Tuesday, May 5, 2026
Google search engine
Home Blog Page 164

ನವೋದಯ ವಿದ್ಯಾಲಯಕ್ಕೆ ಪ್ರವೇಶಾತಿ ಅರ್ಜಿ ಸಲ್ಲಿಸಲು ಡಿ.29 ಕೊನೆ  ದಿ‌ನ

Publicstory.in


ತುರುವೇಕೆರೆ: ನವೋದಯ ವಿದ್ಯಾಲಯದ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಡಿ.29 ಕೊನೆಯ ದಿನವಾಗಿದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ತಿಳಿಸಿದ್ದಾರೆ.
ಪ್ರಸ್ತುತ ಸಾಲಿನ 5ನೇ ತರಗತಿ ಓದುತ್ತಿರುವ ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗು ಅನುದಾನರಹಿತ ಶಾಲೆಗಳ ಮಕ್ಕಳು ಪ್ರವೇಶಾತಿ ಪಡೆಯಲು ಅರ್ಹರಿದ್ದು ಅರ್ಜಿಗಳನ್ನು ತಾಲ್ಲೂಕಿನ ಆಯಾ ಕ್ಲಸ್ಟರ್ ವ್ಯಾಪ್ತಿಯ ಸಿಆರ್ಪಿಗಳ ಮೂಲಕ ಶಾಲೆಗೆ ನೀಡಲಾಗಿರುವ ಅರ್ಜಿಗಳನ್ನು ಪೋಷಕರು ಅಥವಾ ವಿದ್ಯಾರ್ಥಿಗಳು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಶಾಲಾ ಮುಖ್ಯ ಶಿಕ್ಷಕರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಿಇಒ ಹಾಗು ಬಿಆರ್ಸಿ ಕಚೇರಿ ಸಂಪರ್ಕಿ ಸಬಹುದು.

ಹಾವು ಹಿಡಿಯುವ ಡ್ಯಾನಿಗೆ ಹಾವು ಕಚ್ಚಿ‌ ಸಾವು

ಬಾಗಲಕೋಟ: ನಗರ ಸೇರಿದಂತೆ ವಿವಿಧ ಕಡೆ ಹಾವು ಹಿಡಿದು ಅರಣ್ಯಕ್ಕೆ ಬಿಡುತ್ತಿದ್ದ ಹಾಗೂ ಮನೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಂಘ ಸಂಸ್ಥೆಗಳ‌ಕಚೇರಿಗಳಲ್ಲಿ ಹಾವು ಇದ್ದರೆ ಪೋನ್ ಕರೆ ಮಾಡಿದರೆ ಸಾಕು ತಕ್ಷಣ ಬಂದು ಹಾವು ಹಿಡಿದುಕೊಂಡು ಹೋಗುತ್ತಿದ್ದ ನಗರದ ಉರಗ ತಜ್ಞ ರೆಂದೆ ಖ್ಯಾತಿಯಾಗಿದ್ದ ಡ್ಯಾನಿಯಲ್ ನ್ಯೂಟನ್ ಇಂದು ಹಾವು ಕಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಡ್ಯಾನಿಯಲ್‌ ಕಳೆದ‌ ಹತ್ತಾರು ವರ್ಷಗಳಿಂದ‌ ಯಾವುದೇ ಫಲಾಪೇಕ್ಷವಿಲ್ಲದೇ ಸಮಾಜಸೇವೆ ಎಂದು ಯಾರಾದರೂ ಕರೆ‌ಮಾಡಿದರೆ ತಕ್ಷಣ ಸ್ಥಳಕ್ಕೆ ಹೋಗಿ ಹಾವು ಹಿಡಿಯುವ ಡ್ಯಾನಿಯಲ್ ಕೊನೆಗೆ ಹಾವು ಹಿಡಿಯಲು ಹೋಗಿ ಹಾವು ಕಚ್ಚಿಸಿಕೊಂಡು ಸಾವನ್ನಪ್ಪಿದರು.

ಇತ್ತೀಚಿಗೆ ಹಾವು ಕಚ್ಚಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು .ಇದಲ್ಲದೇ ಕಳೆದ ಎರಡು ತಿಂಗಳ ಹಿಂದೆ ಮದುವೆ ಕೂಡ ಆಗಿದ್ದರು.ಈಗ ಅವರ ಸಾವಿನ ಸುದ್ದಿಕೇಳಿ ನಗರ ಹಾಗೂ ಸುತ್ತಮುತ್ತಲಿನ ಜನ ದುಃಖ ವ್ಯಕ್ತಪಡಿಸಿದ್ದಾರೆ.

ಹಾವು ಕಡಿದ ಸುದ್ದಿ ಮನೆಯವರಿಗೆ ತಲುಪುತ್ತಿದ್ದಂತೆ‌ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಡ್ಯಾನಿಯಲ್ ನ್ಯೂಟನ್ ದೇಹದಾನ ಮಾಡಿದ್ದಾರೆ.

ಫೆ.3ರಿಂದ ಏರ್ ಷೋ

Publicstory. in


Bengaluru: ರಕ್ಷಣಾ ಸಚಿವಾಲಯ ಆಯೋಜಿಸುವ ದ್ವೈವಾರ್ಷಿಕ ಏರ್ ಷೋ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾ – 2021 ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 2021ರ ಫೆಬ್ರವರಿ 3 ರಿಂದ 7ರ ವರೆಗೆ ನಡೆಯಲಿದೆ.

ಏರೋ ಇಂಡಿಯಾ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ಮಿಲಿಟರಿ ಮತ್ತು ನಾಗರಿಕ ವಿಮಾನಯಾನ, ಬಾಹ್ಯಾಕಾಶ, ವಿಮಾನ ಮೂಲಸೌಕರ್ಯ ಮತ್ತು ರಕ್ಷಣಾ ಇಂಜಿನಿಯರಿಂಗ್ ವಲಯದಲ್ಲಿನ ಜಾಗತಿಕ ಮುಂಚೂಣಿ ಕಂಪನಿಗಳ ಪ್ರದರ್ಶಕರನ್ನು ಅತಿ ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಪ್ರದರ್ಶನವಾಗಿದೆ.

ಪ್ರದರ್ಶನದಲ್ಲಿ ಏರೋ ಸ್ಪೇಸ್ ವಲಯದಲ್ಲಿ ಭಾರೀ ಪ್ರಮಾಣದ ಮಿಲಿಟರಿ ಉಪಕರಣಗಳ ಪ್ರದರ್ಶನ ಮತ್ತು ಹಾರಾಟ ಒಳಗೊಂಡಿದೆ.

ಏರೋ ಇಂಡಿಯಾ ಪ್ರದರ್ಶನದ ಅಂಗವಾಗಿ 2020ರ ಡಿಸೆಂಬರ್ 17ರಿಂದ ವೆಬಿನಾರ್ ಸರಣಿ ಆರಂಭವಾಗಲಿದೆ. ಈ ವೆಬಿನಾರ್ ಗಳನ್ನು ಬಾಹ್ಯಾಕಾಶ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಸಮಕಾಲೀನ ವಿಷಯಗಳನ್ನು ಆಧರಿಸಿ ನಡೆಸಲಾಗುವುದು. ಈ ವೆಬಿನಾರ್ ಗಳನ್ನು ಜಗತ್ತಿನಾದ್ಯಂತ ಸ್ಟ್ರೀಮ್ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ನಿಮ್ಮ ಲೈಂಗಿಕ ನಿಲುವನ್ನು ಬಚ್ಚಿಟ್ಟುಕೊಳ್ಳಬೇಡಿ : ವಸುಧೇಂದ್ರ ಕರೆ

Publicstory. in


Bengaluru: ನಿಮ್ಮ ಲೈಂಗಿಕ ನಿಲುವನ್ನು ಬಚ್ಚಿಟ್ಟುಕೊಳ್ಳಬೇಡಿ ಎಂದು ಖ್ಯಾತ ಸಾಹಿತಿ, ಎಲ್ ಜಿ ಬಿ ಟಿ ಹಕ್ಕುಗಳ ಪ್ರತಿಪಾದಕ ವಸುಧೇಂದ್ರ ಕರೆ ನೀಡಿದರು.’ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ‘ಚಾಕ್ ಸರ್ಕಲ್’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ನನ್ನ ಬರವಣಿಗೆ ನನಗೆ ಹಣ, ಕೀರ್ತಿ ಹಾಗೂ ಪ್ರೀತಿಯನ್ನು ತಂದುಕೊಟ್ಟಿರಬಹುದು. ಆದರೆ ನಾನು ಗೇ ಲೋಕದ ಸಂಗತಿಗಳನ್ನು ಒಳಗೊಂಡ ‘ಮೋಹನಸ್ವಾಮಿ’ ಬರೆದಾಗ ಅದು ನನಗೆ ಬದುಕನ್ನು ಮರಳಿ ತಂದುಕೊಟ್ಟಿತು ಎಂದರು. ಸಮಾಜದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆಂದೇ ನಾವು ಹಾಕಿಕೊಳ್ಳುವ ಮುಖವಾಡಗಳನ್ನು ಕಳಚಬೇಕಾದ ಅಗತ್ಯವಿದೆ. ಹಾಗೆ ಮುಖವಾಡಗಳನ್ನು ಕಳಚಿ ನಮ್ಮಂತೆ ಬದುಕಿದರೆ ನಾವು ಸುಂದರವಾಗಿತೆ ಕಾಣುತ್ತೇವೆ. ಆ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ನಾವು ಗೇ ಎಂದು ಘೋಷಿಸಿಕೊಳ್ಳಲು ಧೈರ್ಯ ಬೇಕು. ಆದರೆ ಹಾಗೆ ಧೈರ್ಯ ತೋರಿಸಿ ಘೋಷಿಸಿಕೊಂಡಲ್ಲಿ ಬದುಕು ಸಹನಶೀಲವಾಗುತ್ತದೆ ಎಂದರಲ್ಲದೆ ನಾನು ಹಾಗೆ ಮೋಹನಸ್ವಾಮಿ ಕೃತಿಯ ಮೂಲಕ ಗೇ ಎಂದು ಘೋಷಿಸಿಕೊಂಡಾಗಲೇ ಸುಪ್ರೀಂ ಕೋರ್ಟ್ ಸಲಿಂಗ ಬದುಕನ್ನು ಅಪರಾಧ ಎನ್ನುವ ತೀರ್ಪು ಕೊಟ್ಟಿತ್ತು. ಆ ಸಮಯದಲ್ಲಿ ನಾನು ತುಂಬು ಆತಂಕದಿಂದ ದಿನಗಳನ್ನು ಕಳೆದಿದ್ದೇನೆ ಸಮಾಜದಲ್ಲಿರುವ ಹೋಮೊಫೋಬಿಯಾ ಹೋಗಬೇಕಾದರೆ ಜ್ಞಾನಪ್ರಸರಣ ಆಗಬೇಕು. ಈ ಕಾರಣದಿಂದಲೇ ನಾನು ಹೆಚ್ಚೆಚ್ಚು ಈ ಅರಿವಿನ ಪ್ರಸಾರದಲ್ಲಿ ನಿರತನಾಗಿದ್ದೇನೆ ಮತ್ತು ಗೇ ಕೌನ್ಸೆಲಿಂಗ್ ನಡೆಸುತ್ತಿದ್ದೇನೆ ಎಂದರು ‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಸಂವಾದದ ನೇತೃತ್ವ ವಹಿಸಿದ್ದರು.

ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಶಾಸಕ ಮಸಾಲ ಜಯರಾಮ್ ನೇಮಕ

Publicstory. in


ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಮಾಸಲೆ ಜಯರಾಮ್ ಅವರನ್ನು ” ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ ನೇಮಿಸಿ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿ ಆದೇಶಿಸಲಾಗಿದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಮೊಹಮ್ಮದ ನಯೀಮ್ ಮೊಮಿನ್ ಆದೇಶ ಹೊರಡಿಸಿದ್ದಾರೆ.

ಶಾಲಾ ಶಿಕ್ಷಕರ‌ ಸಂಘ: ತುರುವೇಕೆರೆಯಲ್ಲಿ ಯಾರಿಗೆ‌ ಒಲಿಯಿತು ಅದೃಷ್ಟ

Publicstory. in


ತುರುವೇಕೆರೆ: ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಮತ ಏಣಿಕೆಯು ಮಂಗಳವಾರ ತಡ ರಾತ್ರಿಯವರೆಗೂ ಶಾಂತಿಯುತವಾಗಿ ನಡೆಯಿತು.

8 ಪುರುಷ ಶಿಕ್ಷಕ ನಿರ್ದೇಶಕರು ವಿಜೇತರಾಗಿದ್ದು, 4 ಮಹಿಳಾ ಶಿಕ್ಷಕಿಯರು ಅವಿರೋಧವಾಗಿ ಒಟ್ಟು 12 ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಿ.ಶಿವಣ್ಣ ತಿಳಿದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಬಣದ ಕೆ.ಎಸ್.ಭಾರತಿ, ಎನ್.ಆರ್.ಜಲಜಾಕ್ಷಿ, ಎಸ್.ಎಂ.ಶಮಂತಾ, ಎನ್.ಹನುಮಕ್ಕ, ಟಿ.ಪಿ.ರಾಘವೇಂದ್ರ, ಷಣ್ಮುಖಪ್ಪ, ಬಸವರಾಜು.ಎಂ, ಭೈರಪ್ಪ.ಎಂ.ಎಸ್, ನಜೀರ್, ಪಂಚಾಕ್ಷರಯ್ಯ ಹಾಗು ಕಂಚಿರಾಯಪ್ಪ ಬಣದಲ್ಲಿ ರತೀಶ್ಕುಮಾರ್ ಎಸ್.ಪಿ ಹಾಗು ಕಂಚೀರಾಯ.ಜಿ ಆಯ್ಕೆಯಾಗಿದ್ದಾರೆ.

ನೂತನ ನಿರ್ದೇಶಕರುಗಳನ್ನು ಬಿ.ಇಒ.ರಂಗಧಾಮಯ್ಯ ಹಾಗು ಸಹ ಶಿಕ್ಷಕರುಗಳು ಅಭಿನಂದಿಸಿದರು.

ತುರುವೇಕೆರೆಯಲ್ಲಿ ಕುಮಾರಸ್ವಾಮಿ‌ ಹುಟ್ಟುಹಬ್ಬ ಆಚರಣೆ

Publicstory. in


ತುರುವೇಕೆರೆ: ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ 61 ನೇ ಹುಟ್ಟುಹಬ್ಬವನ್ನು ಜೆ.ಡಿ.ಎಸ್ ಕಾರ್ಯಕರ್ತರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಆಚರಿಸಲಾಯಿತು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲ್ಲೂಕಿನ ಬಹುತೇಕ ಜೆ.ಡಿ.ಎಸ್ ಮುಖಂಡರುಗಳು, ಚುನಾಯಿತ ಪ್ರತಿನಿಧಿಗಳು ಸಮಾವೇಶಗೊಂಡು, ಕುಮಾರಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಸಿಹಿ ಹಂಚಿ ಶುಭ ಹಾರೈಸಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆಯವರು ಜನಸಾಮಾನ್ಯರಿಗೆ ಹತ್ತಿರವಾದ ಆಡಳಿತ ನೀಡುವ ಮೂಲಕ ಇಡೀ ರಾಜ್ಯದ ಜನಮನದಲ್ಲಿ ಪ್ರೀತಿಯ ಕುಮಾರಣ್ಣನೆನಿಸಿದ್ದಾರೆ ಎಂದರು.

ಲಾಟರಿ, ಸಾರಾಯಿ ನಿಷೇದ, ರೈತರ ಸಾಲಮನ್ನಾ, ಹಲವು ಕೃಷಿಪರವಾದ ಯೋಜನೆಗಳ ಅನುಷ್ಟಾನ, ಗ್ರಾಮವಾಸ್ತವ್ಯದೊಂದಿಗೆ ಹಳ್ಳಿಗರಲ್ಲಿ ಬೆರೆತು, ಸಾಮಾನ್ಯರ ದುಗುಡ ದುಮ್ಮಾನಗಳಿಗೆ ತುರ್ತು ಪರಿಹರಿಸುವ ಮೂಲಕ ಅಪರೂಪದ ಮುಖ್ಯಮಂತ್ರಿ ಎನಿಸಿದ್ದರು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಜೆ.ಡಿ.ಎಸ್. ಪ್ರಧಾನಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್, ಎ.ಪಿ.ಎಂ.ಸಿ ಅಧ್ಯಕ್ಷ ಮಧುಸೂಧನ್, ಸದಸ್ಯರುಗಳಾದ ವಿಜಯೇಂದ್ರ, ಹಿಂಡಮಾರನಹಳ್ಳಿನಾಗರಾಜ್, ನರಸಿಂಹರಾಜು, ಪ.ಪಂ. ಸದಸ್ಯರುಗಳಾದ ಎನ್.ಆರ್.ಸುರೇಶ್, ಮಧು, ಮುಖಂಡರುಗಳಾದ ಮುಂಗಿಕುಪ್ಪೆ ಬಸವರಾಜ್, ಸೋಮೇನಹಳ್ಳಿಶಿವಾನಂದ್, ಶಿವರಾಮ್, ರಂಗನಾಥ್, ಚೇತನ್ ಮತ್ತಿತರಿದ್ದರು.

ದೇಶ ಸೇವೆ ಮಾಡಬೇಕೆಂದರೆ ಅಂಬೇಡ್ಕರ್ ಮಾರ್ಗದಲ್ಲಿ ನಡೆಯಿರಿ: ಶ್ರೀನಿವಾಸ್

Publicstory. in


Tumkur: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಸರ್ಕಾರಿ ಬಾಲಕಿಯರ ಬಾಲಮಂದಿರ,ಸೆಂಟರ್ ಫಾರ್ ಸೋಷಿಯಲ್ ಇನ್ನೂಕ್ಲೂಸಿವ್ ಡೆವಲಪ್‌ಮೆಂಟ್ ಸೊಸೈಟಿ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಲಾಗಿತ್ತು .

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ್ ಮಾತನಾಡಿ ಡಾ.ಬಾಬಾಸಾಹೇಬ್ ಬಿ.ಆರ್ ಅಂಬೇಡ್ಕರ್ ರವರು ಈ ದೇಶದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅವರ ಜ್ಞಾನ ಇಡೀ ಜಗತ್ತಿಗೆ ಮಾದರಿಯಾಗಿದೆ .

ವಿದ್ಯಾರ್ಥಿಗಳು ಇತ್ತೀಚೆಗೆ ಆಧುನಿಕ ತಂತ್ರಜ್ಞಾನದ ಸಾಧನೆಗಳ ಹಿಂದೆ ಬಿದ್ದು ಯಶಸ್ಸಿನ ಗುರಿ ಮರೆಯುತ್ತಿದ್ದಾರೆ ,ಅಂಬೇಡ್ಕರ್ ಪುಸ್ತಕ ಪ್ರೇಮಿಯಾದರೆ ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಸಲಕರಣೆಗಳ ಪ್ರೇಮಿಗಳಾಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.ನಿಜವಾಗಲು ದೇಶ ಸೇವೆ ಮಾಡಬೇಕೆಂದರೆ ಅಂಬೇಡ್ಕರ್ ಮಾರ್ಗದಲ್ಲಿ ನಡಿದು ಸಾದನೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಎಂ ಸುಜಾತರವರು ಶಿಕ್ಷಣದ ಮೂಲಕವೇ ಅಂಬೇಡ್ಕರ್ ವಿಶ್ವದ ಮಟ್ಟದಲ್ಲಿ ಹೆಸರು ಗಳಿಸಿ ದೇಶಕ್ಕೆ ಕೀರ್ತಿ ತಂದರು ರಾಷ್ಟ್ರದ ಅಭಿವೃದ್ಧಿ ಅಷ್ಟೇ ಅಲ್ಲದೇ ದೇಶದ ಎಲ್ಲಾ ಹೆಣ್ಣುಮಕ್ಕಳ ಹಕ್ಕುಗಳಿಗೆ ಶ್ರಮಿಸಿದರು ಎಂದರು.

ಕಾನೂನು ಮೂಲಕ ಎಲ್ಲಾರಿಗೂ ಸಮಾನತೆ ಸಂವಿಧಾನ ಬದ್ದ ಹಕ್ಕುಗಳು ಇಂದಿಗೂ ಜಾರಿಜಾಗದಿರುವುದು ನಿಜಕ್ಕೂ ದುರಂತದ ಸಂಗತಿ ಹಾಗಾಗಿ ಹೆಣ್ಣು ಮಕ್ಕಳು ಶಿಕ್ಷಣ ಹೆಚ್ಚು ಪಡೆದು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ಮಾಡಬೇಕು ಇದಕ್ಕೆ ಅಂಬೇಡ್ಕರ್ ರವರ ಶಿಕ್ಷಣ ಸಂಘಟನೆ ಹೋರಾಟ ತ್ರಿವಳಿ ಸೂತ್ರಗಳನ್ನು ಅದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು .

ಅದ್ಯಕ್ಷೀಯ ನುಡಿಗಳನ್ನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ವಾಸಂತಿ ಉಪ್ಪಾರ್ ರವರು ಅಂಬೇಡ್ಕರ್ ರವರ ಚಿಂತನೆಗಳನ್ನು ಸಮಾಜಕ್ಕೆ ಸಾರ್ವಕಾಲಿಕವಾಗಿ ಬೇಕಾಗಿವೆ.ಸಂವಿಧಾನ ರಚನೆಯಷ್ಟೇ ಅಲ್ಲದೆ ನೀರಾವರಿ ,ಕೃಷಿ ,ಅರ್ಥಿಕತೆ ,ಇತಿಹಾಸ ಮುಂತಾದ ಕ್ಷೇತ್ರದಲ್ಲಿ ಇವರ ಸಾದನೆ ಇಂದಿಗೂ ಅಮರವಾಗಿದೆ ಅವರ ಜ್ಞಾನದ ಆಸಕ್ತಿಅವರ ಜ್ಞಾನದ ಆಸಕ್ತಿ ಇಂದಿನ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು .

ಅಂಬೇಡ್ಕರ್ ಕುರಿತಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ,ಆಶುಭಾಷಣ ಸ್ಪರ್ಧೆ ,ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕರಾದ ಸಚಿನ್ ಬಿ.ಎಸ್ ರವರು ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೇಲ್ವಿಚಾರಕರಾದ ಪುಷ್ಪಲತಾ,ಸಮಲೋಚಕಿ ದಿವ್ಯರವರು ಭಾಗವಹಿಸಿದ್ದರು .

ರಾತ್ರಿ ಎರಡವರೆಗೂ ಅವರು ಬಾಯ್ಬಿಡಲಿಲ್ಲ…‌ಕೊನೆಗೂ ಹೇಳಿ ನಿಟ್ಟುಸಿರು ಬಿಟ್ಟರು…

0

ಮಹೇಂದ್ರ ಕೃಷ್ಣಮೂರ್ತಿ


ಪತ್ರಕರ್ತ ವೈ.ರವಿ ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.‌ ಕಾಸರಗೋಡಿನವರಾದ ಅವರು ಪ್ರಜಾವಾಣಿಯ ಹಿರಿಯ ಪತ್ರಕರ್ತರು.

ರವಿ ಎಂದರೆ ಹೀರೊ ರೀತಿ.‌ ಎತ್ತರದ ನಿಲುವು, ಕೆಂಪಗೆ, ಹೆಚ್ಚು ಮಾತನಾಡದ ಮೃದುಭಾಷಿ. ಆದರೆ ಅಪ್ಪಟ ಪತ್ರಕರ್ತ.

ಅವರೊಂದಿಗೆ ಮಂಗಳೂರಿನಲ್ಲಿ ನನ್ನ ಕೆಲಸದ ನೆನಪು ಎಂದಿಗೂ ಮಾಸದು. ಮಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆ ಮುದ್ರಣಕ್ಕೆ ಹೋಗುತ್ತಿದ್ದದ್ದೇ ರಾತ್ರಿ 2 ಗಂಟೆಗೆ. ಆ ದಿನ ಮಾತ್ರ ರಾತ್ರಿ ಏಳಕ್ಕೆ ಶುರುವಾದ ಅವರ ಮೊಬೈಲ್ ಕಾಲ್ ಗಳು ನಿಲ್ಲುತ್ತಲೇ ಇರಲಿಲ್ಲ.

ಯಾವತ್ತೂ ಅವರು ವಿಚಲಿತರಾಗಿದ್ದು ನಾನು ನೋಡೇ ಇರಲಿಲ್ಲ. ಆ ದಿನ ನನಗಂತೂ ಮರೆಯಲಾರದ ದಿ‌ನ. ಯಾರಿಗೂ ಗೊತ್ತಾದ ಸ್ಕೂಪ್ ಸ್ಟೋರಿ ಬರೆದು ಅವರ ಕಂಪ್ಯೂಟರ್ ಫೋಲ್ಡರ್ ಗೆ ಹಾಕಿದ್ದೆನು. ಅದರ ಖುಷಿಯಲ್ಲೇ ಇದ್ದೆ. ಆ ಸುದ್ದಿ ಬರೆದದ್ದು ನನಗೆ ಬಿಟ್ಟರೆ ರವಿ ಅವರಿಗೆ ಮಾತ್ರ ಗೊತ್ತಿತ್ತು.

ಅವರಿಂದ‌ ಯಾವ ಮಾತು ಹೊರಡಲಿಲ್ಲ. ಅದು ಅವರ ಸ್ಟೈಲ್. ಆದರೆ ಯಾಕೊ ವಿಚಲಿತರಾಗಿದ್ದರು. ಲಕ್ಷಣ ಕೊಡಸೆ ಅವರ ಬಳಿಕ ಮಂಗಳೂರಿನ ಜವಾಬ್ದಾರಿ ಹೊತ್ತು ಬಂದಿದ್ದರು.

ಇನ್ನೇನು ಬಾಗಿಲು ಮುಚ್ಚಿ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವರ ಕ್ಯಾಬಿನ್ ಒಳಗೆ ಕರೆದರು. ಇಷ್ಟೆಲ್ಲ ಫೋನ್ ಕರೆಗಳು ಏಕೆಂದು ಗೊತ್ತಾ ನಿಮಗೆ ? ಎಂದರು. ನಾನು, ಮುಖ,‌ಮುಖ ನೋಡಿದೆ.

ನಿಮ್ಮ ಸ್ಟೋರಿ ಹಾಕಬಾರದೆಂದು ಎಷ್ಟೆಲ್ಲ ಸಾಹಸ ಪಡುತ್ತಿದ್ದಾರೆ ನೋಡಿ. ಯಾರು, ಯಾರೆಲ್ಲ ಕಾಲ್ ಮಾಡಿದ್ರು ಗೊತ್ತಾ? ಎಂದರು.‌ ನಾನು, ವಿವರ ಕೇಳುವ ಗೋಜಿಗೆ ಹೋಗಲಿಲ್ಲ.

ಬೆಳಿಗ್ಗೆ ಎದ್ದವನೇ ಪ್ರಜಾವಾಣಿ ತೆಗೆದರೆ ಮುಖಪುಟದಲ್ಲಿ ಕಲರ್ ಸಹಿತ ಸುದ್ದಿ ಪ್ರಕಟ. ಆ ದಿನ ಬೆಳಿಗ್ಗೆಯೇ 8ಕ್ಕೆ ಲೋಕಾಯುಕ್ತರಾದ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮೇಲೆ ದಾಳಿ. ಇಡೀ ಸಂಜೆವರೆಗೂ ಅವರು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದ ಪ್ರಜಾವಾಣಿಯನ್ನು ಬಿಟ್ಟಿರಲಿಲ್ಲ.

ವೆನ್ಲಾಕ್ ಆಸ್ಪತ್ರೆಯಲ್ಲಿ ಕೋಟ್ಯಂತರ ಮೌಲ್ಯದ ಔಷಧಿಗಳನ್ನು ವೆನ್ಲಾಕ್ ಆಸ್ಪತ್ರೆ ಹಿಂಭಾಗದ ಬಾವಿಯಲ್ಲಿ ಮುಚ್ಚಿಡಲಾಗಿದೆ. ರೋಗಿಗಳಿಗೆ ಕೊಡದೇ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಔಷಧಿಗಳನ್ನು ಸರ್ಕಾರಿ ಕಚೇರಿಯೊಂದರ ಹಿಂಭಾಗ ಗೌಪ್ಯವಾಗಿ ಸುಡಲಾಗಿದ್ದ ಬಗ್ಗೆ ನನ್ನ ವಿಶೇಷ ವರದಿಇತ್ತು.

ಸುದ್ದಿ ನಂಬಿದ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಸಿಬ್ಬಂದಿಯನ್ನು ಬಾವಿಗೆ ಇಳಿಸಿಯೇ ಬಿಟ್ಟರು.‌ರಾಶಿ, ರಾಶಿ ಔಷಧಿಗಳು ಸಿಕ್ಮವು. ಅಮೇಲಿನದು ಬೇರೆ ವಿಷಯ.

ವೈ.ರವಿ ಸ್ವಲ್ಪ ಬಾಗಿದ್ದರೆ ಆ ಸುದ್ದಿ ಬರುತ್ತಿರಲಿಲ್ಲ. ಮಂಗಳೂರಿನಲ್ಲಿ ಅವರು ಇದ್ದಾಗ ಒಂದಿಷ್ಟು ಕಹಿ ಘಟನೆಗಳ ಕಾರಣ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡರು. ವಿಜು ಪೊಣಚ್ಚ, ರಾಮದೇವ ರಾಖೆ ಅವರು ರವಿ ಅವರೊಂದಿಗೆ ಇದ್ದರು. ಬಸವರಾಜ್ ಸಂಪಳ್ಳಿ, ಹರ್ಷವರ್ಧನ್,‌ಡಿ.ಬಿ.ನಾಗರಾಜ್,‌ ರಾಜೇಶ್ ರೈ ಚಟ್ಲ, ಪ್ರಕಾಶಂ, ಇನ್ನೂ ಅನೇಕರಿದ್ದೆವು.

ನಂತರ ನಾನು‌ ರವಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಬೆಂಗಳೂರಿನಲ್ಲಿ. ಅವರೊಂದಿಗೆ ಕೆಲಸ ಮಾಡುವುದೇ ಖುಷಿಯಾದ ವಿಚಾರವಾಗಿತ್ತು. ಯಾರನ್ನೂ ತೆಗಳದ, ಹೊಗಳದ ಅವರಿಗೆ ಬಡ್ತಿಯಲ್ಲೂ ಹಿನ್ನಡೆಯಾಗಿತ್ತು. ಇದು ಅವರಿಗೆ ಬೇಸರವನ್ನೂ ತರಿಸಿತ್ತು. ಕೊನೆಗೆ ಬಡ್ತಿ ಸಿಕ್ಕರೂ ಅವರು ಅದನ್ನು ನಿರಾಕರಿಸಿದರು.‌ ನಾನು ಕೇಳಿದ್ದಕ್ಕೆ, ಈಗ ಯಾಕ್ ಬೇಕು ಅದು ಎಂದಿದ್ದರು.

ಪತ್ರಕರ್ತರಿಗೆ ವೇಜ್ ಬೋರ್ಡ್ ಜಾರಿ ವಿಚಾರದಲ್ಲಿ ಅತಿ ಗಟ್ಟಿಯಾಗಿ ನಿಂತಿದ್ದರು. ಶ್ರೀನಗರದಲ್ಲೂ ಕೆಲಸ ಮಾಡಿ ತೋರಿಸಿದರು. ಕೊನೆಗೆ ಅವರನ್ನು ಗುಲ್ಬರ್ಗಾಕ್ಕೆ ವರ್ಗ ಮಾಡಲಾಗಿತ್ತು.

ಯಾರನ್ನೂ ನೋಯಿಸಿದ ಅವರ ಮನದಲ್ಲಿ ಎಷ್ಟು ನೋವುಗಳಿದ್ದವೋ ಗೊತ್ತಿಲ್ಲ. ಪತ್ರಿಕೋದ್ಯಮ ಅವರಿಗೆ ಖಂಡಿತಾ ನೋವು ಕೊಟ್ಟಿತ್ತು ಎಂಬುದು ನನಗೆ ಗೊತ್ತು. ಈ ಕಾಲಃಟ್ಟದಲ್ಲಿ ಪತ್ರಿಕೋದ್ಯಮದ ಸೇವೆ ಗುರುತಿಸುವರು ಕಡಿಮೆಯೇ ಸರಿ. ಏನು ಇಲ್ಲದಂತೆ, ಎಲೆ ಮಾರಿಕಾಯಿಯಂತೆ, ಪತ್ರಕರ್ತನ ಹಮ್ಮುಬಿಮ್ಮು ಇಲ್ಲದಂತೆ ನಡೆದು ಹೋಗಿದ್ದಾರೆ.

ರವಿ ಅವರನ್ನು ಪ್ರಜಾವಾಣಿಯಲ್ಲಿ‌ ಸಾಕಷ್ಟು ಕಿರಿಯ ಸಹದ್ಯೋಗಿಗಳು ಇಷ್ಟಪಡುತ್ತಿದ್ದರು. ಅವರ ಹೀರೊ ಲುಕ್ ನೋಡುವುದೇ ಖುಷಿ ಎನಿಸುತ್ತಿತ್ತು.

ಅವರ ಆತ್ಮಕ್ಕೆ ಶಾಂತಿ ಸಿಗಲಿ.‌

ತುರುವೇಕೆರೆ: ಅವಿರೋಧ ಬಿಟ್ಟ ಶಿಕ್ಷಕರು, ಇಂದು ಚುನಾವಣೆ, ಶಿಕ್ಷಕಿಯರಿಗೆ ಜೈ

Publicstory.in


ತುರುವೇಕೆರೆ: ಚುನಾವಣೆ ಸಮೀಪಿಸಿದಂತೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯು ರಂಗೇರಿದ್ದು ಡಿ.15ರಂದು ಪಟ್ಟಣದ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಬೆಳಗ್ಗೆ 7: 30 ರಿಂದ 4 ಗಂಟೆಯ ವರೆಗೆ ಮತದಾನ ನಡೆಯಲಿದೆ.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಷಣ್ಮುಖಪ್ಪ ಹಾಗು ಕಂಚಿರಾಯಪ್ಪ-ರತೀಶ್ ಕುಮಾರ್ ಈ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ.

ಸ್ಪರ್ಧಿತ ಶಿಕ್ಷಕರುಗಳು ಎನ್ಪಿಎಸ್ ರದ್ದತಿ, ಸಿ ಅಂಡ್ ಆರ್ ನಿಯಮಗಳ ಬದಲಾವಣೆ ಸೇರಿದಂತೆ ಶಿಕ್ಷಕರ ಮೂಲಭೂತ ಸಮಸ್ಯೆ ಹೋಗಲಾಡಿಸಲು ಕೆಲಸ ಮಾಡುವುದಾಗಿ ಈಗಾಗಲೇ ಪ್ರಚಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ತಾಲ್ಲೂಕಿನಲ್ಲಿ 621 ಮತದಾರ ಶಿಕ್ಷಕರಿದ್ದು ತಲಾ 50 ಶಿಕ್ಷಕರೊಬ್ಬರಂತೆ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ 12 ಶಿಕ್ಷಕರ ಕ್ಷೇತ್ರದ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಆ ಪೈಕಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಷಣ್ಮುಖಪ್ಪ ಬಣದ ಮಹಿಳಾ ಮೀಸಲು ಅಭ್ಯರ್ಥಿಗಳಲ್ಲಿ ನಾಲ್ವರೂ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನುಳಿದ 8 ಪುರುಷ ಸ್ಥಾನಗಳಿಗೆ ಚುನಾವಣೆ ನಡೆಯ ಬೇಕಿದ್ದು ಪ್ರಸ್ತುತ ಒಟ್ಟು 13ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕಳೆದ ಬಾರಿ ತಾಲ್ಲೂಕಿನ ಶಿಕ್ಷಕರು ಗುಂಪುಗಾರಿಗೆ, ಸ್ವಹಿತಾಸಕ್ತಿ ಬದಿಗಿರಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ವೇಳೆ ಎಲ್ಲ ಶಿಕ್ಷಕರುಗಳೂ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿಕೊಂಡಿದ್ದರು. ಈ ಸಲವೂ ಅವಿರೋಧ ಆಯ್ಕೆ ಆಗುತ್ತದೆಂದು ಬಹುಪಾಲು ಶಿಕ್ಷಕರು ಬಾವಿಸಿದ್ದರು. ಆದರೆ ಅವಿರೋಧ ಸಾಧ್ಯವಾಗದೇ ಎರಡು ಬಣಗಳು ತಮ್ಮ ಅದೃಷ್ಟವನ್ನು ಚುನಾವಣೆಗೆ ಒಡ್ಡಿಕೊಂಡಿದ್ದಾರೆ.

ಫಲಿತಾಂಶ ಸಹ ಕುತೂಹಲ ಮೂಡಿಸಿದೆ.