Thursday, May 7, 2026
Google search engine
Home Blog Page 175

ಈ ಮಗು ಉಳಿಸಲು ನೆರವಾಗಿ

0

Publicstory.in


ತುಮಕೂರು; ಒಂದು ವರ್ಷದ ಮಗುವಿನ ಪ್ರಾಣದ ಉಳಿವಿಗೆ ದಾನಿಗಳು, ಸಹೃದಯರು‌‌ ನೆರವಾಗಬೇಕಿದೆ. ಮಗುವಿನ ಪ್ರಾಣ ಉಳಿಸಲು ಜನರು ಸಹಾಯ ಹಸ್ತ ಚಾಚಬೇಕಾಗಿದೆ.

ಈ ಮಗು ಶೀಲಾರವರ ಒಂದು ವರ್ಷದ ಮಗು. Thalassemia Major ಎಂಬ ರಕ್ತ ಹೀನತೆಯಿಂದ ಬಳಲುತ್ತಿದೆ.

ಈ ರೋಗಿಗಳಿಗೆ ಸಾಮಾನ್ಯ ಮನುಷ್ಯನ ದೇಹದಲ್ಲಿರುವ ರಕ್ತದ ಕಣಗಳಿಗಿಂತ *(RBC)* ಕಡಿಮೆ ಇರುತ್ತದೆ. ಇದರಿಂದ ಮಗುವಿನ ದೇಹದಲ್ಲಿ ರಕ್ತದ ಉತ್ಪಾದನೆ ಆಗುವುದಿಲ್ಲ.

ಇದು ಒಂದು ಅಪರೂಪದ ಕಾಯಿಲೆಯಾಗಿದೆ. ಇದಕ್ಕೆ ತಾತ್ಕಾಲಿಕ ಚಿಕಿತ್ಸೆಯಾಗಿ ಮಗುವಿಗೆ 21ದಿನಗಳಿಗೂಮ್ಮೆ ರಕ್ತ ಕೊಡಿಸಲಾಗುತ್ತಿದೆ.

ಶಾಶ್ವತವಾಗಿ* ಇದನ್ನು ಸರಿಪಡಿಸಲು ಮಗುವಿಗೆ *BMT(Bone Marrow Transplantation)* ಶಸ್ತ್ರ ಚಿಕಿತ್ಸೆಯನ್ನು ತಕ್ಷಣವೇ ಮಾಡಿಸಬೇಕಾಗಿದೆ. ಇದಕ್ಕೆ ಸುಮಾರು *38ಲಕ್ಷದಷ್ಟು ಹಣದ ಅವಶ್ಯಕತೆಯಿದೆ(ಆಸ್ಪತ್ರೆಯ ವರದಿಯನ್ನು ಕೆಳಗೆ ಲಗತ್ತಿಸಿದೆ).

ಮಗುವಿನ ತಂದೆ ತಾಯಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ಸಾಧ್ಯವಿಲ್ಲ. ಆದುದರಿಂದ ಸಹೃದಯರು ಮಗುವನ್ನು ಉಳಿಸಿಕೊಳ್ಳಲು ನಿಮ್ಮ ಕೈಲಾದಷ್ಟು ಸಹಾಯ ಮಾಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

ನಿಮ್ಮ ಸಹಾಯ ಮಗುವಿನ ಚಿಕಿತ್ಸೆಗೆ ಅತ್ಯಮೂಲ್ಯವಾದುದಾಗಿದೆ.

ಈ ಕೆಳಗಿನ ಬ್ಯಾಂಕ್ ಖಾತೆ, ಗೂಗಲ್ ಪೇ, ಫೋನ್ ಪೇ ನಂಬರ್ ಗೆ ಪಾವತಿಸಬಹುದು.

DINESHA.M.N SBI A/C-64028046324 IFSC:SBIN0040610 BRANCH:GOKULAM, Mysore G.pay & phone pay no-9164471495

ಕೊರೊ‌ನಾ ಟೆಸ್ಟ್ ಮಾಡಿದ್ರೆ ದುಡ್ಡು ಬರೋಲ್ಲ, ಖರ್ಚಾಗುತ್ತೆ: ನಿಮಗೆ ಗೊತ್ತಿರಲಿ

0

Publicstory. in


ತುಮಕೂರು: ಕೋವಿಡ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಕಪೋಲ ಕಲ್ಪಿತ ಕತೆಗಳನ್ನು ಬಿಟ್ಟು ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹಿರಿಯ ತಜ್ಞ ವೈದ್ಯೆ, DSHC ಪ್ರಾಂಶುಪಾಲರಾದ ಡಾ.ಎಂ.ರಜನಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಶಿರಾ, ಗುಬ್ಬಿ, ಕುಣಿಗಲ್ ತಾಲ್ಲೂಕುಗಳ ವೈದ್ಯರು, ವೈದ್ಯ ಸಿಬ್ಬಂದಿ, ಕಾರ್ಯಕರ್ತರಿಗೆ ಆಯೋಜಿಸಿಸ್ದ ಕೊರೊನ ಕುರಿತ ವೆಬ್ ನಾರ್ ನಲ್ಲಿ ಮಾತನಾಡಿದರು.

ಕೊರೊನಾ ಪರೀಕ್ಷೆ ನಾವೇಕೆ ಮಾಡಿಸಿಕೊಳ್ಳಬೇಕು. ನಮಗೇ ಯಾವುದೇ ಲಕ್ಷಣಗಳು ಇಲ್ಲ ಎಂದು ಹೇಳುವವರು ಇದ್ದಾರೆ. ಕೊರೊನಾ ಇದ್ದವರಿಗೆಲ್ಲ ಲಕ್ಷಣಗಳು ಇರಬೇಕು ಎಂದೇನಿಲ್ಲ ಎಂದರು.

ಕೊರೊನಾ ಒಂದು ಟೆಸ್ಟ್ ಮಾಡಿದರೆ ಟೆಸ್ಟ್ ಮಾಡಿದವರಿಗೆ ಸರ್ಕಾರ ದುಡ್ಟು ಕೊಡುತ್ತದೆ. ಹಾಗಾಗಿಯೇ ಎಲ್ಲೆಂದೆಲ್ಲಿ ಟೆಸ್ಟ್ ಮಾಡ್ತಾ ಇದ್ದಾರೆ ಎಂದು ವಾಟ್ಸ್ ಆಪ್ ಗಳಲ್ಲಿ ಬರುವ ಕಪೋಲ ಕಲ್ಪಿತ ಕತೆಗಳನ್ನು ನಂಬಬೇಡಿ. ಟೆಸ್ಟ್ ಮಾಡುವುರಿಂದ ಸರ್ಕಾರದ ದುಡ್ಡೇ ಖರ್ಚಾಗುತ್ತದೆ. ಖಾಸಗಿಯವರು ಒಂದು ಟೆಸ್ಟ್ ಗೆ ನಾಲ್ಕರಿಂದ‌‌ ಐದು ಸಾವಿರ ತಗೊಳ್ತಾರೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

ಕೊರೊನಾ ಪರೀಕ್ಷೆಯಲ್ಲಿ ನಾಲ್ಕೈದು ವಿಧಗಳಿವೆ. ವೈರಸ್ ಕಡಿಮೆ ಇರುವವರಿಗೆ ಮೂಗಿನ ದ್ರವ ತೆಗೆದು ಟೆಸ್ಟ್ ಮಾಡಿದಾಗ ನೆಗಟಿವ್ ಬರಬಹುದು. ಗಂಟಲಿನ ದ್ರವ ತೆಗೆದಾಗ ಪಾಸಿಟಿವ್ ಬರಬಹುದು. ಇದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಒಮ್ಮೆ ಪಾಸಿಟಿವ್ ಬರುತ್ತದೆ, ಇನ್ನೊ
ಮ್ಮೆ ನೆಗಟಿವ್ ಬರ್ತದೆ ಎಂದು ಗುಲ್ಲೆಬ್ಬಿಸಬೇಡಿ. ನೆಗಟಿವ್ ಬಂದವರಿಗೆ ಆರ್ ಟಿಪಿಎಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬರಬಾರದು ಎಂದೇನಿಲ್ಲ. ಆಂಟಿಜನ್ ಪರೀಕ್ಷೆ ಮನೆ ಬಾಗಿಲಿಗೆ ಒಂದು ಮಾಡಬಹುದು. ಹೀಗಾಗಿ ಎಲ್ಲರು ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.

ಕೋವಿಡ್ ಬಗೆಗಿನ ಈ ತಪ್ಪು ಕಲ್ಪನೆಗಳೇ ರೋಗ ತಡೆಯಲು ಸಮಸ್ಯೆಯಾಗುತ್ತದೆ. ನಿಮ್ಮಿಂದಾಗಿ ಮನೆಯ ಮಕ್ಕಳಿಗೆ, ತಂದೆ ತಾಯಿಗಳಿಗೆ ಸಮಸ್ಯೆ ಯಾಗಬಾರದೆಂದರೆ ಮೊದಲು ಟೆಸ್ಟ್ ಮಾಡಿಸಿಕೊಳ್ಳಿ ಎಂದರು.

ನೀವು ನೀವುಗಳಲ್ಲೇ ನಿರ್ಧಾರಕ್ಕೆ ಬರಬೇಡಿ. ಆಶಾ ಕಾರ್ಯಕರ್ತೆಯರು ಜನರು ಟೆಸ್ಟ್ ಮಾಡಿಸಿಕೊಳ್ಳಲು ಮನವೊಲಿಸಬೇಕು. ವಿಷಯವನ್ನು ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸಬೇಕು ಎಂದರು.

ಸೆ.25ರಂದು ಜಿಲ್ಲೆಯಲ್ಲಿ ಹೆದ್ದಾರಿ ತಡೆ; ಬಿ.ಉಮೇಶ್

Publicstory.in


ತುಮಕೂರು: ಅಖಿಲ ಭಾರತ ಕಿಸಾನ್ ಸಂಘಷ೯ ಸಮನ್ವಯ ಸಮಿತಿ, ಕಾಮಿ೯ಕ- ದಲಿತ-ಸಂಘಟನೆಗಳು ಮುಂತಾದ ಸಮಿತಿಗಳವತಿಯಿಂದ ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮುಂತಾದ ರೈತ-ಕಾರ್ಮಿಕ-ದಲಿತ-ಸಂಘಸಂಸ್ಥೆಗಳ ವಿರೋಧಿ ದೋರಣೆ ಖಂಡಿಸಿ ಸೆ. 25 ರಂದು ಜಿಲ್ಲೆಯಲ್ಲಿ ನಡೆಯುವ ಹೆದ್ದಾರಿ ತಡೆ ಚಳುವಳಿ ನಡೆಸಲಾಗುವುದು ಎಂದು ರೈತ ಮುಖಂಡ‌ ಬಿ.ಉಮೇಶ್ ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃ,ಷಿ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಈ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

.

ಶಿರಾ ಉಪಚುನಾವಣೆ: ಜಯಚಂದ್ರ ಸೋಲಿಸಲು ಬಿಜೆಪಿಗೇಕಿಷ್ಟು ಒದ್ದಾಟ?

0

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಕಾಂಗ್ರೆಸ್ ನ ತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ (T.B.Jayachandra) ಅವರನ್ನು ಶಿರಾ ಉಪ‌ಚುನಾವಣೆಯಲ್ಲಿ ಸೋಲಿಸಲು ಈಗಾಗಲೇ ಒಂದು ಸುತ್ತಿನ ಬೆವರು ಹರಿಸಿರುವ ಬಿಜೆಪಿ ಏಕಿಷ್ಟು ಒದ್ದಾಟ ಆರಂಭಿಸಿದೆ ಎಂಬುದು ಶಿರಾ ನೋಡಿದವರಿಗೆಲ್ಲ ಗೊತ್ತಾಗುತ್ತದೆ.

ಹಾಗೇ, ನೋಡಿದರೆ ಕೃಷ್ಣಾ ಕೊಳ್ಳದ ಶಿರಾ ಬಿಜೆಪಿಯ ಸೆರಗೇನಲ್ಲ. ಬಿಜೆಪಿ ಬಗ್ಗೆ ಅಲ್ಲಿ ಬೆರಳಣಿಕೆ ಮಂದಿ ಯೋಚಿಸುವಂತಾಗಲೂ ಕಾರಣ ಸಂಘ ಪರಿವಾರದ ಕಾರ್ಯಾಚರಣೆ. ಆನಂತರ ಅಲ್ಲಿಗೆ ಒಂದಿಷ್ಟು ಭದ್ರ ಬುನಾದಿ ಹಾಕಿದವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡ.

ಸತ್ಯನಾರಾಯಣ್ ಇರುವವರೆಗೂ ನಮಗೆ ದೇವೇಗೌಡರು ಟಿಕೆಟ್ ಕೊಡುವುದಿಲ್ಲ ಎಂದು ಒಳ ಒಳಗೆ ಕೊತ ಕೊತ ಕುದಿಯುತ್ತಿದ್ದ ಜೆಡಿಎಸ್ ಮುಖಂಡರನ್ನು ಮೆಲ್ಲಗೆ ಬಿಜೆಪಿ ತೆಕ್ಕೆಗೆ ಸೇರಿಸಿಕೊಂಡರು, ಅವರಲ್ಲಿ ಪ್ರಮುಖರು ಎಸ್.ಆರ್.ಗೌಡ. ಸುರೇಶಗೌಡರ ಹಿಡಿತಕ್ಕೆ ಸಿಗದಂತೆ ತಪ್ಪಿಸಿಕೊಂಡವರು ಸಿ.ಆರ್. ಗೌಡ, ಪ್ರೆಸಿಡೆನ್ಸಿ ಶಾಲೆಯ ಚಿದಾನಂದ.

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಆಫರೇಷ‌ನ್ ಕಮಲಕ್ಕೆ ಬಲಿಯಾಗದವರು ಈಚೆಗಷ್ಟೇ ನಿಧ‌ನರಾದ ಶಾಸಕ ಬಿ.ಎಸ್.ಸತ್ಯನಾರಾಯಣ್

ಸತ್ಯನಾರಾಯಣ್ ಅವರು ಎಷ್ಟು ಉದಾರಿ, ಕುಲ್ಲಂಕುಲ್ಲ ಮನುಷ್ಯ ಎಂದರೆ ಅವರಿಗೆ ಏನನ್ನು ಮುಚ್ಚಿಕೊಳ್ಳಲು ಬರುತ್ತಿರಲೇ ಇಲ್ಲ.

ಇನ್ನೂ, ಕಾಯಿತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ ಕಾಂಗ್ರೆಸ್ ನ ಘಟಾನುಗಟಿ ನಾಯಕರಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅವರಿಗೆ ಸರಿಯಾದ ಅದೃಷ್ಟ ಕೂಡಿ ಬರಲೇ ಇಲ್ಲ. ಬಂದರೂ ಅದನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಶಿರಾಗಷ್ಟೇ ಸೀಮಿತ ವಾಗಿ ಉಳಿದರು. ಎಷ್ಟರ ಮಟ್ಟಿಗೆಂದರೆ ಅವರೊಬ್ಬರು ಜಿಲ್ಲೆಯ ನಾಯಕರಾಗಿಯೂ ರೂಪುಗೊಳ್ಳದಷ್ಟು.

ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರ ಮಾತುಗಳಲ್ಲೇ ಹೇಳಬೇಕೆಂದರೆ ಜಯಚಂದ್ರ ಒಬ್ಬ ಬ್ರಾಹ್ಮಣ ರಾಜಕಾರಣಿ. ಅಂದರೆ ಜಿಲ್ಲೆಯ ಚತುರಾತಿ ಚತುರ ರಾಜಕಾರಣಿ. ಅವರು ಯಾರ ವಿರುದ್ಧವೂ ಮಾತನಾಡಿದವರಲ್ಲ. ಹೀಗಾಗಿಯೇ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ಟೀಕಿಸಿದಾಗಲೂ ಅವರು ಮರು ಮಾತಾಡಿಲ್ಲ. ಈಗ ಈ ಮೌನದ ಚರುರತೆಯೇ ಅವರ ನೆರವಿಗೆ ಬಂದಂತಿದೆ ಎಂಬುದನ್ನು ಹೇಳಕೇಕಾದರೆ ಚುನಾವಣಾ ಫಲಿತಾಂಶದವರೆಗೂ ಕಾಯಬೇಕಾಗಿದೆ.

ಒಕ್ಕಲಿಗರು ಅದರಲ್ಲಿ ಕುಂಚಿಟಿಗ ಒಕ್ಕಲಿಗರು, ಗೊಲ್ಲರು, ಮುಸಲ್ಮಾನರು, ಕುರುಬರು, ದಲಿತರು ಹೆಚ್ಚಿರುವ ಇಲ್ಲಿ ಉಳಿದ ಸಮುದಾಯ ಗೌಣ. ಲಿಂಗಾಯತರ ಪ್ರಾಬಲ್ಯ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಆರಿಸುವ ಮೂಲಕ ನನ್ನ ತಂದೆ ಬಿ.ಎಸ್.ಯಡಿಯೂರಪ್ಪ ಎಲ್ಲ ಜನರ ಪ್ರಶ್ನಾತೀತ ನಾಯಕ ಎಂದು ಹೈ ಕಮಾಂಡ್ ಗೆ ಸಾರುವುದು, ಸರ್ಕಾರವನ್ನು ಮತ್ತಷ್ಟು ಗಟ್ಟಿಗಳಿಸಿಕೊಳ್ಳುವ ಉದ್ದೇಶ ಮುಖ್ಯಮಂತ್ರಿ ಮಗ ವಿಜಯೇಂದ್ರ ಅವರಿಗೆ ಇದ್ದಂತಿದೆ. ಹೀಗಾಗಿಯೇ‌ ಅವರು ಚುನಾವಣೆಗೆ ಮುಂಚೆಯೇ ಶಿರಾಗೆ ಒಂದು ಹೋಗಿದ್ದಾರೆ.

ಒಳ್ಳೆಯ ಅಭ್ಯರ್ಥಿ ಸಿಗದಿದ್ದರೆ ಚುನಾವಣೆ ಫಲಿತಾಂಶ ಘೋಷಣೆಗೆ ಮುನ್ನವೇ ಬಿಜೆಪಿ ಫಲಿತಾಂಶ ಏನಾಗಬಹುದು ಎಂಬುದು ಗೋಡೆ ಮೇಲೆ ಬರೆದಂತೆಯೇ ಇರಲಿದೆ.

ಅಭ್ಯರ್ಥಿಗಳನ್ನು ಕೊನೆ ಗೊಳಿಸದಿದ್ದರೂ ಐದಾರು ಜನರ ಹೆಸರನ್ನು‌ ಜೆಡಿಎಸ್ ನಂತೆ ಬಿಜೆಪಿಯೂ ತೇಲಿ ಬಿಟ್ಟಿದೆ. ಅಷ್ಟರ ಮಟ್ಟಿಗೆ ಆಯಾ ಜಾತಿಯ ಮುಖಂಡರ ಜಾತಿಯ ಜನರು ಬಿಜೆಪಿ ಬಗ್ಗೆ ಯೋಚಿಸಲಿ ಎಂಬುದು ಆ ಪಕ್ಷದ ಚಿಂತಕರ‌ ಚಾವಡಿಯ ಉದ್ದೇಶ ಇರಬಹುದು.

ಈಗ ತೇಲಿ ಬಿಟ್ಟಿರುವ ಹೆಸರುಗಳ ನಾಯಕರಿಗೆ ಜಯಚಂದ್ರ ಅವರ ಎದುರು‌ ನಿಲ್ಲುವಂತಹ ನಾಯಕಗಿರಿ ಏನಿಲ್ಲ. ಹಾಗೇ‌ನಾದರೇ, ಯಡಿಯೂರಪ್ಪ, ಹೇಮಾವತಿ ನೀರು, ಹಿಂದುತ್ವದ ಮುಖ ಮುಂದು ಮಾಡಿ ಬಿಜೆಪಿ ಚುನಾವಣೆ ಎದುರಿಸಬೇಕಾಬಹುದು. ಕೃಷ್ಣಾ‌ಕೊಳ್ಳದ ನೀರಿನ ಹೆಸರಿನಿಂದಲೇ ಶಿರಾದಲ್ಲಿ ರಾಜಕೀಯ ನೆಲೆ‌ಕಂಡುಕೊಂಡ ಜಯಚಂದ್ರ, ಕೆ.ಎನ್.ರಾಜಣ್ಣ ಟೀಂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಿಗೆ ಕಾಂಗ್ರೆಸ್ ನ ಬತ್ತಳಿಕೆಯಲ್ಲಿ ಬಾಣಗಳಿದ್ದಂತೆ ಕಾಣುತ್ತಿಲ್ಲ. ಆದರೆ ಈ ಚುನಾವಣೆ ಮೂಲಕ ಕೆ.ಎನ್.ರಾಜಣ್ಣ ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಸಾಗಿ ಹೋಗುವುದಂತೂ ಸತ್ಯ.

ಇನ್ನು ಜಯಚಂದ್ರ ಅವರ ಅಭಿವೃದ್ಧಿ ರಾಜಕಾರಣದ ಬೆನ್ನು ಮುರಿಯಲು ಅಭಿವೃದ್ಧಿ ವಿಷಯದಲ್ಲಿ‌ ಜಿಲ್ಲೆಯ ಮನೆ ಮಾತಾಗಿರುವ ಮಾಜಿ ಶಾಸಕ ಬಿ.ಸುರೇಶಗೌಡ‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿಸಿದರೆ ಮಾತ್ರ ಬಿಜೆಪಿಗೆ ಪ್ರಚಾರ ಸುಲಭವಾಗಲಿದೆ. ಗೆಲುವಿ‌ನ‌‌ ದಡ ಸೇರಬಹುದೇನೊ ಎಂಬ ವಿಶ್ವಾಸ ಆ ಪಕ್ಷದ ಕಾರ್ಯಕರ್ತರಲ್ಲಿ, ಕ್ಷೇತ್ರದ ಜನರಲ್ಲಿ ಮೂಡಬಹುದುದೇನೊ?

ಕಾಂಗ್ರೆಸ್, ಜೆಡಿಎಸ್ ಬಲಾಢ್ಯದ ಕೋಟೆಯಲ್ಲಿ ಹೂ ಅರಳಿಸುವುದು ಬಿಜೆಪಿಗೆ ಅಷ್ಟು ಸುಲಭದ ಮಾತಲ್ಲ.

ಇನ್ನೂ ಜೆಡಿಎಸ್ ಗೆ ಅನುಕಂಪದ ಅಲೆ ಅಷ್ಟೇನು ಕೆಲಸ ಮಾಡುವುದಿಲ್ಲ. ಕಳೆದ ಸಲ ಸತ್ಯನಾರಾಯಣ್ ಅವರನ್ನು ಗೆಲುವಿನ ದಡ ಮುಟ್ಟಿಸಿದ್ದೇ ಅವರ ಮೇಲಿದ್ದ ಅನುಕಂಪ. ಸುಮ್ಮನೇ ಗೆಲ್ಲಿಸಿ ಬಿಡಬಹುದಾಷ್ಟು ಅನುಕಂಪ ಖಂಡಿತಾ ಆ ಪಕ್ಷಕ್ಕೆ ಉಪ‌ಚುನಾವಣೆಯಲ್ಲಿ ಸಿಗಲಾರದು.

ಜೆಡಿಎಸ್ ನಲ್ಲೂ ಕೂಡ ನಾಲ್ಕಾರು ಜನರು ಹಲವು ದಶಕಗಳಿಂದ ಟಿಕೆಟ್ ಮೇಲೆ ಕಣ್ಣಿಟ್ಟು ಕಾದಿದ್ದಾರೆ. ಇವರನ್ನೆಲ್ಲ ಶಮನಗೊಳಿಸಿಕೊಂಡು ಸತ್ಯ‌ನಾರಾಯಣ್ ಮಗನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸತ್ಯನಾರಾಯಣ್ ಅವರ ಹೆಸರಿನಲ್ಲಿ ಏಕ ಮನಸ್ಸಿನಲ್ಲಿ ಜೆಡಿಎಸ್ ಕೆಲಸ ಮಾಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿರುವ ಚುನಾವಣಾ ದೃಶ್ಯ ಏನೆಲ್ಲ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಬಿಜೆಪಿ ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದಂತಿದೆ. ಅಭ್ಯರ್ಥಿ‌ ಯಾರೆಂಬುದೇ ಗೊತ್ತಿಲ್ಲ. ಆದರೆ ಅಲ್ಲಿ‌ನ ಜನರ ಮನಸ್ಸಿನಲ್ಲಿ ಮಾಜಿ ಶಾಸಕ ಸುರೇಶ ಗೌಡ ಹೆಸರು ತೇಲಿ ಹೋಗುತ್ತಿದೆ. ಸುರೇಶ ಗೌಡರು ತಮ್ಮ ಪ್ರೀತಿಯ ತುಮಕೂರು ಗ್ರಾಮಾಂತರ ಕ್ಷೇತ್ರ ಬಿಟ್ಟು ಶಿರಾಗೆ ಹೋಗುತ್ತಾರೆಯೇ ಎಂಬ ಪ್ರಶ್ನೆ ಕೂಡ ಇದೆ.

ಇನ್ನೂ, ಕಾಂಗ್ರೆಸ್ ನಲ್ಲಿ ಬೇರೇ ಮಾತೇ ಇಲ್ಲದಂತೆ ಟಿಬಿಜೆ ಹೆಸರು ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಸಾಮರ್ಥ್ಯ ಕೂಡ ಈ ಚುನಾವಣೆ ಹೊರಗಲ್ಲಿಗೆ ಹಚ್ಚಿದೆ.

ಲೋಕಸಭಾ ಚುನಾವಣೆಯಲ್ಲಿ ಸೋತ ಜೆಡಿಎಸ್ ಗೆ ಮತ್ತೇ ಮುಖ ಉಳಿಸಿಕೊಳ್ಳುವ ಸವಾಲು ಸಹ ಇದೆ.

ಚಿಕ್ಕನಾಯಕನಹಳ್ಳಿಯಲ್ಲಿ ಪತ್ರಕರ್ತರ, ವಿತರಕರ ಕಲರವ, ಮಕ್ಕಳಿಗೆ ಸನ್ಮಾನ

ಚಿಕ್ಕನಾಯಕನಹಳ್ಳಿ : ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 19-92020ರಂದು ಚಿಕ್ಕನಾಯಕನಹಳ್ಳಿ ರೋಟರಿ ಕನ್ವರ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ನೆರವೇರಿತು .

ಈ ಸಮಾರಂಭದ ಉದ್ಘಾಟನೆಯನ್ನು
ಜೆ. ಸಿ. ಮಾಧುಸ್ವಾಮಿ ಶಾಸಕರು ಚಿಕ್ಕನಾಯಕನಹಳ್ಳಿ ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡುತ್ತಾ ಪತ್ರಿಕೆಗಳು ಸಮಾಜದ ಸುಧಾರಣೆಯನ್ನು ಮಾಡುವುದರಲ್ಲಿ ಪ್ರಥಮ ಪಾತ್ರವನ್ನು ವಹಿಸುತ್ತದೆ ಹಾಗೂ ಪತ್ರಿಕೆಗಳ ಸುದ್ದಿಯ ಸಮಾಜದ ಸುಧಾರಣೆಯ ಮಾರ್ಗದರ್ಶನ ವಾಗಿದೆ ಸುದ್ದಿಗಳು ಸ್ಪಷ್ಟವಾಗಿ ಸತ್ಯ ನಿಷ್ಠುರವಾಗಿ ಕಾರ್ಯನಿರ್ವಹಿಸುವುದು ಪತ್ರಿಕಾ ಧರ್ಮದ ಕ್ಷೇತ್ರದಲ್ಲಿ ಯಶಸ್ಸಾಗಿದೆ ತಾಲೂಕು ಸಂಘವು ನೀಡಿರುವ ಮನವಿಯನ್ನು ಪರಿಗಣಿಸಿ ರಾಜ್ಯದಲ್ಲಿರುವ ಎಲ್ಲ ಪತ್ರಕರ್ತರ ಭವನಗಳಿಗೆ ನಿವೇಶನ ಹಾಗೂ ಕಟ್ಟಡಗಳ ಅನುಕೂಲವನ್ನು ವೀಕ್ಷಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇದರ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ರಂಗನಕೆರೆ ಮಹೇಶ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿಕ್ಕನಾಯಕನಹಳ್ಳಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷರಾದ
ಶಿವಾನಂದ ತಗಡೂರು ರವರು ಭಾಗವಹಿಸಿ ರಾಜ್ಯದಲ್ಲಿರುವ ಎಲ್ಲ ಪತ್ರಕರ್ತರಿಗೆ ಸಿಗುವಂತಹ ಸವಲತ್ತಿನ ಬಗ್ಗೆ ವಿವರಗಳನ್ನು ವಿವರಿಸಿದರು ಕೋವಿಂಡ 19 ಕರೋನಾ ದಿಂದ ಆರು ಜನ ಪತ್ರಕರ್ತರು ಸಾವನ್ನಪ್ಪಿದ್ದರು ಯಅವರಿಗೆ ತಲಾ ಐದು ಲಕ್ಷ ರೂಪಾಯಿಗಳಂತೆ ಒಟ್ಟು ರಾಜ್ಯ ಸರ್ಕಾರವು ಮೂವತ್ತು ಲಕ್ಷ ರೂಪಾಯಿಗಳನ್ನು ಮಂಜೂರಾತಿ ನೀಡಿರುವುದನ್ನು ಸ್ಮರಿಸಿದರು.
ರಾಜ್ಯ ಸಂಘದಿಂದ ಹಾಗೂ ರಾಜ್ಯ ಸರ್ಕಾರದಿಂದ ಗ್ರಾಮೀಣ ಪತ್ರಕರ್ತರಿಗೆ ಹಾಗೂ ಎಲ್ಲ ಪತ್ರಕರ್ತರು ಸಮಸ್ಯೆಗಳನ್ನು ಸ್ಪಂದಿಸುವಂತಹ ಸರ್ಕಾರ ಎಂದು ತಿಳಿಸಿದರು ಸುದ್ದಿಗಳು ಸಮಾಜದ ಸುಧಾರಣೆಯನ್ನು ಪ್ರತಿಬಿಂಬಿಸುವಂತೆ ಮೂಡಬೇಕು ಎಂದು ತಿಳಿಸಿದರು .

ಚಿ.ನಿ. ಪುರುಷೋತ್ತಮ್ ಜಿಲ್ಲಾಧ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತುಮಕೂರು ಜಿಲ್ಲಾ ಘಟಕ ರವರು ಮಾತನಾಡುತ್ತಾ ಜಿಲ್ಲೆಯಲ್ಲಿರುವ ಎಲ್ಲ ಪತ್ರಕರ್ತರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸಂಘವು ಸಮಂಜಸವಾಗಿ ನೀಡುತ್ತಿದ್ದು ಹಾಗೂ ಇತ್ತೀಚೆಗೆ ನಿಧನರಾದ ಮಧುಗಿರಿಯ ಮಹಾಲಿಂಗಪ್ಪ ಹಾಗೂ ಕುಣಿಗಲ್ ಫಯಾಜುಲ್ಲಾ ರವರು ಜಿಲ್ಲಾ ಸಂಘದಿಂದ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಗಿದೆ.ಹಾಗೂ
ರಾಜ್ಯ ಸಂಘದಿಂದ
ಗುಬ್ಬಿ ತಾಲ್ಲೂಕಿನ ವರದಿಗಾರರಾದ ಜಯಣ್ಣ ಅವರು ಕೊರೋನದಿಂದ ಸಾವನ್ನಪ್ಪಿದ್ದು ಅವರಿಗೆ ರಾಜ್ಯ ಸರ್ಕಾರದಿಂದ ಐದುಲಕ್ಷರೂಪಾಯಿಗಳನ್ನು ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿದರು ಮತ್ತು ಪತ್ರಕರ್ತರಿಗೆ ಹೆಲ್ತ್ ಕಾರ್ಡಗಳನ್ನು ವಿತರಣೆ ಮಾಡಿರುತ್ತೆವೆ ಹಾಗೂ ಸಂಘದ ಉತ್ತಮವದಕಾರ್ಯಗಳಿಗೆ ಜಿಲ್ಲೆಯ ಎಲ್ಲ ಪತ್ರಕರ್ತರ ಸಹಕಾರ ಅತ್ಯವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಂಗನಕೆರೆ ಮಹೇಶ್ ಅವರು ಮಾತನಾಡುತ್ತಾ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ
ಶ್ರೀ ಮಾಧುಸ್ವಾಮಿ ರವರಿಗೆ ನಮ್ಮ ಪತ್ರಕರ್ತರ ಸಂಘಕ್ಕೆ ನಿವೇಶನವನ್ನು ಮಂಜೂರು ಮಾಡಿಸಿ ಪತ್ರಿಕಾ ಭವನವನ್ನು ಕಟ್ಟಲು ಸಹಕರಿಸಬೇಕು ಎಂದು ಮನವಿಅಭಿನಂದನೆ್ಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಆರ್ ನಾಗರಾಜು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ತಾಲ್ಲೂಕು ವರದಿಗಾರರು,
ಪತ್ರಿಕಾ ವಿತರಕರ ಮಕ್ಕಳ ಹಾಗೂ ಪತ್ರಿಕೆ ಹಂಚುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಅರ್ಪಿಸಲಾಯಿತು .ಚಿಕ್ಕನಾಯಕನಹಳ್ಳಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

ಒಂದೊಂದು ಭತ್ತದ ಕಾಳು ಹಾಯುತ್ತಿದ್ದ ಅಣ್ಣ ಕೊನೆಗೆ ಮಾಡಿದ್ದೇನು….

1

ಮಹೇಂದ್ರ ಕೃಷ್ಣಮೂರ್ತಿ


ಆಗ ನಾ‌ನಿನ್ನು ಆರನೇ ಕ್ಲಾಸ್ ನಲ್ಲಿದ್ದೆ. ಜುಲೈ- ಆಗಸ್ಟ್ ತಿಂಗಳಿರಬೇಕು. ಒಂದೇ ಸಮನೇ ಸೋನೆ ಮಳೆ. ಅಂದರೆ ಆಗ ಅದು ಗದ್ದೆ ಕೂಯ್ಲಿನ ಕಾಲ. ತುಂತುರು ಮಳೆಯಲ್ಲೇ ಭತ್ತ ಬಡಿಯುವ ಕೆಲಸ.

ನಮ್ಮೂರಿನಿಂದ ಮೂರು ನಾಲ್ಕು ಕಿಲೋ ಮೀಟರ್ ದೂರದ ಸಿ.ಎಸ್.ಪುರದ ಗದ್ದೆ ಬಯಲಿನಲ್ಲಿ ಕೆಲಸ.

ಅದನ್ನು ಪುಳಿಯೋಗರಯ್ಯ‌ನ ಗದ್ದೆ ಎಂದೇ ನಮ್ಮನೆಯಲ್ಲಿ ಕರೆಯುತ್ತಿದ್ದರು. ಅದು ಶನಿವಾರ,‌ ನಮಗೆಲ್ಲ ಬೆಳಿಗ್ಗೆ ಕ್ಲಾಸ್.

ಸ್ಕೂಲಿನಿಂದ ಬಂದವನಿಗೆ ಅಮ್ಮ ಗದ್ದೆ ಬಳಿ ನಿಮ್ಮಣ್ಣನಿಗೆ ಟೀ ತಗೊಂಡ್ ಹೋಗ್ತಿಯಾ, ಭಯ ಇಲ್ವ, ಗದ್ದೆ ಗುರುತು ಸಿಗುತ್ತಾ ಎಂದು ಕೇಳಿದರು. ನಾನೂ ಖುಷಿಯಲ್ಲಿ ರೆಡಿಯಾದೆ.

ತುಂತುರು ಮಳೆಯಲ್ಲಿ ತಲೆಗೆ ಒಂದು ಕವರ್ ಕಟ್ಟಿಕೊಂಡವನು ಆದಷ್ಟು ಬೆಚ್ಚಗಿರುವಾಗಲೇ ಟೀ ಕೊಡಬೇಕೆಂದು ಸೈಕಲ್ ಕತ್ತರಿ ಪೆಡಲ್ ತುಳಿದುಕೊಂಡು ಹೊರಟೆ.

ಅಲ್ಲಿನ ಹೋದಾಗ ಎಲ್ಲಿ ನೋಡಿದರೂ ಭತ್ತದ‌ ಮೆದೆಗಳೇ. ಅಲ್ಲೊಂದು ಹುಣುಸೆ ಮರ ಇತ್ತು. ಅದು ನಮ್ಮ‌ ಗದ್ದೆ ಗುರುತಿ‌ನ ಜಾಗ. ಅಲ್ಲಿಗೆ ಹೋದರೆ ಹಲವಾರು ಮೆದೆಗಳು, ಹಲವಾರು ಜಾಗಗಳು.

ಸರಿ, ಭಯ ಶುರುವಾಯಿತು. ಕೊ‌ನೆಗೂ ಅಣ್ಣ ಭತ್ತದ ರಾಶಿಯೊಂದರ ಕೈ ಅಳತೆ ದೂರದಲ್ಲಿ ಭತ್ತದ ಕಾಳುಗಳನ್ನು ಹಾಯುತ್ತಿದ್ದರು.

ಭತ್ತ ಬೆಳೆಯುವುದರಲ್ಲಿ ನಮ್ಮದು ಹೆಸರಾಂತ ಕುಟುಂಬ. ಭತ್ತದ ರಾಶಿಯಲ್ಲೇ ಮೇಯ್ದು ಕೋಳಿಗಳು ಭತ್ತದ ರಾಶಿಯಲ್ಲೇ ಮೊಟ್ಟೆ ಇಡುತ್ತಿದ್ದವು ಎಂದು ನನ್ನಜ್ಜಿ ಗತಕಾಲದ ವೈಭವ ಹೇಳುತ್ತಿತ್ತು. ಅದು ಇನ್ನೊಂದು ಕತೆ.

ಅದೆಲ್ಲ ಹೋಗಿ ಅಣ್ಣ ಒಂದೊಂದು ಭತ್ತದ ಕಾಳನ್ನು ಹಾಯ್ದು ರಾಶಿಗೆ ಹಾಕುವ ಕಾಲ ಬಂದಿತ್ತು. ಅಣ್ಣನಿಗೆ ಉಳುಮೆಯೇ ಗೊತ್ತಿರಲಿಲ್ಲ. ಅಲ್ಲಿದ್ದ ಅರ್ಧ ಎಕರೆ ಗದ್ದೆಯನ್ನು ವಾರಕ್ಕೆ ಕೊಟ್ಟಿದ್ದರು. ನಮ್ಮೂರಿನ ಹನುಮಂತಣ್ಣ ವಾರಕ್ಕೆ ಮಾಡಿದ್ದರು. ಬಂದಿದ್ದರಲ್ಲಿ ಅರ್ಧ ಅವರಿಗೆ, ಇನ್ನರ್ಧ ನಮಗೆ.

ನನ್ನನ್ನು ನೋಡುತ್ತಿದ್ದಂತೆ ಅಣ್ಣನಿಗೆ ಅಚ್ಚರಿ, ಖುಷಿ, ಮಳೆಯಲ್ಲಿ ಬಂದಿರುವ ಆತಂಕ. ಇದೇ ಮೊದಲ ಸಲ‌ ನಾನು ನಮ್ಮ ಗದ್ದೆ ಒಕ್ಕಣಿಗೆ ಒಳಿ ಹೋಗಿದ್ದು.

ಕೂಡಲೇ ನನ್ನನ್ನು ಕರೆದು ಅಲ್ಲಿಯೇ ಮೆದೆಯೊಂದರ ಪಕ್ಕದಲ್ಲಿ ಒಂದು ಕೊಡೆಯನ್ನು ಮರೆ ಮಾಡಿ ನನ್ನನ್ನು ಕೂರಿಸಿದರು.

ಸರಿ‌, ನಾನು ಕೂತೆ. ಆ ಬಳಿಕವೂ ಅಣ್ಣ ನಾಲ್ಕೈದು ಹಿಡಿಗಳಷ್ಟು ಭತ್ತದ ಕಾಳುಗಳನ್ನು ಹಾದು ತಂದು ರಾಶಿಗೆ ಹಾಕಿದರು.

ನಾನು ಅಣ್ಣನನ್ನು ಕೇಳಿಯೇ ಬಿಟ್ಟೆ. ಇದೇನಣ್ಣ ಹಿಂಗ್ ಹಾಯ್ತಿ, ಅವರೆಲ್ಲ ನೋಡಿ ನಗಲ್ವ ಅಂದೆನು.

ಭತ್ತದ ರಾಶಿಯ ಕಡೆ ಕೈ ತೋರಿಸಿದ ಅಣ್ಣ, ಒಂದೊಂದು ಭತ್ತದ ಕಾಳು ಸೇರಿಯೇ ಭತ್ತದ ರಾಶಿ ಆಗಿದೆ. ಒಂದೊಂದು ಅಕ್ಕಿ ಕಾಳು ಬೇಕೇ ಬೇಕು ಎಂದರು.

ಒಂದರ್ಧ ಗಂಟೆಯಲ್ಲಿ ಭತ್ತ ಬಡಿಯುವುದು ಮುಗಿದು ಒಕ್ಕಣೆ ಕೆಲಸವೂ ಮುಗಿಯಿತು. ಸರಿ, ನಮಗೆ ಹನ್ನೊಂದು ಚೀಲ, ವಾರಕ್ಕೆ ಮಾಡಿದವರಿಗೆ ಹನ್ನೊಂದು ಚೀಲ ಭತ್ತ ಬಂದವು.

ಅಷ್ಟರಲ್ಲಿ ಅಲ್ಲಿಗೆ ಆರೇಳು ಜನ ಬುಡಬುಡಕರು ಬಂದರು. ನಮ್ಮ ಚೀಲದಿಂದ ಪ್ರತಿಯೊಬ್ಬರಿಗೂ ಒಂದೊಂದು ಮೊರ ಭತ್ತವನ್ನು ಅವರಿಗೆ ಅಣ್ಣ ಕೊಡಿಸಿದರು. ಕೊನೆಯಲ್ಲಿ ತೀರಾ ಬಡಕಲಾದ ಅಜ್ಜಿಯೊಬ್ಬರು ಇದ್ದರು. ಅವರಿಗೆ ಒಂದೂವರೆ ಮೊರ ಭತ್ತ ಕೊಡಿಸಿದರು. ಅಜ್ಜಿಗೆ ಭತ್ತ ಹಾಕುವಾಗ ಅಣ್ಣ‌ನ ಮುಖದಲ್ಲಿ ಮಂದಹಾಸ. ನನ್ನ ಕಣ್ಣಲ್ಲಿ ಇಂದು ಮಾಸಿಲ್ಲ. ಒಂದೊಂದು ಕಾಳನ್ನು ಹುಡುಕಿ ಹುಡುಕಿ ಹೆಕ್ಕುತ್ತಿದ್ದ ಅಷ್ಟೊಂದು ಭತ್ತವನ್ನು ಕೊಡುವಾಗ ಅಣ್ಣ ಖುಷಿಯಾಗಿದ್ದರು.

ನನ್ನ ಮುಖನೋಡಿ ಹೇಳಿದರು, ಅವರಿಗೇನಿದೆ, ಇಂಥವರಿಗೇನೆ ಕೊಡಬೇಕಿರುವುದು ಎಂದರು.

ಭತ್ತ ತುಂಬಿದ ಮರದ ಎತ್ತಿನ ಗಾಡಿಯ ಮೇಲೆ ನನ್ನನ್ನು ಎತ್ತಿ ಕೂರಿಸಿದರು. ಅವರು ಗಾಡಿ ಹಿಂದೆ ನಡೆಯುತ್ತಾ ಬಂದರು. ಐ ಲವ್ ಯು ಪಪ್ಪಾ.

ತುಮಕೂರು‌ ವಿ.ವಿ.ಯಲ್ಲೊಬ್ಬರು ಅಪರೂಪದ ಗುರುವರ್ಯ

5
ತುಮಕೂರು ವಿ.ವಿ.ಯ ಈ ವಿಭಾಗದಲ್ಲಿ ಪದವಿ ಮುಗಿಯುವ ಮೊದಲೇ ಉದ್ಯೋಗದ ಚೀಟಿ ಮಕ್ಕಳ ಕೈಸೇರುತ್ತದೆ. ಬೇರೆ ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಹೊರಬಿದ್ದರೆ, ಈ ವಿಭಾಗದಲ್ಲಿ ಮಾತ್ರ ಉದ್ಯೋಗಿಗಳಾಗಿ ಹೊರ ಬೀಳುತ್ತಾರೆ. ಇದಕ್ಕೆಲ್ಲ ಕಾರಣ ಈ ಪೊಫೆಸರ್. ಹಾಗಾದರೆ ಯಾರಿವರು?

ಸಾಮಾಜಿಕ ಕಾರ್ಯಕರ್ತರಾಗಿ ಸಮಾಜಮುಖಿ ಕಾಳಜಿಯನ್ನು ಹೊಂದಿರುವಂತಹ ಸಮಾಜಕಾರ್ಯದ ಪ್ರಾಧ್ಯಾಪಕರು, ವಾಗ್ಮಿಗಳು, ಚಿಂತಕರು, ಸಹೃದಯರಾದ ಗುರು ನಮ್ಮೆಲ್ಲರ ನಡುವಿರುವುದು ನಮ್ಮ ಭಾಗ್ಯವೆಂದೆನಿಸುವುದು.

ಸದಾಕಾಲವೂ ಸಕಾರಾತ್ಮಕ ಚಿಂತನೆಗಳ ಮಹಾಪೂರವನ್ನೆ ಹೊಲುವ ಸಹೃದಯ ಸಾಕ್ಷಿ, ಪ್ರಜ್ಞೆ ನನ್ನ ಗುರುಗಳಾದ ಅವರು ಸಕಲರಿಗೂ ಸಮ ಪ್ರೀತಿ ಹಂಚುವ ಮನದಾಳಕ್ಕೆ ಅನಂತಾನಂತ ಧನ್ಯವಾದಗಳು ತಿಳಿಸಲು ನನ್ನ ಮನಸ್ಸು ಇಚ್ಚಿಸುತ್ತದೆ.

ಅವರ ಫೇಸ್ ಬುಕ್ ಗೋಡೆಯನ್ನ ಒಮ್ಮೆ ವಿಕ್ಷಿಸಿದರೆ ಸಾಕು ಅವರ ಸಮಾಜಮುಖಿ ಕಾಳಜಿಯ ವಿಶಾಲತೆ ಏನೆಂಬುದು ಬಹುಬೇಗ ತಿಳಿಯುತ್ತದೆ. ವ್ಯಕ್ತಿ ಮಾತನಾಡಬಾರದು ವ್ಯಕ್ತಿಯ ಸಾಧನೆಗಳು‌ ಮಾತನಾಡಬೇಕು ಎನ್ನುವ ಮಾತು ನನ್ನ ಗುರುಗಳಿಗೆ ಅಕ್ಷರಶಃ ಒಪುತ್ತದೆ. ಹೃದಯದೊಳಗೊಂದು ಅಂತರಾಗವಿದೆ ಅದಕ್ಕೊಪುವಂತೆ ಬದುಕು ಮನಜ ಎನ್ನುವಂತ ಸರಳ ಸಜ್ಜನ ವ್ಯಕ್ತಿತ್ವದ ರೂಪ ದರ್ಶನವಿತ್ತು ವಿದ್ಯಾರ್ಥಿಗಳಿಂದ *ಪಾಸಿಟಿವ್ ಪರಮಾತ್ಮ* ನೆಂದೇ ಕರೆಸಿಕೊಂಡ ಸಕಾರಾತ್ಮಕ ಚಿಂತನೆಗಳ ಹೊಳಪಿನ ಕಣಜ.

ಸದಾಕಾಲವೂ ಸಮಾಜದ ಉನ್ನತಿಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತುಡಿಯುವ ಅವರ ಮನಸ್ಸಿನ ಉಮ್ಮಸ್ಸು ಮನದಲ್ಲಿ ಇನ್ನೂ ಹೆಚ್ಚು ಓದುವ ಉತ್ಸುಕತೆಯನ್ನು ತಂದವು.

ಇಂದು ಸಮಾಜದಲ್ಲಿ ನಡೆಯುತ್ತಿರುವ ಅನೇಕನೇಕ ಘಟನೆಗಳ ತಿರುಳು ಗಳನ್ನ ಬಹಳ ಸೂಕ್ಷ್ಮವಾಗಿ ಮತ್ತು ಅರ್ಥಗರ್ಭಿತವಾಗಿ ಸಮಾಜದ ಮುಂದೆ ಬಿತ್ತರಿಸುತ್ತ ಅಂತಹ ಸಮಸ್ಯೆಗಳನ್ನ ಎದುರಿಸಿ ನಿಲ್ಲುವ ಮಾರ್ಗೋಪಾಯಗಳನ್ನು ಸೃಷ್ಟಿಸುತ್ತ ಸಮಾಜಮುಖಿ ಕೆಲಸಗಳು ಮತ್ತ ನೂತನ ಶಿಕ್ಷಣ ಅಭಿವೃದ್ಧಿಯ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಕನಸು ಕಾಣುತ್ತಿರುವ ಗುರುವುಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ.

ಇಂದು ಸಮಾಜದ ಕೊಂಕುನುಡಿಗಳಿಗೆ ಮತ್ತು ತನ್ನ ಕುಟುಂಬಕಂಜಿ ತನ್ನಲ್ಲಿರುವ ಜ್ಞಾನವನ್ನೆಲ್ಲ ಮೂಲೆಗುಂಪು ಮಾಡಿ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿರುವ ಎಷ್ಟೋ ಯುವಕರಿಗೆ ನಿಮ್ಮ ಸಾಧನೆ ಮತ್ತು ಚಿಂತನೆಗಳು. ಸ್ಪೂರ್ತಿಯ ಮಾತುಗಳು ಅವರನ್ನ ಎಚ್ಚರಿಸುವಂತಾಗಲಿ ಅವರ ಬದುಕಿಗೊಂದು ಅರ್ಥ ಕಲ್ಪಿಸಿವೆ.

ಪ್ರತಿಯೊಬ್ಬರು ಇವರಂತೆ ಧೈರ್ಯದಿಂದ ಮುಕ್ತವಾಗಿ ಭಯವೆಂಬ ಕಂದಾಚಾರವನ್ನು ಕಿತ್ತೊಗೆದು ಸ್ವಾತಂತ್ರ್ಯದಿಂದ ಮುನ್ನುಗಿದರೆ ಸಮಾಜದ ಸಮಸ್ಯೆಗಳನ್ನ ಬಹುಬೇಗ ಬಗೆಹರಿಸಬಹುದೆನಿಸುತ್ತದೆ.

ಸಮಾಜದ ಪ್ರತಿಯೊಬ್ಬರಲ್ಲೂ ಜ್ಞಾನವುಂಟು ಅದನ್ನ ಹೊರತರಬೇಕು ಆಗಲೇ ಅಭಿವೃಧಿ ಸಾಧ್ಯವೇನ್ನುವ ನಿಮ್ಮ ಮಾತುಗಳೇ ನೊಂದ ಮತ್ತು ಸಾಧಿಸುವ ಮನಗಳಿಗೆ ಸ್ಪೂರ್ತಿಯಾಗುತ್ತಿವೆ.

ಮೌಢ್ಯತೆಯ ಅಂಧಕಾರದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಇಂದಿನ ಯುವ ಪೀಳಿಗೆಯ ಕಣ್ಣುತೆರೆಸಿ ಅವರೊಮ್ಮೆ ನಿಮ್ಮ ಸ್ಪೂರ್ತಿಯ ಮಾತುಗಳ ಕೇಳಿ ಬದಲಾಗುವುದಾದರೆ ಅದಕ್ಕಿಂತ ಬೇರೆ ಭಾಗ್ಯವುಂಟೆ.. ಸೊಗಸಾಗಿ ಮತ್ತು ವಾಸ್ತವಿಕ ನೆಲೆಗಟ್ಟಿನ ಆಧಾರದಲ್ಲಿ ಸಮಾಜದಲ್ಲಿ ನೀವೂ ಕೈಗೊಂಡಿರುವ ಮಹತ್ವದ ಹಲವಾರು ಯೋಜನೆಗಳು ಸಮಾಜದ ಬುನಾದಿಗೆ ಅಭಿವೃದ್ಧಿಯ ಅಡಿಪಾಯವಾವೆ. ನಿಮ್ಮ ಸಾಧನೆ ಯಶೋಗಾಥೆಯಾಗಲಿ.

ಇದು ಬೇರೆ ಯಾರು ಅಲ್ಲ, ತುಮಕೂರು ವಿ.ವಿ.ಯ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಫೊ. ಪರುಶರಾಮ್ ಸರ್.

ಅವರ ಬಗ್ಗೆ ಬರೆಯುವ ಮಾತೊಂದಿದೆ.

ಪ್ರತಿಯೊಂದು ಸಮಸ್ಯೆಗಳನ್ನು ಅವರು ವಾಸ್ತವಿಕ ನೆಲೆಗಟ್ಟಿನ ದರ್ಶನ ಮಾಡಿಸುತ್ತಾರೆ. ಸಕಲ ಸಂಕೋಲೆಗಳನ್ನು ದಾಟಿ ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ನಿಮ್ಮ ಮಹದಾಸೆಗೆ ನನ್ನ ಅನಂತ ಧನ್ಯವಾದಗಳು ಸರ್.

ಯಾವುದಕ್ಕೂ ಅಳುಕದೆ ಅಂಜದೆ ನಡೆಯುತ್ತಿರುವ ಸಮಸ್ಯೆಗಳನ್ನ ಸಮಾಜದ ಮುಂದೆ ಬಿತ್ತರಿಸಿ ಅದನ್ನು ಪ್ರಶ್ನಿಸುವ ಪರಿಹರಿಸುವ ಮಾರ್ಗೊಪಾಯ ಹುಡುಕುವ ನಿಮ್ಮ ಸಾಹಸಕ್ಕೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆ.

ತನ್ನ ತಾನಾರಿನೊಡೆ ಸಾಕು ಎನ್ನುವ ಮಹಾಮಾತೇ ಸಾಕು ಬದುಕಿನ ಸಾರ್ಥಕತೆಗೆ ನಿಮ್ಮ ಮಾತುಗಳೇ ಸಾಕು ಸರ್.

ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನ ವಾಗಬೇಕು. ನಿಮ್ಮ ಸ್ಪೂರ್ತಿಯ ‌ಮಾತುಗಳು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಬಹಳ ಉಪಯುಕ್ತ ಕೊಡುಗೆ ನೀಡುತ್ತವೆ ನಿಮ್ಮ ಮಾತುಗಳು.

ಪ್ರತಿಯೊಬ್ಬರೂ ನಿಮ್ಮಂತೆ ಇದ್ದದ್ದನ್ನು ಇದ್ದಹಾಗೆ ಹೇಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಸಮಾಜದ ಅಂಕುಡೊಂಕುಗಳನ್ನು ಇದ್ದ ಹಾಗೆಯೇ ಸಮಾಜದ ಮುಂದಿಡುತ್ತಿರುವ ಹಾಗೂ ಅವುಗಳಿಂದ ಹೊರ ಬರುವ ದಾರಿಯನ್ನು ಕಾಣುವಂತೆ ಮಾಡುತ್ತಿರುವ ನಿಮ್ಮ ಜ್ಞಾನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಸಮಾಜದ ಏಳಿಗೆಯನ್ನು ಉಸಿರಿಗಿಸಿಕೊಂಡ ನಿಮ್ಮ ಜ್ಞಾನಕ್ಕೆ ನಾನಲ್ಲಿ ಮಾತಿಲ್ಲ

ಸರಕಾರಿ ಕೆಲಸ ಸಿಕ್ಕಿದೊಡೆ ಉಂಡು ಮಲಗುವ ಜನರಿರುವ ಕಾಲದಲ್ಲಿ ಸದಾ ಸಮಾಜದ ಅಭಿವೃದ್ಧಿ ಮತ್ತು ಮೌಲ್ಯಯುತ ಅಸನಾದ ಬದುಕಿನ ಕನಸು ಕಾಣುತ್ತ ಹೊಸ ನವನವೀನ ತಂತ್ರಜ್ಞಾನ ಮತ್ತು ಆಶೋತ್ತರಗಳನ್ನು ಹುಡುಕುತ್ತ ಸ್ಪೂರ್ತಿಯ ಚಿಲುಮೆಯಾಗುವ ನಿಮ್ಮ ದಣಿವರಿಯಾದ ಬದುಕಿನ ನಿಜವಾದ ಸಾಧಕರೆಂದರೆ ತಪ್ಪಾಗದು

ಈ ಕಾಲದ ಮಿತಿಯಲ್ಲಿ ನಿಮ್ಮ ಅಖಂಡವಾದ ವಿಶಾಲ ಚಿಂತನೆಗಳನ್ನ ಪೂರ್ಣ ಪ್ರಮಾಣದಲ್ಲಿ ಪಡೆಯಲಾಗದೆ ಹೋದರು ಕಂಡ ಕೆಲವಷ್ಟೇ ಮಾತುಗಳು ಕೆಲಸಗಳು ಬದುಕಿಗೊಂದು ಮಹತ್ವ ಕಲ್ಪಿಸಿಕೊಟ್ಟವು ಸರ್.ನಿಮ್ಮಂತ ಗುರುಗಳ ಪಡೆದ ನಾ ಧನ್ಯ

ಜಗತ್ಪ್ರಸಿದ್ಧವಾಗಲಿ ನಿಮ್ಮ ಹೆಸರು, ಬೆಳಗಲಿ ನಿಮ್ಮ ಜ್ಞಾನದ ಜ್ಯೋತಿ ಜಗದಾಗಲದಲಿ.


ಲೇಖಕರು: ಗಂಗಾಧರ್ ನಾಗರಾಜ್
ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತ ಸಂಶೋಧನಾ ವಿಭಾಗ ತುಮಕೂರು ವಿಶ್ವವಿದ್ಯಾಲಯ

ಪೋಷಕರು-ವಿದ್ಯಾರ್ಥಿಗಳ ಸಂಪರ್ಕದ ಕೊಂಡಿಯಾಗಿ ಶಿಕ್ಷಕರು ಕಾರ್ಯ ನಿರ್ವಹಿಸಿ : ಸಿ.ರಂಗಧಾಮಯ್ಯ

Publicstory


ತುರುವೇಕೆರೆ: ಪೋಷಕರು-ವಿದ್ಯಾರ್ಥಿಗಳ ಸಂಪರ್ಕದ ಕೊಂಡಿಯಾಗಿ ಶಿಕ್ಷಕರು ಕೆಲಸ ಮಾಡುತ್ತಾ ಮಕ್ಕಳು ಒಂದಿಲ್ಲೊಂದು ಕಲಿಕೆಯಲ್ಲಿ ಸಕ್ರಿಯವಾಗುವಂತೆ ನೋಡಿಕೊಳ್ಳಬೇಕಿದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಶಿಕ್ಷಕರಿಗೆ ಸಲಹೆ ನೀಡಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಹಾಗು ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋವಿಡ್-19ರ ಸಂದರ್ಭದಲ್ಲಿ ಪಟ್ಟಣ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸುವುದು ಒಂದು ಸವಾಲಾಗಿದೆ. ಈಗ ಪಠ್ಯ ವಿಷಯ ಬೋಧಿಸುವುದಕ್ಕಿಂತ ಮೊದಲು ಮಕ್ಕಳಿಗೆ ಕನಿಷ್ಠವಾದರೂ ಮೂಲಭೂತ ಭಾಷಾ ಕಲಿಕೆ ಹಾಗು ಇನ್ನಿತರ ಕಲಿಕಾ ಸಾಮಥ್ರ್ಯಗಳನ್ನು ಕಲಿಸಲು ಆದಷ್ಟು ಒತ್ತು ನೀಡಿ ಎಂದು ಶಿಕ್ಷಕರುಗಳಿಗೆ ಸಲಹೆ ನೀಡಿದರು.

ಜಿಲ್ಲಾ ವಿಷಯ ಪರಿವೀಕ್ಷಕ ಸಂಪನ್ಮೂಲ ವ್ಯಕ್ತಿ ಗಿರೀಶ್ ಮಾತನಾಡಿ, ಶಾಲೆಗಳನ್ನು ಪ್ರಾರಂಭಿಸುವ ತನಕ ಮಕ್ಕಳಿಗೆ ಕಲಿಕೆಗೆ ತೊಡಕಾಗದಂತೆ ಶಿಕ್ಷಕರು ಎಚ್ಚರವಹಿಸಿ. ಜೊತೆಗೆ 8, 9 ಮತ್ತು 10ನೇ ತರಗತಿ ಮಕ್ಕಳಿಗೆ ಚಂದ ಟಿವಿಯಲ್ಲಿ ಪಠ್ಯ ವಿಷಯಗಳನ್ನು ಅವಲೋಕಿಸಿ, ಅಭ್ಯಾಸ ಮಾಡುವಂತೆ ಮಾಡಿ. ವಿದ್ಯಾಗಮ ಕಲಿಕೆಯ ಅನುಷ್ಠಾನ ಹಾಗು ಕ್ರಿಯಾ ಯೋಜನೆಯ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಹಿಂದಿ, ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಷಯ ಶಿಕ್ಷಕರುಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಆರ್ಸಿ ವಸಂತ್ಕುಮಾರ್, ಪ್ರಾಂಶುಪಾಲ ಪರಮೇಶ್ವರ್, ಕನ್ನಡ ಭಾಷಾ ಬೋಧಕರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಮಂಜೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಗುರುರಾಜು, ಶ್ರೀಕಾಂತ್, ಉಮಾಮಹೇಶ್, ಸಚೀಂದ್ರನ್, ಆದಿನಾರಾಯಣ್ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

ಕಾನೂನು ಸೇವಾ ಪ್ರಾಧಿಕಾರ ಸದಸ್ಯರು ಉತ್ತಮ ಕೆಲಸ ಮಾಡಬೇಕು: ನ್ಯಾಯಾದೀಶ ಸಂಗ್ರೇಶಿ

ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಮಾತನಾಡಿದರು

Publicstory


Tumkuru:: ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಗುರುತಿಸುವಂತಹ ಮಹತ್ವ ಪೂರ್ಣ ಕೆಲಸಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂ ಸೇವಕರು ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾ ಪ್ರಧಾ‌ನ ನ್ಯಾಯಾದೀಶರಾದ ಜಿ.ಎಸ್.ಸಂಗ್ರೇಶಿ ಕರೆ ನೀಡಿದರು.


ಧರ್ಮ, ಕರ್ಮದ ವ್ಯಾಖ್ಯಾನ

ವಿಶೇಷ ಉಪನ್ಯಾಸ ನೀಡಿದ ತುಮಕೂರಿನ ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ್ ಅವರು ಮಹಾಭಾರತದ ಧರ್ಮ, ಕರ್ಮಗಳ ವ್ಯಾಖ್ಯಾನದ ಮೂಲಕ ಸಂವಿಧಾನದ ತಳಹದಿಯ ಬಗ್ಗೆ ಮನೋಜ್ಞವಾಗಿ ಮಾತನಾಡಿದರು.
ಮಹಭಾರತದಲ್ಲಿ ಧರ್ಮ ಬಿಟ್ಟು ನಡೆಯಲಿಲ್ಲ. ಆಗ ಧರ್ಮವೇ ಸಂವಿಧಾನವಾಗಿತ್ತು. ಧರ್ಮದ ಆಧಾರದಲ್ಲಿ ಕರ್ಮ ಅಂದರೆ ಕೆಲಸ ಮಾಡುತ್ತಿದ್ದರು. ಈಗ, ಸಂವಿಧಾನವೇ ಒಂದು ಧರ್ಮ. ಸಂವಿಧಾನ ಹೇಳಿರುವಂತೆ ನಾವುಗಳೆಲ್ಲ ಕರ್ಮ ಮಾಡಬೇಕು ಎಂದರು.
ಕಲ್ಯಾಣ ರಾಜ್ಯದ ತಳಹದಿ ರೂಪಿಸುವಂತ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರ ಮಾಡಬೇಕು. ಕಲ್ಯಾಣ ರಾಜ್ಯದ ಚಾಲನೆಯೇ ಅದರ ಉದ್ದೇಶವಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಆಯೋಜಿಸಿದ್ದ ಅರೆಕಾಲಿಕ ಸ್ವಯಂ ಸೇವಕರಿಗೆ (plv) ಅಭಿಶಿಕ್ಷಣ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಇಲ್ಲಿ‌‌ ನೀವುಗಳು ಚೆನ್ನಾಗಿ ಕೆಲಸ ಮಾಡಿದರೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ನಿಮ್ಮನ್ನು ಗುರುತ್ತಿಸುತ್ತದೆ. ಸೇವಾ ಪ್ರಾಧಿಕಾರವು ಬಡಜನರ ಮನೆ ಬಾಗಿಲಿಗೆ ಕಾನೂನು ತಲುಪಿಸುವ, ಅವರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ ನ್ಯಾಯಾದೀಶರಾದ ಜಿ.ಎಸ್.ಸಂಗ್ರೇಶಿ‌ ಎಂದರು.

ಜಿಲ್ಲಾ ನ್ಯಾಯಾದೀಶರಾದ‌ ಸುಧೀಂದ್ರನಾಥ್ ಅವರು ಸಂವಿಧಾನದ ಪೀಠಿಕೆ, ಮೂಲ ತತ್ವಗಳು,‌ರಾಜನಿರ್ದೇಶಕ ತತ್ವಗಳು, ಮೂಲ ಉದ್ದೇಶಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಸಂವಿಧಾನದ ಪೀಠಿಕೆ, ಪ್ರಸ್ತಾವನೆಯನ್ನು ಸರಿಯಾಗಿ ತಿಳಿದುಕೊಂಡರೆ ಸಂವಿಧಾನ ತಿಳಿದಂತೆಯೇ ಆಗುತ್ತದೆ. ಸಂವಿಧಾನದ ಶ್ರೇಷ್ಠತೆಯನ್ನು ಒತ್ತಿ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸೂಫಿಯಾ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲರಾದ ಓಬಣ್ಣ, ವಕೀಲೆ ಆಶಾ, ಪ್ರಾಂಶುಪಾಲ ಸಿದ್ದಲಿಂಗಪ್ಪ ಹಾಜರಿದ್ದರು.

ಮದಲೂರು ಕೆರೆಗೆ ಹೇಮಾವತಿ ನೀರು; ಸಿಎಂ ಒಪ್ಪಿದ್ದೇಕೆ? ಇಲ್ಲಿದೆ ಅದರ ಕರುಣಾಜನಕ ಕಥೆ

ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡ ಅವರ ಪ್ರಯತ್ನಕ್ಕೆ ತಾಲ್ಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲ್ಲೂಕಿನ ಜನರು ಅನುಭವಿಸುತ್ತಿರುವ ಕಷ್ಟವನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆ ಅವರು ನೀರು ಬಿಡುವ ಆದೇಶ ಮಾಡಲು ಕಾರಣವಾಗುತ್ತಿದೆ. ಹಾಗಾದರೆ ಆ ಪತ್ರದ ಡೀಟೈಲ್ಸ್ ಇಲ್ಲಿದೆ ನೋಡಿ.


ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪಜಿ ಅವರಿಗೆ

ಕನ್ನಡ ನಾಡು ಕಂಡ ಅತ್ಯಂತ ಜನಪ್ರಿಯ, ರೈತರ ಪರವಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪಜಿ ಅವರಿಗೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಜನರು ಮಾಡುತ್ತಿರುವ ಮನವಿ ಇದು.

ಬರದ ನಾಡು ಎಂದೇ ಖ್ಯಾತಿಗಳಿಸಿರುವ ಶಿರಾ ಶೇಂಗಾಕ್ಕೂ ಖ್ಯಾತಿಗಳಿಸಿದೆ. ಆದರ ಜತೆಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ತಾಲ್ಲೂಕು ಆಗಿದೆ.
ಎಲ್ಲಿ ನೋಡಿದರಲ್ಲಿ ಒಣಗಿದ ತೋಟಗಳು, ಬಡಕಲು ದನ ಕರುಗಳೇ ಕಾಣುತ್ತವೆ. ಇದಕ್ಕೆಲ್ಲ ಕಾರಣ ಬರ ಹಾಗೂ ನದಿ ನೀರಿನ ಹಂಚಿಕೆಯಲ್ಲಿನ ತಾರತಮ್ಯ.

ಶಿರಾದ ಮದಲೂರು ಕೆರೆಗೆ ನೀರು ಬಂದರೆ ಅರ್ಧ ತಾಲ್ಲೂಕು ನಂದನವನ ಆಗಲಿದೆ. ಅತಿ ದೊಡ್ಡ ಕೆರೆಯಾದ ಇದು ಅಕ್ರಮ ಮರಳು ಗಣಿಗಾರಿಕೆಗೆ ತುತ್ತಾಗಿ ಇಡೀ ಅರ್ಧ ತಾಲ್ಲೂಕಿನ ಅಂತರ್ಜಲವೇ ಬಸಿದು ಹೋಗಿದೆ. ಈಗ ಇಲ್ಲಿನ ಜನರ, ಜೀವನಾಡಿಗಳ ಬದುಕು ನಿಮ್ಮ ನಿರ್ಧಾರದ ಮೇಲೆ ನಿಂತಿದೆ.

ಮದಲೂರು ಕೆರೆಗೆ ಹೇಮಾವತಿಯಿಂದ ಯಾವುದೇ ನೀರು ಹಂಚಿಕೆಯಾಗಿಲ್ಲ.‌ಈ ಸಲ ಹೇಮಾವತಿ ಜಲಾಶಯ, ಕಬಿಬಿ, ಕೆ.ಆರ್ ಎಸ್ ಜಲಾಶಯಗಳು ತುಂಬಿ ತುಳುಕುತ್ತಿವೆ. ತುಮಕೂರು ಜಿಲ್ಲೆಗೆ ಈಗಾಗಲೇ ಬೇಸಿಗೆಯಲ್ಲೇ ಹೇಮಾವತಿ ನೀರು ಬಿಡಲಾಗಿದೆ. ತುಮಕೂರಿಗೆ ಕುಡಿಯುವ ನೀರು ಒದಗಿಸುವ ಕೆರೆ ಹಾಗೂ ಕುಣಿಗಲ್, ಗುಬ್ಬಿ, ತಿಪಟೂರು ಕೆರೆಗಳನ್ನು ತುಂಬಿಸಲಾಗಿದೆ. ಈ ಸಲ ಜಿಲ್ಲೆಗೆ ಬೇಕಾದುದ್ದಕ್ಕಿಂತ ಹೆಚ್ಚಾಗಿಯೇ ಹೇಮಾವತಿ ನೀರು ಹರಿಯುತ್ತಿದೆ.

ಜಿಲ್ಲೆಗೆ 24 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದು, ಇಷ್ಟು ನೀರಿನಿಂದ ಇಡೀ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬಹುದು ಎಂದು ಪರಮಶಿವಯ್ಯ ಅವರ ಅಧ್ಯಯನ ವರದಿಯಲ್ಲೆ ಹೇಳಲಾಗಿದೆ. ಆದರೆ ರಾಜಕೀಯ ಕಾರಣಗಳಿಗಾಗಿ ಇಷ್ಟು ನೀರು ಜಿಲ್ಲೆಗೆ ಹರಿದೇ ಇಲ್ಲ.

ಹೇಮಾವತಿ ಹಾಗೂ ಜಿಲ್ಲೆಯ ಇತಿಹಾಸದಲ್ಲಿ ನೀವು ಮುಖ್ಯಮಂತ್ರಿಗಳಾದ ಬಳಿಕ ಇದೇ ಮೊದಲ ಸಲ ಬೇಸಿಗೆಯಲ್ಲೂ ನೀರು ಹರಿಸಿ ಕುಡಿಯುವ ನೀರಿನ‌ ಕೆರೆಗಳನ್ನು ತುಂಬಿಸಿದ್ದೀರಿ. ಈಗ ಮಳೆಗಾಲದಲ್ಲಿ ನೀರು ಯತೇಚ್ಛವಾಗಿ ಹರಿಯುತ್ತಿದೆ.

ಆದರೆ ಶಿರ ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗದ ಕಾರಣ ನೀರು ಹರಿಸುತ್ತಿಲ್ಲ.
ಇಲ್ಲಿನ ಜನರ ಕಷ್ಟ, ಹನಿ ಕುಡಿಯುವ ನೀರಿಗೂ ಮಳಗಾಲದಲ್ಲೂ ಪಡುತ್ತಿರುವ ಪಾಡು, ಫ್ಲೋರೈಡ್ ಸಮಸ್ಯೆಯಿಂದ ಆಗುತ್ತಿರುವ ಊನತೆ ಇವುಗಳನ್ನೆಲ್ಲ ಮನಗಂಡು ಇದೊಂದು ಸಲ ವಿಶೇಷ ಪ್ರಕರಣವೆಂದು ಪರಿಗಣಿಸಿ ಮದಲೂರು ಕೆರೆಗೆ ನೀರು ಹರಿಸುವಂತೆ ಆದೇಶಿಸುವಂತೆ ಶಿರಾದ ರೈತರು, ಸಾಮಾನ್ಯ ಜನರು,‌ಮಕ್ಕಳು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ.

ಹೇಮಾವತಿ ನೀರು ಹೆಚ್ಚಾಗಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಜನರ ಜೀವದ ದೃಷ್ಟಿಯಿಂದ ಕೆರೆಗೆ 0.250 ಟಿಎಂಸಿಯಷ್ಟು ನೀರು ಹರಿಸಲು ಆದೇಶಿಸುವಂತೆ ಈ ಮೂಲಕ ಕೋರುತ್ತೇವೆ.
ಇದೊಂದು ಸಲ ಕೆರೆ ತುಂಬಿಸಿದರೆ ಆರೇಳು ವರ್ಷ ಅಂತರ್ಜಲ ಪೂರೈಕೆಯಾಗಲಿದೆ.‌ಈ ಮೂಲಕ ನಮ್ಮ ತಾಲ್ಲೂಕಿನ ಅನ್ನದಾತ, ಜೀವದಾತ ಆಗಬೇಕು ಎಂದು ತಮ್ಮಲ್ಲಿ ಹೃದಯತುಂಬಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ನೀರಿನ ಸಮಸ್ಯೆಯ ಕಾರಣದಿಂದಲೇ ತಾಲ್ಲೂಕಿನಲ್ಲಿ ಬಡತನ ಮಗ್ಗಲು ಮುರಿದು ಬಿದ್ದಿದೆ. ಗುಳೇ ಹೋಗುವವರ ಸಂಖ್ಯೆ ಪ್ರತಿ ವರ್ಷವೂ ದುಪ್ಪಟ್ಟಾಗುತ್ತಿದೆ. ಅರ್ಧ ದಲ್ಲೇ ಕಾಲೇಜು ಬಿಟ್ಟು ಬೆಂಗಳೂರಿನ ಹೋಟೆಲ್, ಬಾರ್ ಗಳನ್ನು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಬಡತನದ ಕಾರಣದಿಂದಲೇ ಓದು ಬಿಟ್ಟು ಮದುವೆಯಾಗುವ ಹೆಣ್ಣು‌ ಮಕ್ಕಳನ್ನು ನೋಡಬೇಕಾಗಿದೆ. ಬೋರ್ ವೆಲ್ ಗಳು ಒಣಗಿ ಹಗ್ಗಕ್ಕೆ ಕೊರಳೊಡ್ಡುವ ರೈತರು ಹೆಚ್ಚುತ್ತಿದ್ದಾರೆ. ಸಾಲ ಹೆಚ್ಚಿ ಊರು,ಮನೆ ಬಿಟ್ಟವರು ಸಾವಿರಾರು ಜನರಿದ್ದಾರೆ. ಇವರಿಗೆಲ್ಲ ನೀವು ಭಗೀರಥನಂತೆ ಕೊಡುವ ಬೊಗಸೆ ನೀರು ಇಡೀ ಶಿರಾ ಜನರನ್ನು ಬದುಕಿಸಬಹುದು.

ಹೆಣ್ಣು ಮಕ್ಕಳ ಓದಿನ ಬಗ್ಗೆ ನಿಮಗೆ ಅತೀವ ಪ್ರೀತಿ ಇದೆ. ಈ ಹಿಂದೆ ನೀವು ಮುಖ್ಯಮಂತ್ರಿಗಳಾಗಿದ್ದಾಗ ಬಡತನದಲ್ಲಿ ಓದಿ‌ದ ಹುಡುಗಿಯೊಬ್ಬಳಿಗೆ ನೆರವಾಗಲು ಅಂದಿನ ಜಿಲ್ಲಾಧಿಕಾರಿಯನ್ನೇ ಅವರ ಮನೆಗೆ ಕಳುಹಿಸಿ ನಾಡಿನ ಹೆಣ್ಣು‌ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದವರು ನೀವು.

ಶಿರಾ ಹೆಣ್ಣು‌ಮಕ್ಕಳು ಬದುಕು ಹಸನಾಗಬೇಕಾದರೆ, ಅವರ ಓದು ಮುಂದುವರೆಯಬೇಕಾದರೆ ಅವರು ಅಪ್ಪಂದಿರ ತೋಟಗಳಲ್ಲಿ ನೀರು ಕಾಣಬೇಕು. ಇದಕ್ಕಾಗಿ ಮದಲೂರು, ಸಿರಾ, ಕಳ್ಳಂಬೆಳ್ಳ ಕೆರೆಗಳು ತುಂಬಬೇಕು. ತಾಲ್ಲೂಕಿನ ಹೆಣ್ಣು‌ಮಕ್ಕಳ ಕಷ್ಟಕ್ಕೆ