Monday, May 11, 2026
Google search engine
Home Blog Page 169

ಕೊರೊನಾ ಇಳಿಮುಖ ಅಲ್ಲ: ಡಾ.ಮಂಜು‌ನಾಥ್ ಏನ್ ಹೇಳ್ತಾರೆ ಓದಿ…

0

ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜನ ಕೊರೊನಾ ವೈರಸ್ ಎಂಬುದೊಂದು ಇದೆ ಅನ್ನೋದನ್ನೇ ಮರೆತು ಹೋಗಿದ್ದಾರೆ. ಶಾಪಿಂಗ್, ಓಡಾಟ ಅಂತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕನಿಷ್ಟಪಕ್ಷ ಸರಿಯಾಗಿ ಮಾಸ್ಕ್ ಅನ್ನು ಧರಿಸುತ್ತಿಲ್ಲ. ಹೀಗಾಗಿ ಜನರಿಗೆ ಡಾ. ಮಂಜುನಾಥ್ ಎಚ್ಚರಿಕೆಯ ಸಂದೇಶವನ್ನ ನೀಡಿದ್ದಾರೆ.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಮಂಜುನಾಥ್, ಕೊರೊನಾ ಇಳಿಕೆಯಾಗುತ್ತಿದೆ ಎಂದು ಮೈಮರೆಯಬೇಡಿ ಎಂದಿದ್ದಾರೆ.

ಕೊರೊನಾ ಅಲೆ ರಾಜ್ಯದಲ್ಲಿ ಈ ವರ್ಷಾಂತ್ಯದಲ್ಲಿ ಕೊನೆಗೊಳ್ಳಲಿದೆ ಎಂಬುದೆಲ್ಲಾ ಸುಳ್ಳು. ಈ ವೈರಸ್ ಮತ್ತೆ ಹೊಸ ರೂಪದಲ್ಲಿ ಬರುವ ಸಾಧ್ಯತೆಗಳಿವೆ. ಕೊರೊನಾ ಇಳಿಮುಖವಾಗುತ್ತಿದೆ ಎಂದು ಯಾರು ಮೈಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇಷ್ಟು ದಿನ ಶೀತ, ಜ್ವರ, ಕೆಮ್ಮು, ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದು ಕೊರೊನಾ ಲಕ್ಷಣವಾಗಿತ್ತು. ಆದ್ರೀಗ ಅದು ಬೇರೆಯದೇ ರೂಪದಲ್ಲಿ ಬರಬಹುದು. ಇನ್ನು ಕೊರೊನಾದಿಂದ ಗುಣಮುಖರಾದವರಿಗೆ ಅಡ್ಡಪರಿಣಾಮಗಳು ಎದುರಾಗುತ್ತಿವೆ. ರಕ್ತನಾಳ ಹೆಪ್ಪುಗಟ್ಟುವುದು. ಹೃದಯದ ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ. ಹೀಗಾಗಿ ಸ್ವಲ್ಪ ಎಚ್ಚರದಿಂದಿರ ಬೇಕು ಎಂದು ಡಾ. ಮಂಜುನಾಥ್ ಸೂಚಿಸಿದ್ದಾರೆ.

ಕುಡಿದ ಅಮಲಿನಲ್ಲಿ ಹೆಂಡತಿ ಕೊಲೆ, ಮಗ ಚಿಂತಾಜನಕ ಸ್ಥಿತಿ

ಕೊರಟಗೆರೆ:- ಮನೆಯ ಸೈಟಿನ ವಿಚಾರಕ್ಕೆ ಕುಡಿದ ಅಮಲಿನಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಕೊರಟಗೆರೆ ಪಟ್ಟಣದ 3ನೇ ವಾರ್ಡಿನ ಶ್ರೀನಿವಾಸ ಕಾಲೇಜಿನ ಹಿಂಭಾಗದ ಚಾಂದುಪಾಷ ಎಂಬಾತನ ಪತ್ನಿ ಹಥರತ್ ಭಾನು(32) ಕೊಲೆಯಾದ ದುರ್ದೈವಿ.

ಮೃತ ಹಥರತ್ ಭಾನು ಮತ್ತು ಮಗ ಮಹಮ್ಮದ್ ಅಲಿ ಮನೆಯಲ್ಲಿ ಗಾಡ ನಿದ್ರೆಯಲ್ಲಿ ಮಲಗಿದ್ದ ವೇಳೆ ದೊಣ್ಣೆಯಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದು ಸಾಯಿಸುವ ಪ್ರಯತ್ನ ಮಾಡಿದ್ದಾನೆ.

ಹೊಡೆತದ ರಭಸಕ್ಕೆ ಹೆಂಡತಿ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಮೃತಪಟ್ಟರೇ ಮಗ ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತೀದ್ದಾನೆ‌.

ಮೃತ ಮಹಿಳೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಅಮಲಿನಲ್ಲಿ ತೆಲಾಡುತ್ತೀರುವ ಆರೋಪಿ ಚಾಂದುಪಾಷ ಕೊರಟಗೆರೆ ಪೊಲೀಸರ ವಶದಲ್ಲಿ ಇದ್ದಾನೆ.

ಸಿಪಿಐ ನಧಾಪ್ ಮತ್ತು ಪಿಎಸೈ ಮುತ್ತುರಾಜು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತೀದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಪತಿ ಕೊಂದು ತಲೆ ಮರೆಸಿಕೊಂಡಿದ್ದ ಪತ್ನಿ, ಇನ್ನಿಬ್ಬರ ಆರೋಪಿಗಳ ಬಂಧನ

Publicstory. in


ತುರುವೇಕೆರೆ: ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ ಪತಿ ಮಂಜುನಾಥನನ್ನೇ ಪ್ರಿಯಕರನೊಂದಿಗೆ ಕೂಡಿ ಕುತ್ತಿಗೆ ಹಿಸುಕಿ ಕೊಂದು ತಲೆಮರೆಸಿಕೊಂಡಿದ್ದ ಆರೋಪದ‌ ಮೇರೆಗೆ ಪತ್ನಿ ವಿದ್ಯಾ ಸೇರಿದಂತೆ ಇನ್ನುಳಿದ ಇಬ್ಬರು ಆರೋಪಿಗಳನ್ನು ಬಂಧಿಸುವ ಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.ಮೃತನ ಪತ್ನಿ ವಿದ್ಯಾ(23), ಢಣನಾಯಕನಪುರದ ಯೋಗೀಶ(30), ಮಾಯಸಂದ್ರದ ರಾಮದೇವರು ದೇವಸ್ಥಾನದ ಹತ್ತಿರದ ಗಿರೀಶ( 23) ಬಂಧಿತ ಆರೋಪಿಗಳು.ತಾಲ್ಲೂಕಿನ ಮಾಯಸಂದ್ರದ ಮೂಡ್ಲಯ್ಯನವರ ಮಗ ಮಂಜುನಾಥ (30) ಅನುಮಾನಾಸ್ಪದವಾಗ ನ.12 ರಂದು ಸಾವನ್ನಪ್ಪಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿ.ಪಿ.ಐ ನವೀನ್, ಮತ್ತು ಪಿಎಸ್ಐ ಪ್ರೀತಂ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು.ಮೃತ ಮಂಜುನಾಥನ ಹೆಂಡತಿ ವಿದ್ಯಾ ಮತ್ತೊಬ್ಬ ಆರೋಪಿ ಯೋಗೀಶ ಎಂಬುವವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಈ ವಿಚಾರವು ಮಂಜುನಾಥನಿಗೆ ಗೊತ್ತಾಗಿ ತನ್ನ ಹೆಂಡತಿ ವಿದ್ಯಾಳಿಗೆ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿ ವಿದ್ಯಾ ಮತ್ತು ಯೋಗೀಶನ ಮತ್ತೊಬ್ಬ ಆರೋಪಿ ಗಿರೀಶ್ ನ ಸಹಾಯದೊಂದಿಗೆ ಮೃತ ಮಂಜುನಾಥನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಆರೋಪಿಗಳ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ಶ್ರಮಿಸಿದ ಸಿಬ್ಬಂದಿಗಳಾದ ಕೇಶವಮೂರ್ತಿ, ಸುಪ್ರಿತ್, ಸುಪ್ರಿಯಾ, ಮುತ್ತಣ್ಣ ಕುಮಾರ್, ಸೋಮಶೇಖರ್ ಅವರನ್ನು ಅಭಿನಂದಿಸಲಾಗಿದೆ.

ಬಿಜೆಪಿಯ ಆಯರಹಳ್ಳಿಪಾಂಡು ಈಗ ಅಧ್ಯಕ್ಷರು

Publicstory.in


ತುರುವೇಕೆರೆ: ತಾಲೂಕಿನ ಡಿ.ಕಲ್ಕೆರೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಬಿಜೆಪಿ ಬೆಂಬಲಿತ ನೂತನ ಅದ್ಯಕ್ಷರಾಗಿ ಆಯರಹಳ್ಳಿಪಾಂಡು ಉಪಾಧ್ಯಕ್ಷರಾಗಿ ಜಿ.ವಿ.ಪ್ರಕಾಶ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದ ಅದ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನೆಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಆಯರಹಳ್ಳಿಪಾಂಡು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ವಿ.ಪ್ರಕಾಶ್ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಎಂದು ಚುನಾವಣಾಧಿಕಾರಿ ಘೋಷಿಸಿದರು. ಚುನಾವಣಾಧಿಕಾರಿಯಾಗಿ ಬಿಇಒ ಕಚೇರಿ ಬಿ.ಆರ್.ಪಿ ನರಸಿಂಹಮೂರ್ತಿ ಕರ್ತವ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಅಯರಹಳ್ಳಿ ಪಾಂಡು ಮಾತನಾಡಿ ಶಾಸಕ ಮಸಾಲಜಯರಾಮ್ ಹಾಗೂ ಜನರ ಸಹಕಾರದಿಂದ ಸುಮಾರು ವರ್ಷಗಳ ನಂತರ ನಮಗೆ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಸಹಕಾರ ಸಂಘದ ಅಧಿಕಾರ ಹಿಡಿದಿದೆ ಅದ್ಯಕ್ಷನಾಗಿ ಎಲ್ಲ ರೈತರಪರವಾಗಿ ಹಲವು ಯೋಜನೆಗಳನ್ನು ಕೈಗೊಂಡಿದ್ದು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

ಈ ಸಂದರ್ಬದಲ್ಲಿ ನಿರ್ದೇಶಕರಾದ ಬಿ.ಕೆ.ಪುಟ್ಟಸ್ವಾಮಿ, ಚಂದ್ರಯ್ಯ, ಜಯಮ್ಮ, ದಾಸಪ್ಪ, ಡಿ.ಡಿ ನಟರಾಜು, ಮೃತ್ಯಂಜಯ, ರಂಗೇಗೌಡ, ಕೆ.ಎಸ್.ಹಾಲಪ್ಪಕುಮಾರ್ ಪಾಲ್ಗೊಂಡಿದ್ದರು.

ನೂತನ ಅಧ್ಯಕ್ಷ ಹಾಗೂ ಉಫಾಧ್ಯಕ್ಷರ ಮೆರವಣಿಗೆ ನೆಡೆಸಿ ಅವರ ಬೆಂಬಲಿಗರು ಸಿಹಿ ಹಂಚಿ ಸಂಬ್ರಮಿಸಿದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು.

ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಉಳಿಸಿದ ಹೊನ್ನವಳ್ಳಿಯ ಜಿಲಾನಿ…

0

ಅಲ್ಲಾಬಕಾಷ್ ಎ


ಕಳೆದ ವಾರ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ತಾಯಿ,ಇಬ್ಬರು ಹೆಣ್ಣು ಮಕ್ಕಳು ಬೆಂಕಿಯ ಕೆನ್ನಾಲಿಗೆ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸ ಬೇಕಾದರೆ ಅದೇ ಗ್ರಾಮದ 19ವರ್ಷದ ಮುಸ್ಲಿಂ ಯುವಕ ಜಿಲಾನಿ ತನ್ನ ಜೀವವನ್ನು ಲೆಕ್ಕಿಸದೇ ಆ ಹಿಂದು ಕುಟುಂಬದ ಪ್ರಾಣ ರಕ್ಷಣೆಗೆ ಧಾವಿಸಿರುವುದು ಕೋಮುಸಾಮರಸ್ಯಕ್ಕೆ ಜೀವಂತ ಸಾಕ್ಷಿಯಾಗಿದೆ‌.

ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚಿ ಪರಸ್ಪರ ಒಬ್ಬರನೊಬ್ಬರು ದ್ವೇಷೀಸುತ್ತಿರುವ ಇಂತಹ ಸಂದರ್ಭದಲ್ಲಿ ಜಿಲಾನಿ‌ ಎಂಬ ಯುವಕನ ಸಾಹಸ ನನಗೆ ನಿಜ ಜೀವನದ ಹಿರೋ ಆಗಿ ಕಂಡನು ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಶಶಿಧರ್.

ಕೋರೋನಾ ಕಾರಣದಿಂದ ಬೆಂಗಳೂರಿನಿಂದ ತಮ್ಮ‌ಸ್ವಂತ ಗ್ರಾಮಕ್ಕೆ ಬಂದು ಆಗ ತಾನೇ ಬದುಕು‌ ಕಟ್ಟು ಕೊಳ್ಳುತ್ತಿದ್ದ ಹಿಂದು ಕುಟುಂಬ‌ಕ್ಕೆ ಸಿಲಿಂಡರ್ ಸ್ಫೋಟ ಬರಸಿಡಿಲು ಬಡಿದ್ದಂತಾಗಿದೆ .ನಾನು ಗ್ರಾಮಕ್ಕೆ ಭೇಟಿ ಕೊಟ್ಟು ಆ ಕುಟುಂಬಕ್ಕೆ ಧನ ಸಹಾಯ ಮಾಡಿ ಬಂದೆ.ಅಂದಿನ ಸನ್ನಿವೇಶವನ್ನು ಆ ಗ್ರಾಮಸ್ಥರು ನನಗೆ ವಿವರಿಸಿದರು.

ಸಿಲಿಂಡರ್ ಸ್ಫೋಟವಾದಾಗ ಆ ಮನೆಯಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು ತಾಯಿ ಪ್ರಾಣಾಪಾಯದಿಂದ ಪಾರಾಗಿ ಬಂದರು ,ಹೆಣ್ಣು ಮಕ್ಕಳು ಇನ್ನೇನು ಎಲ್ಲಾ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಅದೇ ಗ್ರಾಮದ ಯುವಕ ಜಿಲಾನಿಎಂಬ ಯುವಕ ಸಿನಿಮಿಯ ರೀತಿಯಲ್ಲಿ ಮನೆಯೊಳಗೆ ಹೋಗಿ ಆ ಹೆಣ್ಣು ಮಕ್ಕಳನ್ನು ಕಾಪಾಡಿದ್ದಾನೆ ಎಂದರು.

ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಸಾವಿನ ದವಡೆಯಿಂದ ಹೆಣ್ಣು‌ಮಕ್ಕಳು ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ ಎಂದರು.ಜೀವದ ಹಂಗುತೊರೆದು ಸಾಹಸ ಪಟ್ಟಿರುವ ಜಿಲಾನಿಯ ಕಾರ್ಯ ಪ್ರಶಂಸೆಯ ವಿಷಯ.ಹಾಗೂ
ಇಂತಹ ಕಾರ್ಯಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಧಯವೇ ಧರ್ಮದ ಮೂಲವಯ್ಯ …..ಎಂದು 12ನೇಶತಮಾನದಲ್ಲಿ‌ ಜಗಜ್ಯೋತಿ ಬಸವಣ್ಣನವರ ವಚನ ಈ ಸನ್ನಿವೇಶದಲ್ಲಿ ನೆನಪಿಗೆ ಬರುತ್ತದೆ.
ದಯವಿಲ್ಲದ ಧರ್ಮವೆದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
-ಬಸವಣ್ಣ

ಜಿಲಾನಿ ಕೆಲಸಕ್ಕೆ ಗ್ರಾಮ ಮಾತ್ರವಲ್ಲದೇ ತಾಲ್ಲೂಕಿನಲ್ಲಿ ಮೆಚ್ಚುಗೆಯ ಮಳೆ ಸುರಿಸಿದೆ. ಜಿಲಾನಿ ಈಗ ಕೋಮಸಾಮರಸ್ಯದ ಹೀರೋ ಅನಿಸಿದ್ದಾರೆ.

ಹಸು ಸಾಕಣೆದಾರರಿಗೆ ಬಂದಿದೆ ಹೊಸ ಹಸಿರು ಮೇವು

1

ಚಿತ್ರ ಲೇಖನ: ಡಾ.ಐ.ಐ.ಹೂಗಾರ


ಕ್ಯಾಕ್ಟಸ್ ಅದೇ ನಮ್ಗೆಲ್ಲ ಚಿರಪರಿಚಿತ ಪಾಪಸ್ಸುಕಳ್ಳಿ. ಮೂಗು ಮುರಿಯಬೇಡಿ. ಪೂರ್ತಿ ಲೇಖನ ಓದಿ. ಹಸು ಸಾಕಣಿದಾರರಿಗೆ ಇದು ಶುಭ ಸುದ್ದಿ. ಈ ಹೊಸ ಮೇವು ಬೆಳೆಯಬಹುದು.

ರಸ್ತೆಗಳ ಅಕ್ಕ ಪಕ್ಕ ಕೊರಕಲು ಗುಡ್ಡ ಬೆಟ್ಟಗಳ ಮೇಲೆ ಹೊಲ ಬದುಗಳಲಿ ಅಡ್ಡಾದಿಡ್ಡಿಯಾಗಿ ಮಟ್ಟಸವಾಗಿ ಬೆಳೆದು ಮೈಯೆಲ್ಲ ಮುಳ್ಳು ಹೊದ್ದುಕೊಂಡು ಮೈಚಾಚಿದ ಪಾಪಸ್ಸುಕಳ್ಳಿಯನ್ನು ನಾವೆಲ್ಲ ಗಮನಿಸಿರುತ್ತೇವೆ.

ದಪ್ಪ ಹಗೂ ಚಪ್ಪಟೆ ಎಲೆಯಂತಿರುವ ಹಸಿರು ಕಾಂಡ (ಕ್ಲೆಡೋಡ್ ಅಥವಾ ಪ್ಯಾಡಲ್ಸ್) ಗಳ ಮೈಯೆಲ್ಲ ಮುಳ್ಳು ಮೆತ್ತಿಕೊಂಡಿರುತ್ತದೆ.. ಇದು ಕ್ಯಾಕ್ಟೇಸಿ ಕುಟುಂಬಕ್ಕೆ ಸೇರಿದ ಕ್ಯಾಕ್ಟಿ ಅಥವಾ ಕ್ಯಾಕ್ಟಸ್ ಅದುವೆ ಪಾಪಸ್ಸು ಕಳ್ಳಿ. ಇದು ಅರೆ ಒಣ ಮತ್ತು ಒಣ ಪ್ರದೇಶಕ್ಕೆ ಮೇವು ಬೆಳೆಯಾಗಿ ಬರದ ಬರ್ಬರತೆಯನ್ನು ಸಹಿಸಿಕೊಂಡು ಬೆಳೆಯಬಲ್ಲ ಗಿಡವಾಗಿದೆ.

ಮುಳ್ಳುರಹಿತ ಪಾಪಸ್ಸು ಕಳ್ಳಿ !!

ಸಾಮಾನ್ಯವಾಗಿ ಮುಳ್ಳುಮುಳ್ಲಾದ ಪಾಪಸ್ಸು ಕಳ್ಳಿಯನ್ನು ನೋಡಿರುತ್ತೇವೆ. ಆದರೆ ಮುಳ್ಳೇ ಇಲ್ಲದ ನುಣುಪಾದ ಕ್ಯಾಕ್ಟಸ್ ನೋಡಿರುವುದು ಅಪರೂಪವೇ ಸರಿ. ನಾನು ಹೇಳ ಹೊರಟಿರುವುದು ಅಂದರೆ ಮುಳ್ಳು ರಹಿತ ಹಚ್ಚ ಹಸಿರಿನ ಕ್ಯಾಕ್ಟಸ್ ಕುರಿತಂತೆ. ಕ್ಯಾಕ್ಟಸ್ ನ ಹೆಡೆಯಾಕಾರದ ಕಾಂಡವು ಶೇ೯೦ ರಷ್ಟು ನೀರಿನ ಅಂಶವನ್ನು ಹೊಂದಿದ್ದು, ಬದಲಾಗುತ್ತಿರುವ ವಾತಾವರಣದಲ್ಲಿ ಮಳೆಯ ಅಭಾವ ವಿದ್ದರೂ ಬರಕ್ಕೆ ಸೆಡ್ಡುಹೊಡೆದು ಪುಟಿದೇಳಬಲ್ಲ ಗಿಡವಾಗಿದೆ.

ಸದಾ ಹಸಿರಾಗಿ ಹಸಿಹಸಿಯಾಗಿ ಅವಶ್ಯಕ ಶಕ್ತಿಯ ಕಣಜವಾಗಿ ಎಂಥ ನೆಲೆದಲ್ಲಿಯೂ ಹಸಿರು ಉಕ್ಕಿಸಬಲ್ಲ ಛಾತಿ ಈ ಮುಳ್ಳಿಲ್ಲದ ಪಾಪಸ್ಸುಕಳ್ಳಿಗಿದೆ. ಇತ್ತೀಚಿನ ದಿನಗಳಲ್ಲಿ ಮೆಕೆ ಕುರಿ ಹಾಗೂ ಪಶುಗಳ ಮೆಚ್ಚಿನ ಮೇವು ಎಂದೇ ಹೇಳಬಹುದು.

ಭಾರತದ ಪರಿಸರದಲ್ಲಿ ಸುಮಾರು ೫೩ ಪ್ರತಿಶತ ರಷ್ಟು ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶವಿದೆ. ಜೊತೆಗೆ ಉಷ್ಣಾಂಶದ ತೀವ್ರತೆ, ಬಿರುಗಾಳಿ, ಚದುರಿದ ಮಳೆ, ಸತ್ವರಹಿತ ಮಣ್ಣು ಇತ್ಯಾದಿ ವಾತಾವರಣದ ವೈಪ್ಯರೀತ್ಯಗಳಿಂದಾಗಿ ರೈತರಿಗೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದೆ ರೈತರ ಕೃಷಿ ಸಂಕಷ್ಟಕೀಡಾಗುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತ ತನ್ನ ಜೀವದ ಜೀವಾಳಾದ ಜಾನುವಾರುಗಳಿಗೆ ಮೇವು ಹೊಂದಿಸುವುದು ಕಷ್ಟ ಸಾಧ್ಯವೇ ಸರಿ.

ಜಾನುವಾರುಗಳ ಹಸಿರು ಮೇವಾಗಿ ಕ್ಯಾಕ್ಟಸ್
ಪ್ರಪಂಚದ ಅನೇಕ ಭಾಗಗಳಲ್ಲಿ ವಾತಾವರಣದಲಾಗುತ್ತಿರುವ ತೀಕ್ಷ್ಣ ಬದಲಾವಣೆಗಳು ಭೀತಿಯನ್ನು ಸೃಷ್ಟಿಸುತ್ತಿವೆ. ಅದರಲ್ಲೂ ಶುಷ್ಕ ಹಾಗೂ ಅರೆ ಶುಶ್ಕ ಪ್ರದೇಶಗಳಲ್ಲಿ ಇದರ ಪರಿಣಾಮ ಕಣ್ಣಿಗೆ ರಾಚುವಂತಿದೆ.

ಈ ಕಾರಣಗಳಿಂದ ಸಹಜವಾಗಿ ಆಗಬೇಕಾದ ಮಳೆ ಬಾರದೆ ಒಂದೊಮ್ಮೆ ಬಂದರೂ ಪ್ರವಾಹದೋಪಾದಿಯಲ್ಲಿ ಸುರಿದು ಅಳಿದುಳಿದ ಕೃಷಿ ಬೆಳೆ ಮತ್ತು ಬದುಕನ್ನು ಕೊಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದ ಅಲ್ಪ ಸ್ವಲ್ಪ ಜಮೀನಿನಲ್ಲಿ ರೈತ ತನ್ನ ಕುಟುಂಬ ನಿರ್ವಹಣೆಗಾಗಿ ಕಾಳು ಕಡಿ ಬೆಳೆದುಕೊಂಡು ಅದರಲ್ಲೂ ಸರಿಯಾಗಿ ಬೆಳೆ ಬಂದರೆ ಜೀವನೋಪಾಯ ಇಲ್ಲವೇ ಅಪಾಯ ಎನ್ನುವ ಪರಿಸ್ಥಿತಿಯಾಗಿದೆ.

ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ದೊಡ್ಡ ಸವಾಲೇ ಸರಿ. ಹಾಗಾಗಿ ಮುಳ್ಳುರಹಿತ ಪಾಪಸ್ಸು ಕಳ್ಳಿ ನಿಜಕ್ಕೂ ವರದಾನ ಎನ್ನಬಹುದು.

ಇತ್ತೀಚಿನ ದಿನಗಳಲ್ಲಿ ಕ್ಯಾಕ್ಟಸ್ ಹಸಿರುಮೇವಾಗಿ ಜಾನುವಾರುಗಳಿಗೆ ನೀಡುವುದು ಜನಪ್ರಿಯವಾಗುತ್ತಿದೆ. ಪಾಪಸ್ಸು ಕಳ್ಳಿ ಬರೀ ಮೇವಾಗಿ ಬಳಸುವುದಲ್ಲದೆ ಔಷಧಿಯಾಗಿ ಉಪಯೋಗಕ್ಕೆ ಬರುತ್ತದೆ. ಶೇಕಡಾ ೮೫-೯೦ ರಷ್ಟು ನೀರಿನಾಶ ಹೊಂದಿದ ಹೇರಳ ವಿಟಾಮಿನ್ ಕಾರ್ಬೋಹೈಡ್ರೇಟ್, ಪ್ರೋಟೀನ್(೫-೯%), ಕ್ಯಾಲ್ಸಿಯಂ, ಪೋಟ್ಯಾಸಿಯಂ ಮುಂತಾದುವುಗಳ ಆಗರವಾಗಿದೆೆ. ಆಷ್ಟೆಯಲ್ಲ ಮನುಷ್ಯರು ಸಹ ತಿನ್ನಬಹುದಾಗಿದೆ. ಈ ಮುಳ್ಳುರಹಿತ ಪಾಪಸ್ಸುಕಳ್ಳಿಯನ್ನು ಒಂದು ಹೆಕ್ಟೇರ್ ಪ್ರದೇಶದಲ್ಲಿ ಸರಿಸುಮಾರು ೨೦ ಟನ್ ಗಳಷ್ಟು ಬೆಳೆಯಬಹುದಾಗಿದೆ.

ಕೊಂಚ ನಿಗಾ ವಹಿಸಿ ಬೆಳೆಸಿದ್ದೆ ಯಾದರೆ ಹುಲುಸಾಗಿ ಬೆಳೆದು ೫-೬ ಹಸುಗಳಿಗೆ ಒಂದು ವರ್ಷಕ್ಕಾಗುವಷ್ಟು ಹಸಿರು ಮೇವು ಒದಗಿಸಬಹುದಾಗಿದೆ.

ಪಾಪಸ್ಸು ಕಳ್ಳಿ ನಾಟಿ ಹೇಗೆ ?

ತಾಜಾ ಪಾಪಸ್ಸುಕಳ್ಳಿ ಕಾಂಡವು ಶೇ೮೫-೯೦% ರಷ್ಟು ನೀರಿನಂಶ ಕೂಡಿದ್ದು, ನೀರಿನಂಶ ೬೫ ರಿಂದ ೭೦% ರಷ್ಟು ಇಳಿಸಿ ನಾಟಿ ಮಾಡಬೇಕು. ತಾಯಿ ಗಿಡದ ಕಾಂಡಗಳನ್ನು ಬೇರ್ಪಡಿಸಿ ೪ ರಿಂದ ೫ ದಿನಗಳ ಕಾಲ ನೆರಳಿನಲ್ಲಿ ಹರಡಿದಾಗ ನೈಸರ್ಗಿಕವಾಗಿ ತೇವಾಂಶ ಕಡಿಮೆಯಾಗುವುದು.

ಕಾಂಡವು ಅಗಲವಾಗಿದ್ದು ಹಾವಿನ ಹೆಡೆಯಾಕಾರದಲ್ಲಿ ೬ ರಿಂದ ೧೫ ಇಂಚು ಅಗಲದವರೆಗೆ ಬೆಳೆಯುವುದರಿದ ಕಾಂಡವನ್ನು ಪಟ್ಟೆ ಎಂದು ಕರೆಯುತ್ತಾರೆ. ಇದಕ್ಕಾಗಿ ಕಾಂಡಗಳನ್ನು ನೆರಳಿನಲ್ಲಿ ಒಣಗಿಸಬೇಕಾಗುತ್ತದೆ.

ಮುಂಗಾರು ಮಳೆಯ ನಂತರ ಅಂದರೆ ಅಕ್ಟೋಬರ್-ನವೆಂಬರ್ ನಂತರ ಮಾರ್ಚ್ ವರೆಗೂ ನಾಟಿ ಮಾಡಬಹುದಾಗಿದೆ. ಒಂದು ಅಡಿ ಎತ್ತರ ಮತ್ತು ೨ ಅಗಲ ಇರುವ ಹಾಗೆ ಏರುಮಡಿ ಮಾಡಿಕೊಳ್ಳಬೇಕು. ಎರುಮಡಿಯ ಬದುವಿನ ಮೇಲೆ ನಾಟಿ ಮಾಡಬೇಕು. ನಾಟಿ ಮಾಡುವಾಗ ಮುಕ್ಕಾಲು ಅಡಿ (೯ಇಂಚು) ಆಳದಲ್ಲಿ ಪಾಪಸ್ಸುಕಳ್ಳಿಯ ಕಾಂಡದ ಪಟ್ಟೆಯನ್ನು ಮಣ್ಣಿನಲ್ಲಿ ಸೇರಿಸಬೇಕು.

ನಾಟಿ ಮಾಡಿದ ತಕ್ಷಣವೆ ನೀರು ಕೊಡದೇ, ಒಂದು ವಾರ ಕಳೆದ ನಂತರ, ನೀರು ಪೂರೈಸಬೇಕು. ತಲಾ ಒಂದು ಪಾಪಸ್ಸುಕಳ್ಳಿಯ ಪಟ್ಟೆಗೆ ಒಂದು ಲೀಟರ್ ನಂತೆ ನೀರು ಕೊಟ್ಟರೆ ಸಾಕು. ನಂತರದ ದಿನಗಳಲ್ಲಿ ಹತ್ತು ದಿನಕ್ಕೊಮ್ಮೆ ನೀರು ಕೊಡಬೇಕು.

ಪಾಪಸ್ಸು ಕಳ್ಳಿ ನಾಟಿ ಮಾಡಲು ನಿರುಪಯುಕ್ತ ಬರಡು ಭೂಮಿ ಸೂಕ್ತ.
ಒಂದು ಗಿಡವು ಒಂದು ವರ್ಷದಲ್ಲಿ ೧೫-೩೦ ಪಟ್ಟೆಗಳನ್ನು ಕೊಡುತ್ತದೆ. ಒಂದು ವರ್ಷದ ನಂತರ ಪಾಪಸ್ಸು ಕಳ್ಳಿಯ ಪಟ್ಟೆಗಳನ್ನು ಕೊಯಿಲು ಮಾಡಿ ಮೇವಾಗಿ ಬಳಸಬಹುದಾಗಿದೆ.

ತಾಯಿ ಪಟ್ಟೆಯನ್ನು ಬಿಟ್ಟು ಎರಡನೆ ಮತ್ತು ಮೂರನೆ ಹಂತದ ಪಟ್ಟೆಗಳನ್ನು ಬೆಳವಣಿಗೆಯ ಅನುಸಾರ ಕೊಯ್ಲು ಮಾಡಿ ಮೇವಾಗಿ ನೀಡಬಹುದು.

ಮೇವಾಗಿ ಏನಿದರ ವಿಶೇಷತೆ

• ಪಾಪಸ್ಸು ಕಳ್ಳಿಯ ಪಟ್ಟೆಗಳಲ್ಲಿ ೮೫-೯೦% ನೀರಿನಾಂಶವಿದ್ದು ವರ್ಷಪೂರ್ತಿ ರಸಭರಿತವಾಗಿ ಹಸಿಯಾಗಿ ಹಸಿರಾಗಿರುತ್ತದೆ.
• ಮುಳ್ಳುರಹಿತ ಪಾಪಸ್ಸುಕಳ್ಳಿ ಸವಳು ನೆಲಕ್ಕೂ ಒಗ್ಗುತ್ತದೆ ಹಾಗೂ ಮಣ್ಣಿನ ಕೊರತೆ ತದೆಗಟ್ಟಲು ಸಹಕಾರಿ. ಮಣ್ಣು ಮತ್ತು ನೀರು ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ
• ಸಮೃದ್ಧವಾಗಿ ಬೆಳೆದ ಪಟ್ಟೆಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಹಸುಗಳಿಗೆ/ ಆಡುಗಳಿಗೆ ಇತರೆ ಮೇವಿನೊಂದಿಗೆ ಮಿಶ್ರಣ ಮಾಡಿಯೂ ನೀಡಬಹುದು. ನಾರಿನಂಶ ಸಮೃದ್ಧವಾಗಿ ಇರುವುದರಿಂದ ಬೇಸಿಗೆಯಲ್ಲಿ ಉತ್ತಮ ಮೇವಾಗಿ ಅನುಕೂಲ.

• ಮೊದಲ ಬಾರಿ ಕೊಯ್ಲು ಮಾಡುವಾಗ ಪಾಪಸ್ಸುಕಳ್ಳಿಯು ಒಂದು ಮೀಟರ ( ೩ಅಡಿ) ಎತ್ತರಕ್ಕೆ ಬೆಳೆದಿದ್ದರೆ ಸೂಕ್ತ.
• ಕಡಿಮೆ ನೀರಿನಲ್ಲಿ ವರ್ಷ ಪೂರ್ತಿ ಹೆಚ್ಚು ಪಟ್ಟೆಗಳು ಸಿಗುತ್ತವೆ.
ಭಾರತದಲ್ಲಿ ಪಾಪಸ್ಸುಕಳ್ಳಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಇನ್ನೂ ಆರಂಭಿಸಿಲ್ಲ ಈ ವಿಷಯವಾಗಿ ವಿವಿಧ ಮುಳ್ಳುರಹಿತ ಪಾಪಸ್ಸುಕಳ್ಳಿಯ ಬೆಳೆ ಹಾಗೂ ಬಳಕೆಯ ಕುರಿತು ಬೈಫ್ ಸಂಸ್ಥೆಯ ಉರುಳಿಕಾಂಚನ ದಲ್ಲಿರುವ ಕೇಂದ್ರೀಯ ಸಂಶೋಧನಾ ಕೇಂದ್ರದಲ್ಲಿ ನಿರಂತರ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಶುಷ್ಕ ಮತ್ತು ಅರೆಶುಷ್ಕ ಪ್ರದೇಶಗಳ ರೈತರಿಗೆ ಪರ್ಯಾಯ ಮೇವಿನ ಬೆಳೆಯಾಗಿ ಪರಿಚಯಿಸಲಾಗುತ್ತಿದೆ.

ಅದೇ ರೀತಿ ಬೈಫ್ ಸಂಸ್ಥೆಯ ತಿಪಟೂರಿನ ಬಳಿಯ ಗ್ರಾಮೋದಯ ತರಬೇತಿ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆಯಾಗಿ ೪ ವಿವಿಧ ಮುಳ್ಳುರಹಿತ ಪಾಪಾಸ್ಸುಕಳ್ಳಿಯ ತಳಿಗಳನ್ನು ಬೆಳೆಸಲಾಗಿದ್ದು ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ-+917019867706

ಮೊಬೈಲ್ ಗೀಳು ಬಿಡಿ,‌ಓದುವುದನ್ನು ಕಲಿಯಿರಿ

Publicstory. in


ತುಮಕೂರು: ಯುವಜನತೆ ಮೊಬೈಲ್ ಗೀಳು ಬಿಟ್ಟು ವಿದ್ಯಾರ್ಥಿ ಜೀವನದಲ್ಲಿ ಓದುವ ಹವ್ಯಾಸ ರೂಡಿಸಿಕೊಂಡಾಗ ಮಾತ್ರ ಮಾನಸಿಕವಾಗಿ ಸಧೃಡವಾಗಲು ಸಾಧ್ಯ ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಕರಿಯಣ್ಣ ಅಭಿಪ್ರಾಯಪಟ್ಟರು.

ನಗರ ಕೇಂದ್ರ ಗ್ರಂಥಾಲಯದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಂಥಾಲಯ ಗಳು ಜ್ಞಾನ ವಿಕಾಸದ ತಾಣಗಳಾಗಿವೆ. ಪ್ರಸ್ತುತ ಡಿಜಿಟಲ್ ಗ್ರಂಥಾಲಯಗಳಾಗಿದ್ದು ಎಲ್ಲಾ ಓದುವ ಸಾಮಗ್ರಿಗಳು ಕುಳಿತಲ್ಲೆ ಸಿಗುತ್ತಿವೆ ಎಂದರು.

ಈ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಗ್ರಂಥಾಲಯ ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಪೂರಕವಾದ ವಾತಾವರಣವನ್ನು ಸೃಷ್ಟಿಸಿದೆ. ಓದುವ ಹವ್ಯಾಸ ಮನುಷ್ಯನನ್ನು ವಿಕಾಸ ಮಾಡುವುದಲ್ಲದೆ ವಿಮರ್ಶೆಗೂ ಒಡ್ಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಬಸವರಾಜು, ವಿದ್ಯಾರ್ಥಿಗಳಾದ ಎಂ.ಸಿ. ಗಿರೀಶ್, ಹೂವಿನಕಟ್ಟೆ ಕೃಷ್ಣ, ಬಿ.ಟಿ‌. ಹರೀಶ್ ಇನ್ನಿತರರು ಹಾಜರಿದ್ದರು.

ಶಾಸಕ ಮಸಾಲ ಜಯರಾಂ ವಿರುದ್ಧ ಕೆಂಡಕಾರಿದ ಎಂ.ಟಿ.ಕೃಷ್ಣಪ್ಪ

Publicstory. in


ತುರುವೇಕೆರೆ: ಶಾಸಕ ಮಸಾಲಜಯರಾಂ ವಿರುದ್ಧ ಕೆಂಡ ಕಾರಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಶಾಸಕರು ಲ್ಯಾಂಡ್ ಆರ್ಮಿ ಕಂಪನಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗೇಲಿ ಮಾಡಿದರು.

ಸಿ.ಎಸ್.ಪುರ ಹೋಬಳಿಯಾದ್ಯಂತ ಹಲವು ಕಾಮಗಾರಿಗಳನ್ನು ಮಾಡಿದ್ದಾರೆ. ಕಳಪೆಯಿಂದ ಕೂಡಿವೆ ಎಂದು ನೇರ ಆರೋಪ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಶಾಸಕ ಮಸಾಲಜಯರಾಮ್ ಹಾಗೂ ಸಿ.ಎಸ್.ಪುರ ಜಿಲ್ಲಾ ಪಂಚಾಯಿತಿ ಸದಸ್ಯೆಯ ಪತಿ ನಾಗರಾಜ್ ಭೂಸೇನಾ ನಿಗಮದ ಕಾಮಗಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾವಿನಹಳ್ಳಿ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗದಲ್ಲಿದ್ದ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಹೆಬ್ಬಂಡೆಗಳನ್ನು ಮಾರಾಟ ಮಾಡಲಾಗಿದ್ದು ಈ ಬಗ್ಗೆ ತನಿಖೆ ನೆಡೆಯಬೇಕಿದೆ ಎಂದು ಒತ್ತಾಯಿಸಿದರು.

ಈಚೆಗೆ ಗುಬ್ಬಿ ತಾಲ್ಲೂಕು ಕಚೇರಿ ಹಾಗೂ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶಾಸಕ ಮಸಾಲಜಯರಾಂ ದೂರಿದ್ದು ಇದು ಅವರ ಅಪಕ್ವ ಆಡಳಿತ ವೈಖರಿಗೆ ಹಿಡಿದ ಕೈಕನ್ನಡಿಯಾಗಿದೆಂದು ಟೀಕಿಸಿದರು.

ಮಾವಿನಹಳ್ಳಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯ ಗುಣಮಟ್ಟ ಪ್ರಶ್ನಿಸಿದ ಜೆಡಿಎಸ್ ಕಾರ್ಯಕರ್ತನ ವಿರುದ್ದ ಸೇಡು ತೀರಿಸಿಕೊಳ್ಳಲು ಶಾಸಕ ಮಸಾಲಜಯರಾಮ್ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದು
ಕಾಮೇಶ್ ವಿರುದ್ದ ಪರಿಶಿಷ್ಟ ಜಾತಿಯವರನ್ನು ಎತ್ತಿಕಟ್ಟಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಸ್ಥಳೀಯ ಸಾಕ್ಷಿ ಇಲ್ಲದೇ ಅಟ್ರಾಸಿಟಿ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪೊಲೀಸರು ನ್ಯಾಯಾಲಯದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶಾಸಕರ ಅಣತಿಯಂತೆ ಪ್ರಕರಣ ದಾಖಲಿಸಲು ಮುಂದಾದರೇ ಸಿ.ಎಸ್.ಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣೆಗೆ ರೂಪಿತವಾದ ಅಟ್ರಾಸಿಟಿ ಕಾಯ್ದೆಯನ್ನು ಕೆಲ ರಾಜಕಾರಣಿಗಳು ಸ್ವಹಿತಾಸಕ್ತಿಗೆ ಅಸ್ತ್ರವಾಗಿ ಬಳಸುತ್ತಿರುವುದು ದುರುಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ಗೋಷ್ಟಿಯಲ್ಲಿ ತಾ.ಪಂ ಸದಸ್ಯ ತಿಮ್ಮೇಗೌಡ, ಜೆಡಿಎಸ್ ಮಾಧ್ಯಮ ಕಾರ್ಯದರ್ಶಿ ವೆಂಕಟಾಪುರಯೋಗೀಶ್, ಮುಖಂಡರಾದ ರಾಮು, ಕೃಷ್ಣಅವ್ವೇರಳ್ಳಿ, ಗಣೇಶ್, ಗಂಗಣ್ಣ, ವಿಜಯಕುಮಾರ್ ಇದ್ದರು.

ಆದರ್ಶದ ಅಫಿಡವಿಟ್ಟು,ಹೋಯಿತಲ್ಲ ಲೋಕಬಿಟ್ಟು!

ತುರುವೇಕೆರೆ ಪ್ರಸಾದ್


ಪ್ರಿಯ ರವಿ ಬೆಳಗೆರೆ ಸರ್,
ನೀವು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತೀರಿ ಎಂದು ಅಂದುಕೊಂಡೇ ಇರಲಿಲ್ಲ, ನೀವು ಹೀಗೆ ಕಾರಣ ಹೇಳದೆ ದಿಢೀರನೆ ಎದ್ದು ಹೋಗಿದ್ದು ದೊಡ್ಡ ಆಘಾತವನ್ನೇ ಉಂಟು ಮಾಡಿದೆ.

ಇದು ನನ್ನೊಬ್ಬನಿಗೆ ಮಾತ್ರ ಅಲ್ಲ, ನಿಮ್ಮಲ್ಲಿ ಕೆಚ್ಚೆದೆಯ ಒಬ್ಬ ಪತ್ರಕರ್ತ, ಒಬ್ಬ ಅಸಮಾನ್ಯ ದೇಶಭಕ್ತ, ಒಬ್ಬ ಸಂವೇದನೆಯ ಬರಹಗಾರ, ಒಬ್ಬ ಸಮಾಜ ಸುಧಾರಕನನ್ನು ಕಂಡಿದ್ದ ನನ್ನಂತಹ ಲಕ್ಷಾಂತರ ಜನಕ್ಕೆ ಇದು ಆಘಾತಕಾರಿ ಸಂಗತಿಯೇ!

ಸದಾ ಮೌಲ್ಯಗಳ ಬಗ್ಗೆ, ಹೊಸ ಕನಸು, ಆದರ್ಶಗಳ ಬಗ್ಗೆ, ಸುಧಾರಣೆಗಳ ಬಗ್ಗೆ ಮಾತಾಡುತ್ತಿದ್ದ ನೀವು ಹೀಗೆ ಸುಳಿವೇ ಕೊಡದೆ ಬಾರದ ಲೋಕಕ್ಕೆ ಹೊರಟು ಹೋದದ್ದೇಗೆ?

ನಿಮ್ಮ ಪತ್ರಿಕೆಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತು ಬಂಡಲ್ ಬಂದೊಡನೆ ಬಿಚ್ಚಿ ನಿಮ್ಮ ಬಾಟಮ್ ಐಟಂ ಒಳಗೆ ಕಳೆದುಹೋಗುತ್ತಿದ್ದವರು ನಾವು.

ನಿಮ್ಮ ಖಾಸ್ ಬಾತ್‍ಗಳ ಮಧುರ ನೆನಪುಗಳಲ್ಲಿ ಮಿಂದೆದ್ದವರು ಅದೆಷ್ಟು ಲಕ್ಷ ಯುವಕ ಯುವತಿಯರಿದ್ದಾರೋ? ನೆರಿಗೆ ಹುಡುಗಿಯ ಮೂಗಿನ ನತ್ತು, ಮುತ್ತಿನ ಮತ್ತಿನ ಮೂಲಕ ದೇಹ ಬಾಗುವ ಹೊತ್ತಲ್ಲೂ ಹಸಿ ಹಸಿ ಪ್ರೇಮ, ಪ್ರೀತಿಯ ಸಿಂಚನವನ್ನು ಪ್ರೇಮಿಗಳ ಹೃದಯದಲ್ಲಿ ಬಿತ್ತಿದವರು ನೀವು.

ಹಳೆಯ ನೆನಪುಗಳ ನಾಸ್ಟಾಲ್ಜಿಯಾದಲ್ಲೇ ಯುವಕರಲ್ಲಿ ಹೊಸ ಕನಸುಗಳನ್ನು, ಪ್ರೇಮದ ಕನವರಿಕೆಗಳನ್ನು, ಕಾಮನಬಿಲ್ಲುಗಳನ್ನು, ಗುಲ್‍ಮೊಹರುಗಳನ್ನು ಅರಳಿಸಿದವರು ನೀವು.

ಎಂದೂ ಮರೆಯದ ಮಧುರ ಹಾಡು ಕೊನೆಗೂ ನಿಂತೇ ಹೋಯಿತಲ್ಲ?
ಪ್ರೀತಿ ಪ್ರೇಮಗಳ ಮಧುರ ನೆನಪುಗಳ ಸಂತೆಯಲ್ಲೇ ಕಂತೆ ಕಂತೆ ಆದರ್ಶಗಳನ್ನು ಕಟ್ಟಿಕೊಟ್ಟವರು ನೀವು. ಅವೇನು ಒಂದೇ ಎರಡೇ? ಕುದಿಕುದಿವ ದೇಶಪ್ರೇಮದ ಕಿಚ್ಚು ಹತ್ತಿಸಿದವರು ನೀವು! ಸ್ವಚ್ಚ ಸಮಾಜದ ಪರಿಕಲ್ಪನೆಗೆ ತುಡಿದವರು ನೀವು, ಭ್ರಷ್ಟ ಸಮಾಜಕ್ಕೆ ಚಾಟಿಯೇಟು ಕೊಟ್ಟವರು ನೀವು!

ಬಂಡಲ್ ಬಂಡಲ್ ಭ್ರಷ್ಟ ರಾಜಕಾರಣಿಗಳ ಕರ್ಮಕಾಂಡಗಳನ್ನು ಬಯಲಿಗೆಳೆದವರು ನೀವು! ರಾಜಕಾರಣಿಗಳ ಕಾಮರಾಜಮಾರ್ಗಗಳನ್ನು ಲೇವಡಿ ಮಾಡಿದವರು ನೀವು. ಆದರ್ಶಗಳೂ ವಿವಿಧ ಕಾಲಘಟ್ಟಗಳಲ್ಲಿ ಬದಲಾಗುತ್ತಾ ಹೋಗುತ್ತವೆ. ಎಲ್ಲಾ ಆದರ್ಶಗಳೂ ಎಲ್ಲಾ ಕಾಲಕ್ಕೂ ಪ್ರಸ್ತುತ ಎನಿಸಲಾರವು. ಆಯಾ ಕಾಲಮಾನದ ಬದುಕಿನ ಅಗತ್ಯಕ್ಕೆ ತಕ್ಕಂತೆ ಆದರ್ಶಗಳು ಬದಲಾಗುತ್ತವೆ, ಇಲ್ಲ ಪುನರ್‍ರೂಪಿತಗೊಳ್ಳುತ್ತಾ ಹೋಗುತ್ತವೆ. ಅಂತಹ ಸಮಾಜಮುಖಿ ಆದರ್ಶದ ಹೊಸ ಹೊಳಹುಗಳನ್ನು ಒಂದಷ್ಟು ಜನ ಯುಗಪುರುಷರು ತಮ್ಮ ಬದುಕಿನ ಮೂಲಕ ನೀಡುತ್ತಾ ಹೋಗುತ್ತಾರೆ. ಅಂತಹವರಲ್ಲಿ ನೀವೂ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲವೇನೋ?

ನಿಮ್ಮ ಒಂದೊಂದು ಪುಸ್ತಕವೂ ಒಂದೊಂದು ಯಶಸ್ಸಿನ ಜೀವನ ಗಾಥೆಯಂತೆಯೇ ಅನಿಸುತ್ತದೆ. ಈ ದೇಶದ ಬಗ್ಗೆ ನಿಮಗಿದ್ದ ಪ್ರೀತಿ, ಕಾಳಜಿ, ಭಕ್ತಿ ಅನನ್ಯವಾದುದು. ಬ್ರಿಗೇಡ್ ರೋಡಿನ ಫುಟ್‍ಪಾತಲ್ಲಿ ಸಿಕ್ಕ ಜಯಂತ್ ದಳವಿ ಅವರ ರದ್ದಿ ಪುಸ್ತಕವನ್ನು ಹಿಡಿದು ಹಿಮಾಲಯವನ್ನೇ ಸುತ್ತಿ ಹಿಮಾಲಯನ್ ಬ್ಲಂಡರ್ ಬರೆದವರು ನೀವು.

ಅಂದಿನ ಯುದ್ಧದ ದಿನಗಳ ಸೈನಿಕರ ಸ್ಥಿತಿ ಬಗ್ಗೆ ಕಣ್ಣೀರುಗರೆದವರು ನೀವು. ಆ ಕಾಲದ ರಾಜಕೀಯ ಮುತ್ಸದ್ದಿಗಳ ನಡವಳಿಕೆಗಳನ್ನು, ನಿರ್ಧಾರಗಳನ್ನು ಕಟು ಮಾತುಗಳಲ್ಲಿ ಖಂಡಿಸಿ ವಾಸ್ತವ ಸತ್ಯಗಳ ಅನಾವರಣಗೊಳಿಸಿದವರು ನೀವು. ಆ ಪುಸ್ತಕದ ಪುಟ ಪುಟದಲ್ಲೂ ದೇಶಕ್ಕಾಗಿ ಮಿಡಿವ ನಿಮ್ಮ ಹೃದಯದ ಮಾರ್ದನಿ ಇದೆ ಎನಿಸುತ್ತದೆ. ತಿರುವುವ ಪ್ರತಿ ಪುಟದಲ್ಲೂ ನಿಮ್ಮ ದೇಶಭಕ್ತಿಯ ತುಡಿತ ಪುಟಿದೇಳುತ್ತದೆ. ಇಂತ ರೋಮಾಂಚಕಾರಿ ಪುಸ್ತಕ ಓದಿದ ಪ್ರತಿಯೊಬ್ಬ ಯುವಕನಲ್ಲಿ ಈ ದೇಶದ ಬಗ್ಗೆ ಕೆಚ್ಚು ಜಾಗೃತವಾಗಲೇಬೇಕು.

ವ್ಯವಸ್ಥೆಯ ಬಗ್ಗೆ ಸಿಡಿದೇಳುವ ಸಾತ್ವಿಕ ರೋಷ ಉಕ್ಕಬೇಕು. ಹಾಗೆ ವಿವೇಕಾನಂದರಂತೆ ಮಾತು ಮಾತಲ್ಲೂ ಯುವಕರನ್ನು ಬಡಿದೆಬ್ಬಿಸುತ್ತಿದ್ದವರು ನೀವು. ಈಗ ನೀವೇ ಇಲ್ಲದೆ ಹಿಮಾಲಯದ ಮಂಜಿನಂತೇ ಕರಗಿ ದೊಡ್ಡ ಕಂದಕವೊಂದು ಎದರು ನಿಂತಿದೆಯಲ್ಲ ಸರ್? ಎಲ್ಲವನ್ನೂ ಅಚ್ಚರಿಯ ಕಂಗಳಿಂದ ನೋಡುತ್ತಲೇ ಬ್ಲಂಡರ್‍ಗಳನ್ನು ಬಿಚ್ಚಿಡುತ್ತಿದ್ದ ನೀವು ನಿಜಕ್ಕೂ ಕನ್ನಡ ಸಾಹಿತ್ಯ ಲೋಕ ಮತ್ತು ಪತ್ರಿಕೋದ್ಯಮದ ಒಂದು ಗ್ರೇಟ್ ವಂಡರ್ ಎಂದು ಯಾರಾದರೂ ಒಪ್ಪಲೇಬೇಕು!
ಇಷ್ಟೇ ಅಲ್ಲ, ನೀವು ಕ್ರೈಂ ಡೈರಿ ಮೂಲಕ ನೂರಾರು ಅಪರಾಧ ಪ್ರಕರಣಗಳ ಸ್ವರೂಪ,ಅಪರಾಧದದ ಹಿನ್ನಲೆ, ಕಾರಣಗಳು, ಮೋಟಿವೇಶನ್‍ಗಳು ಮೊದಲಾದ ಅಪರಾಧ ಲೋಕದ ಚಿತ್ರಣವನ್ನೇ ಈ ನಾಡಿನ ಜನತೆಗೆ ಕೊಟ್ಟಿದ್ದಿರಿ. ಇಂತಹ ಹಲವು ಎಪಿಸೋಡಿನ ಕನ್‍ಕ್ಲುಶನ್‍ನಲ್ಲಿ ನೀವು ಈ ಹೆಣ್ಣು, ಹೊನ್ನು ಮಣ್ಣು ಇವುಗಳ ನಶ್ವರತೆ ಕುರಿತಂತೆ ಸಾಕಷ್ಟು ಅರ್ಥಪೂರ್ಣವಾಗಿ ಮಾತಾಡಿದ್ದೀರಿ.

ಹೆಣ್ಣು ಮಕ್ಕಳ ಮೇಲಂತೂ ನಿಮ್ಮಗೆ ಇನ್ನಿಲ್ಲದ ಅಕ್ಕರೆ, ಅಭಿಮಾನ! ಯಾರಿಂದಲೋ ನಿರಂತರ ದೂರವಾಗಿ, ಪರಿತ್ಯಕ್ತಳಾಗಿ ಪಡಬಾರದ ಪಾಡು ಪಟ್ಟು ನೋವುಂಡ ಒಂದು ಹೆಣ್ಣಿನ ಜೀವನ ಚರಿತ್ರೆಯನ್ನೇ ಎಲ್ಲಾ ವಿರೋಧ, ಹೆದರಿಕೆಗಳಿಗೆ ಜಗ್ಗದೆ ಬರೆದವರು ನೀವು. ಹೆಣ್ಣಿನ ಬಗ್ಗೆ ಹೆಂಗಸರ ಬಗ್ಗೆ ನಿಮಗಿದ್ದ ಗೌರವ ನಿಮ್ಮ ಹಲವು ಬರಹಗಳಲ್ಲಿ ಎದ್ದು ಕಾಣುತ್ತದೆ.

ಹೆಣ್ಣಿಗಾಗಿ ಅಪರಾಧ ಮಾಡುವವರ ಜಾತಕ ಜಾಲಾಡಿ ಛೀಮಾರಿ ಹಾಕಿದ್ದವರು ನೀವು.
ನಿಮ್ಮ ‘ಓ ಮನಸೇ’ನಲ್ಲಿ ನೀವು ಹಲವು ಯುವಕ,ಯುವತಿಯರ ಸಮಸ್ಯೆಗಳಿಗೆ ಸಾಂತ್ವನ ಹೇಳುವ ಒಂದು ಅಂಕಣ ಶುರು ಮಾಡಿದ್ದಿರಿ. ಅದೊಂದು ವಿಶಿಷ್ಟವಾದ ಅಂಕಣ ಎಂದೇ ನನಗೆ ಅನಿಸಿತ್ತು, ನಾಡಿನ ಸಾವಿರಾರು ಯುವಕ, ಯುವತಿಯರು ತಮ್ಮ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರಿಗೆಲ್ಲಾ ನೀವು ಸಾಂತ್ವನ ಹೇಳಿ ಜೀವನ್ಮುಖಿಯಾಗುವಂತೆ ಮಾಡಿ ಅವರಲ್ಲಿ ಜೀವನ ಪ್ರೀತಿ ಹುಟ್ಟಿಸುವಂತೆ ಮಾಡುತ್ತಿದ್ದ ರೀತಿಯಂತೂ ಇಂದಿಗೂ ಅದ್ಭುತ.

ಹೀಗೆ ಸಾವಿರಾರು ಮಂದಿಗೆ ಸಾಂತ್ವನ ಹೇಳಿದ ನಿಮ್ಮ ಮನಸ್ಸನ್ನು ನೀವೇ ಸಿಗರೇಟ್, ವಿಸ್ಕಿ ಇಲ್ಲದೆ ಸಾಂತ್ವನಗೊಳಸಿಕೊಳ್ಳಲಾರದೇ ಹೋದದ್ದು ನಿಜಕ್ಕೂ ದುರಂತವೇ?
ರವಿ ಸರ್,ನೀವು ಯಾವಾಗಲೂ ಬರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮಸಂತೋಷ ಪಡೆದುಕೊಳ್ಳಲು ಬದುಕುತ್ತಿರುವವನು ನಾನು, ಅದು ಬಿಟ್ಟು ಬೇರೇನೂ ಮಾಡಲು ನನಗೆ ಬರುವುದಿಲ್ಲ ಎಂದು ಪ್ರಮಾಣಿಕರಿಸಿ ಹೇಳುತ್ತಿದ್ದಿರಿ. ಅದೇ ನಿಮ್ಮ ಜೀವನದ ಅಫಿಡವಿಟ್ ಆಗಿತ್ತು.

ಹೋಟಲ್ ಮಾಣಿಯಾಗಿ, ರೂಮ್‍ಬಾಯ್ ಆಗಿ ಒಂದು ಹುಡುಗಿಯಿಂದ ದುಡಿಮೆ ಇಲ್ಲ ಎಂದು ತಿರಸ್ಕಾರಕ್ಕೆ ಒಳಗಾಗಿದ್ದ ಹುಡುಗ ರವಿಬೆಳೆಗೆರೆಯೆಂಬ ಪತ್ರಿಕೋದ್ಯಮದ ದೈತ್ಯನಾಗಿ ಬೆಳೆದಿದ್ದು ನಿಮ್ಮ ಈ ಬರವಣಿಗೆಯೆಂಬ ಕಮಿಟ್‍ಮೆಂಟ್ ಒಂದರಿಂದಲೇ ಎಂದು ಅನವರತ ನಂಬಿದವರು ನಾವು. ಮ್ಯಾತ್ಸಲ್ಲಿ ವೀಕು , ಸರಳವಾದ ಲೆಕ್ಕಚಾರವೂ ಬರಲ್ಲ ಎನ್ನುತ್ತಿದ್ದ ನೀವು ಈ 62 ವರ್ಷಗಳಲ್ಲಿ ಬದುಕಿದ ಬಗೆ ಲೆಕ್ಕಾಚಾರವಿಲ್ಲದ್ದು ಎಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವಾ?

ನಿಮ್ಮ ಪ್ರಾರ್ಥನಾ ಸ್ಕೂಲ್ ಕಟ್ಟುವ ಮುಂಚೆ ಅದೊಂದು ವಿಶಾಲವಾದ ನಿವೇಶನ. ಅಲ್ಲಿ ಯಾರೋ ಒಬ್ಬರು ಕಲ್ಯಾಣ ಮಂಟಪ ಕಟ್ಟಿ ಎಂದಾಗ ನೀವು ಬರೆದುಕೊಂಡಿದ್ದು ಜ್ಞಾಪಕ ಇದೆಯಾ ಸರ್? ನಾನು ಹಾಗೆ ಮಾಡಿದ್ದರೆ ರವಿಬೆಳಗೆರೆ ಸತ್ತ ಮೇಲೆ ಅವನು ಏನು ಮಾಡುತ್ತಿದ್ದ ಎಂದು ಯಾರಾದರೂ ಕೇಳಿದರೆ ಚೌಲ್ಟ್ರಿ ಕಟ್ಟಿಸಿ ಹಂಡೆ ಕೊಳದಪ್ಪಲೆ ಬಾಡಿಗೆಗೆ ಕೊಡುತ್ತಿದ್ದ ಎಂದು ಹೇಳುತ್ತಾರೆ.

ಹಾಗಾಗಬಾರದು ಎಂದು ನಾನು ಅಲ್ಲಿ ಪ್ರಾರ್ಥನಾ ಶಾಲೆ ಕಟ್ಟಿದೆ. ಸತ್ತ ಮೇಲೆ ನಾವು ಮಹಾತ್ಮರಾಗದಿದ್ದರೂ ಪರವಾಗಿಲ್ಲ, ಸಮಾಜ ಕೇವಲ ಮಹಾತ್ಮರನ್ನು ಮಾತ್ರ ನೆನಪಿಟ್ಟುಕೊಳ್ಳುವುದಿಲ್ಲ, ಮನುಷ್ಯನ ಘನತೆ ಅವನನ್ನು ಸತ್ತ ನಂತರವೂ ಜೀವಂತವಾಗಿಡುತ್ತದೆ.

ಇದರ ಅರಿವಿದ್ದಾಗ ನಾವು ಇನ್ನಷ್ಟು ಎಚ್ಚರಿಕೆಯಿಂದ ಬದುಕುತ್ತೇವೆ. ಮಾಡುವ ದಿನನಿತ್ಯದ ಕೆಲಸವನ್ನೇ ಶ್ರದ್ಧೆಯಿಂದ ಮಾಡುತ್ತೇವೆ. ಪಡುವ ಸುಖಕ್ಕಿಂತ ಮಾಡುವ ಸಾಧನೆಯ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ ಎಂದು ಬರೆದಿದ್ದಿರಿ. ಯೆಸ್ ಸರ್, ಕೊನೆಗೂ ಅದಕ್ಕೆ ಬದ್ಧರಾಗೇ ಬದುಕಿ ಹಂಡೆ, ಹಲ್ಲಂಡೆ ಬದುಕಾಗದೆ ಬಂಡೆಯಾಗಿ ಎಲ್ಲಾ ಎದುರಿಸಿ ಹೊರಟುಹೋದಿರಿ
ಹಾವು ಹರಿದಂತ ಬದುಕಲ್ಲಿ ಸಾಧಿಸುವ ಮನೋಬಲ
ನಶ್ವರ ಬದುಕನ್ನು ಅಕ್ಷರದಲ್ಲಿ ಸುಂದರವಾಗಿಸುವ ಹಂಬಲ
ಕರಿಗೆರೆಗಳನ್ನು ಬಿಳಿಗೆರೆಯಾಗಿಸುವ ಸಿದ್ಧಿ,ಬುದ್ದಿ
ಕಡೆದು ಕೆತ್ತಿಡುವ ನೈಪುಣ್ಯ ಕಲ್ಲುಗುದ್ದಿ!
ಬದುಕ ತುಂಬಾ ಕನವರಿಕೆಯ ಗಿರ್ಮಿಟ್ಟು,
ಜೀವಂತಿಕೆ, ಲವಲವಿಕೆಯ ಅಫಿಡವಿಟ್ಟು
ಲೋಕಾಂತರ ಪಯಣದ ಓ ಪಯಣಿಗ

ಕಾರಣ ಹೇಳದೆ ಹೋಗಿದ್ದೇ ಸೋಜಿಗ!
ನೆನಪಿನ ಕಣಿವೆಯಲ್ಲಿ ಬಗ್ಗಿಸಿದಾಗೆಲ್ಲಾ ಕೊರಳು
ಶಿಖರ ಸೂರ್ಯನೇ ಬೀಳುತ್ತದೆ ನಿನ್ನದೇ ನೆರಳು..!
ಗುಡ್ ಬೈ ರವಿ ಸರ್

ವಿದ್ಯಾರಣ್ಯಸಂಸ್ಥೆ ಕಾರ್ಯದರ್ಶಿ ನೇಮಕದ ವಿರುದ್ಧ ದೂರು: ಅಡವೀಶಯ್ಯ

0

ತುರುವೇಕೆರೆ: ತಾಲ್ಲೂಕಿನ ವಿದ್ಯಾರಣ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಕಡೆಗಣಿಸಿ ನೂತನ ಕಾರ್ಯದರ್ಶಿಯನ್ನು ಅಕ್ರಮವಾಗಿ ನೇಮಿಸಿದ್ದು ಈ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಲಾಗಿದೆ ಎಂದು ಸದಸ್ಯ ತೋವಿನಕೆರೆಅಡವೀಶಯ್ಯ ದೂರಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಡಳಿತ ಮಂಡಳಿಯ ದಾಖಲೆ ಪ್ರದರ್ಶಿಸಿ ಮಾತನಾಡಿದರು.

ಹಿಂದಿನ ಕಾರ್ಯದರ್ಶಿ ರಂಗಸ್ವಾಮಿ ಅವರು ಶಿಕ್ಷಣ ಸಂಸ್ಥೆಯ ಏಳಿಗೆಗಾಗಿ ಅಪಾರ ಶ್ರಮವಹಿಸಿದ್ದರು. ಸಂಸ್ಥೆಯ ಸಾಧಕ ಭಾದಕಗಳನ್ನು ಕುರಿತಂತೆ ರಂಗಸ್ವಾಮಿಯವರು ಆಡಳಿತ ಮಂಡಳಿಯ ಸದಸ್ಯರ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುತ್ತಿದ್ದರು.
ಆದರೆ ಆ ಕಾರ್ಯದರ್ಶಿ ರಂಗಸ್ವಾಮಿಯವರ ಅಕಾಲಿಕ ನಿಧನದಿಂದ ಸಂಸ್ಥೆಯ ಆಡಳಿತವೇ ಹಳೀ ತಪ್ಪಿದೆ. ಸಂಸ್ಥೆಯಲ್ಲಿ ತೋಟಗಾರಿಕೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಯಣ್ಣ ನಿಯಮ ಮೀರಿ ವರ್ತಿಸುತ್ತಿದ್ದಾರೆ. ಇದಕ್ಕೆ ಮೊದಲ ಪ್ರಯತ್ನವೆಂಬಂತೆ ತಮ್ಮ ಮಗಳನ್ನೇ ಕಾರ್ಯದರ್ಶಿಯನ್ನಾಗಿ ಏಕಾಏಕಿ ನೇಮಕ ಮಾಡುವ ತಂತ್ರಗಾರಿಕೆ ನೆಡೆಸಿರುವುದನ್ನು ಪ್ರಬಲವಾಗಿ ವಿರೋದಿಸುವೆ ಎಂದರು.

ಹಿಂದಿನ ಕಾರ್ಯದರ್ಶಿ ರಂಗಸ್ವಾಮಿಯವರು ಆಡಳಿತ ಮಂಡಳಿಯ ಮುಂದೆ ಹಣಕಾಸು ಮತ್ತಿತರ ವಿಚಾರಗಳು ಆಡಳಿತ ಮಂಡಳಿಯ ಸಭೆಯ ಗಮನಕ್ಕೆ ತರುತಿದ್ದರು. ಆದರೆ ತೋಟಗಾರಿಕೆ ಶಿಕ್ಷಕ ಜಯಣ್ಣ ಆಡಳಿತ ಮಂಡಳಿಯ ಕೆಲ ಸದಸ್ಯರನ್ನು ಬುಟ್ಟಿಗೆ ಹಾಕಿಕೊಂಡು ಸಂಸ್ಥೆಯ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಕಾರ್ಯದರ್ಶಿ ನೇಮಕ ಅಕ್ರಮವಾಗಿದ್ದು, ಸಂಸ್ಥೆ ಹಾಗೂ ಸಿಬ್ಬಂದಿಗಳ ಹಿತರಕ್ಷಣೆಗೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಶೀಘ್ರದಲ್ಲೇ ಸಂಸ್ಥೆಯ ಇನ್ನುಳಿದ ಸದಸ್ಯರೊಂದಿಗೆ ಪಟ್ಟಣದಲ್ಲಿ ವಿದ್ಯಾರಣ್ಯ ಸಂಸ್ಥೆ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.