Saturday, May 9, 2026
Google search engine
Home Blog Page 187

C.S.ಪುರದಲ್ಲಿ ಮೂವರಿಗೆ ಕೊರೊನಾ: ಜನರ ಅಸಮಾಧಾನ

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹಾಗೂ ಚಿನ್ನನಾಯಕನಪಾಳ್ಯ ಸೇರಿ ಮೂವರಿಗೆ ಒಂದೇ ದಿನ ಕೊರೊನಾ ಸೊಂಕು ದೃಢಪಟ್ಟಿದೆ.

ಸಿ.ಎಸ್.ಪುರದಲ್ಲಿ ಮಹಿಳೆಗೆ ಹಾಗೂ ಚಿಣ್ಣನಾಯಕನಪಾಳ್ಯದಲ್ಲಿ ಅಪ್ಪ ಮಗನಿಗೆ ಇಬ್ಬರಿಗೆ ಸೋಂಕು ತಗುಲಿದೆ.

ಚಿಣ್ಣನಾಯಕನಪಾಳ್ಯವನ್ನು ಪಂಚಾಯತಿ ಅಧಿಕಾರಿಗಳು ಸೀಲ್ಡ್ ಡೌನ್ ಮಾಡಿದರು.

ಬೆಂಗಳೂರಿನ ಕೊರೊನಾ ಸೋಂಕಿತರೊಂದಿಗೆ ಇವರ ಸಂಪರ್ಕದ ಕಾರಣ ಸೋಂಕು ಕಾಣಿಸಿದೆ ಎನ್ನಲಾಗಿದೆ.

ನಿಧಾನವಾದ ವರದಿ: ಅಸಮಾಧಾನ: ಸೋಂಕಿತರ ಸ್ವ್ಯಾಬ್ ಮಾದರಿಯನ್ನು ಹತ್ತು ದಿನಗಳ ಹಿಂದೆಯೇ ಪಡೆಯಲಾಗಿತ್ತು. ಆದರೆ ಇಷ್ಟು ತಡವಾಗಿ ವರದಿ ಬಂದಿದೆ.

ಸೋಂಕಿತರ ಸಾಮಾನ್ಯರಂತೆಯೇ ಇದ್ದರು. ಹೀಗಾಗಿ ಗ್ರಾಮದಲ್ಲಿರುವ ಜನರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಥರಾವರಿ ಸೋಪ್ ಮಧ್ಯೆ ಅಂಟುವಾಳದ ಸಿಪ್ಪೆ…

ಜಿ ಎನ್ ಮೋಹನ್

ಎಣಿಸಿದೆ. ಕರೆಕ್ಟಾಗಿ ಎಣಿಸಿದೆ –ಒಂದು ಎರಡು ಮೂರು..
ಹೌದು, ಮೂರು ಸೋಪಿತ್ತು.

ಎಲ್ಲದರ ಪ್ಯಾಕ್ ಓಪನ್ ಆಗಿತ್ತು. ಬಳಸಿದ್ದಾರೆ ಅನ್ನೋದಕ್ಕೆ ಪ್ರೂಫ್ ಇತ್ತು. ಏನು ಪ್ರಾಬ್ಲಂ ಇವರ ಮನೇಲಿ ಅಂತಾ ಯೋಚ್ನೆ ಆಯ್ತು.

ಆಗ ನಾನು ಆರನೇದೋ ಏಳನೇದೋ ಕ್ಲಾಸಲ್ಲಿದ್ದೆ. ಅಣ್ಣನ ಬಾಲ ಹಿಡಕೊಂಡು ಓಡಾಡೋದೇ ಕಸಬು. ಧಾರವಾಡದಲ್ಲಿದ್ದ ಅಣ್ಣ ‘ನಮ್ಮ ಕ್ಲಾಸ್ ಮೇಟ್ ಮನೆಗೆ ಕರ್ಕೊಂಡು ಹೋಗ್ತೀನಿ ಬನ್ನಿ’ ಅಂತ ಕರ್ಕೊಂಡು ಹೋದ್ರು.

ಆವಾಗ್ಲೇ ಈ ಶಾಕ್ ಎದುರಾದದ್ದು.

ಬಚ್ಚಲ ಮನೆಗೆ ಹೋದಾಗ್ಲೇ ಈ ಮೂರು ಸೋಪ್ ಕಂಡಿದ್ದು. ಬಚ್ಚಲ ಮನೆ ಅಂದ್ರೆ ಗೋಪಾಲ್ ಟೂಥ್ ಪೌಡರ್, ಮೈ ತಿಕ್ಕೋಕೆ ಒಂದು ಒರಟು ಕಲ್ಲು, ಮುಖ ತೊಳೆಯೋದಕ್ಕೆ ಒಂದು ಸೋಪು, ಅಂತಾ ಅಂದ್ಕೊಂಡಿದ್ದ ನಮಗೆ, ಮೂರು ಟೂಥ್ ಬ್ರಷ್, ಮೂರು ಸೋಪು ಶಾಕ್ ತಂದಿತ್ತು.

ಗಂಡ, ಹೆಂಡತಿ ಒಂದು ಮಗು ಇದ್ದ ಮನೆ ಅದು. ಯಾವುದನ್ನು ನೋಡಿದ್ರೂ ಮೂರೊಂದ್ಲ ಮೂರು ಅನ್ನೋ ಪರಿಸ್ಥಿತಿ. ನಮ್ಮನೇಲಿ ಅಪ್ಪ, ಅಮ್ಮ, ಏಳು ಜನ ಮಕ್ಕಳು. ಆದ್ರೆ ಸೋಪು ಮಾತ್ರ ಒಂದೇ.

ದೇವ್ರು ಒಂದು ಕ್ಷಣ ನನ್ನ ತಲೆ ತೆಗ್ದು ಅಲ್ಲಿ ಕ್ವೆಶ್ಚನ್ ಮಾರ್ಕ್ ಇಟ್ಟಿದ್ದಾನೇನೋ ಅನ್ನುವಷ್ಟು ಗೊಂದಲ. ಆಮೇಲೆ ನಾನೇ ಡಿಸೈಡ್ ಮಾಡ್ಕೊಂಡೆ. ಅವ್ರ ಮನೇಲಿ ಎಲ್ಲರಿಗೂ ಕಾಯಿಲೆ ಇದೆ. ಅದ್ಕೆ ಒಬ್ರು ಸೋಪು ಒಬ್ರು ಬಳಸಲ್ಲ ಅಂತಾ.

ಮೊನ್ನೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಶಾರೂಕ್ ಬಟ್ಟೆ ಬಿಚ್ಚಿ ಗುಲಾಬಿ ಪಕಳೆ ಹರಡಿಕೊಂಡು ಬಾತ್ ಟಬ್ ನಲ್ಲಿ ಕೂತ್ಕೊಂಡಿದ್ದನ್ನ ನೋಡಿದ್ನಲ್ಲ, ಫಳ್ಳಂತ ಇದು ತಲೆಗೆ ಬಂತು.

ಆಗ ಬಚ್ಚಲ ಮನೆ ಬಾತ್ ರೂಂ ಆಗಿರಲಿಲ್ಲ. ತೆಂಗಿನಕಾಯಿ ಚಿಪ್ಪು, ಸೀಮೆ ಎಣ್ಣೆ, ಊದು ಕೊಳವೆ, ಬೆಂಕಿ ಒಲೆ ಮಾಯವಾಗಿ ವಾಟರ್ ಹೀಟರ್ ಬಂದಿರಲಿಲ್ಲ. ಒಲೆಯಿಂದೆದ್ದ ಹೊಗೆ ಗೋಡೆಯನ್ನೆಲ್ಲ ಕಪ್ಪು ಮಾಡಿತ್ತು. ಅದು ಹೋಗಿ ಟೈಲ್ಸ್ ಬಂದಿರಲಿಲ್ಲ.

ಹಾಗಾಗೀನೇ ಶಾರೂಕ್ ನಮ್ಮನೆಯ ಬಚ್ಚಲ ಮನೆಗೆ ಬರಲೇ ಇಲ್ಲ. ಅಥ್ವಾ ನಮ್ಮ ಬಚ್ಚಲ ಮನೆಯಿಂದ ಯಾವ ಶಾರೂಕ್ಕೂ ಹೊರಗಡೆ ಹೋಗ್ಲಿಲ್ಲ.

ಯಾಕೋ ಗೊತ್ತಿಲ್ಲ. ಈವಾಗ ಸಿಇಟಿ, ಐಐಎಂ, ಐಐಎಸ್, ಲಾ ಸ್ಕೂಲು, ಮೌಂಟ್ ಕಾರ್ಮೆಲ್, ಡಿಡಿಎಲ್ ಜೆ, ಫೋರಂ ಮಾಲ್, ಐ ಮ್ಯಾಕ್ಸ್ ಗೂ ಸೋಪಿಗೂ ಏನೋ ಒಂಥರಾ ಕನೆಕ್ಷನ್ ಇದೆ ಅನ್ಸುತ್ತೆ.

‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ.. ಲೈಫ್ ಬಾಯ್ ಲೈಫ್ ಬಾಯ್…’ ಅನ್ನೋ ಹಾಡು.. ಸಾರಿ, ಜಿಂಗಲ್ ನಮ್ಗೆ ಸಾಕಾಗಿತ್ತು. ಅದನ್ನ ಸೋಪಂತ ಕರದ್ರೂ ನಡೀತಿತ್ತು. ಇಟ್ಟಿಗೆ ಅಂತ ಕರೆದ್ರೂ ಆಗ್ತಿತ್ತು. ಆದ್ರೆ ಈಗ ಎಲ್ಲಾ ಥರಾ ಥರಾ.

ಐಶ್ವರ್ಯ ರೈನ ನೋಡೋಕ್ಕೆ ಈಗ ಯಾರಿಗೂ ಟೈಮಿಲ್ಲ. ಆದ್ರಿಂದ ತಾವೇ ಐಶ್ವರ್ಯ ರೈ ಆಗೋದಕ್ಕೆ ಇಷ್ಟಪಡ್ತಾರೆ ಅಂತಾ ಲಕ್ಸ್ ಸೋಪ್ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಲೇಖನ ಇತ್ತು.

ಅರೆ! ಬೇಕಾಗಿರೋ ಸೋಪ್ ಹಾಕ್ಕೊಂಡು ನಮಗೆ ಬೇಕಾಗಿರೋ ಥರಾ ಬದಲಾಗೋದು ಸಾಧ್ಯಾನಾ? ಹಾಗಾದ್ರೆ ಕುರೂಪಿಯಾಗಿದ್ದಳಲ್ಲ, ಅವಳು ಸೋಪ್ ಹಚ್ಕೊಂಡಿದ್ರೆ ಸಾಕಾಗಿತ್ತು.

ಶಾಪ ವಿಮೋಚನೆಗೆ ಯಾಕೆ ರಾಜಕುಮಾರ ಬರ್ಲಿ ಅಂತಾ ಕಾಯ್ಬೇಕಾಗಿತ್ತು? ಕಪ್ಪೆ, ರಾಜಕುಮಾರ ಆಗಿ ಬದಲಾಗೋದಕ್ಕೆ ಯಾಕೆ ಸುಂದರಿ ಟಚ್ ಗೇ ಕಾಯ್ಬೇಕಾಗಿತ್ತು?
ಸೋಪುಗಳೆಲ್ಲ ಆ ಕಾಲ್ದಲ್ಲೇ ಇದ್ದಿದ್ರೆ ಪಾಪ, ಎಷ್ಟೊಂದು ಅಜ್ಜಿ ಕಥೆಗಳು ಮಟಾಶ್ ಆಗಿ ಹೋಗ್ತಿತ್ತು.

ಸೋಪುಗಳ ಸ್ಕೋಪು ಈಗ ಜಾಸ್ತಿ ಆಗಿದೆ. ನೀವು ಮೈಸೂರ್ ಸ್ಯಾಂಡಲ್, ಚಂದ್ರಿಕಾ, ಹಮಾಮ್ ಬಳಸಿದ್ರೆ ಹಳ್ಳಿ ಗುಗ್ಗು ಅನ್ನೋ ಥರಾ ನೋಡ್ತಾರೆ. ಡೆಟಾಲ್, ಮೆಡಿಮಿಕ್ಸ್ ಬಳಸಿದ್ರೆ ಪೇಶಂಟ್, ಲಕ್ಸ್, ಲಿರಿಲ್ ಬಳಸಿದ್ರೆ ಎಜುಕೇಟೆಡ್, ಎವಿಟಾ, ಡೋವ್ ಬಳಸಿದ್ರೆ ಗ್ರೇಟ್.

ಯಾಕೋ ಗೊತ್ತಿಲ್ಲ. ಒಂದು ಮನೇಲಿ ಮೂರು ಸೋಪು ಅನ್ನೋ ಶಾಕ್ ನನ್ನಲ್ಲಿ ಎಷ್ಟು ಆಳಕ್ಕಿಳಿದುಬಿಟ್ಟಿದೆ ಅಂದ್ರೆ, ಯಾರದಾದ್ರೂ ಬಚ್ಚಲ ಮನೆಗೋಗೋ ಸಂದರ್ಭ ಬಂದ್ರೆ ಕಣ್ಣು ಆಟೋಮ್ಯಾಟಿಕ್ ಆಗಿ ಸೋಪ್ ಟ್ರೇ ಕಡೆ ನೋಡುತ್ತೆ. ಆಮೇಲೆ ಯಾವ ಸೋಪು ಅಂತಾ ನೋಡುತ್ತೆ.

ಈಗಂತೂ ಯಾರ ಮನೆಗೋಗ್ಲಿ, ಬಚ್ಚಲ ಮನೆ ಅನ್ನೋ ಬದ್ಲು ಫೋರಂ ಮಾಲ್ ಗೆ ಹೋಗಿದ್ದೀನೇನೋ ಅಂತ ಕನ್ ಫ್ಯೂಸ್ ಆಗುತ್ತೆ. ಟೂಥ್ ಬ್ರಷ್, ಹೇರ್ ಆಯಿಲ್, ಹೇರ್ ಕ್ರೀಮ್, ಟಿಶ್ಯೂಪೇಪರ್, ಟವಲ್..

ನಮ್ಮಮ್ಮ ಯಾವಾಗ್ಲೂ ಹೇಳ್ತಿದ್ರು. ಹುಟ್ಟಿದ ಪ್ರತಿಯೊಬ್ರಿಗೂ ಒಂದು ಜೋಡೀನ ದೇವ್ರು ಗಂಟು ಹಾಕಿರ್ತಾನೆ ಅಂತ. ಶಿವನೇ ಕನ್ ಫ್ಯೂಸ್ ಆದ್ನೇನೋ. ಅಥವಾ ಕಾಲವೇ ಹಾಗಾಗೋಯ್ತೇನೋ. ಹುಟ್ಟಿದ ಎಲ್ರಿಗೂ ಒಂದು ಜೋಡಿ ಹುಡ್ಕೋ ಹಾಗೆ ಒಂದು ಸೋಪು, ಒಂದು ಟವಲ್ಲು, ಒಂದು ಹೇರ್ ಕ್ರೀಮು… ಪಾಪ, ಶಿವನಿಗೂ ಕಲಿಗಾಲ ಬಂತಲ್ಲಪ್ಪಾ!

ಮೊನ್ನೆ ಇನ್ನೇನು ರೈಲು ಹೊರಡ್ಬೇಕು. ತುಂಬಾ ದೂರ ಹೋಗೋದಿತ್ತು. ಕಣ್ಣಲ್ಲಿ ನೀರು ತುಂಬ್ಕೊಂಡು ನಡುಗ್ತಿದ್ದ ತುಟೀನಾ ಕಂಟ್ರೋಲ್ ಮಾಡ್ತಾ, ‘ಐ ಮಿಸ್ ಯೂ’ ಅಂತ ಹೇಳಿದ ಸಂಗಾತಿ ನೆನಪಿಗೆ ಅಂತ ಕೊಟ್ಟಿದ್ದು ಒಂದು ಕವರ್.

ಚುಕುಬುಕು ರೈಲಲ್ಲಿ ಗಂಟೆಗಟ್ಲೆ ಪ್ರಯಾಣ ಮಾಡಿ ಮನೇಗೆ ಬಂದ ತಕ್ಷಣ ಓಪನ್ ಸೆಸೇಮ್ ಅಂತ ಮಂತ್ರ ಜಪಿಸಿ ಕವರ್ ಬಿಚ್ಚಿ ನೋಡ್ದೆ – ಮೈ ತೊಳೆಯೋದಕ್ಕೆ ಅಂಟುವಾಳದ ಸಿಪ್ಪೆ.
ಯಾಕೋ ಗೊತ್ತಿಲ್ಲ. ಬಚ್ಚಲ ಮನೆ, ತೆಂಗಿನ ಚಿಪ್ಪು, ಊದು ಕೊಳವೆ, ಗೋಡೆ ಮೇಲಿನ ಕಪ್ಪು ಮಸಿ, ಮನೆ ಮೇಲಿನ ಚಿಮಣಿ, ಹೊಗೆ ಮೆತ್ತಿದ್ದ ಅಮ್ಮನ ಕೆಮ್ಮು.. ಎಲ್ಲ ನೆನಪಾಯ್ತು.

‘ಅಮೆರಿಕದ ಮಾರುಕಟ್ಟೆಯಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು’ ಅನ್ನುತ್ತಾರಲ್ಲ ರಾಮಾನುಜನ್, ಹಾಗೇನೇ ನನ್ನ ಬಾತ್ ರೂಮಲ್ಲಿ ಈಗ ಥರಾವರಿ ಬ್ರಾಂಡ್ ಸೋಪ್ ಮಧ್ಯೆ ಒಂದು ಅಂಟುವಾಳದ ಸಿಪ್ಪೆ.

ಶಬ್ದದ ಬೆನ್ನು ಹತ್ತಿ ಹೊರಟೆ..

ಜಿ.ಎನ್.ಮೋಹನ್

ಸದನದಲ್ಲಿ ಗಣಿ ಗಲಾಟೆ ನಡೀತಾ ಇದ್ದರೆ ನನಗೆ ಮತ್ತೆಮತ್ತೆ ಸಾಯಿನಾಥ್ ನೆನಪಿಗೆ ಬರ್ತಾ ಇದ್ದಾರೆ.

‘Everybody loves a good drought’ ಅನ್ನೋ ಬ್ಯೂಟಿಫುಲ್ ಇಮೇಜ್ ಅನ್ನು ಅವರು ಪತ್ರಿಕೋದ್ಯಮಕ್ಕೆ ಕೊಟ್ಟರು.

ಇದು ಪತ್ರಿಕೋದ್ಯಮಕ್ಕೆ ಮಾತ್ರ ಅಲ್ಲ ಭ್ರಷ್ಟಾಚಾರವನ್ನು ವರ್ಣಿಸೋದಕ್ಕೆ, ಹಣ ಮಾಡೋರ ದರ್ಬಾರ್ ಬಣ್ಣಿಸೋದಿಕ್ಕೆ, ಜನಸಾಮಾನ್ಯರ ಹತಾಶಸ್ಥಿತಿ ಹೇಳೋದಕ್ಕೆ ಎಲ್ಲಕ್ಕೂ ಒಂದು ಒಳ್ಳೆಯ ಸಾಲು.

ಬರ ಅಂದ್ರೆ ಎಲ್ಲರಿಗೂ ಇಷ್ಟ. Everybody loves a good drought.. ಗಣಿ ಗಲಾಟೆ ಆಗ್ತಾ ಇರುವಾಗ ಯಾಕೆ ಇದು ಮತ್ತೆ ಮತ್ತೆ ನೆನಪಿಗೆ ಬಂತು ಅಂದ್ರೆ yes! Everybody loves mining. ಗಣಿಗಾರಿಕೆ ಮಾಡೋದಕ್ಕೆ ಎಲ್ಲರಿಗೂ ಇಷ್ಟ ಅನ್ನೋದು ಹೊಳೆದಾಗ. ‘ಗಣಿಗಾರಿಕೆ’ ಅನ್ನೋ ಶಬ್ದ ಹೇಗೆ ತನ್ನ ಒರಿಜಿನಲ್ ಅರ್ಥ ಬಿಟ್ಟುಕೊಟ್ಟು ಅಕ್ರಮ, ಭ್ರಷ್ಟಾಚಾರ, ದರ್ಬಾರ್ ಅನ್ನೋ ಅರ್ಥ ಪಡೆದುಕೊಂಡುಬಿಟ್ಟಿದೆ!

ಮಂಗಳೂರಿನಲ್ಲಿ ಗೆಳೆಯ ಗೋಪಾಡ್ಕರ್ ‘ಸ್ವರೂಪ ಅಧ್ಯಯನ ಶಿಬಿರ’ ನಡೆಸಿದರು. ನೂರೆಂಟು ವಿಷಯದ ಬಗ್ಗೆ ಚರ್ಚೆ ಬಂತು. ಅದರಲ್ಲಿ ನನಗೆ ತುಂಬಾ ಇಂಟರೆಸ್ಟಿಂಗ್ ಅನಿಸಿದ್ದು ಭಾಷೆ ಅನ್ನೋದು ಹೇಗೆ ತನ್ನ ಬಣ್ಣ ಬದಲಾಯಿಸಿಕೊಳ್ಳುತ್ತೆ ಅನ್ನೋದು.

ಭಾಷೆ ಅನ್ನೋದು ಊಸರವಳ್ಳಿ ಥರಾ. ಅದಕ್ಕೆ ನಿಮಿಷ ನಿಮಿಷಾನೂ ಬಣ್ಣ ಬದಲಾಯಿಸಿಕೊಳ್ತಾ ಇದ್ರೆ ಖುಷಿ.

ಪತ್ರಿಕೋದ್ಯಮ ಅನ್ನೋದೇ ಪದಗಳ ರಿಸರ್ವ್ ಬ್ಯಾಂಕ್ ಅಂತ ಹಿರಿಯರು ಕರೆದಿದ್ದು ಅದಕ್ಕೇ ಅಲ್ಲವಾ.. ಇಲ್ಲಿ ಪ್ರತೀ ದಿನ ಪದಾ ಹುಟ್ಟುತ್ತೆ. ಅಷ್ಟೇ ಅಲ್ಲ ಇರೋ ಪದ ಬಣ್ಣ ಬದಲಾಯಿಸಿಕೊಳ್ಳುತ್ತೆ, ಹೊಸ ಅರ್ಥ ಪಡೆದುಕೊಳ್ಳುತ್ತೆ.

ಕೈಮಾ ಉಂಡೆ ಹೇಗೆ ಮಾಡ್ತಾರೆ ಅಂತ ಗೊತ್ತಾ… ಪತ್ರಕರ್ತರೂ ಸಹಾ ಥೇಟ್ ಅದೇ ಸ್ಟೈಲ್ ನಲ್ಲಿ ತಮ್ಮ ಎದುರುಗಡೆ ಪದಗಳನ್ನು ಹರಡಿಕೊಂಡು ಕೈಯಲ್ಲಿ ಕತ್ತಿ ಬದಲು ಪೆನ್ ಹಿಡಕೊಂಡು ಕಚಕಚ ಅಂತ ಕತ್ತರಿಸಿ ಕೈಮಾ ಮಾಡಿಬಿಡ್ತಾರೆ.

ಎಚ್.ಎನ್. ಆನಂದ ‘ಸುಧಾ’ಗೆ ಒಂದು ಲೇಖನ ಬರೆದಿದ್ದರು. ಶಿವಾರಪಟ್ಟಣದ ಬಗ್ಗೆ. ಶಿವಾರಪಟ್ಟಣ ಹೇಳಿ ಕೇಳಿ ಶಿಲ್ಪಿಗಳ ತವರು. ಯಾವುದೇ ದೇವಸ್ಥಾನಕ್ಕೆ ದೇವರ ಶಿಲ್ಪ ಬೇಕೆಂದರೆ ಜನ ನೇರವಾಗಿ ಹುಡುಕಿಕೊಂಡು ಬರುವುದು ಶಿವಾರಪಟ್ಟಣದ ಶಿಲ್ಪಿಗಳನ್ನು.

ಆನಂದ ಈ ಊರಿನ ಬಗ್ಗೆ ಒಂದು ಲೇಖ ಬರೆದರು. ಅದಕ್ಕೆ ಅವರು ಕೊಟ್ಟ ಹೆಸರು ‘ಇಲ್ಲಿ ದೇವರುಗಳನ್ನು ಸೃಷ್ಟಿಸಲಾಗುತ್ತದೆ’ ಅಂತ.

ವಾರೆವ್ವಾ! ಅನಿಸಿತು. ದೇವರು ಸೃಷ್ಟಿಕರ್ತ. ಅಂತಹ ಸೃಷ್ಟಿಕರ್ತನನ್ನೇ ಇಲ್ಲಿ ಸೃಷ್ಟಿಸಲಾಗುತ್ತದೆ ಅನ್ನುವುದು ಹೊಳೆದದ್ದು ಆನಂದ್ ಗೆ ಅರ್ಥಾತ್ ಮೀಡಿಯಾಮ್ಯಾನ್ ಗೆ. ಪತ್ರಕರ್ತ ಅಂದರೆ ಹಾಗೇ ಆತ ಸೃಷ್ಟಿಕರ್ತ.

ಸ್ವರೂಪ ಶಿಬಿರದಲ್ಲಿ ಮಾತಾಡುವಾಗ ಒಂದು ಶಬ್ದಕ್ಕೆ ಹೇಗೆ ಸಂಕುಚಿತಾರ್ಥ, ವಿಶಾಲಾರ್ಥ, ಅನ್ಯಾರ್ಥ ಬರುತ್ತೆ ಅಂತ ವಿವರಿಸುತ್ತಿದ್ದೆ.

ಆಗ ತಟ್ಟನೆ ಹೊಳೆದದ್ದು ‘ಸೂಟ್ ಕೇಸ್’.

ಪಾಪ ನಾವು ನೀವೆಲ್ಲಾ ಹೆಂಡತಿ ಮಕ್ಕಳೊಡನೆ ಎಲ್ಲಿಗಾದರೂ ಒಂದಷ್ಟು ದಿನ ಹೋಗಿ ಬರುವಾಗ ಅಟ್ಟದ ಮೇಲಿದ್ದ ಸೂಟ್ ಕೇಸ್ ಕೆಳಗಿಳಿಯುತ್ತೆ. ಆದರೆ ಅದೇ ರಾಜಕಾರಣಿಗಳು ಸೂಟ್ ಕೇಸ್ ಹಿಡಿದುಕೊಂಡಿದ್ದರೆ ಯಾವ ಅರ್ಥ ಬರುತ್ತದೆ. ಪತ್ರಿಕೆಗಳಲ್ಲಿ ಸೂಟ್ ಕೇಸ್ ವ್ಯವಹಾರ ನಡೆಯುತ್ತಿದೆ ಎಂದು ಬರೆದೂ ಬರೆದೂ ಸೂಟ್ ಕೇಸ್ ಅರ್ಥವೇ ಬದಲಾಗಿ ಹೋಗಿದೆ.

ಇನ್ನೊಂದು ‘ಕುದುರೆ ವ್ಯಾಪಾರ’. ಕುದುರೆ ಕೊಂಡುಕೊಳ್ಳುವುದಕ್ಕೂ ರಾಜಕಾರಣಕ್ಕೂ ಏನು ಸಂಬಂಧ?. ಆದರೆ ರಾಜಕಾರಣದಲ್ಲಿ ಕುದುರೆ ವ್ಯಾಪಾರ ಎಂದಾಕ್ಷಣ ಹೊಸ ಅರ್ಥ ಹೊಳೆದುಬಿಡುತ್ತೆ. ಒಂದು ಶಬ್ದ ತನ್ನ ಬಣ್ಣ ಬದಲಾಯಿಸಿ ಕೊಳ್ಳುವುದೇ ಹೀಗೆ.

‘ಈಟಿವಿ’ಯಲ್ಲಿದ್ದಾಗ ಒಂದು ಘಟನೆ ನಡೆದುಹೋಯ್ತು. ಜರ್ನಲಿಸಂ ವಿದ್ಯಾರ್ಥಿಯೊಬ್ಬನನ್ನು ಕ್ಯಾಂಪಸ್ ಸೆಲೆಕ್ಷನ್ ಮಾಡಿಕೊಂಡಿದ್ವಿ. ಆತ ಆಗಲೇ ‘ಅಫೇರ್’ನಲ್ಲಿದ್ದ. ಆತನಿಗೆ ಆಕೆಯ ಬಗ್ಗೆ ಇನ್ನಿಲ್ಲದ ಕಾಳಜಿ. ಹಾಗಿರುವಾಗ ಅವಳನ್ನು ಬಿಟ್ಟು ದೂರದ ಹೈದ್ರಾಬಾದ್ ಗೆ ಹೋಗಬೇಕಲ್ಲಾ ಅಂತ ಚಿಂತೆ. ಆತ ಅತೀವ ಮುತುವರ್ಜಿಯಿಂದ ತನ್ನ ಗೆಳೆಯನ ಬಳಿ ದುಃಖ ತೋಡಿಕೊಂಡ. ನಾನು ತುಂಬಾ ದೂರದಲ್ಲಿರ್ತೀನಿ. ನೀನು ಅವಳನ್ನು ಕೇರ್ ಮಾಡ್ಬೇಕು ಗುರು ಅಂದ. ಭಾಷೆ ತೆಗೆದುಕೊಂಡು ರಾಮೋಜಿ ಫಿಲಂ ಸಿಟಿಗೆ ಬಂದಿಳಿದ.

ಒಂದು ವರ್ಷ ಆಯ್ತು. ಆತನ ಎದೆ ಒಡೆದುಹೋಗುವ ಸುದ್ದಿ ಬಂತು. ಆ ಹುಡುಗಿ ಆ ಹುಡುಗ ಮದುವೆಯಾಗಿಬಿಟ್ಟರು. ಇದಾಗಿ ಎರಡು ವರ್ಷ ಆಯ್ತು. ಅವನು ನನ್ನ ಜೊತೆ ತನ್ನ ಕಥೆ ಎಲ್ಲಾ ಹೇಳ್ತಾ ಇದ್ದ. ‘ಅವನು ನನ್ನ ಫ್ರೆಂಡು ಅನ್ಕೊಂಡಿದ್ದೆ ಸಾರ್’ ಆದ್ರೆ ಅವನೇ ನನ್ನ ಬಾಳಲ್ಲಿ ‘ಆಪರೇಷನ್ ಕಮಲ’ ಮಾಡ್ಬಿಟ್ಟ’ ಅಂದ.

ನನ್ನ ಕಿವಿ ಮತ್ತೆ ಚುರುಕಾಯಿತು. ಎಲಾ.. ಎಲಾ.. ಒಂದು ಶಬ್ದ ಹೇಗೆ ಗುಬ್ಬಿ ವೀರಣ್ಣ ನಾಟಕ ಕಂಪನಿಯವರ ಥರಾ ವೇಷ ಬದಲಾಯಿಸಿಕೊಳ್ಳುತ್ತಲ್ಲಾ ಅಂತ ಆಶ್ಚರ್ಯ ಆಯ್ತು.

ಇನ್ನೊಂದು ಪ್ರಸಂಗ ಆಯ್ತು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಫುಟ್ಬಾಲ್ ಫೈನಲ್ ನೋಡ್ತಾ ಇದ್ವಿ. ಜಬುಲಾನಿ ಬಾಲ್ ಒಳ್ಳೆ ರಿಂಗ್ ಮಾಸ್ಟರ್ ಕೈಗೆ ಸಿಕ್ಕ ಹುಲೀ ಥರ ಆಗಿತ್ತು. ಹೇಗೆ ಬೇಕಾದ್ರೆ ಹಾಗೆ ತಿರುಗುತ್ತಾ ಇತ್ತು. Look at him he is doing ‘ಶಕೀರ’ to the ball ಅಂದ ನನ್ನ ಮೀಡಿಯಾ ಗೆಳೆಯ.

ಶಕೀರಾ ಹಾಗೂ ಬಾಲು ಎರಡೂ ತಿರುಗೋದು ಒಂದೇ ಥರಾ ಅನ್ನೋದು ಅವನ ಮೀನಿಂಗ್. ಬದಲಾವಣೆ ಹೇಗೆಲ್ಲಾ ಸಾಧ್ಯ ಅಲ್ವಾ?

ಗುಲ್ಬರ್ಗಾದಲ್ಲಿ ‘ಪ್ರಜಾವಾಣಿ’ಯಲ್ಲಿದ್ದ ದಿನಗಳು. ಹೈದ್ರಾಬಾದ್ ಕರ್ನಾಟಕಕ್ಕೇ ಒಂದು ವಿಶೇಷ ಆವೃತ್ತಿ ತರಬೇಕು ಅಂತ ಸಿದ್ಧತೆ ನಡೆದಿತ್ತು. ಆಗ ಕೆ.ಎನ್.ತಿಲಕ್ ಕುಮಾರ್ ಮೇಲಿಂದ ಮೇಲೆ ಸಿದ್ಧತಾ ಸಭೆ ನಡೆಸ್ತಾ ಇದ್ರು. ಒಂದು ಸಲ ಸಾಹಿತಿಗಳ, ಕಲಾವಿದರ, ಓದುಗರ ಸಭೆ ಕರೆದಿದ್ರು.

ವೀರಭದ್ರ ಸಿಂಪಿ ಎಂದಿನ ತನ್ನ ದೊಡ್ಡ ದನಿಯಲ್ಲಿ ಏನೇನೋ ಸಜೆಷನ್ ಕೊಟ್ಟ. ಪಕ್ಕದಲ್ಲಿದ್ದ ತಿಲಕ್ ಕುಮಾರ್ ನನ್ನ ಕಿವಿಯಲ್ಲಿ ‘ಕ್ವಿಕ್ಸಾಟಿಕ್’ ಅಂದ್ರು. ನಾನು ಹಲ್ಲು ಬಿಟ್ಟೆ. ಕ್ವಿಕ್ಸಾಟಿಕ್ ಅಂದ್ರೆ ಏನು ಅನ್ನೋದು ಗೊತ್ತಿದ್ರೆ ತಾನೇ ಎರಡನೇ ಮಾತಾಡೋದಿಕ್ಕೆ.

ನನ್ನ ತಲೆಯಲ್ಲಿ ಗುಂಗೀ ಹುಳು ಬಿಟ್ಟ ಹಾಗಾಯ್ತು. ಮೀಟಿಂಗ್ ಮುಗಿಸಿ ಮನೆಗೆ ಬಂದವನೇ ಮೊದಲು ಕೈಹಾಕಿದ್ದು ಡಿಕ್ಷನರಿಗೆ. ಮಣ ಭಾರದ ಮೈಸೂರು ಯೂನಿವರ್ಸಿಟಿ ಡಿಕ್ಷನರಿ ತಿರುವಿ ಹಾಕಿದಾಗ ಕಂಡದ್ದು ‘ಭಾವನಾ ರಾಜ್ಯದವರು, ಉದಾತ್ತವಾದರೂ ಕಾರ್ಯಸಾಧ್ಯವಲ್ಲದ ಕೆಲಸಗಳನ್ನು ಹಿಡಿದು ಹೋಗುವವರು’ ಅಂತ.

ಓಹ್! ಗೊತ್ತಾಯಿತು ಬಿಡು ಅಂತ ನಿಘಂಟನ್ನು ಹಾಗೇ ಕೆಳಕ್ಕಿಟ್ಟುಬಿಡುತ್ತಿದ್ದೇನೇನೋ? ಈ ಪದ ಸ್ಪಾನಿಷ್ ಭಾಷೆಯ ಕಾದಂಬರಿಯ ನಾಯಕ ಡಾನ್ ಕ್ವಿಕ್ಸೊಟ್ ಎನ್ನುವನ ಹೆಸರಿನಿಂದ ರೂಪುಗೊಂಡಿರಬಹುದು ಅಂತಿತ್ತು. ಎಲಾ ಇವನ! ಕಾದಂಬರಿಯ ಒಂದು ಪಾತ್ರವೇ ಒಂದು ಶಬ್ದ ಆಗಿಬಿಡೋದ ಹೇಗೆ ಅಂತ ಕುತೂಹಲ ಕೆರಳ್ತು.

ಅಲ್ಲಿಂದ ಶುರುವಾಯ್ತು ನೋಡಿ ಈ ಶಬ್ದಗಳ ಬೆನ್ನತ್ತೋ ಆಟ. ಯಾವುದೇ ಶಬ್ದ ಕೈಗೆ ಸಿಕ್ಕರೂ ಅದನ್ನ ತಿರುಗಿ ತಿರುಗಿಸಿ ನೋಡ್ತಿದ್ದೆ. ಇದು ಎಲ್ಲಿಂದ, ಹೇಗೆ ಬಂದಿರಬಹುದು. ಏನಾಗಿ ಬದಲಾಗಿರಬಹುದು. ಯಾಕೆ ಬದಲಾಗಿರಬಹುದು ಅಂತ.

ಪತ್ರಕರ್ತನಿಗೆ ಬರೀ ಸುದ್ದಿ ಹಿಡಿಯೋ ಮೂಗಿದ್ರೆ ಮಾತ್ರ ಸಾಲದು, ಶಬ್ದಗಳ ವಾಸನೆ ಹಿಡಿಯೋ ಮೂಗೂ ಇರಬೇಕು ಅನಿಸ್ತು.

ಹೀಗೆ ಹುಡುಕುತ್ತಾ ಹುಡುಕುತ್ತಾ ಇರುವಾಗ ಸಿಕ್ಕಿಹಾಕಿಕೊಂಡಿದ್ದು ವಿಲ್ಪ್ರಡ್ ಫಂಕ್. ಅವನೂ ನನ್ನ ಥರಾನೇ ಹುಚ್ಚ. ಒಂದಲ್ಲಾ ಎರಡಲ್ಲಾ ಹತ್ತಾರು ವರ್ಷದಿಂದ ಶಬ್ದಗಳ ಬೆನ್ನ ಹಿಂದೆ ಬಿದ್ದಿದ್ದಾನೆ. ಅಷ್ಟೇ ಅಲ್ಲ ಶಬ್ದಗಳ ಕಥೇನಾ ಹಿಡಿದೂ ಹಿಡಿದೂ ಒಂದು ಪುಸ್ತಕದಲ್ಲಿ ಕೂಡಿಟ್ಟಿದ್ದಾನೆ.

ಆತ ಹೇಳಿದ- ಶಬ್ದಗಳೂ ಸಹಾ ನಮ್ಮ ಥರಾನೇ ಜೀವನ ಮಾಡುತ್ತೆ. ಅವು ನಮ್ಮ ಥರಾನೇ ಹುಟ್ಟುತ್ತೆ, ಅಂಬೆಗಾಲಿಡುತ್ತೆ, ಎಡವಿ ಬೀಳುತ್ತೆ, ಎದ್ದು ನಿಲ್ಲುತ್ತೆ, ಆಟ ಆಡುತ್ತೆ, ಯೌವ್ವನ ಬರುತ್ತೆ, ನೆಲ ಕಾಣದ ರೀತಿ ಓಡಾಡುತ್ತೆ, ವಯಸ್ಸಾಗುತ್ತೆ, ಮುದಿಯಾಗುತ್ತೆ. ನಮ್ಮ ಥರಾನೇ ಒಂದು ದಿನ ‘ಹರಹರಾ’ ಅಂತ ಪ್ರಾಣ ಬಿಡುತ್ತೆ ಅಂತ.

ಕನ್ನಡದಲ್ಲಿ ಮಹಾಬಲ ಸೀತಾಳಭಾವಿ ಸುಭಾಷಿತಗಳ ಬಗ್ಗೆ ಬರೆಯೋರು. ಬರೀ ಅರ್ಥ ಅಲ್ಲ. ಅದು ಹೇಗೆ ಯಾವಾಗ ಹುಟ್ಟಿದೆ ಅಂತ. ಗಾದೆಗಳ ಬಗ್ಗೆಯೂ ಅಷ್ಟೆ. ಈ ಗಾದೆ ಯಾಕೆ ಹುಟ್ಟಿತು ಅನ್ನೋದೇ ಒಳ್ಳೆ ಥ್ರಿಲ್ಲರ್ ಕಥೆ ಥರಾ ಇರುತ್ತೆ. ಹಾಗೇ ಪದಗಳ ಬಗ್ಗೇನೂ ಕಥೆ ಹೇಳೋವರಿದ್ರೆ ಎಷ್ಟು ಚೆನ್ನ ಅನಿಸಿತ್ತು.

ಜಿ.ಕೆ. ಮಧ್ಯಸ್ಥ ಅಂಡ್ ಗ್ಯಾಂಗ್ ವಿಜಯ ಕರ್ನಾಟಕದಲ್ಲಿ ‘ಪದೋನ್ನತಿ’ ಶುರು ಮಾಡೇಬಿಡ್ತು. ‘ಚರನ್ ವೈ ಮಧು ವಿಂದತಿ’- ಚಲಿಸಿದವನು ಜೇನನ್ನು ಸಂಗ್ರಹಿಸ್ತಾನೆ ಅಂತ. ಹಾಗೇ ಪದಗಳೂ ಅಷ್ಟೇ. ಅವು ಚಲಿಸುತ್ತೆ. ಹಾಗೆ ಚಲಿಸುತ್ತಾ ಚಲಿಸುತ್ತಲೇ ತುಂಬಾ ಸ್ವೀಟ್, ಸ್ವೀಟಾಗಿ ಬದಲಾಗಿಬಿಡುತ್ತೆ.

‘album’ ಕಥೆ ನೋಡಿ. ಮದುವೆ ಆಲ್ಬಂ ಅಂತ ಬಳಸ್ತೀವಿ. ಆಲ್ಬಂ ಅರ್ಥ ಏನು ಅಂತ ಹುಡುಕಿದ್ರೆ ‘white, ಬಿಳಿ’ ಅಂತ. ಆಲ್ಬಂ ಅನ್ನೋದು ಫ್ರೆಂಚ್ ನ albus ಅನ್ನೋ ಹೆಸರಿನಿಂದ ಹುಟ್ಟಿದ್ದು.

ಖಾಲಿ ಅಥವಾ ಬಿಳಿ ಅನ್ನೋದಕ್ಕೆ ಆಲ್ಬಂ ಅಂತ ಕರೀತಿದ್ರು. ರೋಂನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸೋದಿಕ್ಕೆ ಇಟ್ಟಿದ್ದ ಖಾಲಿ ಫಲಕಗಳನ್ನು ಆಲ್ಬಂ ಅಂತ ಕರೀತಿದ್ರು. ಲ್ಯಾಟಿನ್ ಭಾಷೆಗೆ ಬಂದ ಈ ಪದ ನಂತರ ಈಗಿನ ಅರ್ಥದ ‘ಆಲ್ಬಂ’ ಆಗಿದೆ.

ಮೊನ್ನೆ ಗಣಿ ಗಲಾಟೆ ನಡೀತಾ ಇರುವಾಗ ಬರೋ ಶಬ್ದಗಳ ಮೇಲೆಲ್ಲಾ ಒಂದು ಕಣ್ಣಿಟ್ಟಿದ್ದೆ. ‘ವಿಲನ್’ ಅಂತ ಆರೋಪ ಪ್ರತ್ಯಾರೋಪ ಮಾಡಿದ್ರು. ವಾದವಿವಾದ ಎಲ್ಲಾ ಆಗೋಯ್ತು. ನಾನು ವಿಲನ್ ಶಬ್ದದ ಬೆನ್ನತ್ತಿದೆ.

ಹಾಂ..!! ವಿಲನ್ ಅನ್ನೋದರ ನಿಜವಾದ ಅರ್ಥ ‘ರೈತ’ ಅಂತ. ಈ ಪದ ಫ್ರೆಂಚ್ ನಿಂದ ಲ್ಯಾಟಿನ್ ಗೆ ಬಂತು. ಲ್ಯಾಟಿನ್ ನಲ್ಲಿ ಜಮೀನು, ಮನೆ ಅನ್ನೋದಕ್ಕೆ vill ಅಂತಾರೆ. ಹಾಗಾಗಿ ಜಮೀನು ಮಾಡಿಸುವವರು, ನೋಡಿಕೊಳ್ಳುವವರು ಅರ್ಥಾತ್ ಮಣ್ಣಿನ ಮಗ ಅನ್ನೋ ಶಬ್ದ ಬಂದುಬಿಡ್ತು.

ಸರಿ ವಿಲನ್ ಅಂದ್ರೆ ರೈತ ಅಂತಾಯ್ತು ಹಾಗಾದ್ರೆ ರೈತ-ಫಾರ್ಮರ್ ಅನ್ನುವ ಶಬ್ದದ ಅರ್ಥ ಏನಿರಬಹುದು ಅಂತ ಕುತೂಹಲ ಆಯ್ತು.

ಮತ್ತೆ ಪುಟ ಮಗುಚ್ತಾ ಕೂತೆ. Farmer ಅಂದ್ರೆ ತೆರಿಗೆ ಅಂತ ಅರ್ಥ ಬರೋದಾ..? governer ಅಂದ್ರೆ ಹಡಗನ್ನ ನಿರ್ದೇಶಿಸುವವರು, protocol ಅಂದ್ರೆ ಅಂಟು, bribe ಅಂದ್ರೆ ಬ್ರೆಡ್ಡಿನ ತುಂಡು, candidate ಅಂದ್ರೆ ಬಿಳಿ ಬಟ್ಟೆ ಧರಿಸಿದವರು…

ಅಯ್ಯೋ ಶಿವನೆ ಏನೇನೆಲ್ಲಾ ಅರ್ಥ.

ಶಬ್ದ ಅನ್ನೋದು ಭೃಂಗವಿದ್ದ ಹಾಗೆ. ಅದರ ಬೆನ್ನೇರಿ ಎಷ್ಟೊಂದು ಕಲ್ಪನಾ ವಿಲಾಸ..

ಶಬ್ದದ ಬೆನ್ನು ಹತ್ತಿ ಹೊರಟೆ..

ಜಿ ಎನ್ ಮೋಹನ್

——

ನೃಪತುಂಗ‌ ಬಡಾವಣೆಯಲ್ಲಿ ರೈತರ ನೆನಪಿ‌ನಲ್ಲಿ ಗಿಡನೆಟ್ಟರು

Publicstory. in

ತುಮಕೂರು: ನಗರದ ನೃಪತುಂಗ ಬಡಾವಣೆಯಲ್ಲಿ ಗಿಡ ನೆಡುವ ಮೂಲಕ ರೈತರ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ 1980 ಜುಲೈ 21 ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸದಿದ್ದಾಗ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶಗೊಂಡು ಸರಕಾರದ ವಿರುದ್ಧ ಸಿಡಿದೇಳುವ ಮೂಲಕ ಪೊಲೀಸರ ಗುಂಡೇಟಿಗೆ ಇಬ್ಬರು ರೈತರು ಬಲಿಯಾದ ಕರಾಳ ದಿನ. ಹೀಗಾಗಿ ಈ ದಿನ ಜುಲೈ 21ರೈತ ಹುತಾತ್ಮ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಹಸಿರು ಶಾಲು ಹಾಕಿಕೊಂಡು ವೇದಿಕೆಯಲ್ಲಿ ರೈತರ ಪಕ್ಷ ಎಂದು ಆಯಾ ಪಕ್ಷ ದ ಜನಪ್ರತಿನಿಧಿಗಳು ಭಾಷಣದ ಅಬ್ಬರ ನಿರ್ಮಿಸಿ,ಚಪ್ಪಾಳೆ ಗಿಟ್ಟಿಸಿ ಹೊರಟು ಹೋಗುತ್ತಾರೆ. ಆದರೆ ಭಾಷಣದಲ್ಲಿ ಕೊಟ್ಟ ಭರವಸೆಗಳು ಮಾತ್ರ ಈಡೇರಿಲ್ಲ ಎಂದರು.

ಉಪಾಧ್ಯಕ್ಷ ರಾದ ರಾಜಣ್ಣ ಮಾತನಾಡಿ ಒಡೆದಮನೆಯಾದ ಸಂಘಟನೆಗಳು
ಕಳೇದ 30 ವರ್ಷಗಳ ಹಿಂದಿದ್ದ ರೈತ ಶಕ್ತಿ ಇಂದಿಲ್ಲ. ರಾಜಕಾರಣಿಗಳ ಒಡೆದಾಳುವ ನೀತಿಗೆ ಬಲಿಯಾಗಿ ಹಲ್ಲಿಲ್ಲದ ಹಾವುಗಳಂತಾಗಿದೆ. ಸಂಘಟನೆಗಳು ಈಗಲಾದರೂ ಒಮ್ಮತದೊಂದಿಗೆ ಒಂದಾಗಬೇಕಾಗಿದೆ ಎಂದರು.

ಸಿದ್ದಪ್ಪ ಗೌಡಿಹಳ್ಳಿ ರವರು ಮಾತನಾಡಿ ಇಂದು ರೈತರ ಹುತಾತ್ಮರ ಸ್ಮರಣಾರ್ಥ ದಿನದಂದು ನಮ್ಮ ಗ್ರಾಮ, ತಾಲೂಕು, ಜಿಲ್ಲೆ ರಾಜ್ಯದ ರೈತರ ಹೋರಾಟದಲ್ಲಿ ಮಡಿದವರಿಗೆ ನಮ್ಮ ಅನಂತ ಅನಂತ ನಮನಗಳನ್ನು ಸಲ್ಲಿಸಿ, ಎಂದು ತಿಳಿಸಿದರು.

ಬ್ರಹ್ಮಸಂದ್ರ ಪುಟ್ಟರಾಜು ಮಾತನಾಡಿ ಪ್ರಕೃತಿ ಮನುಷ್ಯನ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ ಅಂತಹದರಲ್ಲಿ ಮನುಷ್ಯನ ದುರಾಸೆಗೆ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ನಾಡು ನಮ್ಮ ಕಣ್ಣೇದುರೆ ಸರ್ವನಾಶ ಆಗುತ್ತದೆ ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನು ಕುಮಾರ್ ಮಹಿಳಾ ಅಧ್ಯಕ್ಷರಾದ ನೇತ್ರಾವತಿ ಕೆಎಸ್ ಸಿದ್ದಪ್ಪ ಗೌಡಿಹಳ್ಳಿ ಆನಂದ್ ಚಂದ್ರಣ್ಣ ಇದ್ದರು.

ತುಮಕೂರು 40 ಕ್ಕೂ ಹೆಚ್ಚು ಮಂದಿಗೆ ಕೋವಿಡ್

ತುಮಕೂರು ಜಿಲ್ಲೆಯಲ್ಲಿ ಮಂಗಳವಾರ 40 ಕ್ಕೂ ಹೆಚ್ಚು ಮಂದಿಕೆ ಕೋವಿಡ್ 19 ದೃಢಪಟ್ಟಿದೆ.

ತಾಲ್ಲೂಕು ಕೇಂದ್ರಗಳಲ್ಲಿ ರಾಪಿಡ್ ಕಿಟ್ ನಲ್ಲಿ ಪರೀಕ್ಷೆ ಮಾಡಿದ ಅಂಕಿ ಅಂಶ ಹೊರತುಪಡಿಸಿ ಜಿಲ್ಲೆಯಲ್ಲಿ 37 ಮಂದಿಗೆ ಸೋಂಕು ದೃಢಪಟ್ಟಿದೆ.

ತುಮಕೂರು 20, ಶಿರಾ 6, ಕುಣಿಗಲ್ 2, ಪಾವಗಡ 3, ತಿಪಟೂರು 2, ಮಧುಗಿರಿ 1 ಪ್ರಕರಣಗಳು ವರದಿಯಾಗಿವೆ. ಇವುಗಳನ್ನು ಹೊರತುಪಡಿಸಿ ಪಾವಗಡ ತಾಲ್ಲೂಕಿನಲ್ಲಿ ರಾಪಿಡ್ ಕಿಟ್ ನ ಮೂಲಕ ಪರೀಕ್ಷೆ ನಡೆಸಿದ 3 ಮಂದಿಗೆ ಸೊಂಕು ದೃಢಪಟ್ಟಿದೆ. ಇತರೆ ತಾಲ್ಲೂಕುಗಳಲ್ಲಿಯೂ ರಾಪಿಡ್ ಕಿಟ್ ಮುಖಾಂತರ ಸೊಂಕು ಪತ್ತೆ ಹಚ್ಚಲಾಗಿದ್ದು ಆ ಮಾಹಿತಿ ಜಿಲ್ಲಾ ಆಸ್ಪತ್ರೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ನಲ್ಲಿ ಸೇರಿಲ್ಲ.

ಮಂಗಳವಾರ 25 ಮಂದಿ ಸೊಂಕಿತರು ಗುಣಮುಖರಾಗಿದ್ದಾರೆ.

ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ..

ಜಿ.ಎನ್.ಮೋಹನ್

ಹೀಗೇ ಪೇಪರ್ ತಿರುವಿ ಹಾಕುತ್ತಾ ಕೂತಿದ್ದೆ. ಯಾವುದೋ ಜಾಹೀರಾತು ಕೊನೆಯಲ್ಲಿ ಒಕ್ಕಣೆ. ನಿಮ್ಮ ಅರ್ಜಿಗಳನ್ನು ‘ಸ್ನೇಲ್ ಮೇಲ್ನಲ್ಲಿ ಬೇಡ, ಈ ಮೇಲ್ನಲ್ಲಿ ಕಳಿಸಿ’.

ಅರ್ಥ ಇಷ್ಟೆ, ಬಸವನಹುಳು ವೇಗದಲ್ಲಿ ಬರುವ ಪೋಸ್ಟ್ ಮೂಲಕ ಬೇಡ. ಮಿಂಚಿನಂತೆ ಬಳಿ ಬರುವ ಈ ಮೇಲ್ ಬಳಸಿ.

ಒಂದು ಕ್ಷಣ ಮಾತೇ ಹೊರಡಲಿಲ್ಲ. ಯಾಕಂದ್ರೆ ಪೋಸ್ಟ್ ಇಲ್ಲದ ಕಾಲವನ್ನು ಊಹಿಸಿಕೊಳ್ಳಲೂ ನನ್ನ ಮನಸ್ಸು ನಿರಾಕರಿಸುತ್ತಿತ್ತು.

ನಾನೂ ಬದಲಾದ ಕಾಲದಲ್ಲಿ ಈ-ಮೇಲ್ ಬಳಸುತ್ತಿರುವವನೇ. ಲೆಕ್ಕ ಹಾಕಿದರೆ ಬೇರೆಯವರಿಗಿಂತ ಒಂದು ಕೈ ಜೋರಾಗಿಯೇ ಈ-ಮೇಲ್ಗೆ ಒಗ್ಗಿಹೋಗಿದ್ದೇನೆ.

ಆದರೆ… ಆದರೆ.. ಆ ಅಂಚೆಯಣ್ಣನ ಕೈಯಿಂದ ನೇರವಾಗಿ ಬರುವ ಪೋಸ್ಟ್ ನ ಥ್ರಿಲ್ ನನ್ನಿಂದ ದೂರವಾಗಿಲ್ಲ.

ಪೋಸ್ಟ್ ಅನ್ನೋದು ಯಾಕೆ ನನ್ನ ಎದೆಯೊಳಕ್ಕೆ ಇಳಿದುಹೋಗಿದೆಯೋ ಅದು ಮುಂದೆ ಬದುಕುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ನನಗೆ ಮಾತ್ರ ಪೋಸ್ಟ್ ಎಂಬುದು ನನ್ನ ಸಮೃದ್ಧ ಬಾಲ್ಯ ಹಾಗೂ ಮಿಂಚುಂಡೆಗಳ ಯೌವನ.

ಎರಡನೇ ಕ್ಲಾಸಿರಬಹುದೇನೋ, ಸ್ಕೂಲ್ನಲ್ಲಿ ಎಲ್ಲಾರೂ ಮನೆಯಿಂದ ನಾಕಾಣೆ ತನ್ನಿ, ಫಿಲಂಗೆ ಕರಕೊಂಡು ಹೋಗ್ತೀವಿ ಅಂದ್ರು. ನಾನೂ ಕಾಡಿಬೇಡಿ, ಸ್ಟ್ರೈಕ್ ಕೂತು ನಮ್ಮಪ್ಪನಿಂದ ನಾಕಾಣೆ ಸಂಪಾದಿಸಿದೆ.

ಫಿಲಂ ಯಾವುದು ಏನೂ ಗೊತ್ತಿರಲಿಲ್ಲ. ಸಾಲಾಗಿ ನಡಕೊಂಡು ಥಿಯೇಟರ್ ಮುಟ್ಟಿದ್ವಿ. ಸಿನಿಮಾ ಹೆಸರು ‘ಮೀನಾಳ ಕಾಗದ’. ಇಬ್ರು ತುಂಬಾ ಫ್ರೆಂಡ್ಸ್ ಇರ್ತಾರೆ. ಆಮೇಲೆ ಅಪ್ಪ ಅಮ್ಮನಿಗೆ ಟ್ರಾನ್ಸ್ಫರ್ ಆಗುತ್ತೆ, ದೂರದೂರಿಗೆ ಹೋಗ್ತಾರೆ. ಪುಟ್ಟ ಹುಡುಗರಿಗೆ ಗೆಳೆತನ ದೂರಾ ಆಗುತ್ತಲ್ಲ ಅಂತ ಕಣ್ಣೀರು.

ಒಂದು ದಿನ ಪೋಸ್ಟ್ ಮ್ಯಾನ್ ಸೈಕಲ್ ತುಳಿದುಕೊಂಡು ಬಂದು ಆ ಹುಡುಗನ ಕೈಗೆ ಒಂದು ಕಾಗದ ಕೊಡ್ತಾನೆ. ಅರೆ ಅದು ‘ಮೀನಾಳ ಕಾಗದ’.

ಆ ಹುಡುಗನಿಗೆ ಆಕಾಶವೇ ಸಿಕ್ತೇನೋ ಅನ್ನೋಷ್ಟು ಖುಷಿ ಆಗುತ್ತೆ. ಕಾಗದ ಕೈಲಿ ಹಿಡಕೊಂಡು ಆತ ಇದೇ ಜಗತ್ತು ತನ್ನ ತೆಕ್ಕೆಗೆ ಸಿಕ್ತೇನೋ ಅಂತ ಸಂಭ್ರಮಿಸೋ ರೀತಿ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.

ಬಹುಶಃ ಇದಕ್ಕೇ ಇರ್ಬೇಕು, ಆ ವಯಸ್ಸಲ್ಲೇ ಪೋಸ್ಟ್ ಅನ್ನೋದು ಸಂಭ್ರಮದ ವಿಷಯ ಅನಿಸ್ಬಿಟ್ಟಿತ್ತು. ಪೋಸ್ಟ್ ನವರು ಬರ್ತಾರೆ, ಕಾಗದ ಕೊಡ್ತಾರೆ ಎಷ್ಟು ಚೆನ್ನಾಗಿರುತ್ತೆ ಅಲ್ವ.

‘ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ, ಅದರಾಗ ಸುಖ ದುಃಖ ಎರಡೂ ತುಂಬೇತಿ’ ಅಂದಿದ್ದು ಆ ಧಾರವಾಡದ ಹೆಣ್ಣುಮಗಳು ಸುನಂದಾ ಬೆಳಗಾಂವಕರ. ‘ಕಜ್ಜಾಯ’ ಪ್ರಬಂಧ ಸಂಕಲನದಲ್ಲಿ

ಕಾಲೇಜು, ಕೆಂಪು ಮಣ್ಣು, ಅಮ್ಮ ಅಂತ ಬರೀತಾ ಯಾಕೋ ಗೊತ್ತಿಲ್ಲ ಈ ಮಾತನ್ನು ಬರ್ದಿದ್ದು. ಅರೆ! ಹೌದಲ್ಲ ಅನಿಸ್ತು.

ಕೆಂಪು ಪೋಸ್ಟ್ ಡಬ್ಬಿಯಲ್ಲಿ ಲಗ್ನಪತ್ರಿಕೇನೂ ಇರುತ್ತೆ, ತಿಥಿ ಕಾರ್ಡೂ ಇರುತ್ತೆ. ಆ ಪೋಸ್ಟ್ ಡಬ್ಬೀನಲ್ಲಿ ಅಣ್ಣ ಊರಿಗೆ ಬರೋ ವಿಷಯಾನೂ ಇರುತ್ತೆ, ಮನೆ ಪಾಲಾಗಿ ಹೋದ ಕಥೇನೂ ಇರುತ್ತೆ.

ಗಂಡ-ಹೆಂಡತಿ ಡೈವೋರ್ಸ್ ಆದದ್ದನ್ನು ಹೊತ್ತುಕೊಂಡಿರೋ ಡಬ್ಬಿ 25 ವರ್ಷದ ಸುಖ ದಾಂಪತ್ಯದ ಸಿಹಿ ಸುದ್ದಿ, ಪಾಸಾಗಿರೋ ಸುದ್ದಿ, ಫೇಲಾಗಿರೋ ಪತ್ರ ಎರಡೂ ಅಕ್ಕಪಕ್ಕ ಕೂತಿರುತ್ತೆ.

ಆ ಹುಡುಗಿಗೆ ಪ್ರೊಪೋಸ್ ಮಾಡಿ ಬರೆದ ಪತ್ರ, ಇನ್ನೊಂದು ಎರಡು ವರ್ಷ ಸುತ್ತಾಡಿ ಇನ್ನೇನು ಮದುವೆ ಆಗ್ಬೇಕು ಅನ್ನೋವಾಗ ಸಂಬಂಧಾನೇ ಕಿತ್ತುಹೋದ ದುಗುಡ ಎರಡೂ ಇರುತ್ತೆ ಅಕ್ಕಪಕ್ಕದಲ್ಲೇ.

ಜೀವನ ಅನ್ನೋದು ಒಂದು ಥರಾ ಯುಗಾದಿ ಇದ್ದಂಗೆ ಅಲ್ವಾ. ಅದೇ ಥರಾನೇ ಪೋಸ್ಟ್ ಡಬ್ಬಿಯಲ್ಲಿ ಕಹೀನೂ ಇದೆ, ಚಪ್ಪರಿಸಬಹುದಾದ ಸಿಹೀನೂ ಇದೆ. ಒಂದು ಥರದಲ್ಲಿ ಪೋಸ್ಟ್ ಡಬ್ಬಿ ಅನ್ನೋದು ಬದುಕಿನ ದಾರ್ಶನಿಕ.

ನನಗೆ ಈ ಪೋಸ್ಟ್ ಗೀಳು ಎಷ್ಟು ಅಂಟಿಕೊಳ್ತು ಅಂದ್ರೆ ಏನಾದ್ರೂ ಪೋಸ್ಟ್ ಬರ್ಲೇಬೇಕು ಅನ್ನೋ ಹುಚ್ಚು ಹಿಡೀತು.. ಅಣ್ಣನಿಗೆ ಬರುತ್ತೆ, ಅಪ್ಪನಿಗೆ ಬರುತ್ತೆ, ನನಗ್ಯಾಕೆ ಬರಲ್ಲ ಅಂತ.

ಏಳನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಅಂತ ಗೊತ್ತಾದಾಗ ನಾನು ಫಸ್ಟ್ ಕೇಳಿದ್ದೇ ಅದು ಹಾಲ್ ಟಿಕೇಟ್ ಪೋಸ್ಟ್ ನಲ್ಲಿ ಕಳಿಸ್ತಾರ ಅಂತ. ಅಷ್ಟು ಹುಚ್ಚಿತ್ತು.
ಹೈಸ್ಕೂಲ್ ಗೆ ದಾಟಿಕೊಂಡೆ. ಪೋಸ್ಟ್ ಹುಚ್ಚು ಇನ್ನೂ ಜಾಸ್ತಿ ಆಯ್ತು.

ಒಂದಿನಾ ಪೇಪರ್ ತಿರುವಿ ಹಾಕ್ತಿದ್ದಾಗ ‘ಸುವಾರ್ತೆಗಳು, ಯೇಸು ನಿಮಗಾಗಿ ಇದ್ದಾನೆ. ತಿಳಿಯಬೇಕಾದರೆ ಪೋಸ್ಟ್ ಬಾಕ್ಸ್ ನಂ….ಗೆ ಅಂಚೆ ಹಾಕಿ’ ಅಂತಿತ್ತು.

ದೂರಾಲೋಚನೆ ಮಾಡ್ದೆ. ನಾನೂ ಒಂದು ಪೋಸ್ಟ್ ಕಾರ್ಡ್ ಹಾಕಿದರೆ ಅವರು ಉತ್ತರ ಬರೀತಾರೆ ಅಲ್ವ ಅಂತ.

ಪೋಸ್ಟ್ ಕಾರ್ಡ್ ಗೆ ದುಡ್ಡೆಲ್ಲಿಂದ ತರೋದು. ಎರಡು ಇಡ್ಲಿಗೆ ಇಷ್ಟು, ಬಸ್ಗೆ ಇಷ್ಟು ಅಂತ ಕರೆಕ್ಟಾಗಿ ಲೆಕ್ಕಹಾಕಿ ದುಡ್ಡು ಕೊಡ್ತಿದ್ರು. ಅಂತಾದ್ರಲ್ಲಿ ಪೋಸ್ಟ್ ಕಾರ್ಡ್ ಗೆ ಎಲ್ಲಿ ಉಳಿಸೋದು. ಅವಾಗ್ಲೇ ಅಪ್ಪನ ಜೋಬಿಗೆ ಕೈಹಾಕೋ ವಿದ್ಯೆ ಗೊತ್ತಾಗಿತ್ತು. 5 ಪೈಸ ಕಾರ್ಡ್ ಗಾಗಿ ನಾಲ್ಕುದಿನ ನಿದ್ದೆ ಮಾಡಿಲ್ಲ.

ಓಹ್! ಅಂತೂ ಬಂತಲ್ಲ ಯೇಸುವಿನ ಸುವಾರ್ತೆ. ನಾನೀಗ ಯೇಸು ವಿದ್ಯೆ ಕಲಿಯುವ ಕರೆಸ್ಪಾಂಡೆಂಟ್ ಸ್ಟೂಡೆಂಟ್. ಅವರು ಪಾಠ ಕಳಿಸ್ತಾರೆ. ಕ್ವಶ್ಚನ್ ಪೇಪರ್ ಕಳಿಸ್ತಾರೆ. ಪಾಸಾದ್ರೆ ಸರ್ಟಿಫಿಕೇಟ್. ನಾನೂ ಯಾವ ಸುವಾರ್ತೆ ಕಲಿತ್ನೋ ನನಗಂತೂ ಗೊತ್ತಿಲ್ಲ. ನನ್ನ ದೋಸ್ತ್ ಗಳಿಗೂ ಸಹಾ ನಾನು ಸುವಾರ್ತೆ ಕಲಿತಿದ್ದೀನಿ ಅನ್ನೋ ಗಂಧಗಾಳಿ ಸಿಕ್ಕಿಲ್ಲ. ಅದೂ ಯೇಸೂ ಆದ್ರೂ ಯಾರಾದ್ರೂ ನನಗೆ ಪೋಸ್ಟ್ ನಲ್ಲಿ ಬರುತ್ತೆ ಅನ್ನೋದಷ್ಟೆ ಮುಖ್ಯ ಆಗಿದ್ದದ್ದು.

ಚಡ್ಡಿ ಏರಿಸ್ಕಂಡು ನೆಲದ ಮೇಲೆ ಕೂತುಕೊಳ್ತಾ ಇರೋವಾಗ ಮೇಷ್ಟ್ರು ಬೆತ್ತ ಕೈಯಲ್ಲಿ ಹಿಡಿದು ‘ಅಂಚೆಯ ಅಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆ ಮನೆಗೆ…’ ಅಂತ ಪದ್ಯ ಹೇಳಿಕೊಡ್ತಾ ಇದ್ರಲ್ಲಾ ಅವಾಗ ಈ ಪೋಸ್ಟ್ ಮ್ಯಾನ್ ನನ್ನ ಒಳಗಡೆ ಇಳಿದುಬಿಟ್ಟ.

ಹೈಸ್ಕೂಲ್ ನಲ್ಲಿ ನನಗೆ ಸುವಾರ್ತೆ ಕೇಳಿ ಕೇಳಿ ಸುಸ್ತಾಗೋ ಕಾಲ ಬಂತಲ್ಲಾ, ಅವಾಗ ನನ್ನ ಫ್ರೆಂಡ್ಸ್ ಇನ್ನೊಂದು ದಾರಿ ತೋರಿಸ್ಕೊಟ್ರು. ಬೇರೆ ದೇಶದ ಎಂಬಸೀಗೆ ಪತ್ರ ಬರೆಯೋದು. ‘ಐ ವಾಂಟ್ ಟು ನೋ ಮೋರ್ ಎಬೌಟ್ ಯುವರ್ ಕಂಟ್ರಿ’ ಅಂತ.

ವಾಹ್! ಎಷ್ಟು ಚನ್ನಾಗಿರೋ ಪೋಸ್ಟ್ ಬರೋದು ಗೊತ್ತಾ. ಕಲರ್ ಕಲರ್ ಬ್ರೋಷರ್ ಗಳು, ನಮ್ಮ ಅಡ್ರೆಸ್ ಕೂಡಾ ನೀಟಾಗಿ ಟೈಪ್ ಮಾಡಿರೋರು. ಅದು ಬರ್ತಾ ಇದ್ದ ಹಾಗೆ ನಮ್ಮನೇಲಿ ನನ್ನ ಸ್ಟ್ಯಾಂಡರ್ಡೂ ಜಾಸ್ತಿ ಆಗ್ತಾಹೋಯ್ತು.

ಇರೋಬರೋ ದೇಶದ ರಾಯಭಾರಿ ಕಛೇರಿಗೆಲ್ಲಾ ಬರ್ದೆ. ಐ ವಾಂಟ್ ಟು ನೋ, ಐ ವಾಂಟು ನೋ…ಅಂತ.

ಒಂದಿನಾ ಹೀಗೆ ಒಂದು ಪೋಸ್ಟ್ ಆಫೀಸ್ ಮುಂದೆ ಹೋಗ್ತಾ ಇದ್ದೆ, ಶಾಕ್ ಆಗೋಯ್ತು, ಅದು ದೊಡ್ಡ ಪೋಸ್ಟ್ ಆಫೀಸು, ಎದುರುಗಡೆ ಕೆಂಪು ಡಬ್ಬ ಮಾತ್ರ ಅಲ್ಲ, ಹಳದಿ, ಹಸಿರು ಬಣ್ಣದ ಡಬ್ಬಾನೂ ಇತ್ತು.

ಯಾಕಪ್ಪಾ ಅಂತ ಹತ್ತಿರ ಹೋಗಿ ನೋಡಿದ್ರೆ ನಿಮ್ಮ ಊರಿಗೆ ಆದ್ರೆ ಈ ಡಬ್ಬದಲ್ಲಿ ಹಾಕಿ, ಡೆಲ್ಲಿಗಾದ್ರೆ ಈ ಡಬ್ಬದಲ್ಲಿ, ಮುಂಬೈಗಾದ್ರೆ ಇಲ್ಲಾಕಿ ಅಂತ ಬರ್ದಿತ್ತು.

ತುಂಬಾ ಬೇಜಾರಾಗಿ ಹೋಯ್ತು. ನನಗೆ ಪೋಸ್ಟ್ ಬಾಕ್ಸ್ ಅಂದ್ರೆ ಅದು ಕೆಂಪು ಪೋಸ್ಟ್ ಬಾಕ್ಸೇ, ಜೀವನ ಅಂದ್ರೆ ಹಳದಿ ಪೋಸ್ಟ್ ಬಾಕ್ಸ್ ಇದ್ದಹಾಗೆ, ಜೀವನ ಅಂದ್ರೆ ಹಸಿರು ಪೋಸ್ಟ್ ಬಾಕ್ಸ್ ಇದ್ದಹಾಗೆ ಅಂತ ಬರಿಯೋಕೆ ಆಗುತ್ತಾ.

ಅದ್ರಲ್ಲೂ ಪೋಸ್ಟ್ ಬಾಕ್ಸ್ ಅಂದ್ರೆ ಬರೀ ಸುಖಾ ದುಃಖಾ ಅಲ್ಲ. ಅದು ಎಲ್ಲಾ ಊರುಗಳನ್ನೂ ಹೊಟ್ಟೆಯಲಿಟ್ಟುಕೊಂಡು ಕೂತಿರಬೇಕು. ಡೆಲ್ಲಿ ಬೇರೆ, ನೀವು ಬೇರೆ ಅಂತ ಹೇಗೆ ಹೇಳೋಕೆ ಸಾಧ್ಯ.

ಒಂದು ಟೈಮ್ ಬಂತು. ಒಂದೇ ಒಂದು ಪೋಸ್ಟ್ ಕಾರ್ಡ್ ಗಾಗಿ ಹಗಲೂ ರಾತ್ರಿ ನಿದ್ದೆ ಕಳೆದುಕೊಂಡಿದ್ದ ನನಗೆ ಈಗ ಕಂತೆಗಟ್ಲೆ ಪೋಸ್ಟ್ ಬರೋ ಕಾಲ ಬಂತು.

ನಾನೂ ಒಂದು ಪೋಸ್ಟ್ ಬಾಕ್ಸ್ ಬಾಡಿಗೆಗೆ ತಗೊಂಡೆ. ಪೋಸ್ಟ್ ಆಫೀಸ್ ನೋರು ಒಂದು ಕೀ ಕೊಡ್ತಾರೆ. ನಾವೇ ಹೋಗಿ ನಮ್ಮ ನಂಬರ್ ಡಬ್ಬಿ ತೆಗೆದ್ರೆ ಎಲ್ಲಾ ಪೋಸ್ಟ್ ಅಲ್ಲಿರೋದು. ಒಳ್ಳೆ ಐಡಿಯಾ ಅಂದ್ಕೊಂಡು ಅದನ್ನ ತಗೊಂಡೆ.

ಆದ್ರೆ ಎರಡೇ ದಿನಕ್ಕೆ ನನಗೆ ಗೊತ್ತಾಗಿ ಹೋಯಿತು. ಅಮ್ಮ ಮಾಡಿದ ಅಡಿಗೇನಲ್ಲಿ ಅಮ್ಮನ ಟಚ್ ಇರುತ್ತಲ್ಲ, ಹಾಗೇ ಪೋಸ್ಟ್ ಅಂದ್ರೆ ಬರೀ ಪೋಸ್ಟ್ ಅಲ್ಲ ಅದ್ರಲ್ಲಿ ಪೋಸ್ಟ್ ಮ್ಯಾನ್ ಟಚ್ ಕೂಡಾ ಇರುತ್ತೆ ಅಂತ.

ಬೀದಿ ಕೊನೇನಲ್ಲಿ ಪೋಸ್ಟ್ ಮ್ಯಾನ್ ಕಾಣಿಸ್ಕೊಳ್ಳಬೇಕು. ನಿಧಾನವಾಗಿ ಮನೆ ಮನೇ ಬಾಗಿಲು ಬಡೀತಾ ಬರ್ಬೇಕು. ನಮ್ಮನೇ ಚಿಲಕಾನೂ ಕಿಲಕಿಲ ಅನ್ಬೇಕು, ಅವಾಗ್ಲೇ ಅದಕ್ಕೆ ಪೋಸ್ಟ್ ಅನ್ನೋದು ಅಂತ ಗೊತ್ತಾಗೋಯ್ತು.

ಪತ್ರ ಬರೆಯೋರಿಲ್ಲ ಅಕ್ಷರದ ಆಟ ಗೊತ್ತಾಗಲ್ಲ, ‘ಓಂ’ ‘ಶ್ರೀ’ ಕಾಣೋದಿಲ್ಲ, ಶುಭಾರ್ಶಿವಾದ ಹಾರೈಕೆ ಇರೋದಿಲ. ‘ಚಿರಂಜೀವಿಗೆ’ ಅನ್ನೋ ಒಕ್ಕಣೆ ಇಲ್ವೇ ಇಲ್ಲ ಅಂತ ನೊಂದ್ಕೊಳ್ತಾರೆ.

ಆದ್ರೆ ನನಗೆ ಇದೆಲ್ಲಾ ಹೋಯ್ತಲ್ಲಾ ಅನಿಸಲ್ಲ. ಅದಕ್ಕಿಂತಲೂ ನನ್ನ ಹಳೆಯ ಬದುಕಿಗೆ ಹೋಗೋದಿಕ್ಕೆ ಇದ್ದ ಒಂದೇ ಒಂದು ದೋಣೀನೂ ಕಾಣೆ ಆಗೋಯ್ತಲ್ಲಾ ಅನಿಸುತ್ತೆ.
—-
Art Courtesy: https://www.facebook.com/DishaChauhanArt/

ತುಮಕೂರು: 78 ಮಂದಿಗೆ ಕೋವಿಡ್ 19

ತುಮಕೂರು: ಜಿಲ್ಲೆಯಲ್ಲಿ ಸೋಮವಾರ 78 ಮಂದಿಗೆ ಕೋವಿಡ್ 19 ದೃಢಪಟ್ಟಿದೆ.

ತುಮಕೂರು 17, ಕುಣಿಗಲ್ 24, ಪಾವಗಡ 10, ಮಧುಗಿರಿ 10, ಕೊರಟಗೆರೆ 8, ಶಿರಾ 6, ತುರುವೇಕೆರೆ 1, ತಿಪಟೂರು 2 ಪ್ರಕರಣಗಳು ದೃಢವಾಗಿವೆ.

ತುಮಕೂರಿನ ಕೆ ಎಚ್ ಬಿ ಕಾಲೋನಿಯ 59 ವರ್ಷದ ಮಹಿಳೆ, ಕುಣಿಗಲ್ ನಗರದ 40 ವರ್ಷದ ವ್ಯಕ್ತಿ,  ಶಿರಾ ಜಾಮಿಯಾ ನಗರದ 60 ವರ್ಷದ ವೃದ್ಧೆ  ಮೃತಪಟ್ಟಿದ್ದಾರೆ.

53 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 777 ಪ್ರಕರಣಗಳಲ್ಲಿ, 341 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. 1915 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ವಹಿಸಲಾಗಿದೆ.

ಡ್ರೌನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲು

ತುಮಕೂರು (ಜು.20):

ಡ್ರೋನ್ ತಯಾರಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಡ್ರೋನ್ ಪ್ರತಾಪ್ ಬಂಧನಕ್ಕಾಗಿ ಮೂರು ತಂಡಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸರು ಮತ್ತು ಬಿಬಿಎಂಪಿ ಹೋಂ ಕ್ವಾರಂಟೈನ್ ಸಿಟಿಜನ್ ಸ್ಕ್ವಾಡ್ ಪ್ರತಾಪ್ ಗಾಗಿ ಹುಡುಕಾಟ ನಡೆಸುತ್ತಿದೆ.

ಬಂಧನ ಮಾಡುತ್ತಿರುವುದು ಆತ ಸುಳ್ಳು ಹೇಳಿದ್ದಕ್ಕಲ್ಲ. ಬದಲಾಗಿ ಡ್ರೋನ್ ಪ್ರತಾಪ್ ಇದೇ 15 ರಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್ವೊಂದರಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ ಆಗಿದ್ದ.

ನಿಯಮದ ಪ್ರಕಾರ ಆತ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿತ್ತು. ಆದರೆ, ಕ್ವಾರಂಟೈನ್ ಆದ ಮರುದಿನವೇ ಖಾಸಗಿ ಚಾನೆಲ್‌ ನ ಸಂದರ್ಶನದಲ್ಲಿ ಪ್ರತಾಪ್ ಪಾಲ್ಗೊಂಡಿದ್ದ.

ಪ್ರತಾಪ್ ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್ ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಸದ್ಯ ಪ್ರತಾಪ್ ಫೋನ್ ಸ್ವಿಚ್ ಆಫ್ ಆಗಿದೆ. ಈತ ಮಂಡ್ಯ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಪ್ರತಾಪ್ ಇದ್ದಾನೆ ಎನ್ನುವ ಮಾಹಿತಿ ಇದೆ. ಹೀಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಡ್ರೋನ್ ತಯಾರಿಸಿದ್ದೇನೆ, ಬೇರೆ ರಾಷ್ಟ್ರಗಳಲ್ಲಿ ತನ್ನನ್ನು ಕರೆದು ಗೌರವಿಸಿವೆ ಎಂದು ಪ್ರತಾಪ್ ಹೇಳಿಕೊಂಡಿದ್ದ. ಅಲ್ಲದೆ, ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ಕೂಡ ನೀಡಿದ್ದ. ಆದರೆ, ಇದೆಲ್ಲವೂ ಸುಳ್ಳು ಎಂಬುದು ಇತ್ತೀಚೆಗೆ ಗೊತ್ತಾಗಿತ್ತು.

ದಿನಕ್ಕೊಂದು ’ನಿಟ್ಟುಸಿರ’ ಕಥೆ

ಜಿ ಎನ್ ಮೋಹನ್

ನನ್ನ ಇನ್ ಬಾಕ್ಸ್ ಗೆ ಒಂದು ನಿಟ್ಟುಸಿರು ಬಂದು ಬಿತ್ತು.

ಅದೊಂದು ಗಾಢ ನಿಟ್ಟುಸಿರು. ತನ್ನ ಒಡಲೊಳಗಿನ ನೋವನ್ನೆಲ್ಲಾ ನನ್ನೆದುರು ಸುರಿದ ನಿಟ್ಟುಸಿರು.

ನನಗೆ ಆ ನೋವಿನ ಗುಂಗಿನಿಂದ ಇನ್ನೂ ಹೊರಗೆ ಬರಲು ಆಗಿರಲೇ ಇಲ್ಲ ಆಗಲೇ ಇನ್ನೊಂದು ನಿಟ್ಟುಸಿರು ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು.

ಅದೇನೆಂದು ನೋಡುವ ವೇಳೆಗೆ ಮತ್ತೊಂದು, ಅದನ್ನು ತಿರುವಿ ಹಾಕುವುದರೊಳಗೆ ಮಗದೊಂದು..

‘ನಾನು ಈಗ ಶಾಲೆಯಲ್ಲಿ ಟೆಸ್ಟ್ ಬರೆಯಬೇಕು. ಟೆಸ್ಟ್ ಬರೆಯಲು ಅವಕಾಶ ನೀಡಬೇಕೆಂದರೆ ಸ್ಟೀಲ್ ತಟ್ಟೆ ತಂದುಕೊಡಬೇಕು ಎಂದು ಮೇಷ್ಟ್ರು ತಾಕೀತು ಮಾಡಿದ್ದಾರೆ. ನಾನು ಆ ತಟ್ಟೆ ಎಲ್ಲಿಂದ ತಂದುಕೊಡಲಿ?’ ಎಂದು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕೇಳುತ್ತಿದ್ದಾಳೆ.

‘ನನಗೆ ಎಲ್ಲರಂತೆ ಮರಕೋತಿ, ಚಿನ್ನಿ ದಾಂಡು, ಲಗೋರಿ, ಕಬಡ್ಡಿ ಆಡಬೇಕು ಎನ್ನುವ ಆಸೆ. ನನ್ನ ಕಂಡೊಡನೆ ಎಲ್ಲರೂ ಓಡಿ ಹೋಗುತ್ತಾರೆ. ನಾನು ಯಾರೊಂದಿಗೆ ಆಡಲಿ?’ ಎಂದು ಪ್ರಶ್ನಿಸುವ ದಲಿತ ಹುಡುಗ ತನ್ನನ್ನು ಮುಟ್ಟಿಸಿಕೊಳ್ಳದವರ ಕಥೆಯನ್ನು ಹೇಳುತ್ತಾನೆ.

‘ನನಗೆ ಪಿಂಚಣಿ ಬರಬೇಕು. ಆದರೆ ಅಂಚೆಯವ ನನಗೆ ಇನ್ನು ಮುಂದೆ ಪಿಂಚಣಿ ಇಲ್ಲ ಎಂದು ಹೇಳುತ್ತಿದ್ದಾನೆ. ಇದು ಯಾಕೆ?’ ಎನ್ನುವುದು ವಿಧವಾ ವೇತನದಲ್ಲಿಯೇ ಬದುಕು ನಡೆಸುತ್ತಿದ್ದ ಆ ಅಸಹಾಯಕ ವದ್ಧೆಯ ಪ್ರಶ್ನೆ.

‘ನನ್ನ ಊರಿನಲ್ಲಿ ಜುಳು ಜುಳು ಹರಿಯುತ್ತಿದ್ದ ನದಿಯನ್ನು ಕಲುಷಿತ ಮಾಡಿದವರು ಯಾರು?’ ‘ಗಣಿ ಧೂಳು ಬೆರಸಿ ನೀರನ್ನು ಕುಡಿಯಲಾಗದಂತೆ ಕಪ್ಪಾಗಿಸಿದವರು ಯಾರು?’ ಎನ್ನುವುದು ಜಾರ್ಖಂಡ್‌ನ ಎಲ್ಲರ ಪ್ರಶ್ನೆ.

ಹೀಗೆ ನಿಟ್ಟುಸಿರ ಗಾಥೆಗೆ ಕೊನೆಯೇ ಇಲ್ಲ.

ನನಗೆ ಅದುವರೆಗೆ ಗೊತ್ತಿದ್ದದ್ದು ‘ದಿನಕ್ಕೊಂದು ಕಥೆ’ ಮಾತ್ರ. ಸೊಂಪಾಗಿ ಮಲಗಲೆಂದು ಅಮ್ಮ ಮಾಯಾ, ಕಿನ್ನರ, ರಾಜಕುವರಿಯರ ಲೋಕಕ್ಕೆ ಕರೆದೊಯ್ಯುತ್ತಿದ್ದ ಕಥೆಗಳು.

ಆದರೆ ಇಲ್ಲಿಯೂ ದಿನಕ್ಕೊಂದು ಕಥೆ ಇದೆ. ಆದರೆ ಇದು ನಿದ್ದೆಯಲ್ಲಿದ್ದವರನ್ನು ಎಬ್ಬಿಸುವ, ಸುಖದ ನಡುವೆ ಇದ್ದವರನ್ನು ನಿಡುಸುಯ್ಯುವಂತೆ ಮಾಡುವ, ನಮ್ಮೊಳಗನ್ನು ಪ್ರಶ್ನಿಸುವಂತೆ ಮಾಡುವ ಕಥೆಗಳು.

ಪ್ರತೀ ದಿನ ಹೀಗೆ ಒಂದೊಂದು ನಿಟ್ಟುಸಿರ ಕಥೆಯನ್ನು ನಮ್ಮ ಇ- ಮೇಲ್ ಗೆ ದೂಡುತ್ತಿರುವವರು ‘ವಿಡಿಯೊ ವಾಲಂಟಿಯರ್ಸ್’.

ಸಿ ಎನ್ ಎನ್, ಫಾಕ್ಸ್, ಕೋರ್ಟ್ ಟಿವಿ. ಹಲವು ವರ್ಷಗಳ ಕಾಲ ಟಿವಿ ಚಾನಲ್‌ಗಳಲ್ಲಿ ಕೆಲಸ ಮಾಡಿದ ಜೆಸ್ಸಿಕಾ ಮೇಬೆರ‌್ರಿಗೆ ಒಂದು ದಿನ ತನ್ನ ಕೆಲಸದ ಅರ್ಥ ಏನು ಎನ್ನುವ ಪ್ರಶ್ನೆ ಎದ್ದು ನಿಂತಿತು.

ಅತಿರೇಕದ ವರದಿ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎನಿಸಿ ದಾಕ್ಷಣ ರಾಜೀನಾಮೆ ನೀಡಿ ಹೊರಬಂದು ನೇರ ಇಳಿದದ್ದು ಅಹಮದಾಬಾದ್‌ನಲ್ಲಿ.

ಅಲ್ಲಿನ ಮಹಿಳೆಯರಿಗೆ ಕ್ಯಾಮೆರಾ ಹಿಡಿಯುವ, ಅದನ್ನು ತಮ್ಮ ಒಳಿತಿಗೆ ಬಳಸಿಕೊಳ್ಳುವುದನ್ನು ಹೇಳಿಕೊಡಲು ನಿಂತರು. ಅಮೆರಿಕನ್ ಇಂಡಿಯಾ ಫೌಂಡೇಷನ್ ಇವರ ಬೆನ್ನಿಗಿತ್ತು. ಸತತ ಒಂದು ವರ್ಷ ಭಾರತದ ಮೂಲೆ ಮೂಲೆ ಅಲೆದು, ಮಹಿಳೆಯರ ಪಿಸು ಮಾತು ಆಲಿಸುತ್ತಾ, ಹೇಳಿಕೊಳ್ಳಲಾಗದ ಕಥೆಗಳನ್ನು ಕೇಳುತ್ತಾ ಹೋದ ಇವರಿಗೆ ತಮ್ಮ ಎದುರು ಇನ್ನೂ ದೊಡ್ಡ ಸವಾಲಿದೆ ಅನಿಸಿತು.

ಮಹಿಳೆಯರು ಮಾತ್ರವಲ್ಲ, ಅಭಿವೃದ್ಧಿ ಎನ್ನುವುದು ತಾಕಿಯೇ ಇಲ್ಲದ, ಸದಾ ನಿಟ್ಟುಸಿರಿನಲ್ಲಿ ಕೈ ತೊಳೆಯುತ್ತಿದ್ದವರ ಕಥೆಗೆ ದನಿಯಾಗಬೇಕು ಅನಿಸಿತು. ಆ ವೇಳೆ ಕ್ಯಾಮೆರಾ ಕಣ್ಣಿನ ಮೂಲಕ ಮಾತನಾಡುತ್ತಿದ್ದ ಕೆ ಸ್ಟಾಲಿನ್ ಜೊತೆಯಾದರು.

‘ವಿಡಿಯೋ ವಾಲಂಟಿಯರ್ಸ್’ ಸಂಸ್ಥೆ ತಲೆ ಎತ್ತಿತು.

ದೇಶದ ಮೂಲೆ ಮೂಲೆಗಳಲ್ಲಿ ಕ್ಯಾಮೆರಾ ಓಡಾಡಬೇಕು. ಯಾರೂ ಮುಟ್ಟದ ಪರ್ವತದ ತುದಿ, ಕೊರೆವ ಹಿಮರಾಶಿ, ಕಾಲಿಡಲಾಗದ ಘಟ್ಟಗಳು, ಓಡಾಡಲು ರಸ್ತೆ ಇರದ ತಾವುಗಳು ಎಲ್ಲೆಲ್ಲೂ ಕ್ಯಾಮೆರಾಗಳು ಅಲೆಯಬೇಕು. ಅದುವರೆಗೂ ಭಾರತ ಕೇಳಿಲ್ಲದ ನಿಟ್ಟುಸಿರ ಕಥೆಗಳನ್ನು ಹೇಳಬೇಕು ಎಂದು ಹಂಬಲಿಸಿದರು.

ಇಂದು ಭಾರತದ ಮೂಲೆ ಮೂಲೆಗಳಲ್ಲಿ ‘ವಿಡಿಯೊ ವಾಲಂಟಿಯರ್ಸ್’ ನ ಕಾರ್ಯಕರ್ತರಿದ್ದಾರೆ.

ಒಬ್ಬ ಆಟೋ ಚಾಲಕ, ಒಬ್ಬ ಕೂಲಿಯಾಳು, ಶಾಲೆ ಬಿಟ್ಟು ದಿಕ್ಕುಪಾಲಾಗಿದ್ದ ಹುಡುಗ, ಮದ್ಯವ್ಯಸನದ ವಿರುದ್ಧ ಹೋರಾಡಿದ ಮಹಿಳೆಯರು, ಸ್ಮಶಾನದಲ್ಲಿ ಮಣ್ಣು ಹೊರುತ್ತಿದ್ದ ಆಳು ಎಲ್ಲರೂ ಇಂದು ಈ ‘ವಿಡಿಯೋ ವಾಲಂಟೀರ್ಸ್’ನ ವರದಿಗಾರರು.

‘ಇವತ್ತು ಕುಗ್ರಾಮಗಳಲ್ಲಿ ವರದಿಗಾರರೆಲ್ಲಿದ್ದಾರೆ? ಅಲ್ಲಿನ ದನಿ ಯಾವ ಮಾಧ್ಯಮದಲ್ಲಿ ಬರುತ್ತಿದೆ ಹೇಳಿ? ಇವತ್ತು ಮಾಧ್ಯಮಗಳು ವರದಿಗಳನ್ನು ಹೊರತೆಗೆಯುವ ಮಾತನಾಡುತ್ತಿವೆ. ಆದರೆ ನಾವು ವರದಿಗಳನ್ನು ಹೊರಗೆ ಕಳಿಸುವ ಬಗ್ಗೆ ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ ಜೆಸ್ಸಿಕಾ ಮೇಬೆರ‌್ರಿ.

‘ಒಂದಲ್ಲಾ ಒಂದು ದಿನ, ಇಂದಲ್ಲಾ ನಾಳೆ ನಾವು ಈ ವಿಡಿಯೊ ಸಾಹಸವನ್ನು ಗ್ರಾಮೀಣ ಭಾರತದ ರಾಯ್ಟರ್ಸ್’ ಆಗಿ ಮಾಡುತ್ತೇವೆ. ಭಾರತದ ಎಲ್ಲ 625 ಜಿಲ್ಲೆಗಳಲ್ಲಿ ನಮ್ಮ ಕ್ಯಾಮೆರಾಗಳು ಓಡಾಡಬೇಕು’ ಎನ್ನುತ್ತಾರೆ.

‘ಅದು ಸಾಧ್ಯವಿಲ್ಲ’ ಎಂದು ಹೇಳುವ ಅವಕಾಶವನ್ನು ಈಗಾಗಲೇ ಊರೂರು ಅಲೆಯುತ್ತಿರುವ ಅವರ ಪ್ರತಿನಿಧಿಗಳು ತಪ್ಪಿಸಿಬಿಟ್ಟಿದ್ದಾರೆ.

ಮೇಲ್ಜಾತಿಯವರ ಮನೆಗಳ ಮುಂದೆ ಹಾದುಹೋಗಬೇಕಾದಾಗ ಚಪ್ಪಲಿ ಕಳಚಿ ಕೈನಲ್ಲಿ ಹಿಡಿದು ಹೋಗಬೇಕಾದ ಕಥೆ ರಾಜಸ್ಥಾನದ ಕುಗ್ರಾಮವೊಂದರಿಂದ ಹೊರಬೀಳುತ್ತದೆ.

ಮದ್ಯಪಾನ ಮಾಡಿ ಹಾಳಾದವರಿಗೆ ಪಾಠ ಕಲಿಸಲು ಮುಂದಾದ ಚಿಂಗಾರಿ ಮಹಿಳಾ ಸಮಿತಿಯ ಸಾಹಸ ಜಾರ್ಖಂಡ್ ನ ರಾಯಪುರದಿಂದ ಹೊರಬೀಳುತ್ತದೆ.

ಛತ್ತೀಸ್‌ಗಢದ ಎದೆಯಲ್ಲಿ ಹಾದು ಹೋಗುವ ರಸ್ತೆ ನಿರ್ಮಿಸಿದ 22 ಕೂಲಿಕಾರರಿಗೆ ಮೂರು ವರ್ಷವಾದರೂ ವೇತನ ನೀಡದ ಸರ್ಕಾರದ ಕಥೆ ಇನ್ನೊಂದು ಕುಗ್ರಾಮದಿಂದ ಎದ್ದು ನಿಲ್ಲುತ್ತದೆ.

ಜಾರ್ಖಂಡ್‌ನ ಕುಂಟಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳು ಕಳುವು ಮಾಡುತ್ತಿದ್ದವರ ಕಥೆ ಬಯಲಾಗುತ್ತದೆ. ಗಿರಣಿ ಧೂಳು ಕಾಡುತ್ತಿದ್ದಾಗ ಕ್ಯಾಮೆರಾ ಕಣ್ಣು ಅದರ ಸುತ್ತಾ ಹರಿದಾಡುತ್ತದೆ.

‘ವಿಡಿಯೊ ವಾಲಂಟಿಯರ್ಸ್’ಗಳು ಕ್ಯಾಮೆರಾ ಹಿಡಿದದ್ದೇ ಅವರ ಸುತ್ತಮುತ್ತಲಿನವರ ಬದುಕು ಹಸನಾಗಿದೆ. ಜತೆಗೆ ಆ ಕ್ಯಾಮೆರಾ ಹಿಡಿದವರ ಬದುಕೇ ಬದಲಾಗಿ ಹೋಗಿದೆ. ಅದುವರೆಗೂ ಅಸ್ಪಶ್ಯತೆಯ ಕಾರಣಕ್ಕೆ ದೇವಸ್ಥಾನದ ಒಳಗೆ ಹೋಗಲಾಗದ ಯುವಕನಿಗೆ ಕ್ಯಾಮೆರಾ ಹಿಡಿದಾಕ್ಷಣ ಸಲೀಸಾಗಿ ಪ್ರವೇಶ ದಕ್ಕುತ್ತದೆ.

ಎಷ್ಟೋ ಜನ ತಾವು ಬಾಲ್ಯದಲ್ಲಿ ಅನುಭವಿಸಿದ ನೋವು ಅಪಮಾನಗಳನ್ನು ಕ್ಯಾಮೆರಾ ಹಿಡಿದಾಕ್ಷಣ ನೆನಪು ಮಾಡಿಕೊಂಡಿದ್ದಾರೆ. ಅಂತಹ ವರದಿಗಳ ಬೆನ್ನು ಹತ್ತಿ ಹೋಗಿದ್ದಾರೆ.

ಶಾಲೆಗೆ ದಿನಗಟ್ಟಲೆ ಬಾರದ ಶಿಕ್ಷಕ ಮರಳಿ ಬರುವಂತೆ ಮಾಡುತ್ತದೆ. ಅತ್ಯಾಚಾರಕ್ಕೆ ಒಳಗಾದವರ ಕಥೆ ಸರ್ಕಾರದ ಕಣ್ಣಿಗೆ ರಾಚಿ ಕ್ರಮಕ್ಕೆ ಆಗ್ರಹಿಸುತ್ತದೆ. ನಿರಾಶ್ರಿತರಿಗೆ ಮನೆ ಕಟ್ಟುವಂತೆ ಮಾಡಿದೆ. ಆಸ್ಪತ್ರೆಗಳಿಗೆ ಶುಚಿತ್ವ, ಔಷಧ ಎರಡೂ ಬರುವಂತೆ ಮಾಡಿದೆ. ಮರಗಳ್ಳರು ಜೈಲು ಸೇರುವಂತೆ ಮಾಡಿದೆ.

ಈ ಕಥೆಗಳನ್ನು ಚಿತ್ರಿಸಿ ಡಬ್ಬಿಯಲ್ಲಿಟ್ಟರೆ ಯಾರ ಬದುಕು ಬದಲಾಗಲು ಸಾಧ್ಯ?

ಅದಕ್ಕಾಗಿ ಸಮುದಾಯ ವಿಡಿಯೊ ಕೇಂದ್ರಗಳನ್ನು ಸಷ್ಟಿಸಿದೆ. ಇವರು ತಯಾರಿಸುವ ಬಡತನತ ಕಥನಗಳನ್ನು ಈ ಕೇಂದ್ರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರದರ್ಶಿಸುತ್ತದೆ.

ತನ್ನ ಸುತ್ತಲಿನ ಹಳ್ಳಿಗಳ ಕಥೆಗಳನ್ನು ಕೇಂದ್ರೀಕರಿಸಿದ ವಿಡಿಯೊ ಮ್ಯಾಗಜಿನ್ ತಯಾರಿಸಿ ಪ್ರದರ್ಶಿಸುತ್ತದೆ. ವೆಬ್ ಸೈಟ್ ನಲ್ಲಿ ಪ್ರದರ್ಶಿಸುತ್ತದೆ. ತನ್ನ ಸಂಪರ್ಕಕ್ಕೆ ಬಂದವರಿಗೆ ದಿನಕ್ಕೊಂದು ವಿಡಿಯೋ ಮೇಲ್ ಮಾಡುತ್ತದೆ.

‘ಶ್ರೀಮಂತಿಕೆ ಹಾಗೂ ಬಡತನದ ನಡುವಣ ಕಂದರವನ್ನು ತಂತ್ರಜ್ಞಾನ ಇನ್ನಷ್ಟು ಹೆಚ್ಚಿಸುತ್ತಿದೆ. ಅದನ್ನು ತೊಡೆದು ಹಾಕುವುದೇ ನಮ್ಮ ಉದ್ದೇಶ’ ಎನ್ನುವ ಜೆಸ್ಸಿಕಾ ಕನಸು ನನಸಾಗುತ್ತಲೇ ಹೋಗುತ್ತಿದೆ.

ನಿಟ್ಟುಸಿರ ಕಥೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

VV Human Rights Organisation – Home