Friday, May 8, 2026
Google search engine
Home Blog Page 217

ಬಿತ್ತೆನ ಶೇಂಗಾ ವಿತರಣೆಗೆ ಚಾಲನೆ

ಪಾವಗಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳಿ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಮಾಜಿ ಸಚಿವ ಹಾಗೂ ಶಾಸಕ ವೆಂಕಟರವಣಪ್ಪ ಚಾಲನೆ ನೀಡಿದರು. ರೈತರು ಬಿತ್ತನೆ ಬೀಜವನ್ನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದರು.

ತಾಲ್ಲೂಕು 6 ಕೇಂದ್ರಗಳಲ್ಲಿ ಬಿತ್ತನೆ ಶೆಂಗಾ ವಿತರಿಸಲಾಗುವುದು, ಫಹಣಿ,  ಆಧಾರ್, ಬೀಜ ಪರವಾನಗಿ, ಜಾತಿ ಪ್ರಮಾಣ ಪತ್ರ, ಎಫ್ ಐ ಡಿ ಸಂಖ್ಯೆ ನೀಡಿ  ಬೀಜ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆ.6 ಬಿತ್ತನೆ ಬೀಜ  ಸಾಮಾನ್ಯ ವರ್ಗದ ರೈತರಿಗೆ ಕ್ವಿಂಟಾಲ್ ಗೆ ರಿಯಾಯಿತಿ ಧರ  5700 ರೂ, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 4800 ರೂ. ಟಿ.ಎಂ.ವಿ 2 ಬಿತ್ತನೆ ಬೀಜಕ್ಕೆ  5900 ಸಾಮಾನ್ಯ ವರ್ಗದವರಿಗೆ 5200 ರೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಧರ ನಿಗದಿಪಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ವೆಂಕಟೇಶ್, ಪಾಪಣ್ಣ, ಗೌರಮ್ಮ,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ನಾಗರಾಜು, ಉಪ ನಿರ್ದೇಶಕ ಅಶೋಕ್, ಸಹಾಯಕ ನಿರ್ದೇಶಕಿ ವಿಜಯಮೂರ್ತಿ, ರಾಮಾಂಜಿ, ಪ್ರವೀಣ್, ಕೆಒಎಫ್ ಅಧ್ಯಕ್ಷ ರಾಮಾಂಜಿನರೆಡ್ಡಿ,  ಜಿಲ್ಲಾ ವ್ಯವಸ್ಥಾಪಕ   ಶಿವಲಿಂಗಯ್ಯ , ಬಾಲಾಜಿ, ರೈತ ಮುಖಂಡ ನರಸಿಂಹರೆಡ್ಡಿ, ಪೂಜಾರಪ್ಪ, ಕೃಷ್ಣರಾವ್, ಶಂಕರರೆಡ್ಡಿ, ಕೋಟೆ ಪ್ರಭಾಕರ್ ಇತರರು ಉಪಸ್ಥಿತರಿದ್ದರು.

‘ನನಗೆ ಒಂದು ಆಸೆ ಇದೆ’ ಎಂದರು..

ಜಿ ಎನ್ ಮೋಹನ್


‘ನನಗೆ ಒಂದು ಆಸೆ ಇದೆ’ ಎಂದರು

ವೇದಿಕೆಯ ಮೇಲೆ ಕುಳಿತಿದ್ದ ನಾನು ಥಟ್ಟನೆ ಅವರೆಡೆಗೆ ತಿರುಗಿದೆ

ಅವರು ಎಚ್ ಎನ್ ನಾಗಮೋಹನ ದಾಸ್
ಆಗ ಹೈಕೋರ್ಟ್ ನ ನ್ಯಾಯಾಧೀಶರು. ಸಾಕಷ್ಟು ಹೆಸರು ಗಳಿಸಿದವರು.

ನ್ಯಾಯಾಂಗ ಎಂದರೆ ಅದು ಒಂದು ಬೇರೆ ಲೋಕವೇ ಎನ್ನುವಂತೆ ನೂರೆಂಟು ಶಿಷ್ಟಾಚಾರ

ಅದಕ್ಕೆ ನಿಜಕ್ಕೂ ಭಾವಕೋಶವೂ ಇದೆಯೇ ಯಾರಿಗೆ ಗೊತ್ತು?

ಹಾಗಿರುವಾಗ ಈ ನ್ಯಾಯಾಧೀಶರು ಮಾತನಾಡಿದ್ದರು
ಏನಿರಬಹುದು ಎಂದು ನನಗೆ ಕುತೂಹಲವಾಯಿತು

ಈ ನ್ಯಾಯಾಧೀಶರ ಜೊತೆ ನಾನು ಸಾಕಷ್ಟು ಬಾರಿ ಮಾತನಾಡಿದ್ದೇನೆ ಕಷ್ಟ ಸುಖ ಕಣ್ಣೀರು ಲೋಕ ಎಲ್ಲದರ ಬಗ್ಗೆ

ಆದರೆ ಅವರು ಯಾವತ್ತೂ ನನಗೆ ಒಂದು ಆಸೆ ಇದೆ ಎಂದು ಹೇಳಿಕೊಂಡಿದ್ದೆ ಇಲ್ಲ

ಅವರೊಡನೆ ಮಾತನಾಡುವಾಗ ಅವರೊಬ್ಬರನ್ನು ಬಿಟ್ಟು ಜಗತ್ತನ್ನೆಲ್ಲಾ ಸುತ್ತಿ ಬರುತ್ತಿದ್ದೆವು

ಹಾಗಾಗಿಯೇ ನನಗೆ ಸಹಜವಾಗಿ ಅವರು ಅಂತರಂಗ ತೆರೆದುಕೊಳ್ಳಲು ಸಜ್ಜಾಗುತ್ತಿದ್ದಾರೆ ಅನಿಸಿದಾಗ ಆಶ್ಚರ್ಯವಾಗಿ ಹೋಯಿತು

ಏನಿರಬಹುದು? ಆ ನ್ಯಾಯದ ತಕ್ಕಡಿಯಡಿ ಕುಳಿತ, ಸದಾ ನೋವಿನ ಶಸ್ತ್ರ ಚಿಕಿತ್ಸೆ ಮಾಡಿಸುವ
ಅಂಗುಲಂಗುಲ ಕುಯ್ದು ನೋಡಿ ನ್ಯಾಯದ ಮಾತನಾಡುವ ಇವರ ಆಸೆ

ಅವರು ಮುಂದುವರಿಸಿದರು

ನಾನು ಎಷ್ಟೋ ವ್ಯಾಜ್ಯಗಳನ್ನು ನೋಡಿದ್ದೇನೆ
ಒಬ್ಬ ವಕೀಲನಾಗಿ ನಂತರ ನ್ಯಾಯಮೂರ್ತಿಯಾಗಿ
ಸಾಕಷ್ಟು ಕೊಲೆ ಸುಲಿಗೆ ಹಲ್ಲೆ ಜಗಳ ಇವೆಲ್ಲವೂ ಸಂಭವಿಸಿ ಹೋಗಿದೆ
ನೆರೆಯ ದೇಶ ನೆರೆ ರಾಜ್ಯ ನೆರೆ ಊರು ನೆರೆ ಮನೆ ಅಷ್ಟೇಕೆ ಮನೆಯೊಳಗೆ, ಅಪ್ಪ ಮಕ್ಕಳ ನಡುವೆ ಅನ್ನ ತಮ್ಮಂದಿರ ನಡುವೆ
ಆಸ್ತಿಗಾಗಿ, ಹೆಣ್ಣಿಗಾಗಿ, ರಾಗದ್ವೇಷಕ್ಕಾಗಿ

ಆದರೆ.. ಆದರೆ..
ನನಗೆ ಒಂದು ಆಸೆ ಇದೆ
ಈ ಒಂದು ಜಗಳವನ್ನು ನೋಡಬೇಕು, ಈ ಒಂದು ವ್ಯಾಜ್ಯ ಕೋರ್ಟಿನ ಮೆಟ್ಟಿಲೇರಬೇಕು ಎಂದು

ನಾನು ಆವಾಕ್ಕಾಗಿ ಹೋದೆ

ನ್ಯಾಯಾಧೀಶರು.. ಸಮಸಮಾಜ ನೆಮ್ಮದಿಯಾಗಿ ಇರಲಿ ಎಂದೇ ದಿಕ್ಸೂಚಿಗಳನ್ನು ನೀಡುವವರು ಅವರೇ ಒಂದು ವ್ಯಾಜ್ಯಕ್ಕಾಗಿ ಹಂಬಲಿಸುತ್ತಿದ್ದಾರೆ

ನ್ಯಾಯದ ತಕ್ಕಡಿ ಹಿಡಿದ ಕೈ.. ಎಂದು ಮೂಕನಾಗಿ ಅವರತ್ತಲೇ ನೋಡುತ್ತಿದ್ದೆ

ಅವರು ಹೇಳಿದರು ಒಂದು ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ಜಗಳವಾಗಬೇಕು
ಈ ಆಸ್ತಿ ನನ್ನದು ನಾನು ಬಿಟ್ಟುಕೊಡಲಾರೆ ಎಂದು
ಆ ಆಸ್ತಿಯನ್ನು ಇನ್ನೊಬ್ಬನೂ ಬಿಟ್ಟು ಕೊಡಲು ಒಪ್ಪಬಾರದು
ಈ ವ್ಯಾಜ್ಯ ಕೋರ್ಟಿಗೆ ಬರಬೇಕು

ಮನೆಯಲ್ಲಿ ಅಪ್ಪ ತನ್ನ ಜೀವಮಾನವಿಡೀ ಕೊಂಡಿಟ್ಟ ಪುಸ್ತಕಗಳ ಆಸ್ತಿಗಾಗಿ ಜಗಳವಾಗಬೇಕು
ಈ ಪುಸ್ತಕ ನನಗೆ ಸೇರಬೇಕು ನನಗೆ ಸೇರಬೇಕು ಎಂದು
ಪುಸ್ತಕ ಹಂಚಿಕೆಯಲ್ಲಿ ಮೋಸವಾಗಿದೆ ಎಂದು
ನೀನು ನನಗಿಂತ ಒಂದು ಪುಸ್ತಕ ಜಾಸ್ತಿ ಎತ್ತಿಟ್ಟುಕೊಂಡಿದ್ದೀಯ ಎಂದು
ಅಪ್ಪ ವಿಲ್ ರಿಜಿಸ್ಟರ್ ಮಾಡಿಸಿಲ್ಲ ಅದಕ್ಕೆ ಮಾನ್ಯತೆ ಇಲ್ಲ
ಈಗ ಮತ್ತೆ ನಾವೇ ಹಂಚಿಕೊಳ್ಳೋಣ, ನಾನು ದೊಡ್ಡವನು ನನಗೆ ದೊಡ್ಡ ಪಾಲು ಸಲ್ಲಬೇಕು ಎಂದು

ಭೂಮಿ ಎಂಬ ಆಸ್ತಿಗಾಗಿ ನೆತ್ತರ ಹೊಳೆ ಹರಿದು ಹೋಗಿದೆ
ಎಷ್ಟೋ ಗೋರಿಗಳಲ್ಲಿರುವ ದೇಹಗಳು ಆಸ್ತಿಗಾಗಿ ಹಂಬಲಿಸಿ ಅಲ್ಲಿ ಸೇರಬೇಕಾಗಿ ಬಂದಿದೆ
ಹೆಣ್ಣಿನ ಕಾರಣಕ್ಕಾಗಿ ಕಣ್ಣು ಕಳೆದುಕೊಂಡವರಿದ್ದಾರೆ
ವಿವೇಕವನ್ನು ಎಂದೋ ಯಾವುದೋ ಸಮುದ್ರದಲ್ಲಿ ವಿಸರ್ಜಿಸಿ ಬಂದಿದ್ದಾರೆ

ನನ್ನ ಬದುಕಿನುದ್ದಕ್ಕೂ ಇದನ್ನೇ ನೋಡುತ್ತಾ ಬಂದಿದ್ದೇನೆ ಇದನ್ನೇ ತೀರ್ಮಾನ ಮಾಡುತ್ತಾ ಕುಳಿತುಕೊಂಡಿದ್ದೇನೆ

ನನ್ನ ಈ ಆಸೆಯೂ ನಿಜವಾಗಿ ಹೋಗಲಿ
ಪುಸ್ತಕ ಎಂಬ ಆಸ್ತಿಗಾಗಿ ನಾನು ಕಾನೂನಿನ ಮೊರೆ ಹೋಗುವವರನ್ನು ನೋಡುವ ಕಾಲ ಬರಲಿ ಎಂದರು

ಅಷ್ಟು ಮಾತಾಡಿದವರೇ ಒಂದು ನಿಟ್ಟುಸಿರಿಟ್ಟರು

ಇನ್ನೂ ಒಂದು ಆಸೆ ಇದೆ ಎಂದರು
ಮತ್ತೆ ಎಲ್ಲ ಅವರ ಕಡೆ ನೋಡಿದರು

ಅವರು ಎಲ್ಲರನ್ನು ಒಮ್ಮೆ ನೋಡಿ ‘ಆ ಕೇಸು ನನ್ನ ಮುಂದೆಯೇ ಬರಲಿ’ ಎಂದರು

ಸಭಾಂಗಣ ಮೂಕವಾಗಿ ಹೋಗಿತ್ತು

ಆ ನಿಶಬ್ದವನ್ನು ಇಲ್ಲವಾಗಿಸಬೇಕು ಎನ್ನುವುದಕ್ಕಾಗಿಯೇ ಎಂಬಂತೆ ಜೋರು ಚಪ್ಪಾಳೆ ತನ್ನ ಹೆಜ್ಜೆಯಿಟ್ಟಿತು.

ಅಬ್ಬಬ್ಬಾ ಮಳೆ, ಮಳೆ, ಬಿದ್ದವು ಮರ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆ ಬಿದ್ದಿದೆ. ಬಿರುಗಾಳಿ ಮಳೆಗೆ ಮರಗಳು ಬುಡಮೇಲಾಗಿವೆ.

ರೋಹಿಣಿ ಮಳೆ ಬಿದ್ದಿರುವುದರಿಂದ ಉದ್ದು, ಅಲಸಂದೆ ಮೊದಲಾದ ಬೆಳೆಗಳಿಗೆ ಅನುಖುಲವಾಗಿದೆ.. ಭರಣಿ ಮಳೆಗೆ ಬಿತ್ತನೆ ಮಾಡಿದ್ದ ರೈತರು ಈಗ ಮಳೆಗಾಗಿ ಎದುರು ನೋಡುತ್ತಿದ್ದರು.

ರೋಹಿಣಿ ಮಳೆ ಮೊದಲ ಪಾದದಲ್ಲೇ ಚಿಕ್ಕನಾಯನಹಳ್ಳಿ ಭಾಗದಲ್ಲಿ ಚನ್ನಾಗಿ ಸುರಿದಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮುಂಗಾರು ಆರಂಭಕ್ಕೆ ಇನ್ನೂ ವಾರ ಬಾಕಿ ಇರುವ ಮೊದಲೇ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಭಾರತಕ್ಕೆ ಬರಲಿವೆ 36 ರಫೇಲ್ ಯುದ್ಧ ವಿಮಾನ

ವಿನಯ್ ಹೆಬ್ಬೂರ್


ನಿಗಧಿಯಂತೆ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಒಳಗಾಗಿ 36 ರಫೇಲ್ ಯುದ್ದ ವಿಮಾನಗಳ ಪೈಕಿ 4 ಯುದ್ದ ವಿಮಾನ ಪೂರೈಸುವುದಾಗಿ ಫ್ರಾನ್ಸ್ ತಿಳಿಸಿದೆ.

ಇದು ಭಾರತದ ಸೈನ್ಯ ಬಲವನ್ನು ಹೆಚ್ಚಿಸಿದ್ದು ಶತೃಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

2016ರಲ್ಲಿ 56ಸಾವಿರ ಕೋಟಿ ಮೊತ್ತದಲ್ಲಿ ಏರ್ಪಟ್ಟ ಈ ಒಪ್ಪಂದಂತೆ 36 ಯುದ್ದ ವಿಮಾಣಗಳ ಪೈಕಿ 4 ವಿಮಾನಗಳು ಈಗ ಭಾರತದ ಬತ್ತಳಿಕೆ ಸೇರಲಿದೆ.

ಎರಡು ಇಂಜಿನ್ ಹೊಂದಿರುವ 4.5ನೇ ಪೀಳಿಗೆಯ ಈ ಯುದ್ದ ವಿಮಾನವನ್ನು ಡಸಾಲ್ಟ್ ಕಂಪನಿ ನಿರ್ಮಿಸುತ್ತಿದೆ.

ಈ ಯುದ್ಧ ವಿಮಾನ ಗಾಳಿಯಿಂದ ಗಾಳಿಗೆ ,ಗಾಳಿಯಿಂದ ಭೂಮಿಗೆ ಅತ್ಯಂತ ನಿಖರವಾಗಿ ಕ್ಷಿಪಣಿ ಎಸೆಯಬಲ್ಲ ಸಾಮರ್ಥ್ಯ ಹೊಂದಿದೆ.ಇದಲ್ಲದೇ ಈ ಯುದ್ಧ ವಿಮಾನ ಶತೃವಿನ ಹಲವಾರು ಗುರಿಯನ್ನು ಏಕ ಕಾಲದಲ್ಲಿ ನಾಶಪಡಿಸುವ ಶಕ್ತಿ ಹೊಂದಿದೆ.

ಈಗಾಗಲೇ ನಮಗಿಂತ ವಾಯುಸೇನೆಯ ಶಕ್ತಿಯಲ್ಲಿ ಮುಂದಿರುವ ಚೀನಾ ಹಾಗೂ ಅದರ ಸಹಾಯದಿಂದ ಬೀಗುತ್ತಿದ್ದ ಪಾಕೀಸ್ಥಾನಕ್ಕೆ ಈ ಯುದ್ದ ವಿಮಾನ ದೊಡ್ಡ ತಲೆ ನೋವಾಗಿದೆ.ರಫೇಲ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣಿ ಅಳವಡಿಸುವ ಕುರಿತು ಚಿಂತನೆ ನಡೆಯುತ್ತಿದೆ.

ಭಾರತ ಹೊರತು ಪಡಿಸಿ ರಫೇಲ್ ಅನ್ನು ಫ್ರಾನ್ಸ್, ಈಜಿಪ್ಟ್, ಹಾಗೂ ಕತಾರ್ ದೇಶಗಳು ಬಳಸುತ್ತಿವೆ.ಈ ಯುದ್ದ ವಿಮಾನ ಗಂಟೆಗೆ 2222.6ಕಿಮಿ ಚಲಿಸುವ ಸಾಮರ್ಥ್ಯ ಹೊಂದಿದ್ದು ಗರಿಷ್ಠ 50000 ಅಡಿ ಎತ್ತರದವರೆಗೆ ಚಲಿಸುತ್ತದೆ.

ಈ ವಿಮಾನಕ್ಕೆ ಗಾಳಿಯಲ್ಲೇ ಇಂಧನ ತುಂಬಿಸಬಹುದಾಗಿದೆ.
ಈ ಯುದ್ದ ವಿಮಾನ 15.27 ಮೀಟರ್ ಉದ್ದವಿದ್ದು, 10.8 ಮೀಟರ್ ರೆಕ್ಕೆ ವಿಸ್ತಾರವನ್ನು ಹೊಂದಿದೆ ಮತ್ತು 45.7 ಚದರ ಮೀಟರ್‍ ರೆಕ್ಕೆ ಮೇಲ್ಮೈ ವಿಸ್ತೀರ್ಣವನ್ನು ಹೊಂದಿದೆ. ಇದು 9,500 ಕೆಜಿ ಬಾಂಬ್ ಮತ್ತು ಯುದ್ಧಸಾಮಗ್ರಿಗಳನ್ನು ಸಾಗಿಸಬಲ್ಲದು.

ಭಾರತ-ಪಾಕಿಸ್ತಾನ ಗಡಿಯಿಂದ 200 ಕಿಲೋಮೀಟರ್ ದೂರದಲ್ಲಿರುವ ಐಎಎಫ್‌ನ ಅತ್ಯಂತ ಆಯಕಟ್ಟಿನ ನೆಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಅಂಬಾಲಾ ಏರ್‍ ಬೇಸ್ನದಲ್ಲಿ ಮೊದಲ ರಫೇಲ್‍ ಸ್ಕ್ವಾಡ್ರನ್ ಇರಲಿದೆ.


ವಿವಿಧ ಮೂಲಗಳಿಂದ

10 ಗಂಟೆ ಕೆಲಸ: ಕಾರ್ಮಿಕರ ಪ್ರತಿಭಟನೆ

ತುಮಕೂರು: ರಾಜ್ಯ ಸರ್ಕಾರವು ಕೆಲಸದ ಅವಧಿಯನ್ನು ದಿನಕ್ಕೆ 8 ರಿಂದ 10 ಗಂಟೆ ಹಾಗು ವಾರದಲ್ಲಿ 48 ರಿಂದ 60 ಗಂಟೆಗಳಿಗೆ ಹೆಚ್ಚಿಸುವ ಆದೇಶ ಹೊರಡಿರುವುದು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ತುಮಕೂರಿನಲ್ಲಿಂದು ಪ್ರತಿಭಟನೆ ನಡೆಸಿ ಆದೇಶದ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು.

ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸಂಘಟನೆಗಳ ಕಾರ್ಯಕರ್ತರು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಸಿಟ್ಟನ್ನು ಹೊರಹಾಕಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ಸಡಿಲಗೊಳಿಸುವ ಪ್ರಯತ್ನ ಇದಾಗಿದೆ. ಕೆಲಸದ ಅವಧಿ ಹೆಚ್ಚಳ ಮಾಡುವುದು ಅವೈಜ್ಞಾನಿಕ ಎಂದರು.

ಇದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘmನೆ ನಿರ್ಣಯಕ್ಕೆ ವಿರುದ್ಧವಾಗಿದೆ. 10 ಗಂಟೆಗಳ ಆದೇಶವನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಸರ್ಕಾರ ವಲಸೆ ಕಾರ್ಮಿಕರ ಕುರಿತು ಕಾಳಜಿ ಹೋಂದಿಲ್ಲ, ಕಾರ್ಮಿಕ ಕಾನೂನುಗಳ ಮಾಲಿಕರ ಪರ ಬದಲಿಸಿ ದುಡಿವವರಿಗೆ ಅನ್ಯಾಯ ಮಾಡುತ್ತಿದೆ ಎಂದರು.

ಮೋದಿ ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸದೆ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಅರೋಪಿಸಿದರು.

ಎಐಯುಟಿಯುಸಿ ಮಂಜುಳ ಮಾತಾನಾಡಿ ಸಂವೇದನೆಯೇ ಇಲ್ಲದೆಂತೆ ಸರ್ಕಾರಗಳು ವರ್ತಿಸುತ್ತಿವೆ ಎಂದರು. ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ಗೌರವಾಧ್ಯಕ್ಷ ಗೋವಿಂದರಾಜು, ಶಂಕರಪ್ಪ. ಖಿಲೀಲ್, ಎಐಟಿಯುಸಿ ಕಾಂತರಾಜು, ನಾಗಣ್ಣ ಮೊದಲಾದವರು ಉಪಸ್ಥಿತರಿದ್ದರು.

ಹನುಮಂತಪುರ ಬ್ಯಾರಿಕೇಡ್ ತೆರವಿಗೆ ಬೆಳಗುಂಬ ವೆಂಕಟೇಶ್ ಒತ್ತಾಯ

ತುಮಕೂರು: ನಗರದ ಹನುಮಂತಪುರ ದಲ್ಲಿ ಹಾಕಿರುವ ಬ್ಯಾರಿಕೇಡ್ ನಿಂದ ಸ್ಥಳೀಯರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಹೇಳಿದ್ದಾರೆ.

ಊರ್ಡಿಗೆರೆ ಮಾರ್ಗದಿಂದ ಬೆಳಗುಂಬ ತುಮಕೂರು ನಗರಕ್ಕೆ ಹೋಗುವ ಮಧ್ಯೆ ಹನುಮಂತಪುರ ದಲ್ಲಿ ಹಾಕಲಾಗಿರುವ ಬ್ಯಾರಿಕೇಡ್ ತೆಗೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಫೋನ್ ಕರೆ ಮೂಲ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಸಹ ಬ್ಯಾರಿಕೇಡ್ ತೆಗೆಯಲು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಊರ್ಡಿಗೆರೆಯಲ್ಲಿ ಆರೋಗ್ಯ ಕೇಂದ್ರವಿರುವ ಕಾರಣ ಈ ರಸ್ತೆಯಲ್ಲಿ ಪ್ರತಿದಿನ ಅಂಬುಲೆನ್ಸ್ ನಿರಂತರವಾಗಿ ಓಡಾಡುತ್ತಿವೆ. ನಗರಕ್ಕೆ ಬರಬೇಕಾದರೆ. ಹನುಮಂತ ಪುರದಲ್ಲಿ ಬ್ಯಾರಿಕೇಡ್ ಹಾಕಿದ್ದು. ನಗರಕ್ಕೆ ಹೋಗುವಾಗ ಹೋಗುವಾಗ ಎನ್ಎಚ್ ಫೋರ್. NH.4. ನಲ್ಲಿ ಒನ್ ವೇ ನಲ್ಲಿ ಬರಬೇಕಾಗುತ್ತದೆ ಎಂದಿದ್ದಾರೆ.

.ಎಲ್ಲ ವಾಹನ ಸವಾರರು ಕೂಡ ಅದೇ ಮಾರ್ಗ ಅನುಸರಿಸುತ್ತಿದ್ದಾರೆ.. ಎದಿರು.. ಬದಿರು ಗಾಡಿಗಳು. ಆಕಸ್ಮಿಕವಾಗಿ.. ಅನಾಹುತವಾದರೆ.. ಕಾರಣ ಯಾರು.. ಆದ್ದರಿಂದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿದರೆ ಕೆಲವು ಅನಾಹುತಗಳನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಇಂಥ ಕಾರಣಕ್ಕೋಸ್ಕರ ಬ್ಯಾರಿಕೇಡ್ ತೆಗೆಯಲಾಗುತ್ತಿಲ್ಲ ಎಂಬ ಮಾಹಿತಿಯನ್ನು. ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. . ದಿನನಿತ್ಯ ಔಷಧಿ ಪಡೆಯಲು. ತರಕಾರಿ ಮಾರ್ಕೆಟ್ ಗೆ ಹೋಗಲು. ಸರ್ಕಾರಿ ಕಚೇರಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ ಎಂಬುದು ಅಧಿಕಾರಿಗಳು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಸಾರ್ವಜನಿಕರು ನಗರಕ್ಕೆ ಹೇಗೆ ಹೋಗಬೇಕು ಎಂಬುದೇ ಗೊತ್ತಾಗುವುದಿಲ್ಲ.
ಹನುಮಂತಪುರ ಬ್ಯಾರಿಕೇಡ್ ಹಾಕಿರುವ ಸ್ಥಳದಲ್ಲಿ ನಿಂತು ಈ ಮೂಲಕ ಬಂದಂತಹ ಸಾರ್ವಜನಿಕರಿಗೆ ದಂಡ ಹಾಕುತ್ತಿರುವ ಕ್ರಮ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.

ಈ ಬ್ಯಾರಿಕೇಡ್ ತೆರವುಗೊಳಿಸಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಇಳಿಯುವ ಜಾಗದಲ್ಲೇ ಬ್ಯಾರಿಕೇಡ್ ಹಾಕಬೇಕು ಎಂದು ಹೇಳಿದ್ದಾರೆ.

ಕೊರೊನಾ: ಇಂದು ಮತ್ತೇ 100 ಮಂದಿಗೆ ಸೋಂಕು

ತುಮಕೂರು; ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಕೊರೊನಾ ಪ್ರಕರಣಗಳು ದೃಢಪಟ್ಟಿಲ್ಲ.

ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 100 ಪ್ರಕರಣಗಳು ಕಂಡು ಬಂದಿವೆ.

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯ2222 ಕ್ಕೆ ಹೆಚ್ಚಿದಂತಾಗಿದೆ.

ನಾಗರಹಾವಿನಿಂದ ಕಚ್ಚಿಸಿ ಹೆಂಡತಿಯನ್ನೇ ಕೊಲೆ ಮಾಡಿದ

0

ತಿರುವನಂತಪುರಂ: ವಿಷದ ನಾಗರ ಹಾವನ್ನು ತಂದು ಮಲಗಿದ್ದ ಹೆಂಡತಿ ಪಕ್ಕ ಬಿಟ್ಟು ಆಕೆಗೆ ಹಾವು ಕಚ್ಚುವುದನ್ನು ನೋಡುತ್ತಾ ನಿಂತಿದ್ದ ಗಂಡ ಈಗ ಜೈಲು ಪಾಲಾಗಿದ್ದಾನೆ.

ಕೇರಳದ ಕೊಲ್ಲಂ‌ನಲ್ಲಿ ಈ ಘಟನೆ ನಡೆದಿದ್ದು ಪತ್ನಿ ಉತ್ರ ಸಾವಿಗೀಡಾಗಿದ್ದಾಳೆ.

ಗಂಡನನ್ನು ಸೂರಜ್ ಎಂದು ಗುರುತಿಸಲಾಗಿದ್ದು, ಖಾಸಗಿ ಬ್ಯಾಂಕ್ ವೊಂದರ ಉದ್ಯೋಗಿ ಎನ್ನಲಾಗಿದೆ.

ಹಾವು ಮನೆಯೊಳಗೆ ಬರಲು ಸಾಧ್ಯವೇ ಇಲ್ಲ. ಅಳಿಯನ ಕಿತಾಪತಿ ಇರಬಹುದೆಂದು ಹೆಂಡತಿ ಮನೆಯವರ ದೂರು ಆಧರಿಸಿ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ ನಿಜ ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.

ಹಾವು ಖರೀದಿಸಿ ತಂದಿದ್ದಾಗಿ ಆತ ಹೇಳಿದ್ದಾನೆ.

ಲಾಯರ್ ನೋಟೀಸ್ ಗಣೇಶ

ಜಿ ಎನ್ ಮೋಹನ್


ಪಟ್ ಅಂತ ಬಂದು ಬಿತ್ತು- ಆ ಪತ್ರ

ಅದೂ ರಜಾ ದಿನ

ಹೇಳಿಕೇಳಿ ಗಣೇಶನ ಹಬ್ಬ. ಇವತ್ತೂ ಕೆಲಸ ಮಾಡುವ ಪೋಸ್ಟಲ್ ಡಿಪಾರ್ಟ್ಮೆಂಟ್ ಇದೆಯಾ ಅಂತ ಆಶ್ಚರ್ಯ
ಆಯಿತು

ನನ್ನೆದುರು ನಿಂತಿದ್ದವನನ್ನು ಕೇಳಿದೆ. ‘ಇವತ್ತೂ ಪೋಸ್ಟ್ ಡಿಪಾರ್ಟ್ಮೆಂಟ್ ಕೆಲಸ ಮಾಡುತ್ತಾ’ ಅಂತ

ಆತ ನನ್ನನ್ನೇ ಕೆಕ್ಕರಿಸಿ ನೋಡಿ ‘ಇದು ಪೋಸ್ಟ್ ಅಲ್ಲ’ ಅಂದ

ಇನ್ನೇನು ಎನ್ನುವ ಕ್ವಶ್ಚನ್ ಮಾರ್ಕ್ ನನ್ನ ಮುಖದಲ್ಲಿ ಕಾಣಿಸಿತೇನೋ

‘ಇದು ಲಾಯರ್ ನೋಟಿಸ್, ನಾನು ಲಾಯರ್’ ಅಂದ

ಅರೆರೆ! ಗಣೇಶ ಹೇಳಿ ಕೇಳಿ ವಿಘ್ನ ನಿವಾರಕ ಅಂತದರಲ್ಲಿ ಅವನೇ ಯಾಕೆ ಫಿಟ್ಟಿಂಗ್ ಇಟ್ಟ ಅಂತ ನನ್ನ ಮುಖದಲ್ಲಿ ನೂರೆಂಟು ಪ್ರಶ್ನೆಗಳು ಬ್ಯಾಲೆ ಆಡಿದವು

ಆತನ ಮುಖ ನೋಡಿದೆ.. ಅವನೇನೂ ಉತ್ತರ ಹೇಳಲಿಲ್ಲ, ಬದಲಿಗೆ ನಿಂಗೈತೆ ಇವಾಗ ಎನ್ನುವ ಲುಕ್ ಕೊಟ್ಟು ನಿಂತಿದ್ದೆ

ಪತ್ರ ಆಚೆ ತೆಗೆದೆ

ಸಂಪಾದಕರೇ ಹುಷಾರ್ ಅನ್ನುವ ಸ್ಟೈಲ್ ನ ಒಕ್ಕಣೆ ಇತ್ತು
‘ನೀವು ನಮ್ಮ ಗಣೇಶನಿಗೆ ಅವಮಾನ ಮಾಡಿದ್ದೀರಿ..
ಆ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ
ಗಣೇಶನನ್ನು ಏನೆಂದುಕೊಂಡಿದ್ದೀರಿ
ಅವನಿಗೆ ಮರ್ಯಾದೆ ಕೊಡಬೇಕು ಅಂತ ನಿಮಗೆ ಗೊತ್ತಿಲ್ವಾ..??’
ಈ ಕ್ಷಣ ನಿಮ್ಮ ಪ್ರೋಗ್ರಾಮ್ ವಾಪಸ್ ತಗೊಳ್ದೆ ಹೋದ್ರೆ ಹುಷಾರ್ ಕೋರ್ಟ್ ಕಟ್ಟೆ ಹತ್ತಬೇಕಾಗುತ್ತೆ’

ತಕ್ಷಣ ನನ್ನ ತಲೆಯಲ್ಲಿ ಬಲ್ಬ್ ಹತ್ತಿತು

ಆಗಿದ್ದು ಇಷ್ಟೇ, ಗಣೇಶನ ಹಬ್ಬವನ್ನ ಸಖತ್ ಆಗಿ ಡಿಫೆರೆಂಟ್ ಆಗಿ ಆಚರಿಸಬೇಕು ಅಂತ ಯೋಚನೆ ಮಾಡಿದ್ದೆ

‘ಈಟಿವಿ’ಯಲ್ಲಿ ಠೀವಿಯಿಂದ ಗಣೇಶ ಓಡಾಡ್ಲಿ ಅನ್ನೋದು ನನ್ನ ಆಸೆ
ಅದಕ್ಕೆ ಕಾರಣಾನೂ ಇತ್ತು

ನಾನು ‘ಸಮಯ’ ಚಾನಲ್ ನಲ್ಲಿರೋವಾಗ ಫಿಲಂ ಸ್ಟಾರ್ ಗಣೇಶ ಸಿಕ್ಕಾಪಟ್ಟೆ ಹೈಟ್ ನಲ್ಲಿದ್ದ

ಆಗಲೇ ಗಣೇಶ ಹಬ್ಬ ಬಂತು.

ನಾನು ನಮ್ಮ ಹುಡುಗನ್ನ ಕರೆಸಿ ಗಣೇಶನ ಮುಖವಾಡ ಹಾಕಿಸಿದೆ
ಗಣೇಶನ ಮನೆ ಬಾಗಿಲು ಬಡಿದಾಗ ಆಚೆ ಬಂದ ಗೋಲ್ಡನ್ ಸ್ಟಾರ್ ತಬ್ಬಿಬ್ಬಾಗಿಬಿಟ್ಟ.

ಈ ಪ್ರೋಗ್ರಾಮ್ ಗೆ ‘ಗಣೇಶ ಮೀಟ್ಸ್ ಗಣೇಶ’ ಅಂತ ಹೆಸರುಕೊಟ್ಟಿದ್ದೆ.

ಸರಿ ಈಗಲೂ ಯಾಕೆ ಆಗ್ಬಾರ್ದು ಅಂತ ಒಂದು ಸಲ ಇಡೀ ಆಫೀಸ್ ನ ಎಲ್ಲರ ಮೇಲೆ ಕಣ್ಣಾಡಿಸಿದೆ.

ಆಗ ಸಿಕ್ಕಾಕಿಕೊಂಡಿದ್ದು ನಮ್ಮ ದುಷ್ಯಂತ ದೇರಾಜೆ ಮತ್ತೆ ಜನಾರ್ಧನ ಹೆಬ್ಬಾರ್

ಒಬ್ಬ ದ ಕ ಇನ್ನೊಬ್ಬ ಉ ಕ

ಹಾಗಾಗಿ ಇಬ್ಬರಿಗೂ ಯಕ್ಷಗಾನ, ತಾಳಮದ್ದಳೆ ಬ್ಯಾಕ್ ಗ್ರೌಂಡ್ ಇತ್ತು.

ಆಫೀಸ್ ಮೀಟಿಂಗ್ ನಲ್ಲೂ ಅಷ್ಟೇ
ಒಳ್ಳೆ ತಾಳ ಮದ್ದಳೆ ಸ್ಟೈಲ್ ನಲ್ಲೆ ವಿಷಯ ಮುಂದಕ್ಕೆ ಹೋಗಲು ಬಿಡದೆ ಒಂದೇ ವಿಷಯ ಹಿಡಕೊಂಡು ಕುಟ್ಟೋವ್ರು

ಇಬ್ಬರನ್ನೂ ಕರೆದು -ನೋಡು ಗುರೂ ಹೀಗೀಗೆ ಅಂದೆ

ಇಬ್ಬರೂ ಗಣೇಶ್ ವೇಷ ಧರಿಸೋದು ನಮ್ಮ ಆಫೀಸಿನಿಂದ ಹೊರಟು
ಊರು ಕೇರಿ ಮೆಜೆಸ್ಟಿಕ್ ಬಸ್ ಸ್ಟಾಂಡ್, ಗಾಂಧೀ ನಗರ, ಪೊಲೀಸ್ ಸ್ಟೇಷನ್ನು, ಬೀದಿ ಬದಿ ಅಂಗಡಿ ಎಲ್ಲಾ ಸುತ್ತಾಕಿ ಮತ್ತೆ ನಮ್ಮ ಆಫೀಸಿಗೆ ಬರೋದು ಅನ್ನೋದು ಪ್ಲಾನ್.

ಗಣೇಶನ ತುಂಬು ಭಕ್ತಿಯಲ್ಲಿರುವವರ ಮುಂದೆ ಅಚಾನಕ್ಕಾಗಿ ಗಣೇಶನೇ ಪ್ರತ್ಯಕ್ಷ ಆಗಿಬಿಟ್ರೆ..?

ಅವರ ರಿಯಾಕ್ಷನ್ ಹೇಗಿರುತ್ತೆ, ಜೊತೆಗೆ ಅವರು ಏನು ಕೇಳಿಕೊಳ್ಳಬಹುದು, ಏನು ಕಥೆ ಹೇಳಬಹುದು ಅನ್ನೋ ಕುತೂಹಲ ಇತ್ತು.

ಸರಿ ಜನಾರ್ಧನ್ ಹೆಬ್ಬಾರ್, ಅವನ ಹಿಂದೆ ನಮ್ಮ ದೊಡ್ಡ ಕ್ಯಾಮೆರಾ ಕ್ರ್ಯೂ ಹೊರಟೇಬಿಡ್ತು.

ಎಲ್ಲಾ ಕಡೆ ನಮ್ಮ ಗಣೇಶನ್ನ ನೋಡಿ ತಬ್ಬಿಕೊಂಡವರೆಷ್ಟು , ಮುತ್ತಿಟ್ಟವರೆಷ್ಟು, ಪ್ರೀತಿ ಕೊಟ್ಟೋರು ಎಷ್ಟು

ಆ ಗಣೇಶ್ ನಮ್ಮ ಸ್ಟಾಫ್ ಅನ್ನೂ ಬಿಡಲಿಲ್ಲ

ಒಬ್ಬಬ್ಬರ ಮುಂದೆಯೂ ನಿಂತು ಅವರನ್ನು ಕಾಡಿ ಗೋಳಾಡಿಸಿದ

ನಾನು ಸ್ಟುಡಿಯೋದಲ್ಲಿ ಏನೋ ನಿರ್ದೇಶನ ಕೊಡ್ತಾ ಇದ್ದೆ ಟೆಕ್ನಿಕಲ್ ಟೀಮ್ ಗೆ

ಹಿಂದಿರುಗಿ ನೋಡ್ತೀನಿ- ಅರೆ, ಗಣೇಶ..!!

ಸೀದಾ ಗಣೇಶ ಪ್ಯಾನೆಲ್ ಡಿಸ್ಕಷನ್ ಟೇಬಲ್ ಮೇಲೆ ನನ್ನೂ ಕರಕೊಂಡು ಹೋಗಿ ಕೂತೇ ಬಿಟ್ಟ

ಏನಿವಾಗ ಅನ್ನೋ ಥರ ಫಟಾಫಟ್ ಪ್ರಶ್ನೆ ಕೇಳಿದ.

ನಾನು ನಗ್ತಾ ಕೂತ್ರೂ ಬಿಡಲಿಲ್ಲ.. ‘ಎಲ್ಲಾರ್ಗೂ ಬಯ್ತೀರಿ ಆಮೇಲೆ ಹೀಗೆ ನಕ್ಕು ಬಿಡ್ತೀರಿ ಇದು ಸರೀನಾ?’ ಅಂತ ಕ್ರಾಸ್ ಮಾಡಿದ
ಆಮೇಲೆ ನೀವೇನೋ ‘ವಾಕ್ ಅಂಡ್ ಟಾಕ್’ ಮಾಡ್ತೀರಂತೆ ದೇವೇಗೌಡರನ್ನೂ ನಗಿಸ್ತೀರಂತೆ, ಜಯಶ್ರೀ ಅಳೋ ಹಾಗೆ ಮಾಡ್ತೀರಂತೆ, ಸಿ ಎಂ ತಮ್ಮ ಲವ್ ಸ್ಟೋರಿ ಹೇಳೋ ಥರಾ ಮಾಡ್ತೀರಂತೆ
ದೇವಲೋಕದಲ್ಲೆಲ್ಲಾ ಅದೇ ಸುದ್ದಿ ನಡೀರಿ ನನ್ನ ಜೊತೆ ವಾಕ್ ಅಂಡ್ ಟಾಕ್ ಮಾಡಿ’ ಅಂತ ಎದ್ದೇ ಬಿಟ್ಟ.

ಹೀಗೆ ಎಲ್ಲರ್ನೂ ಕಾಡಿಸ್ತಾ ಪೀಡಿಸ್ತಾ ಇದ್ದಾಗ ನೋಡ್ತಾನೆ ಎದುರುಗಡೆ ಇನ್ನೊಬ ಗಣಪ.

ದುಷ್ಯಂತ ದೇರಾಜೆ ಗಣಪನ ವೇಷದಲ್ಲಿ ಆರಾಮವಾಗಿ ಕೂತು ಯಾವುದೋ ಕೊಲೆ ಸುಲಿಗೆ ಸುದ್ದಿ ಎಡಿಟ್ ಮಾಡ್ತಿದ್ದ

ನೋಡಿದ ಈ ಗಣಪನಿಗೆ ಗಾಬರಿ ಆಗೋಯ್ತು
ಭೂಲೋಕದಲ್ಲಿ ಜನ ಏನನ್ನ ಬೇಕಾದ್ರೂ ಸೃಷ್ಟಿ ಮಾಡಿಬಿಡ್ತಾರೆ ಅಂತ
ಆ ಗಣಪನ ಜೊತೆ ವಾದಕ್ಕೆ ಶುರು ಮಾಡಿದ

ಇಷ್ಟೇ

ಅದನ್ನ ನಮ್ಮ ಇಡೀ ಟೀಮ್ ಮುತುವರ್ಜಿಯಿಂದ ಮಾಡಿತ್ತು.

ಎಲ್ಲರೂ ಸೇರಿ ಈ ಪ್ರಹಸನದ ಒಳ್ಳೆ ಪ್ರೊಮೊ ತಯಾರು ಮಾಡಿದ್ರು

ಯಾವಾಗದು ಪ್ರಸಾರ ಆಗೋದಿಕ್ಕೆ ಶುರುವಾಯ್ತೋ ಪಟ್ ಅಂತ ಬಂದು ಬಿದ್ದಿದ್ದು ಈ ಲಾಯರ್ ನೋಟಿಸ್.

‘ಆಯ್ತು ಮಾರಾಯ ಅಂತ ಸಮಯ ಬಂದ್ರೆ ನಮ್ಮ ಇಬ್ರೂ ಗಣೇಶನ್ನ ಹೊತ್ತುಕೊಂಡೇ ಕೋರ್ಟ್ ಗೆ ಬರ್ತೀನಿ ಹೋಗು’ ಅಂತ ಸಾಗಿ ಹಾಕಿದೆ.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಗ
ದಿನಾಂಕ : 26, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಜ್ಯೇಷ್ಠ ಮಾಸ
ಋತು : ಗ್ರೀಷ್ಮ ಋತು
ಕಾಲ : ಬೇಸಿಗೆಕಾಲ
ವಾರ : ಮಂಗಳವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಚೌತಿ
(ಇಂದು ಪ್ರಾತಃಕಾಲ 1 ಗಂ॥ 17 ನಿ।। ರಿಂದ
ಮರುದಿನ ಪ್ರಾತಃಕಾಲ 1 ಗಂ॥ 7 ನಿ।। ತನಕ)
ನಕ್ಷತ್ರ : ಆರ್ದ್ರೆ
(ನಿನ್ನೆ ಬೆಳಿಗ್ಗೆ 6 ಗಂ॥ 11 ನಿ।। ರಿಂದ
ಇಂದು ಬೆಳಿಗ್ಗೆ 7 ಗಂ॥ 2 ನಿ।। ತನಕ)
ಯೋಗ : ಗಂಡ
ಕರಣ : ವಣಿಕ್
ವರ್ಜ್ಯಂ : (ಇಂದು ರಾತ್ರಿ 7 ಗಂ॥ 15 ನಿ।। ರಿಂದ ಇಂದು ರಾತ್ರಿ 8 ಗಂ॥ 52 ನಿ।। ತನಕ)
ಅಮೃತಕಾಲ : ಇಂದು ಯಾವುದೇ ಅಮೃತಕಾಲ ಇಲ್ಲ.
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 17 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 9 ನಿ।। ತನಕ)(ಇಂದು ಬೆಳಿಗ್ಗೆ 10 ಗಂ॥ 3 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 55 ನಿ।। ತನಕ)
ರಾಹುಕಾಲ : (ಇಂದು ಸಂಜೆ 3 ಗಂ॥ 28 ನಿ।। ರಿಂದ ಇಂದು ಸಂಜೆ 5 ಗಂ॥ 5 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 49 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 8 ಗಂ॥ 56 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 33 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 41 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 44 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಮಿಥುನ

ಮೇಷ ರಾಶಿ
ನಿಮ್ಮ ನಿರಂತರ ಸಕಾರಾತ್ಮಕ ಚಿಂತನೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಬಹುದು. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ನೀವು ಸಾಮಾಜಿಕ ಕಾರ್ಯಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದಲ್ಲಿ ಸ್ನೇಹಿತರು ಮತ್ತು ಹೊಸ ಪರಿಚಯಸ್ಥರನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ಭಾಗವನ್ನು ನೀವಿಂದು ನೋಡಬಹುದು. ಅದೃಷ್ಟ ಸಂಖ್ಯೆ: 4

ವೃಷಭ ರಾಶಿ
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಯಾವುದಾದರೂ ಸಾಮಾಜಿಕ ಸಭೆಗೆ ಹಾಜರಾಗಿ. ನಿಮ್ಮ ಹಣವನ್ನು ಸಂಗ್ರಹಿಸಿದಾಗ ಮಾತ್ರ ಹಣ ನಿಮ್ಮ ಕೆಲಸಕ್ಕೆ ಬರುತ್ತದೆ. ಇದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಿ ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ವಿಷಾದಿಸಬೇಕಾಗುತ್ತದೆ. ಸ್ನೇಹಿತರು ಮತ್ತು ಹತ್ತಿರದವರು ನಿಮಗೆ ತಮ್ಮ ಸಹಾಯ ಹಸ್ತ ಚಾಚುತ್ತಾರೆ. ನಿಮ್ಮ ಸಂಗಾತಿ ನಿಮ್ಮ ಸ್ಥಾನವನ್ನು ತಿಳಿದುಕೊಳ್ಳುವಂತೆ ಮಾಡಲು ನೀವು ತೊಂದರೆ ಹೊಂದಿರುತ್ತೀರಿ. ಪ್ರೀತಿಯ ಸಂಗೀತವನ್ನು ಯಾವಾಗಲೂ ಅದರಲ್ಲೇ ಮುಳುಗಿರುವವರು ಕೇಳಬಹುದು. ಅದೃಷ್ಟ ಸಂಖ್ಯೆ: 4

ಮಿಥುನ ರಾಶಿ
ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಏಕೆಂದರೆ ನೀವು ಅದನ್ನು ಮಾಡದಿದ್ದರೆ ಅವರ ಆರೋಗ್ಯವು ಹದಗೆಡಬಹುದು ಮತ್ತು ಅವರ ಆರೋಗ್ಯದ ಮೇಲೆ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒತ್ತಡದ ಅವಧಿಯಿದ್ದರೂ ಕುಟುಂಬದ ಬೆಂಬಲ ನಿಮಗೆ ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 2

ಕರ್ಕ ರಾಶಿ
ಆರೋಗ್ಯ ಚೆನ್ನಾಗಿರುತ್ತದೆ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಸ್ನೇಹಿತರು, ವ್ಯಾಪಾರ ಪಾಲುದಾರರು ಹಾಗೂ ಸಂಬಂಧಿಗಳ ಜೊತೆ ವ್ಯವಹರಿಸುವಾಗ ನಿಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಿ – ಅವರು ನಿಮ್ಮ ಅಗತ್ಯಗಳಿಗೆ ಸಂವೇದನೆ ಹೊಂದದಿರಬಹುದು. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ನಿಮ್ಮ ಚೈತನ್ಯವನ್ನು ವೃದ್ಧಿಸುತ್ತದೆ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 5

ಸಿಂಹ ರಾಶಿ
ಕೆಲಸದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ಸ್ವಲ್ಪ ಉದ್ವೇಗ ತರಬಹುದು. ಮನೆಯ ಸಣ್ಣ ವಸ್ತುಗಳ ಮೇಲೆ ನಿಮ್ಮ ಸಾಕಷ್ಟು ಹಣ ಹಾಳಾಗಬಹುದು, ಇದರ ಕಾರಣದಿಂದ ನೀವು ಮಾನಸಿಕ ಒತ್ತಡಗೊಳಗಾಗಬಹುದು. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ಅದೃಷ್ಟ ಸಂಖ್ಯೆ: 3

ಕನ್ಯಾ ರಾಶಿ
ತುಂಬಾ ಉತ್ಸಾಹ ಮತ್ತು ಸ್ಫೋಟಕ ಭಾವೋದ್ರೇಕಗಳು ನಿಮ್ಮ ನರಮಂಡಲಕ್ಕೆ ಹಾನಿ ಮಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಅದೃಷ್ಟ ಸಂಖ್ಯೆ: 2

ತುಲಾ ರಾಶಿ
ಹಿರಿಯರು ಉತ್ತಮ ಲಾಭ ಪಡೆಯಲು ತಮ್ಮ ಹೆಚ್ಚುವರಿ ಶಕ್ತಿಯನ್ನು ಸಕಾರಾತ್ಮಕ ಬಳಕೆಗೆ ವಿನಿಯೋಗಿಸಬೇಕು. ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ. ನಿಮ್ಮ ಸಮಸ್ಯೆಗಳನ್ನು ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಇಡೀ ಬ್ರಹ್ಮಾಂಡದ ಭಾವಪರವಶತೆ ಪ್ರೀತಿಯಲ್ಲಿರುವವರ ನಡುವೆ ನಡೆಯುತ್ತದೆ. ಅದೃಷ್ಟ ಸಂಖ್ಯೆ: 4

ವೃಶ್ಚಿಕ ರಾಶಿ
ನಿಮ್ಮ ಹೆಚ್ಚು ಆತ್ಮವಿಶ್ವಾಸವನ್ನು ಇಂದು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಒತ್ತಡದ ದಿನದ ಹೊರತಾಗಿಯೂ ನೀವು ನಿಮ್ಮ ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಇದು ಮತ್ತೊಂದು ಚೈತನ್ಯದಾಯಕ ದಿನವಾಗಿರುತ್ತದೆ ಮತ್ತು ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಗಳ ಭೇಟಿ ಸಾಧ್ಯವಿದೆ. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ. ಇಂದು, ನೀವು ಪ್ರೀತಿ ಎಲ್ಲದಕ್ಕೂ ಪರ್ಯಾಯವಾಗಿದೆ ಎಂದು ಅರ್ಥ ಮಾಡಿಕೊಳ್ಳುತ್ತೀರ. ಅದೃಷ್ಟ ಸಂಖ್ಯೆ: 6

ಧನು ರಾಶಿ
ಕೆಲಸದ ಒತ್ತಡ ಇಂದು ಸ್ವಲ್ಪ ಒತ್ತಡ ತರಬಹುದು. ಇಂದು ನಿಮ್ಮ ತಂದೆ ತಾಯಿಯರಲ್ಲಿ ಯಾರಾದರೂ ಒಬ್ಬರು ಹಣವನ್ನು ಸಂಗ್ರಹಿಸುವ ಬಗ್ಗೆ ಉಪನ್ಯಾಸಗಳನ್ನು ನೀಡಬಹುದು, ನೀವು ಅವರ ಮಾತುಗಳನ್ನು ಬಹಳ ಗಮನವಾಗಿ ಕೇಳಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮುಂಬರುವ ಸಮಯಲ್ಲಿ ನೀವೇ ತೊಂದರೆಗೊಳಗಾಗಬಹುದು. ಅದೃಷ್ಟ ಸಂಖ್ಯೆ: 3

ಮಕರ ರಾಶಿ
ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡಬೇಡಿ. ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು. ಅದೃಷ್ಟ ಸಂಖ್ಯೆ: 3

ಕುಂಭ ರಾಶಿ
ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಣದ ಕೊರತೆ ಇಂದು ನಿಮ್ಮ ಮನೆಯಲ್ಲಿ ಅಪಶ್ರುತಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮನೆಯವರೊಂದಿಗೆ ಯೋಚಿಸಿ ಅರ್ಥಮಾಡಿಕೊಂಡು ಮಾತನಾಡಿ ಮತ್ತು ಅವರಿಂದ ಸಲಹೆಯನ್ನು ತೆಗೆದುಕೊಳ್ಳಿ. ನೀವು ನಂಬುವ ಯಾರಾದರೂ ನಿಮಗೆ ಸಂಪೂರ್ಣ ನಿಜ ಹೇಳದಿರಬಹುದು – ಇತರರು ಮನವೊಲಿಸುವ ನಿಮ್ಮ ಸಾಮರ್ಥ್ಯ ಬರುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 1

ಮೀನ ರಾಶಿ
ನಿಮಗೇನು ಒಳ್ಳೆಯದೆಂದು ನಿಮಗೆ ಮಾತ್ರ ಗೊತ್ತು ಆದ್ದರಿಂದ ಧೃಢವಾಗಿರಿ ಮತ್ತು ಧೈರ್ಯಶಾಲಿಗಳಾಗಿರಿ ಮತ್ತು ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಿ ಹಾಗೂ ಫಲಿತಾಂಶಗಳಿಗೆ ಸಿದ್ಧವಾಗಿರಿ. ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ, ಆದ್ದರಿಂದ ಇಂದು ನಿಮ್ಮ ಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಅದೃಷ್ಟ ಸಂಖ್ಯೆ: 7