Saturday, May 9, 2026
Google search engine
Home Blog Page 203

ಚಿ.ನಾ.ಹಳ್ಳಿಗೂ ಬಂತಲ್ಲ ಕೊರೊನಾ

Publicstory. in


ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಕೊರೋನಾ ಸೋಂಕು ತಗುಲಿದ್ದು, ಕೋರೋನ ರೋಗಿ ವಾಸಿಸುತ್ತಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಪಟ್ಟಣದ ಹೊಸಬೀದಿ ಬಳಿ ಇರುವ ಹಿರಿಯಣ್ಣನಹಟ್ಟಿ ಪ್ರದೇಶದ ವಾಸವಿದ್ದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಇನ್ನೂ, ಅಧಿಕೃತವಾಗಿ ಇನ್ನೂ ಸರ್ಕಾರ ಪ್ರಕಟಿಸಿಲ್ಲ. ಪತಿ ಗಾರೆ‌ ಕೆಲಸ ಮಾಡುತ್ತಿದ್ದು, ಮಗಳು ಗಾರ್ಮೆಂಟ್ ಉದ್ಯೋಗಿ.

ಈಗ ಇವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತ ಮಹಿಳೆಯನ್ನು ತುಮಕೂರಿನ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗುವುದು, ಕುಟುಂಬದವರನ್ನು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುವುದು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಸೋಂಕಿತೆ ವಾಸಿಸುತ್ತಿರುವ ಪ್ರದೇಶವದಲ್ಲಿ ಯಾರೂ ಓಡಾಡದಂತೆ ಪುರಸಭೆ, ಪೋಲಿಸ್ ಇಲಾಖೆ ಸೀಲ್ ಡೌನ್ ಮಾಡಲಾಗಿದೆ.

ಬ್ಯಾನ್ ಆದ ಪುಸ್ತಕಗಳಿಗೂ ಒಂದು ಹಬ್ಬ..

ಜಿ ಎನ್ ಮೋಹನ್


ಜಿ ರಾಮಕೃಷ್ಣ ಅವರು ಮನೆಗೆ ಬಂದಿದ್ದರು.

ಪುಸ್ತಕಗಳ ಕಪಾಟಿನ ನಡುವೆ ಕೈಯಾಡಿಸುತ್ತಾ ಇದ್ದ ಅವರು ಆಗ ತಾನೇ ನಾಲ್ಕನೇ ತರಗತಿಗೆ ಹೆಜ್ಜೆಯಿಡುತ್ತಿದ್ದ ನನ್ನ ಮಗಳನ್ನು ಕಂಡವರೇ ನೀನು ‘ಹಕಲ್ ಬರಿ ಫಿನ್’ ಪುಸ್ತಕ ಓದಿದ್ದೀಯಾ? ಎಂದರು.

ನಮ್ಮ ಕಪಾಟಿನಲ್ಲಿ ಆ ಪುಸ್ತಕ ಇರಲಿಲ್ಲ. ಮಾರನೆಯ ದಿನವೇ ನಮ್ಮ ಯಾತ್ರೆ ಪುಸ್ತಕದಂಗಡಿಗೆ. ನೂರೆಂಟು ಪುಸ್ತಕಗಳ ರಾಶಿಯಲ್ಲಿ ನಮ್ಮ ಕಣ್ಣು ಆ ಪುಸ್ತಕವನ್ನೇ ಹುಡುಕಿತು.

‘ಅಪ್ಪಾ! ಹಕಲ್ ಬರಿ ಫಿನ್’ ಎಂದು ಕೂಗಿದವಳೇ ಆ ಪುಸ್ತಕದ ಮೇಲೆ ಕೈಯಿಟ್ಟಳು.

ಆಗ ನಮಗೆ ಆಕೆ ಒಂದು ‘ನಿಷೇಧಿತ ಅಥವಾ ಕಿರುಕುಳಕ್ಕೆ ಒಳಗಾದ’ ಪುಸ್ತಕದ ಮೇಲೆ ಕೈಯಿಟ್ಟಿದ್ದಾಳೆ ಎಂದು ಗೊತ್ತಿರಲಿಲ್ಲ.

ಚಂದಮಾಮ, ಬಾಲಮಿತ್ರ ಕಾಲ ಅದು.

ಬೇತಾಳ ಹಾಗೂ ವಿಕ್ರಮಾದಿತ್ಯನ ಕಥೆ, ಆ ಭೀಮ, ಆ ದುರ್ಯೋಧನ, ಆ ದ್ರೌಪದಿ ಇವರ ಲೇಖನಿಯಿಂದಲೇ ಚಿಮ್ಮಬೇಕು ಎನಿಸುವಂತಿದ್ದ ಎಂ ಟಿ ವಿ ಆಚಾರ್ಯ ಅವರ ಸುಂದರ ರೇಖೆಗಳು..

ಇವುಗಳಲ್ಲಿಯೆ ಕಳೆದು ಹೋಗಿದ್ದ ನನ್ನನ್ನು ಆ ಜಗತ್ತಿನ ಆಚೆಗೂ ಕರೆದೊಯ್ಯಲು ನನ್ನ ಅಣ್ಣ ಸಜ್ಜಾಗಿದ್ದರು.

ಪುಟಾಣಿ ಮಕ್ಕಳ ಕಥೆಗಳ ರಾಶಿ ರಾಶಿ ಪುಸ್ತಕಗಳನ್ನು ತಂದು ಕೈಗಿಡುತ್ತಿದ್ದ ಅಣ್ಣ ಒಂದು ದಿನ ‘ಟಾಮ್ ಸಾಯರ್’ ಪುಸ್ತಕವನ್ನು ತಂದುಕೊಟ್ಟರು. ಆ ಪುಸ್ತಕದ ಪುಟ ತೆರೆಯುವಾಗ ನಾನು ಒಂದು ‘ನಿಷೇಧಿತ ಅಥವಾ ಕಿರುಕುಳಕ್ಕೆ ಒಳಗಾದ’ ಪುಸ್ತಕವನ್ನು ಮುಗುಚಿಹಾಕುತ್ತಿದ್ದೇನೆ ಎಂದು ಖಂಡಿತಾ ಗೊತ್ತಿರಲಿಲ್ಲ.

ಹ್ಯಾರಿ ಪಾಟರ್ ಗಾಳಿ ಇನ್ನಿಲ್ಲದಂತೆ ಬೀಸಿತು.

ಮಂಗಳೂರಿನಲ್ಲಿದ್ದ ನಮಗೆ ಹ್ಯಾರಿ ಪಾಟರ್ ಬೆಂಗಳೂರು ದಾಟಿ ಮಂಗಳೂರಿಗೆ ಬರುವುದು ಯಾವಾಗ ಎಂದು ಬೀದಿ ಕಾಯುವುದೇ ಕೆಲಸ.

ಮಕ್ಕಳ ದಂಡು ಕಟ್ಟಿಕೊಂಡು ಹ್ಯಾರಿ ಪಾಟರ್ ನ ‘ದಿ ವಿಜಾರ್ಡ್ ಆಪ್ ಓಜಡ್’ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗೆ ಲಗ್ಗೆ ಇಡುತ್ತಿದ್ದೆ.

ಹಾಗೆ ಲಗ್ಗೆ ಇಡುವಾಗ ನಾವು ‘ನಿಷೇಧಿತ ಅಥವಾ ಕಿರುಕುಳಕ್ಕೆ ಒಳಗಾದ’ ಪುಸ್ತಕಕ್ಕಾಗಿ ಹೀಗೆ ಬೆನ್ನತ್ತಿದ್ದೇವೆ ಎಂದು ಖಂಡಿತಾ ಗೊತ್ತಿರಲಿಲ್ಲ.

ಅರೆ ! ಇದೇನಿದು ನಾವು ಪ್ರತಿನಿತ್ಯ ಓದುವ, ನಮ್ಮ ಮನೆಗಳ ಕಪಾಟಿನ ಖಾಯಂ ಸದಸ್ಯರಾದ, ಬೇಕೆಂದಾಗಲೆಲ್ಲಾ ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ಯುವ ಈ ಪುಸ್ತಕಗಳು ನಿಷೇಧಕ್ಕೋ, ಕಿರುಕುಳಕ್ಕೋ ಒಳಗಾಗಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ನನ್ನನ್ನು ಗುಂಗೀ ಹುಳದಂತೆ ಕಾಡತೊಡಗಿತು.

ಬಹುಷಃ ಆ ಸುತ್ತಮುತ್ತಲ ಸಮಯದಲ್ಲಿಯೇ ಇರಬೇಕು ವಾಷಿಂಗ್ಟನ್ ನಿಂದ ಗೆಳೆಯನ ಕರೆ. ‘ಸಾಧ್ಯವಾದರೆ ಸೆಪ್ಟೆಂಬರ್ ಗೇ ಇಲ್ಲಿ ಬಾ’ ಅಂತ.

ಆಗ ನಾನು ಸಿಎನ್ಎನ್ ಚಾನಲ್ ಜೊತೆ ಕೈ ಕುಲುಕಲು ಅಕ್ಟೋಬರ್ ತಿಂಗಳಲ್ಲಿ ಅಟ್ಲಾಂಟಾಗೆ ಹೊರಟಿದ್ದೆ.

ಆಗಲೇ ಆತ ಕರೆ ಮಾಡಿದ್ದು. ‘ಏನು ಅಂತ ವಿಶೇಷ ಸೆಪ್ಟೆಂಬರ್ ಗೇ ಬರುವಂತಹದ್ದು’ ಎಂದೆ.

ಇಲ್ಲಿ ಆಗ ‘ಬ್ಯಾನ್ಡ್ ಬುಕ್ ವೀಕ್’’ ಇರುತ್ತದೆ ಅಂದ.

ಅರೆ ! ನಿಷೇಧಿಸಲ್ಪಟ್ಟ ಪುಸ್ತಕಗಳಿಗೂ ಒಂದು ವಾರ!

ಆ ವೇಳೆಗೆ ಬಂಜಗೆರೆ ಜಯಪ್ರಕಾಶರ ಮೈ ಹಣ್ಣಾಗಿ ಹೋಗಿತ್ತು. ಬಸವಣ್ಣನ ಹುಟ್ಟಿಗೆ ಸಂಬಂಧಿಸಿದಂತೆ ಹೊಸ ನೋಟ ಬೀರುವ ‘ಅನುದೇವಾ ಹೊರಗಣವನು…’ ಕೃತಿಯನ್ನು ಪ್ರಕಟಿಸಿದ್ದರು.

ಒಂದು ಹೊಸ ಚರ್ಚೆಗೆ ಈ ಕೃತಿ ಕಾರಣವಾಗುತ್ತದೆ ಎಂದು ಅವರು ಎದುರು ನೋಡುತ್ತಿದ್ದಾಗ ಅದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.

ನೋಡ ನೋಡುತ್ತಿದ್ದಂತೆಯೇ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆ. ಪುಸ್ತಕ ಸುಟ್ಟದ್ದಾಯ್ತು. ಈ ಕ್ಷಣ ಇದನ್ನು ನಿಷೇಧಿಸಬೇಕು ಎನ್ನುವ ಕೂಗು.

ಪಿ ವಿ ನಾರಾಯಣರ ‘ಧರ್ಮಕಾರಣ’, ಎಂ ಎಂ ಕಲಬುರ್ಗಿಯವರ ‘ಮಾರ್ಗ’ ಇಂತಹದೇ ಪ್ರತಿಭಟನೆ ಎದುರಿಸಿತ್ತು.

ಇದೇ ರೀತಿಯ ಇನ್ನೊಂದು ವಿವಾದವನ್ನು ತೀರಾ ಹತ್ತಿರದಿಂದ ನೋಡಿದ್ದೆ.

ಸಿ ಜಿ ಕೆ ಯವರ ಒತ್ತಾಸೆಯಿಂದಾಗಿ ಎಚ್ ಎಸ್ ಶಿವಪ್ರಕಾಶ್ ಅದೇ ಮೊದಲ ಬಾರಿ ನಾಟಕ ಬರೆಯಲು ಮುಂದಾಗಿದ್ದರು. ಅದು ‘ಮಹಾಚೈತ್ರ’. ವಚನ ಚಳುವಳಿಯ ಬಗ್ಗೆ ಹೊಸ ಕಣ್ಣೋಟ ನೀಡುವ ನಾಟಕ.

ಈ ಕೃತಿ ಕೂಡಾ ವಿವಾದಕ್ಕೆ ತುತ್ತಾಯಿತು. ಮತ್ತೆ ಅದೇ ಕೂಗು ‘ಮಹಾಚೈತ್ರ’ವನ್ನು ನಿಷೇಧಿಸಿ. ಯಾರೂ ಓದದಂತೆ ಮೂಲೆಗೆ ತಳ್ಳಿ.

ಇಲ್ಲಿ ”ಮೂಲೆಗೆ ತಳ್ಳಿ” ಎಂಬ ಕೂಗೆದ್ದಿರುವಾಗಲೇ ಅಮೇರಿಕಾ, ಮೂಲೆಗೆ ಬಿದ್ದ ಇಂತಹ ನೂರಾರು ಕೃತಿಗಳನ್ನು ಹೊರಗೆಳೆದು ತರುವ ಕೆಲಸಕ್ಕೆ ಕೈ ಹಾಕಿತ್ತು.

ಯಾವೆಲ್ಲಾ ಕೃತಿ ಅಮೇರಿಕಾ ಸೇರಿದಂತೆ ಜಗತ್ತಿನ ವಿವಿದೆಡೆ ನಿಷೇಧಕ್ಕೆ ಒಳಗಾಗಿದೆಯೋ, ಯಾವ ಕೃತಿಗಳನ್ನು ಕಂಡು ಜಗತ್ತು ಮೂಗು ಸಿಂಡರಿಸಿದೆಯೋ, ಯಾವ ಕೃತಿಯನ್ನು ಕಂಡರೆ ಕೆಂಡ ಮೈಮೇಲೆ ಬಿದ್ದವರಂತೆ ಆಡುತ್ತದೆಯೋ ಅಂತಹ ಕೃತಿಗಳನ್ನೇ ಹೆಕ್ಕಿ ಹೆಕ್ಕಿ ಧೈರ್ಯವಾಗಿ ಓದಿ ಎಂಬ ಆಹ್ವಾನ ಕೊಟ್ಟಿತ್ತು.

‘ಹೀಗೆ ಪುಸ್ತಕಗಳನ್ನು ನಮ್ಮೆಲ್ಲರ ಕೈಗಳಿಂದ ಕಸಿದುಕೊಳ್ಳಲು ನೀವ್ಯಾರು?’ ಎಂದು ಪ್ರಶ್ನಿಸಿ ಒಂದಿಡೀ ವಾರ ಬೀದಿ ಬೀದಿಗಳಲ್ಲಿ, ಅಂಗಡಿಗಳಲ್ಲಿ, ವೆಬ್ ಸೈಟ್ ಗಳಲ್ಲಿ, ಯೂಟ್ಯೂಬ್ ನಲ್ಲಿ, ಟ್ವಿಟರ್ ನಲ್ಲಿ ನಿಷೇಧಿತ ಪುಸ್ತಕಗಳನ್ನು ಓದುವ, ಅದರ ಬಗ್ಗೆ ಮಾತನಾಡುವ, ಅದನ್ನು ಚರ್ಚಿಸುವ ಚಳುವಳಿಯೇ ಆರಂಭವಾಗಿ ಹೋಯ್ತು.

ಆಕೆಯೊಬ್ಬಳಿದ್ದಳು- ಜುಡಿತ್ ಕ್ರುಗ್.

ಅಮೇರಿಕಾ ಲೈಬ್ರರಿ ಕಾಂಗ್ರೆಸ್ ನ ಪ್ರಮುಖ ಹುದ್ದೆಯಲ್ಲಿದ್ದಾಕೆ. ಸೆನ್ಸಾರ್ ಷಿಪ್ ಎಂದರೆ ಸಾಕು ಸಿಡಿದೇಳುತ್ತಿದ್ದವಳು ಈಕೆ.

ಅಮೇರಿಕಾದಲ್ಲಿ ಸಾಲು ಸಾಲಾಗಿ ಪುಸ್ತಕಗಳನ್ನು ನಿಷೇಧಿಸುತ್ತಿದ್ದನ್ನು ನೋಡಿ 1982 ರಲ್ಲಿ ನಿಷೇಧಿಸಿದ ಪುಸ್ತಕಗಳಿಗಾಗಿಯೇ ಒಂದು ಆಂದೋಲನ ಹುಟ್ಟು ಹಾಕಿದಳು.

‘ಪುಸ್ತಕ ಇರುವುದು ಮಾತನಾಡಲು, ಅವನ್ನು ಮಾತನಾಡಲು ಬಿಡಿ’ ಎನ್ನುವುದು ಆಕೆಯ ನಿಲುವು.

‘ನಿಮ್ಮ ಮೂಗಿನ ನೇರಕ್ಕೆ ಹೊಂದಿಕೊಳ್ಳದ ದೃಷ್ಟಿಕೋನಕ್ಕೂ ಒಂದು ಜಾಗ ಇರಬೇಕು’ ಎಂದು ಗಟ್ಟಿ ದನಿ ಎತ್ತಿದ್ದೇ ತಡ ಬೆಂಬಲದ ಹೊಳೆ ಹರಿಯಿತು.

ಅಮೇರಿಕಾದ ಲೈಬ್ರರಿ ಅಸೋಸಿಯೇಷನ್, ಪುಸ್ತಕ ಮಾರಾಟಗಾರರ ಸಂಘ, ಕಾಲೇಜು ಪುಸ್ತಕ ಭಂಡಾರ ಹೀಗೆ ಒಂದೊಂದು ಹನಿ ಸೇರಿ ಹಳ್ಳವಾಯ್ತು.

ಸೆಪ್ಟೆಂಬರ್ ತಿಂಗಳು ಬಂದರೆ ಸಾಕು ನಿಷೇಧಿತ ಪುಸ್ತಕಗಳ ಮೇಲಿದ್ದ ಬೇಡಿ ತಂತಾನೇ ಕಳಚುತ್ತದೆ.

ಲಕ್ಷಾಂತರ ಓದುಗರು ಈ ಕೃತಿಗಳನ ಬೆನ್ನು ಹತ್ತುತ್ತಾರೆ. ಪುಸ್ತಕದ ಅಂಗಡಿಗಳಂತೂ ನಿಷೇಧಿತ ಪುಸ್ತಕಗಳ ಪ್ರದರ್ಶನ ಏರ್ಪಡಿಸುತ್ತದೆ. ನಿಷೇಧಕ್ಕೊಳಗಾದ ಕೃತಿಗಳ ಬರಹಗಾರರನ್ನು ದೇಶದ ವಿವಿಧೆಡೆಗೆ ಆಹ್ವಾನಿಸಲಾಗುತ್ತದೆ. ನಿಷೇಧಿತ ಕೃತಿಗಳ ಬಗ್ಗೆ ಶಾಲಾ ಕಾಲೇಜುಗಳು ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತವೆ.

ಈಗೀಗಂತೂ ಈ ಕೃತಿಗಳನ್ನು ಆನ್ ಲೈನ್ ನಲ್ಲಿ ಓದಲು ಒದಗಿಸುವ, ಅರ್ಧ ಬೆಲೆಗೆ ಕೊಡುವ ಚಳುವಳಿಯೂ ಆರಂಭವಾಗಿದೆ. ಈ ಚಳುವಳಿಗೆ ಈಗ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಹಾ ಕೈಗೂಡಿಸಿದೆ.

ಅಕ್ಷರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎನ್ನುವ ಅಸಹನೆಯೇ ಪುಸ್ತಕಕ್ಕೆ ಮೂಗುದಾರ ತೊಡಿಸುವವರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ.

ಆ ಕಾರಣಕ್ಕಾಗಿಯೇ ಪುಸ್ತಕ ಓದದಿರುವಂತೆ ಬಲವಂತ ಮಾಡುವ, ಇಂತಹದ್ದೇ ಓದಬೇಕು ಎಂದು ಆಗ್ರಹಿಸುವ, ಪಠ್ಯಗಳಿಂದ ಪಾಠಗಳನ್ನೇ ಕಿತ್ತು ಹಾಕುವ, ಇದು ಮಕ್ಕಳಿಗೆ ಹೇಳಿದ್ದಲ್ಲ ಎಂದು ಮೂಲೆಗೊತ್ತುವ ಕೆಲಸವೂ ಸದ್ದಿಲ್ಲದೆ ಎಲ್ಲೆಡೆಯೂ ನಡೆದಿದೆ.

ಆಗಲೇ ಈ ಚಳವಳಿ ಹೌದಲ್ಲಾ, ನಿಷೇಧಿತ ಪುಸ್ತಕಗಳ ಬಗ್ಗೆ ಮಾತ್ರ ಗಮನ ಕೊಟ್ಟರೆ ಸಾಲದು. ನಿಷೇಧಕ್ಕೆ ಕೈ ಹಾಕದೆ ಪುಸ್ತಕಗಳನ್ನು ಮೂಲೆಗೆ ತಳ್ಳುವುದರ ವಿರುದ್ಧವೂ ದನಿ ಎತ್ತಬೇಕು ಎಂದು ಮನಗಂಡಿತು.

ಈಗ ನಿಷೇಧಿತವಾಗದಿದ್ದರೂ ಕಿರುಕುಳಕ್ಕೆ ಒಳಗಾದ ಕೃತಿಗಳನ್ನೂ ಈ ಹೋರಾಟದ ತೆಕ್ಕೆಗೆ ಎಳೆದುಕೊಳ್ಳಲಾಗಿದೆ.

ಸಲ್ಮಾನ್ ರಷ್ದಿಯ ‘ಸತಾನಿಕ್ ವರ್ಸಸ್’, ಡ್ಯಾನ್ ಬ್ರೌನ್ ನ ‘ದಾ ವಿಂಚಿ ಕೋಡ್’, ತಸ್ಲೀಮಾ ನಸ್ರೀನ್ ಳ ‘ಲಜ್ಜಾ’… ನಿಷೇಧಕ್ಕಾಗಿ ನಡೆಯುವ ಆಗ್ರಹ ಪತ್ರಿಕೆಗಳ ಪುಟದಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವಾಗಲೇ ಸದ್ದಿಲ್ಲದೇ ಕೈಗೆ ಬೇಡಿ ಹಾಕಿಸಿಕೊಂಡ, ನಿಷೇಧಕ್ಕೊಳಗಾಗದಿದ್ದರೂ ಕಿರುಕುಳ ಎದುರಿಸಿದ ಪುಸ್ತಕಗಳ ಸಾಲು ಸಾಲೇ ಇದೆ.

ಹೌದಲ್ಲಾ ! ಇಂತಹ ‘ನಿಷೇಧವಾದರೂ ಯಾಕಾಗಿ?’ ಎಂದು ನಾನು ಹುಡುಕುತ್ತಾ ಹೋದೆ.

ಪ್ರಾಣಿಗಳು ಮನುಷ್ಯರಂತೆ ಮಾತಾಡುತ್ತವೆ ಎನ್ನುವ ಕಾರಣಕ್ಕೆ’ಅಲೈಸ್ ಇನ್ ವಂಡರ್ ಲ್ಯಾಂಡ್’ ನಿಷೇಧಕ್ಕೊಳಗಾಗಿ ಹೋಗಿತ್ತು.

ಜನರ ಮನವನ್ನು ಸೂರೆಗೊಂಡ ‘ದಿ ಕ್ಯಾಂಟರ್ ಬೆರಿ ಟೇಲ್ಸ್’ ಅಶ್ಲೀಲ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿತು.

ಗುಲಾಮಗಿರಿ ವಿರುದ್ಧದ ಆಶಯಕ್ಕಾಗಿಯೇ ‘ಅಂಕಲ್ ಟಾಮ್ಸ್ ಕ್ಯಾಬಿನ್’ ವಿರೋಧ ಎದುರಿಸಿತು.

ನಾನು ಹಾಗೆಲ್ಲಾ ನಿಷೇಧಕ್ಕೋ, ಕಿರುಕುಳಕ್ಕೋ ಒಳಗಾಗಿರುವ ಪುಸ್ತಕಗಳಾದರೂ ಯಾವುದು ಎಂದು ಹುಡುಕುತ್ತಾ ಹೋದೆ. ಗಾಬರಿಯಾಗಿ ಹೋದೆ.

ಹಾಗೆ ಲೆಕ್ಕ ಹಾಕುತ್ತಾ ಹೋದರೆ ನನ್ನ ಪುಸ್ತಕದ ಕಪಾಟಿನಲ್ಲಿರುವುದು ಅರ್ಧಕ್ಕರ್ಧ ಅಂತಹ ಪುಸ್ತಕಗಳೇ…

ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್, ಕಿಂಗ್ ಲಿಯರ್, ಹ್ಯಾಮ್ಲೆಟ್, ಮರ್ಚೆಂಟ್ ಆಫ್ ವೆನಿಸ್, ಹೆಮ್ಮಿಂಗ್ವೇಯ ಫೇರ್ ವೆಲ್ ಟು ಆರ್ಮ್ಸ್, ದಿ ಸನ್ ಆಲ್ಸೋ ರೈಸಸ್, ಕೊನೆಗೆ ನನ್ನ ಪ್ರೀತಿ ಪಾತ್ರವಾದ ಅರೇಬಿಯನ್ ನೈಟ್ಸ್ ಕೂಡಾ ಅದರೊಳಗೆ ಸೇರಿ ಹೋಗಿತ್ತು.

ಈ ನಿಷೇಧ ಲೋಕದ ಬಗ್ಗೆ ಯೋಚಿಸುತ್ತಾ ನಾನು ಖಂಡಿತಾ ಇಂತಹವರ ಮಧ್ಯದಲ್ಲಿಲ್ಲ. ‘ಅನುದೇವಾ ಹೊರಗಣವನು…’ ಎಂದುಕೊಂಡೆ.

ಕೇಂದ್ರದಿಂದ ಕೊಬ್ಬರಿಗೆ ₹10.300 ಬೆಂಬಲ ಬೆಲೆ: ಶಾಸಕ‌ ಜಯರಾಂನಿಂದ ಅಭಿನಂದನೆನ

ತುರುವೇಕೆರೆ: ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ಕೊಬ್ಬರಿಗೆ ₹10300 ರೂಪಾಯಿಗಳ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿರುವುದು ಸಂತೋಷದಾಯಕವಾಗಿದ್ದು; ಇದಕ್ಕೆ ತಾಲ್ಲೂಕಿನ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಮಸಾಲ ಜಯರಾಂ ತಿಳಿಸಿದರು.

ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಟಿ.ಕ್ರಾಸ್ ಬಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ತಾಲ್ಲೂಕಿನ ಜನತೆ ತೆಂಗು ಬೆಳೆಯನ್ನೇ ನಂಬಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಲಾಕ್ಡೌನ್ ಹಾಗು ಕೋವಿಡ್-19ರಿಂದಾಗಿ ಕೊಬ್ಬರಿಯ ಸಹಜ ಮಾರುಕಟ್ಟೆಯ ಬೆಲೆ ಸಂಪೂರ್ಣ ಕುಸಿದು ಕೊಬ್ಬರಿಗೆ ಬೇಡಿಕೆಯಿಲ್ಲದಾಗಿ ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಸಮಸ್ಯೆಯನ್ನು ಆಲಿಸಿದ ಜಿಲ್ಲೆಯ ಬಿಜೆಪಿ ಪಕ್ಷದ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಟ್ಟುಗೂಡಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದಿಂದ ಬೆಂಬಲ ಕೊಡಿಸಬೇಕೆಂದು ವಿನಂತಿಸಿಕೊಂಡಿದ್ದೆವು. ಇದರ ಫಲಶ್ರುತಿಯಾಗಿ ಪ್ರಧಾನಿಯವರು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನವಿಗೆ ಸ್ಪಂದಿಸಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ‌ ಎಂದರು.

ಕೇಂದ್ರದಂತೆಯೇ ರಾಜ್ಯ ಸರ್ಕಾರವೂ ಕೂಡ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಸಧನದಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ಘೋಷಣೆ ಮಾಡಲಿದ್ದಾರೆ. ತುರುವೇಕೆರೆ ಸೇರಿದಂತೆ ರಾಜ್ಯದಾದ್ಯಂತ ಕೊಬ್ಬರಿಗೆ ನಫೆಡ್ ಕೇಂದ್ರ ತೆರೆದಿದ್ದು ನಾಳೆಯಿಂದಲೇ ರೈತರು ಬೆಂಬಲ ಬೆಲೆ ಪಡೆಯಲು ನಫೆಡ್ ಕೇಂದ್ರದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಸಲಹೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವಿ.ಬಿ.ಸುರೇಶ್, ಸೋಮಣ್ಣ, ಮಂಜಣ್ಣ, ಅಪ್ಪಿ, ಸುರೇಶ್, ಜಯಣ್ಣ, ಪಾಂಡು ಮತ್ತು ಕಾರ್ಯಕರ್ತರುಗಳು ಇದ್ದರು.

ಎತ್ತಿನಹೊಳೆ ಕೆಲಸಗಾರನಿಗೆ ಕೊರೊನಾ

Publicstory.in


Tumkuru: ಎತ್ತಿನಹೊಳೆ ಕಾಮಗಾರಿ ಕೆಲಸಕ್ಕಾಗಿ ದೆಹಲಿಯಿಂದ ಬಂದಿದ್ದ ಕಾರ್ಮಿಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದೆ.

ದೆಹಲಿಯಿಂದ ಬಂದಿದ್ದ ಈತನನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.

ಚೇಳೂರಿನಲ್ಲಿ ನಡೆಯುತ್ತಿರುವ ಕೆಲಸಕ್ಕಾಗಿ ಈತ ಬಂದಿದ್ದ. ಜೆಸಿಬಿ ಆಪರೇಟರ್ ಎಂದು ತಿಳಿದುಬಂದಿದೆ.

ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ ,46 ಕ್ಕೇರಿದೆ.


ನಾಗೇಶ್ ಹೆಗಡೆ ಸಾಧನೆಯಲ್ಲಾ ‘ಮಣ್ಣು’

ಜಿ ಎನ್ ಮೋಹನ್


‘ಪಾ’ ಸಿನೆಮಾ ನೋಡಲು ಅಮಿತಾಬ್ ಬಚ್ಚನ್ ಫೋರಂ ಮಾಲ್ ಗೆ ಬಂದಿಳಿದದ್ದೇ ತಡ ‘ಬಿಗ್ ಬಿ’ಯ ಆಟೋಗ್ರಾಫ್ ಗಾಗಿ ಮುಗಿಬಿದ್ದದ್ದು ಅವರ ಫ್ಯಾನ್ ಗಳು ಮಾತ್ರವಲ್ಲ. ಪತ್ರಕರ್ತರ ದೊಡ್ಡ ದಂಡೂ ಇತ್ತು.

ಅಮಿತಾಬ್ ಸುತ್ತ ಮುತ್ತಲಿನ ಸೀಟು ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಪತ್ರಕರ್ತರಿಗೆ ಕ್ಯಾಮೆರಾ ಫ್ರೇಮ್ ನಲ್ಲಿ ಅಮಿತಾಬರನ್ನೂ ಜೋಡಿಸಿಕೊಂಡು ಫೋಟೋ ಹಿಡಿಸಿಕೊಳ್ಳುವ ಹಂಬಲ.

ಫೋರಂ ಮಾಲ್ ನಲ್ಲಿ ಇವೆಲ್ಲಾ ನಡೆಯುತ್ತಿದ್ದ ಕೆಲ ದಿನಗಳ ಮುಂಚೆಯಷ್ಟೇ ಇನ್ನೊಬ್ಬ ಪತ್ರಕರ್ತರು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದರು.

ಅವರ ಬಳಿ ವರ್ಗಾವಣೆ ಶಿಫಾರಸ್ಸು ಕೋರಿದ ಕಾಗದ ಇರಲಿಲ್ಲ. ಮುಖ್ಯಮಂತ್ರಿ ಖೋಟಾದಡಿ ಸೈಟು ಕೇಳುತ್ತಿರಲಿಲ್ಲ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಿಡಿದು ನಿಂತಿರಲಿಲ್ಲ ಅಥವಾ ಪತ್ರಿಕಾ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಿ ಎಂದು ಒತ್ತಡವನ್ನೂ ಹೇರುತ್ತಿರಲಿಲ್ಲ.

ಬದಲಿಗೆ ಒಂದು ದಂಡು ಕಟ್ಟಿಕೊಂಡು ಯಾಕೆ ಬಿ ಟಿ ಬದನೆ ರಾಜ್ಯದೊಳಗೆ ಕಾಲಿಡಕೂಡದು ಎಂದು ವಿವರಿಸುತ್ತಿದ್ದರು. ಒಂದು ಬದನೆಯ ಕುಲ ತಿದ್ದಲು ಹೋಗಿ ಜಗತ್ತಿನ ಹೊಟ್ಟೆಯನ್ನು ಇನ್ನಷ್ಟು ಹಸಿವೆಗೆ ಕೆಡವುತ್ತಿದ್ದೇವೆ ಎಂದು ವಿವರಿಸುತ್ತಿದ್ದರು.

ಹೆಸರು ಹೇಳಬೇಕಾದ ಅಗತ್ಯವೇ ಇಲ್ಲ- ಅವರು ನಾಗೇಶ ಹೆಗಡೆ.

ಇವತ್ತು ಒಳ್ಳೆಯ ಜರ್ನಲಿಸಂ ಎನ್ನುವುದಕ್ಕೆ ಕೊಡಲು ಉದಾಹರಣೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಒಳ್ಳೆಯ ಜರ್ನಲಿಸ್ಟ್ ಎನ್ನುವುದಕ್ಕಂತೂ ಉದಾಹರಣೆಗಳಿವೆ. ನಾಗೇಶ್ ಹೆಗಡೆ ಅಂತಹವರಲ್ಲಿ ಒಬ್ಬರು.

ಪತ್ರಿಕೋದ್ಯಮ ಮತ್ತು ಸರ್ಕಾರ ಎರಡೂ ಎಣ್ಣೆ ಸೀಗೆಕಾಯಿ ಹಾಗಿದ್ದರೆ ಮಾತ್ರ ಒಂದು ಪ್ರಜಾಪ್ರಭುತ್ವ ಜೀವಂತವಾಗಿರಲು ಸಾಧ್ಯ. ತನ್ನ ಒಂದೊಂದು ಹೆಜ್ಜೆಯ ಹಿಂದೆಯೂ ಪತ್ರಿಕೋದ್ಯಮದ ‘ಡಿಟಿಕ್ಟಿವ್ ಐ’ ಇರುತ್ತದೆ ಎಂಬ ಭಯ ಇದ್ದಾಗ ಮಾತ್ರ ಸರ್ಕಾರ ಜನರಿಗೆ ಬದ್ಧವಾಗಿರಲು ಸಾಧ್ಯ.

ವಿರೋಧ ಪಕ್ಷಗಳನ್ನಾದರೂ ಬುಟ್ಟಿಗೆ ಹಾಕಿಕೊಳ್ಳಬಹುದು ಆದರೆ ಪತ್ರಿಕೋದ್ಯಮವನ್ನಲ್ಲ ಎನ್ನುವ ಕಾಲ ಒಂದಿತ್ತು. ಯಾವುದೇ ಸರ್ಕಾರಕ್ಕೆ ಪತ್ರಿಕೆಯೇ ಖಾಯಂ ವಿರೋಧ ಪಕ್ಷ. ಹುಳುಕನ್ನು ಹುಡುಕುವ, ಜನರ ಮುಂದಿಡುವ, ಸರ್ಕಾರ ಬೆಚ್ಚಿ ಬೀಳುವಂತೆ ಮಾಡುವ, ಆ ಮೂಲಕ ಮುಂದಿನ ಹೆಜ್ಜೆಯನ್ನಾದರೂ ಹತ್ತು ಸಲ ಯೋಚಿಸಿ ಇಡುವಂತೆ ಮಾಡುವ ಶಕ್ತಿ ಪತ್ರಿಕೋದ್ಯಮಕ್ಕಿದೆ.

‘ಮಿಲೇ ಸುರ್ ಮೇರಾ ತುಮ್ಹಾರ’ ಎನ್ನುವುದನ್ನು ರಾಜಕಾರಣಿಗಳೂ, ಪತ್ರಕರ್ತರೂ ತಮಗೆ ಬೇಕಾದಂತೆ ಅರ್ಥ ಮಾಡಿಕೊಂಡಿರುವ ಈ ದಿನಗಳಲ್ಲಿ ಭಿನ್ನವಾಗಿ ನಿಂತವರು ನಾಗೇಶ್ ಹೆಗಡೆ.

ಪತ್ರಿಕೋದ್ಯಮದ ಸಾಕ್ಷಿ ಪ್ರಜ್ಞೆಯೂ ಕಳೆದುಹೋಗಿಬಿಟ್ಟಿದೆ ಎನ್ನುವ ನಿರಾಸೆಯ ನಡುವೆ ನಾಗೇಶ್ ಹೆಗಡೆ ಅಂತಹವರೂ ಇದ್ದಾರೆ ಎನ್ನುವುದು ಕತ್ತಲಲ್ಲ ಬೆಳಕು ಮಿಂಚಿದಂತೆ.

ಪತ್ರಿಕೋದ್ಯಮ ಕೋಣೆಯಿಂದ ಎದ್ದು ಬಂದ ವಿದ್ಯಾರ್ಥಿ, ಅಡಿಕೆ ಫಸಲಿನತ್ತ ಕಣ್ಣು ನೆಟ್ಟ ರೈತ, ಆಕಾಶವಾಣಿಯ ಟೀಪುಗಳ ನಡುವೆ ಒಂದು ಒಳ್ಳೆಯ ಸುದ್ದಿಗಾಗಿ ತಡಕಾಡುವ ಜರ್ನಲಿಸ್ಟ್, ಇದ್ದ ಡಿಗ್ರಿಗಳನ್ನೂ ಬದಿಗಿಟ್ಟು ಕೆರೆ ಉಳಿಸಲೋ, ದೇಸಿ ಬೀಜಗಳನ್ನು ರಕ್ಷಿಸಲೋ, ಭತ್ತ ಉತ್ಸವ ನಡೆಸಲೋ ನಡೆದು ಬಂದವರು. ಬಿಸಿಲು ನಾಡಿನಲ್ಲಿದ್ದು ನೆಲದ ಬಿರುಕು ಕಂಡವರು, ಮಲೆನಾಡಿನಲ್ಲಿದ್ದೂ ನೊಂದವರು- ಹೀಗೆ ನಾಗೇಶ್ ಹೆಗಡೆ ಎಲ್ಲರೊಳಗೊಂದಾದವರು.

ಹೀಗೆ ಹೇಳುವಾಗ ನನಗೆ ಕುವೆಂಪು ಅವರ ‘ಕಿಂದರಿ ಜೋಗಿ’ ನೆನಪಿಗೆ ಬರುತ್ತದೆ. ನಾಗೇಶ್ ಹೆಗಡೆ ಎಂಬ ಗುಬ್ಬಿ ದೇಹದ ಜೀವದ ಹಿಂದೆ ಅದೆಷ್ಟು ದೊಡ್ಡ ದಂಡು! ಪುಟ್ಟಿಲಿ, ಮೂಗಿಲಿ, ಅಮ್ಮಿಲಿ, ಅಪ್ಪಿಲಿ, ಸೊಂಡಿಲಿ!

ಪತ್ರಿಕೋದ್ಯಮದ ಒಳ್ಳೆಯದು ಎನ್ನುವ ಮಾತು ಬಂದಾಗಲೆಲ್ಲಾ ನಾವು ದೂರದಲ್ಲಿರುವ ಸಾಯಿನಾಥರತ್ತ ಬೊಟ್ಟು ಮಾಡಿಬಿಡುತ್ತೇವೆ. ವಿಜ್ಞಾನ, ಪರಿಸರ. ಅಭಿವೃದ್ಧಿ, ಹೋರಾಟದ ವಿಷಯ ಬಂದಾಗ ನಾಗೇಶ್ ಹೆಗಡೆ ಸಾಯಿನಾಥರಷ್ಟೇ ಗಟ್ಟಿಯಾಗಿ ಕೇಳಿ ಬರುವ ಹೆಸರು.

ನಾಗೇಶ್ ಹೆಗಡೆ ಒಂದು ಎರೆ ಹುಳು ಇದ್ದಂತೆ. ನೆಲದೊಳಗಿದ್ದೇ, ತನ್ನ ಪಾಡಿಗೆ ತಾನಿದ್ದೇ, ಸದ್ದಿಲ್ಲದೇ ನೆಲವನ್ನು ಫಲವತ್ತಾಗಿಸುತ್ತಾ ಹೋಗುವ ಗುಣ ಖಂಡಿತಾ ಅವರಿಗಿದೆ.

ನಾನು ಟಿ ಎಸ್ ಆರ್, ವೈಎನ್ ಕೆ, ಎಂ ಬಿ ಸಿಂಗ್, ಜಿ ಎಸ್ ಸದಾಶಿವ ಗರಡಿಯಲ್ಲಿ ಪಳಗಿದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಒಂದಿತ್ತು. ಈಗಿನ ಪತ್ರಿಕೋದ್ಯಮಕ್ಕೆ ಗುರುವೂ ಇಲ್ಲ, ಗುರಿಯೂ ಇಲ್ಲ ಎನ್ನುವಂತಾಗಿದೆ.

ಅಂತಹ ಸಮಯದಲ್ಲಿ ಸದ್ದಿಲ್ಲದೇ ಒಂದು ವಿಶ್ವವಿದ್ಯಾಲಯವಾಗಿ ಹರಡಿ ನಿಂತವರು ನಾಗೇಶ್ ಹೆಗಡೆ.

ಶಿವರಾಮ ಕಾರಂತರು ತಮ್ಮನ್ನು ಒಬ್ಬ ಪೋಸ್ಟ್ ಮನ್ ಅಂತ ಬಣ್ಣಿಸಿಕೊಂಡಿದ್ದರು. ನಾಗೇಶ್ ಹೆಗಡೆ ಅವರದ್ದು ‘ಪ್ರಜಾವಾಣಿ’ಯ ಮೂರನೇಯ ಸಂಪಾದಕೀಯ ಬರೆದ ತುಂಟ ಮನಸ್ಸು. ಹಾಗಾಗಿಯೇ ಅವರು ‘ನಾನು ಒಬ್ಬ ಅಧಿಕಪ್ರಸಂಗಿ ಪೋಸ್ಟ್ ಮನ್’ ಅಂತ ಬಣ್ಣಿಸಿಕೊಂಡರು.

ಓದುಗರಿಗೆ ಬೇಕಾಗಿದ್ದನ್ನು ದಾಟಿಸುವಾಗ ಒಂದಷ್ಟು ಅಧಿಕ ಪ್ರಸಂಗವನ್ನೂ ಸೇರಿಸುತ್ತೇನೆ ಎಂದಿದ್ದರು.

ಚಿಲ್ಕಾದ ಪ್ರಯೋಗ ಶಾಲೆಯಲ್ಲಿ ಸಂಶೋಧನೆ ಮಾಡುತ್ತಿದ್ದ ನಾಗೇಶ್ ಹೆಗಡೆ ಸೀದಾ ಎದ್ದು ಪತ್ರಿಕೋದ್ಯಮದ ಅಂಗಳಕ್ಕೆ ನಡೆದುಕೊಂಡು ಬಂದುಬಿಟ್ಟರು. ಐಐಟಿ, ಜೆಎನ್ ಯು ಎಂಬ ಹೆಮ್ಮೆಯ ಪದಕಗಳನ್ನೇ ಹೊಂದಿದ್ದ ಅವರು ವಿಜ್ಞಾನ ಸಂಶೋಧನೆಯಲ್ಲೇ ಮುಂದುವರಿದಿದ್ದರೆ ಸಾಕಷ್ಟು ಎತ್ತರಕ್ಕೇರುತ್ತಿದ್ದರೇನೋ?

ಆದರೆ ಅಚಾನಕ್ಕಾಗಿ ಪ್ರಜಾವಾಣಿ ಬಳಗಕ್ಕೆ ವಿಜ್ಞಾನ ಮತ್ತು ಅಭಿವೃದ್ಧಿ ಬರಹಗಾರರಾಗಿ ಸೇರಿಕೊಂಡರು.

ವಿಜ್ಞಾನ ಕ್ಷೇತ್ರಕ್ಕೆ ನಷ್ಟವಾಯಿತೇನೋ ಗೊತ್ತಿಲ್ಲ. ಆದರೆ ಪತ್ರಿಕೋದ್ಯಮಕ್ಕಂತೂ ಲಾಭವಾಯಿತು.

ನಾಗೇಶ್ ಹೆಗಡೆ ಪ್ರಯೋಗಾಲಯದಿಂದ ಎದ್ದು ಬರುವಾಗ ತಾವೊಬ್ಬರೇ ಅಲ್ಲಿಂದ ಬಿಡಿಸಿಕೊಂಡು ಬರಲಿಲ್ಲ, ನಾಲ್ಕು ಗೋಡೆಯೊಳಗೆ ಅಡಗಿ ಹೋಗಿದ್ದ ವಿಜ್ಞಾನವನ್ನೂ ಬಿಡಿಸಿಕೊಂಡು ಬಂದರು.

ಭೂ ವಿಜ್ಞಾನ, ಪರಿಸರ ವಿಜ್ಞಾನ ಓದಿದ ನಾಗೇಶ್ ಹೆಗಡೆ ‘ಇರುವುದೊಂದೇ ಭೂಮಿ’ ಪುಸ್ತಕದೊಂದಿಗೆ ಓದುಗರ ಎದುರು ನಿಂತರು. ‘ಈ ಭೂಮಿ ನಮ್ಮ ತಾತ ಮುತ್ತಾತರಿಂದ ಬಂದ ಬಳುವಳಿಯಲ್ಲ. ಮಕ್ಕಳು- ಮೊಮ್ಮಕ್ಕಳಿಂದ ಎರವಲಾಗಿ ಪಡೆದಿದ್ದು’ ಎನ್ನುವ ಬುಡಕಟ್ಟು ಜನಾಂಗದ ಮಾತನ್ನು ಕತ್ತಿಯಂತೆ ಜಳಪಿಸಿದರು.

‘ಕಾಡಿನ ನಡುವೆ ಉದುರಿ ಬೀಳುವ ಎಲೆಯ ಸದ್ದನ್ನು ಯಾರಾದರೂ ಕೇಳಿದ್ದೀರಾ?’ ಎನ್ನುವ ಓಶೋ ಮಾತಿದೆ. ನಾಗೇಶ್ ಹೆಗಡೆ ಕೇಳಿಸಿಕೊಳ್ಳಬಲ್ಲರು.

ವಿಜ್ಞಾನವನ್ನು ಸರಳವಾಗಿ ಅರ್ಥ ಮಾಡಿಸಬಲ್ಲರು. ವಿಜ್ಞಾನದ ಪಾತಕಗಳ ಹಿಂದೆ ನಮ್ಮ ನಿಮ್ಮೆಲ್ಲರ ಕೈಯ್ಯೂ ಇದೆ ಎಂದು ಮೆಲುದನಿಯಲ್ಲಿ ಎಚ್ಚರಿಸಬಲ್ಲರು.

ಪತ್ರಿಕೋದ್ಯಮಕ್ಕೆ ಆಕ್ಟಿವಿಸ್ಟ್ ಗುಣ ಇರಬಾರದು ಎಂದು ಮಡಿ ಮೈಲಿಗೆ ಮಾಡುವವರ ನಡುವೆ ಒಬ್ಬ ಸಾಯಿನಾಥ್, ಒಬ್ಬ ನಾಗೇಶ್ ಹೆಗಡೆ ಪತ್ರಿಕೋದ್ಯಮದ ತಿಳುವಳಿಕೆಯನ್ನೇ ತಿದ್ದಿದರು.

ಕೈಗಾ ಅಣು ಸ್ಥಾವರ ಸ್ಥಾಪನೆಗೆ ಸರ್ಕಾರ ಅನುವಾದಾಗ, ಕಾಳಿ ನದಿಗೆ ಅಡ್ಡವಾಗಿ ಅಣೆಕಟ್ಟು ತಲೆ ಎತ್ತುತ್ತದೆ ಎನ್ನುವಾಗ, ದಾಬಸ್ ಪೇಟೆಯಲ್ಲಿ ರಾಸಾಯನಿಕ ತಿಪ್ಪೆ ಗುಂಡಿ ನಿರ್ಮಾಣವಾಗುವಾಗ, ಚಾಮಲಾಪುರ, ನಂದಿಕೂರು ಅಡಿಯಿಡುವಾಗ ನಾಗೇಶ್ ಹೆಗಡೆ ಮಾಧ್ಯಮಗಳನ್ನು ಅದರ ವಿರುದ್ಧ ಅಣಿ ನೆರೆಸಿದರು.

ನಾಗೇಶ್ ಹೆಗಡೆ ಕಬ್ಬಿಣ ಅದಿರಿನ ರಫ್ತಿನ ಬಗ್ಗೆ ಆ ಕಾಲಕ್ಕೆ ಬರೆದ ಲೇಖನ ಸಂಸತ್ತಿನಲ್ಲೂ ಕಾವುಂಟು ಮಾಡಿತ್ತು.

ನಾಗೇಶ್ ಹೆಗಡೆ ಜಗತ್ತನ್ನು ನೋಡುವ ಕಣ್ಣೇ ಬೇರೆ. ನ್ಯೂಯಾರ್ಕ್ ನ ಗಗನಚುಂಬಿಗಳು, ಬ್ರಿಟನ್ನಿನ ಟ್ಯೂಬ್ ಟ್ರೇನ್ ಗಳು ಕಾಣುವವರ ಮಧ್ಯೆ ನಾಗೇಶ್ ಹೆಗಡೆ ಭಿನ್ನ ತಳಿ.

ಬೊರ್ಡೋ ಔಷಧಿಗೂ ನಾಪತ್ತೆಯಾಗುತ್ತಿರುವ ಬ್ರಿಟನ್ನಿನ ಚಿಟ್ಟೆಗೂ, ಕೊಳ್ಳೇಗಾಲದ ಗ್ರಾನೈಟಿಗೂ ಇಂಗ್ಲೆಂಡಿನ ಸಮಾಧಿಗೂ ನಂಟು ಕಾಣಬಲ್ಲರು.

ಪತ್ರಿಕೆಗೆ ಫೋಟೋ ಹಿಡಿದು ಬಂದ ಒಬ್ಬ ಪೇಪರ್ ವೆಂಡರ್ ಶಿವೂ, ನಾಗೇಶ್ ಹೆಗಡೆ ಕಾರಣದಿಂದಾಗಿ ಈ ದಿನ ಒಬ್ಬ ಬೆಸ್ಟ್ ಬರಹಗಾರ. ಪೂರ್ಣಪ್ರಜ್ಞ ಬೇಳೂರು ಕ್ಲಿಕ್ಕಿಸುವ ಫೋಟೋಗಳ ಹಿಂದೆ ನಾಗೇಶ್ ಹೆಗಡೆ ಅವರ ಕಿವಿ ಮಾತಿದೆ.

ಮಲ್ಲಿಕಾರ್ಜುನ ಹೊಸಪಾಳ್ಯ ರಕ್ಷಿಸಲು ಹೊರಟಿರುವ ಕೆರೆಗಳ ಹಿಂದೆ, ಕೃಷ್ಣಪ್ರಸಾದ್ ನಡೆಸುತ್ತಿರುವ ಭತ್ತ ಉತ್ಸವದ ಹಿಂದೆ ನಾಗೇಶ್ ಹೆಗಡೆ ಅವರ ಶ್ರಮವೂ ಇದೆ.

ಅಲ್ಲೊಬ್ಬ ಸುಬ್ರಮಣಿ, ಇಲ್ಲೊಬ್ಬ ರಾಘವೇಂದ್ರ ಗೌಡ, ದೂರದಲ್ಲಿರುವ ನಿರಂಜನ ವಾನಳ್ಳಿ, ಕ್ಯಾಮ್ ನ ಅನಿತಾ, ‘ಕರಿಸಿರಿಯಾನ’ದ ಕೆ ಎನ್ ಗಣೇಶಯ್ಯ, ಎಲ್ಲರ ಹಿಂದೆ ಒಬ್ಬ ನಾಗೇಶ್ ಹೆಗಡೆ ಇದ್ದಾರೆ.

‘ನಾಗೇಶ್ ಹೆಗಡೆ ಸಾಧನೆ ಬರೀ ಮಣ್ಣು’ ಅಂತ ಚಟಾಕಿ ಹಾರಿಸುವ ಮನಸ್ಸಾಗುತ್ತಿದೆ.

ಏಕೆಂದರೆ ಅವರು ಸಂಶೋಧನೆ ಮಾಡಿದ್ದು ಮಣ್ಣಿನ ಬಗ್ಗೆ, ಓದಿದ್ದು ಮಣ್ಣಿನ ಬಗ್ಗೆ, ‘ಮೈತ್ರಿ ಫಾರಂ’ ನ ಮೂಲಕ ಮಣ್ಣಿನ ಜೊತೆಗೆ ನಂಟು ಬೆಳೆಸಿದ್ದಾರೆ.

ನಾಗೇಶ್ ಹೆಗಡೆ ಮನೆಯಲ್ಲಿ ಕೋಳಿಯೊಂದಿದೆ. ಅದಕ್ಕೆ ಮೊಟ್ಟೆ ಇಡಲು ಸೋಫಾನೇ ಆಗಬೇಕು. ‘ಟು ಲೆಟ್’ ಬೋರ್ಡ್ ಹೊತ್ತ ಆ ಕೋಳಿ ಬುಟ್ಟಿಯಲ್ಲಿ ನಾಗೇಶ್ ಹೆಗಡೆ ಕಾವು ಕೊಡಲು ಕೂತರೆ ಆ ರೆಕ್ಕೆಯಡಿ ಸೇರಲು ಬಯಸುವ ಪಿಳ್ಳೆಗಳು ನಾವು.

ಜಿಲ್ಲಾ ಕೇಂದ್ರದಲ್ಲೆ ಪಿಯುಸಿ ಪರೀಕ್ಷೆ ಅವ್ಯವಸ್ಥೆ

ತುಮಕೂರು:

ಕೋವಿಡ್ 19 ಸಂದಿಗ್ದ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲಾ ಕೇಂದ್ರದಲ್ಲೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅವ್ಯವಸ್ಥೆಯ ಅಗರದಲ್ಲೆ ವಿದ್ಯಾರ್ಥಿಗಳು ಬರೆಯುವಂತಾಯಿತು.

ತುಮಕೂರು ಜೂನಿಯರ್ ಕಾಲೇಜಿನ ಬಳಿ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೂ ಮುನ್ನ ಕಂಡ ದೃಶ್ಯ

ನಗರದ ಜೂನಿಯರ್ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಕೊರೊನಾ ಹರಡದಂತೆ ಯಾವುದೇ ಮುಂಜಾಗೃತೆ ಕ್ರಮಗಳನ್ನು ಕೈಗೊಂಡಿರಲಿಲ್ಲ.

ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿಗಳು ನೂಕು ನೂಗಲಿನಲ್ಲೆ ತಮ್ಮ ರಿಜಿಸ್ಟರ್ ನಂಬರ್ ಹುಡುಕಲು ಪರದಾಡಿದರು.

ಯಾವುದೇ ರೀತಿಯ ಸಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮುಂಜಾಗ್ರತೆ ವಹಿಸಿರಲಿಲ್ಲ. ನೂರಾರು ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್, ಕೊಠಡಿ ಸಂಖ್ಯೆಯನ್ನು ಕೇವಲ‌ ಎರಡು ಕಡೆಗಳಲ್ಲಿ ಹಾಕಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ನೂಕು ನುಗ್ಗಲು ಉಂಟಾಯಿತು.

ಇದರ ಜೊತೆಯಲ್ಲಿ ಕೊಠಡಿ ಒಳಗಡೆ ಹೋಗುವ ನೂರಾರು ವಿದ್ಯಾರ್ಥಿಗಳಿಗೆ ಉಷ್ಣಾಂಶ ಪರೀಕ್ಷೆಯನ್ನು ಕೇವಲ ಒಂದು ಕಡೆಯಲ್ಲಿ ಮಾತ್ರ ವ್ಯವಸ್ಥೆ ಮಾಡಿದ್ದು ಕೂಡ ಸಮಾಜಿಕ ಅಂತರ ಕಾಯ್ದುಕೊಳ್ಳಲು ಅವ್ಯವಸ್ಥೆಯಾಗಿತ್ತು. ಸ್ಯಾನಿಟೈಸರ್ ಕೂಡ ಸರಿಯಾಗಿ ಮಾಡದಿರುವುದು ಹಲವು ಪೋಷಕರಿಗೆ ಅಸಮದಾನ ಉಂಟು ಮಾಡಿತು.

ಸರ್ಕಾರ ಕೊರೊನಾ ಹಿನ್ನೆಯಲ್ಲಿ‌ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹಲವು ಕಾರ್ಯಕ್ರಮ ರೂಪಿಸಿದ್ದರೂ ತುಮಕೂರು ಜೂನಿಯರ್‌ ಕಾಲೇಜಿಗೆ ಅದ್ಯಾವುದರ ಪರಿವಿಲ್ಲದೆ ಅವ್ಯವಸ್ಥೆಯಲ್ಲಿಯೇ ಪರೀಕ್ಷೆ ಪ್ರಾರಂಭಿಸಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ‌ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಗುರುವಾರ ನಡೆಸಲಾಯಿತು.

ಚೀನಾ ಕ್ಕೆ ಮೋದಿ ಎಚ್ಚರಿಕೆ

ನವ ದೆಹಲಿ :ದೇಶ ಶಾಂತಿ ಬಯಸುತ್ತದೆ. ಭಾರತದ ತಂಟೆಗೆ ಬರಬೇಡಿ ಎಂದು ಪ್ರಧಾನಿ ಮೋದಿ ಚೀನಾಕ್ಕೆ ತಮ್ಮ ಶೈಲಿಯಲ್ಲಿ ಎಚ್ಚರಿಕೆ ನೀಸಿದರು.

ಮುಖ್ಯಮಂತ್ರಿಗಳ ಸಭೆಗೂ ಮುಂಚೆ  ಪ್ರಧಾನಿ ನರೇಂದ್ರ ಮೋದಿ  ಮಾತನಾಡಿ, ದೇಶದ  ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ದೇಶ  ಶಾಂತಿ ಬಯಸುತ್ತದೆ. ಸುಖಾ ಸುಮ್ಮನೆ ನಮ್ಮನ್ನು  ಕೆಣಕ ಬೇಡಿ ಕೆಣಕಿದರೆ ಸುಮ್ಮನಿರುವುದಿಲ್ಲ  ಎಂದರು.

ವಿಡಿಯೊ ಕೃಪೆ ಡಿಡಿ ನ್ಯೂಸ್

ಪ್ರಧಾನಿ  ಮೋದಿ ಹುತಾತ್ಮ ಯೋದರಿಗೆ  ಸಂತಾಪವನ್ನು ಸೂಚಿಸಿದರು.  ಇಂದಿನ ಸಭೆಯಲ್ಲಿ ಪಾಲ್ಗೊಂಡ ದೇಶ ದ ಎಲ್ಲಾ ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು, ನಂತರ ಕೋವಿಡ್‌ 19 ಮುಖ್ಯ ಮಂತ್ರಿಗಳ ಸಭೆ ಆರಂಭವಾಯಿತು.

 

 

ಗಡಿ ಸಂಘರ್ಷ: ಜೂನ್ 19ಕ್ಕೆ ಸರ್ವ ಪಕ್ಷ ಸಭೆ

ದೆಹಲಿ: ಚೀನಾ ಗಡಿಯಲ್ಲಿ ಸಂದಿಘ್ಧ ಪರಿಸ್ಥಿತಿ ಮುಂದುವರೆಯುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 19 ಕ್ಕೆ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಈ ಬಗ್ಗೆ PMO ಕಛೇರಿ ಟ್ವಿಟ್‌  ಮೂಲಕ ತಿಳಿಸಿದೆ

ಭಾರತ- ಚೀನಾ ಗಡಿ ಸಂಘರ್ಷ ದ ಹಿನ್ನಲೆ ಯಲ್ಲಿ   ಜೂನ್‌ 19 ರಂದು ಸಂಜೆ 5  ಕ್ಕೆ   ವಿಡಿಯೋ ಕಾನ್ಫರೆನ್ಸ ಮೂಲಕ ಸಭೆ ನೆಡೆಯಲಿದೆ ಎಂದು ಮೂಲಗಳು ತಿಳಿಸಿವೆ.

SSLC  ಪರೀಕ್ಷೆ ನೆಡೆಸಲು ಸುಪ್ರೀಂ ಕೋರ್ಟ್  ಗ್ರೀನ್ ಸಿಗ್ನಲ್

ದೆಹಲಿ : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ಆಕ್ಷೇಪಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು.

ಜೂನ್‌ 25 ರಿಂದ ಆರಂಭ ವಾಗಲಿರುವ  ಪರೀಕ್ಷಗೆ ತಡೆ ನೀಡಬೇಕೆಂದು ಬೆಳಗಾವಿ ಮೂಲದ ರಾಜಶ್ರೀ ಎನ್ನುವರು ಸುಪ್ರೀಂ ಕೋರ್ಟ್   ಮೊರೆ  ಹೋಗಿದ್ದರು.

   ಹೈಕೋರ್ಟ್ ತೀರ್ಪನ್ನು  ಸುಪ್ರೀಂ ಕೋರ್ಟ್  ಎತ್ತಿಹಿಡಿದಿದೆ. SSLC  ಪರೀಕ್ಷೆ ನೆಡೆಸಲು ರಾಜ್ಯಕ್ಕೆ  ಸೂಚಿಸಿ, ರಾಜಶ್ರೀ ಅವರ  ಅರ್ಜಿಯನ್ನು ವಜಾ ಗೊಳಿಸಿದೆ.

ಮಾಜಿ‌ ಶಾಸಕರಿಗೆ ಬೆಳಗುಂಬ ವೆಂಕಟೇಶ್ ಬಹಿರಂಗ ಪತ್ರ

ತುಮಕೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಬಳಿಕ ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶಗೌಡ ಅವರ ಬಹಿರಂಗ ಪತ್ರಗಳ ಭರಾಟೆ ಜೋರಾಗಿದೆ. ಪತ್ರಗಳ ಮುಖೇನವೇ ಒಬ್ಬರಿಗೊಬ್ಬರು ಮಾತುಗಳಿಂದ ತಿವಿಯುತ್ತಿದ್ದಾರೆ, ಛೇಡಿಸುತ್ತಿದ್ದಾರೆ. ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ, ಜೆಡಿಎಸ್ ಪರಿಶಿಷ್ಟ ವಿಭಾಗದ ಬೆಳಗುಂಬ ವೆಂಕಟೇಶ್ ಅವರು ಮಾಜಿ ಶಾಸಕರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರ ಯಥಾವತ್ ಪ್ರಕಟಿಸಲಾಗಿದೆ.

ಸನ್ಮಾನ್ಯ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರೇ, ತಮಗೆ ಧನ್ಯವಾದಗಳು.

ತಾವು ಸದಾ ಪ್ರಚಾರದಲ್ಲಿ ಇರಬೇಕು ಎಂಬಂತೆ ಕಾಣುತ್ತಿದೆ.. ಅದಕ್ಕೆ ನನ್ನ ಸಲಹೆಗಳು..

ಸನ್ಮಾನ್ಯರೇ. ಮಹಾಮಾರಿ ಕೊರೊನಾ ಇಡೀ ದೇಶ ಆವರಿಸಿದೆ.. ಇಂತಹ ಸಂದರ್ಭದಲ್ಲಿ. ಸಹಾಯ ಹಸ್ತ ನೀಡಿರುವರು ಬಹಳಷ್ಟು ಜನ ಇದ್ದಾರೆ.. ಹಣದ ರೂಪದಲ್ಲಿ, ವಸ್ತುವಿನ ರೂಪದಲ್ಲಿ ಸಹಾಯ ಮಾಡಿದ್ದಾರೆ.

ಇವರು – ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಗಳು – ಇವರು ಕೊಟ್ಟಂತಹ. ಹಣವು ದುರ್ಬಳಕೆಯಾಗದೇ ಸಾಮಾನ್ಯ ಜನರಿಗೆ ತಲುಪಿದೆಯೇ. ಮತ್ತು ಈ ಎರಡು ಸರ್ಕಾರಗಳು ಸರ್ಕಾರದಿಂದ ಮಾಡಿರುವ ಖರ್ಚು, ವೆಚ್ಚಗಳ ಬಗ್ಗೆ, ಯಾವ ಯಾವ ಉದ್ದೇಶಗಳಿಗೆ ಅನುದಾನಗಳ ಬಗ್ಗೆ (ಪ್ಯಾಕೇಜ್ ಗಳ ಬಗ್ಗೆ ತನಿಖೆ ನಡೆಸುವಂತೆ) ವಿವರ ಕೇಳಿ ಹೋರಾಟ ಹಮ್ಮಿಕೊಳ್ಳಿ.

ಇನ್ನು ತಾವು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ – 10 ವರ್ಷ ಅಧಿಕಾರ ಮಾಡಿದ ಸಂದರ್ಭದಲ್ಲಿ – ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ – ಬಿಡುಗಡೆ ಮಾಡಿರುವ ಅನುದಾನಗಳ ಬಗ್ಗೆ – ಸರಿಯಾಗಿ ಸದ್ಬಳಕೆ ಆಗಿದೆ ಎಂಬುದರ ಬಗ್ಗೆ. ಮತ್ತು ತಮ್ಮ ಕ್ಷೇತ್ರದಲ್ಲಿ – ಅಂಬೇಡ್ಕರ್ ಸಮುದಾಯ ಭವನ ವಾಲ್ಮೀಕಿ ಸಮುದಾಯ ಭವನ. ಇವುಗಳನ್ನು ಯಾವ ಯಾವ ಗ್ರಾಮದಲ್ಲಿ ಕಟ್ಟಿದ್ದಾರೆ – ಕಟ್ಟದೇ – ಹಣ ಡ್ರಾ ಮಾಡಿದ್ದಾರೆ ಎಂಬುದರ ಬಗ್ಗೆ ತಮ್ಮದೇ ಸರ್ಕಾರವಿದೆ ತನಿಖೆ ಮಾಡಿಸುವಿರಾ?

ನಮ್ಮ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರು ಎರಡು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು, ವೈಯಕ್ತಿಕವಾಗಿ, ಕೋಟ್ಯಾಂತರ ರೂಗಳನ್ನು ತನ್ನ ಕ್ಷೇತ್ರದ ಮತದಾರ ಬಂಧುಗಳಿಗೆ ಮತ್ತು ದೇವಸ್ಥಾನ ಜೀರ್ಣೋದ್ಧಾರ ಗಳಿಗೆ, ಲಾಕ್ಡೌನ್ ಸಂದರ್ಭದಲ್ಲಿ ತನ್ನ ಕ್ಷೇತ್ರದ ಸುಮಾರು 65.000 ಸಾವಿರ ಕುಟುಂಬಗಳಿಗೆ ಎರಡು ಬಾರಿ ಆಹಾರ ಸಾಮಗ್ರಿ ಒದಗಿಸಿರುವುದು ಇಡೀ ರಾಜ್ಯ ನೋಡಿದೆ.

ಇಂತಹ ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ.. ನಮ್ಮ ಶಾಸಕರ ವಿರುದ್ಧವಾಗಿ ಮಾಜಿ ಶಾಸಕರಾದ ನೀವು ಆಧಾರರಹಿತವಾದ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತಶಾಶ್ವತವಾಗಿ, ಅಧಿಕಾರದ ದುರಾಸೆಯಿಂದ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ತಮ್ಮನ್ನ. ಈ ಕ್ಷೇತ್ರದ ಮತದಾರರು ಗಮನಿಸುತ್ತಿದ್ದಾರೆ..

ಶಾಶ್ವತವಾಗಿ, ಯಾವಾಗಲೂ ನೀವು
ಮತದಾರರಿಂದ ದೂರವಿದ್ದೀರಿ.
ತಮ್ಮ ಬೇಳೆ ಬೇಯಿಸಿಕೊಳ್ಳಲು, ಬಡವ ಪರಿಶಿಷ್ಟ ಜಾತಿಗೆ ಸೇರಿದ,ಕೆಲ ಸಮುದಾಯಗಳ. ತಮ್ಮ ಬಂಟರನ್ನು ಎತ್ತಿಕಟ್ಟಿ
ಕ್ಷೇತ್ರದ ಶಾಂತಿಯನ್ನು ಹಾಳು ಮಾಡುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ.

ತಾವು ಇಲ್ಲಿಗೆ ನಿಮ್ಮ ಹುಚ್ಚಾಟವನ್ನು . ಬಿಟ್ಟುಬಿಡಿ. ಎಸ್ಸಿ ಸಮುದಾಯದವರನ್ನು. ಬದುಕಲು ಬಿಡಿ. ಇಲ್ಲದಿದ್ದರೆ.. ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಹೋರಾಟ ಮಾಡಬೇಕಾದೀತು.. ಎಚ್ಚರ.


ಬೆಳಗುಂಬ ವೆಂಕಟೇಶ್

ತುಮಕೂರು ತಾಲ್ಲೂಕು ಅಧ್ಯಕ್ಷರು, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗ.