ತುಮಕೂರು: ಹಾಸ್ಟೆಲ್ ನಲ್ಲಿ ಅಡುಗೆ ಅನಿಲ ಸಿಡಿದು ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ಹೊರ ವಲಯದ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಿಂಭಾಗ ನಡೆದಿದೆ.
ಗಾಯಗೊಂಡ ನಾಲ್ವರಿಗೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ.

ಜಿ.ಎನ್.ಮೋಹನ್
‘ಸಾರ್ ಹೀಗೆ ಬನ್ನಿ…’ ಅಂತ ನಾನು ಆಸರೆಯ ಕೈ ಚಾಚಿದೆ.
ಹಾಗೆ ನಾನು ಕೈ ಚಾಚಿದ್ದು ಇನ್ಯಾರಿಗೂ ಅಲ್ಲ. ಕನ್ನಡದ ಮನಸ್ಸಿಗೆ ಸಮಾಜದ ಸಂಕಟಗಳನ್ನು ಮೊಗೆದುಕೊಟ್ಟ ನಾ ಡಿಸೋಜ ಅವರಿಗೆ.
ಹಾಗೆ ನಾನು ಅವರ ಕೈ ಹಿಡಿದು ನಡೆಸಿಕೊಂಡು ಹೋದದ್ದು ನೀರಿನಲ್ಲಿ ತೇಲುತ್ತಿದ್ದ ತೆಪ್ಪದತ್ತ.
ಇಬ್ಬರು ಮಾತ್ರವೇ ಕುಳಿತುಕೊಳ್ಳಲು ಸಾಧ್ಯವಿದ್ದ ತೆಪ್ಪದಲ್ಲಿ ನಾವು ಇನ್ನೂ ಹರಿದಾರಿ ಸಹಾ ಹೋಗಿರಲಿಲ್ಲ, ನಾ ಡಿಸೋಜ ಅವರ ಮುಖದಲ್ಲಿ ನೋವಿನ ಗೆರೆಗಳು ಮೂಡಲು ಆರಂಭವಾಯ್ತು.
‘ಮೋಹನ್, ಈ ನೀರಿದೆಯಲ್ಲಾ, ಜುಳು ಜುಳು ಸದ್ದು ಮಾಡುತ್ತಾ, ನಮ್ಮ ಎದೆಯೊಳಗೆ ಸಂಭ್ರಮ ಉಂಟುಮಾಡುತ್ತಿರುವ ಈ ನೀರಿನ ಒಳಗೆ ಹತ್ತು ಹಲವು ಗ್ರಾಮಗಳು ಸತ್ತು ಬಿದ್ದಿವೆ. ನನಗೆ ಆ ನೋವು, ಆಕ್ರಂದನ ಕೇಳಿಬರುತ್ತಿದೆ. ಇದು ಸಂಕಟದ ಪಯಣ. ಈ ನೀರಿನೊಳಗಣ ನೋವೇ ನನ್ನ ಬರವಣಿಗೆಗೆ ಕಾರಣವಾಗಿ ಹೋಯಿತು’ ಎಂದು ಕಣ್ಣೀರಾದರು.
ಶರಾವತಿಯ ನೀರಿನಲ್ಲಿ ತೆಪ್ಪದೊಳಗೆ ತೇಲುತ್ತಾ ತೇಲುತ್ತಾ ಅವರೊಳಗಿನ ಕಥೆಗಳಿಗೆ ಕೈ ಹಾಕಿದೆ.
ನಾವು ತೆಪ್ಪದಲ್ಲಿ ತೇಲುತ್ತಾ ದಂಡೆಯಿಂದ ದೂರ ದೂರ ಸಾಗುತ್ತಿದ್ದಂತೆಯೇ ದಂಡೆಯ ಆ ಕಡೆ ಇದ್ದ ದ್ವೀಪದಲ್ಲಿ ತೆಂಗಿನ ಮರಗಳು ಕಾಣಿಸಿಕೊಂಡವು.
‘ಸರ್ ಅಲ್ಲಿ ನೋಡಿ ತೆಂಗಿನಮರ ಕುಳ್ಳಗಿದೆ..’ ಎಂದೆ.
ತಕ್ಷಣ ನಾನು ಅವರ ಬಾಯಿಂದ ಏನು ಮಾತು ಹೊರಡಿಸಲು ಸಜ್ಜಾದೆ ಎನ್ನುವುದು ಗೊತ್ತಾಗಿ ಹೋಯಿತು ಎನ್ನುವಂತೆ ನಕ್ಕರು.
ಹೌದು
‘ತೆಂಗಿನ ಮರಗಳು ಕುಳ್ಳಾಗಿದ್ದು
ಕಾಯ್ಗಳು ಕೈಗೆ ಸಿಗುವಂತಿದ್ದು
ಎಳೆ ನೀರಿನ ಮುಚ್ಚಳ ತೆಗೆದಿರಲು
ಕೊಬ್ಬರಿಯೆಲ್ಲಾ ಮೇಲ್ಗಡೆ ಇರಲು
ಎಷ್ಟೋ ಚೆನ್ನಾಗಿರುತಿತ್ತು. ಇನ್ನೂ ಚೆನ್ನಾಗಿರುತಿತ್ತು’
ಈ ಪದ್ಯ ನನ್ನನ್ನು ಒಂದೇ ಕ್ಷಣಕ್ಕೆ ಮೋಡಿ ಮಾಡಿಬಿಟ್ಟಿತ್ತು.
‘ಆ ಪದ್ಯದ ಲಯ, ಅಲ್ಲಿಯ ಭಾಷೆ, ಅಲ್ಲಿಯ ಸರಳತೆ ಮತ್ತು ಅದು ಹೇಳುವಂತಹ ವಿಷಯ, ಆ ಕಲ್ಪನೆ ನನ್ನೊಳಗೊಬ್ಬ ಬರಹಗಾರ ಮೂಡುವಂತೆ ಮಾಡಿತು’.
‘ನನ್ನ ತಂದೆಯವರು ಪ್ರೈಮರಿ ಶಾಲೆ ಉಪಾಧ್ಯಾಯರಾಗಿದ್ದರು. ಅವರು ಮಕ್ಕಳಿಗೆ ಕಲಿಸಲಿಕ್ಕೆ ಅಂತ ಹೇಳಿ ಒಂದು ಸಣ್ಣ ಪುಸ್ತಕದಲ್ಲಿ ಸುಮಾರು ಕವಿತೆಗಳನ್ನ ಬರೆದಿಟ್ಟುಕೊಂಡಿದ್ದರು. ಪುಟ್ಟಪ್ಪ, ರಾಜರತ್ನಂ, ಹೊಯ್ಸಳ, ನಾ. ಕಸ್ತೂರಿ ಅವರ ಕವಿತೆ.’
‘ನಾನು ಮೊಟ್ಟ ಮೊದಲು ಓದಿದ ಪುಸ್ತಕ ಅದು. ಆಗ ನನಗಿನ್ನೂ ಐದು ವರ್ಷ. ಅದರಲ್ಲಿರುವ ಎಷ್ಟೋ ಹಾಡುಗಳನ್ನ ನಾನು ಹಾಡುತ್ತಾ ಇದ್ದೆ ಕೂಡಾ’ ಎಂದು ತಮ್ಮ ಬಾಲ್ಯಕ್ಕೆ ಜಾರಿ ಹೋದರು.
ಹೊನ್ನೆಮರಡುವಿನ ಆ ಪ್ರಶಾಂತ ವಾತಾವರಣದಲ್ಲಿ ಬೀಸುತ್ತಿದ್ದ ಗಾಳಿಗೆ ಓಲಾಡುತ್ತಾ ನಮ್ಮ ತೆಪ್ಪ ಸಾಗಿರುವಾಗ ನೀರೊಳಗಿಂದ ಪುಳಕ್ ಎಂದು ಮೀನೊಂದು ಮೇಲಕ್ಕೆ ಜಿಗಿಯಿತು.
‘ಸಾರ್, ಮೀನು’ ಎಂದು ಅವರ ಧ್ಯಾನಕ್ಕೆ ಭಂಗ ತಂದೆ.
‘ಹೌದು ಈ ಮೀನೇ ನಾನು ಕಥೆಗಾರನಾಗಲು ಕಾರಣವಾಗಿದ್ದು’ ಎಂದರು. ನಾನು ಅಚ್ಚರಿಯಿಂದ ಬೆಳ್ಳಿ ಮೀಸೆಯ ಡಿಸೋಜಾರ ಮುಖವನ್ನೇ ನೋಡಿದೆ.
‘ನಾನು ಕಥೆಗೆ ಕೈ ಹಾಕಲು ಕಾರಣರಾದದ್ದು ನನ್ನ ತಾಯಿ’ ಎಂದು ಅವರು ತಮ್ಮ ಬರಹ ಲೋಕದ ಬಾಗಿಲು ತೆರೆದರು.
‘ಅವರು ತುಂಬಾ ಕಥೆಗಳನ್ನ ಹೇಳ್ತಾ ಇದ್ದರು. ನಾನು ‘ಮೀನುಗಾರ ದೊರೆ’ ಅಂತ ನಮ್ಮ ತಾಯಿ ಹೇಳಿದ ಒಂದು ಕಥೆಯನ್ನ ಇತ್ತೀಚಿಗೆ ಪುಸ್ತಕ ರೂಪದಲ್ಲಿ ತಂದೆ. ತುಂಬಾ ಸ್ವಾರಸ್ಯವಾದ ಕಥೆಗಳು. ನನ್ನೊಳಗೆ ಹೊಕ್ಕ ಈ ಕಥೆಗಳೇ ಕಥೆಗಾರ ನಾ ಡಿಸೋಜಾಗೆ ಜನ್ಮ ನೀಡಿತು’ ಎಂದರು.
‘ನನಗೆ ಹತ್ತು ವರ್ಷ ಆದಾಗ ನಮ್ಮ ತಂದೆ ತೀರಿಕೊಂಡ್ರು. ತಾಯಿ ಒಂಟಿ ಆಗಿ ಹೋದರು. ಆಗ ನನ್ನ ಅಣ್ಣ ಅಕ್ಕಂದಿರು ಶಾಲಾ ಲೈಬ್ರರಿಯಿಂದ ಪುಸ್ತಕಗಳನ್ನ ತಂದು ನನ್ನ ಮುಂದೆ ರಾಶಿ ಹಾಕುತ್ತಿದ್ದರು. ಇದನ್ನ ಓದಿ ಹೇಳಬೇಕು ಅಮ್ಮನಿಗೆ ಅಂತ.
‘ನಾನು ಆ ಕಥೆ, ಕಾದಂಬರಿಗಳನ್ನ ತಾಯಿಗೆ ಓದಿ ಹೇಳ್ತಾ ಹೇಳ್ತಾ ತಾಯಿಯವರು ಒಂದು ಕಡೆ ಕಣ್ಣೀರು ಒರೆಸಿಕೊಳ್ತಿದ್ರು. ನಾನು ಒಂದು ಕಡೆ ಕಣ್ಣು ಒರೆಸಿಕೊಳ್ತಿದ್ದೆ’ ಎಂದು ಹನಿಗಣ್ಣಾದರು ನಾರ್ಬರ್ಟ್ ಡಿಸೋಜ.
ಮೈಸೂರಿನಲ್ಲಿದ್ದ ನಾರ್ಬರ್ಟ್ ಡಿಸೋಜಾ ನೀರಿನ ಪ್ರದೇಶಕ್ಕೆ ಬಂದರು.
೧೯೫೯ ರಲ್ಲಿ ಶರಾವತಿ ಯೋಜನೆ ಪ್ರಾರಂಭ ಆದಾಗ ಆಗ ತಾನೆ ಎಸ್ ಎಸ್ ಎಲ್ ಸಿ ಮುಗಿಸಿ ಟೈಪ್ ರೈಟಿಂಗ್, ಶಾರ್ಟ್ ಹ್ಯಾಂಡ್ ಮುಗಿಸಿದ್ದ ಡಿಸೋಜಾ ಅರ್ಜಿ ಹಾಕಿದರು. ಸೀದಾ ಶರಾವತಿಗೆ ಬಂದರು.
ಅಲ್ಲಿಂದ ನೀರು ಅವರ ಬದುಕಿನ ಅಂಗವಾಗಿ ಹೋಯಿತು.
‘ಪ್ರಾರಂಭದಲ್ಲಿ ನನಗೆ ಬಹಳ ಹೆಮ್ಮೆ ಇತ್ತು, ಶರಾವತಿ ಯೋಜನೆಗಳ ಬಗ್ಗೆ. ನಂತರದ ದಿನಗಳಲ್ಲಿ ನನಗೆ ಬಹಳ ನಿರಾಶೆ ಆಯಿತು. ಹಲವಾರು ಸಮಸ್ಯೆಗಳನ್ನು ಆಣೆಕಟ್ಟು ಹುಟ್ಟು ಹಾಕಿತು’.
ತಕ್ಷಣ ನನಗೆ ಅವರು ಹುಲಿ ಬಗ್ಗೆ, ಆನೆ ಬಗ್ಗೆ ಮಕ್ಕಳೊಂದಿಗೆ ಸಂವಾದ ಮಾಡುತ್ತಾ ’ಹುಲಿಗಳು ಮೈಸೂರು ನೋಡಬೇಕು ಅಂತ ಪೇಟೆಗೆ ಬರೋದಿಲ್ಲ’ ಅಂದಿದ್ದು ನೆನಪಾಯಿತು.
‘ಹೌದು, ಅಣೆಕಟ್ಟು ಕಟ್ಟಿದ ನಂತರ ಕೆಲವೇ ತಿಂಗಳಲ್ಲಿ ಲಿಂಗನಮಕ್ಕಿಗೆ ಒಂದು ಚಿರತೆ ಬಂತು. ಮೊಟ್ಟ ಮೊದಲ ಬಾರಿಗೆ. ಅಣೆಕಟ್ಟಿನಲ್ಲಿ ನೀರು ನಿಲ್ತಾ ನಿಲ್ತಾ ಮೊಲಗಳು ಮೇಲೆ ಹೋದವು. ಹೀಗೆ ಹೋದ ಮೊಲಗಳು ಒಂದು ದೊಡ್ಡ ಗುಡ್ಡದ ನೆತ್ತಿಯ ಮೇಲೆ ನಿಂತವು. ಅಲ್ಲಿ ಸಾವಿರಾರು ಮೊಲಗಳು ಸೇರಿದ್ದರಿಂದ ಗುಡ್ಡದ ನೆತ್ತಿ ಬೆಳ್ಳಗೆ ಕಾಣತ್ತಾ ಇತ್ತು’.
‘ಈ ಥರ ಸರ್ಕಾರದ ಗಮನಕ್ಕೆ ಬಾರದ, ಸಾಮಾನ್ಯ ಜನರಿಗೆ ನೋವುಂಟು ಮಾಡಿದ ಸಾವಿರಾರು ಘಟನೆಗಳಿವೆ’.
ನಾವು ಹಾಗೆ ಮಾತನಾಡುತ್ತಲೇ ಆ ನೀರಿನೊಳಗೂ ಛಲ ಬಿಡದೆ ಉಳಿದುಕೊಂಡಿದ್ದ ನಡುಗಡ್ಡೆಯ ಮೇಲೆ ಕಾಲಿಟ್ಟೆವು.
ಸುತ್ತಾ ನೀರು. ಅದರ ಜುಳು ಜುಳು ನಿನಾದ, ಬೀಸುವ ತಂಗಾಳಿ ನಮ್ಮೊಳಗೇ ಸಂಭ್ರಮ ಹುಟ್ಟು ಹಾಕಬಹುದಾಗಿತ್ತು. ಆದರೆ ನಾನು ಇದ್ದದ್ದು ನಾ ಡಿಸೋಜಾರ ಜೊತೆ.
ಆ ಜುಳು ಜುಳು ನೀರು ನಮ್ಮಿಬ್ಬರೊಳಗೂ ಕಾಣದ ಒಂದು ನೋವನ್ನು ಹರಡುತ್ತಾ ಹೋಯಿತು. ನೇರವಾಗಿ ಕೇಳಿಯೇಬಿಟ್ಟೆ. ‘ಯಾಕೆ ನೀರು ನಿಮ್ಮೊಳಗೆ ಕಣ್ಣೀರಾಗಿ ಬದಲಾಯ್ತು?’
‘ನಮ್ಮ ದೇಶ ವಿಭಜನೆಯಾದಾಗ ನಿರಾಶ್ರಿತರಾದವರಿಗಿಂತ ಮೂರು ಪಟ್ಟು ಹೆಚ್ಚು ಜನ ಅಣೆಕಟ್ಟೆಗಳ ನಿರ್ಮಾಣದಿಂದ ನಿರಾಶ್ರಿತರಾಗಿದ್ದಾರೆ. ಇದು ನನ್ನನ್ನ ಕಾಡುತ್ತಾ ಇರುವ ಒಂದು ದೊಡ್ಡ ದುರಂತ’.
‘ಒಂದು ಪ್ರದೇಶವನ್ನ ಬಿಟ್ಟು ಹೋಗುವುದು ಮನುಷ್ಯನಿಗೆ ಅಷ್ಟು ಸುಲಭ ಅಲ್ಲ. ಅವನು ಹುಟ್ಟಿ ಬೆಳೆದಂತಹ ಪ್ರದೇಶವನ್ನ ಬಿಟ್ಟು ಹೋಗುವುದು, ಜಮೀನು ಮಾಡಿದಂತಹ ಪ್ರದೇಶವನ್ನು ಬಿಟ್ಟು ಹೋಗುವುದು ಬಹಳ ಕಷ್ಟದ ಕೆಲಸ.’
‘ಶರಾವತಿಯಲ್ಲಿ ಮುಳುಗಡೆಯಾದಾಗ ಜನ ತಮ್ಮ ಹಸುಕರುಗಳನ್ನ ದೂರದ ಶಿವಮೊಗ್ಗದಲ್ಲಿ ಹೊಸದಾಗಿ ಕೊಟ್ಟ ಜಮೀನಿನಲ್ಲಿ ಬಿಟ್ಟು ಬಂದರು. ಎರಡು ಮೂರು ದಿವಸಗಳ ನಂತರ ನೋಡಿದರೆ ಅಷ್ಟೂ ಹಸು ಕರು ಇಲ್ಲಿಗೇ ವಾಪಸು ಬಂದಿತು.’
‘ಎಂತಹ ದುರಂತ. ೮೫ ಕಿಮಿ ದೂರದಿಂದ ಆ ದಾರಿಯನ್ನ ನೆನಪಿಟ್ಟುಕೊಂಡು ಆ ಹಸು ಕರುಗಳು ವಾಪಸು ಬಂದಿದೆ ಅಂದ್ರೆ.. ಒಂದು ಪ್ರಾಣಿಗೆ ಅಷ್ಟೊಂದು ವ್ಯಾಮೋಹ ಇರಬೇಕಾದರೆ ಮನುಷ್ಯನಿಗೆ ಎಂತಹ ಮೋಹ ಇರಲಿಕ್ಕಿಲ್ಲ?’
‘ಈ ನೋವನ್ನ ಸರ್ಕಾರ ಅರ್ಥ ಮಾಡಿಕೊಳ್ಳಲಿಲ್ಲ ಅನ್ನುವುದು ನನ್ನ ಸಂಕಟ. ಸರ್ಕಾರ ಪರಿಹಾರ ಕೊಟ್ಟು ಬಿಡ್ತು. ಆದರೆ ಪರಿಹಾರವೇ ಎಲ್ಲಾ ಅಲ್ಲ. ಅವರನ್ನ ಮಾನವೀಯವಾಗಿ ನಡೆಸಿಕೊಳ್ಳಬೇಕಿತ್ತು. ಪೋಲಿಸರನ್ನ ಬಿಟ್ಟು ಅವರನ್ನ ಮನೆಗಳಿಂದ ಹೊರ ಹಾಕಿಸಿದರು. ಕಚೇರಿಯಲ್ಲಿ ಕಿರುಕುಳ ಕೊಟ್ಟರು. ಯಾವ ತಪ್ಪಿಗೋಸ್ಕರ?
‘ದೇವರಿಗೂ ಎತ್ತಂಗಡಿಯಾಯ್ತು’ ಎಂದು ನಾನು ದನಿ ಸೇರಿಸಿದೆ. ಇಲ್ಲಿ ಕೂಡ್ಲಿ ಅಂತ ದೇವಸ್ಥಾನ ಇತ್ತು ಅದೂ ಮುಳುಗಡೆಯಾಯ್ತು. ಪೂಜಾರಿಗಳು ಹೋಗಿ ದೇವರಿಗೆ ಕೇಳಿದರು, “ನೀನು ಬರ್ತೀಯಾ ಅಥವಾ ಇಲ್ಲೇ ಇರ್ತೀಯಾ?” ಅಂತ. ‘ನಾನು ದೇವರು, ನಾನು ಇಲ್ಲೇ ಇರ್ತೀನಿ’ ಅಂತು.
‘ಇಂತಹ ನೂರಾರು ಘಟನೆಗಳನ್ನು ನಾನು ಕೇಳಿದವನು. ಇದನ್ನ ಎಲ್ಲೋ ಒಂದು ಕಡೆ ಬೇರೆಯವರ ಗಮನಕ್ಕೆ ತರಬೇಕು, ಆ ಜನಕ್ಕೆ ಒಂದು ಸಾಂತ್ವನ ಕೊಡಬೇಕು ಅಂತ ಬರೆಯಲು ಶುರು ಮಾಡಿದೆ.’
‘ನಾನು ಬರವಣಿಗೆ ಮಾಡಿದ ಮೇಲೆ ಮುಳುಗಡೆ ಪ್ರದೇಶದ ಬಹಳ ಜನ ನಮ್ಮನೆಗೆ ಬರ್ತಾ ಇದ್ದರು’.
‘ನಿಮ್ಮ ಕಥೆಯ ಪಾತ್ರಗಳೇ ಬಂದು ನಿಮ್ಮ ಮನೆಯ ಬಾಗಿಲು ತಟ್ಟುತ್ತಾ ಇದ್ದರಾ?’ ಎಂದು ನಾನು ಬೆರಗಿನಿಂದ ಕೇಳಿದೆ.
‘ಏನು ಬಂದಿರಿ ಅಂದರೆ ನಮ್ಮ ನೋವನ್ನು ಅರ್ಥ ಮಾಡಿಕೊಂಡವರು ನೀವೊಬ್ಬರೇ, ನಿಮ್ಮನ್ನು ನೋಡಲು ಬಂದೆವು ಅಂತಿದ್ರು.’
ನಾನು ನಾ ಡಿಸೋಜಾರನ್ನು ಅವರ ಊರಿನಲ್ಲಿಯೇ ಕೈಕುಲುಕಲು ಒಂದು ಕಾರಣವಿತ್ತು.
ನಾಡಿನ ಮನಸ್ಸು ಗೆದ್ದ ‘ದ್ವೀಪ’ ಬರೆದ ನಾ ಡಿಸೋಜ, ನಿರ್ದೇಶಿಸಿದ ಗಿರೀಶ್ ಕಾಸರವಳ್ಳಿ, ಅವರನ್ನು ಅವರ ಚಿತ್ರದ ಪಾತ್ರಗಳ ಎದುರು ಕುಳ್ಳಿರಿಸಲು ನಾವು ಮನಸ್ಸು ಮಾಡಿದ್ದೆವು.
ತಾಳಗುಪ್ಪದಲ್ಲಿ ‘ದ್ವೀಪ’ ಸಿನೆಮಾವನ್ನು ಈ ಎಲ್ಲರೂ ಒಟ್ಟಾಗಿ ಕುಳಿತು ನೋಡುವಂತೆ ಮಾಡಿದ್ದೆವು.
ಹಾಗಾಗಿ ‘ದ್ವೀಪ’ ಮಾತಿನೊಳಗೆ ತೇಲಿಬಂತು.
ನಾನು ಮುಳುಗಡೆ ಬಗ್ಗೆ ಬರೆದ ಕಾದಂಬರಿಗಳಲ್ಲಿ ’ದ್ವೀಪ’ ಮೊದಲನೆಯದು. ಇದಕ್ಕಿಂತ ಮುಂಚೆ ನಾನು ಕೆಲವು ಸಣ್ಣಕಥೆಗಳನ್ನು ಬರೆದಿದ್ದೆ.’
’’ದ್ವೀಪ’ ಬರೆಯಲು ಏನು ಕಾರಣ ಅಂದ್ರೆ, ಶರಾವತಿ ಅಣೆಕಟ್ಟೆ ಮಗಿದು ನೀರು ನಿಧಾನವಾಗಿ ನಿಲ್ಲಲು ಆರಂಭವಾಗಿತ್ತು. ಸುಮಾರು ೫-೧೦ ಅಡಿ ಎತ್ತರಕ್ಕೆ ಡ್ಯಾಂ ನಿಂತಿತ್ತು. ಅದಕ್ಕೆ ತಾಗಿಕೊಂಡಂತೆ ನೀರು ನಿಂತಿತ್ತು’.
‘ಹಾಗೆ ನಿಂತ ನೀರಿನಲ್ಲಿ ಒಂದು ಕುಟುಂಬ ಮುಳುಗಿದ್ದನ್ನು ನಾನು ನೋಡಿದೆ. ಆ ಕುಟುಂಬದ ಪರಿಹಾರದ ರೆಕಾರ್ಡುಗಳ ತೀರ್ಮಾನವಾಗಿರಲಿಲ್ಲ. ಬರಬೇಕಿದ್ದ ಪರಿಹಾರ ಸಿಕ್ಕಿರಲಿಲ್ಲ. ಆದರೆ ನೀರು ಬಂದು ಮನೆಬಾಗಿಲಿಗೆ ನಿಂತಿತ್ತು. ಅ ದಂಪತಿಗಳು ಬಹಳ ಕಷ್ಟದಲ್ಲಿದ್ದರು. ಬಹಳ ನೋವಿನಲ್ಲಿದ್ದರು. ಎಲ್ಲಿಗೆ ಹೋಗಬೇಕು ಅಂತ ಗೊತ್ತಿರಲಿಲ್ಲ.’
‘ನಾನು ಅದನ್ನ ನೋಡಿ ’ದ್ವೀಪ’ ಕಾದಂಬರಿ ಬರೆದೆ. ’ದ್ವೀಪ’ ಇಷ್ಟು ದೊಡ್ಡ ಇತಿಹಾಸವಾಗುತ್ತೆ ಅನ್ನುವ ಕಲ್ಪನೆ ನನಗಿರಲಿಲ್ಲ.
”ದ್ವೀಪ’ ಕೆವಿ ಸುಬ್ಬಣ್ಣನವರು ನಿರ್ದೇಶನ ಮಾಡಬೇಕಾಗಿದ್ದ ಸಿನೆಮಾ ಅಲ್ಲವಾ? ಎಂದು ನಾನು ಅವರ ನೆನಪನ್ನು ತೀಡಿದೆ.
“ದ್ವೀಪ” ಸಿನಿಮಾ ಮಾಡಬೇಕು ಅಂತ ತುಂಬಾ ಜನ ಬಂದ್ರು. ನಾನು ಕೊಟ್ಟಿರಲಿಲ್ಲ. ಮೊದಲು ಕೆ ವಿ ಸುಬ್ಬಣ್ಣ ಅವರು ಅದನ್ನು ಸಿನಿಮಾ ಮಾಡ್ತೀನಿ ಅಂದ್ರು. ಸ್ಕ್ರಿಪ್ಟ್ ರೆಡಿ ಮಾಡಿ, ಈ ಪ್ರದೇಶಕ್ಕೆ ಬಂದು ನೋಡಿಕೊಂಡು ಹೋದೆವು. ನಂತರ ಸುಬ್ಬಣ್ಣನವರು ’ಇದು ಸ್ವಲ್ಪ ಕಷ್ಟದ ಕೆಲಸ, ಇದನ್ನು ಕಾಸರವಳ್ಳಿಯವರಿಗೆ ಕೊಡ್ತೀನಿ’ ಅಂದ್ರು. ಕಾಸರವಳ್ಳಿಯವರು ಸುಮಾರು ೧೨ ವರ್ಷ ಆ ಕಾದಂಬರಿಯನ್ನು ಇಟ್ಟುಕೊಂಡಿದ್ದರು. ಕೊನೆಗೆ ಸೌಂದರ್ಯ ಅವರು ಸಿನಿಮಾ ಮಾಡೋಣ ಅಂದಮೇಲೆ ಇದು ಜಾರಿಗೆ ಬಂತು.’
‘ಈ ’ದ್ವೀಪ’ ಶರಾವತಿಯ ದ್ವೀಪ ಮಾತ್ರ ಅಲ್ಲ, ಜಗತ್ತಿನ ಎಲ್ಲಾ ದ್ವೀಪಗಳ ಪ್ರತಿನಿಧಿ’ ಅಂದೆ.
ನಮ್ಮ ಮಾತು ಮೇಧಾ ಪಾಟ್ಕರ್ ಅವರಿಂದ ಹಿಡಿದು ಕಾಗೋಡಿನ ಸತ್ಯಾಗ್ರಹ, ಹಸಲರಿಂದ ಹಿಡಿದು ಈಗಿನ ಧರ್ಮ ರಾಜಕಾರಣದವರೆಗೆ ಹರಿಯುತ್ತಾ ಹೋಯಿತು.
ಇದ್ದಕ್ಕಿದ್ದಂತೆ ನಾನು ಅವರಿಗೆ ‘ನೀವು ಈ ಶರಾವತಿಯ ದಡಕ್ಕೆ ಬಂದು ನಿಲ್ಲದೆ ಹೋಗಿದ್ದರೆ ಏನಾಗಿರುತ್ತಿದ್ದಿರಿ’ ಎಂದೆ. ನಾ ಡಿಸೋಜಾ ಒಂದು ಕ್ಷಣವೂ ತಡ ಮಾಡದೆ ‘ನಾನು ಅತ್ಯಂತ ವೇಗವಾಗಿ ಟೈಪ್ ಮಾಡಬಹುದಾದ ಒಬ್ಬ ಟೈಪಿಸ್ಟ್ ಆಗಿರುತ್ತಿದ್ದೆ’ ಎಂದರು.
ನಾನು ಮತ್ತೆ ಅವರ ಕೈಹಿಡಿದು ತೆಪ್ಪ ಏರಲು ಸಹಾಯ ಮಾಡಿದೆ.
‘ನಮ್ಮ ಬದುಕು ಒಂದು ಕೋಳಿ ಮೊಟ್ಟೆ ಅಲ್ಲವಾ ಸಾರ್’ ಎಂದೆ.
ಮತ್ತೆ ನಾ ಡಿಸೋಜಾ ಅವರಿಗೆ ನಾನು ಯಾವ ಮಾತಿನ ತಿದಿ ಒತ್ತಿದ್ದೇನೆ ಎನ್ನುವುದು ಗೊತ್ತಾಯಿತು.
‘ಹೌದು ನನ್ನ ಬರಹ ಎನ್ನುವುದು ಒಂದು ಕೋಳಿಮೊಟ್ಟೆ ಇದ್ದ ಹಾಗೆ’ ಎಂದರು.
‘ಕೋಳಿಯೊಳಗೆ ಒಂದು ಮೊಟ್ಟೆ ಮೂಡಬೇಕಾದರೆ ಬಹಳ ಪ್ರಕ್ರಿಯೆ ನಡೆಯುತ್ತೆ. ಆ ಕೋಳಿ ತನ್ನದೆಲ್ಲವನ್ನೂ ಆ ಮೊಟ್ಟೆಗೆ ಕೊಟ್ಟು ಅದನ್ನ ಗಟ್ಟಿಯಾಗಿ ಬೆಳೆಸಬೇಕಾಗುತ್ತದೆ. ಮೊಟ್ಟೆ ಗಟ್ಟಿಯಾಗಿದೆ ಅಂತ ಖಾತರಿಯಾದರೆ ಮಾತ್ರ ಕೋಳಿ ಮೊಟ್ಟೆ ಇಡುತ್ತೆ. ಇಲ್ಲದಿದ್ದರೆ ಮೊಟ್ಟೆ ಇಡುವುದಿಲ್ಲ. ಅದರಲ್ಲಿ ಮೊಟ್ಟೆಗಳದ್ದೇ ಒಂದು ದೊಡ್ಡ ಗೊಂಚಲು ಇರುತ್ತೆ. ಆ ಗೊಂಚಲಿನಲ್ಲಿ ದೊಡ್ಡ ಮೊಟ್ಟೆ ಮಾತ್ರ ಹೊರಗೆ ಬರುತ್ತೆ’.
‘ನನ್ನ ಕಲ್ಪನೆ, ನನ್ನ ಅನುಭವ, ನನ್ನ ಜೀವನ ದೃಷ್ಟಿ ಎಲ್ಲಕ್ಕೂ ಕಾವು ಕೊಟ್ಟು ಒಂದು ಮೊಟ್ಟೆಗೆ ಜನ್ಮ ನೀಡುತ್ತೇನೆ’ ಎಂದರು.
ತೆಪ್ಪ ನೀರಿನ ಮೇಲೆ ಸಾಗುತ್ತಲೇ ಇತ್ತು. ನಾನು ಮತ್ತೆ ಆ ಶರಾವತಿಯ ಒಡಲೊಳಗೆ ಇಣುಕಿದೆ. ಇನ್ನಷ್ಟು ಕಥೆಗಳನ್ನು ಹುಡುಕಲು..
ಜಿ ಎನ್ ಮೋಹನ್

ಬಿ.ಸುರೇಶಗೌಡ, ಮಾಜಿ ಶಾಸಕರು
ಜನರು ನೀಡಿದ ಅಧಿಕಾರ ದುರುಪಯೋಗ ಪಡಿಸಿಕೊಂಡು ತನ್ನ ಹುದ್ದೆಯ ಘನತೆ ಗೌರವಗಳನ್ನು ಕಾಪಾಡಿಕೊಂಡು ನಿಮ್ಮ ಮೇಲೆ ನಂಬಿಕೆಯಿಟ್ಟು, ಆಯ್ಕೆ ಮಾಡಿದ ಈ ಕ್ಷೇತ್ರದ ಜನತೆಯ ನಂಬಿಕೆ ಮತ್ತು ವಿಶ್ವಾಸಗಳನ್ನು ಉಳಿಸಿಕೊಂಡು ಯಾವುದೇ ರಾಗ, ದ್ವೇಷಗಳಿಲ್ಲದೇ, ಶಾಂತಿಯುತವಾಗಿ ಕ್ಷೇತ್ರವನ್ನು ಮುನ್ನಡೆಸಬೇಕಾದ ತಾವು ಹಿಂಸಾಚಾರ, ಹಗೆತನ, ದ್ವೇಷದ ದಳ್ಳುರಿಯಿಟ್ಟು, ಶಾಂತಿ ನೆಲೆಸಿದ್ದ,ನಮ್ಮ ಗ್ರಾಮಗಳಲ್ಲಿ ಅಶಾಂತಿ ಉಂಟುಮಾಡಿ ಜನತೆಯ ನೆಮ್ಮದಿ ಹಾಳುಮಾಡುತ್ತಿರುವುದು ಸರಿಯಲ್ಲ.ಪ್ರಜ್ಞಾವಂತರಿರುವ ಗ್ರಾಮಾಂತರ ಜನರಿಗೆ ತಿಳಿದಿದೆ. ನಾನು ಎರಡುಬಾರಿ ಕ್ಷೇತ್ರದ ಶಾಸಕನಾಗಿ, ಜನರ ಶಾಂತಿ ನೆಮ್ಮದಿ ಅವರ ಮತ್ತು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದೆ. ನನ್ನ ಅಧಿಕಾರದ ಅವಧಿಯಲ್ಲಿ ಇಂತಹ ಜಗಳ, ಗಲಭೆ ಗ್ರಾಮದಲ್ಲಿ ಶಾಂತಿಗೆ ಭಂಗ ತರುವಂತಹ ಹೀನ ಕೃತ್ಯಗಳನ್ನು ನಾನಾಗಲಿ ನನ್ನ ಕಾರ್ಯಕರ್ತರಾಗಲಿ ಮಾಡಿರುವುದಿಲ್ಲ ಮುಂದೆಯೂ ಮಾಡುವುದಿಲ್ಲ.ಆದರೆ ಇದೀಗ ನಾವು ನಮ್ಮಜನರು ಇನ್ನು ಏನೇನು ನೋಡಬೇಕೋ ಎನ್ನುವಂತಹ ವಾತಾವರಣ ಸೃಷ್ಟಿಸುತ್ತಿದ್ದೀರಿ.
ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಪರಿಹಾರ ಮಾಡದೇ ಯಾರು ಪರಿಹರಿಸಲು ಸಾಧ್ಯ ಎನ್ನುವ ಪ್ರಶ್ನೆ ಜನತೆಯಲ್ಲಿ ಎದುರಾಗಿದೆ.ಮೊನ್ನೆ ನಡೆದ ಹೊನ್ನೇನಹಳ್ಳಿ ಹಲ್ಲೆ ಪ್ರಕರಣದಲ್ಲಿ ತಾವು ತಮ್ಮ ಅನುಯಾಯಿಗಳು ನಡೆದುಕೊಳ್ಳುವ ರೀತಿ ನೀವಿರುವ ಹುದ್ದೆಗೆ ಶೋಭೆ ತರುವಂತಹದ್ದಲ್ಲ.ಹಲ್ಲೆಗೊಳಗಾಗಿ ಗಾಯಾಳು ರಕ್ತ ಸ್ರಾವದಿಂದ ಬಳಲುತ್ತಿದ್ದರೆ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಾದದ್ದು ಮಾನವ ಧರ್ಮ, ಆದರೆ ಅದನ್ನು ಬಿಟ್ಟು ಪೋಲಿಸ್ ಠಾಣೆಯಲ್ಲಿ ಗಾಯಾಳುಗಳು ಮತ್ತು ಅವರ ಕುಟುಂಬ ನಡೆದುಕೊಂಡ ರೀತಿ ಅದಕ್ಕೆ ಬೆಂಬಲಿಸಿ ಪೋಲಿಸ್ ಠಾಣೆಯಲ್ಲಿ ನಿಮ್ಮ ಆಪ್ತ ಸಹಾಯಕ.ಮತ್ತು ನಿಮ್ಮ ಆಪ್ತವಲಯದ ಕೆಲವರು ಠಾಣೆಯಲ್ಲಿ ವೃತ್ತ ನಿರೀಕ್ಷಕರೋಂದಿಗೆ ನಡೆದುಕೊಂಡ ರೀತಿ ಮತ್ತು ನೀವು ಪೋಲಿಸ್ ಸಬ್ಬ್ ಇನ್ಸ್ಪೆಕ್ಟರ್ ರವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ ರೀತಿಯನ್ನು ಗಮನಿಸಿದರೆ ಅನುಮಾನಕ್ಕೀಡು ಮಾಡಿಕೊಡುತ್ತಿದೆ.ನಿಜಕ್ಕೂ ಆ ಹುದ್ದೆಗೆ ನೀವು ಅರ್ಹರೇ ಎನ್ನುವ ಪ್ರಶ್ನೆ ಕಾಡುತ್ತಿದೆ.ಹೊನ್ನೇನಹಳ್ಳಿ ಘಟನೆ ಮತ್ತು ಹಲ್ಲೆಯನ್ನು ನಾವು ಬೆಂಬಲಿಸುವುದಿಲ್ಲ. ಹಲ್ಲೆಯಾಗಿದೆ, ಪೋಲಿಸರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎನ್ನುವುದು ನನ್ನ ಆಶಯ. ಆದರೆ ನನ್ನ ಅನುಮಾನ ಏನೆಂದರೆ ಗಲಾಟೆ ನಡೆಯಿತು ಎನ್ನಲಾದ ಹದಿನೈದು ನಿಮಿಷಗಳಲ್ಲಿ ತುಮಕೂರು ಗ್ರಾಮಾಂತರ ಪೋಲಿಸ್ ಠಾಣೆಗೆ ಹಲ್ಲೆಗೊಳಗಾದವರು ಅವರ ಕುಟುಂಬದವರು ಬರುತ್ತಾರೆ. ಆದರೆ ಅದೇ ಗ್ರಾಮದ ಜನತೆ ಯಾರು ಅವರ ಪರವಾಗಿ ಅಲ್ಲಿಗೆ ಬರುವುದಿಲ್ಲ.ಶಾಸಕರು ನಿಮ್ಮ ಸರ್ಕಾರದ ಅಧಿಕೃತ ಆಪ್ತ ಸಹಾಯಕ ಅಜಯ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಾದ ಹಾಲನೂರು ಅನಂತ್, ಹೀರೆಹಳ್ಳಿ ಮಹೇಶ್, ಬೈರಸಂದ್ರ ಪಾಲನೇತ್ರಯ್ಯ ಇತರರು ಆ ರಾತ್ರಿಯಲ್ಲಿ ಪೋಲೀಸ್ ಠಾಣೆಗೆ ನುಗ್ಗಿದ ರೀತಿ ಕೆಲ ಮಾಧ್ಯಮದವರನ್ನು ಕರೆಸಿ, ಆ ಸಮಯದಲ್ಲಿ ಅಲ್ಲಿ ನಡೆದ ಎಲ್ಲಾ ಘಟನೆಯನ್ನು ಅವಲೋಕಿಸಿದರೆ, ಸದರಿ ಪ್ರಕರಣ ಪೂರ್ವನಿಯೋಜಿತ ಇರಬಹುದೆಂಬ ಅನುಮಾನ ಬರುತ್ತಿದೆ.ಹಲ್ಲೆಯಂತಹ ವಿಚಾರಗಳನ್ನು ಇಟ್ಟುಕೊಂಡು ದ್ವೇಷದ ಕೀಳುಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ.ಈ ಕ್ಷೇತ್ರದ ಜನರ ಶಾಂತಿ ನೆಮ್ಮದಿಗೆ ಭಂಗ ತರುವಂತಹ ರೀತಿಯಲ್ಲಿ ನಡೆದುಕೊಳ್ಳುವುದು ನಿಮ್ಮ ಹುದ್ದೆಗೆ ಶೋಭೆ ತರುವಂತಹದ್ದಲ್ಲ. ಇನ್ನಾದರೂ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ನಿಲ್ಲಿಸಿ, ಈ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಒಳ್ಳೆಯದು.
ಇಂತಿ
ಬಿ ಸುರೇಶ್ ಗೌಡ
ಮಾಜಿ ಶಾಸಕರು ಬಿಜೆಪಿ ರಾಜ್ಯ ಕಾರ್ಯದರ್ಶಿ
ತುಮಕೂರು ಗ್ರಾಮಾಂತರ ಕ್ಷೇತ್ರ
ತುಮಕೂರು: ಶಿರಾದ ಕೊರೊನಾ ಪೀಡಿತ ಪಿ 5813 ವ್ಯಕ್ತಿ ವಿರುದ್ಧ ಶಿರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿರಾ ನಗರವನ್ನ ಕಂಟೈಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿತ್ತು. ಜೋನ್ ನಲ್ಲಿದ್ದರೂ ಇಲ್ಲಿಂದ ಹಿಂದೂ ಪುರದ ಮಾವನ ಮನೆಗೆ ಹೋಗಿದ್ದಹೆಂಡತಿ ಮಕ್ಕಳೊಂದಿಗೆ ಶಿರಾಗೆ ಬೈಕ್ ನಲ್ಲಿ ವಾಪಸ್ ಬಂದಿದ್ದ.ಈ ಕಾರಣದ ಮೇರೆಗೆ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ತನ್ನೊಂದಿಗೆ ತನ್ನ ಕುಟುಂಬದ 6 ಮಂದಿಯನ್ನು ಕರೆ ತಂದಿದ್ದ. ಈತನಿಂದ ಕುಟುಂಬದ ಎಲ್ಲರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ.
ವಿನಯ್ ಹೆಬ್ಬೂರು
ಕಳೆದ ಕೆಲವು ವಾರಗಳಿಂದ ಭಾರತೀಯ ಸೇನೆ ತಮ್ಮ ವಿವಾದಿತ ಗಡಿಯಲ್ಲಿ ಚೀನಾದ ಸೇನೆಯೊಂದಿಗೆ ಮುಖಾಮುಖಿಯಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು,ಭಾರತ ಈಗ ತನ್ನ ಮತ್ತೊಬ್ಬ ನೆರಯ ದಾಯಾದಿ ನೇಪಾಳ ಭಾರತದೊಂದಿಗೆ ಕಾಲುಕೆರೆದು ನಿಂತಿದ್ದಾನೆ.
ಇದರೊಂದಿಗೆ ಭಾರತ ಏಕ ಕಾಲದಲ್ಲಿ ಚೀನಾ, ಪಾಕಿಸ್ಥಾನ ಹಾಗೂ ನೇಪಾಳಗಳೊಡನೆ ಗಡಿ ಸಂಘರ್ಶ ಎದುರಿಸಬೇಕಾಗಿದೆ.

ಕಲಾಪಾನಿ ಪ್ರದೇಶದ ಮೂಲಕ ಹಾದುಹೋಗುವ ಹಿಮಾಲಯನ್ ರಸ್ತೆ ಸಂಪರ್ಕವನ್ನು ಉದ್ಘಾಟಿಸುವುದಾಗಿ ನವದೆಹಲಿ ಘೋಷಿಸಿದ ನಂತರ ಭಾರತ-ನೇಪಾಳ ಗಡಿ ವಿವಾದ ಸ್ಫೋಟ ಗೊಂಡಿತು.
ಭೌಗೋಳಿಕ ಪ್ರದೇಶದ ಐತಿಹಾಸಿಕ ನಿಖರತೆಯ ಕುರಿತಾದ ಈ ಯುದ್ಧವು ಕಳೆದ ಎರಡು ದಶಕಗಳಿಂದ ಎರಡು ನೆರೆಯ ರಾಷ್ಟ್ರಗಳ ನಡುವೆ ಹುದುಗಿದೆ.

ನೇಪಾಳ-ಭಾರತ ಮತ್ತು ಚೀನಾ (ಟಿಬೆಟ್) ನಡುವಿನ ಕಲಾಪಣಿ-ಲಿಂಪಿಯಾಧುರಾ-ಲಿಪುಲೆಖ್ ಟ್ರಿಜಂಕ್ಷನ್ ವಿವಾದದ ಮೂಲ. ಕಾಳಿ ನದಿಯ ದಡದಲ್ಲಿರುವ ಕಲಾಪಾನಿ ಪ್ರದೇಶವು ಭಾರತದ ಉತ್ತರಾಖಂಡದ ಪೂರ್ವ ಗಡಿಯಲ್ಲಿದೆ ಮತ್ತು ಪಶ್ಚಿಮದಲ್ಲಿ ನೇಪಾಳದ ಸುದುರ್‌ಪಾಶ್ಚಿಮ್ ಪ್ರದೇಶದಲ್ಲಿದೆ.
ಕಾಲಾಪಾನಿ ಪ್ರದೇಶವು ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಭಾಗವಾಗಿದೆ ಎಂದು ಭಾರತ ಹೇಳಿಕೊಂಡರೆ, ನೇಪಾಳ ತನ್ನ ಧಾರ್ಚುಲಾ ಜಿಲ್ಲೆಯ ಭಾಗವೆಂದು ನಂಬಿದೆ.
ಈ ವರ್ಷದ ಆರಂಭದಲ್ಲಿ ಭಾರತವು ಉತ್ತರಾಖಂಡವನ್ನು ಲಿಪುಲೆಖ್‌ನೊಂದಿಗೆ ಸಂಪರ್ಕಿಸುವ 80 ಕಿ.ಮೀ ರಸ್ತೆಯನ್ನು ತೆರೆದಾಗ ವಿವಾದಿತ ಮುನ್ನಲೆಗೆ ಬಂದಿದೆ.
ಈ ಪ್ರದೇಶವು ಭಾರತ ಮತ್ತು ನೇಪಾಳಕ್ಕೆಗಡಿ ಕಾರ್ಯತಂತ್ರದ ಹಿನ್ನಲೆಯಲ್ಲಿ ಪ್ರಾಮುಖ್ಯತೆ ಹೊಂದಿದ್ದು, ಎರಡೂ ಕಡೆಯವರು ಹೆಚ್ಚು ನಿಖರವೆಂದು ಹೇಳಿಕೊಳ್ಳುವ ಕಾರ್ಟೊಗ್ರಾಫಿಕ್ ಸಾಕ್ಷ್ಯಗಳ ಐತಿಹಾಸಿಕತೆಯ ಕುರಿತಾದ ಸ್ಪರ್ಧೆ ಬಿದ್ದಿರುವುದರಿಂದ ಈ ವಿಷಯದ ಇತ್ಯರ್ಥ ಜಟಿಲವಾಗಿದೆ.
19 ನೇ ಶತಮಾನದ ಆರಂಭದಲ್ಲಿ, ಬ್ರಿಟಿಷರು ಭಾರತವನ್ನು ಆಳಿದರು ಮತ್ತು ನೇಪಾಳವು ರಾಜ ಪೃಥ್ವಿ ನಾರಾಯಣ್ ಷಾ ಆಳ್ವಿಕೆಗೆ ಒಳಪಟ್ಟ ಸಣ್ಣ ಸಾಮ್ರಾಜ್ಯವಾಗಿತ್ತು.
ಬ್ರಿಟಿಷ್-ನೇಪಾಳಿ ಸಂಬಂಧಗಳು
ಇತಿಹಾಸಕಾರ ಜಾನ್ ವೆಲ್ಪ್ಟನ್ ತಮ್ಮ ಸಮಗ್ರ ಕೃತಿ ‘ನೇಪಾಳದ ಇತಿಹಾಸ’ ದಲ್ಲಿ ಹೀಗೆ ಬರೆಯುತ್ತಾರೆ: “ಆಧುನಿಕ ನೇಪಾಳದ ಇತಿಹಾಸದೊಂದಿಗೆ ಹೆಚ್ಚು ಬಲವಾಗಿ ಸಂಬಂಧಿಸಿರುವ ಏಕೈಕ ಚಿತ್ರ ಖಂಡಿತವಾಗಿಯೂ ರಾಜ ಪೃಥ್ವಿ ನಾರಾಯಣ್ ಷಾ ಅವರು ಯುದ್ಧಕ್ಕೆ ಸಜ್ಜಾಗಿರುವುದಾಗಿದೆ, ” ಗೂರ್ಖಾಗಳಲ್ಲಿ ಷಾ ಅತ್ಯಂತ ಮಹತ್ವಾಕಾಂಕ್ಷೆಯ ಆಡಳಿತಗಾರನೆಂದು ನಂಬಲಾಗಿದೆ, ಅವರ ಆಳ್ವಿಕೆಯಲ್ಲಿ 18 ನೇ ಶತಮಾನದ ಕೊನೆಯಲ್ಲಿ ನೇಪಾಳವನ್ನು ಏಕೀಕರಿಸಲಾಯಿತು.ಅವರ ಆಡಳಿತಕ್ಕೆ ಪೂರ್ವದಲ್ಲಿ ಸಿಕ್ಕಿಂ ಮತ್ತು ಪಶ್ಚಿಮದಲ್ಲಿ ಉತ್ತರಾಖಂಡದ ಗರ್ವಾಲ್ ಮತ್ತು ಕುಮಾವೂನ್ ಪ್ರದೇಶಗಳು ಒಳಪಟ್ಟಿದವು .
18 ನೇ ಶತಮಾನದ ಉತ್ತರಭಾಗದಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ (ಇಐಸಿ) ಸಹ ಉಪಖಂಡದಲ್ಲಿ ಅಸಾಧಾರಣ ಉಪಸ್ಥಿತಿಯನ್ನು ಪಡೆದುಕೊಂಡಿತು ಮತ್ತು ಮದ್ರಾಸ್, ಕಲ್ಕತ್ತಾ ಮತ್ತು ಬಾಂಬೆಯಲ್ಲಿ ತನ್ನ ಮುಖ್ಯ ನೆಲೆಗಳನ್ನು ಬಲಪಡಿಸಿತು. 19 ನೇ ಶತಮಾನದ ಆರಂಭದ ವೇಳೆಗೆ, ಇಐಸಿ ತನ್ನ ಪ್ರದೇಶಗಳನ್ನು ಉತ್ತರಕ್ಕೆ ಉತ್ತರದಲ್ಲಿ ವಿಸ್ತರಿಸಲು ಪ್ರಾರಂಭಿಸಿದರು ಬ್ರಿಟೀಷರ ಟಿಬೆಟ್‌ನೊಂದಿಗಿನ ವ್ಯಾಪಾರ ಮಹತ್ವಾಕಾಂಕ್ಷೆಗೆ ನೇಪಾಳೀಯರು ಅಡ್ಡಿಯಾಗಿದ್ದಾರೆ.
ನವೆಂಬರ್ 1, 1814 ರಂದು ಬ್ರಿಟಿಷರು ನೇಪಾಳದ ವಿರುದ್ಧ ಯುದ್ಧ ಘೋಷಿಸಿದರು. ಮುಂದಿನ ಎರಡು ವರ್ಷಗಳ ಕಾಲ ಯುದ್ಧವು ಮುಂದುವರಿಯಿತು, 1815 ರಲ್ಲಿ, ಬ್ರಿಟಿಷ್ ಜನರಲ್ ಸರ್ ಡೇವಿಡ್ ಒಕ್ಟರ್ಲೋನಿ ಗರ್ವಾಲ್ ಮತ್ತು ಕುಮಾವೂನ್ ಪ್ರದೇಶವನ್ನು ವಶಕ್ಕೆ ಪಡೆದರು.
ಒಂದು ವರ್ಷದ ನಂತರ, ಸುಗಾಲಿ ಒಪ್ಪಂದ ಏರ್ಪಟ್ಟಿತು. ಇದಕ್ಕೆ ಸಹಿ ಹಾಕುವ ಮೂಲಕ ಯುದ್ಧವು ಕೊನೆಗೊಂಡಿತು. ಈ ಒಪ್ಪಂದವು ನೇಪಾಳದ ಗಡಿಗಳನ್ನು ಭಾರತದಿಂದ ಪ್ರತ್ಯೇಕಿಸಿತು. ಈ ಒಪ್ಪಂದವು “ನೇಪಾಳವು ತನ್ನ ಇಂದಿನ ಗಡಿಯ ಪಶ್ಚಿಮ ಮತ್ತು ಪೂರ್ವದ ಎಲ್ಲಾ ಪ್ರದೇಶಗಳನ್ನು ಬಿಟ್ಟುಕೊಟ್ಟು ಶರಣಾಯಿತು ಮತ್ತು ಕಠ್ಮಂಡುವಿನಲ್ಲಿ ಶಾಶ್ವತ ಬ್ರಿಟಿಷ್ ಪ್ರತಿನಿಧಿಯನ್ನು ನೇಮಿಸಲಾಯಿತು”.
ಒಪ್ಪಂದದ ಪರಿಣಾಮ, ಕಾಳಿ ನದಿ ನೇಪಾಳದ ಪಶ್ಚಿಮ ಗಡಿಯಾಗಿ ಗುರುತಿಸಲಾಯಿತು. ಹೀಗಿದ್ದರು, ಕಾಳಿ ನದಿಯ ನಿಖರವಾದ ಸ್ಥಳ ಯಾವುದು ಎಂಬುದರ ಬಗ್ಗೆ ಸ್ಪಷ್ಟವಾದ ಒಮ್ಮತವಿಲ್ಲ, ಕಲಾಪಾನಿ-ಲಿಂಪಿಯಾಧುರಾ-ಲಿಪುಲೆಖ್ ಅವರನ್ನೊಳಗೊಂಡ ಭೂಮಿ ಇಂದಿನ ಭಾರತದ ಅಥವಾ ನೇಪಾಳದ ಭಾಗವೇ ಎಂಬುದೇ ವಿವಾದದ ಕೇಂದ್ರ ಬಿಂದುವಾಗಿದೆ.
ಕಲಾಪಾನಿ ಪ್ರದೇಶದ ವಿವಾದವನ್ನು ನೇಪಾಳ ಸರ್ಕಾರವು 1998 ರಲ್ಲಿ ಮಾತ್ರ ಮೊದಲು ಎತ್ತಿತು. 1962 ರ ಚೀನಾ-ಭಾರತೀಯ ಯುದ್ಧದ ಸಮಯದಲ್ಲಿ ಭಾರತೀಯ ಮಿಲಿಟರಿ ಘಟಕಗಳು ಕಲಾಪಾನಿ ಪ್ರದೇಶವನ್ನು ಆಕ್ರಮಿಸಿಕೊಂಡಾಗಲೂ, ನೇಪಾಳ ಆಕ್ಷೇಪ ಎತ್ತಿರಲಿಲ್ಲ. “ನೇಪಾಳವು ಕಲಾಪಾನಿ ಸಮಸ್ಯೆಯನ್ನು 1961 ರಿಂದ 1997 ರವರೆಗೆ ನಿರ್ಲಕ್ಷಿಸಿದತ್ತು, ಆದರೆ ದೇಶೀಯ ರಾಜಕೀಯ ಕಾರಣಗಳಿಂದಾಗಿ ಇದು 1998 ರಲ್ಲಿ ಭಾರತ-ನೇಪಾಳದ ನಡುವೆ ವಿವಾದವಾಗಿ ಮಾರ್ಪಟಿತು.
ಸುಗಾಲಿ ಒಪ್ಪಂದದಲ್ಲಿ ನಿರ್ಧರಿಸಿದಂತೆ ಗಡಿಯೊಂದಿಗೆ ಹೊಂದಿಕೆಯಾಗುವಂತೆ ದೇಶದ ಪಶ್ಚಿಮ ಗಡಿಯನ್ನು ಪಶ್ಚಿಮಕ್ಕೆ 5.5 ಕಿ.ಮೀ ದೂರಕ್ಕೆ ಸ್ಥಳಾಂತರಿಸಬೇಕೆಂದು ನೇಪಾಳ ಸರ್ಕಾರ ವಾದಿಸಿತು.
ಮತ್ತೊಂದೆಡೆ, ಭಾರತದ ಅಧಿಕಾರಿಗಳು 1830 ರ ದಶಕದ ಹಿಂದಿನ ಆದಾಯದ ದಾಖಲೆಗಳು ಕಲಾಪಣಿ ಪ್ರದೇಶವನ್ನು ಸಾಂಪ್ರದಾಯಿಕವಾಗಿ ಪಿಥೋರಗಢದ ಜಿಲ್ಲೆಯ ಭಾಗವಾಗಿದೆ ಎಂದು ತೋರಿಸಿದರು.
ದಕ್ಷಿಣ ನೇಪಾಳದಲ್ಲಿರುವ ಕಲಾಪಣಿ ಮತ್ತು ಸುಸ್ತಾ ಹೊರತುಪಡಿಸಿ 1,751 ಕಿ.ಮೀ ಉದ್ದದ ನೇಪಾಳ-ಭಾರತ ಗಡಿಯನ್ನು ಜಂಟಿ ಗಡಿ ಸಮಿತಿಯ ಮೂಲಕ ಗುರುತಿಸಲಾಗಿದೆ.
ಈ ಲೇಖನವು ಹಲವು ಸುದ್ದಿ ಮೂಲ, ಲೇಖನಗಳನ್ನು ಆಧರಿಸಿದೆ.
ಜಿ ಎನ್ ಮೋಹನ್
‘ಸಾರ್ ಬಾಡಿ ವಿಶುಯಲ್ಸ್ ತಗೊಳ್ಳೋಕೆ ಬಿಡ್ತಾ ಇಲ್ಲ’- ಅಂತ ರಂಗನಾಥ ಮರಕಿಣಿ ಫೋನ್ ಮಾಡಿದಾಗ ನನಗೆ ಎಲ್ಲಿಲ್ಲದ ಆತಂಕ.
ಅದಾಗಲೇ ‘ಸಾಹಿತಿ ರಾಮಚಂದ್ರ ಶರ್ಮ ಇನ್ನಿಲ್ಲ’ ಅನ್ನೋ ಸುದ್ದಿಯನ್ನ ಘೋಷಿಸಿ ಆಗಿತ್ತು. ಜೋಗಿಯ ಫೋನ್-ಇನ್ ತೆಗೆದುಕೊಳ್ಳಲಾಗಿತ್ತು. ಮುಂದಿನ ಬುಲೆಟಿನ್ ಗೆ ಬಾಕಿ ಇದ್ದದ್ದು ಅದರ ದೃಶ್ಯಗಳನ್ನ ನೀಡುವುದು ಮಾತ್ರ.
ಕೊನೆ ನಿಮಿಷದಲ್ಲಿ ವಿಶುಯಲ್ ಗಳು ಸಿಕ್ಕರೂ ಅದನ್ನು ಪ್ರಸಾರ ಮಾಡಲು ಒಂದು ದೊಡ್ಡ ಪಡೆಯೇ ರಾಮೋಜಿ ಫಿಲಂ ಸಿಟಿಯ ಕಚೇರಿಯಲ್ಲಿ ಸಜ್ಜಾಗಿ ನಿಂತಿತ್ತು.
ಗ್ರಾಫಿಕ್ಸ್ ನ ರಾಘವೇಂದ್ರ ಆವಂತಿ, ಬುಲೆಟಿನ್ ಪ್ರೊಡ್ಯೂಸರ್ ಮಹೇಶ್, ಪ್ರೊಡಕ್ಷನ್ ನ ತೇಜೇಶ್ ಎಲ್ಲರೂ ಬೆಂಗಳೂರಿನತ್ತ ಮುಖ ಮಾಡಿ ಕುಳಿತಿದ್ದರು.
ಆಗಲೇ ಈ ಫೋನು ಬಂದದ್ದು. ಅರೇ! ಇದೇನಿದು ವಿಚಿತ್ರ ಎನಿಸಿತು. ಯಾಕಂತೆ ಅಂತ ಕೇಳಿದೆ. ಸಾವು ಅನ್ನುವುದು ಖಾಸಗಿ ವಿಚಾರ. ಅದನ್ನು ಖಾಸಗಿಯಾಗಿಯೇ ಉಳಿಯಲು ಬಿಡಿ ಅಂತ ಹೇಳುತ್ತಿದ್ದಾರೆ ಅಂದರು ಮರಕಿಣಿ.
ಹಣ ಎಂದರೆ ಮಾತ್ರ ಅಲ್ಲ, ಟಿ ವಿ ಕ್ಯಾಮೆರಾ ಎಂದರೂ ಸಾಕು ಹೆಣ ಸಹಾ ಬಾಯ್ಬಿಡುತ್ತದೆ ಎನ್ನುವುದು ಮಾತ್ರ ಗೊತ್ತಿದ್ದ ನನಗೆ ಇದು ಮೊದಲ ಪಾಠ.
ಬಿ ವಿ ಕಾರಂತರು ಆಗ ತಾನೇ ರಂಗಾಯಣಕ್ಕೆ ಚಾಲನೆ ನೀಡಿದ್ದರು. ರಾಜ್ಯಾದ್ಯಂತ ಅಳೆದೂ ಸುರಿದೂ ಆಯ್ದುಕೊಂಡಿದ್ದ ತಂಡಕ್ಕೆ ತಾಲೀಮು ಆರಂಭವಾಗಿತ್ತು.
ಊರು ಎದ್ದೇಳುವ ಮುನ್ನವೇ ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ, ಮಂಡಿ ಮೊಹಲ್ಲಾ ಎಲ್ಲಾ ಸುತ್ತಿ ಬರುತ್ತಿದ್ದ ತಂಡ ಅಂದು ತಾವು ಕಂಡದ್ದಕ್ಕೆಲ್ಲಾ ರಂಗ ರೂಪ ನೀಡುತ್ತಿತ್ತು.
ಒಂದು ಹೀಗಿತ್ತು- ಹೆಣದ ಮೆರವಣಿಗೆ ಸಾಗುತ್ತಿದೆ. ಶವಯಾತ್ರೆಯ ಫೋಟೋ ತೆಗೆಯಲು ಕ್ಯಾಮೆರಾಮನ್ ರೆಡಿ ಆದ. ಚಟ್ಟದಲ್ಲಿದ್ದ ಶವ ತಕ್ಷಣ ಎದ್ದು ಕೂತು ಒಂದು ಸ್ಮೈಲ್ ನೀಡಿ ಹಾಗೆ ನೆಲಕ್ಕೆ ಒರಗಿತು.
ಸುಘೋಷ್ ನಿಗಳೆ ನೈಟ್ ಶಿಫ್ಟ್ ನಲ್ಲಿದ್ದಾಗ ಒಂದು ಘಟನೆ ನಡೆಯಿತು. ವರದಕ್ಷಿಣೆ ಕಿರುಕುಳ ತಾಳಲಾರದೆ ಒಬ್ಬ ಮಹಿಳೆ ನೇಣು ಹಾಕಿಕೊಂಡಿದ್ದರು.
ವರದಿ ಮಾಡಲು ಅವರ ಮನೆಗೆ ಹೋದಾಗ ಎದುರಾದ ವ್ಯಕ್ತಿ ‘ಬನ್ನಿ ಸಾರ್, ನೀವು ಬರೋವರ್ಗೂ ಪೊಲೀಸರಿಗೂ ಹೆಣ ಮುಟ್ಟೋಕೆ ಬಿಟ್ಟಿಲ್ಲ’ ಅಂದ.
ಆತ ಆ ಮಹಿಳೆಯ ತಮ್ಮ. ಮನೆಯಲ್ಲಿ ಸಾವಾಗಿದೆ ಹೇಗೆ ಮಾತಾಡಿಸೋದು ಅಂತ ಸುಘೋಷ್ ಮೀನ ಮೇಷ ಎಣಿಸ್ತಿದ್ದಾಗ ಆ ತಮ್ಮ ಕ್ರಾಪು ಸರಿ ಮಾಡಿಕೊಂಡು, ಶರ್ಟ್ ನ ಒಂದು ಗುಂಡಿ ಬಿಚ್ಚಿ, ಹಿನ್ನೆಲೆಯಲ್ಲಿ ತೂಗಾಡುತ್ತಿದ್ದ ಶವ ಕಾಣುವಂತೆ ನಿಂತು ‘ಸರ್ ನಾನು ಮಾತಡೋಕೆ ರೆಡಿ’ ಅಂದ.
ಮುಗಿಯುತ್ತಿದ್ದಂತೆ ತಂದೆ ಬಂದರು. ಆಮೇಲೆ ತಾಯಿ.. ಸುಘೋಷ್ ರೇಗಿದವನೇ ವ್ಯಾನ್ ಹತ್ತಿದ. ‘ಇವತ್ತು ಈಟಿವಿ ನೋಡು ಮಗಾ, ಕನ್ನಡನಾಡೀನಲ್ಲಿ ನಾನು ಕಾಣಿಸ್ಕೊಂತೀನಿ’ ಅಂತ ಆತ ಎಲ್ಲರಿಗೂ ಫೋನ್ ನಲ್ಲಿ ಹೇಳ್ತಾ ಇದ್ದದ್ದು ಬೇಡ ಅಂದರೂ ಕಿವಿಗೆ ಬೀಳುತ್ತಿತ್ತು.
ರಾಜ್ ಕುಮಾರ್ ಸತ್ತು ಒಂದು ವರ್ಷ ಆಗಿತ್ತು. ಕಂಠೀರವ ಸ್ಟುಡಿಯೋದಲ್ಲಿದ್ದ ಸಮಾಧಿಗೆ ಇದೇ ಸುಘೋಷ್ ಕ್ಯಾಮೆರಾ ಸಹಿತ ಹೋದ.
ಆಗ ಗೊತ್ತಾಯ್ತು. ಕೋಲಾರದಿಂದ ಬಂದ ವ್ಯಕ್ತಿಯೊಬ್ಬ ದುಃಖ ತಡೆಯಲಾರದೆ ಒಂದು ವರ್ಷದಿಂದ ಮೌನಕ್ಕೆ ಶರಣಾಗಿದ್ದಾನೆ ಅಂತ. ಪಾಪ ಅಂದುಕೊಂಡ ಸುಘೋಷ್ ಆತನ ದುಃಖದ ಮುಖ, ಅಣ್ಣಾವ್ರ ಸಮಾಧಿಗೆ ಪೂಜೆ ಮಾಡ್ತಿರೋದು ಎಲ್ಲಾ ಸುತ್ತಿಕೊಂಡ.
ಸಮಸ್ಯೆ ಎದುರಾದದ್ದು ಬೈಟ್ ತೆಗೆದುಕೊಳ್ಳಬೇಕಾಗಿ ಬಂದಾಗ. ಸರಿ ಆತ ಕೈಸನ್ನೆ, ಬಾಯ್ ಸನ್ನೆ ಮಾಡೋದು. ಅದನ್ನೇ ಇನ್ನೊಬ್ಬ ವಿವರಿಸಿ ಹೇಳೋದು ಅಂತ ಆಯ್ತು. ಕ್ಯಾಮೆರಾ ಆನ್ ಆಗ್ತಿದ್ದಂತೆ ಒಂದು ವರ್ಷ ಮೌನವಾಗಿದ್ದ ಆತನೇ ಮಾತಾಡೋಕೆ ಶುರು ಮಾಡಿದ.
ಕ್ಯಾಮೆರಾಮನ್ ‘ಹ ಹ ಹಾ’ ಅಂತ ನಕ್ಕುಬಿಟ್ಟ. ಜನ ‘ಹೋ’ ಅಂತ ಕೂಗಿದರು. ಕ್ಯಾಮೆರಾ ಮಹಾತ್ಮೆ ಹಾಗಿತ್ತು.
ಇಂಥದ್ದನ್ನೇ ಕಂಡ ನಮಗೆ ರಾಮಚಂದ್ರ ಶರ್ಮರ ಮನೆಯಲ್ಲಿ ಹಾಗಂದದ್ದು ವಿಚಿತ್ರ ಅನಿಸಿತ್ತು.
ಶರ್ಮ ನಾಡಿನ ಆಸ್ತಿ, ಹಾಗಿರೋವಾಗ ಹೀಗೆ ಮಾಡೋದು ಸರೀನಾ ಅನ್ನೋ ಹುಳ ತಲೆ ಕೊರಿಯೋದಿಕ್ಕೆ ಶುರು ಮಾಡ್ತು.
ಅವರ ಫೋಟೋಗಳ ಆಲ್ಬಂ ಆದರೂ ಶೂಟ್ ಮಾಡಿ ಅಂತ ಹೇಳಿ ನಾನು ಬುಲೆಟಿನ್ ಗೆ ಹೇಗೆ ಒಗ್ಗರಣೆ ಹಾಕೋದು ಅಂತ ಯೋಚಿಸುತ್ತಾ ಕುಳಿತೆ..
ವಿಷ್ಣುವರ್ಧನ್ ಇಲ್ಲವಾದಾಗ ಅವರ ಸಾವಿನ ದೃಶ್ಯಗಳು ಟೆಲಿವಿಷನ್ ನಲ್ಲಿ ಹರಿದು ಬರುತ್ತಿರುವಾಗ ‘ಅಲ್ಲ! ಸಾವಿಗೂ ಒಂದು ಘನತೆ ಇಲ್ಲವಾ?’ ಅನಿಸಿಬಿಡ್ತು.
ವಿಷ್ಣುವರ್ಧನ್ ಅವರ ತಲೆಯನ್ನ ಚೆಂಡಿನಂತೆ ಆ ಕಡೆ ಈ ಕಡೆ ಹೊರಳಿಸುವವರು, ಅವರ ಮೈ ಮೇಲೆ ಬಿದ್ದು ಹೊರಳಾಡುವವರು, ಒಮ್ಮೆ ಮುಟ್ಟಿಯೇ ಬಿಡಬೇಕು ಅಂತ ಛಲ ತೊಟ್ಟವರ ಅತಿರೇಕಗಳು…
ರಾಮಚಂದ್ರ ಶರ್ಮರ ಕುಟುಂಬ ಸರಿಯಾಗಿ ಅರ್ಥವಾದದ್ದು ಆಗ. ಅವರು ತಮ್ಮ ಮನೆಯ ಸಾವಿಗೆ ಒಂದು ಘನತೆಯನ್ನ ತಂದುಕೊಟ್ಟಿದ್ದರು.
ಡಾ. ರಾಜ್ ಕುಮಾರ್ ಇಲ್ಲವಾದಾಗ ಆಗಿದ್ದು ಇನ್ನೂ ಕರಾಳ ನೆನಪಿನಂತೆ ಉಳಿದುಬಿಟ್ಟಿದೆ.
ಸಾವು ಎನ್ನುವುದು ಮಾಧ್ಯಮಕ್ಕೆ ಒಂದು ಸಾವು ಮಾತ್ರ. ಮಾಧ್ಯಮ ಕಚೇರಿಗಳಲ್ಲಿ ಯಾವತ್ತಾದರೂ ಒಂದು ಸಾವಿನ ವರದಿ ಹೇಗಿರಬೇಕು ಅಂತ ಕಿವಿಮಾತು ಹೇಳಿದ್ದು ಕೇಳಿದ್ದೀರಾ?
ಅಥವಾ ಸಾವನ್ನು ಹೇಗೆ ವರದಿ ಮಾಡಬೇಕು ಅಂತ ಯಾರಾದರೂ ಸೀನಿಯರ್ ಗಳ ಬಳಿ ಪ್ರಶ್ನೆ ಮಾಡಿದ್ದು ಗೊತ್ತಾ?
ಪತ್ರಿಕೋದ್ಯಮ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ಹೇಳಿಕೊಟ್ಟಿದ್ದಾರಾ?
‘ಮೊದಲು, ಎಲ್ಲರಿಗಿಂತ ಮೊದಲು’ ಎನ್ನುವುದನ್ನು ಮಾತ್ರವೇ ಮಂತ್ರದಂತೆ ಬೋಧಿಸಿ ಕಳಿಸಿದಾಗ ಫೀಲ್ಡ್ ಗಿಳಿದ ಪತ್ರಕರ್ತರಿಗೆ ಸಾವೂ ಸಹಾ ಇನ್ನೊಂದು ವಿಶುಯಲ್ ಮಾತ್ರ.
ಈಗಲೂ ನೆನಪಿದೆ. ‘ಫ್ರಂಟ್ ಲೈನ್’ ಪತ್ರಿಕೆ ಗುಜರಾತ್ ಗಲಭೆಯ ವರದಿ ಮಾಡಿದಾಗ ಕಂಟೆಂಟ್ ಪೇಜ್ ನಲ್ಲಿ ಇದರೊಳಗೆ ಮನಸ್ಸಿಗೆ ಆಘಾತವಾಗುವಂತಹ ಫೋಟೋಗಳಿವೆ ಅಂತ ಘೋಷಿಸಿಕೊಂಡಿತ್ತು.
ಅದರ ನಂತರ ಆ ದೃಶ್ಯಗಳನ್ನು ಕೂಡಿಸಿಕೊಂಡು ರಾಮೋಜಿರಾವ್ ಒಂದು ಪ್ರಶ್ನೆ ಕೇಳಿದ್ದರು. ಅಪಘಾತದ ಭೀಕರ ದೃಶ್ಯಗಳಿಲ್ಲದೆ ಅಪಘಾತದ ಭೀಕರತೆಯನ್ನು ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲವೇ? ಅಂತ.
ಹೌದಲ್ಲಾ ಅನಿಸಿ ನಾವೆಲ್ಲಾ ಒಂದು ಸಂಹಿತೆ ರೂಪಿಸಿಕೊಂಡೆವು. ಎಲ್ಲಾ ವರದಿಗಾರರಿಗೂ ನಿರ್ದೇಶನ ಹೋಯಿತು. ಅಪಘಾತದ ಲಾಂಗ್ ಶಾಟ್ ಮಾತ್ರ ಸಾಕು ಅಂತ. ಕ್ಲೋಸ್ ಅಪ್ ಬೇಡವೇ ಬೇಡ ಅಂತ.
ಇದನ್ನು ಹೇಳಿದಾಗ ನಮ್ಮ ವರದಿಗಾರರಿಗೇ ಇದು ಸಹ್ಯ ಅನಿಸಲಿಲ್ಲ. ಅವರ ಮನಸ್ಸು ಮತ್ತು ಕಣ್ಣುಗಳು ಅಷ್ಟು ಚೆನ್ನಾಗಿ ‘ಕಂಡಿಷನ್’ ಆಗಿತ್ತು. ಆದರೆ ಕ್ರಮೇಣ ‘ಈಟಿವಿ’ಯಿಂದ ಘೋರ ದೃಶ್ಯಗಳು ಕಡಿಮೆಯಾಗುತ್ತಾ ಹೋಯಿತು.
ಅಲ್ಲಿಯವರೆಗೂ ಕಾಂಪಿಟೇಶನ್ ಹೆಸರಿನಲ್ಲಿ ಅದೂ ತಗೋ, ಇದೂ ತಗೋ, ರಕ್ತದ ಮಾರ್ಕ್ ಬೇಕು, ಚಾಕು ಚೂರಿ ಚುಚ್ಚಿರೋದೂ ಗೊತ್ತಾಗಬೇಕು, ರುಂಡ ಹಾರಿದ್ದೂ ಕಾಣಿಸಬೇಕು ಅನ್ನುತ್ತಿದ್ದ, ಇಷ್ಟೂ ಸಾಕಾಗ್ಲಿಲ್ಲ ಅಂತ ಪೋಸ್ಟ್ ಮಾರ್ಟಂ ರೂಮಿಗೇ ನುಗ್ಗುತ್ತಿದ್ದ ಪತ್ರಕರ್ತರು ಕ್ರಮೇಣ ತಹಬಂದಿಗೆ ಬಂದರು.
ಘೋರ ದೃಶ್ಯವಿಲ್ಲದೆಯೂ ಘೋರ ಸುದ್ದಿ ಮನವರಿಕೆ ಮಾಡಿಕೊಡಲಾಯಿತು. ಇದು ಕ್ರಮೇಣ ಬೇರೆ ಚಾನಲ್ ಗಳ ಮೇಲೂ ಪರಿಣಾಮ ಬೀರಿತು. ಒಂದಿಷ್ಟು ಸಂಯಮ ಹೇಗೆ ಮಾಧ್ಯಮಕ್ಕೆ ಸ್ವಲ್ಪವಾದರೂ ಮರ್ಯಾದೆ ತಂದು ಕೊಡಲು ಸಾಧ್ಯ ಎಂಬುದು ಪ್ರೂವ್ ಆಯಿತು.
ಡಾ. ರಾಜ್ ಸತ್ತಾಗ ಸದಾ ಪಿನ್ ಡ್ರಾಪ್ ಸೈಲೆನ್ಸ್ ನಲ್ಲಿರುವ ಪ್ರೊಡಕ್ಷನ್ ರೂಮು, ಸ್ಟುಡಿಯೋ ಸಹಾ ಸಂತೆಯಾಗಿ ಹೋಗಿತ್ತು. ಅದು ಶತಮಾನದ ಸಾವಿನ ಸುದ್ದಿ.
ವಿ-ಸ್ಯಾಟ್ ನಲ್ಲಿ ಬಂದಿಳಿಯುತ್ತಿದ್ದ ಸುದ್ದಿಗಳನ್ನೆಲ್ಲಾ ಬಾಚಿಕೊಂಡು ಬಂದು ಪ್ರಸಾರ ಮಾಡುತ್ತಿದ್ದ ನಾವು ಆ ಸಂತೆಯ ಮಧ್ಯೆಯೇ ಒಂದು ತೀರ್ಮಾನ ಕೈಗೊಂಡೆವು. ಗಲಭೆಗಳ ಪ್ರಸಾರಕ್ಕೆ ಆದಷ್ಟೂ ಕತ್ತರಿ ಹಾಕೋಣ, ಶವಯಾತ್ರೆಯ ಗೊಂದಲಗಳಿಗೆ ಹೆಚ್ಚು ಪ್ರಚಾರ ಬೇಡ ಅಂತ.
ಯಾಕೋ ನನಗೆ, ಸಿದ್ದು, ಬಾಲುಗೆ ಅನಿಸಿ ಹೋಗಿತ್ತು. ಈ ದಿನ ನಾವು ಸಂಯಮ ಕಳೆದುಕೊಂಡರೆ ಸುದ್ದಿಯ ಆತುರಕ್ಕೆ ಬಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಹೊತ್ತಿಕೊಂಡುಬಿಡುತ್ತದೆ ಅಂತ.
ಕೈಯಲ್ಲಿ ಬೆಂಕಿಯುಂಡೆಯಂತಹ ವಿಶ್ಯುಯಲ್ ಗಳಿದ್ದವು. ಈ ಕ್ಷಣವೇ ಪ್ರಸಾರ ಮಾಡಿಬಿಡೋಣ ಎಂದು ಕೈ ಕೆರೆಯುತ್ತಲೂ ಇತ್ತು. ಅದು ಪ್ರಸಾರವಾದರೆ ಎದುರಾಳಿ ಚಾನಲ್ ಗಳು ‘ಸ್ಟನ್’ ಆಗಿಬಿಡುತ್ತದೆ ಎಂತಲೂ ಗೊತ್ತಿತ್ತು.
ಆದರೂ ಅಕ್ಕಿಯೊಳಗೆ ಸೇರಿ ಹೋಗಿದ್ದ ಕಲ್ಲುಗಳನ್ನೂ ಆಯ್ದೂ ಆಯ್ದೂ ಹಸನು ಮಾಡಿದೆವು.
ನವ ಮಂಗಳೂರು ಬಂದರಿನಲ್ಲಿ ನಿಂತಿದ್ದೆವು. ಭಾರಿ ಸೆಕ್ಯುರಿಟಿಯ ಕಣ್ತಪ್ಪಿಸಿ ಕ್ಯಾಮೆರಾ ಒಳಗೆ ಸಾಗಿಸಿದ್ದೆವು.
ಸಮುದ್ರದೊಳಗೆ ಇಳಿದ ಕ್ರೇನ್ ತನ್ನ ಹಲ್ಲಿಗೆ ಒಂದು ಕಾರನ್ನು ಕಚ್ಚಿಕೊಂಡೇ ಮೇಲೆ ಬಂತು. ಅಷ್ಟೇ ಆಗಿದ್ದರೆ ಏನೂ ಅನಿಸುತ್ತಿರಲಿಲ್ಲ. ಆದರೆ ಆ ಕಾರಿನೊಳಗೆ ಇಬ್ಬರು ಇದ್ದಲ್ಲೇ, ಇದ್ದಂತೆಯೇ ಹೆಣವಾಗಿ ಹೋಗಿದ್ದರು. ಸ್ಟೀರಿಂಗ್ ಹಿಡಿದೇ ಇದ್ದ ದೇಹ ಕ್ರೇನ್ ನೆಲಕ್ಕೆ ಮುಟ್ಟುತ್ತಿದ್ದಂತೆಯೇ ವಿಕಾರವಾಗಿ ಉರುಳಿ ಆಚೆ ಬಿತ್ತು.
‘ಹಮೀದ್, ಎಲ್ಲಾ ಬೇಕು, ಎಲ್ಲಾ…’ ಅಂತ ಕೂಗಿದೆ. ಇನ್ಯಾರಿಗೂ ಸಿಗದ ‘ಎಕ್ಸ್ ಕ್ಲೂಸಿವ್’ ವಿಶ್ಯುಯಲ್ ಗಳು ಸಿಕ್ಕಿಬಿಟ್ಟ ಸಂಭ್ರಮ ಆವರಿಸಿಕೊಂಡಿತ್ತು.
ಅದೇ ನಾನು ಈಗ ದೃಶ್ಯಗಳನ್ನು ಜರಡಿ ಹಿಡಿಯುತ್ತಾ ಇದು ‘ಎಕ್ಸ್ ಕ್ಲೂಸಿವ್’ ಆದರೂ ಏರ್ ಆಗುವುದು ಬೇಡ ಎಂದು ಬದಿಗೆ ಸರಿಸುತ್ತಾ ನಿಂತಿದ್ದೆ.
ಕಲ್ಲು ಹೊಡೆದ, ಬೆಂಕಿ ಹಚ್ಚಿದ, ಒಂದು ಸಾವಿನ ಘನತೆಯನ್ನು ಕಿತ್ತುಕೊಂಡವರ ಕೈಗಳ ರಕ್ತ ನಮ್ಮ ಕೈಗೂ ಮೆತ್ತುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೆವು.
ವಿಷ್ಣುವರ್ಧನ್ ಚಿರ ನಿದ್ರೆಯಲ್ಲಿದ್ದಾಗ ಅವರನ್ನು ಹಿಗ್ಗಾಮುಗ್ಗಾ ಚಿತ್ರಿಸಿದ, ಅಂತ್ಯಸಂಸ್ಕಾರಕ್ಕೂ ನೇರ ಪ್ರಸಾರದ ‘ಗರಿ’ ತೊಡಿಸಿದ, ಪುರೋಹಿತರ ಕೈಗೇ ಮೈಕ್ ನೀಡಿದ ದೃಶ್ಯಗಳು ಸುಳಿ ಸುಳಿಯುತ್ತಾ ಹೋದಾಗ ಇದೆಲ್ಲಾ ನೆನಪಾಯಿತು.
ಮಾಧ್ಯಮ ಮನೆಯಲ್ಲಿ ಸಾವಿನ ಸೂತಕವಿಲ್ಲ.
—–
೧೦ ವರ್ಷದ ಹಿಂದೆ ‘ಮೀಡಿಯಾ ಮಿರ್ಚಿ’ಗಾಗಿ
ಬರೆದ ಅಂಕಣ ಬರಹ
ತುಮಕೂರು:
ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಸಾಲಗಳ ಇಎಂಐ ಕಟ್ಟಲು ಆರು ತಿಂಗಳು ಮುಂದೂಡಿದ ಅವಕಾಶವನ್ನು ಆರ್‌ಬಿಐ ಕೊಟ್ಟಿದೆ.
ಆದರೆ, ಈ ಆರು ತಿಂಗಳಲ್ಲಿ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂಬ ಒತ್ತಾಯ ಇತ್ತು.
ಈ ಬಗ್ಗೆ ಶುಕ್ರವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮರುಪಾವತಿ ನಿಷೇಧದ ಆರು ತಿಂಗಳವರೆಗೆ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸಾಲ ಮರುಪಾವತಿಯ ಮೇಲಿನ ನಿಷೇಧದ ಸಂದರ್ಭದಲ್ಲಿ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಎಸ್‌ಬಿಐ, ಬಡ್ಡಿ ಮನ್ನಾ ಮಾಡಲಾಗುವುದಿಲ್ಲ ಎಂದು ಹೇಳಿದೆ.

ಬಡ್ಡಿ ಮನ್ನಾ ಕುರಿತಂತೆ ಮೂರು ದಿನಗಳಲ್ಲಿ ವಿವರವಾದ ಉತ್ತರ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಪ್ರಕರಣವನ್ನು ಜೂನ್ 17 ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ನಿಗದಿಪಡಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಮತ್ತು ಎಮ್.ಆರ್.ಶಾ ಅವರು ಅರ್ಜಿಯ ವಿಚಾರಣೆ ನಡೆಸಿದ್ದರು.
Publicstory.in
ತುಮಕೂರು: ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ಜಿಲ್ಲೆಯ 6 ತಾಲ್ಲೂಕುಗಳು ಮರುಭೂಮಿಯಾಗಲಿವೆ ಎಂಬ ಆತಂಕದ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಹಿರಂಗಪಡಿಸಿದ್ದಾರೆ.
ರೈತರು ತಮ್ಮ ಕೃಷಿ ಜಮೀನಲ್ಲಿ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಒಂದೇ ಬಗೆಯ ಬೆಳೆಯ ಮೇಲೆ ಅವಲಂಬಿಸದೆ ವಿವಿಧ ರೀತಿಯ ಬೆಳೆಯನ್ನು ಬೆಳೆಯಬೇಕು. ಇದರಿಂದ ವಾತಾವರಣ ತಂಪಾಗಿ ಕಾಲಕಾಲಕ್ಕೆ ಮಳೆ ಬಿದ್ದು, ಉತ್ತಮ ಗಾಳಿ ದೊರೆಯುವುದಲ್ಲದೆ ನೀರಿಗೆ ಸಮಸ್ಯೆಯಾಗದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು.
ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಭೂಮಿ ಮೇಲೆ ನೀರು ಮತ್ತು ಗಾಳಿಯನ್ನು ಉತ್ಪಾದಿಸುವ ಯಾವುದೇ ವ್ಯಕ್ತಿ-ಶಕ್ತಿ ಇನ್ನು ಹುಟ್ಟಿಕೊಂಡಿಲ್ಲ ಎಂದರು. ಮರವನ್ನು ಮಾರಿ ಮಕ್ಕಳ ಮದುವೆ ಮಾಡುವ ಕಾಲವೊಂದಿತ್ತು ಎಂದು ಸ್ಮರಿಸಿದರು.
ರೈತರು ತೆಂಗು, ಅಡಿಕೆಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಸುವ ಭರದಲ್ಲಿ ತೋಟದಲ್ಲಿದ್ದ ಹಲಸು, ಮಾವು, ಹೊಂಗೆ, ಬೇವಿನ ಮರಗಳನ್ನು ನಾಶಪಡಿಸಲಾಗುತ್ತಿದೆ. ಇದರಿಂದಲೂ ತಾಪಮಾನ ಏರಿಕೆಯಾಗತ್ತಿದೆ ಎಂದರು.
ಜಿಲ್ಲೆಯ ಅಂತರ್ಜಲ ಮಟ್ಟ 1200 ಅಡಿ ಆಳಕ್ಕೆ ಕುಸಿದಿದೆ. ಅಂತರ್ಜಲ ಮಟ್ಟದ ಹೀಗೆ ಕುಸಿಯುತ್ತಿದ್ದರೆ ಜಿಲ್ಲೆಯು ಶಾಶ್ವತ ಮರಳುಗಾಡಾಗುವುದರಲ್ಲಿ ಸಂಶಯವಿಲ್ಲ. ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ ಎಂದರು.
ಈ ನಿಟ್ಟಿನಲ್ಲಿ ಅಂತರ್ಜಲ ಸಂರಕ್ಷಣೆಯಾಗಬೇಕು. ರಾಜ್ಯದ ಅಂತರ್ಜಲ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಅಟಲ್ ಭೂಜಲ್ ಯೋಜನೆಯಡಿ 1230 ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದು ತಿಳಿಸಿದರು.
ಸಿದ್ದನಹಟ್ಟಿ (ತುರುವೇಕೆರೆ): ಸಮಾಜದ ಒರೆಕೋರೆಗಳನ್ನು ತಿದ್ದುವ ಕೆಲಸದ ಜೊತೆಗೆ ಸಾಮಾಜಿಕ ಕಳಿಕಳಿಯನ್ನು ಮನೋಜ್ಞವಾಗಿ ‘ಸೂತಕ’ ಚಿತ್ರದ ಮೂಲಕ ತೆರೆಯಮೇಲೆ ತರುವ ಪ್ರಯತ್ನವನ್ನು ಮಾಡಲಾಗುವುದೆಂದು ಚಿತ್ರದ ನಾಯಕನಟ ಹಾಗೂ ನಿರ್ದೇಶಕ ನಂದೀಶ್ಕುಮಾರ್ ತಿಳಿಸಿದರು.
ತಾಲೂಕಿನ ವಿವಿಧೆಡೆ ‘ಸೂತಕ’ ಚಿತ್ರತಂಡ ಚಿತ್ರೀಕರಣ ನಡೆಸಲು ಮುಂದಾದ ವೇಳೆ ಸಿದ್ದನಹಟ್ಟಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಚಿತ್ರದ ಬಹುಮುಖ್ಯ ಆಶಯ ಬಗ್ಗೆ ಆಸ್ಥೆ ತೋರಿ ಮಾತನಾಡಿದರು.
ನಾನು ಸಾದ್ಯವಾದಷ್ಟೂ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಂಬ ಹಂಬಲ. ಸಮಾಜದಲ್ಲಿನ ಅನಿಷ್ಟ ಪದ್ದತಿಗಳಿಂದ ಆಗುತ್ತಿರುವ ಪರಿಣಾಮಗಳು ಹಾಗೂ ಅನಿಷ್ಟ ಪದ್ದತಿಗಳ ನಿರ್ಮೂಲನೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಕುರಿತು ಚಿತ್ರವನ್ನು ಮಾಡಲಾಗುತ್ತಿದೆ.
ಗ್ರಾಮೀಣ ಸೊಗಡಿನ ಚಿತ್ರವಾಗಿರುವುದರಿಂದ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಈಗಾಗಲೇ ಭೇಟಿ ನೀಡಿದ್ದು, ನಮ್ಮ ಚಿತ್ರಕ್ಕೆ ಸರಿ ಹೊಂದುವಂತಹ ಹಳ್ಳಿ ಪರಿಸರವನ್ನು ಹುಡುಕುವಂತಹ ಪ್ರಯತ್ನದಲ್ಲಿ ನಮ್ಮ ಚಿತ್ರತಂಡವಿದೆ ಎಂದರು.
ಚಿತ್ರದ ಸಹನಿರ್ಮಾಪಕ ವಿದ್ಯಾರಣ್ಯ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಚಿತ್ರೋದ್ಯಮದಲ್ಲಿ ಇದು ನನ್ನ ಮೊದಲ ಪ್ರಯತ್ನವಾದರೂ ಸಾಮಾಜಿಕ ಕಳಕಳಿಯ ಜೊತೆಗೆ ಸಾಮಾಜಿಕ ಬದಲಾವಣೆ ತರುವ ಚಿತ್ರವಾದ್ದರಿಂದ ಸಹ ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ ಎಂದರು.
ಈ ವೇಳೆ ಸ್ಥಳೀಯ ಮುಖಂಡರಾದ ಹಟ್ಟಿಹಳ್ಳಿ ಪುಟ್ಟಣ್ಣ, ತೋವಿನಕೆರೆ ಪಟೇಲ್, ಗೋಪಾಲಯ್ಯ ಮತ್ತು ಚಿತ್ರತಂಡದ ಸದಸ್ಯರಿದ್ದರು.