Saturday, May 9, 2026
Google search engine
Home Blog Page 197

ತುಮಕೂರು:26 ಮಂದಿಗೆ ಕೊರೊನಾ, ಕುಣಿಗಲ್ ಗೆ ಲಗ್ಗೆ ಇಟ್ಟ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕು ರುದ್ರ ತಾಂಡವ ಆಡಿದೆ.

ಒಟ್ಟು 26 ಮಂದಿಗೆ ಸೋಕು ತಗುಲಿದೆ.‌ಇದರಲ್ಲಿ ತುಮಕೂರು ತಾಲ್ಲೂಕಿನಲ್ಲಿ 8 ಮಂದಿಗೆ ಸೋಂಕು ವಕ್ಕರಿಸಿದೆ.

ಕುಣಿಗಲ್ ತಾಲ್ಲೂಕಿನಲ್ಲಿ ಇಂದೂ ಸಹ 6 ಮಂದಿ ಸೋಂಕು ಪೀಡಿರಾಗಿದ್ದಾರೆ.

ಪಾವಗಡದಲ್ಲಿ ಮೂರು ಮಂದಿಗೆ, ಶಿರಾದಲ್ಲಿ ಇಬ್ಬರಿಗೆ, ಮಧುಗಿರಿಯಲ್ಲಿ ನಾಲ್ಕು, ಗುಬ್ಬಿಯಲ್ಲಿ ಎರಡು ಹಾಗೂ ಚಿಕ್ಕನಾಯ

ಸರಳವಾಗಿ ನಡೆದ ಆಂಜನೇಯ ರಥೋತ್ಸವ

ಚಿಕ್ಕನಾಯಕನಹಳ್ಳಿ: ಸುಪ್ರಸಿದ್ಧ ಇಲ್ಲಿನ ಹಳೆಯೂರು ಆಂಜನೇಯ ಸ್ವಾಮಿ ಅದ್ಧೂರಿ ಏಕಾದಶಿ ಜಾತ್ರೆ ಸರಳವಾಗಿ ನಡೆಯಿತು.

ಏಕಾದಶಿಯ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.

ಅಶಾಢ ಮಾಸದಲ್ಲಿ ನಡೆಯುವ ಈ ಜಾತ್ರೆಯಲ್ಲಿ ನವ ವಧು ವರರು ಭಾಗವಹಿಸುವುದು ರೂಢಿ.‌ಹೀಗಾಗಿಯೇ ಈ ಜಾತ್ರೆ ಪ್ರಸಿದ್ಧಿ ಪಡೆದಿದೆ.

ಕೊರೊನಾ ಕಾರಣ ಜಾತ್ರೆ ರದ್ದುಪಡಿಸಲಾಗಿತ್ತು.‌ ದೇವಸ್ಥಾನದೊಳಗೆ ಅರ್ಚಕರು ಸ್ವಾಮಿಗೆ ಪೂಜೆ ನೆರವೇರಿಸಿದರು.

ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ಡ್ಯಾನ್ಸ್ ಡ್ಯಾನ್ಸ್, ಆದರ್ಶ ದಂಪತಿ ಕಾರ್ಯಕ್ರಮಗಳು ಇರಲಿಲ್ಲ.

ಐ ಪಿ ಎಲ್ ಭಾರತ v/s ಬಿ ಪಿ ಎಲ್ ಭಾರತ

ಜಿ ಎನ್ ಮೋಹನ್


ನೀವು ಕೊನೆಯ ಬಾರಿಗೆ ರೈತರ ಜೊತೆ ಮಾತನಾಡಿದ್ದು ಯಾವಾಗ?’ ಎಂದು ಪ್ರಶ್ನಿಸಿದವರು ಪಿ ಸಾಯಿನಾಥ್.ರೈತರ ಸಮಸ್ಯೆಯನ್ನು ಆಲಿಸುವುದಕ್ಕಾಗಿಯೇ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕು ಎಂದು ಒತ್ತಾಯಿಸಲು ರೈತರ ಬೃಹತ್ ಜಾತಾ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಜನಾಭಿಪ್ರಾಯ ರೂಪಿಸಲು ಸಾಯಿನಾಥ್ ದೇಶದ ಎಲ್ಲೆಡೆ ಸುತ್ತುತ್ತಿದ್ದರು.ಇದರ ಅಂಗವಾಗಿಯೇ ಅವರು ಬೆಂಗಳೂರಿಗೆ ಬಂದಾಗ ಕೇಳಿದ ಪ್ರಶ್ನೆ ಇದು.ಸಭಾಂಗಣದಲ್ಲಿ ಒಂದು ನಿಮಿಷ ಗಾಢ ಮೌನ. ಆ ಪ್ರಶ್ನೆ ಎಬ್ಬಿಸಿದ ಅಲೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.ಆದರೆ ಸ್ಪಷ್ಟವಾಗಿ ಗೊತ್ತಾಗದೇ ಹೋಗಿದ್ದು ನನ್ನೊಳಗಿನ ತೊಳಲಾಟ. ಅಥವಾ ಮಾಧ್ಯಮವನ್ನು ಪ್ರತಿನಿಧಿಸುತ್ತಿರುವ ನನ್ನಂತ ಹಲವರ ತೊಳಲಾಟ.ಮಾಧ್ಯಮ ಉದ್ಯಮದ ಎಲ್ಲಾ ಪಟ್ಟುಗಳನ್ನೂ ಕರಗತಮಾಡಿಕೊಂಡದ್ದಕ್ಕೂ ನಾವು ರೈತನ ಜೊತೆ ಮಾತನಾಡದೆ ಹಿಂದೆ ಸರಿದಿರುವುದಕ್ಕೂ ಸ್ಪಷ್ಟ ಕೊಂಡಿಗಳಿವೆ. ಭಾರತದಲ್ಲಿ ಮಾಧ್ಯಮವೂ ಸಹಾ ಈ ಗ ಒಂದು ಉದ್ಯಮ ಮಾತ್ರ.‘ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ’ ಎಂದು ಎಲ್ಲರೂ ಭರವಸೆಯಿಂದ ನೋಡುತ್ತಿದ್ದ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಂಟನ್ನು ತಾನೇ ಕೈಯಾರ ಕಳಚಿಕೊಳ್ಳತೊಡಗಿದೆ.ಕೊಂಡುಕೊಳ್ಳಲು ಶಕ್ತಿ ಇರುವವನಿಗೆ ಕೊಂಡುಕೊಳ್ಳಲಾಗದವರ ಬದುಕನ್ನು ಬಿಡಿಸಿಡುತ್ತಿದ್ದ ದಿನಗಳಿದ್ದವು.ಆದರೆ ಯಾವಾಗ ಜಾಗತೀಕರಣಕ್ಕೆ ಹೆದ್ದಾರಿ ನಿರ್ಮಿಸಲು ಸರ್ಕಾರ ಮುಂದಾಯಿತೋ ಮಾಧ್ಯಮದ ಬಣ್ಣವೂ ಬದಲಾಗತೊಡಗಿತು.ಮಾಧ್ಯಮ ರಂಗ ಕ್ರಮೇಣ ಲಾಭದ ಮೇಲೆ ಕಣ್ಣಿಟ್ಟ ಇನ್ನೊಂದು ಉದ್ಯಮವಾಗತೊಡಗಿತು.ಈ ಕಾರಣಕ್ಕಾಗಿಯೇ ಲಾಭ ತಂದುಕೊಡುವುದಕ್ಕೆ ಮಾತ್ರ ಪ್ರಾಧಾನ್ಯತೆ ದೊರೆಯಲು ಆರಂಭಿಸಿತು. ಲಾಭ ಕೊಡುವವರು ಮಾತ್ರ ಸುದ್ದಿಯಾಗತೊಡಗಿದರು.ಅಲ್ಲಿಯವರೆಗೆ ಕೊಂಡುಕೊಳ್ಳಲಾಗದವನ ದುಸ್ತರ ಬದುಕಿನ ಬಗ್ಗೆಯೂ ಕಾಳಜಿ ವಹಿಸುತ್ತಿದ್ದ ಮಾಧ್ಯಮಗಳು ಕೊಂಡುಕೊಳ್ಳುವ ಶಕ್ತಿ ಇರುವವರಿಗೆ ಕೊಂಡುಕೊಳ್ಳುವವನ ಕಥೆಗಳನ್ನೇ ಮಾರಾಟ ಮಾಡತೊಡಗಿದವು.ಮಾಧ್ಯಮ ಎಂಬುದು ಒಂದು ಸೇತುವೆ. ಸಮಾಜ ಹಾಗೂ ಸರ್ಕಾರದ ನಡುವೆ ಇರುವ ಅತಿ ಮುಖ್ಯವಾದ ಸೇತುವೆ ಎನ್ನುವುದನ್ನು ವಿಶ್ವಸಂಸ್ಥೆಯೇ ಘೋಷಿಸಿತ್ತು.ಜಗತ್ತಿನಾದ್ಯಂತ ಸಂಚರಿಸಿದ ವಿಶ್ವಸಂಸ್ಥೆಯ ತಂಡ ಮಾಧ್ಯಮದ ಅಧ್ಯಯನ ಮಾಡಿ ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಮಾಧ್ಯಮ ಇನ್ನೊಂದು ಸರಕು ಅಷ್ಟೇ. ಏಕೆಂದರೆ ಅಲ್ಲಿ ಅಭಿವೃದ್ಧಿಯನ್ನು ಒಂದು ಮಟ್ಟಕ್ಕೆ ಸಾಧಿಸಲಾಗಿರುತ್ತದೆ.ಆದರೆ ಭಾರತದಂತಹ ಇನ್ನೂ ಅಭಿವೃದ್ಧಿಯ ಎತ್ತರವನ್ನು ಕಾಣದ ರಾಷ್ಟ್ರಕ್ಕೆ ಮಾಧ್ಯಮ ಎನ್ನುವುದು ಒಂದು ಊರುಗೋಲು ಎಂದು ಅಭಿಪ್ರಾಯಪಟ್ಟಿತ್ತು.ನಮ್ಮ ದೇಶದ ಮಾಧ್ಯಮ ಅರಳಿದ್ದು ಸ್ವಾತಂತ್ರ್ಯ ಚಳವಳಿಯಲ್ಲಿ. ವಸಾಹತುಶಾಹಿಯಿಂದ ಬಿಡುಗಡೆಗೊಳ್ಳಬೇಕೆಂಬ ತಹತಹಕ್ಕೆ ಮಾಧ್ಯಮಗಳು ಕೀಲೆಣ್ಣೆಯಾಗಿದ್ದವು.ಸ್ವಾತಂತ್ರ್ಯಾನಂತರದಲ್ಲಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ ಮಾಧ್ಯಮ ಆ ಗುರಿಯನ್ನು ತಲುಪುವ ಮುನ್ನವೇ ಬಂದೆರಗಿದ್ದು ಜಾಗತೀಕರಣ.ಜಾಗತೀಕರಣ ದೇಶಗಳ ನಡುವಣ ಗಡಿ ಗೋಡೆಯನ್ನು ತೊಡೆದು ಹಾಕಿ ವಿಶ್ವವನ್ನು ಒಂದು ಹಳ್ಳಿಯಾಗಿ ಬದಲಾಯಿಸುತ್ತದೆ ಎನ್ನುವಾಗ ಅದರ ಬದಲಿಗೆ ಜಾಗತೀಕರಣಗೊಂಡದ್ದು ಉದ್ಯಮಿಗಳ ದಾಹ.ದೇಶಗಳ ಗಡಿ ಗೋಡೆ ಇಲ್ಲ ಎಂದಾಕ್ಷಣ ಭಾರತ ಹಲವು ಉದ್ಯಮಗಳಲ್ಲಿ ಹೆಜ್ಜೆ ಹಾಕಿ ತಲ್ಲಣಗಳನ್ನು ಉಂಟುಮಾಡಿದ ಬಹುರಾಷ್ಟ್ರೀಯ ಕಂಪನಿಗಳು ಮಾಧ್ಯಮವನ್ನೂ ಬಿಡಲಿಲ್ಲ.ಆ ವೇಳೆಗಾಗಲೇ ಭಾರತದೊಳಗಿದ್ದ ಬೃಹತ್ ಉದ್ಯಮಿಗಳಿಗೂ ಬೇಕಾಗಿದ್ದದ್ದು ಇದೇ.ಅವರು ಆ ವೇಳೆಗೆ ಮಾಧ್ಯಮದ ಶಕ್ತಿಯನ್ನು ಮನಗಂಡಿದ್ದರು. ಆಲೋಚನೆಗಳನ್ನು ತಮ್ಮ ಕನ್ನಡಕದ ಮೂಲಕ ಕಾಣಿಸಿಬಿಡುವ ಶಾರ್ಟ್ ಕಟ್ ಅವರಿಗೆ ಪ್ರಿಯವಾಗಿತ್ತು.ದೇಶದ ಆಲೋಚನೆಯನ್ನು ರೂಪಿಸುವ, ಇದ್ದ ಆಲೋಚನೆಯನ್ನೂ ತಮಗೆ ಬೇಕಾದಂತೆ ತಿದ್ದುಬಿಡಬಹುದಾದ ಸುಲಭ ದಾರಿ ಸಿಕ್ಕಿದ್ದು ಅವರಿಗೆ ಸಂತೋಷವನ್ನೇ ತಂದುಕೊಟ್ಟಿತು.‘ಉದಯವಾಣಿ’ ಪ್ರಯೋಗಾರ್ಥವಾಗಿ ನಡೆಸಿದ ಕುಗ್ರಾಮ ಗುರುತಿಸಿ ಸ್ಪರ್ಧೆಯನ್ನು ನಾನು ಸನಿಹದಿಂದ ಕಂಡಿದ್ದೇನೆ.ಮಾಧ್ಯಮಕ್ಕೆ ಇರುವ ಶಕ್ತಿ ನನಗೆ ಸರಿಯಾಗಿ ಅರ್ಥವಾಗಿದ್ದು ಸಹಾ ಈ ಪ್ರಯೋಗವನ್ನು ಅಷ್ಟು ಹತ್ತಿರದಿಂದ ನೋಡಲು ಸಾಧ್ಯವಾದ ಕಾರಣಕ್ಕಾಗಿಯೇ.ಅದು ಕುಗ್ರಾಮ ಗುರುತಿಸಿ ಸ್ಪರ್ಧೆ.ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಗ್ರಾಮಗಳನ್ನು ಗುರುತಿಸಿ ಅದರ ಹೆಸರನ್ನು ಕಳಿಸಿಕೊಡುವಂತೆ ಪತ್ರಿಕೆ ಕೇಳಿತ್ತು. ಹಾಗೆ ಬಂದದ್ದು ನೂರಾರು ಹೆಸರುಗಳು. ಅದರಲ್ಲಿ ಕೆಲವನ್ನು ಆಯ್ಕೆಮಾಡಿಕೊಂಡ ಪತ್ರಿಕೆ ಆ ಕುಗ್ರಾಮಗಳ ಪರಿಸ್ಥಿತಿಯ ಬಗ್ಗೆ ಮೇಲಿಂದ ಮೇಲೆ ಒಂದಷ್ಟು ವರದಿಗಳನ್ನು ಪ್ರಕಟಿಸಿತು.ಅಂತಹ ಕುಗ್ರಾಮದಲ್ಲಿ ಪಶ್ಚಿಮ ಘಟ್ಟದಲ್ಲಿರುವ ದಿಡುಪೆಯೂ ಒಂದು.ಇಲ್ಲಿ ರಸ್ತೆ ಇರಲಿಲ್ಲ, ದೀಪವಿರಲಿಲ್ಲ, ಹಾಗಾಗಿ ಮಕ್ಕಳು ಶಾಲೆಗೇ ಹೋಗುವುದು ದುಸ್ತರವಾಗಿತ್ತು. ಮನೆಗಳಲ್ಲಿ ಬೆಳಕಿರಲಿಲ್ಲ, ಅನಾರೋಗ್ಯ ತಾಂಡವವಾಡುತ್ತಿತ್ತು.ಆದರೆ ಯಾವಾಗ ಉದಯವಾಣಿ ಮೇಲಿಂದ ಮೇಲೆ ಕೆಲವು ವಿಶೇಷ ವರದಿಗಳನ್ನು ಪ್ರಕಟಿಸಿತೋ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಯುವಕ ಸಂಘಗಳು ಆ ಕುಗ್ರಾಮಕ್ಕೆ ತೆರಳಿ ಶ್ರಮದಾನ ಮಾಡಿದವು.ಪರಿಣಾಮ ಅಲ್ಲಿಗೆ ಒಂದು ಕಚ್ಚಾ ರಸ್ತೆ ನಿರ್ಮಾಣವಾಯಿತು. ಪ್ರಯತ್ನ ಪುಟ್ಟದು, ಆದರೆ ಪರಿಣಾಮ ದೊಡ್ಡದು.ಆ ಕಚ್ಚಾ ರಸ್ತೆ ಬಂದ ಕಾರಣದಿಂದಾಗಿ ಆ ಊರಿಗೆ ಸೀಮೆ ಎಣ್ಣೆ ಬಂತು. ಸೀಮೆ ಎಣ್ಣೆ ಕಾರಣದಿಂದಾಗಿ ಊರಿಗೆ ಬೆಳಕು ಬಂತು. ಆ ರಸ್ತೆಯ ಪರಿಣಾಮದಿಂದಾಗಿ ಆ ಊರಿಗೆ ವಾರಕ್ಕೊಮ್ಮೆ ವೈದ್ಯರು ಬಂದು ಹೋಗಲು ಆರಂಭಿಸಿದರು.ಪರಿಣಾಮ ಕುಗ್ರಾಮದ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತು. ಯಾವ ಗ್ರಾಮ ಅನಕ್ಷರಸ್ಥ ಗ್ರಾಮವಾಗಿತ್ತೋ ಅಲ್ಲಿನ ಮಕ್ಕಳು ಈಗ ಇದೇ ರಸ್ತೆ ಕಾರಣದಿಂದಾಗಿ ಶಾಲೆಯ ಮುಖ ನೋಡಲು ಆರಂಭಿಸಿದರು.ಒಂದು ಮಾಧ್ಯಮ ಸಮಾಜದ ಮೇಲೆ ಮಾಡುವ ಪರಿಣಾಮಕ್ಕೆ ಇದು ಒಂದು ಪುಟ್ಟ ಉದಾಹರಣೆ ಅಷ್ಟೇ.ಇದು ಸಾಧ್ಯವಾದದ್ದು ಮಾಧ್ಯಮ ಅಲ್ಲಿಯವರೆಗೂ ಸಮಾಜದ ಅಭಿವೃದ್ಧಿಯನ್ನು ತನ್ನ ಕರ್ತವ್ಯ ಎಂದು ಭಾವಿಸಿದ್ದರಿಂದ.ಆದರೆ ಜಾಗತೀಕರಣ ಕಾಲಿಟ್ಟು, ಅದರ ಬೆನ್ನು ಹತ್ತಿ ದೇಶ ವಿದೇಶದ ಬಹುರಾಷ್ಟ್ರೀಯ ಕಂಪನಿಗಳು ಬಂದಿಳಿದು, ಮಾಧ್ಯಮಗಳನ್ನು ತನ್ನ ಉದ್ಧೇಶದಿಂದ ಬೇರ್ಪಡಿಸಿ ಲಾಭ ಮಾಡಲು ನಿಂತಾಗ..ಮಾಧ್ಯಮದ ಪ್ರಭಾವವನ್ನು ಯಥೇಚ್ಛವಾಗಿ ಬಳಸಲು ಆರಂಭಿಸಿದಾಗ..ಈ ಕಾರಣಕ್ಕಾಗಿಯೇ ಮಾಧ್ಯಮದೊಳಗೆ ರೈತ ಕಾಣೆಯಾದದ್ದು ಹಾಗೂ ಮಾಧ್ಯಮದೊಳಗಿದ್ದವರೂ ರೈತನ ಜೊತೆಗಿನ ನಂಟನ್ನು ಕಡಿದುಕೊಳ್ಳಬೇಕಾಗಿ ಬಂದದ್ದು.ಈ ಪ್ರಶ್ನೆಯನ್ನು ಕೇಳಿದ ಪಿ ಸಾಯಿನಾಥ್ ಮಾತನ್ನು ಮುಂದುವರೆಸಿ ಇನ್ನೂ ಒಂದು ವಿಷಯದತ್ತ ನಮ್ಮ ಗಮನ ಸೆಳೆದರು.ಭಾರತ ಇಂದು ಎರಡಾಗಿ ವಿಭಜನೆಯಾಗಿ ಹೋಗಿದೆ. ಒಂದು ಐ ಪಿ ಎಲ್ ಭಾರತ ಇನ್ನೊಂದು ಬಿಪಿಎಲ್ ಭಾರತ ಎಂದರು.ಐ ಪಿ ಎಲ್ ಕ್ರಿಕೆಟ್ ಮ್ಯಾಚ್ ಗಳನ್ನೂ ನೋಡುತ್ತಾ ಐ ಟಿ, ಬಿ ಟಿ ಉದ್ಯೋಗ ಅರಸುತ್ತಾ ವೀಸಾ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ ನೆಮ್ಮದಿಯಾಗಿದ್ದುಬಿಡುವ ಐ ಪಿ ಎಲ್ ಭಾರತ ಒಂದೆಡೆ.ಮತ್ತೊಂದು ಕಡೆ ಒಂದು ಹೊತ್ತಿನ ಊಟಕ್ಕೂ ತತ್ತರಗೊಳ್ಳುವ, ಹಸುವಿನ ಸಗಣಿಯಲ್ಲಿ ಕಾಳು ಹುಡುಕಿ ಅದನ್ನು ರೊಟ್ಟಿಯಾಗಿಸಿಕೊಳ್ಳಬೇಕಾದ, ಸಾಲು ಸಾಲು ಆತ್ಮಹತ್ಯೆ ಕಾಣುತ್ತಿರುವ, ಬಿಪಿಎಲ್ ಭಾರತ.ರೈತನ ಕೈಕುಲುಕದ ಮಾಧ್ಯಮ ಹಾಗಾದರೆ ಯಾವ ಭಾರತದ್ದು ಐಪಿಎಲ್ ನದ್ದೋ ಬಿಪಿಎಲ್ ನದ್ದೋ?ಮಾಧ್ಯಮಗಳು ಲಾಭ ಮಾಡಿಕೊಳ್ಳುವ, ಕೋಟಿಗಟ್ಟಲೆ ಹಣ ಬಾಚಿಕೊಳ್ಳುವ ಅದಕ್ಕಾಗಿಯೇ ಸೃಷ್ಟಿಯಾದ ಐ ಪಿ ಎಲ್ ಗಳ ಜನಕರೇ ಇವರಾಗಿರುವಾಗ ಬಿಪಿಎಲ್ ಜಗತ್ತಿಗೆ ಇವರು ಕೊಡುವ ಪ್ರಾಧಾನ್ಯತೆ ಏನು ಎನ್ನುವುದು ನಿಚ್ಚಳ.ಇಲ್ಲಿನ ಅಪಾಯಗಳು ಇನ್ನೂ ಹಲವು ಸ್ಥರದ್ದು. ಒಂದೆಡೆ ಮಾಧ್ಯಮಗಳು ಉದ್ಯಮವಾಗುವತ್ತ ತಿರುಗಿದ್ದರೆ ಇನ್ನೊಂದೆಡೆ ಉದ್ಯಮವೇ ರಾಜಾರೋಷವಾಗಿ ಮಾಧ್ಯಮಗಳನ್ನು ಸಾರಾಸಗಟಾಗಿ ತನ್ನ ಬಗಲಿಗೆ ಹಾಕಿಕೊಳ್ಳುತ್ತಾ ಹೋದದ್ದು.ಜಗತ್ತನ್ನು ನಿಯಂತ್ರಿಸುತ್ತಿರುವ ಮಾಧ್ಯಮ ಸಂಸ್ಥೆಗಳು ನಾಲ್ಕಕ್ಕಿಂತಲೂ ಹೆಚ್ಚಿಲ್ಲ. ಅಂದರೆ ಮಾಧ್ಯಮಗಳ ಮಾಲೀಕತ್ವ ಕೇವಲ ನಾಲ್ಕು ಜನರ ಮಧ್ಯೆ ಇದೆ.ಜಗತ್ತಿನ ಬಹುತೇಕ ಎಲ್ಲಾ ದೇಶಗಳಳ್ಳಿ ಮಾಧ್ಯಮಗಳನ್ನೂ ಕೈಗೆಟುಕಿಸಿಕೊಳ್ಳುತ್ತಿರುವವರು ಒಂದಲ್ಲಾ ಒಂದು ರೀತಿಯಿಂದ ಈ ನಾಲ್ಕು ಜನರ /ಸಂಸ್ಥೆಗಳ ಹಿತಾಸಕ್ತಿಯನ್ನು ಮಾತ್ರವೇ ಕೈಗೆಟುಕಿಸಿಕೊಳ್ಳುವಂತಾಗಿದೆ.ಒಟ್ಟಿನಲ್ಲಿ ಮಾಧ್ಯಮ ಎಂಬ ಉದ್ಯಮಕ್ಕೆ ಓದುಗರನ್ನು ಓದುಗರನ್ನಾಗಿರಲು ಬಿಟ್ಟಿಲ್ಲ, ನೋಡುಗರನ್ನು ನೋಡುಗರನ್ನಾಗಿರಲು ಬಿಟ್ಟಿಲ್ಲ, ಕೇಳುಗರನ್ನು ಕೇಳುಗರನ್ನಾಗಿರಲು ಬಿಟ್ಟಿಲ್ಲ.ಬದಲಾಗಿ ಅವರನ್ನು ಗ್ರಾಹಕರನ್ನಾಗಿ ಬದಲು ಮಾಡಿ ಹಾಕುತ್ತಿದೆ.ತಾವು ಉದ್ಯಮವೆಂದೂ, ತಾವು ನೀಡುತ್ತಿರುವುದು ಉತ್ಪನ್ನವೆಂದೂ, ಅದನ್ನು ಬಳಸುತ್ತಿರುವವರು ಗ್ರಾಹಕರೆಂದೂ ಮುಲಾಜಿಲ್ಲದೆ ಸಾರಿವೆ.ಈ ಕಾರಣದಿಂದಾಗಿಯೇ ಸಮಾಜದ ಕಾಳಜಿ ಕ್ರಮೇಣ ಹಿನ್ನೆಲೆಗೆ ಸರಿಯುತ್ತಿದೆ. ವಿಶ್ವಸಂಸ್ಥೆ ಹೇಳಿದ್ದ ಸೇತುವೆಗಳು, ಊರುಗೋಲು ಕಾಣೆಯಾಗುತ್ತಿದೆ.ಈಗ ಯಾವುದೇ ಪತ್ರಿಕೆ ಓದುತ್ತಿದ್ದರೆ, ಯಾವುದೇ ಟಿ ವಿ ಚಾನಲ್ ನೋಡುತ್ತಿದ್ದರೆ, ರೇಡಿಯೋ ಸ್ಟೇಷನ್ ನ ಗುಂಡಿ ತಿರುಗಿಸಿದ್ದರೆ, ಯಾವುದೇ ವೆಬ್ ಪುಟಕ್ಕೆ ಪ್ರವೇಶಿಸಿದ್ದರೆ ಅದರ ಮಾಲೀಕರಾರು ಎಂದು ನೋಡಿ. ತಕ್ಷಣ ನಿಮಗೆ ಸಿಗುವ ಸುದ್ದಿ ಎಂತಹದ್ದು ಎಂದು ಗೊತ್ತಾಗಿಬಿಡುತ್ತದೆ.ಭಾರತದೊಳಗೂ ಮಾಧ್ಯಮದ ಏಕಚಕ್ರಾಧಿಪತ್ಯ ಹೊಂದಲು ಸಾಕಷ್ಟು ಮುಸುಕಿನ ಗುದ್ದಾಟಗಳು ನಡೆದಿವೆ. ರಾಜಾರೋಷವಾಗಿ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿ ಹಾಕುವಂತೆ ದೊಡ್ಡ ಉದ್ದಿಮೆದಾರರು ಮುಲಾಜಿಲ್ಲದೆ ಮಾಧ್ಯಮ ರಂಗವನ್ನು ನುಂಗಿಹಾಕುತ್ತಿದ್ದಾರೆ.ಟೆಲಿವಿಷನ್ ಚಾನಲ್ ಗಳು, ರೇಡಿಯೋ ಸ್ಟೇಷನ್ ಗಳು, ವೆಬ್ ಸೈಟ್ ಗಳು, ಮಾತ್ರವೇ ಅಲ್ಲದೆ ಮೊಬೈಲ್ ಸೆಟ್, ಮೊಬೈಲ್ ಒಳಗಣ ಸಿಮ್, ಅಂತರ್ಜಾಲ, ಡಿ ಟಿ ಎಚ್, ಕೇಬಲ್ ಜಾಲ ಎಲ್ಲವನ್ನೂ ಕೈಗೆತ್ತಿಕೊಳ್ಳುತ್ತಾ ಸಾಗಿರುವ ರಿಲಯನ್ಸ್ ಸಂಸ್ಥೆ ನಾಳೆ ತನ್ನ ಏಕಚಕ್ರಾಧಿಪತ್ಯಕ್ಕೆ ಎಲ್ಲರನ್ನೂ ತೆಗೆದುಕೊಳ್ಳಲಿದೆ.ಹೀಗೆ ಮಾತು ಮುಂದುವರೆಸುತ್ತಲೇ ಪಿ ಸಾಯಿನಾಥ್ ಇನ್ನೂ ಒಂದು ಮಾತನಾಡಿದರು.ನಾಳೆ ದೇಶದ ಎಲ್ಲಾ ಪತ್ರಕರ್ತರು ಮುಖೇಶ್ ಅಂಬಾನಿಯ ಅಡಿ ರಿಲೆಯನ್ಸ್ ಸಂಸ್ಥೆಯ ಅಡಿ ಇರಬೇಕಾದ ದಿನಗಳು ದೂರ ಇಲ್ಲ.ಅದು ಹಾಗಲ್ಲ ಎನ್ನುವಂತೆಯೇ ಇಲ್ಲ. ಅಂಬಾನಿ ಅಶ್ವಮೇಧದ ಕುದುರೆಯಂತೆ ಹೆಜ್ಜೆ ಹಾಕುತ್ತ ನಡೆದಿದ್ದಾರೆ.
—–ಇಂದು ಕನ್ನಡ ಪತ್ರಿಕೋದ್ಯಮ ದಿನ.
ಬಿಟ್ಟೂಬಿಡದೆ ಕಾಡುತ್ತಿರುವ ಆಲೋಚನೆಗಳು ನಿಮ್ಮ ಮುಂದೆ…

ತುಮಕೂರು ಪಿಯು ಉಪ ನಿರ್ದೇಶಕರಾಗಿ ಎಚ್ಕೆಎನ್

Publicstory. in


ತುಮಕೂರು: ಸಂಸ್ಕೃತಿ ಚಿಂತಕ, ಸಾಹಿತಿ ಎಚ್.ಕೆ.ನರಸಿಂಹಮೂರ್ತಿ ಅವರು ತುಮಕೂರು ಜಿಲ್ಲಾ ಪಿಯು ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಗುಬ್ಬಿ ಹೊಸಹಳ್ಳಿಯವರಾದ ನರಸಿಂಹಮೂರ್ತಿ ಸಾಹಿತ್ಯ ಬಳಗಷ್ಟೇ ಅಲ್ಲ ಜನ ಸಾಮಾನ್ಯರ ನಡುವೆ ಎಚ್ಕೆಎನ್ ಎಂದೇ ಪ್ರಸಿದ್ಧರು.

ಸರಳತೆ, ಸಜ್ಜನಿಕೆಗೆ ಹೆಸರಾಗಿರುವ ಅವರು ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕರು.

ಗುಬ್ಬಿ ಹೊಸಹಳ್ಳಿಯವರಾದ ಅವರು ಸಿ.ಎಸ್.ಪುರ, ಕಡಬಾ, ಗುಬ್ಬಿ ಮತ್ತಿತರ ಕಡೆಗಳಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಅವರು ಕರ್ತವ್ಯ ನಿರ್ವಹಿಸಿದ ಕಡೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಯಾ ಗ್ರಾಮದ ಹಿರಿಯರ ಜೊತೆಗೂ ಸಂಬಂಧ ಬೆಸೆದಿದ್ದಾರೆ. ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅವರ ಕಾಳಜಿಯಾಗಿದೆ.

ಉಪನ್ಯಾಸಕರು ಇಲ್ಲದ ಕಾಲೇಜುಗಳಲ್ಲಿ ಅವರು ಕನ್ನಡದ ಜತೆಗೆ ರಾಜ್ಯಶಾಸ್ತ್ರ, ಇತಿಹಾಸವನ್ನು ಬೋಧಿಸಿದ ಹೆಗ್ಗಳಿಕೆ ಅವರಿಗಿದೆ.

ಕೇವಲ ಇಬ್ಬರೇ ಉಪನ್ಯಾಸಕರಿದ್ದಾಗಲೂ ಸಿ.ಎಸ್.ಪುರ ಕಾಲೇಜನ್ನು ಉಳಿಸಿ, ಕಟ್ಟುವಲ್ಲಿ ಅವರ ಶ್ರಮವನ್ನು ಅಲ್ಲಿಯ ಜನರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

ಮೂರು ವಿಷಯಗಳಲ್ಲಿ ಬೋಧನೆ ಮಾಡಿದ್ದು ಅವರ ಹೆಗ್ಗಳಿಕೆಯಾಗಿದೆ.

ಅವರ ನೇಮಕ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳ ಸುಧಾರಣೆಗೆ ದಾರಿ ಮಾಡಿಕೊಡಬಹುದು ಎಂದೇ ಉಪನ್ಯಾಸಕ ವರ್ಗ ನಂಬಿದೆ. ಸರಳ, ಸಜ್ಜನಿಕೆಯ ಜೊತಗೆ ಪ್ರಾಮಾಣಿಕರು ಆಗಿದ್ದಾರೆ.

ಅನೇಕ ಲೇಖನಗಳನ್ನು ಬರೆದಿರುವ ಅವರು, ಜಿಲ್ಲೆಯ ತಳ ಸಮುದಾಯಗಳು, ಅವರ ಆಚರಣೆ, ಅವರ ಇತಿಹಾಸದ ಬಗ್ಗೆ ಆಳ ಅಧ್ಯಯನ ನಡೆಸಿದ್ದಾರೆ. ಮೌಖಿಕ ಪರಂಪರೆಯ ಇತಿಹಾಸಕರೂ ಆಗಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ ಮೇಕೆಗಳಿಗೆ ಕೊರೊನಾ ಪರೀಕ್ಷೆ

ಎಂ.ಎನ್.ಭರತ್


ಚಿಕ್ಕನಾಯಕನಹಳ್ಳಿ; ಮೇಕೆ ಮೇಯಿಸುವ ವ್ಯಕ್ತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿದ್ದ ಎಲ್ಲ ಮೇಕೆಗಳಿಗೂ ಕೊರೊನಾ ಪರೀಕ್ಚೆ ನಡೆಸಲಾಯಿತು.

ಮೇಕೆಗಳ ಗಂಟಲು ದ್ರವವನ್ನು ಪಶು ವೈದ್ಯಾಧಿಕಾರಿಗಳು ತೆಗೆದುಕೊಂಡರು.

ಹಿನ್ನೆಲೆ: ತಾಲ್ಲೂಕು ಗೋಡೆಕೆರೆ ಗೊಲ್ಲರಟ್ಟಿ ಗ್ರಾಮದಲ್ಲಿ ಯುವಕನಿಗೆ ಕೋರನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೇಕೆಗಳನ್ನು ಕ್ವಾರಂಟೈನ್ ಮಾಡಲಾಗಿತ್ತು.

ಜೂನ್ 23 ರಂದು ಗೋಡೆಕೆರೆ ಗೊಲ್ಲರಹಟ್ಟಿ ಯುವಕನಿಗೆ ಕೋರನ ಪಾಸಿಟಿವ್ ಬಂದಿದ್ದು ಯುವಕನ ಮನೆಯಲ್ಲಿ ಸುಮಾರು 50 ರಿಂದ 60 ಮೇಕೆಗಳಿದ್ದು .

ವೈರಸ್ ಇತ್ತೀಚಿನ ದಿನಗಳು ಹೆಚ್ಚುತ್ತಿರುವ ಹಾಗೂ ವೈರಸ್ ಎಲ್ಲ ಜೀವಿಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಮೇಕೆಗಳ ಗಂಟಲು ದ್ರವವನ್ನು ಪಶು ವೈದ್ಯರು ತೆಗೆದು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಸೀಲ್ ಡೌನ್ ಪ್ರದೇಶದಲ್ಲಿ ಮೇಕೆಗಳ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ..

ತುಮಕೂರು, ಕುಣಿಗಲ್ ನಲ್ಲಿ ಕೊರೊನಾ ನಾಗಾಲೋಟ, ಒಂದು ಸಾವು

Publicstory. in


ತುಮಕೂರು: ಜಿಲ್ಲೆಯ ತುಮಕೂರು, ಪಾವಗಡದಲ್ಲಿ ಕೊರೊನಾ ಮಂಗಳವಾರ ಲಗ್ಗೆ ಇಟ್ಟಿದೆ. ಈ ತಾಲ್ಲೂಕುಗಳ ಜನರು ಭಯಭೀತರಾಗಿದ್ದಾರೆ.

ತುಮಕೂರು 6, ಪಾವಗಡ 5 ಮಂದಿಗೆ ಸೋಂಕು ತಗುಲಿದೆ. ಇನ್ನೂ, ಕುಣಿಗಲ್ 3, ಮಧುಗಿರಿ 2, ಕೊರಟಗೆರೆ 1, ಸಿರಾದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.

ಅಪಘಾತ ಸಂಭವಿಸಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುಮಕೂರಿನ ಮರಳೂರು ದಿಣ್ಣೆಯ 29 ವರ್ಷದ ಯುವಕನಿಗೂ ಕೊರೊನಾ ದೃಢಪಟ್ಟಿದೆ. ಆದರೆ ಈತ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದನು.

ಒಂದೇ ದಿನ ತುಮಕೂರಿನಲ್ಲಿ ,20 ಮಂದಿಗೆ ಕೊರೊನಾ, ರಾಜ್ಯದಲ್ಲಿ 947 ಹಾಗೂ 20 ಸಾವು

ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲಿಗೆ ಮಂಗಳವಾರ ಒಂದೇ ದಿನ 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲಿ 20 ಮಂದಿ ಸಾವಿಗೀಡಾಗಿದ್ದು, ಜನರಲ್ಲಿ ಅತಂಕ ಹೆಚ್ಚಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15256 ಕ್ಕೇರಿದೆ.ಕೊರೊನಾ ಯಾರನ್ನೂ ಬಿಡುತ್ತಿಲ್ಲ. ಹಾವೇರಿಯಲ್ಲಿ ಜಿಲ್ಲೆಯಲ್ಲಿ ಇವೊತ್ತೇ ಒಂದೇ ದಿನ ವೈದ್ಯಾಧಿಕಾರಿ, ಐವರು ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿಗೆ ಸೋಂಕು ಕಾಣಿಸಿಕೊಂಡಿದೆ.ಅತ್ತ ಬಳ್ಳಾರಿಯಲ್ಲಿ ಕೊರೊನಾದಿಂದ ಸಾವಿಗೀಡಾದವರನ್ನು ಅಂತ್ಯಕ್ರಿಯೆಗೆ ಕನಿಷ್ಡ ಗೌರವವನ್ನು ಕೊಡದ ಸಿಬ್ಬಂದಿ ಒಂದೇ ಗುಂಡಿಗೆ ಹೆಣಗಳನ್ನು ಸತ್ತ ನಾಯಿಯನ್ನು ಎಸೆದಿರುವುದು ಇಡೀ ರಾಜ್ಯವೇ ದೇಶ, ವಿದೇಶಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದೆ.ಬೆಂಗಳೂರಿನಲ್ಲಿ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ.ತುಮಕೂರಿನಲ್ಲಿ ವಿವರಗಳನ್ನು ಆರೋಗ್ಯ ಇಲಾಖೆ ಇನ್ನಷ್ಟೇ ನೀಡಬೇಕಾಗಿದೆ.

ಅವರೊಬ್ಬರಿದ್ದರು, ಕುಮಾರಪ್ಪ…

ಜಿ ಎನ್ ಮೋಹನ್


ಬೀದರ್ ನಲ್ಲಿ ಆಗಲೇ ಬಿಸಿಲು ಬುಸುಗುಟ್ಟಲು ಆರಂಭಿಸಿತ್ತು.
ಮುಗಿಲು ನೋಡಿದರೆ ಸಾಕು ತಲೆ ಸುತ್ತಿ ಬೀಳುವಂತಹ ಬಿಸಿಲು.

ಥೇಟ್ ನಮ್ಮ ಹೊಟ್ಟೆಯೂ ಆ ದಿನ ಇನ್ನಿಲ್ಲದಂತೆ ಹಾಗೇ ಬಸುಗುಡಲು ಆರಂಭಿಸಿತ್ತು.

ಬೀದರ್ ನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಸಮಾರಂಭವನ್ನು ಹಮ್ಮಿಕೊಂಡಿತ್ತು.

ಆ ಸಾಲಿನಲ್ಲಿ ನಾನೂ ಸಹಾ ಅಕಾಡೆಮಿಯ ಸದಸ್ಯ.

ಹೀಗಾಗಿ ಗುಲ್ಬರ್ಗದಲ್ಲಿದ್ದ ನಾನು ಬೀದರ್ ಗೆ ಹೋಗಿ ಈ ಪ್ರಶಸ್ತಿ, ಬಹುಮಾನ ವಿಜೇತರ ಜೊತೆ ಸೇರಿಕೊಂಡಿದ್ದೆ. ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ಮುಗಿಯಿತು.

ರಾಜ್ಯದ ನಾನಾ ಮೂಲೆಗಳಿಂದ ಬಂದ ವಿದ್ವತ್ ಕ್ಷೇತ್ರದ ದಿಗ್ಗಜರನ್ನು ಮರ್ಯಾದೆಯಾಗಿ ಬೀಳ್ಕೊಡಬೇಕು ಅಂತ ಅಲ್ಲಿದ್ದ ರಾಜಕೀಯ ಧುರೀಣರೊಬ್ಬರಿಗೆ ಅನಿಸಿಬಿಟ್ಟಿತು.

ಹಾಗಾಗಿ ಮಾರನೆಯ ದಿನ ಬೆಳ್ಳಂಬೆಳಗ್ಗೆ ‘ತಿಂಡಿಗೆ ಬಂದುಬಿಡಿ’ ಎಂದು ಆಹ್ವಾನ ಕೊಟ್ಟರು. ನಾವೂ ನಮ್ಮೊಳಗಿದ್ದ ಹಸಿವೆಂಬ ಬ್ರಹ್ಮರಾಕ್ಷಸನಿಗೆ ಸಾಕಷ್ಟು ಸಮಾಧಾನ ಮಾಡಿಯೇ ಅಲ್ಲಿಗೆ ಕರೆದುಕೊಂಡು ಹೋಗಿದ್ದೆವು.

ಆ ಮನೆಯ ಅಂಗಳದಲ್ಲಿ ಆಹಾ! ಥರಾವರಿ ತಿಂಡಿಗಳು. ‘ಮಾಯಾಬಜಾರ್’ನಲ್ಲಿ ಥರಾವರಿ ಭಕ್ಷಗಳಾದರೆ ಬೀದರ್ ನಗರಿಯಲ್ಲಿ ಥರಾವರಿ ತಿಂಡಿ.

ಹೊಟ್ಟೆಯೊಳಗೆ ಎಲ್ಲಿಯೋ ಮೂಲೆಯಲ್ಲಿದ್ದ ಹಸಿವಿಗೆ ಇನ್ನಷ್ಟು ಆವೇಶ ಬಂದಿತ್ತು. ಸರಿ ಅಲ್ಲಿ ಹಾಕಿದ್ದ ಕುರ್ಚಿಯಲ್ಲಿ ಆರಾಮವಾಗಿ ಲೋಕೋಪಚಾರ ಮಾತಾಡುತ್ತಾ ಕುಳಿತುಕೊಂಡೆವು.

ಹತ್ತು ನಿಮಿಷ, ಇಪ್ಪತ್ತು, ಮುವತ್ತು ಉಹುಂ ತಿಂಡಿ ಕೊಡುವ ಲಕ್ಷಣವೇ ಕಾಣಲಿಲ್ಲ.

ಇನ್ನೂ ಹತ್ತು ನಿಮಿಷ ಕಾದದ್ದಾಯ್ತು. ತಿಂಡಿಯೇನೋ ಸಾಲಂಕೃತವಾಗಿ ಟೇಬಲ್ ಮೇಲಿದೆ. ತಿನ್ನುವವರೂ ಇದ್ದಾರೆ. ಬಡಿಸುವವರೂ ಸಜ್ಜಾಗಿದ್ದಾರೆ. ಆದರೆ ಕೊಡಲು ಮಾತ್ರ ಸಿದ್ಧವಿಲ್ಲ.

ನನ್ನೊಳಗಿದ್ದ ಪತ್ರಕರ್ತ ಇದನ್ನು ಪ್ರಶ್ನಿಸದೆ ಸುಮ್ಮನಿರುವುದಿಲ್ಲ ಎಂದು ಎದ್ದೇಬಿಟ್ಟ.

ಪ್ರಶ್ನಿಸಲಾಗಿ ‘ಸಾಹೇಬರು ಇನ್ನೇನು ಬಂದು ಬಿಡುತ್ತಾರೆ. ಬರ್ತಿದ್ದ ಹಾಗೇ ತಿಂಡಿ ಶುರು’ ಎಂದರು.

ಪಾಪ ಅಂತ ಇನ್ನೂ ಹತ್ತು ನಿಮಿಷ ಕಾದೆವು. ಉಹುಂ! ಅಭ್ಯಾಗತರ ಪತ್ತೆಯೇ ಇಲ್ಲ.

ಪ್ರತಿಭಾ ನಂದಕುಮಾರ್ ನನ್ನನ್ನೂ, ನಾನು ಅವರನ್ನು ಕಣ್ಣಲ್ಲೇ ಪ್ರಶ್ನಿಸಿಕೊಂಡದ್ದಾಯ್ತು.

‘ಅಯ್ಯೋ, ನಮ್ಮ ಹೊಟ್ಟೆ, ನಮ್ಮ ತಿಂಡಿ ನಡೀರಿ’ ಅಂತ ಹೇಳಿದವರೇ ಪ್ರತಿಭಾ ಸಭ್ಯಸ್ಥರ ಸೋಗನ್ನು ಕಿತ್ತು ಮೂಲೆಗೆಸೆದು ತಟ್ಟೆ ಎತ್ತಿಕೊಂಡು ‘ಬಡಿಸದಿದ್ದರೆ ಕತ್ತೆ ಬಾಲ’ ಎಂಬಂತೆ ತಾವೇ ತಿಂಡಿ ಹಾಕಿಕೊಳ್ಳಲು ಶುರು ಮಾಡಿದರು.

ಅವರ ಹಿಂದೆ ನಾನಿದ್ದೆ. ಇನ್ನಾರೂ ಇಂತ ಧೈರ್ಯ ಮಾಡಲ್ಲ ಅಂತ ನನಗಂತೂ ಖಚಿತವಾಗಿತ್ತು.

ಹಾಗಂದುಕೊಂಡೇ ಹಿಂದೆ ತಿರುಗಿದರೆ ಅಲ್ಲಿ ಇನ್ನೂ ಒಬ್ಬರು.

ಅರೆ! ಇವರಾರು ನಮ್ಮಂತೆ ಇದ್ದ ವ್ಯವಸ್ಥೆಗೆ ಸೆಡ್ಡು ಹೊಡೆದು ನಿಂತವರು ಅಂತ ನೋಡಿದೆ.

ನನ್ನನ್ನೂ, ಪ್ರತಿಭಾರನ್ನೂ ನೋಡಿದರೆ ಯಾರೂ ನಮ್ಮನ್ನು ಸಭ್ಯಸ್ಥರು ಎಂದು ಕರೆಯುವ ಸಾಧ್ಯತೆಯೇ ಇಲ್ಲ.

ಆದರೆ ಇವರು ನಿಜಕ್ಕೂ ಸಭ್ಯಸ್ಥರು. ಆದರೆ ಒಳಗೆ ಪ್ರತಿಭಟನೆಯ ದೊಡ್ಡ ಕಾವನ್ನೇ ಇಟ್ಟುಕೊಂಡವರು.

ನಾನು ಅವರ ತಟ್ಟೆ ಹಿಡಿದ ಕೈಯನ್ನೇ ಕುಲುಕಿ ‘ನಿಮ್ಮ ಹೆಸರು?’ ಎಂದೆ ಅವರು ಅಷ್ಟೇ ತಣ್ಣಗೆ ‘ಬಾಂಡ್, ಜೇಮ್ಸ್ ಬಾಂಡ್’ ಎನ್ನುವ ರೀತಿಯಲ್ಲಿ ಕುಮಾರಪ್ಪ, ಜಿ. ಕುಮಾರಪ್ಪ ಎಂದರು.

‘ಓಹ್! ಕುಮಾರಪ್ಪ’ ಎಂದುಕೊಂಡೆ.

ಯಾಕೆಂದರೆ ಆ ವೇಳೆಗೆ ಕುಮಾರಪ್ಪ ನನ್ನ ಲೋಕಕ್ಕೆ ಪ್ರವೇಶಿಸಿ ದಶಕಗಳೇ ಉರುಳಿದ್ದವು.

1985 ರ ಆಸುಪಾಸಿನಲ್ಲಿ ಸದಾ ಬಂಡಾಯಗಾರ ಆರ್ ಜಿ ಹಳ್ಳಿ ನಾಗರಾಜ್ ‘ಅನ್ವೇಷಣೆ’ ಎಂಬ ಸಾಹಿತ್ಯ ಪತ್ರಿಕೆ ಹುಟ್ಟು ಹಾಕಿದ್ದ.

ಚಿತ್ರದುರ್ಗದ ರಾಮಗೊಂಡನಹಳ್ಳಿಯ ನಾಗರಾಜ್ ಅದೇ ಚಿತ್ರದುರ್ಗದವರು ಎನ್ನುವ ಕಾರಣಕ್ಕೆ ಕುಮಾರಪ್ಪ ತೀರಾ ಪರಿಚಿತರು.

ಹೀಗಾಗಿ ನಾವೆಲ್ಲರೂ ಸೇರಿದ್ದಾಗ ಆಗಾಗ ಕುಮಾರಪ್ಪ ಮಾತಿನಲ್ಲಿ ಬಂದು ಹೋಗುತ್ತಿದ್ದರು.

ಇದರೊಟ್ಟಿಗೇ ಅವರು ಕಲ್ಕತ್ತದಲ್ಲಿದ್ದಾರೆ ಎನ್ನುವುದು ಇನ್ನೂ ಆ ಕಾಲಕ್ಕೆ ಮೂರೂ ಮುಕ್ಕಾಲು ವಾಸಿ ಲೋಕ ಕಾಣದ ನಮಗೆ ದೊಡ್ಡದಾಗಿ ಕಾಣುತ್ತಿತ್ತು.

ಜೊತೆಗೆ ಕಲ್ಕತ್ತ ಎನ್ನುವುದು ನಮಗೆ ಕ್ರೆಮ್ಲಿನ್ ನಂತೆ ಕಾಣಿಸುತ್ತಿದ್ದರಿಂದಲೂ, ಅಲ್ಲಿದ್ದ ಕುಮಾರಪ್ಪ ನಮಗೆ ಥೇಟ್ ಗೊರ್ಬಚೇವ್ ರಂತೆಯೂ ಅನಿಸಿ ಕುಮಾರಪ್ಪ ಎಂಬ ಕುಮಾರಪ್ಪ ಅವರನ್ನು ನಾನು ಎಂದೂ ಕಾಣದಿದ್ದರೂ ಅವರು ‘ನಮ್ಮೊಡನಿಲ್ಲದಿದ್ದರೂ ನಮ್ಮಂತೆಯೇ’ ಆಗಿ ಹೋಗಿದ್ದರು.

ಅಂತಹ ಕುಮಾರಪ್ಪ ಈಗ ನಮ್ಮ ಜೊತೆ ‘ತಿಂಡಿ ತಿಂದೇ ಸೈ ಸತ್ಯಾಗ್ರಹ’ಕ್ಕೆ ತಟ್ಟೆ ಹಿಡಿದು ನಿಂತಿದ್ದರು.

ಹೀಗೆ ಆ ಕಲ್ಕತ್ತದ ಕುಮಾರಪ್ಪನವರು. ಬೆಂಗಳೂರಿನ ನಾನೂ, ನಮ್ಮಿಬ್ಬರಿಗೂ ಗೊತ್ತಿಲ್ಲದ ಬೀದರ್ ನಲ್ಲಿ ಹೊಟ್ಟೆಯ ಕಾರಣಕ್ಕಾಗಿ ಒಂದಾಗಿದ್ದೆವು.

ಹಾಗೆ ಹೇಳಿದರೆ ಅದು ಖಂಡಿತಾ ಸುಳ್ಳು.

ಯಾಕೆಂದರೆ ನಾವಿಬ್ಬರೂ ಮತ್ತೊಂದು ಹಸಿವಿನ ಕಾರಣಕ್ಕೂ ಒಂದಾಗಿದ್ದೆವು.

ಅದು ಪುಸ್ತಕದ ಹಸಿವು.

ಕುಮಾರಪ್ಪ ಈ ವಿಷಯದಲ್ಲಿ ಮಾತ್ರ ನಿಜಕ್ಕೂ ಒಬ್ಬ ಮಾದರಿ ಅಭ್ಯಾಗತ.

ಖಂಡಿತಾ ನಮಗೆ ಒಂದಿಷ್ಟು ತಡಮಾಡದೆ, ತಟ್ಟೆ ಎತ್ತಿಕೊಂಡು ವರಾತ ಹಚ್ಚದಂತೆ ನಮ್ಮ ಬಳಿಗೇ ಬಂದು ಬೇಕು ಬೇಕಾದ್ದನ್ನೆಲ್ಲಾ ಬಡಿಸಿದ ಅಭ್ಯಾಗತ.

ಕುಮಾರಪ್ಪ ಸ್ವಂತ ಬರೆದದ್ದನ್ನು ಒತ್ತಟ್ಟಿಗಿಟ್ಟು ನೋಡಿದರೂ ಅವರು ಬಂಗಾಳಿಯಿಂದ ಕನ್ನಡಕ್ಕೆ ಮಾಡಿರುವ ಅನುವಾದದ ಕೃತಿಗಳೇ 25 ಕ್ಕಿಂತ ಹೆಚ್ಚು.

ನಮ್ಮ ಹೊಟ್ಟೆ ತುಂಬಲು ಇನ್ನೇನು ಬೇಕು.

ನಾವು ಕಾಲೇಜಿನಲ್ಲಿ ಓದುವ ಕಾಲಕ್ಕೇ ‘ಲೋಕಾಯತ’ದ ಹುಚ್ಚು ಹತ್ತಿಸಿಕೊಂಡು ದೇವಿಪ್ರಸಾದ ಚಟ್ಟೋಪಾದ್ಯಾಯರನ್ನ ಆವಾಹಿಸಿಕೊಂಡಿದ್ದ ನಮಗೆ ಕುಮಾರಪ್ಪ ಅವರು ಚಟ್ಟೋಪಾಧ್ಯಾಯರ ‘ಮಾತೆಯರು ಮಾನ್ಯರಾಗಿದ್ದಾಗ’ ಕೃತಿ ಕೈಗಿತ್ತರು.

ಶಾಲೆಯಲ್ಲಿ ಓದಿದ್ದ ಟ್ಯಾಗೂರರ ‘ಕಾಬೂಲಿವಾಲಾ’ ಕೃತಿಯಿಂದಲೂ, ಆ ನಂತರ ಅಫಘಾನಿಸ್ತಾನದ ವಿದ್ಯಮಾನಗಳಿಂದಲೂ ಆ ದೇಶವನ್ನು ಕಣ್ಣುಬಿಟ್ಟುಕೊಂಡು ನೋಡುತ್ತಿದ್ದಾಗ ಕುಮಾರಪ್ಪ ‘ಕಾಬೂಲಿವಾಲಾನ ಬೆಂಗಾಳಿ ಹೆಂಡತಿ’ ಕೃತಿಯನ್ನು ಕೈಗಿಟ್ಟರು.

ಇಷ್ಟೆಲ್ಲದರ ಮಧ್ಯೆ ಮಹಾಶ್ವೇತಾದೇವಿ ನಮಗೆ ತೀರಾ ಹತ್ತಿರವಾಗಿ ಹೋಗಿದ್ದರು. ಅವರ ಬಂಡುಕೋರತನದ ಕಾರಣಕ್ಕಾಗಿ.

ಅವರ ‘ದೋಪ್ಡಿ ಮತ್ತು ಇತರ ಕಥೆಗಳ’ನ್ನು ಓದಿ ಮಹಾಶ್ವೇತಾದೇವಿ ಅವರ ಇನ್ನಷ್ಟು ಕೃತಿಗಳನ್ನು ಓದುವ ತಹತಹದಲ್ಲಿದ್ದಾಗ ಅವರ ಕಾದಂಬರಿಗಳನ್ನು ಕೊಟ್ಟರು.

ಆ ವೇಳೆಗೇ ಬೇಬಿ ಹಲ್ದರ್ ಸುದ್ದಿಯಾಗಿದ್ದಳು. ಬಂಗಾಲಿಯೊಬ್ಬನ ಮನೆಯಲ್ಲಿದ್ದು ಮನೆಗೆಲಸ ಮಾಡಿಕೊಂಡಿದ್ದಾಕೆ ತನ್ನ ಮನೆಯ ಹಿರಿಯನೊಬ್ಬನ ಪ್ರೋತ್ಸಾಹದಿಂದ ಕಸಬರಿಕೆ ಹಿಡಿದ ಜೊತೆ ಜೊತೆಯಲ್ಲಿಯೇ ಲೇಖನಿಯನ್ನೂ ಹಿಡಿದಳು.

ಆ ಬೇಬಿ ಹಲ್ದರ್ ಬರೆದ ಬದುಕಿನ ಕಥೆ ‘ನೋವು ತುಂಬಿದ ಬದುಕು’ವನ್ನು ಇಂಗ್ಲಿಷ್ ನಲ್ಲಿ ಓದಿ ಮುಗಿಸುವ ವೇಳೆಗಾಗಲೇ ಕುಮಾರಪ್ಪ ಆ ಕೃತಿಯನ್ನೂ ಕನ್ನಡಕ್ಕೆ ತಂದಾಯ್ತು.

ಹೌದಲ್ಲಾ! ‘ಎಲ್ಲೋ ದೂರದಿ ಜಿನುಗುವ ಹನಿಗಳೆ ಬನ್ನಿ ಬನ್ನಿ ಬಿರುಮಳೆಯಾಗಿ, ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ ಹೊಸ ಹಸಿರೇಳಲಿ ನವುರಾಗಿ’ ಎಂಬ ಜಿ ಎಸ್ ಎಸ್ ಕವಿತೆ ಓದುವಾಗಲೆಲ್ಲಾ ನನಗೆ ಕುಮಾರಪ್ಪ ಯಾಕೆ ನೆನಪಾಗಬೇಕು.

ಅಲ್ಲಿ ಅಷ್ಟು ದೂರವಿದ್ದು ಜಿನುಗುತ್ತಿದ್ದ ಕುಮಾರಪ್ಪ ಎಂಬ ಮಳೆ ಕನ್ನಡಕ್ಕೆ ಕೊಟ್ಟ ಅಷ್ಟೊಂದು ಕೃತಿಗಳಿಂದಾಗಿಯೇ ಇರಬೇಕು ಈ ಲೋಕದಲ್ಲೂ ಹೊಸ ಹಸಿರೆದ್ದಿತೇನೋ ಎನ್ನುವಂತಾಗುತ್ತದೆ.

ಹೀಗೆಲ್ಲಾ ಆಗುತ್ತಿರುವಾಗಲೇ ನಾನು ‘ಈಟಿವಿ’ ಕನ್ನಡದ ಸುದ್ದಿ ವಿಭಾಗಕ್ಕೆ ಮುಖ್ಯಸ್ಥನಾಗಿ ಹೋದೆ.

ಅಲ್ಲಿದ್ದ ಅಷ್ಟೂ ವರ್ಷಗಳಲ್ಲಿ ನನಗೆ ಖುಷಿಕೊಟ್ಟ ಕಾರ್ಯಕ್ರಮಗಳಲ್ಲೊಂದು ‘ಬುಕ್ ಟಾಕ್’.

‘ಪುಸ್ತಕಗಳು ಮಾತಾಡುತ್ತವೆ’ ಎಂದು ಬಲವಾಗಿ ನಂಬಿದ್ದವನು ನಾನು. ಹಾಗಾಗಿ ‘ಬುಕ್ ಟಾಕ್’ ಆರಂಭಿಸಿದೆ.

ಆ ಕಾರ್ಯಕ್ರಮ ಬರೀ ಪುಸ್ತಕ ಪರಿಚಯದ ತಾಣವಾಗಿರಲಿಲ್ಲ. ಎಲ್ಲೆಲ್ಲಿಗೋ ನಮ್ಮ ಕ್ಯಾಮರಾ ಕಣ್ಣು ಹರಿದು ಪುಸ್ತಕ ದಾಹ ತಣಿಸುವ ಕೆಲಸಕ್ಕೆ ಕೈ ಹಾಕಿತ್ತು.

ಆಗ ನನಗೆ ನೆನಪಾದವರೇ ಜಿ.ಕುಮಾರಪ್ಪ.

ಕುಮಾರಪ್ಪ ಅವರ ಬಗ್ಗೆ ಅನೇಕರು ಕೇಳಿದ್ದರು. ಅಲ್ಲಿಗೆ ಹೋದವರಿಗಂತೂ ಕುಮಾರಪ್ಪ, ಚಂಪಾ ಭಾಷೆ ಬಳಸಿ ಹೇಳುವುದಾದರೆ ‘ಪ್ರೇಕ್ಷಣೀಯ’ ವ್ಯಕ್ತಿಯೇ ಸೈ.

ಅಷ್ಟು ಬಿಟ್ಟರೆ ಕುಮಾರಪ್ಪ ಅವರ ಲೈಬ್ರರಿ, ಅವರ ಲೋಕ ನೋಡಿದವರು ತೀರಾ ತೀರಾ ಕಡಿಮೆ.

ಹಾಗಾಗಿ ಅವರ ಬೆನ್ನತ್ತುವ ನಿರ್ಧಾರಕ್ಕೆ ಬಂದೆ.

ಈಟಿವಿ ಬೆಂಗಾಲಿ ಚಾನಲ್ ಮುಖ್ಯಸ್ಥ ಸಿದ್ಧಾರ್ಥ ದಾ ಕೈ ಕುಲುಕಿದೆ. ಹೀಗೀಗೆ ಕಲ್ಕತ್ತ ಎಂದರೆ ನಮಗೆ ಕುಮಾರಪ್ಪ ಎಂದು ವಿವರಿಸಿದೆ. ಅವರ ಮನೆ, ಲೈಬ್ರರಿ, ಅವರು ಓಡಾಡುವ ಜಾಗ ಎಲ್ಲಾ ಶೂಟ್ ಆಗಬೇಕು ಅವರ ಸಂದರ್ಶನ ಬೇಕು ಎಂದೆ.

ಕೇಳಿದ ಮೇಲೆ ‘ಇಲ್ಲ’ ಎನಿಸಿಕೊಳ್ಳುವ ಆಸಾಮಿಯೇ ನಾನಲ್ಲವಾದ ಕಾರಣ ಅವರು ‘ಓಕೆ’ ಎನ್ನಲೇಬೇಕಾಯಿತು.

ಅವರು ಕಲ್ಕತ್ತಾದ ಕಚೇರಿಗೆ ಪೋನೆತ್ತಿಕೊಂಡರು.

‘ಕುಮಾರಪ್ಪ, ನ್ಯಾಷನಲ್ ಲೈಬ್ರರಿ’ ಎನ್ನುತ್ತಿದ್ದಂತೆ ಆ ಕಡೆಯಿಂದ ನನಗೆ ಖಂಡಿತಾ ಗೊತ್ತಿಲ್ಲದ ಬೆಂಗಾಲಿ ಭಾಷೆಯಲ್ಲಿ ಪಟ ಪಟ ಪಟ ಮಾಹಿತಿ ಉದುರಿತ್ತು.

ಸಿದ್ದಾರ್ಥ ಸರ್ಕಾರ್ ಅವರೇ ದಂಗಾಗಿ ಹೋಗಿದ್ದರು. He is very well known person there ಅಂತ ನನ್ನ ಮುಖ ನೋಡಿದರು.

‘ಕುಮಾರಪ್ಪ ಅಂದ್ರೆ ಸುಮ್ನೇನಾ’ ಅನ್ನೋ ಥರಾ ನಾನೂ ಮುಖಾ ಮಾಡಿದೆ.

ಆಮೇಲೆ ಬೆಂಗಾಳಿ ಚಾನಲ್ ನ ಕ್ಯಾಮೆರಾ ಅವರ ಮನೆಗೂ, ಲೈಬ್ರರಿಗೂ ನುಗ್ಗಿ ಸವಿಸ್ತಾರವಾಗಿ ಶೂಟ್ ಮಾಡಿ ನನ್ನೆಡೆಗೆ ಕಳಿಸಿಕೊಟ್ಟಿತು.

ಅದು ಕನ್ನಡ ಚಾನಲ್ ನ ಹುಡುಗರ ಕೈಗೆ ಸಿಕ್ಕು ಅಭಿಮಾನದಿಂದ ಎಡೆಟ್ ಆಗಿ ‘ಬುಕ್ ಟಾಕ್’ನಲ್ಲಿ ಪ್ರಸಾರವೂ ಆಯಿತು.

ಕುಮಾರಪ್ಪ ಪೋನ್ ಮಾಡಿದರು. ಅವರ ದನಿಯಲ್ಲಿ ಇನ್ನಿಲ್ಲದಂತ ಮುಜುಗರ ಇತ್ತು.

ಅತ್ತ ಅವರ ಊರಲ್ಲೂ, ಇತ್ತ ಕಲ್ಕತ್ತದಲ್ಲೂ ಅವರು ಕಾಣಿಸಿಕೊಂಡಿದ್ದ ಕಾರಣ ಲೆಕ್ಕವಿಲ್ಲದಷ್ಟು ಜನ ಅವರಿಗೆ ಫೋನಾಯಿಸಿ ಅವರು ಮಾತು ಬಾರದಂತಾಗಿದ್ದರು.

ಇದಾದ ಮೇಲೆ ನಾನು ಅವರೂ ಆಗೀಗ ಮಾತನಾಡಿಕೊಳ್ಳುತ್ತಲೇ ಇದ್ದೆವು.

ಅವರ ಜೊತೆ ಮಾತನಾಡಿದಾಗಲೆಲ್ಲಾ ನನಗೆ ಒಂದು ವಿಶಿಷ್ಟತೆ ಕಾಣುತ್ತಿತ್ತು

ಅವರು ಕಲ್ಕತ್ತದ ಬಗ್ಗೆ ಮಾತನಾಡಿದ್ದೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ಅವರ ಮಾತು ಅವರ ಊರು, ಕೇರಿ, ಆ ಹಸಿರು, ಆ ಉಸಿರು ಈ ಬಗ್ಗೆಯೇ..

ದಶಕಗಳ ಕಾಲ ಊರ ಹೊರಗಿದ್ದ ಕುಮಾರಪ್ಪನವರೊಳಗೆ ಅವರಿಗೇ ಗೊತ್ತಾಗದಂತೆ ಅವರ ಊರು ಇನ್ನಿಲ್ಲದಂತೆ ಬೆಳೆಯುತ್ತಿತ್ತು.

ಅದು ಸರಿಯಾಗಿ ಗೊತ್ತು ಮಾಡಿಕೊಳ್ಳಲು ಆಗಿದ್ದು ನನಗೆ ಮಾತ್ರ. ಯಾಕೆಂದರೆ ಆ ವೇಳೆಗೆ ನಾನೂ ಊರು ಬಿಟ್ಟು 15 ವರ್ಷ ಆಗುತ್ತಾ ಬಂದಿತ್ತು. ನನ್ನೊಳಗೆ ನನ್ನ ಬೆಂಗಳೂರು ಕುತುಬ್ ಮಿನಾರ್ ನಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇತ್ತು.

ಹಾಗಿರುವಾಗಲೇ ಒಂದು ದಿನ ಕುಮಾರಪ್ಪ ನನಗೆ ಪೋನ್ ಮಾಡಿದರು.

ನಿಮ್ಮ ‘ನನ್ನೊಳಗಿನ ಹಾಡು ಕ್ಯೂಬಾ’ ಬೆಂಗಾಳಿಗೆ ತರುತ್ತಿದ್ದೇನೆ ಎಂದರು.

ಆಹಾ! ‘ಎನಗೆ ಬರುತಿದೆ ಜಗದ ಮುದ, ಕುಣಿದಲ್ಲದೆ ನಾ ತಾಳೆನಿದ..’ ಎಂದು ‘ಗೋಕುಲ ನಿರ್ಗಮನ’ದ ಕೃಷ್ಣನಿಗೆ ಅನಿಸಿದಂತೆಯೇ ನನಗೂ ಆಗಿ ಹೋಯ್ತು.

ಏಕೆಂದರೆ ನನ್ನ ಕ್ಯೂಬಾ ಪ್ರವಾಸ ಕಥನ ಮಲಯಾಳಂ ಹಾಗೂ ಬೆಂಗಾಲಿಯಲ್ಲಿ ಬರಬೇಕು ಎನ್ನುವುದು ನನ್ನ ತೀರಾ ದೊಡ್ಡ ಆಸೆಗಳಲ್ಲೊಂದಾಗಿತ್ತು.

ಏಕೆಂದರೆ ಆ ಬೆಂಗಾಲಿ, ಆ ಮಲೆಯಾಳಿಗಳಿಗೂ ಆ ಕ್ಯೂಬಾಕ್ಕೂ ಇನ್ನಿಲ್ಲದ ನಂಟು. ಅವರು ಓದಿದರೇ ನನ್ನ ಪ್ರವಾಸ ಸಾರ್ಥಕ ಎಂದುಕೊಂಡಿದ್ದೆ.

ಕುಮಾರಪ್ಪ ಹಾಗೆ ಹೇಳಿದಾಗ ಇಲ್ಲಿಂದಲೇ ಒಂದು ದೊಡ್ಡ ನಮಸ್ಕಾರ ಮಾಡಿದೆ.

ಆಮೇಲೆ ಕುಮಾರಪ್ಪ ಪೋನ್ ಮಾಡುತ್ತಲೇ ಹೋದರು.

ಪುಸ್ತಕ ಓದಿ ಅದರಲ್ಲಿ ನಾನು ಅಡಗಿಸಿಟ್ಟಿದ್ದ ಅರ್ಥವನ್ನು ಚರ್ಚಿಸಿ ‘ಬಂಗಾಲಿಯಲ್ಲಿ ನನಗೆ ಬರೆಯಲು ಅಷ್ಟು ಗೊತ್ತಿಲ್ಲ. ಹಾಗಾಗಿ ನಾನು ಅನುವಾದಿಸಿದ್ದನ್ನು ಬರೆದುಕೊಳ್ಳುವವರು ಒಬ್ಬರು ಬೇಕು ಅವರ ತಲಾಶ್ ನಲ್ಲಿದ್ದೇನೆ. ಅವರು ಸಿಕ್ಕ ತಕ್ಷಣ ಕ್ಯೂಬಾಗೆ ಬೆಂಗಾಲಿ ಲೇಪ ಸಿದ್ಧ’ ಎಂದರು.

ಆಹಾ! ಎಂದು ನಾನೂ ಖುಷಿಯಾದೆ.

ಆಮೇಲೆ ಸಾಕಷ್ಟು ಸಲ ನಾವು ಮಾತನಾಡಿದ್ದೇವೆ. ಅವರು ಬಂಗಾಳಕ್ಕೆ ಬರುವಂತೆ ನನಗೆ ಸಾವಿರದ ಮೇಲೊಂದುಬಾರಿ ಆಹ್ವಾನ ಕೊಟ್ಟದ್ದೂ, ನಾನು ‘ಓಹೋ ಅದಕ್ಕೇನಂತೆ’ ಎಂದ್ದದ್ದೂ, ಅದು ಆಗದ್ದು ಹೋಗದ್ದು ಎನ್ನುವುದು ನಮ್ಮಿಬ್ಬರಿಗೂ ಗೊತ್ತಿದ್ದದ್ದೂ ಹೀಗೆ ಕಾಲ ಸರಿಯುತ್ತಾ ಹೋಯಿತು.

ದಿಢೀರನೆ ಬಂದ ಒಂದು ಫೋನ್ ಕರೆ ‘ಕುಮಾರಪ್ಪ ಇಲ್ಲ’ ಎನ್ನುವ ಸುದ್ದಿ ಹೊತ್ತು ತಂದಿತು.

ಕುಮಾರಪ್ಪ ನಾನೂ ಭೇಟಿ ಮಾಡಿದ್ದು ಒಮ್ಮೆ ಮಾತ್ರ- ಹಸಿವು ಮುರಿಯಲು.

ಆ ನಂತರ ಮಾತನಾಡಿದ್ದು ನೂರಾರು ಬಾರಿ ಅದೂ ಹಸಿವು ಮುರಿಯಲು- ಓದಿನ ಹಸಿವು ಮುರಿಯಲು.

ಅವರೂ ನಾನೂ ಗಾಳಿ ತರಂಗವೆಂಬ ಕುದುರೆ ಏರಿ ಬೇಟಿ ಮಾಡಿದ್ದೇ ಹೆಚ್ಚು.

ಈಗ ನನ್ನ ಕ್ಯೂಬಾ ಪುಸ್ತಕ ನನ್ನೆದುರು ಕಂಡಾಗಲೆಲ್ಲಾ ನನಗೆ ಕುಮಾರಪ್ಪ ನೆನಪಿಗೆ ಬರುತ್ತಾರೆ.

ಹೌದಲ್ಲಾ ‘ನನ್ನ ಕ್ಯೂಬಾ ಅನುವಾದ ಮಾಡುವವರೆಗೆ ನಿಮ್ಮನ್ನು ಹೋಗಲು ಬಿಡುವುದಿಲ್ಲ’ ಎಂದು ನಾನು ಅವರಿಗೆ ಅಡ್ಡ ನಿಲ್ಲಬಹುದಿತ್ತಲ್ಲ ಮತ್ತು ಅವರು ಎಂದಿಗೂ ಅದನ್ನು ಅನುವಾದ ಮಾಡಿ ಮುಗಿಸದಂತೆಯೂ ನೋಡಿಕೊಳ್ಳಬಹುದಿತ್ತಲ್ಲ…???

ಮುನಿಯೂರು ರಸ್ತೆ ಕಾಮಗಾರಿಯಲ್ಲಿ ಶಾಸಕ ಮಸಾಲಜಯರಾಂ ಪಾತ್ರವೇನಿಲ್ಲ

Publicstory. in


ತುರುವೇಕೆರೆ: ತಾಲ್ಲೂಕಿನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ 15 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಮಾದರಿ ಅಭಿವೃದ್ದಿ ಕೆಲಸ ಕಾರ್ಯಗಳ ಆಗಿರುವುದನ್ನು ತಾಲ್ಲೂಕಿನ ಜನತೆ ಇಂದಿಗೂ ಮೆಲುಕು ಹಾಕುತ್ತಾರೆಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್ ತಿರುಗೇಟು ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲ್ಲೂಕಿನ ರಾಜಕೀಯದಲ್ಲಿ ಇದುವರೆಗಿನ ಯಾವೊಬ್ಬ ಶಾಸಕರು ಮಾಡದ ಅಭಿವೃದ್ಧಿ ಕಾರ್ಯವನ್ನು ಕೃಷ್ಣಪ್ಪರು ಮಾಡಿದ್ದಾರೆ. ಕೃಷ್ಣಪ್ಪರ ಬಗ್ಗೆ ಬಿಜೆಪಿಯ ಕೆಲವು ಮುಖಂಡರು ಲಘುವಾಗಿ ಮಾತನಾಡಿರುವುದು ಖಂಡನೀಯ‌‌ ಎಂದರು.

ಹಾಲಿ ಶಾಸಕರು ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆಗೆ ಮುಂದಾಗಿರುವುದು ಖಂಡನೀಯ. ಹಲ್ಲೆ ನಡೆಸಿದವನು ತಮ್ಮ ಪಕ್ಷದ ಕಾರ್ಯಕರ್ತನಲ್ಲ. ತಾನು ಅವನಿಗೆ ಬೆಂಬಲ ನೀಡಿಲ್ಲವೆಂಬುದನ್ನು ಹಾಲಿ ಶಾಸಕರು ತಮ್ಮ ಆತ್ಮಸಾಕ್ಷಿಯನ್ನು ಒತ್ತೆಯಿಟ್ಟು ಸಾರ್ವಜನಿಕವಾಗಿ ಹೇಳಲಿ.

ಅದು ಬಿಟ್ಟು ತಮ್ಮ ಪಕ್ಷದ ಬೆಂಬಲಿಗರಿಂದ ಹೇಳಿಕೆ ಕೊಡಿಸುವುದು ಯಾವ ನ್ಯಾಯ. ಖುದ್ದಾಗಿ ಶಾಸಕರೇ ಬಹಿರಂಗವಾಗಿ ಸತ್ಯಾಂಶವನ್ನು ಹೇಳಲಿ ಎಂದು ಕೋಳಾಲ ಗಂಗಾಧರ್ ಆಗ್ರಹಿಸಿದರು.

ಮಾಜಿ ಶಾಸಕರು ತಮ್ಮ ಅಸ್ಥಿತ್ವ ತೋರಿಸಿಕೊಳ್ಳಲು ಪ್ರತಿಭಟನೆ ಮಾಡಿದ್ದಲ್ಲ. ತಮ್ಮ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಲು ಮತ್ತು ಮುಂಬರುವ ದಿನಗಳಲ್ಲಿ ಹಾಲಿ ಶಾಸಕರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದಿದ್ದಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಂದೇಶ ರವಾನಿಸಲು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಮುನಿಯೂರು ರಸ್ತೆ ನಿರ್ಮಾಣದ ಹಿಂದೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಕೊಡುಗೆ ಇದೆ. 2017 ರಲ್ಲೇ ಕೃಷ್ಣಪ್ಪರು ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಅದು ನ್ಯಾಯಾಲಯಕ್ಕೆ ಹೋಗಿದ್ದರಿಂದ ಕಾಮಗಾರಿ ತಡವಾಯಿತು. ಈ ರಸ್ತೆ ನಿರ್ಮಾಣದಲ್ಲಿ ಹಾಲಿ ಶಾಸಕರ ಪಾತ್ರ ಏನೇನೂ ಇಲ್ಲ ಎಂದು ಕೋಳಾಲ ಗಂಗಾಧರ್ ಸ್ಪಷ್ಟಪಡಿಸಿದರು.

ಸುದ್ದಿ ಗೋಷ್ಠಿಯಲ್ಲಿ ಜೈಗಿರಿ ಸುಂದರ್, ಕೊಂಡಜ್ಜಿ ಚೇತನ್, ಕೊಡಗೀಹಳ್ಳಿ ಪಾಲಣ್ಣ, ರಾಮೇಗೌಡ, ಚೇತನ್, ಅಕ್ಷಯ್, ಶಿವು ಇದ್ದರು.

ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದಿದೆ ಲೆಕ್ಕಾಚಾರ…

ತುಳಸೀತನಯ


ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಸುರೇಶಗೌಡ ನೇಮಕ ನಂತರ ಬಿಜೆಪಿ ಕಟ್ಟಿಹಾಕಲು ಜೆಡಿಎಸ್, ಕಾಂಗ್ರೆಸ್‌ನಲ್ಲಿ ಹೊಸ ಸಾರಥಿಗಳ ಹುಡುಕಾಟ‌ ಆರಂಭವಾಗಿದೆ.‌ ಇದು‌ ಈ ಎರಡೂ ಪಕ್ಷಗಳ ಕಾರ್ಯಕರ್ತರ ಒತ್ತಾಸೆಯಂತೆಯೂ ಕಾಣ ತೊಡಗಿದೆ.

ತಮ್ಮ‌ ಪಕ್ಷಗಳ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಆಯ್ಕೆ ಹಿಂದೆ ಜೆಡಿಎಸ್, ಕಾಂಗ್ರೆಸ್ ಸಮಾನ ಎದುರಾಳಿಯನ್ನು ಎದುರಿಸಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆ ಭದ್ರಕೋಟೆಯಾಗಲಿದೆ ಎಂಬುದು ಈ ಎರಡೂ ಪಕ್ಷಗಳ ನಾಯಕರಿಗೂ ಗೊತ್ತಿದೆ.

ಕಾಂಗ್ರೆಸ್, ಜೆಡಿಎಸ್ ಕಟ್ಟಿ ಹಾಕಲು ಬಿಜೆಪಿ ನೀರಿನ ಅಸ್ತ್ರ ಬಳಸಲಿದೆ. ಲೋಕಸಭಾ ಚುನಾವಣೆಯಲ್ಲಿ ಗಂಗೆಯ ಶಾಪ( ಹೇಮಾವತಿ ನೀರು) ಪದ ಬಳಸಿ ದೇವೇಗೌಡರನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು ಬಿಜೆಪಿ. ಇದನ್ನು ವಿಧಾನಸಭೆ ಚುನಾವಣೆಗೂ ಬಳಸಿಕೊಳ್ಳಲಿದೆ.

ಹೇಮಾವತಿ ಎಕ್ಸ್ ಪ್ರೆಸ್ ಕಾಲುವೆ ಮೂಲಕ ನೇರವಾಗಿ ತಮ್ಮ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗುವ ಕೆಲಸಕ್ಕೆ ಡಿ.ಕೆ.ಶಿವಕುಮಾರ್ ಕೈಹಾಕಿ ಬಿಜೆಪಿಗೆ ಸಿಕ್ಕಿ ಬಿದ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಅವರು ಮುಖ್ಯಮಂತ್ರಿ ಅಭ್ಯರ್ಥಿ ಯೂ ಹೌದು.

ಆದರೆ ಹೇಮಾವತಿ ನೀರಿನಲ್ಲಿ ಜಿಲ್ಲೆಗೆ ಅನ್ಯಾಯವಾಗಲಿದೆ ಎಂದು ಬಿಜೆಪಿ ಹುಯ್ಯಲೆಬ್ಬಿಸಿದರೆ ಡಿಕೆಶಿಗೂ ಜಿಲ್ಲೆ ರಾಜಕಾರಣ ಕಷ್ಟವಾಗಲಿದೆ. ದೇವೇಗೌಡರನ್ನೇ ಕೈ ಬಿಟ್ಟ ಜನ ಇನ್ನೂ ಡಿಕೆಶಿ ಅವರನ್ನು ಕೈ ಹಿಡಿಯಲಿದ್ದಾರೆ ಎಂದು ಹೇಗೆ ನಂಬುದು ಅಲ್ಲವೇ?

ಇನ್ನೂ, ಮೊನ್ನೆ ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ & ಆಯ್ಕೆ ಕೂಗು ಬಹು ಜೋರಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಜೆಡಿಎಸ್ ವಲಯದಲ್ಲಿ ಜಿಲ್ಲಾಧ್ಯಕ್ಷ ಪದವಿಗೆ ಲಾಭಿ ನಡೆಯಬೇಕಿದ್ದರ ಬದಲಾಗಿ ಬಹು ಗಂಭೀರವಾದಂತಹ ಚರ್ಚೆಗಳು ನಡೆಯಲಾರಂಭಿಸಿವೆ.

ಕಾರಣವೆಂದರೆ ಮಾಜಿ ಪ್ರಧಾನಿ ದೇವೆಗೌಡರ ಲೋಕಸಭಾ ಚುನಾವಣಾ ಸೋಲು ಮತ್ತು ಪಕ್ಷ ದುರ್ಬಲವಾಗಿರುವಂತಹ ಈ ಸಂಧರ್ಭದಲ್ಲಿ ರಾಜಕೀಯ ಅನುಭವ & ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿರುವಂತಹ, ಅದರಲ್ಲೂ ಜಿಲ್ಲೆಯ ರಾಜಕಾರಣದ ಮೂಲವಸ್ತುವಾದಂತಹ “ನೀರಾವರಿ ಯೋಜನೆಯ” ಸಮಗ್ರ ಪರಿಚಯವಿರುವಂತಹ ಮುತ್ಸದಿಯನ್ನು ಜಿಲ್ಲಾಧ್ಯಕ್ಷ ಪದವಿಗೆ ಕೂರಿಸುವ ಚಟುವಟಿಕೆ ನಡೆಯುತ್ತಿದೆ ಎಂಬ ಸುದ್ಧಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕರಾದ ಹೆಚ್. ನಿಂಗಪ್ಪನವರ ಹೆಸರು ಮುಂಚೂಣಿಯಲ್ಲಿದೆ.

ರಾಜ್ಯ ನಾಯಕರ & ಜಿಲ್ಲಾ ನಾಯಕರ ಚರ್ಚೆ ಹಿನ್ನೆಲೆಯಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಲ್ಲಿ ಕುತೂಹಲ ಹುಟ್ಟಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವೇ ಸೋತಿದ್ದರೂ ಧೃತಿಗೆಡದೇ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ.ಎಸ್ ಬಸವರಾಜು ಗೆಲುವಿನ ಹಿಂದೆ ಸಾಕಷ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದ ಮಾಜಿ ಶಾಸಕರಾದ ಸುರೇಶ್ ಗೌಡ ಅವರಿಗೆ ಸರಿಸಮವಾಗಿ ಅವರಿಗೆ ಪ್ರತಿಹಂತದಲ್ಲೂ ಸವಾಲು ಒಡ್ಡುವರು ಬೇಕು ಎಂಬ ಬೇಡಿಕೆ ಜೆಡಿಎಸ್ ಕಾರ್ಯಕರ್ತರದ್ದಾಗಿದೆ.

ತನ್ನ ಚುನಾವಣೆಯನ್ನಷ್ಟೇ ನೋಡದ ಪಕ್ಷ ಬೆಳೆಸುವ ನಾಯಕರು ಮೊದಲಿನಿಂದಲೂ ಜೆಡಿಎಸ್ ನಲ್ಲಿ ಇಲ್ಲವಾಗಿದ್ದಾರೆ.

ಚುನಾವಣೆ ಸಂಧರ್ಭದಲ್ಲಿ ಆರೋಪ ಮಾಡುವಾಗ ಪ್ರತಿ ಹಂತದಲ್ಲೂ ನೀರಾವರಿ ವಿಚಾರವಾಗಿ ಅಪಪ್ರಚಾರ & ತಿರುಚುವ ತಂತ್ರಗಾರಿತೆಯಲ್ಲಿ ಬಿಜೆಪಿ ಸಫಲತೆ ಹೊಂದುತ್ತಾ ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ.

ಜೊತೆಗೆ ಜಾತಿ ಲೆಕ್ಕಚಾರದಲ್ಲೂ ಮೇಲುಗೈ ಸಾಧಿಸಿದೆ. ನೈಜ ನೀರಾವರಿ ಹೋರಾಟ ಅನುಭವದ ರಾಜಕಾರಣಿಗಳನ್ನು ಜೆಡಿಎಸ್ & ಕಾಂಗ್ರೆಸ್ ನಲ್ಲಿ ವಿಶ್ವಾಸಕ್ಕೆ ತಗೆದುಕೊಳ್ಳದಿರುವುದೇ ಈ ಆಘಾತಕಾರಿ ಬೆಳವಣಿಗೆಗೆ ಕಾರಣ ಎಂದು ಜಿಲ್ಲೆಯ ಹಿರಿಯರು, ಬುದ್ದಿವಂತ ಮತದಾರರ ವಿಶ್ಲೇಷಣೆಯೂ ಕೂಡಾ ಆಗಿದೆ.

ನೀರಾವರಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿ.ಬಿ ಜಯಚಂದ್ರ & ಜೆಡಿಎಸ್ ನಲ್ಲಿ ಹೆಚ್ ನಿಂಗಪ್ಪನವರ ಅನುಭವವಷ್ಟೆ ಬಿಜೆಪಿಗರನ್ನು ಕಟ್ಟಿಹಾಕುವ ಶಕ್ತಿ ಹೊಂದಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಬಹುಮುಖ್ಯ ಕಾರಣ ಹೇಮಾವತಿ ನೀರಿನ ವಿಚಾರದಲ್ಲಿ ಅವರ ಮೇಲೆ ಆರೋಪ ಮತ್ತು ಅಪಪ್ರಚಾರ. ಇದಕ್ಕೆ ಪ್ರತ್ಯುತ್ತರವಾಗಿ ಯಾವೊಬ್ಬ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕೂಡ ಚಕಾರ ಎತ್ತದಿರುವುದು & ಪಕ್ಷದೊಳಗಿನ ಗುಂಪುಗಾರಿಕೆ & ಒಡಕು ದೇವೇಗೌಡರ ಸೋಲಿಗೆ ಬಹುಮುಖ್ಯ ಕಾರಣವಾಯಿತು ಎಂಬುದನ್ನು ಈಗ ಸಣ್ಣ ಹುಡುಗ ಸಹ ಹೇಳಬಲ್ಲ.

ಸತ್ಯದ ವಿಷಯವೆಂದರೆ ಹೇಮಾವತಿ ನೀರಿನ ವಿಚಾರದಲ್ಲಿ ದೇವೇಗೌಡರ ತ್ಯಾಗ ಸ್ಮರಣೀಯವಾದದ್ದು “ನವಿಲೂರು ಸುರಂಗದ” ವಿಚಾರದಲ್ಲಿ ಹಾಸನದ ಜನತೆಯ ವಿರೋಧ ಕಟ್ಟಿಕೊಂಡು ತುಮಕೂರಿಗೆ ನೀರು ತರಲು ಶ್ರಮಿಸಿದಂತಹ ದೇವೆಗೌಡರ ಬಗ್ಗೆ ಒಂದು ಚಕಾರವನ್ನೆತ್ತದೇ, ಒಂದು ಒಳ್ಳೆಯ ಮಾತಾಡದೇ & ವಾಸ್ತವವನ್ನೇಳದೇ ಇರುವುದು ಜೆಡಿಎಸ್ ನ ಜಿಲ್ಲಾ ನಾಯಕತ್ವದ ವೈಫಲ್ಯಕ್ಕೆ ಹಿಡಿದ ಕನ್ನಡಿಯೇ ಆಗಿತ್ತು.

ಮಾಜಿ ಪ್ರಧಾನಿಗಳ ಸೋಲು ಕಾರ್ಯಕರ್ತರಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿರುವ ಸಂಧರ್ಭದಲ್ಲಿ ಹೈಕಮಾಂಡ್ ನಿರ್ಧಾರವೇ ಪಕ್ಷವನ್ನು ಮತ್ತೆ ಸಂಘಟಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ.

ಪಕ್ಷದಲ್ಲಿನ ಒಡಕು, ಗುಂಪುಗಾರಿಕೆ ಹೆಚ್ಚಾಗಿರುವ & ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಳೆದುತೂಗಿ ಅಧ್ಯಕ್ಷರ ಆಯ್ಕೆ ಮಾಡಿದರೆ ಮಾತ್ರ ಕಾರ್ಯಕರ್ತರು ನಮ್ಮ ಧ್ವನಿಗೆ ಬೆಲೆ ಸಿಗುತ್ತದೆಂಬ ಆಶಾಭಾವನೆಯಿಂದ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ.

ಹಲವಾರು ಹೋರಾಟದ ಹಿನ್ನೆಲೆಯಲ್ಲಿ ಬಂದಂತಹ
ಮಾಜಿ ಶಾಸಕರಾದ ಎಚ್. ನಿಂಗಪ್ಪನವರು ವಕೀಲರಾಗಿದ್ದು, ಈ ಹಿಂದೆ ಸತತ ಹತ್ತು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅವರ ಅವಧಿಯಲ್ಲಿ 2004ರ ಚುನಾವಣಾ ಸಂಧರ್ಭದಲ್ಲಿ 11 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕೀರ್ತಿ ನಿಂಗಪ್ಪವರಿಗೆ ಸೇರಬೇಕಾಗುತ್ತದೆ. ಹೀಗಾಗಿ ಅವರೇ ಇರಲಿ ಎಂಬುದು ಕೆಲವರ ಲೆಕ್ಕಾಚಾರವೂ ಆಗಿದೆ.

ಜೆಡಿಎಸ್ ನಿಂದ ಜಿಲ್ಲೆಯ ಮೂವರು ಪ್ರಮುಖರು ಈಗಾಗಲೇ ಹೊರಗೆ ಕಾಲಿಟ್ಟಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಶಾಸಕ ಬಿ.ಸಿ.ಗೌರಿಶಂಕರ್ ಜಿಲ್ಲೆಯ ಜೆಡಿಎಸ್ ಹೈ ಕಮಾಂಡ್ ಆಗಲಿದ್ದಾರೆ ಎಂಬ ಮಾತುಗಳು ಆ ಪಕ್ಷದೊಳಗೆ ಕೇಳಿ ಬರುತ್ತಿವೆ.

ಹೀಗಾಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕದ ಹಿಂದೆ ಅವರು ಅಳೆದು ತೂಗಿ ಕೆಲಸ ಮಾಡಬೇಕಾಗಿದೆ. ಸುರೇಶಗೌಡ ಅವರನ್ನು ಕಟ್ಟಿ ಹಾಕುವ ನಾಯಕನಿಗಾಗಿ ಅವರು ಹುಡುಕಾಟ ನಡೆಸಬೇಕಾಗಿದೆ.

ಈ ನಿಟ್ಟಿನಲ್ಲಿ ಎಚ್. ನಿಂಗಪ್ಪ ಅವರ ಪರ ಗೌರಿಶಂಕರ್ ವಾಲಬಹುದು. ಆದರೆ ಉಳಿದ ಜೆಡಿಎಸ್ ಮುಖಂಡರ ಅಭಿಪ್ರಾಯವೂ ಮುಖ್ಯವಾಗಲಿದೆ.

ನಿಜಕ್ಕೂ ನೀರಾವರಿ ವಿಚಾರದಲ್ಲಿ ಸಂಸದ ಜಿ.ಎಸ್.ಬಸವರಾಜ್, ಮಾಜಿ ಶಾಸಕ ಬಿ.ಸುರೇಶಗೌಡ ಅವರನ್ನು ಕಟ್ಟಿ ಹಾಕುವ ಸಾಮರ್ಥ್ಯ ಜಿಲ್ಲೆಯಲ್ಲಿ ಟಿ.ಬಿ.ಜಯಚಂದ್ರ, ಎಚ್.ನಿಂಗಪ್ಪ ಅವರಿಗೆ ಬಿಟ್ಟರೆ ಉಳಿದವರಿಗೆ ಇಲ್ಲ.

ಪಕ್ಷದ ಅಧ್ಯಕ್ಷ ಸ್ಥಾನ ಏನೇ ಇರಲಿ, ಜಿಲ್ಲೆಯಲ್ಲಿ ಈ ಎರಡೂ ಪಕ್ಷಗಳು ಉಳಿಯಬೇಕಾದರೆ ಈ ಇಬ್ಬರೂ ಮುಖಂಡರು ನೀರಿನ ದನಿ ತೆಗೆಯಬೇಕಾಗಿದೆ.