Saturday, May 9, 2026
Google search engine
Home Blog Page 192

ದಿನಭವಿಷ್ಯ

ಮೇಷ ರಾಶಿ ಭವಿಷ್ಯ 12 Jul 2020
ಇಂದು ನಿಮ್ಮ ಗಳಿಕೆಯ ಶಕ್ತಿಯು ಸುಧಾರಿಸುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಅವರ ಅವಶ್ಯಕತೆ ಅತ್ಯಂತ ಹೆಚ್ಚಿದ್ದಾಗ ನಿಮ್ಮನ್ನು ನಿರಾಸೆಗೊಳಿಸಬಹುದು. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ. ಬಿಡುವಿನ ವೇಳೆಯಲ್ಲಿ ನೀವು ಯಾವುದೇ ಚಲನಚಿತ್ರವನ್ನು ನೋಡಬಹುದು. ಅದೃಷ್ಟ ಸಂಖ್ಯೆ: 2

ವೃಷಭ ರಾಶಿ ಭವಿಷ್ಯ 12 Jul 2020
ಉತ್ತಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಪ್ರತಿಯೊಬ್ಬರೂ ಇಂದು ನಿಮ್ಮ ಸ್ನೇಹಿತರಾಗಬಯಸುತ್ತಾರೆ ಮತ್ತು ನಿಮಗೆ ಒತ್ತಡದ ಕ್ಷಣಗಳನ್ನು ತರುತ್ತಾರೆ.ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ ಭವಿಷ್ಯ 12 Jul 2020
ಇಂದು ಚೈತನ್ಯದಾಯಕ ದಿನವಾಗಿರುತ್ತದೆ ಮತ್ತು ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಮಕ್ಕಳು ನೀವು ಹೆಮ್ಮೆ ಪಡುವಂತೆ ಮಾಡಬಹುದು. ಪ್ರಯಾಣವು ನಿಮಗೆ ಮಾನಸಿಕ ಒತ್ತಡವನ್ನು ನೀಡಬಹುದು. ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ ಭವಿಷ್ಯ 12 Jul 2020
ಯಾರನ್ನಾದರೂ ಅಗೌರವದಿಂದ ಕಾಣುವುದು ಉಚಿತವಲ್ಲವೆಂದು ಅರ್ಥ ಮಾಡಿಕೊಳ್ಳವ ದಿನವಾಗಿದೆ. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ಸ್ನೇಹಿತರು ಮತ್ತು ಸಂಗಾತಿ ನಿಮಗೆ ಆರಾಮ ಮತ್ತು ಸಂತೋಷ ತರುತ್ತಾರೆ. ಯಾರಾದರೂ ನಿಮ್ಮನ್ನು ಶ್ಲಾಘಿಸಬಹುದು. ಅದೃಷ್ಟ ಸಂಖ್ಯೆ: 3

ಸಿಂಹ ರಾಶಿ ಭವಿಷ್ಯ 12 Jul 2020
ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ನಿಮ್ಮ ಮಕ್ಕಳು ಜೊತೆ ನಿಮ್ಮ ಅಮೂಲ್ಯ ಸಮಯ ಕಳೆಯಿರಿ. ಇದು ಚಿಕಿತ್ಸೆಯ ಅತ್ಯುತ್ತಮ ಆನಂದದ ಮೂಲವಾಗಿರುತ್ತದೆ ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ ಭವಿಷ್ಯ 12 Jul 2020
ಇಂದು ಯಾವುದೇ ಕೆಲಸ ಮಾಡಿದರೂ ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತ ನಿಮಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ಅದೃಷ್ಟ ಸಂಖ್ಯೆ: 8

ತುಲಾ ರಾಶಿ ಭವಿಷ್ಯ 12 Jul 2020
ಮಾನಸಿಕ ಭಯ ಕಾಡಬಹುದು.ಇಂದು ಯಾವುದೇ ವಿರುದ್ಧ ಲಿಂಗದ ಸಹಾಯದಿಂದ ನೀವು ವ್ಯಾಪರ ಅಥವಾ ಉದ್ಯೋಗದಲ್ಲಿ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ. ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ ಭವಿಷ್ಯ 12 Jul 2020
ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ. ಇಂದು ನೀವು ಕಚೇರಿಯಿಂದ ಮನೆಗೆ ಹಿಂತಿರುಗಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡಬಹುದು. ಇದರಿಂದ ನಿಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ ಉತ್ತಮ ಆಹಾರ, ಪ್ರಣಯದ ಕ್ಷಣಗಳು; ಇವೆಲ್ಲವನ್ನೂ ನೀವು ಇಂದು ನಿರೀಕ್ಷಿಸಬಹುದಾಗಿದೆ. ಅದೃಷ್ಟ ಸಂಖ್ಯೆ: 4

ಧನು ರಾಶಿ ಭವಿಷ್ಯ 12 Jul 2020
ನಗು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಇಂದು ಹಣದ ನಷ್ಟವು ಸಂಭವಿಸಬಹುದು. ಆದ್ದರಿಂದ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಷ್ಟು ಜಾಗರೂಕರಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ ಯಾವುದಾದರೂ ಐತಿಹಾಸಿಕ ಸ್ಮಾರಕಕ್ಕೆ ಒಂದು ಸಣ್ಣ ಪ್ರಯಾಣವನ್ನು ಯೋಜಿಸಿ. ಅದೃಷ್ಟ ಸಂಖ್ಯೆ: 1

ಮಕರ ರಾಶಿ ಭವಿಷ್ಯ 12 Jul 2020
ಕೆಲಸದ ಒತ್ತಡ ನಿಮ್ಮನ್ನು ಉದ್ವಿಗ್ನಗೊಳಿಸುವಂತೆ ತೋರುತ್ತದೆ. ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಹೆಜ್ಜೆಯನ್ನು ಹಾಕುವ ಅಗತ್ಯವಿದೆ , ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು. ನಿಮ್ಮ ಪ್ರೀತಿಪಾತ್ರರಿಂದ ಬರುವ ಸಂದೇಶ ಇಂದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.ಅದೃಷ್ಟ ಸಂಖ್ಯೆ: 9

ಕುಂಭ ರಾಶಿ ಭವಿಷ್ಯ 12 Jul 2020
ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಸ್ಥಿತಿ ಉತ್ತಮವಾಗಲಿದೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು.ಅದೃಷ್ಟ ಸಂಖ್ಯೆ: 7

ಮೀನ ರಾಶಿ ಭವಿಷ್ಯ 12 Jul 2020
ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ. ನಿಕಟ ಸಂಬಂಧಿಗಳ ಮನೆಗೆ ಹೋಗುವುದರಿಂದ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು. ಪ್ರೀತಿಪಾತ್ರರು ಇಂದು ನಿಮ್ಮ ಯಾವುದೇ ಮಾತಿನಿಂದ ಕೋಪಗೊಳ್ಳಬಹುದು. ವ್ಯಾಪಾರ ಸಹವರ್ತಿಗಳು ಬೆಂಬಲ ನೀಡುತ್ತಾರೆ ಮತ್ತು ನೀವು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಒಟ್ಟಿಗೆ ಕೆಲಸ ಮಾಡುತ್ತೀರಿ. ಅದೃಷ್ಟ ಸಂಖ್ಯೆ: 5

ಬೆಂಗಳೂರು ಒಂದು ವಾರ ಲಾಕ್ ಡೌನ್…

ತುಮಕೂರು

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಜುಲೈ 14 ರ ಮಂಗಳವಾರ ರಾತ್ರಿ 8.00 ಗಂಟೆಯಿಂದ 1 ವಾರಗಳ ಕಾಲ ಅಂದರೆ ಜುಲೈ 23 ರ ಬೆಳಿಗ್ಗೆ 5.00 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ,ಹಾಲು, ಹಣ್ಣು, ತರಕಾರಿ, ಔಷದಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ.

ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.

ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸರ್ಕಾರ ಹೊರಡಿಸುವ ಲಾಕ್ ಡೌನ್ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಿ.

ಲಾಕ್‍ಡೌನ್ ಸಂಧರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಕೈ ಜೋಡಿಸಿ. ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರಳು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಪೋಲಿಸ್ ಸಿಬ್ಬಂದಿಗಳು ಹಾಗೂ ಎಲ್ಲಾ ಅಧಿಕಾರಿಗಳು, ಸ್ವಯಂ ಸೇವಕರು ಮನೆ ಮನೆಗೂ ಕೋವಿಡ್-19 ಕುರಿತು ಮಾಹಿತಿ ನೀಡುತ್ತಿರುವ ಪತ್ರಕರ್ತರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಅಭಿನಂದನಿಸುವುದಾಗಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಬಾಲಕನನ್ನು ಹೊತ್ತೂಯ್ದ ಚಿರತೆ

Publicstory


ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ರಾಜೇಂದ್ರಪುರದ ಕಟ್ಟೆಬಳಿ
ಆಟವಾಡುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಕಾರಣ ಬಾಲಕ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಮೃತಪಟ್ಟ ಬಾಲಕ ಚಂದು (4) ತಾಯಿ ದೋಡ್ಡೀರಮ್ಮನ ಜತೆ ಗ್ರಾಮದ ಕಟ್ಟೆ ಬಳಿ ಬಟ್ಟೆ ಹೊಗೆಯಲು ಹೋಗಿದ್ದು, ತಾಯಿ ಬಟ್ಟೆ ಹೊಗೆಯುತ್ತಿದ್ದು, ಪಕ್ಕದಲ್ಲಿ ಆಟವಾಡುತ್ತಿದ್ದ
ಚಂದುವಿನ ಮೇಲೆ ಕಟ್ಟೆ ಪಕ್ಕದಲ್ಲಿರು ಅರಣ್ಯ ಪ್ರದೇಶದಿಂದ ಬಂದ ಚಿರತೆ ದಾಳಿ ಮಾಡಿ
ಎಳೆದೊಯ್ದಿದೆ.

ಮಗುವಿನ ಚಿರಾಟ ಕಂಡು ತಾಯಿ ಮತ್ತು ಸ್ಥಳದಲ್ಲಿದ್ದ ಶಿವಣ್ಣ
ಹಿಂಬಾಲಿಸಿ ಬೆದರಿಸಿದಾಗ ಸ್ವಲ್ಪ ದೂರದಲ್ಲಿ ಚಿರತೆ ಮಗುವನ್ನು ಬಿಟ್ಟು ಹೋಗಿದೆ.

ತಾಯಿ ಹೋಗಿ ನೋಡುವ ಸಮಯದಲ್ಲಿ ಮಗು ಮೃತಪಟ್ಟಿದೆ.

ತುಮಕೂರು: 453ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 25 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.   ಒಟ್ಟು ಸೋಂಕಿತರ ಸಂಖ್ಯೆ 453 ಕ್ಕೆ ತಲುಪಿದೆ.

ತುಮಕೂರಿನಲ್ಲಿ 12 ಮಂದಿಗೆ, ಶಿರಾ 6, ಪಾವಗಡ 3, ಕುಣಿಗಲ್ 1, ಮಧುಗಿರಿ 1, ತಿಪಟೂರು 1, ಗುಬ್ಬಿ ಒಬ್ಬರಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ.

ಪಾವಗಡ: 81 ಸಾವಿರ ಮೌಲ್ಯದ ಮದ್ಯ ವಶ

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ಹುಸೇನ್ ಪುರ ಬಳಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ 4 ಮಂದಿ ಆರೋಪಿಗಳನ್ನು ತಿರುಮಣಿ ಪೊಲೀಸರು ಬಂಧಿಸಿದ್ದಾರೆ.

5 ದ್ವಿಚಕ್ರ ವಾಹನಗಳಲ್ಲಿ ಚೀಲಗಳಲ್ಲಿ ತುಂಬಿಕೊಂಡು ಆರೋಪಿಗಳು ಮದ್ಯ ಸಾಗಿಸುತ್ತಿದ್ದ ವಿಚಾರ ತಿಳಿದು ಪೊಲೀಸರು ಧಾಳಿ ನಡೆಸಿದ್ದಾರೆ.  ತಾಲ್ಲೂಕಿನ ನಾಗೇನಹಳ್ಳಿ ತಾಂಡದ ರಾಮಾಂಜಿನಾಯ್ಕ, ಲಕ್ಷ್ಮಾನಾಯ್ಕ, ಆಂಧ್ರ ಪ್ರದೇಶದ  ಧರ್ಮವರಂ   ಮಾರುತಿ, ವಿಜಯಕುಮಾರ್ ಬಂಧಿತರು.  ಇದೇ ತಂಡದಲ್ಲಿದ್ದ   ಮತ್ತೊಬ್ಬ ಆರೋಪಿ ಅಕ್ಕಲಪ್ಪ  ಪರಾರಿಯಾಗಿದ್ದಾರೆ.    ಆರೋಪಿಗಳ ಬಳಿಯಿದ್ದ 81 ಸಾವಿರ ಮೌಲ್ಯದ, 185.76 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಚರಣೆ ನಡೆಸಿದ ತಂಡದಲ್ಲಿ  ಸಿ.ಪಿ.ಐ  ವೆಂಕಟೇಶ್,  ಸಬ್ ಇನ್ ಸ್ಪೆಕ್ಟರ್ ಗುರುನಾಥ್, ಎ.ಎಸ್,ಐ ರಾಮಾಂಜಿನೇಯ,  ಸಿಬ್ಬಂದಿ ಸತೀಶ್, ನಾಗೇಂದ್ರ ಪ್ರಸಾದ್, ಪ್ರವೀಣ್, ಪುಂಡಲೀಕ ಲಮಾನಿ, ಭಗವಾನ್, ನರಸಿಂಮೂರ್ತಿ ಇತರೆ ಸಿಬ್ಬಂದಿ ಇದ್ದಾರೆ.

 

ಸುರೇಶಗೌಡರೇ ಇದು ನಿಮಗೆ ತರವೇ?

0

ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಗೌಡ ಅವರು ಮಾಜಿ ಶಾಸಕರಿಗೆ ಬರೆದಿರುವ ಪತ್ರದ ಯಥಾರೂಪ.


ಸನ್ಮಾನ್ಯ ಬಿ. ಸುರೇಶ್ ಗೌಡರವರೇ ನಿಮ್ಮ ಅವಧಿಯಲ್ಲಿ ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೀರಿ, ಕೆಲವೊಂದು ಕೆಲಸಗಳನ್ನು ನೋಡಿ & ಹಿರಿಯರಾದ ನಿಮ್ಮ ಮೇಲೆ ನಮಗೂ ಗೌರವವಿದೆ. ಈ ಪತ್ರವನ್ನು ರಾಜಕೀಯ ಉದ್ದೇಶದಿಂದ ಬರೆಯುತ್ತಿಲ್ಲಾ ಎಂದು ಮೊದಲು ನಿಮ್ಮ ಗಮನಕ್ಕೆ ತರುತ್ತೇನೆ.

ಕೆಲವು ದಿನಗಳಿಂದ ನಿಮ್ಮ ನಡವಳಿಕೆ ಹೇಗಿದೆ ಎಂದರೇ,
ನಿಮ್ಮ ನಡೆಯನ್ನು ಜನರು ಪ್ರಶ್ನಿಸುವ ಮುಂಚೆ ನೀವೇ ಬದಲಾದರೆ ತುಂಬಾ ಒಳ್ಳೆಯದು. ಕಾರಣವಿಷ್ಟೆ ನೆನ್ನೆ ತುಮಕೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ನಿಮ್ಮ ಪಕ್ಷದ ಸದಸ್ಯರೊಬ್ಬರಿಗೆ ನೀಡಿರುವುದು ತುಂಬಾ ಸಂತೋಷದ ವಿಷಯ ಹಾಗೂ ಅದಕ್ಕೆ ಮೊದಲನೆಯದಾಗಿ ಶುಭಾಶಯವನ್ನು ಕೋರುತ್ತೇನೆ.

ಇನ್ನುಳಿದಂತೆ ಇಡೀ ವಿಶ್ವಕ್ಕೆ ವಿಶ್ವವೇ ಕೊರೋನಾ ಕ್ರೌರ್ಯಕ್ಕೆ ತಲ್ಲಣಿಸಿದೆ ಇದಕ್ಕೆ ತುಮಕೂರು ಕೂಡಾ ಹೊರತಲ್ಲಾ. ಕಳೆದ ಮೂರ್ನಾಲ್ಕು ತಿಂಗಳಿಂದ ನೀವೂ ಕೂಡಾ ಕೊರೋನಾ ನಿರ್ವಹಣೆಯಲ್ಲಿ ತಾವು ನಿಮ್ಮ ಕೈಲಾದ ಸೇವೆ ಮಾಡಿದ್ದೀರಾ.

ತಾವು ಹೋದ ಕಡೆಯಲೆಲ್ಲಾ ಪ್ರಧಾನಿ ಮೋದಿಯವರ ಆದೇಶವನ್ನು ನಾವೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ನಿರ್ವಹಣೆ ಮಾಡಬಹುದೆಂದು, ಯಾರೂ ಹೊರ ಬರದಂತೆ ಸೋಂಕನ್ನು ತಡೆಗಟ್ಟಬಹುದೆಂದು, ಸಾಮಾಜಿಕ ಅಂತರ ಕಾಯ್ದುಕೊಂಡರೇ ಸೋಂಕು ಹಕಡುವುದಿಲ್ಲವೆಂದು ವೈಭವೋಪೇರಿತವಾಗಿ ಭಾಷಣಗಳನ್ನು ಮಾಡುತ್ತಾ, ಜನಪರ ಕಾಳಜಿ ಮೆರೆದದ್ದು ನೀವಾ ಇಲ್ಲಾ ಯಾರು..? ಎನ್ನುವ ಪ್ರಶ್ನೆ ನನಗೆ ಮೂಡುತ್ತಿದೆ.

ನೆನ್ನೆ ನಡೆದ ತುಮಕೂರು ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮುಂಜಾಗ್ರತಾ ಕ್ರಮ ವಿಲ್ಲದೆ ತಾವು ವಿಜಯೋತ್ಸವವನ್ನು ಆಚರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ನೀವೇ ಪ್ರಶ್ನಿಸಿಕೊಳ್ಳಿ..?

ಹಾಗಿದ್ದ ಮೇಲೆ ನೀವು ಹಿಂದೆಲ್ಲಾ ಮಾಡಿದಂತಹ ಸೇವೆ, ಜಾಗೃತಿಯ ಭಾಷಣ ಅದೆಲ್ಲವೂ ನಾಟಕವೇ.? ಹೀಗೆ ಆಡುವ ಮಾತೊಂದು ನಡೆಯುವ ರೀತಿಯೊಂದು ಆದರೇ ಹೇಗೆ..? ಅವಿದ್ಯಾವಂತರೂ ಮಾಡದೇ ಇರುವ ಕೆಲಸಕ್ಕೆ ನೀವು ಮಾಡಿದ್ದೀರಲ್ಲಾ ನಿಮ್ಮ ಈ ನಾಟಕೀಯ ಮುಖವಾಡದ ನಡಿಗೆಯನ್ನು ಖಂಡಿಸುತ್ತೇನೆ.

ರಾಜಕಾರಣವು ಇಂದು ಇರುತ್ತದೆ, ನಾಳೆಯೂ ಇರುತ್ತದೆ. ಆದರೆ ಮಾತಿನಂತೆ ತಾವೇ ನಡೆದುಕೊಳ್ಳದಿದ್ದರೇ ಹೇಗೆ.? ತಾವೊಬ್ಬ ಜನಪ್ರತಿನಿಧಿಯಾಗಿ 10 ವರ್ಷ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕ ಸ್ಥಾನವನ್ನು ಅಲಂಕರಿಸಿದ್ದೀರಿ, ಅಧಿಕಾರ ಅನುಭವಿಸಿದ್ದೀರಿ.

ರಾಜಕಾರಣಕ್ಕೊಸ್ಕರ ನೀವು ಹೇಗೆಂದರೇ ಹಾಗೇ ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ನಿಮ್ಮ ಮಾತನ್ನು ನಿಮ್ಮ ನಡವಳಿಕೆಯನ್ನು ತುಲನೆ ಮಾಡಿದಾಗ ನೀವು ಮಾತಿನಂತೆ ನಡೆದುಕೊಳ್ಳುವುದಿಲ್ಲಾ ಎಂಬುದು ಅಕ್ಷರಸಹ ಸತ್ಯವಾಯಿತು. ನಿಮ್ಮಂತವರನ್ನು ನೋಡಿಯೇ 12ನೇ ಶತಮಾನದಲ್ಲಿ ಬಸವಣ್ಣನವರು ಒಂದು ಸೊಗಸಾದ ವಚನವನ್ನು ಹೇಳಿದ್ದಾರೆ. ಈ ವಚನವನ್ನು ಓದಿಯಾದರೂ ಬದಲಾಗಿ.

ನೂರನೋದಿ ನೂರಕ್ಕೆರಿದರೇನು ಫಲ,
ಆಸೆ ಅರಿಯದು ರೋಷ ಬಿಡದು,
ಮಜ್ಜನಕ್ಕೆರೆದು ಫಲವೇನು..?
ಮಾತಿನಂತೆ ಮನವಿಲ್ಲದವರ ಜಾತಿ-ಡೊಂಬರವ
ನೋಡಿ ನಗುವ ನಮ್ಮ ಕೂಡಲಸಂಗಮದೇವಾ ।।

ನಿಮಗೆ ಈ ವಚನ ಹೇಳಿ ಮಾಡಿಸಿದಂತಿದೆ. ಇನ್ನು ಮುಂದಾದರೂ ರಾಜಕೀಯವನ್ನು ಹೊರತುಪಡಿಸಿ, ರಾಜಕೀಯ ಜೀವನ ಒಂದುಕಡೆ ಅದನ್ನು ಮೀರಿದ ಸಾಮಾಜಿಕ ಜೀವನದಲ್ಲಿ ನೀವು ಜನಸ್ನೇಹಿಯಾಗಿ ಸಮಾಜದ ಒಳಿತಿಗಾಗಿ ತುಡಿಯಬೇಕು. ಸರ್ಕಾರದ ಆದೇಶವನ್ನು ನೀವು ಮೊದಲು ಪಾಲಿಸಿ, ಜೊತೆಗೆ ಸಾಮಾಜಿಕ ಜೀವನದಲ್ಲಿ ಮಾತಿನಂತೆ ನಡೆದುಕೊಳ್ಳಿ ಎಂದು ನಾನು ಈ ಮೂಲಕ ನಿಮ್ಮನ್ನು ಮನವಿ ಮಾಡಿಕೊಳ್ಳುತ್ತೇನೆ.

ನಿಮ್ಮ ಈ ನಡೆ ನಿಮ್ಮ ಹಿಂಬಾಲಕರನ್ನು ನೀವೇ ದಿಕ್ಕು ತಪ್ಪಿಸಿದಂತಾಗುತ್ತದೆ, ಸಮಾಜದ ಸ್ವಾಸ್ಥ್ಯ ಕೆಡಿಸಿದಂತಾಗುತ್ತದೆ, ಗೌರವಯುತವಾಗಿ ನಡೆದುಕೊಳ್ಳಬೇಕಾದ ನೀವು ಈ ರೀತಿಯ ಲಜ್ಜೆಗೇಡಿ ಪ್ರದರ್ಶನವ ಮಾಡಿದರೇ ಸಮಾಜಕ್ಕೆ & ಹಿಂಬಾಲಕರಿಗೆ ಯಾವ ಸಂದೇಶ ಕೊಡುತ್ತೀರಾ..?

ಇಷ್ಚು ದಿನ ಕ್ಷೇತ್ರದಲ್ಲಿ ನೀವು ಮಾಡಿದ್ದು ನಾಟಕವೇ ಎಂದು ನೆನೆದು ದಿಗ್ಬ್ರಾಂತನಾದೆ. ನಾನು ವಯಸ್ಸಿನಲ್ಲಿ ನಿಮಗಿಂತ ತುಂಬಾ ಕಿರಿಯನು ನನಗನಿಸಿದ್ದನ್ನು ನೇರವಾಗಿ ಹೇಳಿದ್ದೇನೆ ತಿದ್ದಿಕೊಂಡರೆ ನಿಮ್ಮ ಭವಿಷ್ಯಕ್ಕೆ ಒಳಿತು.

ವಂದನೆಗಳೊಂದಿಗೆ,

ಕೆ.ಬಿ ದಯಾನಂದ ಗೌಡ (ಹೆಬ್ಬೂರು ದೀಪುಗೌಡ).
ರಾಜ್ಯ ಪ್ರಧಾನ ಕಾರ್ಯದರ್ಶಿ
ಜೆಡಿಎಸ್ ಯುವ ಘಟಕ.

ಟಿ ಆರ್ ಪಿ ರೇಸ್ ನಲ್ಲಿ ಕುದುರೆ ಮುಂದಿರಬೇಕು ಅಷ್ಟೇ..

ಜಿ.ಎನ್.ಮೋಹನ್


‘ಈಟಿವಿ’ ಬೆಂಗಳೂರು ಮುಖ್ಯಸ್ಥರಾಗಿದ್ದ, ಗೆಳೆಯ ರಂಗನಾಥ ಮರಕಿಣಿ ನನಗೆ ಫೋನ್ ಮಾಡಿದಾಗ ರಾತ್ರಿ 11 ಗಂಟೆ.

‘ಸಾರ್ ಇನ್ನರ್ಧ ಗಂಟೆಯೊಳಗೆ ಮೈಸೂರಿನಲ್ಲಿ ಒಂದು ಎನ್ ಕೌಂಟರ್ ನಡೆಯುತ್ತೆ, ನಮ್ಮ ಟೀಂನ ಅಲರ್ಟ್ ಮಾಡಿ’ ಅಂದ.

ಅರೆ! ಇನ್ನರ್ಧ ಗಂಟೆಯೊಳಗೆ ಎನ್ ಕೌಂಟರ್ ಆಗುತ್ತದೆ ಎನ್ನುವುದು ಗೊತ್ತಾಗುವುದಾದರೂ ಹೇಗೆ?

ಅದು ಇನ್ನರ್ಧ ಗಂಟೆಯಲ್ಲಿ ಈ ರೋಡಿನಲ್ಲಿ ಆಕ್ಸಿಡೆಂಟ್ ಆಗಿ ನಾಲ್ಕು ಜನ ಸಾಯುತ್ತಾರೆ ಅಂತ ಹೇಳೋ ಥರಾನೇ.

ಯಾವ ಜ್ಯೋತಿಷಿ ಎಷ್ಟೇ ಕವಡೆ ಹಾಕಿದರೂ ಇಂತಹ ನಿಚ್ಚಳ ಭವಿಷ್ಯ ಹೇಳಲು ಸಾಧ್ಯವೇ ಇಲ್ಲ.

ಆದರೂ ಇದು ‘ನ್ಯೂಸ್’ ವಿಷಯ. ರಿಸ್ಕ್ ತೆಗೆದುಕೊಳ್ಳುವಂತಿಲ್ಲ. ನಿಂಗೆ ಹೇಗೆ ಗೊತ್ತಾಯ್ತು..? ಅಂತ ಕೇಳುವುದು ನ್ಯೂಸ್ ಬಿಸಿನೆಸ್ ನಲ್ಲಿ ಮೊದಲ ಮೂರ್ಖತನ.

ಹಾಗಾಗಿ ಮೈಸೂರಿನಲ್ಲಿದ್ದ ಟೀಂಗೆ ರೆಡಿ ಇರಲು ಹೇಳಿದೆ. ವರದಿಗಾರ, ಕ್ಯಾಮರಾಮನ್, ಟೆಕ್ನೀಶಿಯನ್ ಎಲ್ಲರೂ ‘ಆನ್ ದಿ ಟೋಸ್’ ಇದ್ದರು.

ಮರಕಿಣಿ ಮತ್ತೆ ಫೋನ್ ಮಾಡಿದಾಗ 11.45. ಈಗ ನಮ್ಮ ಟೀಂ ರೀಂಗ್ ರೋಡಿಗೆ ಹೋಗಲಿ, ಅಲ್ಲಿ ಎನ್ ಕೌಂಟರ್ ಆಗುತ್ತೆ ಅಂದ.

ಆಶ್ಚರ್ಯ, ಆದರೂ ನಿಜ.

ಲಷ್ಕರ್ ಎ ತೊಯಿಬಾ ತಂಡದೊಂದಿಗೆ ಗುಂಡಿನ ಚಕಮಕಿ ನಡೆದು ಶಂಕಿತ ಉಗ್ರಗಾಮಿಗಳು ಬಂಧಿಸಲ್ಪಟ್ಟರು.

ಮರುಕ್ಷಣ ‘ಈಟಿವಿ’ಯ ನ್ಯೂಸ್ ಈ ಎಕ್ಸ್ ಕ್ಲೂಸಿವ್ ಸುದ್ದಿಯನ್ನು ದೊಡ್ಡ ದನಿಯಲ್ಲಿ ಬಿತ್ತರಿಸುತ್ತಿತ್ತು.

ಮೊನ್ನೆ ಗೆಳೆಯರೊಬ್ಬರಿಗೆ ಬೇಕಾಗಿದ್ದ ಪುಸ್ತಕ ಹುಡುಕಲು ನನ್ನ ಮಾಧ್ಯಮ ಪುಸ್ತಕ ಸಂಗ್ರಹಕ್ಕೆ ಕೈಹಾಕಿದೆ.

ನೂರೆಂಟು ಕಟ್ಟುಗಳನ್ನು ಹುಡುಕುತ್ತಿದ್ದಾಗ ಕೈಗೆ ತಾಕಿದ್ದು ವೈಎನ್ ಕೆ ಅವರ ‘ಇದು ಸುದ್ದಿ ಇದು ಸುದ್ದಿ’.

ಓದಿದಾಗ ಕಾಲಕೋಶದಲ್ಲಿ ಕೂತು ಬಟನ್ ಒತ್ತಿ ಸುಂಯ್ಯನೆ ಮೂರು ದಶಕ ಹಿಂದಕ್ಕೆ ಸರಿದಂತಾಯಿತು.

ಹೌದಲ್ಲಾ?.. ಸುದ್ದಿ ಎಷ್ಟೊಂದು ಬದಲಾಗಿ ಹೋಗಿದೆ ಎನಿಸಿತು.

ಮೈಸೂರಿನ ಸುದ್ದಿಗೆ ನಾವು ಕೊಟ್ಟ ಬಣ್ಣ ಎಷ್ಟು.. ನಮಗೆ ಹೇಗೆ ಫೋನ್ ಕರೆ ಬಂತು? ಹೇಳಿದ್ದೇನು? ನಂತರ ನಮ್ಮ ಟೀಂ ರೆಡಿ ಮಾಡಿದ್ದು ಹೇಗೆ? ಅವರು ಹೇಳಿದ ಜಾಗ ಹೇಗೆ ತಲುಪಿಕೊಂಡರು? ಎನ್ ಕೌಂಟರ್ ಜಾಗ, ಅಲ್ಲಿದ್ದ ಗುಂಡು, ಶಸ್ತ್ರಾಸ್ತ್ರ, ಪೊಲೀಸ್ ಜೀಪ್ ಗಳ ಸದ್ದು, ಕೆಂಪುದೀಪ..

ಪಕ್ಕಾ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ ಹಾಗೆ. ಬಯಸಿದ್ದು ಸಿಕ್ಕಿಹೋಗಿತ್ತು. ಅಂದಿನ ಟಿಆರ್ ಪಿ ಸರ್ರನೇ ಮೇಲೇರಿತ್ತು.

ಸುದ್ದಿ ಇವತ್ತು ಸುದ್ದಿಯಾಗಿ ಮಾತ್ರ ಉಳಿದಿಲ್ಲ. ಅದು ಮನರಂಜನೆಯೂ ಆಗಿ ಬದಲಾಗಿ ಹೋಗಿದೆ.

‘ಮೈಸೂರಿನ ರಿಂಗ್ ರೋಡಿನಲ್ಲಿ ಎನ್ ಕೌಂಟರ್: ಇಬ್ಬರ ಬಂಧನ’ ಎನ್ನುವ ಸುದ್ದಿಯ ಶೈಲಿ ಈಗ ಪತ್ರಿಕೆಗೆ ಪ್ರಸಾರವನ್ನೂ ತರುವುದಿಲ್ಲ. ಚಾನಲ್ ಗೆ ಟಿಆರ್ ಪಿಯನ್ನೂ ದಕ್ಕಿಸಿಕೊಡುವುದಿಲ್ಲ.

ಈಗ ಹೆಚ್ಚು ಪ್ರಸಾರ, ಹೆಚ್ಚು ಟಿಆರ್ ಪಿ ಬೇಕು ಎಂದರೆ ಹೆಚ್ಚು ಸದ್ದು ಮಾಡಬೇಕು. ಸುದ್ದಿ ಮತ್ತು ಸದ್ದು ಕೈಹಿಡಿದರೆ ಮಾತ್ರ ನಂಬರ್ 1 ಸ್ಥಾನ.

‘ಈಟಿವಿ’ಯಲ್ಲಿ ಕೆ ಎಂ ಮಂಜುನಾಥ್ ಮುಖ್ಯಸ್ಥರಾಗಿದ್ದಾಗಲೇ ನನಗೆ ಈ ಸದ್ದಿನ ಮಹತ್ವ ಗೊತ್ತಾಗಿದ್ದು. ಚಿಕ್ಕಮಗಳೂರಿನ ಕಾಡುಗಳಲ್ಲಿ ಗುಂಡಿನ ಸದ್ದು ಕೇಳಿದೆ ಎಂಬ ಸುದ್ದಿ ತೇಲಿಬಂತು.

ಮಂಜುನಾಥ್ ಇದನ್ನು ಕೈಗೆತ್ತಿಕೊಂಡವರೇ ಬೇಕಾದ ಎಲ್ಲಾ ಮಸಾಲೆ ಅರೆದರು. ಅಬ್ಬರ, ಸದ್ದು ಎಲ್ಲಾ ಸೇರಿಕೊಂಡಿತು. ಪರಿಣಾಮ ಸಿಕ್ಕೆಡೆಯೆಲ್ಲಾ ಈ ಸುದ್ದಿ ಚರ್ಚೆಯಾಗಿ ಹೋಯಿತು.

‘ಟಿವಿ9’ ರಾಯಚೂರಿನ ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಎತ್ತುವ ಪ್ರಕರಣದ ನೇರ ಪ್ರಸಾರಕ್ಕೆ ಮುಂದಾದಾಗ ಆ ಚಾನಲ್ ಗೆ ತಾನು ಕೇವಲ ಮಗುವನ್ನು ಮಾತ್ರ ಮೇಲಕ್ಕೆತ್ತುತ್ತಿಲ್ಲ, ಪಾತಾಳದಲ್ಲಿ ಹುದುಗಿ ಹೋಗಿರುವ ತನ್ನ ಟಿಆರ್ ಪಿಯನ್ನೂ ಮೇಲಕ್ಕೆತ್ತುತ್ತಿದ್ದೇನೆ ಎಂಬುದು ಗೊತ್ತಿತ್ತು.

ಒಂದು ಸಾಹಸ, ಒಂದು ಸಸ್ಪೆನ್ಸ್, ಜೀವನ್ಮರಣದ ನಡುವಿನ ಉಯ್ಯಾಲೆ, ಕ್ಷಣ ಕ್ಷಣದ ಕುತೂಹಲ, ಹತಾಶೆ ಎಲ್ಲವೂ ಇದ್ದ ಈ ಸುದ್ದಿಗಿಂತ ಟಿಆರ್ ಪಿ ತಂದುಕೊಡುವ ಮತ್ತೊಂದು ಸುದ್ದಿ ಸಿಗಲು ಸಾಧ್ಯವೇ ಇರಲಿಲ್ಲ.

ಬೆಂಗಳೂರಿನ ದಿಕ್ಕು ದಿಕ್ಕುಗಳಲ್ಲಿ ಸ್ಫೋಟಕ ಇಟ್ಟಾಗ ಅದನ್ನು ದೊಡ್ಡ ದನಿಯಲ್ಲಿ, ಉಸಿರುಗಟ್ಟಿ ಹೇಳಿದರೆ ಮಾತ್ರ ಸುದ್ದಿ.

ಎರಡನೇ ಮದುವೆಯಲ್ಲಿ ಸಿಕ್ಕಿಹಾಕಿಕೊಂಡಾತನಿಗೆ ಬೀಳುವ ಒದೆ ನೇರಾನೇರ ನೋಡಬಹುದು.

ರೈಲ್ವೆ ಇಲಾಖೆ ಪರೀಕ್ಷೆ ಬರೆಯುವವರ ಮೇಲೆ ನಡೆಯುವ ದಾಳಿ ಚಾನಲ್ ಗುಂಡಿ ಒತ್ತಿದರೆ ‘ಬಿಲ್ಕುಲ್ ಮುಫ್ತ್’.

ತಮ್ಮ ಆಫೀಸ್ ಮೇಲೆ ನಡೆಯುವ ದಾಳಿಯೂ ನೇರಾ ನೇರ ನಿಮ್ಮ ಮನೆಯಂಗಳಕ್ಕೆ.

ಆ ಕ್ಷಣದಲ್ಲೇ ಸುದ್ದಿ ಒದಗಿಸುವ ಧಾವಂತದಲ್ಲಿ ಮೊದಲು ಬಲಿಯಾದದ್ದು-ನಿಖರತೆ.

ಚಾನಲ್ ಗಳಲ್ಲಿ ಈ ಸಮಸ್ಯೆಯಾದರೆ ಪತ್ರಿಕೆಗಳಿಗೆ ಸುದ್ದಿ ಎನ್ನುವುದು ಚಾನಲ್ ಗಳಿಂದಾಗಿ ಇಷ್ಟೊಂದು ತಂಗಳಾಗಿ ಹೋಯಿತಲ್ಲ ಎಂಬ ಚಿಂತೆ.

ಸುದ್ದಿ, ಮನರಂಜನೆಯ ಜೊತೆ ಮಿಲಾಕತ್ ಅದದ್ದು ಈ ಹಂತದಲ್ಲೇ.

ಇದಕ್ಕೆ Infotainment ಎನ್ನುವ ಗೌರವದ ಹೆಸರೂ ಬಂತು. ಮಸಾಲೆ ದೋಸೆ ಹಾಗೂ ಬರ್ಗರ್ ಎರಡೂ ಸೇರಿದ್ರೆ ಯಾವ ರುಚಿ ಇರುತ್ತೆ ಅದೇ ಥರಾ ಈಗಿನ ಸುದ್ದಿ ಸಹ ಅಂತ ವಿಶ್ಲೇಷಣೆ ಸಿಗ್ತು.

ಮುಖ್ಯಮಂತ್ರಿಗಳನ್ನ ಪೊಲಿಟಿಕಲ್ ರಿಪೋರ್ಟರ್ ಸಂದರ್ಶನ ಮಾಡೋದು ಹಳೆ ಸ್ಟೈಲಾಗಿ ಹೋಯ್ತು. ಆ ಜಾಗಕ್ಕೆ ರಮ್ಯಾ ಬಂದು ಕುಳಿತಳು. ಪ್ರಶ್ನೆಗಳೂ ಬದಲಾಗಿ ಹೋದವು. ಗೆಸ್ಟ್ ಎಡಿಟರ್ ಗಳ ಕಾಲವೂ ಬಂತು.

ಮಂಗಳೂರಿನಲ್ಲಿದ್ದಾಗ ಅಲ್ಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯರೊಬ್ಬರು ‘ಹಾಲು ಅತ್ಯಂತ ಬೇಗ ಹಾಳಾಗೋ ಪದಾರ್ಥ ಅನ್ಕೊಂಡಿದ್ದೆ. ಆದರೆ ಈಗ ಅರ್ಥ ಆಗ್ತಿದೆ. ನ್ಯೂಸ್ ಅನ್ನೋದು ಅದಕ್ಕಿಂತ Most Perishable item ಅಂತ ತಬ್ಬಿಬ್ಬಾಗಿ ಹೇಳಿದರು.

ಇದು ಇವತ್ತಿನ ಮಾಧ್ಯಮಗಳಿಗೆ ಗೊತ್ತಾಗಿ ಹೋಗಿದೆ. ಸುದ್ದಿ ಅನ್ನೋದನ್ನ ಹಾಗೇ ಇಟ್ಟರೆ ಒಡೆದು ಹೋಗುತ್ತೆ. ಉಪಯೋಗ ಇಲ್ಲ. ಬಚ್ಚಲಿಗೆ ಚೆಲ್ಲಬೇಕಾಗುತ್ತೆ ಅಂತ.

ಹಾಗಾಗೀನೆ ಸುದ್ದಿಯನ್ನ ಕಾಯಿಸ್ತಾರೆ. ಖೋವಾ ಮಾಡ್ತಾರೆ, ಬರ್ಫಿ ಮಾಡ್ತಾರೆ, ಬಾಸುಂದಿ ಮಾಡ್ತಾರೆ, ಲಸ್ಸಿ ಮಾಡ್ತಾರೆ, ಮೂಲ ಅದು ಹಾಲೇ, ಆದರೆ ರೂಪ ಮಾತ್ರ ಬೇರೆ.

‘ಗಜನಿ’ ಚಿತ್ರ ಧಾಂ, ಧೂಮ್ ಅಂತ ಸುದ್ದಿ ಮಾಡ್ತಿದ್ದಾಗ ಒಂದು ಭಿನ್ನವಾದ ವರದಿ ಬಂತು.

ಅಮೀರ್ ಖಾನ್ ಮೈ ಮೇಲೆ ಬರೆದಿದ್ದ ಫೋನ್ ನಂಬರ್ ಗೆ ವರದಿಗಾರ ರಿಂಗ್ ಕೊಟ್ರೆ ಅರೆ! ತಗೊಂಡಿದ್ದು ಒಬ್ಬ ಹುಡುಗಿ. ಹಾಲನ್ನ ಬರ್ಫಿ ಮಾಡೋದು ಅಂದ್ರೆ ಹೀಗೇ.

‘ಗಜನಿ’ ಅನ್ನೋ ಹಾಲು, ಫೋನ್ ನಂಬರ್ ಅನ್ನೋ ಬರ್ಫಿ. ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ, ವಿಠ್ಠಲನೆಂಬೋ ತುಪ್ಪ’ ಎರಡೂ ಇರಬೇಕಾದ ಕಾಲ.

ಬೆಂಗಳೂರಿನಲ್ಲಿ ನವೀನ್ ಅಮ್ಮೆಂಬಳ, ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹಿಂದೆ ಮುಂದೆ ಸುತ್ತುತಾ ಇದ್ದಾಗಲೇ ಏನೋ ಬಾರಿ ಸುದ್ದಿ ತರ್ತಾನೆ ಅಂತ ಊಹಿಸೋದಿಕ್ಕೆ ಕಷ್ಟ ಇರ್ಲಿಲ್ಲ.

ಅಭಿಷೇಕ್ ಬಚನ್, ಐಶ್ವರ್ಯ ರೈ ಕುಂಡಲಿ ಹಿಡ್ಕೊಂಡು ಅಜಿತಾಬ್ ಬಚನ್ ಬಂದಾಗ ‘ಈಟಿವಿ’ ಕ್ಯಾಮೆರಾ ಸರ್ರಂತ ಸುತ್ತೋದಿಕ್ಕೆ ಶುರುವಾಯ್ತು.

ಸ್ವಾಮಿ ಮತ್ತು ವರದಿಗಾರನ ನಡುವಿನ ಹೊಸ ಒಡಂಬಡಿಕೆ ಇಡೀ ವಾರ ‘ಈಟಿವಿ’ಯನ್ನು ಟಿಆರ್ ಪಿಯಲ್ಲಿ ಮೇಲೇರಿಸಿತ್ತು.

ಇವತ್ತು ಯಾವುದೇ ನ್ಯೂಸ್ ನೋಡಿದರೂ ಅದು ‘ರೆಸಿಪಿ ಬುಕ್’ ಥರಾ ಕಾಣುತ್ತೆ.

ಎರಡು ಸೌಟು ನೀರಿಗೆ ಅರ್ಧ ಚಮಚ ಉಪ್ಪು. ಕುಟ್ಟಿ ಹದಮಾಡಿದ ಏಲಕ್ಕಿ ಎರಡು, ಕಣ್ಣಳತೆಯಷ್ಟು ನಿಂಬೆ ಹುಳಿ ಅನ್ನೋ ಥರಾ ಸೀರಿಯಸ್ ಆಗಿರೋ ಒಂದಷ್ಟು ನ್ಯೂಸ್, ಥಳಕು ಬಳಕು ಎರಡು ಮೆಟ್ರೋ ನ್ಯೂಸ್, ಒಂದು ಬಾಲಿವುಡ್ ಜ್ಹಲಕ್, ಒಂದು ಸ್ಪೋರ್ಟ್ಸ್, ಕೊನೆ ಹನಿ ಅಂತ ಒಂದು ಲೈಟ್ ಐಟಂ. ಬೇಕಾದರೆ ಆಗೀಗ ಗರಂ ಮಸಾಲ.

ಇದು ಚಾನಲ್ ಕಥೆ ಆದರೆ, ಪೇಪರ್ ಗಳಲ್ಲಿ ನಾರಾಯಣ ಮೂರ್ತಿ ಮಗಳ ಮದುವೆ ಅನ್ನೋದು ಸುದ್ದಿ ಮಾತ್ರ ಅಲ್ಲ, ಅದರ ಜೊತೆ ಅದು ಯಾವ ಕಲ್ಯಾಣ ಮಂಟಪ, ಅದರ ರೇಟ್ ಎಷ್ಟು, ಅದರಲ್ಲಿ ಈವರೆಗೂ ಆಗಿರೋ ಫೇಮಸ್ ಮದ್ವೆ ಯಾವ್ಯಾವುದು. ಮದುವೇನಲ್ಲಿ ಎಷ್ಟು ಜನ ಯೂನಿಫಾರ್ಮ್ ರಹಿತ ಪೊಲೀಸರು ಇರ್ತಾರೆ ಅನ್ನೋ ಸುದ್ದಿ.

ಸುದ್ದಿ ಈ ಥರಾ ಇರಬೇಕಾ? ಆ ಥರಾ ಇರಬೇಕಾ ಅನ್ನೋ ಪ್ರಶ್ನೆಯೇ ಇಲ್ಲ. ಸ್ಪರ್ಧೆ ಇದೆ. ಮೊದಲು ಒಂದೇ ಮಾಧ್ಯಮದ ಒಳಗೆ ಸ್ಪರ್ಧೆ ಇತ್ತು. ಈಗ ಅದರ ಜೊತೆ ಬೇರೆ ಮಾಧ್ಯಮಗಳ ಜೊತೇನೂ ಗುದ್ದಾಡ್ಬೇಕು ಅನ್ನೋ ಪರಿಸ್ಥಿತಿ. ಹಾಗಾಗಿ ನೂರೆಂಟು ಶಾರ್ಟ್ ಕಟ್ ಗಳು ಬೇಕು.

ಸುದ್ದಿ ಮನರಂಜನೆ ಆದರೂ ಆಗ್ಲಿ, ಅಥವಾ ‘ಸಿಟಿಜನ್ ಕೇನ್’ ಸಿನೆಮಾದಲ್ಲಿ ಬರೋ ಹಾಗೆ ಸುದ್ದಿ ಸ್ಫೋಟಿಸ್ಬೇಕು ಅಂತ ತಾವೇ ಸುದ್ದಿ ಆಗೋ ಅಂತ ಕ್ರೈಂ ಆದರೂ ಮಾಡ್ಲಿ- ರೇಸ್ ನಲ್ಲಿ ಕುದುರೆ ಮುಂದಿರಬೇಕು ಅಷ್ಟೇ.

‘ಸರ್ಕಾರ್’ ಅಂತ ಒಂದು ಪ್ರೋಮೋ ಮಾಡಿದ್ವಿ. ಇವತ್ತಿನ ಸುದ್ದಿಯನ್ನ ಚಿತ್ರ ಗೀತೆಗಳಿಗೆ ಅಡಾಪ್ಟ್ ಮಾಡೋದು. ಆದ್ರೆ ಇದು ಯಾವ ಥರಾ ಆಗೋಯ್ತು ಅಂದ್ರೆ, ಜನ ಪ್ರೋಮೋ ನೋಡೋಕೆ ಅಂತ ನ್ಯೂಸ್ ಬುಲೆಟಿನ್ ನೋಡೋ ಕಾಲ ಬಂತು.

ಸಂಗೀತ ಕಚೇರಿನಲ್ಲಿ ಹಾಡುಗಾರನ್ನೇ ಸೈಡ್ ಗೆ ತಳ್ಳಿ ಪಕ್ಕವಾದ್ಯದವರೇ ಮಿಂಚಿದ್ರೆ ಹೇಗಿರುತ್ತೆ ಹಾಗಾಗಿ ಹೋಯ್ತು.

ಇದನ್ನೇ Committee of Concerned Journalists ಸಮಾವೇಶ ಈಗೇನೋ ‘ಸರಿ ಆದ್ರೆ ಇದು ಮಾಧ್ಯಮಕ್ಕೆ ಒಳ್ಳೇದಲ್ಲ’ ಅಂತ ವಾರ್ನ್ ಮಾಡಿದೆ.

ಸುದ್ದಿ ಯಾವ್ದು? ಕಲ್ಪನೆ ಯಾವ್ದು? ಅನ್ನೋ ಗೆರೆ ಮಾಯಾ ಆಗಿ ಹೋದ್ರೆ ಸುದ್ದಿ ಯಾರು ನಂಬ್ತಾರೆ ಅಂತ ಆತಂಕ ವ್ಯಕ್ತಪಡಿಸಿದೆ.

ಅಷ್ಟೇ ಅಲ್ಲ ಮುಂದೆ ಯಾವ್ ಥರಾ ಪತ್ರಕರ್ತರು ರೂಪುಗೊಳ್ತಾರೆ ಅನ್ನೋದನ್ನ ಯೋಚಿಸಿ ಅಂತ ಕೇಳ್ತಾ ಇದೆ.

ಸುದ್ದೀನ ಗೆಲ್ಲಿಸೋದಕ್ಕೆ ಅಂತ ಈ ಸ್ಪೀಡ್ ನಲ್ಲಿ ಮನರಂಜನೆ ಜೊತೆ ಥಳುಕು ಹಾಕ್ತಾ ಇದ್ರೆ ಸಿನೆಮಾ ಹಾಲ್ ನಲ್ಲಿ ನ್ಯೂಸ್ ಬುಲೆಟಿನ್ ಪ್ರದರ್ಶಿಸೋ ಕಾಲಾನೂ ಬರುತ್ತೇನೋ?

ತುಮಕೂರು ಜಿಲ್ಲೆಯಲ್ಲಿ 95 ಮಂದಿಗೆ ಸೋಂಕು

ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ 95 ಮಂದಿಗೆ ಕೋವಿಡ್ 19 ದೃಡಪಟ್ಟಿದೆ.

ತುಮಕೂರಿನಲ್ಲಿ 69 ಮಂದಿ, ಶಿರಾ 17, ಪಾವಗಡ 4, ಕೊರಟಗೆರೆ 3, ಮಧುಗಿರಿಯಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ಸುದ್ದಿ ಚಾನೆಲ್‌ಗಳು ಏಡಿಗಳಂತೆ ಅಡ್ಡಡ್ಡ ಚಲಿಸುವುದೇಕೆ?

0

ನಾಗೇಶ್ ಹೆಗ್ಡೆ


ನಿನ್ನೆ ಟಿವಿಯಲ್ಲಿ ಬಂದ ಒಂದು ಭೀಕರ ತಮಾಷೆಯ ಬಗ್ಗೆ ಕುಟುಕಿನ ಅವಲೋಕನ ಇದು.

‘ಪ್ರಜಾವಾಣಿ’ಯ ನಿನ್ನೆಯ ನನ್ನ ಅಂಕಣದ ಆರಂಭದಲ್ಲಿ ‘ಕುದುರೆಲಾಳದ ಏಡಿ’ಯ ಪ್ರಸ್ತಾಪ ಬಂದಿತ್ತು. ನಾಲ್ಕು ವಾಕ್ಯಗಳ ಪುಟ್ಟ ಕಥನ. ಕನ್ನಡದ ಸುದ್ದಿ ವಾಹಿನಿಯೊಂದು ಅದೇ ನಾಲ್ಕು ವಾಕ್ಯಗಳನ್ನೇ ಪದೇಪದೇ ಹೇಳುತ್ತ ಅರ್ಧ ಗಂಟೆಯ ರೋಚಕ ಕತೆಯೊಂದನ್ನು ಸಿದ್ಧಪಡಿಸಿತು. ಸಂಜೆಯಿಂದ ಅದರ ಭಯಂಕರ ಪ್ರೊಮೋವನ್ನು (ಕೆಳಗಿನ ಚಿತ್ರ) ನೋಡಿದವರೊಬ್ಬರು ನನಗೆ ಸೂಚನೆ ಕೊಟ್ಟರು.
ಸಾಮಾನ್ಯವಾಗಿ, ರಾತ್ರಿ ಒಂಭತ್ತರ ಪ್ರೈಮ್ ಟೈಮ್ ಸುದ್ದಿಗೆಂದು ಮಾತ್ರ ಟಿವಿ ಹಚ್ಚುವ ನಾನು ಕುತೂಹಲಕ್ಕೆ ನಿನ್ನೆ ಎಂಟೂವರೆಗೇ ಈ ಚಾನೆಲ್ ನೋಡಿದೆ.

ಅದು ನಿಜಕ್ಕೂ ಅವಿಸ್ಮರಣೀಯ ಅನುಭವವಾಗಿತ್ತು. ಅರ್ಧ ಗಂಟೆಯ ಆ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಹೇಳಿದ್ದು ಅವೇ ನಾಲ್ಕು ವಾಕ್ಯಗಳು: “ಒಂಬತ್ತು ಕಣ್ಣುಗಳ, ನೀಲಿರಕ್ತದ ಏಡಿ ಅಟ್ಲಾಂಟಿಕ್ ಸಾಗರದ ಕಡಲಂಚಿಗೆ ಹುಣ್ಣಿಮೆಯಂದು ಬರುತ್ತದೆ. ಅದನ್ನು ಹಿಡಿದು ವೈದ್ಯವಿಜ್ಞಾನಿಗಳು ರಕ್ತವನ್ನು ಹೀರಿ ಔಷಧ ಪರೀಕ್ಷೆಗೆ ಬಳಿಸುತ್ತಾರೆ” ಇಷ್ಟೆ. ಅದನ್ನೇ ತಲೆ ಗಿಮ್ಮೆನ್ನುವಂಥ ರೋಷಾವೇಶದ ಧ್ವನಿಯಲ್ಲಿ ತಿರುಚಿ ಕಿರುಚಿ ಹೇಳುತ್ತ, ಕೆಲವು ತಪ್ಪು ಮಾಹಿತಿಗಳನ್ನೂ ತೂರಿಸುತ್ತ ವಿಷಯವನ್ನು ಜಾತ್ರೆಯ ತೇರಿನಂತೆ ಎಳೆಯುತ್ತ ಹೋದರು.
ಮೂಲತಃ ಆ ಬಡಪಾಯಿ ಜೀವಿ ‘ಏಡಿ’ಯೇ ಅಲ್ಲ. ಅದು ಚೇಳು ಅಥವಾ ಜೇಡರ ವಂಶಕ್ಕೆ ಸೇರಿದ್ದು. ಅದಕ್ಕೆ ಬೇರೆ ಹೆಸರಿಲ್ಲ. ಹಾಗಾಗಿ ಅದನ್ನು ಏಡಿ ಎನ್ನಲಿ, ತಪ್ಪೇನಿಲ್ಲ. ಆದರೆ ಅಟ್ಲಾಂಟಿಕ್ ಸಾಗರದಲ್ಲಿ ಕಾಣದೇ ಇರುವ (ಹಿಂದೂ ಮಹಾಸಾಗರದ ಕ್ರಿಸ್ಮಸ್ ದ್ವೀಪದಲ್ಲಿನ ಕಡುಗೆಂಪು ಬಣ್ಣದ) ಅಸಲೀ ಏಡಿಗಳನ್ನು ಪದೇ ಪದೇ ತೋರಿಸಿದರು. ಮೂಲದಲ್ಲಿ ‘ಅಟ್ಲಾಂಟಿಕ್’ ಎಂಬ ಪದ ಇತ್ತಲ್ಲ? ಅದಕ್ಕೆಂದು ಟೈಟಾನಿಕ್ ಹಡಗಿನ ದುರಂತ ದೃಶ್ಯಗಳ ತುಣುಕನ್ನು ಅದಕ್ಕೆ ಸೇರಿಸಿದರು. ಏಕೆಂದರೆ ದುರಂತ ಸಂಭವಿಸಿದ್ದು ಅಟ್ಲಾಂಟಿಕ್ ಸಾಗರದಲ್ಲಿ. -ಎಲ್ಲಿಂದೆಲ್ಲಿಯ ಸಂಬಂಧ!
ಉದ್ದಕ್ಕೂ ಕಮೆಂಟರಿ ಅಂದರೆ ಅವೇ ಒಂಬತ್ತು ಪದಗಳು: ಒಂಬತ್ತು ಕಣ್ಣುಗಳ ಏಡಿ, ನೀಲಿ ರಕ್ತ, ಅಟ್ಲಾಂಟಿಕ್ ಸಾಗರ, ಹುಣ್ಣಿಮೆ ರಾತ್ರಿ.

ಪೊದೆಗಳಿಂದ ಮೆಲ್ಲಗೆ ಕೊಂಬುಗಳನ್ನೆತ್ತಿ ಬರುತ್ತಿರುವ ನೂರಾರು ಕೆಂಪು ಏಡಿಗಳ ಅಸಂಬದ್ಧ ವಿಡಿಯೊ ತುಣುಕಿನ ಪದೇಪದೇ ಪ್ರದರ್ಶನ. ಜೊತೆಗೆ, ‘ಔಷಧ ತಯಾರಿಕೆಗೆ’ ಎಂಬ ತಪ್ಪು ಮಾಹಿತಿ. (ನೀಲಿರಕ್ತದಿಂದ ಔಷಧವನ್ನು ತಯಾರಿಸುವುದಿಲ್ಲ; ಬದಲಿಗೆ ರಕ್ತವನ್ನು ಔಷಧ ಪರೀಕ್ಷೆಗೆ ಬಳಸಲಾಗುತ್ತದೆ.) ಮತ್ತಷ್ಟು ಏರು ದನಿಯಲ್ಲಿ – ಒಂದು ಲೀಟರ್ ನೀಲಿರಕ್ತದ ಬೆಲೆ ‘ಬರೋಬ್ಬರಿ’ ಒಂಬತ್ತು ಸೊನ್ನೆಗಳಿರುವ (ಯಾವುದೋ) ಸಂಖ್ಯೆ…
ಎದೆ ಝಲ್ಲೆನಿಸುವ ಸಂಗೀತ.

ಚಾನೆಲ್ಲಿನವರ ಅದೃಷ್ಟಕ್ಕೆ, ಲಾಳದ ಏಡಿಗಳ ನೀಲಿರಕ್ತವನ್ನು ನಳಿಕೆಯಲ್ಲಿ ಬಸಿಯುತ್ತಿರುವ ಕೆಲವು ನೈಜ ವಿಡಿಯೊ ತುಣುಕುಗಳು ಸಿಕ್ಕಿದ್ದವು. ಜೊತೆಗೆ ಬೀಚಿನ ಮರಳಲ್ಲಿ ತೆವಳುವ ಲಾಳಾಕಾರದ ಏಡಿಗಳ ದೃಶ್ಯ, ಪ್ರವಾಸಿಗರು ಅವನ್ನು ಬೊಗಸೆಯಲ್ಲಿ ಹಿಡಿದೆತ್ತಿರುವ ದೃಶ್ಯಗಳೂ ಇದ್ದುವೆನ್ನಿ. ಎಲ್ಲ ಸೇರಿ ಹೆಚ್ಚೆಂದರೆ ಆರೇಳು ಸೆಕೆಂಡ್ ದೃಶ್ಯ ಇರಬಹುದು. ಅಷ್ಟು ಸಾಲದೆಂದು, ಮಾಮೂಲು ಕೊರೊನಾ ವೈದ್ಯಕೀಯದ ದೃಶ್ಯಗಳನ್ನು (ಸಿರಿಂಜು, ಮುಖವಾಡ, ಪಿಪೆಟ್, ನಳಿಕೆ, ನಖಶಿಖಾಂತ ಪಿಪಿಇ ಧರಿಸಿದ ವ್ಯಕ್ತಿಗಳು, ಲ್ಯಾಬಿನ ಸಲಕರಣೆಗಳು ಇತ್ಯಾದಿ) ದಂಡಿಯಾಗಿ ಸೇರಿಸಲಾಗಿತ್ತು. ಅವನ್ನೇ ಮತ್ತೆ ಮತ್ತೆ ತೋರಿಸುತ್ತ ಅದೇ… ಒಂಬತ್ತು ಕಣ್ಣುಗಳ, ನೀಲಿರಕ್ತದ, ಅಟ್ಲಾಂಟಿಕ್… ಹುಣ್ಣಿಮೆ ರಾತ್ರಿ….ಔಷಧ… ಎಂಬ ಪದಗಳನ್ನು ಚೀರುವ ಬಡಪಾಯಿ ಲತಾಂಗಿ.
[ನನ್ನ ಹಿಂದೆ, ದೂರದಲ್ಲಿ ಅಡುಗೆ ಕಟ್ಟೆಯ ಬಳಿ ನಿಂತು ಕೆಸುವಿನ ದಂಟಿನ ಪಳಿದ್ಯ ಮಾಡುತ್ತಿದ್ದ ನನ್ನ ಪತ್ನಿ ಆ ‘ಒಂಬತ್ತು ಕಣ್ಣುಗಳ’ ಎಂಬ ಏಕೈಕ ಪದಪುಂಜ ಎಷ್ಟು ಬಾರಿ ಬಂತು ಎಂದು 9-10-11 ಎಂದು ಲೆಕ್ಕ ಮಾಡುತ್ತಿದ್ದಳು.]

ಹದಿನೈದು ನಿಮಿಷಗಳ ಆರ್ಭಟವನ್ನು ಕಿವಿಮುಚ್ಚಿಕೊಂಡು ಕೇಳುತ್ತಿದ್ದಾಗ ನನ್ನ ಅದೃಷ್ಟಕ್ಕೆ ಬ್ರೆಕ್ (ಟೀವಿಯವರ ತಪ್ಪು ಭಾಷೆಯಲ್ಲಿ ‘ಬ್ರೇಕ್’) ಬಂತು. ‘ಇದರ ರಹಸ್ಯವನ್ನು ಇದೊಂದು ಪುಟ್ಟ ಬ್ರೇಕಿನ ನಂತರ ಹೇಳುತ್ತೇವೆ ಕೇಳಿ… ಕಣ್ ಮುಚ್ಚಿ, ಕಣ್ಣು ತೆರೆಯುವುದರಲ್ಲಿ ಬಂದು ಬಿಡುತ್ತೇವೆ” ಎಂಬ ಘೋಷಣೆಯನ್ನು ಕೇಳಿದ ನಂತರ ಸಾಕಪ್ಪ ಸಾಕು ಎಂದು ನಾನು ಕಣ್ ಮುಚ್ಚಿ ಸ್ವಿಚಾಫ್ ಮಾಡಿದೆ.

ನನಗೆ ಟಿವಿ ಸುದ್ದಿಗಾರರ ಬಗ್ಗೆ, ಉದ್ ಘೋಷಕಿಯರ ಬಗ್ಗೆ ಕೋಪವಿಲ್ಲ, ಸಹಾನುಭೂತಿ ಇದೆ. ಪಾಪ, ಏನೋ ಥ್ರಿಲ್ಲಿಂಗ್ ವಿಷಯವನ್ನು ರಂಗುರಂಗಾಗಿ ಹಸಿಹಸಿಯಾಗಿ ಹೊಸೆದು ವೀಕ್ಷಕರ ಮುಂದಿಡಬೇಕು. ಕಷ್ಟದ ಕೆಲಸ!
ಅವರ ಕೈಬೆರಳು ಕೀಲಿಮಣೆಯ ಮೇಲೆ ಫಾಸ್ಟಾಗಿ ಓಡುತ್ತದೆ ಹಾಗಾಗಿ ಎಲ್ಲೆಲ್ಲೊ ಜಾಲಾಡಿ ಒಂದಿಷ್ಟು ವಿಶುವಲ್ ಗಳನ್ನು ಸಂಗ್ರಹ ಮಾಡುತ್ತಾರೆ. ಚಕಚಕ ಎಡಿಟಿಂಗ್ ಮಾಡಿ ಏನೋ ಒಂದಿಷ್ಟು ಕೊಲಾಜ್ ಮಾಡಿ, ರಾಶಿ ಒಟ್ಟುತ್ತಾರೆ. ಕಡ್ಡಿಗೀರಲು ರೆಡಿ ಮಾಡುತ್ತಾರೆ.
ದೃಶ್ಯಗಳಿಗೆ ಪೂರಕವಾದ ಮಾಹಿತಿಯನ್ನು ಸಂಗ್ರಹಿಸುವ ವ್ಯವಧಾನ ಅಥವಾ ಪರಿಣತಿಯೂ ಇಲ್ಲ. ಆ ನಾಲ್ಕಾರು ಪದಗಳಿಗಾಗಿ ಹುಣ್ಣಿಮೆ ರಾತ್ರಿಯ ದೃಶ್ಯ, ಕಡಲಿನ ತೆರೆಗಳ ದೃಶ್ಯ, ತೆವಳುವ ಏಡಿಯ ದೃಶ್ಯವನ್ನು ಜೋಡಿಸುತ್ತಾರೆ. ಈಗಂತೂ ಮನೆಯಲ್ಲಿ ಕೂತೇ ಎಲ್ಲವನ್ನೂ ಡೌನ್ ಲೋಡ್ ಮಾಡಿ ಪ್ಯಾಕೇಜ್ ಮಾಡಿ ಸ್ಟೂಡಿಯೊಕ್ಕೆ ರವಾನಿಸಬೇಕು. ಒತ್ತಡ, ಒತ್ತಡ.

ಲಾಳದ ಏಡಿಯ ಬಗ್ಗೆ ಬೆಂಗಳೂರಿನಲ್ಲಿರುವ ಯಾವುದೇ ವಿಜ್ಞಾನ ಲೇಖಕರನ್ನು (ಜಾಸ್ತಿ ಜನರಿಲ್ಲ ಖರೆ; ನಮ್ಮನ್ನು ನಾವೇ ‘ಅಳಿವಿನಂಚಿನಲ್ಲಿನ ಜೀವಿಗಳು’ ಎಂದು ಕರೆದುಕೊಳ್ಳುತ್ತೇವೆ) ಕೇಳಿದ್ದಿದ್ದರೆ, ಸೊಗಸಾದ, ಬಹುಪಾಲು ಸರಿಯಾದ, ನಿಜಕ್ಕೂ ರೋಚಕ ಮಾಹಿತಿಗಳಿರುವ 300-400 ಪದಗಳ ವಿವರಗಳನ್ನು (script) ಬರೆದು, ಒಂದರ್ಧ ಗಂಟೆಗಳಲ್ಲೇ ಒದಗಿಸಲು ಸಾಧ್ಯವಿತ್ತು. (ಪತ್ರಿಕೆಗಳಿಗೆ ನಾವು ಆಗಾಗ ಈ ಬಗೆಯ ಅನಾಮಿಕ ನೆರವನ್ನು ನೀಡುತ್ತಿರುತ್ತೇವೆ, ಟಿವಿಯವರು ಇದುವರೆಗೆ ನಮ್ಮನ್ನು ಕೇಳಿಲ್ಲ. ಹೆಚ್ಚೆಂದರೆ ‘ಮಂಗಳಗ್ರಹದಲ್ಲಿ ಅದ್ಯಾವುದೊ ನಾರಿಯ ಬಿಂಬ ಕಂಡಿದೆ, ಚರ್ಚೆ ಮಾಡಲು ಬನ್ನಿ’ ಎಂದು ಸ್ಟೂಡಿಯೋಕ್ಕೇ ಕರೆಸಿಕೊಳ್ಳುತ್ತಾರೆ. ಅಲ್ಲಿ ಹೋದರೆ ಯಾವನೋ ಸಾಮುದ್ರಿಕ ಶಾಸ್ತ್ರಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವನ ಮಾತಿಗೇ ಆದ್ಯತೆ ಕೊಡುತ್ತಿರುತ್ತಾರೆ. ಕಮಟು ಚಾ ಮತ್ತು ಬಿಸ್ಕಿಟನ್ನು ಕೊಟ್ಟು ಮನೆಗೆ ಕಳಿಸುತ್ತಾರೆ. ಹಾಗಾಗಿ ನಾವು ಯಾರೂ ಅತ್ತ ಹೋಗುವುದು ತೀರ ಕಮ್ಮಿ. ಈಚಿನ ವರ್ಷಗಳಲ್ಲಿ ತಾಜಾ ಚಾ/ಕಾಫಿ ಮತ್ತು ಸ್ಯಾಂಡ್ವಿಚ್ ಕೊಡುತ್ತಾರೇನೊ. ಪ್ರಾಯಶಃ ತುಸು ಸಂಭಾವನೆಯನ್ನೂ ಕೊಡಬಹುದು, ಗೊತ್ತಿಲ್ಲ).
ಮನೆಯಲ್ಲೇ ಕೂತು script ಬರೆದು ರವಾನಿಸುವುದು ಸುಲಭ. ಬುಲೆಟ್ ಪಾಯಿಂಟ್ ಗಳಲ್ಲಿ ಮುಖ್ಯಾಂಶವನ್ನು ಕಳಿಸಿದರೂ ಆದೀತು. ಅವನ್ನು ಉದ್ ಘೋಷಕಿ ಟೆಲಿ ಪ್ರಾಮ್ಟರ್ ಮೂಲಕ ಓದಿದರೂ ಸಾಕು; ಬುಲೆಟ್ ಪಾಯಿಂಟ್ ಆಗಿದ್ದರೆ ಬಿಟ್ಟು ಬಿಟ್ಟು ಓದುವುದು ಸುಲಭ.

ಅಥವಾ ಮತ್ತೇನೂ ಬೇಡ. ವಿಕಿಪೀಡಿಯಾದಲ್ಲಿ ಅಥವಾ ಬೇರೆ ವೆಬ್‌ಸೈಟ್‌ ಗಳಲ್ಲಿ ದಂಡಿಯಾಗಿ ಸಿಗುವ ಮಾಹಿತಿಯನ್ನು ಕ್ಷಿಪ್ರದಲ್ಲಿ ಸಂಗ್ರಹಿಸಬಹುದು.
ಇದೇ ಕುದುರೆಲಾಳದ ಏಡಿಯ ವಿಚಿತ್ರ ಜೀವನಚಕ್ರದ ಬಗ್ಗೆ ಎಷ್ಟೊಂದು ಮಾಹಿತಿ ವಿಕಿಪೀಡಿಯಾದಲ್ಲೇ ಇದೆ. ಗಂಡಿಗಿಂತ ಹೆಣ್ಣೇ ದೊಡ್ಡದು, ಒಂದು ಹೆಣ್ಣೇಡಿಗೆ ಅದೆಷ್ಟು ಗಂಡೇಡಿಗಳು ಮುತ್ತಿ, ಮುತ್ತಿಕ್ಕುತ್ತಿರುತ್ತವೆ. ಅವಳು ಮರಳಿನಲ್ಲಿ ಮೊಟ್ಟೆ ಇಟ್ಟನಂತರ ಅದನ್ನೇ ಕೆದಕಿ ತಮ್ಮ ವೀರ್ಯವನ್ನು ಸುರಿಸಿ ಹೋಗುತ್ತವೆ ಇತ್ಯಾದಿ ಇತ್ಯಾದಿ. ಇವನ್ನೆಲ್ಲ ಕನ್ನಡದಲ್ಲಿ ತಾವೇ ಬರೆದುಕೊಂಡು ಹೇಳಿದರೂ ಸಾಕು. ಆದರೆ ಅದಕ್ಕೆ ಇಂಗ್ಲಿಷ್ ಚೆನ್ನಾಗಿ ಗೊತ್ತಿರಬೇಕು, ಅದು ಬೇರೆ ಮಾತು.

ಏರುದನಿಯಲ್ಲಿ ಕೂಗುವುದು, ಹೇಳಿದ್ದನ್ನೇ ಹೇಳುವುದು, ಥಕಥೈ ಕುಣಿಯುವ ಅಕ್ಷರವಿನ್ಯಾಸ, ಭಯಾನಕ ಹಿನ್ನೆಲೆ ಸಂಗೀತದೊಂದಿಗೆ ಟೈಟ್ ಪ್ಯಾಂಟ್, ವಿಲಕ್ಷಣ ಟಾಪ್, ಅಸಹಜ ಹಾವಭಾವದೊಂದಿಗೆ ಏಡಿಗಳಂತೆ ಅಡ್ಡಡ್ಡ ಚಲಿಸುತ್ತ ಅರಚುವ ಹೆಣ್ಣುಮಕ್ಕಳನ್ನು ನೋಡಿದರೆ ರೇಜಿಗೆ, ಅನುಕಂಪ ಎಲ್ಲ ಒಟ್ಟೊಟ್ಟಿಗೇ ಆಗುತ್ತಿರುತ್ತದೆ.
ಸಾಲದ್ದಕ್ಕೆ ಮಾತು ಮಾತಿಗೆ ‘..ತಕ್ಕಂಥದ್ದು…ವಂಥದ್ದು… ಈವಂದು….ಗಳ ಕಾಟ.

ಈ ಯುವಜನರು ಎಲ್ಲಿಂದ ಕಲಿಯುತ್ತಿದ್ದಾರೆ ಇವನ್ನೆಲ್ಲ? ಚೀರಾಟಕ್ಕೆ ಯಾವ ತಮಿಳು, ತೆಲುಗು ಚಾನೆಲ್ಲನ್ನು ನಕಲು ಮಾಡುತ್ತಿರುತ್ತಾರೆ? ಟಿವಿ ಎದುರು ಕೂತವರೆಲ್ಲ ಕಿವುಡರು, ದೃಷ್ಟಿಮಾಂದ್ಯವುಳ್ಳವರು, ಮಂದಮತಿಗಳು ಅಥವಾ ಹಸಿಹಸಿ ತುಣುಕಿಗೆ ಹಸಿದು ಕೂತವರು ಎಂಬ ಭಾವನೆಯಲ್ಲೇ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಯಾಕೆ? ಇವರಿಗೆಲ್ಲ ತರಬೇತಿ ಕೊಡುವವರು ಎಂದೂ ಬಿಬಿಸಿ, ಸಿಎನ್ಎನ್, ಸಿಎನ್‌ಬಿಸಿ ಮುಂತಾದ ಚಾನೆಲ್‌ಗಳನ್ನು ನೋಡುವುದೇ ಇಲ್ಲವೆ?
ನಿಜಕ್ಕೂ ಆಸಕ್ತಿಯ ವಿಷಯಗಳಿದ್ದರೆ ನಿರ್ವಿಕಾರ, ನಿರಾವೇಶ, ನಿರಾಡಂಬರ ಶೈಲಿಯಲ್ಲಿ ಅದನ್ನು ಪ್ರಸ್ತುತಪಡಿಸುವುದರಲ್ಲೇ ಹೆಚ್ಚಿನ ವೀಕ್ಷಕರನ್ನು ತಲುಪಬಹುದು ಎಂಬ ಯೋಚನೆಯೂ ಇವರಿಗೆ ಬರುವುದಿಲ್ಲವೆ?

ಅಂದಹಾಗೆ, ನೀಲಿರಕ್ತದ ಏಡಿಯ ಕಾರ್ಯಕ್ರಮ ಈ ಚಾನೆಲ್ಲಿನಲ್ಲಿ ಬರುತ್ತಿದ್ದಾಗಲೇ ಅತ್ತ ಇನ್ನೊಂದು ಕನ್ನಡ ಚಾನೆಲ್ಲಿನಲ್ಲಿ ‘ಏರ್ ಫಿಲ್ಟರ್’ಗಳ ಬಗ್ಗೆ ಅಷ್ಟೇ ವಿಕೃತ, ಅಷ್ಟೇ ವಿಕಾರದ, ಅಷ್ಟೇ ಅಸಹಜ ರೋಚಕತೆಯ, ಅಷ್ಟೇ ತಪ್ಪುಗಳುಳ್ಳ, ಅಷ್ಟೇ ಉತ್ಪ್ರೇಕ್ಷೆಯ ಕಾರ್ಯಕ್ರಮ ಬರುತ್ತಿತ್ತು.
ಇಂಥ ಅಸಹನೀಯ ಕಾರ್ಯಕ್ರಮಗಳಿಗೆ ಫಿಲ್ಟರ್ ಹಾಕುವವರು ಯಾರೂ ಇಲ್ಲವೆ? ಅಡ್ಡಡ್ಡ ಚಲಿಸುವ ಈ ಚಾನೆಲ್ ಸಂಸ್ಕೃತಿಯ ಮೇಲೆ ಒಂಬತ್ತು ಕಣ್ಣುಗಳಲ್ಲ, ಕನಿಷ್ಟ ಎರಡು ಕಣ್ಣುಗಳನ್ನಿಡುವವರು ಯಾರೂ ಇಲ್ಲವೆ?

ನಮಸ್ಕಾರ, ಚೆಗೆವಾರ..

ಜಿ.ಎನ್.ಮೋಹನ್


ನಮಸ್ಕಾರ- ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು.

ನೋಡಿದರು ಅಷ್ಟೇ ಮಾತು ಹೊರಡಲಿಲ್ಲ.

ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್, ಹಸಿರು ಬೂಟು, ಅದೇ ಗಡ್ಡ, ಅದೇ ಹೊಂಗೂದಲು, ಅದೆಲ್ಲಕ್ಕಿಂತ ಹೆಚ್ಚಾಗಿ ಸದಾ ನಗು ತುಳುಕಿಸುವ ಅದೇ ಮುಖ.

ಮಾತಿಲ್ಲದೆ ನಿಂತ ನೆಹರೂ ನಂತರ ತಮ್ಮ ಎದುರಿಗಿದ್ದ ಆ ಎತ್ತರದ ನಿಲುವಿನ ಹುಡುಗನ ಕೈ ಕುಲುಕಿ- ‘ನಮಸ್ಕಾರ, ಚೆಗೆವಾರ’ ಎಂದರು.

ನಂತರ ನೆಹರೂ, ಚೆಗೆವಾರ ಮಧ್ಯೆ ಸೇತುವೆಯಾಗಿ ನಿಂತದ್ದು ಆ ಅದೇ ಸಿಗಾರ್. ಕ್ಯೂಬನ್ ಸಿಗಾರ್.

ಕ್ಯೂಬಾದ ಜನತೆ ತಮ್ಮ ಎದೆ ಹೊಲಗಳಲ್ಲಿ ಬೆಳೆಸಿದ್ದ ತಂಬಾಕನ್ನು ಸುರುಳಿ ಸುತ್ತಿ ಭಾರತಕ್ಕೆ ಪ್ರೀತಿಯಿಂದ ಕಳಿಸಿದ ಸಿಗಾರ್.

ಒಂದು ಪೆಟ್ಟಿಗೆಯ ತುಂಬಾ ಸಿಗಾರ್ ಕಂತೆಯನ್ನೇ ಹೊತ್ತು ತಂದಿದ್ದ ಚೆಗೆವಾರ ಅದನ್ನು ನೆಹರೂ ಕೈಗಿತ್ತರು. ‘ಕ್ಯೂಬಾದಿಂದ, ಪ್ರೀತಿಯಿಂದ’ ಎಂದರು.

ಒಂದು ಸಿಗಾರ್, ಒಬ್ಬ ಚೆಗೆವಾರ ಭಾರತ ಮತ್ತು ಕ್ಯೂಬಾದ ನಡುವಿನ ನಂಟಿಗೆ ಪ್ರತೀಕವಾಗಿ ನಿಂತಿದ್ದರು.

***
ಅವತ್ತು ಮೇ ದಿನಾಚರಣೆ. ಇಡೀ ಸಂಜೆ ಹಾಡಿ ಕುಣಿದು, ಗತ್ತು ಗಮ್ಮತ್ತಿನಿಂದ ಸಂಭ್ರಮದ ಹುಡಿ ಹಾರಿಸಿ ಹಿಂದಿರುಗುವಾಗ ಕಲಾವಿದ ಜಾನ್ ದೇವರಾಜ್ ಸ್ಕ್ರೀನ್ ಪ್ರಿಂಟ್ ನ ಒಂದು ಮುದ್ದಾದ ಪೋಸ್ಟರ್ ನನ್ನ ಕೈಗಿತ್ತರು.

ಅದರಲ್ಲಿಯೂ ಅದೇ ಕಳೆ ಹೊತ್ತ ಮುಖ, ಎದುರಿಗಿದ್ದವರನ್ನು ಸಮ್ಮೋಹಿನಿಗೆ ಈಡು ಮಾಡುವ ಕಣ್ಣುಗಳು, ಅದೇ ಹರಕಲು ಗಡ್ಡ, ಕೆಳಗೆ ‘ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ’ ಎನ್ನುವ ಸಾಲುಗಳು.

ಆ ಸಾಲುಗಳನ್ನು ನಾನು ಮತ್ತೆ ಮತ್ತೆ ಕಂಡೆ. ಅದೇ ಜಾನ್ ದೇವರಾಜ್ ಅವರ ಕಲಾತ್ಮಕ ಅಕ್ಷರಗಳಲ್ಲಿ, ಬೆಂಗಳೂರಿನ ಬೀದಿ ಬೀದಿಯ ಗೋಡೆಗಳ ಮೇಲೆ. ನಾನೂ ಸಹಾ ‘ ನಮಸ್ಕಾರ, ಚೆಗೆವಾರ’ ಎಂದೆ.

***
ನಾನು ಹಾಗೆ ಚೆಗೆವಾರಾನಿಗೆ ನಮಸ್ಕಾರ ಎಂದು ವಿಶ್ ಮಾಡುವ ಮೊದಲೇ, ಹಾಗೆ ಆತನನ್ನು ಎದೆಗೂಡಿನೊಳಗೆ ಎಳೆದುಕೊಳ್ಳುವ ದಶಕಗಳ ಮೊದಲೇ ನೆಹರೂ ಚೆಗೆವಾರನಿಗೆ ನಮಸ್ಕಾರ ಹೇಳಿಬಿಟ್ಟಿದ್ದರು.

ಆದರೆ ಆಗ ಅವರ ಎದುರು ನಿಂತದ್ದು ಭಾರತಕ್ಕೆ ಬರುವ ಮೊದಲು ಮ್ಯಾಡ್ರಿಡ್ ನಲ್ಲಿ ತನ್ನ ೩೧ ನೆಯ ಹುಟ್ಟುಹಬ್ಬ ಆಚರಿಸಿಕೊಂಡು ಬಂದ ಪಡ್ಡೆ ತರುಣ ಚೆ.

ಜಗತ್ತನ್ನು ಬೆಕ್ಕಸ ಬೆರಗಾಗುವಂತೆ ಮಾಡಿದ ‘ಡಾಕ್ಟರ್’.

ಇಡೀ ಅಮೆರಿಕಾದ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿದ ‘ಮಹಾನ್ ಚತುರ’.

ಇಡೀ ಜಗತ್ತಿನ ಬೀದಿಗಳಲ್ಲಿ, ಗಲ್ಲಿಗಳಲ್ಲಿ ಹುಚ್ಚರಂತೆ ಜನ ಪ್ರೀತಿಸಿದ ‘ಚೆ’.

ಎದೆಯಲ್ಲಿ ಕಾವ್ಯ, ಕೈಯಲ್ಲಿ ಖಡ್ಗ.. ಅಲ್ಲಲ್ಲ.. ಕೋವಿ ಹಿಡಿದ ‘ಚೆ’.

ಎಂದೆಂದೂ ಕವಿಯಾಗದ ಬಂಡಾಯಗಾರ ಎಂದು ನೋವಿನಿಂದ ತನ್ನನ್ನು ಬಣ್ಣಿಸಿಕೊಂಡ ‘ಚೆ’.

***
ಚೆಗೆವಾರ ಭಾರತಕ್ಕೆ ಬಂದಿದ್ದರು ಎಂದು ಗೊತ್ತಾದದ್ದೇ ನಾನು ಒಂದು ಕ್ಷಣ ಮಾತಿಲ್ಲದವನಾದೆ.

ನಾನು ಆ ಚೆಗೆವಾರ ಪ್ರೀತಿಗೆ ಬಿದ್ದು, ಆ ಕಾರಣಕ್ಕಾಗಿಯೇ ಕ್ಯೂಬಾಕ್ಕೆ ಹೋಗಿ ಬಂದು, ಇದ್ದ ನೂರೆಂಟು ಮಾಹಿತಿಗಳನ್ನು ಗುಡ್ಡೆ ಹಾಕಿಕೊಂಡು, ನನ್ನೊಳಗಿನ ಎಲ್ಲಾ ಪ್ರೀತಿ ಧಾರೆ ಎರೆದು ‘ನನ್ನೊಳಗಿನ ಹಾಡು ಕ್ಯೂಬಾ’ ಎನ್ನುವ ಪ್ರವಾಸ ಕಥನ ಬರೆದಿದ್ದೆ.

ಆಗಲೂ ಸಿಗದಿದ್ದ ಈ ಒಂದು ಮಾಹಿತಿ ಈಗ ಥಟ್ಟೆಂದು ನನ್ನೆದುರು ನಿಂತಿತ್ತು.

ಹಾಗೆ ಚೆಗೆವಾರ ಭಾರತಕ್ಕೆ ಬಂದದ್ದನ್ನು ಬಿಡಿಸಿಟ್ಟವರು ಓಂ ತನ್ವಿ, ಹೆಸರಾಂತ ಪತ್ರಕರ್ತ.

‘ಜನಸತ್ತಾ’ ದೈನಿಕದ ಸಂಪಾದಕರಾಗಿದ್ದ ಓಂ ತನ್ವಿ ಅವರಿಗೂ ನನ್ನಂತೆಯೇ ಚೆಗೆವಾರ ಹುಚ್ಚು.

ಕ್ಯೂಬಾ ಪ್ರವಾಸ ಕಥನ ಬರೆಯುತ್ತಾ ನಾನು ಚೆಗೆವಾರ ಎನ್ನುವುದೇ ಒಂದು ಗುಂಗೀ ಹುಳು ಎಂದು ಬಣ್ಣಿಸಿದ್ದೆ.

ಚೆ ಎನ್ನುವುದೊಂದು ಹುಚ್ಚು. ಚೆ ಎನ್ನುವುದು ಹುಚ್ಚೇ ಆದಲ್ಲಿ ಜಗತ್ತು ಹುಚ್ಚರ ಸಂತೆಯಾಗಲಿ, ಆಸ್ಪತ್ರೆ ಇಲ್ಲದಿರಲಿ ಎಂದು ಆಶಿಸಿದ್ದೆ.

ಓಂ ತನ್ವಿ ಅವರು ಚೆ ಭಾರತಕ್ಕೆ ಬಂದದ್ದಕ್ಕೆ ಸಾಕ್ಷಿಯಾಗಿದ್ದರು. ಸರಣಿ ಲೇಖನಗಳನ್ನು ಬರೆದರು. ಅಷ್ಟಕ್ಕೇ ಸುಮ್ಮನಾಗಲಿಲ್ಲ. ನೇರ ಕ್ಯೂಬಾಗೆ ಹೋದರು. ಚೆ ಮಗ ಕ್ಯಾಮಿಯೋ ಗೆವಾರನ ಕೈ ಕುಲುಕಿದರು.

ಹವಾನಾದಲ್ಲಿ ಚೆ ಇದ್ದ ಮನೆ ಈಗ ಚೆಗೆವಾರ ಅಧ್ಯಯನ ಕೇಂದ್ರವಾಗಿ ಬದಲಾಗಿದೆ.

ಅಲ್ಲಿದ್ದ ಕಡತಗಳನ್ನು ತಿರುವು ಹಾಕಿದರು. ಸ್ಪಾನಿಶ್ ನಲ್ಲಿದ್ದ ವರದಿಗಳನ್ನು ಹಿಂದಿಗೆ ಭಾಷಾಂತರ ಮಾಡಿಸಿದರು.

ಪ್ರೀತಿಯಿಂದ ಸಿಗಾರ್ ಪಡೆದಿದ್ದ ನೆಹರೂ ಅವರು ಆ ಭೇಟಿಯನ್ನು ಸ್ಮರಣೀಯವಾಗಿಸಲು ‘ಕುಕ್ರಿ’ಯೊಂದನ್ನು ಕೊಟ್ಟಿದ್ದರು. ಅದನ್ನೂ ನೋಡಿ ಬಂದರು.

ಭಾರತಕ್ಕೆ ವಾಪಸಾದ ತನ್ವಿ ಅವರು ಸುಮ್ಮನೆ ಕೂರಲಿಲ್ಲ. ಇನ್ನು ನನ್ನ ಕೆಲಸ ಭಾರತದ ಕಡತಗಳನ್ನು ತಿರುವಿಹಾಕುವುದು ಎಂದು ನಿರ್ಧರಿಸಿದರು. ಭಾರತ ಸರ್ಕಾರದ ಅನೇಕ ಕಚೇರಿಗಳಿಗೆ ಭೇಟಿ ಕೊಟ್ಟರು.

ಭಾರತದ ಯಾವುದೇ ಕಡತಗಳಲ್ಲಿಯೂ ‘ಚೆ’ ಎನ್ನುವ ಹೆಸರೇ ಇಲ್ಲ. ಅವರು ಕಮಾಂಡೆಂಟ್ ಅರ್ನೆಸ್ಟೊ ಗೆವಾರ ಮಾತ್ರ.

ಅರ್ಜೆಂಟೀನಾದ ಚೆ ಕ್ರಾಂತಿಗೆ ಸಾಥ್ ನೀಡಿದ್ದು ಕ್ಯೂಬಾಗೆ. ಆತ ಭಾರತಕ್ಕೆ ಬಂದಿಳಿದಾಗ ಚೆ ಯಾರು ಎನ್ನುವ ಗೊಂದಲ. ಯಾವ ದೇಶದ ನಾಗರಿಕ ಎಂದು.

ಫಿಡೆಲ್ ಹೇಳಿದ್ದರು- ಚೆ ಕ್ಯೂಬಾದ ಸಹಜ ನಾಗರಿಕ ಎಂದು.

ಕ್ರಾಂತಿ ಜರುಗಿ ಇನ್ನೂ ಆಗತಾನೆ ಫಿಡೆಲ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು. ಆಗ ಚೆ ಯಾವ ಹುದ್ದೆಯನ್ನೂ ಹೊಂದಿರಲಿಲ್ಲ. ಹಾಗಾಗಿಯೇ ಭಾರತಕ್ಕೆ ಮತ್ತೂ ಗೊಂದಲ. ಇವರನ್ನು ಏನೆಂದು ಗುರುತಿಸುವುದು ಅಂತ.

ಕೊನೆಗೆ ಕ್ಯೂಬಾದ ನಾಯಕ ಅಂತ ಮಾತ್ರ ನಮೂದಿಸಿ ಕೈ ತೊಳೆದುಕೊಂಡಿತು.

ಚೆಗೆವಾರ ಭಾರತಕ್ಕೆ ಬಂದಾಗ ಉಳಿದುಕೊಂಡಿದ್ದು ಆಗ ತಾನೇ ಹೊಸದಾಗಿ ನಿರ್ಮಿಸಲಾಗಿದ್ದ ದೆಹಲಿಯ ಅಶೋಕಾ ಹೋಟೆಲ್ ನಲ್ಲಿ.

ಆಕಾಶವಾಣಿಯ ಕೆ ಪಿ ಭಾನುಮತಿ ಅವರು ಅಲ್ಲಿಯೇ ಚೆಗೆವಾರನನ್ನು ಸಂದರ್ಶಿಸಿದ್ದರು.

ಓಂ ತನ್ವಿ ಅವರ ಮನೆಯ ಕದವನ್ನೂ ತಟ್ಟಿದರು ಭಾನುಮತಿ ‘ಮಿಲಿಟರಿ ಧಿರಿಸಿನಲ್ಲಿದ್ದ ಸಂತ’ನ ಬಗೆಗಿನ ನೆನಪುಗಳ ಮಾಲೆ ಹೆಣೆದರು.

ನಂತರ ತನ್ವಿ ಹಿಂದುಸ್ತಾನ್ ಟೈಮ್ಸ್ ಕಚೇರಿಗೆ ಭೇಟಿ ಕೊಟ್ಟರು. ಚೆ ಭಾರತ ಭೇಟಿಯ ಬಗ್ಗೆ ಇದ್ದ ವರದಿಗಳನ್ನೆಲ್ಲಾ ಸಂಗ್ರಹಿಸಿದರು. ಸರ್ಕಾರದ ಫೋಟೋ ಡಿವಿಷನ್ ನಲ್ಲಿದ್ದ ಫೋಟೋಗಳನ್ನು ಸಂಗ್ರಹಿಸಿದರು.

ಚೆ ಭೇಟಿ ನೀಡಿದ ಕೊಲ್ಕೋತ್ತಕ್ಕೂ ಹೋಗಿ ಬಂದರು.

೧೯೬೨ ರಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಲಂಡನ್ ನ ‘ ದಿ ಅಬ್ಸರ್ವರ್’ ಪತ್ರಿಕೆಯಲ್ಲಿದ್ದಾಗ ಹವಾನಾದಲ್ಲಿ ಚೆಗೆವಾರನ ಎದುರು ಕೂತು ರೇಖಾಚಿತ್ರ ಬಿಡಿಸಿದ್ದರು. ಆ ರೇಖಾಚಿತ್ರವನ್ನೂ ತನ್ವಿ ಸಂಗ್ರಹಿಸಿದರು.

ಅಲ್ಲೊಂದು ವಿಶೇಷವಿತ್ತು. ಅಬು ಬರೆದ ಚಿತ್ರದ ಶರ್ಟ್ ನ ಕಾಲರ್ ಮೇಲೆ ಚೆಗೆವಾರ ಪ್ರೀತಿಯಿಂದ ‘ಚೆ’ ಎಂದು ಸಹಿ ಮಾಡಿದ್ದ.

ಭಾರತಕ್ಕೆ ಕ್ಯೂಬಾ ಬಗ್ಗೆ ಇದ್ದ ಪ್ರೀತಿ ಅಪಾರ, ಇದು ಆ ಫಿಡೆಲ್ ಕ್ಯಾಸ್ಟ್ರೋಗೂ ಗೊತ್ತಿತ್ತು. ‘ಭಾರತ ತನ್ನ ಕಡುಕಷ್ಟ ಕಾಲದ ಸಂಗಾತಿ’ ಎಂದು.

ಹಾಗಾಗಿಯೇ ಕ್ಯೂಬಾ ಅಮೆರಿಕಾವನ್ನು ಹಿಮ್ಮೆಟ್ಟಿಸಿ, ಮಣಿಸಿ ಸ್ವಾತಂತ್ರ್ಯ ಗಳಿಸಿಕೊಂಡ ೬ ತಿಂಗಳಿಗೇ ಚೆಗೆವಾರನನ್ನು ಭಾರತದತ್ತ ಮುಖ ಮಾಡುವಂತೆ ಮಾಡಿದ್ದರು.

ಚೆಗೆವಾರ ಎಂದರೆ ಚೆಗೆವಾರನೇ.

‘ನಿನಗೆ ಅಸ್ತಮಾ ಇದೆ ಇನ್‌ಹೇಲರ್ ತೆಗೆದುಕೊಂಡು ಹೋಗಲು ಮರೆಯಬೇಡ’ ಎಂದು ಹೆಂಡತಿ ತಾಕೀತು ಮಾಡಿದಾಗ ಅತ್ಯಂತ ನಿಷ್ಥನಾಗಿ ಇನ್‌ಹೇಲರ್ ಮರೆತು ಕವಿತೆಯ ಸಂಕಲನಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ದಾತ.

ಭಾರತಕ್ಕೆ ಬಂದಾಗಲೂ ಹಾಹಾಗೇ ಮಾಡಿದ್ದ. ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ವನ್ನು ಓದಿ ಅವರೊಂದಿಗೆ ಊಟಕ್ಕೆ ಕುಳಿತಾಗ ಊಟ ಮಾಡುವುದನ್ನೂ ಮರೆತು ಅದರ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದ.

ನೆಹರೂ, ಕೃಷ್ಣ ಮೆನನ್ ಭೇಟಿ ಮಾಡಿದ ಚೆಗೆವಾರನಿಗೆ ಅಷ್ಟು ಮಾತ್ರವೇ ಗುರಿ ಆಗಿರಲಿಲ್ಲ. ಆತ ಹೊಲಗಳಲ್ಲಿ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಕಬ್ಬು ಕತ್ತರಿಸಿದವನು. ಶಾಲೆಗಳಲ್ಲಿ ಮಕ್ಕಳು ಓದಲೆಂದು ಚಿಮಣಿ ದೀಪ ಹೊತ್ತಿಸಿದವನು. ಹಾಗಾಗಿಯೇ ಭಾರತದಲ್ಲೂ ಆತ ಮಾಡಿದ್ದು ಅದನ್ನೇ.

ತನ್ನ ಆರು ಜನರ ನಿಯೋಗವನ್ನು ಹೊರಡಿಸಿಕೊಂಡು ಆತ ದೆಹಲಿಯ ಸನಿಹದಲ್ಲೇ ಇದ್ದ ಪಿಲಾನ್ ನ ಶಾಲೆ, ಹೊಲಗಳತ್ತ ನಡೆದ. ಶಾಲೆಯ ಪರಿಸ್ಥಿತಿ ಆತನನ್ನು ಕಂಗೆಡಿಸಿಹಾಕಿತು.

ರೈತರು ಚೆಯನ್ನು ಕಂಡವರೇ ಹಾರ ಹಿಡಿದು ಬಂದರು. ಆದರೆ ಚೆ ಮನಸ್ಸು ಹಣ್ಣಾಗಿ ಹೋಗಿತ್ತು. ಆತನ ಕಣ್ಣೆದುರಿಗೆ ಕಂಡ ರೈತರ ಬಡತನ, ಕೈಗಾರಿಕೆಯ ಮಾಲೀಕರ ಶ್ರೀಮಂತಿಕೆ ಕುಗ್ದಿಸಿಹಾಕಿತ್ತು.

‘ಕೆಲವೇ ಮಂದಿಯ ಕೈಯಲ್ಲಿ ಎಷ್ಟೊಂದು, ಹಲವರ ಕೈನಲ್ಲಿ ಏನೂ ಇಲ್ಲ’ ಎಂದು ಬರೆದ.

ಕೊಲ್ಕೊತ್ತದ ಬೀದಿಗಳಲ್ಲಿ ಪಕ್ಕಾ ಪಡ್ಡೆ ಹುಡುಗನಂತೆ ಕ್ಯಾಮೆರಾ ಹಿಡಿದು ಬೀದಿ ಬೀದಿಗಳ ಫೋಟೋ ತೆಗೆಯುತ್ತಾ ಹೋದ.

ನೆಹರೂ ಕೊಟ್ಟ ‘ಕುಕ್ರಿ’ಯ ಮೇಲಿದ್ದ ಕೆತ್ತನೆ ನೋಡಿ ಮಗುವಿನಂತೆ ಕಣ್ಣರಳಿಸಿದ.

ಸಕ್ಕರೆಯ ನಾಡಿನಿಂದ ಬಂದವನು ಹಲವರ ಎದೆಯಲ್ಲಿ ಸಿಹಿ ಉಳಿಸಿ ಹೋದ.

ಯಾಕೋ ತುಂಬಾ ನೆನಪಾಗುತ್ತಿದೆ. ಅವತ್ತು ಹವಾನಾದ ಕಾರ್ಮಿಕ ಕಾಲೋನಿಯಲ್ಲಿ ಗೆಳೆಯ ಸಿದ್ಧನಗೌಡ ಪಾಟೀಲ್ ತಮ್ಮ ಕಂಚು ಕಂಠವನ್ನು ಸರಿಮಾಡಿಕೊಂಡು ನಿಂತಿದ್ದರು. ಚೆಗೆವಾರನನ್ನು ನನ್ನಂತೆಯೇ ಇನ್ನಿಲ್ಲದಂತೆ ಪ್ರೀತಿಸಿದ ಜೀವ ಅದು.

‘ಭೂಮಿ ಮೇಲೆ ಸೂರ್ಯ ಚಂದ್ರ ಇರುವವರೆಗೂ ನಿನ್ನ ಹೆಸರು ಅಜರಾಮರ ಚೆಗೆವಾರ, ಚೆಗೆವಾರ’ ಎಂದು ಹಾಡುತ್ತಿದ್ದರು.

ಚೆಗೆವಾರ ಭಾರತಕ್ಕೆ ಬಂದದ್ದು ಜುಲೈ 1 ರಂದು 1959.

ಆರು ದಿನಗಳ ಕಾಲ ಇದ್ದು ಹೋದ ಆ ‘ಚೆ ‘ಹೆಜ್ಜೆಗಳನ್ನು ಹುಡುಕಲು ನಾನು ಇದನ್ನು ಬರೆಯಲು ಕುಳಿತೆ..