Friday, May 8, 2026
Google search engine
Home Blog Page 222

ಬಟವಾಡಿ ಬ್ರಿಡ್ಜ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕನ ಶವ

ತುಮಕೂರು: ಬಟವಾಡಿ ಬ್ರಿಡ್ಜ್ ನ ಮೇಲಿನಿಂದ‌ ಯುವಕನ್ನೊಬ್ಬನ ಶವ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆಯಾಗಿದೆ.

ಇಪ್ಪತ್ತೈದು ವರ್ಷದ ಈ ಯುವಕನನ್ನು ಕೊಲೆ ಮಾಡಿದ ನಂತರ ಬ್ರಿಡ್ಜ್ ಮೇಲಿಂದ ನೇತು ಹಾಕಿರಬಹುದೇ ಅಥವಾ ಆತನೆ ನೇತು ಹಾಕಿಕೊಂಡಿರಬಹುದೇ ಎಂದು ತನಿಖೆಯಿಂದ ಗೊತ್ತಾಗಬೇಕಿದೆ.

ಬೆಂಗಳೂರು ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬ್ರಿಡ್ಜ್ ಬರಲಿದೆ. ತುಮಕೂರಿನಿಂದ ಬೆಂಗಳೂರು ಕಡೆಗೆ ತಿರುಗುವಾಗ ದೇವರಾಯನ ಪಟ್ಟಣದ ಭಾಗದಲ್ಲಿ ಈ ಕೃತ್ಯ ನಡೆದಿದೆ.

ಯಾವ ಸಮಯದಲ್ಲಿ ಈ ರೀತಿ ಆಗಿದೆ ಎಂಬುದು ಗೊತ್ತಿಲ್ಲ. ಬೆಳಗಿನ ಜಾವ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ರಾಜೀನಾಮೆಗೆ ಸಿದ್ಧ: ಸಚಿವ ಮಾಧುಸ್ವಾಮಿ

Tumkuru: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಿನಾಮೆ ಕೇಳಿದರೆ ಬಿಡಲು ಸಿದ್ದ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಕೋಲಾರದಲ್ಲಿ ರೈತ ಮಹಿಳೆಯೊಬ್ಬರು ನನಗೆ ಡೈರೆಕ್ಟ್ ಮಾಡಲು ಬಂದರು. ಮಾತು ಅತಿಯಾದಾಗ ಆ ಮಹಿಳೆಗೆ ಬಾಯಿಮುಚ್ಚು, ರ್ಯಾಸ್ಕಲ್ ಎಂದು ಹೇಳಿದೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು.

ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಳ್ಳಲು ಸಿದ್ದನಿಲ್ಲ. ಹಾಗಾಗಿ ಮುಖ್ಯಮಂತ್ರಿ ರಾಜಿನಾಮೆ ಕೇಳಿದರೆ ಕೊಡಲು ಸಿದ್ದ ಎಂದು ಸ್ಪಷ್ಟೀಕರಣ ನೀಡಿದರು.

ಮಹಿಳೆ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ. ನನಗೆ ನಿರ್ದೇಶನ ನೀಡಲು ಬರಬೇಡ. ರಿಕ್ವೆಸ್ಟ್ ಮಾಡಿ ಅಂತ ಮಹಿಳೆಗೆ ಹೇಳಿದೆ. ಆದರೂ ಕೇಳಲಿಲ್ಲ. ಆಕೆ ರೈತ ಮಹಿಳೆ ಎಂದು ತಿಳಿದಿರಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಎಲ್ಲೂ ಇರುವುದಿಲ್ಲ ಎಂದು ಹೇಳಿದರು.

ತುಮಕೂರು ಮತ್ತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಜೆ.ಸಿ.ಮಾಧುಸ್ವಾಮಿ ರೈತ ಮಹಿಳೆಯ ಕ್ಷಮೆ ಕೋರುತ್ತಲೇ ಆಕೆಯ ವಿರುದ್ದ ವಾಗ್ದಾಳಿ ನಡೆಸಿದರು.

ಸಚಿವ ಮಾಧುಸ್ವಾಮಿ ಯಾಕೆ ಹೀಗಾದರು…?

0

Publicstory.in


ತುಮಕೂರು: ಬುದ್ಧಿವಂತ, ಸದನ ಶೂರ ಎಂದು ಜನಮಾನಸದಲ್ಲಿ ಬೇರು ಬಿಟ್ಟಿರುವ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಕೋಲಾರದಲ್ಲಿ ರೈತ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಇದೇ ಕಾರಣಕ್ಕಾಗಿ ಅವರ ರಾಜೀನಾಮೆ ಪಡೆಯಲು, ಕೊಡುವಂತೆ ಮಾಡಲು ಪಕ್ಷದ ಒಳಗೆ, ಹೊರಗೆ ತಂತ್ರಗಾರಿಕೆ ಆರಂಭವಾಗಿದೆ.

ಮಾಧುಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲವರಿಗೂ ಅವರ ಏಕೀಗೆ ವರ್ತಿಸುತ್ತಿದ್ದಾರೆ. ಸಿಟ್ಟು ಅದಮಿಟ್ಟುಕೊಳ್ಳಲು ಆಗುವುದಿಲ್ಲವೇ? ಅವರಲ್ಲಿರುವ ಹಳೇ ಗುಣಗಳ ಪುನಾವರ್ತನೆ ಆಗುತ್ತಿದೆಯಲ್ಲ ಏಕೆ ಎಂಬುದು ನಮಗೂ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಮಹಿಳೆಯರನ್ನು ನಿಂದಿಸುವ ಮಟ್ಟಕ್ಕೆಇಳಿದಿರುವ ಯಾವುದೇ ಸಚಿವರು ಅಧಿಕಾರದಲ್ಲಿ ಇರಬಾರದು. ತಪ್ಪು, ಸರಿ ಬೇರೆ ಮಾತು. ಆದರೆ ಕಾನೂನು ಸಚಿವರೊಬ್ಬರು ಕೆಟ್ಟ ಭಾಷೆಯಲ್ಲಿ ಆಡಿರುವ ಮಾತುಗಳು ಸಮರ್ಥನೀಯವಲ್ಲ. ಈ ವಿಚಾರದಲ್ಲಿ ಮಾಧುಸ್ವಾಮಿ ಅವರನ್ನು ಸಮರ್ಥಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರ ಹತ್ತಿರದವರೇ ಹೇಳುತ್ತಿದ್ದಾರೆ. ಅವರ ಸಿಟ್ಟು ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಬಿಡಬಲ್ಲದೇ ಎಂಬ ಆತಂಕ ಕೂಡ ಅವರಲ್ಲಿದೆ.

ಮಾಧುಸ್ವಾಮಿ ಅದೃಷ್ಟದ ರಾಜಕಾರಣಿ. ಅವರ ಬುದ್ಧಿವಂತಿಕೆ, ಮಾತುಗಾರಿಕೆ, ಯಡಿಯೂರಪ್ಪ ಅವರ ಪರವಾಗಿ ಬಂಡೆ ರೀತಿ ನಿಂತಿರುವ ಕಾರಣದಿಂದಲೇ ಅವರು ಎಲ್ಲರನ್ನೂ ಬದಿಗೊತ್ತಿ, ಆರ್ ಎಸ್ ಎಸ್ ಹಿನ್ನೆಲೆ ಇಲ್ಲದಿದ್ದರೂ ಸಚಿವರಾದರು. ಅದೃಷ್ಟ ಆಚೀಚೆ ಕತ್ತು ಹಾಯಿಸದಿದ್ದರೆ ಕೆಲ ತಿಂಗಳ ಕಾಲವಾದರೂ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ಸಂಭವವೂ ಇತ್ತು.

ಮಾಧುಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ದುರ್ವಾಸ ಮುನಿ. ವಿಪರೀತ ಸಿಟ್ಟಿನ ಮನುಷ್ಯ. ಜನರ ಬಗ್ಗೆ ಒಳಾಂತರ್ಯದಲ್ಲಿ ಕಾಳಜಿ ಇರುವವರು. ವೋಟಿಗಾಗಿ ಜನರನ್ನು ಓಲೈಸುವುದಿಲ್ಲ. ನೇರವಾಗಿ ಅವರ ಬಳಿ ಅಭಿಮಾನಿಗಳು, ಹಿಂಬಾಲಕರು, ಕಾರ್ಯಕರ್ತರು ಹೋಗುವುದಿಲ್ಲ. ಅದರಿಂದ ಬೈಯಿಸಿಕೊಳ್ಳುವುದು ಖಚಿತ ಎಂಬ ಕಾರಣಕ್ಕೆ ಹೆದರುತ್ತಾರೆ. ಅಳೆದು ತೂಗಿ ಏನಾದರೂ ಇದ್ದರೆ ಹೇಳುತ್ತಾರೆ. ಇದು ಅವರನ್ನು ನೋಡಿದವರಿಗೆ ಗೊತ್ತಿರುವ ವಿಷಯವೇ? ಅವರ ಪಕ್ಷದವರೂ ಸಹ ಅವರಿಗೆ ಏನನ್ನು ಹೇಳಿ ಕೆಲಸ ಮಾಡಿಸಿಕೊಳ್ಳುವುದಿಲ್ಲ.

ಇಂಥ ಸಚಿವರು ಸಾರ್ವಜನಿಕ ವರ್ತನೆಗಾಗಿ ಹಲವು ಬಾರಿ ಟ್ರೋಲ್ ಆಗುತ್ತಿದ್ದಾರೆ. ಅವರ ಬಗ್ಗೆ ಇದ್ದ ಸಾರ್ವಜನಿಕ ಅಭಿಪ್ರಾಯವೇ ತಲೆ ಕೆಳಗು ಆಗುತ್ತಿದೆ.

ಅವರು ಹೇಳಿದ್ದೇ ನಡೆಯಬೇಕು, ಅವರೊಂದಿಗೆ ಎಲ್ಲರೂ ವಿನಯದಿಂದ ನಡೆದುಕೊಳ್ಳಬೇಕು ಎಂಬ ಮನೆ ಯಜಮಾನನ ವರ್ತನೆ ಇಂದು ಮಂತ್ರಿ ಸ್ಥಾನದಿಂದ ಕೈ ಬಿಡುವಂಥಹ ಸ್ಥಿತಿಯನ್ನು ಸೃಷ್ಟಿಸಿದೆ.

ಮಾಧುಸ್ವಾಮಿ ಅವರನ್ನು ಕಂಡರೆ ಬಿಜೆಪಿಯೊಳಗೂ ಆಗುವುದಿಲ್ಲ ಎಂಬುದು ಬಿಜೆಪಿಯ ಯಾವ ನಾಯಕರನ್ನು ಕೇಳಿದರೂ ಹೇಳುತ್ತಾರೆ. ಜಿಲ್ಲೆಯ ಬಿಜೆಪಿಯಲ್ಲೂ ಅವರು ಒಬ್ಬಂಟಿ. ಅವರೊಂದಿಗೆ ಯಾರೂ ಇಲ್ಲ.

ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಜಯಚಂದ್ರ ಅವರ ಪುತ್ರನ ಸ್ಪರ್ಧೆ ಮಾಧುಸ್ವಾಮಿ ಅವರ ಗೆಲುವಿಗೆ ಕಾರಣವಾಯಿತು ಎಂಬುದನ್ನು ಹೇಳಲು ರಾಜಕೀಯ ಬುದ್ಧಿವಂತಿಕೆಯೇನು ಬೇಕಿಲ್ಲ.

ತುಮಕೂರಿನ ಹೆಗ್ಗಳಿಕೆ ಕಾರಣವಾಗಬಹುದಾದ ಅವಕಾಶ ಸಿಕ್ಕಿರುವಾಗ ಮಾಧುಸ್ವಾಮಿ ಯಾಕೆ ಹೀಗಾದರು? ಯಾವಾಗ ಸಿಟ್ಟು ಬರುತ್ತದೆ, ಯಾವಾಗ ಬರುವುದಿಲ್ಲ ಎಂಬುದನ್ನು ಅವರೇ ನಿರ್ಧರಿಸಿಕೊಳ್ಳಬೇಕು. ನಾನಿರುವುದೇ ಹೀಗೆ ಎಂದು ಸಿಕ್ಕ ಸಿಕ್ಕವರನ್ನು ಬೈಯುವ, ಅವರಿಗೆ ಅಸಡ್ಡೆ ತೋರುವುದು ಜನ ನಾಯಕರ ಲಕ್ಷಣ ಅಲ್ಲ ಎಂದು ಅವರಿಗೂ ಗೊತ್ತಿರುವ ವಿಷಯವನ್ನು ಇಲ್ಲಿ ಹೇಳಬೇಕಾಗಿಲ್ಲ.’

ನಿಜವಾಗಿಯೂ, ಹೇಳಬೇಕಾದರೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಗೆಲುವಿನ ಹೆಜ್ಜೆಗಳನ್ನು ಇಡುತ್ತಿಲ್ಲ. ಒಂದೊಂದೇ ಸೋಲಿನ ಹೆಜ್ಜೆಯ ಕಡೆಗೇ ಹೋಗುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಜನರು ಅಭಿಮಾನ ಪಡುವಂಥ ಆಡಳಿತ ಅವರಿಂದ ಸಾಧ್ಯವಿಲ್ಲವಾಗುತ್ತಿದೆ.

ಜಿಲ್ಲೆಯಲ್ಲಿರುವ ಬಿಜೆಪಿಯ ಮತ್ತೊಂದು ಶಕ್ತಿ ಕೇಂದ್ರ, ಸಚಿವರ ಜೊತೆಗೆ ಇಲ್ಲ ಎಂಬುದು ಗೊತ್ತು. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೆಲವು ಸಲ ಅವರಿಗೆ ಹಿನ್ನಡೆ ಆಗಿರಬಹುದು.

ಅವರ ಸಿಟ್ಟಿನ ವರ್ತನೆ, ಅತ್ಯಂತ ಪ್ರಾಮಾಣಿಕತೆಯಿಂದ ಇರಬೇಕು, ಲಂಚಕ್ಕೆ ಅವಕಾಶ ಇಲ್ಲ ಎಂಬ ಕಾರಣಗಳಿಂದಾಗಿಯೇ ಅವರ ಸ್ವಂತ ಕ್ಷೇತ್ರದಲ್ಲಿ ಅಧಿಕಾರಿಗಳು ವರ್ಗಾವಣೆಯಾಗಿ ಬರಲು ಹೆದರುತ್ತಾರೆ ಎಂಬುದನ್ನು ಅವರು ಗುಪ್ತಚರ ಇಲಾಖೆಯಿಂದ ಮಾಹಿತಿ ತರಿಸಿ ನೋಡಿಕೊಳ್ಳಬಹುದು.

ಹಿಂದುಳಿದಿದ್ದ ಚಿಕ್ಕನಾಯಕನಹಳ್ಳಿಯ ಅಭಿವೃದ್ಧಿಗೆ ಒಳ್ಳೆಯ ಕೆಲಸಗಳನ್ನೇ ಮಾಡುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಲಹೆ, ಬುದ್ಧಿ ಹೇಳುವವರನ್ನು ಕಂಡರೆ ಸಚಿವರಿಗೆ ಸುತರಾಂ ಇಷ್ಟ ಆಗುವುದಿಲ್ಲ, ಅದನ್ನೂ ಅವರು ಸಹಿಸುವುದು ಇಲ್ಲ. ಬೆಳೆದು ಬಂದಿರುವ ಈ ಮನಸ್ಥಿತಿ ಕಾರಣದಿಂದಲೇ ಅವರು ಪದೇಪದೇ ಜನ ನಾಯಕನಾಗಿ ಬೆಳೆಯುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹಲವು ಜನಪ್ರತಿನಿಧಿಗಳು.

ಬೇರೆ ಸಚಿವರು ಮಹಿಳೆಯೊಂದಿಗೆ ಇಂಥ ಅನುಚಿತ ಮಾತುಗಳನ್ನಾಡಿದರೆ ಖಂಡಿತವಾಗಿಯೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬರುತ್ತಿತ್ತು. ಈಗಲೂ ಮಾಧುಸ್ವಾಮಿ ಅವರ ರಾಜೀನಾಮೆ ತೆಗೆದುಕೊಳ್ಳಲು ಬಿಜೆಪಿಯೊಳಗೆ, ವಿರೋಧ ಪಕ್ಷಗಳು, ರೈತ ಸಂಘಟನೆಗಳು ಒತ್ತಾಯಿಸಬಹುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಸ್ವತಃ ಮಾಧುಸ್ವಾಮಿಯವರಿಗೆ ಗೊತ್ತು.

ಹೀಗಾಗಿ ಅವರ ಸಚಿವ ಗಿರಿಗೆ ಇದು ಕುತ್ತು ತರುವುದಿಲ್ಲ. ಆದರೆ ಒಬ್ಬ ಕಾನೂನು ಸಚಿವರು ಇಡೀ ನಾಡಿಗೆ ಗೌರವ, ಅಭಿಮಾನದ ಸಂಕೇತವಾಗಬೇಕೇ ಹೊರತು ಕೆಟ್ಟ ಮಾದರಿಯ ಸಂಕೇತ ಆಗಬಾರದು. ಈ ಮಾತುಗಳನ್ನು ಮುಂದೆಂದಾದರೂ ಬೇರೆಯವರ ವಿಚಾರದಲ್ಲಿ ಅವರು ಸಹ ಹೇಳಬಹುದೇನೋ?

ಕೆರೆ ಉಳಿಸುವ ರೈತ ಮಹಿಳೆಯ ಕಾಳಜಿಯನ್ನು ಸಚಿವರು ಸ್ಥಳದಲ್ಲೇ ಮೆಚ್ಚಬೇಕಾಗಿತ್ತು. ತನಿಖೆಗೆ ಆದೇಶ ಮಾಡಬೇಕಾಗಿತ್ತು. ಸಣ್ಣ ನೀರಾವರಿ ಸಚಿವರಾಗಿ ಕೆರೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಇಡೀ ನಾಡಿಗೆ ಇಲ್ಲಿಂದಲೇ ಒಂದು ಸಂದೇಶ ಕೊಡವ ಅವಕಾಶವನ್ನು ಅವರು ತಪ್ಪಿಸಿಕೊಂಡಿದ್ದಾರೆ .

ಆ ಮಹಿಳೆಯನ್ನು ಕರೆದು ಸಚಿವರು ಮಾತನಾಡಬೇಕು. ಚಿಕ್ಕನಾಯಕನಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ, ಪರಿಸರ, ಕೆರೆ ಉಳಿಸುವ ಸಂಬಂಧ ಮಾಧುಸ್ವಾಮಿ ಅವರ ಹೋರಾಟ ಜನರು ಮರೆತಿಲ್ಲ. ಒಬ್ಬ ಒಳ್ಳೆಯ ಮನುಷ್ಯ ತನ್ನ ಸಿಡುಕು, ದುಡುಕು, ನಾಲಿಗೆಗೆ ಬ್ರೇಕ್ ಹಾಕದ ಕಾರಣದಿಂದಾಗಿ ಜನಮಾನಸದಿಂದ ದೂರ ಆಗುವುದು ಇತಿಹಾಸದ ದೃಷ್ಟಿಯಿಂದ ಒಳ್ಳೆಯದಲ್ಲ.

ಇದು‌ ಮಾಧುಸ್ಚಾಮಿ ಅವರಿಗೆ ಆಗುವ ನಷ್ಟ ಅಲ್ಲ. ಬುದ್ಧಿವಂತ ಸಚಿವರೊಬ್ಬರಿಂದ ನಾಡು ಒಳ್ಳೆಯ ಆಡಳಿತವನ್ನು ಕಳೆದುಕೊಂದು ಕೆಟ್ಟ ಮಾದರಿಗೆ ಸಾಕ್ಷಿಯಾಗಬಾರದು ಅಲ್ಲವೇ?

ಹುಳಿಯಾರು ಬಸ್ ನಿಲ್ದಾಣದಲ್ಲಿ ಜಾರ್ಖಂಡ್‌ನ 29 ಮಂದಿ

Publicstory.in


ಹುಳಿಯಾರು: ಚಾನಲ್ ಕೆಲಸ ಸೇರಿದಂತೆ ವಿವಿಧ ಉದ್ಯೋಗ ಅರಸಿ ಜಾವಾಗಲ್‌ ಸುತ್ತಮುತ್ತ ನೆಲೆಯೂರಿದ್ದ ಜಾರ್ಖಂಡ್ ಮೂಲದ 29 ಮಂದಿ ಇಂದು ತಮ್ಮ ತಮ್ಮ ಊರುಗಳಿಗೆ ಸೇರಲು ಬಸ್ ಮುಖಾಂತರ ಹುಳಿಯಾರಿಗೆ ಆಗಮಿಸಿ ಇಲ್ಲಿಂದ ಲಾರಿಯಲ್ಲಿ ತೆರಳುವಾಗ, ಪಾಸ್ ಇಲ್ಲದ ಇವರುಗಳು ಹುಳಿಯಾರು ಸಮೀಪದ ಬಸವನಗುಡಿಯ ಚೆಕ್ ಪೋಸ್ಟಿನಲ್ಲಿ ಸಿಕ್ಕಿಬಿದ್ದಿದ್ದು, ಇವರುಗಳನ್ನು ಹುಳಿಯಾರಿನ ಬಸ್ ನಿಲ್ದಾಣಕ್ಕೆ ಕರೆತರಲಾಗಿದೆ.

ಈ ಬಗ್ಗೆ ವಿಚಾರಿಸಲಾಗಿ ಇವರುಗಳು ಅರಸೀಕೆರೆ, ಜಾವಗಲ್ ನಲ್ಲಿ ನಾಲಾ ಕಾಮಗಾರಿಯ ಕೆಲಸಕ್ಕೆ ಆಗಮಿಸಿದ್ದು ಕಳೆದ 40 ದಿನಗಳಿಂದಲೂ ಊರಿಗೆ ತೆರಳಲು ಪ್ರಯತ್ನಿಸಿ ಪಾಸ್ ದೊರೆಯದೆ ಉಳಿದಿರುವುದಾಗಿ ತಿಳಿಸಿದ್ದಾರೆ.

ಇದೀಗ ಎಲ್ಲರೂ ಹೊರಟುಹೋಗಿ ನಾವಷ್ಟೇ ಉಳಿದಿದ್ದು ಕಡೆಯ ಪ್ರಯತ್ನವಾಗಿ ಇಂದು ಕೆಎಸ್ಆರ್ಟಿಸಿ ಬಸ್ ಮುಖಾಂತರ ಹಣ ಪಾವತಿಸಿ ಜಾವಗಲ್ ನಿಂದ ಹುಳಿಯಾರಿಗೆ ಬಂದಿರುವುದಾಗಿ ತಿಳಿಸಿದ್ದಾರೆ.

ಜಾವಗಲ್‌ನಲ್ಲಿ ಹಿರಿಯೂರಿಗೆ ತೆರಳಿದರೆ ಅಲ್ಲಿಂದ ಬಸ್ ಮುಖಾಂತರ ಜಾರ್ಖಂಡ್‌ಗೆ ತಲುಪಬಹುದು ಎಂದು ತಿಳಿಸಿದ್ದರಿಂದ ನಾವುಗಳು ಬಸ್ಸಿನಲ್ಲಿ ಹುಳಿಯಾರಿಗೆ ಇಂದು ಬಂದಿರುವುದಾಗಿ ತಿಳಿಸಿದರು.

ಹುಳಿಯಾರಿನಿಂದ ಹಿರಿಯೂರಿಗೆ ತಲುಪಲು ಯಾವುದೇ ವ್ಯವಸ್ಥೆ ಇಲ್ಲದಿದ್ದರಿಂದ ಲಾರಿ ಮುಖಾಂತರ ಹಿರಿಯೂರಿಗೆ ತಲುಪಲು ಮುಂದಾಗಿದ್ದಾಗಿ ತಿಳಿಸಿದರು.

ಸದ್ಯ 29 ಮಂದಿ ಹುಳಿಯಾರಿನ ಬಸ್ ನಿಲ್ದಾಣದಲ್ಲಿದ್ದು ಹುಳಿಯಾರು ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿ ಉಪಹಾರದ ವ್ಯವಸ್ಥೆ ಕಲ್ಪಿಸಿರುವುದಲ್ಲದೆ ಅವರುಗಳನ್ನು ಅವರ ಸ್ಥಳಕ್ಕೆ ಕಳುಹಿಸಲು ಮುಂದಾಗಿದ್ದಾರೆ

( *ಮಾಹಿತಿ: ನರೇಂದ್ರಬಾಬು- ಹುಳಿಯಾರು)*

ತುಮಕೂರಿನಲ್ಲಿ ಮತ್ತೊಬ್ಬರಿಗೆ ಕೊರೊನಾ:ಖಾದರ್ ನಗರ ಸೀಲ್ಡ್ ಡೌನ್

Publicstory.in

ತುಮಕೂರು: ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಗುರುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ.

ತುಮಕೂರು ನಗರದ ಖಾದರ್ ನಗರದ ಈ ವ್ಯಕ್ತಿ ಮುಂಬೈಗೆ ಹೋಗಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಸೋಂಕು ತಗುಲಿದೆ, ಬಟವಾಡಿ ಸಮೀಪದ ಖಾದರ್ ನಗರದವನ್ನು ಸೀಲ್ಡ್ ಡೌನ್ ಮಾಡಲಾಗಿದೆ.

ರಾಜ್ಯದಲ್ಲಿ ಒಂದೇ ದಿನ 116 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಬಹುತೇಕರು ಮುಂಬೈಗೆ, ತೆಲಂಗಾಣಕ್ಕೆ ಹೋಗಿ ಬಂದವರು ಆಗಿದ್ದಾರೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆಯವರೇ ಹೆಚ್ಚಿರುವ ಕಾರಣ ಮುಂಬೈ ನಂಟು ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ಒಂದೇ ದಿನ 116 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಬಹುತೇಕರು ಮುಂಬೈಗೆ, ತೆಲಂಗಾಣಕ್ಕೆ ಹೋಗಿ ಬಂದವರು ಆಗಿದ್ದಾರೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆಯವರೇ ಹೆಚ್ಚಿರುವ ಕಾರಣ ಮುಂಬೈ ನಂಟು ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದೆ.

ಮುಂಬೈನಿಂದ ಬಂದು ಮನೆಯಲ್ಲೇ ಇದ್ದ ಅವರ ಬಗ್ಗೆ ಸ್ಥಳೀಯರಿಂದ ವಿಷಯ ತಿಳಿದ ಬಳಿಕ ಅವರ ಮನೆಯಲ್ಲೇ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು ಎಂದು ಜಿಲ್ಲಾಡಳಿತ ಹೇಳಿದೆ. ಆದರೆ, ಮುಂಬೈನಿಂದ ಬಂದು ಕೆಲವು ದಿನಗಳು ಓಡಾಡಿಕೊಂಡೇ ಇದ್ದರು ಎಂದು ಸ್ಥಳೀಯರು ಭಯಭೀತಿ ವ್ಯಕ್ತಪಡಿಸಿದ್ದಾರೆ.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 21, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಗುರುವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಚತುರ್ದಶಿ
(ನಿನ್ನೆ ರಾತ್ರಿ 7 ಗಂ॥ 42 ನಿ।। ರಿಂದ
ಇಂದು ರಾತ್ರಿ 9 ಗಂ॥ 34 ನಿ।। ತನಕ)
ನಕ್ಷತ್ರ : ಭರಣಿ
(ನಿನ್ನೆ ರಾತ್ರಿ 10 ಗಂ॥ 37 ನಿ।। ರಿಂದ
ಮರುದಿನ ಪ್ರಾತಃಕಾಲ 1 ಗಂ॥ 3 ನಿ।। ತನಕ)
ಯೋಗ : ಸೌಭಾಗ್ಯ
ಕರಣ : ಭದ್ರೆ
ವರ್ಜ್ಯಂ : (ಇಂದು ಬೆಳಿಗ್ಗೆ 9 ಗಂ॥ 11 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 56 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 7 ಗಂ॥ 45 ನಿ।। ರಿಂದ ಇಂದು ರಾತ್ರಿ 9 ಗಂ॥ 30 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 10 ಗಂ॥ 1 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 53 ನಿ।। ತನಕ)(ಇಂದು ಸಂಜೆ 3 ಗಂ॥ 13 ನಿ।। ರಿಂದ ಇಂದು ಸಂಜೆ 4 ಗಂ॥ 5 ನಿ।। ತನಕ)
ರಾಹುಕಾಲ : (ಇಂದು ಮಧ್ಯಾಹ್ನ 1 ಗಂ॥ 49 ನಿ।। ರಿಂದ ಇಂದು ಸಂಜೆ 3 ಗಂ॥ 26 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 8 ಗಂ॥ 57 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 34 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 49 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 42 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 42 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಮೇಷ

ಮೇಷ ರಾಶಿ ಭವಿಷ್ಯ : 21 May 2020
ನಿಮ್ಮ ಮೇಲೆ ಬಹಳಷ್ಟು ಅವಲಂಬಿಸಿರುತ್ತದೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಮಾನಸಿಕ ಸ್ಪಷ್ಟತೆ ಅಗತ್ಯವಾಗಿರುತ್ತದೆ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪ ನೀವು ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಕಂದಕ ತರಬಹುದು. ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಯೋಗ್ಯತೆ ಗಮನಾರ್ಹವಾಗಿದೆ. ಅದೃಷ್ಟ ಸಂಖ್ಯೆ: 1

ವೃಷಭ ರಾಶಿ ಭವಿಷ್ಯ : 21 May 2020
ಒಂದು ಲಾಭಕರ ದಿನ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ನಿಮ್ಮ ನಿರ್ಧಾರದಲ್ಲಿ ಪೋಷಕರ ಸಹಾಯ ನಿಮಗೆ ತುಂಬ ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ ಭವಿಷ್ಯ : 21 May 2020
ನೀವು ಕೆಲವು ಆಘಾತಗಳನ್ನು ಎದುರಿಸುವುದರಿಂದ ನೀವು ಬಹಳ ಧೈರ್ಯ ಹಾಗೂ ಶಕ್ತಿಯನ್ನು ಪ್ರದರ್ಶಿಸುವ ಅಗತ್ಯವಿದೆ. ನೀವು ನಿಮ್ಮ ಆಶಾವಾದಿ ನಿಲುವಿನಿಂದ ಇವುಗಳಿಂದ ಸುಲಭವಾಗಿ ಹೊರಬರಬಹುದು. ಯಾವುದೇ ಆಪ್ತ ಸಂಬಂಧಿಕರ ಬೆಂಬಲದಿಂದ ನೀವು ನಿಮ್ಮ ವ್ಯಾಪಾರದಲ್ಲಿ ಉತ್ತಮವಾಗಿ ಮಾಡಬಹುದು. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ ಭವಿಷ್ಯ : 21 May 2020
ಆರೋಗ್ಯ ಚೆನ್ನಾಗಿರುತ್ತದೆ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ ನಿಮ್ಮ ಪ್ರೀತಿಯ ಸಂಬಂಧ ಮಾಂತ್ರಿಕ ತಿರುವು ಪಡೆಯುತ್ತಿದೆ; ಸುಮ್ಮನೇ ಅದನ್ನು ಅನುಭವಿಸಿ. ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ ಭವಿಷ್ಯ : 21 May 2020
ನಿಮ್ಮ ಅಧಿಕ ಚೈತನ್ಯದ ಹೊರತಾಗಿಯೂ ನೀವು ಇಂದು ನಿಮ್ಮೊಡನೆ ಇರಲಾರದ ಯಾರನ್ನಾದರೂ ನೆನಪಿಸಿಕೊಳ್ಳುತ್ತಿದ್ದೀರಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮಗೆ ಹತ್ತಿರವಿರುವ ಯಾರಾದರೂ ಅತ್ಯಂತ ಅನಿರೀಕ್ಷಿತ ಮನಸ್ಥಿತಿಯಲ್ಲಿರುತ್ತಾರೆ. ಪ್ರೀತಿಗಾಗಿ ವಿಶೇಷ ದಿನ- ರಾತ್ರಿಗಾಗಿ ಯಾವುದಾದರೂ ಯೋಜನೆ ಹಾಕಿ ಮತ್ತು ಇದನ್ನು ಸಾಧ್ಯವಾದಷ್ಟು ಪ್ರಣಯಮಯವಾಗಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ: 9

ಕನ್ಯಾ ರಾಶಿ ಭವಿಷ್ಯ : 21 May 2020
ಸಂತೋಷದಿಂದ ತುಂಬಿದ ಒಳ್ಳೆಯ ದಿನ. ವೆಚ್ಚದ ಏರಿದರೂ ಆದಾಯದಲ್ಲಿನ ಹೆಚ್ಚಳ ನಿಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತದೆ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ. ಅದೃಷ್ಟ ಸಂಖ್ಯೆ: 8

ತುಲಾ ರಾಶಿ ಭವಿಷ್ಯ 21 May 2020
ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ. ತನ್ನ ಹಣವನ್ನು ಹೇಗೆ ಸಂಗ್ರಹಿಸುವುದು ಎಂಬ ಈ ಕೌಶಲ್ಯವನ್ನು ಇಂದು ನೀವು ಕಲಿಯಬಹುದು ಮತ್ತು ಈ ಕೌಶಲ್ಯವನ್ನು ಕಲಿತು ನೀವು ನಿಮ್ಮ ಹಣವನ್ನು ಉಳಿಸಬಹುದು. ಸ್ನೇಹಿತರು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ನೀಡಬಹುದು. ನೀವು ಸಂಜೆ ಸ್ನೇಹಿತರೊಂದಿಗೆ ಹೊರಗೆ ಹೋದರೆ ತತ್ಕ್ಷಣದ ಪ್ರಣಯ ನಿಮಗೆ ದೊರಕಬಹುದು. ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ ಭವಿಷ್ಯ 21 May 2020
ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದ ತಾಳ್ಮೆಯಿಂದಿರಿ. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ಒತ್ತಡದ ಅವಧಿಯಿದ್ದರೂ ಕುಟುಂಬದ ಬೆಂಬಲ ನಿಮಗೆ ಸಹಾಯ ಮಾಡುತ್ತದೆ. ಅದೃಷ್ಟ ಸಂಖ್ಯೆ: 3

ಧನು ರಾಶಿ ಭವಿಷ್ಯ : 21 May 2020
ಇಂದು ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ಡೈರಿ ಉದ್ಯಮಕ್ಕೆ ಸೇರಿರುವವರು ಇಂದು ಆರ್ಥಿಕ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ಅನಿರೀಕ್ಷಿತ ಪ್ರಣಯ ಭಾವ. ಇಂದು ನೀವು ನಿಮ್ಮ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ತ್ರಾಣ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ಅದೃಷ್ಟ ಸಂಖ್ಯೆ: 9

ಮಕರ ರಾಶಿ ಭವಿಷ್ಯ : 21 May 2020
ನಿಮ್ಮ ಅನಾರೋಗ್ಯದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಇನ್ನೂ ಉಲ್ಬಣಗೊಳ್ಳುವುದರಿಂದ ನಿಮ್ಮ ಗಮನವನ್ನು ಬೇರೆಡೆಗೆ ಕಾಯಿಲೆಯಿಂದ ತಿರುಗಿಸಲು ಏನಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನೀವು ನಿಮ್ಮ ಇಂದಿನ ದಿನವನ್ನು ಉತ್ತಮಗೊಳಿಸಲು ಕಳೆದ ದಿನಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು. ಅದೃಷ್ಟ ಸಂಖ್ಯೆ: 9

ಕುಂಭ ರಾಶಿ ಭವಿಷ್ಯ :21 May 2020
ಸಮೃದ್ಧ ಮತ್ತು ಹೆಚ್ಚಿನ ಕೊಲೆಸ್ಟರಾಲ್ ಇರುವ ಆಹಾರ ತಪ್ಪಿಸಲು ಪ್ರಯತ್ನಿಸಿ. ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ನಿಮ್ಮ ಮಾರ್ಗದಲ್ಲಿ ಸುಧಾರಣೆ ಮತ್ತು ಆಫೀಸಿನ ಕೆಲಸದಲ್ಲಿ ಗುಣಮಟ್ಟದ ಸುಧಾರಣೆಯನ್ನು ಅನುಭವಿಸುತ್ತೀರಿ. ಅದೃಷ್ಟ ಸಂಖ್ಯೆ: 7

ಮೀನ ರಾಶಿ ಭವಿಷ್ಯ : 21 May 2020
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ನಿಮ್ಮ ನೆರವು ಅಗತ್ಯವಿರುವ ಒಬ್ಬ ಸ್ನೇಹಿತರನ್ನು ಭೇಟಿ ಮಾಡಿ. ಅದೃಷ್ಟ ಸಂಖ್ಯೆ: 4

ಡೊನೇಷನ್ ತೆಗೆದುಕೊಳ್ಳುವ ಶಾಲೆಗಳೆಲ್ಲ ಒಳ್ಳೆಯ ಶಾಲೆಗಳೇ?

0

ಶಿಲ್ಪಾ ಎಂ.ತಾರೀಕಟ್ಟೆ


ಒಳ್ಳೆಯ ಕಟ್ಟಡ ಸುಸಜ್ಜಿತ ಅನುಕೂಲಗಳು ಒಳ್ಳೆಯ ಕ್ರೀಡಾಂಗಣ ಮಕ್ಕಳ ಮೇಲೆ ಹೊರಲಾರದಷ್ಟು ಪುಸ್ತಕದ ಬ್ಯಾಗ್ ಮಕ್ಕಳನ್ನು ಹಿಂಸಿಸುವ ಹೋಮ್ ವಕ್೯್ಸ.

ಒಳ್ಳೆಯ ಶಾಲೆ ಎಂದರೆ ತುಂಬಾ ಡೊನೇಷನ್ ತೆಗೆದುಕೊಳ್ಳುವ ಶಾಲೆಗಳೆಲ್ಲ ಒಳ್ಳೆಯ ಶಾಲೆಗಳೇ? ಕಾರಣ ಅಲ್ಲಿ ಅನುಕೂಲಗಳು ಹೆಚ್ಚು, ನಾವೇನು ಕಲಿತಿಲ್ಲವೂ ಅವೆಲ್ಲ ಕಲಿಯುತ್ತಾರೆ. ಇದು ಒಳ್ಳೆಯ ಶಾಲೆಗಳ ಬಗ್ಗೆ ಇರುವ ಬಹುದೊಡ್ಡ ಕಲ್ಪನೆ ಪೇೂಷಕರಲ್ಲಿ .

ಡೊನೇಷನ್ ತೆಗೆದುಕೊಳ್ಳುವ ಶಾಲೆಗಳು ಕೂಡ ಇದನ್ನೆ ಬಿಂಬಿಸಿಕೊಳ್ಳುತ್ತಿವೆ. ಸುಸಜ್ಜಿತ ಕಟ್ಟಡವಿದೆ ಕ್ಯಾಂಪಸ್‌ ಇದೆ ಸ್ವಿಮ್ಮಿಂಗ್ ಹೇಳಿಕೊಡಲಾಗುತ್ತದೆ, ಹೀಗೆ ಬಹುತೇಕ ರೀತಿ .

ವಿಶೇಷತೆಗಳನ್ನು ಗುರುತಿಸಿ ಅಭಿರುಚಿಗೆ ತಕ್ಕನಾಗಿ ಶಿಕ್ಷಣವೂ ಇದೆ ಎಂದು ಯಾವುದಾದರೂ ಡೊನೇಷನ್ ಶಾಲೆಗಳು ಪ್ರಚಾರ ಮಾಡಿ ಪ್ರಚಾರಕ್ಕೆ ಮತ್ತು ಡೊನೇಷನ್ ತಕ್ಕನಾಗಿ ಹೊಸದನ್ನು ಏನಾದರೂ ಕಲಿಸುತ್ತಿವೆಯ?!

ಪಠ್ಯದಲ್ಲಿರುವುದನ್ನೆ ಕಲಿಸುವುದಾದರೆ ಅದು ಉತ್ತಮ ಶಾಲೆಯ, ಉತ್ತಮ ಶಿಕ್ಷಣ ಹೇಗಾಗಬಹುದು ಹೊಸದೊಂದನ್ನು ಕಲಿಯುವುದೆ ಶಿಕ್ಷಣ ಅಲ್ಲವೆ ?

ಪ್ರತಿಯೊಂದು ಮಕ್ಕಳಲ್ಲೂ ವಿಶೇಷತೆ ಗಳಿರುತ್ತವೆ. ನೂರು ಮಕ್ಕಳಿದ್ದರೆ ನೂರು ವಿಶೇಷಗಳನ್ನು ಗುರುತಿಸಬೇಕು ಪ್ರತಿಯೊಬ್ಬ ಮಗುವಿನ ವಿಶೇಷತೆಯನ್ನು ಅಭಿರುಚಿಯಂತೆ ಅದಕ್ಕೆ ಪೂರಕವೂ ಅದನ್ನು ಒದಗಿಸಿ ಶಿಕ್ಷಣ ಕೊಡುವುದಾದರೆ ಖಂಡಿತ ಶಿಕ್ಷಣಕ್ಕೆ ಒಂದಿಷ್ಟು ಅರ್ಥ ಸಿಗಬಹುದು.

ಈಗ ಎಲ್ಲ ಶಾಲೆಗಳಲ್ಲಿ ಗ್ರಂಥಾಲಯಗಳು ಇದ್ದೆ ಇರುತ್ತವೆ. ಅಲ್ಲಿ ಏನಾದರೂ ಹೊಸದೊಂದನ್ನು ಕಲಿಯಬಹುದೆ. ಖಂಡಿತ ಅಲ್ಲೂ ಕೂಡ ಪಠ್ಯವನ್ನೆ ಓದಿಸುತ್ತಾರೆ. ಕೆಲವು ಮಕ್ಕಳಿಗೆ ಓದುವ ಅಭಿರುಚಿ ಇರುತ್ತದೆ ಕಥೆ ಪುಸ್ತಕಗಳನ್ನೂ ಸಾಹಿತ್ಯ ವನ್ನು ಓದಿಸುವ ಪ್ರಯತ್ನ ಆಗುವುದಿಲ್ಲ‌.

ಆಸಕ್ತಿ ಗಳ ಬಗ್ಗೆ ಮಾತಾಡುವ ಕಾರಣ ನಮಗೂ ಆಸಕ್ತಿ ಗಳಿಗೆ ಅನುಗುಣವಾಗಿ ಶಿಕ್ಷಣ ಸಿಗಲಿಲ್ಲವೆಂಬುದು.

ನನ್ನ ವಯಸ್ಸಿನ ಮತ್ತು ನನಗಿಂತ ದೊಡ್ಡವರು ಮಾತಾಡುವಾಗ ನಾನು ಚೆನ್ನಾಗಿ ಚಿತ್ರಗಳನ್ನು ಬಿಡಿಸುತ್ತಿದ್ದೆ. ಅದಕ್ಕೆ ಸರಿಯಾದ ಮಾಗ೯ದಶ೯ನ ಸಿಗಲಿಲ್ಲ.

ಸಿಕ್ಕಿದ್ದರೆ ಇವತ್ತು ಒಳ್ಳೆ ಕಲಾವಿದ ಆಗಬುಹುದಿತ್ತು ಎನ್ನುವಾಗ ಮತ್ತು ನಾನು ಡಾಕ್ಟರ್ ಆದೆ, ನನಗೆ ಇಷ್ಟವೆ ಇರಲಿಲ್ಲ. ನಾನು ನಟನಾಗಲೂ ಬಯಸಿದ್ದೆ ಎನ್ನುವಾಗ ನಿಜವಾಗಲೂ ಆಸಕ್ತಿಗಳೊಟ್ಟಿಗೆ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲವೆನ್ನುವುದು ಅರ್ಥ ವಾಗತ್ತದೆ .ಮತ್ತು ಪ್ರತಿಯೊಬ್ಬರಲ್ಲೂ ಅವರದೆ ಆದ ಕನಸುಗಳಿವೆ ಆದರೆ ಅದು ಸಾಧ್ಯವಾಗುತ್ತಿಲ್ಲ .

ಅದೆಷ್ಟು ಶಾಲೆಗಳಲ್ಲಿ ಸ್ವಿಮ್ಮಿಂಗ್ ಹೇಳಿಕೊಡುತ್ತಾರೆ ಆದರೆ ಡೊನೇಶನ್ ತೆಗೆದುಕೊಳ್ಳುವ ಶಾಲೆಯ ಯಾವ ಮಕ್ಕಳು ಕೂಡ ಈಜುವುದನ್ನು ಕಾಣಲು ಸಾಧ್ಯವಾಗಿಲ್ಲ.

ಡೊನೇಶನ್ ವಸೂಲಿ ಮಾಡುವ ಶಾಲೆಗಳಾಗಲಿ, ಸಕಾ೯ರಿ ಶಾಲೆಗಳೆ ಆಗಲಿ ಮಕ್ಕಳಲ್ಲಿ ಅವರ ಆಸಕ್ತಿಗಳಿಗೆ ಅನುಸಾರವಾಗಿ ಶಿಕ್ಷಣ ಕೂಡಲು ಮುಂದಾಗಬೇಕು.

ಹೊಸ ಪಠ್ಯ ಗಳ ಜೊತೆಯಲ್ಲಿ ಹೊಸದೇನಾದರೂ ಕಲಿಕೆಯಾಗಬೇಕು ಅಭಿರುಚಿ ಗಳಿಗೆ ಅನುಗುಣವಾಗಿ ಶಿಕ್ಷಣ ಸಿಗುತ್ತಿಲ್ಲದ ಕಾರಣ ಮಕ್ಕಳು ಶಿಕ್ಷಣವನ್ನು ದ್ವೇಷಿಸುತ್ತಿದ್ದಾರೆ ಮತ್ತು ಶಾಲೆಗಳನ್ನು .

ಒಬ್ಬ ಕಳ್ಳನಿಂದ 29 ಪೊಲೀಸರು ಕ್ವಾರಂಟೈನ್ ಗೆ

0

ಬೆಂಗಳೂರು: ಒಬ್ಬ ಕಳ್ಳನಿಂದ‌ ಪೊಲೀಸ್ ಇನ್ ಸ್ಪೆಕ್ಟರ್ ಸೇರಿದಂತೆ 29 ಪೊಲೀಸರು 28 ದಿನಗಳ ಕ್ವಾರಂಟೈನ್ ಗೆ ಹೋಗಬೇಕಾದ ಸ್ಥಿತಿ ಬೆಂಗಳೂರಿನಲ್ಲಿ ನಡೆದಿದೆ.
ಹೆಬ್ಬಗೋಡಿ ಠಾಣೆಯ ಪೊಲೀಸರು ಈ ಕಳ್ಳನನ್ನು ಬಂಧಿಸಿದ್ದರು.

ಸಂಸ್ಥೆಯೊಂದರ ದೂರಿನ ಮೇರೆಗೆ ಕಬ್ಬಿಣ ಕಳ್ಳತನ ಆರೋಪದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಧೀಶರ ಆದೇಶದಂತೆ ಮೂವರನ್ನು ಕೊರೊನಾ ಪರೀಕ್ಷೆ ಮಾಡಿಸಿದಾಗ ಒಬ್ಬ ಕಳ್ಳನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕಳ್ಳ‌ನ ಸಂಪರ್ಕಕ್ಕೆ ಬಂದ ಕಾರಣ ಇವರೆಲ್ಲ ಕ್ವಾರಂಟೈನ್ ಅನುಭವಿಸಬೇಕಾಗಿದೆ.

ಕ್ವಾರಂಟೈನ್ ಕೇಂದ್ರದಲ್ಲಿ ನಂಗನಾಚ್ ಕುಣಿತ

ಬಿಹಾರ: ಬಿಹಾರದ ಸಮಸ್ತಪುರ ಜಿಲ್ಲೆಯ ಮದ್ಯ ವಿದ್ಯಾಲಯದ ಕೊರೊನಾ ಸೋಂಕಿತರ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆಯರಿಂದ ನಂಗನಾಚ್ ಡ್ಯಾನ್ಸ್ ವಿಡಿಯೋ ಇದೀಗ ವೈರಲ್ ಆಗಿದೆ.

ಹೊರಗಿನಿಂದ ಯುವತಿಯರನ್ನು ಕರೆತಂದು ಅಶ್ಲೀಲ ಹಾಡುಗಳಿಗೆ ಡ್ಯಾನ್ಸ್ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ನಂಗಾನಾಚ್ ಕಾರ್ಯಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಾರೆ.

ಮಳೆಯ ಮೋಹದ ಸಾಲುಗಳು

0

ಟಿ. ಸತೀಶ್ ಜವರೇಗೌಡ, ಮಂಡ್ಯ


ಮಳೆಗಾಲ ಶುರುವಾಯಿತು
ಹೃದಯ ತವಕಿಸಿದೆ
ಕಾಗದದ ದೋಣಿ ತೇಲಿ ಬಿಡಲು

ಬರಡು ಮಣ್ಣು ಮೈನೆರೆಯಿತು
ರಾತ್ರಿ ಸುರಿದ ಮಳೆಗೆ
ಹದವಾಗಿದೆ ಹಸಿರಿಗೆ ಉಸಿರಾಗಲು

ಇರುಳೆಲ್ಲ ಸುರಿದ ರಚ್ಚೆಮಳೆ
ಮಿಂದೆದ್ದ ಮರದೆಲೆಗಳು
ತೊಟ್ಟಿಕ್ಕಿಸುತ್ತಿವೆ ತಂಪಾಮೃತ

ಅವಳ ಬೆಂಕಿಯುರಿಯ ನೋಟಕ್ಕೆ
ಹಟ್ಟಿಯ ಸೂರಿನ
ಮಳೆ ನೀರ ಹನಿಗಳು ಬೆವರಿವೆ

ಜಮಾಯಿಸಿದವು ನೀಲಾಗಸದಲ್ಲಿ
ಸಾಗರ ಧರಿಸಿದ ಮೋಡಗಳು
ತಿಪ್ಪೆಯ ಶಿಖರದಲ್ಲಿ ರೋಮಾಂಚನ

ಸಂಜೆ ಸುರಿದ ಮಾಮೇರಿ ಮಳೆಗೆ
ತಿಪ್ಪೆಗುಂಡಿಯಲುಕ್ಕಿದ ನೀರು
ಕಪ್ಪೆಗಳ ಭಾರೀ ಜಾತ್ರೆ ಮೌನಭಂಗುರ

ಇರುಳ ಕೊಳಲಿನಲೊಮ್ಮಿದೆ
ಮಳೆಯ ಹಾಡು
ನೆಲದೆದೆಯಲಿ ಹಸಿರಂಕುರ

ಹೊರಗೆ ಜಡಿಮಳೆಯ ಅಬ್ಬರ
ತೋಯ್ದ ಹೃದಯದೊಳಗೆ
ನೆನಪಿನ ಪರಿಮಳದ ಘಮಲು

ಮಳೆಕೋಗಿಲೆ ಹಾಡಿಗೆ ಪುಳಕಗೊಂಡ
ಹಗೇವುನೊಳಗಿನ ಬೀಜಗಳಿಗೆ
ಜಗದ ಹಸಿವಿಗೆ ಅನ್ನವಾಗುವ ತವಕ