Tuesday, May 5, 2026
Google search engine
Home Blog Page 172

ನಮ್ಮ ಭಾಷೆ ನಮ್ಮ ಪ್ರತಿಷ್ಠೆ

ತುಮಕೂರು


ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ. ೬೫ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು ಉದ್ಘಾಟಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕನ್ನಡ ನಾಡು ನುಡಿಯನ್ನು ಪ್ರೀತಿಸಬೇಕು. ನಮ್ಮ ಭಾಷೆ ನಮ್ಮ ಪ್ರತಿಷ್ಠೆ ಅದರ ಉಳಿವಿಗಾಗಿ ಕನ್ನಡಿಗರೆಲ್ಲರೂ ಮಾತೃಭಾಷೆಯನ್ನು ಮಾತನಾಡಬೇಕು ಎಂದರು.

ನಂತರ ಕನ್ನಡ ಉಪನ್ಯಾಸಕಿಯಾದ ಡಾ. ಶ್ವೇತಾರಾಣಿ ಹೆಚ್ ಎಲ್ಲಾ ಉಪನ್ಯಾಸಕರಿಗೂ ಕನ್ನಡ ಉಳಿಸುವ ಬಳಸುವ ಪ್ರತಿಜ್ಞಾವಿಧಿ ಬೋಧಿಸಿದರು.

ಕನ್ನಡ ಉಪನ್ಯಾಸಕರಾದ ಡಾ. ವಾಸುದೇವ ಬಿ ಎ ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿ ಜಗತ್ತಿನೆಲ್ಲೆಡೆ ಪಸರಿಸಬೇಕು. ಭಾಷೆ ನಮ್ಮ ಮನೆ ಮನಗಳಲ್ಲಿ ಬೆಳಗುವ ಮೂಲಕ ತಾಯಿ ಭುವನೇಶ್ವರಿಯ ಋಣ ತೀರಿಬೇಕು ಎಂದರು.

ಉಪನ್ಯಾಸಕರಾದ ಸಿದ್ದಲಿಂಗಯ್ಯ ಅವರು ಕನ್ನಡ ಭಾಷೆ ನಾಡು ನುಡಿಗಾಗಿ ಶ್ರಮಿಸಿದ ಆಲೂರು ವೆಂಕಟರಾಯರು, ಹರ್ಡೇಕರ್ ಮಂಜಪ್ಪ ಹಾಗೂ ಮುದವೀಡರನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಕರಾದ ಗಂಗಾಧರ್, ಶಶಿಕುಮಾರ್ ವೈ ಬಿ, ಅನಿತಾ, ಹರೀಶ್,ಲಾವಣ್ಯ, ಜಿ ಎಂ, ಮತ್ತಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತುರುವೇಕೆರೆ: ಇತಿಹಾಸ ಸೃಷ್ಟಿಸಿದ ಬಿಜೆಪಿ

ತುರುವೇಕೆರೆ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಂಜನ್ಕುಮಾರ್, ಉಪಾಧ್ಯಕ್ಷರಾಗಿ ಕೆ.ಭಾಗ್ಯಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣ ಪಂಚಾಯಿತಿ ನೂತನ ಸದಸ್ಯರ ಆಯ್ಕೆಗೆ 2019 ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್5, ಬಿಜೆಪಿ6, ಕಾಂಗ್ರೆಸ್2 ಒಂದು ಪಕ್ಷೇತರರು ಸೇರಿದಂತೆ ಒಟ್ಟು 14 ಸದಸ್ಯರು ಗೆಲುವು ಸಾದಿಸಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು 8 ಸದಸ್ಯರ ಬಲವನ್ನು ಬಿಜೆಪಿ ಹೊಂದಿತ್ತು.

ಪ.ಪಂ ಚುನಾವಣೆಯ ನಿಗಧಿಯಂತೆ ಗುರುವಾರ ಅಧ್ಯಕ್ಷ ಗಾದಿಗೆ 7ನೇ ವಾರ್ಡ್ನ ಅಂಜನ್ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ನ ಕೆ.ಭಾಗ್ಯಮಹೇಶ್ ಇಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಇಬ್ಬರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಿದರು. 3 ಪಕ್ಷಗಳ ಎಲ್ಲ ಸದಸ್ಯರುಗಳೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಂಸದ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು. ಮೊದಲಸಂಭ್ರಮ: ಶಾಸಕ ಮಸಾಲ ಜಯರಾಂ ನೇತೃತ್ವದ ಬಿಜೆಪಿ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡುಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರ ಆಯ್ಕೆಯ ಹೆಸರು ಘೋಷಣೆಯಾಗುತ್ತಿದ್ದಂತೆ ಪಟಾಕಿಸಿ ಸಿಡಿಸಿದರು.

ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದು ಎಲ್ಲರಿಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಕಾರ್ಯಕರ್ತರು, ಸಂಸದ ಹಾಗು ಶಾಸಕರ ಪರ ಘೋಷಣೆಗಳನ್ನು ಕೂಗಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸಂಸದರಿಗೆ ಹೂಮಾಲೆ ಹಾಕಲು ಕೋವಿಡ್ನ ಸಾಮಾಜಿಕ ಅಂತರ ಮರೆತು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ನೂಕಲುನೂಕಲು ಉಂಟಾದ್ದರಿಂದ ಸಂಸದ ಜಿ.ಎಸ್.ಬಸವರಾಜು ಕಾರ್ಯಕರ್ತರಿಂದ ಬಿಡಿಸಿಕೊಂಡು ಹೊರಹೋಗಲು ಹೆಣಗಾಡಿ ಕೊನೆಗೆ ಮುಖಂಡರೊಬ್ಬರ ಸಹಾಯ ಪಡೆದು ತಮ್ಮ ಕಾರಿನಲ್ಲಿ ಕುಳಿತು ಮೆರೆವಣಿಗೆಯಲ್ಲಿ ಸಾಗಿದರು.

ಇದಾದ ಮೇಲೆ ತೆರದ ವಾಹನದಲ್ಲಿ ಶಾಸಕ ಮಸಾಲಜಯರಾಂ, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಬಾರೀ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದೇ ವೇಳೆ ವಿವಿಧ ಪಕ್ಷಗಳ ಕೆಲ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರುಗಳು ಹೂಮಾಲೆ ಹಾಕಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ಆಶಾರಾಣಿ, ಚಿದಾನಂದ್, ಕೆ.ರವಿ, ಪ್ರಭಾಕರ್, ಮೇಘನಸುನಿಲ್, ಚುನಾವಣಾ ಸಿಬ್ಬಂದಿ ಪಿ.ಕಾಂತರಾಜು ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಂ, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ನರೇಂದ್ರ, ಮತ್ತು ಇನ್ನಿತರರು ಇದ್ದರು.

ಶಿರಾ ಉಪಚುನಾವಣೆ: ಹಗಲುಗಳ್ಳರು ಬಂದವ್ರೆ ಹುಷಾರು…!

0

ನಟರಾಜಪ್ಪ, ರೈತ ಕಾರ್ಯಕರ್ತ


ಗೌರವಾನ್ವಿತ ಹಿರಿಯರೆ, ತರುಣ ತರುಣಿಯರೆ ಹಾಗೂ ಎಲ್ಲಾ ಗೆಳೆಯರೆ,

ಹುಷಾರು! ಶಿರಾ ತಾಲ್ಲೂಕಿಗೆ ಹಗಲುಗಳ್ಳರು ಬಂದವ್ರೆ. ಇವರು ನಿಮ್ಮ ಮುಂದೆ
ಬಣ್ಣ ಬಣ್ಣದ
ಮಾತುಗಳನ್ನಾಡಿ ನಿಮ್ಮ ಓಟುಗಳನ್ನು ಕಿತ್ತುಕೊಂಡು ಓಡಿ ಹೋಗುವವರು.

ತಿಳಿಯಿರಿ! ಇದು ದೇಶದ ಚುನಾವಣೆ ಅಲ್ಲ. ರಾಜ್ಯದಲ್ಲಿ ಸರ್ಕಾರ ರಚಿಸುವಂತಹದ್ದೂ
ಅಲ್ಲ. ಇದು
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ. ಶಿರಾ ತಾಲ್ಲೂಕಿನ ಜನರಿಗೆ ಸಂಬಂಧಿಸಿದ
ಚುನಾವಣೆ.

ರೈತರ ಜೀವ-ಜೀವನ ಮಳೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದರೂ
ತಲೆಕೆಡಿಸಿಕೊಳ್ಳದೆ, ಸರ್ಕಾರದ

ಮಂತ್ರಿಗಳು, ಆಡಳಿತ ಪಕ್ಷದ ಲೀಡರುಗಳು ಶಿರಾಕ್ಕೆ ಬಂದಿರುವರು. ಇವರು
ಯಾವತ್ತೂ ನಮ್ಮ
ತಾಲ್ಲೂಕಿನ ಕಷ್ಟಕಾರ್ಪಣ್ಯಗಳಿಗೆ ಆದವರಲ್ಲ. ಅಷ್ಟೇ ಅಲ್ಲ. ನಮ್ಮ ನೆಲ
ಜಲಗಳ ಬಗ್ಗೆ ತಿರಸ್ಕಾರ
ಮಾಡಿದವರು. ರೈತರನ್ನು ಬೀದಿಗೆ ತಳ್ಳಲು ತಂತ್ರಗಳನ್ನು
ಹೆಣೆಯುತ್ತಿರುವ ಇಂತಹವರಿಗೆ ಓಟು
ಕೊಡುವುದೂ ‘ಹಗ್ಗ ಕೊಟ್ಟು ಕೈಕಾಲು ಕಟ್ಟಿಸಿಕೊಳ್ಳವುದೂ’ ಒಂದೇ ಅಲ್ಲವೆ?

ನಮ್ಮ ತಾಲ್ಲೂಕಿನಲ್ಲಿ ಏನು ಸೌಲಭ್ಯಗಳಿವೆ, ಏನು ಇಲ್ಲ, ಏನೇನು ಸೌಲಭ್ಯಗಳು
ಆಗಬೇಕು ಎಂದು
ತೀರ್ಮಾನಿಸುವವರು ನಾವೇ ಅಲ್ಲವೇ? ನಮ್ಮ ನೆಲ ಜಲಗಳನ್ನು ರಕ್ಷಿಸುವ
ಅನುಭವಸ್ಥರು,ಸಮರ್ಥರು, ಧೈರ್ಯಶಾಲಿಗಳು ನಮ್ಮಲ್ಲಿ ಯಾರಿದ್ದಾರೆ ಎಂದು ತಿರ್ಮಾನಿಸುವವರು ನಾವೇ
ಅಲ್ಲವೆ?

ನಿಮಗೆ ಗೊತ್ತಿದೆ: ಶ್ರೀ ಟಿ.ಬಿ.ಜಯಚಂದ್ರ ಅವರು ಪಣ ತೊಟ್ಟು ನಿಂತು ಶಿರಾ
ತಾಲ್ಲೂಕಿಗೆ ಹೇಮಾವತಿ ಹರಿಸಿದರು. ನಮ್ಮದು ಶಾಶ್ವತ ಬರಗಾಲ ಪ್ರದೇಶ. ತೀರ
ಇತ್ತೀಚಿನವರೆಗೆ ನಮ್ಮ ಜನರಿಗೆ,
ದನಕರುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾಗಿತ್ತು,

ಅನೇಕ ರೈತರು
ಇದ್ದ ಬದ್ದ ಜಮೀನುಗಳನ್ನು
ಮಾರಿಕೊಂಡರು. ಹೇಮಾವತಿ ನೀರೆ ಏನಾದ್ರೂ ಬರದಿದ್ದರೆ ಬಹಳಷ್ಟು ಜನ
ಊರನ್ನು ಬಿಡಬೆಕಾಗ್ತಿತ್ತು.
ಶ್ರೀಯುತರು ಎಲ್ಲಾ ಎಡರು ತೊಡರುಗಳನ್ನು ಮೆಟ್ಟಿ ನಿಂತು, ಎಲ್ಲಾ
ವಿರೋಧಗಳನ್ನು ಎದುರಿಸಿ ಹಂತ
ಹಂತವಾಗಿ ಮೊದಲು ಕಳ್ಳಂಬೆಳ್ಳ ಕೆರೆಗೆ ಹೇಮಾವತಿ ನೀರು ಹರಿಸಿದರು.
ನಂತರ ಶಿರಾ ಕೆರೆಯನ್ನು
ತುಂಬಿಸಿದರು. ಇದರಿಂದ ಶಿರಾ ನಗರದ ಲಕ್ಷಾಂತರ ನಾಗರಿಕರ ನೀರಿನ ದಾಹ
ತಣಿಯಿತು. ಒಣಗಿ ಹೋಗಿದ್ದ

ನೂರಾರು ಹಳ್ಳಿಗಳ ಪಂಚಾಯಿತಿ ಬೋರುಗಳೂ, ರೈತರ ನೀರಾವರೀ
ಬೋರುಗಳು ನಮಗೆಲ್ಲಾ ನೀರನ್ನು
ಕರುಣಿಸಿದವು.

ಶ್ರೀ ಟಿ.ಬಿ.ಜಯಚಂದ್ರ ಅವರು ರಾಜಕೀಯಕ್ಕೆ ಮಾತ್ರ ಬೆಲೆ ಕೊಡದೇ ರೈತರ
ಬದುಕಿಗೂ ಬೆಲೆ
ಕೊಡುವವರು ಎಂಬುದನ್ನು ನಾವು ನೋಡಿದ್ದೇವೆ. ಮದಲೂರು ಕೆರೆಗೆ ನೀರು
ಹರಿಸಲು ಅವರು ಮಾಡಿದಶಪಥವೇ ನಮ್ಮ ಕಣ್ಣ ಮುಂದಿದೆ. ರೈತರ ಋಣವನ್ನು ತೀರಿಸುವ ಬಹಳ ದೊಡ್ಡಯೋಜನೆಯನ್ನು ಅವರು
ಕಾರ್ಯಗತಗೊಳಿಸಿದರು. ರೈತ ದ್ರೋಹಿಗಳು ಅನೇಕ ಸಬೂಬುಗಳನ್ನು ಹೇಳಿಕೊಂಡು
ಮದಲೂರು ಕೆರೆಗೆ ನೀರುಬರದಂತೆ ತಡೆದಿರುವುದು ಗೊತ್ತಿದೆ.

ಹೇಮಾವತಿ ಕಾವೇರಿಗೆ ಸೇರಿದ ನದಿ. ನಿಮ್ಮದು ಕೃಷ್ಣ ಕೊಳ್ಳದ
ಪ್ರದೇಶ, ನಿಮಗೆ ಹೇಗೆ ನೀರುಬಿಡುವುದು ಎಂದು ವಿರೋಧಿಸಿದ ಜನತಾದಳ, ಬಿಜೆಪಿಯವರು ಇವತ್ತು ತಮ್ಮ
ದುಷ್ಕøತ್ಯಗಳನ್ನು ಮುಚ್ಚಿಟ್ಟು,ಸುಳ್ಳುಗಳನ್ನು ಹೇಳಿಕೊಂಡು ಶಿರಾದಲ್ಲಿ ಬೀಡುಬಿಟ್ಟಿದ್ದಾರೆ. ಪ್ರತಿವರ್ಷ ನೀರು
ಬಿಡುವಾಗಲೂ ಶಿರಾಕ್ಕೆ ನೀರುಬಿಡದಂತೆ ಧರಣಿ ಮಾಡಿದವರು, ನಾಲೆ ಒಡೆದವರು, ನೀರು
ಪೋಲಾಗುತ್ತೆ ಅಂತ ರಾಜಕೀಯ ಮಾಡಿದವರು ಶಿರಾ ಜನತೆಗೆ ದ್ರೋಹ ಮಾಡಿದವರಲ್ಲವೆ? ಇವರನ್ನು ಶಿರಾದ ಜನ
ನಂಬುವುದಿಲ್ಲ.

– ಮೊಮ್ಮಗನನ್ನು ಮಂಡ್ಯದಲ್ಲಿ ಗೆಲ್ಲಿಸಿಕೊಳ್ಳಲು ಮಂಡ್ಯದ ಸ್ವಾಭಿಮಾನಿ
ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೆ, ಇನ್ನಿಲ್ಲದ ಕಿರುಕುಳ ನೀಡಿದ ಹಾಸನದ ಗೌಡರು ಶಿರಾದಲ್ಲಿ ಮಹಿಳೆಗೆ ಕರುಣೆ
ತೋರಿಸುವುದು ನಾಟಕವಲ್ಲದೆ ಮತ್ತೇನು?

– ಜನರಿಗೆ ಅನ್ನ ನೀರು ಕಾಣಿಸದ ಆಡಳಿತ ಪಕ್ಷ ಸುಮಾರು ಒಂದು ವರ್ಷದಿಂದ
ಅಶಕ್ತರಿಗೆ ಪೆನ್ಷನ್ ಕೂಡ ನೀಡದೆ, ರಾಜ್ಯದಲ್ಲಿ ಜಾರಿಯಲ್ಲಿದ್ದ ಜನ ಕಲ್ಯಾಣ ಯೋಜನೆಗಳನ್ನು
ಕಸದ ಬುಟ್ಟಿಗೆ
ಹಾಕಿರುವುದು ಜನದ್ರೋಹವÀಲ್ಲದೆ ಮತ್ತೇನು?

– ಸರ್ಕಾರದಲ್ಲಿ, ಕೈಗಾರಿಕೆಗಳಲ್ಲಿ, ದೂರವಾಣಿ ಇಲಾಖೆಯಲ್ಲಿ,
ರೈಲ್ವೆಯಲ್ಲಿನ ಕೋಟ್ಯಾಂತರ
ಉದ್ಯೋಗಗಳನ್ನು ಮಾರಿಕೊಂಡ ಆಡಳಿತ ಪಕ್ಷದವರು ಶಿರಾದಲ್ಲಿ ಏನನ್ನು
ಮಾರುವರೋ?

– ಜಾತಿ ಜಾತಿಗಳ ನಡುವೆ, ಸಮುದಾಯಗಳ ನಡುವೆ ದ್ವೇಷ ಬಿತ್ತಿ
ಅಧಿಕಾರ ಬೆಳೆಯುವ
ದ್ವೇಷಾಸುರರಿಗೆ ಸರ್ವಜನಾಂಗದ ಶಾಂತಿಯ ತೋಟ ಶಿರಾದಲ್ಲಿ ಏನು ಕೆಲಸ?

ಈಗ ಹೇಳಿ: ತಾಲ್ಲೂಕಿನ ಪ್ರತಿಯೊಬ್ಬ ಪ್ರಜೆಗೂ ಬೇಕಾದ ನೀರು, ಉದ್ಯೋಗ,
ಗೌರವಗಳನ್ನು ತಂದುಕೊಡುವ
ಜನ ನಾಯಕ ಯಾರು? ಶಿರಾದ ಜನರಿಗೆ ದ್ರೋಹ ಬಗೆದು, ಚುನಾವಣೆ
ಸಮಯದಲ್ಲಿ ಬಣ್ಣದ
ಮಾತುಗಳನ್ನಾಡಿ ಓಟು ಕಿತ್ತುಕೊಂಡು ಓಡಿಹೋಗುವವರು ಯಾರು?

ನಮ್ಮ ತಾಲ್ಲೂಕಿನ ಜವಾಬ್ದಾರಿ ನಮ್ಮದೇ.


ಇಲ್ಲಿಯ ಅಭಿಪ್ರಾಯ ಪೂರ್ಣವಾಗಿ ಲೇಖಕರದು. ಇದು Publicstoryಯದಲ್ಲ.
ಮೊ: 9482385820

ಚಿಕ್ಕನಾಯಕನಹಳ್ಳಿ ಠಾಣೆಗೆ ನೂತನ ಸಬ್ ಇನ್ಸ್ಪೆಕ್ಟರ್

Publicstory. in


ಚಿಕ್ಕನಾಯಕನಹಳ್ಳಿ: ಪೊಲೀಸ್ ಠಾಣೆಗೆ ಹರೀಶ್ ನೂತನ ಸಬ್ ಇನ್ಸ್ಪೆಕ್ಟರ್ ಆಗಿ ಬಂದಿದ್ದಾರೆ.

ಕೋವಿಡ್ ಸಮಯದಲ್ಲಿ ಕೊರೋನ ಜಾಗೃತಿ ಮುಡಿಸುವಲ್ಲಿ ಹಾಗೂ ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಲ್ಲಿ ಇವರ ಪಾತ್ರ ಹೆಚ್ಚಾಗಿದೆ.

ಚಿಕ್ಕನಾಯಕನಹಳ್ಳಿ: ಜನರೋ ಜನ…ಮರೆತರಲ್ಲ ಮಾಸ್ಕ್

Publicstory. in


ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಶನಿವಾರ ಎಲ್ಲಿ ನೋಡಿದರಲ್ಲಿ ಜನ. ಆಯುಧ ಪೂಜೆ ಕಾರಣ ಇಡೀ ಪಟ್ಟಣದಲ್ಲಿ ಪೂಜಾ ಸಾಮಾಗ್ರಿಗಳನ್ನು ಕೊಳ್ಳಲು ಜನರು ಮುಗಿಬಿದ್ದರು.

ಕೊರೊನಾ ಭಯವಿಲ್ಲದೇ ಹಬ್ಬ ಆಚರಣೆಯ ಆತುರ ತೋರಿದರು.

ಸಂತೆಯಲ್ಲಿ ವ್ಯಾಪಾರವು ತುಂಬಾಜೋರಾಗಿತ್ತು ಲ. ಆದರೆ ಮಾಸ್ಕ್ ಧರಿಸದೆ ಇದ್ದುದ್ದು ವಿಪರ್ಯಾಸ.

ಎಲ್ಲಿ ನೋಡಿದರು ಹೂವು, ಬಾಳೆಕಂದು, ಕುಂಬಳಕಾಯಿದೇ ಆಟ. ಎಂದಿನಂತೆ ಚಿಕ್ಕನಾಯಕನಹಳ್ಳಿಯಲ್ಲಿ ಸೋಮವಾರ ಸಂತೆ ನಡೆಯುತ್ತದೆ ಆದರೆ ಇಂದು ಹಬ್ಬದ ವಾತಾವರಣ ಕಂದು ಸೋಮವಾರದ ಸಂತೆ ಎಂದೆನಿಸಿತು.

ಶಿರಾ ಉಪಚುನಾವಣೆ: ಮಹಿಳೆಯರ ಮನ ಗೆಲ್ಲುತ್ತಿರುವ ರಂಜಿತಾ!

Publicstory. in


ಶಿರಾ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಶಿರಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಸೊಸೆ ರಂಜಿತಾ ಸಂತೋಷ್ ಹೆಂಗಳೆಯರ ಗಮನ ಸೆಳೆಯುತ್ತಿದ್ದಾರೆ.

ಮಹಿಳೆಯರ ಗುಂಪು ಕಟ್ಟಿಕೊಂಡು ಮನೆ ಮನೆ ಸುತ್ತಿರುವ ರಂಜಿತಾ ಅವರು ಮಹಿಳೆಯರು ಸಿಕ್ಕ ತಕ್ಷಣ ಮೂರು ವರ್ಷದ ಹಿಂದಿನ ಕಷ್ಟದ ದಿನಗಳಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ.

ಶಿರಾ ನಗರದಲ್ಲಿ ವಿಪರೀತ ನೀರಿನ ಸಮಸ್ಯೆಗೆ ಮಹಿಳೆಯರು ಹೈರಾಣಾಗಿದ್ದರು. ಆಗಿನ ಸಮಸ್ಯೆ ನೆನಪು ಮಾಡಿಕೊಂಡರೇನೆ ಮೈಯೆಲ್ಲ ನಡುಗುತ್ತದೆ. ಒಂದು ಕೊಡ ನೀರಿಗೆ ಪರಿತಪಿಸುತ್ತಿದ್ದ ದಿನಗಳು ಬದುಕನ್ನು ಮಹಿಳೆಯರು ಮರೆಯಲು ಹೇಗೆ ಸಾಧ್ಯ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತೆ. ಅದನ್ನೇ ರಂಜಿತಾ ಅವರು ಚುನಾವಣಾ ಅಸ್ತ್ರವಾಗಿಸಿದ್ದಾರೆ. ನೀರು ಕೊಟ್ಟವರನ್ನು ಮರೆಯಲು ಹೇಗೆ ಸಾಧ್ಯ ಎಂದು ಹೋದಕಡೆಲೆಲ್ಲ ಮಹಿಳೆಯರು ಕೇಳುತ್ತಾರೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತೆ ರೇಖಾ.


ಜಯಚಂದ್ರ ಸರ್ ಅವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಭಗೀರಥರು. ಅಷ್ಟೇ ಅಲ್ಲ ಶಿಕ್ಷಣ, ಆರೋಗ್ಯ, ಕೈಗಾರಿಕೆಗಳನ್ನು ಶಿರಾಗೆ ತಂದಿದ್ದಾರೆ. ಅವರು ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಶಿರಾ ಜನರಿಗೆ ಗೊತ್ತು.

ಷಣ್ಮುಖಪ್ಪ, ಕಾಂಗ್ರೆಸ್ ಹಿರಿಯ ಮುಖಂಡ


ಹನಿ ನೀರಿಗೂ ಮಹಿಳೆಯರು ಕಣ್ಣೀರು ಹಾಕುತ್ತಿದ್ದರು. ಆ ಸಮಸ್ಯೆ ಬಗೆಹರಿಸಿದರು. ಮಹಿಳೆಯರಿಗೆ ಅದನ್ನು ನೆನಪು ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ. ಯಾರ ಮನೆಗೆ ಹೋದರೂ ಅದನ್ನೆ ನೆನಪು ಮಾಡಿಕೊಳ್ಳುತ್ತಾರೆ. ನೀರಿನ ವಿಷಯವನ್ನೇ ಮಹಿಳೆಯರ ಬಳಿ ಪ್ರಧಾನವಾಗಿ ಪ್ರಸ್ತಾಪಿಸಿ ಓಟು ಕೇಳುತ್ತಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ ನ ಹಿರಿಯ ಮುಖಂಡ ಷಣ್ಮುಖಪ್ಪ.

ಮಹಿಳಾ ಮುಖಂಡರಾದ ಸುಮಾ ಹೊನ್ನೇಶ್, ರೇಖಾ, ಮಂಜುಳಾ ಮತ್ತಿತರರು ರಂಜಿತಾ ಅವರಿಗೆ ಸಾಥ್ ನೀಡಿದ್ದಾರೆ .

ದೇಶದಲ್ಲಿ ಕೊರೊನಾಕ್ಕಿಂತ ಭಯಾನಕ ರೋಗ, ಸತ್ತವರ ಸಂಖ್ಯೆ 6 ಲಕ್ಷ

0

ನಾಗೇಶ ಹೆಗಡೆ


[ಕೋವಿಡ್‌-19ರಿಂದಾಗಿ ಇದುವರೆಗೆ ನಮ್ಮ ದೇಶದಲ್ಲಿ 12345 ಜನ ಸತ್ತಿದ್ದಾರೆ ಅಂದುಕೊಳ್ಳಿ. ಇದೇ 100 ದಿನಗಳ ಅವಧಿಯಲ್ಲಿ CVD ಕಾಯಿಲೆಯಿಂದ ಭಾರತದಲ್ಲಿ ಅಂದಾಜು ಆರು ಲಕ್ಷ ಜನ ಸತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಅದರ ಸದ್ದೇ ಇಲ್ಲ. ಅಂದಹಾಗೆ, ಇದು ನಾಗೇಶ ಹೆಗಡೆ ಲೇಖನ)

CVD ಅಂದರೆ ಕಾರ್ಡಿಯೊ ವಾಸ್ಕುಲರ್ ಡಿಸೀಸ್. ಅಂದರೆ ಹೃದ್ರೋಗ. ಈ ಕಾಯಿಲೆಯಿಂದ ಪ್ರತಿ ದಿನ ನಮ್ಮಲ್ಲಿ ಸರಾಸರಿ ಆರು ಸಾವಿರ ಜನರು ಸಾಯುತ್ತಾರೆ.

ಕಳೆದ ಹತ್ತು ವರ್ಷಗಳಿಂದ ಸಿವಿಡಿ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಸ್ಟೆಂಟ್ ತಯಾರಿಸುವವರ ವೆಬ್ ಸೈಟ್‌ಗಳನ್ನು ನೋಡಿದರೆ ಹೃದ್ರೋಗಿಗಳ ಸಂಖ್ಯೆ ಹತ್ತು ಪಟ್ಟು ಏರಲಿದೆ ಎಂದು ಖುಷಿಯಿಂದೆಂಬಂತೆ ಸಾರುತ್ತಾರೆ.

ಹೃದ್ರೋಗಗಳ ಹೆಚ್ಚಳಕ್ಕೆ ಮುಖ್ಯ ಕಾರಣ ಏನೆಂದರೆ ಕಳಪೆ ಖಾದ್ಯತೈಲ, ವ್ಯಾಯಾಮವಿಲ್ಲದ ದಿನಚರಿ, ಮತ್ತು ಆತಂಕ. ಈ ಮೂರು ಹೆಚ್ಚಾದಾಗ ಬರುವ ಬೊಜ್ಜು, ಬಿಪಿ, ಕೊಲೆಸ್ಟೆರಾಲ್ ಶೇಖರಣೆ, ಲಿವರ್ನಲ್ಲಿ ಉತ್ಪನ್ನವಾಗುವ LP(a) ಎಂಬ ಕೊಬ್ಬು ಇವೆಲ್ಲ ಸೇರಿ ರಕ್ತನಾಳಗಳಲ್ಲಿ ಗಂಟುಮೂಟೆ ಇಡುತ್ತವೆ. ಬ್ಯಾಂಕಿನಲ್ಲಿ ಡಿಪಾಸಿಟ್ ಇಟ್ಟ ಹಾಗೆ. ಹೃದಯ ಪಾಪ, ಏದುಸಿರು ಬಿಡುತ್ತ ರಕ್ತವನ್ನು ಪಂಪ್ ಮಾಡಿ ಮಾಡಿ ಹೈರಾಣಾಗುತ್ತದೆ.
ಈ ಮೂರರ ಜೊತೆಗೆ ತಂಬಾಕು ಸೇವನೆ ಇದ್ದರೆ ಅದೂ ಹೃದಯ ಬಡಿತವನ್ನು ಹೆಚ್ಚಿಸುತ್ತ ಇನ್ನಷ್ಟು ಕಷ್ಟ ಕೊಡುತ್ತಿರುತ್ತದೆ.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಇವೆಲ್ಲವುಗಳ ಬಳಕೆ ಹೆಚ್ಚಾಗಿದೆ. ಮನೆಯಲ್ಲಿ ಕೂತು ಮಾಡಿದ್ದೆಲ್ಲ ಇದೇ ತಾನೆ? (ಸಿಗರೇಟು ಪೂರೈಕೆ ಮಾಡಲೆಂದು 60 ಲಕ್ಷ ಲಂಚ ಪಡೆವರದ್ದೂ ಇದೇ ಗತಿ). ಲಾಕ್‌ಡೌನ್ ಮುಗಿದ ನಂತರ ಇವೆಲ್ಲ ಇನ್ನೂ ಹೆಚ್ಚಾಗಿದೆ. ರಸ್ತೆಗಳಲ್ಲಿ ಪಕೋಡಾ ಮಾರುವವರಿಗೆ ಗಿರಾಕಿಗಳು ಹೆಚ್ಚಾಗಿದ್ದಾರೆ. ಬೇಕರಿಗಳಲ್ಲಿ ಮೊದಲಿಗಿಂತ ಜಾಸ್ತಿ ನೂಕು ನುಗ್ಗಲು.

ತಿಂಡಿ-ಊಟಗಳಲ್ಲಿ ಟ್ರಾನ್ಸ್‌ ಫ್ಯಾಟ್ (ಕಳಪೆ ತೈಲ) ಬಳಕೆ ಜಾಸ್ತಿ ಇದ್ದರೆ ಹೃದಯಕ್ಕೆ ಡಬಲ್ ಟ್ರಬಲ್ ಎನ್ನುತ್ತಾರೆ ತಜ್ಞರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಐದು ಲಕ್ಷ ಜನರು ಇದರಿಂದಾಗಿಯೇ ಸಾಯುತ್ತಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಎಲ್ಲ ದೇಶಗಳೂ ಇದನ್ನು ನಿಷೇಧಿಸಬೇಕೆಂದು ಕರೆ ಕೊಟ್ಟಿದೆ.
ಬಹಳಷ್ಟು ದೇಶಗಳು (ಕೆನಡಾ, ಬ್ರಿಟನ್, ಸಿಂಗಪೂರ್, ಸ್ವೀಡನ್, ಯುಎಸ್, ಸಿಂಗಪೂರ್ ಇತ್ಯಾದಿ) ಆಗಲೇ ಇದರ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಬಂಧನೆಗಳನ್ನು ಹಾಕಿವೆ. ನಮ್ಮಲ್ಲಿ ಅಂಥ ನಿಬಂಧನೆ ಜಾರಿಗೆ ಬರುವುದೇ ಕಷ್ಟ.
ಬಳಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸಬೇಡಿ ಎಂದು ರಸ್ತೆ ಪಕ್ಕದಲ್ಲಿ ಪಕೋಡಾ ಕರಿದು ಮಾರುವವನ ಮೇಲೆ ಎಂಥ ನಿಬಂಧನೆ ಜಾರಿಗೆ ಬಂದೀತು? ಬೇಕರಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅವುಗಳ ಪಕ್ಕದಲ್ಲೇ ಔಷಧ ಅಂಗಡಿಗಳೂ ಹೆಚ್ಚುತ್ತಿವೆ. ಗೋಭಿ ಮಂಚೂರಿಗೆ ಬೇಡಿಕೆಯೂ ಹೆಚ್ಚುತ್ತಿದೆ.

ಬೇರೆ ದೇಶಗಳಲ್ಲಿ ನಿರ್ಬಂಧಿಸಲಾದ 57 ಬಗೆಯ ಕೀಟನಾಶಕ ವಿಷಗಳು ನಮ್ಮಲ್ಲಿ ಸಲೀಸಾಗಿ ಮಾರಾಟವಾಗುತ್ತವೆ. ಹೂಕೋಸು (ಗೋಭಿ) ಬೆಳೆಯಲು ಭಾರೀ ವಿಷದ ಸಿಂಪಡನೆ ಆಗಲೇಬೇಕು. ಅತ್ತ ಬೆಳೆದವನಿಗೂ ವಿಷ ಸಿಂಚನ, ಇತ್ತ ಬಳಸುವವನಿಗೂ ಕಂಟಕ.
ಚಿಕ್ಕವರು, ದೊಡ್ಡವರು, ನಗರದವರು, ಹಳ್ಳಿಯವರು ಅವರಿವರೆನ್ನದೆ ಯಾರನ್ನು ಬೇಕಾದರೂ ಬಲಿತೆಗೆದುಕೊಳ್ಳುತ್ತದೆ ಈ ಕೊರೊನರಿ ಹಾರ್ಟ್ ಡಿಸೀಸ್.

ಇದಕ್ಕೂ ಕೊರೊನಾ ಸಂಬಂಧ ಇದೆ. ದೇಹಕ್ಕೆ ಶುದ್ಧರಕ್ತವನ್ನು ಪೂರೈಸುವ ರಕ್ತನಾಳಗಳು ಹೃದಯವನ್ನು ಕಿರೀಟದಂತೆ ಸುತ್ತಿಕೊಂಡಿದ್ದರಿಂದ ಇದಕ್ಕೆ ಕೊರೊನರಿ ಆರ್ಟರಿ ಎನ್ನುತ್ತಾರೆ.
ಕೊರೊನಾ ಕುರಿತು ಗಾಬರಿ ಹುಟ್ಟಿಸುವ ಅಂಕಿಸಂಖ್ಯೆಗಳನ್ನೂ ಗ್ರಾಫಿಕ್‌ಗಳನ್ನೂ ತೋರಿಸುತ್ತ ಭಯಾನಕ ದೃಶ್ಯಗಳನ್ನು ಬಿತ್ತರಿಸುವವರು ಸದ್ಯಕ್ಕೇನೊ ದೇಶದ ಗಮನವನ್ನು ಗಡಿಯ ಕಡೆ ಸೆಳೆಯುತ್ತಿದ್ದಾರೆ. ರಸ್ತೆ ಪಕ್ಕ ಗೋಭೀ ಮಂಚೂರಿ ತಿನ್ನುತ್ತ ನಾವೆಲ್ಲ ಚೀನೀ ವಸ್ತುಗಳನ್ನು ನಿಷೇಧಿಸುವ ಚರ್ಚೆಯಲ್ಲಿ ತೊಡಗಿದ್ದೇವೆ. ಚಾನೆಲ್‌ಗಳ ಕೆಲವರು ರಕ್ತ ಹೆಪ್ಪುಗಟ್ಟುವಂಥ ಗ್ರಾಫಿಕ್‌ಗಳನ್ನು ಹಾಕುತ್ತಿದ್ದಾರೆ.

ಯಾಕೆ ಯಾರೂ ಖಾದ್ಯ ತೈಲಗಳ ಗುಣಮಟ್ಟದ ಬಗ್ಗೆ, ಆಹಾರದಲ್ಲಿರುವ ವಿಷಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ದಿನಕ್ಕೆ ಆರೇಳು ಸಾವಿರ ಸಾವಾಗುತ್ತಿದ್ದರೂ ಯಾರೂ ಯಾಕೆ ಹೃದ್ರೋಗವನ್ನು ತಡೆಗಟ್ಟಬಲ್ಲ ಸರಳ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ? ಯಾಕೆ ಫೋನ್ ನಲ್ಲಿ ಎಚ್ಚರಿಕೆಯ ಮಾತುಗಳು ಬರುತ್ತಿಲ್ಲ?
ಯಾಕೆಂದರೆ CVDಯನ್ನು ತಡೆಗಟ್ಟುವಲ್ಲಿ ಮತ್ತು ಎಕ್ಸ್-ರೇ, ಇಸಿಜಿ, ಆಂಜಿಯೊಗ್ರಾಮ್, ಕೊರೊನರಿ ಬೈಪಾಸ್‌ ಅಥವಾ ಸ್ಟೆಂಟ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ಯಾವ ಲಾಭವೂ ಇಲ್ಲ. ಅದಕ್ಕೇ ಸಿವಿಡಿಗೆ ಯಾರೂ ಕ್ಯಾರೇ ಅನ್ನುವವರಿಲ್ಲ.
ಬದಲಿಗೆ ಕೊರೊನಾ ಮಾರಿಯ ಬಗ್ಗೆ ಬ್ರೆಕಿಂಗ್ ನ್ಯೂಸ್ ಕೊಟ್ಟು ಕೊಟ್ಟು ಹೃದಯ ಬಡಿತವನ್ನು ಹೆಚ್ಚಿಸುವ ಯತ್ನಗಳೇ ಎದ್ದು ಕಾಣುತ್ತಿವೆ. ಒಂದು ದಿನ ಈ ಸುದ್ದಿಯೂ ನೇಪಥ್ಯಕ್ಕೆ ಸೇರುತ್ತದೆ.

ನೋಡುತ್ತಿರಿ, ಇಂದು ಸಿವಿಡಿಗೆ ಬಂದ ಸ್ಥಿತಿಯೇ ಮುಂದೆ ಕೋವಿಡ್‌-19ಕ್ಕೂ ಬರಲಿದೆ.

ಶಿರಾ ಉಪಚುನಾವಣೆ: ನಾಳೆಯಿಂದಲೇ ಇವರ ಮನೆಬಾಗಿಲಿಗೆ ಬರಲಿದೆ ಮತಗಟ್ಟೆ..!

Publicstory. in


ತುಮಕೂರು: ನಾಳೆಯಿಂದೇ (ಅ.25, ಭಾನುವಾರದಿಂದ) ಶಿರಾ ಕ್ಷೇತ್ರದ ಐದು ಸಾವಿರ ಮತದಾರರಿಗೆ ಮನೆ ಬಾಗಿಲಿಗೆ ಬರುವ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ.ಶಿರಾ ಉಪ ಚುನಾವಣೆ ಮತದಾನ ನ.3. ಇದೇನಪ್ಪ ಇವರೇನು ವಿಶೇಷೇನಾ, ಚುನಾವಣಾ ಪ್ರಚಾರ ಮುಗಿಯುವ ಮೊದಲೇ ಮತದಾನ ಮಾಡಲು ಎಂದು ಹುಬ್ಬೇರಿಸಬೇಡಿ.ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಸಲ ಇವರ ಮನೆ ಬಾಗಿಲಿಗೆ ಮತಗಟ್ಟೆ ಹೋಗುತ್ತಿದೆ, ಅದೂ ಚುನಾವಣೆ ಮತದಾನ ದಿನಾಂಕ ಇನ್ನೂ ವಾರ ಇರುವ ಮೊದಲೇ ಇವರೆಲ್ಲ ಅವರಿಗೆ ಬೇಕಾದವರಿಗೆ ಮತ ಹಾಕಲಿದ್ದಾರೆ.ಇದು ಅಂಚೆ ಮತದಾನಕ್ಕಿಂತಲು ಭಿನ್ನ.

ಪ್ರತಿ ಮನೆಗೂ ಮತಗಟ್ಟೆಯೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿ ಮತ ಹಾಕಿಸಿಕೊಂಡು ಬರಲಿದ್ದಾರೆ.ಅದೇನಪ್ಪ, ಹೀಗೆ ಎಂದು ಅಚ್ಚರಿಪಡಬೇಡಿ. ಇದು ಯಾರಿಗೆಲ್ಲ, ಏಕಾಗಿ ಮಾಡಲಾಗುತ್ತಿದೆ ಎಂಬುದನ್ನು ಮುಂದೆ ಓದಿ.’ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂಬುದು ಚುನಾವಣಾ ಆಯೋಗದ ಉದ್ದೇಶ.

ಕೋವಿಡ್-19 ಸಂಕಷ್ಟದಲ್ಲಿ ಮೊದಲಬಾರಿಗೆ ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆಯಲ್ಲಿ ಕೋವಿಡ್ ಪಾವಿಟಿವ್ ವ್ಯಕ್ತಿ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಸುಗಮವಾಗಿ ಮತ ಚಲಾಯಿಸಲು ಚುನಾವಣಾ ಆಯೋಗ ಇಂತಹ ಅವಕಾಶ ನೀಡಿರುವುದು ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿರಾ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ನಡೆಯುತ್ತಿರುವ ಮತದಾನಕ್ಕೆ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಂಪೂರ್ಣ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದು, ಇದಕ್ಕೂ 15 ದಿನಗಳ ಮೊದಲೇ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಂಡುಬರುವ ಕೋವಿಡ್ ಪಾಸಿಟಿವ್, 80ವರ್ಷ ಮೇಲ್ಪಟ್ಟ ಹಾಗೂವಿಕಲಚೇತನರ ಮಾಹಿತಿಯನ್ನು ಚುನಾವಣಾಧಿಕಾರಿಗಳಿಗೆ ನೀಡಿ, ಅವರಲ್ಲಿ ಸ್ವ-ಇಚ್ಛೆಯಿಂದ ಮತಗಟ್ಟೆ ಕೇಂದ್ರಕ್ಕೆ ಖುದ್ದಾಗಿ ಬಂದು ಮತದಾನದಂದೇ ಮತ ಚಲಾಯಿಸಲು ಒಪ್ಪಿರುವ ಹಾಗೂ ತಿರಸ್ಕರಿಸಿರುವ ಮತದಾರರ ಪಟ್ಟಿಯನ್ನು ನೀಡಿ, ಅಂತಿಮವಾಗಿ ಪಟ್ಟಿ ತಯಾರಿಸಲಾಗಿದೆ.

ಇದೇ ತಿಂಗಳ 25 ರಿಂದ 27ರವರೆಗೆ ಮೊದಲನೇ ಸುತ್ತಿ‌ನ ಮತದಾನ ನಡೆಯಲಿದ್ದು, ದಿ:29 ರಿಂದ 31ರವೆರೆಗೆ ಎರಡನೇ ಸುತ್ತಿನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿ ಪತಗಟ್ಟೆಯಲ್ಲೂ ಮತಗಟ್ಟೆ ಹಂತದ ಅಧಿಕಾರಿಗಳು ಸಂಬಂಧಿಸಿದ ಮತದಾರರಿಗೆ ಮೊದಲೇ ತಿಳುವಳಿಕೆ ಪತ್ರ ತಲುಪಿಸಿದ್ದು, ಅದರಲ್ಲಿ ಮತದಾನ ಅಧಿಕಾರಿಗಳು ಮನೆಗೆ ಬರುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗಿದೆ.

ಅದರಂತೆ ಮತದಾರರು ಮನೆಯಲ್ಲಿ ಹಾಜರಿದ್ದು ನಿಯಮಗಳ ಅನುಸಾರ ಘೋಷಣಾ ಪತ್ರಕ್ಕೆ ಸಹಿ ಹಾಕಿ, ವಯಸ್ಸಿನ ದಾಖಲೆ ಹಾಗೂ ಸೂಕ್ತ ಗುರುತಿನ ದಾಖಲೆ ಸಲ್ಲಿಸಿ, ಮತದಾನ ಮಾಡಬಹುದಾಗಿದೆ.

ಪ್ರತಿ ಮತದಾರನಿಗೂ 10-12 ನಿಮಿಷ ಸಮಯ ನಿಗದಿ ಮಾಡಿದ್ದು, ಮತದಾನದ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

ತಂಡದಲ್ಲಿ ಇಬ್ಬರು ಮತದಾನ ಅಧಿಕಾರಿಗಳು, ಬಿಎಲ್ಓ, ಒಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ವಿಡಿಯೋಗ್ರಾಫರ್ ಸೇರಿದಂತೆ 5 ಜನ ಸಿಬ್ಬಂದಿ ಇರುವರು.

ಈ ಸಂದರ್ಭದಲ್ಲಿ ಕೋವಿಡ್ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯ.ಒಂದು ತಂಡಕ್ಕೆ 150 ಮತದಾರರ ಪಟ್ಟಿ ನೀಡಲಿದ್ದು, ಪ್ರತಿದಿನ 50 ಮತದಾರರಿಂದ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಂದಿನ ಮತದಾನದ ಬಗ್ಗೆ ಅಂದು ಸಂಜೆಯೇ ಮಾಹಿತಿ ನೀಡುವುದು. ಒಂದು ವೇಳೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರ ಹಾಜರಿರಲಿಲ್ಲವಾದರೆ, ಮತ್ತೊಂದು ಸುತ್ತಿನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಅಂದೂ ಸಹ ಮತದಾನ ಮಾಡದಿದ್ದರೆ ನವೆಂಬರ್ 3 ರಂದು ನಡೆಯುವ ಮತದಾನ ಸಂದರ್ಭದಲ್ಲಿ ಮತದಾನ ಮಾಡಲು ಅರ್ಹತೆಯನ್ನು ಕಳೆದುಕೊಳ್ಳುವರು.

ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿರುವ ಚುನಾವಣಾ ಆಯೋಗ, ಇಂತಹ ಮತದಾರರಿಗೆ ನೀಡುವ ಮತಪತ್ರಗಳನ್ನು ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಎಂದು ಪರಿಗಣಿಸಿ, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ PB PWD, PB 80+ ಎಂಬ SEAL ಹಾಕಲಾಗುತ್ತದೆ.

ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಒಬ್ಬರು ಆರೋಗ್ಯ ಸಿಬ್ಬಂದಿಯ, ಪಿಪಿಇ ಕಿಟ್ ಧರಿಸಿ, ಸುರಕ್ಷತಾ ಕ್ರಮಗಳೊಂದಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಈ ರೀತಿಯ ಮತದಾನ ವೇಳೆ ಎಲ್ಲಾ ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಎಸ್.ಓ.ಪಿ. (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಸರಿಸಬೇಕು.

ಒಂದು ವೇಳೆ ಮತದಾನದ ಸಂದರ್ಭದಲ್ಲಿ ಮಳೆ ಸುರಿಯುತ್ತಿದ್ದರೆ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿ, ಮನೆಯ ಒಳಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 330 ಮತಗಟ್ಟೆಗಳಲ್ಲಿ 4941 ಮತದಾರರು ಹಿರಿಯ ನಾಗರಿಕರು, 3566 ವಿಕಲಚೇತನರು ಹಾಗೂ 200 ಮಂದಿ ಮತದಾರರು ಕೋವಿಡ್-19 ಪಾಸಿಟಿವ್ ವ್ಯಕ್ತಿಗಳನ್ನು ಗುರುತಿಸಿದ್ದು, ಅವರಲ್ಲಿ 2790 ಹಿರಿಯ ನಾಗರಿಕರು, 2093 ಮಂದಿ ವಿಕಲಚೇತನರು, 136 ಮಂದಿ ಕೋವಿಡ್ ಬಾಧಿತ ಮತದಾರರು ಸೇರಿದಂತೆ ಒಟ್ಟು 5019 ಮಂದಿ ತಾವಿರುವಲ್ಲಿಯೇ ಮತದಾನ ಮಾಡುತ್ತಿದ್ದು, ಈ ಬಾರಿಯ ಉಪಚುನಾವಣೆಯ ವಿಶೇಷವಾಗಿದೆ.

ಪಕ್ಕದ ಆಂಧ್ರಕ್ಕೆ ಬೇಕಿದ್ದರೆ ಕರ್ನಾಟಕಕ್ಕೆ ಏಕೆ ಬೇಕಿಲ್ಲ: ದೇವೇಗೌಡ ಗುಡುಗು

Publicstory. in


Baraguru: ಚುನಾವಣೆ ಮುಗಿಯುವವರೆಗೂ ಶಿರಾದಲ್ಲೆ ಮೊಕ್ಕಾಂ ಹೂಡುತ್ತೇನೆ. ಜನರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡುವೆ. ಮನೆಮನೆಗೂ ಭೇಟಿ ನೀಡುವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಬರಗೂರಿನಲ್ಲಿ ಮಳೆಯ ನಡುವೆಯೂ ಚುನಾವಣಾ ಪ್ರಚಾರ ಸಭೆಯಲ್ಲಿ‌ ಮಾತನಾಡಿದ ಅವರು ಅ ಸತ್ಯನಾರಾಯಣ್ ಅಕಾಲಿಕ ನಿಧನ ಹೊಂದಿದರು. ಅವರು ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತ. ಬೇರೆ ಪಕ್ಷದವರು ಹಣದ ಆಸೆ ತೋರಿಸಿದರು ಪಕ್ಷ ತೊರೆಯಲಿಲ್ಲ. ಆದರೆ ಇಲ್ಲೊಬ್ಬರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಾಡಿದರು ಪಕ್ಷ ತೊರೆದು ಹೋಗಿದ್ದಾರೆ. ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿವೆ. ನಮಗೆ ಪ್ರಾದೇಶಿಕ ಪಕ್ಷ ಏಕೆ ಬೇಡ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ. ಆದರೆ ಕರ್ನಾಟಕಕ್ಕೆ ಪ್ರಧಾನಿಯವರು ಮಾಡುತ್ತಿರುವ ತಾರತಮ್ಯದ ಬಗ್ಗೆ ಯುವಕರು ಚಿಂತಿಸಲಿ ಎಂದರು.

ಶಿರಾ, ಪಾವಗಡ ಈ ಭಾಗದ ನೀರಾವರಿ ಸಮಸ್ಯೆ ಬಗ್ಗೆಯೂ ನನಗೆ ಅರಿವಿದೆ. ನನ್ನನ್ನು ತುಮಕೂರಿಗೆ ಕರೆದುಕೊಂಡು ಬಂದು ಸೋಲಿಸಿದ ಬಗ್ಗೆಯೂ ನನಗೆ ಗೊತ್ತಿದೆ. ಇವೆಲ್ಲವಕ್ಕೂ ನನ್ನ ಬಳಿ ಉತ್ತರವಿದೆ ಎಂದರು.

ರೈತರಿಗಾಗಿ ಸತ್ಯನಾರಾಯಣ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರೈತರಿಗೆ ನ್ಯಾಯ ಸಿಕ್ಕ ನಂತರ ಮಂತ್ರಿ ಸ್ಥಾನ ಸ್ವೀಕರಿಸಿವೆ ಎಂದರು. ನಾನೇ ಮನವೊಲಿಸಿದರು ಸಹ ಅವರು ಮಂತ್ರಿ ಆಗಲಿಲ್ಲ. ಅಂತಹ ನಿಷ್ಠಾವಂತ ಕಾರ್ಯಕರ್ತ ಅವರು. ಇದಕ್ಕಾಗಿಯೇ ಅವರ ಪತ್ನಿಗೆ ಟಿಕೆಟ್ ನೀಡಿರುವೆ ಎಂದರು.

ನನ್ನ ಕಾಲದಲ್ಲಿ, ಕುಮಾರಸ್ವಾಮಿ ಕಾಲದಲ್ಲಿ ರೈತರಿಗೆ ಏನು ಕೊಟ್ಟಿದ್ದೇವೆ‌. ಸಿದ್ದರಾಮಯ್ಯ, ಬೇರೆ ಮುಖ್ಯಮಂತ್ರಿಗಳು ಏನು ಕೊಟ್ಟಿದ್ದಾರೆ ಎಂಬುದು ಚರ್ಚೆಯಾಗಲಿ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ಚಂದ್ರಶೇಖರ್ ಅವರಿಗೆ ಹೇಳಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಕಲ್ಪಿಸಿದೆ. ಹೀಗಾಗಿ ಇಂದು ಹದಿನೈದು ಮಂದಿ ಶಾಸಕರಾಗುತ್ತಿದ್ದಾರೆ. ಇಬ್ಬರು ಸಂಸದರಾಗುತ್ತಿದ್ದಾರೆ. ನಾನು ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ.

ಗೊಲ್ಲ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮೊದಲ ಸಲ ಮಂತ್ರಿಯಾಗಿ ಮಾಡಿದೆ. ದೇವರಾಜ್ ಅರಸ್ ಅವರ ಬಳಿಕ ಸಾಮಾಜಿಕ ನ್ಯಾಯ ಸಾಧ್ಯವಾಗಿದ್ದು ನಾನು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದಾಗ. ಆದರೆ ಇದನ್ನು ನನ್ನ ವಿರೋಧ ಪಕ್ಷದ ಸ್ನೇಹಿತರು ಹೇಳಲ್ಲ ಅಷ್ಟೇ ಎಂದು ಹೇಳಿದರು.

ಅಮ್ಮಾಜಮ್ಮ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿದ್ದೆ. ಆದರೂ ಕಾಂಗ್ರೆಸ್ ನವರು ದುಂಬಾಲು ಬಿದ್ದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು ಎಂದರು.

ಸಭೆಯಲ್ಲಿ ಅಭ್ಯರ್ಥಿ ಅಮ್ಮಾಜಮ್ಮ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸತ್ಯಪ್ರಕಾಶ್ ಇದ್ದರು.

ಮಾರುತಿ ಮಾನ್ಪಡೆ ಶ್ರಮಿಕ ವರ್ಗದ ನಿಜವಾದ ಹೀರೋ

Publicstory. in


ತಿಪಟೂರು : ಕೋವಿಡ್ ಸೊಂಕಿಗೆ ತುತ್ತಾಗಿ ಅಗಲಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಮಾರುತಿ ಮಾನ್ಪಡೆಯರು ಇಡೀ ರಾಜ್ಯದ ಶ್ರಮಿಕ ವರ್ಗಗಳ ಪಾಲಿನ ಹೀರೋ ಆಗಿದ್ದರು ಎಂದು ಸೌಹಾರ್ದ ತಿಪಟೂರು ಸಂಘಟನೆಯ ಕಾರ್ಯದರ್ಶಿ ಅಲ್ಲಾಬಕಾಶ್ ಎ. ಹೇಳಿದರು.

ಇಲ್ಲಿ ಬುಧವಾರ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಮಾನ್ಪಡೆಯವರು ರಾಜ್ಯವ್ಯಾಪಿ ರೈತರ ಮತ್ತು ಕಾರ್ಮಿಕರ ಸಂಘಟನೆಯನ್ನು ಕಟ್ಟಲು ಶ್ರಮಿಸಿದವರು. ಅವರ ಅವಿರತ ಶ್ರಮದ ಪಲ ರಾಜ್ಯದಾದ್ಯಂತ ಕೇವಲ 500 ರಿಂದ 1000 ರೂಪಾಯಿಗೆ ಕೇಲಸ ಮಾಡುತ್ತಿದ್ದ ಗ್ರಾಮ ಪಂಚಾಯತಿ ನೌಕರರು ಇಂದು ಸುಂದರ ಬದುಕು ಕಟ್ಟಿಕೊಳ್ಳಲು ಸಾದ್ಯವಾಯಿತು. ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಆರ್ ಎಸ್ ಚನ್ನಬಸವಣ್ನ ನವರು 1975 ರಲ್ಲಿ ಪ್ರಥಮ ಬಾರಿಗೆ ಎಸ್ ಎಫ್ ಐ ಕಾರ್ಯಕ್ರಮ ಆಯೋಜಿಸಿದ್ಸಾಗ ಅವರ ಪರಿಚಯವಾಯಿತು. ಅವರು ಸದಾ ಹಸನ್ಮುಕಿಯಾಗಿರುತ್ತಿದ್ದರು. ಅದರೆ ಹೋರಾಟದ ನೇತೃತ್ವ ಕೊಟ್ಟಾಗ ಅವರ ಹೋರಾಟ ರಾಜೀರಹಿತವಾಗಿತ್ತು. ಸದಾ ರಾಜ್ಯವ್ಯಾಪಿ ಚಳುವಳಿ ಕಟ್ಟಲು ಹಗಲಿರುಲು ದುಡಿದ ಅವರು ಇಷ್ಟು ಬೇಗ ವಿಶ್ರಾಂತಿಗೆ ಹೊಗಿದ್ದು ನಂಬಲು ಹಾಗುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದರು.

ಅವರು ಹಾಕಿಕೊಟ್ಟ ಹೋರಾಟದ ದಾರಿಯನ್ನು ಮುನ್ನೆಡಸಬೇಕಿದೆ ಎಂದರು.

ಪ್ರಗತಿಪರ ಚಿಂತಕ ಉಜ್ಜಜ್ಜೆ ರಾಜಣ್ಣ ಮಾತನಾಡಿ, ಬೆರಳೆಣಿಕೆಯಷ್ಟು ಇರುವ ಪ್ರಾಮಾಣಿಕ ಹೋರಾಟಗಾರರ ಸಾವು ನಿಜಕ್ಕು ಸಹಿಸಲು ಸಾದ್ಯವಿಲ್ಲ. ಜನಪರ ಹೋರಾಟಗಳಿಂದ ಅವರು ಎಷ್ಟರ ಮಟ್ಟಿಗೆ ಜನಮನ್ನಣೆ ಪಡೆದಿದ್ದರು ಎಂಬುದಕ್ಕೆ ಇಂದು ಪತ್ರಿಕೆಗಳೆ ಸಾಕ್ಷಿಯಾಗಿವೆ ‌ಎಂದು ಹೇಳಿದರು.

ರೈತ ಮತ್ತು ಕಾರ್ಮಿಕ ವರ್ಗಕ್ಕೆ ಮಾರುತಿ ಮಾನ್ಪಡೆಯವರ ಅಗಲಿಕೆ ಅಪಾರ ನೋವು ತಂದಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಶ್ರದ್ದಾಂಜಲಿ ಸಭೆಯಲ್ಲಿ ಹಸಿರು ಸೇನೆ ಯ ಆದ್ಯಕ್ಷರಾದ ತಿಮ್ಲಾಪುರ ದೇವರಾಜ್ , ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಎತ್ತಿನಹೋಳೆ ಹೋರಾಟ ಸಮಿತಿಯ ಮನೋಹರ್ ಪಟೇಲ್, ಮುಸ್ಲಿಂ ಮುಖಂಡರಾದ ಷಪೀಉಲ್ಲಾ ಷರೀಫ್ ಪಂಚಾಯ್ತಿಯ ಬಸವಲಿಂಗಪ್ಪ, ಹೇಮಣ್ಣ ಮತ್ತು ರೈತ ಮುಖಂಡರಾದ ಗೌರಿಶಂಕರ್ ತಿಮ್ಲಾಪುರ ಮಲ್ಲಿಕಾರ್ಜುನ್ ಸಿಡ್ಲೇಹಳ್ಳಿ ಇದ್ದರು.