿಸುತ್ತಿದ್ದ ಸಾರ್ವಜನಿಕರು, ಹೊಸ ವರ್ಷಕ್ಕೆ ಪಾಲುದಾರಿಕೆಗಳನ್ನು ಹೆಚ್ಚಿಸಲು, ಜಾಗತಿಕ ಎ&ಡಿ ವ್ಯಾಪಾರಗಳ ನಡುವೆ ಸುರಕ್ಷಿತ ಸಂವಾದಗಳನ್ನು ಕಲ್ಪಿಸುವ ನಿಟ್ಟಿನಿಂದ ಈ ವರ್ಷದ ಕಾರ್ಯಕ್ರಮವನ್ನು ವರ್ಚುವಲ್ ಆಗಿ ವೀಕ್ಷಿಸಲಿದ್ದಾರೆ.

500 ಕ್ಕೂ ಹೆಚ್ಚು ನೋಂದಾಯಿತ ಪ್ರದರ್ಶಕರು ಮತ್ತು ಸಂಪೂರ್ಣ ಮಾರಾಟವಾಗಿರುವ ಸ್ಥಳದೊಂದಿಗೆ ಈಕಾರ್ಯಕ್ರಮ ಅದ್ಭುತ ಆಸಕ್ತಿಯನ್ನು ಹುಟ್ಟಿಸಿದೆ. ಕೋವಿಡ್ – 19 ರಿಂದ ಎದುರಾಗಬಹುದಾದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೇವಲ ವ್ಯವಹಾರಿಕ ದಿನಗಳಾದ ಅಂದರೆ 03-05 ಫೆಬ್ರವರಿ 2021 ರವರೆಗೆ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ರಕ್ಷಣಾ ಸಚಿವರು ನಿರ್ದೇಶಿಸಿದ್ದಾರೆ.

ಏರೋ ಸ್ಪೇಸ್ ಮತ್ತು ರಕ್ಷಣ ವಲಯದಲ್ಲಿ ಯಶಸ್ವಿ ಸಂವಾದಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಕೈಗೊಳ್ಳಬೇಕಾಯಿತು. ಏಕೆಂದರೆ ಲಾಕ್ ಡೌನ್ ಮತ್ತು ಪ್ರಯಾಣದ ಮೇಲೆ ಹಲವಾರು ನಿರ್ಭಂಧಗಳಿಂದಾಗಿ 2020 ರ ವರ್ಷ ಹಲವಾರು ಸವಾಲುಗಳನ್ನು ಎದುರಿಸಿದೆ.

ಏರೋ ಇಂಡಿಯಾ – 21 ರ ಕುರಿತು ಅಕ್ಟೋಬರ್ 2020 ರ ಆರಂಭದಲ್ಲೇ ವಿದೇಶಿ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳಿಗೆ ದೆಹಲಿಯಲ್ಲಿ ಈ ಕುರಿತು ವಿವರಿಸಲಾಗಿತ್ತು ಹಾಗೂ ತದನಂತರ ಅವರ ಸಂಸ್ಥೆ ನಾಯಕರು ಮತ್ತು ನಿರ್ಧಾರ ಕೈಗೊಳ್ಳುವ ಹಿರಿಯರ ಪ್ರಸ್ತುತತೆಯನ್ನು ಪ್ರೋತ್ಸಾಹಿಸಲು ಔಪಚಾರಿಕ ಆಹ್ವಾನ ಪತ್ರಿಕೆ ನೀಡಲಾಗಿತ್ತು.

ಭಾರತದ ಏರೋ ಸ್ಪೇಸ್ ಮತ್ತು ರಕ್ಷಣ ಉತ್ಪನ್ನಗಳ ತಯಾರಿಕಾ ಸಾಮರ್ಥ್ಯವನ್ನು ಪ್ರದರ್ಶಿಸುವ ಭರವಸೆಯನ್ನು ಏರೋ ಇಂಡಿಯಾ – 21 ಮೂಡಿಸಲಿದೆ. ಎಫ್ ಡಿ ಐ ನ್ನು 74% ಸ್ವಯಂಚಾಲಿತ ಮಾರ್ಗದಲ್ಲಿ ಒಳಹರಿವಿನಲ್ಲಿ ವೃದ್ಧಿ, ಡಿಫೆನ್ಸ್ ಅಕ್ವಿಸಿಶನ್ ಪ್ರೊಸಿಜರ್-2020, ಭಾರತದಲ್ಲಿ ಸಹ ಅಭಿವೃದ್ಧಿ ಮತ್ತು ಸಹ ಉತ್ಪಾದನೆಗೆ ಹೂಡಿಕೆ ಮಾಡಲು ಉತ್ತೇಜಿಸಲಾದ ನೂತನ ಆಫ್ ಸೆಟ್ ಮಾರ್ಗಸೂಚಿಗಳು 2020 ರ ಸಾಂಕ್ರಾಮಿಕ ಬಿಕ್ಕಟ್ಟಿನ ಅವಧಿಯಲ್ಲಿ ರಕ್ಷಣಾ ಉತ್ಪಾದನೆ ಮತ್ತು ರಫ್ತು ಪ್ರೋತ್ಸಾಹ ನೀತಿ – 2020 (ಡಿಪಿಇಪಿಪಿ 2020) ರ ಕರಡನ್ನು ರೂಪಿಸುವುದು ಮುಂತಾದ ಸರಣಿ ನೀತಿ ನಿರೂಪಣೆಯ ಉಪಕ್ರಮಗಳನ್ನು ರಕ್ಷಣಾ ವಲಯ ಕೈಗೊಂಡಿರುವುದರಿಂದ ಬಾರತದಲ್ಲಿ ಹೂಡಿಕೆಗಳನ್ನು ಅಪೇಕ್ಷಿಸಲಾಗುತ್ತಿದೆ.

ಏರೋ ಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ವಿಶ್ವದ 5 ಅಗ್ರ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದ್ದಾರೆ ಮತ್ತು ನಾಯಕರ ಮಧ್ಯೆ ನಾಯಕರಾಗುವ ಭಾರತದ ಇಚ್ಛಾಶಕ್ತಿಯನ್ನು ಏರೋ ಇಂಡಿಯಾ-21 ಅಭಿವ್ಯಕ್ತಗೊಳಿಸಲಿದೆ.

“ಸ್ವಾವಲಂಬಿ ಭಾರತ” ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕನಸಿನ ಕೂಸಾಗಿದೆ ಮತ್ತು ಭಾರತದ ಏರೋ ಸ್ಪೇಸ್ ಹಾಗೂ ರಕ್ಷಣಾ ವಲಯ ಅಭಿವೃದ್ಧಿ ಹೊಂದಿದ್ದು ಪರಸ್ಪರ ಲಾಭದಾಯಕ ಪಾಲುದಾರಿಕೆಗೆ ಸ್ನೇಹಮಯಿ ರಾಷ್ಟ್ರಗಳೊಂದಿಗೆ ನಿರಂತರ ಶೋಧದಲ್ಲಿದೆ ಇದರಿಂದ ವಿಶ್ವಕ್ಕೆ ಹಾಗೂ ಭಾರತಕ್ಕಾಗಿ ಭಾರತದಲ್ಲಿಯೇ ಸಿದ್ಧಗೊಳಿಸಲಾಗುವ ರಕ್ಷಣಾ ಉತ್ಪನ್ನಗಳ ಉದ್ಯಮಗಳನ್ನು ಭಾರತದಲ್ಲಿ ಸ್ಥಾಪಿಸಲು ಉದ್ದೇಸಿಸಲಾಗಿದೆ” ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಹೇಳಿದ್ದಾರೆ.

ಭಾರತದಲ್ಲಿ ಲಭ್ಯವಿರುವ ಕಾರ್ಯತಂತ್ರದ ಮತ್ತು ವ್ಯಾಪಾರದ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಭಾರತೀಯ ವಿದೇಶಿ ಸಂಸ್ಥೆಗಳು ಈ ಕಾರ್ಯಕ್ರಮದ ಕುರಿತು ಪ್ರಚಾರ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಮತ್ತು ಅವರ ನಾಯಕರು ಹಾಗೂ ಸಂಸ್ಥೆಯ ಮುಖ್ಯಸ್ಥರು ಹಾಗೂ ಇದೇ ವಲಯದ ಹೊರ ರಾಷ್ಟ್ರಗಳ ನಾಯಕರನ್ನು ಆಕರ್ಷಿಸಿ ಏರೋ ಇಂಡಿಯಾ – 21 ರಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಲು ರಕ್ಷಣಾ ಸಚಿವರು ಆಗ್ರಹಿಸಿದ್ದಾರೆ.

ಕೋವಿಡ್ ನಂತರದ ವಿಶ್ವದಲ್ಲಿ ನಾಯಕತ್ವ ವಹಿಸಲು ಮತ್ತು ನಮ್ಮ ಶಕ್ತಿಯನ್ನು ಮತ್ತಷ್ಟು ವೃದ್ಧಿಸಲು ಭಾರತ ಏರೋ ಇಂಡಿಯಾ – 21 ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂಬ ಧೃಡ ವಿಶ್ವಾಸವನ್ನು ರಕ್ಷಣಾ ಸಚಿವರು ವ್ಯಕ್ತಪಡಿಸಿದ್ದಾರೆ.

ತಿಪಟೂರಿನಲ್ಲಿ ಹೇಗೆ ಸಿಕ್ಕಿತು ಗೊತ್ತಾ 300 ವರ್ಷದ ಹಳೆಯ ಬಾವಿ

0

ಉಜ್ಜಜ್ಜಿ ರಾಜಣ್ಣ


Tipturu; ಸುಮಾರು ಮುನ್ನೂರು ವರ್ಷಗಳಷ್ಟು ಹಳೆಯದಾದ ಹೊಳಲೆ ಬಾವಿಯೊಂದನ್ನು ನಗರ ವಲಯದಲ್ಲಿ ವಿಶೇಷವಾಗಿ ಗುರುತಿಸಲಾಗಿದೆ.

ಶತಮಾನದಷ್ಟು ಹಳೆಯದಾದ ಈ ಹೊಳಲೆ ಬಾವಿಯ ಹಳೆಯ ಪಳೆಯುಳಿಕೆಯನ್ನು ನಗರಸಭೆ ಸ್ವಾದೀನಪಡಿಸಿಕೊಂಡು ಸದರಿ ಜಲಕಾಯಕ್ಕೆ ಸ್ವಚ್ಛತೆ ಮಾಡಿ ಸಂರಕ್ಷಣಾ ಭಾಗವಾಗಿ ಸುರಕ್ಷಿತ ಸುತ್ತಬೇಲಿ ನಿರ್ಮಿಸಿದರು.

ನಗರಸಭೆಯ ಸಂರಕ್ಷಿತಾ ವಲಯವಾಗಿ ಗುರುತಿಸಲ್ಪಟ್ಟಿರುವ ಹೊಳಲೆ ಬಾವಿಯನ್ನು ಸ್ಥಳೀಯರು ಆಧ್ಯಾತ್ಮಿಕ ಭಾವನೆಯುಳ್ಳವರಾಗಿ ಬಳಸಲು ಪುನಃ ಪರಿಭಾವಿತರಾಗಿದ್ದಾರೆ.

ತಿಪಟೂರು ನಗರದ ಗೊರಗೊಂಡನಹಳ್ಳಿಯಲ್ಲಿ ಈ ವಿನೂತನವಾದ ಹೊಳಲೆ ಬಾವಿಯನ್ನು ತಿಪಟೂರು ನಗರಸಭೆ ಪುನರುಜ್ಜೀವನಗೊಳಿಸಿದೆ.

ತಿಪಟೂರು ನಗರ ಸಭೆಯ ಅಧ್ಯಕ್ಷರಾದ ರಾಮಮೋಹನ್ ಮತ್ತು ಪೌರಾಯುಕ್ತರಾದ ಉಮಾಕಾಂತ್ ಮತ್ತು ಸಹಾಯಕ ಕಾರ್ಯಪಾಲ ಅಭಿಯಂತರರಾದ ಎನ್. ನಾಗೇಶ್ ಮತ್ತು ಸಿಬ್ಬಂದಿ ” ನಗರ ಜಲಕಾಯಗಳ ಪುನರುಜ್ಜೀವನ ಪುನರುತ್ಥಾನದ ಆಂದೋಲನವನ್ನು ಕಳೆದ ಶನಿವಾವೂ ಮುಂದುವರಿಸಿದ್ದರು.

ಒಂದೇ ಒಂದು ಹುಳಿ ಪೆಟ್ಟು ತಿನ್ನದ ಕರಿಕಲ್ಲಿನ ದುಂಡನೆಯ ದುಂಡಿಗಳನ್ನು ಬಳಸಿ ಆ ಹೊಳಲೆ ಬಾವಿಗೆ ಕಲ್ಲುಗಳನ್ನು ಕಟ್ಡಲಾಗಿದೆ. ಕಣ್ಣು ಕವುರು ಕಳೆದುಕೊಂಡಂತಿರುವ ಪರಾತತ್ವ ಇಲಾಖೆ ಇಂತಹ ಪಾರಂಪರಿಕ ಜಲಕಾಯಗಳನ್ನು ಹುಡುಕಿಕೊಂಡು ಸಂರಕ್ಷಣೆ ಮಾಡುವ ಮೂಲಕ ತನ್ನ ಜವಾಬ್ದಾರಿಯನ್ನು ಜನ ಬಳಕೆಗೆ ತರಬೇಕಿತ್ತು.

ಉಳಿ ಪೆಟ್ಟು‌ ತಾಗದ ಎತ್ತುಂಡಿ ತಂದು ಒಳಲೆ ಬಾವಿ ನಿರ್ಮಾಣ ಮಾಡಿರುವುದರಿಂದ ಇದನ್ನು ಸ್ಥಳೀಯರು “ಕರಿಕಲ್ಲು ಬಾವಿ ಎಂತಲೂ ಕರೆಯಲಾಗುತ್ತದಲ್ಲದೇ, ಕರಿಮಾಯಿ ಗ್ರಾಮದೈವ ಕರಿಕಲ್ಲ ಮಾರಿ ತಾಯಿ ಆವುರುದ ಪೂಜೆಗೆ ಈ ಬಾವಿಯಿಂದ ಸ್ವಖುಮಜ್ಜನದ ನೀರನ್ನು ತಾಯಿಯ ಜಲದಿಗೆ ಜಲವಾಸಿ ಜಲವಾಡದಿಂದ ಜತುನವಾಗಿ ಬಳಸುವ ಸಿಲುಮೆ ಈ ಬಾವಿಯ ನೀರು.

ಊರು ಪೊರೆವ ಅವ್ವ ಉರಿಯೂತ ಉರಿಮಾರಿ ಮೈಯ್ಯುಣ್ಣದ ಹಾಗೆ ಮಂದಿ ಮಹೋದಯರೊಳಗೆ ಮರಿ ಮಂದೆಯೊಳಗೆ ಒಕ್ಕಲುತನದೊಳಗೆ ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯರ ಪುರಾತನ ನಂಬಿಕೆ. ಆದುದರಿಂದ ನಿರ್ವಹಣೆಯು ಸಾಮಾನ್ಯವಾಗಿ ಜನರಿಗೇ ಸಂಪೂರ್ಣ ಸೇರಿದಂತೆ. ಅದರ ಅನುವು ತನುವು ಮಾಲಿನ್ಯದ ಪ್ರಮುಖ ಜವಾಬ್ದಾರಿಯಾಗಿ ಬಾವಿಯ ಕುರಿತಾದ ಹಲವಾರು ದೈವಾಚರಣೆಗಳ ಇಂದಿಗೂ ಇಲ್ಲಿ ಜನ ಬಳಕೆಯಲ್ಲಿವೆ.

ಹೆದ್ದಾರಿ ನಗರ ಏಷ್ಯಾದ ಒಣಕೊಬರಿಯ ಪಾರಂಪರಿಕ ಮಾರುಕಟ್ಟೆ ಇರುವ ತಿಪಟೂರು ನಗರದಲ್ಲಿ ನಗರ ಜಲಕಾಕಾಯಗಳ ಭೂ ಸರ್ವೇಕ್ಷಣೆ ಕಾರ್ಯದಲ್ಲಿ ತಿಪಟೂರು ನಗರದಲ್ಲಿ ಪಾರಂಪರಿಕ ಜಲವಸತಿ ಪ್ರದೇಶಗಳ ಹುಡುಕಾಟದಲ್ಲಿ ನಗರಸಭೆಯು ತೊಡಗಿದರುವುದು ಪ್ರಶಂಸನೀಯ ಸಂಗತಿಯಾಗಿದೆ.

ಜಾಗತಿಕವಾಗಿಯೂ ಇದೊಂದು ಗುರುತಿಸಲ್ಪಡುವ ವಿಶೇಷ ರೀತಿಯ ಜಲಸಂಧುಗಳ ಜಲಸಂರಕ್ಷಣಾ ಪುನರುಜ್ಜೀವನ ಪುನರುತ್ಥಾನದ ಪುನರ್ ನಿರ್ಮಾಣ ಕಾರ್ಯವಾಗಿದೆ.‌

ನಗರಸಭೆಯ ನೂತನ ಅಧ್ಯಕ್ಷರಾಗಿ ರಾಮಮೋಹನ್ ಮತ್ತು ಪೌರಾಯುಕ್ತರಾದ ಉಮಾಕಾಂತ್ ಮತ್ತು ಸಿಬ್ಬಂದಿಯು ಕೈಗೊಂಡ ನಗರ ಜಲಮಾರ್ಗಗಳ ಪುನರ್ನನವೀಕರಣ ಕಾರ್ಯ ಅನುಸರಣೀಯ.

ನಗರ ಸಭೆಯ ಮಾಜಿ ಅಧ್ಯಕ್ಷರಾಗಿ ಟಿ.ಎನ್ ಪ್ರಕಾಶ್, ನೂತನ ಅಧ್ಯಕ್ಷರಾಗಿ ರಾಮನ್ ಮತ್ತು ಪೌರಾಯಕ್ತರಾದ ಉಮಾಕಾಂತ್ ಅವರನ್ನು ಪ್ರೋತ್ಸಾಹಿಸುವ ಮಾತನಾಡಿದರು.

ಹೆಂಡತಿಯನ್ನು ಕೊಂದು ಮಂಚದ‌‌ ಕೆಳಗೆ ಹೂತು ಹಾಕಿದ್ದ!

ಮಧುಗಿರಿ: ಹೆಂಡತಿಯನ್ನು ಕೊಂದು ಮನೆಯ ಮಂಚದ‌ ಕೆಳಗೆಯೇ ಈತ ಹೂತು ಹಾಕಿದ್ದ.

ಏನು ಗೊತ್ತಿಲ್ಲದಂತೆ ನಟಿಸುತ್ತಿದ್ದ. ಅತ್ತ ಹೆಂಡತಿ ತಂದೆ ತಾಯಿ ಮಗಳು ಎಲ್ಲಿಗೆ ಹೋದಳೆಂದು ತಿಳಿಯದೇ ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದರು.

ಅಷ್ಟೂ ಸಾಲದೆಂಬಂತೆ ಮಾವನ ಮಗಳನ್ನು ಈತ ಮದುವೆಯಾಗಿದ್ದ. ಈಕೆ ಅಪ್ರಾಪ್ತೆಯಾಗಿದ್ದರೂ ಮದುವೆಯಾಗಿದ್ದ. ತನ್ನ. ಇಬ್ಬರು ಸಹೋದರರೊಂದಿಗೆ ಸೇರಿ ಈ ಅಪ್ರಾಪ್ತ ಪತ್ನಿಯನ್ನು ಮನೆಯೊಳಗೆ ಸಾಯಿಸಿ ನಂತರ ಮೂವರು ಸೇರಿಕೊಂಡು ಮನೆಯೊಳಗೆ ಮಂಚದ ಕೆಳಗೆ ಗುಂಡಿ ತೋಡಿ ಹೂತು ಹಾಕಿದ್ದರು.

ಈ ಘಟನೆ ಮಧುಗಿರಿ ತಾಲ್ಲೂಕಿನ ಇಕಲೋಟಿ ಗ್ರಾಮದಲ್ಲಿ ನಡೆದಿದೆ.

ಡಿಸೆಂಬರ್ 7ರಂದು ಘಟ‌ನೆ ನಡೆದಿತ್ತು. ಈ ಅಪ್ರಾಪ್ತ ಪತ್ನಿಗೆ ಹದಿನೇಳು ವರ್ಷವಾಗಿತ್ರು. ಗ್ರಾಮದ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟು ಗಂಡ ನರಸಿಂಹ ಈ ಕೃತ್ಯ ಎಸಗಿದ್ದಾನೆ. ಪ್ರಕರಣವನ್ನು ಮಧುಗಿರಿ ಪೊಲೀಸರು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವರಲಕ್ಷ್ಮೀ ಗೆ ಸೂಲಗಿತ್ತಿ ನರಸಮ್ಮ‌ ರಾಷ್ಟ್ರೀಯ ಪ್ರಶಸ್ತಿ ಗರಿ

1

ಎಸ್. ವರಲಕ್ಷ್ಮೀ

Publicstory. in


ತುಮಕೂರು: ನಾಡಿನ ಹೆಸರಾಂತ ಹೋರಾಟಗಾರ್ತಿ, ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾದ ಸಿಐಟಿಯು ರಾಜ್ಯ ಘಟಕದ ಮೊದಲ ಮಹಿಳಾ ಅಧ್ಯಕ್ಷೆಯ ಹೆಗ್ಗಳಿಕೆಯ ಎಸ್. ವರಲಕ್ಷ್ಮೀ ಅವರು ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

ವರಲಕ್ಷ್ಮೀ ಅವರಲ್ಲದೇ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ, ಬಳ್ಳಾರಿ ವೆಂಕಮ್ಮ, ತತ್ವಪದ ಕಾರದ ಅಕ್ಷತಾ, ಬಣ್ಣದ ಬಾವಿ ಕುಕನೂರು ಆಯ್ಕೆ ಆಗಿದ್ದಾರೆ ಎಂದು ಸೂಲಗಿತ್ತಿ ನರಸಮ್ಮ‌ ಟ್ರಸ್ಟ್ನ ಪಾವಗಡ ಶ್ರೀರಾಮ್ ತಿಳಿಸಿದ್ದಾರೆ.

ಡಿಸೆಂಬರ್‌ 25ರಂದು ಬೆಳಗ್ಗೆ 11-30ಕ್ಕೆ ತುಮಕೂರು ನಗರದ ಗಂಗಸಂದ್ರದಲ್ಲಿ ಡಾ. ಸೂಲಗಿತ್ತಿ ನರಸಮ್ಮ ಶತಮಾನೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವರಲಕ್ಷ್ಮೀ ಅವರು ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರ ಹೋರಾಟದ ಮೂಲಕ ಕಾರ್ಮಿಕ ಸಂಘಟನೆಯಲ್ಲಿ ಮುಂಚೂಣಿಗೆ ಬಂದವರು.

ಗಾರ್ಮೆಂಟ್ಸ್ ನಲ್ಲಿ ಮಹಿಳಾ ನೌಕರರ ಮೇಲೆ ನಡೆಸುತ್ತಿದ್ದ ಕಿರುಕುಳ, ಹಿಂಸೆಯ ವಿರುದ್ಧ ಬಂಡೆದ್ದ ಅವರು ಇಲ್ಲಿಂದಲೇ ತಮ್ಮ ಹೋರಾಟದ ಹಾದಿ ತುಣಿದವರು.

ರಾಜ್ಯದಲ್ಲಿ ಲಕ್ಷಾಂತರ ಕಾರ್ಮಿಕರ ಸದಸ್ಯತ್ವ ಒಳಗೊಂಡ ಸಿಐಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷೆಯಾಗಿ ಎರಡನೇ ಅವಧಿಗೆ ಕೆಲಸ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷದಿಂದ ಸ್ಪರ್ಧಿಸಿದ್ದರು.

ಅಭಿನಂದನೆ; ಪ್ರಶಸ್ತಿಗೆ ಪಾತ್ರರಾದ ವರಲಕ್ಷ್ಮೀ ಅವರಿಗೆ ವಕೀಲರಾದ ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

ಬ್ರಿಟನ್ ಕೊರೊನಾ: ತುಮಕೂರಿಗೆ ಸದ್ಯಕ್ಕೆ ನಿರಾಳ

0

Publicstory. in


ತುಮಕೂರು: ರೂಪಾಂತರಗೊಂಡಿರುವ ಬ್ರಿಟನ್ ಕೊರೊನಾ ವೈರಸ್ ಸದ್ಯಕ್ಕೆ ತುಮಕೂರು ತಲುಪಿಲ್ಲ.

ರೂಪಾಂತರಗೊಂಡ ವೈರಸ್ ನಿಂದ ಅಪಾಯ ಇಲ್ಲ, ಇದೊಂದು ಸಹಜ ಪ್ರಕ್ರಿಯೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವರು ಹೇಳುತ್ತಿದ್ದರೂ ಜನರು ಭಯಭೀತಿ ದೂರವಾಗಿಲ್ಲ.

ಬ್ರಿಟನ್ ದೇಶದಿಂದ ತುಮಕೂರು ಜಿಲ್ಲೆಗೆ ಐವರು ಬಂದಿದ್ದರು. ಇವರೆಲ್ಲರೂ ತುಮಕೂರಿನವರೇ ಆಗಿದ್ದು, ಅಲ್ಲಿ ಕೆಲಸದ ಮೇಲೆ ಇದ್ದರು.

ತುಮಕೂರು ನಗರದಲ್ಲಿ ನಾಲ್ಕು, ತಿಪಟೂರಿನಲ್ಲಿ ಒಬ್ಬರು ಒಂದಿಳಿದ್ದರು.ಸುದ್ದಿ ಗೊತ್ತಾಗುತ್ತಿದ್ದಂತೆ ಇವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿದ ಆರೋಗ್ಯ ಇಲಾಖೆ ಕೊರೊನಾ ಪರೀಕ್ಷೆಗೆ ಒಳಪಡಿಸಿತ್ತು.

ಕಾರ್ಟೂನ್‌ ಕಾರ್ನರ್: ಮುಸ್ತಫ ರಿಬ್ಬನ್ ಪೇಟೆ


ಆರ್ ಟಿಪಿ ಆರ್ ಎಸ್ ಪರೀಕ್ಷೆಯಲ್ಲಿ ಐವರಿಗೂ ನೆಗಟಿವ್ ಫಲಿತಾಂಶ ಬಂದಿದ್ದು, ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಡಿಎಚ್ ಓ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ಸದ್ಯಕ್ಕೆ ಬ್ರಿಟನ್ ದೇಶಕ್ಕೆ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.

ಇಂದಿನಿಂದ ರಾತ್ರಿ ಕರ್ಪ್ಯೂ ಸಹ ಹೇರಲಾಗಿದೆ. ಜನರು ಮಾಸ್ಕ್ ಧರಿಸುವುದು,ಕಡ್ಡಾಯ ಅಂತರದ ಮೂಲಕ ಎಚ್ಚರವಹಿಸಬೇಕಾಗಿದೆ.

ಸಮವಸ್ತ್ರದಲ್ಲೇ ಕುಡಿದ ಪೊಲೀಸರು: ಹಲ್ಲೆ ಆರೋಪ: ಮೂವರು ಅಮಾನತು

Tumkuru: ಸಮವಸ್ತ್ರದಲ್ಲಿ ಇದ್ದಾಗ ಮದ್ಯ ಸೇವಿಸಿದ್ದನ್ನು ಪ್ರಶ್ನಿಸಿದ ಕರ್ನಾಟಕ ರಾಷ್ಟ್ರೀಯ ಪಕ್ಷದ ಯುವ ಘಟಕದ ರಾಜ್ಯ ಅಧ್ಯಕ್ಷ ರಘು ಜಾಣಗೆರೆ ಅವರ ಹಲ್ಲೆ ಆರೋಪದಲ್ಲಿ ಚಿಕ್ಕನಾಯಕನಹಳ್ಳಿ ಠಾಣೆ ಎಎಸ್‌ಐ ಶ್ರೀನಿವಾಸ್, ತುರುವೇಕೆರೆ ತಾಲ್ಲೂಕು ದಂಡಿನಶಿವರ ಠಾಣೆ ಕಾನ್‌ಸ್ಟೆಬಲ್‌ ಪರಮೇಶ್ ಮತ್ತು ಸಂತೋಷ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಬುಧವಾರ ಕೆಲಸದಿಂದ ಅಮಾನತುಗೊಳಿಸಿದ್ದಾರೆ.

ಪೊಲೀಸರ ಕ್ರಮವನ್ನು ಖಂಡಿಸಿ ಬುಧವಾರದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ನೇತೃತ್ವದಲ್ಲಿ ಕುಣಿಗಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಹೋರಾಟಗಾರರನ್ನು ಪೋಲಿಸರು ವಶಕ್ಕೆ ಪಡೆದರು.‌ ಇದಾದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಆದೇಶ ಮಾಡಿದರು.

ಈ ಮೂವರು ತಾಲ್ಲೂಕಿನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದು, ಚುನಾವಣಾ ಕೆಲಸ ಮುಗಿಸಿ ರಾತ್ರಿ ಮನೆಗಳಿಗೆ ಹೋಗಬೇಕಾದರೆ 112 ಹೊಯ್ಸಳ ವಾಹನದಲ್ಲಿಯೇ ಕುಳಿತು ಮದ್ಯ ಸೇವಿಸುತ್ತಿದ್ದರು.

ಇದನ್ನು ಪ್ರಶ್ನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮತ್ತು ಸಿಬ್ಬಂದಿ ನಡುವೆ ಮಾತಿಗೆ ಮಾತು ಬೆಳೆದು, ಪೊಲೀಸರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರಘು ವಿಡಿಯೊ ಮಾಡಿ ಫೇಸ್ ಬುಕ್ ನಲ್ಲಿ ಹಾಕಿದ್ದರು.

ಈ ಬಗ್ಗೆ ವಿಚಾರಣೆ ನಡೆಸಲು ರಘು ಅವರನ್ನು ಕುಣಿಗಲ್ ಪೊಲೀಸರು ಠಾಣೆಗೆ ಕರೆ ತರಲಾಗಿತ್ತು. ಈ ವೇಳೆ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದರು.

ಠಾಣೆ ಎದುರು ಪ್ರತಿಭಟಿಸಲು ಬಂದ ಪೊಲೀಸರು ಮತ್ತು ಸಮಿತಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ನಾಳೆ ತುಮಕೂರು ವಿವಿಗೆ

Publicstory. in


ತುಮಕೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ದ ನಿವೃತ್ತ ವಿಜ್ಞಾನಿ ಹಾಗೂ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಡಿಸೆಂಬರ್ 23ರಂದು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಡಾ. ಪಿ. ಸದಾನಂದ ಮಯ್ಯ ಕಟ್ಟಡದ ಸಭಾಂಗಣದಲ್ಲಿ ಬೆಳಗ್ಗೆ 11-30ಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅವರು ‘ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅಧ್ಯಕ್ಷತೆ ವಹಿಸುವರು. ಕುಲಸಚಿವ ನರಸಿಂಹಪ್ಪ, ವಿಭಾಗದ ಸಂಯೋಜಕ ಸಿಬಂತಿ ಪದ್ಮನಾಭ ಕೆ. ವಿ. ಉಪಸ್ಥಿತರಿರುವರು.

ಐಐಟಿ ಮದ್ರಾಸ್‌ನ ಎಂಟೆಕ್ ಪದವೀಧರರಾದ ಸುಧೀಂದ್ರ ಅವರು ಭಾರತ ಸರ್ಕಾರದ ಡಿಆರ್‌ಡಿಒ ಹಾಗೂ ಎಚ್‌ಎಎಲ್ ಸಂಸ್ಥೆಗಳಲ್ಲಿ ಎರಡೂವರೆ ದಶಕಗಳ ಕಾಲ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದು ಕನ್ನಡದಲ್ಲಿ ಜನಪ್ರಿಯ ವಿಜ್ಞಾನವನ್ನು ಪ್ರಸಾರ ಮಾಡುತ್ತಿರುವ ಅಂಕಣಕಾರರಾಗಿದ್ದಾರೆ.

ಮಸಾಲ ಜಯರಾಂ ಜತೆ ಒಳ ಒಪ್ಪಂದ ಮಾಡಿಕೊಂಡು ನನ್ನ ಸೋಲಿಸಿದ ವಾಸು: ಎಂಟಿಕೆ ಆರೋಪ

Publicstory. in


ತುರುವೇಕೆರೆ: ಕಳೆದ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಮಸಾಲಜಯರಾಂನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ನನ್ನ ಸೋಲಿಗೆ ಕಾರಣರಾದ ಇಲ್ಲವಾದರೆ ಮಸಾಲಜಯರಾಂ ಹೇಗೆ ಗೆಲ್ಲುತ್ತಿದ್ದರೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಸಚಿವರಾಗಬೇಕೆಂದು ದುರಾಲೋಚನೆಯಿಂದ ನನ್ನ ಸೋಲಿಗೆ ಕಾರಣರಾದಿರಿ. ನೀವೆ ದೇವಾಲಯದ ಮುಂದೆ ನಿಂತು ಆತ್ಮಾವಲೋಕನ ಮಾಡಿಕೊಳ್ಳಿ.
ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಆತಂರಿಕ ಒಪ್ಪಂದ ಮಾಡಿಕೊಂಡಿದ್ದರಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೋತರು ಎಂಬ ಗುಬ್ಬಿ ಶಾಸಕ ಶ್ರೀನಿವಾಸ ಆಪಾದನೆ ಸತ್ಯಕ್ಕೆ ದೂರವಾದದು ಎಂದರು.

ಎಚ್.ಡಿಕೆ ಮತ್ತು ದೇವೇಗೌಡರ ಬಗ್ಗೆ ಮಾತನಾಡುವಾಗ ವಿಷಯ ತಿಳಿದು ಮಾತನಾಡಬೇಕು. ಜೊತೆಯಲ್ಲಿದ್ದು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ ಎಂದು ತಿರುಗೇಟು ನೀಡಿದರು.

ನಮ್ಮ ಪಕದಿಂದ ಕೃಷ್ಣಪ್ಪ ಸಂಸದರ ಚುನಾವಣೆಗೆ ಸ್ಪರ್ಧಿಸಿದಾಗ ಗುಬ್ಬಿ ಶಾಸಕರು ಮುದ್ದಹನುಮೇಗೌಡರ ಜೊತೆ ಒಪ್ಪಂದ ಮಾಡಿಕೊಂಡಿರಲಿಲ್ಲವೇ? ಎಂದು ಕುಟುಕಿದರು.

ಇಷ್ಟೆಲ್ಲ ಎಚ್ಡಿಕೆ ಬಗ್ಗೆ ಲಘುವಾಗಿ ಮಾತನಾಡುವ ನೀವು ಕಾಂಗ್ರೆಸ್ ಮುಖಂಡರೊಂದಿಗೆ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಮರ್ಮವೇನೆಂಬುದು ಈಗ ಜಗತ್ ಜಾಹೀರಾತಾಗಿದೆ. ರಾಜಕಾರಣ ನಿಂತ ನೀರಲ್ಲ ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು ಮತ್ತೊಬ್ಬರನ್ನು ಅವಹೇಳನ ಮಾಡಿ ಪಕ್ಷ ತೊರೆಯುವ ಅನಿವಾರ್ಯತೆ ಏನಿತ್ತು ಎಂದು ಕೇಳಿದರು.

ಎಚ್.ಡಿ.ಕುಮಾರ್ ಸ್ವಾಮಿಯವರು ಯಾರೊಂದಿಗೂ ಪಿತೂರಿ ನಡೆಸಿಲ್ಲ. ನೇರ ನುಡಿಯ ರಾಜಕಾರಣಿ ಅವರು. ಸುಕಾಸುಮ್ಮನೆ ಕಾಂಗ್ರೆಸ್ನವರು ಎಚ್.ಡಿಕೆ ವಿರುದ್ದ ಮಾತನಾಡುವುದರಲ್ಲಿ ತಿರುಳಿಲ್ಲ.
ನನ್ನ ಅವಧಿಯಲ್ಲಿ ತಾಲ್ಲೂಕಿನ ಶಾಲಾ ಕಾಲೇಜು ತೆರೆಯಲು 55 ಕೋಟಿ ಅನುದಾನ ತಂದಿದ್ದೆ. ಹಾಲಿ ಶಾಸಕರದು ಬರಿ ಕಮಿಷನ್ ಕೊಡಿಗೆಯಷ್ಟೆ ಎಂದು ಗೇಲಿ ಮಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಧುಸೂದನ್, ವೆಂಕಟಾಪುರ ಯೋಗೀಶ್, ವಿಜಯೇಂದ್ರ, ಜಫ್ರಲ್ಲಾ, ಇದ್ದರು.

ಗ್ರಾ.ಪಂ.ಚುನಾವಣೆ: 65 ಸೈನಿಕರು ಮತ ಚಲಾಯಿಸಲು ಅಂಚೆ ಮತ ಪತ್ರ ರವಾನೆ

ತುರುವೇಕೆರೆ: ತಾಲ್ಲೂಕಿನ 480 ಎಪಿಆರ್, ಪಿಆರ್ಒಗಳಿಗೆ ಚುನಾವಣಾ ತರಬೇತಿ.

ತುರುವೇಕೆರೆ ತಾಲ್ಲೂಕಿನ 2ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27 ರಂದು ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಜಿ.ಜೆ.ಸಿ ಕಾಲೇಜಿನಲ್ಲಿ ಪಿಆರ್ಒ ಮತ್ತು ಎಪಿಆರ್ಒಗಳಿಗೆ ಚುನಾವಣಾ ತರಭೇತಿ ನೀಡಲಾಯಿತು.

ತಾಲ್ಲೂಕಿನ 27 ಪಂಚಾಯಿತಿಗಳ 200 ಮತಗಟ್ಟೆ ಕೇಂದ್ರಗಳಿಗೆ ಎಪಿಆರ್ 240, ಪಿಆರ್ಒ 240 ಸಿಬ್ಬಂದಿಗಳನ್ನು 15 ಕೊಠಡಿಗಳಲ್ಲಿ ಕೂರಿಸಿ 15 ಮಾಸ್ಟರ್ ತರಭೇತುದಾರರಿಂದ ಮಾಹಿತಿ ನೀಡಲಾಯಿತು.

ಮಧ್ಯಾಹ್ನ ಉಪಹಾರದ ನಂತರ ಚುನಾವಣೆಗೆ ನಿಯೋಜನೆಗೊಂಡ ಒಟ್ಟು 480 ಸಿಬ್ಬಂದಿಗಳಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಿಪಿಟಿಯ ಎಲ್ಇಡಿ ಸ್ಕ್ರೀನ್ ಮೂಲಕ ಪ್ರಾಯೋಗಿಕ ತರಭೇತಿ ನೀಡಲಾಯಿತು.

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಎಲ್ಲರೂ ಮುಂದಾಗ ಬೇಕಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಕರೆಕೊಟ್ಟರು.

ಅಂಚೆ ಮತಪತ್ರ: ಚುನಾವಣಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಹಾಗು ಹೊರ ಜಿಲ್ಲೆಗಳಲ್ಲಿನ ನೌಕರರು, ಸೈನಿಕರು ಅಂಚೆ ಮತ ಪತ್ರದ ಮೂಲಕ ತಮ್ಮ ಮತ ಚಲಾಯಿಸಲು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಅಂಚೆ ಮತಪತ್ರ ಕೇಂದ್ರ ತೆರೆಯಲಾಗಿದ್ದು ಅಂಚೆ ಮತಪತ್ರಕ್ಕೆ ಅರ್ಜಿ ಸ್ವೀಕರಿಸಲು ಡಿ.22 ಕೊನೆಯ ದಿನವಾಗಿದೆ. ಪಡೆದ ಅಂಚೆ ಮತ ಪತ್ರವನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಲು ಡಿ.30 ಬೆಳಗ್ಗೆ8 ಗಂಟೆಯೊಳಗೆ ಸಲ್ಲಿಸಬೇಕು. ತದ ನಂತರ ಬಂದ ಪತ್ರಗಳನ್ನು ತಿರಸ್ಕರಿಸಲಾಗುವುದು. ಈಗಾಗಲೇ ತಾಲ್ಲೂಕಿನ 65 ಸೈನಿಕರಿಗೆ ಅಂಚೆ ಮತ ಪತ್ರ ಕಳುಹಿಸಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸವಪ್ಪ, ತಹಶೀಲ್ದಾರ್ ಆರ್.ನಯಿಂಉನ್ನೀಸಾ, ನೋಡಲ್ ಅಧಿಕಾರಿಗಳಾದ ಬಾಲಕೃಷ್ಣಪ್ಪ, ನಟರಾಜು, ಪಿಎಸ್ಐ.ಪ್ರೀತಂ, ಚುನಾವಣಾ ಸಿಬ್ಬಂದಿ ಪಿ.ಕಾಂತರಾಜು ಇದ್ದರು.

ಗ್ರಾ.ಪಂ.ಚುನಾವಣೆ: ಇಂಥವರು ಇರ್ತಾರಾ?

ತುಮಕೂರು: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಂಥೆಂತವರೊ ಸ್ಪರ್ಧಿಸುತ್ತಾರೆಂದು ಮೂಗು ಮುರಿಯುವ ಮಂದಿಗೆ ಕುಚ್ಚಂಗಿಪಾಳ್ಯದ ಅಭ್ಯರ್ಥಿಯನ್ನು ನೋಡಿದರೆ ಹುಬ್ಬೇರುತ್ತಾರೆ.

ಈ ಊರಿನ ಜನರಿಂದ ಕುಮಾರಣ್ಣ ಎಂದೇ ಕರೆಸಿಕೊಳ್ಳುವ ಕೆ.ವಿ. ಶಿವಕುಮಾರ್ ಅವರು ಇದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಚುನಾವಣಾ ಪ್ರಣಾಳಿಕೆಯೇ ಗಮನ ಸೆಳೆಯುತ್ತಿದೆ.

ಮೇಲ್ನೋಟಕ್ಕೆ ಯಾವುದೇ ಪಕ್ಷದ ಬೆಂಬಲಿತ ವ್ಯಕ್ತಿ ಅಲ್ಲ, ಅದರೆ ಎಲ್ಲ ಪಕ್ಷಗಳ ಜನರ ಬೆಂಬಲಿತ ವ್ಯಕ್ತಿ ಎಂದೇ ಬಿಂಬಿತಗೊಂಡಿದ್ದಾರೆ.

ನಾನು ಇದೂವರೆಗೂ ಯಾವುದೇ ಚುನಾವಣೆಗೆ ನಿಂತವನಲ್ಲ ಎನ್ನುವ ಅವರು ಊರುವರ ಅವರ ಬಗ್ಗೆ ಹೇಳುವ, ಮಾತನಾಡುವ ಮಾತುಗಳನ್ನೇ ಅವರದೇ ಗ್ರಾಮ್ಯ ಭಾಷೆಯಲ್ಲಿ ಕರಪತ್ರ ಮುದ್ರಿಸಿದ್ದಾರೆ.

ಊರಿನ ಹುಡುಗ್ರು ಹೇಳಿದ್ರು, ನಮ್ಮೂರ ಭಾಷೆಯಲ್ಲಿ ಮತ ಕೇಳಾಣ ಅಂದ್ರು. ಹೀಗಾಗಿ ನಮ್ಮೂರ ಭಾಷೆಯಲ್ಲೇ, ನಮ್ಮ ಜನ, ನನ್ನ ಬಗ್ಗೆ ಹೇಳುವುದನ್ನೇ ಕರಪತ್ರ ಮಾಡಿದ್ದೇನೆ ಎನ್ನುತ್ತಾರೆ ಈ ಕುಮಾರಣ್ಣ.

ನನ್ನದು ಟ್ರ್ಯಾಕ್ಟರ್ ಗುರುತು. ಇದು ರೈತನ ಸಂಕೇತವೂ ಹೌದು. ರೈತನಿದ್ದರೆ ದೇಶ‌. ಗ್ರಾಮದ ಜನರ ಅಭಿವೃದ್ಧಿ ಆಗದೇ ದೇಶ ಅಭಿವೃದ್ದಿ ಆಗುವುದು ಹೇಗೆ? ಬೀದಿಯಲ್ಲಿ ಕೆಟ್ಟುಹೋದ ಬಲ್ಬ ಬದಲಿಸುವುದೇ ಅಭಿವೃದ್ಧಿ ಯೇ? ಚರಂಡಿ ಮಾಡಿಕೊಡಲಷ್ಟೇ ಗ್ರಾಮ ಪಂಚಾಯಿತಿ ಸದಸ್ಯನ ಕೆಲಸವೇ? ಅದಕ್ಕಿಂತ ಮಿಗಿಲಾದ ಕೆಲಸ ನಾವು ಮಾಡಿ ತೋರಿಸಬೇಕಾಗಿದೆ. ಹೀಗಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎನ್ನುತ್ತಾರೆ ಅವರು.

ಸುಪ್ರೀಂಕೋರ್ಟ್ ಪ್ರಕಾರ, ಗ್ರಾಮ ಪಂಚಾಯತಿಗಳೇ ಸುಪ್ರೀಂ.‌ಇಲ್ಲಿ ತೆಗೆದುಕೊಂಡ ನಿರ್ಧಾರ ಬದಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಇಲ್ಲ, ಕೇಂದ್ರ ಸರ್ಕಾರಕ್ಕೂ ಇಲ್ಲ. ಹಾಗಾದರೆ, ಗ್ರಾಮ ಪಂಚಾಯತಿಗಳು ಈ ಕೆಲಸ ಮಾಡುತ್ತಿವೆಯೇ? ಎಂಬ ಮರುಪ್ರಶ್ನೆ ಅವರದು.

ನನ್ನ ಪ್ರಣಾಳಿಕೆಯೇ ನನ್ನ ಚಿಂತನೆಗಳನ್ನು ಹೇಳುತ್ತದೆ. ನನ್ನ ಪ್ರಣಾಳಿಕೆಯ ಅಂಶಗಳು ಜಾರಿಯಾದರೆ ಮಾತ್ರ ನಿಜವಾದ ಅರ್ಥದಲ್ಲಿ ಗ್ರಾಮ ಜನರ ಸಬಲೀಕರಣ ಸಾಧ್ಯ. ಜನರು ಸಹ ಈ ಹೊಸ ಪ್ರಯತ್ನ, ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಏನೀ‌ನಿ ಪ್ರಣಾಳಿಕೆಗಳು


1) ಎರಡೂ ಊರುಗಳ ಮಕ್ಕಳ ಆನ್ ಲೈನ್ ಶಿಕ್ಷಣವೂ ಸೇರಿದಂತೆ, ಗ್ರಾಮದ ಸರ್ವರ ಸದುದ್ದೇಶಗಳಿಗೆ ವೈ-ಫೈ ಅಳವಡಿಕೆಗೆ ಪಂಚಾಯಿತಿಯ ಮೂಲಕ ಪ್ರಯತ್ನಿಸುವುದು.
(2) ನಮ್ಮ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಹೊರಗಿನ ದಾನಿಗಳು ಮತ್ತು ಹಳೆಯ ವಿದ್ಯಾರ್ಥಿ ಸಂಘದಿಂದ ಉನ್ನತಿಕರಣ ಹಾಗೂ ಕಂಪ್ಯೂಟರ್ ಆಧಾರಿತ ಸ್ಮಾರ್ಟ್ ಕ್ಲಾಸ್.
(3) ಹೈಸ್ಕೂಲ್ ನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನೆಡೆಸಲು ಎಕ್ಸ್ಪರ್ಟ್ ಉಪನ್ಯಾಸಕರಿಂದ ತರಬೇತಿ ನೀಡಿ,ಲಂಚವಿಲ್ಲದೇ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಅನುಕೂಲ ಕಲ್ಪಿಸುವುದು.
(4) ಗ್ರಾಮದ ನಿರುದ್ಯೋಗ ಯುವಕ-ಯುವತಿಯರಿಗಾಗಿ ಖಾಸಗಿ ಸಂಸ್ಥೆಗಳ ಜೊತೆಗೂಡಿ ಉದ್ಯೋಗ ತರಬೇತಿ ಮತ್ತು ಮೇಳ ಏರ್ಪಡಿಸುವುದು.
(5) ಮಕ್ಕಳು, ಕಲಾವಿದರು, ವಯಸ್ಸಾದ ಹಿರಿಯ ಜೀವಿಗಳು ಒಂದೇ ಕಡೆ ಕಲೆಯಲು ಇರುವ ಶಾಲೆಯ ಆವರಣದ ಸುತ್ತ ವಾಕಿಂಗ್ ಪಾಥ್, ಆರಾಮ ಕುರ್ಚಿಗಳನ್ನ ಅಳವಡಿಸಲು ನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸುವುದು.
(6)ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ವಿವಿಧ ಸಂಪನ್ಮೂಲ/ ವ್ಯಕ್ತಿಗಳಿಂದ ರಸೀದಿ ಮೂಲಕ ಹಣ ಸಂಗ್ರಹಿಸಿ ಉಸ್ತುವಾರಿ ಮುಖಂಡರಿಗೆ ತಲುಪಿಸುವುದು.
(7) ಪಾಳು ಬಿದ್ದಿರುವ ಹಳೆಯ ಶಾಲೆಯನ್ನು ನವೀಕರಣಗೊಳಿಸಿ ಕಲಾವಿದರು ಮತ್ತು ಮಕ್ಕಳು ತಮ್ಮ ಕಲೆ ಪ್ರದರ್ಶಿಸಲು ಅನುಕೂಲವಾಗುವಂತೆ ಮಾಡುವುದು.


ನಮ್ಮ‌ ಕುಟುಂಬ ಮೊದಲಿನಿಂದಲೂ ಗ್ರಾಮದ ಸೇವೆಯಲ್ಲಿ ತೊಡಗಿಕೊಂಡಿದೆ. ರಾಜಕೀಯ ಶಕ್ತಿ ಜನರ ಸೇವೆ ಮಾಡಲು ಮತ್ತಷ್ಟು ಅವಕಾಶ ಸಿಗಲಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು. https://publicstory.in ಗೆ ತಿಳಿಸಿದರು.

ಇದೊಂದು ವಿಶೇಷ ಚಿಂತನೆ.‌ ಈ ಸಲ ಎಲೆಕ್ಷನ್ ಜೋರಾಗಿದೆ. ಎಲ್ಲ ನೋಡಿ ಮತ ಹಾಕಬೇಕಾಗಿದೆ ಎನ್ನುತ್ತಾರೆ ಕುಚ್ಚಂಗಿ, ಕುಚ್ಚಂಗಿಪಾಳ್ಯದ ಜನರು.