Friday, May 8, 2026
Google search engine
Home Blog Page 219

ಕರ್ಪ್ಯೂ: ತುಮಕೂರಿನಲ್ಲಿ 12 ಜನರ ಬಂಧನ

Tumkuru: ಕೋವಿಡ್ 19 ರ ಹಿನ್ನೆಲೆಯಲ್ಲಿ ಕರ್ಪ್ಯೋ ಜಾರಿ ಇದ್ದರೂ ಸಹ ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಹನ್ನೆರಡು ಜನರನ್ನು ಬಂಧಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಠಾಣಾ ಸರಹದ್ದಿನ ಹಂದಿಗುಂಟೆ ಗ್ರಾಮದ ಹಳ್ಳದಲ್ಲಿ,

16 ಮೋಟಾರು ಸೈಕಲ್‌ಗಳು, 11 ಮೊಬೈಲ್, ಜೂಜಾಟದಲ್ಲಿ ಪಣವಾಗಿ ಕಟ್ಟಿದ್ದ *1,01160-00ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಪಟ್ಟ ನಾಯಕನಹಳ್ಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಶಿರಾ ಗ್ರಾಮಾಂತರ ವೃತ ಇನ್ಸ್‌ಪೆಕ್ಟರ್ ಶಿವ ಕುಮಾರ್, ಸಿಬ್ಬಂದಿಗಳಾದ ಕಿರಣ್ ಕುಮಾರ್, ರೇಣುಕ, ಕರೆಪ್ಪ ಹುಲಗೇರಿ,ಸಂತೋಷ ಕುಮಾರ್, ಬಾರಿಕರ್ ಹನುಮಂತ ರವರುಗಳು ದಾಳಿ ನಡೆಸಿದ್ದರು.

ಎಸ್ಪಿ ಡಾ, ಕೆ. ವಂಸಿ ಕೃಷ್ಣ,IPS ರವರಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕ್ಲಿನಿಕಲ್ ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವಂತೆ ಆಗ್ರಹ

ಮಧುಗಿರಿ : ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ತಮ್ಮನ್ನು ಬಳಸಿಕೊಳ್ಳಬೇಕೆಂದು ಸರ್ಕಾರಿ ಹಾಸ್ಪಿಟಲ್‌ ಅಟೆಂಡೆಂಟ್ ಗ್ರೇಡ್ -2 ನೌಕರರ ಸಂಘದ ಪದಾಧಿಕಾರಿಗಳು ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2013 – 14 ನೇ ಸಾಲಿನಲ್ಲಿ ಆಯ್ಕೆಯಾದ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್ -2 ನೌಕರರು ಗಳಿಗೆ ಆದೇಶ ಪತ್ರದಲ್ಲಿ ಸ್ಪಷ್ಟವಾಗಿ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಎಂದು ತಿಳಿಸಲಾಗಿದೆ.

ಜಿಲ್ಲೆಯಲ್ಲಿ 90 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಗ್ರೂಪ್ ಡಿ ನೌಕರರು ಎಂದ ಮೇಲೆ ಎಲ್ಲರೂ ಒಂದೇ.  ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.

 ಸರ್ಕಾರ  ಆದೇಶ ಪತ್ರದಲ್ಲಿ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ, ವೈದ್ಯರು ಹಾಗೂ ಅಧಿಕಾರಿಗಳು ನಾನ್ ಕ್ಲಿನಿಕಲ್ ಕೆಲಸಗಳನ್ನು  ಮಾಡುವಂತೆ ಸೂಚಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಸರ್ಕಾರಿ ಹಾಸ್ಪಿಟಲ್‌ ಅಟೆಂಡೆಂಟ್ ಗ್ರೇಡ್ -2 ನೌಕರರ ಸಮಸ್ಯೆಯನ್ನು ಬಗೆಹರಿಸಬೇಕೆಂದು ನೌಕರರ ಸಂಘದ ಚೇತನ್  ಕುಮಾರ್ , ಆಸನ್ ,ಮುದ್ದಲಿಂಗೇಶ್ , ಭಾಗ್ಯಶ್ರೀ , ರವಿ ಆಗ್ರಹಿಸಿದ್ದಾರೆ. 

ಮುಂದಿನ ವಾರದಿಂದ ತುಮಕೂರು ಕೆರೆಗಳಿಗೆ ಹೇಮಾವತಿ ನೀರು‌

ತುಮಕೂರು: ಹೇಮಾವತಿ ಎಡದಂಡ ನಾಲೆ ಮೂಲಕ ತುಮಕೂರು‌‌ ಜಿಲ್ಲೆಯ ಗುಬ್ಬಿ, ತಿಪಟೂರು, ತುರುವೇಕೆರೆ, ತುಮಕೂರು ತಾಲ್ಲೂಕುಗಳ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ಕೊನೆಗೂ ಒಪ್ಪಿಗೆ ಸಿಕ್ಕಿದೆ.

ತುಮಕೂರಿಗೆ ಈಚೆಗೆ ನೀರು ಬಿಟ್ಟ ಒಂದೇ ವಾರದಲ್ಲಿ ನಿಲ್ಲಿಸಲಾಗಿತ್ತು. ಈಗ ಮುಖ್ಯಮಂತ್ರಿ‌ ಸೂಚನೆ ಮೇರೆಗೆ ಸಭೆ ನಡೆಸಿರುವ ಸಲಹಾ ಸಮಿತಿಯು‌ ತುಮಕೂರು ಜಿಲ್ಲೆಯ ಜತೆಗೆ ಹಾಸನ, ಮಂಡ್ಯ ಜಿಲ್ಲೆಗೂ ನೀರು ಹರಿಸಲು ಒಪ್ಪಿಗೆ ಸೂಚಿಸಿದೆ.

ಹಾಸನ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ‌ಸಭೆ ನಡೆಯಿತು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕರಾದ ಎಂ.ಎ. ಗೋಪಾಲಸ್ವಾಮಿ, ಪ್ರೀತಂ ಜೆ. ಗೌಡ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.

ಮಳೆಗಾಲಕ್ಕು ಮುನ್ನವೇ ಕಾಲುವೆಯಲ್ಲಿ ನೀರು ಹರಿಯುವುದನ್ನು ನೋಡಲು ರೈತರು ತುದಿಗಾಲ ಮೇಲೆ ನಿಂತಿದ್ದಾರೆ.

ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸಂಚಲನ ಮೂಡಿಸಿದ ಮಾಜಿ ಶಾಸಕ

0

ತುಮಕೂರು: ಕೋವಿಡ್ ಆಸ್ಪತ್ರೆಯ ಹೆಸರು ಕೇಳಿದರೆ ಗಾವುದ ದೂರ ಓಡುವ ಸನ್ನಿವೇಶ ಇರುವಾಗ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತನ್ನೊಬ್ಬನಿಗೆ ಧೈರ್ಯ ಹೇಳಿರುವ ವಿಡಿಯೊ ಈಗ ರಾಜ್ಯದಾದ್ಯಂತ ವೈರಲ್ ಆಗಿದೆ.

ಗ್ರಾಮಾಂತರ ಕ್ಷೇತ್ರದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕಿ‌ನ ಕಾರಣ ತುಮಕೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಕ್ಷೇತ್ರದ ಮೊದಲ ಪ್ರಕರಣ.

ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲಿ ರೋಗಿಯನ್ನು ಭೇಟಿಯಾಗಿರುವ ಸುರೇಶಗೌಡರು, ಯಾವುದೇ ಭಯಕ್ಕೆ ಒಳಗಾಗದೆ ದೈರ್ಯದಿಂದ ಇರಬೇಕು. ಹೆದರಬಾರದು. ಏನು ಆಗಿಲ್ಲ ಎಂದು ಹೇಳುವುದು ವಿಡಿಯೊದಲ್ಲಿದೆ.

ಇಂತ ಅಪರೂಪದ ದೈರ್ಯಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಕೊಂಡಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು ವಲಯದಲ್ಲೂ ಸಹ ಸಹ ಪ್ರಶಂಸೆ ವ್ಯಕ್ತವಾಗತೊಡಗಿದೆ.

ಲಾಕ್ ಡೌನ್ ಸಡಿಲಿಕೆಯ ಬಳಿಕ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.‌ಕೊರೊನಾ ಜತೆಯಲ್ಲೇ ಬದುಕು ನಡೆಸಬೇಕಾಗಿದೆ. ಇಂತ ಸಂದರ್ಭದಲ್ಲಿ ಮಾಜಿ ಶಾಸಕರ ಭೇಟಿ ದೊಡ್ಡ ರೂಪಾಂತರಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಮಟ್ಟಿಗೆ ಹೇಳುವುದಾದರೆ, ಸ್ವತಃ ಆರೋಗ್ಯ, ವೈದ್ಯಕೀಯ ಸಚಿವರು ಸಹ ಈವರೆಗೆ ಒಬ್ಬ ರೋಗಿಯನ್ನೂ ಮಾತನಾಡಿಸುವ ಧೈರ್ಯ ತೋರಿಲ್ಲ. ಇಂಥ ಸನ್ನಿವೇಷದಲ್ಲಿ ಮಾಜಿ ಶಾಸಕರೊಬ್ಬರ ಈ ನಡೆ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.

ಫೇಸ್ ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಜನರಿಂದ ಭಾರೀ ಪ್ರಶಂಸೆಗೂ ಒಳಗಾಗಿದೆ.

ನಿಜವಾದ ಜನ ನಾಯಕ. ಜನರು ಸಾಯುತ್ತಿರುವಾಗ ಎಲ್ಲರೂ ಮನೆಯೊಳಗೆ ಸೇರಿದ್ದರೆ ಇವರು ಆಸ್ಪತ್ರೆಗೆ ಭೇಟಿ ನೀಡಿರುವುದು ಜನರ ಮೇಲೆ ಇಟ್ಟಿರುವ ನಿಜವಾದ ಪ್ರೀತಿಗೆ ಸಾಕ್ಷಿ ಎಂದು ಬೆಟ್ಟೇಗೌಡ ಎಂಬುವವರು ಬರೆದುಕೊಂಡಿದ್ದಾರೆ.

ಇನ್ನೂ, ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಹ ಮಾಜಿ ಶಾಸಕರ ನಡೆಯನ್ನು ಕೊಂಡಾಡುತ್ತಿದ್ದಾರೆ.

ಸೋಂಕಿತರ ಬಗ್ಗೆ, ಅವರ ಮನೆಯವರ ಬಗ್ಗೆ ಭಯಭೀತಿಯನ್ನು ಜನರು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕರೊಬ್ಬರು ರೋಗಿಗೆ ಧೈರ್ಯ ಹೇಳಲು ಬಂದಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ಬಂದಂತಾಗಿದೆ. ರೋಗಿಗಳಲ್ಲಿ ರೋಗದ ವಿರುದ್ಧ ಹೋರಾಟ ಮಾಡುವ ಶಕ್ತಿ ಹೆಚ್ಚಲಿದೆ ಎನ್ನುತ್ತಾರೆ ವೈದ್ಯರು.

ಕೊರೊನಾ ಸೋಂಕಿತರನ್ನು ಪಿಪಿಇ ಕಿಟ್ ಬಳಸಿ ಯಾರೂ ಬೇಕಾದರೂ ಭೇಟಿಯಾಗಬಹುದು. ರೋಗಿಗಳ ಸಂಬಂಧಿಕರು ಬರಬಹುದು. ಆದರೆ ಹೆದರಿಕೊಂಡು ಯಾರೂ ಬರುವುದಿಲ್ಲ. ಎಷ್ಟೋ ಪ್ರಕರಣಗಳಲ್ಲಿ ನಾವು ಹೇಳಿದರೂ ರೋಗಿಗಳ ಸಂಬಂಧಿಗಳು ಹತ್ತಿರ ಸುಳಿಯುವುದಿಲ್ಲ ಎಂದು ಜಿಲ್ಲಾಶಸ್ತ್ರ ಚಿಕಿತ್ಸಕ ಟಿ.ಎ.ವೀರಭದ್ರಯ್ಯ https://publicstory.in/ ಗೆ ತಿಳಿಸಿದರು.

ತುಮಕೂರು: 26ಕ್ಕೇರಿದ ಕೊರೊನಾ ಸೋಂಕಿತರು

ತುಮಕೂರು: ಭಾನುವಾರ ಒಂದೇ ದಿನ ಇಬ್ಬರಿಗೆ ಕೊರೊನಾ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆ 26ಕ್ಕೇರಿದೆ.

ಇದರಲ್ಲಿ ಪಾವಗಡದಲ್ಲಿ ಕ್ವಾರಂಟೈನ್ ನಲ್ಲಿದ್ದ ಒಬ್ಬರು ತಬ್ಲಿಗಿ ಹಾಗೂ ತಿಪಟೂರು ಗಾಂಧಿನಗರದ ಚಾಮುಂಡೇಶ್ವರಿ ಬಡಾವಣೆಯ ಒಬ್ಬ ಪುರುನಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಏರಿಯವನ್ನು ಸೀಲ್ ಡೌನ್ ಮಾಡಲಾಗುತ್ತದೆ.

ತಾಯಿಗಾಗಿ 56 ಸಾವಿರ ಕಿ.ಮೀ ಸಂಚರಿಸಿದ ಮಗ

ತುಮಕೂರು: ತಾಯಿಯ ಆಸೆ ಈಡೇರಿಸಲು ಮಗ ದೇಶದಾದ್ಯಂತ ಪುಣ್ಯ ಕ್ಷೇತ್ರಗಳಿಗೆ ಬಜಾಜ್ ದ್ವಿ ಚಕ್ರ ವಾಹನದಲ್ಲಿ ಸಂಚರಿಸಿದ್ದಾರೆ.

ಮೈಸೂರು ನಗರದ ಎಂಜಿನಿಯರಿಂಗ್ ಪದವಿಧರ ಕೃಷ್ಣಕುಮಾರ್ (42) ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 70 ವರ್ಷದ ತಾಯಿ ಚೂಡಾರತ್ನ ಅವರ ಕನಸನ್ನು ನನಸು ಮಾಡುವ ಸಲುವಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ತಾಯಿಯೊಂದಿಗೆ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ತಂದೆಯ ಹಳೆಯ ಬಜಾಜ್ ಸ್ಕೂಟರ್ ಅನ್ ಸ್ಟಾರ್ಟ್ ಮಾಡಿದ್ದಾರೆ.

2018 ಜನವರಿ 14 ರಂದು ಮೈಸೂರಿನಿಂದ ಸಂಚಾರ ಆರಂಭಿಸಿ ಉತ್ತರ ಭಾರತ, ನಾಗಲ್ಯಾಂಡ್, ಬೆಸ್ಟ್ ಬೆಂಗಾಲ್, ಕೈಲಾಸ ಪರ್ವತ, ನೇಪಾಳ್, ಮಾನಸ ಸರೋವರ, ಭೂತಾನ್, ಟಿಬೆಟ್ ಸೇರಿದಂತೆ ದೇಶದಲ್ಲಿನ ಪ್ರಸಿದ್ದ ದೇವಾಲಯ ಮತ್ತು ಸ್ಥಳಗಳಿಗೆ ಭೇಟಿ ನೀಡಿ 56000 ಕಿ.ಮೀ ಪ್ರಯಾಣಿಸಿದ್ದಾರೆ.

ಶನಿವಾರ ಸಂಜೆ ಕರ್ನಾಟಕದ ಗಡಿ ಭಾಗವಾದ ಮಧುಗಿರಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಚೆಕ್ ಪೋಸ್ಟ್ ಮೂಲಕ ರಾಜ್ಯಕ್ಕೆ ಪ್ರವೇಶಿಸಿದ ಕೂಡಲೇ ಭೂಮಿ ತಾಯಿಗೆ ನಮಿಸಿದರು.

ತಾಯಿ ಮತ್ತು ಮಗ ರಾಜ್ಯ ಪ್ರವೇಶಿಸುವ ಬಗ್ಗೆ ವಿಷಯ ತಿಳಿದ ತಹಶೀಲ್ದಾರ್ ಡಾ. ವಿಶ್ವನಾಥ್ ಹಾಗೂ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಪಾಲಾಕ್ಷಪ್ರಭು ಅವರು ತಮ್ಮ ಸಿಬ್ಬಂದಿಗಳೊಂದಿಗೆ ಮುದ್ದೇನಹಳ್ಳಿ ಚೆಕ್ ಪೋಸ್ಟ್ ಗೆ ಬಂದು ತಾಯಿ ಮತ್ತು ಮಗನನ್ನು ಸನ್ಮಾನಿಸಿ ಗೌರವಿಸಿದರು.

ತಾಯಿಗಾಗಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಜಾಜ್ ಸ್ಕೂಟರ್ ನಲ್ಲಿ ಸಾವಿರಾರು ಕಿಲೋ ಮೀಟರ್ ಪುಣ್ಯ ಕ್ಷೇತ್ರಗಳ ಪರ್ಯಟನೆ ನಡೆಸಿದ ಇವರು ಆಧುನಿಕ ಶ್ರವಣ ಕುಮಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ನಾನು ಅಮೆರಿಕಾದ ನೆಲದಲ್ಲಿ ಮಣ್ಣು ಹುಡುಕಿದೆ..

ಜಿ.ಎನ್.ಮೋಹನ್

ಅವತ್ತು ತುಂಬಾ ಜೋಷ್ ನಲ್ಲಿ ಮಾತನಾಡುತ್ತಿದ್ದೆ.

ಯಾಕೋ ಹುಕಿ ಬಂದಿತ್ತು.

ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಎಲ್ಲರ ಕಣ್ಣೂ ಅರಳುವಂತೆ ಅದೂ ಇದು ಹೇಳುತ್ತಿದ್ದೆ.

ನಾನು ನಿಜಕ್ಕೂ ಸಂಭ್ರಮದಲ್ಲಿದ್ದೇನೆ ಎನ್ನುವುದು ಎಂತಹವರಿಗೂ ಗೊತ್ತಾಗಿ ಹೋಗುವಂತಿತ್ತು. ನನ್ನ ಹಾವ ಭಾವ, ಒಂದಿಷ್ಟು ಹೆಚ್ಚೇ ಎನ್ನುವಂತಿದ್ದ ನಗು, ಎಲ್ಲವೂ..

ಆಗ, ಆಗ ಆತ ಬಂದ. ಬಂದವನೇ ನನ್ನ ಕೈಗೆ ಒಂದು ಪುಟ್ಟ ಬಾಟಲಿ ನೀಡಿದ.

ನಾನು ಅದರ ಮುಚ್ಚಳ ತಿರುಗಿಸಿದೆ ಅಷ್ಟೇ . ಮಾತು ಗಕ್ಕನೆ ನಿಂತಿತು.
ಆಡುತ್ತಿದ್ದ ಮಾತುಗಳು ಸಿಕ್ಕಿ ಹಾಕಿಕೊಂಡಿತು. ಕಣ್ಣಲ್ಲಿ ಒಂದಿಷ್ಟು ಹನಿ ತುಳುಕಿತೇನೋ ಗೊತ್ತಿಲ್ಲ..

ಅದು ‘ಈಟಿವಿ’ ದಿನಗಳು.

ದಿನಾ ಮಧ್ಯಾಹ್ನ ನಾನು ಎಲ್ಲರನ್ನೂ ಸೇರಿಸಿ ಅದೂ ಇದೂ ಮಾತನಾಡುತ್ತಿದ್ದೆ. ಬೆಂಗಳೂರಿನಿಂದ ಬಂದವರನ್ನುಕರೆದುಕೊಂಡು ಬಂದು ಕೂರಿಸಿ ಹರಟೆ ಹೊಡೆಯುವಂತೆ ಮಾಡುತ್ತಿದ್ದೆ. ದೂರದ ಹೈದ್ರಾಬಾದ್ ನಲ್ಲಿದ್ದು ಕನ್ನಡವನ್ನು ಉಣ್ಣಲೂ ಆಗದ, ತಿನ್ನಲೂ ಆಗದ ಪರಿಸ್ಥಿತಿಯಲ್ಲಿರುವವರಿಗೆ ಅವರ ಊರುಗಳು ಕಾಡಬಾರದಲ್ಲಾ. ಹಾಗಾಗಿ ಅವರ ಊರನ್ನೇ ಇಲ್ಲಿಗೆ ತಂದು ಕೊಡುವ ಕೆಲಸ ಮಾಡುತ್ತಿದ್ದೆ. ಒಂದಿಷ್ಟು ಮಾತಿನ ಮೂಲಕ..

ಅವತ್ತೂ ಹಾಗೆ..

ಆದರೆ ಒಂದು ಬದಲಾವಣೆ ಇತ್ತು. ಆ ದಿನ ಬೇರೆಯವರ ಬದಲು ನನ್ನ ಕಚೇರಿಯಲ್ಲಿ ನಾನೇ ಅತಿಥಿಯಾಗಿದ್ದೆ.

ಎಲ್ಲರೂ ನನ್ನ ಮಾತು ಕೇಳಲು ಸಜ್ಜಾಗಿದ್ದರು. ಅವರೇ ನಿಂತು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

ಅಂದು ರಾತ್ರಿ ನಾನು ಅಮೆರಿಕಾಗೆ ಹೋಗಲು ಸಜ್ಜಾಗಿದ್ದೆ. ಅಲ್ಲಿನ ಸಿ ಎನ್ ಎನ್ ಚಾನಲ್ ನನ್ನನ್ನು ಆಹ್ವಾನಿಸಿತ್ತು. ಅಮೆರಿಕಾದಲ್ಲಿ ಇದ್ದು ಅವರೊಂದಿಗೆ ಒಂದಷ್ಟು ದಿನ ಕೆಲಸ ಮಾಡುತ್ತಾ ಅವರ ಕಾರ್ಯ ವೈಖರಿ ತಿಳಿಯುವ ಅವಕಾಶ. ಹಾಗಾಗಿ ಅದು ನನಗೆ ಶುಭ ಹಾರೈಸಿ ಬೀಳ್ಕೊಡುವ ಕಾರ್ಯಕ್ರಮ.

ಆಗಲೇ ಈ ಘಟನೆ ನಡೆದಿದ್ದು. ನನ್ನ ಕುಲು ಕುಲು ಮಾತಿಗೆ ಒಂದಿಷ್ಟು ಬ್ರೇಕ್ ಹಾಕಿದ್ದು.

ಎಲ್ಲರ ಪರವಾಗಿ ಈಗ ಒಂದು ನೆನಪಿನ ಕಾಣಿಕೆ ಎಂದು ಘೋಷಿಸಿದರು.

ಆಗಲೇ ಆತ ಬಂದದ್ದು. ಜಯಪ್ರಕಾಶ್ ಶೆಟ್ಟಿ. ತನ್ನದೇ ಆದ ಚುರುಕುತನದಿಂದ, ಸದಾ ಹೊಸತನದಿಂದ ಕೂಡಿದ ಹುಡುಗ. ಎಲ್ಲರ ಪರವಾಗಿ ಒಂದು ಪುಟ್ಟ ಗಾಜಿನ ಬಾಟಲಿಯನ್ನು ನನ್ನ ಕೈಗಿತ್ತ. ನನಗೆ ಏನೆಂದು ಅರ್ಥವಾಗಲಿಲ್ಲ.

ಈ ಹಿಂದೆ ಯಾರ್ಯಾರೋ ನನಗೆ, ನಾನೆಂದೂ ಬಳಸದ ಅತ್ತರ್ ಬಾಟಲಿಗಳನ್ನು ತಂದು ಕೊಟ್ಟಿದ್ದು ನೆನಪಾಯಿತು. ನಾನು ಮನಸ್ಸಿನಲ್ಲೇ ಮತ್ತೊಂದು ಎಂದು ಗೊಣಗಿಕೊಂಡೇ ಮುಚ್ಚಳ ತಿರುವಿದೆ.

ಆಗಲೇ ಆಗಲೇ ನನ್ನ ಮಾತು ನಿಂತು ಹೋಗಿದ್ದು. ಕಣ್ಣಲ್ಲಿ ನಾನು ಬೇಡ ಬೇಡ ಎಂದರೂ ಕೇಳದೆ ನೀರು ಜಿನುಗಿದ್ದು..

ಅದರಲ್ಲಿದ್ದದ್ದು ಮಣ್ಣು..

ನಾನಿದ್ದ ನೆಲದ ಮಣ್ಣು. ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯ ಮಣ್ಣು

ನಾನು ಮಾತಿಲ್ಲದವನಾಗಿ ಆ ಮಣ್ಣನ್ನು ನನ್ನ ಎದೆಗೆ ಒತ್ತಿಕೊಂಡೆ.

ನನ್ನ ಮನಸ್ಸು ಹಿಂದಕ್ಕೆ, ಬಹು ಹಿಂದಕ್ಕೆ, ಅಂದರೆ ಮತ್ತೂ ಹಿಂದಕ್ಕೆ.. ಅಂದರೆ ನೀವು ಊಹಿಸಲೂ ಆಗದ ಕಾಲಕ್ಕೆ ಜಾರಿಹೋಯಿತು

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಬೇಕು
ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು
ರಾಮಭದ್ರನ ಮಹಿಮೆ ಹಾಡಬೇಕು

ಹಾಗೆ ನನ್ನ ಮನಸ್ಸು ಎಕ್ಕುಂಡಿಯವರ ಕಾಲಕ್ಕೆ ಜಾರಿಹೋಯಿತು. ಹಾಗೆ ನನ್ನ ಮನಸ್ಸು ಆ ಕ್ಷಣಕ್ಕೆ ಅಲ್ಲಿ ನಿಲ್ಲದೆ ಹಕ್ಕಿಯಂತೆ ರೆಕ್ಕೆ ಬಿಡಿಸಿಕೊಂಡಿತು.

ಒಂದಷ್ಟು ತಿಂಗಳ ಹಿಂದಿನ ಮಾತಷ್ಟೇ, ನಾನೇ ಆ ಹುಡುಗರಿಗೆ ಇಂತಹದೇ ಒಂದು ಮಧ್ಯಾಹ್ನ ಒಂದು ಕಥೆ ಹೇಳಿದ್ದೆ. ಜನಕರಾಜನ ಕಥೆ.

ಸೀತೆಯ ಸ್ವಯಂವರಕ್ಕೆ ಮಿಥಿಲೆ ಸಜ್ಜಾಗುತ್ತದೆ. ಎಲ್ಲೆಲ್ಲಿಗೋ ಸಂದೇಶ ಹೋಗುತ್ತದೆ. ನೂರೆಂಟು ರಾಜಕುಮಾರರು ಮಿಥಿಲೆಯತ್ತ ಹೆಜ್ಜೆ ಹಾಕುತ್ತಾರೆ. ಜನಕರಾಜನ ಷರತ್ತೊಂದಿದೆ. ತನ್ನ ಮುಂದಿಟ್ಟಿರುವ ಶಿವ ಧನುಸ್ಸನ್ನು ಯಾರು ಎತ್ತುತ್ತಾರೋ ಅವರಿಗೆ ಮಗಳು ಸೀತೆಯನ್ನು ಕೊಟ್ಟು ಮದುವೆ . ಅದೇನು ಮಹಾ ಎಂದು ಬಂದವರೆಲ್ಲರೂ ಬಿಲ್ಲು ಎತ್ತಲೂ ಹಾಗದೆ ಕೈ ಚೆಲ್ಲುತ್ತಾರೆ.

ಆಗ ಬರುತ್ತಾನೆ ರಾಮ. ಹೂವಿನಂತೆ ಮೇಲೆತ್ತಿ, ಬಿಲ್ಲು ತುಂಡರಿಸುತ್ತಾನೆ.

ಜನಕರಾಜನಷ್ಟೇ ಸೀತೆಯೂ ಸಂಪ್ರೀತೆ. ನಾಚಿಕೆಯಿಂದ ಬಂದು ರಾಮನಿಗೆ ಮಾಲೆ ಹಾಕುತ್ತಾಳೆ.

ಜನಕರಾಜ ಮದುವೆಯನ್ನು ಮುಗಿಸಿಕೊಟ್ಟು ಇನ್ನೇನು ಸೀತೆ ಅಯೋಧ್ಯೆಯತ್ತ ತೆರಳಬೇಕು ಕಣ್ಣೀರಾಗಿ ಹೋಗುತ್ತಾಳೆ.

ಆಗ ಜನಕರಾಜ ನೆನಪಿನ ಕಾಣಿಕೆಯಾಗಿ ಒಂದು ಪುಟ್ಟ ಕರಡಿಗೆಯನ್ನು ಕೈಗಿಡುತ್ತಾನೆ.

ಸೀತೆಗೂ ಸಂಕೋಚ. ಇಂತಹ ರಾಜಾಧಿರಾಜ ನನಗೆ ನೆನಪಿನ ಕಾಣಿಕೆಯಾಗಿ ಒಂದು ಪುಟ್ಟ ಭರಣಿ. ಏನೆಂದುಕೊಳ್ಳುತ್ತಾರೋ ನೆರೆದ ಜನ, ಪತಿ ರಾಮ ಎಂದು ಮುದುಡಿ ಹೋಗುತ್ತಾಳೆ,

ಹಾಗೆ ಕುಗ್ಗಿಯೇ ಆ ಭರಣಿಯ ಮುಚ್ಚಳ ತೆರೆಯುತ್ತಾಳೆ. ಅವಳ ದುಃಖದ ಕಟ್ಟೆಯೊಡೆದು ಹೋಗುತ್ತದೆ. ಭಿಕ್ಕಿ ಭಿಕ್ಕಿ ಅಳಲಾರಂಭಿಸುತ್ತಾಳೆ. ಯಾರಿಂದಲೂ ತಡೆಯಲಾಗದ ಅಳು ಅದು. ಆ ಭರಣಿಯನ್ನು ಎದೆಗೊತ್ತಿಕೊಳ್ಳುತ್ತಾಳೆ.

ಅಲ್ಲಿದ್ದದ್ದು ಮಣ್ಣು,
ಮಿಥಿಲೆಯ ನೆಲದ ಮಣ್ಣು

ತವರ ನೆನಪಾಗಿ ಅದಕ್ಕಿಂತ ಮಿಗಿಲಾದ ಇನ್ನಾವ ಉಡುಗೊರೆ ಕೊಡಲು ಸಾಧ್ಯ?

ಈ ಕಥೆ ಹೇಳಿದ್ದೆ.
ಊರ ಹಂಗು ಕತ್ತರಿಸಿಕೊಂಡು ಭಾಷೆ ಇಲ್ಲದ ಲೋಕದಲ್ಲಿ ಬದುಕುತ್ತಿದ್ದವರಿಗೆ ಈ ಕಥೆಯಲ್ಲದೆ ಇನ್ನೇನು ಹೇಳಲು ಸಾಧ್ಯ.

ಈಗ ಕಣ್ಣು ಒದ್ದೆಯಾಗುವ ಸರದಿ ನನ್ನದಾಗಿತ್ತು.

ಆ ಹುಡುಗರು, ಆ ಕಥೆ ಕೇಳಿದ್ದ ಹುಡುಗರು, ತಮ್ಮ ಊರಿನ ಮಣ್ಣು ನೆನಪಿಸಿ ಗಂಟಲು ಕಟ್ಟಿಕೊಂಡಿದ್ದ ಹುಡುಗರು ಈಗ ನಾನು ದೂರ ಬಹುದೂರ ಹಾರಿಹೋಗಲು ಸಜ್ಜಾಗಿದ್ದಾಗ ನನಗೆ ಅದೇ ನೆಲದ ಮಣ್ಣನ್ನು ಕಾಣಿಕೆಯಾಗಿ ನೀಡಿದ್ದರು.

ನಾನು ಅವರತ್ತ ಒಮ್ಮೆ ಕೃತಜ್ಞತೆಯ ನೋಟ ಬೀರಿದೆ.

ಆಮೇಲೆ ಆ ಮಣ್ಣಿನ ಬಾಟಲಿ ನನ್ನ ಸೂಟ್ ಕೇಸ್ ಸೇರಿತು. ಹೈದರಾಬಾದ್ ನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಜರ್ಮನಿಗೆ, ಜರ್ಮನಿಯಿಂದ ಅಮೆರಿಕಾಗೆ ಹೀಗೆ ಅದು ನನ್ನೊಡನೆ ಹಾರುತ್ತಿತ್ತು.

ಯಾವುದೇ ಪಾಸ್ ಪೋರ್ಟ್, ಯಾವುದೇ ವೀಸಾ ಇಲ್ಲದೆ ನನ್ನ ನೆಲ ನನ್ನೊಂದಿಗೆ ಬೆಚ್ಚಗೆ ಪಯಣಿಸುತ್ತಿತ್ತು. ದೇಶಗಳ ಗಡಿಗಳಿಗೆ ಕಿಮ್ಮತ್ತೇ ಕೊಡದೆ ನನ್ನ ನೆಲದ ಹಾಡು ನನ್ನೊಳಗೆ ರಾಗವಾಗಿತ್ತು.

ಅಟ್ಲಾಂಟಾದಲ್ಲಿ ಬಂದಿಳಿದೆ. ಕಸ್ಟಮ್ಸ್ ಬಾಗಿಲು ದಾಟಬೇಕು. ಆಗಲೇ ‘ಕುಂಯ್ ಕುಂಯ್’ ಸದ್ದು ಕೇಳಿಸಿದ್ದು.

ನನ್ನನ್ನು ಬದಿಗೆ ಕರೆದರು. ನಾನು ಹೊತ್ತು ತಂದಿದ್ದ ಸೂಟ್ ಕೇಸ್ ಮೇಲೆ ಸ್ಕ್ಯಾನರ್ ಗಳು ಓಡಾಡಿದವು. ಕೊನೆಗೆ ಸೂಟ್ ಕೇಸ್ ತೆರೆಯಲು ಹೇಳಿದರು. ನಾನು ಮುದ್ದಾಗಿ ಜೋಡಿಸಿದ್ದ ನನ್ನೆಲ್ಲಾ ಬಂಡವಾಳವೂ ಅವರಿಗೆ ದರ್ಶನವಾಯಿಯು.

ನಾನೂ ಸಹಾ ಅಂತಹದ್ದೇನು ಹೊತ್ತು ತಂದಿರಬಹುದು ಎಂದು ತಲೆ ಬಿಸಿ ಮಾಡಿಕೊಂಡೇ ನೋಡುತ್ತಿದ್ದೆ. ಆಗ ಒಹೋ ಸಿಕ್ಕೇ ಹೋಯ್ತು ಎನ್ನುವಂತೆ ಹೊರತೆಗೆದರು.

ಅದೇ ಬಾಟಲಿಯನ್ನು. ನನ್ನ ನೆಲದ ಮಣ್ಣು ಹೊತ್ತ ಬಾಟಲಿಯನ್ನು.
ಏನು ಎನ್ನುವಂತೆ ನನ್ನೆಡೆ ನೋಡಿದರು.

ಅದು ಉಪ್ಪಿನಕಾಯಿ ಅಲ್ಲ, ಮೊಸರಲ್ಲ, ಮದ್ದೂರು ವಡೆಯಲ್ಲ. ಹಾಗಿದ್ದರೆ ಇದೇನು? ಎನ್ನುವಂತಿತ್ತು ಅವರ ಮುಖ.

ನಾನು ‘ಮಣ್ಣು’ ಎಂದೆ

ಮತ್ತೆ ಅವರ ಹುಬ್ಬೇರಿತು. ನಂತರ ಹೇಳಿದೆ. ಇದು ಮಣ್ಣೆಂದರೆ ಮಣ್ಣಲ್ಲ ನನ್ನ ತವರಿನ ನೆನಪು. ಮತ್ತೆ ನನಗೆ ಇದು ಸಿಕ್ಕ ರೀತಿ ಹೇಳಿದೆ.

ಅವರ ಮುಖ ನೋಡಬೇಕಿತ್ತು. ಒಂದು ಮುಗುಳ್ನಗು ಚೆಲ್ಲಿದವರೇ ಕೈ ಕುಲುಕಿ ‘ಹ್ಯಾಪಿ ಟೈಮ್’ ಎಂದರು. ಅಷ್ಟೇ ಜೋಪಾನವಾಗಿ ಅದನ್ನು ನನ್ನ ಸೂಟ್ ಕೇಸ್ ಸೇರಿಸಿದರು.

ನಾನು ಅಲ್ಲಿಂದ ಸಿ ಎನ್ ಎನ್ ಗೂಡು ಸೇರಿಕೊಂಡೆ. ನನ್ನೊಡನೆ ಅದೂ.. ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎನ್ನುವಂತೆ.

ಹಾಗೆ ಹಾರುತ್ತಾ ಹಾರುತ್ತಾ ಮರಳಿ ಗೂಡು ಸೇರಿಕೊಂಡೆ.

ಹೋದಾಗ ಹೇಗೆ ಬೀಳ್ಕೊಟ್ಟರೋ ಅದೇ ಸಂಭ್ರಮದಿಂದ ಎಲ್ಲರೂ ನನ್ನ ಅನುಭವದ ಕಥೆ ಕೇಳಲು ಸಜ್ಜಾದರು.

ಎಂದಿನಂತೆ ಒಂದು ಮಧ್ಯಾಹ್ನ ನಾನು ಇಡೀ ಅಮೆರಿಕಾವನ್ನು ಅವರೆದುರು ಹರಡತೊಡಗಿದೆ.

ಆ ಊರು ಆ ದೇಶ ಎಲ್ಲವನ್ನೂ.. ಮಾತಾಡಿದ್ದೆಲ್ಲಾ ಮುಗಿಯಿತು.

ನಂತರ ಎಲ್ಲರೂ ಫಾರಿನ್ ನಿಂದ ನಮಗೇನು ತಂದಿದ್ದೀರಿ ಎಂದು ಕೂಗಿದರು

ನಾನು ನನ್ನ ಜೋಬಿನಿಂದ ಒಂದು ಬಾಟಲಿ ಹೊರ ತೆರೆದೆ . ಅವರು ಬಿಚ್ಚಿ ನೋಡಿದರು.

ಅರೆ ಅದೂ ಮಣ್ಣು.. ಅಮೆರಿಕಾದ ಮಣ್ಣು.

ಮಣ್ಣಿಗಿಂತ ಇನ್ನೊಂದಿಲ್ಲ ಎಂದು ತಿಳಿಸಿಕೊಟ್ಟವರಿಗೆ ನಾನು ಮಣ್ಣನ್ನೇ ಹೊತ್ತು ತಂದಿದ್ದೆ.

ಎಲ್ಲರೂ ಬೆರಗಾಗಿ ನೋಡುತ್ತಿದ್ದರು.

ನಾನು ಹೇಳಿದೆ ಇದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲೆಲ್ಲೂ ಕಾಂಕ್ರೀಟ್ ನ ನೆಲ ಹೊಂದಿರುವ ದೇಶದಲ್ಲಿ ಮಣ್ಣೆಲ್ಲಿ ಕಾಣಬೇಕು. ನಾನು ಹುಡುಕಿಯೇ ಹುಡುಕಿದ್ದೆ. ರಸ್ತೆ ಬದಿಯಲ್ಲಿ ನಡೆಯುತ್ತಿದ್ದರೆ ನಾನು ಹಾಗೆ ಕಣ್ಣು ನೆಲಕ್ಕೆ ಊರಿ ಬದಿಗೆ ಹೋಗುತ್ತಿದ್ದೆ. ನನ್ನೊಂದಿಗಿದ್ದ ಸಿ ಎನ್ ಎನ್ ಹುಡುಗರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು.

ಒಂದು ರಾತ್ರಿಯಂತೂ ಎಲ್ಲರೂ ಬಾರ್ ಹಾಪಿಂಗ್ ಮಾಡಲು ಸಜ್ಜಾಗುತ್ತಿದ್ದಾಗ ನಾನು ಬರುವುದಿಲ್ಲ ಎಂದೆ ಯಾಕೆ ಹುಷಾರಿಲ್ಲವಾ ಎಂದರು. ಇಲ್ಲ ನಾನು ಮಣ್ಣು ಹುಡುಕಬೇಕು ಎಂದೆ. ಅವರ ತೆರೆದ ಬಾಯಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನಾನು ಹುಡುಕಿ ಹುಡುಕಿ ಮಣ್ಣು ಸಂಗ್ರಹಿಸಿದ್ದೆ. ಅದು ಮಣ್ಣೋ ಗೊಬ್ಬರವೋ ಏನೂ ತಿಳಿಯದಾಗಿ ಹೋಗಿತ್ತು.

ನನ್ನ ಸೂಟ್ ಕೇಸ್ ನಲ್ಲಿದ್ದ ನನ್ನ ‘ಬನವಾಸಿ’ಯ ಜೊತೆಗೆ ಈಗ ಎರಡನೆಯ ಬಾಟಲಿಯೊಂದು ಕೂಡಿಕೊಂಡಿತ್ತು.

ಅಲ್ಲಿಂದ ಎರಡೂ ಪಕ್ಕ ಪಕ್ಕವೇ ಊರೂರು ಅಲೆಯಿತು. ಅದೇನು ಕಷ್ಟ ಸುಖ ಮಾತಾಡಿಕೊಂಡವೋ, ಅದೆಷ್ಟು ಬಾರಿ ನಕ್ಕವೋ, ಅದೆಷ್ಟು ಪಿಸು ಮಾತು ಸೇರಿಸಿದವೋ, ಇಲ್ಲಾ ಎಷ್ಟು ಒಡಂಬಡಿಕೆಗಳಿಗೆ ಸಹಿ ಮಾಡಿದವೋ ಗೊತ್ತಿಲ್ಲ.

ಆ ಎರಡೂ ಸಹಾ ಅಟ್ಲಾಂಟಾ, ವಾಷಿಂಗ್ಟನ್, ನ್ಯೂಯಾರ್ಕ್ , ಜರ್ಮನಿ, ಬೆಂಗಳೂರು ಹಾದು ಹೈದರಾಬಾದ್ ಸೇರಿದವು.

ಹುಡುಗರೆಲ್ಲ ‘ಹೋ’ ಎಂದು ಕೂಗಿ ‘ಅಂದರೆ ನಾವು ಕೊಟ್ಟಿದ್ದು ಅಲ್ಲೇ ಬಿಟ್ಟು ಹೋಯಿತು ಅಲ್ಲವಾ’ ಎಂದರು.

ಆಗ ನಾನು ಮತ್ತೆ ನನ್ನ ಜೋಬಿನಿಂದ ಇನ್ನೊಂದು ಬಾಟಲಿ ತೆಗೆದೆ. ಅದೇ ಆ ಹುಡುಗರು ಕೊಟ್ಟು ಕಳಿಸಿದ ಮಣ್ಣು. ಎಲ್ಲರಿಗೂ ಡಬಲ್ ಸಂಭ್ರಮ. ಮತ್ತೆ ಕೇಕೆ ಹಾಕಿದರು.

ನಾನು ಹೇಳಿದೆ ‘ನಿಮ್ಮನ್ನು ಹೊತ್ತೊಯ್ದಿದ್ದೇನೆ. ನನ್ನ ಹೃದಯದಲ್ಲಿ ಭದ್ರವಾಗಿಟ್ಟುಕೊಂಡು.. ಜೊತೆಗೆ ಅವರನ್ನೂ ಕರೆ ತಂದಿದ್ದೇನೆ ನಿಮ್ಮ ಕೈ ಕುಲುಕಲೆಂದು..’ ಅಂತ.

ಅವರು ಏನು ಹೇಳುತ್ತಿದ್ದರೋ ಗೊತ್ತಿಲ್ಲ. ನನ್ನ ಕಿವಿಯೊಳಗೆ ಅದೇ ಎಕ್ಕುಂಡಿ ಕವಿತೆ

ಮಗಳ ಮನೆತುಂಬಿಸುತ ಬೀಳ್ಕೊಡಲು ಜನಕನು
ಹನಿದುಂಬಿದವು ಮಿಥಿಲೆಯ ಹೃದಯ – ಕಣ್ಣು
‘‘ಮಗಳೆ ಮಂಗಲವಿರಲಿ’’ ಎಂದು ಉಡುಗೊರೆಯಿತ್ತ
ಬಂಗಾರದ ಕರಡಿಗೆ ತುಂಬ ಹೊಲದ ಮಣ್ಣು

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ..

ತಿಪಟೂರು ಕೊರೊನಾ ಶಂಕೆ: ಚಾಲಕ ಆಸ್ಪತ್ರೆಗೆ ಸ್ಥಳಾಂತರ

ತಿಪಟೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ತಿಪಟೂರಿನ ಗಾಂಧಿನಗರದಲ್ಲಿರುವ ಚಾಮುಂಡೇಶ್ವರಿ ಬಡಾವಣೆಯಲ್ಲಿನ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈತ ಕೊಬ್ಬರಿ ವರ್ತಕರೊಬ್ಬರ ಬಳಿ ಲಾರಿ ಚಾಲಕರಾಗಿದ್ದು, ಕೊಬ್ಬರಿ ತೆಗೆದುಕೊಂಡು ಮುಂಬೈಗೆ ಹೋಗಿ ಬಂದ ಹಿನ್ನೆಲೆ ಇದೆ.

ಈತನನ್ನು ಕ್ವಾರಂಟೈನ್ ಮಾಡಲಾಗಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಏನನ್ನು ಇಲ್ಲಿಯವರೆಗೂ ಹೇಳಿಲ್ಲ.

ನಾನು ಅಮೆರಿಕಾದ ನೆಲದಲ್ಲಿ ಮಣ್ಣು ಹುಡುಕಿದೆ..

ಜಿ ಎನ್ ಮೋಹನ್

ಉದ್ಯೋಗ ಆಕಾಂಕ್ಷಿಗಳ ಮಾಹಿತಿ ಸೋರಿಕೆ!

ಕೆಲಸ ಪಡೆದುಕೊಳ್ಳುವ ಸಲುವಾಗಿ ಉದ್ಯೋಗ ಆಕಾಂಕ್ಷಿಗಳು ನೀಡುವ ವಿವರಗಳು ಸೋರಿಕೆಯಾಗುತ್ತಿವೆ…? 29 ಮಿಲಿಯನ್ ಭಾರತೀಯರ ಡೇಟಾ ಸೋರಿಕೆಯಾಗಿರುವುದು ಇದಕ್ಕೆ ನಿದರ್ಶನ. ಉದ್ಯೋಗ ನೀಡುತ್ತೇವೆ ಎಂದು ವಿವರ ಸಂಗ್ರಹಿಸುವ ವೆಬ್ ಸೈಟ್ ಗಳು ಸೇಫ್ ಅಲ್ಲ ಎಂದು ಸಾಬೀತಾಗಿದೆ.

ಡಾರ್ಕ್ ವೆಬ್‌ನಲ್ಲಿ 29 ಮಿಲಿಯನ್ ಭಾರತೀಯರ ವೈಯಕ್ತಿಕ ಡೇಟಾವನ್ನು ಹ್ಯಾಕರ್‌ಗಳು ಸೋರಿಕೆ ಮಾಡಿದ್ದಾರೆ.

 ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿರುವ ಹ್ಯಾಕಿಂಗ್ ಫೋರಂಗಳಲ್ಲಿ ಉಚಿತವಾಗಿ ಪೋಸ್ಟ್ ಮಾಡಿದ್ದಾರೆ.

ಕಂಪನಿಯು ಇತ್ತೀಚೆಗೆ ಫೇಸ್‌ಬುಕ್ ಮತ್ತು ಸಿಕ್ವೊಯಾ ಅನುದಾನಿತ ಭಾರತೀಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಉನಾಕಾಡೆಮಿಯ ಹ್ಯಾಕಿಂಗ್ ಅನ್ನು ಬಹಿರಂಗಪಡಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“29.1 ಮಿಲಿಯನ್ ಭಾರತೀಯ ಉದ್ಯೋಗಾಕಾಂಕ್ಷಿಗಳ ವೈಯಕ್ತಿಕ ವಿವರಗಳು ಡೀಪ್ ವೆಬ್ ನಲ್ಲಿ ಉಚಿತವಾಗಿ ಸೋರಿಕೆಯಾಗುತ್ತಿವೆ. ನಾವು ಸಾಮಾನ್ಯವಾಗಿ ಈ ರೀತಿಯ ಸೋರಿಕೆಯನ್ನು ಸಾರ್ವಕಾಲಿಕವಾಗಿ ನೋಡುತ್ತೇವೆ, ಆದರೆ ಈ ಸಮಯದಲ್ಲಿ, ಸಂದೇಶ ಹೆಡರ್ ನಮ್ಮ ಗಮನವನ್ನು ಸೆಳೆಯಿತು ಏಕೆಂದರೆ ಅದರಲ್ಲಿ ಹೆಚ್ಚಿನ ವೈಯಕ್ತಿಕ ವಿವರಗಳು ಸೇರಿವೆ ಸ್ಥಿರ ಶಿಕ್ಷಣ, ವಿಳಾಸ, ಇತ್ಯಾದಿ” ಎಂದು ಸೈಬಲ್  ಎನ್ನುವ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.

ಕೆಲಸ ಕೊಡಿಸುವ ಹೆಸರಿನಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ವೆಬ್ ಸೈಟ್ ಗಳಿಂದ ವಿವರಗಳು ಸೋರಿಕೆಯಾಗಿವೆ. ಭಾರತ ದಂತ  ಬೃಹತ್ ದೇಶದಲ್ಲಿ  ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಸರ್ವೇ ಸಾಮಾನ್ಯ ಇದನ್ನು ಬಳಸಿಕೊಂಂಡಿರುವ ಹ್ಯಾಕರ್ ಗಳು 29.1 ಮಿಲಿಯನ್ ಜನರ ಸಂಪೂರ್ಣ ವಿವರವನ್ನು ಸೋರಿಕೆ ಮಾಡಿದ್ದಾರೆ

ಭಾರತದ ಕೆಲವು ಪ್ರಮುಖ ಉದ್ಯೋಗ ವೆಬ್‌ಸೈಟ್‌ಗಳಲ್ಲಿ  ಸೋರಿಕೆಯ ಮೂಲವನ್ನು ಪತ್ತೆ ಮಾಡುತ್ತಿರುವುದಾಗಿ ಸೈಬರ್ ಕ್ರೈಂ ಇಲಾಖೆ ಮೂಲಗಳು ತಿಳಿಸಿವೆ.