Sunday, May 10, 2026
Google search engine
Home Blog Page 170

ತುಮಕೂರು ಗ್ರಾಮಾಂತರ ಕ್ಷೇತ್ರ: ಇಂದಿನಿಂದ ಪ್ರಚಾರಾಂದೋಲನ

Publicstory. in


ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪ್ರಿಯ ಶಾಸಕರಾದ ಡಿ.ಸಿ.ಗೌರಿಶಂಕರ್ರವರ ನೇತೃತ್ವದಲ್ಲಿ ನಡೆಯುತ್ತಿರುವ ಬಹುಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದಿಂದ ನವೆಂಬರ್ 13 ರಿಂದ ಪ್ರಚಾರಾಂದೋಲನ ನಡೆಸಲು ಯೋಜಿಸಲಾಗಿದೆ ಎಂದು ಪ.ಜಾತಿ ವಿಭಾಗದ ಅಧ್ಯಕ್ಷ ಬಿ.ಎಸ್.ವೆಂಕಟೇಶ್, ಮುಖಂಡರಾದ ಸಿರಿವರ ನಾರಾಯಣಪ್ಪ ಮತ್ತು ಕಂಬಾಳಪುರ ಪಾಂಡುರಂಗಯ್ಯ ತಿಳಿಸಿದ್ದಾರೆ.

ನ.13 ರಂದು ಬೆಳಗ್ಗೆ 9 ಗಂಟೆಗೆ ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಆರ್.ಸಿ.ಆಂಜನಪ್ಪ ಅವರು ಈ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿರುವರು.

ತಿಗಳ ಜನಾಂಗದ ಮುಖಂಡರಾದ ಕುಂಭಯ್ಯರವರು ಅತಿಥಿಗಳಾಗಿರುವರು. ಪಕ್ಷದ ಇತರೆ ಮುಖಂಡರುಗಳು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮವ ವಿವರ


ನ.13 ರಂದು ಬೆಳಗುಂಬ, ಹೆಬ್ಬೂರು, ಕಣಕುಪ್ಪೆ, ನಿಡುವಳಲು, ಸಿರಿವರ, ನ.14 ರಂದು ಹೊಳಕಲ್ಲು, ಕೆ.ಪಾಲಸಂದ್ರ, ಪಾಲಸಂದ್ರ, ಹರಳೂರು, ಕೆಸರುಮಡು, ಹಿರೇಹಳ್ಳಿ, ನ.15 ರಂದು ಅರೆಗುಜ್ಜನಹಳ್ಳಿ, ಊರ್ಡಿಗೆರೆ, ಸೀತಕಲ್ಲು, ಮೈದಾಳ, ಹೊನ್ನುಡಿಕೆ, ಮಸ್ಕಲ್.

, ನ.16 ರಂದು ಸ್ವಾಂದೇನಹಳ್ಳಿ, ಅರಕೆರೆ, ಊರುಕೆರೆ, ಬುಗುಡನಹಳ್ಳಿ, ನ.17 ರಂದು ಗೂಳೂರು, ಹೆತ್ತೇನಹಳ್ಳಿ, ಬಳ್ಳಗೆರೆ, ನಾಗವಲ್ಲಿ, ಹೊನಸಿಗೆರೆ, ಗಂಗೋನಹಳ್ಳಿ, ನ.18 ರಂದು ಹೆಗ್ಗೆರೆ, ಮಲ್ಲಸಂದ್ರ, ಅರೆಯೂರು, ಗಳಿಗೇನಹಳ್ಳಿ, ದೊಡ್ಡನಾರವಂಗಲ.

ನ.19 ರಂದು ತಿಮ್ಮರಾಜನಹಳ್ಳಿ, ಸೋರೆಕುಂಟೆ, ನೆಲಹಾಳ್, ಬೆಳ್ಳಾವಿ _ ಈ ಸ್ಥಳಗಳಲ್ಲಿ ಪ್ರಚಾರಾಂದೋಲನ ಏರ್ಪಟ್ಟಿದ್ದು, ಅಂತಿಮವಾಗಿ ಬೆಳಗುಂಬ ಗ್ರಾಮದಲ್ಲಿ ಪ್ರಚಾರಾಂದೋಲನದ ಸಮಾರೋಪ ನಡೆಯಲಿದೆ. ಜೊತೆಗೆ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಹ ಅಂದು ಏರ್ಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಿಂದೆ ಉಳಿದ ಟಿಬಿಜೆ, BJp ಮುನ್ನಡೆ

ತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ಉಪ‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ ಗೌಡ ಹನ್ನೆರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ.

ಶಿರಾ 12ನೇ ಸುತ್ತಿನ ವಿವರ:

ರಾಜೇಶ್ ಗೌಡ ಬಿಜೆಪಿ:37,808

ಟಿ.ಬಿ.ಜಯಚಂದ್ರ ಕಾಂಗ್ರೆಸ್ :29,338

ಅಮ್ಮಾಜಮ್ಮ ಬಿ ಸತ್ಯನಾರಾಯಣ ಜೆಡಿಎಸ್:19,522

ಬಿಜೆಪಿಯ ರಾಜೇಶ್ ಗೌಡ 7,870 ಮತಗಳಿಂದ ಮುನ್ನಡೆ ಪಡೆದಿದ್ದಾರೆ.

ಜೆಡಿಎಸ್ ನಲ್ಲಿ ರಾಜೇಶ್ ಗೌಡ ಅವರನ್ನು ಬಿಜೆಪಿಗೆ ಕರೆ ತಂದು ನಿಲ್ಲಿಸಲಾಗೊತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ, ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಇದರ ಹಿಂದೆ ಕೆಲಸ ಮಾಡಿದ್ದರು.

ಶಿರಾ ಉಪ ಚುನಾವಣೆ ಬಿಜೆಪಿ ಮುನ್ನಡೆ

Publicstory. in


ತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ಉಪ‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ ಗೌಡ ಎರಡೂ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ. ಪಡೆದ ಮತಗಳ ವಿವರ ಕೊನೆಯಲ್ಲಿದೆ.

ಜೆಡಿಎಸ್ ನಲ್ಲಿ ರಾಜೇಶ್ ಗೌಡ ಅವರನ್ನು ಬಿಜೆಪಿಗೆ ಕರೆ ತಂದು ನಿಲ್ಲಿಸಲಾಗೊತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ, ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಇದರ ಹಿಂದೆ ಕೆಲಸ ಮಾಡಿದ್ದರು.

ಶಿರಾದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಹೇಳಿರುವುದು ಅಚ್ಚರಿಗೆ ಕಾರಣವಾಗಿತ್ತು.

ಕುಮಾರಸ್ವಾಮಿ ಅವರ ಮಾತು ನಿಜವಾಗುವಂತೆ ಮೊದಲ ಎರಡು ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಸಾಧಿಸಿರುವುದು ಕಾರ್ಯಕರ್ತರಲ್ಲಿ ಉರುಪು ತಂದಿದೆ.

ಜೆಡಿಎಸ್ ಮೂರನೇ ಸ್ಥಾನದಲ್ಲಿದ್ದು, ಅನುಕಂಪ ಕೆಲಸ ಮಾಡಿದಂತೆ ಕಾಣುತ್ತಿಲ್ಲ.

ಪಡೆದ ಮತಗಳ ವಿವರ

ಬಿಜೆಪಿ: 6436
ಕಾಂಗ್ರೆಸ್:4729
ಜೆಡಿಎಸ್: 2714

ಟಿ.ಬಿ.ಜಯಚಂದ್ರ ಆಸ್ಪತ್ರೆಗೆ ದಾಖಲು

Publicstory. in


ತುಮಕೂರು: ಮಾಜಿ ಸಚಿವ, ಸಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಪ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಅವರು ಕೊರೊನಾ ಸೋಂಕಿನ ಕಾರಣ ಆಸ್ಪತ್ರೆ ಸೇರಿದ್ದಾರೆ.

ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಪತ್ನಿಗೂ ಸೋಂಕು ಕಾಣಿಸಿಕೊಂಡಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೀಘ್ರ ಗುಣಮುಖರಾಗಲೆಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಹಾರೈಸಿದ್ದಾರೆ.

ಇನ್ನೂ ಮತ ಎಣಿಕೆ ಆರಂಭವಾಗಿದ್ದು, ಆರಂಭದಲ್ಲಿ ಬಿಜೆಪಿಯ ರಾಜೇಶ್ ಗೌಡ ಮುಂದಿದ್ದಾರೆ.

ಸಂವಿಧಾನ ಬದಲಾಯಿಸುತ್ತೇವೆ ಎನ್ನುವರಿಗೆ ಮತದಾನದಲ್ಲಿ ಪಾಠ ಕಲಿಸಿ: ಕುಂದೂರು ತಿಮ್ಮಯ್ಯ

Publicstory. in


ತುರುವೇಕೆರೆ: ದಲಿತರು ಮತದಾನ ಅಸ್ತ್ರದ ಮೂಲಕ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವ್ಯಕ್ತಿಗಳು ಹಾಗು ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಇಲ್ಲವಾದರೆ; ದಲಿತರ ಅಸ್ಮಿತೆಗೆ ಉಳಿಗಾಲವಿಲ್ಲವೆಂದು ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಕಿವಿ ಮಾತು ಹೇಳಿದರು.

ತಾಲ್ಲೂಕಿನ ಅರಳೀಕೆರೆ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಗ್ರಾಮ ಶಾಖೆಯ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ಪುರೋಹಿತಶಾಹಿ ವ್ಯವಸ್ಥೆ ಜಾತಿ, ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸುವ ಮೂಲಕ ದೇಶದ ಜನರ ಮನಸ್ಸುಗಳನ್ನು ಕದಡುವ ಕುತಂತ್ರ ನಡೆಸುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದುತ್ವದ ಹೆಸರಿನಲ್ಲಿ ಸಮುದಾಯ ಸಮುದಾಯಗಳ ನಡುವೆ ಕೋಮುವಾದ ಭಿತ್ತಿ ಮತ್ತೆ ಮನುವಾದವನ್ನು ಮರುಸ್ಥಾಪಿಸುವ ಕುಟಿಲೋಪಾಯಕ್ಕೆ ಮುಂದಾಗಿದ್ದಾರೆ.

ದೇಶದ ಜನರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕಲ್ಪಿಸಿಕೊಟ್ಟ ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ವಿಶ್ವಮಾನ್ಯಗಳಿಸಿರುವುದ ಶ್ಲಾಘನೀಯ.

ಇಂದಿನ ವಿಷಮಸ್ಥಿತಿಯ ರಾಜಕಾರಣ ದಲಿತರು ಸೇರಿದಂತೆ ತಳ ಸಮುದಾಯಗಳು ಹೋರಾಟದ ಮೂಲಕವೇ ಸಾಂವಿಧಾನಿಕ ಹಕ್ಕು ಬಾದ್ಯತೆಗಳನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಕಂದಾಚಾರ, ಮೌಢ್ಯ, ದೇವರು ದಿಂಡಿರಂತಹ ಮೂಢನಂಬಿಕೆಗಳಿಂದ ದಲಿತರು ಹೊರ ಬಂದು ಪ್ರಗತಿಪರ ಮನೋಭಾವನೆ ಬೆಳೆಸಿಕೊಳ್ಳಿ. ಡಿಎಸ್ಎಸ್ ಅಂಬೇಡ್ಕರ್ ಚಿಂತನೆ ಹಾಗು ಎಲ್ಲ ಶೋಷಿತರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಕವಿ ಗುರುಪ್ರಸಾದ್ ಕಂಟಲಗೆರೆ ಮಾತನಾಡಿ, ಅಂಬೇಡ್ಕರ್ ಹಾಗು ದಲಿತ ಚಿಂತನೆಗಳು ಕೇವಲ ಘೋಷಣೆ, ವಿಜೃಂಭಣೆಗೆ ಸೀಮಿತವಾಗದೆ ಅವರ ವಿಚಾರಧಾರೆಗಳನ್ನು ತಮ್ಮ ಅಂತಃಕರಣದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

40 ವರ್ಷಗಳ ಹಿಂದೆ ಕೇವಲ ಪ್ರಜ್ಞಾವಂತರಿಗಷ್ಟೇ ತಿಳಿದಿದ್ದ ಅಂಬೇಡ್ಕರ್ ಈಗ ಅಂಬೇಡ್ಕರ್ ಬದುಕು, ಬವಣೆ, ಹೋರಾಟಗಳು’ಮಹಾನಾಯಕ’ ಧಾರವಾಹಿಯ ಮೂಲಕ ಪ್ರತಿಯೊಬ್ಬ ಮನೆ, ಮಕ್ಕಳಿಗೂ ತಲುಪುತ್ತಿರುವುದು ಆಶಾದಾಯಕ ಎಂದು ಹೇಳಿದರು.

ಶೋಷಿತ ಸಮುದಾಯಗಳ ಯುವಕರು ಸಮಾಜದಲ್ಲಿ ಅಸಹಿಷ್ಣುತೆ ಭಿತ್ತು ಜನರಿಂದ ಸದಾ ಎಚ್ಚರದಿಂದ ಇರಬೇಕು. ಅತಿ ಹೆಚ್ಚು ಸಂಖ್ಯೆಯಲ್ಲಿರುವ ದಲಿತರಿಗೆ ರಾಜಕೀಯ ಅವಕಾಶಗಳೇ ವಿರಳ ಎಂದು ವಿಷಾಧ ವ್ಯಕ್ತಪಡಿಸಿದರು.

ಜೆ.ಸಿ.ರಂಧಾಮಯ್ಯ ಜನಕಲೋಟಿ ಅವರು ಉಪನ್ಯಾಸ ನೀಡಿದರು.

ಇದೇ ವೇಳೆ ದಂಡಿನಶಿವರ ಕುಮಾರ್ ಸಂಗಡಿಗರು ಕ್ರಾಂತಿಗೀತೆ ಹಾಗು ಹೋರಾಟದ ಹಾಡುಗಳ ಮೂಲಕ ಜನರನ್ನು ಹುರಿದುಂಬಿಸಿದರು.

ಸಮಾರಂಭದಲ್ಲಿ ದಸಂಸ ತಾಲ್ಲೂಕು ಸಂಚಾಲಕರುಗಳಾದ ಡಾ.ಚಂದ್ರಯ್ಯ, ದಂಡಿನಶಿವರ ಕುಮಾರ್, ಸುಧಾಕರ್, ಶಿವರಾಜ್, ಸುರೇಶ್ಬಾಬು, ಮಲ್ಲೂರ್ ತಿಮ್ಮೇಶ್, ಬೊಮ್ಮಲಿಂಗಣ್ಣ ಮುಖಂಡ ಅರಳೀಕೆರೆ ರವಿಕುಮಾರ್ ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

ಸಿಂಗದಹಳ್ಳಿ ರಾಜಕುಮಾರ್ ಗೆ ಸನ್ಮಾನ

0

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆಯಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಡಿ. ಸಿ. ಸಿ. ಬ್ಯಾಂಕ್ ನ ನಿರ್ದೇಶಕರಾಗಿ ಸತತವಾಗಿ 3ನೇ ಬಾರಿಗೆ ಆಯ್ಕೆಯಾದ ಸಿಂಗದಹಳ್ಳಿ ರಾಜಕುಮಾರ್ ಮತ್ತು ವಾಲ್ಮೀಕಿ ಸಮಾಜದ ಮುಖಂಡರಿಗೆ ಸನ್ಮಾನ ಸಮಾರಂಭ ನಡೆಯಿತು.

ಮಹರ್ಷಿ ನಾಯಕ ಹೋರಾಟ ಜಾಗೃತಿ ಸಮಿತಿ ಕಾರ್ಯಕ್ರಮ ಆಯೋಜಿಸಿತ್ತು.

ವಾಲ್ಮೀಕಿ ಸಮಾಜವು ಐತಿಹಾಸಿಕ ಚರಿತ್ರೆಯುಳ್ಳ ಸಮಾಜವಾಗಿದ್ದು, ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಇಂತಹ ಸಮಾಜವು ಇಂದು ತನ್ನ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯುವ ಸಲುವಾಗಿ ಸಂಘಟಿತವಾಗುವ ಅನಿವಾರ್ಯತೆ ಎದುರಾಗಿದೆ. ಹಲವಾರು ಕಾರ್ಯಕ್ರಮಗಳನ್ನು ಮಾಡುವ ನೆಪದಲ್ಲಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದು ಮಹರ್ಷಿ ವಾಲ್ಮೀಕಿ ಸಮುದಾಯದ ಮುಖಂಡರು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದು ಆಗಿರುವ ಸಿಂಗದಹಳ್ಳಿ ರಾಜಕುಮಾರ್ ಅವರಿಗೆ ಸನ್ಮಾನ ಮಾಡಲಾಯಿತು.

ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ಬಸವರಾಜು ತುಬನಕುಂಟೆ, ಹೋಬಳಿ ಅಧ್ಯಕ್ಷರಾದ ಮೋಹನ್ ಕುಮಾರ್,ರವಿಕುಮಾರ್, ಮಂಜುನಾಥ್, ದುರ್ಗರಾಜು ಹುಳಿಯಾರ್, ಚನ್ನಿಗಪ್ಪ ಮತ್ತು ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಕಾರ್ಯಕ್ರಮದ ಉಸ್ತುವಾರಿ ರಮೇಶ್ ಇದ್ದರು.

ಎಲ್ಲರೂ ನೋಡಿ, ಕಲಿಯಬೇಕಾದ ‘ಒಳಿತು ಮಾಡು ಮನುಸಾ’

1

ವಿಮರ್ಶೆ: -ಹರೀಶ್ ಕಮ್ಮನಕೋಟೆ


ಕೊರೊನ ಸಂಕಷ್ಟ ಕಾಲದಲ್ಲಿ ಶತಮಾನದ ಕಥೆಯಾಗಿ ರೂಪುಗೊಂಡ ‘ಒಳಿತು ಮಾಡು ಮನುಸಾ’ ನಾಟಕ ಸರ್ಕಾರಗಳ ಜನವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.

ಇಲ್ಲಿ ಎಲ್ಲರೂ ಹೋರಾಟ ಮಾಡುತ್ತಿರುವುದು ಬದುಕಿಗಾಗಿ ಮಾತ್ರ . ಇದರಿಂದ ಯಾರೂ ಹೊರತಲ್ಲ. ಒಳಿತು ಮಾಡುವುದೇ ನಮ್ಮ ಕಾಯಕವಾದರೆ ಜೀವನ ಸಾರ್ಥಕವಲ್ಲವೇ?

ಅತಿ ಹೆಚ್ಚಿನ ಪಾಲು ಬಡವರೇ ತುಂಬಿರುವ ಭಾರತದಲ್ಲಿ ಆಶ್ವಾಸನೆಗಳು ಕಣ್ಣೊರೆಸುವ ತಂತ್ರಗಳಾಗಿಯೇ ಉಳಿದಿವೆ.

ಕಾಗದ ಪತ್ರಗಳ ತರಾತುರಿಯಲ್ಲಿ ಸಹಾಯಧನಗಳು ಕೊಚ್ಚಿ ಹೋಗಿವೆ. ರೈತರು, ನೇಕಾರರು ಮತ್ತು ಕರ ಕಸುಬುಗಳನ್ನೇ ನೆಚ್ಚಿ ಬದುಕುತ್ತಿದ್ದ ಜನ ಇಂದು ಕೊರೊನ ಕಷ್ಟದ ಅಲೆಗೆ ಬಲಿಯಾಗಿದ್ದಾರೆ.

ಸಾಲಗಾರರು ಸಾವಿನ ಆಕ್ರಂದನವನ್ನು ಆಘ್ರಾಣಿಸಿಕೊಂಡಿದ್ದಾರೆ. ಬದುಕು ಸಾಕಾಗಿ ಭಾರವೆನಿಸಿರುವ ಜನರ ಗೋಳನ್ನು ಈ ನಾಟಕ ಪ್ರಸ್ತುತಿಸುತ್ತಿದೆ.

ಜನರ ಆರೋಗ್ಯ ಕಾಳಜಿ ವಹಿಸಬೇಕಾದ ಜನಪ್ರತಿನಿಧಿಗಳು ಚಪ್ಪಾಳೆ ಬಡಿಯಿರಿ, ದೀಪ ಹಚ್ಚಿರಿ, ಟಮಟೆ ವಾದ್ಯಗಳನ್ನು ನುಡಿಸಿರಿ ಎನ್ನುತ್ತಾ.. ಕೊರೋನ :ಗೋ’ ಕೊರೋನ ‘ಗೋ’ ಎನ್ನುವ ಸಲಹೆ ನೀಡುತ್ತಿದ್ದಾರೆ. ಇವರು ಈ ಶತಮಾನದ ಶತ ಮೂರ್ಖರೋ.. ಅಥವಾ ಹೊಣೆಗೇಡಿಗಳೋ ಎನ್ನುತ್ತಿವೆ ನಾಟಕದ ಒಂದೊಂದು ನುಡಿಗಳು.

ಬರಿಗೈ ಕಾಲದಲ್ಲಿ ಜನರಿಗೆ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ನೆರವು ನೀಡುವ ಜವಾಬ್ದಾರಿಯಿಂದ ಆಡಳಿತ ವರ್ಗ ನುಣುಚಿಕೊಳ್ಳುತ್ತಿರುವ ಪರಿಯನ್ನು ಸೂಚ್ಯವಾಗಿ ಈ ಮೂಲಕ ತಿಳಿಸಿದ್ದಾರೆ.

ಶವ ಸಂಸ್ಕಾರಕ್ಕೆ ಅವಕಾಶ ನೀಡದ ಅಮಾನವೀಯ ಘಟನೆಗಳು ನಡೆದವು. ಆಡಳಿತವು ನಿರ್ಲಜ್ಜ ಮತ್ತು ನಿರ್ಲಕ್ಷ್ಯತನ ತೋರಿತು. ಜನರಿಗೆ ಸರಿಯಾದ ಮಾರ್ಗದರ್ಶನ ಮತ್ತು ಜಾಗೃತಿ, ಮಾಹಿತಿಯನ್ನು ಒದಗಿಸದೆ ದಿಗ್ಭ್ರಾಂತಗೊಳಿಸಿ ಪ್ರಾಣ ಭೀತಿಯಲ್ಲಿ ಮುಳುಗಿಸಿತು. ಕೊರೊನ ವ್ಯಥೆಯನ್ನು ಪೆಣಂಭೂತವಾಗಿಸಿತು.

ಕಾರ್ಮಿಕರು ಆರ್ಥಿಕತೆಯ ಬೆನ್ನೆಲುಬು. ನೂರಾರು, ಸಾವಿರಾರು ಕಿ.ಮೀ ಬರಿಗಾಲಿನಲ್ಲಿ ನಡೆದು ಮನೆಗೆ ಹಿಂದಿರುಗುವ ಪ್ರಸಂಗ ಎದುರಾಗಿ ಹಸಿವಿನಿಂದ ಅಸುನೀಗಿದವರೆಷ್ಟೋ? ಮಿಕ್ಕಿದ್ದ ಅರುಕಲು ಮುರುಕಲು ರೊಟ್ಟಿ ಸೇವಿಸಿ, ಕನಸುಗಳನ್ನು ಹೊತ್ತ ಮನಸುಗಳು ರೈಲು ಗಾಲಿಗಳಿಗೆ ಬಲಿಯಾದವು.

ಈ ದೇಶದ ಜಿಡಿಪಿ ಯ ಸಂಕೇತವಾದ ಕಾರ್ಮಿಕರನ್ನು ಹೊತ್ತು ಚಲಿಸಬೇಕಾದ ರೈಲು ಚಕ್ರಗಳು ಅವರ ನೆತ್ತರನ್ನು ಮೆತ್ತಿಕೊಂಡವು. ಭಾರತದ ಆರ್ಥಿಕತೆಯಂತೆಯೇ ರುಂಡ ಮುಂಡಗಳು ಜರ್ಜರಿತವಾದವು.

ಆದರೆ ಜನಪ್ರತಿನಿಧಿಗಳ ಕಲ್ಲು ಮನಸ್ಸುಗಳು ಮಾತ್ರ ಜಾಣ ಕುರುಡನ್ನು ಪ್ರದರ್ಶಿಸಿದವು. ಕಾರ್ಮಿಕರನ್ನು ಕಾಡು ಮಿಕಗಳಂತೆ ಕಂಡವರು ಮನುಷ್ಯರೋ …
ಮೃಗಗಳೋ.. ಎಂಬುದನ್ನು ಕೇಳುತ್ತಿವೆ ಜೀವಪರ ಮನಸ್ಸುಗಳು.

ಇಲ್ಲಿ ಜಾತಿ ಧರ್ಮಕ್ಕಿರುವ ಪ್ರಾಮುಖ್ಯತೆ ಪ್ರೀತಿಗಿಲ್ಲ. ಇನ್ನು ಮಾನವೀಯತೆಗೆ ನೆಲೆ ಎಲ್ಲಿದೆ ಎಂದು ಈ ನಾಟಕ ಪ್ರಶ್ನಿಸುತ್ತಿದೆ. ನಮ್ಮ ನಿಮ್ಮೊಳಗಿನ ಮನಸ್ಸನ್ನು, ಮುಖವಾಡ ಧರಿಸಿದ ಜನಾಧಿಕಾರವನ್ನು, ಕಪಟತನ ಹೊತ್ತ ಇಡೀ ಪ್ರಭುತ್ವವನ್ನು!


ಹರೀಶ್ ಕಮ್ಮನಕೋಟೆ

ನಾಟಕ: ಒಳಿತು ಮಾಡು ಮನುಸಾ
ರಚನೆ: ಶಶಿಧರ್ ಭಾರಿಘಾಟ್
ನಿರ್ದೇಶನ: ಮಾಲತೇಶ್

ಯೋಗ ಮಾಧವ ದೇವಾಲಯಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ

ಚಿಕ್ಕನಾಯಕನಹಳ್ಳಿ; ಮೈಸೂರು ಪುರಾತತ್ವ ಇಲಾಖೆ ವತಿಯಿಂದ ಶೆಟ್ಟಿ ಕೆರೆ ಯೋಗ ಮಾಧವ ದೇವಾಲಯಕ್ಕೆ ಭೇಟಿ ನೀಡಿ ಸ್ಥಳ ಪರೀಶಿಲನೆ ಮಾಡಿ ನಂತರ ಹತ್ತಿರದಲ್ಲೇ ಇದ್ದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಹ ಭೇಟಿ ಮಾಡಿದರು.

ಶೀಘ್ರದಲ್ಲೇ ದೇವಾಲಯದ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಒಪ್ಪಿಕೊಂಡರು.

ಪಂಚಾಯತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಶೆಟ್ಟಿಕೆರೆ ಗ್ರಾಮದ ಜನರು ಸಹಕರಿಸಿದರೆ ಮುಂದಿನ ದಿನಗಳಲ್ಲಿ ಯೋಗಮಾಧವ ದೇವಾಲಯವು ಪ್ರವಾಸಿತಾಣವಾಗುವ ಎಲ್ಲ ಲಕ್ಷಣಗಳಿವೆ ಎಂದು ಹೇಳಿದರು.

ಮಹಮ್ಮದ್ ಹುಸೇನ್ (ಗುಂಡ )ಹಾಗೂ ಅವರ ಸಂಗಡಿಗರು ಮನವಿ ಮೇರೆಗೆ ಭೇಟಿ ನೀಡಿದ್ದಾಗಿ ಹೇಳಿದರು.

ಸಂತೆಯೊಳಗೊಂದು ಮನೆಯ ಮಾಡಿ

0

ಶಶಿಕುಮಾರ ವೈ. ಬಿ


ವಿಶಾಲ ಬಯಲಿನೊಳು ಹರಡಿದೆ ಸಂತೆ,
ಸಂತೆಯೊಳಗಣ ಅಲೆದು ಬಸವಳಿಯೆ ಕೂತೆ.
ಬರೀ ಕೂಗಾಟ, ಧೂಳು, ಕಸ-ಕಡ್ಡಿ, ನಾತಗಳು.
ಇರುವರು ತರಹೇವಾರಿ ಜನ
ಮಾರಾಟಕ್ಕಿಟ್ಟಿರುವ ಸರಕುಗಳಂತೆಯೇ.
ತಾಜಾ ಮನದ ಸುಗುಣರು,
ಅಂತೆಯೇ ಎದೆ ಕೊಳೆತ ಪಿಸುಣರು.

ನೈಜತೆಗೆ ಕವಡೆಯ ಕಿಮ್ಮತ್ತಿಲ್ಲ,
ಇರುವುದೆಲ್ಲವೂ ಕೃತಕತೆಗೆ.
ಒಳಗೆ ಹುಳಿತು ಕೊಳೆತಿದ್ದರೂ
ಹೊರಗೆಲ್ಲ ಮೆರುಗಿನ ಅಲಂಕಾರ.
ಸ್ವಂತಿಕೆಗೆ ಮೈಯೊಡ್ಡಿದವು ಉಳಿಯಬೇಕಷ್ಟೇ, ಮೂಲೆಯಲ್ಲಿ,
ಇಲಿ ಹೆಗ್ಗಣಗಳ ಸಹವಾಸದಲ್ಲಿ.

ಎಳೆಸುತಿರುವೆ ಸುಮ್ಮನೆ ಕೂರಲು
ನಿರುಮ್ಮಳನಾಗಿ, ಎಲ್ಲಾದರೊಂದೆಡೆ.
ಬಿಡುವರೇ ಸಂತೆಯನ್ನು ಕೊಂಬ ಬಂದವರು?
ತಳ್ಳಾಡಿ, ನೂಕಾಡಿ, ಕೈತಿವಿದು, ಕಾಲ್ತುಳಿದು
ಹಿಂದಕ್ಕೆಳೆದು ಮುಂದೆ ನುಗ್ಗಲು
ಪಾಪ ಅವರಿಗದೇನೋ ತವಕ!
ಇದ ನೋಡಿದ್ದೇ ಆಯ್ತು ಈ ತನಕ.

ಭಯ ಕಾಡುತ್ತದೆ ಒಮ್ಮೊಮ್ಮೆ.
ಸಂತೆಯವರಂತೆಲ್ಲಾಗುತ್ತೇನೋ ಎಂದು,
ಇವರಂಟಿಸಿಕೊಂಡ ಕೆಸರು ಅದೆಲ್ಲಿ
ಮೈಗತ್ತಿ ಮುತ್ತುತ್ತದೋ ಎಂದು,
ಅವರ ಬೆವರು ಎಲ್ಲಿ ಸೋಂಕುತ್ತದೋ ಎಂದು,
ತೊಟ್ಟು ಬಂದ ಬಿಳಿ ಬಟ್ಟೆ ಕೊಳಕಾಗೀತೆಂದು,
ಸಂತೆಯೊಳು ಕಳೆದು ಹೋಗಿಬಿಟ್ಟೇನೆಂದು.

ಮಲ್ಲಾಘಟ್ಟಕೆರೆ ತುಂಬಾ ನೀರು: ಇನ್ನಾಗಲಿದೆ ಪ್ರವಾಸಿ ತಾಣ

Publicstory.in


Turuvekere: ತಾಲ್ಲೂಕಿನ ಮಲ್ಲಾಘಟ್ಟ ತುಂಬಾ ನೀರು.‌ಹೇಮಾವತಿ ನೀರಿನಿಂದ ತುಂಬಿರುವ ಕೆರೆಯನ್ನು ನೋಡುವುದೇ ಚೆಂದ.

ಇಂತ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಮಸಾಲ ಜಯರಾಮ್ ಕೆರೆಯನ್ನು ಜಿಲ್ಲೆಯ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ಹಾಗು ಗಂಗಾಧರೇಶ್ವರ ದೇವಾಲಯಕ್ಕಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುವುದೆಂದು ತಿಳಿಸಿದರು.

ತಾಲ್ಲೂಕಿನ ಮಲ್ಲಾಘಟ್ಟಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದರು. ಮಲ್ಲಾಘಟ್ಟಕೆರೆ ಮೈದುಂಬಿ ಹರಿಯುತ್ತಿದ್ದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು. ಅದಕ್ಕೆ ಪೂರಕವಾದ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ ಎಂದರು.

ಕೆರೆಯ ಹಿಂಭಾಗದಲ್ಲಿರುವ ಗಂಗಾಧರೇಶ್ವರ ದೇವಾಲಯದ ಪಕ್ಕದಲ್ಲಿ ಹೊರಾಂಗಣ ಸ್ಟೇಜ್ ಹಾಗು ಚೌಟರಿ ಭವನ ನಿರ್ಮಿಸಿ ಗ್ರಾಮಸ್ಥರು ಹಾಗು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು‌‌ ಎಂದು ತಿಳಿಸಿದರು.

ಆನೇಕೆರೆ ಪಂಚಾಯಿತಿ ಅಧಿಕಾರಿಗಳು ಮಲ್ಲಾಘಟ್ಟಕೆರೆಗೆ ಬರುವ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್, ತುಂಗುದಾಣ ಸೇರದಂತೆ ಹಲವು ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು ಅದರಿಂದ ಬರವ ಶುಲ್ಕದ ಹಣದಿಂದ ಕೆರೆ ನೈರ್ಮಲ್ಯ ಹಾಗೂ ನಿರ್ವಹಣೆಯನ್ನು ಮಾಡಲೆಂದು ಸಲಹೆ ನೀಡಿದರು.

ಕೆರೆ ಏರಿಯ ಮೇಲಿರುವ ಗಿಡಗೆಂಟೆಗಳನ್ನು ತೆರವುಗೊಳಿಸುವುದು ಹಾಗು ಉತ್ತಮ ರಸ್ತೆ ನಿರ್ಮಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಇದೇ ವೇಳೆ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಚಿದಾನಂದ್, ರವಿ, ಆಶಾರಾಣಿ, ಮುಂಖಡರುಗಳಾದ ಕೊಂಡಜ್ಜಿವಿಶ್ವನಾಥ್, ಬಿ.ಎಸ್.ದೇವರಾಜ್, ವಿ.ಟಿ.ವೆಂಕಟರಾಂ, ಸೋಮಣ್ಣ, ಸುರೇಶ್, ದಿನೇಶ್ ಮತ್ತು ಗ್ರಾಮಸ್ಥರು‌ ಉಪಸ್ಥಿತರಿದ್ದರು.