Thursday, May 7, 2026
Google search engine
Home Blog Page 176

ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಪ್ರಥಮ್ ಬುಕ್ಸ್ ನಿಂದ ‘ಒಂದು ದಿನ, ಒಂದು ಕತೆ’

Publicstory. in


ಬೆಂಗಳೂರು: ಮಕ್ಕಳಿಗೆ ಓದಿನ ಸಂಭ್ರಮವನ್ನು ಕೈಗೆಟಕಿಸುವ ನಿಟ್ಟಿನಲ್ಲಿ ಪ್ರಥಮ್ ಬುಕ್ಸ್ ಪ್ರತಿ ವರ್ಷದಂತೆ ಈ ಬಾರಿಯೂ ‘ಒಂದು ದಿನ ಒಂದು ಕತೆ’ ಎಂಬ ವಾರ್ಷಿಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇದು ಅದರ ಒಂಭತ್ತನೇ ಆವೃತ್ತಿ. ಕೋವಿಡ್ -19 ಕಾರಣದಿಂದಾಗಿ ಮಕ್ಕಳು ಮನೆಯಲ್ಲಿ ಉಳಿಯಬೇಕಾಗಿ ಬಂದಿರುವುದರಿಂದ ಈ ಬಾರಿ ಓದು ಮತ್ತು ಕತೆ ಹೇಳುವಿಕೆಯನ್ನು ಇನ್ನೂ ಹೆಚ್ಚು ಸಂತಸಮಯವಾಗಿ ಇರುವಂತೆ ಮಾಡುವತ್ತ ‘ಒಂದು ದಿನ ಒಂದು ಕತೆ’ ಕಾರ್ಯಕ್ರಮವನ್ನು ಪುನರ್ ವಿನ್ಯಾಸ ಮಾಡಲಾಗಿದೆ.

ಈ ಬಾರಿ ಇಡೀ ಪ್ರಚಾರ ಕಾರ್ಯಕ್ರಮ ಆನ್ ಲೈನ್ ಆಗಿರುವುದರಿಂದ ಕತೆ ಹೇಳಲು ಸೈಫ್ ಅಲಿ ಖಾನ್, ಮಾಧುರಿ ದೀಕ್ಷಿತ್, ಬಿಪಾಶಾ ಬಸು, ಸೋನಾಕ್ಷಿ ಸಿನ್ಹಾ ರಿಂದ ಹಿಡಿದು ತಿಲೋತ್ತಮಾ ಶೋಮ್, ಜಾನ್ಹವಿ ಕಪೂರ್, ಅಥಿಯಾ ಶೆಟ್ಟಿ, ಶೋಭಿತಾ ಧುಲಿಪಲ, ಮಿಥಿಲಾ ಪಾಲ್ಕರ್ ರಂತಹ ಹೆಸರಾಂತ ಗಣ್ಯರು ಈ ಕತೆ ಹೇಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗೆ ಕತೆ ಹೇಳುವುದಕ್ಕಾಗಿ ಪ್ರಖ್ಯಾತರು ತಮ್ಮ ಸಮಯ ಹಾಗು ದನಿಯನ್ನು ನೀಡಿದ್ದಾರೆ.

‘ಈ ಒಂದು ದಿನ ಒಂದು’ ಕತೆ ಕಾರ್ಯಕ್ರಮದಲ್ಲಿ ಭಾರತ ಹಾಗೂ ಜಗತ್ತಿನಾದ್ಯಂತ ಕತೆ ಹೇಳುವ ಚಾಂಪಿಯನ್ ಗಳು ಝೂಮ್ ಮೂಲಕ ಮಕ್ಕಳೊಂದಿಗೆ ಕತೆ ಹೇಳುವ ಗೋಷ್ಟಿಯನ್ನು ನಡೆಸುತ್ತಾರೆ. ವ್ಯಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕತೆಗಳನ್ನು ಹಂಚಿಕೊಳ್ಳುತ್ತಾರೆ. ಭಾರತದ ಎಲ್ಲೆಡೆ ಇರುವ ಮಕ್ಕಳಿಗೆ ‘ಗ್ರಾಮವಾಣಿ’ಯಂತಹ ಸಮುದಾಯ ರೇಡಿಯೊ ಕೇಂದ್ರಗಳ ಮೂಲಕ ಕತೆಗಳು ತಲುಪಲಿವೆ.

ಸೆಪ್ಟೆಂಬರ್ 8ರಂದು ಮತ್ತು ಆ ಸುತ್ತಮುತ್ತ 1500 ಚಾಂಪಿಯನ್ ಗಳು 28ಕ್ಕೂ ಹೆಚ್ಚು ಭಾಷೆಗಳಲ್ಲಿ, 25 ಸಾವಿರ ಮಕ್ಕಳಿಗೆ ಕಥಾ ಗೋಷ್ಟಿಗಳನ್ನು ನಡೆಸಿಕೊಡಲಿದ್ದಾರೆ.

ಕೋವಿಡ್ -19 ಕಾರಣದಿಂದಾಗಿ 2020 ಪ್ರತಿಯೊಬ್ಬರಿಗೂ ಕೂಡ ಭಿನ್ನ ಹಾಗೂ ಕಷ್ಟದಾಯಕವಾಗಿದೆ. ಅದರಲ್ಲಿಯೂ ಶಾಲೆಗಳು ಮುಚ್ಚಿರಲೇಬೇಕಾದ ಕಾರಣದಿಂದಾಗಿ ಬಹುತೇಕ ಎಲ್ಲ ಮಕ್ಕಳೂ ಶಾಲೆಗೆ ಹೋಗಲಾಗದೆ, ಗೆಳೆಯರೊಂದಿಗೆ ಆಟವಾಡದಂತಾಗಿದ್ದಾರೆ. ಈ ಕಾರಣದಿಂದಾಗಿ ಪ್ರಥಮ್ ಬುಕ್ಸ್ ಈ ಬಾರಿ ಈ ಏರು ಪೇರಿನ ಸಮಯವನ್ನು ಸಲೀಸಾಗಿ ದಾಟಲು ‘ಒಂದು ದಿನ ಒಂದು ಕತೆ’ ಕಾರ್ಯಕ್ರಮದಲ್ಲಿ ಪ್ರಥಮ್ ಬುಕ್ಸ್ ನ ಎರಡು ಕತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ವಿನಾಯಕ್ ವರ್ಮಾ ಬರೆದು ಚಿತ್ರ ಬಿಡಿಸಿರುವ ‘ಸಿಟ್ಟಿನ ಅಕ್ಕು’ ಹಾಗೂ ಮೀರಾ ಗಣಪತಿ ಬರೆದು ರೋಶ್ ಚಿತ್ರ ಬಿಡಿಸಿರುವ ‘ನಗು ತಡೆಯದ ಸುಂದರಿ’ ಇವೇ ಆ ಎರಡು ಕತೆಗಳು.

ಸಿಟ್ಟಿನ ಅಕ್ಕು ಕತೆಯಲ್ಲಿ ಅಕ್ಕು ನಿಜಕ್ಕೂ ಕೆಟ್ಟ ದಿನ ಮತ್ತು ಮೂಡ್ ನಲ್ಲಿದ್ದಾಳೆ. ತನ್ನ ತಂದೆಯ ಸಹಾಯದಿಂದ ಆಕೆ ತನ್ನ ಕೋಪದ ಜೊತೆಗೆ ಹೇಗೆ ಏಗಬೇಕು ಎನ್ನುವುದನ್ನು ಕಲಿತಿದ್ದಾಳೆ. ಸಿಟ್ಟಿನ ಅಕ್ಕು ಇಪ್ಪತ್ತು ಭಾಷೆಗಳಲ್ಲಿ ಲಭ್ಯವಿದ್ದು ಮಕ್ಕಳು ಕೋಪ ಮತ್ತು ಹತಾಶೆಯಂತಹ ನಕಾರಾತ್ಮಕ ಮನಸ್ಥಿತಿಯನ್ನು ಅರಿಯಲು ಸಹಾಯ ಮಾಡುತ್ತದೆ.

‘ನಗು ತಡೆಯದ ಸುಂದರಿ’ಯಲ್ಲಿ ಟಿ ಸುಂದರಿ ಎಂಬ ಪುಟ್ಟ ಹುಡುಗಿ ನಗುವನ್ನು ತಡೆಯಲು ಸಾಧ್ಯವಾಗದ ಒಂದೇ ಕಾರಣಕ್ಕಾಗಿ ಆಗೀಗ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾಳೆ. ನನ್ನಲ್ಲೇ ಏನೋ ಸಮಸ್ಯೆ ಇದೆಯೆ ಎಂದು ಅವಳು ಅಚ್ಚರಿಗೊಳ್ಳುತ್ತಾಳೆ. ಆದರೆ ತಕ್ಷಣದಲ್ಲಿಯೇ ನಗು ಎನ್ನುವುದು ನಿಜಕ್ಕೂ ಒಂದು ಅತ್ಯುತ್ತಮ ಔಷಧಿ ಎನ್ನುವುದನ್ನು ಕಂಡುಕೊಳ್ಳುತ್ತಾಳೆ. ನಗು ತಡೆಯದ ಸುಂದರಿ 11 ಭಾಷೆಗಳಲ್ಲಿ ಲಭ್ಯವಿದೆ.

‘ಒಂದು ದಿನ ಒಂದು ಕತೆ’ ಕಾರ್ಯಕ್ರಮ ಓದುವ ಖುಷಿಯನ್ನು ಹಂಚುವುದಕ್ಕಾಗಿ ಇರುವ ಕಾರ್ಯಕ್ರಮ. ಈ ಬಾರಿ ನಾವು ಆಯ್ಕೆ ಮಾಡಿರುವ ಎರಡೂ ಕತೆಗಳು ಎಲ್ಲೆಡೆ ಇರುವ ಮಕ್ಕಳಲ್ಲಿ ಸಂತಸ, ಹಾಗೂ ಹರ್ಷವನ್ನು ಉಂಟು ಮಾಡುತ್ತವೆ ಹಾಗೂ ನಿಜಕ್ಕೂ ಅತ್ಯಂತ ಕಷ್ಟಕರವಾಗಿರುವ ವರ್ಷವನ್ನು ದಾಟಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಆಶಾ ಭಾವನೆ ಉಂಟು ಮಾಡುತ್ತದೆ.
– ಸುಝೇನ್ ಸಿಂಘ್, ಮುಖ್ಯಸ್ಥೆ, ಪ್ರಥಮ್ ಬುಕ್ಸ್

ಪ್ರಥಮ್‌ ಬುಕ್ಸ್‌ ಬಗ್ಗೆ
ಪ್ರಥಮ್‌ ಬುಕ್ಸ್‌ ಲಾಭಾಪೇಕ್ಷೆ ಇಲ್ಲದ ಮಕ್ಕಳ ಪ್ರಕಾಶನ ಸಂಸ್ಥೆಯಾಗಿದ್ದು, ೨೦೦೪ರಲ್ಲಿ ಪ್ರತಿ ಮಗುವಿನ ಕೈಯಲ್ಲೊಂದು ಪುಸ್ತಕ ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಾಪನೆಗೊಂಡಿತು. ಪ್ರಮುಖವಾಗಿ ಗುಣಮಟ್ಟದ ಮಕ್ಕಳ ಕತೆ ಪುಸ್ತಕಗಳನ್ನು ಬಹುಭಾಷೆಗಳಲ್ಲಿ ಕಡಿಮೆ ಬೆಲೆಯಲ್ಲಿ ಕೈಗೆಟಕುವಂತೆ ಮಾಡುವುದು, ಈ ಮೂಲಕ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಉತ್ತೇಜಿಸುವುದು ಇದರ ಉದ್ದೇಶ. ಆರಂಭದಿಂಧ ಈವರೆಗ ೨೨ ಸಾವಿರ ಭಾಷೆಗಳಲ್ಲಿ ೪೦೦೦ ಕೂ ಹೆಚ್ಚು ಪುಸ್ತಕಗಳನ್ನು ಪ್ರಥಮ್‌ ಬುಕ್ಸ್‌ ಪ್ರಕಟಿಸಿದೆ.
ಪುಟಾಣಿಗಳಿಗಾಗಿ ಪುಸ್ತಕಗಳನ್ನು ಒಳಗೊಂಡಂತೆ, ಕತೆ, ಕಾಲ್ಪನಿಕ ಕತೆ, ವಿಜ್ಞಾನ, ಇತಿಹಾಸ, ಗಣಿತ ಮತ್ತು ಪರಿಸರಕ್ಕೆ ಸಂಬಂದಿಸಿದ ಕತೆಗಳನ್ನು ಈ ಪುಸ್ತಕಗಳ ಮೂಲಕ ಹೇಳಲಾಗುತ್ತಿದೆ. ಪ್ರಥಮ್‌ ಬುಕ್ಸ್‌ ಇಂತಹ ಪುಸ್ತಗಳಿಗಾಇ ಪ್ರಖ್ಯಾತ ಲೇಖಕರು ಹಾಗೂ ಚಿತ್ರಕಾರರೊಂದಿಗೆ ಕೆಲಸ ಮಾಡಿದ್ದು, ಅವರ ಹಲವು ಪುಸ್ತಕಗಳು ಪ್ರಶಸ್ತಿಗಳನ್ನು ಪಡೆದಿವೆ.
ತಂತ್ರಜ್ಞಾನದ ಶಕ್ತಿಯನ್ನು ಮನಗಂಡ ಪ್ರಥಮ್‌ ಬುಕ್ಸ್‌, ಸ್ಟೋರಿವೀವರ್‌ (www.storyweaver.org.in) ಎಂಬ ಡಿಜಿಟಲ್‌ ಜಾಲತಾಣವನ್ನು ಲೋಕಾರ್ಪಣೆ ಮಾಡಿತು. ಈ ಮೂಲಕ ಸಹಸ್ರಾರು ಬಹುಭಾಷೀಯ ಕತೆ ಪುಸ್ತಕಗಳನ್ನು ಉಚಿತವಾಗಿ ಯಾರು ಬೇಕಾದರೂ ನೋಡುವ, ಓದುವ ಸೌಲಭ್ಯ ಒದಗಿಸಿತು. ಡೊನೇಟ್‌ ಎ ಬುಕ್‌ (www.donateabook.org.in), ಎಂಬ ಕ್ರೌಡ್‌ ಫಂಡಿಂಗ್‌ ವೇದಿಕೆಯಿಂದ ದಾನಿಗಳ ನೆರವು ಪಡೆದು ಓದಿನ ಆಕರಗಳಿಲ್ಲದ ಮಕ್ಕಳಿಗಾಗಿ ಈ ಪುಸ್ತಕಗಳನ್ನು ತಲುಪಿಸುವ, ಲೈಬ್ರರಿ ವ್ಯವಸ್ಥೆಯನ್ನೂ ಕಲ್ಪಿಸುತ್ತಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸ
saba@prathambooks.org
+91-74813-24777

ಆತ್ಮ ನಿರ್ಭರ ಭಾರತದ ಆತ್ಮ ಎಂ.ಎಸ್.ಎಮ್.ಇ.ಗಳಾಗಲಿ

0

ಚಂದನ್ ಡಿ.ಎನ್. ತುಮಕೂರು


ಕೋವಿಡ್ ಜಾಗತಿಕ ಬಿಕ್ಕಟ್ಟು ಪ್ರತಿಯೊಬ್ಬ ವ್ಯಕ್ತಿಯ, ದೇಶದ, ಅಷ್ಟೇ ಏಕೆ ಇಡೀ ವಿಶ್ವದ ಚಿಂತನಾ ಶೈಲಿಯನ್ನೇ ಬದಲಿಸಿದೆ. ನಗರ ಕೇಂದ್ರೀಕೃತ ಆರ್ಥಿಕ, ಸಾಮಾಜಿಕ, ಪರಿಸರವು ಮತ್ತೊಮ್ಮೆ ಗ್ರಾಮಗಳ ಕಡೆಗೆ ಮುಖ ಮಾಡಿದೆ.

ಅದರಲ್ಲೂ ಭಾರತದಂತಹ ಬೃಹತ್ ಜನಸಂಖ್ಯಾ ಬೆಳವಣಿಗೆ ಮತ್ತು ತ್ವರಿತಗತಿಯಲ್ಲಿ ನಗರೀಕರಣಗೊಳ್ಳುತ್ತಿದ್ದ ದೇಶದಲ್ಲಿ ಉದ್ಯೋಗ, ಶಿಕ್ಷಣ, ಭದ್ರತೆ, ಉತ್ತಮಜೀವನ ಶೈಲಿಯನ್ನು ಹರಸಿ ಜನರು ನಗರಗಳಿಗೆ ವಲಸೆ ಬರುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು.

ಅತಿಯಾದ ವಲಸೆಯಿಂದಾಗಿ ನಗರಗಳಲ್ಲಿ ಅತಿಯಾದ ಜನಸಂಖ್ಯಾ ದಟ್ಟಣೆ, ಪರಿಸರನಾಶ, ಭೂ ಒತ್ತುವರಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ,ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಹೆಚ್ಚಾದರೆ ಗ್ರಾಮಗಳು ಅಗತ್ಯವಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿ ಕೃಷಿ ಸಂಬಂಧಿ ಚಟುವಟಿಕೆಗಳು, ಗ್ರಾಮೀಣ ಗುಡಿಕೈಗಾರಿಕೆಗಳು ಅಗತ್ಯ ಮಾನವ ಸಂಪನ್ಮೂಲಗಳಿಲ್ಲದೆ ನಲುಗಿದ್ದವು.

ಒಂದು ನಿದರ್ಶನವನ್ನು ನೋಡುವುದಾದರೆ,ತುಮಕೂತರು ಜಿಲ್ಲೆ, ಚಿ.ನಾ.ಹಳ್ಳಿ ತಾಲೂಕು ಎಂ.ಎಚ್‌ಕಾವಲ್ ನಲ್ಲಿ ೧೯೯೦ರ ದಶಕದ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೆಂಗು ನಾರಿನ ಗುಡಿಕೈಗಾರಿಕೆಯಲ್ಲಿ ಸುಮಾರು ೫೦ ಜನರು ಕೆಲಸ ಮಾಡುತ್ತಿದ್ದರು. ಇದರಲ್ಲಿ ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಇದ್ದು, ೨೦೦೦-೨೦೦೨ ರ ವೇಳೆಗೆ ಬಹುತೇಕ ನಿಂತು ಹೋಯಿತು. ಕಾರಣ ಆಗಾಗಲೇ ಅಲ್ಲಿನ ಯುವಕರು ಅಷ್ಟೇನೂ ಲಾಭದಾಯಕವಲ್ಲದ ಮತ್ತು ಬೇಡಿಕೆಯಿಲ್ಲದ ಹಗ್ಗ, ಮ್ಯಾಟು ತಯಾರಿಕೆಯನ್ನು ಬಿಟ್ಟು ಬೆಂಗಳೂರಿನಲ್ಲಿ ಹೋಟೆಲ್, ಬೇಕರಿ ಮತ್ತು ಕಟ್ಟಡ ನಿರ್ಮಾಣ, ಕಾರ್ಖಾನೆಗಳಲ್ಲಿ ಮತ್ತು ಗಾರ್ಮೆಂಟ್ಸ್‌ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ನಿರ್ವಹಿಸತೊಡಗಿದರು.

ಇದು ಎಷ್ಟರಮಟ್ಟಿಗೆ ಎಂದರೆ ಊರಿನ ಪಟೇಲರ ಒಬ್ಬ ಮಗನನ್ನು ಹೊರತು ಪಡಿಸಿ ಬಹುತೇಕರು ಬೆಂಗಳೂರಿನ ೮ನೇ ಮೈಲಿ,ಮಾಕಳಿ,ಪೀಣ್ಯ,ಯಶವಂತಪುರ ತಲುಪಿದ್ದರು. ಇನ್ನು ಗ್ರಾಮಗಳಲ್ಲಿ ಉಳಿದವರು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಯುವಕರು ಮತ್ತು ವಯಸ್ಸಾದ ತಂದೆ-ತಾಯಂದಿರು.ಇದಕ್ಕೆ ಮುಖ್ಯಕಾರಣವೆಂದರೆ ಕೃಷಿಯ ಅಕಾಲಿಕತೆ, ತೆಂಗು ನಾರಿನ ಉತ್ಪನ್ನಗಳಿಗೆ ಪಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳ ತೀವ್ರ ಪೈಪೋಟಿ ಮತ್ತು ಆಳುವ ಸರ್ಕಾರಗಳ ನಿರ್ಲಕ್ಷ್ಯ.

ಮರಳಿ ಮಣ್ಣಿಗೆ :


ಕೋವಿಡ್-೧೯ನ ಲಾಕ್‌ಡೌನ್ ನಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ವಲಸೆ ಶುರುವಾಗಿದೆ. ಗ್ರಾಮಗಳಲ್ಲಿ ಕೃಷಿ ಮತ್ತು ಗುಡಿ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳು ಮತ್ತೆ ಪ್ರಾರಂಭವಾಗಿವೆ. ಮೇಲಿನ ನಿದರ್ಶನದ ಗ್ರಾಮದಲ್ಲಿ ಯುವಕರು ಮತ್ತೆ ನಾರು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಗ್ರಾಮಗಳು ಸರ್ವತೋಮುಖ ಅಭಿವೃದ್ಧಿಯು ಆ ಮೂಲಕ ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿವೆ.

ಕಲ್ಪತರು ನಾಡು ಎಂದೇ ಪ್ರಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆಯ ಒಳನಾಡಿನಲ್ಲಿ ಅತಿ ಹೆಚ್ಚು ತೆಂಗು ಬೆಳೆಯುತ್ತಿರುವ ದೇಶದ ಏಕೈಕ ಜಿಲ್ಲೆಯಾಗಿದೆ. ಜಿಲ್ಲೆಯ ಒಳನಾಡಿನಲ್ಲಿ ತೆಂಗು ಬೆಳೆಯುತ್ತಿರುವುದರಿಂದ ಸಿಹಿ ನೀರಾ ಕಾಯಿ,ಕೊಬ್ಬರಿಗೆ ಹೆಸರಾಗಿದೆ.

ಇತ್ತೀಚೆಗೆ ಹಲವು ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಉದಾಹರಣೆಗೆ ಕಡಿಮೆ ನೀರಿನಲ್ಲಿ ಬೆಳೆಯುವ ’ಕಲ್ಪತರು’ ಎಳ ನೀರು ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.
ತುಮಕೂರು ಜಿಲ್ಲೆ ಅಥವಾ ತಾಲೂಕುಗಳಲ್ಲಿ ಕನಿಷ್ಟ ೨-೩ ಸಣ್ಣ ಮತ್ತು ಮಧ್ಯಮ ತೆಂಗಿನ ಎಣ್ಣೆ ಕಾರ್ಖಾನೆಗಳನ್ನು ಸ್ಥಾಪಿಸಬಹುದಾಗಿದೆ. ಅಲ್ಲದೆ ಕೊಬ್ಬರಿಯಿಂದ ಮಿಠಾಯಿ, ಬಿಸ್ಕತ್, ಚಾಕೋಲೇಟ್, ಕೊಬ್ಬರಿ ಫ್ಲೇವರ್ ಐಸ್‌ಕ್ರೀಮ್ ತಯಾರು ಮಾಡಬಹುದಾಗಿದೆ. ಕಾಯಿ ಪೌಡರ್ ತಯಾರಿಸಿ ಹೊರರಾಜ್ಯ ಅಥವಾ ಹೊರದೇಶಗಳಿಗೆ ಕಳುಹಿಸಲು ಹೇರಳವಾದ ಅವಕಾಶವಿದೆ.

ನೀರಾ ಉತ್ಪಾದನೆಯನ್ನೂ ಸಹ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿದ್ದು, ಪ್ಲಾಸ್ಟಿಕ್ ಮತ್ತು ರಬ್ಬರ್ ಗಳ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನ ವಹಿಸುತ್ತಿದ್ದು ಇದನ್ನು ಬಳಸಿಕೊಂಡು ಜಿಲ್ಲೆಯಲ್ಲಿ ತೆಂಗು ನಾರಿನಿಂದ ಹಗ್ಗಗಳು, ಮ್ಯಾಟು, ಇತ್ಯಾದಿಗಳನ್ನು ಹಲವಾರು ಗುಡಿ ಮತ್ತು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಮತ್ತು ಪುನರುಜ್ಜೀವನ ಗೊಳಿಸುವುದರ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬಹುದು.

ಇಂದು ಬಹುತೇಕ ಗಾಣಗಳು ಕಾಣೆಯಾಗಿವೆ. ಆದರೆಇತ್ತೀಚೆಗೆಜನರಲ್ಲಿಅದರಲ್ಲೂ ನಗರವಾಸಿಗಳಲ್ಲಿ ನೈಸರ್ಗಿಕ ಉತ್ಪನ್ನಗಳ ಬಳಕೆಗೆ ಒಲವು ಹೆಚ್ಚಿದೆ ತುಮಕೂರು ಜಿಲ್ಲೆಯಲ್ಲಿ ಬೆಳೆಯುತ್ತಿರುವ ಅರಳೆ, ಹೊಂಗೆ, ಇತ್ಯಾದಿಗಳನ್ನು ಬಳಸಿಕೊಂಡು, ಪ್ರಸ್ತುತ ಅಭಿವೃದ್ಧಿ ಹೊಂದಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಗಾಣಗಳನ್ನು ಅಭಿವೃದ್ಧಿಪಡಿಸಬೇಕಿದೆ.

ತುಮಕೂರು ಜಿಲೆಯಲ್ಲ್ಲಿ ತೆಂಗು ಬೆಳೆಯಷ್ಟೇ ಅಡಕೆ ಬೆಳೆಯಲಾಗುತ್ತಿದೆ. ಅಡಕೆಯನ್ನು ಹೊರರಾಜ್ಯಗಳಿಗೆ ರಫ್ತು ಮಾಡುವುದರ ಜೊತೆಗೆ ಪಾನ್ ಮಸಾಲ ಉತ್ಪನ್ನಗಳ ತಯಾರಿಕೆಯಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಬಹುದು.

ಜೊತೆಗೆ ಇತ್ತೀಚೆಗೆ ಹಲವು ಸ್ಟಾರ್ಟಪ್‌ಗಳು ಅಡಕೆಯಿಂದ ಕಾಫಿ ರೀತಿಯ ಪಾನೀಯವನ್ನು ತಯಾರಿಸುತ್ತಿದ್ದು, ಇದೇ ಮಾದರಿಯ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬಹುದಾಗಿದೆ.ಪ್ಲಾಸ್ಟಿಕ್(ಏಕ ಬಳಕೆಯ)ಅನ್ನು ರಾಜ್ಯ ಸರ್ಕಾರವು ನಿಷೇಧಿಸಿದ್ದು, ಇಂದು ಅಡಿಕೆ ಪಟ್ಟೆಯಿಂದ ಮಾಡಿದ ತಟ್ಟೆ,ಜೊನ್ನೆಗಳನ್ನು ಬಳಸುತ್ತಿದ್ದು, ತುಮಕೂರು ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿರುವ ವಸಂತನರಸಾಪುರದ “ಫುಡ್ ಪಾರ್ಕ್”ಗೆ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದರೆ ರೈತರು ಬೆಳೆಯುವ ತರಕಾರಿ ಮತ್ತು ಬೇಳೆ ಕಾಳುಗಳ ಉತ್ಪನ್ನಗಳನ್ನು ಯಶಸ್ವಿಯಾಗಿ ವಿದೇಶಗಳಿಗೆ

ರಫ್ತು ಮಾಡಬಹುದಾಗಿದೆ.
ಉದಾಹರಣೆಗೆ: ತುಮಕೂರಿನಲ್ಲಿ ಹಲವು ತಳಿಯ ಹಲಸು, ಮಾವು, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನು ಯಶಸ್ವಿಯಾಗಿ ಚಿಪ್ಸ್, ಹಲ್ವ, ಜ್ಯೂಸ್ ತಯಾರಿಕೆಗೆ ಬಳಸಬಹುದು. ಇವುಗಳನ್ನು ತಾಲೂಕಿನಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕವು ಕೃಷಿ ಉತ್ಪನ್ನಗಳ ಮೌಲ್ಯವನ್ನು ವರ್ಧಿಸಬುದಾಗಿದೆ.

ರೇಷ್ಮೆ: ದೇಶವು ಲಾಕ್‌ಡೌನ್ ಹೇರಿದ ಪರಿಣಾಮ ಮತ್ತು ಭಾರತಚೀನಾ ನಡುವಿನ ಗಡಿ ಬಿಕ್ಕಟ್ಟಿನಿಂದಾಗಿ ಚೀನಾದಿಂದ ಆಮದಾಗುತ್ತಿದ್ದ ಕಚ್ಚಾ ರೇಷ್ಮೆ ಪ್ರಮಾಣ ಕಡಿಮೆಯಾಗುತ್ತಿದೆ. ರೇಷ್ಮೆಗೆ ಬೇಡಿಕೆ ಹೆಚ್ಚಿರುವುದರಿಂದ ರೈತರು ಈ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ. ತಾಲೂಕಿನಲ್ಲಿ ರೇಷ್ಮೆ ಉತ್ಪಾದನೆ, ಹಿಪ್ಪು ನೇರಳೆ ಬೆಳೆಗೆ ಉತ್ತಮ ವಾತಾವರಣವಿರುವುದನ್ನು ರೈತರು ಮನಗಾಣಬೇಕಿದೆ. ಗುಬ್ಬಿ ತಾಲೂಕು ಕಲ್ಲೂರು ಕೇಂದ್ರೀಕೃತವಾಗಿರುವ ರೇಷ್ಮೆ, ಕೈಮಗ್ಗ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಅವಕಾಶವಿದೆ.

ಪೌಲ್ಟ್ರಿ ಮತ್ತು ಹೈನುಗಾರಿಕೆ : ಕೃಷಿ ಸಂಬಂಧಿಸಿದ ಚಟುವಟಿಕೆಗಳಲ್ಲಿ ವಿವಿಧ ತಳಿಗಳ ಕೋಳಿ ಸಾಕಾಣೆಗೆ ತಾಲೂಕಿನಲ್ಲಿ ಉತ್ತಮ ಅವಕಾಶಗಳಿವೆ. ವೆಂಕಾಬ್, ಸುವರ್ಣ,ಸುಗುಣ ಇತ್ಯಾದಿ ಕಂಪನಿಗಳನ್ನು ತಾಲೂಕುಗಳಿಗೆ ಆಹ್ವಾನಿಸಬೇಕಿದೆ. ಇನ್ನು ತುಮುಲ್ ಜಿಲ್ಲೆಯ ಹೆಮ್ಮೆಯಾಗಿದ್ದು ಹೈನುಗಾರಿಕೆಯನ್ನು ಇನ್ನು ಅಭಿವೃದ್ಧಿಗೊಳಿಸಬೇಕಿದೆ. ಊದುಬತ್ತಿ, ಕರ್ಪೂರ, ಮೇಣದ ಬತ್ತಿ, ಬೀಡಿ, ಸಿಗರೇಟ್ ಇತ್ಯಾದಿಗಳ ತಯಾರಿಕೆಗೆ ತಾಲೂಕುಗಳಲ್ಲಿ ಅವಕಾಶವಿದೆ. ಜಿಲ್ಲೆಯು ರಾಜ್ಯದೆಲ್ಲೆಡೆ ಒಂದು ಬೃಹತ್ ವಿಸ್ತೀರ್ಣ ಮತ್ತು ಜನಸಂಖ್ಯೆ ಹೊಂದಿರು ಜಿಲ್ಲೆಯಾಗಿದ್ದು ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ರಫ್ತು ಮಾಡುವುದು ಸುಲಭವಾಗಿದೆ.
ಗಾರ್ಮೆಂಟ್ಸ್ ಮತ್ತು ಕಾರ್ಖಾನೆ ಸ್ಥಾಪನೆಗೆ ಪ್ರೋತ್ಸಾಹ: ಬೆಂಗಳೂರಿನಂತ ಬೃಹತ್ ನಗರದಲ್ಲಿ ಹೆಚ್ಚಿನ ಜನಸಂಖ್ಯಾ ದಟ್ಟಣೆಯಿಂದ ಜಾಗತಿಕ ಪಿಡುಗುಗಳ ಸಂದರ್ಭದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿನ ಕಾರ್ಮಿಕರು ಹೆಚ್ಚು ಬೇಕಿರುವ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಈ ಸಂದರ್ಭದಲ್ಲಿ ಕಾರ್ಖಾನೆಗಳು ಸಹಜವಾಗಿ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳತ್ತ ಮುಖ ಮಾಡಿವೆ. ಇಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಹಳ್ಳಿಗೆ ಹಿಂದಿರುಗಿರುವುದರಿಂದ ಇಂತಹ ಕಾರ್ಖಾನೆಗಳ ಸ್ಥಾಪನೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಪ್ರೋತ್ಸಾಹ ನೀಡಬೇಕಿದೆ. ಇದರಿಂದ ಸಾವಿರಾರು ಜನರು ಉದ್ಯೋಗ ಪಡೆಯಲು ಸಾಧ್ಯ.

ಇತ್ತೀಚಿನ ದಿಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮಣ್ಣು ಇಟ್ಟಿಗೆಗಳಿಗಿಂತ ಸಿಮೆಂಟ್ ಇಟ್ಟಿಗೆಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಸಿಮೆಂಟ್ ಇಟ್ಟಿಗೆ ತಯಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಬೇಕಿದೆ.ಪ್ಯಾಕೇಜ್ಡ್ ಕುಡಿಯುವ ನೀರಿನ ಸಣ್ಣ ಮತ್ತು ಮಧ್ಯಮ ಕಾರ್ಖಾನೆ ಸ್ಥಾಪನೆ, ಅರ್ಧ ಲೀಟರ್, ಒಂದು ಲೀಟರ್‌ವರೆಗೂ ಕುಡಿಯುವ ನೀರಿನ ತಯಾರಿಕ ಕಾರ್ಖಾನೆ ನಿರ್ಮಿಸಬಹುದು.

ಪ್ರಸ್ತುತ ದಿನಗಳಲ್ಲಿ ಚೀನಾದಲ್ಲಿ ಉತ್ಪಾದನೆ ವೆಚ್ಚವು ಹೆಚ್ಚಾಗುತ್ತಿದ್ದು ಹಲವಾರು ಕಂಪನಿಗಳು ಚೀನಾಗೆ ಪರ್ಯಾಯವಾಗಿ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ. ಇದಕ್ಕೆ ಕಾರಣ ಇಲ್ಲಿನ ಉತ್ಪಾದನೆ ವೆಚ್ಚ ಕಡಿಮೆ ಇರುವುದು ಮತ್ತು ಅಗಾದ ಮಾರುಕಟ್ಟೆಗಳಿವೆ.

ಇದೇ ಸಂದರ್ಭದಲ್ಲಿ ಬಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನಿಂದಗಿ ಭಾರತ ಸರ್ಕಾರವು ಹಲವು ಎಲೆಕ್ಟಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಉತ್ಪಾದನೆಗಳನ್ನು ನಿಷೇದಿಸಿದಿರುವುದಾಗಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅನೇಕ ಸಣ್ಣ ಮತ್ತು ಮದ್ಯಮ ಗಾತ್ರದ ಎಲೆಕ್ಟರಾನಿಕ್ಸ್ ಕಾರ್ಖಾನೆಗಳನ್ನು ತೆರೆಯಲು ಅವಕಾಸವಿದೆ.ಇಷ್ಟೇ ಅಲ್ಲದೆ ಮಸ್ಕ್ ಸ್ಯಾನಿಟೈಸರ್,ಗ್ಲೌಸ್ ಮತ್ತು ಇತ್ಯಾದಿಗಳನ್ನು ಉತ್ಪಾದಿಸಲು ಅವಕಾಶವಿದೆ.

ಒಳಗೊಳ್ಳುವ ಸುಸ್ಥಿತ ಅಭಿವೃದ್ದಿ:
ಭಾರತವು ತೀವ್ರ ಗತಿಯಲ್ಲಿ ನಗರೀಕರಣಗೊಳ್ಳುತ್ತಿದೆಯಾದರೂ ಇಂದಿಗೂ ಶೇ,೬೨ ರಷ್ಟು ಜನ ಹಳ್ಳಿಯಲ್ಲೇ ವಾಸಿಸಿತ್ತಿದ್ದಾರೆ. ದೇಶದಲ್ಲಿ ಕೃಷಯು ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟತಿಸಿದರೆ ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗರಿಕೆಗಳು ಹೆಚ್ಚಿನ ಉದ್ಯೋಗ ಸೃಷ್ಟಿಸಿತ್ತಿವೆ ಆದರೆ ಇವೆರಡೂ ಅಷ್ಟು ಲಭದಯಕವಾಗಿಲ್ಲ ಇಂದು ಕೃಷಿ ಮತ್ತು ಎಮ್.ಎಸ್.ಎಮ್.ಇ ಗಳು ಸಂಕಷ್ಟದ ಪರಿಸ್ಥಿತಿಯಲ್ಲಿವೆ.

ನೆರವು


ಗ್ರಾಮ ಮತ್ತು ಗ್ರಮೀಣ ಆರ್ಥಿಕತೆಯ ನೆರವನ್ನು ಕಡೆಗಣಿಸುತ್ತಿದ್ದ ಸರ್ಕಾರಗಳು ಇತ್ತೀಚೆಗೆ ಅವುಗಳ ಮಹತ್ವವನ್ನು ತಿಳಿದಿರುವುದು ಒಮದು ಆಶಾ ಭಾವನೆಯಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಕ್ಛಷಿ ಹಾಗೂ ಕ್ಛಷಿ ಸಂಭಂದಿತ ಯೋಜನೆಗಳು ಮತ್ತು ಎಮ್.ಎಸ್,ಎಮ್.ಇ ಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುತ್ತಿದ್ದು,ಎಮ್,ಎಸ್,ಎಮ್,ಇ ಗಳಿಗೆ ಹೂಡಿಕೆಯನ್ನು ಹೆಚ್ಚಿಸುವ ದ್ಛಷ್ಟಿಯಿಂದ ಅವುಗಳ ವ್ಯಾಕ್ಯಾಯವನ್ನು ಬದಲಿಸಿದೆ.ಇನ್ನು ಅನೇಕ ಶಾಸನಾತ್ಮಕ ಬದಲಾವಣೆಯನ್ನು ತಂದಿದೆ. ಕರ್ನಾಟಕ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

ಉದಾಹರಣೆಗೆ ನೂತನ ಕೈಗಾರಿಕ ನೀತಿ ೨೦೨೦-೨೫ ರ ಅನ್ವಯ ಕೆ.ಐ.ಎ.ಡಿ.ಬಿ ತಾನು ಅಭಿವೃದ್ದಿ ಪಡಿಸಿದ ಭೂಮಿಯಲ್ಲಿ ಶೇಕಡ ೩೦ ರಷ್ಟನ್ನು ಎಮ್.ಎಸ್,ಎಮ್,ಇ ಗಳೀಗೆ ಮೀಸಲಿಡಬೇಕು. ಸಬ್ಸಿಡಿ ರೂಪದಲ್ಲಿ ಬಡ್ಡಿ ದರವನ್ನು ಶೇಕಡ ೧೦ ರಿಂದ ೬ ಕ್ಕೆ ಇಳಿಸಿದೆ , ಅಲ್ಲದೆ ಟಯರ್-೨ ಮತ್ತು ಟಯರ್-೩ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಢಾಪಿಸಲು ಹಲವು ರಿಯಾಯಿತಿ ಮತ್ತು ವಿಶೇಷ ಪ್ರೋತ್ಸಾಹ ನೀಡುತ್ತಿದೆ.

ಇನ್ನೂ ಜಿಲ್ಲೆಯ ಮಾನವ ಸಂಪನ್ಮೂಲದ ಬಗ್ಗೆ ಹೇಳುವುದಾದರೆ ಜಿಲ್ಲೆಯ ಶೈಕ್ಷಣಿಕ ನಗರಿ ಎಂದೇ ಹೆಸರಾಗಿದೆ. ಇಲ್ಲಿ ಅನೇಕ ಇಂಜಿನಿಯರಿಂಗ್,ಡಿಪ್ಲೋಮ,ಐ.ಟಿ.ಐ ಕಾಲೇಜುಗಳಿದ್ದು ಕೌಶಲ್ವಭರಿತ ಉದ್ಯೋಗಾಕಾಂಕ್ಷಿಗಳಿದ್ದಾರೆ.

ಈ ಯುವ ಸಮುದಾಯಕ್ಕೆ ಭಾರತ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮಗಳ ತರಭೇತಿಯನ್ನು ನೀಡುತ್ತಿವೆ.

ಈ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲೆಯು ಉದ್ಯಮಗಳ ಹಾಟ್ಸ್ಪಾಟ್ ಆಗುವ ಎಲ್ಲಾ ಅವಕಾಶಗಳಿದ್ದು,ಇದಕ್ಕಾಗಿ ಸ್ಥಳೀಯರು,ಜನಪ್ರದಿನಿದಿಗಳು,ತಾಲುಕು ಮತ್ತು ಜಿಲ್ಲಾಡಳಿತಗಳು ಕೆಂಪು ಹಾಸು ಹಾಸಬೇಕಿದೆ.

ಬಿಜೆಪಿ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುವ ತಹಶೀಲ್ದಾರ್

Publicstory


ತುರುವೇಕೆರೆ: ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲಾತಿ ಪಟ್ಟಿಯನ್ನು ಬಿಜೆಪಿಗೆ ಪೂರಕವಾಗಿ ತಹಶೀಲ್ದಾರ್ ಸಿದ್ದಪಡಿಸಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ನೇರ ಆರೋಪ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ,
ಈಗಗಾಲೇ ತಾಲ್ಲೂಕಿನ 27 ಗ್ರಾಮ ಪಂಚಾಯಿತಿಗಳ ಸದಸ್ಯರ ಚುನಾವಣಾ ಮೀಸಲಾತಿ ಪಟ್ಟಿಯನ್ನು ಸರ್ಕಾರ ಹೊರಡಿಸಿದೆ. ಈ ಪಟ್ಟಿಯು ಸಂಪೂರ್ಣವಾಗಿ ಪೂರ್ವಾಗ್ರಹದಿಂದ ಕೂಡಿದ್ದು ಬಿಜೆಪಿಯು ತಾಲ್ಲೂಕು ಆಡಳಿತವನ್ನು ಬಳಸಿಕೊಂಡು ತನಗೆ ಅನುಕೂಲವಾಗುವಂತೆ ಮೀಸಲಾತಿಯನ್ನು ನೋಡಿಕೊಳ್ಳಲಾಗಿದೆ.

ಗ್ರಾ.ಪಂ ಚುನಾವಣಾ ಪಟ್ಟಿಯಲ್ಲೇ ಹೀಗೆ ಪಾರದರ್ಶಕತೆ ಇಲ್ಲವಾದರೆ ಇನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಪಟ್ಟಿ ನ್ಯಾಯಯುತವಾಗಿರುತ್ತದೆಯೇ ಎಂದು ಪ್ರಶ್ನಿಸಿದರು.

ಭೈತರಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ವರ್ಗ ಜನರಿದ್ದಾರೆ ಆದರೆ ಅಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಲಾಗಿದೆ. ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಕೇನಹಳ್ಳಿ ಬ್ಲಾಕ್ ಒಂದರಲ್ಲಿ ಬಿಸಿಎಂಎಗೆ ಮಾತ್ರವೇ ನೀಡಿದ್ದು ಹೆಚ್ಚಿನ ಸಂಖ್ಯೆಯಲ್ಲಿರುವ ಸಾಮಾನ್ಯ ವರ್ಗವನ್ನು ಕಡೆಗಣಿಸಲಾಗಿದೆ.

ದಬ್ಬೇಘಟ್ಟ ಪಂಚಾಯಿತಿ ವ್ಯಾಪ್ತಿಯ ಹೊಡಕೇಘಟ್ಟ ಗ್ರಾಮದಲ್ಲಿ ಕೇವಲ ಸಾಮಾನ್ಯ ವರ್ಗಕ್ಕೇ ಆದ್ಯತೆ ನೀಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಕಡೆಗಣಿಸಲಾಗಿದೆ. ಸೋಮಲಾಪುರದಲ್ಲೂ ಬಿಸಿಎಂಎಗೆ ಇದುವರೆವಿಗೂ ಅವಕಾಶವೇ ನೀಡಲಾಗಿಲ್ಲ. ಹೀಗೆ ತಾಲ್ಲೂಕಿನಾದ್ಯಂತ ಮೀಸಲಾತಿಯಲ್ಲಿ ಲೋಪದೋಷಗಳಿವೆ‌‌ ಎಂದು ಆರೋಪಿಸಿದರು.

ತಾಲ್ಲೂಕಿನ ಯಾವ ಭಾಗದಲ್ಲಿ ಜೆಡಿಎಸ್ ಪ್ರಭಾವವಿದೆಯೋ ಅಲ್ಲೆಲ್ಲಾ ಸಾಮಾನ್ಯ ವರ್ಗದ ಮೀಸಲಾತಿ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಕೆಲವು ಪಂಚಾಯಿತಿಗಳಲ್ಲಿ ಮೀಸಲಾತಿಯನ್ನು ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲೇ ಮಾಡಿದೆ.
ತಹಶೀಲ್ದಾರ್ ಅವರು ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮೀಸಲಾತಿ ಪಟ್ಟಿ ತಯಾರಿಸಿದ್ದಾರೆ ಎಂದು ದೂರಿದರು.

ತಾಲ್ಲೂಕು ಕಚೇರಿ ಸೇರಿದಂತೆ ತಾಲ್ಲೂಕು ಆಡಳಿತ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದು ಕೇವಲ ಉಸ್ತವ ಮೂರ್ತಿಯಂತೆ ಕೆಲಸ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.

ಗ್ರಾಮಪಂಚಾಯಿತಿಗಳ ಚುನಾವಣಾ ಮೀಸಲಾತಿ ಪಟ್ಟಿ ಬಿಜೆಪಿ ಪರವಾಗಿರುವ ಬಗ್ಗೆ ಜೆಡಿಎಸ್ ವರಿಷ್ಟರಾ್ ಎಚ್.ಡಿ.ದೇವೇಗೌಡರು ಹಾಗು ಕುಮಾರ ಸ್ವಾಮಿಯವರು ಆಕ್ಷೇಪ ವ್ಯಕ್ತಪಡಿಸಿದ್ದು ಅವರು ಸೂಚನೆ ನೀಡಿದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ಸಿದ್ದವೆಂದು ಎಚ್ಚರಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕೊಳಾಲ ಗಂಗಾಧರ್, ವಿಜಯೇಂದ್ರ, ವೆಂಕಟಾಪುರಯೋಗೀಶ್, ಕುಶಾಲ್ಕುಮಾರ್, ಜಫ್ರುಲ್ಲಾ, ರಾಮಚಂದ್ರು ಇದ್ದರು.

ಕಾರ್ಮಿಕರು, ರೈತರ ಬೀದಿಪಾಲು: ಬಿಜೆಪಿ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶದ ಪ್ರತಿಭಟನೆ

Publicstory.in


ತುಮಕೂರು: ಕಾರ್ಮಿಕರು, ರೈತರ ಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಸಿಐಟಿಯು, ಪ್ರಾಂತ ರೈತ ಸಂಘ. ಕಟ್ಟಡ ಕಾರ್ಮಿಕರ ಸಂಘಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಶನಿವಾರ ಆಕ್ರೋಶಭರಿತ ಪ್ರತಿಭಟನೆ ನಡೆಯಿತು.

ಕೊರೊನಾ ಕಾರಣ ಗುಬ್ಬಿ, ತುಮಕೂರು ತಾಲ್ಲೂಕು ಸೇರಿದಂತೆ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯತಿ ಗಳ ಎದುರು ಪ್ರತಿಭಟನೆಗಳು ನಡೆದವು.

ಸಿ.ಡಬ್ಲ್ಯೂ.ಎಫ್.ಐ. ಕಟ್ಟಡ ಕಾಮಿ೯ಕರಿಂದ ಗುಬ್ಬಿ ತಾಲ್ಲೂಕು ಚೇಳೂರು ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಯಿತು.

ಸಿ.ಡಬ್ಲ್ಯೂ.ಎಫ್.ಐ. ಕಟ್ಟಡ ಕಾಮಿ೯ಕರಿಂದ ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಯಿತು.

ತುಮಕೂರು ತಾಲ್ಲೂಕು ನಿಡವಳಲು ಗ್ರಾ.ಪಂ. ಮುಂದೆ ತೊಂಡಗೆರೆ ಘಟಕದವತಿಯಿಂದ ಪ್ರತಿಭಟನೆ ನಡೆಸಲಾಯಿತು.

ತುಮಕೂರು ತಾಲ್ಲೂಕು ಬೆಳ್ಳಾವಿ ಗ್ರಾ.ಪಂ. ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಸಯ್ಯದ್ ಮುಜೀಬ್, ಬಿ.ಉಮೇಶ್, ಕೆ.ಸುಬ್ರಹ್ಮಣ್ಯ, ಸಿ.ಅಜ್ಜಪ್ಪ ಸೇರಿದಂತೆ ಅನೇಕ ಮುಖಂಡರು ವಹಿಸಿದ್ದರು.


ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜನಸಾಮಾನ್ಯರ ಮೇಲೆ ಬದುಕಿಗೆ,ಅವರ ಕುಟುಂಬಕ್ಕೆ ಭದ್ರತೆಯೇ ಇಲ್ಲದಂತೆ ಮಾಡಿದೆ ಎಂದು ಬಿ.ಉಮೇಶ್ ಕಿಡಿಕಾರಿದರು.

ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಬದುಕನ್ನು ರಕ್ಷಿಸಲು ಐಕ್ಯ ಚಳವಳಿಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ *ರೈತ-ಕಾರ್ಮಿಕ-ಮಹಿಳಾ ಕೂಲಿಕಾರರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಐಕ್ಯ ಹೋರಾಟ ನಡೆಸಬೇಕಾಗಿದೆ ಎಂದರು.

ಬೇಡಿಕೆಗಳೇನು


1) *ಪ್ರತಿಯೊಬ್ಬರನ್ನು ಉಚಿತವಾಗಿ ಕೊವಿಡ್ ಪರೀಕ್ಷೆಗೆ ಒಳಪಡಿಸಿ ಉಚಿತ ಔಷಧೋಪಚಾರ ಒದಗಿಸಬೇಕು.

2) *ಪ್ರತಿಯೊಬ್ಬರಿಗೂ ಮುಂದಿನ ೬ ತಿಂಗಳವರೆಗೆ ಮಾಸಿಕ ರೂ 7500 ಕೊವಿಡ್ ಪರಿಹಾರ ನೀಡಬೇಕು.

3) *ಕುಟುಂಬದ ಪ್ರತಿ ಸದಸ್ಯನಿಗೂ ಮಾಸಿ 10 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು.

4) *ಉದ್ಯೋಗ ಖಾತ್ರಿ ವೇತನವನ್ನು ಪ್ರತಿದಿನಕ್ಕೆ ಕನಿಷ್ಟ ರೂ. 600 ಕ್ಕೆ ಹೆಚ್ಚಿಸಬೇಕು ಕನಿಷ್ಠ ೨೦೦ ದಿನ ಕೆಲಸ ನೀಡಬೇಕು ಹಾಗೂ ನಗರ ಪ್ರದೇಶಕ್ಕೂ ವಿಸ್ತರಿಸಬೇಕು.

5) *ಶಿಕ್ಷಣ-ಆರೋಗ್ಯ-ರೈಲು-ರಸ್ತೆ-ವಿದ್ಯುತ್-ದೂರಸಂಪರ್ಕ-ವಿಮಾ-ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ತಡೆಯಬೇಕು.

6) *ಭೂ ಕಾಯ್ದೆ APMC ಕಾಯ್ದೆ ತಿದ್ದುಪಡಿ ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಅಗತ್ಯ ಸೇವಾ ಸುಗ್ರೀವಾಜ್ಙೆಗಳನ್ನು ರದ್ದುಪಡಿಸಬೇಕು

7) *ಮಹಿಳಾ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್/ ಸಹಕಾರ ಸಂಘಗಳು ಮೈಕ್ರೋ ಫೈನಾನ್ಸ್ ಮತ್ತಿತ್ತರ ಕಿರುಸಾಲ ಸಂಸ್ಥೆಗಳು ನೀಡಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಬೇಕು ಹಾಗೂ ಹೊಸ ಸಾಲ ನೀಡಬೇಕು.

ಚುಂಚಾದ್ರಿ ರೈತ ಸಂತೆಗೆ ಶಿಲಾನ್ಯಾಸ

ತುರುವೇಕೆರೆ: ಸಮೀಪದ ಮಾಯಸಂದ್ರದ ಶ್ರೀ ಕಲ್ಪತರು ಆಶ್ರಮದಲ್ಲಿ ಶ್ರೀ ಚುಂಚನಗಿರಿ ಸಂಸ್ಥಾನದ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಚುಂಚಾದ್ರಿ ರೈತ ಸಂತೆಯ ಕಟ್ಟಡದ ಶಂಕುಸ್ಥಾಪನೆಯನ್ನು ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸಾಮೀಜಿ ನೆರವೇರಿಸಿದರು.

ಶಂಕುಸ್ಥಾಪನೆಯ ನಂತರ ಸರಳ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ರೈತರು ಸದಾಕಾಲ ಸರ್ಕಾರದ ಹಂಗಿನಲ್ಲೇ ಬದುಕುವಂತಾಗಿದೆ. ಎಷ್ಟೇ ಶ್ರಮಪಟ್ಟರೂ ರೈತರ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಸ್ತಕ್ಷೇಪದಿಂದ ರೈತರು ವಂಚನೆಗೊಳಗಾಗುತ್ತಿದ್ದಾರೆ ಎಂದರು.

ರೈತರು ತಮ್ಮ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮಾಡುವ ಕೌಶಲ ಕಲಿಯಬೇಕು. ಜೊತೆಗೆ ರೈತರು ತಮ್ಮ ಉತ್ಪನ್ನಗಳಿಗೆ ಸರ್ಕಾರ ಇಲ್ಲವೇ ದಳ್ಳಾಳಿಗಳ ಮಧ್ಯಸ್ಥಿಕೆ ಇಲ್ಲದೆ ತಾವೇ ಬೆಲೆ ಕಟ್ಟುವಂತಾಗಬೇಕು.ಕೃಷಿ ಉತ್ಪನ್ನಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ಯಾವುದೇ ಕಲಬೆರಕೆ ಇಲ್ಲದೆ ಹಸನಾದ ರೂಪದಲ್ಲೇ ದೊರೆಯುವಂತಾಗಬೇಕು ಎಂಬ ಪರಿಕಲ್ಪನೆಯಿಂದ ರೈತ ಸಂತೆಗೆ ಚಾಲನೆ ನೀಡುತ್ತಿದ್ದು ಅದಕ್ಕಾಗಿಯೇ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು‌ ಹೇಳಿದರು.

ಈ ಭಾಗದ ರೈತರು ಚುಂಚಾದ್ರಿ ರೈತ ಸಂತೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಲ್ಪತರು ಆಶ್ರಮದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ಬೆಂಗಳೂರು ಟಿಸಿಎಸ್ ಕಂಪನಿಯ ಉಪಾಧ್ಯಕ್ಷ ಚಕ್ರವರ್ತಿ, ತುರುವೇಕೆಯ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಢಳಿತಾಧಿಕಾರಿಗಳಾದ ಕೆ. ಪುಟ್ಟರಂಗಪ್ಪ ಇತರರು ಭಾಗವಹಿಸಿದ್ದರು.

ಮುಂದಿನ ವಿಧಾನಸಭಾ ಚುನಾವಣಾ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ: ಎಚ್.ಡಿ.ಕುಮಾರಸ್ವಾಮಿ

Publicstory


ತುರುವೇಕೆರೆ: ತಾಲ್ಲೂಕಿನ ಗುಡ್ಡೇನಹಳ್ಳಿ ಸಾಗುವಳಿ ಭೂಮಿಗೆ ಸಂಬಂಧಿಸಿದ ಸಣ್ಣ ಸಮಸ್ಯೆಯನ್ನು ಇಂಡಿಯಾ ಪಾಕಿಸ್ತಾನ, ಅಥವಾ ಇಂಡಿಯಾ-ಚೈನಾದ ಗಡಿ ಯುದ್ದ ತರಹ ಬಿಂಬಿಸಿ ತುರುವೇಕೆರೆ ತಾಲ್ಲೂಕಿನಲ್ಲಿ 144 ಸೆಕ್ಷನ್ ನಿಷೇದಾಜ್ಞೆ ಹೇರಿ ಜನರು, ರೈತರಲ್ಲಿ ಆಂತಕ ಸೃಷ್ಟಿಸಿದ್ದೀರಿ ಹೀಗೆ ನಡೆಸಲು ಯಾರು ನಿಮಗೆ ನಿರ್ದೇಶನ ನೀಡಿದವರೆಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಜೆಡಿಎಸ್ ಮುಖಂಡ ಎಂ.ಟಿ.ಕೃಷ್ಣಪ್ಪ ಹಮ್ಮಿಕೊಂಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾತನಾಡಿದರು.

ಗುಡ್ಡೇನಹಳ್ಳಿ ರೈತರ ತೆಂಗಿನ ಸಸಿಗಳನ್ನು ಅಧಿಕಾರಿಗಳು ಕಿತ್ತಾಗ ರೈತರ ಸಮಸ್ಯೆಯನ್ನು ತಾಳ್ಮೆಯಿಂದ ಹಾಲಿ ಶಾಸಕರು ಕೇಳಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಫ್ಲೆಕ್ಸ್ ಹರಿದ ವಿಚಾರವಾಗಿ ಜೆಡಿಎಸ್,ಬಿಜೆಪಿ ಪಕ್ಷಗಳ ನಡುವೆ ಘರ್ಷಣೆಯ ವೇಳೆ ಎರಡೂ ಗುಂಪುಗಳ ನಡುವೆ ಆರೋಗ್ಯಕರ ಚರ್ಚೆ ನಡೆಸಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದರು.

ಅಧಿಕಾರಿಗಳು ಯಾವುದೋ ಪಕ್ಷದ ಮುಖಂಡ ಅಣತಿಯಂತೆ ನಡೆಯದೆ ಕಾನೂನಿ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ವಿನಾಕಾರಣ 144 ಸೆಕ್ಷನ್ ಕಾಯಿದೆ ಜಾರಿಗೆ ತರಲು ಕಾರಣಕರ್ತರಾದ ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲು ಗೃಹ ಸಚಿವರು ಮತ್ತು ಸಿಎಂ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಡಿ.ಜೆಹಳ್ಳಯಲ್ಲಿ ನಡೆದ ಗಲಬೆಯ ತರಹ ಬೆಂಕಿ ಹಚ್ಚಲು ಪೆಟ್ರೋಲ್ ಬಾಂಬ್ ತಂದಿಟ್ಟುಕೊಂಡಿಲ್ಲ ತುರುವೇಕೆರೆ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೆಂದು ಅಸಮಧಾನ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದಲ್ಲಿ ನಾನು 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ ಹಣವನ್ನು ಅಧಿಕಾರಕ್ಕೆ ಬಂದು ಬಿಜೆಪಿ ಸಕರ್ಾರ ಬೇರೆ ಬೇರೆ ಕಾಣರಗಳಿಗೆ ಬಳಿಸಿಕೊಂಡು ಅರ್ಹ ರೈತರಿಗೆ ಅದರ ಲಾಭ ಸಿಗದಂತೆ ಮಾಡಿದರು.

ಬಿಜೆಪಿ ಪಕ್ಷ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಗಳಿಂದ ಪಡೆದ ಹಣದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ನನ್ನ ಸಕರ್ಾರ ಬೀಳಿಸಲು ಹುನ್ನಾರ ನಡೆಸಿತು ಎಂದು ಡ್ರಗ್ಮಾಫಿಯಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿ.ಎಂ. ಬಿ.ಎಸ್.ವೈ ಯಡಿಯೂರಪ್ಪವರ ಮಗ ವಿಜಯೇಂದ್ರ ಅವರ ಮೇಲೆ 500 ಕೋಟಿ ಹಗರಣವಿದೆಂಬ ಮಾತಿಗೆ ಉತ್ತರಿಸುತ್ತಾ ಬಿಜೆಪಿ ಸಕರ್ಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಅದರ ಬಗ್ಗೆ ಚಚರ್ೆ ಮಾಡುವುದೇ ನಿರರ್ಥಕವೆಂದು ಬೇಸರ ವ್ಯಕ್ತಪಡಿಸದರು. ಹಾಗು ಈಚೆಗೆ ನಡೆದ ಅತೀವೃಷ್ಟಿ ಪರಿಹಾರವನ್ನು ನಿರ್ವಹಿಸುವಲ್ಲಿ ಈ ಸರ್ಕಾರಕ್ಕೆ ಬದ್ಧತೆಯಿಲ್ಲವಾಗಿದೆ ಎಂದರು.

ಲಾಭದಲ್ಲಿ ನಡೆಯುತ್ತಿದ್ದ ದೇಶದ 6 ವಿಮಾನ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅದಾನಿಗೆ ಕೊಟ್ಟಿದೆ ಅವರು 16 ಸಾವಿರ ಕೋಟಿಗೆ ವಿದೇಶ ಕಂಪನಿಗಳಿಗೆ ಮಾರಿಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ ಎಚ್ಎಎಲ್ ಸಂಸ್ಥೆಯನ್ನು ಖಾಸಗಿಯವರಿಗೆ 15 ಪರಿಸೆಂಟ್ ಷೇರಿಗೆ ಮಾರಿದೆ ಇದು ದೇಶದ ಸ್ಥಿತಿಯಾಗಿದೆ ಎಂದು ಅಸಮಾಧಾನ ಸೂಚಿಸಿದರು.


‘ತಾಲ್ಲೂಕಿನ ರೈತರ, ಜನಪರ ಹೋರಾಟಗಳಿಗೆ ಹಾಗು ಕಾರ್ಯಕರ್ತರುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮತ್ತೆ ಯಾರನ್ನೂ ನಿಲ್ಲಿಸುವುದಿಲ್ಲವೆಂದು ಹೇಳುವ ಮೂಲಕ ತಾಲ್ಲೂಕಿನ ಟಿಕೀಟಿನ ಗೊಂದಲಕ್ಕೆ ತೆರೆ ಎಳೆದರು’.

ತುರುವೇಕೆರೆ ಸಂಘರ್ಷ:ಜೈಲಿಗೆ ಹೋದರೂ ಪರವಾಗಿಲ್ಲ ಪ್ರತಿಭಟನೆಗೆ ಪಾಲ್ಗೊಳ್ಳುವೆವು : ಗುಡ್ಡೇನಹಳ್ಳಿ ಮಹಿಳೆಯರು

Publicstory


ತುರುವೇಕೆರೆ: ಹೊಲದಲ್ಲಿ ನೆಟ್ಟ ತೆಂಗಿನ ಸಸಿಗಳನ್ನು ಕಿತ್ತು ಅದನ್ನು ಪ್ರತಿರೋಧಿಸಿದ ಗ್ರಾಮದ ಮಹಿಳೆಯರ ಮೇಲೆ ಪೊಲೀಸರು ಲಾಠಿ ಏಟಿನ ದೌರ್ಜನ್ಯ ನಡೆಸುವಾಗ ಗುಡ್ಡೇನಹಳ್ಳ ಗ್ರಾಮಸ್ಥರ ಪರವಾಗಿ ನಿಂತ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರು ನಾಳೆ ತುರುವೇಕೆರೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಇಡೀ ಗ್ರಾಮಸ್ಥರೇ ಭಾಗವಹಿಸುವುದಾಗಿ ಗುಡ್ಡೇನಹಳ್ಳಿ ಗ್ರಾಮದ ಮಹಿಳೆಯರು ಒಕ್ಕೊರಲಿನಿಂದ ಹೇಳಿದರು.

ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,
ಪೊಲೀಸರು ತೆಂಗಿನ ಸಸಿ ಕೀಳಿಸಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾದಾಗ ಮಹಿಳೆಯರೆಲ್ಲ ತಡೆದು ಪ್ರಶ್ನಿಸಿದೆವು. ಆಗ ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದೆ ನಮ್ಮಗಳನ್ನು ಹೊಡೆದು, ಎಳೆದಾಡಿದರು. ಈ ವೇಳೆ ಎಂ.ಟಿ.ಕೃಷ್ಣಪ್ಪರು ಮಧ್ಯ ಪ್ರವೇಶಿಸದಿದ್ದರೆ ನಮ್ಮಗತಿ ಏನಾಗುತ್ತಿತ್ತು ಎಂದು ಗದ್ಗದಿತರಾದರು.

ಎಂ.ಟಿ.ಕೃಷ್ಣಪ್ಪರು ನಮಗೆ ನ್ಯಾಯ ಕೊಡಿಸಲು ಹಾಗು ಪೊಲೀಸರ ದಬ್ಬಾಳಿಕೆಯನ್ನು ಪ್ರಶ್ನಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ನಾವೆಲ್ಲ ಬದ್ಧವಾಗಿದ್ದು ಜೈಲಿಗೆ ಹೋದರೂ ಪರವಾಗಿಲ್ಲ ನಾವೆಲ್ಲ ಎಂ.ಟಿ.ಕೆ ಪ್ರತಿಭಟನೆಗೆ ಸಾಥ್ ನೀಡುತೇವೆ ಎಂದರು.

144 ಸೆಕ್ಷನ್ ನಿಷೇದಾಜ್ಞೆ ಇದೆ ಎಂದ ಮಾತ್ರಕ್ಕೆ ನಮ್ಮ ಹಕ್ಕು ಕೇಳಬಾರದೆ, ಪೊಲೀಸರ ದೌರ್ಜನ್ಯ ಖಂಡಿಸಿಬಾರದೇ ಎಂದು ಮರು ಪ್ರಶ್ನಿಸಿದರು.

ಮುಖಂಡ ಬಸವರಾಜು ಮಾತನಾಡಿ, ಇಲ್ಲಿನ ಆರ್ ಐ, ಕಂದಾಯ ತನಿಖಾಧಿಕಾರಿಯೆ ಈ ಪ್ರಕರಣಕ್ಕೆ ನೇರ ಹೊಣೆ. ಗುಡ್ಡೇನಹಳ್ಳಿ ಪ್ರಕರಣದಲ್ಲಿ ಎಂ.ಟಿ.ಕೃಷ್ಣಪ್ಪರ ಪಾತ್ರವೇನಿಲ್ಲ. ಇಡೀ ಗ್ರಾಮಸ್ಥರೆಲ್ಲ ಸಾಗುವಳಿ ಭೂಮಿಯ ಬಗ್ಗೆ ಆದ ಅನ್ಯಾಯದ ಬಗ್ಗೆ ನ್ಯಾಯಕೊಡಿಸಿ ಎಂದು ಎಂ.ಟಿ.ಕೃಷ್ಣಪ್ಪರ ಬಳಿ ಅಳಲು ತೋಡಿಕೊಂಡ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದಾರಷ್ಟೇ ಎಂದು ತಿಳಿಸಿದರು.

‘ಒಂದು ವೇಳೆ ಹಾಲಿ ಶಾಸಕರು ತಹಶೀಲ್ದಾರ್, ಕಂದಾಯಧಿಕಾರಿಗಳು, ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ದಾಖಲೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಅವರು ನನಗೆ ಮನವಿ ನೀಡಿದ್ದಾರೆ ಊರಿನವರೆಲ್ಲ ಸಮನಾಗಿ ಭೂಮಿ ಹಂಚಿಕೊಳ್ಳುತ್ತಿದ್ದಾರೆ. ನೀವು ಅವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ಹೇಳಿದ್ದರೆ ಇಂದು ಪ್ರತಿಭಟನೆ ನಡೆಯುತ್ತಿರಲಿಲ್ಲ. ಹಾಗು ತಾಲ್ಲೂಕಿಗೆ 144 ಸೆಕ್ಷನ್ ಜಾರಿಯಾಗುತ್ತಿರಲೂ ಇಲ್ಲ ಎಂದರು.

‘ಗುಡ್ಡೇನಹಳ್ಳಿ ಪ್ರಕರಣ ಬಿಟ್ಟು ಎಂ.ಟಿ.ಕೆ ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಇಲ್ಲಿನ ರೈತರನ್ನು ಬಳಸಿಕೊಳ್ಳುತ್ತಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದದು’. ಏನೇ ಎಡರುಗಳೂ ಬಂದರೂ ಗ್ರಾಮಸ್ಥರೆಲ್ಲೂ ಒಗ್ಗಟ್ಟಿನಿಂದ ಪಟ್ಟಣದಲ್ಲಿ ನಡೆಯುವ ಪ್ರತಿಭಟನೆಗೆ ಭಾಗವಹಿಸುವುದು ಖಚಿತ ಎಂದು ಸ್ಪಷ್ಟಪಡಿದರು.

ಗ್ರಾಮದ ಯುವಕ ಗಂಗಾಧರ್ ಮಾತನಾಡಿ, ಭೂ ಸಂಬಂಧವಾಗಿ ಪೊಲೀಸರಿಂದ, ಅಧಿಕಾರಿಗಳಿಂದ ಗುಡ್ಡೇನಹಳ್ಳಿ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಶಾಸಕ ಮಸಾಲಜಯರಾಂರಿಂದ ಒಂದೂ ಸಕರಾತ್ಮಕ ಹೇಳಿಕೆಗಳಿಲ್ಲ. ಅವರಿಂದಲೇ ನಮಗೆ ಅನ್ಯಾಯವಾಗಿದೆಂದು ದೂರಿದರು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಚಿಂತಾಮಣಿ, ರಾಜಮ್ಮ, ಚಂದ್ರಮ್ಮ, ಗೀತ, ಮಲ್ಲಪ್ಪ. ಮುಕುಂದ, ಕೆಂಚಯ್ಯ, ರಮೇಶ್, ಹರೀಶ್ ಇದ್ದರು.

ಮಾಜಿ ಶಾಸಕ ಸುರೇಶಗೌಡರ ಮಗಳ ನಿಶ್ಚಿತಾರ್ಥ

ಬೆಂಗಳೂರು: ತುಮಕೂರು ಗ್ರಾಮಂತರ ಕ್ಷೇತ್ರದ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಬಿ.ಸುರೇಶಗೌಡ ಅವರ ಮಗಳ ನಿಶ್ಚಿತಾರ್ಥ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆಯಿತು.

ಅಮೆರಿಕದಲ್ಲಿ ಎಂ ಎಸ್ ಪದವಿ ಪಡೆದು ಜನರಲ್ ಮೋಟಾರ್ಸ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಏಶ್ವರ್ಯಾ ಅವರು ಭಾರತೀಯ ಆಡಳಿತ ಸೇವೆ ನಡೆಸಲು ತಯಾರು ನಡೆಸುತ್ತಿದ್ದಾರೆ.

ಇನ್ನೂ ಏಶ್ವರ್ಯ ವರಿಸಿರುವ ಗೌತಮ್ ಅವರು ಮೂಲತಃ ಮಧುಗಿರಿಯವರು. ಬೆಂಗಳೂರಿನ ಎಸಿಬಿ ಯಲ್ಲಿ ಎಸಿಪಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಗೌತಮ್ ಹಾಗೂ ಏಶ್ವರ್ಯ ಅವರ ವಿವಾಹವನ್ನು ಎರಡೂ ಮನೆಯವರು ಸೇರಿ ನಿರ್ಧರಿಸಿದ್ದರು. ನವೆಂಬರ್ ನಲ್ಲಿ ಮದುವೆ ನಡೆಯಲಿದೆ.

ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ವಧು ವರರನ್ನು ಆರ್ಶೀವದಿಸಿದರು.

ಸಚಿವರಾದ ಆರ್.ಆಶೋಕ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ದುರೀಣರು, ಕ್ಷೇತ್ರದ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಏಶ್ವರ್ಯ ಅವರು ತುಮಕೂರು ವಿ.ವಿ. ಸಿಂಡಿಕೇಟ್ ಸದಸ್ಯೆಯೂ ಹೌದು. ಕೊರೊನಾ ಲಾಕ್ ಡೌನ್ ಸಂದರ್ಭ ಇಡೀ ಕ್ಷೇತ್ರದಲ್ಲಿ ಓಡಾಟ ನಡೆಸಿ ಜನರ ಕಷ್ಟಕ್ಕೆ ಮಿಡಿದಿದ್ದರು. ಇವರ ಕೆಲಸ ರಾಜ್ಯದಾದ್ಯಂತ ಜನ ಮನ್ನಣೆಗೆ ಕಾರಣವಾಗಿತ್ತು.

ಶಿರಾ ಉಪ ಚುನಾವಣೆ: ಕಾಂಗ್ರೆಸ್‌ ನಿಂದ ಜಯಚಂದ್ರ ಅಥವಾ ಅವರ ಪುತ್ರ, ಯಾರು‌ ಕಣಕ್ಕೆ?

0

Publicstory


Tumkuru: ಶಾಸಕ ಬಿ.ಸತ್ಯನಾರಾಯಣ್ ಸಾವಿನಿಂದ‌‌ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರ ಅವರು ಕಣಕ್ಕೆ ಇಳಿಯುವುದಿಲ್ಲ. ಈ ಹಿಂದಿನ ಚುನಾವಣೆಯಲ್ಲಿ ಅವರು‌‌‌ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಈಗಾಗಲೇ ಬೆಳೆದುನಿಂತಿದೆ.‌‌ ಇದರಿಂದ ಜಯಚಂದ್ರ ಸಹ ಹೊರತಲ್ಲ. ತಮ್ಮ ಪುತ್ರನಿಗೆ ಅವರು ರಾಜಕೀಯ ನೆಲೆ ಸ್ಥಾಪಿಸಬೇಕಾಗಿದೆ. ತಮ್ಮ ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಾರೆ ಎಂಬ ಸುದ್ದಿ ಕಳೆದ ಚುನಾವಣೆಯ ಸಂದರ್ಭದಲ್ಲೇ ಜೋರು ಮುನ್ನೆಲೆಗೆ ಬಂದಿತ್ತು.

ಆದರೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪರ ಅನುಕಂಪದ ಅಲೆ ಕೆಲಸ ಮಾಡಲಿದೆ. ಈ ಅನುಕಂಪದ ಅಲೆ ವಿರುದ್ಧ ಸಂತೋಷ್ ಜಯಚಂದ್ರ ಈಜುವುದು ಕಷ್ಟ ಸಾಧ್ಯ. ಅಲ್ಲದೇ ರಾಜ್ಯ ರಾಜಕಾರಣಕ್ಕೆ ಜಯಚಂದ್ರ ಸಹ ಅನಿವಾರ್ಯ ಆಗಿದ್ದಾರೆ. ಜಯಚಂದ್ರ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅತ್ತ ಹಿರಿಯ ಮುಖಂಡ ಸಿದ್ದರಾಮಯ್ಯ ಇಬ್ಬರ ಬಳಿಯೂ ಚೆನ್ನಾಗಿದ್ದಾರೆ. ಜಿಲ್ಲೆಯಲ್ಲಿ ಅವರನ್ನು ಸೋಲಿಸಬೇಕು ಎಂದು ಪಣ ತೊಡುವವರಲ್ಲಿ ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಬಿಟ್ಟರೆ ಬೇರೆಯವರು ಹೇಳಲಾರರು.

ಕೆ.ಎನ್.ರಾಜಣ್ಣ ಅವರ ವಿರುದ್ಧ ಜಯಚಂದ್ರ ಈವರೆಗೂ ತುಟಿ ಬಿಚ್ಚಿಲ್ಲ. ಕೆ.ಎನ್.ರಾಜಣ್ಣ ಸಹ ಇಲ್ಲಿ ಟಿಕೆಟ್ ಆಕಾಂಕ್ಷಿ. ಆದರೆ ಕಾಂಗ್ರೆಸ್ ನಿಂದ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಹಾಳೆಯ ಮೇಲೆ ಬರೆದಂತೆಯೇ ಸ್ಪಷ್ಟವಾಗಿದೆ.

ಇನ್ನೂ ರಾಜಣ್ಣ ಬೇರೆ ಪಕ್ಷಕ್ಕೆ ಹೋಗಬೇಕು ಅಥವಾ ಕಾಂಗ್ರೆಸ್ ನಲ್ಲೇ ಇರಬೇಕು. ಇವರಿಗೂ ಸಹ ತಮ್ಮ ಪುತ್ರನಿಗೆ ರಾಜಕೀಯ ನೆಲೆ ಕಲ್ಪಿಸುವುದು ಅನಿವಾರ್ಯವಾಗಿದೆ.

ಈಗಾಗಲೇ ಅವರು ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರೊಂದಿಗೆ ನಿಕಟ ಸಂಬಂಧ ದಲ್ಲಿದ್ದಾರೆ.‌ಇದು ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪುತ್ರ ಆರ್.ರಾಜೇಂದ್ರ ಅವರಿಗೆ ಪರೋಕ್ಷ ನೆರವು ಬಯಸುವ ಅಜೆಂಡಾವು ಆಗಿರಬಹುದು.‌ಇನ್ನೂ, ಕೆ.ಎನ್.ರಾಜಣ್ಣ ಅವರನ್ನು ಬಿಜೆಪಿಗೆ ಕರೆ ತರಲು ಒಂದು ವರ್ಗ ಶತಯಾ ಗತಾಯ ಪ್ರಯತ್ನದಲ್ಲೇ ಇದೆ. ಇದಕ್ಕಾಗಿ ಅವರ ಕೇಳುವ/ ಇಡುವ ಷರತ್ತುಗಳನ್ನು ಪೂರೈಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಅದೂ ಅಲ್ಲದೇ, ಭವಿಷ್ಯದಲ್ಲಿ ಇದು ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚುವುದರಿಂದ ರಾಜಣ್ಣ ಅವರನ್ನು ಸ್ವಾಗತಿಸಿ ರತ್ನಗಂಬಳಿ ಹಾಸಲಾರದು. ಆದರೆ ಬಿಜೆಪಿಯ ಒಂದಿಷ್ಟು ವಾಗ್ದಾನಗಳಿಗೆ ಒಪ್ಪಿಕೊಂಡು ರಾಜಣ್ಣ ಬಂದರೂ ಅವರ ವ್ಯಕ್ತಿತ್ವಕ್ಕೆ‌ ಬಿಜೆಪಿ ಉಸಿರುಕಟ್ಟಿಸಬಹುದು.

ಏ‌ನೇ ಆಗಲೀ, ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಜಯಚಂದ್ರ ವಿರುದ್ಧವೇ ಚುನಾವಣೆ ತಿರುಗಲಿದೆ. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಒಕ್ಕಲಿಗರನ್ನು ಬಿಟ್ಟು ಜೆಡಿಎಸ್, ಬಿಜೆಪಿ ಬೇರೆ ಅಸ್ತ್ರ ಪ್ರಯೋಗ ಮಾಡಿದರೆ ಅಷ್ಟರ ಮಟ್ಟಿಗೆ ತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ ಅವರಿಗೆ ಮತ್ತಷ್ಟು ಖುಷಿಯಾಗಬಹುದು.

ಗುಡ್ಡೇನಹಳ್ಳಿ ರೈತರಿಂದ ಭೂಮಿ ಮಂಜೂರಿಗೆ ಕೋರಿ ಶಾಸಕರಿಗೆ ಮನವಿ

ತುರುವೇಕೆರೆ: ಗುಡ್ಡೇನಹಳ್ಳಿಯ ಬಗರ್ಹುಕುಂ ಸಾಗುವಳಿ ಭೂಮಿ ಮಂಜೂರು ಮಾಡಿಕೊಡಲು ಕೆಲವು ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಸರ್ಕಾರದ ಮಟ್ಟದಲ್ಲಿ ನಿವಾರಿಸಿ ರೈತರಿಗೆ ಶೀಘ್ರದಲ್ಲಿಯೇ ಜಮೀನು ಮಂಜೂರು ಮಾಡಿಕೊಡುವುದಾಗಿ ಶಾಸಕ ಮಸಾಲ ಜಯರಾಂ ಭರವಸೆ ನೀಡಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಗುಡ್ಡೇನಹಳ್ಳಿ ರೈತರು ಜಮೀನು ಮುಂಜೂರು ಮಾಡಿಕೊಡುವಂತೆ ಮಾಡಿದ ಮನವಿಯನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ
1998 ರಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. 15 ವರ್ಷಗಳಿಂದ ಶಾಸಕರಾಗಿದ್ದ ಎಂ.ಟಿ.ಕೃಷ್ಣಪ್ಪರು ಗುಡ್ಡೇನಹಳ್ಳಿಯ ರೈತರಿಗೆ ಜಮೀನನ್ನು ಮಂಜೂರು ಮಾಡಿಸಬಹುದಿತ್ತು.
ಕಡೆ ಸಮಯದಲ್ಲಿ ತಮಗೆ ಬೇಕಾದ ಇಬ್ಬರಿಗೆ ಮಾತ್ರ ಜಮೀನನ್ನು ಮಂಜೂರು ಮಾಡಿದ್ದು ನಿಜವಾದ ಅರ್ಹ ಫಲಾನುಭವಿಗಳಿಗೆ ಮೋಸ ಮಾಡಿ ಎರಡು ವರ್ಷ ಶಾಸಕರಾಗಿರುವ ತಮ್ಮನ್ನು ದೂರುತ್ತಿದ್ದಾರೆ ಇದು ಎಷ್ಟು ಸರಿ ಎಂಬುದು ಗ್ರಾಮದ ಜನರಿಗೆ ಎಲ್ಲ ತಿಳಿದಿದೆ.

ರೈತರು ಜಮೀನು ಮುಂಜೂರು ಮಾಡಿಕೊಡಲು ಮನವಿ ಮಾಡಿದ್ದು ಮುಂದಿನ ಬಗರ್ ಹುಕುಂ ಕಮಿಟಿಯಲ್ಲಿಟ್ಟು ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿಕೊಡಲಾಗುವುದು ಎಂದರು.

ಗ್ರಾಮದ ಜನರೆ ನಮಗೆ ನ್ಯಾಯ ದೊರೆತಿದೆ ಎಂದು ಸುಮ್ಮನಾಗಿರುವಾಗ ಪ್ರತಿಭಟನೆ ಮಾಡುವ ಪ್ರಮೇಯವೇ ಇಲ್ಲ. ಆದರೂ ಪ್ರತಿಭಟನೆ ಮಾಡುತ್ತೇನೆಂದು ಹೇಳಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ.
ಗುಡ್ಡೇನಹಳ್ಳಿ ಗ್ರಾಮದ ರೈತರ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಅಸಮಧಾನ ವ್ಯಕ್ತಪಡಿಸಿದರು.

ಇದೇ ವೇಳೆ ರೈತರು ನೀಡಿದ ಮನವಿಯನ್ನು ತಹಶೀಲ್ದಾರ್ ಆರ್.ನಯಿಂಉನ್ನಿಸಾ ಅವರಿಗೆ ಹಸ್ತಾಂತರಿಸಿ ಕಮಿಟಿಯಲ್ಲಿ ಇಡುವಂತೆ ಸೂಚಿಸಿದರು.