Sunday, December 7, 2025
Google search engine
Home Blog Page 21

ಕಾನೂನುಗಳ ಜಾರಿ ನಂತರವೂ ನಿಲ್ಲದ ಮಹಿಳೆಯರ ಮೇಲಿನ ದೌರ್ಜನ್ಯ


ತುಮಕೂರು:ಮಹಿಳೆಯರು ಹಾಗೂ ಮಕ್ಕಳ ಮೇಲೆ ಹೆಚ್ಚಿನ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಬಾದಾಮಿ ಹಿರಿಯ ಸಿವಿಲ್ ನ್ಯಾಯಾದೀಶರಾದ ವಿ ಹನುಮಂತಪ್ಪ ವಿಷಾದ ವ್ಯಕ್ತಪಡಿಸಿದರು.


ನಗರದ ಸೂಫಿಯ ಕಾನೂನು ವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ನಡೆದ “ಮಾನವ ಹಕ್ಕುಗಳಡಿಯಲ್ಲಿ ಮಹಿಳೆಯರ ಹಕ್ಕುಗಳು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ರಾಮಾಯಣ, ಮಹಾಭಾರತದ ಕಾಲದಿಂದಲೂ ಮಹಿಳೆಯರ ಮೇಲಿನ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆಯುತ್ತಲೇ ಬಂದಿದೆ. ತಂತ್ರಜ್ಞಾನ ಮುಂದುವರೆದಿರುವ 21 ನೇ ಶಶತಮಾನದಲ್ಲಿಯೂ ಪುರುಷ ಪ್ರಧಾನ ಮನಸ್ಥಿತಿಯನ್ನು ಯುವ ಪೀಳಿಗೆ ಮೇಲೆ ಅರಿವಿಲ್ಲದೆ ಹೇರಲಾಗುತ್ತಿದೆ. ಅದರ ಪರಿಣಮ ಭ್ರೂಣದಲ್ಲಿಯೇ ಹೆಣ್ಣು ಮಗುವನ್ನು ಹತ್ಯೆ ಮಾಡುವಂತಹ ಕ್ರೂರ ಮನಸ್ಥಿತಿಯನ್ನು ಸಮಾಜ ಬೆಳೆಸಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಹೆಣ್ಣಿನ ಹುಟ್ಟಿಗೆ ಪುರುಷನೇ ಕಾರಣ ಎನ್ನುವ ವೈಜ್ಞಾನಿಕ ಅರಿವನ್ನು ಜನತೆಗೆ ತಲುಪಿಸುವ ಕೆಲಸ ಕಾನೂನು ವಿದ್ಯಾರ್ಥಿಗಳು ಮಾಡಬೇಕಿದೆ. ಸಾಕು ಪ್ರಾಣಿ ಆಯ್ಕೆಯಿಂದ ಮಗುವಿನ ಆಯ್ಕೆಯನ್ನೂ ಪುರುಷ ಪ್ರೇರಿತವಾಗಿಯೇ ಇರುತ್ತವೆ. ಹೆಣ್ಣಿನ ಪ್ರಾಮುಖ್ಯತೆ ಮತ್ತು ಪ್ರಾಧಾನ್ಯತೆಯನ್ನು ಸಮಾಜ ಕಡೆಗಣಿಸಿದೆ ಎಂದು ತಿಳಿಸಿದರು.


ತುಮಕೂರು ವಕೀಲರ ಸಂಘದ ಅಧ್ಯಕ್ಷ ಎಚ್ ಕೆಂಪರಾಜಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಕೀಲ ವೃತ್ತಿ ವಿಶ್ವ ಮನ್ನಣೆಯನ್ನು ಪಡೆದಿದ್ದು, ಕಠಿಣ ಶ್ರಮ ಮತ್ತು ಪ್ರಾಮಾಣಿಕತೆಯಿಂದ ಸಾಧನೆ ಸಾಧ್ಯ ಎಂದರು.


ಪ್ರಾಂಶುಪಾಲ ಡಾ. ಎಸ್. ರಮೇಶ ಅವರು ಮಾತನಾಡಿ, ಸಂವಿಧಾನದ ಪ್ರಾಸ್ಥಾವಿಕ ನುಡಿಯಲ್ಲಿಯೇ ಸಮಾನತೆಯನ್ನು ಕಲ್ಪಿಸಲಾಗಿದೆ. ಆದರೂ ಸಹ ಎಲ್ಲೆಡೆ ಅಸಮಾನತೆ ತಾಂಡವಾಡುತ್ತಿದೆ. ಅಸಮಾನತೆಯನ್ನು ಹೋಗಲಾಡಿಸಲು ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕರೆ ನೀಡಿದರು.


ಉಪಪ್ರಾಂಶುಪಾಲರಾದ ಟಿ ಓಬಯ್ಯ, ಉಪನ್ಯಾಸಕರಾದ ಮಮತ, ಕಾಶಿಫ್, ಶ್ವೇತ, ಗ್ರಂಥಪಾಲಕ ಸುಬ್ರಹ್ಮಣ್ಯ, ಅದೀಕ್ಷಕ ಜಗದೀಶ್ ಉಪಸ್ಥಿತರಿದ್ದರು.

ಬ್ರಹ್ಮಸಂದ್ರ ರಥೋತ್ಸವ

0

ಶಿರಾ ತಾಲೂಕಿನ ಬ್ರಹ್ಮಸಂದ್ರ ಹನುಮಂತನಗರ ಗ್ರಾಮದಲ್ಲಿ ಶ್ರೀ ಬಯಲಾಂಜನೇಯ ಸ್ವಾಮಿ ದೇವರ 12ನೇ ವರ್ಷದ ಬ್ರಹ್ಮರಥೋತ್ಸವ ವು ಬಹಳ ವಿಜೃಂಭಣೆಯಿಂದ ನಡೆಯಿತು.

ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥೋತ್ಸವವನ್ನು ಸಂತಸದಿಂದ ಆಚರಿಸಿದರು.

ಬ್ರಹ್ಮಸಂದ್ರ ಗೊಲ್ಲರಹಟ್ಟಿಯ ಯಾದವ ಬಂಧುಗಳಿಂದ ತೇರಿಗೆ ಹಾಲೆರೆದರು. ಬ್ರಾಹ್ಮಣರು ಮತ್ತು ವೈಶ್ಯ ಬಂಧುಗಳಿಂದ ಆರತಿ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಬಯಲಾಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಮತ್ತು ಧಾರ್ಮಿಕ ಸೇವಾ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರುಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.

ಚಿತ್ರ ಕಣಜ

ನಾಡೋಜ ಡಾ. ವೂಡೇ ಪಿ ಕೃಷ್ಣ ಅವರ ವಿವಿಧ ಸಂದರ್ಭಗಳಲ್ಲಿ ತೆಗೆದ ಪೋಟೋಗಳು ಇಲ್ಲಿವೆ.

ವೂಡೇ ಪ್ರತಿಷ್ಠಾನದಲ್ಲಿ ನಾಡೋಜ ವೂಡೇ ಪಿ ಕೃಷ್ಞ
ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರದಲ್ಲಿ
ಹೆಚ್ ಎಂ ಆರ್ ಆಯೋಜಿಸಿದ್ದ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ

ಮಧ್ಯಸ್ಥಿಕೆಯಲ್ಲೇ ನ್ಯಾಯ ಸುಲಭ: ಜಿಲ್ಲಾ ಪ್ರಧಾನ ನ್ಯಾಯಾದೀಶ ಜಯಂತಕುಮಾರ್

Publicstory

ತುಮಕೂರು: ಲೋಕಾ ಅದಾಲತ್ ನಡೆಸುವ ಮದ್ಯಸ್ಥಿಕೆಯಿಂದ ಸುಲಭ ನ್ಯಾಯದಾನ ಪಡೆಯಲು ಸಾಧ್ಯ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ. ಜಯಂತ ಕುಮಾರ್ ಹೇಳಿದರು.

ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಪ್ರಥಮ ತರಗತಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಲವು ಕ್ಲಿಷ್ಟಕರ, ನಾಜೂಕಿನ ಪ್ರಕರಣಗಳನ್ನು ಸಾಮಾನ್ಯ ನ್ಯಾಯದಾನದಲ್ಲಿ ಬಗೆಹರಿಸಲು ಕಷ್ಟಸಾಧ್ಯ. ಇಂತಹ ಪ್ರಕರಣಗಳು ಅತಿ ಸುಲಭವಾಗಿ ಮಧ್ಯಸ್ಥಿಕೆ ಮೂಲಕ ಹೇಗೆ ಬಗೆಹರಿಸಬಹುದಾಗಿದೆ ಎಂಬುದನ್ನು ಕತೆಯ ಮೂಲಕ ಮನವರಿಕೆ ಮಾಡಿಕೊಟ್ಟರು.

ಕಥೆಗಳ ಮೂಲಕವೇ ವಿದ್ಯಾರ್ಥಿಗಳಿಗೆ ಕಾನೂನು ಪರಿಚಯ ಮಾಡಿಕೊಟ್ಟ ನ್ಯಾಯಾಧೀಶರ ವಾಕ್ ಲಹರಿಗೆ ವಿದ್ಯಾರ್ಥಿಗಳು ತಲೆದೂಗಿದರು‌.

ಜನರು ತಮ್ಮ ತಮ್ಮ ಪಾತ್ರಗಳಿಗೆ ಅಂಟಿಕೊಳ್ಳಬಾರದು. ಬದುಕಿನ ಸನ್ನಿವೇಷ, ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುವುದನ್ನು ಕಲಿತರೆ ಬದುಕು ಸುಖಮಯವಾಗಿರಲಿದೆ ಎಂದರು.


ಹೆಣ್ಣು ಒಬ್ಬ ತಾಯಿಯಾಗಿ, ತಂಗಿ, ಹೆಂಡತಿಯಾಗಿ ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ಈ ಯಾವ ಪಾತ್ರಗಳಿಗೂ ಅಂಟಿಕೊಳ್ಳುವುದಿಲ್ಲ. ಆದರೆ ಅತ್ತೆಯ ಪಾತ್ರಕ್ಕೆ ಒಂದಾಗ ಅಂಟಿಕೊಳ್ಳುತ್ತಾರೆ. ಇದುವೇ ಅತ್ತೆ, ಸೊಸೆಯ ಗಲಾಟೆಗೆ ಕಾರಣವಾಗುತ್ತದೆ ಎಂದರು.

ಪ್ರಾಮಾಣಿಕತೆ, ಬದ್ಧತೆ, ತಾಳ್ಮೆ, ಸಹನೆ ಇದ್ದಲ್ಲಿ ಸಾಧನೆಯೂ ಸಾಧ್ಯ, ಸುಖಮಯ ಜೀವನವೂ ಸಾಧ್ಯ ಎಂದರು.

ನೀವು ಮರಗಳಾಗಿ ಬೆಳೆಯಿರಿ. ಬೇರೆಯವರಿಗೂ ಆಶ್ರಯದಾತರಾಗಿ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ನೂರುನ್ನೀಸಾ ಅವರು ಮಾತನಾಡಿ,

ಸುಫಿಯಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಕಂಡರೆ ನನಗೆ ಮೆಚ್ಚು. ಕಾನೂನು ಸೇವಾ ಪ್ರಾಧಿಕಾರದ ಕೆಲಸಗಳಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಮಾಡಿರುವ ಕೆಲಸ ಅಚ್ಚುಮೆಚ್ಚಿನದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ಯುವ ಜನತೆ ದಾರಿ ತಪ್ಪಿ ನಡೆಯುತ್ತಿದೆ. ಇದು ಸಮಾಜದ ಅಲ್ಲೋಲ, ಕಲ್ಲೋಲಕ್ಕೆ ಕಾರಣವಾಗುತ್ತಿದೆ. ಕಾನೂನು ಸೇವಾ ಪ್ರಾಧಿಕಾರಕ್ಕೆ ಮಕ್ಕಳ ಸಮಸ್ಯೆಗಳನ್ನು ಹೊತ್ತು ತರುವ ಪೋಷಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಡಾ. ರಮೇಶ್ ಮಾತನಾಡಿ, ಕಾನೂನು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನ್ಯಾಯಬದ್ಧತೆ, ಸಾಮಾಜಿಕ ನ್ಯಾಯ, ಪಾರದರ್ಶಕತೆ, ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಎಚ್ ಎಂ ಎಸ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ, ಉಪ ಪ್ರಾಂಶುಪಾಲ ಓಬಯ್ಯ, ಪ್ರಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ತಬಸಮ್, ಕಾಶಿಪ್, ಶ್ರೀನಿವಾಸ್, ಗ್ರಂಥಪಾಲಕ ಸುಬ್ಬು, ಸೂಪರಿಡಿಂಡ್ ಟೆಂಟ್ ಜಗದೀಶ್ ಇತರರು ಇದ್ದರು.

ಲೋಕಾಯುಕ್ತ ಬಲೆಗೆ ವೈದ್ಯಾಧಿಕಾರಿ

0

ಲೋಕಾಯುಕ್ತ ಬಲೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹರಿಪ್ರಸಾದ್

ತುರುವೇಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಅವರು ಹೆರಿಗೆ ಸಂಬಂಧ 3 ಸಾವಿರ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಗುರುವಾರ ರಾತ್ರಿ ಸಿಕ್ಕಿ ಬಿದ್ದಿದ್ದಾರೆ.

ತುಮಕೂರಿನ ಹನುಮಂತರಾಯಪ್ಪನಿಗೆ ತುರುವೇಕೆರೆಯಲ್ಲಿ ಸಂಬಂಧಿಗಳು ಇದ್ದುದರಿಂದ ತಮ್ಮ ಮಗಳಾದ ಅಂಕಿತಾಳನ್ನು ಹೆರಿಗೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಡಿ.19ರಂದು ದಾಖಲಿಸಿ ಹೆರಿಗೆ ಮಾಡಿಸಿದ್ದರು.

3 ಸಾವಿರ ಹಣ ನೀಡಿದರೆ ಗುರುವಾರ ಡಿಸ್ಚಾರ್ಜ್ ಮಾಡುವುದಾಗಿ ಹೆರಿಗೆ ವೈದ್ಯ ಮತ್ತು ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಹನುಮಂತರಾಯಪ್ಪನಿಗೆ ಲಂಚಕ್ಕಾ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಹನುಮಂತರಾಯಪ್ಪ ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ಸಹ ನೀಡಿದ್ದರು. ಗುರುವಾರ ಸಂಜೆ ರೋಗಿಯ ತಂದೆಯಿಂದ 3 ಸಾವಿರ ಹಣವನ್ನು ಪಡೆಯುವಾಗ ವೈದ್ಯರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತರು ವೈದ್ಯರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ಗಳಾದ ರಾಮರೆಡ್ಡಿ, ಸಲೀಂ ಅಹಮದ್, ಮತ್ತು ಶಿವರುದ್ರಪ್ಪ ಮೇಟಿ ಸೇರಿ ಸಿಬ್ಬಂದಿ ಇದ್ದರು.

ತುರುವೇಕೆರೆ ಈಗ ಬರಪೀಡಿತ: ಏನ್ನೆಲ್ಲ ಸೌಲಭ್ಯ ಸಿಗಲಿವೆ ಗೊತ್ತಾ

0

ತುರುವೇಕೆರೆ:
ತಾಲ್ಲೂಕನ್ನು ಬರಪೀಡತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಳೆಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಸಂದಾಯ ಮಾಡುವ ಉದ್ದೇಶದಿಂದ ಪ್ರತಿಯೊಬ್ಬ ರೈತರೂ ಸಹ ಎಫ್.ಐ.ಡಿ ನಂಬರ್ ಅನ್ನು ಸೃಜಿಸಿ; ಫ್ರೂಟ್ ಗೆ ಲಿಂಕ್ ಮಾಡಿಸಬೇಕೆಂದು ತಾಲ್ಲೂಕು ದಂಡಾಧಿಕಾರಿ ವೈ.ಎಂ.ರೇಣುಕುಮಾರ್ ರೈತರಲ್ಲಿ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಯೊಬ್ಬ ರೈತರೂ ಕೂಡ ತಮ್ಮ ವಿವಿಧ ಜಮೀನುಗಳ ಸವರ್ೇ ನಂಬರ್ರನ್ನೊಳಗೊಂಡ ಎಫ್.ಐ.ಡಿ ನಂಬರ್ ಮಾಡಿಸಿ ಅದನ್ನು ಸರ್ಕಾರ ನಿಗಧಿಪಡಿಸಿದ ಫ್ರೂಟ್ ತಂತ್ರಾಂಶಕ್ಕೆ ಜೊಡಣೆ ಮಾಡಬೇಕಿದೆ.
ಅದಕ್ಕಾ ಪ್ರತಿ ಗ್ರಾಮಗಳಿಗೆ ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಕೃಷಿ ಇಲಾಖಾ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಪಶುಪಾಲಾ ಇಲಾಖೆಯವರು ಕೂಡಿ ಸಾರ್ವಜನಿಕರು, ರೈತರ ಮನೆಬಾಗಿಲಿಗೆ ಬರಲಿದ್ದು ಅವರಿಗೆ ರೈತರು ತಮ್ಮ ಜಮೀನುಗಳಿಗೆ ಸಂಬಂಧಪಟ್ಟ, ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು.
ಹಾಗಾಗಿ ನನ್ನನ್ನೂ ಒಳಗೊಂಡಂತೆ ಪ್ರತಿದಿನ 6 ಗಂಟೆಗೇ ರೈತರ ಮನೆಬಾಗಿಲಿಗೆ ಬರುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು ಎಲ್ಲ ಅಧಿಕಾರಿಗಳು ಶ್ರವಹಿಸಿ, ಬದ್ಧತೆಯಿಂದ ಕೆಲಸ ಮಾಡೋಣ.
1.1.2024ಕ್ಕೆ 18 ವರ್ಷ ತುಂಬಿದ ಯುವಕರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು ಅರ್ಹತೆ ಇರುವ ಯುವಕ, ಯುವತಿಯರು ತಮ್ಮ ಮತಗಟ್ಟೆ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಬಳಿ ಸೂಕ್ತ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಿ ನಂತರ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ, ಇಲ್ಲವೋ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣಾ ಶಾಖೆಯ ಅಧಿಕಾರಿ ಪಿ.ಕಾಂತರಾಜು, ಪ್ರಥಮ ದಜರ್ೆ ಸಹಾಯಕಿ ಎ.ಆರ್.ವತ್ಸಲಾ, ಶಿರಸ್ಥೆದಾರ್ ಡಿ.ಆರ್,ಸುನಿಲ್ ಕುಮಾರ್ ಇದ್ದರು.

ತುರುವೇಕೆರೆ ಗಣಪ: ಏನಿದರ ವಿಶೇಷ

0

ತುರುವೇಕೆರೆ: ಪಟ್ಟಣದ ಪ್ರಸಿದ್ಧ ಸತ್ಯಗಣಪತಿಯನ್ನು ಸಾಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಮಂಗಳವಾರ ಸಂಜೆ ತುರುವೇಕೆರೆ ಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ವಿಸರ್ಜನೆ ಮಾಡಲಾಯಿತು.


ಪಟ್ಟಣದ ಸತ್ಯಗಣಪತಿ ಸ್ವಾಮಿಯನ್ನು ಗೌರಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಿ ದಿನ ನಿತ್ಯ ಪೂಜಾ ಕಾರ್ಯಗಳು ನಡೆಯುತ್ತಿದ್ದವು.

ಜಾತ್ರೆಯ ಅಂಗವಾಗಿ ಕಳೆದ ಹದಿನೈದು ದಿನಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಸರ್ಜನ ಮಹೋತ್ಸವದ ಅಂಗವಾಗಿ ಪಟ್ಟಣದ ಎಲ್ಲ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರು.

ಇಡೀ ಪಟ್ಟಣವೇ ಹೂ ಹಾಗೂ ದೀಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು.
ಸೋಮವಾರ ಸಂಜೆ ಮಹಾಮಂಗಳಾರತಿಯೊಂದಿಗೆ ಭವ್ಯವಾದ ಪುಷ್ಫ ಮಂಟಪದ ವಿಶೇಷ ಅಲಂಕಾರದೊಂದಿಗೆ ಸತ್ಯಗಣಪತಿಯನ್ನು ಕುಳ್ಳರಿಸಿ ಪಟ್ಟಣದ ರಾಜ ಬೀದಿಗಳಲ್ಲಿ ಸಂಚರಿಸಿ ಉತ್ಸವ ಮಾಡಲಾಯಿತು.

ಗ್ರಾಮ ದೇವತೆ ಉಡಸಲಮ್ಮ ದೇವಿಯನ್ನು ಸಹ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಮಾಡಲಾಯಿತು.
ಮೆರವಣಿಗೆ ವೇಳೆ ಕೀಲು ಕುದುರೆ, ಚಂಡೆವಾದ್ಯ, ಹುಲಿವೇಷಧಾರಿಗಳ ನೃತ್ಯ ಪ್ರದರ್ಶನ, ಡಿಜಿ ಸೌಂಡ್, ದೊಳ್ಳು ಕುಣಿತ, ನಾಸಿಕ್ ಬ್ಯಾಂಡ್ ಆರ್ಕೆಸ್ಟ್ರಾ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಜಾತ್ರೆಗೆ ಮೆರುಗು ತಂದಿದ್ದವು. ಯುವಕ ಯುವತಿಯರು ಡಿಜೆ ಸೌಡ್ಗೆ ಕುಣಿದು ಕುಪ್ಪಳಿಸಿದರು.

ಶಿವಶಕ್ತಿ ಕಲಾವಿದರು ಹಾಗೂ ಸತ್ಯಗಣಪತಿ ಗ್ರಾಮಾಂತರ ಕಲಾಮಂಡಳಿಯಿಂದ ಪಟ್ಟಣದ ಬೆಸ್ಕಾಂ ಆವರಣದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯಿತು.
ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ ರಾಮಧೂತ ಸೇನೆ ಟ್ರಸ್ಟ್ ವತಿಯಿಂದ 30 ಅಡಿಗಳ ಆಂಜನೇಯ ಕಟೌಟರ್ ಪ್ರೇಕ್ಷಕರನ್ನು ಆಕರ್ಷಿಸಿತು.

ಪಟ್ಟಣದ ಹಲವು ಸಂಘ ಸಂಸ್ಥೆಗಳು, ವ್ಯಾಪಾರಿಗಳು, ನಾಗರಿಕರು ಗಣೇಶನಿಗೆ ವಿವಿಧ ರೀತಿಯ ಬೃಹತ್ ಹಾರ ಹಾಕಿ ಪೂಜೆ ಸಲ್ಲಿಸಿ ಜೊತೆಗೆ ಭಕ್ತಾದಿಗಳಿಗೆ ತಿಂಡಿ, ಕಾಫಿ, ಟೀ, ಹಾಲು, ಪಾನಕ ಫಲಹಾರ, ವಿತರಿಸಿ ತಮ್ಮ ಭಕ್ತಿ ಭಾವ ಮೆರೆದರು.
ಗಣಪತಿ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಸಂಜೆ ಮಹಾ ಮಂಗಳಾರತಿಯೊಂದಿಗೆ ಕೆರೆಯಲ್ಲಿ ಸತ್ಯಗಣಪತಿಯನ್ನು ತೆಪ್ಪದಲ್ಲಿ ಕುಳ್ಳಿರಿಸಿ ಅಮೋಘ ಸಿಡಿ ಮದ್ದು ಸಿಡಿಸುವುದರೊಂದಿಗೆ ವಿಸರ್ಜಿಸಲಾಯಿತು. ಸಾವಿರಾರು ಭಕ್ತರು ಆಗಮಿಸಿದ್ದರು. ಗುರು ಭವನ ಆವರಣದಲ್ಲಿದ್ದ ಜಾಯಿಂಟ್ವೀಲ್ ನಂತಹ ಅನೇಕ ಆಟೋಪಕರಣಗಳಿದ್ದು ಪೋಷಕರು, ಮಕ್ಕಳು ಆಟಗಳಲ್ಲಿ ಪಾಲ್ಗೋಂಡು ಖುಷಿಪಟ್ಟರು.


ಈ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಕಾರ್ಯದರ್ಶಿ ಟಿ.ಎನ್ ನಾಗರಾಜು, ಪ.ಪಂ.ಸದಸ್ಯ ಎನ್.ಆರ್.ಸುರೇಶ್ ಮುಖಂಡರಾದ ಟಿ.ಎನ್.ಸತೀಶ್, ಸಂಗಲಾಪುರ ಶಿವಣ್ಣ, ಮಲ್ಲಿಕ್, ಚಂದ್ರು ದೇವರ ದರ್ಶನ ಪಡೆದರು ಹಾಗು ಸಿಪಿಐ ಲೋಹಿತ್, ಪಿಎಸ್ಐ ಗಣೇಶ್ ಪೊಲೀಸ್ ಬಂದೂ ಬಸ್ತ್ ವಹಿಸಿದ್ದರು.

ಡಿ.23ಕ್ಕೆ ಸಂಪಿಗೆ ಶ್ರೀನಿವಾಸ ಸ್ವಾಮಿ ವೈಕುಂಠ ಏಕಾದಶಿ ಮಹೋತ್ಸವ

0

ತುರುವೇಕೆರೆ: ಸುಮಾರು 600 ವರ್ಷಗಳ ಇತಿಹಾಸವಿರುವ ಸಂಪಿಗೆ ಗ್ರಾಮದ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಡಿ.23 ರಂದು ವೈಕುಂಠ ಏಕಾದಶಿ ಮಹೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದೇವಾಲಯದ ಧರ್ಮದರ್ಶಿ ಸಂಪಿಗೆ ಶ್ರೀಧರ್ ತಿಳಿಸಿದ್ದಾರೆ.


ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀನಿವಾಸ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ದೇವಾಲಯದ ಆಚರಣಾ ಸಮಿತಿಯು ವೈಕುಂಠ ಏಕಾದಶಿ ಮಹೋತ್ಸವದ ಅಂಗವಾಗಿ ಆಹ್ವಾನ ಪತ್ರಿಕೆಗೆ ಬಿಡುಗಡೆಗೊಳಿಸಿ ಮಾತನಾಡಿದರು.


ಸಂಪಿಗೆ ಹಾಗು ಅದರ ಆಸುಪಾಸಿನ ಗ್ರಾಮಸ್ಥರುಗಳು ಕಳೆದ ಇಪ್ಪತ್ತು ದಿನಗಳಿಂದ ಸ್ವಾಮಿಯವರ ವೈಕುಂಠ ಏಕಾದಶಿ ಮಹೋತ್ಸವಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಈ ಮಹೋತ್ಸವಕ್ಕೆ ತುಮಕೂರು ಜಿಲ್ಲೆ ಅಲ್ಲದೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸಲಿದ್ದಾರೆ.


ಅಂದು ಬೆಳಗ್ಗೆ ನಾಲ್ಕು ಗಂಟೆಗೆ ಸ್ವಾಮಿಗೆ ಅಭಿಷೇಕದೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮ ವೈಕುಂಠ ದ್ವಾರ ಪ್ರವೇಶ, ಸಪ್ತ ದ್ವಾರಗಳ ದಿವ್ಯ ದರ್ಶನವಿರಲಿದೆ. ಅದೇ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ.

ಅಬ್ಬರವಿಲ್ಲದ ಭಕ್ತರ ಕಣ್ಮನ ತಣಿಸುವ ಸಿಡಿಮದ್ದಿನ ಪ್ರದರ್ಶನವಿದೆ. ಬಹಳ ಮುಖ್ಯವಾಗಿ ಶನಿವಾರ ಮುಂಜಾನೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಭಕ್ತಾಧಿಗಳಿಗೆ ನಿರಂತರ ದರ್ಶನ ಹಾಗು ಪ್ರಸಾದ ವಿನಿಯೋಗವಿರುತ್ತದೆ ಎಂದರು.


ದೇವಾಲಯ ಒಳಗೊಂಡಂತೆ ಇಡೀ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಹಾಗು ಕೇಸರಿ ಬಂಟಿಂಗ್ಸ್ ಗಳಿಂದ ಅಲಂಕಾರಗೊಳಿಸಲಾಗಿರುತ್ತದೆ. ಮುಖ್ಯ ರಸ್ತೆಯ ಇಕ್ಕೆಲೆಗಳು ಹಾಗು ದೇವಾಲಯದ ದ್ವಾರದವರೆಗೆ ಬಾಳೆ ಕಂದು ಹಾಗು ತಳಿರು ತೋರಣಗಳಿಂದ ಸಿಂಗರಿಸಲಾಗುವುದು.


ದೊಡ್ಡಗುಣಿ, ಸಂಪಿಗೆ ನಿಟ್ಟೂರು, ಕಲ್ಲೂರು ಮತ್ತು ಕಲ್ಲೂರ್ ಕ್ರ್ರಾಸ್ಗಳಿಂದ ಭಕ್ತಾಧಿಗಳು ಬರುವ ವಾಹನಗಳಿಗೆ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಭಕ್ತಾಧಿಗಳಿಗೆ ದೇವರ ದರ್ಶನ ಮಾಡಲು ಸರತಿ ಸಾಲಿನ ಬ್ಯಾರಿಕೇಟ್ಗಳ ಹಾಕಲಾಗುತ್ತಿದೆ.
ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ, ಹಾಲಿನ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಭಜನಾ ಮಂಡಳಿಗಳು ಆ ದಿವಸ ಭಜನಾ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ.

ಗುಬ್ಬಿ ತಾಲ್ಲೂಕಿನ ಸೋಮಲಾಪುರ ಮತ್ತು ಕಲ್ಲೂರ್ ಗ್ರಾಮದಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಪ್ರತಿ ವರ್ಷದಂತೆ ಈ ಬಾರಿಯೂ ದೇವರ ಸನ್ನಿದಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ರಾಜ್ಯದ ಹೆಸರಾಂತ ಜನಪದ ಗಾಯಕರಾದ ಡಾ.ಅಪ್ಪಗೆರೆ ತಿಮ್ಮರಾಜು ಅವರ ತಂಡಿದಿಂದ ಜನಫದ ಝೇಂಕಾರ್ ಕಾರ್ಯಕ್ರಮ ಭಕ್ತರ ಗಮನ ಸೆಳೆಯಲಿದೆ.


ಈ ಬಾರಿ ವಿಶೇಷವಾಗಿ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಪಂಚಾಯಿತಿಗಳಲ್ಲಿ ಪೌರ ಕಾಮರ್ಿಕರಾಗಿ ದುಡಿಯುತ್ತಿರುವ ತುರುವೇಕೆರೆ ಹಾಗು ಗುಬ್ಬಿ ತಾಲ್ಲೂಕಿನಿಂದಲೂ ಪೌರ ಕಾರ್ಮಿಕರನ್ನು ಸನ್ಮಾನ ಮಾಡಲಾಗುವುದು.

ಇದೇ ವೇಳೆ ಗುಬ್ಬಿ ತಾಲ್ಲೂಕಿನ ಕಂಚಿರಾಯ ಮತ್ತು ಕೆಂಪಮ್ಮ ದೇವಿ ಉತ್ಸವ ಕೂಡ ನಡೆಯಲಿದೆ. ಅಂದು 30 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ದೇವರ ದರ್ಶನಕ್ಕೆ ಆಗಮಿಸಲಿದ್ದು ಬಂದವರಿಗೆಲ್ಲಾ ಲಾಡು ವಿತರಿಸುವ ಕಾರ್ಯವೂ ಮಾಡಲಾಗಿದೆ.


ಒಟ್ಟಾರೆ ಕಾರ್ಯಕ್ರಮ ಯಾವುದೇ ವ್ಯತ್ಯಾಸವಾಗದಂತೆ ಮಾಡಲು 100 ಪೊಲೀಸ್, 20 ಕ್ಕೂ ಹೆಚ್ಚು ಮಹಿಳಾ ಪೊಲೀಸ್, ತುರ್ತು ಸೇವೆಗಾಗಿ ವೈದ್ಯಕೀಯ ತಂಡದ ಜೊತೆಗೆ ಒಂದು ಆಂಬ್ಯೂಲೆನ್ಸ್ ಕೆಲಸ ನಿರ್ವಹಿಸಲಿದೆ.
ತುಮಕೂರು ಮಾರ್ಗದಿಂದ ಗುಬ್ಬಿ ಸಂಪಿಗೆ ಹಾಗು ತುರುವೇಕೆರೆ ಕೊಂಡಜ್ಜಿ ಮಾರ್ಗದಿಂದ ಸಂಪಿಗೆಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ತುಮಕೂರು ಡಿಫೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸ್ವಾಮಿಯ ದರ್ಶನಕ್ಕೆ ಆಗಮಿಸಬೇಕೆಂದು ಕೋರಿದರು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಭಗವಾನ್, ಆಚರಣಾ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಬಾಬು, ಎಸ್.ಎನ್.ಯೋಗೀಶ್, ಚಿದಾನಂದ್, ಕುಮಾರ್, ಜಯಣ್ಣ, ವಿಜಯಕುಮಾರ್, ನಂದೀಶ್, ಉಮಾಶಂಕರ್, ನಂಜುಂಡಯ್ಯ, ಶ್ರೀನಿವಾಸ್, ಅಜೇಯ್, ಪ್ರದೀಪ್, ಪ್ರಕಾಶ್ ರಾವ್, ಯೋಗೀಶ್, ಆನಂದಯ್ಯ ಉಪಸ್ಥಿತರಿದ್ದರು.

ವೂಡೇ ಪ್ರತಿಷ್ಠಾನ

ಕಳೆದಸಂಚಿಕೆಯಿಂದ…….

ಡಾ. ಕೃಷ್ಣರವರ ತಂದೆ ಅಪ್ಪಟ ಗಾಂಧೀವಾದಿಗಳು. ಗಾಂಧೀಜಿಯವರ ತತ್ವ ಆದರ್ಶಗಳ ಪ್ರೇರಣೆ ಪಡೆದ ಪುಟ್ಟಯ್ಯನವರಿಗೆ ಸಮಾಜದ ಕಾರ್ಯಗಳಲ್ಲಿ ತುಂಬು ಆಸಕ್ತಿ. ಒಟ್ಟಾರೆ ಸಮಾಜದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ನಿಸ್ವಾರ್ಥ ಮನಸ್ಸಿನಿಂದ 1983ರಲ್ಲಿ ‘ವೂಡೇ ಪ್ರತಿಷ್ಠಾನ’ವನ್ನು ಪುಟ್ಟಯ್ಯನವರು ಸ್ಥಾಪಿಸಿದರು. ಪುಟ್ಟಯ್ಯನವರು ವಿದ್ಯಾರ್ಥಿಯಾಗಿದ್ದಾಗ ತಾವು ಸರ್ಕಾರದಿಂದ ಪಡೆದ ಸ್ಕಾಲರ್‌ಶಿಪ್‌ನ ಉದ್ದೇಶವನ್ನು ಗ್ರಹಿಸಿ ತಾವೂ ಅದೇ ರೀತಿಯಲ್ಲಿ ಹಲವಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕೆಂಬ ಹಂಬಲದಿಂದ ‘ವೂಡೇ ಪ್ರತಿಷ್ಠಾನ’ ಸ್ಥಾಪಿಸಿ, ಪ್ರತಿವರ್ಷ ನೂರಾರು ವೃತ್ತಿಶಿಕ್ಷಣ ಪಡೆಯುವ ಪ್ರತಿಭಾವಂತ ಆಕಾಂಕ್ಷಿಗಳಿಗೆ ವಿದ್ಯಾರ್ಥಿವೇತನ ನೀಡಲು ಪ್ರಾರಂಭಿಸಿದರು. ಆಗ ಕೃಷ್ಣರವರು ಇನ್ನೂ ವಿದ್ಯಾರ್ಥಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡುವುದರ ಜೊತೆಜೊತೆಗೆ ಪ್ರತಿಷ್ಠಾನದ ಮೂಲಕ ಆರೋಗ್ಯ ಸೇವೆ ಒದಗಿಸುವ ಕೆಲಸವನ್ನೂ ಮಾಡಿದರು. ಹಳ್ಳಿಹಳ್ಳಿಗಳಲ್ಲಿರುವ ಆರ್ಥಿಕವಾಗಿ ದುರ್ಬಲರಾದ ಮಹಿಳೆಯರನ್ನು ಗುರುತಿಸಿ ಎಂ.ಒ. ಮೂಲಕ ಅವರಿಗೆ ಪ್ರತಿ ತಿಂಗಳು ಹಣ ಕಳಿಸುವ ವ್ಯವಸ್ಥೆಯನ್ನು ಪ್ರತಿಷ್ಠಾನ ಮಾಡುತ್ತಾ ಬಂದಿದೆ.

ಜನ ಸಮುದಾಯದ ಹಿತೈಷಿ ಸಂಸ್ಥೆಗಳಾದ ಆಚಾರ್ಯ ವಿನೋಬಾಭಾವೆ ಸ್ಥಾಪಿತ ವಿಶ್ವನೀಡಂ ಟ್ರಸ್ಟ್, ಸಂತ ಜಾನ್ ಆಂಬುಲೆನ್ಸ್ ಸಂಸ್ಥೆ ಮುಂತಾದವುಗಳ ಒಡನಾಟ ಮತ್ತು ಕಾರ್ಯಭಾರಗಳು ಏನಿದ್ದರೂ, ಎಷ್ಟಿದ್ದರೂ, ಹುಟ್ಟಿದೂರು

ಮತ್ತು ಮನೆತನಗಳ ಸಂಸ್ಮರಣೆ ಮತ್ತು ಋಣ ಪಾವತಿಗಳ ಸದಾಶಯದಿಂದ ವೂಡೇ ಪ್ರತಿಷ್ಠಾನ ಇಂದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಸಂಸ್ಥಾಪಕ ಟ್ರಸ್ಟಿಯಾಗಿ ಕೃಷ್ಣರವರು ಕರ್ತವ್ಯ ನಿರ್ವಹಿಸುವಲ್ಲಿ ಇವರ ಅರ್ಪಣಾ ಮನೋಭಾವ ಅಮೋಘವಾದುದು.

ಹಾಗೂ ವೂಡೇ ಪ್ರತಿಷ್ಠಾನ ಸರ್ವೋದಯ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಸೇವಾಮನೋಭಾವದ ಹಿರಿಯರಿಗೆ ವೂಡೇ ಪ್ರತಿಷ್ಠಾನ ಪ್ರಶಸ್ತಿಗಳನ್ನು ನೀಡುವ ಗುರುತರವಾದ ಜವಾಬ್ದಾರಿಯನ್ನು ನೆರವೇರಿಸುತ್ತಾ ಬಂದಿದೆ. ಜೊತೆಗೆ ಸಮಾಜಕ್ಕೆ ಪ್ರಯೋಜನಕಾರಿಯಾಗಿ ಬದುಕಿ ಬಾಳಿದವರ ತತ್ವ ಆದರ್ಶಗಳು, ಮಾನವೀಯ ಮೌಲ್ಯಗಳು, ಸಾಮಾಜಿಕ ಪ್ರಗತಿಯ ಜವಾಬ್ದಾರಿಗಳು, ರಾಷ್ಟ್ರಪ್ರೇಮದ ಆಸಕ್ತಿಗಳು ಹೀಗೆ ಬಹುಮುಖಿಯಾದ ಅಂಶಗಳನ್ನು ಕುರಿತ ಅನೇಕ ಉಪನ್ಯಾಸಗಳನ್ನು ಏರ್ಪಡಿಸುವುದರೊಂದಿಗೆ ಅವರನ್ನು ಕುರಿತ ಪುಸ್ತಕಗಳನ್ನೂ ಪ್ರಕಟಿಸುತ್ತಿದೆ.

ಮುಂದುವರೆಯುತ್ತದೆ…….

Tumkuru: ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್

ತುಮಕೂರು: ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್‌ ಅವರು ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಜಿಲ್ಲೆಯಲ್ಲಿ ಜಿಪಂ ಸಿಐಒ ಆಗಿ ಕರ್ತವ್ಯ ನಿರ್ವಹಿಸಿದ್ದ ಶುಭ ಕಲ್ಯಾಣ್‌ ಅವರು, ಇದೀಗ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕಳೆದ ಐದು ತಿಂಗಳ ಅವಧಿಯವರೆಗೆ ಜಿಲ್ಲಾಧಿಕಾರಿಗಳಾಗಿದ್ದ ಕೆ.ಶ್ರೀನಿವಾಸ್ ಅವರು ವರ್ಗಾವಣೆಗೊಂಡಿದ್ದಾರೆ.