Friday, May 8, 2026
Google search engine
Home Blog Page 221

ಮೇ 24 ಆದಿತ್ಯವಾರ ಈದುಲ್ ಪಿತ್ರ್ ಹಬ್ಬ

ಮಂಗಳೂರು: ಮೇ 24 ಆದಿತ್ಯವಾರ ಈದುಲ್ ಪಿತ್ರ್ ಹಬ್ಬ ಆಚರಣೆ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ‌ ಹೇಳಿದ್ದಾರೆ.

ಶವ್ವಾಲ್ ತಿಂಗಳ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ಮೇ 23 ಶನಿವಾರ 30 ನೇ ಉಪವಾಸ ಪೂರ್ತಿಗೊಳಿಸಿ ಮೇ 24 ಆದಿತ್ಯವಾರ ಈದುಲ್ ಫಿತ್ರ್ ಹಬ್ಬ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ತೀರ್ಮಾನಿಸಿದ್ದಾರೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ ಮಂಗಳೂರು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವೈವಿಧ್ಯ

0

ದೇವರಹಳ್ಳಿ ಧನಂಜಯ


ವೈವಿಧ್ಯದಲ್ಲಿ
ವಿದ್ಯೆ ಇದೆ ತೆರೆದ
ಕಣ್ಣಿಗೆ ಇಲ್ಲಿ

ಪರಿಸರದಲ್ಲಿ
ಅಸಂಖ್ಯ ಗುರುಗಳು
ಬದುಕ ಪಾಠಗಳು

ಅರಳು ಮಗ್ಗು
ಸಹಜ ಸ್ಪಂದನವ
ಕಲಿಸುತಿದೆ

ಎಲೆ ಇಬ್ಬನಿ
ಪುಟ್ಟ ಬದುಕ ದೊಡ್ಡ
ಅರ್ಥ ಹೇಳಿವೆ

ಸದಾ ಮೂಡುವ
ಸೂರ್ಯನೂ ಸಾರುತಿಹ
ನಿರಂತರವ

ಮೌನ ಚಿಗುರು
ಸದ್ದಿಲ್ಲದೆ ಮಾಡಿವೆ
ಬೆಳೆವ ಪಾಠ

ಬೆಳ್ಳಂಬೆಳಗ್ಗೆ
ಕೂಗುವ ಕಾಗೆಯದು
ಎಚ್ಚರ ಪಾಠ

ಒಗ್ಗಟ್ಟು ಪಾಠ
ಹಿಂಡಿಂಡು ಹೊರಡುವ
ಪಕ್ಷಿಗಳದ್ದು

ಎದೇಪಸೆಯ
ಜೊತೆ ಸದಾ ಸಾಗುವ
ಗೆದ್ದಲ ಪಾಠ

ಇರುವೆಯದು
ದುಡಿಮೆ ದೇವರೆಂಬ
ಬದುಕ ಪಾಠ

ಸಗಣಿ ಹುಳು
ಕಸ ರಸ ಮಾಡುವ
ಪಾಠ ಹೇಳಿದೆ

ಕಲಿಸುತ್ತಿದೆ
ತುಪ್ಪ ತಿನ್ನದ ಜೇನು
ಸಾರ್ಥಕತೆಯ

ಪ್ರಾಣಿ ಪಕ್ಷಿಗೆ
ಜಾತಿ ಧರ್ಮ ಗಳಿಲ್ಲ
ದಿಕ್ಕು ತಪ್ಪಲು

ಕಲಿವುದಿದೆ
ಗುಡಿ ಗಡಿ ಇಲ್ಲದ
ಪ್ರಾಣಿಗಳಿಂದ

ವೈವಿಧ್ಯದಲ್ಲಿ
ಮತ್ತೆ ಕಟ್ಟಬೇಕಿದೆ
ಹೊಸ ಬದುಕ

ಕೊರೊನಾ ಸೋಂಕು: ಬಳ್ಳಗೆರೆ ಸಮೀಪದ ಗ್ರಾಮಕ್ಕೆ ಸುರೇಶ ಗೌಡ ಭೇಟಿ

ತುಮಕೂರು: ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಬ್ಬೂರು ಹೋಬಳಿಯ, ಬಳ್ಳಗೆರೆ ಗ್ರಾಮ ಪಂಚಾಯತಿ ಮಾಯಣ್ಣನ ಪಾಳ್ಯದಲ್ಲಿ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ, ತಕ್ಷಣ ಆ ಗ್ರಾಮಕ್ಕೆ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರು ಭೇಟಿ ನೀಡಿದರು.

ಯಾವ ಯಾವ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ತಾಲ್ಲೂಕು ದಂಡಾಧಿಕಾರಿ ,ತಾಲ್ಲೂಕು ಪಂಚಾಯತಿ E,O, ತಾಲ್ಲೂಕು ಆರೋಗ್ಯ ಅಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನರ್ಸ್ ಹಾಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರೊಂದಿಗೆ ಪರಿಶೀಲನೆ ನಡೆ, ಮಾಹಿತಿ ಪಡೆದರು.

ಗ್ರಾಮಸ್ಥರಿಗೆ ಕೋವಿಡ್ 19 ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವುದರೊಂದಿಗೆ ಜೀವ ಹಾಗೂ ಜೀವನವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಏನೇ ಆದರೂ ದೃತಿಗೆಡಬೇಡಿ, ನಿಮ್ಮೊಂದಿಗೆ ನಾನು ಹಾಗೂ ನಮ್ಮ ಸರ್ಕಾರ ಇರಲಿದೆ ಎಂದು ಧೈರ್ಯ ತುಂಬಿದರು.

ಎಲ್ಲ ರೀತಿಯ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕಿತ‌ನ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಗ್ರಾಮದಲ್ಲಿ ಶಂಕಿತರ ತಪಾಸಣೆ ನಡೆಸಬೇಕು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಬ್ಬಬ್ಬಾ! ಏನೀ ಊರುಗಳ ಸಾಧನೆ

0

ರೂಪಕಲಾ


ತುಮಕೂರು: ಕೊರೊನಾ ನಡುವೆಯು ತುಮಕೂರು ಜಿಲ್ಲೆಗಳ ಈ ಊರುಗಳು ಸಾಧನೆ ಮೆರೆದಿವೆ.

ಇದೇ ಮೊದಲ ಸಲ ಎಲ್ಲರೂ ಕಣ್ಣರಳಿಸಿ ನೋಡುವಂತ ಕೆಲಸವನ್ನು ನರೇಗಾ ಯೋಜನೆಯಡಿ ಮಾಡಿ ಮುಗಿಸಿವೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ 10 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಲಾಗಿದ್ದು, ಕಳೆದ ಮೇ 21ರೊಳಗೆ ಒಟ್ಟು 55456 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ತುಮಕೂರು ಜಿಲ್ಲೆ ನರೇಗಾ ಅನುಷ್ಠಾನದಲ್ಲಿ ದಾಪುಗಾಲು ಹಾಕಿದೆ.

ಪಾವಗಡ ತಾಲೂಕಿನ 39 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಾಗೂ ಸಮುದಾಯದ 338 ಕಾಮಗಾರಿಗಳು ಪ್ರಗತಿಯಲ್ಲಿದ್ದು ಜಿಲ್ಲೆಗೆ 5ನೇ ಸ್ಥಾನದಲ್ಲಿದೆ.

ಕ್ಯಾತಗಾನಕೆರೆ ಹೂಳೆತ್ತುವ ಕಾಮಗಾರಿ:- ಪಾವಗಡ ತಾಲೂಕು ಬಿ.ಕೆ ಹಳ್ಳಿ ಗ್ರಾಮಪಂಚಾಯಿತಿ ಕ್ಯಾತಗಾನಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು 3 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದು, ಸಾಮಾಗ್ರಿ ವೆಚ್ಚ-20,000 ರೂ. ಕೂಲಿ ವೆಚ್ಚ 2.80 ಲಕ್ಷ ರೂಪಾಯಿಗಳು ಈವರೆಗೆ 1018 ಮಾನವ ದಿನಗಳು ಸೃಜನೆಯಾಗಿದೆ.

ಗ್ರಾಮದ ಸುತ್ತಮುತ್ತಲಿನ 11 ಜನರ 16 ಗುಂಪುಗಳಿಗೆ ಉದ್ಯೋಗ ನೀಡಲಾಗಿದೆ. ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಹೊನ್ನೆಬಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಸರ್ವೇ ನಂ-268/1 ಹೆಚ್.ಎನ್ ಚಂದ್ರಶೇಖರ್ ಬಿನ್ ನಾರಾಯಣಪ್ಪ ಅವರ ಜಮೀನಿನಲ್ಲಿ ನರೇಗಾ ಯೋಜನೆಯಡಿಯಲ್ಲಿ 73 ಸಾವಿರ ರೂಪಾಯಿಗಳಲ್ಲಿ ಕೃಷಿ ಹೊಂಡ ಕಾಮಗಾರಿ ನಿರ್ಮಾಣ ಕೈಗೊಂಡಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಪರಿತಪಿಸುತಿದ್ದ ಕುಟುಂಬಕ್ಕೆ ಕೆಲಸ ನೀಡಿದಂತಾಗಿದೆ.

ಮಳೆಗಾಲದಲ್ಲಿ ಬರುವ ಮಳೆಯಿಂದ ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚುವುದಲ್ಲದೆ, ಬೋರ್‍ವೆಲ್ ರಿಚಾರ್ಜ್ ಆಗಲಿದೆ ಎಂದು ಚಂದ್ರಶೇಖರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 7 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಗುರಿ ಹೊಂದಿದ್ದು, ಈವರೆಗೆ 39266 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಯಲ್ಲಿ ತಾಲೂಕು 6ನೇ ಸ್ಥಾನದಲ್ಲಿದೆ.

ನಮ್ಮ ಹೊಲ ನಮ್ಮ ದಾರಿ:- ತುರುವೇಕೆರೆ ತಾಲೂಕು ಆನೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಘಟ್ಟ ಗ್ರಾಮದ ಮುಖ್ಯ ರಸ್ತೆಯಿಂದ ಶಂಕರಪ್ಪನವರ ತೋಟದಿಂದ ಕೆರೆಗೆ ಹೋಗುವ ದಾರಿಯನ್ನು ನಮ್ಮ ಹೊಲ ನಮ್ಮ ದಾರಿ 9 ಲಕ್ಷ ರೂಪಾಯಿಗಳಲ್ಲಿ ಆರಂಭಗೊಂಡಿದ್ದು, ಈವರೆಗೆ 2181 ಮಾನವ ದಿನಗಳನ್ನು ಸೃಜನೆ ಮಾಡಿದ್ದು, ಗ್ರಾಮದ ಸುತ್ತಲಿನ ಗ್ರಾಮಸ್ಥರ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದೆ. ಕೂಲಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಕೊರಟಗೆರೆ ತಾಲೂಕು ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬಾಡಿ ಗ್ರಾಮದ ಭೈರೇನಹಳ್ಳಿದಿಣ್ಣೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ 2 ಲಕ್ಷ ರೂಪಾಯಿಗಳಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿದ್ದು, 436 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.

ಕಾಂತರಾಜು ಅವರ ಜಮೀನಿನ ಮೂಲಕ ಹಳ್ಳವನ್ನು ಸೇರುತ್ತಿದ್ದ ಹರಿಯುವ ನೀರನ್ನು ಬಾವಿಯಲ್ಲಿ ಸಂಗ್ರಹಿಸುವ ಮೂಲಕ ಉತ್ತಮ ಬೆಳೆ ಪಡೆಯಬಹುದಾಗಿದೆ ಎಂದು ಕಾಂತರಾಜು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಶಿರಾ ತಾಲೂಕು ಮಾಗೋಡು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ್ ಅವರು, ಬದು ನಿರ್ಮಾಣ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಕಾಮಗಾರಿ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ, ಗ್ರಾಮದ ಜನರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಇಂಗು ಗುಂಡಿ ನಿರ್ಮಿಸಿಕೊಳ್ಳುವ ಮೂಲಕ ತಮ್ಮ ಜಮೀನಿನಲ್ಲಿ ತಾವೇ ದುಡಿದು ತಮ್ಮ ಭೂಮಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೆ ಕೂಲಿ ರೂಪದಲ್ಲಿ ಹಣವನ್ನು ಗಳಿಸಿ ಅಭಿವೃದ್ಧಿ ಹೊಂದಲು ಅವರು ಕರೆ ನೀಡಿದರು. ಈ ವಿಷಯದಲ್ಲಿ ಆಸಕ್ತರಾದ ಎಲ್ಲಾ ರೈತರು ನರೇಗಾ ಯೋಜನೆಯ ಲಾಭ ಪಡದುಕೊಳ್ಳಲು ಅವರು ಕರೆ ನೀಡಿದ್ದರು.

ಸರ್ಕಾರದಿಂದ 5 ಸಾವಿರ ನೆರವು: ನಿಯಮ‌ ಸರಳೀಕರಣಕ್ಕೆ ಅಟೊ ಚಾಲಕರ ಒತ್ತಾಯ

ತುಮಕೂರು: ಕೋರೊನಾ ವೈರಸ್ ನಿಂದ ಆರ್ಥಿಕ ಸಂಷಕ್ಕೆ ಸಿಲುಕಿದ ಆಟೋ/ಟ್ಯಾಕ್ಸಿ ಚಾಲಕರಿಗೆ ರೂ.5000/- ಒಂದು ಬಾರಿ ಪರಿಹಾರವನ್ನು ಘೋಷಣೆಯನ್ನು ಮಾಡಿರುವುದನ್ನು ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಮತ್ತು ಸಿಐಟಿಯ ಸ್ವಾಗತಿಸಿವೆ.

5000 ರೂ ಪಡೆಯಲು ಸಾರಿಗೆ ಆಯುಕ್ತರು 8 ನಿಬಂಧನೆಗಳನ್ನು ಆದೇಶದಲ್ಲಿ ಹೊರಡಿಸಿದ್ದು ಅದರಲ್ಲಿ ಹಲವು ನ್ಯೂನತೆಗಳಿರುತ್ತವೆ. ಅದನ್ನು ಸರಳೀಕರಣಗೊಳಿಸಬೇಕೆಂದು ಎಂದು ಆಟೋ ಚಾಲಕರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಚಾಲಕರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.

ಲಾಕ್ ಡೌನ್ ನಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಇದು ಆಶಾದಾಯಕ ಭರವಸೆ ಮೂಡಿಸಿತ್ತು ಆದರೆ ಪರಿಹಾರ ಪಡೆಯಲು ಹತ್ತು ಹಲವು ನಿಬಂಧನೆ ಆಳವಡಿಸಿದ್ದು ಚಾಲಕರಿಗೆ ಸೌಲಭ್ಯ ಪಡೆಯಲು ಕಷ್ಟವಾಗಿದೆ.

ಸರ್ಕಾರವು ಪರಿಹಾರ ಪಡೆಯಲು ವಾಹನದ ಎಫ್.ಸಿ. ಕೇಳುವುದು ಸರಿಯಾದ ಕ್ರಮವಲ್ಲ. ಇದರಿಂದ ಹೆಚ್ಚು ಚಾಲಕರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಾಗಾಗಿ ನಿಭಂದನೆ ಸಡಿಲಗೊಳಿಸಬೇಕು ಎಂದು ಮನವಿ ಮಾಡಿದರು.

ಆಟೋ ಚಾಲನೆ ಮಾಡಲು ಚಾಲನ ಪತ್ರ ಮಾತ್ರ ಬೇಕಾಗಿದೆ. ಈ ಮಾನದಂಡ ಪರಿಗಣನೆಗೆ ತೆಗೆದುಕೊಂಡು ಚಾಲಕರಿಗೆ ಸಿಗುವ ಪರಿಹಾರ ಕೊಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಧ ಜಿಲಾಧ್ಯಕ್ಷ ಸಿದ್ದರಾಜು, ಖಜಾಂಚಿ ಇಂತಿಯಾಜ್ ಪಾಷ, ಚಾಲಕರಾದ ನಿಜಲಿಂಗಪ್ಪ, ಪಯಾಜ್ ಹಾಜರಿದ್ದರು.

ಬಸ್ ಕಂಡಕ್ಟರ್, ಚಾಲಕರಿಗೆ‌ ಕೊರೊನಾ ವಿಮೆ ವ್ಯಾಪ್ತಿಗೆ ಒತ್ತಾಯ

Publicstory.in


ಬೆಂಗಳೂರು: ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ರಸ್ತೆ ಸಾರಿಗೆಯ ನಿರ್ವಾಹಕರು, ಚಾಲಕರನ್ನು 50ಲಕ್ಷ ವಿಮೆ ಪ್ಯಾಕೇಜ್ ಗೆ ಒಳಪಡಿಸಬೇಕು ಎಂದು ಬಿಎಂಟಿಸಿ ಕಾರ್ಮಿಕರ ಸಂಘ ಒತ್ತಾಯಿಸಿದೆ.

ವಿಪತ್ತು ಪರಿಹಾರ ಕಾಯ್ದೆಯಡಿ ಈಗಾಗಲೇ ವೈದ್ಯರು, ವೈದ್ಯ ಸಿಬ್ಬಂದಿ ಹಾಗೂ ಇನ್ನಿತರರು ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬ ವರ್ಗಕ್ಕೆ 50 ಲಕ್ಷ ವಿಮೆ ನೀಡಲಾಗುತ್ತಿದೆ. ಇದನ್ನು ಬಸ್ ಚಾಲಕರು, ನಿರ್ವಾಹಕರಿಗೂ ನೀಡಬೇಕು ಎಂದು ಹೇಳಿದ್ದಾರೆ.

ಲಾಕ್ ಡೌನ್ ಸಡಿಲಗೊಂಡ ಬಳಿಕ ಸಾರಿಗೆ ಬಸ್ ಗಳನ್ನು ಬಿಡಲಾಗಿದೆ. ಪ್ರತಿ ದಿನ ಜನರನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಅಪಾಯಕಾರಿ ಕೆಲಸದಲ್ಲಿ ಸಿಬ್ಬಂದಿ ತೊಡಗಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಹೇಳಿದ್ದಾರೆ.

ಆರೋಗ್ಯ ರಕ್ಷಾ ಕವಚಗಳು, ಸ್ಯಾನಿಟೈಜರ್ ಮತ್ತಿತರ ಸೌಲಭ್ಯಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಡಾಬಸಪೇಟೆಗೂ ಅಂಟಿದ ಕೊರೊನಾ ಸೋಂಕು

ದಾಬಸಪೇಟೆ: ಕೊರೊನಾ ಸೋಂಕು ದಾಬಸಪೇಟೆಗೂ ಕಾಲಿಟ್ಟಿದೆ. ಮೊದಲ ಪ್ರಕರಣ ಶುಕ್ರವಾರ ಪತ್ತೆಯಾಗಿದೆ.

ಇವರು 58 ವರ್ಷದ ಮಹಿಳೆಯಾಗಿದ್ದು, ಉಸಿರಾಟಡ ತೊಂದರೆಯಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಬಂದಿದ್ದರು.

ಇವರ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಸೋಕು ದೃಢಪಟ್ಟ ಕಾರಣ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಉಳಿದಂತೆ ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಮಂದಿಗೆ ಕೊರೊನ ಸೋಂಕು ಹರಡಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.

ತುರುವೇಕೆರೆಯಲ್ಲಿ 4 ಮಂದಿ ಸೋಂಕಿಗೆ ಒಳಗಾಗಿದ್ದರೆ, ಹೆಬ್ಬೂರಿನಲ್ಲಿ ಒಬ್ಬರಿಗೆ, ಇನ್ನಿಬ್ಬರು ತುಮಕೂರು, ಒಬ್ಬರು ದಾಬಸಪೇಟೆಯವರು.

ಇಂದು ಒಂದೇ ದಿನ 8 ಮಂದಿ ಸೋಂಕಿಗೆ ಒಳಗಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.

ಲಾಕ್ ಡೌನ್ ಸಡಿಲಿಕೆ ಮಾಡಿರುವ ನಡುವೆಯೇ ಕೊರೊನ ಸೋಂಕು ಹರಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಹೆಬ್ಬೂರು, ತುರುವೇಕೆರೆಗೂ ವ್ಯಾಪಿಸಿದ ಕೊರೊನಾ

ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಮಂದಿಗೆ ಕೊರೊನ ಸೋಂಕು ಹರಡಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.

ತುರುವೇಕೆರೆಯಲ್ಲಿ 4 ಮಂದಿ ಸೋಂಕಿಗೆ ಒಳಗಾಗಿದ್ದರೆ, ಹೆಬ್ಬೂರಿನಲ್ಲಿ ಒಬ್ಬರಿಗೆ, ಇನ್ನಿಬ್ಬರು ತುಮಕೂರು, ಒಬ್ಬರು ದಾಬಸಪೇಟೆಯವರು.

ಇಂದು ಒಂದೇ ದಿನ 8 ಮಂದಿ ಸೋಂಕಿಗೆ ಒಳಗಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.

ಲಾಕ್ ಡೌನ್ ಸಡಿಲಿಕೆ ಮಾಡಿರುವ ನಡುವೆಯೇ ಕೊರೊನ ಸೋಂಕು ಹರಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈಗಾಗಲೇ ತುಮಕೂರು ನಗರದ ಕೆಲವು ಭಾಗಗಳನ್ನು ಸೀಲ್ ಡೌನ್ ಮಾಡಿದ್ದು, ಸಿರಾ ಮತ್ತು ತುರುವೇಕೆರೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ.

ವಾಟ್ಸ್ ಅಪ್ ಕನ್ನಡಿಯಲ್ಲಿ ಕಂಡ ಮುಖ…

0

ಜಿ ಎನ್ ಮೋಹನ್


‘ಸರ್ ಬೇಗ ಬನ್ನಿ ಗಂಜಿಗೆ ಕಾಫಿ ಬೆರೆಸಿದ್ದೇವೆ..’ ಅಂತ ಕಾಲ್ ಬಂತು.
ಅರೆರೆ! ಗಂಜಿಗೆ ಒಂದು ತುಂಡು ಮೀನು ಇಲ್ಲವೇ ಮಜ್ಜಿಗೆ ಮೆಣಸು ಅದೂ ಇಲ್ಲದಿದ್ದಲ್ಲಿ ಎಟ್ಟಿಚಟ್ನಿ ಮಾತ್ರ ಮಿಕ್ಸ್ ಮಾಡಿ ಗಡದ್ದಾಗಿ ತಿಂದಿರುವ ಅನುಭವ ಇರುವ ನಾನು ಗಂಜಿಗೆ ಕಾಫಿ ಕೂಡಾ ಮಿಕ್ಸ್ ಮಾಡುತ್ತಾರಾ ಅಂತ ಹೌಹಾರಿ ಹೋದೆ.

ಸರಿಯಾಗಿ ನಾನೇ ಕೇಳಿಸಿಕೊಂಡಿಲ್ಲವೇನೋ ಅನಿಸಿತು. ಆ ಕಡೆಯಲ್ಲಿದ್ದವರಿಗೆ ‘ಸರಿಯಾಗಿ ಕೇಳಿಸಲಿಲ್ಲ, ಗಂಜಿಗೆ ಏನುಂಟು?’ ಎಂದೆ. ತಕ್ಷಣ ಅವರು ‘ಕಾಫೀ..’ ಎಂದರು.

ನನ್ನನ್ನು ಇನ್ನಷ್ಟು ಗೊಂದಲಕ್ಕೆ ದೂಡಿದರೆ ವಿನಾ ಅವರು ಪರಿಸ್ಥಿತಿಯನ್ನೇನೂ ತಿಳಿ ಮಾಡಲಿಲ್ಲ.

ಸಾರ್ ಬೇಗ ಬನ್ನಿ ಗಂಜಿ ತಣ್ಣಗಿದ್ರೂ ನಡೀತದೆ ಕಾಫಿ ಆರಬಾರದಲ್ಲ ಅಂದರು. ನನ್ನನ್ನು ಮಂಗ ಮಾಡುತ್ತಿದ್ದಾರೆ ಅನಿಸಿಹೋಯಿತು. ಹೋಗಿ ಮಾರಾಯರೇ ಅಂದೆ. ಅವರಿಗೂ ನನ್ನ ಮಂಡೆ ಸಾಕಷ್ಟು ಬೆಚ್ಚಗಾಗಿದೆ ಎಂದು ಗೊತ್ತಾಯಿತೇನೋ ಮರುನಿಮಿಷದಿಂದ ನನ್ನ ಮೊಬೈಲ್ ‘ಟೊಯ್ ಟೊಯ್’ ಸದ್ದು ಮಾಡತೊಡಗಿತು. ಒಂದರ ಹಿಂದೆ ಒಂದು ಫೋಟೋ ಬಂದು ಬೀಳತೊಡಗಿತು.

ಇದೇನಿದು ಎಂದು ನೋಡಿದರೆ ಗಂಜಿ ಊಟ ಮಾಡುತ್ತಾ ಕುಳಿತವರ ಮಧ್ಯೆ ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಪುಸ್ತಕ ಕೂತಿತ್ತು. ಓಹ್! ಎಂದುಕೊಂಡೆ. ಅಲ್ಲಿಯವರೆಗಿನ ನಿಗೂಢ ಮಾತಿಗೆ ಪಾಸ್ ವರ್ಡ್ ಸಿಕ್ಕಿಹೋಗಿತ್ತ್ತು.ಈಗ ಫೋನ್ ಮಾಡುವ ಸರದಿ ನನ್ನದು. ಆ ಕಡೆ ಇದ್ದದ್ದು ಮಂಜುನಾಥ ಕಾಮತ್.

ವಡೆ, ಬೋಂಡಾ ಹಪ್ಪಳ, ಉಪ್ಪಿನಕಾಯಿ ಮಾಡುವುದನ್ನು ನೋಡುತ್ತಾ ಬೆಳೆದ ಹುಡುಗ ಬಿಬಿಎಂ ಮಾಡಲು ನಿಟ್ಟೆ ಕಾಲೇಜಿನ ಬಾಗಿಲು ತಟ್ಟಿದ. ಮಾರ್ಕ್ಸ್ ಕಾರ್ಡುಗಳು ಒಳ್ಳೆ ಮಾತನಾಡಿದರೂ ಆತನಿಗೆ ಮಾತ್ರ ಯಾಕೋ ತಾನು ಹಳಿ ತಪ್ಪಿದ ರೈಲು ಎಂದೇ ಅನಿಸುತ್ತಾ ಹೋಯಿತು ಈ ಮಧ್ಯೆ ಈತ ಓದಿನಲ್ಲಿ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಲಿ ಎಂದು ಚಿಕ್ಕಪ್ಪ ಒಂದು ಲ್ಯಾಪ್ ಟಾಪ್ ಕೊಡಿಸಿದರು. ಲ್ಯಾಪ್ ಟಾಪ್ ಜೊತೆಗೆ ಫ್ರೀಯಾಗಿ ಸಿಕ್ಕಿದ್ದು ಕೊಡಕ್ ಕ್ಯಾಮೆರಾ.

ಲ್ಯಾಪ್ ಟಾಪ್ ಬದಲು ಕೊಡಕ್ ಕಯ್ಯೇ ಮೇಲಾಯಿತು. ಮುಖ್ಯ ಹಾಡುಗಾರನಿಗಿಂತ ಪಕ್ಕವಾದ್ಯದವನೇ ಮಿಂಚಿ ಬಿಟ್ಟಂತೆ ಕ್ಯಾಮೆರಾ ಮಂಜುನಾಥ್ ಅನುದಿನದ ಸಂಗಾತಿಯಾಗಿ ಹೋಯಿತು. ಆ ವೇಳೆಗೆ ಲೈಬ್ರರಿಯನ್ ಶಾಲಿನಿ ಮೇಡಂ ಅಂಕಿಗಳೇ ಕುಣಿಯುತ್ತಿದ್ದ ತಲೆಗೆ ಕಾರಂತ, ತೇಜಸ್ವಿಯರೂ ಎಂಟ್ರಿ ಕೊಡುವಂತೆ ಮಾಡಿದ್ದರು. ಕಾರಂತ ತೇಜಸ್ವಿ ಹಾಗೂ ಕೊಡಕ್ ಕ್ಯಾಮೆರಾ ಕಾಂಬಿನೇಷನ್ ಇವರನ್ನು ಬಿಬಿಎಂ ತರಗತಿಗಳಿಂದ ಎಬ್ಬಿಸಿಕೊಂಡು ಬಂದೇಬಿಟ್ಟವು.

ನಂತರ ಹೊರಳಿಕೊಂಡದ್ದು ಪತ್ರಿಕೋದ್ಯಮಕ್ಕೆ. ಉಜಿರೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಉಪನ್ಯಾಸಕನಾಗುವ ವೇಳೆಗೆ ಮಂಜುನಾಥ್ ಹೊಳೆ ನದಿ ಸಮುದ್ರ ಕಾಡು ಕಣಿವೆ ಎಲ್ಲವನ್ನೂ ಮಾತನಾಡಿಸಿಯಾಗಿತ್ತು
.
‘ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ..’ ಎನ್ನುವ ನುಡಿ ಉಡುಪಿಯ ಹುಡುಗನ ಮಡಿಲಿಗೆ ಬಂದು ಬಿತ್ತು. ಮಂಜುನಾಥ್ ಸುಮ್ಮನೆ ಕೂರಲೇ ಇಲ್ಲ. ಶಾಲಿನಿ ಮೇಡಂ ಹರಡಿದ ಪುಸ್ತಕದ ಹುಳು ದೊಡ್ಡದಾಗೇ ಬೆಳೆದು ಹೋಗಿತ್ತು. ಸರಿ ಮೇಲಿಂದ ಮೇಲೆ ಪುಸ್ತಕ ಓದತೊಡಗಿದ ಮಂಜುನಾಥ್ ಗೆ ಓದಿದ್ದು ಹಂಚಿಕೊಳ್ಳಲು, ಚರ್ಚೆ ಮಾಡಲು.. ತಾನು ಓದಿದ ರೀತಿ ಸರಿಯೇ ಎಂದು ಪರಿಶೀಲಿಸಿಕೊಳ್ಳಲು ಜನ ಇಲ್ಲವಲ್ಲಾ ಅನಿಸಿತು.

ಆಗ ಪತ್ರಕರ್ತ ಶಶಿಧರ ಮಾಸ್ತಿಬೈಲು ವಾಟ್ಸ್ ಅಪ್ ನಲ್ಲಿ ಯಾಕೆ ಒಂದು ಓದುಗ ಬಳಗ ಮಾಡಬಾರದು ಎಂದರು. ಮಲ್ಪೆಯ ಅಧೋ ರಾತ್ರಿಯಲ್ಲಿ ದಿಕ್ಕಿನ ದೀಪ ಹೊತ್ತಿದಂತೆ ಆಯಿತು. ತಕ್ಷಣ ‘ವಾಟ್ಸ್ ಅಪ್ ಓದುಗ ಬಳಗ’ ಅಸ್ತಿತ್ವಕ್ಕೆ ಬಂದೇಬಿಟ್ಟಿತು..

ವಾಟ್ಸ್ ಅಪ್ ಬಳಗ ಶುರುವಾಗಿದ್ದೇ ಆಗಿದ್ದು ಉಡುಪಿ ಮಣಿಪಾಲದಲ್ಲಿ ಒಂದಷ್ಟು ಜನರ ಬದುಕಂತೂ ಬದಲಾಗಿ ಹೋಯಿತು. ತಾವು ಓದಿದ ಪುಸ್ತಕ, ನೋಡಿದ ಚಿತ್ರ ಎಲ್ಲವೂ ಶೇರ್ ಆಗತೊಡಗಿದವು.

ಆ ವೇಳೆಗೆ ಸಿನೆಮಾ ರಂಗದಲ್ಲಿ ಅಪಾರ ಆಸಕ್ತಿ ಇರುವ ಸುಧೀರ್ ಶಾನಭಾಗ್ ಬೆಂಗಳೂರಿನಲ್ಲಿ ‘ನಾನು ಅವನಲ್ಲ, ಅವಳು’ ಸಿನೆಮಾ ನೋಡಿದ್ದರು. ಅದರ ವ್ಯಾಕರಣಕ್ಕೆ ಮಾರುಹೋದ ಅವರು ಇಂತಹ ಸಿನೆಮಾ ಉಡುಪಿಗೂ ಬರಬಾರದೇಕೆ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಯಲ್ಲಿ ಈ ಸಿನೆಮಾ ಉಡುಪಿಗೆ ಬರುವುದಂತೂ ಸಾಧ್ಯವಿಲ್ಲ ಎನ್ನುವ ದನಿ ಇತ್ತು. ಆಗಲೇ ವಾಟ್ಸ್ ಅಪ್ ಬಳಗ ‘ವೈ ನಾಟ್’ ಅಂತ ಎದ್ದು ನಿಂತದ್ದು.

ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ ಎನ್ನುವಂತೆ.. ವಾಟ್ಸ್ ಅಪ್ ಬಳಗ ಚಿತ್ರ ಮಂದಿರದವರನ್ನು ಭೇಟಿ ಮಾಡಲು ಹೊರಟೇಬಿಟ್ಟರು.

ಸಿನೆಮಾ ಬರಲ್ಲ ಅನ್ನುವ ಉಡುಪಿಯಲ್ಲಿ ಚಿತ್ರ ಪ್ರದರ್ಶಿಸಿ ಸುಮ್ಮನಾಗಿಬಿಡಬಹುದಿತ್ತು ಆದರೆ ಈ ಹುಡುಗರು ಅಷ್ಟು ಮಾತ್ರದವರಲ್ಲ. ಸಿನೆಮಾ ಪ್ರದರ್ಶನಕ್ಕೆ ಮುನ್ನವೇ ಉಡುಪಿ ಆಸುಪಾಸಿನಲ್ಲಿ ಎಷ್ಟು ಮಂಗಳಮುಖಿಯರಿದ್ದಾರೆ ಎನ್ನುವುದರ ಮಾಹಿತಿ ಸಂಗ್ರಹಿಸಿದರು. ಎಲ್ಲರನ್ನೂ ಸಿನೆಮಾಗೆ ಬರುವಂತೆ ಮಾಡಲು ಹರಸಾಹಸ ಪಟ್ಟರು. ರೈಲು ನಿಲ್ದಾಣದಲ್ಲಿ ಗವ್ವೆನ್ನುವ ಕತ್ತಲು ಕವಿದ ಮೇಲೆ, ಹೆದ್ದಾರಿಯ ಬದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗಳಮುಖಿಯರು ಮೊತ್ತ ಮೊದಲ ಬಾರಿ ಸಿನೆಮಾ ಮಂದಿರದಲ್ಲಿ ಕಾಣಿಸಿಕೊಂಡರು. ಸಿನೆಮಾ ಅರ್ಧ ಆಗಿತ್ತೇನೋ.. ಒಬ್ಬಾಕೆ ಭಿಕ್ಕಿ ಭಿಕ್ಕಿ ಅಳತೊಡಗಿದ್ದಳು. ನಾನೂ ಲಿವಿಂಗ್ ಸ್ಮೈಲ್ ವಿದ್ಯಾ ಥರಾ ಆಗಬೇಕು ಎನ್ನುವುದೊಂದೇ ಅವರ ಮುಂದೆ ಆಗ ಇದ್ದದ್ದು.

ಸಿನೆಮಾ ಪ್ರದರ್ಶನ ಮುಗಿಯಿತು ಈ ತಂಡಕ್ಕೆ ಮಂಗಳಮುಖಿಯರ ನೋವಿನ ನೆನಪು ಹೋಗಿರಲಿಲ್ಲ. ಅವರಿಗೂ.. ಕೊನೆಗೆ ನಗ್ಮಾ ಹಾಗೂ ಕಾಜಲ್ ಇವರತ್ತ ಬಂದರು. ಆಗ ಈ ವಾಟ್ಸ್ ಅಪ್ ಬಳಗ ಇವರನ್ನು ಕರೆದೊಯ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಸಲು ತಯಾರಿ ಆರಂಭಿಸಿದರು.

ಸ್ನೇಹಾ ಟ್ಯುಟೋರಿಯಲ್ನಲ್ಲಿ ನಗ್ಮಾ ಟ್ಯೂಷನ್ ಗೆ ಹೋಗತೊಡಗಿದಳು. ಕೆಲಸ ಮಾಡುತ್ತಾ ಡಿಗ್ರಿ ಪರೀಕ್ಷೆ ಬರೆಯಬೇಕು ಎಂಬ ಹಂಬಲವಿದ್ದ ಕಾಜಲ್ ಗೆ ಉದ್ಯೋಗ ಕೊಡಿಸಲು ಪಿ ವಿ ಭಂಡಾರಿ ಅವರ ಬಳಿಗೆ ಕರೆದುಕೊಂಡು ಹೋದರು.

ಒಂದು ಒಂದು ಹನ್ನೊಂದಾಯಿತು. ವರ್ಷ ಬಿಟ್ಟು ‘ಅಮರವಾತಿ’ ಚಿತ್ರ ತೆರೆ ಕಂಡಿತು. ಇನ್ನೂ ಒಂದು ವಾರ ಕಳೆದಿರಲಿಲ್ಲ. ಆಗಲೇ ಚಿತ್ರ ಎತ್ತಂಗಡಿಯಾಗುವ ಸೂಚನೆ ಸಿಕ್ಕಿಹೋಗಿತ್ತು. ಜನ ನೋಡಲು ಬಂದರೂ ಚಿತ್ರಮಂದಿರ ಸಿಗದ ಬಗ್ಗೆ ಚಿತ್ರ ನಿರ್ದೇಶಿಸಿದ ಬಿ ಎಂ ಗಿರಿರಾಜ್ ಸಾಕಷ್ಟು ನೊಂದುಹೋಗಿದ್ದರು. ನಾನು ಸಿನೆಮಾ ಮಾಡುವುದನ್ನೇ ನಿಲ್ಲಿಸುತ್ತೇನೆ ಎನ್ನುವ ಹೇಳಿಕೆ ಕೊಟ್ಟಿದ್ದರು.

ಇದನ್ನು ನೋಡಿದ ಈ ವಾಟ್ಸ್ ಅಪ್ ಬಳಗ ಮತ್ತೆ ‘ವೈ ನಾಟ್’ ಎಂದು ಎದ್ದು ನಿಂತೇಬಿಟ್ಟಿತು. ಇದು ಪೌರ ಕಾರ್ಮಿಕರ ಬದುಕಿನ ಚಿತ್ರ. ಹಾಗಾಗಿ ಈಗ ಈ ಬಳಗ ಪೌರ ಕಾರ್ಮಿರನ್ನು ಹುಡುಕಿಕೊಂಡು ಹೋಯಿತು ಚಿತ್ರ ನೋಡಿದ್ದು ಮಾತ್ರವೇ ಅಲ್ಲದೆ ‘ಅರೆ! ಇದು ನಮ್ಮದೇ ಕಥೆ ಮಾರಾರ್ರೆ’ ಅಂದು ಕಾರ್ಮಿಕರು ಅಚ್ಚರಿಪಟ್ಟರು. ‘ಸವಲತ್ತು ಅಂತಾರೆ.. ಅಲವತ್ತುಕೊಂಡರೂ ಕೊಡೋಲ್ಲ’ ಎನ್ನುವ ನಿಟ್ಟುಸಿರು ಹೊರಹಾಕಿದರು.

ಈ ಮಧ್ಯೆ ಸಿನೆಮಾದ ಒಳಗೆ ಹರಿಯುವ ಎರಡನೇ ಟ್ರ್ಯಾಕ್ ನಂತೆ ನುಸುಳಿದ್ದೇ ಗಂಜಿಯ ಕಥೆ. ಎಂ ಜಿ ಎಂ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಸುಚಿತ್ ಕೋಟ್ಯಾನ್ ಗೆ ಸದಾ ಕೈನಲ್ಲೊಂದು ಪುಸ್ತಕ ಇರಲೇಬೇಕು. ಬಸ್ ನಲ್ಲಿರಲಿ, ಕಾರಿಡಾರ್ ನಲ್ಲಿ ಹೋಗುತ್ತಿರಲಿ ಪುಸ್ತಕ ಕೈನಲ್ಲಿ. ಜೊತೆಯಲ್ಲಿದ್ದ ಕೊಲೀಗ್ಸ್, ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳೂ ಪುಸ್ತಕದ ಕಡೆ ಕಣ್ಣು ಹಾಯಿಸುತ್ತಿದ್ದರು. ಆಗೀಗ ಓದಿ ಕೊಡುತ್ತೇನೆ ಅಂತ ತೆಗೆದುಕೊಂಡು ಹೋಗುತ್ತಿದ್ದರು.

ಈ ಮಧ್ಯೆ ಬಿರುಬೇಸಿಗೆಯಲ್ಲಿ ದೇಹ ತಂಪಾಗಲಿ ಎಂದು ಒಂದು ಗುಂಪೇ ಗಂಜಿ ಊಟ ಹುಡುಕುತ್ತಾ ಹೊರಡುತ್ತಿತ್ತು. ಆಗ ಹೊಳೆದದ್ದೇ ಗಂಜಿ ಮನೆಯನ್ನೇ ರೀಡಿಂಗ್ ಲೈಬ್ರರಿ ಮಾಡಿದರೆ ಹೇಗೆ ಅಂತ. ಹೊಟ್ಟೆಗೂ ಮಿದುಳಿಗೂ ಒಟ್ಟಿಗೇ ಊಟ.

ಆಗ ಕೈಗೆ ಸಿಕ್ಕಿದ್ದೇ ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’.

ನಮ್ಮ ಸಮುದ್ರ ದಂಡೆಗೆ ಬರಲಾಗದೇ ಹೋದ ಕೊಲಂಬಸ್ ನನ್ನು ಈ ಇಡೀ ಗುಂಪು ಎತ್ತಾಕಿಕೊಂಡು ಬಂದು ಮಣಿಪಾಲದ ಗೀತಾ ಮಂದಿರದ ಬಳಿಯ ಶೇಖರ್ ನಾಯಕ್ ಗಂಜಿ ಊಟದ ಹೋಟೆಲ್ ನಲ್ಲಿ ಕೂಡಿಸಿತ್ತು.

ಹಾಗೆ ಅವರು ಕರೆದುಕೊಂಡು ಬಂದದ್ದು ಕೊಲಂಬಸ್ ನನ್ನ ಮಾತ್ರವಲ್ಲ.. ಶಿವರಾಮ ಕಾರಂತ, ಅಬ್ದುಲ್ ಕಲಾಂ, ಕೆ ಪಿ ರಾವ್, ವಾಮನ ನಂದಾವರ, ಕು ಶಿ ಹರಿದಾಸ ಭಟ್ಟ , ಉಲ್ಲಾಸ ಕಾರಂತ, ಜೋಗಿ, ಡಿ ಕೆ ಚೌಟ, ಪ್ರಸಾದ್ ಶೆಣೈ, ಎಂ ವೈ ಘೋರ್ಪಡೆ, ಕೆ ಕೆ ಹೆಬ್ಬಾರ್, ರಹಮತ್ ತರೀಕೆರೆ ಹೀಗೆ ಹತ್ತು ಹಲವು ಬರಹಗಾರರನ್ನು.

ಇಲ್ಲಿ ಕಥೆ ಕಾದಂಬರಿ, ಪ್ರವಾಸ ಕಥನ, ಸಂಶೋಧನೆ, ಅನುಭವ ಕಥನ ಎಲ್ಲವೂ ತೆರೆದುಕೊಳ್ಳುತ್ತಾ ಹೋಯಿತು. ಪತ್ರಿಕೋದ್ಯಮ, ಸಾಹಿತ್ಯ, ರಸಾಯನ ಶಾಸ್ತ್ರ, ಗ್ರಂಥಾಲಯ ಶಾಸ್ತ್ರ ಎಲ್ಲವೂ ಒಂದಾಗುತ್ತಾ ಹೋಯಿತು. ಅರುಣ್ ಕುಮಾರ್, ಕೃಷ್ಣ ಕುಮಾರ್, ಕಿಶೋರ್ ಚಂದನ್, ಅರುಣ್ ನಾಯಕ್, ಅವಿನಾಶ್ ಆಚಾರ್ಯ, ಶಮಂತ್, ಪದ್ಮನಾಭ್ ಹೀಗೆ ದಂಡು ಬೆಳೆಯುತ್ತಾ ಹೋಯಿತು.

ನೋಡ ನೋಡುತ್ತಿದ್ದಂತೆ ಊಟದ ಕೇಂದ್ರದ ಮಾಲೀಕರು ‘ಇವತ್ತು ಯಾವ ಪುಸ್ತಕ ಮಾರಾಯ್ರೇ’ ಎಂದು ಕೇಳತೊಡಗಿದರು. ಈ ಗುಂಪಿಗಾಗಿಯೇ ಎಂದು ಒಳ್ಳೆ ಟೇಬಲ್ ಬಿಡಿಸಿಕೊಡುತ್ತಿದ್ದರು.

ಊಟದ ಟೇಬಲ್ ಮಧ್ಯೆ ಪುಸ್ತಕ ಎಲ್ಲರಿಗೂ ಕಾಣುವಂತೆ ಜೋಡಿಸುತ್ತಿದ್ದರು. ಊಟಕ್ಕೆ ಬರುತ್ತಿದ್ದವರು ಅದನ್ನು ನೋಡಿ ಪುಟ ತಿರುಗಿಸಿದರೆ ಈ ಗುಂಪು ಆ ಪುಸ್ತಕದ ಜೊತೆ ಸೆಲ್ಫಿಗೆ ನಿಲ್ಲುತ್ತಿತ್ತು.

ಈ ಮಧ್ಯೆ ಹೆದ್ದಾರಿಯೊಂದು ಹಾದು ಹೋಗಿ ಸೇತುವೆಯೊಂದು ಬಳಸದೆ ಮೂಲೆಗುಂಪಾಗಿದ್ದದ್ದನ್ನು ಈ ಬಳಗ ಕಂಡಿತು. ಅದು ಸಾಣೂರು ಸೇತುವೆ. ಬಳಗದಲ್ಲಿದ್ದ ದೀಪಕ್ ಕಾಮತ್ ಅವರು ಈ ಸೇತುವೆಯ ಮೇಲೆಯೇ ‘ಶರಸೇತು ಬಂಧ’ ಆಗಿಹೋಗಬಾರದೇಕೆ ಎಂದರು.

ಮತ್ತೆ ಬಳಗ ‘ವೈ ನಾಟ್’ ಎಂದು ಎದ್ದುನಿಂತಿತು.

ಸಾಣೂರಿನ ಸೇತುವೆಯ ಮೇಲೆ ಯಕ್ಷಗಾನ ತಾಳಮದ್ದಳೆ ನಡೆಸಲು ದಿನ ಗೊತ್ತಾಗಿಯೇ ಹೋಯಿತು. ರಾಮ ಲಕ್ಷ್ಮಣ ಹನುಮಂತ ಇನ್ನೇನು ಕಥೆಯಾಗಿ ಜಿಗಿಯಬೇಕು ಹತ್ತು ಹಲವು ಮಂದಿ ಸೇತುವೆಯ ಮಗ್ಗುಲಲ್ಲೇ ಮಸೀದಿಯಿದೆ ಎನ್ನುವ ಆತಂಕ ಹಬ್ಬಿಸಿದರು. ಆದರೆ ಈ ವಾಟ್ಸ್ ಅಪ್ ಓದುಗರ ಗುಂಪು ದೇಗುಲಕ್ಕೂ, ಮಸೀದಿಗೂ ಹೋಗಿ ಆಹ್ವಾನ ಕೊಟ್ಟು ಹರಕೆ ಹೊತ್ತು ಬಂತು.

‘ಜನರನ್ನು ಎಲ್ಲಿ ಕೂರಿಸುತ್ತೀರಿ ಇರಿ’ ಎಂದು ಹೇಳಿ ಮಸೀದಿಯವರು ಕುರ್ಚಿಗಳನ್ನ ತಂದು ಹಾಕಿದರು. ಪ್ರಾರ್ಥನೆ ವೇಳೆ ತಾಳಮದ್ದಲೆಗೆ ತೊಂದರೆ ಆಗದಿರಲಿ ಎಂದು ಧ್ವನಿ ವರ್ಧಕದ ಸದ್ದು ತಗ್ಗಿಸಿದರು. ಭಾಗವತರಿಗೆ ಸನ್ಮಾನ ಮಾಡಿದರು. ‘ಹೊಸ ಪಾಠ ಕಲಿತುಬಂದೆವು’ ಎನ್ನುತ್ತಾರೆ ಮಂಜುನಾಥ ಕಾಮತ್.

’ನಾವು ಹೀಗೆ ಊರೂರಿಗೆ, ಮನೆ ಮನೆಗೆ ಹೋಗುತ್ತಾ ಇಲ್ಲದಿದ್ದರೆ, ಪುಸ್ತಕದ ಒಳಗೆ ಮುಖ ಹುದುಗಿಸದಿದ್ದರೆ ಪಾಠ ಮಾಡುವಾಗ ವಿದ್ಯಾರ್ಥಿಗಳ ಸಂಕಟಕ್ಕೂ ಕಿವಿ ಆಗದೆ ಹೋಗಿದ್ದಿದ್ದರೆ ಬದುಕು ಎನ್ನುವುದೇ ಅರ್ಥವಾಗುತ್ತಿರಲಿಲ್ಲ’ ಎಂದು ಮಂಜುನಾಥ ಕಾಮತ್ ಅನುಭವ ಬಿಚ್ಚಿಕೊಳ್ಳುತ್ತಾ ನಿಂತಿದ್ದರು.

ಬದುಕು ಅವರಿಗೆ ಎಷ್ಟು ಮೊಗೆದು ಕೊಟ್ಟಿದೆಯೋ ಅಷ್ಟೇ ಬದುಕಿಗೂ ಅವರು ಮೊಗೆದು ಕೊಟ್ಟಿದ್ದಾರೆ ಅನಿಸಿತು. ಆ ವೇಳೆಗೆ ಸುಚಿತ್ ಕೈನಲ್ಲಿ ಪುಸ್ತಕ ಇರಲಿಲ್ಲ. ಬದಲಿಗೆ ಒಂದು ಡಬ್ಬ ಇತ್ತು . ಹಣ ಸಂಗ್ರಹದ ಡಬ್ಬ. ಎಲ್ಲೋ ದೂರದಿ ಇದ್ದ ಶಾಹೀನಾ ತನ್ನ ಮಗಳು ಮಹೆಕ್ ಗೆ ಕ್ಯಾನ್ಸರ್ ಎಂದಾಗ ಕೈ ಕಾಲು ಬಿಟ್ಟರು.

ಮಣಿಪಾಲಕ್ಕೆ ಬಂದು ಚಿಕಿತ್ಸೆಗಾಗಿ ಬೀದಿ ಬೀದಿಯಲ್ಲಿ ಭಿಕ್ಷೆ ಎತ್ತುತ್ತಿದ್ದರು. ಅದನ್ನು ಕಂಡ ಸುಚಿತ್ ತಮ್ಮ ವಾಟ್ಸ್ ಅಪ್ ಬಳಗದೊಂದಿಗೆ ‘ಮಾನವೀಯತೆಯ ಪರಿಮಳ’ ಎನ್ನುವ ಹೆಸರಿನಲ್ಲಿ ಮಹೆಕ್ ನತ್ತ ಹೊರಟೇಬಿಟ್ಟರು. ಈಗ ಮಣಿಪಾಲ- ಉಡುಪಿ ಬಿಡಿ ರಾಜ್ಯದ ಎಲ್ಲೆಡೆಯಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ ಎಂದರು.

‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ..’ ಎನ್ನುವ ಹಾಡನ್ನು ಸುಳ್ಳು ಮಾಡಲು ಎಲ್ಲರೂ ಕೈ ಜೋಡಿಸಿದ್ದರು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 22, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಶುಕ್ರವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಅಮಾವಾಸ್ಯೆ
(ನಿನ್ನೆ ರಾತ್ರಿ 9 ಗಂ॥ 35 ನಿ।। ರಿಂದ
ಇಂದು ರಾತ್ರಿ 11 ಗಂ॥ 6 ನಿ।। ತನಕ)
ನಕ್ಷತ್ರ : ಕೃತ್ತಿಕೆ
(ಇಂದು ಪ್ರಾತಃಕಾಲ 1 ಗಂ॥ 4 ನಿ।। ರಿಂದ
ಮರುದಿನ ಪ್ರಾತಃಕಾಲ 3 ಗಂ॥ 9 ನಿ।। ತನಕ)
ಯೋಗ : ಶೋಭನ
ಕರಣ : ಚತುಷ್ಪಾತ್
ವರ್ಜ್ಯಂ : (ಇಂದು ಮಧ್ಯಾಹ್ನ 2 ಗಂ॥ 6 ನಿ।। ರಿಂದ ಇಂದು ಸಂಜೆ 3 ಗಂ॥ 50 ನಿ।। ತನಕ)
ಅಮೃತಕಾಲ : ಇಂದು ಯಾವುದೇ ಅಮೃತಕಾಲ ಇಲ್ಲ.
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 18 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 10 ನಿ।। ತನಕ)(ಇಂದು ಬೆಳಿಗ್ಗೆ 12 ಗಂ॥ 38 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 30 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 10 ಗಂ॥ 34 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 7 ಗಂ॥ 19 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 56 ನಿ।। ತನಕ)
ಯಮಗಂಡ : (ಇಂದು ಸಂಜೆ 3 ಗಂ॥ 27 ನಿ।। ರಿಂದ ಇಂದು ಸಂಜೆ 5 ಗಂ॥ 4 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 42 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 43 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಮೇಷ

ಮೇಷ ರಾಶಿ ಭವಿಷ್ಯ : 22 May 2020
ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ತಪ್ಪಿಸಿ. ಆಶೀರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೆ ನಿಮ್ಮ ಬಯಕೆಗಳು ಪೂರೈಸಲ್ಪಡುತ್ತವೆ – ಮತ್ತು ಹಿಂದಿನ ದಿನಗಳ ಶ್ರಮ ಈಗ ಫಲ ನೀಡುತ್ತದೆ. ನಿಮ್ಮ ಹವ್ಯಾಸಗಳನ್ನು ಮುಂದುವರಿಸುವ ಮತ್ತು ಕುಟುಂಬದ ಸದಸ್ಯರಿಗೆ ಸಹಾಯ ಮಾಡುವ ಮೂಲಕ ನೀವು ಸಮಯ ಕಳೆಯಬಹುದು. ನಿಮ್ಮ ಪ್ರೇಮ ಜೀವನ ಶರದೃತುವಿನಲ್ಲಿನ ಮರದ ಎಲೆಯಂತಿರುತ್ತದೆ. ಇಂದು ನಿಮಗೆಲ್ಲರಿಗೂ ತುಂಬ ಸಕ್ರಿಯವಾದ ಮತ್ತು ಹೆಚ್ಚು ಸಾಮಾಜಿಕವಾದ – ಜನರು ನಿಮ್ಮಿಂದ ಸಲಹೆ ಪಡೆಯಬಯಸುತ್ತಾರೆ ಮತ್ತು ನೀವು ಏನೇ ಹೇಳಿದರೂ ಅದನ್ನು ಒಪ್ಪುತ್ತಾರೆ. ಅದೃಷ್ಟ ಸಂಖ್ಯೆ: 4

ವೃಷಭ ರಾಶಿ ಭವಿಷ್ಯ: 22 May 2020
ನಿಮ್ಮ ಹೆಂಡತಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಮ್ಮನ್ನು ನೀವೇ ಒಂದು ಪ್ರೀತಿಯ ಪೋಷಿಸುವ ಜೋಡಿಯೆನ್ನುವುದನ್ನು ಪುನಃ ಕಂಡುಹಿಡಿಯಲು ಸ್ವಲ್ಪ ಸಮಯ ಖರ್ಚು ಮಾಡಿ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣವನ್ನು ಆವಾಹಿಸಿಕೊಳ್ಳುತ್ತಾರೆ. ಇದು ಪರಸ್ಪರ ಸಂಪರ್ಕದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ. ಇಂದು ಹಾಜರಾಗುವ ಸಮಾರಂಭದಲ್ಲಿ ಹೊಸ ಸ್ನೇಹ ಅಭಿವೃದ್ಧಿಯಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಇಂದು ಅರ್ಥಮಾಡಿಕೊಳ್ಳಿ. ಅದೃಷ್ಟ ಸಂಖ್ಯೆ: 3

ಮಿಥುನ ರಾಶಿ ಭವಿಷ್ಯ : 22 May 2020
ಸಂತೋಷದ ದಿನಕ್ಕಾಗಿ ಮಾನಸಿಕ ಒತ್ತಡವನ್ನು ತಪ್ಪಿಸಿ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಮಕ್ಕಳಿಗೆ ಅವರ ಮನೆಗೆಲಸ ಪೂರ್ಣಗೊಳಿಸಲು ಸಹಾಯ ಮಾಡುವ ಸಮಯ. ನಿಮ್ಮ ಸಂಪೂರ್ಣ ಹಾಗೂ ಪ್ರಶ್ನಾತೀತ ಪ್ರೀತಿ ಒಂದು ಜಾದುವಿನಂಥ ಸೃಜನಶೀಲ ಶಕ್ತಿಯನ್ನು ಹೊಂದಿದೆ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ. ಅದೃಷ್ಟ ಸಂಖ್ಯೆ: 1

ಕರ್ಕ ರಾಶಿ ಭವಿಷ್ಯ :22 May 2020
ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿ ಯನ್ನು ಕುಂಠಿತಗೊಳಿಸಿದೆಯಂದು ಕಂಡುಕೊಳ್ಳಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ. ಸಾಮಾಜಿಕ ಚಟುವಟಿಕೆಗಳು ಆನಂದಮಯವಾಗಿದ್ದರೂ ನೀವು ಇತರರೊಂದಿಗೆ ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಅದೃಷ್ಟ ಸಂಖ್ಯೆ: 5

ಸಿಂಹ ರಾಶಿ ಭವಿಷ್ಯ :22 May 2020
ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಭವಿಷ್ಯದಲ್ಲಿ ನೀವು ಆರ್ಥಿಕವಾಗಿ ಬಲವಾಗಿರಬೇಕೆಂದು ಬಯಸಿದರೆ ಇಂದಿನಿಂದಲೇ ಹಣವನ್ನು ಉಳಿಸಿ. ನಿಮ್ಮ ವಂಶಸ್ಥರಿಗೆ ಏನಾದರೂ ವಿಶೇಷವಾದದ್ದನ್ನು ಯೋಜಿಸಿ. ನಿಮಗೆ ಕಾರ್ಯಗತಗೊಳಿಸಲು / ಸಾಧಿಸಲು ಸಾಧ್ಯವಾಗುವ ಹಾಗೆ ಏನಾದರೂ ವಾಸ್ತವವಾದದ್ದನ್ನು ಯೋಜಿಸಿ. ನಿಮ್ಮ ಮುಂದಿನ ಪೀಳಿಗೆ ಈ ಕೊಡುಗೆಗಾಗಿ ನಿಮ್ಮನ್ನು ಯಾವತ್ತೂ ನೆನಪಿಡುತ್ತದೆ. ಒಂದು ಉತ್ತಮ ಸಂವಹನ ಅಥವಾ ನಿಮ್ಮ ಪ್ರೀತಿಪಾತ್ರರಿಂದ ಅಥವಾ ಸಂಗಾತಿಯಿಂದ ಬರುವ ಸಂದೇಶ ಇಂದು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅದೃಷ್ಟ ಸಂಖ್ಯೆ: 3

ಕನ್ಯಾ ರಾಶಿ ಭವಿಷ್ಯ : 22 May 2020
ಮಾದಕವಸ್ತುವಿನ ಅವಲಂಬನೆ ಹೆಚ್ಚುವ ಸಾಧ್ಯತೆಗಳಿರುವುದರಿಂದ ಸ್ವಯಂ ಔಷಧೋಪಚಾರ ಮಾಡಬೇಡಿ. ಇಂದಿನವರೆಗೂ ಹಣವನ್ನು ಯೋಚಿಸದೆ ಖರ್ಚು ಮಾಡುತ್ತ್ತಿದ್ದ ಜನರು, ಅವರಿಗೆ ಇಂದು ಹಣದ ತುಂಬಾ ಅಗತ್ಯವಿರಬಹುದು ಮತ್ತು ಜೀವನದಲ್ಲಿ ಹಣದ ಏನು ಮೌಲ್ಯವಿದೆ ಎಂದು ನಿಮಗೆ ಅರ್ಥವಾಗಬಹುದು. ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯ ನೀಡಿ. ನೀವು ಅವರ ಸಲುವಾಗಿ ಕಾಳಜಿ ವಹಿಸುತ್ತೀರೆಂದು ಅವರಿಗೆ ಅರ್ಥವಾಗಲಿ. ಅವರೊಂದಿಗೆ ನಿಮ್ಮ ಗುಣಮಟ್ಟದ ಸಮಯ ಕಳೆಯಿರಿ. ದೂರು ನೀಡಲು ಯಾವುದೇ ಅವಕಾಶ ನೀಡಬೇಡಿ. ನಿಮ್ಮ ಮಾತುಗಳನ್ನು ಸರಿಯಾಗಿ ಸಾಬೀತುಪಡಿಸಲು ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಜಗಳವಾಡಬಹುದು.ಅದೃಷ್ಟ ಸಂಖ್ಯೆ:1

ತುಲಾ ರಾಶಿ ಭವಿಷ್ಯ : 22 May 2020
ನಿಮ್ಮ ಶಾಂತತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರಿ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಿರಬಹುದು.ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ತನ್ನ ಪ್ರೀತಿಪಾತ್ರರಿಂದ ದೂರವಿರುವ ಜನರು, ಇಂದು ಅವರ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳಬಹುದು. ರಾತ್ರಿಯ ಸಮಯದಲ್ಲಿ ನೀವು ಪ್ರೇಮಿಯೊಂದಿಗೆ ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡಬಹುದು. ಒಂದು ಕಠಿಣ ಸಮಯದ ನಂತರ, ಕೆಲಸದಲ್ಲಿ ಏನಾದರೂ ಸುಂದರವಾದ್ದರಿಂದ ಈ ದಿನ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಅದೃಷ್ಟ ಸಂಖ್ಯೆ: 4

ವೃಶ್ಚಿಕ ರಾಶಿ ಭವಿಷ್ಯ :22 May 2020
ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಗಡಿಬಿಡಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ಇಂದು ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ: 5

ಧನು ರಾಶಿ ಭವಿಷ್ಯ : 22 May 2020
ನಿಮ್ಮ ಸುತ್ತಲಿನ ಸುಮಾರು ತುಂಬ ಬೇಡಿಕೆಯಿಡುತ್ತಾರೆಂದು ನಿಮಗನಿಸುತ್ತದೆ-ನಿಮಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ಮಾಡಲು ಒಪ್ಪಿಕೊಳ್ಳಬೇಡಿ- ಮತ್ತು ಇತರರನ್ನು ಸಂತೋಷಪಡಿಸಲು ನಿಮ್ಮ ಮೇಲೆ ಒತ್ತಡ ಹಾಕಬೇಡಿ. ತಮ್ಮ ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟಪಡುವುದಿಲ್ಲ ಆದರೆ ಇಂದು ನೀವು ಅಗತ್ಯವಿರುವವರಿಗೆ ಹಣವನ್ನು ಕೊಟ್ಟು ವಿಶ್ರಾಂತಿಯನ್ನು ಅನುಭವಿಸುವಿರಿ. ನಿಮ್ಮ ಮಕ್ಕಳಿಂದ ನೀವು ಕೆಲವು ಪಾಠಗಳನ್ನು ಕಲಿಯಲಿದ್ದೀರಿ. ಅವರು ಅತ್ಯಂತ ಪರಿಶುದ್ಧ ಪ್ರಭೆಗಳನ್ನು ಹೊಂದಿರುತ್ತಾರೆ ಮತ್ತು ಅವರ ಮುಗ್ಧತೆ ಹಾಗೂ ಆನಂದದಿಂದ ಮತ್ತು ಮತ್ತು ನಕಾರಾತ್ಮಕ ಗುಣಗಳ ಅನುಪಸ್ಥಿತಿಯಿಂದ ಅವರ ಸುತ್ತಲಿರುವವರನ್ನು ಬದಲಾಯಿಸುವ ಶಕ್ತಿ ಹೊಂದಿರುತ್ತಾರೆ. ಅದೃಷ್ಟ ಸಂಖ್ಯೆ: 2

ಮಕರ ರಾಶಿ ಭವಿಷ್ಯ : 22 May 2020
ಜನರಲ್ಲಿ ಬೆರೆಯುವ ಭಯ ನಿಮ್ಮನ್ನು ಧೈರ್ಯಗೆಡಿಸಬಹುದು. ಇದನ್ನು ತೆಗೆದುಹಾಕಲು ನಿಮ್ಮ ಸ್ವಾಭಿಮಾನವನ್ನು ಪ್ರೋತ್ಸಾಹಿಸಿ. ಇಂವು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ ನಿಮ್ಮ ಖ್ಯಾತಿಯಲ್ಲಿ ನೀವು ಹೊಸ ರತ್ನವೊಂದನ್ನು ಸೇರಿಸಿಕೊಳ್ಳುತ್ತಿದ್ದ ಹಾಗೆ ನಿಮ್ಮ ಸಾಧನೆ ನಿಮ್ಮ ಕುಟುಂಬದ ಸದಸ್ಯರ ಚೈತನ್ಯಗಳನ್ನು ಉತ್ತಮವಾಗಿಸುತ್ತದೆ. ನಿಮ್ಮನ್ನು ಇತರರಿಗೆ ಒಂದು ಮಾದರಿಯಾಗಿಸಲು ಶ್ರಮಿಸಿ. ಪ್ರೀತಿಯ ಸಂತೋಷವನ್ನು ಅನುಭವಿಸಬಹುದು. ಅದೃಷ್ಟ ಸಂಖ್ಯೆ: 2

ಕುಂಭ ರಾಶಿ ಭವಿಷ್ಯ : 22 May 2020
ನಿಮ್ಮನ್ನು ನೀವೇ ಅನಗತ್ಯವಾಗಿ ದೂಷಿಸುವುದು ನಿಮ್ಮ ಚೈತನ್ಯವನ್ನು ಕುಗ್ಗಿಸಬಹುದು. ಇಂದು ನೀವು ಯಾವುದೇ ಅಜ್ಞಾತ ಮೂಲಗಳಿಂದ ಹಣವನ್ನು ಪಡೆಯಬಹುದು, ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆ ನೀವು ನಿಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತದೆ. ನಿಮ್ಮ ಸಂಗಾತಿಯ ಕೆಟ್ಟ ಆರೋಗ್ಯದಿಂದಾಗಿ ಇಂದು ಪ್ರಣಯಕ್ಕೆ ಧಕ್ಕೆಯಾಗುತ್ತದೆ. ಅದೃಷ್ಟ ಸಂಖ್ಯೆ: 9

ಮೀನ ರಾಶಿ ಭವಿಷ್ಯ : 22 May 2020
ಇಂದಿನ ಮನರಂಜನೆ ಕ್ರೀಡಾ ಚಟುವಟಿಕೆಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಈ ಅವಧಿ ನಿಮ್ಮ ಹೊಸ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನಿಮ್ಮ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಒಳ್ಳೆಯದಾಗಿದೆ. ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧ ಯಾರಾದರೊಬ್ಬರ ಹಸ್ತಕ್ಷೇಪದಿಂದ ಹಾಳಾಗಬಹುದು. ಅದೃಷ್ಟ ಸಂಖ್ಯೆ: 7