Thursday, October 3, 2024
Google search engine
HomeUncategorizedತುರುವೇಕೆರೆ ಗಣಪ: ಏನಿದರ ವಿಶೇಷ

ತುರುವೇಕೆರೆ ಗಣಪ: ಏನಿದರ ವಿಶೇಷ

ತುರುವೇಕೆರೆ: ಪಟ್ಟಣದ ಪ್ರಸಿದ್ಧ ಸತ್ಯಗಣಪತಿಯನ್ನು ಸಾಹಸ್ರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಮಂಗಳವಾರ ಸಂಜೆ ತುರುವೇಕೆರೆ ಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ವಿಸರ್ಜನೆ ಮಾಡಲಾಯಿತು.


ಪಟ್ಟಣದ ಸತ್ಯಗಣಪತಿ ಸ್ವಾಮಿಯನ್ನು ಗೌರಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಿ ದಿನ ನಿತ್ಯ ಪೂಜಾ ಕಾರ್ಯಗಳು ನಡೆಯುತ್ತಿದ್ದವು.

ಜಾತ್ರೆಯ ಅಂಗವಾಗಿ ಕಳೆದ ಹದಿನೈದು ದಿನಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಸರ್ಜನ ಮಹೋತ್ಸವದ ಅಂಗವಾಗಿ ಪಟ್ಟಣದ ಎಲ್ಲ ಅಂಗಡಿ ಮಾಲೀಕರು ತಮ್ಮ ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರು.

ಇಡೀ ಪಟ್ಟಣವೇ ಹೂ ಹಾಗೂ ದೀಪಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದವು.
ಸೋಮವಾರ ಸಂಜೆ ಮಹಾಮಂಗಳಾರತಿಯೊಂದಿಗೆ ಭವ್ಯವಾದ ಪುಷ್ಫ ಮಂಟಪದ ವಿಶೇಷ ಅಲಂಕಾರದೊಂದಿಗೆ ಸತ್ಯಗಣಪತಿಯನ್ನು ಕುಳ್ಳರಿಸಿ ಪಟ್ಟಣದ ರಾಜ ಬೀದಿಗಳಲ್ಲಿ ಸಂಚರಿಸಿ ಉತ್ಸವ ಮಾಡಲಾಯಿತು.

ಗ್ರಾಮ ದೇವತೆ ಉಡಸಲಮ್ಮ ದೇವಿಯನ್ನು ಸಹ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಮಾಡಲಾಯಿತು.
ಮೆರವಣಿಗೆ ವೇಳೆ ಕೀಲು ಕುದುರೆ, ಚಂಡೆವಾದ್ಯ, ಹುಲಿವೇಷಧಾರಿಗಳ ನೃತ್ಯ ಪ್ರದರ್ಶನ, ಡಿಜಿ ಸೌಂಡ್, ದೊಳ್ಳು ಕುಣಿತ, ನಾಸಿಕ್ ಬ್ಯಾಂಡ್ ಆರ್ಕೆಸ್ಟ್ರಾ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಜಾತ್ರೆಗೆ ಮೆರುಗು ತಂದಿದ್ದವು. ಯುವಕ ಯುವತಿಯರು ಡಿಜೆ ಸೌಡ್ಗೆ ಕುಣಿದು ಕುಪ್ಪಳಿಸಿದರು.

ಶಿವಶಕ್ತಿ ಕಲಾವಿದರು ಹಾಗೂ ಸತ್ಯಗಣಪತಿ ಗ್ರಾಮಾಂತರ ಕಲಾಮಂಡಳಿಯಿಂದ ಪಟ್ಟಣದ ಬೆಸ್ಕಾಂ ಆವರಣದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ನಡೆಯಿತು.
ರಾಘವೇಂದ್ರ ಹೋಟೆಲ್ ಮುಂಭಾಗದಲ್ಲಿ ರಾಮಧೂತ ಸೇನೆ ಟ್ರಸ್ಟ್ ವತಿಯಿಂದ 30 ಅಡಿಗಳ ಆಂಜನೇಯ ಕಟೌಟರ್ ಪ್ರೇಕ್ಷಕರನ್ನು ಆಕರ್ಷಿಸಿತು.

ಪಟ್ಟಣದ ಹಲವು ಸಂಘ ಸಂಸ್ಥೆಗಳು, ವ್ಯಾಪಾರಿಗಳು, ನಾಗರಿಕರು ಗಣೇಶನಿಗೆ ವಿವಿಧ ರೀತಿಯ ಬೃಹತ್ ಹಾರ ಹಾಕಿ ಪೂಜೆ ಸಲ್ಲಿಸಿ ಜೊತೆಗೆ ಭಕ್ತಾದಿಗಳಿಗೆ ತಿಂಡಿ, ಕಾಫಿ, ಟೀ, ಹಾಲು, ಪಾನಕ ಫಲಹಾರ, ವಿತರಿಸಿ ತಮ್ಮ ಭಕ್ತಿ ಭಾವ ಮೆರೆದರು.
ಗಣಪತಿ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಸಂಜೆ ಮಹಾ ಮಂಗಳಾರತಿಯೊಂದಿಗೆ ಕೆರೆಯಲ್ಲಿ ಸತ್ಯಗಣಪತಿಯನ್ನು ತೆಪ್ಪದಲ್ಲಿ ಕುಳ್ಳಿರಿಸಿ ಅಮೋಘ ಸಿಡಿ ಮದ್ದು ಸಿಡಿಸುವುದರೊಂದಿಗೆ ವಿಸರ್ಜಿಸಲಾಯಿತು. ಸಾವಿರಾರು ಭಕ್ತರು ಆಗಮಿಸಿದ್ದರು. ಗುರು ಭವನ ಆವರಣದಲ್ಲಿದ್ದ ಜಾಯಿಂಟ್ವೀಲ್ ನಂತಹ ಅನೇಕ ಆಟೋಪಕರಣಗಳಿದ್ದು ಪೋಷಕರು, ಮಕ್ಕಳು ಆಟಗಳಲ್ಲಿ ಪಾಲ್ಗೋಂಡು ಖುಷಿಪಟ್ಟರು.


ಈ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ, ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ ಕಾರ್ಯದರ್ಶಿ ಟಿ.ಎನ್ ನಾಗರಾಜು, ಪ.ಪಂ.ಸದಸ್ಯ ಎನ್.ಆರ್.ಸುರೇಶ್ ಮುಖಂಡರಾದ ಟಿ.ಎನ್.ಸತೀಶ್, ಸಂಗಲಾಪುರ ಶಿವಣ್ಣ, ಮಲ್ಲಿಕ್, ಚಂದ್ರು ದೇವರ ದರ್ಶನ ಪಡೆದರು ಹಾಗು ಸಿಪಿಐ ಲೋಹಿತ್, ಪಿಎಸ್ಐ ಗಣೇಶ್ ಪೊಲೀಸ್ ಬಂದೂ ಬಸ್ತ್ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?