Thursday, May 7, 2026
Google search engine
Home Blog Page 174

ಗೋಡೆಕೆರೆ ಶ್ರೀಗಳು ಲಿಂಗೈಕ್ಯ

C N Halli: ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಶ್ರೀ ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮಿಗಳು ಭಾನುವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

ನಾಳೆ ಬೆಳಗ್ಗೆ 10 ಗಂಟೆ ಸಮಯಕ್ಕೆ ಸಿದ್ದರಾಮ ತಪೋವನದಲ್ಲಿ ಶ್ರೀಗಳ ಅಂತ್ಯಸಮಸ್ಕಾರ ನೆರವೇರಲಿದ್ದು ಭಕ್ತಾದಿಗಳು ಮತ್ತು ಮಠಾಧೀಶರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗಾಂಧೀಜಿ ಕನಸಿನ ರಾಮ ರಾಜ್ಯ ಯಾವುದು?

1

ಶಿಲ್ಪಾ ಎಂ


ಗಾಂಧೀಜಿ ಕಂಡ ಕನಸು ಭಾರತ ರಾಮ ರಾಜ್ಯವಾಗ ಬೇಕು ಎಂದು. ಆದರೆ ಇಲ್ಲಿ ರಾಮ ಮಂದಿರ ಕಟ್ಟಲು ಅಷ್ಟೇ ಸಾಧ್ಯವಾಗುತ್ತಿರುವುದು ರಾಮ ರಾಜ್ಯವಾಗಲೂ ಸಾಧ್ಯವಿಲ್ಲ ಕಾರಣ ವಷ೯ಕ್ಕೆ ಬೆಳಕಿಗೆ ಬರುವ ಮತ್ತು ಬಾರದಿರುವ ಅದೆಷ್ಟುೂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರಗಳು ಸಾರಿ ಸಾರಿ ಹೇಳುತ್ತಿವೆ ಎಂದು ಸಾಧ್ಯವಿಲ್ಲ ರಾಮರಾಜ್ಯವಾಗಲು ಎಂದು.

ಹೆಣ್ಣುಮಕ್ಕಳಿಗೆ ಇರದೆ ಇದ್ದ ಸಮಾನತೆಯ ಹಕ್ಕು, ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕು ಶೋಷಣೆಯ ವಿರುದ್ದದ ಹಕ್ಕು ಇವೆಲ್ಲ ಇಂದು ಇರುವಂತಾಗಿದೆ. ಆದರೆ ಆಕೆಯನ್ನು ಆಕೆ ವ್ಯಾಘ್ರಗಳಿಂದ ರಕ್ಷಸಿಕೊಳ್ಳವ ಹಕ್ಕು ಮತ್ತು ಅವಳು ಧ್ಯೆಯ೯ವಾಗಿ ಆಚೆ ಹೋಗುವ ಹಕ್ಕು ಇಲ್ಲದಂತಾಗಿದೆ. ಅತ್ಯಚಾರಿಗಳಿಗೆ ಶಿಕ್ಷೆ ಕೊಡಿಸುವ ಹಕ್ಕು ಹೆಣ್ಣಿಗೆ ಇಲ್ಲದಂತಾಗಿದೆ.

ಅವಳನ್ನು ಅವಳು ರಕ್ಷಿಸಿಕೊಳ್ಳುವ ಮತ್ತು ಪುರಷರಿಂದ ಅವಳ ರಕ್ಷಣೆ ಸಾಧ್ಯವಿಲ್ಲ ಎಂದಾದರೆ ಮೇಲಿನ ಯಾವ ಹಕ್ಕುಗಳು ಪ್ರಯೋಜನಕ್ಕೆ ಇಲ್ಲವೆಂಬುದು ವಿಪಯ್ರಾಸ .

ಉತ್ತರ ಪ್ರದೇಶದಲ್ಲಿ ಮೊನ್ನೆ ಬೆಳಕಿಗೆ ಬಂದ ಅತ್ಯಾಚಾರ ಜಾತಿಯ ಹೆಸರಿಗೆ ತಳುಕು ಹಾಕಿಕೊಂಡು ನ್ಯಾಯ ಮುಚ್ಚಲ್ಪಟ್ಟಿದೆ ಎಂಬುದು ದುರಂತ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಆರಕ್ಷಕರ ಸೋಲು ಎಂಬುದು ಅರ್ಥ ವಾಗುತ್ತದೆ . ಈ ವ್ಯವಸ್ಥೆ ಸರಿ ಆಗುವವರೆಗೂ ಇಂತಹ ದುರಂತಗಳು ನೆಡೆಯುತ್ತಲೆ ಇರುತ್ತವೆ.

ಬೆಳಕಿಗೆ ಬಂದ ಕೆಲವೂ ಘಟನೆಗಳಿಗೆ ಮಾತ್ರ ಒಂದಷ್ಟು ಸಂಘಟನೆಗಳು ಹೆಣ್ಣುಮಕ್ಕಳು ಸಾಮಾನ್ಯರು ಒಟ್ಟಾಗಿ ಎಲ್ಲರೂ ಒಂದೆರಡು ದಿನ ಪ್ರತಿಭಟಿಸಲು ಅಷ್ಟೇ ಸಾಧ್ಯವಾಗುತ್ತಿದೆ .

ಬೆಳಕಿಗೆ ಬಾರದೆ ಅದೆಷ್ಟುೂ ಇಂತಹ ಕ್ರೂರ ಘಟನೆಗಳು ಕಂಡು ಕಾಣದಂತೆ ಮುಚ್ಚಿಹೋಗಿವೆ. ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸಾವ೯ಜನಿಕ ಸ್ಥಳಗಳಲ್ಲಿ ಕಾಮುಕರು ಕಿರಿ ಕಿರಿ ಉಂಟುಮಾಡಿರುತ್ತಾರೆ. ಸಣ್ಣ ಸಣ್ಣ ಕಿರಿ ಕಿರಿಗಳಿಂದ ಹೆಣ್ಣುಮಕ್ಕಳು ಪ್ರತಿಭಟಿಸಲು ಹೋರಾಡಲು ಸಿದ್ದರಾಗಬೇಕು ಇಲ್ಲವಾದರೆ ದೊಡ್ಧ ದುರಂತಗಳಿಗೆ ದಾರಿ ಮಾಡಿದಂತಾಗುತ್ತದೆ .

ಉತ್ತರ ಪ್ರದೇಶ ರಾಮ ಹುಟ್ಟಿದ ನಾಡು. ಇಲ್ಲಿ ಹುಟ್ಟಿದ ಸೀತೆಯರಿಗೆ ನಿಭ೯ಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಮತ್ತು ಆದ ದುರಂತಗಳಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ರಾಮ ಅದೆಷ್ಟು ನೊಂದಿರಬಹುದು.

ನಾವು ಅದೆಷ್ಟೆ ಪ್ರತಿಷ್ಠೆ ಮತ್ತು ನಂಬಿಕೆಗಳಿಗಾಗಿ ಮಂದಿರಗಳನ್ನು,ಮಸೀದಿಗಳನ್ನು ಕಟ್ಟಲು ಸುಮಾರು ವಷ೯ಗಳು ಹೋರಾಡಿ ಗೆದ್ದು ಜ್ಯೆ ರಾಮ್ ಎಂದರೆ ಕಾಮುಕರಿಗೆ ಸಿಕ್ಕು ನರಳಾಡಿದ ಮನಿಷಾಳ ಆತ್ಮ ಖುಷಿಪಡುವುದೆ ಅಥವಾ ನಾವು ನಂಬಿದ ರಾಮ ನೆಮ್ಮದಿಯಾಗಿ ಮಂದಿರದಲ್ಲಿ ಇರುವನೆ ?

ಕೊರೊನಾ ಕೆಲಸದ ನಡುವೆಯೂ ಗಾಂಧಿ ದಿನ ಸ್ವಚ್ಛತೆಯ ಕೆಲಸ ಮಾಡಿದ ವೈದ್ಯೆ: ಸಂತಸಗೊಂಡ ಜನರು

0

ಡಾ.ಶ್ವೇತಾರಾಣಿ ಎಚ್.


ತುಮಕೂರು: ತುಮಕೂರು, ಗುಬ್ಬಿ ತಾಲ್ಲೂಕಿನ ಕೊರೊನಾ ನಿಯಂತ್ರಣದ ಬಿಡುವಿಲ್ಲದ ಜವಾಬ್ದಾರಿ ನಡುವೆಯೂ ಜಿಲ್ಲಾಸ್ಪತ್ರೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ, ಹಿರಿಯ ವೈದ್ಯೆ ಡಾ.ರಜನಿ ಶುಕ್ರವಾರ ಗಾಂಧಿ ಜಯಂತಿಯಂದು ಸ್ವಚ್ಛತೆಯ ಶ್ರಮದಾನದ ಮೂಲಕ ಗಮನ ಸೆಳೆದರು.

ಕೊರೊನಾ ಸೋಂಕು ವ್ಯಾಪಕವಾಗಿರುವ ಕಾರಣ ಈ ಗಾಂಧಿಜಯಂತಿಯಂದು ಶ್ರಮದಾನದ ಕೆಲಸ ಇಲ್ಲವಾಗಿದೆಸುತ್ತಮುತ್ತಲ ಪ್ರದೇಶದ ಕಸ ಕಡ್ಡಿ ತೆಗೆದರು. ಸುತ್ತಲಿನ ವಾತಾವರಣ ಗಮನ ಸೆಳೆಯುವಂತೆ ಮಾಡಿದರು.ಅವರ ಕೆಲಸ ನೋಡಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು, ಜನರು ಸಹ ಖುಷಿಪಟ್ಟರು. ಪೂಜೆ ಸಲ್ಲಿಸಿದ ಬಳಿಕ ತಮ್ಮ ಸಿಬ್ಬಂದಿ ತಂಡ ಕಟ್ಟಿಕೊಂಡು ತರಬೇತಿ ಕೇಂದ್ರ ಸುತ್ತ ಕಸ ಕಡ್ಡಿ, ಕಳೆ ತೆಗೆದು ಸ್ವಚ್ಛಗೊಳಿಸಿದರು.

ಇದೇನಪ್ಪ, ಕೊರೊನಾ ಭಯ ಇಲ್ಲವೇ ಇವರಿಗೆ ಎಂದು ಅಲ್ಲಿದ್ದ ಕೆಲವರು ಹೇಳಿದರೆ ಮತ್ತಷ್ಟು ಮಂದಿ ಮೆಚ್ಚುಗೆಯಿಂದ ಮನದುಂಬಿ ಇವರ ಕೆಲಸ ನೋಡಿದರು.

ತುಮಕೂರು ಜಿಲ್ಲಾಸ್ಪ ತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದರೂ ಆಸ್ಪತ್ರೆಯ ಒಳ್ಳೆಯ ಚಿಕಿತ್ಸೆಗೆ ಹೆಸರಾಗುವಂತೆ ಮಾಡಿದ್ದರು. ಅದರಲ್ಲೂ ಗರ್ಭಿಣಿ, ಬಾಣಂತಿಯರ ಆರೈಕೆಗೆ ಆಸ್ಪತ್ರೆ ಇವರ ಕಾಲದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಲಸಿಕೆಗಳ ಆಂದೋಲನದಲ್ಲಿ ಗುರಿ ಸಾಧಿಸುವಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದರು.

ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿದ್ದು ಕೊರೊನಾ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ಹೊತ್ತಿರುವ ಅವರು ಕೊರೊನಾ ರೋಗಿಗಳ ಪಾಲಿಗೂ ದೇವರೇ ಆಗಿ ಹೋಗಿದ್ದಾರೆ.

ಕೊರೊನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ, ಸುರಕ್ಷಿತ ‌ಮಾರ್ಗ ಅನುಸರಿಸುತ್ತಾ ರೋಗಿಗಳನ್ನು ಮುಟ್ಟಿ ಧೈರ್ಯ ಹೇಳುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ.

ದೂರದಲ್ಲಿ ನಿಲ್ಲಿಸಿ ಮಾತ್ರೆ ಕೊಡುವುದಕ್ಕೂ ಸುರಕ್ಷೆಯನ್ನು ಇಟ್ಟುಕೊಂಡು ಅವರನ್ನು ಮಾತನಾಡಿಸಿ, ಮುಟ್ಟಿ ಚಿಕಿತ್ಸೆ ನೀಡುವುದಕ್ಕೂ ವ್ಯತ್ಯಾಸವಿದೆ. ಕೊರೊನಾ ಬಂದವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ನಾವು ಸಹ ಅವರನ್ನು ದೂರ ಇಟ್ಟರೆ ಮತ್ತಷ್ಟು ಭಯ ಬೀಳುತ್ತಾರೆ. ಹೀಗಾಗಿ ಅವರಿಗೆ ಮನದಾಳದ ಆರೈಕೆ ಮಾಡುತ್ತೇನೆ. ರೋಗಿಗಳೇ ನನಗೆ ದೇವರಿದ್ದಂತೆ ಎನ್ನುತ್ತಾರೆ ಡಾ. ರಜನಿಯವರು.

ಸ್ವಚ್ಛತೆ, ಸಮತೋಲಿತ ಆಹಾರ, ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ದೈಹಿಕವಾಗಿ ಅಂತರ ಕಾಪಾಡಿಕೊಂಡರೆ ಕೊರೊನಾ ಬರುವುದಿಲ್ಲ.‌‌ ಪರೀಕ್ಷೆ ಮಾಡಿಸಿಕೊಳ್ಳುವುದರಿಂದಲೂ ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದು.‌ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಸಹ ಮಾಡುತ್ತಿರುವುದಾಗಿ ತಿಳಿಸಿದರು.

ರೋಗಿಗಳಿಗೆ ಫೋನ್ ಮೂಲಕವೂ ಸ್ಥೈರ್ಯ ನೀಡುತ್ತಿದ್ದಾರೆ. ಎಷ್ಟೇ ಒತ್ತಡ ಇದ್ದರೂ ಕೊರೊನಾ ರೋಗಿಗಳು ಕರೆ ಮಾಡಿದರೆ ಅವರಿಗೆ ಉತ್ತರಿಸಿ, ಸಲಹೆ ನೀಡುತ್ತಿದ್ದಾರೆ.

ನನಗೆ ತೊಂದರೆ ಆಗುತ್ತಿದೆ ಎನ್ನುವುದು ಮುಖ್ಯವಲ್ಲ. ಕೊರೊನಾ ರೋಗಿಗಳು ಪ್ರತಿ ಕ್ಷಣವೂ ಆತಂಕದಲ್ಲಿರುತ್ತಾರೆ. ಹೀಗಾಗಿ ಯಾರೇ ಕರೆ ಮಾಡಿದರೂ ಉತ್ತರಿಸುತ್ತೇನೆ. ಈ ಸಂದರ್ಭದಲ್ಲಿ ಇಂತಹ ಕೆಲಸ ಮಾಡುವುದರಲ್ಲೇ ತೃಪ್ತಿ ಇದೆ ಎಂದರು.

ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ರೋಗಿಗಳಿಗೆ ಇವರೀಗ ವರದಾನವಾಗಿದ್ದಾರೆ.

ಡಾ.ರಜನಿ ಮೇಡಂ ಬಳಿ ಹೋದಾಗ ಮುಟ್ಟಿ ನೋಡಿದರು. ಮತ್ತಷ್ಟು ಪರೀಕ್ಷೆ ಮಾಡಿಸಿದರು. ಈಗ ನನಗೆ ನೆಮ್ಮದಿ ಸಿಕ್ಕಿದೆ. ದೇಹ ಸುಧಾರಿಸಿದೆ. ಇಂತಹ ವೈದ್ಯರೇ ನಿಜವಾದ ದೇವರುಗಳು ಎಂದು ರೋಗಿಯೊಬ್ಬರು ಸಂತಸ ಹಂಚಿಕೊಂಡರು.

ಅಂದಹಾಗೆ, ಮೇಡಂ ಬರೀ ಡಾಕ್ಟರ್ ಅಷ್ಟೇ ಅಲ್ಲ, ಒಳ್ಳೆಯ ಕವಯತ್ರಿಯೂ ಹೌದು. ಹಲವು ಮಹತ್ವದ ಕವನಗಳನ್ನು ಸಹ ಬರೆದಿದ್ದಾರೆ. ಟಿ.ವಿ., ರೇಡಿಯೊಗಳಲ್ಲಿ ಅನೇಕ ಆರೋಗ್ಯ ಸಲಹಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಕೊರೊನಾ ನಡುವೆಯೂ ಸ್ವಚ್ಚತಾ ಮೂಲ ಮಂತ್ರ

Publicstory.in


ತುಮಕೂರು: ರಾಷ್ಟ್ರಪಿತ ಮಹಾತ್ಮ‌ಗಾಂಧಿ ಬ್ಯಾರಿಸ್ಟರ್ ಪದವಿ ಪಡೆದು ವಾಪಸ್ ಇಂಡಿಯಾಗೆ ಬಂದ ಗಾಂಧೀಜಿ ಕಾಂಗ್ರೆಸ್ ಕಚೇರಿ ಕಕ್ಕಸಿನ ಗುಂಡಿ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛಭಾರತಕ್ಕೆ ಮೊದಲ ಮುನ್ನುಡಿ ಬರೆದವರು ಅವರು.ಓಣಿ ಓಣಿ ತಿರುಗಿ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಬೀದಿಗಳನ್ನು ಗುಡಿಸುತ್ತಿದ್ದರು. ಆ ಮೂಲಕ ಜನರಿಗೆ ಸ್ವಚ್ಛತೆ ಮತ್ತು ಆರೋಗ್ಯದ ನಡುವೆ ಇರುವ ನಂಟನ್ನು ಹೇಳುತ್ತಿದ್ದರು.ಈ ಸಲದ ಗಾಂಧಿ ಜಯಂತಿ ಕೊರೊನಾದ ಕಾರಣ ಕಳೆಗುಂದಿದೆ. ಆಸ್ಪತ್ರೆಗಳೆಂದರೆ ಸಾಕು ಜನರು ಹೆದರುತ್ತಿದ್ದಾರೆ. ಆಸ್ಪತ್ರೆ ಹತ್ತಿರ ಬಂದರೂ ಕೊರೊ‌ನಾ ಬಂದೇ ಬಿಡುತ್ತೇ ಎಂಬ ಭಯದಲ್ಲಿ ಬರಲು ಹೆದರುತ್ತಾರೆ.ಇನ್ನೂ ಡಾಕ್ಟರ್ ಗಳು ಯಾವ ರೋಗಿಗಳನ್ನು ಮುಟ್ಟೇ ನೋಡುತ್ತಿಲ್ಲ. ಮಾರುದ್ದ ದೂರ ನಿಲ್ಲಿಸಿ ಮಾತ್ರೆ ಬರೆದು ಸಾಗ ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ಜನರು ಆಸ್ಪತ್ರೆಗಿಂತ ಹಳೇ ಮೆಡಿಕಲ್ ಸ್ಟೋರೇ ವಾಸಿ. ಅವರಾದರೂ ಹತ್ತಿರದಿಂದಲೇ ಮಾತ್ರೆ ಕೊಡುತ್ತಾರೆ ಎಂದು ಮಾತಾಡುಕೊಳ್ಳುವಂತಾಗಿದೆ.ಇಂತಹ ಸ್ಥಿತಿಯಲ್ಲಿ ಅನೇಕ ಕೊರೊನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ, ಸುರಕ್ಷಿತ ‌ಮಾರ್ಗ ಅನುಸರಿಸುತ್ತಾ ರೋಗಿಗಳನ್ನು ಮುಟ್ಟಿ ಧೈರ್ಯ ಹೇಳುತ್ತಾ ನಿರಂತರವಾಗಿ ರೋಗಿಗಳು ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಾರೆ ಎಂಬುದು ರೋಗಿಗಳಲ್ಲಿ ಭರವಸೆ ಮೂಡಿಸಿದೆ. ಚಿಕಿತ್ಸೆ ಜೊತೆಗೆ ಮಾನಸಿಕ ಧೈರ್ಯ ತುಂಬುವ ಕೆಲವೇ ವೈದ್ಯರಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಾಂಶುಪಾಲರಾದ ಡಾ. ರಜನಿ ಅವರು, ತುಮಕೂರು ಮತ್ತು ಗುಬ್ಬಿ ರೋಗಿಗಳಿಗೆ ವರದಾನವಾಗಿದ್ದಾರೆ. ರೋಗಿಗಳನ್ನು ದೇವರು ಎಂದು ನಂಬಿರುವ ಇವರು ಗಾಂಧಿ ಜಯಂತಿಗೆ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಸುತ್ತ ಬೆಳ್ಳಂ ಬೆಳಗ್ಗೆಯೇ ತಮ್ಮ ಸಿಬ್ಬಂದಿಯೊಂದಿಗೆ ಸ್ವಚ್ಛತೆಯಲ್ಲಿ ತೊಡಗಿ ಗಮನ ಸೆಳೆದರು.ಸುತ್ತಮುತ್ತಲ ಪ್ರದೇಶದ ಕಸ ಕಡ್ಡಿ ತೆಗೆದರು. ಸುತ್ತಲಿನ ವಾತಾವರಣ ಗಮನ ಸೆಳೆಯುವಂತೆ ಮಾಡಿದರು.ಅವರ ಕೆಲಸ ನೋಡಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು, ಜನರು ಸಹ ಖುಷಿಪಟ್ಟರು.ಕೊರೊನಾ ಕಾಲದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು.‌ ಪರಿಸರ ಮತ್ತು ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಒಬ್ಬರಿಗೊಬ್ಬರು ದೈಹಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಿದರೆ ಕೊರೊನಾವನ್ನು ತಡೆಯುವುದು ದೊಡ್ಡ ಕೆಲಸವೇನಲ್ಲ‌ ಎಂದರು. ಸ್ವಚ್ಚತೆಯೇ ಕರೋನಾ ತೊಡೆದುಹಾಕಲು ಮೂಲ ಮಂತ್ರವಾಗಿದೆ ಎಂದರು.ಒಳ್ಳೆಯ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು,‌ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು, ಧೈರ್ಯವಾಗಿ ಚಿಕಿತ್ಸೆ ಪಡೆಯುವ ಪಣವನ್ನು ಗಾಂಧೀಜಿ ಹೆಸರಲ್ಲಿ ಎಲ್ಲರೂ ತೊಡಬೇಕಾಗಿದೆ ಎಂದರು.

ಶಿರಾ ಬೈ ಎಲೆಕ್ಷನ್ ಕಣದಲ್ಲಿ ಡಾ.ಕೆ ನಾಗಣ್ಣ ಹೆಸರು: ಕರೆತರಲಿವೆಯೇ ಜೆಡಿಎಸ್, ಬಿಜೆಪಿ!

ಶಿರಾ: ಶಿರಾ ಉಪ ಚುನಾವಣೆಯಲ್ಲಿ ಚತುರ ರಾಜಕಾರಣಿ, ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಗಾಗಿ ಹುಟುಕಾಟ ನಡೆಸಿರುವ ಬಿಜೆಪಿ, ಜೆಡಿಎಸ್ ಗೆ ಡಾ.ನಾಗಣ್ಣ ಉತ್ತರವಾಗಬಲ್ಲರೇ ಎಂಬ ಮಾತುಗಳು ಶಿರಾ ಕ್ಷೇತ್ರದಲ್ಲಿ ಮೆಲ್ಲಗೆ ಕೇಳಿ ಬರತೊಡಗಿವೆ.

ಉಪ ಚುನಾವಣೆಯಲ್ಲಿ ಈ ಭಾರಿ ಸ್ಪರ್ಧಿಸಿಸಲು ಬಿಜೆಪಿ, ಜೆಡಿಎಸ್, ಕಾಂಗ್ರೇಸ್, ಜೆಡಿಎಸ್ ಪಕ್ಷಗಳಿಂದ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿರುವುದನ್ನು ಕಾಣಲಾಗುತ್ತಿದೆ.

ಶಿರಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪಶುಪಾಲಕರು, ಕುರಿಗಾಯಿಗಳು ಹೈನುಗಾರಿಕೆಯನ್ನು ಮಾಡಿಕೊಂಡು ಬದುಕುತ್ತಿದ್ದಾರೆ.ಇಂತಹವರಿಗೆ ಹಲವಾರು ರೀತಿಯಲ್ಲಿ ಸರಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಾಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ ನಾಗಣ್ಣರವರ ಹೆಸರು ಸಹ ಕೇಳಿ ಬರ ತೊಡಗಿದೆ

ಸರ್ಕಾರಿ ಅಧಿಕಾರಿಯಾದರೂ ಜನರ ಜತೆ ಅವರ ಒಡನಾಟ ಹೆಚ್ಚಿದೆ. ಕಳೆದ ಚುನಾವಣೆಯ ಸಂದರ್ಭದಲ್ಲೂ ಅವರು ಸ್ಪರ್ಧಿಸುವಂತೆ ಜನರೇ ಒತ್ತಡ ಹಾಕಿದ್ದರು. ಆದರೆ ಅವರು ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ಕಾರಣ ಮೌನವಹಿಸಿದ್ದರು.

ಡಾ.ಕೆ ನಾಗಣ್ಣ ಮೂಲತಃ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಗನಹಳ್ಳಿ ಗ್ರಾಮದ ರೈತ ಕುಟುಂಬದವರು.

ಇವರು ಪಶು ವೈದ್ಯಕೀಯ ಇಲಾಖೆಯಲ್ಲಿ ಪಶು ವೈದ್ಯರಾಗಿ ವೃತ್ತಿ ಆರಂಭಿಸಿದವರು,ಇವರು ಕ್ರೀಯಾಶೀಲ ಅಧಿಕಾರಿಯಾಗಿದ್ದು,ಇವರು ಜಲಾನಯನ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

*ಶಿರಾ ಕ್ಷೇತ್ರದ ಜನತೆಗೆ ತುಂಬಾ ಹತ್ತಿರ*:

ಈ ಹಿಂದೆ ಮಾಜಿ ಸಚಿವ ಟಿ.ಬಿ ಜಯಚಂದ್ರ ಸಚಿವರಾಗಿದ್ದಾಗ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.ಇವರು ಆ ದಿನಗಳಲ್ಲಿ ಶಿರಾ ಜನತೆಗೆ ಕುರಿಸಾಕಾಣಿಕೆ ಮಾಡಲು ಸಾಲ ಸೌಲಭ್ಯ,ಕೃಷಿಕರಿಗೆ ನೀರಾವರಿ ಸೌಲಭ್ಯ,ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುವಲ್ಲಿ ಜನರಿಗೆ ತುಂಬಾ ಹತ್ತಿರವಾಗಿದ್ದರು.

ತುಮಕೂರು ತಾಲೂಕಿನಲ್ಲಿ ಸೈ ಅನ್ನಿಸಿಕೊಂಡವರು

ತುಮಕೂರು ತಾಲ್ಲೂಕನ್ನು ಬಯಲು ಶೌಚ ಮುಕ್ತ ಮಾಡಲು ಇವರು ನಡೆಸಿದ ಗಾಂಧಿ ಮಾರ್ಗದ ಪ್ರಯೋಗ ಇಡೀ ರಾಜ್ಯದ ಗಮನ ಸೆಳೆದಿತ್ತು.

ಇವರು ಈ ಹಿಂದೆ ಬಿ.ಸುರೇಶ್‌ಗೌಡ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ೩ ವರ್ಷಗಳ ಕಾಲ ತುಮಕೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಅಲ್ಲದೇ ತುಮಕೂರು ಗ್ರಾಮಾಂತರದಲ್ಲಿ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿತರಿಸುವಲ್ಲಿ ಹಾಗೂ ಅರಿವು ಮೂಡಿಸುವಲ್ಲಿ ಹೆಚ್ಚಿನದಾಗಿ ನರೇಗಾದ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ಬಿ.ಸುರೇಶಗೌಡರು ಈಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದು, ಮನಸ್ಸು ಮಾಡಿದರೆ ನಾಗಣ್ಣ ಅವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಬಹುದಾಗಿದೆ.‌ಪಕ್ಷದಲ್ಲಿ ಪ್ರಬಲ ಕುಂಚಿಟಿಗ ಅಭ್ಯರ್ಥಿಯೂ ಸಿಕ್ಕಂತಾಗಲಿದೆ.

*ನಿರಂತರ ಸಂಪರ್ಕದಲ್ಲಿದ್ದಾರೆ*:

ಇವರು ಸರಕಾರಿ ಇಲಾಖೆಯಲ್ಲಿ ಸೇವೆ ಸೇರಿ ೨೩ ವರ್ಷ ಕಳೆದಿದೆ. ಅಂದಿನಿಂದ ಇವರು ಶಿರಾ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಇವರು ಸದ್ಯಕ್ಕೆ ತುಮಕೂರಿನ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರ ಕಚೇರಿಗೆ ಪ್ರತಿದಿನ ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಕುರಿಗಾಯಿಗಳು,ಹೈನುಗಾರರು,ಯುವಕರು ಬಂದು ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಕೇಳಿ ಸೌಲಭ್ಯ ಪಡೆಯುತ್ತಾರೆ.

ಮೌನ ಮುರಿಯದ ನಾಗಣ್ಣ

ಕುಂಚಿಟಿಗ ಸಮುದಾಯಕ್ಕೆ ಸೇರಿದ ಡಾ.ಕೆ ನಾಗಣ್ಣನವರನ್ನು ಶಿರಾ ಚುನಾವಣೆಗೆ ಸ್ಪರ್ಧೆ ಮಾಡಲು ಬರುವಂತೆ ಕ್ಷೇತ್ರದ ಒತ್ತಾಯ ಮಾಡುತ್ತಿದ್ದರು,ಸರಕಾರಿ ಅಧಿಕಾರಿಯಾಗಿರುವ ಡಾ.ಕೆ ನಾಗಣ್ಣನವರು ಮತದಾರರಿಗೆ ಯಾವುದೇ ಉತ್ತರ ನೀಡದೇ ಮೌನ ತಾಳಿದ್ದಾರೆ.
*ಜಯ ಸಿಗುವದೇ..!*: ಡಾ.ಕೆ ನಾಗಣ್ಣನವರನ್ನು ಯಾವುದಾದರೂ ಒಂದು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ.ನಾಗಣ್ಣರವರು ಸರಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ಚುನಾವಣೆಯ ಅಖಾಡಕ್ಕೆ ದುಮುಕಿದರೆ ಗೆಲುವು ಸಿಗಬಹುದೇ ಎಂಬ ಮಾತುಗಳು ಹೊರ ಬರುತ್ತಿವೆ.

ಶಿರಾಗೆ ಆಧುನಿಕ ಕುರಿ ವಧಾಗಾರಾ ಸ್ಥಾಪನೆ ಮಾಡಲು ಜಯಚಂದ್ರ ಅವರು ಸಚಿವರಾಗಿ ತೋರಿದ ಆಸಕ್ತಿ ಹಿಂಸೆ ಇದೇ ನಾಗಣ್ಣ ಕಾರಣರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ

Publicstory


ಚಿಕ್ಕನಾಯಕನಹಳ್ಳಿ: ಪಟ್ಟಣದ ದಕ್ಕಲಿಗರ ಕಾಲೋನಿಯಲ್ಲಿ ಕರ್ನಾಟಕ
ಸ್ಪೈರೋಸ್ ಸಂಸ್ಥೆವತಿಯಿಂದ ದಕ್ಕಲಿಗರ ಮಕ್ಕಳಿಗೆ ನೋಟ್ ಬುಕ್, ಪೆನ್, ಬೆಡ್ ಶೀಟ್ ಹಾಗೂ ದಿನಸಿ ಕಿಟ್ ನೀಡಿ ಮಾತನಾಡಿದರು.

ಅಲೆಮಾರಿಗಳ ಮಕ್ಕಳು ಶಿಕ್ಷಣ ಪಡೆಯಿರಿ, ಶಿಕ್ಷಣದಿಂದಲೇ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ಸ್ಪೈರೋಸ್ ಸಂಸ್ಥೆಯ ಸಂಚಾಲಕ ಓಬಳೇಶ್ ಹೇಳಿದರು.
ಪುರಸಭಾ ಸದಸ್ಯೆ ಉಮಾಪರಮೇಶ್ ಮಾತನಾಡಿ ದಕ್ಕಲಿಗರ ಕಾಲೋನಿಯಲ್ಲಿ ಬೀದಿದೀಪ ಶೌಚಾಲಯ ಸರಿಯಿಲ್ಲ‌ ಎಂದರು.

ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲ, ನಮಗೆ ಅಧಿಕಾರ ಇನ್ನು ದೊರೆತಿಲ್ಲ. ಅಧಿಕಾರ ಬಂದ ಕೂಡಲೇ ಇಲ್ಲಿನ ಸಮಸ್ಯೆ ಬಗೆಹರಿಸುತ್ತೇವೆ ಮತ್ತು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ತಪ್ಪಿಸಬೇಡಿ ಎಂದರು.

ಈ ಕಾರ್ಯಕ್ರಮದಲ್ಲಿ
ಡಾ.ದಿಲೀಪ್ ಕುಮಾರ್, ಶಾಂತಕುಮಾರ್ ಸೇರಿದಂತೆ ಹಲವರಿದ್ದರು.

ವಸತಿ ಯೋಜನೆಗಳಿಗೆ ಹಣದ ಗ್ರಹಣ: ಬೀಳುತ್ತಿವೆ ಅರ್ಧಕಟ್ಟಿದ ಮನೆಗಳು

0

ಶಿಥಿಲಾವಸ್ಥೆ ತಲುಪಿ ಅಪಾಯಕಾರಿಯಾಗಿದ್ದ ತಿಮ್ಮಕ್ಕನ ಹಳೇ ಮನೆತುರುವೇಕೆರೆ ಪ್ರಸಾದ್


ತುರುವೇಕೆರೆ: ಮನೆ ಎನ್ನುವುದು ಶಾಂತಿ ನೆಮ್ಮದಿಯ ತಾಣ.ವಿಶ್ರಾಂತಿ, ನಿರಾಳತೆಗೊಂದು ನೆರಳೆಂದರೆ ಅದು ಮನೆಯೇ! ಪಶು, ಪಕ್ಷಿಗಳೂ ತಮ್ಮದೇ ಆದ ಗೂಡನ್ನು, ನೆಲೆಯನ್ನು ನಿರ್ಮಿಸಿಕೊಳ್ಳುತ್ತವೆ. ಇನ್ನು ಮನುಷ್ಯ ತಲೆಯ ಮೇಲೊಂದು ಸೂರಿರಬೇಕು ಎಂದು ಹಂಬಲಿಸುವುದರಲ್ಲಿ ಯಾವ ಅಚ್ಛರಿಯೂ ಇಲ್ಲ.ಸ್ವಂತ ಸೂರು ನಿರ್ಮಿಸಿಕೊಳ್ಳುವ ಆಸೆ, ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಮನೆಯ ಅವಶ್ಯಕತೆ ಎನುವುದು ಆಳಿನಿಂದ ಅರಸನವರೆಗೂ ಅನಿವಾರ್ಯವಾದುದು.:ಫಲಾನುಭವಿಯೊಬ್ಬರು ಅರ್ಧಕಟ್ಟಿ ನಿಂತ ಮನೆಯಲ್ಲೇ ವಾಸಿಸುತ್ತಿರುವುದು.ಎಷ್ಟೇ ಆಸೆ ಕನಸುಗಳಿದ್ದಾಗಲೂ ಲಕ್ಷಾಂತರ ಬಡವರಿಗೆ ಕೊನೆಯ ಉಸಿರು ಚೆಲ್ಲುವ ತನಕ ಮನೆಯೆಂಬುದು ಮರೀಚಿಕೆಯಾಗಿಯೇ ಉಳಿದುಹೋಗುತ್ತದೆ. ಸ್ವಂತ ಮನೆಯ ಕನಸಿನಲ್ಲೇ ಜೀವನ ಪೂರಾ ಸವೆದುಹೋಗುತ್ತದೆ.ಇಂತಹ ಬಡವರ ಕನಸನ್ನು ನನಸು ಮಾಡಿ ಅವರಿಗೊಂದು ಶಾಶ್ವತ ಆಶ್ರಯ ಕಲ್ಪಿಸಲೆಂದೇ ಹಲವಾರು ವಸತಿ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಈ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಸರ್ಕಾರಗಳು ಲಕ್ಷಾಂತರ ಮನೆಗಳನ್ನು ನಿರ್ಮಿಸಿಕೊಟ್ಟಿರುವುದೂ ನಿಜ.ಆದರೆ ಕಳೆದೊಂದು ವರ್ಷದಿಂದ ಈ ಯೋಜನೆ ರೋಗಗ್ರಸ್ಥವಾಗಿದೆ.ಅದಕ್ಕೆ ಕರೋನಾ ಶಾಪವೂ ತಗಲಿ ಅರ್ಧಂಬರ್ಧ ಮನೆ ನಿರ್ಮಿಸಿಕೊಂಡ ಹಿಂದುಳಿದ ವರ್ಗದ ಜನರು ಅತ್ತ ಅರ್ಧ ಕಟ್ಟಿದ ಮನೆಯನ್ನು ಪೂರ್ಣಗೊಳಿಸಲೂ ಆಗದೆ, ಬೇರೆಡೆ ಆಶ್ರಯವೂ ಇಲ್ಲದೆ ತ್ರಿಶಂಕುಗಳಾಗಿದ್ದಾರೆ.ರಾಜ್ಯದಲ್ಲಿ ಬಸವ ವಸತಿ ಯೋಜನೆ, ಬಿ.ಆರ್.ಅಂಬೇಡ್ಕರ್ ವಸತಿ ನಿವಾಸ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ದೇವರಾಜ ಅರಸು ವಸತಿ ಯೋಜನೆ ಇವುಗಳಡಿ ಬಡವರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಸುಮಾರು 29 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 9.74 ಲಕ್ಷ ಮನೆಗಳು ಪೂರ್ಣವಾಗದೆ ಅಂತಂತ್ರ ಸ್ಥಿತಿಯಲ್ಲಿವೆ.ಕಳೆದ 2 ವರ್ಷಗಳಿಂದ ಇವರಿಗೆ ಯಾವ ಸಹಾಯಧನವೂ ಬಿಡುಗಡೆ ಆಗಿಲ್ಲ. ಫಲಾನುಭವಿಗಳ ವಂತಿಕೆಯನ್ನು ಸರ್ಕಾರಕ್ಕೆ ತುಂಬಲು ಕೆಲವರು ಸಾಲ ಮಾಡಿದ್ದಾರೆ. ಅರ್ಧಬಂರ್ಧ ಮನೆ ಕಟ್ಟಿಕೊಂಡಿದ್ದಾರೆ. ಹಾಗೆ ಕಟ್ಟಿರುವ ಮನೆಗಳು ಗಾಳಿ, ಮಳೆಗೆ ಸಿಕ್ಕಿ ಶಿಥಿಲಗೊಳ್ಳುತ್ತಿವೆ. ಬೇರೆಡೆ ಆಶ್ರಯವಿಲ್ಲದೆ, ಮನೆಯನ್ನೂ ಕಟ್ಟಿಕೊಳ್ಳಲಾಗದ ಬಡವರು ಅರ್ಧ ಕಟ್ಟಿದ ಮನೆಗೇ ಸೋಗೆ, ತಗಡಿನ ಸೂರು ಕಟ್ಟಿಕೊಂಡು ಬಾಗಿಲು, ಕಿಟಕಿಗಳಿಲ್ಲದೆ ಪ್ರಾಣಿಗಳಂತೆ ದಿನಗಳೆಯಬೇಕಾದ ದುಸ್ಥಿತಿ ತಲುಪಿದ್ದಾರೆ.ಸದರಿ ವಸತಿ ಯೋಜನೆಗಳಿಗೆ ಕೇಂದ್ರಸರ್ಕಾರದಿಂದ ರೂ. 6511 ಕೋಟಿ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರೂ. 993 ಕೋಟಿ, ನಗರ ಸ್ಥಳೀಯ ಸಂಸ್ಥೆಗಳಿಂದ 295 ಕೋಟಿ, ಪೌರಾಡಳಿತ ನಿರ್ದೇಶನಾಲಯದಿಂದ ರೂ. 141 ಕೋಟಿ ಹಣ ಬಿಡುಗಡೆಯಾಗಬೇಕಿದೆ. ಈ ಯಾವ ಸಂಸ್ಥೆಗಳೂ ತಮಗೆ ನಿಗಧಿಪಡಿಸಿದ ಗುರಿಯಂತೆ ವಸತಿ ಯೋಜನೆಗೆ ಹಣ ಒದಗಿಸಿಲ್ಲ.ಈ ಮೊತ್ತದ ಜೊತೆಗೆ ಸರ್ಕಾರ ತನ್ನ ಪಾಲಿನ ರೂ. 10,194 ಕೋಟಿ ರೂ ಬಿಡುಗಡೆ ಮಾಡಬೇಕಿದೆ. ಕಳೆದ 7-8 ತಿಂಗಳಿನಿಂದ ಕರೋನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನುವುದೇನೋ ನಿಜ. ಆದರೆ ಅದಕ್ಕೂ ಮುಂಚೆ ಒಂದೂವರೆ ವರ್ಷ ಈ ಯೋಜನೆಗೆ ಸರ್ಕಾರಗಳು ಹಾಗೂ ಇತರೆ ಸಂಸ್ಥೆಗಳು ನಿಗಧಿತ ಹಣ ಬಿಡುಗಡೆ ಮಾಡುವಲ್ಲಿ ಕಾಳಜಿ ತೋರಿಸಿಲ್ಲ ಎಂಬುದು ಮೇಲಿನ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.ಈ ಯೋಜನೆಗಳ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂಬ ವದಂತಿ ಹರಡಿದ್ದ ಹಿನ್ನಲೆಯಲ್ಲಿ ಸರ್ಕಾರ ವಿಶಲ್ ಆಪ್ ಮೂಲಕ ಫಲಾನುಭವಿಗಳ ಹಾಗೂ ಅಧಿಕಾರಿಗಳ ಸಾಚಾತನ ಪರೀಕ್ಷೆಮಾಡುವ ನಾಟಕವನ್ನೂ ಮಾಡಿ ಆಗಿದೆ. ಈ ಪರೀಕ್ಷೆಗೆ ಆಯ್ದುಕೊಂಡು ಫಲಾನುಭವಿಗಳಿಗೂ ಸಹ ಇಲ್ಲಿಯವರಿಗೆ ಒಂದು ಪೈಸೆ ಅನುದಾನ ಬಿಡುಗಡೆ ಆಗಿಲ್ಲ.ರಾಜೀವ್ಗಾಂಧಿ ವಸತಿ ನಿಗಮ ಕಳೆದ ಜೂನ್ನಲ್ಲಿ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಅಪೂರ್ಣವಾಗಿರುವ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಪಾಲು ರೂ. 10,194 ಕೋಟಿ ಬಿಡುಗಡೆ ಮಾಡುವಂತೆ ಕೋರಿದೆ. ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ ಜೂನ್ 23ರಂದು ನಡೆದ ಸಂಪುಟ ಸಭೆಯಲ್ಲಿ ಸದರಿ ಹಣ ಬಿಡುಗಡೆಗೆ ಒಪ್ಪಿ ಶರತ್ತುಬದ್ದ ಅನುಮೋದನೆ ನೀಡಿದೆ. ಆ ಪ್ರಕಾರ ಬಾಕಿ ಇರುವ 9.74 ಲಕ್ಷ ಮನೆಗಳ ನಿರ್ಮಾಣಕಾರ್ಯ ಪೂರ್ಣಗೊಳಿಸಲು ಸದರಿ 10, 194ಕೋಟಿಯನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಈಗಿರುವ ಗುರಿಯನ್ನು ಪೂರ್ಣಗೊಳಿಸುವವರೆಗೆ ಹೊಸ ಗುರಿಗಳನ್ನು ಪರಿಗಣಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ.ಇದಾದ ನಂತರ ಮೂರು ತಿಂಗಳು ಕಳೆದರೂ ಒಂದು ನಯಾಪೈಸೆ ಅನುದಾನ ಬಿಡುಗಡೆ ಆಗಿಲ್ಲ.ತಮಾಷೆಯ ಸಂಗತಿ ಎಂದರೆ ಈ ಯೋಜನೆಗಳಡಿ ಯಾವ ಅನುದಾನ ಬಿಡುಗಡೆ ಆಗಿಲ್ಲದಿದ್ದರೂ, ಲಕ್ಷಾಂತರ ಬಡಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದ್ದರೂ, ಹೊಸ ಯೋಜನೆ ಗುರಿಗಳನ್ನು ಪರಿಗಣಿಸಬಾರದು ಎಂಬ ಷರತ್ತು ವಿಧಿಸಿದ್ದರೂ ವಸತಿ ಸಚಿವ ಶ್ರೀ ಸೋಮಣ್ಣನವರು ಇತ್ತೀಚೆಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತಲಾ 20 ಮನೆಗಳಂತೆ 1.55 ಲಕ್ಷ ಮನೆಗಳನ್ನು ಬಡವರಿಗೆ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.188 ವಿಧಾನಸಭಾ ಕ್ಷೇತ್ರಗಳಲ್ಲಿ 97,134 ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು, ವಸತಿ ಇಲಾಖೆಗೆ ಹಣದ ಕೊರತೆ ಇಲ್ಲ ಎಂದಿದ್ದಾರೆ. ಹಣದ ಕೊರತೆ ಇಲ್ಲ ಎಂದ ಮೇಲೆ ಅರ್ಧಂಬರ್ಧ ಮನೆ ಕಟ್ಟಿಕೊಂಡು ಒದ್ದಾಡುತ್ತಿರುವ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಏಕೆ ಕೂಡಲೇ ಅನುದಾನ ಬಿಡುಗಡೆ ಮಾಡಬಾರದು? ಮನೆ ನಿರ್ಮಾಣದ ಹೊಸ ಗುರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಸಂಪುಟ ಸಭೆಯಲ್ಲೇ ತೀರ್ಮಾನವಾಗಿದ್ದರೂ ಸಚಿವರು ಯಾವ ಆದಾಯ, ಸಂಪನ್ಮೂಲದ ಆಧಾರದ ಮೇಲೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸ ಮನೆಗಳನ್ನು ನೀಡುವ ಭರವಸೆ ನೀಡುತ್ತಿದ್ದಾರೆ?ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ ನೀಡಿರುವ 1.8 ಲಕ್ಷ ಮನೆಗಳಲ್ಲಿ ಕೇವಲ 34,900 ಮನೆಗಳನ್ನಷ್ಟೇ ಸದ್ಯದಲ್ಲಿ ಹಸ್ತಾಂತರಿಸುವುದಾಗಿ ಸಚಿವರೇ ತಿಳಿಸಿದ್ದಾರೆ.ಇನ್ನು 1.46 ಲಕ್ಷ ಮನೆಗಳು ಸಿದ್ಧವಾಗುವುದು ಯಾವ ಕಾಲಕ್ಕೋ? ಪರಿಸ್ಥಿತಿ ಹೀಗಿರುವಾಗ ಸಚಿವರ ಹೇಳಿಕೆಗೆ ಯಾವ ಅರ್ಥ, ಬದ್ಧತೆ ಇದೆ ಎಂಬುದೇ ಅರ್ಥವಾಗದ ಸಂಗತಿಯಾಗಿದೆ.ಸಂಪುಟ ಸಭೆಯಲ್ಲಿ ರೂ.10,194ಕೋಟಿ ಬಿಡುಗಡೆಗೆ ಅನುಮೋದನೆ ಸಿಕ್ಕಿರುವುದೇನೋ ನಿಜ, ಆದರೆ ಅದು ಹಂತವಾಗಿ ಮುಂದಿನ ಮೂರು ವರ್ಷದಲ್ಲಿ ಬಿಡುಗಡೆಯಾಗುವುದು ಎಂಬುದನ್ನು ನೆನಪಿಡಬೇಕು. ಅದರಲ್ಲೂ ಈಗಿರುವ ಆರ್ಥಿಕ ಬಿಕ್ಕಟ್ಟಿನಲ್ಲಿ ಸರ್ಕಾರ ಈ ಸಾಲಿಗೆ ಸುಮಾರು ರೂ.3500 ಕೋಟಿ ಬಿಡುಗಡೆ ಮಾಡುತ್ತದೆ ಎಂಬ ಯಾವ ಖಾತರಿಯೂ ಇಲ್ಲ.ಇತರೆ ಸರ್ಕಾರಿ ಸಂಸ್ಥೆಗಳೂ ನಿಗಧಿತ ಹಣವನ್ನು ಬಿಡುಗಡೆ ಮಾಡುತ್ತವೆ ಎಂದು ನಂಬುವಂತಿಲ್ಲ. ಹಾಗಾಗಿ ಇನ್ನೂ 2-3 ವರ್ಷಗಳು ಬಡವರು ತಮ್ಮ ಕನಸು ನನಸಾಗುತ್ತದೆ ಎಂದು ಸಂಭ್ರಮಿಸುವಂತಿಲ್ಲ.ಈಗಿನಂತೆಯೇ ಪಡಿಪಾಟಲು ಜೀವನ ನಡೆಸಬೇಕು. ಈ ಹಿನ್ನಲೆಯಲ್ಲಿ ಸಂಘ, ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಬಡವರ ನೆರವಿಗೆ ಧಾವಿಸಬೇಕು.ಇದಕ್ಕೊಂದು ಮಾದರಿ ಉದಾಹರಣೆ ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿದೆ.ತಾಲ್ಲೂಕಿನ ಸೊರವನಹಳ್ಳಿ ಗೊಲ್ಲರಹಟ್ಟಿಯ ವಯೋವೃದ್ಧೆ ತಿಮ್ಮಕ್ಕನ ಮಗ, ಸೊಸೆ ತೀರಿಕೊಂಡಿದ್ದಾರೆ. ಯಾರ ಸಹಾಯವೂ ಇಲ್ಲದ ತಿಮ್ಮಕ್ಕ ಇಬ್ಬರು ಮೊಮ್ಮಕ್ಕಳೊಂದಿಗೆ ಈಗಲೋ ಆಗಲೋ ಕುಸಿದು ಬೀಳುವಂತಹ ಶಿಥಿಲಗೊಂಡ ಮನೆಯಲ್ಲಿ ದಿನತಳ್ಳುತ್ತಿದ್ದರು.ಇದನ್ನು ಗಮನಿಸಿದ ಜಿ.ಪಂ. ಮಾಜಿ ಸದಸ್ಯ ಎನ್.ಆರ್.ಜಯರಾಮ್ ಸರ್ಕಾರದ ಯಾವುದೇ ಅನುದಾನವಿಲ್ಲದೆ ತಾವೇ ಕೈಯ್ಯಾರೆ ದುಡ್ಡು ಹಾಕಿ ಅಜ್ಜಿಗೆ ಹೊಸಮನೆ ಕಟ್ಟಿಸಿಕೊಡುತ್ತಿದ್ದಾರೆ. ಜಯರಾಮ್ ಅವರ ಸತ್ಕಾರ್ಯದಿಂದ ಪ್ರೇರಣೆಗೊಂಡ ಹಲವು ಸಾಮಾಜಿಕ ಕಾರ್ಯಕರ್ತರು, ರೋಟರಿ ಕ್ಲಬ್ ಮೊದಲಾದ ಸಂಘಸಂಸ್ಥೆಗಳು ತಾಲ್ಲೂಕಿನಲ್ಲಿ ಇಂತಹುದೇ ಕಾರ್ಯಕ್ಕೆ ಮುಂದಾಗಿವೆ. ಇದನ್ನೇ ಅನುಕರಣೀಯ ಮಾದರಿಯನ್ನಾಗಿಸಿಕೊಂಡು ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಬಡವರ ಮನೆಯ ಕನಸನ್ನು ನನಸು ಮಾಡಲು ಮುಂದಾಗಬೇಕಿದೆ.


ತುರುವೇಕೆರೆ ಪ್ರಸಾದ್, ನಂ.6, ಪಂಚವಟಿ
13ನೇ ವಾರ್ಡ್, ಗಾಂಧಿನಗರ
ತುರುವೇಕೆರೆ-572 227
ಮೊಬೈಲ್: 9448677560

‘ಕಬೀರ ಈ ಸಮಾಜದ ಕನ್ನಡಿ’

ಬೆಂಗಳೂರು: ‘ಸಮಾಜ ಅಸ್ವಸ್ಥವಾದಾಗಲೆಲ್ಲಾ ಕಬೀರ ಚಿಕಿತ್ಸಕನಾಗಿ ಹೊರಹೊಮ್ಮುತ್ತಾನೆ’ ಎಂದು ಹಿರಿಯ ವಿಮರ್ಶಕ ಸುರೇಶ ನಾಗಲಮಡಿಕೆ ಅವರು ಅಭಿಪ್ರಾಯಪಟ್ಟರು.

‘ಅವಧಿಮ್ಯಾಗ್’ ಹಮ್ಮಿಕೊಂಡಿದ್ದ ಕೇಶವ ಮಳಗಿ ಅವರ ಕಬೀರ ಪದಗಳ ಸಂಕಲನ ‘ಹಂಸ ಏಕಾಂಗಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಬೀರ ಎಲ್ಲ ನಾಯಕರ ಮೇಲೆಯೂ ಪ್ರಭಾವ ಬೀರಿದ್ದಾನೆ. ಅಂಬೇಡ್ಕರ್ ಅವರು ಕಬೀರ ಪಂಥೀಯರಾದ ಕಾರಣಕ್ಕಾಗಿಯೇ ಅವರು ಮಹಾಡ್ ಪ್ರಸಂಗದಲ್ಲಿ ಹೆಚ್ಚು ರಕ್ತಪಾತವಾಗದಂತೆ ಸತ್ಯಾಗ್ರಹವನ್ನು ಹಿಂದೆ ಪಡೆದರು’ ಎಂದು ಅವರು ಅಭಿಪ್ರಾಯಪಟ್ಟರು.

ಕೃತಿ ಬಿಡುಗಡೆ ಮಾಡಿದ ವಿಮರ್ಶಕ ಟಿ ಎನ್ ವಾಸುದೇವಮೂರ್ತಿ ಅವರು ಮಾತನಾಡಿ ‘ಕೋಮು ಸಮನ್ವಯ ಹಾಗೂ ವೈಷಮ್ಯಕ್ಕೆ ಸಾಕ್ಷಿಯಾಗಿದ್ದವನು ಕಬೀರ. ಕಬೀರ ಈ ವೈಷಮ್ಯವನ್ನು ನಿವಾರಣೆ ಮಾಡುತ್ತಾನೆ ಎನ್ನುವ ಹುಂಬ ಭರವಸೆ ನನಗಿಲ್ಲ. ಆದರೆ ಈ ವೈಷಮ್ಯಗಳು ಉಂಟುಮಾಡುವ ನಕಾರಾತ್ಮಕ ಆಲೋಚನೆಗಳಿಂದ ರಕ್ಷಿಸುತ್ತಾನೆ. ಆತ ಒಂದು ರೀತಿಯಲ್ಲಿ ಸಮಾಜದ ವೈದ್ಯ’ ಎಂದು ಅಭಿಪ್ರಾಯಪಟ್ಟರು.

ಕೃತಿಕಾರ ಕೇಶವ ಮಳ ಗಿ ಮಾತನಾಡಿ ‘ಕಬೀರ ಒಬ್ಬ ನುಡಿಚಿಕಿತ್ಸಕ. ಕಬೀರ ಸದಾ ಸಮಾಜದಲ್ಲಿ ಇರುತ್ತಾನೆ. ಸಮಾಜ ಅಸ್ವಸ್ಥವಾದಾಗಲೆಲ್ಲ ಬೇರೆ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಇಂದಿನ ಭಾರತೀಯ ಸಮಾಜ ಅಂತಹ ಅಸ್ವಸ್ಥತೆಯಲ್ಲಿ ಬಳಲುತ್ತಿದೆ ಎಂದು ಮಳಗಿ ವಿಷಾದಿಸಿದರು.

ಗುಬ್ಬಿ ಕ್ಷೇತ್ರದ ಮೇಲೆ‌ ಕಣ್ಣು: ಶಿರಾಗೆ ದಾಳ ಉರುಳಿಸಿದ ಬಿಜೆಪಿ ಇಬ್ಬರು ಮುಖಂಡರು…

Publicstory. in


ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ರಂಗು ರಂಗಿನ ಚುನಾವಣಾ ಆಟ ಶುರು ಹಚ್ಚಿರುವ ಬಿಜೆಪಿಯೊಳಗೆ ಈಗ ಎರಡು ಹೋಳಾಗಿದೆಯೇ ಎಂಬ ಮಾತುಗಳು ಆ ಪಕ್ಷದ ಒಳಗೆ ಕೇಳಿ ಬರ ತೊಡಗಿವೆ.

ಕಾವೇರಿಕೊಳ್ಳದಲ್ಲಿ ಹೇಮಾವತಿ ಹೆಸರಿನಲ್ಲಿ ಒಂದಿಷ್ಟು ಜಾಗ ಮಾಡಿಕೊಂಡಿರುವ ಬಿಜೆಪಿ ಕೃಷ್ಣಾ ಕೊಳ್ಳದಲ್ಲಿ ಹೇಳ ಹೆಸರಿಲ್ಲವಾಗಿದೆ. ಪ್ರಧಾನಿ ಮೋದಿ ಹೆಸರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಪತಾಕೆ ಹಾರಿಸಿದರೂ ಅದಕ್ಕೆ ಅಲ್ಲಿ ವಿಧಾ‌ನಸಭೆ ಚುನಾವಣೆಯಲ್ಲಿ ಆಟಕ್ಕುಂಟು ಲೆಕ್ಕಕಿಲ್ಲದ ಸ್ಥಿತಿ.

ಶಾಸಕ ಸತ್ಯನಾರಾಯಣ್ ಅವರ ನಿಧ‌‌ನದಿಂದ ತೆರವಾಗಿರುವ ಶಿರಾ ಕ್ಷೇತ್ರದಲ್ಲಿ ತಾವರೆ ಅರಳಿಸುವ ತವಕವನ್ನು ಆ ಪಕ್ಷ, ಆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡರು ತೋರ ತೊಡಗಿದ್ದಾರೆ.

ಹಾಗೇ ನೋಡಿದರೆ ಈ ಭಾಗದಲ್ಲಿ ಪಾವಗಡದ ಶಿವಪ್ರಕಾಶ್ ಬಿಟ್ಟರೆ ಪಕ್ಷವನ್ನು ಕಟ್ಟಲು ಯಾರೂ ಪ್ರಯತ್ನಿಸಿರಲಿಲ್ಲ. ಶಿವಪ್ರಕಾಶ್ ಒಳ್ಳೆಯ ಮನುಷ್ಯ. ಆದರೆ ಅಧಿಕಾರ ಇದ್ದಾಗ ಅವರದೇ ಕೃಷ್ಣಾಕೊಳ್ಳದಲ್ಲಿ ಬಿಜೆಪಿಗೆ ನೆಲೆ ಒದಗಿಸಲು ಸಾಧ್ಯವಾಗಲಿಲ್ಲ.

ಬಿ.ಸುರೇಶಗೌಡರು ಕೂಸು ಹುಟ್ಟುವ ಮೊದಲೇ ಕುಲಾಬಿ ಹೊಲೆದರು ಎಂಬಂತೆ ತುಮಕೂರು ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಮಧುಗಿರಿ, ತುರುವೇಕೆರೆ ತಾಲ್ಲೂಕುಗಳಲ್ಲಿ ಯಾರಿಗೂ ತೋರಗೊಡದಂತೆ ಊರೂರು ತಿರುಗಿದರು. ಅದರ ಫಸಲನ್ನು ಸಂಸದ ಜಿ.ಎಸ್.ಬಸವರಾಜ್ ಚೆನ್ನಾಗಿಯೇ ಉಂಡರು.

ಪಾರ್ಟಿ ಕಟ್ಟುವಲ್ಲಿ, ರಾಜಕೀಯ ಮಾಡುವುದರಲ್ಲಿ ಸದ್ಯದ ಮಟ್ಟಿಗೆ ಸುರೇಶಗೌಡರನ್ನು ಮೀರಿಸುವ ನಾಯಕರು ಜಿಲ್ಲೆಯಲ್ಲಿ ಯಾವುದೇ ಪಕ್ಷದಲ್ಲೂ ಯಾರೂ ಇಲ್ಲ ಎಂಬುದನ್ನು ಯಾರೂ ಬೇಕಾದರೂ ಒಪ್ಪುತ್ತಾರೆ.

ನಾಲ್ಕು ದಶಕಗಳಿಂದ ಇಡೀ ಜಿಲ್ಲೆಯ ರಾಜಕಾರಣವನ್ನು ತನ್ನ ಬಿಗಿ ಹಿಡಿತದಲ್ಲೇ ಇಟ್ಟುಕೊಂಡಿರುವ ಸಂಸದ ಬಸವರಾಜ್ ಅವರೂ ಹೀಗಲೂ ಜಿಲ್ಲೆಯ ಮಟ್ಟಿಗೆ ರಾಜಕೀಯ ಹೀರೋನೆ ಸರಿ. ಅವರ ರಾಜಕೀಯದಾಟ, ಒಳ ಉದ್ದೇಶ ಏನೇ ಇರಲಿ ಅವರು ಕಣ್ಣಾಡಿಸಿದಂತೆ ಜಿಲ್ಲೆಯ ರಾಜಕಾರಣ ಮಗ್ಗಲು ಬದಲಿಸುತ್ತಿರುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವರ ಜಾತಿಯೂ ಅವರಿಗೆ ಬೆಂಬಲವಾಗಿಯೇ ನಿಂತಿದೆ ಎಂಬುದನ್ನು ಬೇರೇ ಹೇಳಬೇಕಾಗಿಲ್ಲ.

ಇದೆಲ್ಲದರ ನಡುವೆ ಶಿರಾದ ಉಪಚುನಾವಣೆ ನಡೆ ಮತ್ತೊಂದು ರಾಜಕೀಯ ಚದುರಂಗದಾಟಕ್ಕೆ ಅವಕಾಶ ಮಾಡಿಕೊಡಲಿದೆ ಎಂಬ ಮಾತುಗಳು ಈ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ನಾಯಕರ ಚಲನವಲನ ಗಮನಿಸಿದವರಿಗೆಲ್ಲ ಗೊತ್ತಾಗುವುದು ಕಷ್ಟವೇನಲ್ಲ.

ಕಾಂಗ್ರೆಸ್ ನ ಜಯಚಂದ್ರ ಅವರನ್ನು ಸೋಲಿಸುವುದು ಸಣ್ಣ ಮಾತೇನಲ್ಲ. ಅವರು ಶಿರಾಗಾಗಿ ಅನೇಕಾನೇಕ ಕೆಲಸಗಳನ್ನು ಮಾಡಿದ್ದಾರೆ. ಶಿರಾದ ಉಸ್ತುವಾರಿ ಸಚಿವರು ಎಂದು ನಿಂದನೆಗೆ ಒಳಗಾದರೂ ಅವರು ಶಿರಾಗೆ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಶಿರಾದ ಆಧುನಿಕ ನಿರ್ಮಾತೃ ಎಂದು ಅವರನ್ನು ಕರೆದರೂ ತಪ್ಪಿಲ್ಲ ಎನ್ನುವಷ್ಟು ಯೋಜನೆಗಳನ್ನು ಅವರು ಅಲ್ಲಿಗೆ ತಂದಿದ್ದಾರೆ. ಅವೆಲ್ಲ ಇನ್ನೂ ಜೀವ ಪಡೆಯಬೇಕಷ್ಟೇ.

ಕಳೆದ ಸಲ ಜಯಚಂದ್ರ ಸೋಲಿಗೆ ಜಯಚಂದ್ರ ಅವರೇ ಕಾರಣರಾದರು. ಆತ್ಮಾವಲೋಕ‌ನ ಮಾಡಿಕೊಂಡರೆ ಅವರ ಜನರೊಂದಿಗೇನೆ ಅವರು ನಡೆದುಕೊಂಡ ರೀತಿ ಅವರ ಕಣ್ಣಮುಂದೆ ಈಗ ಸುಳಿದಾಡಬಹುದೇನೋ?

ಈಗ ನಾವು, ಮತ್ತೇ ಬಿಜೆಪಿ ಕಡೆಗೆ ನೋಡೋಣ.

ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಪ್ರಬಲ ಪೈಪೋಟಿ ನೀಡಬಹುದು ಎಂಬುದಷ್ಟೇ ಈಗ ಚರ್ಚೆಯ ವಿಷಯವಾಗಿದೆ ಎನ್ನುತ್ತವೆ ಆ ಪಕ್ಷದ ಮೂಲಗಳು.

ತುಮಕೂರು‌ ಜಿಲ್ಲೆಯ ರಾಜಕಾರಣದ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿರುವ ಸಚಿವ ಸೋಮಣ್ಣ ಅವರು ಉಪ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನೇ ವಹಿಸುತ್ತಿದ್ದಾರೆ. ಅದು ಹೇಗೆಂಬುದು ಬಿಜೆಪಿಯವರಿಗೆ ಚೆನ್ನಾಗಿಯೇ ಗೊತ್ತು. ಅದು ಅವರಲ್ಲಿ ಯಾರಾದರೂ ಒಬ್ಬರು ಬಹಿರಂಗವಾಗಿ ಹೇಳುವವರೆಗೂ ಕಾಯಬೇಕಷ್ಟೆ. ಸೋಮಣ್ಣ ಅವರ ಆಸಕ್ತಿ ಏನಿದೆಯೊ?

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಹೊಸ ಉಪಾಯವೂಂದನ್ನು ಸಹ ಗಳಸ್ಯಕಂಠಸ್ಯದ ಇಬ್ಬರು ನಾಯಕರು ಎಣೆದಿದ್ದಾರೆ. ಅದು ಫಲಕೊಟ್ಟರೆ ಶಾಸಕಿ ಪೂರ್ಣಿಮಾ ಅವರ ಪತಿ, ಗೊಲ್ಲ ಸಮುದಾಯದ ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ. ಕಾಡುಗೊಲ್ಲ, ಊರು ಗೊಲ್ಲರ ವಿಭಜನೆ ಬೇರೆ ವಿಷಯ.

ಶ್ರೀನಿವಾಸ್ ಅವರಿಗೆ ಟಿಕೆಟ್ ಸಿಕ್ಕಿ ಅವರು ಸೋಲಲಿ, ಅಥವಾ ಗೆಲ್ಲಲಿ ಗುಬ್ಬಿ ಕ್ಷೇತ್ರಕ್ಕೆ ಹೊಸ ಲಿಂಗಾಯತ ನಾಯಕನ ಆಗಮನ ಜೋರಾಗಿಯೇ ಆಗಲಿದೆ. ರಾಜಕಾರಣ ಮಗ್ಗಲು ಬದಲಿಸಲಿದೆ.

ಗುಬ್ಬಿಗೆ ಮತ್ತೊಬ್ಬ ವಲಸೆ ಲಿಂಗಾಯತ ನಾಯಕರು ಬರಲಿದ್ದಾರೆ. ಈ ಮೂಲಕ ಮುಂದಿನ ವಿಧಾನಭಾ ಚುನಾವಣೆಯಲ್ಲಿ ಹೊಸ ಪ್ರಯೋಗಾದಾಟಕ್ಕೆ ಶಿರಾ ಚುನಾವಣೆ ಹಾಸುಗಲ್ಲು ಹಾಕುತ್ತಿದೆ.

ಕುಂಚಿಟಿಗರಿಗೆ ಟಿಕೆಟ್ ಕೊಡಬೇಕು ಎಂದು ಬಿಜೆಪಿಯಲ್ಲಿ ಕೆಲವರು ಪಟ್ಟು ಹಿಡಿದ್ದಾರೆ. ಆದರೆ ಯಡಿಯೂರಪ್ಪ ಯಾರ ಮಾತು ಕೇಳುತ್ತಾರೊ ಅವರು ಹೇಳಿದವರಿಗೆ ಟಿಕೆಟ್ ಸಿಗುವುದಂತು ಖಚಿತ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಸಚಿವ ಸುಧಾಕರ್ ಹೆಗಲಿಗೆ ಶಿರಾ ಚುನಾವಣೆಯ ಜವಾಬ್ದಾರಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಇಬ್ಬರು ನಾಯಕರು ಇನ್ನೂ ಪೀಲ್ಡಿಗೆ ಇಳಿದಿಲ್ಲ. ನಿಧ‌ನರಾದ ಸತ್ಯನಾರಾಯಣ್ ಅವರ ಮನೆಗಷ್ಟೇ ಭೇಟಿ ನೀಡಿ ಹೋಗಿದ್ದಾರೆ. ಇದರ ಹಿಂದಿರುವ ರಾಜಕಾರಣ ಇಲ್ಲಿ ಬೇರೆ ಹೇಳಬೇಕಾಗಿಲ್ಲ.

ಗೆಲ್ಲದ ಕ್ಷೇತ್ರದಲ್ಲಿ ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಜತೆಗೆ ಜೆಡಿಎಸ್ ಅನ್ನೂ ಹೆದರಿಸಬೇಕಾಗಿದೆ. ಎರಡೂ ಪಕ್ಷಗಳ ಮತಬುಟ್ಟಿಗೆ ಕೈ ಹಾಕಬೇಕಾಗಿದೆ‌. ಇದರ ಚಾಣಾಕ್ಷತ ಹೇಗೆ ಮೆರೆಯಲಿದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ.

ಇಲ್ಲವಾದರೆ ಈ ಸಲ ಶಿರಾ ಬಿಟ್ಟುಕೊಟ್ಟು ಮುಂದಿನ ಸಲ ಗುಬ್ಬಿ ಕ್ಷೇತ್ರದಲ್ಲಿ ಗೆಲ್ಲುವ ಆಟ ಕಟ್ಟಿದರೆ ಬಿಜೆಪಿಯವರಿಗೆ ಶಿರಾ ಗೆಲ್ಲುವುದಕ್ಕಿಂತಲೂ ಗುಬ್ಬಿ ಗೆಲ್ಲುವುದು ಸುಲಭವಾಗಬಹುದೇನೋ?

ಕೊರೊನಾ ಬಂದ್ರೆ ಹೇಳ್ಬೇಕಾ, ಬೇಡ್ವ?

0

Publicstory. in


Tumkuru:, ಕೊರೊನಾ ಪಾಸಿಟಿವ್ ಬಂದವರು ಅದನ್ನು ಹೇಳ್ಬೇಕಾ ಬೇಡ್ವ…

ಆರೋಗ್ಯ ಸಿಬ್ಬಂದಿ, ಕಾರ್ಯಕರ್ತರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕೊರೊನಾ ಮನೋ ಪ್ರವೃತ್ತಿ ವೆಬ್ ನಾರ್ ನಲ್ಲಿ ಹಿರಿಯ ತಜ್ಞ ವೈದ್ಯ ಡಾ. ರಜನಿ ಹೇಳಿದ್ದು ಹೀಗೆ.

ಕೊರೊನಾ ಬಂದವರು ಏಕೆ ಹೆದರುತ್ತೀರಿ. ಎದೆತಟ್ಟಿ ದೈರ್ಯವಾಗಿ ಹೇಳಿ ನನಗೆ ಕೊರೊನಾ ಬಂದಿದೆ, ದೈರ್ಯವಾಗಿ ಹೇಳಿ ನಾನು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ದೈರ್ಯವಾಗಿ ಹೇಳಿ ನಮ್ಮನೆಯಲ್ಲೇ ಕೊರೊನಾ ರೋಗಿಯನ್ನು ಆರೈಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜಕಾರಣಿಗಳು, ಸಿನಿಮಾ ನಟರು ಕೊರೊನಾ ಬಂದರೆ ಅವರ ಟ್ವಿಟರ್ ಗಳಲ್ಲಿ ಹಾಕಿಕೊಳ್ತಾರೆ, ಫೇಸ್ ಬುಕ್ ನಲ್ಲಿ ಹಾಕ್ತಾರೆ. ಕೊರೊನಾ ಯಾರಿಗೂ ತಾರತಮ್ಯ ಮಾಡುವುದಿಲ್ಲ, ಎಲ್ಲರಿಗೂ ಬರುತ್ತದೆ, ಎಲ್ಲರಿಗು ಹೋಗುತ್ತದೆ. ಹೀಗಾಗಿ ಯಾರು ಹೆದರಬಾರದು. ಇದು ಒಂದು ರೋಗ ಅಷ್ಟೇ ಎಂದು ತಿಳಿಸಿದರು.

ಆರಂಭಿಕ ಹಂತದಲ್ಲೇ ಕೊರೊನಾ ಇರುವುದು ಪತ್ತೆಯಾದರೆ ಚಿಕಿತ್ಸೆ ನೀಡುವುದು ಸುಲಭ. ಆರೇಳು ದಿನಗಳಲ್ಲಿ ಬಹುತೇಕರು ಗುಣವಾಗುತ್ತಾರೆ. ಅದರೆ ನನಗೆ ಏನು ಅಗಿಲ್ಲ ಎಂದು ದಿನದೂಡುವುದರಿಂದ ಅಪಾಯವೇ ಹೆಚ್ಚು ಎಂದರು.

ಮಾಸ್ಕ್ ಅ‌ನ್ನು ಫ್ಯಾಷನ್ ತರಾ ಬಳಸುವುದರಿಂದ, ಟೆಸ್ಟ್ ಮಾಡಿಕೊಳ್ಳದವರೆ ರೋಗ ಹರಡಲು ಕಾರಣರು. ಮಾಸ್ಕ್ ಅನ್ನು ಕೊರಳಿಗೆ ನೇತು ಹಾಕಿಕೊಳ್ಳಲು ಅದೇನು ನಕ್ಲೇಸ್ ಅಲ್ಲ ಎಂದರು.

ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ದೈಹಿಕ ಅಂತರ ಕಾಪಾಡಿಕೊಂಡರೇ ಕೊರೊನಾ ಒದ್ದೋಡಿಸಬಹುದು ಎಂದರು.

ದೈಹಿಕ ಅಂತರ ಎಂಬುದು ಸಾಮಾಜಿಕ ಅಂತರ ಎಂಬ ತಪ್ಪು ಕಲ್ಪನೆಯಲ್ಲಿ ಬಿತ್ತರವಾಯಿತು. ಸಾಮಾಜಿಕ ಅಂತರವಲ್ಲ ದೈಹಿಕ ಅಂತರವನ್ನು ಕಾಪಾಡಿ ಎಂದರು.

ವೈಯಕ್ತಿಕ ಸ್ವಚ್ಛತೆ, ಬಿಸಿಬಿಸಿ ಊಟ, ಒಳ್ಳೆಯ ನಿದ್ದೆ, ವ್ಯಾಯಾಮ, ಕೈ ತೊಳೆಯುವುದು, ಜನರೊಂದಿಗೆ ದೈಹಿಕ ಅಂತರ, ಬಿಸಿ ನೀರು ಕುಡಿಯುವುದು ಎಲ್ಲರ ಮೂಲಮಂತ್ರವಾಗಬೇಕು ಎಂದರು.

ಮಾಧ್ಯಮಗಳಲ್ಲಿ ಬರುವುದೆಲ್ಲವನ್ನು ನಂಬಬೇಡಿ. ಕೈಗೆ ಸಿಕ್ಕಿದೆಲ್ಲವನ್ನು ಕುಡಿದು, ತಿನ್ನಬೇಡಿ. ರೋಗದ ನಿರ್ವಣೆಯ ಬಗ್ಗೆ ಮಾಹಿತಿ ಬೇಕಿದ್ದರೆ ವಿಶ್ವ ಆರೋಗ್ಯ ಸಂಸ್ಥೆ, ರಾಜ್ಯ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ವೆಬ್ ಸೈಟ್ ಗಳನ್ನು ನೋಡಿ ತಿಳಿದುಕೊಳ್ಳಿ. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳಿ ಎಂದು ಸಲಹೆ ನೀಡಿದರು.

ಕೋವಿಡ್ ಬಂದ ವಯಸ್ಸಾದವರು ಸಹ ಆರೇಳು ದಿನಗಳಲ್ಲಿ ಹುಷಾರಾಗುತ್ತಿದ್ದಾರೆ. ಬಿಪಿ, ಶುಗರ್ ಇದ್ದವರು ವಾಸಿಯಾಗುತ್ತಿದ್ದಾರೆ. ಹಾಗಂತ ರೋಗಕ್ಕೆ ಸೆಡ್ಡು ಹೊಡೆದು ಹೇಗೆ ಬೇಕೆಂದು ನಡೆದುಕೊಳ್ಳಬೇಡಿ. ಮಾಸ್ಕ್ ಹಾಕದೇ ಹೊರಹೋಗಬೇಡಿ. ಮಾಸ್ಕ್ ಕುತ್ತಿಗೆಗೆ ಹಾಕಿಕೊಳ್ಳಬೇಡಿ, ಮೂಗು, ಬಾಯಿ ಮುಚ್ಚಿಕೊಳ್ಳಲು ಹಾಕಿಕೊಳ್ಳಿ ಎಂದು ಸಲಹೆ ನೀಡಿದರು.