Friday, May 8, 2026
Google search engine
Home Blog Page 220

ಪಾವಗಡ: ಕೊರೋನಾ ಶಂಕೆ ತಬ್ಲಿಘಿ ಸ್ಥಳಾಂತರ

ಪಾವಗಡ ಕುರುಬರಹಳ್ಳಿ ಗೇಟ್ ಬಳಿಯ ವಸತಿನಿಲಯದಲ್ಲಿ ಕ್ವಾರಂಟೈನ್ ನಲ್ಲಿದ್ದ 22 ವರ್ಷದ ತಬ್ಲಿಘಿ ಯನ್ನು ಶನಿವಾರ ರಾತ್ರಿ ತುಮಕೂರಿನ ಕೋವಿಡ್ 19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವೈ ಎನ್ ಹೊಸಕೋಟೆ ಮೂಲದ 13 ಮಂದಿ ಗುಜರಾತ್ ನಿಂದ ಬಂದಿದ್ದರು. ಇವರಲ್ಲಿ 3 ಮಂದಿಗೆ ಸೋಂಕು ದೃಢಪಟ್ಟಿತ್ತು.

ಮತ್ತೆ 10 ಮಂದಿಯ ಗಂಟಲು ದ್ರವ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ರಾತ್ರಿ ತುಮಕೂರಿಗೆ ಸ್ಥಳಾಂತರಿಸಿರುವ ವ್ಯಕ್ತಿಗೆ ಸೋಂಕು ಇರುವ ಶಂಕೆ ಇದೆ.

ಈ ರಾಶಿಯವರು ಆತಂಕದ ಕ್ಷಣ ಎದುರಿಸಬೇಕಾದೀತು

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 24, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಜ್ಯೇಷ್ಠ ಮಾಸ
ಋತು : ಗ್ರೀಷ್ಮ ಋತು
ಕಾಲ : ಬೇಸಿಗೆಕಾಲ
ವಾರ : ಭಾನುವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಬಿದಿಗೆ
(ಇಂದು ಪ್ರಾತಃಕಾಲ 0 ಗಂ॥ 16 ನಿ।। ರಿಂದ
ಮರುದಿನ ಪ್ರಾತಃಕಾಲ 0 ಗಂ॥ 59 ನಿ।। ತನಕ)
ನಕ್ಷತ್ರ : ಮೃಗಶಿರ
(ಇಂದು ಪ್ರಾತಃಕಾಲ 4 ಗಂ॥ 53 ನಿ।। ರಿಂದ
ಮರುದಿನ ಬೆಳಿಗ್ಗೆ 6 ಗಂ॥ 10 ನಿ।। ತನಕ)
ಯೋಗ : ಸುಕರ್ಮ
ಕರಣ : ಬಾಲವ
ವರ್ಜ್ಯಂ : (ಇಂದು ಬೆಳಿಗ್ಗೆ 10 ಗಂ॥ 46 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 27 ನಿ।। ತನಕ)(ಇಂದು ಬೆಳಿಗ್ಗೆ 10 ಗಂ॥ 46 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 27 ನಿ।। ತನಕ)
ಅಮೃತಕಾಲ : (ಇಂದು ಪ್ರಾತಃಕಾಲ 1 ಗಂ॥ 26 ನಿ।। ರಿಂದ ಇಂದು ಪ್ರಾತಃಕಾಲ 3 ಗಂ॥ 8 ನಿ।। ತನಕ)(ಇಂದು ರಾತ್ರಿ 8 ಗಂ॥ 53 ನಿ।। ರಿಂದ ಇಂದು ರಾತ್ರಿ 10 ಗಂ॥ 34 ನಿ।। ತನಕ)(ಇಂದು ರಾತ್ರಿ 8 ಗಂ॥ 53 ನಿ।। ರಿಂದ ಇಂದು ರಾತ್ರಿ 10 ಗಂ॥ 34 ನಿ।। ತನಕ)
ದುರ್ಮುಹೂರ್ತ : (ಇಂದು ಸಂಜೆ 4 ಗಂ॥ 58 ನಿ।। ರಿಂದ ಇಂದು ಸಂಜೆ 5 ಗಂ॥ 50 ನಿ।। ತನಕ)
ರಾಹುಕಾಲ : (ಇಂದು ಸಂಜೆ 5 ಗಂ॥ 5 ನಿ।। ರಿಂದ ಇಂದು ರಾತ್ರಿ 6 ಗಂ॥ 42 ನಿ।। ತನಕ)
ಗುಳಿಕ : (ಇಂದು ಸಂಜೆ 3 ಗಂ॥ 27 ನಿ।। ರಿಂದ ಇಂದು ಸಂಜೆ 5 ಗಂ॥ 4 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 11 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 48 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 41 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 43 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ವೃಷಭ

ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ : 24 May 2020
ನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ಇಂದು, ಒಂದು ಪಾರ್ಟಿಯಲ್ಲಿ ನೀವು ಆರ್ಥಿಕ ಭಾಗವನ್ನು ಬಲಪಡಿಸಲು ಪ್ರಮುಖ ಸಲಹೆಯನ್ನು ನೀಡುವ ವ್ಯಕ್ತಿಯನ್ನು ಭೇಟಿ ಮಾಡಬಹುದು. ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ. ಪ್ರಣಯ ಸಂಬಂಧದಲ್ಲಿ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 8

ವೃಷಭ ರಾಶಿ ಭವಿಷ್ಯ : 24 May 2020
ಸ್ವಯಂ ಸುಧಾರಣೆಯ ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ನೀಡುತ್ತವೆ – ನಿಮ್ಮ ಬಗ್ಗೆ ನಿಮಗೇ ಒಳ್ಳೆಯದೆನಿಸುತ್ತದೆ ಮತ್ತು ವಿಶ್ವಾಸ ಮೂಡುತ್ತದೆ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನಿಮ್ಮಲ್ಲಿ ಕೆಲವು ಆಭರಣ ಅಥವಾ ಗೃಹಬಳಕೆಯ ಸಾಧನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ – ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಅದೃಷ್ಟ ಸಂಖ್ಯೆ: 8

ಮಿಥುನ ರಾಶಿ ಭವಿಷ್ಯ: 24 May 2020
ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡದೇ ನಿಮಗೂ ಮಾನಸಿಕ ಒತ್ತಡ ನೀಡುತ್ತದೆ. ದೀರ್ಘಕಾಲದ ಲಾಭಗಳಿಗೆ ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನೀವು ಇನ್ನು ಮುಂದೆ ನಿಮ್ಮ ಕಾಮಪ್ರಚೋದಕ ಕಲ್ಪನೆಗಳ ಬಗ್ಗೆ ಕನಸು ಕಾಣಬೇಕಾಗಿಲ್ಲ; ಅವು ಇಂದು ನಿಜವಾಗಬಹುದು. ಸಮಸ್ಯೆಗಳನ್ನು ಹತ್ತಿಕ್ಕುವ ಮನಸ್ಸಿರುವವರೆಗೂ ಯಾವುದೂ ಅಸಾಧ್ಯವಲ್ಲ. ಅದೃಷ್ಟ ಸಂಖ್ಯೆ: 6

ಕರ್ಕ ರಾಶಿ ಭವಿಷ್ಯ : 24 May 2020
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಯಾವುದೇ ಸಮಯದಲ್ಲಿ ಹಣದ ಅಗತ್ಯವಿರುತ್ತದೆ ಆದ್ದರಿಂದ ಇಂದು ಸಾಧ್ಯವಾದಷ್ಟು ನಿಮ್ಮ ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ನಿಮ್ಮ ಮನೆಯ ಪರಿಸ್ಥಿತಿ ಸ್ವಲ್ಪ ಅನಿರೀಕ್ಷಿತವಾಗಿರುತ್ತದೆ. ಅದೃಷ್ಟ ಸಂಖ್ಯೆ: 9

ಸಿಂಹ ರಾಶಿ ಭವಿಷ್ಯ : 24 May 2020
ಗಾಳಿಗೊಡ್ಡಿದ ಆಹಾರ ನಿಮಗೆ ಅನಾರೋಗ್ಯ ತರಬಹುದಾದ್ದರಿಂದ ಅವುಗಳನ್ನು ತಿನ್ನಬೇಡಿ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು, ಇದು ಮನೆಯಲ್ಲಿ ಆತಂಕದ ಕ್ಷಣಗಳು ತರುತ್ತದೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಅವಳ ಹಿಂದಿನ ಉದಾಸೀನತೆಯನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಮೌಲ್ಯಯುತವಾಗಿಸುತ್ತೀರಿ. ಅದೃಷ್ಟ ಸಂಖ್ಯೆ: 8

ಕನ್ಯಾ ರಾಶಿ ಭವಿಷ್ಯ : 24 May 2020
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ – ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ನಿಮ್ಮ ವರ್ತನೆಯಲ್ಲಿ, ವಿಶೇಷವಾಗಿ ನಿಮ್ಮ ಸಂಗಾತಿಯ ಜೊತೆ, ತಾಳ ತಪ್ಪದಿರಲಿ. ಇಲ್ಲವಾದರೆ ಅದು ಮನೆಯಲ್ಲಿನ ಶಾಂತಿಯನ್ನು ಹಾಳಾಗಿಸಬಹುದು. ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ – ನಿಮ್ಮ ಪ್ರೀತಿಪಾತ್ರರು ನಿಮಗೆ ಅಪಾರ ಸಂತೋಷ ತರುತ್ತಾರೆ. ಮನೆಯಲ್ಲಿರುವ ಯಾವುದೇ ಹಳೆಯ ವಸ್ತು ಇಂದು ನಿಮಗೆ ಸಿಗಬಹುದು. ಅದೃಷ್ಟ ಸಂಖ್ಯೆ: 6

ತುಲಾ ರಾಶಿ ಭವಿಷ್ಯ : 24 May 2020
ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ ವಿಶೇಷವಾಗಿ ಮದ್ಯಪಾನ ಮಾಡಬೇಡಿ. ರಾತ್ರಿಯ ವೇಳೆಯಲ್ಲಿ ಇಂದು ನೀವು ಹಣದ ಪ್ರಯೋಜನವನ್ನು ಪಡೆಯುವ ಪೂರ್ತಿ ಸಾಧ್ಯತೆ ಇದೆ ಏಕೆಂದರೆ ನಿಮ್ಮ ಮೂಲಕ ಕೊಟ್ಟಿರುವ ಹಣ ಇಂದು ನಿಮಗೆ ಮರಳಿ ಸಿಗಬಹುದು. ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ. ಸೆಕ್ಸ್ ಅಪೀಲ್ ಬೇಕಾದ ಫಲಿತಾಂಶವನ್ನು ನೀಡುತ್ತದೆ ನೀವು ಶಕ್ತಿಶಾಲಿ ಸ್ಥಳಗಳಲ್ಲಿರುವವರ ಜೊತೆ ಒಡನಾಡುವ ಅಗತ್ಯವಿದೆ. ಅದೃಷ್ಟ ಸಂಖ್ಯೆ: 8

ವೃಶ್ಚಿಕ ರಾಶಿ ಭವಿಷ್ಯ : 24 May 2020
ನಿಮ್ಮ ಕಚೇರಿಯನ್ನು ಬೇಗನೆ ಬಿಡಲು ಮತ್ತು ನೀವು ನಿಜವಾಗಿಯೂ ಆನಂದಿಸುವದನ್ನು ಮಾಡಲು ಪ್ರಯತ್ನಿಸಿ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ವೆಚ್ಚಗಳಲ್ಲಿ ನಿಮಗೆ ಉಳಿಸಲು ಕಷ್ಟವಾಗಿಸುತ್ತದೆ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ. ನಿಮ್ಮ ಕಾರ್ಯಗಳು ದುರಾಶೆಯಿಂದಲ್ಲದೇ ಪ್ರೀತಿ ಮತ್ತು ಸಕಾರಾತ್ಮಕ ದೃಷ್ಟಿಯಿಂದ ನಡೆಯಬೇಕು. ನಿಮ್ಮ ಸಂಗಾತಿಯ ಜೊತೆ ಹೊರಹೋಗುವಾಗ ಸಭ್ಯತೆಯಿಂದ ವರ್ತಿಸಿ. ಅದೃಷ್ಟ ಸಂಖ್ಯೆ: 1

ಧನು ರಾಶಿ ಭವಿಷ್ಯ : 24 May 2020
ನಿಮ್ಮ ನೀಡುವ ವರ್ತನೆ ಪರೋಕ್ಷವಾಗಿ ನಿಮಗೆ ಆಶೀರ್ವಾದವೇ ಆಗುತ್ತದೆ, ಏಕೆಂದರೆ ನೀವು ಅನುಮಾನ, ನಿರಾಸೆ, ವಿಶ್ವಾಸರಾಹಿತ್ಯ ಅಹಂಭಾವ ಮತ್ತು ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ನೀವು ಇತರರ ಮೇಲೆ ಹೆಚ್ಚು ಖರ್ಚು ಮಾಡಬಯಸುತ್ತೀರಿ. ನಿಮ್ಮ ಕುಟುಂಬದ ಸಲುವಾಗಿ ಏನಾದರೂ ಉದಾತ್ತ ಮತ್ತು ಉಪಯುಕ್ತವಾದದ್ದರ ಸಲುವಾಗಿ ಶ್ರಮಪಡಿ. ಒಂದು ತಪ್ಪಿದ ಅವಕಾಶ ಮತ್ತೆ ಮರಳದೇ ಇರಬಹುದಾದ್ದರಿಂದ ಹಿಂಜರಿಯಬೇಡಿ. ಅದೃಷ್ಟ ಸಂಖ್ಯೆ: 7

ಮಕರ ರಾಶಿ ಭವಿಷ್ಯ : 24 May 2020
ಅತಿಯಾಗಿ ತಿನ್ನುವುದು ಮತ್ತು ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಬೇಕು. ನಿಮ್ಮ ಜೀವನದ ಕಳಪೆ ಆರೋಗ್ಯದಿಂದಾಗಿ, ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು, ಆದರೆ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ಹಣವನ್ನು ಉಳಿಸಲಾಗಿದೆ ಇದರಿಂದ ಅದು ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗಿರುತ್ತದೆ. ಕುಟುಂಬ ಅಥವಾ ಹತ್ತಿರದ ಸ್ನೇಹಿತರ ಜೊತೆ ಇದನ್ನು ಒಂದು ಅತ್ಯುತ್ತಮ ದಿನವಾಗಿಸಿ. ಅದೃಷ್ಟ ಸಂಖ್ಯೆ: 7

ಕುಂಭ ರಾಶಿ ಭವಿಷ್ಯ : 24 May 2020
ಆರೋಗ್ಯ ಚೆನ್ನಾಗಿರುತ್ತದೆ. ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಎಲ್ಲರನ್ನೂ ಆರಾಮವಾಗಿ ಮತ್ತು ಆಹ್ಲಾದಕರ ಮನಸ್ಥಿತಿಯಲ್ಲಿಡುತ್ತದೆ. ನೀವು ಪ್ರೀತಿಯ ಮನೋಭಾವದಲ್ಲಿರುತ್ತೀರಿ ಮತ್ತು ಅದಕ್ಕೆ ಅವಕಾಶಗಳೂ ಸಾಕಷ್ಟಿರುತ್ತವೆ. ನೀವು ಇಂದು ಮಾಡುವ ಸ್ವಯಂ ಸೇವೆಯ ಕೆಲಸ ನೀವು ಸಹಾಯ ಮಾಡುವವರಿಗೆ ಮಾತ್ರವಲ್ಲದೇ ನಮ್ಮನ್ನು ನೀವೇ ಹೆಚ್ಚು ಸಕಾರಾತ್ಮಕವಾಗಿ ನೋಡಲು ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 5

ಮೀನ ರಾಶಿ ಭವಿಷ್ಯ 24 May 2020
ಅಭದ್ರತೆ / ದಿಗ್ಭ್ರಮೆಯ ಭಾವನೆ ತಲೆತಿರುಗುವಿಕೆಯನ್ನು ಉಂಟುಮಾಡಬಹುದು. ಹಣ ನಿಮಗೆ ಅಗತ್ಯವಾಗಿದೆ ಆದರೆ ನಿಮ್ಮ ಸಂಬಂಧಗಳನ್ನು ಹಾಳುಮಾಡುವಷ್ಟು ಹಣದ ಬಗ್ಗ್ಗೆ ಗಂಭೀರವಾಗಬೇಡಿ. ಸಂಗಾತಿ ಕಾಳಜಿ ತೋರಿಸುತ್ತಾರೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲಿಗಾದರೂ ಹೊರಗೆ ಹೋಗುತ್ತಿದ್ದರೆ ಬಟ್ಟೆಗಳನ್ನು ಚಿಂತನಶೀಲವಾಗಿ ಧರಿಸಿ. ನೀವು ಹಾಗೆ ಮಾಡದಿದ್ದರೆ ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ಅದೃಷ್ಟ ಸಂಖ್ಯೆ: 3

ಮುಟ್ಟಿನ ವೇಳೆ ಹೆಂಗಸರನ್ನು ಮುಟ್ಟಬಾರದು ಏಕೆ?

0

ಶಿಲ್ಪಾ ಎಂ ತಾರೀಕಟ್ಟೆ


ಮುಟ್ಟು ಆಗಿರುವ ಹೆಣ್ಣು ಮಕ್ಕಳನ್ನು ಮುಟ್ಟಬಾರದು. ಈ ಕಾರಣಕ್ಕೆ ಇದನ್ನು ಮುಟ್ಟು ಎನ್ನುತ್ತಾರೆಯೆ ?

ಸ್ವಲ್ಪ ಯೋಚಿಸಿ .ವ್ಯೆಜ್ಞಾನಿಕವಾಗಿ ಹೇಳುವುದಾದರೆ,
ಪ್ರಾಯದ ಹೆಣ್ಣಿಗೆ ಗಭಾ೯ಶಯದಿಂದ ಆಗುವ ರಕ್ತ ಸ್ರಾವವೇ ಮುಟ್ಟು. ಇದೊಂದು ನ್ಯೆಸಗಿ೯ಕ ಕ್ರಿಯೆ. ಮುಟ್ಟಿನ ಸಮಯದಲ್ಲಿ ದ್ಯೆಹಿಕ ಮತ್ತು ಮಾನಸಿಕ ಬದಲಾವಣೆ ಆಗುತ್ತವೆ.

ಮುಟ್ಟು ಸಹಜ ಕ್ರಿಯೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಇದನ್ನು ಅಸಹಜ ಪ್ರಕ್ರಿಯೆ ಎಂದೆ ಬಿಂಬಿಸಿಕೊಳ್ಳತ್ತಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ.

ಮುಟ್ಟು ದೇಹದ ಒಂದು ಸಹಜ ಕ್ರಿಯೆ ಅಷ್ಟೇ. ಇಂದಿಗೂ ಜನ ಮುಟ್ಟು ಆಗಿರುವ ಹೆಣ್ಣನ್ನು ಮುಟ್ಟದೆ ಮುಟ್ಟಾದ ದಿನವಾಗಿಸಿದ್ದಾರೆ.

ಈ ವಿಚಾರದಲ್ಲಿ ಹೆಣ್ಣನ್ನು ದ್ವೇಷಿಸುತ್ತಿದ್ದಾರೊ ಅಥವಾ ಮುಟ್ಟನ್ನು ದ್ವೇಷಿಸುತ್ತಿದ್ದಾರೊ ತಿಳಿಯುತ್ತಿಲ್ಲ.
ಮುಟ್ಟಾಗಲಿಲ್ಲವೆಂದರೆ ಜನನವೇ ಇಲ್ಲ. ಈ ಸತ್ಯವೂ ಗೊತ್ತಿದೆ. ಆದರೆ ಇದನ್ನು ಗೌರವಿಸುತ್ತಿಲ್ಲ.

ಸಹಜತೆಯನ್ನು ಮೂಡನಂಬಿಕೆ ಅಪವಿತ್ರತೆಗೆ ತಳುಕುಹಾಕಿದ್ದಾರೆ .

ಚಿಕ್ಕ ವಯಸ್ಸಿನಲ್ಲೆ ಅಂದರೆ ೧೦ ವರ್ಷ ಅನ್ನುವಾಗಲೆ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಅದನ್ನು ಗಮನಿಸಿದ ಪೊಷಕರು ೧೦ ವರ್ಷದೊಳಗೆ ಮೊದಲ ಅನುಭವ ಮತ್ತು ಮುಟ್ಟಿನ ಬಗ್ಗೆ ಸಹಜವಾಗಿ ಅರಿವು ಮೂಡಿಸಬೇಕಾಗುತ್ತದೆ. ಮುಕ್ತವಾಗಿ ಮಾತಾಡಬೇಕಾಗುತ್ತದೆ. ಅವಳನೊಬ್ಬಳನ್ನೆ ಕೂರಿಸಿ ಮಾತಾಡುವುದಲ್ಲ, ಮನೆಯೊವರೊಟ್ಟಿಗೆ ಇದ್ದಾಗ.

ಅವಳಲ್ಲಿ ಪ್ರಶ್ನೆ ಗಳು ಮೂಡಬಹುದು, ಪ್ರಶ್ನೆ ಗಳಿಗೆ ಸಹನೆ ಯಿಂದ ಉತ್ತರಿಸಬೇಕಾಗುತ್ತದೆ. ಇದು ಮನೆಯಲ್ಲಿರುವ ಗಂಡು ಮಕ್ಕಳಿಗೂ ತಿಳಿದಿರಬಾರದು ಅಂತೇನಿಲ್ಲ, ಅವರಿಗೂ ಅರಿವಿರಬೇಕು.ಮುಟ್ಟು ಸಹಜವಾಗಿರುವಾಗ ವಿಷಯವೂ ಮುಕ್ತವಾಗಿರಬೇಕು.

ಪೋಷಕರು ಅರಿವು ಮೂಡಿಸುವ ಬದಲು ಆಕೆಯನ್ನು ಹಿಂಸಿಸುತ್ತಾರೆ ಎನಿಸುತ್ತದೆ. ಹಳ್ಳಿಗಳಲ್ಲಿ ತೀರಾ ಕೆಟ್ಟ ವಿಚಾರವಿದು ಎಂಬಂತೆ ಬಿಂಬಿಸುತ್ತಾರೆ . ಆಕೆ ೧೦ ವರ್ಷದ ಮಗುವಾಗಿರಲಿ ಮುಟ್ಟಾದರೆ ಹೊರಗಡೆ ಕೂರಿಸಿ ಹಿತ್ತಲಲ್ಲಿ ನೀರಾಕಿ ಅವಳಿಗೆಂದೆ ತಟ್ಟೆ ಲೋಟಗಳನ್ನು ಇಟ್ಟು ೨ ದಿನ ಹೊರಗಿಟ್ಟು ಯಾರು ಮುಟ್ಟದ ಪದ್ದತಿಯಾಗಿ ಆಚರಿಸುತ್ತಾರೆ.

ಸರಾಸರಿ ಪ್ರಮಾಣದಲ್ಲಿ ಇದು ಈಗ ಸ್ವಲ್ಪ ಕಡಿಮೆ ಆಗಿರಬಹುದು. ಇನ್ನೂ ಸಂಪ್ರದಾಯದ ಹೆಸರಲ್ಲಿ ಖಂಡಿತ ಈ ಆಚರಣೆ ಇದೆ .ನಗರಗಳಲ್ಲಿ ಕಡಿಮೆ ಇರಬಹುದೆಂದು ಭಾವಿಸಿದ್ದೆ, ಖಂಡಿತ ಇಲ್ಲ ಸಗಣಿ ನೀರಾಕಿಯಾದರು ಮುಟ್ಟು ಅಪವಿತ್ರವೆಂದೆ ಭಾವಿಸಿದ್ದಾರೆ.

ಮಕ್ಕಳಿಗೆ ಅದರ ನೋವು ಸುರಕ್ಷತೆ ,ಸ್ವಚ್ಛತೆ, ಮಾನಸಿಕವಾಗಿ ಆಗುವ ಬದಲಾವಣೆಗಳ ಕಾಳಜಿ ಮಾಡದೆ ಇದಕ್ಕೆ ವಿರುದ್ದವಾಗಿರುವುದೆಲ್ಲ ಮಾಡುತ್ತೇವೆ .

ಹಿಂದೆಲ್ಲ ಹೊರಗಿಡುವುದರ ಕಾರಣ ತಿಂಗಳಿಗೆ ಒಮ್ಮೆಯಾದರೂ ಸ್ವಲ್ಪ ವಿಶ್ರಾಂತಿ ಸಿಗಲೆಂದು ಎನ್ನುತ್ತಾರೆ. ಆದರೆ ಈ ಹೇಳಿಕೆಯನ್ನು ಸುಲಭವಾಗಿ ಒಪ್ಪಲೂ ಸಾಧ್ಯವಿಲ್ಲ ಹೊರಗಡೆಯ ಕೆಲಸವನ್ನೂ ಮಾಡುತ್ತಿದ್ದರು ವಿಶ್ರಾಂತಿಯೇನು ಇರುತ್ತಿರಲಿಲ್ಲ!

ಮನೆಗಳಲ್ಲಿ ಅರಿವು ಸಿಕ್ಕಿಲ್ಲ ವಾದರೆ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷಕರದ್ದು ಆಗಿರುತ್ತದೆ. ಇದು ಶಿಕ್ಷಣದ ಮತ್ತು ಕಲಿಕೆಯ ಒಂದು ಭಾಗವೆ ಆಗಿರುತ್ತದೆ ಪಠ್ಯದಲ್ಲೂ ಇರುತ್ತದೆ ಆದರೆ ಫ್ರೌಡಶಾಲೆಯ ಮಟ್ಟದಲ್ಲಿ ಶಿಕ್ಷಕರೂ ಈ ಪಾಠವನ್ನು ಸ್ಕಿಪ್ ಮಾಡುತ್ತಾರೆ ಅಥವಾ ಅದರಲ್ಲಿರುವುದನ್ನೆ ಹೇಳಿ ಪಾಠ ಮುಗಿಸುತ್ತಾರೆ .

ಪ್ರತಿಯೊಂದು ವಿಷಯದಲ್ಲೂ ಅರಿವು ಮೂಡಿಸುವುದು ಬಹಳ ಮುಖ್ಯ ಮತ್ತು ಎಲ್ಲವೂ ತಿಳಿಯುವ ವಿಚಾರವೇ ಆಗಿರುತ್ತದೆ. ಮುಕ್ತವಾಗಿ ಮಾತಾಡಿದಾಗ ಮಕ್ಕಳಲ್ಲಿ ಅದರ ಬಗೆಗಿನ ಭಯ ಮತ್ತು ಸಂಕೋಚ, ಕುತೂಹಲಗಳು ಕಡಿಮೆಯಾಗುತ್ತವೆ.

ಗಭ೯ ಕ್ಯಾನ್ಸರ್‌ ಗಳು ಹೆಚ್ಚು ಆಗಲು ಕಾರಣ ಹಿಂದಿನಿಂದ ಮುಟ್ಟಿನ ಬಗ್ಗೆ ಅರಿವು ಇಲ್ಲದಿರುವುದು. ಮುಕ್ತವಾಗಿ ಮಾತಾನಾಡದೆ ಇರುವುದು. ಅಪವಿತ್ರವೆಂದು ಭಾವಿಸಿರುವುದು ಹೆಣ್ಣು ಮಕ್ಕಳಲ್ಲಿ ಸಂಕೋಚದ ಮನೊಭಾವನೆ ಹುಟ್ಟಿ ವ್ಯೆದ್ಯೆರೊಟ್ಟಿಗೂ ಸರಿಯಾಗಿ ಹೇಳಿಕೊಳ್ಳದೆ ಇರುವುದು. ಹೆಣ್ಣು ಮಕ್ಕಳಿಲ್ಲದ ತಾಯಂದಿರು ಗಂಡು ಮಕ್ಕಳ ಹತ್ತಿರ ಹೇಳಿಕೊಳ್ಳಲಾಗದೆ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದೆ ಕ್ಯಾನ್ಸರ್‌ ಗೆ ತುತ್ತಾಗುತ್ತಿದ್ದಾರೆ.

ಈ ಕಾರಣಗಳಿಗಾದರೂ ಹೆಣ್ಣು, ಗಂಡು ಎನ್ನದೆ ಈ ವಿಚಾರವಾಗಿ ಮುಕ್ತವಾಗಿ ಮಾತಾನಾಡಬೇಕಾಗುತ್ತದೆ.

ಅಣ್ಣ ತಮ್ಮ ಯಾರಾದರೂ ಏನಾಗಿದೆ ನಿನಗೆ ಅಪ್ಪಿ ತಪ್ಪಿ ಪ್ರಶ್ನೆ ಹಾಕಿದರೆ ಸಹಜ ವೆನ್ನುವಂತೆ ಅವಳು ಮುಟ್ಟಾಗಿದ್ದಾಳೆ ಎಂದರೆ, ಓಹ್, ಕ್ಷಮಿಸಿ ಎನ್ನುತ್ತಾರೆ. ಕ್ಷಮೆ ಕೇಳುವಷ್ಟು ಅದು ಅಪರಾಧವೆ ?

ಮುಟ್ಟಿಗೆ ಮೂಢನಂಬಿಕೆಗಳು ತಳುಕು ಹಾಕಿಕೊಂಡಿವೆ.ದೇವರು ಪೂಜಿಸಬಾರದು ದೇವಸ್ಥಾನಕ್ಕೆ ಹೊಗಬಾರದು ಮುಂತಾದವುಗಳು ಈ ವಿಚಾರಗಳೆಲ್ಲ ತುಂಬಾ ಚಚೆ೯ಗೆ ಬಂದಿವೆ. ಇವೆಲ್ಲ ಮೂಢನಂಬಿಕೆ ಎಂದು ಹೆಣ್ಣು ಮಕ್ಕಳೆ ಒಪ್ಪುತ್ತಿಲ್ಲ .ಈ ವಿಚಾರದಲ್ಲಿ ಎಲ್ಲರು ಬದಲಾಗಬೇಕಾಗಿದೆ. ಒಬ್ಬರಿಂದ ಸಮಾಜವನ್ನು ಕೆಣಕಲು ಸಾಧ್ಯವಿಲ್ಲ. ಎಲ್ಲರೂ ಸಹಜತೆಯನ್ನು ಸಹಜ ವೆಂದು ಒಪ್ಪಿಕೊಳ್ಳಬೇಕಿದೆ.

ಕ್ವಾರಂಟೈನ್ ಕೇಂದ್ರವೆಂದರೆ ಯಾಕಿಷ್ಟು ಭಯ?

0

ಸಂಸದೆ ಶೋಭಾ ಕರಂದ್ಲಾಜೆ

Publicstory.in


Bengaluru: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡಲು ಬಳಸುತ್ತಿರುವ ಕ್ವಾರಂಟೈನ್ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಯಾರನ್ನು ಕೇಳಿದರೂ ಕೊರೊನಾ ಸೋಂಕಿಗಿಂತಲೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಇಡಲಾಗುವ ಕ್ವಾರಂಟೈನ್ ಕೇಂದ್ರಗಳ ಬಗ್ಗೆಯೇ ಅನುಮಾನ, ಭಯ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ವಾಸ್ತವವಾಗಿ ಕ್ವಾರಂಟೈನ್ ಗಳಲ್ಲಿ ಸರ್ಕಾರ ಒಳ್ಳೆಯ ವ್ಯವಸ್ಥೆಯನ್ನೇ ಮಾಡಿದೆ. ಆದರೆ ಪಾರದರ್ಶಕವಾಗಿಲ್ಲದ ಕಾರಣ ಜನರು ಕತ್ತಲಲ್ಲಿನ ಅನುಭವದಲ್ಲಿ ಭಯ ಬೀಳುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್ ಕೇಂದ್ರಗಳ ಬಗ್ಗೆ ವರದಿ ಮಾಡಲು ಮುಕ್ತ ಅವಕಾಶ ಕಲ್ಪಿಸಬೇಕಾಗಿದೆ.


ಸಂಸದೆ‌ ಶೋಭಾ ಕರಂದ್ಲಾಜೆ ಸಲಹೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ

ಅವಕಾಶ ಇರುವ ಕಡೆ,‌ತೋಟದ ಮನೆಗಳು, ಫಾರ್ಮ್ ಹೌಸಗಳಲ್ಲಿ ಆಯಾ ಮನೆಯವರನ್ನು ಅಲ್ಲಿಯೇ ಕ್ವಾರಂಟೈನ್ ಮಾಡಬೇಕೆಂಬ ಸಂಸದೆ ಶೋಭಾ ಕರಂದ್ಲಾಜೆ ಅವರ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೊರೊ‌ನಾ‌ ವಿಷಯದಲ್ಲಿ ಎಲ್ಲ ಸಂಸದರು, ಶಾಸಕರು ಅವರುಗಳ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಉಳಿದರು. ಆದರೆ, ಸಂಸದೆ ಶೋಭಾ ಕರಂದ್ಲಾಜೆ ಅವರು ಇಡೀ ರಾಜ್ಯದ ಅನೇಕ ಕಡೆ ಓಡಾಡಿದ್ದಾರೆ. ಹೀಗಾಗಿ ರಾಜ್ಯದ ಸಚಿವರು, ಶಾಸಕರಿಗಿಂತಲೂ ಕೊರೊನಾದ ವಾಸ್ತವ ಚಿತ್ರಣದ ಅನುಭವ, ಮಾಹಿತಿ ಅವರಿಗಿದೆ. ಅನೇಕ ಕಡೆಗಳಲ್ಲಿ ಅವರು ನೆರವಿನ ಹಸ್ತ ಚಾಚಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರೆ ಆಗಿ ಅಲ್ಲಿ‌ನ ಅವರ ಅನುಭವಗಳ ಆಧಾರದಲ್ಲೂ ಅವರ ಸಲಹೆಗಳು ಜನರಿಗೆ ಬೇಕಾಗಿವೆ.

ಕೊರೊನಾ ವಿರುದ್ಧ ದೀರ್ಘಕಾಲದ ಹೋರಾಟ ಮಾಡಬೇಕಾದ ಕಾರಣ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ.

ಕ್ವಾರಂಟೈನ್ ಕೇಂದ್ರಗಳು ಹೇಗಿರಬೇಕು, ಏನ್ನೆಲ್ಲ ಸೌಲಭ್ಯಗಳನ್ನು ಒಳಗೊಂಡಿರಬೇಕು ಎಂದು ಕೇಂದ್ರ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ.‌ಇಷ್ಟನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ರಾಜ್ಯದ ಎಲ್ಲ ಜಿಲ್ಲಾಡಳಿತಗಳಿಗೂ ಕಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕ್ವಾರಂಟೈನ್ ಆದ ಒಬ್ಬ ವ್ಯಕ್ತಿಗೆ ಪ್ರತ್ಯೇಕ ಶೌಚಾಲಯ ಇರಬೇಕು.‌ ಇದನ್ನು ಹೈಪೋಕ್ಲೋರೈಟ್ ಆಗಿ ಪ್ರತಿ ಗಂಟೆಗೊಮ್ಮೆ ತೊಳೆಯಬೇಕು. ಈಗ ಸರ್ಕಾರ ಶಾಲೆಗಳು, ಮೊರಾರ್ಜಿ ದೇಸಾಯಿ ಶಾಲೆಗಳು, ಸರ್ಕಾರಿ ಕಟ್ಟಡಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗುತ್ತಿದೆ. ಇಲ್ಲಿ ಮಾರ್ಗದರ್ಶಿ ಸೂತ್ರಗಳ ಪಾಲನೆಯಾಗುತ್ತಿದೆಯೇ? ಎಂಬ ಪ್ರಶ್ನೆ, ಭಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ, ಊಟ ಸರಿಯಾಗಿಲ್ಲ ಎಂದು ಅಲ್ಲಲ್ಲಿ ಕೇಳಿ ಬರುತ್ತಿರುವ ಅಪಸ್ವರ ಮಾಧ್ಯಮಗಳಲ್ಲಿ ಬಂದ ನಂತರ ಜನರಲ್ಲಿ ಭಯ ಹೆಚ್ಚಾಗಲು ಕಾರಣವಾಗಿದೆ. ಎರಡು ಮೂರು ದಿನಗಳ ಹಿಂದಷ್ಟೇ ರಾಜ್ಯದ‌ಕ್ವಾರಂಟೈನ್ ಕೇಂದ್ರವಿಂದರಲ್ಲಿ ಇದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶನಿವಾರ ಯಾದಗಿರಿ ಮತ್ತಿತರ ಕಡೆ ಒಂದೇ‌ ದಿನ ಕಂಡು ಬಂದಿರುವ ಸೋಂಕಿತರು, ಇವರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲು ಎಷ್ಟು ಕೇಂದ್ರಗಳು ಬೇಕಾಗಬಹುದು ಎಂದು ನೆನದರೆ ಭಯವಾಗುತ್ತದೆ.

ಕ್ವಾರಂಟೈನ್ ಕಾರಣಕ್ಕೆಯೇ ಹೆದರಿ ಬಳಹಷ್ಟು ಜ‌ನ ರೋಗ ತಪಾಸಣೆಯಿಂದ ದೂರ ಉಳಿಯಲು ಕಾರಣವಾಗುತ್ತಿದೆ ಎಂಬುದನ್ನು ಖಾಸಗಿಯಾಗಿ ಹಲವು ವೈದ್ಯರು, ಸಾಮಾಜಿಕ ಕಾರ್ಯಕರ್ತರು ಹೇಳುತ್ತಾರೆ.

ಕ್ವಾರಂಟೈನ್ ಕೇಂದ್ರಗಳಿಗೆ ಮಾಧ್ಯಮ ಪ್ರತಿನಿಧಿಗಳು, ಜನಪ್ರತಿನಿಧಿಗಳ ಭೇಟಿಗೆ ಅವಕಾಶ ಇಲ್ಲದ ಕಾರಣ ಈ ಕೇಂದ್ರಗಳ ಬಗ್ಗೆ ಇಲ್ಲಿಯವರೆಗು ಎಲ್ಲೂ ವರದಿಯಾಗುತ್ತಿಲ್ಲ. ಈ ಕೇಂದ್ರಗಳ ಒಳಗೆ ಹೇಗಿರುತ್ತದೆಯೇ ಎಂಬುದು ಜನರಿಗೆ ಗೊತ್ತಿಲ್ಲ. ಇದುವೇ ಅವರನ್ನು ಮತ್ತಷ್ಟು ಭಯ ಭೀತಗೊಳಿಸುತ್ತಿದೆ.

ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸೋಂಕು ಹರಡುವ ಕೇಂದ್ರಗಳಾಗುತ್ತವೆ.‌ ಈ ಕಾರಣ ಸರ್ಕಾರ ಈ ಕೇಂದ್ರಗಳಲ್ಲಿ ಮಾರ್ಗದರ್ಶಿ ಸೂತ್ರಗಳ ಜಾರಿಯ ಮೇಲೆ ಕಟ್ಟುನಿಟ್ಟಾದ ಕಣ್ಗಾವಲು ಇಡಬೇಕಾದ ಅಗತ್ಯ ಇದೆ ಎನ್ನುತ್ತಾರೆ ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಂಜುನಾಥ್.

ಕ್ವಾರಂಟೈನ್ ಕೇಂದ್ರಗಳಲ್ಲಿ ಮಾಡಲಾಗಿರುವ ವ್ಯವಸ್ಥೆ, ನೋಡಿಕೊಳ್ಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದಾಗ ಮಾತ್ರ ಈ ಸೋಂಕಿನ ಹೋರಾಟದಲ್ಲಿ ಜನರನ್ನು ಸಹಭಾಗಿಗಳಾಗಿ ಮಾಡಿಕೊಳ್ಳಬಹುದಾಗಿದೆ.

ರಾಜ್ಯದ ಕ್ವಾರಂಟೈನ್ ಕೇಂದ್ರಗಳಲ್ಲಿ ನೀಡಲಾಗುವ ಊಟ, ಮಾನಸಿಕ ಸಮಾಲೋಚನೆ, ವ್ಯಾಯಾಮ, ಮಾಹಿತಿ ಪುಸ್ತಕಗಳು, ಇಂಟರನೆಟ್ ಸೇವೆ, ವೈದ್ಯ ಸಿಬ್ಬಂದಿ, ಕಾಳಜಿ ಯುಕ್ತ ಉಪಚಾರ ಮತ್ತಿತರ ಮಾಹಿತಿಗಳನ್ನು ಪ್ರಚುರಪಡಿಸಿದರೆ ಮಾತ್ರ ಕ್ವಾರಂಟೈನ್ ಕೇಂದ್ರಗಳ ಬಗ್ಗೆ ಜನರಿಗೆ ಇರುವ ಭಯ ಸುಲಭವಾಗಿ ಹೋಗಲಾಡಿಸಬಹುದಾಗಿದೆ.

ಮನೆಗಳನ್ನೇ ಕ್ವಾರಂಟೈನ್ ಕೇಂದ್ರ ಮಾಡುವುದರಿಂದ ಕ್ವಾರಂಟೈನ್ ಕೇಂದ್ರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜ‌ನರ ಮಾನಸಿಕ ಶಕ್ತಿಯು ವೃದ್ಧಿಸಲಿದೆ. ಆದರೆ ಪ್ರತಿದಿನಕ್ಕೆ ಎರಡು ಸಲ ಈ ಮನೆಯವರ ಆಪ್ತ ಸಮಾಲೋಚನೆ, ಪರೀಕ್ಷೆಯ ಕೆಲಸ ಮಾತ್ರ ಕಟ್ಟುನಿಟ್ಟಾಗಿ ನಡೆಸಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿ ಜನರ ಸಂಖ್ಯೆ ಕಡಿಮೆ ಇದ್ದಷ್ಟು ಮಾರ್ಗದರ್ಶಿ ಸೂತ್ರಗಳನ್ನು ಪಾಲನೆ ಮಾಡಲು ಸುಲಭವಾಗಲಿದೆ.‌ ಸರ್ಕಾರಕ್ಕೆ ಆರ್ಥಿಕ ಒತ್ತಡವೂ ಕಡಿಮೆಯಾಗಲಿದೆ.

ಗ್ರಾಹಕರು ಇಲ್ಲದೇ ಹಲವಾರು ಲಾಡ್ಜ್ ಗಳು ಮುಚ್ಚುವ ಹಂತಕ್ಕೆ ಬಂದಿವೆ. ಇಂತಹ ಲಾಡ್ಜ್ ಗಳಿಗೆ ಸರ್ಕಾರವೇ ಒಂದು ಸಾಧಾರಣ ದರ ವಿಧಿಸಿ ಕ್ಚಾರಂಟೈನ್ ಗೆ ಒಳಗಾಗುವವರಿಗೆ ಅವರದೇ ವೆಚ್ಚದಲ್ಲಿ ಇರಲು ಅವಕಾಶ ಒದಗಿಸಿದರೆ ಸರ್ಕಾರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ಬಡವರಿಗೆ ಗುಣಮಟ್ಟದ ಕ್ವಾರಂಟೈನ್ ಸೌಲಭ್ಯವನ್ನು ಒದಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಬದಲಾವಣೆ ಮಾಡುವುದರಿಂದ ಜನರ ವಿಶ್ವಾಸವೂ ಹೆಚ್ಚಲಿದೆ.

ಇದೇ ಮಾದರಿಯನ್ನು ರಾಜ್ಯದ ಖಾಸಗಿ ಆಸ್ಪತ್ರೆಗಳಿಗೂ ಅನ್ವಯಿಸಬೇಕು. ಸರ್ಕಾರವೇ ದರ ನಿಗದಿ ಮಾಡಿ ಜನರಿಗೆ ಚಿಕಿತ್ಸೆ ಪಡೆದುಕೊಳ್ಳಲು ಆಯ್ಕೆಯ ಅವಕಾಶವನ್ನು ನೀಡಬಹುದಾಗಿದೆ.

ತುಮಕೂರಿಗೆ ಶನಿವಾರ ನಿರಾಳ; ಹೊರ ರಾಜ್ಯದಿಂದ‌ ಬಂದವರ ಮೇಲೆ ನಿಗಾ

ತುಮಕೂರು: ಜಿಲ್ಲೆಗೆ ಹೊರ ರಾಜ್ಯದಿಂದ ಬಂದವರು 462 ಮಂದಿ, ಆಂಧ್ರಪ್ರದೇಶದಿಂದಲೇ ಅತಿಹೆಚ್ಚು – ಜಿಲ್ಲಾಧಿಕಾರಿಗಳಾದ ಡಾ. ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

133 ಮಂದಿ ಆಂಧ್ರ ಪ್ರದೇಶ, 113- ಮಹಾರಾಷ್ಟ್ರ, 103 ಮಂದಿ ತಮಿಳುನಾಡಿನಿಂದ ಜಿಲ್ಲೆಗೆ ಆಗಮಿಸಿದ್ದಾರೆ .

ನಾಳಿನ ಲಾಕ್ ಡೌನ್ ಅವಧಿಯಲ್ಲಿ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲು ತರಕಾರಿ, ದಿನಸಿ ಅಂಗಡಿ, ಪಾರ್ಸಲ್ ನೀಡುವ ಹೊಟೇಲ್ ಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಇಂದಿನ ಬೆಳಿಗ್ಗೆ ವರೆಗೆ ಜಿಲ್ಲೆಯಲ್ಲಿ ಹೊಸ ಸೋಂಕು ಪ್ರಕರಣಗಳು ಕಂಡು ಬಂದಿರುವುದಿಲ್ಲ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ: ಸಿಎಂ ಭೇಟಿಯಾದ ಸುರೇಶಗೌಡ, ಶಿವಣ್ಣ

Publicstory.in


Bengalore: ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಬಿ.ಸುರೇಶಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆ ಸಮೀಪದ ಗ್ರಾಮದಲ್ಲಿ ಸೋಂಕು ಕಾಣಿಸಿಕೊಂಡ ಕೂಡಲೇ ಈ ಇಬ್ಬರು ನಾಯಕರು ಮುಖ್ಯಮಂತ್ರಿ ಬಳಿಗೆ ದೌಡಾಯಿಸಿದರು.

ಜಿಲ್ಲೆಯಲ್ಲಿ ಗ್ರಾಮಗಳಿಗೆ ಸೋಂಕು ಹರಡುವ ಮುನ್ಸೂಚನೆ ಇದಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಬಹುದು ಎಂಬ ಆತಂಕವನ್ನು ಈ ಇಬ್ಬರು ನಾಯಕರು ಹೇಳಿದ್ದಾರೆ.

ಸುರೇಶ ಗೌಡ ಕರೆ


ಕೊರೊನಾ ಜೊತೆಯಲ್ಲೇ ಬದುಕುವುದು ಅನಿವಾರ್ಯ . ಸೋಂಕಿನಿಂದ ದೂರ ಆಗಬೇಕಾದರೆ ಯಾರೇ ಆದರೂ ಮಾಸ್ಕ್ ಹಾಕಿಕೊಂಡೇ ಮಾತನಾಡಬೇಕು. ಓಡಾಡುವಾಗ ಮಾಸ್ಕ್ ಧರಿಸಿ, ಹತ್ತಿರ ಬಂದಾಗ ಮಾಸ್ಕ್ ತೆಗೆದು ಮಾತನಾಡುತ್ತಾರೆ. ಇದು ತಪ್ಪು, ಮಾಸ್ಕ್ ಇಲ್ಲದಿದ್ದರೆ, ಮಾಸ್ಕ್ ತೆಗೆದು ಮಾತನಾಡಲು ಬಂದರೆ ಅವರೊಂದಿಗೆ ಯಾರೂ ಮಾತನಾಡರದು. ಈ ಬಗ್ಗೆ ಗ್ರಾಮಾಂತರ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಈ ರಾಶಿಯವರಿಗೆ ಹಣದ ಬಗ್ಗೆ ಎಚ್ಚರ ಇರಲಿ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 23, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ಜ್ಯೇಷ್ಠ ಮಾಸ
ಋತು : ಗ್ರೀಷ್ಮ ಋತು
ಕಾಲ : ಬೇಸಿಗೆಕಾಲ
ವಾರ : ಶನಿವಾರ
ಪಕ್ಷ : ಶುಕ್ಲಪಕ್ಷ
ತಿಥಿ : ಪಾಡ್ಯ
(ನಿನ್ನೆ ರಾತ್ರಿ 11 ಗಂ॥ 7 ನಿ।। ರಿಂದ
ಮರುದಿನ ಪ್ರಾತಃಕಾಲ 0 ಗಂ॥ 15 ನಿ।। ತನಕ)
ನಕ್ಷತ್ರ : ರೋಹಿಣಿ
(ಇಂದು ಪ್ರಾತಃಕಾಲ 3 ಗಂ॥ 10 ನಿ।। ರಿಂದ
ಮರುದಿನ ಪ್ರಾತಃಕಾಲ 4 ಗಂ॥ 52 ನಿ।। ತನಕ)
ಯೋಗ : ಅತಿಗಂಡ
ಕರಣ : ಕಿಂಸ್ತುಘ್ನ
ವರ್ಜ್ಯಂ : (ಇಂದು ರಾತ್ರಿ 8 ಗಂ॥ 18 ನಿ।। ರಿಂದ ಇಂದು ರಾತ್ರಿ 10 ಗಂ॥ 0 ನಿ।। ತನಕ)
ಅಮೃತಕಾಲ : (ಇಂದು ಪ್ರಾತಃಕಾಲ 0 ಗಂ॥ 32 ನಿ।। ರಿಂದ ಇಂದು ಪ್ರಾತಃಕಾಲ 2 ಗಂ॥ 16 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 7 ಗಂ॥ 26 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 18 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 8 ಗಂ॥ 57 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 34 ನಿ।। ತನಕ)
ಗುಳಿಕ : (ಇಂದು ಪ್ರಾತಃಕಾಲ 5 ಗಂ॥ 42 ನಿ।। ರಿಂದ ಇಂದು ಬೆಳಿಗ್ಗೆ 7 ಗಂ॥ 19 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 50 ನಿ।। ರಿಂದ ಇಂದು ಸಂಜೆ 3 ಗಂ॥ 27 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 42 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 43 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ವೃಷಭ

ಮೇಷ ರಾಶಿ ಭವಿಷ್ಯ : 23 May 2020
ಆರೋಗ್ಯದ ಆರೈಕೆ ಮಾಡಿಕೊಳ್ಳಿ ಮತ್ತು ಎಲ್ಲವನ್ನೂ ಹೊಂದಿಸಿ. ಇಂದು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇಂದಿನ ದಿನ ನೀವು ನಿಮ್ಮ ವ್ಯಾಪಾರಕ್ಕೆ ಹೊಸ ಎತ್ತರವನ್ನು ನೀಡಬಹುದು. ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವ ಮೊದಲು ಅದಕ್ಕೆ ಇತರರ ಅನುಮೋದನೆಯಿದೆಯೆಂದು ಖಾತ್ರಿಪಡಿಸಿಕೊಳ್ಳಿ. ಅದೃಷ್ಟ ಸಂಖ್ಯೆ: 6

ವೃಷಭ ರಾಶಿ ಭವಿಷ್ಯ : 23 May 2020
ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದಿನವರೆಗೂ ಅಗತ್ಯವಿಲ್ಲದೆ ಹಣವನ್ನು ಖರ್ಚು ಮಾಡುತ್ತಿದ್ದ ಜನರು, ಇಂದು ಅವರು ತನ್ನನ್ನು ನಿಯಂತ್ರಿಸಬೇಕು ಮತ್ತು ಹಣವನ್ನು ಉಳಿಸಬೇಕು. ಕೌಟುಂಬಿಕ ಸಂತೋಷ ಕಾಣುತ್ತಿಲ್ಲ. ಅನಿರೀಕ್ಷಿತ ಪ್ರಣಯ ಭಾವ. ದಿನದ ಪ್ರಾರಂಭವು ಸ್ವಲ್ಪ ದಣಿದಿರಬಹುದು ಆದರೆ ದಿನ ಮುಂದುವರೆದಂತೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಅದೃಷ್ಟ ಸಂಖ್ಯೆ: 5

ಮಿಥುನ ರಾಶಿ ಭವಿಷ್ಯ : 23 May 2020
ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ತಮ್ಮ ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟಪಡುವುದಿಲ್ಲ ಆದರೆ ಇಂದು ನೀವು ಅಗತ್ಯವಿರುವವರಿಗೆ ಹಣವನ್ನು ಕೊಟ್ಟು ವಿಶ್ರಾಂತಿಯನ್ನು ಅನುಭವಿಸುವಿರಿ. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ. ಕೆಲಸದ ಒತ್ತಡ ಹೆಚ್ಚುತ್ತಿದ್ದ ಹಾಗೆ ಮಾನಸಿಕ ಕ್ಷೋಭೆ ಮತ್ತು ಪ್ರಕ್ಷುಬ್ಧತೆ. ದಿನದ ಉತ್ತರಾರ್ಧದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಅದೃಷ್ಟ ಸಂಖ್ಯೆ: 3

ಕರ್ಕ ರಾಶಿ ಭವಿಷ್ಯ : 23 May 2020
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ., ಆಗೇ ನೀವು ಮಾಡದಿದ್ದರೆ ನಿಮ್ಮ ಕೆಲಸ ಹೋಗಬಹುದು. ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ನಿಮ್ಮ ಚೈತನ್ಯವನ್ನು ಪುನಃಶ್ಚೇತನಗೊಳಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರೊಡನೆ ಸುದ್ದಿಯನ್ನು ಹಂಚಿಕೊಳ್ಳುವುದು ಅವರನ್ನು ಕೂಡ ಪುನಃಶ್ಚೇತನಗೊಳಿಸುತ್ತದೆ. ಅದೃಷ್ಟ ಸಂಖ್ಯೆ: 7

ಸಿಂಹ ರಾಶಿ ಭವಿಷ್ಯ : 23 May 2020
ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಸಂತೋಷದ – ಚೈತನ್ಯದಾಯಕ – ಪ್ರಿಯವಾದ ಚಿತ್ತದ – ನಿಮ್ಮ ಖುಷಿಯ ಸ್ವಭಾವ ನಿಮ್ಮ ಸುತ್ತಲಿನವರಿಗೆ ಸಂತೋಷ ಮತ್ತು ಖುಷಿಯನ್ನು ತರುತ್ತದೆ. ಅದೃಷ್ಟ ಸಂಖ್ಯೆ: 5

ಕನ್ಯಾ ರಾಶಿ ಭವಿಷ್ಯ 23 May 2020
ನಿಮ್ಮ ಅಪಾರ ವಿಶ್ವಾಸ ಮತ್ತು ಸುಲಭದ ಕೆಲಸದ ವೇಳಾಪಟ್ಟಿ ಇಂದು ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಮನೆಯ ಅಗತ್ಯಗಳನ್ನು ನೋಡುತ್ತಾ, ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು, ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ನಿಮ್ಮ ಕನಸುಗಳು ಹಾಗೂ ವಾಸ್ತವವು ಪ್ರೀತಿಯ ಭಾವಪರವಶತೆಯಲ್ಲಿ ಇಂದು ಸೇರಿಹೋಗುತ್ತವೆ. ಅದೃಷ್ಟ ಸಂಖ್ಯೆ: 4

ತುಲಾ ರಾಶಿ ಭವಿಷ್ಯ : 23 May 2020
ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಿಮ್ಮ ಶಕ್ತಿ ವ್ಯಯಿಸಿ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಮುಕ್ತ ಸಮಯದ ಲಾಭ ತೆಗೆದುಕೊಳ್ಳಿ. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 6

ವೃಶ್ಚಿಕ ರಾಶಿ ಭವಿಷ್ಯ : 23 May 2020
ಇಂದು ನಿಮ್ಮ ವಿಶ್ವಾಸ ಬೆಳೆಯುತ್ತದೆ ಮತ್ತು ಪ್ರಗತಿ ನಿಶ್ಚಿತವಾಗಿದೆ. ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ. ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ಅದೃಷ್ಟ ಸಂಖ್ಯೆ: 8

ಧನು ರಾಶಿ ಭವಿಷ್ಯ : 23 May 2020
ಪ್ರವಾಸ-ಪಾರ್ಟಿಗಳು ಮತ್ತು ಆನಂದ ವಿಹಾರಗಳು ಇಂದು ನಿಮ್ಮನ್ನು ಉತ್ತಮ ಮೂಡ್‌ನಲ್ಲಿಡುತ್ತವೆ. ನಿಮ್ಮ ಸಮರ್ಪಣೆ ಮತ್ತು ಶ್ರಮವನ್ನು ಗಮನಿಸಲಾಗುತ್ತದೆ ಮತ್ತು ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲಗಳನ್ನು ತರುತ್ತದೆ. ಮನೆಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ನಿಮ್ಮ ಹಿರಿಯರ ಸಲಹೆ ತೆಗೆದುಕೊಳ್ಳಿ ಇಲ್ಲವಾದರೆ ಅದು ಅವರಿಗೆ ಕೋಪ ಮತ್ತು ಅಸಮಾಧಾನವನ್ನು ತರಬಹುದು. ನಿಮ್ಮ ಪ್ರೇಮಮಯ ವೀಕ್ಷಣೆಗಳನ್ನು ಅಭಿವ್ಯಕ್ತಿಗೊಳಿಸಿ. ಅದೃಷ್ಟ ಸಂಖ್ಯೆ: 5

ಕುಂಭ ರಾಶಿ ಭವಿಷ್ಯ 23 May 2020
ಆರೋಗ್ಯ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ರಾಜ್ಯದ ನೀವು ಬಯಸಿದ ಟಾನಿಕ್ ನೀಡುತ್ತದೆ ಮತ್ತು ನಿಮಗೆ ಆತ್ಮವಿಶ್ವಾಸ ತರುತ್ತದೆ. ನಿಮ್ಮ ಹಣವನ್ನು ಸಂಗ್ರಹಿಸಿದಾಗ ಮಾತ್ರ ಹಣ ನಿಮ್ಮ ಕೆಲಸಕ್ಕೆ ಬರುತ್ತದೆ. ಇದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಿ ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ವಿಷಾದಿಸಬೇಕಾಗುತ್ತದೆ. ನೀವು ನಿಮ್ಮ ಆಕರ್ಷಣೆಯನ್ನು ಹಾಗೂ ನಿಮ್ಮ ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಜನರು ನಿಮ್ಮ ಮತುಗಳನ್ನು ಕೇಳುತ್ತಾರೆ. ವೈಯಕ್ತಿಕ ಮಾರ್ಗದರ್ಶನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಅದೃಷ್ಟ ಸಂಖ್ಯೆ: 3

ಮೀನ ರಾಶಿ ಭವಿಷ್ಯ : 23 May 2020
ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದಿನವರೆಗೂ ಹಣವನ್ನು ಯೋಚಿಸದೆ ಖರ್ಚು ಮಾಡುತ್ತ್ತಿದ್ದ ಜನರು, ಅವರಿಗೆ ಇಂದು ಹಣದ ತುಂಬಾ ಅಗತ್ಯವಿರಬಹುದು ಮತ್ತು ಜೀವನದಲ್ಲಿ ಹಣದ ಏನು ಮೌಲ್ಯವಿದೆ ಎಂದು ನಿಮಗೆ ಅರ್ಥವಾಗಬಹುದು. ಕುಟುಂಬದಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಬದಲಾಯಿಸಿಕೊಳ್ಳಲು ಇದು ಒಳ್ಳೆಯ ಸಮಯ. ಜೀವನದ ಏಳುಬೀಳುಗಳನ್ನು ಹಂಚಿಕೊಳ್ಳಲು ಅವರ ಸಹಕಾರದೊಂದಿಗೆ ಕೆಲಸ ಮಾಡಿ. ಅದೃಷ್ಟ ಸಂಖ್ಯೆ: 9

ಕುದ್ಮುಲ್ ರಂಗರಾಯರು ಸಿಕ್ಕಿದ್ದರು..

ಜಿ ಎನ್ ಮೋಹನ್


ಕಾರು ಇನ್ನೇನು ಅತ್ತಾವರದ ರೋಡಿನಲ್ಲಿ ಹಾದು ಮಾರ್ನಮಿಕಟ್ಟೆಯತ್ತ ಹೊರಳಿಕೊಳ್ಳುತ್ತಿತ್ತು.

ಅದೋ ಎತ್ತರದ ರಸ್ತೆ. ಕಾರಿಗೂ ಉಬ್ಬಸ.

ತಕ್ಷಣ ನನಗೆ ಅರೆ..! ಎತ್ತರವನ್ನು ಮುಟ್ಟುವುದು ಗುಲಾಬಿಯ ಹಾದಿಯಲ್ಲ.. ಕಾರಿಗೂ, ಜೀವಕ್ಕೂ.. ಅನಿಸಿಹೋಯಿತು.

ಎತ್ತರದ ಗುರಿ ಮುಟ್ಟಬೇಕಾದರೆ ಎಷ್ಟು ಉಬ್ಬಸಪಡಬೇಕಾದ ಸವಾಲುಗಳು!

ಆ ಕ್ಷಣಕ್ಕೆ ನನಗೆ ನೆನಪಾಗಿ ಹೋದದ್ದು ಕುದ್ಮುಲ್ ರಂಗರಾಯರು.

ಅದೇ.. ಅದೇ.. ರಸ್ತೆಯ ಎಡದಲ್ಲಿರುವ ವಿಸ್ತಾರವಾದ ಅಂಗಳದಲ್ಲಿ ಕುದ್ಮುಲ್ ರಂಗರಾಯರು ಮಲಗಿದ್ದರು.

ಇಲ್ಲ, ಅವರನ್ನು ಒಮ್ಮೆ ನೋಡದೆ ಇನ್ನೊಂದು ಹೆಜ್ಜೆ ಇಡಲಾರೆ ಅನಿಸಿತು.

ಎಲ್ಲಿಗೋ ಹೋಗುತ್ತಿದ್ದ ಕಾರು ನಿಂತಲ್ಲೇ ನಿಂತಿತು. ನನ್ನ ಹೆಜ್ಜೆಯ ಧಿಕ್ಕೂ ಬದಲಾಗಿತ್ತು..

ಮಳೆಯಿಂದ ಆಗಷ್ಟೇ ಎದ್ದು ನಿಂತಿದ್ದ ಹಸಿರೋ ಹಸಿರು ನೆಲದಲ್ಲಿ ‘ಬ್ರಹ್ಮ ಸಮಾಜ’ ಎನ್ನುವ ಹೆಸರು ಹೊತ್ತಿದ್ದ ಗೇಟು ತೆಗೆದೆ..

ಅದರ ಜೊತೆಗೆ ನನ್ನ ನೆನಪುಗಳ ಗೇಟೂ ತೆರೆದುಕೊಂಡಿತು..

೧೯೯೨ ರಲ್ಲಿ ನಾನು ಮಂಗಳೂರಿಗೆ ಕಾಲಿಟ್ಟಾಗ ಕುದ್ಮುಲ್ ರಂಗರಾಯರ ಪರಿಚಯ ಏನೇನೂ ಇರಲಿಲ್ಲ. ಆದರೆ ಪ್ರತೀ ಬಾರಿ ನಾನು ಪಿ ವಿ ಎಸ್ ಸರ್ಕಲ್ ನಿಂದ ಎಡಕ್ಕೆ ಹೊರಳಿಕೊಂಡು ಕಚೇರಿ ತಲುಪಬೇಕಾದಾಗಲೆಲ್ಲಾ ನನ್ನ ಕಣ್ಣು ಬಲಗಡೆ ಇದ್ದ ಕಟ್ಟಡದತ್ತ ಹೋಗುತ್ತಿತ್ತು.

ಅದಕ್ಕೆ ಕಾರಣ ಇಷ್ಟೇ ಆ ಬೆಳಗ್ಗೆಯಲ್ಲಿ ಎಷ್ಟೊಂದು ಮಕ್ಕಳು ಶಿಸ್ತಾಗಿ ಶಾಲೆಯ ದಿಕ್ಕಿನತ್ತ ಬಿಲ್ಲಿನಿಂದ ಹೊರಟ ಬಾಣದಂತೆ ಹೋಗುತ್ತಿದ್ದರು. ಅದು ಹಾಸ್ಟೆಲ್.

ಕೃಶ ದೇಹ ಆದರೆ ಬೆಳಕು ಹೊತ್ತ ಕಣ್ಣುಗಳು ಅದು ಖಂಡಿತಾ ಮೇಲ್ವರ್ಗದ ಹಾಸ್ಟೆಲ್ ಅಲ್ಲ ಎನ್ನುವುದನ್ನು ತಾನೇ ತಾನಾಗಿ ಸಾರಿಬಿಟ್ಟಿತ್ತು.

ಅದು ಕುದ್ಮುಲ್ ರಂಗರಾವ್ ಅವರ ಹೆಸರು ಹೊತ್ತ ಹಾಸ್ಟೆಲ್.

ಆಫೀಸಿಗೆ ಬಂದವನೇ ನಾನು ‘ಕುದ್ಮುಲ್ ರಂಗರಾವ್’ ಹೆಸರಿನ ಹಿಂದೆ ಬಿದ್ದೆ. ಅದು ಗೂಗಲ್ ಕಾಲವಲ್ಲ. ಹಾಗಾಗಿ ಎಲ್ಲೆಲ್ಲಿಗೋ ಫೋನು ರಿಂಗಾಯಿಸಲು ಶುರು ಮಾಡಿದೆ.

ಆಗ ಹೊಳೆಯಿತು. ಅರೆ! ಕುದ್ಮುಲ್ ರ ಕೈಯನ್ನು ನಾನು ಈ ಹಿಂದೆಯೇ ಕುಲುಕಿದ್ದೇನೆ. ‘ಭಾರತ ಭಾರತಿ’ ಪುಸ್ತಕದ ಮಾಲಿಕೆಯಲ್ಲಿ. ತಕ್ಷಣ ನೆನಪು ಹಿಂದೋಡಿತು.

ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಎರಡೂ ಸೇರಿ ಆಗ ‘ಕನ್ನಡ’ ಜಿಲ್ಲೆ ಎಂದು ಮಾತ್ರ ಇತ್ತು. ಗಾಂಧಿ ‘ಕನ್ನಡ’ ಜಿಲ್ಲೆಗೆ ಮೂರು ಬಾರಿ ಬಂದಿದ್ದರಂತೆ.

ಆದರೆ ಒಂದು ವಿಶೇಷವಿತ್ತು ಕನ್ನಡ ಜಿಲ್ಲೆಯ ನೆಲದಲ್ಲಿ. ಕಾಸರಗೋಡಿನ ಕುದ್ಮುಲ್ ನಲ್ಲಿ ಹುಟ್ಟಿದ ರಂಗರಾಯರು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೊರಟುಬಿಟ್ಟಿದ್ದರು. ಗಾಂಧಿ ಮತ್ತು ಅಂಬೇಡ್ಕರ್ ಗೂ ಮುಂಚೆಯೇ.

ಗಾಂಧಿ ಮತ್ತು ಅಂಬೇಡ್ಕರ್ ಎದುರಿಸಿದ ಸಂಕಷ್ಟಗಳು, ಸವಾಲುಗಳ ಬಗ್ಗೆ ನಾವು ಓದಿದ್ದೇವೆ ಬೇಕಾದಷ್ಟು. ಹಾಗಾದರೆ ಅವರಿಗೂ ಮುನ್ನವೇ ಮನುಷ್ಯನನ್ನು ಕಾಣಲು ಹೋರಾಟ ಕುದ್ಮುಲ್ ರಂಗರಾಯರ ಹಾದಿ ಎಂತಹದ್ದಿರಬಹುದು?

ಕುದ್ಮುಲ್ ರಂಗರಾಯರು ಜಾತಿಯಿಂದ ಎತ್ತರದ ಸ್ಥಾನದಲ್ಲಿದ್ದರು. ಆದರೆ ಆ ಉಪ್ಪರಿಗೆಯನ್ನು ಅವರೇ ತೊಡೆದು ಹಾಕಿ ದಲಿತರೆಡೆಗೆ ನಡೆದುಬಂದರು.

ಶಿಕ್ಷಣವೊಂದೇ ಸಮಾನತೆಗೆ ಮೊದಲ ಬೆಳಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಮೊದಲು ಕೈ ಹಾಕಿದ್ದು ದಲಿತ ಶಾಲೆಯ ಸ್ಥಾಪನೆಗೆ. ಅಂಬೇಡ್ಕರ್ ಹಾಗೂ ಗಾಂಧೀಜಿ ಹೋರಾಟದ ಕಣಕ್ಕೆ ಇಳಿಯುವ ಮೊದಲೇ..

ಅವರತ್ತ ಕಲ್ಲು ತೂರಿಬಂತು, ಮಕ್ಕಳಿಗೆ ದಾರಿಯಲ್ಲಿ ಅಪಮಾನ ಮಾಡಲಾಯಿತು, ಶಾಲೆಗೆ ಮಕ್ಕಳು ಬರದಂತೆ ಮಾಡಲಾಯಿತು. ಮಕ್ಕಳು ಬಂದರೂ ಶಿಕ್ಷಕರೇ ಇರದಂತಾಯಿತು. ಈ ಎಲ್ಲವನ್ನೂ ದಾಟಿಕೊಂಡೇ ಕುದ್ಮುಲ್ ಆರು ಹೆಜ್ಜೆ ಹಾಕಿದರು. ಅವರೊಳಗೆ ಒಬ್ಬ ಮನುಷ್ಯ ಹುಟ್ಟಿ ಸಾಕಷ್ಟು ವರ್ಷವಾಗಿ ಹೋಗಿತ್ತು.

ರಂಜಾನ್ ದರ್ಗಾ ಹೇಳುತ್ತಾರೆ ‘ಅವರು ಶಿಕ್ಷಣ, ಭೂಮಿ ಹಾಗೂ ಅಧಿಕಾರ ಈ ಮೂರನ್ನೂ ದಲಿತರ ಏಳಿಗೆಯ ದೀವಿಗೆಯಾಗಿ ಬಳಸಿದರು’ ಎಂದು.

ಕುದ್ಮುಲ್ ರಂಗರಾಯರು ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಹುಟ್ಟು ಹಾಕಿದರು. ದಲಿತರು ಮಹಿಳೆಯರ ಪರವಾಗಿ ನಿಂತರು. ಆ ಕಾಲಕ್ಕೆ ಮುನಿಸಿಪಾಲಿಟಿಯಲ್ಲಿ ಜಿಲ್ಲಾ ಬೋರ್ಡ್ ಗಳಲ್ಲಿ ದಲಿತರ ನೇಮಕಕ್ಕೆ ಆಗ್ರಹಿಸಿ ಯಶಸ್ಸೂ ಗಳಿಸಿದರು.

‘ಅವರಿಗೆ ಕ್ಷೌರ ಮಾಡಲು ಯಾರೂ ಮುಂದೆ ಬರಲಿಲ್ಲ, ಬಟ್ಟೆ ಒಗೆಯಲು ಮುಂದೆ ಬಂದವರು ಬಹಿಷ್ಕಾರಕ್ಕೆ ಒಳಗಾಗುತ್ತಿದ್ದರು’ ಎನ್ನುತ್ತಾರೆ ಲಕ್ಷ್ಮಣ ಕೊಡಸೆ.

ಬಟ್ಟೆಗೆ ಅಂಟಿದ ಕೊಳೆಯನ್ನಾದರೂ ಹಾಗೇ ಬಿಡಬಹುದು ಆದರೆ ಮನಸ್ಸಿಗೆ ಅಂಟಿದ ಕೊಳೆ? . ಹಾಗಾಗಿಯೇ ಕುದ್ಮುಲ್ ರಂಗರಾಯರು ಕೊಳೆ ತೊಳೆಯುವ ಮಡಿವಾಳನಂತೆ, ಜಗದ ಕೊಳೆ ತೊಲಗಿಸುವ ಜಲಗಾರನಂತೆ ಹೆಜ್ಜೆ ಹಾಕಿದರು.

ನಾನು ‘ಬ್ರಹ್ಮ ಸಮಾಜ’ದ ಆ ನೆಲದಲ್ಲಿ ಕಾಲಿಟ್ಟಾಗ ಎಲ್ಲೆಲ್ಲೂ ಹಸಿರು ಮುಕ್ಕಳಿಸುತ್ತಿತ್ತು. ಮಂಗಳೂರಿನ ಹೃದಯ ಭಾಗದಲ್ಲೇ ಕುದ್ಮುಲ್ ರಂಗರಾಯರ ಸಮಾಧಿ ಇತ್ತು. ಮಂಗಳೂರಿಗೇ ಹೃದಯವಂತಿಕೆ ಕೊಟ್ಟ ಅವರು ಅಲ್ಲೇ ಇದ್ದರು.

ನಾನು ಕ್ಯಾಮೆರಾ ಕ್ಲಿಕ್ಕಿಸುತ್ತಾ ಹೋದೆ.

ಮನುಷ್ಯರಿಗೆ ಹೃದಯ ಕೊಡಬಹುದು ಆದರೆ ತಂತ್ರಜ್ಞಾನದ ನಾಗಾಲೋಟದಲ್ಲಿ ತಾನೂ ಇನ್ನೊಂದು ಮೆಷಿನ್ ಮಾತ್ರವಾಗಿರುವ ಸಮಾಜಕ್ಕೆ ಹೃದಯ ಕಸಿ ಮಾಡುವುದು ಹೇಗೆ? ಎನ್ನುವುದು ತಲೆಯಲ್ಲಿ ಸುತ್ತಿ ಸುಳಿಯಲಾರಂಭಿಸಿತು.

ಹೊರಡಲು ಕಾರು ಸಜ್ಜಾಯಿತು. ಒಂದಷ್ಟು ದೂರ ಸಾಗಿರಬಹುದೇನೋ..

“ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ..”

-ಎಂದು ಅವರ ಸಮಾಧಿಯ ಮೇಲೆ ಇದ್ದ ಮಾತು ಕಾರಿನ ಚಕ್ರದಂತೆಯೇ ನನ್ನೊಳಗೆ ಸುತ್ತಲಾರಂಭಿಸಿತು.

ಈಗ ಎಲ್ಲೆಲ್ಲೂ ಕೊರೊನಾ‌‌ ದೇವಿಯರು…

ಹರೀಶ್ ಕಮ್ಮನಕೋಟೆ


ತುಮಕೂರು; ಒಂದೆಡೆ ಇಡೀ ವಿಶ್ವವನ್ನೇ ಕೊರೊನಾ ಸೋಂಕು ತಲ್ಲಣಗೊಳಿಸುತ್ತಿದ್ದರೆ, ಇತ್ತ ಔಷಧಿ‌ ಸಿಗದ ಕಾರಣ ಗ್ರಾಮೀಣ ಜನರು ಕೊರೊನಾ ಅಮ್ಮನ ಮೊರೆ‌ ಹೋಗುತ್ತಿದ್ದಾರೆ.

ವೈದ್ಯರು, ನರ್ಸ್ ಗಳು, ಸ್ವಚ್ಛತಾ ಕರ್ಮಿಗಳು, ಪೋಲೀಸರು ಜನರ ಜೀವದ ರಕ್ಷಣೆಗೆ ಪಣತೊಟ್ಟಿದ್ದಾರೆ.

ಇದರ ನಡುವೆ ಜನರು ಹೆದರಿ ಕೊರೊನ ದೇವಿಯ ಪೂಜಿಸುತ್ತಿದ್ದಾರೆ. ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗೋಮಾಳ ಗ್ರಾಮದಲ್ಲಿ ಶುಕ್ರವಾರ ದೇವಿಯ ಪೂಜೆ ನಡೆದಿದೆ.

ಹೌದು.. ಭಯವೇ ಭಕ್ತಿಯ ಮೂಲ ಎಂಬ ನಾಣ್ಣುಡಿಯಂತೆ, ಕೊರೊನ ಸೋಂಕಿಗೆ ಭಯಭೀತರಾಗಿ ತಾವೇ ಕೊರೊನ ದೇವಿಯನ್ನು ಸೃಷ್ಟಿಸಿ ಪೂಜೆಗೈದಿರುವ ಘಟನೆ ಶುಕ್ರವಾರ ಜರುಗಿದೆ.

ಹಿಂದಿನ ಕಾಲದಲ್ಲಿ ಸಿಡುಬು, ದಡಾರ, ಪ್ಲೇಗ್ ನಂತಹ ಸಾಂಕ್ರಾಮಿಕ ರೋಗಗಳು ಹರಡಿದರೆ ಬೇವಿನ ಮರದಮ್ಮನಿಗೆ ಶರಣಾಗುವ ಪದ್ಧತಿ ಇತ್ತು.

ಅದೇ ರೀತಿಯಾಗಿ ಇಲ್ಲಿಯೂ.. ಬೇವಿನ ಮರದ ಬುಡದಲ್ಲಿ ಚಿಕ್ಕದಾದ ಹಸಿರೆಲೆ ಹೊದಿಕೆಯ ಚಪ್ಪರವನ್ನು ಹಾಕಿ ಹಣ್ಣು, ಹೂ, ಕಾಯಿ, ಮೊಸರನ್ನ ಮತ್ತು ಪೊಂಗಲ್ ಎಡೆ ಇಟ್ಟು ಕೊರೊನ ಅಮ್ಮನಿಗೆ ಹರಕೆ ಹೊತ್ತಿದ್ದಾರೆ.

ನಮ್ಮೂರಿಗೆ ಯಾವುದೇ ಖಾಯಿಲೆ ಕಸಾರೆ ಬರದಿರಲಿ ಹಾಗೂ ಜನರ ಆರೋಗ್ಯ ಸುಧಾರಿಸಲಿ ಎಂಬ ಹಿತದೃಷ್ಟಿಯಿಂದ ಕೊರೊನ ದೇವಿಯ ಪೂಜೆಮಾಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರಾದ ಕಂಬೇಗೌಡ.

ಎರಡು ಸಾವಿರ ಬೆಲೆಯ ನೋಟಿನ ಪರ್ಸ್: ಬಟವಾಡಿಯಲ್ಲಿ ಆತಂಕ

ತುಮಕೂರು: ನಗರದ ಬಟವಾಡಿಯ 80 ಅಡಿ ರಸ್ತೆಯ ಎಂಟನೇಯ ತಿರುವಿನ ರಸ್ತೆ ಬದಿ ತಳ್ಳುವ ಗಾಡಿಯ ಮೇಲೆ‌ 2000 ಮುಖ ಬೆಲೆಯ ಚಿತ್ರ ಇರುವ ನೋಟಿನ ಪರ್ಸ್ ಇಟ್ಟಿದ್ದು ದಾರಿ ಹೋಕರು, ಈ ಭಾಗದ ಮನೆ ಮಾಲೀಕರು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಐದಾರು ಮಂದಿಯ ಗುಂಪೊಂದು ಈ ಕೃತ್ಯ ಎಸಗುತ್ತಿದೆ.‌ಜನರು ಹಣವೆಂದು ತಪ್ಪಾಗಿ ಭಾವಿಸಿ ಪರ್ಸ್ ಮುಟ್ಟುತ್ತಾರೆ. ಕೊರೊನಾ ಸೋಂಕಿನ ಪರ್ಸ್ ಇರಬಹುದೇ ಎಂದು ಭಯ ಬೀಳುತ್ತಾರೆ.

ಇದೇ ಹುಡುಗರ ತಂಡವೇ ರಸ್ತೆ ಬದಿಯಲ್ಲೂ ಇಂತ ಪರ್ಸ್ ಗಳನ್ನು ಎಸೆದು ಕುಕೃತ್ಯ ಎಸಗುತ್ತಿದೆ.‌ ಇದು ಜನರಿಗೆ ಭಯವನ್ನು ತರಿಸಿದೆ.

ಜ‌ನರಲ್ಲಿ ಭಯ ಉಂಟಾಗುತ್ತಿದೆ.‌ಇಂತ ಕಿಡಿಗೇಡಿ ಕೃತ್ಯಗಳು ನಡೆಯಬಾರದು ಎಂದು ಬಟವಾಡಿ ರಂಗನಾಥ ‌ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.