Monday, May 11, 2026
Google search engine
Home Blog Page 166

ಅಳಿವು-ಉಳಿವಿನ ಪ್ರಶ್ನೆ: ಬಂದ್ ಬೆಂಬಲಿಸಿ

Publicstory. in


Tumkuru: ಗ್ರಾಮೀಣ ಭಾರತದ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ ರೈತರ ಗಮನಕ್ಕೆ ತರದೆ ಹೊಸ ಕಾನೂನು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ರೈತ ಸಂಘಟನೆ ಕಿಡಿಕಾರಿದೆ.

ಈ ನೀತಿಗಳು ಸಂಪೂರ್ಣ ರೈತರ ವಿರೋಧಿ ನೀತಿಗಳಾಗಿವೆ . ಮುಂದಿನ ದಿನಗಳಲ್ಲಿ ಹೊಕ್ಕಲುತನ ಕೈತಪ್ಪಿ ಕಂಪನಿಗಳ ಕೈಸೇರಲಿದೆ.

ಅಂತ ಮೂರು ಹೊಸ ಕಾನೂನುಗಳು ಜಾರಿಗೆ ತರಲಾಗಿದ್ದು ಇದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಲು ರೈತರು ಹನ್ನೊಂದು ದಿನಗಳ ಹಿಂದೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬರುವ ತಿರ್ಮಾನವಾಗಿತ್ತು .

ಅದರಂತೆ ರೈತರು ದೆಹಲಿಗೆ ಬರುತ್ತಿದ್ದರು , ಕೇಂದ್ರ ಸರ್ಕಾರ ರೈತರ ಮೇಲೆ ದೆಹಲಿ ಪ್ರವೇಶಕ್ಕೆ ಮುಂಚೆ ರಸ್ತೆ ಬಂದ್ ಮಾಡಿ ಬರುತ್ತಿರುವಂತ ರೈತರ ಮೇಲೆ ಜಲಪಿರಂಗಿ , ಅತ್ರುವಾಯು , ಲಾಟಿ ಏಟು ರೈತರಿಗೆ ನೀಡಿದರು , ರೈತ ಸಮುದಾಯ ರೋಚ್ಚಿಗೆಳದೆ ಶಾಂತಿಯಿಂದ ಚಳುವಳಿಯನ್ನು ಮುಂದುವರೆಸಿದೆ .

ರೈತರ ಸುದ್ದಿ ದೇಶದಲ್ಲಿ ತೀವ್ರ ಚರ್ಚೆಗೆ ಜನರು ಒಳಪಡಸಲಿಲ್ಲಾ , ಆದರೆ ಈ ವಿಚಾರ ಅಂತರಾಷ್ಟ್ರೀಯ ವಿಷಯವಾಗಿ ಚರ್ಚೆಯಾಗುತ್ತಿದ್ದು , ಕೆನಡ ಪ್ರಧಾನಿ ರೈತರ ಕಷ್ಟ ಪರಿಹಾರಿಸಿ ಎಂದು ಹೇಳಿದ್ದಾರೆ ವಿಶ್ವಸಂಸ್ಥೆ ಚರ್ಚೆ ಮಾಡುತ್ತಿದ್ದೆ , ಲಂಡನ್ ದೇಶದ 37 ಜನ ಸಂಸದರು ಆ ದೇಶದ ಪತ್ರವನ್ನು ಪ್ರಧಾನಿಗೆ ಬರೆದು , ಭಾರತದ ಪ್ರಧಾನಿಗೆ ತಿಳಿಸಬೇಕೆಂದು ಹೇಳಿರುವ ಸಂಧರ್ಭದಲ್ಲಿ ಸರ್ಕಾರ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೆ ಸುಮ್ಮನಿರುವುದು ಈ ದೇಶದ ದುರಂತವೇ ಆಗಿದೆ ಎಂದು ಹೇಳಿದೆ.

ಆದರಿಂದ ದೇಶದ ರೈತ ಸಂಘಟನೆಗಳು ಡಿಸೆಂಬರ್ 8 ನೇ ತಾರೀಖು ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದೆ . ರೈತರು ಶ್ರಮದಿಂದ ಊಟ ಮಾಡುವ ಎಲ್ಲರೂ ಈ ಬಂದ್‌ಗೆ ಬೆಂಬಲಿಸಬೇಕು , ಹಾಗೂ ರಾಜ್ಯದ ರೈತ ಪರ ಎಲ್ಲಾ ಸಂಘಟನೆಗಳು ಈ ಬಂದ್‌ನಲ್ಲಿ ಭಾಗವಹಿಸಿವೆ .

ಈ ಬಂದ್‌ಗೆ ಕನ್ನಡ ಪರ ಸಂಘಟನೆಗಳು , ಕಾರ್ಮಿಕರ ಸಂಘಟನೆಗಳು , ಮಹಿಳಾ ಸಂಘಟನೆಗಳು , ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸಬೇಕು. ಅಹಿಂಸ ರೀತಿಯಲ್ಲಿ ಶಾಂತಿಯಿಂದ ವರ್ತಿಸಬೇಕೆಂದು ಎಂದು ರೈತ ಸಂಘದ ಮುಖಂಡರಾದ .ಆನಂದ್ ಪಟೀಲ್ ದನಂಜಯ ಸಿದರಾಜು ಸುನಿಲ್ ಕುಮಾರ್ ತಿಳಿಸಿದರು.

ತುರುವೇಕೆರೆ 200 ಮತಗಟ್ಟೆ ಕೇಂದ್ರಗಳ ಸ್ಥಾಪನೆ

Publicstory. in


ತುರುವೇಕೆರೆ: ತಾಲ್ಲೂಕಿನ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯು ಡಿ.27ರಂದು ನಡೆಯಲಿದೆಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ತಿಳಿಸಿದರು.

ತಾಲ್ಲೂಕಿನ ಒಟ್ಟು 27 ಗ್ರಾಮ ಪಂಚಾಯಿತಿಗಳಿದ್ದು 178 ಮೂಲ ಮತಗಟ್ಟೆಗಳು ಹಾಗು ಹೆಚ್ಚುವರಿಯಾಗಿ 22 ಸೇರಿ ಒಟ್ಟು 200 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಚುನಾವಣೆಗೆ ಸ್ಪರ್ಧಿಸಬಯಸುವವರು ಡಿ.11ರಿಂದ 16ರವರೆಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ತೆರೆದಿರುವ ಚುನಾವಣಾ ಕಚೇರಿಯಲ್ಲೇ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು.

ನಾಮ ಪತ್ರ ಸಲ್ಲಿಸುವ ಅಭ್ಯರ್ಥಿ ಕೋವಿಡ್ ಮಾರ್ಗಸೂಚಿಯಂತೆ ತನ್ನ ಜೊತೆ ಒಬ್ಬ ಸೂಚಕ ಮಾತ್ರ ಚುನವಣಾಧಿಕಾರಿಗಳ ಕಚೇರಿಗೆ ಪ್ರವೇಶಿಸತಕ್ಕದ್ದು. ಹಾಗು ಕೋವಿಡ್ ಸೋಂಕಿತ ಅಭ್ಯರ್ಥಿ ತಾನು ನಾಮಪತ್ರ ಸಲ್ಲಿಸಲು ಇಚ್ಛಿಸಿದಲ್ಲಿ ಆತನು ಅವನ ಸೂಚಕನ ಮೂಲಕ ನಾಮಪತ್ರ ಸಲ್ಲಿಸಬಹುದು.

ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ಸುತ್ತಳತೆಯಲ್ಲಿ 5 ಜನಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಡಿ.17ರಂದು ಆಯಾ ಗ್ರಾಮ ಪಂಚಾಯಿತಿ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಪರಿಶೀಲನೆ ನಡೆಸಲಾಗುವುದು.

ನಾಮ ಪತ್ರ ಹಿಂಪಡೆಯಲು ಡಿ.19 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ 5 ಜನ ಬೆಂಬಲಿಗರೊಂದಿಗೆ ಸಾಮಾಜಿಕ ಅಂತರದೊಂದಿಗೆ ಮನೆಮನೆ ಭೇಟಿ ನೀಡಿ ಪ್ರಚಾರ ನಡೆಸಬಹುದು.

ಚುನಾವಣೆಗೆ ಸ್ಪರ್ಧಿಸಲು ಬೇಕಾದ ಬಿಸಿಎ ಮತ್ತು ಬಿಸಿಬಿ ದೃಢೀಕರಣ ಪತ್ರವನ್ನು ತಾಲ್ಲೂಕು ಕಚೇರಿಯಿಂದ ಪಡೆಯತಕ್ಕದ್ದು. ಹಾಗು ಬೇಬಾಕಿ ಮತ್ತು ಗುತ್ತಿಗೆದಾರದಲ್ಲದಿರುವ ದೃಢೀಕರಣ ಪತ್ರವನ್ನು ಪಿಡಿಒ ಅವರಿಂದ ಪಡೆಯಕ್ಕದ್ದು. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08139287325 ಸಂಪರ್ಕಿಸಿ ಎಂದಿದ್ದಾರೆ.

ಭಾರತ ಬಂದ್ ಗೆ ತಿಪಟೂರಿನಲ್ಲಿ ಬೆಂಬಲ

Publicstory. in


Tipturu: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ನಾಳೆ ನಡೆಯುತ್ತಿರುವ ಭಾರತ ಬಂದ್ ಗೆ ತಿಪಟೂರಿನ ತಾಲ್ಲೂಕಿನ ತಹಸಿಲ್ದಾರ್ ಕಛೇರಿಯ ಮುಂದೆ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.ಕರೋನಾ ಲಾಕ್ಡೌನ್ ನಿಂದ ರೈತರು
ತತ್ತರಿಸಿ ಹೋಗಿದ್ದು ರೈತರ ಮತ್ತು ಕಾರ್ಮಿಕರ ಬದುಕು ದುಸ್ತರವಾಗಿರುವ ಈ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಮತ್ತು ವಿರೋಧಿ ನೀತಿಗಳನ್ನು ತಂದಿರುವುದು ನಿಜಕ್ಕೂ ಅಮಾನವೀಯವಾದ ನಡೆ ಎಂದು ಕಿಡಿಕಾರಿವೆ.

ಇಂತಹ ನೀತಿಗಳನ್ನು ಖಂಡಿಸಿ ದೇಶದ ರಾಜಧಾನಿ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆಗಳು ನಡೆಯುತ್ತಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಲಕ್ಷಾಂತರ ರೈತರು ದೆಹಲಿಯಲ್ಲಿ ಅನಿರ್ದಿಷ್ಟ ಮುಷ್ಕರಕ್ಕೆ ಹೂಡಿದ್ದಾರೆ. ಇಂತಹ ಐತಿಹಾಸಿಕ ಹೋರಾಟದಲ್ಲಿ ಬೇರೆ ಬೇರೆ ದೇಶದ ರೈತರು ಸಹ ತಮ್ಮ ಬೆಂಬಲವನ್ನು ಈ ಹೋರಾಟಕ್ಕೆ ವ್ಯಕ್ತಪಡಿಸಿದ್ದಾರೆ.ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಇನ್ನಿಲ್ಲದ ಬಲ ಪ್ರಯೋಗವನ್ನು ಮಾಡುತ್ತಾ ಬಂದಿರುವುದನ್ನು ಪ್ರಪಂಚದ ಮೂಲೆಮೂಲೆಗಳಿಂದ ಚಿಂತನಶೀಲ ಜನತೆ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಎಲ್ಲಾ ರೈತ ವಿರೋಧಿ ನೀತಿಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿದ ದಿನದಿಂದಲೂ ಈ ಹೋರಾಟ ಬೆಳೆದು ಬಂದಿದೆ.ರೈತರು ಬೆಳೆದ ಬೆಳೆಗೆ ಕನಿಷ್ಠ ಮೌಲ್ಯವನ್ನು ಖಾತರಿಪಡಿಸದ, ಸರ್ಕಾರಿ ನಿಯಂತ್ರಿತ ಮಾರುಕಟ್ಟೆಯನ್ನು ಸರ್ವನಾಶ ಮಾಡಿ ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ಅನುವು ಮಾಡಿಕೊಡುವಂತಹ ರೈತ ವಿರೋಧಿ ಬಂಡವಾಳಶಾಹಿ ಪರ ನೀತಿಗಳ ವಿರುದ್ಧ ಸತತ ಹೋರಾಟ ಬೆಳೆದು ಬಂದಿದೆ.ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳಾದ ಪಂಜಾಬ್, ಹರಿಯಾಣ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯಗಳಿಂದಲೂ ಕೂಡ ಸಾಗರೋಪಾದಿಯಾಗಿ ಲಕ್ಷಾಂತರ ರೈತರು ದೇಶದ ರಾಜಧಾನಿಗೆ ಹೊರಟಿದ್ದು ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ.ಇಂಥ ಸಂದರ್ಭದಲ್ಲಿ ಅನ್ನದಾತ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದು ಸಮಾಜದ ಎಲ್ಲ ವರ್ಗದ ಜನರ ಜವಾಬ್ದಾರಿ. ದೇಶವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರಾಜ್ಯಗಳ ರೈತರು ಬೆಂಬಲವಾಗಿ ನಿಂತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇನ್ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ‘ಭಾರತ್ ಬಂದ್’ ಗೆ ಕರೆ ಕೊಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ತಿಪಟೂರು ತಾಲೂಕಿನಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಜನಸ್ಪಂದನಾ ಟ್ರಸ್ಟ್, ಸೌಹಾರ್ದ ತಿಪಟೂರು, ಬೆಲೆ ಕಾವಲು ಸಮಿತಿ,
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತೆ ಇತರೆ ಸಂಘಟನೆಗಳು ಸೇರಿ ತಾಲೂಕಿನ ತಹಸೀಲ್ದಾರರ ಕಚೇರಿ ಮುಂದೆ ಭಾರತ್ ಬಂದ್ ಬೆಂಬಲಿಸಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.ಆದುದರಿಂದ ರೈತರು, ವ್ಯಾಪಾರಸ್ಥರು, ಆಟೋ ಚಾಲಕರು, ನಾಗರಿಕರು ಮತ್ತು ಎಲ್ಲಾ ದುಡಿಯುವ ಜನತೆ ಈ ಹೋರಾಟಕ್ಕೆ ಬೆಂಬಲಿಸಿ, ಸ್ವಯಂ ಪ್ರೇರಣೆಯಿಂದ ‘ಬಂದ್’ ಮಾಡುವ ಮೂಲಕ ಅನ್ನ ಬೆಳೆಯುವ ರೈತನಿಗೆ ಬೆಂಬಲ ಸೂಚಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ತಾಲೂಕಿನ ಎಲ್ಲಾ ರೈತ ಸಂಘಟನೆಗಳು ಬೆಂಬಲಿಸಿವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಐಕ್ಯ ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.

ಅನ್ಯಾಯದ ವಿರುದ್ಧ ಹೋರಾಡಿದ ಸರ್ಕಾರಿ ಶಾಲೆ ಎಸ್ ಡಿ‌ಎಂಸಿಯ ರೋಚಕ ಕಥೆ ಇದು

Publicstory. in


ಶಿರಾ: ಕಾನೂನು ವಿರುದ್ಧವಾಗಿ ಯಾರೇ ಕೆಲಸ ಮಾಡಿದರೂ ಅವರಿಗೆ ಒಂದಲ್ಲ ಒಂದಿನ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕಾನೂನಿನ ದೃಷ್ಟಿಯಲ್ಲೂ ಎಲ್ಲರೂ ಒಂದೇ, ಸಾಮಾನ್ಯ ವ್ಯಕ್ತಿಯೂ ಸಹ ತನಗಾದ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಪಡೆಯಬಹುದು ಎಂಬ ಆಶಯ ಹೊಂದಿರುವ ಭಾರತೀಯ ಸಂವಿಧಾನದಂತೆ ಇಲ್ಲೊಂದು ಸರ್ಕಾರಿ ಶಾಲೆಗೆ ಅನ್ಯಾಯವನ್ನು ಪ್ರಶ್ನಿಸಿ, ರಾಜ್ಯಮಟ್ಟದ ವರೆಗೂ ಹೋರಾಡಿ ಕೊನೆಗೂ ಜಯ ಪಡೆದ ಸರ್ಕಾರಿ ಶಾಲೆಯ ಎಸ್ ಡಿ ಎಂ ಸಿಯವರ ಕಾರ್ಯವನ್ನು ಪ್ರತಿಯೊಬ್ಬರೂ ಮೆಚ್ಚಲೇಬೇಕಿದೆ.

ಅಂತಹ ಸಾಹಸಕ್ಕೆ ಕೈ ಹಾಕಿ, ಅನ್ಯಾಯದ ವಿರುದ್ಧ ಹೋರಾಡಿ, ಅನೇಕ ಅಡೆತಡೆಗಳನ್ನು ಎದುರಿಸಿ, ನ್ಯಾಯ ಪಡೆದದ್ದು ಬೇರೆ ಎಲ್ಲೂ ಅಲ್ಲ ತುಮಕೂರು ಜಿಲ್ಲೆ ಸಿರಾ ತಾಲ್ಲೂಕು, ಹುಲಿಕುಂಟೆ ಹೋಬಳಿಯ ಕರೇಕಲ್ಲಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು.

*ಪ್ರಕರಣದ ವಿವರ*:

ಈ ಶಾಲೆಯಲ್ಲಿ 2016ರಿಂದ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ‌ ಎಚ್.ಎನ್.ನಳಿನ ಎಂಬ ಸಹಶಿಕ್ಷಕಿ ಇದೂವರೆಗೂ ಈ ಶಾಲೆಯಲ್ಲಿ ಸರಿಯಾಗಿ ಕರ್ತವ್ಯವನ್ನೇ ಮಾಡಿಲ್ಲ..

ಕಾರಣ ಈ ಶಾಲೆಗೆ ಹೆಚ್ಚುವರಿ ಮೇರೆಗೆ ಬಂದ ಸದರಿ ಶಿಕ್ಷಕಿಯು ಅಂದಿನ ಬಿಇಓರವರ ಆದೇಶದಂತೆ ನಗರಕ್ಕೆ ಸಮೀಪದ ಅಂತಾಪುರ ಶಾಲೆಗೆ ನಿಯಮಬಾಹಿರವಾಗಿ ನಿಯೋಜನೆಗೊಂಡರು.

ನಂತರ 2017ರಲ್ಲಿ ಇಲಾಖೆಯ ಆದೇಶದಂತೆ ವೇತನಸಹಿತ ಉನ್ನತ ಶಿಕ್ಷಣಕ್ಕೆ ತೆರಳಿ 3ವರ್ಷಗಳ ಪದವಿ ಪೂರೈಸಿದರು. ಈ ನಾಲ್ಕು ವರ್ಷಗಳ ಕಾಲ ಇದೇ ಶಾಲೆಯ ಹೆಸರಿನಲ್ಲಿಯೇ ವೇತನವನ್ನೂ ಪಡೆದಿದ್ದಾರೆ..

ಮೂರು ವರ್ಷಗಳ ಪದವಿ ಪೂರೈಸಿದ ನಂತರ ಮೂಲ ಶಾಲೆಗೇ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ, ಸಿರಾ ನಗರಕ್ಕೆ ಸಮೀಪದ ಅಂತಾಪುರ ಶಾಲೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ನಿಯಮಬಾಹಿರ ಆದೇಶದನ್ವಯ ವರದಿ ಮಾಡಿಕೊಂಡರು.

ಇದು ಸ್ಪಷ್ಟೀಕರಣ ಕೇಳಿ ಅಂದಿನ ಸಿರಾ ಬಿಇಓ‌ ಉಪನಿರ್ದೇಶಕರಿಗೆ ಎರಡು ಸಲ ಮನವಿ ಮಾಡಿದಾಗ, ತನ್ನ ತಪ್ಪಿನ ಅರಿವಾಗಿ, ತನ್ನ ಆದೇಶವನ್ನು ಉಪನಿರ್ದೇಶಕರು ಹಿಂಪಡೆದಿದ್ದಾರೆ.

ಅಂದೇ ಉಪನಿರ್ದೇಶಕರು ಆದೇಶ ಹೊರಡಿಸಿ, ಸದರಿ ಶಿಕ್ಷಕರು ಸ.ಕಿ.ಪ್ರಾ.ಶಾಲೆ, ಕರೇಕಲ್ಲಹಟ್ಟಿ ಶಾಲೆಗೆ ಹಾಜರಾಗಲು ಸೂಚಿಸಿದರು.‌ ಅಷ್ಟರಲ್ಲಿ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕ ಹೊನ್ನಗಂಗಪ್ಪ ಸದರಿ ಶಿಕ್ಷಕಿಯನ್ನು ಬಿಇಓರವರ *ಚಾಲನಾ ಆದೇಶ* ಇಲ್ಲದೆಯೇ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡು, ಕರ್ತವ್ಯ ಲೋಪ ಎಸಗಿದ್ದರು.

ಈ ಬಗ್ಗೆ ಬಿಇಓರವರು ಕೂಡಲೇ *ನೋಟೀಸ್* ನೀಡಿ, ಸೂಕ್ತ ಮಾರ್ಗದರ್ಶನದೊಂದಿಗೆ ಆಗಿರುವ ಲೋಪ ಸರಿಪಡಿಸಿಕೊಳ್ಳಲು ಅವಕಾಶವನ್ನೂ ನೀಡಿದ್ದರು.

ಆದರೂ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸದರಿ ಶಿಕ್ಷಕಿಯು ಮೇಲಾಧಿಕಾರಿಗಳ ಆದೇಶಗೆ ಕವಡೆ ಕಾಸಿನ ಬೆಲೆಯನ್ನೂ ನೀಡದೆ ಅದೇ ಶಾಲೆಯಲ್ಲಿ ಮುಂದುವರೆದರು.

ಈ ಎಲ್ಲಾ ಪ್ರಕರಣವನ್ನು ಗಮನಿಸಿದ ಕರೇಕಲ್ಲಹಟ್ಟಿ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಯುವಕರು, ಶಿಕ್ಷಣಾಸಕ್ತರು *ಮಾಹಿತಿ ಹಕ್ಕಿ ಕಾಯಿದೆ* ಅಡಿ ಪ್ರಕರಣದ ಎಲ್ಲಾ ಮಾಹಿತಿಗಳನ್ನು ಪಡೆದು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಹಾಗೂ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪ್ರಾಥಮಿಕ ಶಿಕ್ಷಣದ ನಿರ್ದೇಶಕರಿಗೆ ದೂರು ನೀಡಿ, ಮನವಿ ಮಾಡಿದರು.

ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ಕೂಡಲೇ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ, ವರದಿ ಸಲ್ಲಿಸಲು ಉನ್ನತ ಅಧಿಕಾರಿಯೊಬ್ಬರನ್ನು ವಿಚಾರಣಾ ಅಧಿಕಾರಿಯನ್ನಾಗಿ ನೇಮಿಸಿ, ದೂರುದಾರರು ಹಾಗೂ ಆರೋಪ ಹೊತ್ತಿರುವವರ
ವಿಚಾರಣೆ ನಡೆಸಿದರು.

ವಿಚಾರಣೆಯಲ್ಲಿ ಉಪನಿರ್ದೇಶಕರು, ಸದರಿ ಶಾಲೆಯ ಮುಖ್ಯ ಶಿಕ್ಷಕರ ಹಾಗೂ ಸದರಿ ಶಿಕ್ಷಕಿಯ ಕರ್ತವ್ಯ ಲೋಪ ಹಾಗೂ ನಿಯಮಗಳ ಉಲ್ಲಂಘನೆ ಆಗಿರುವುದು ಸಾಬೀತಾಗಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಡಿ.4 ರಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರೇವಣಸಿದ್ದಪ್ಪನವರು ಅಂತಾಪುರ ಶಾಲೆಯ ಮುಖ್ಯ ಶಿಕ್ಷಕ ಹೊನ್ನಗಂಗಪ್ಪನವರನ್ನು ವಿಚಾರಣೆ ಕಾಯ್ದಿರಿಸಿ, ಅಮಾನತ್ತು ಮಾಡಿ ಆದೇಶಿಸಿದ್ದಾರೆ.

ಪತ್ರಿಕೆಯೊಂದಿಗೆ ಕರೇಕಲ್ಲಹಟ್ಟಿ ಗ್ರಾಮದ ಶಿಕ್ಷಣಾಸಕ್ತ ಯುವಕರಾದ ದೇವರಾಜು, ಕರಿಯಣ್ಣ ಹಾಗೂ ಮತ್ತವರ ಬಳಗ ಮಾತನಾಡಿ, ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಬಡ ಹಾಗೂ ಹಿಂದುಳಿದ ಬುಡಕಟ್ಟು ವರ್ಗದ ಮಕ್ಕಳೇ ಓದುತ್ತಿದ್ದು, 4 ವರ್ಷಗಳಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ.

ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಸದರಿ ಶಿಕ್ಷಕಿಯು ನಮ್ಮ ಶಾಲೆಯ ಹೆಸರಿನಲ್ಲಿ ಲಕ್ಷಾಂತರ ವೇತನ ಪಡೆದಿದ್ದು, ಈಗಲಾದರೂ ನಮ್ಮೂರಿನ ಶಾಲೆಗೆ ಹಾಜರಾಗದೇ ಮಕ್ಕಳಿಗೆ ಅನ್ಯಾಯ ಎಸಗಿದ್ದಾರೆ. ಇದಕ್ಕೆ ಅಂತಾಪುರ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುತ್ತಾರೆ.
ಈ ಅನ್ಯಾಯದ ವಿರುದ್ಧವಾಗಿ ಅಗತ್ಯ ಮಾಹಿತಿಯೊಂದಿಗೆ
ಸುಮಾರು ಎರಡೂವರೆ ತಿಂಗಳಿನಿಂದಲೂ ಅನ್ಯಾಯದ ವಿರುದ್ಧ ಹೋರಾಡಿ, ಇಂದು ಜಯ ಪಡೆದಿದ್ದೇವೆ. ಸದರಿ ಶಿಕ್ಷಕರನ್ನು ಅಮಾನತು ತೆರವುಗೊಳಿಸಿ, ಜಿಲ್ಲೆಯ ಗಡಿ ಪಾವಗಡ ತಾಲ್ಲೂಕಿಗೆ ಸ್ಥಳ ನಿಯುಕ್ತಿ ಮಾಡಬೇಕು. ಅದನ್ನು ಹೊರತುಪಡಿಸಿ, ನಮ್ಮ ತಾಲ್ಲೂಕಿನ ಅಥವಾ ನಗರಕ್ಕೆ ಸಮೀಪದ ಶಾಲೆಗೆ ಸ್ಥಳ ನಿಯುಕ್ತಿಗೊಳಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಹೋರಾಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಎಸ್ ಡಿ‌ ಎಂ ಸಿ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು, ಪೋಷಕರು, ಹಳೇ‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತುರುವೇಕೆರೆ ಪ್ರಸಾದ್, ಭವಾನಿಗೌಡ ಸೇರಿ ಏಳು ಮಂದಿಗೆ ಸಾಹಿತ್ಯ ಪ್ರಶಸ್ತಿ ಪುರಸ್ಕಾರ

Publicstory. in


ತುರುವೇಕೆರೆ: ಭಾಷೆ ಮತ್ತು ಸಾಹಿತ್ಯ ನಮ್ಮನ್ನು ಸಂಸ್ಕಾರಗೊಳಿಸುತ್ತದೆ. ಇಂತಹ ವಿಷಯಗಳಲ್ಲಿ ರಾಜಕಾರಣಿಗಳಂತೆ ಬೆಂಕಿ ಹಚ್ಚುವ ಕೆಲಸ ಮಾಡದೆ ಸಾಹಿತಿಗಳು ದೀಪ ಹಚ್ಚುವ ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಸಲಹೆ ನೀಡಿದರು.

ಪಟ್ಟಣದ ರೋಟರಿ ಭವನದಲ್ಲಿ ಕೇಂದ್ರ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕನ್ನಡ ಅಭಿವೃದ್ಧಿಯ ಮಾತನಾಡುವ ಸರ್ಕಾರಗಳು ಹಿಂದಿನಿಂದ ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ. ಮಹಾರಾಜರು ನಡೆಸಿಕೊಂಡು ಬರುತ್ತಿದ್ದ ಕನ್ನಡ ಪಂಡಿತ ಪರಿಷತ್ತನ್ನು ಸರ್ಕಾರಗಳು ಮುಚ್ಚಿದವು. ಆಗಲೂ ಕನ್ನಡ ಸಾಹಿತ್ಯ ಪರಿಷತ್ತಾಗಲೀ, ರಾಜಕಾರಣಿಗಳಾಗಲೀ, ಕನ್ನಡ ಪರ ಸಂಘಟನೆಗಳಾಗಲೀ ಪ್ರತಿಭಟಿಸಲಿಲ್ಲ, ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಿದಾಗಲೂ ಕನ್ನಡಿಗರ ಸ್ವಾಭಿಮಾನ ಜಾಗೃತವಾಗಲಿಲ್ಲ ಎಂದು ವಿಷಾಧಿಸಿದ ಅವರು ಈಗಲಾದರೂ ನಾವು ಎಚ್ಚೆತ್ತು ಕನ್ನಡತನವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಕೇಂದ್ರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಕೊಟ್ರೇಶ್. ಎಸ್. ಉಪ್ಪಾರ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೇವಲ ಬರೆಯುವವರಿಂದಷ್ಟೇ ಕನ್ನಡದ ಕೆಲಸ ಸಾಧ್ಯವಿಲ್ಲ, ಸಂಘಟಕರು ಸಹ ಕನ್ನಡ ಪೋಷಣೆಯಲ್ಲಿ ಸಮಾನ ಪಾತ್ರ ವಹಿಸುತ್ತಾರೆ. ಇಂದಿನ ಕನ್ನಡ ಕಾರ್ಯಕ್ರಮಗಳು ಸರ್ಕಾರದ ಅನುದಾನವನ್ನೇ ನೆಚ್ಚಿವೆ. ಹಾಗಾಗಿ ಲಕ್ಷಾಂತರ ರೂಪಾಯಿಗಳು ಸಾಹಿತ್ಯದ ಹೆಸರಲ್ಲಿ ದುಂದುವೆಚ್ಚವಾಗುತ್ತಿದೆ. ಅಂತಹುದೇ ಮೌಲಿಕ ಕಾರ್ಯಕ್ರಮಗಳನ್ನು ಸಾಹಿತ್ಯ ವೇದಿಕೆ ಅಲ್ಪ ಖರ್ಚಿನಲ್ಲಿ ಮಾಡಿ ಅಜ್ಞಾತ ಪ್ರತಿಭಾವಂತರನ್ನು ಸಾಹಿತ್ಯದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ಬರಹಗಾರ ತುರುವೇಕೆರೆ ಪ್ರಸಾದ್, ಶಿವಮೊಗ್ಗದ ಕುಮುದ.ಬಿ.ಸುಶೀಲಪ್ಪ ( ಸಾ.ಶಿ. ಮರುಳಯ್ಯ ಸಾಹಿತ್ಯ ಪ್ರಶಸ್ತಿ), ಹಾಸನದ ಗಂಗಮ್ಮ ನಂಜುಂಡಪ್ಪ, ಬಳ್ಳಾರಿಯ ಶಫೀಉಲ್ಲಾ ಎಸ್.ಎಚ್( ಬಿ.ಎಂ.ಶ್ರೀ ಪ್ರಶಸ್ತಿ), ಉಡುಪಿಯ ವಾಸಂತಿ ಅಂಬಲಪಾಡಿ, ಬೆಂಗಳೂರಿನ ಡಾ.ಆರ್.ಶೈಲಜಾ ಶರ್ಮಾ( ಡಾ.ದೊಡ್ಡರಂಗೇಗೌಡ ಪ್ರಶಸ್ತಿ), ಚಿತ್ರದುರ್ಗದ ಡಿ.ಶಬ್ರಿನಾ ಮಹಮದ್ ಆಲಿ, ವಿಜಯಪುರದ ಭವಾನಿಗೌಡ ( ಡಾ.ಕವಿತಾಕೃಷ್ಣ ಕಾವ್ಯ ಪುರಸ್ಕಾರ) ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕೇಂದ್ರ ಕ.ಸಾ.ವೇ ಜಿಲ್ಲಾಧ್ಯಕ್ಷ ಜಿ.ಸಿ.ಪ್ರಮೋದ್ ಪದಗ್ರಹಣ ವಿಧಿ ನೆರವೇರಿಸಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷೆ ಎಂ.ಕೆ. ಲತಾಮಣಿ ಅವರಿಗೆ ಶುಭ ಕೋರಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬದರಿಕಾಶ್ರಮದ ಸಂಸ್ಥಾಪಕರಾದ ಶ್ರೀ ಸ್ವಾಮಿ ಓಂಕಾರಾನಂದ ಮಹಾರಾಜ್ ಆಶೀರ್ವಚನ ನೀಡಿದರು. ತಾಲ್ಲೂಕ ಘಟಕದ ಗೌರವಾಧ್ಯಕ್ಷ ಎಂ.ಶ್ರೀನಿವಾಸ್ ಹೊಣಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕಿ ಡಾ.ಎಚ್.ಕೆ. ಹಸೀನಾ, ರಾಜ್ಯ ಸಂಚಾಲಕ ಹೊಸಮನೆ ಗಿರೀಶ್ ಬಾಬು, ಗೌರವ ಸಲಹೆಗಾರ ಸಾ.ಶಿ.ದೇವರಾಜ್, ಎಚ್.ಎಸ್.ಬಸವರಾಜ್, ನಾಗರಾಜ್ ದೊಡ್ಡಮನಿ,ಸಿ.ಜಿ.ವೆಂಕಟೇಶ್ವರ್ ಇತರರು ಉಪಸ್ಥಿತರಿದ್ದರು. ಟಿ.ಸುಷ್ಮಾ ಪ್ರಾರ್ಥಿಸಿದರು. ಟಿ. ಎನ್. ಅನುಪಮಾ ಸ್ವಾಗತಿಸಿದರು, ಟಿ.ಎಲ್.ಸೌಮ್ಯ ವಂದಿಸಿದರು. ಇಬ್ರಾಹಿಂ ಪಾಷಾ ನಿರೂಪಿಸಿದರು. ಸಮಾರಂಭದ ನಂತರ ಕವಿಗೋಷ್ಠಿ ಏರ್ಪಡಿಸಲಾಗಿತ್ತು.

ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಬಂಡಾಯ ಸಾಹಿತ್ಯದ ಬಲ

0

ಚಿತ್ರ ಕೃಪೆ: ವಿಕಿ ಪಿಡಿಯಾ

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಗಳು ದೇಶದ ಭೂಮಿ ಬೆಳಕನ್ನು ಬೂದಿ ಮಾಡುತ್ತವೆ. ಕೃಷಿ, ಶಿಕ್ಷಣ ಮುಂತಾದ ಕೆಲವು ಕ್ಷೇತ್ರಗಳು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಇದ್ದರೂ ಕೇಂದ್ರೀಕರಣ ನೀತಿಯ ಮೂಲಕ ಒಕ್ಕೂಟ ಪದ್ಧತಿಗೆ ಧಕ್ಕೆ ತರಲಾಗುತ್ತಿದೆ ಎಂದು ಬಂಡಾಯ ಸಾಹಿತಿ, ಚಿತ್ರ ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ‌ ಹೇಳಿದ್ದಾರೆ.

ರಾಜ್ಯ ಮತ್ತು ರೈತರ ಸ್ವಾತಂತ್ರ್ಯವನ್ನು ಕಸಿಯಾಲಾಗುತ್ತಿದೆ. ಆದರೂ ರೈತರಿಗೆ ಸ್ವಾತಂತ್ರ್ಯ ಕೊಡುತ್ತಿರುವುದಾಗಿ ಕಂಠ ಪಾಠ ಒಪ್ಪಿಸಲಾಗುತದೆ. ಬಂಡವಾಳಶಾಹಿ ಆರ್ಥಿಕನೀತಿ ನೀಡುವ ಸ್ವಾತಂತ್ರ್ಯ ವೆಂದರೆ ಅದು ಬಂಡವಾಳಗಾರರಿಗೆ ನೀಡುವ ಸ್ವಾತಂತ್ರ್ಯ. ಶ್ರಮಮೂಲ ಆರ್ಥಿಕ ನೀತಿ ನೀಡುವ ಸ್ವಾತಂತ್ರ್ಯವೆಂದರೆ ರೈತರಿಗೆ, ಬಡವರಿಗೆ ನೀಡುವ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾಯಿದೆಗಳನ್ನು ವಿರೋಧಿಸುವ ಹೋರಾಟ ನ್ಯಾಯದ ಹೋರಾಟ. ರೈತರು ನಡೆಸುತ್ತಿರುವ ಹೋರಾಟಕ್ಕೆ ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲಿಸುತ್ತದೆ ಎಂದಿದ್ದಾರೆ.

ಹೋರಾಟ ಯಶಸ್ವಿ ಯಾಗಿ ಹೊಸ ಬೆಳಕಿನ ಹಾದಿಗೆ ನಾಂದಿಯಾಗಲಿ ಎಂದು ನಮ್ಮ ಸಂಘಟನೆ ಹಾರೈಸುತ್ತದೆ‌ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ತನಿಷ್ಕ ಜ್ಯುಯಲ್ಸ್ ದರೋಡೆ: ಒಂದೂವರೆ ಕೆಜಿ ಚಿನ್ನ ವಶಪಡಿಸಿಕೊಂಡ ಪೊಲೀಸರು

ತುಮಕೂರು: ನಗರದ ತನಿಷ್ಕ ಜ್ಯುಯಲ್ಸ್ ನಲ್ಲಿ ದರೋಡೆ ಮಾಡಿದ ದರೋಡೆ ಕೋರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಪೊಲೀಸ್ ಪ್ರಕಟಣೆ ಕೆಳಗಿದೆ.

ಬಡತನ ಶಾಪವಲ್ಲ;ಶ್ರೀಮಂತಿಕೆ ವರವಲ್ಲ

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರದ ಮೂಲಕ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗಾಗಿ ” ಯುವಜನತೆಯ ಮುಂದಿರುವ ಸವಾಲುಗಳು ಎಂಬ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿದರು.

‘ತಾಯಿಗೆ ಮಣಿದವರು ಜಗತ್ತಿನಲ್ಲಿ ಯಾರು ಸೋತಿಲ್ಲ ತಾಯಿ ಮಕ್ಕಳ ಸಂಬಂಧ ಜಗತ್ತಿನಲ್ಲಿ ಶ್ರೇಷ್ಠವಾದ ಸಂಬಂಧ. ನೀವು ನಿಮ್ಮ ತಂದೆ ತಾಯಿಗೆ, ಶಿಕ್ಷಕರಿಗೆ ಮೋಸ ಮಾಡಿದರೆ ಅದು ತಪ್ಪು ಮತ್ತು ನಿಮಗೆ ನೀವೇ ಮೋಸ ಮಾಡಿಕೊಂಡಂತೆ’ ಎಂದರು.
‘ಪ್ರಯತ್ನವೇ ಪರಮೇಶ್ವರ ಎಂಬುದು ಕೇವಲ ಮಾತಲ್ಲ, ಸರ್ವ ಶ್ರೇಷ್ಠವಾದ ಮಂತ್ರ . ಇದು ಜೀವನವೆಂಬ ಸಾಧನೆಯ ಪ್ರತಿಫಲದ ಮೂಲ, ಬೌದ್ಧಿಕ ಜ್ಞಾನಾರ್ಜನೆಯೊಂದಿಗೆ ಭಾವನಾತ್ಮಕ ಮನುಷ್ಯನಾಗಿ ರೂಪುಗೊಳ್ಳಬೇಕು’ ಎಂದರು.

‘ಪರಿಮಳವನ್ನು ದುಂಬಿ ಹುಡುಕುವಂತೆ ಪ್ರಾಜ್ಞನನ್ನು ಸಮಾಜ ಗುರುತಿಸಿ ಗೌರವಿಸುತ್ತದೆ. ಯಶಸ್ಸಿನ ಶಿಖರವನ್ನು ತಾವೇ ಕಟ್ಟಿಕೊಳ್ಳಬೇಕು. ಬಡತನ ಶಾಪವಲ್ಲ ಶ್ರೀಮಂತಿಕೆ ವರವಲ್ಲ, ಸ್ವಾಭಿಮಾನಕ್ಕಿಂತ ಬೇರೆ ಸಂಪತ್ತಿಲ್ಲ. ಅನ್ಯಾಯ ಮಾರ್ಗದ ಗೆಲುವಿಗಿಂತ ನ್ಯಾಯ ಮಾರ್ಗದ ಸೋಲು ಶ್ರೇಷ್ಠವಾದದ್ದು, ಸಾಧನೆಗೆ ಸ್ವ ಪ್ರಯತ್ನ ಮುಖ್ಯ’ಎಂದು ಅಭಿಪ್ರಾಯಪಟ್ಟರು.

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಸವರಾಜು ಬಿ ವಿ.ರವರು ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಸಿದ್ದಲಿಂಗಯ್ಯ ಅವರು ಸ್ವಾಗತಿಸಿ ಪರಿಚಯಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗಂಗಾಧರ್ ಕೆ ವಿ ಅವರು ವಂದಿಸಿದರು.

ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕರು ಹಾಗೂ ಕನ್ನಡ ಉಪನ್ಯಾಸಕಿಯಾದ ಡಾ. ಶ್ವೇತಾರಾಣಿ ಹೆಚ್ ಅವರು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಯೋಜಿಸಿ ನಿರೂಪಿಸಿದರು.

ತುರುವೇಕೆರೆಯಲ್ಲಿ 84 ರೌಡಿಗಳ ಪರೇಡ್

Publicstory


ತುರುವೇಕೆರೆ: ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 84ಕ್ಕೂ ಹೆಚ್ಚು ರೌಡಿಶೀಟರ್ಗಳ ಪೆರೇಡ್, ಕುಣಿಗಲ್ ಡಿವೈಎಸ್ಪಿ ಕೆ.ಎಸ್.ಜಗದೀಶ್ ಮತ್ತು ಪಿಎಸ್ಐ.ಪ್ರೀತಂ ನೇತೃತ್ವದಲ್ಲಿ ನಡೆಸಲಾಯಿತು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ರೌಡಿಶೀಟರ್ಗಳನ್ನು ನಿಲ್ಲಿಸಿ ಹಾಜರಾತಿ ಪಡೆದರು. ನಂತರ ಕುಣಿಗಲ್ ಡಿವೈಎಸ್ಪಿ ಕೆ.ಎಸ್.ಜಗದೀಶ್ ರೌಡಿಶೀಟರ್ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಡಿ.27ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಕೂಡದು. ಇಂತಹವರಿಗೆ ವೋಟ್ ಹಾಕಬೇಕೆಂದು ಜನರಲ್ಲಿ ಒತ್ತಡ ಹೇರಬಾರದು ಎಂದು ಎಚ್ಚರಿಸಿದರು.

ಸಾರ್ವಜನಿಕರಿಗೆ ಮುಕ್ತಮತದಾನ ನಡೆಯಲು ಅವಕಾಶ ನೀಡಬೇಕು. ನಿಮ್ಮ ನಿಮ್ಮ ಊರುಗಳಲ್ಲಿ ಚುನಾವಣೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಒಂದು ವೇಳೆ ಜನರಲ್ಲಿ ಸಂಘರ್ಷ ಉಂಟು ಮಾಡಲು ಯತ್ನಿಸಿದರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಶಿಸ್ತಿನ ಕ್ರಮ ಜರುಗಿಸಲಾಗುವುದು. ಜೊತೆಗೆ ನೀವು ಹೀಗಾಗಲೇ ನೀಡಿರುವ 5 ಲಕ್ಷ ರೂಪಾಯಿಗಳ ಬಾಂಡ್ ಒವರ್ ಹಣವನ್ನು ಸರ್ಕಾರಕ್ಕೆ ಮಟ್ಟಗೋಲು ಹಾಕಿಕೊಳ್ಳಬೇಕಾದೀತು ಎಚ್ಚರಿಕೆ. ನೀವು ಒಳ್ಳೆಯ ವರ್ತನೆ ಬೆಳೆಸಿಕೊಂಡು ಸಜ್ಜನ ವ್ಯಕ್ತಿಗಳಾಗಿ ಬಾಳಿ ಎಂದು ತಿಳಿ ಹೇಳಿದರು.

ಈ ವೇಳೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ 66 ಮತ್ತು ದಂಡಿನಶಿವರ ಠಾಣಾ ವ್ಯಾಪ್ತಿಯ 18 ರೌಡಿಶೀಟರ್ಗಳಿಂದ ನಾವು ಕಾನೂನುಬದ್ದವಾಗಿರುತ್ತೇವೆಂದು ಬಾಂಡ್ ಒವರ್ ಮಾಡಿಸಿ ತಹಶೀಲ್ದಾರ್ಗೆ ಸಲ್ಲಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಶಿವಲಿಂಗಪ್ಪ, ಎಎಸ್ಐ ಶಿವಲಿಂಗಪ್ಪ, ಸಿಬ್ಬಂದಿಗಳಾದ ಸುಪ್ರೀತ್, ಕೇಶವಮೂರ್ತಿ,ನಾಗರಾಜು, ಶಶಿಧರ್, ಸತೀಶ್, ವಿಜಯಕುಮಾರ್, ಗಂಗಾವತಿ ಪಾಲ್ಗೊಂಡಿದ್ದರು.

ತುಮಕೂರು: ರೌಡಿಶೀಟರ್ ಹುಚ್ಚ ಮಂಜನ ಇರಿದುಕೊಂದ ರೌಡಿಗಳು

ತುಮಕೂರು: ಮಾಜಿ ಮೇಯರ್ ಗಡ್ಡ ರವಿಕುಮಾರ್ ಕೊಲೆ ಆರೋಪದಲ್ಲಿ ಸಾಕ್ಷಿ ದಾರ ನಾಗಿದ್ದ ಮತ್ತೊಬ್ಬ ರೌಡಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ನಗರದ ಬಟವಾಡಿಯಲ್ಲಿ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಬಾರ್ ನಲ್ಲಿ ಕುಡಿಯಲು ಹೋಗಿದ್ದ ಮಂಜುನಾಥ್ ಅಲಿಯಾಸ್ ಹುಚ್ಚ ಮಂಜ ಎಂದು ಗುರುತಿಸಲಾಗಿದೆ.

ಅಟೋ ಚಾಲಕನಾಗಿದ್ದ ಈತನ ಮೇಲೆ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಬಾರಿನಲ್ಲಿ ಕುಡಿದು ಈಚೆ ಬಂದ ಇವನನ್ನು ಮತ್ತೊಂದು ರೌಡಿ ಗುಂಪಿನವರು ಚಾಕುವಿನಿಂದ ಇರಿದಿದ್ದಾರೆ.

ಗಾಯಗೊಂಡ ಈತನನ್ನು ವಿನಾಯಕ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ತುಮಕೂರಿನಲ್ಲಿ ರೌಡಿ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳ ಹುಟುಕಾಟ ನಡೆಸಿದ್ದಾರೆ.