Friday, May 8, 2026
Google search engine
Home Blog Page 223

ಪಾವಗಡ; ರಂಜಾನ್ ಪ್ರಯುಕ್ತ ಸನ್ಮಾನ

ಪಾವಗಡ ಆಜಾದ್ ನಗರದ ಯುವಕರು ವರ್ಷವಿಡೀ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರನ್ನು ಬುಧವಾರ ಸನ್ಮಾನಿಸಿದರು.

ಶಿರಾ ರಸ್ತೆಯ ಆಜಾದ್ ನಗರದ ನಿವಾಸಿಗಳು ಪ್ರತಿ ವರ್ಷ ರಂಜಾನ್ ಪ್ರಯುಕ್ತ  ಪೌರ ಕಾರ್ಮಿಕರನ್ನು ಸನ್ಮಾನಿಸಿ ನೂತನ ವಸ್ತ್ರ ಇತರೆ ಅಗತ್ಯ ಸಾಮಗ್ರಿಗಳನ್ನು ವಿತರಿಸುವುದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಈ ವರ್ಷ ಪೌರ ಕಾರ್ಮಿಕ ಮಾರಪ್ಪ ಅವರನ್ನು ಆತ್ಮೀಯವಾಗಿ ಬಡಾವಣೆ ನಿವಾಸಿಗಳು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿದ ಮಾರಪ್ಪ, ಚರಂಡಿ, ಬಡಾವಣೆ ಸ್ವಚ್ಚಗೊಳಿಸುವ ಪೌರ ಕಾರ್ಮಿಕರಿಗೆ ಜನತೆ ಗೌರವ ತೋರಿಸುತ್ತಿರುವುದು ಮರೆಯಲಾಗದು. ಎಂದು ಸಂತಸ ವ್ಯಕ್ತಪಡಿಸಿದರು.

ಬಡಾವಣೆಯ ಯುನೂಸ್, ಬಷೀರ್, ಶೇಕರ್, ಬುಜ್ಜಪ್ಪ, ಹರೂನ್, ಯೂಸುಫ್, ಶಬ್ಬೀರ್, ಸಿದ್ದಿಕ್ ಹಾಗೂ ಬಡಾವಣೆ ನಿವಾಸಿಗಳು  ಉಪಸ್ಥಿತರಿದ್ದರು.

Please like publicstory.in Page and subscribe channel 

ಕುಣಿಗಲ್ -ಕಾರು ಅಪಘಾತ; ಮಗುಸಾವು

ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿ ಕಾರ್ ಒಂದು ಉರುಳಿ ಬಿದ್ದ ಕಾರಣ ತಂದೆತಾಯಿ

ಗಾಯಗೊಂಡು , ಮಗು ಸ್ಥಳದಲ್ಲೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ
ಬ್ಯಾಲದಕೆರೆ ಗೇಟ್ ಬಳಿ ಬುಧುವಾರ ಸಂಜೆ ನಡೆದಿದೆ.

ಎರಡೂವರೆ ವರ್ಷದ ಪೂಣ್ಯಶ್ರೀ ಎಂದು ಗುರುತಿಸಲಾಗಿದೆ. ತಂದೆ ಯೋಗಾನಂದ ತಾಯಿ ಪಲ್ಲವಿ ಮತ್ತು ಸಂಬಂಧಿಯೊಬ್ಬರು, ತಿಪಟೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ
ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.

ಗಾಯಾಳುಗಳು ಕುಣಿಗಲ್ ಸಾರ್ವಜನಿಕ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ
ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಭೂ ಕಂಪನ ?

ಬೆಂಗಳೂರು: ಬೆಂಗಳೂರು ನಗರದಲ್ಲಿ ಬುಧವಾರ ಮಧ್ಯಾಹ್ನ ಜನರು ಬೆಚ್ವಿ ಬೀಳಿಸುವಂತೆ ಕೇಳಿಸಿದ ಸದ್ದು ಭೂ‌ಕಂಪನ ಎಂದು ಹೆದರಿ ಜನರು ಬೆಚ್ಚಿ ಬಿದ್ದಿದ್ದಾರೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ ರಸ್ತೆ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರೋನಿಕ್‌ ಸಿಟಿ, ಹೆಬ್ಬಗೋಡಿವರೆಗೂ ಈ ಅನುಭವ ಆಗಿದೆ ಎಂದು ಅಲ್ಲಿನ ಜನರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಜನರು ಶಬ್ದ ದ ಬಗ್ಗೆ‌ ಬರೆದುಕೊಂಡಿದ್ದಾರೆ.

ಹಲವರು ಭೂಕಂಪನ ಎಂದು ಭಯ ವ್ಯಕ್ತಪಡಿಸಿದ್ದಾರೆ.

ಈ ಭಾರೀ ಸದ್ದಿನ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.‌ ಏನಿರಬಹುದು ಎಂಬ ತನಿಖೆ ಮುಂದುವರೆದಿದೆ.

ಯಾವುದೇ ಅನಾಹುತ ಆಗಿಲ್ಲ. ಶಬ್ದ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಡಿಸಿಪಿ ಅನುಚೇತ್‌ ಹೇಳಿದ್ದಾರೆ.

ರಿಯಾಕ್ಟರ್ ಮಾಪನದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿಲ್ಲ.‌ ಹೀಗಾಗಿ ಭೂಕಂಪನ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವರು ಬಾಂಬ್‌ ಸ್ಪೋಟ‌ ಸಂಭವಿಸಿದ ಶಬ್ದದಂತಿತ್ತು ಎಂದು ಕೆಲವರು ಗಾಬರಿ ಬಿದಿದ್ದಾರೆ.

ಕಲ್ಪತರು ಮಾವಿನಹಣ್ಣು ಏನಿದರ‌ ವಿಶೇಷ

Publicstory. in


ತುಮಕೂರು: ಜಿಲ್ಲೆಯ ಮಾವು ಬೆಳೆಗಾರರು ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ “ಕಲ್ಪತರು” ಎಂಬ ಬ್ರಾಂಡ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಾವು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ರೈತರು ತಮ್ಮ ಹಣ್ಣುಗಳನ್ನು ನೇರವಾಗಿ ಗ್ರಾಹಕರ ಕೈಗೆಟಕುವ ದರದಲ್ಲಿ ಸ್ಥಳೀಯವಾಗಿ ಸಣ್ಣ-ಸಣ್ಣ ಮಾರುಕಟ್ಟೆಗಳ ಮೂಲಕ ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ. ಹಾಗೂ ಗ್ರಾಹಕರೂ ಸಹ ಮಾವಿನ ಹಣ್ಣು ಖರೀದಿಸಿ ಸವಿಯಬಹುದಾಗಿದೆ ಎಂದರು.

ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮಾವಿನ ಹಣ್ಣು ಸವಿಯಲು ಜನ ಹಿಂಜರಿಯುತ್ತಾರೆ. ಆದರೆ ರೈತರೇ ರಾಸಾಯನಿಕ ಬಳಸದೆ ನೈಸರ್ಗಿಕ ಮತ್ತು ಸಾಂಪ್ರದಾಯಿಕವಾಗಿ ಮಾಗಿಸಿದ ಹಣ್ಣುಗಳಿಗೆ ಬೇಡಿಕೆ ಇದೆ ಎಂದು ಸಚಿವರು ನುಡಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮೇಯರ್ ಫರೀದಾ ಬೇಗಂ, ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾಕಲ್ಯಾಣ್, ಮಹಾನಗರಪಾಲಿಕೆ ಆಯುಕ್ತ ಟಿ. ಭೂಬಾಲನ್, ತೋಟಗಾರಿಕೆ ಉಪನಿರ್ದೇಶಕ ರಘು, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಗೌಡ, ಆಶ್ಟ್ರಿಚ್ ಕಂಪನಿ ವ್ಯವಸ್ಥಾಪಕ ನೀಲೇಶ್ ಮತ್ತಿತರ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.

ಜಮೀರ್, ಇಬ್ರಾಹಿಂ ಬಂಧನಕ್ಕೆ ಸೊಗಡು ಶಿವಣ್ಣ ಆಗ್ರಹ

Publicstory. in


ತುಮಕೂರು: ಕೊರೊನ ಜನರನ್ನು ಕಾಡುತ್ತಿರುವ ನಡುವೆಯೇ ಹಬ್ಬ ಆಚರಣೆಗೆ ಪತ್ರ ಬರೆದಿರುವ ಸಿ.ಎಂ.ಇಬ್ರಾಹಿಂ, ಜಮೀರ್ ಅಹಮದ್ ಮತ್ತು ಹ್ಯಾರೀಸ್ ಅವರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನ ಸೋಂಕು ವ್ಯಾಪಕವಾಗಿ ದೇಶಾದ್ಯಂತ ಹರಡುತ್ತಿರುವ ಹೊತ್ತಿನಲ್ಲಿ ಈ ಮುಖಂಡರು ಏನೂ ಅರಿವಿಲ್ಲದವರಂತೆ ನಡೆದುಕೊಂಡಿರುವುದು ಅಕ್ಷಮ್ಯ. ಹಾಗಾಗಿ ಈ ಮುಖಂಡರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಧಿಸಬೇಕು ಎಂದು ಒತ್ತಾಯಿಸಿದರು.

ಜಮೀರ್ ಅಹಮದ್, ಸಿ.ಎಂ.ಇಬ್ರಾಹಿಂ ಮತ್ತು ಹ್ಯಾರೀಸ್ ದೇಶದ್ರೋಹಿಗಳು. ಒಂದು ರೀತಿಯ ನಾಗರಿಕ ಭಯೋತ್ಪಾದಕರು. ಅವರು ಕೊರೊನ ರೋಗ ಮತ್ತಷ್ಟು ಹರಡಲು ಯೋಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಸ್ಮಿಮರು ಸರ್ಕಾರದ ಸವಲತ್ತುಗಳನ್ನು ಬಳಿಸಿಕೊಂಡು ದೇಶಕ್ಕೆ ಕಂಟಕವಾಗಿದ್ದಾರೆ. ಇಂತಹ ಕೃತ್ಯಗಳು ನಿಲ್ಲಬೇಕು. ದೇಶ ರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.

ಮುಂಬೈನಿಂದ ಬಂದ ತುಮಕೂರಿನ ನಾಲ್ವರಿಗೆ ಕೊರೊನಾ

Publicstory. in


Tumkuru: ಮುಂಬೈನಿಂದ ತುಮಕೂರಿಗೆ ಎರಡು ಕುಟುಂಬದ ನಾಲ್ವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತ ತರ ಸಂಖ್ಯೆ 15ಕ್ಕೇರಿದೆ‌.

ಇದರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಹಳಬರು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಆಸ್ಪತ್ರೆ ಯಲ್ಲೇ ಈ ನಾಲ್ಕು ಮಂದಿಯನ್ನು ಇರಿಸಲಾಗಿದೆ.

https://youtu.be/zoCF1GezH_8

ಎರಡು ಕುಟುಂಬಗಳ ಆರು ಬಾಡಿಗೆ ವಾಹನ ಮಾಡಿಕೊಂಡು ಈಚೆಗೆ ತುಮಕೂರಿಗೆ ಬಂದಿದ್ದ ರು.

ಬಂದ ಕೂಡಲೇ ಇವರನ್ನು ಕ್ವಾರಂಟೈನ್ ಮಾಡಿದ ಕಾರಣ ಬೇರೆಯವರು ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿಲ್ಲ.

ಸೋಂಕಿತರಲ್ಲಿ ಇಬ್ಬರೂ ಮಕ್ಕಳು‌. ಇನ್ನಿಬ್ಬರು ಮಹಿಳೆಯರು. ಒಟ್ಟು ಆರು ಜನರಲ್ಲಿ ಇಬ್ಬರಿಗೆ ನೆಗಟಿವ್ ಬಂದಿದೆ.


ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..!

ಜಿ ಎನ್ ಮೋಹನ್



‘ಇದರಲ್ಲಿ ಹೆಣ್ಣು ಯಾವುದು, ಗಂಡು ಯಾವುದು ಹೇಳಿ’ ಅಂತ ಒಂದು ಪ್ರಶ್ನೆ ತಟ್ಟನೆ ನಿಮ್ಮತ್ತ ತೂರಿಬಂದರೆ ಏನು ಮಾಡುತ್ತೀರಿ..?

ಕಿಸಕ್ ಎಂದು ನಗುತ್ತೀರಿ

ಹೆಣ್ಣು ಯಾವುದು, ಗಂಡು ಯಾವುದು ಎಂದು ಕಂಡು ಹಿಡಿಯೋದೇನು ಬ್ರಹ್ಮ ವಿದ್ಯೆಯೇ?
ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..

ಅಂತಹದೇ ಒಂದು ಪ್ರಶ್ನೆ ನನ್ನತ್ತ ಇದ್ದಕ್ಕಿದ್ದಂತೆ ತೂರಿ ಬಂದಾಗ
ನೀವು ನಂಬಬೇಕು..
ಖಂಡಿತಾ ನಾನು ಉತ್ತರಿಸಲಾಗದೆ ಸೋತೆ

ಅಷ್ಟೇ ಅಲ್ಲ, ನೀವೂ ಸಹಾ ಖಂಡಿತಾ ಸೋಲುತ್ತೀರಿ ಎಂಬ ಭರವಸೆ ನನಗಿದೆ.

ಹೈದ್ರಾಬಾದ್ ಕರ್ನಾಟಕದ ಮೂಲೆ ಮೂಲೆಯನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಿದ್ದೆ

ಆಗತಾನೆ ಪಿ ಸಾಯಿನಾಥ್ ಕಲಬುರ್ಗಿಗೆ ಬಂದು ಹೋಗಿದ್ದರು

ನೂರೆಂಟು ಮಾತನಾಡಿದ ನನಗೆ ಮೂರನೆಯ ಕಣ್ಣೊಂದು ಸಿಕ್ಕಿದಂತಾಗಿತ್ತು

ಮನೆಯೊಳಗಿಲ್ಲ ಎಂದರೆ ಊರವರ ನಡುವೆ ಎನ್ನುವಂತೆ ಸುತ್ತುತ್ತಿದ್ದೆ

ಹಾಗೆ ಕಲಬುರ್ಗಿ ದಾಟಿ ಬೀದರ್ ಗೆ ಹೆಜ್ಜೆ ಇಡಬೇಕು ಅಲ್ಲಿ ಕಮಲಾಪುರ ಅನ್ನುವ ಊರು ಸಿಗುತ್ತದೆ
ಕಮಲಾಪುರ ಬಾಳೆಹಣ್ಣು ಅಂದರೆ ಸಿಕ್ಕಾಪಟ್ಟೆ ಹೆಸರುವಾಸಿ.
ನೋಡಬೇಕು ನೀವು ಆ ಬಾಳೆಹಣ್ಣನ್ನು, ಹಾಗಿರುತ್ತದೆ
ಯಾವಾಗ ಬೀದರ್ ಗೆ ಹೋಗಬೇಕಾದರೂ ಒಂದು ‘ಬಾಳೆ ಸ್ಟಾಪ್’ ಗ್ಯಾರಂಟಿ

ಹಾಗೆ ಇಳಿದಾಗಲೇ ನನ್ನತ್ತ ಈ ಪ್ರಶ್ನೆ ತೂರಿ ಬಂದದ್ದು
ಕಮಲವ್ವ ಈ ಪ್ರಶ್ನೆ ಕೇಳಿದ್ದಳು

ಆಕೆಯ ಮುಂದಿದ್ದದ್ದು ಎಲೆ ಕೋಸು ಮತ್ತು ಹತ್ತಿ
ನಾನು ಆ ಕಡೆ ಈ ಕಡೆ ನೋಡಿದೆ
ಎಲ್ಲೂ ಯಾರೂ ಕಾಣುತ್ತಿಲ್ಲ
ಮತ್ತೆ ಗಂಡು- ಹೆಣ್ಣು ಹೇಳುವುದು ಹೇಗಪ್ಪಾ ಅಂತ

ನನ್ನ ತಡಕಾಟ ನೋಡಿದವಳೇ ಕಮಲವ್ವ ಕಡ್ಡಿಪುಡಿ ಜಗಿದು ಆಗಲೇ ಕಪ್ಪಗಾಗಿದ್ದ ಅಷ್ಟೂ ಹಲ್ಲುಗಳನ್ನು ಬಿಟ್ಟು ಜೋರಾಗಿ ನಗಲು ಆರಂಭಿಸಿದಳು
ನಾನೋ ಕಕ್ಕಾಬಿಕ್ಕಿ

ಇದ್ಯಾಕವ್ವಾ ಅಂದೆ

ಆಕೆ ತಕ್ಷಣವೇ ನಾನು ‘ಗಂಡೋ ಹೆಣ್ಣೋ ಹೇಳಿ ಅಂದದ್ದು ಈ ಕೋಸು, ಹತ್ತಿಗೇನೇ’ ಅಂದಳು

ನನಗೋ ಇನ್ನಷ್ಟು ಗೊಂದಲ
ಊರವರ ಮುಂದೆ ಬೇಕಂತಲೇ ಕಾಲೆಳೆಯುತ್ತಿದ್ದಾಳೆ ಅಂದುಕೊಂಡೆ

ಅಲ್ಲ, ಹಾಗಲ್ಲ
ಹತ್ತಿ ಗಂಡು, ಕೋಸು ಹೆಣ್ಣು ಅಂತ ಗೊತ್ತಾಯಿತು

ನನ್ನ ಮುಖದ ಮೇಲೆ ನೂರೆಂಟು ಪ್ರಶ್ನೆಗಳು ನಾಟ್ಯವಾಡುತ್ತಿತ್ತೇನೋ
ಕೊನೆಗೆ ಕಮಲವ್ವನೇ ಹೇಳಿದಳು

ಮಾರ್ಕೆಟ್ ನಲ್ಲಿ ಯಾವುದಕ್ಕೆ ಯಾವಾಗಲೂ ಜಾಸ್ತಿ ರೇಟ್ ಇರುತ್ತೋ ಅದು ಗಂಡು
ಕಡಿಮೆ ರೇಟ್ ಇರೋದು ಹೆಣ್ಣು ಅಂತ

ಒಂದು ಕ್ಷಣ ‘ಏನು ಮಾಡಿದೆಯೋ ಶಿವನೇ ಮರೆಮೋಸ..’ ಅನಿಸಿ ಹೋಗಿದ್ದು ಸುಳ್ಳಲ್ಲ
ಎರಡು ಹೆಣ್ಣುಗಳನ್ನು ಬಗಲಿಗಿಟ್ಟುಕೊಂಡರೂ ಆ ಶಿವನಿಗೆ ಹೆಣ್ಣಿನ ಮಹತ್ವವೇ ಗೊತ್ತಾಗಲಿಲ್ಲವೇ ಅನಿಸಿತು

ಇದೆ ರೀತಿ ಕಕ್ಕಾಬಿಕ್ಕಿ ಆಗಿ ನಿಂತಿದ್ದವರು ಶ್ವೇತಾ ಧಗಾ
ರಾಜಸ್ಥಾನದ ಉದಯಪುರದ ಮೂಲೆಯ ಹಳ್ಳಿಯೊಂದರಲ್ಲಿ

ಪಿ ಸಾಯಿನಾಥ್ ಅವರನ್ನು ಓದಿ ಪ್ರಭಾವಿತರಾದ ಅವರು ಹಳ್ಳಿಯ ನಿಟ್ಟುಸಿರನ್ನು ಜಗತ್ತಿಗೆ ಧಾಟಿಸುತ್ತಾ ಊರೂರು ಅಲೆಯುತ್ತಿದ್ದರು

ಹಾಗೆ ಅಲೆಯುತ್ತಿದ್ದಾಗ ಎದುರಾದದ್ದು ಚಮ್ನೀಬಾಯಿ
ಘಾಟಿ ಅನ್ನುವ ಕುಗ್ರಾಮದಲ್ಲಿ

ತನ್ನ ಮುಂದೆ ನೂರೆಂಟು ರೀತಿಯ ಬೀಜಗಳನ್ನು ಹರಡಿಕೊಂಡಿದ್ದ ಚಮ್ನೀಬಾಯಿ ಆ ಬೀಜಗಳಲ್ಲಿ ಗಂಡು ಯಾವುದು ಹೆಣ್ಣು ಯಾವುದು ಎಂದು ಬಣ್ಣಿಸಿ ಹೇಳುತ್ತಿದ್ದಳು

ಚಮ್ನೀಬಾಯಿ ಎಲ್ಲಾ ಬೀಜಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಊರ ತಾಯಿ
ಕೈಯಿಂದ ಕೈಗೆ ಬೀಜಗಳು ಬದಲಾದರಷ್ಟೇ ದೇಸಿ ಸೊಗಡು ಉಳಿಯಲು ಸಾಧ್ಯ ಎಂದು ನಂಬಿರುವವಳು

ಅವಳು ಹೇಳುತ್ತಿದ್ದಳು- ಇಲ್ಲಿ ತರಕಾರಿ ಬೀಜಗಳನ್ನ ಹೆಣ್ಣು ಅಂತಾರ್ರೀ ಹತ್ತಿ, ಕಾಫಿ, ತಂಬಾಕು ಎಲ್ಲಾ ಗಂಡು
ತರಕಾರಿ ಏನು ಮಾಡಾಕ ಬರ್ತಾದ್ರೀ ಮನೀ ಒಳಗ ಅಡುಗೆ ಮಾಡಬೇಕಷ್ಟೇ
ಆದ್ರೆ ಕಾಫಿ ತಂಬಾಕ ಹತ್ತಿ ಎಲ್ಲಾ ಬೇಕಾದಷ್ಟು ದುಡೀತಾವ್ರಿ ಊರ್ರೂರು ತಿರುಗತಾವ್ರಿ ಅದಕ್ಕಾ ಗಂಡು ಅಂತ ಕರೀತಾರ್ರಿ

ಹಾಗೆ ಹೇಳುವಾಗ ಅವಳ ಮುಖದಲ್ಲಿ ಒಂದು ಸಣ್ಣ ವಿಷಾದದ ಎಳೆ ಇತ್ತು

‘ಅಮೃತ ಬೀಜ’ ಅನ್ನುವ ಒಂದು ಡಾಕ್ಯುಮೆಂಟರಿ ನೋಡಿದ್ದೆ
ಮೀರಾ ದಿವಾನ್ ಅನ್ನುವ ನಿರ್ದೇಶಕಿ ಕೆನಡಾದಿಂದ ಕರ್ನಾಟಕಕ್ಕೆ ಬಂದು ಊರೂರು ಸುತ್ತಿ ಇಂತ ಬೀಜ ರಕ್ಷಕರನ್ನು ತೆರೆಗೆ ತಂದಿದ್ದರು

ಇಡೀ ಸಾಕ್ಷ್ಯಚಿತ್ರ ನೋಡುತ್ತಾ ಹೋದಾಗ ನನಗೆ ಥಟ್ಟನೆ ಅರಿವಾಗಿದ್ದು ಅರೆ! ಬೀಜ ರಕ್ಷಿಸಬೇಕು ಅಂತ ಒಬ್ಬ ಗಂಡೂ ಮುಂದಾಗಿರಲಿಲ್ಲ
ಎಲ್ಲಾ ಹೆಣ್ಣು ಮಕ್ಕಳೇ

ಮನೆಯೊಳಗಿದ್ದ ಕೆಲಸವನ್ನು, ಸಂಸಾರವನ್ನು, ಹೊಲದ ಚಾಕರಿಯನ್ನೂ ನಿಭಾಯಿಸಿಕೊಂಡು ಬೀಜಗಳನ್ನು ತಮ್ಮ ಗರ್ಭದೊಳಗಿನ ಮಕ್ಕಳಂತೆ ಕಾಪಾಡುತ್ತಿದ್ದರು

ಯಶೋದಾ, ಸುನಂದಾ, ನೀಲಮ್ಮ ಈ ಮೂವರೂ ಬರೀ ಬೀಜಗಳನ್ನು ಮಾತ್ರ ಕಾಪಾಡುತ್ತಿರಲಿಲ್ಲ
ಬದಲಿಗೆ ಅವರಿಗೂ ಅರಿವಾಗದಂತೆ ದೊಡ್ಡ ಆಂದೋಲನಕ್ಕೆ ನಾಂದಿ ಹಾಡಿ ಬಿಟ್ಟಿದ್ದರು

ಈ ಮೂವರೂ ಬೀಜಗಳನ್ನು ಮಾತ್ರ ರಕ್ಷಿಸುತ್ತಿರಲಿಲ್ಲ, ಬದಲಿಗೆ ಇಡೀ ಜಗತ್ತಿಗೆ ಅರಿವಿನ ಬೀಜ ಬಿತ್ತುತ್ತಿದ್ದರು

ಈ ಮೂವರೂ ಕೇವಲ ಬೀಜಗಳನ್ನು ಮಾತ್ರ ಮಡಿಲಿನಲ್ಲಿಟ್ಟುಕೊಂಡಿರಲಿಲ್ಲ, ಬದಲಿಗೆ ಅಮೆರಿಕಾದ ವಿರುದ್ಧ ಗುಟುರು ಹಾಕಿದ್ದರು

ಈ ಮೂವರೂ ತಮಗೇ ಗೊತ್ತಿಲ್ಲದಂತೆ, ವಿಶ್ವ ಬ್ಯಾಂಕ್, ವಿಶ್ವ ವ್ಯಾಪಾರ ಸಂಘಟನೆ, ಗ್ಯಾಟ್, ಡಂಕೆಲ್ ಹೀಗೆ ಎಲ್ಲವನ್ನೂ ಪ್ರಶ್ನಿಸಿಬಿಟ್ಟಿದ್ದರು

ಬೀಜಗಳಿಗೆ ಪೇಟೆಂಟ್ ಮಾಡಲೇಬೇಕು ಎಂದು ಗ್ಯಾಟ್ ಪಟ್ಟು ಹಿಡಿದಾಗ ತಮ್ಮ ಒಡಲಲ್ಲಿದ್ದ ಕೂಸುಗಳನ್ನು ಹರಿದು ಒಗೆಯುತ್ತಿದ್ದಾರೆ ಎನ್ನುವಂತೆ ತಳಮಳಿಸಿದವರು ಇವರು

ದೇಶದ ಯಾವ ಮೂಲೆಗೆ ಹೋದರೂ ಹೆಣ್ಣು ಮಕ್ಕಳು ತಮ್ಮ ಮುರುಕು ಮನೆಯ ನೆಲದಲ್ಲಿ, ಗೋಡೆಯಲ್ಲಿ, ಗೂಡೆಯಲ್ಲಿ ಬೀಜಗಳನ್ನು ಬಚ್ಚಿಟ್ಟು
ದೇಸಿತನವನ್ನ ಅಲುಗಾಡದಂತೆ ನೋಡಿಕೊಂಡಿದ್ದರು

ಅಂತಹ ಗಟ್ಟಿಗಿತ್ತಿಯರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಬೀಜಗಳಾಗಿ ಹೋಗಿದ್ದರು

ಅಷ್ಟೆಲ್ಲಾ ಆಗಿತ್ತು

ಒಂದು ನಿಮಿಷ ಎಂದವಳೇ ಚಮ್ನೀಬಾಯಿ ಓಡಿ ಹೋದಳು

ಏನಪ್ಪಾ ಎಂದು ಶ್ವೇತಾ ಧಗಾ ಆ ಕಡೆ ತಿರುಗಿದರೆ ಜೋರು ಮಳೆಯ ಮಧ್ಯೆ ಬೀಜಗಳು ಕೊಚ್ಚಿ ಹೋಗದಂತೆ ಚಮ್ನೀಬಾಯಿ ಹರಸಾಹಸ ಪಡುತ್ತಿದ್ದಳು

ಇಂತಹ ಚಂದುಳ್ಳ ಹೆಣ್ಣು ಮಕ್ಕಳ ಒಂಬತ್ತು ಕೊಡು ಸ್ವಾಮಿ..

ರಾಮಾಯಣದ ಶ್ರವಣಕುಮಾರ ಬಂದಿದ್ದ ಊರೇ ನಮ್ಮೂರು ವಜ್ರ

ಶಿಲ್ಪಾ ಎಂ.ತಾರೀಕಟ್ಟೆ


ದಶರಥನ ಬಿಲ್ಲಿಗೆ ಪ್ರಾಣಬಿಟ್ಟ ಶ್ರವಣಕುಮಾರನ ಕತೆ ಗೊತ್ತಲ್ಲ. ತಂದೆತಾಯಿಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಆತ ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ ಅಡ್ಡೆಯಲ್ಲಿ ಅವರಿಬ್ಬರನ್ನು ಹೊತ್ತುಕೊಂಡು ಹೋಗುತ್ತಿದ್ದ.ತಾಯಿಗೆ ನೀರಡಿಕೆಯಾದಾಗ ಕಾಡಿನಲ್ಲಿ ಹುಡುಕುತ್ತಾ ಬಂದು ಇಲ್ಲಿ ನೀರು ಮೊಗೆಯುತ್ತಿದ್ದ. ಯಾವುದೋ ಪ್ರಾಣಿ ಇರಬಹುದು ಎಂದು ದಶರಥ ಬಾಣ ಹೂಡಿ ಶ್ರವಣನನ್ನು ಕೊಲ್ಲುತ್ತಾನೆ.ಶ್ರವಣ ಕಾಲಿಟ್ಟ ಊರೇ ದಶರಥ ರಾಮೇಶ್ವರ ವಜ್ರ ಎಂಬ ಐತಿಹ್ಯವಿದೆ. ಹೀಗಾಗಿ ಈ ಸ್ಥಳಕ್ಕೂ ರಾಮಾಯಣಕ್ಕೂ ತುಂಬಾ ಹತ್ತಿರವಾದ ನಂಟಿದೆ.ಹನುಮಂತ ಸುಗ್ರೀವರು ವಾನರ ಸೇನೆ ಯಾವಗಲೂ ರಾಮನ ಸಹಾಯಕ್ಕೆ ಮತ್ತು ಭಕ್ತರಾಗಿ ಇರುತ್ತಿದ್ದರು ಎನ್ನುವುದಕ್ಕೆ ವಜ್ರ ಸಾಕ್ಷಿಯಾಗಿದೆ. ಭಕ್ತರು ಕಾಲಿಟ್ಟಕ್ಷಣ ಸ್ವಾಗತಿಸುವವರು ಮತ್ತು ಕಣ್ಣಿಗೆ ಕಾಣುವವರು ವಾನರ ಸೇನೆ.ಅಂಗೆ ಮುಂದೆ ಸಾಗಿದರೆ ಸುತ್ತಲೂ ಬೆಟ್ಟ. ಕಾಡು. ಅದರ ಮಧ್ಯ ಅಲ್ಲೊಂದು ನೀರಿನ ಹೊಂಡ. ಅಲ್ಲಿ ಶ್ರವಣಕುಮಾರ ತನ್ನ ತಂದೆ ತಾಯಿಗೆ ನೀರು ತರಲು ಬಂದು ದಶರಥನ ಬಿಲ್ಲಿನ ಗುರಿಗೆ ಪ್ರಾಣ ಬಿಟ್ಟಿದ್ದಾನೆ ಎನ್ನುವ ಸಾಕ್ಷಿಯಾಗಿ ಶ್ರವಣಕುಮಾರ ತನ್ನ ತಂದೆ ತಾಯಿ ಹೊತ್ತುಕೊಂಡಿರುವ ವಿಗ್ರಹವನ್ನೂ ಪ್ರತಿಷ್ಠಾಪನೆ ಮಾಡಿದ್ದಾರೆ.ಹೊಂಡದ ಇನ್ನೊಂದು ವಿಶೇಷ ಎಂದರೆ ಮಕ್ಕಳು ಅಥವಾ ಮದುವೆ ಇಲ್ಲದವರೂ ಅಲ್ಲಿ ಗಂಗಮ್ಮಮಾಡುತ್ತಾರೆ. ಒಳ್ಳೆಯದು ಆಗುತ್ತೆ ಎನ್ನುವ ನಂಬಿಕೆ ಇದೆ.ಅಲ್ಲೊಂದು ಗುಹೆ ಇದೆ. ಅದರೊಳಗೆ ಶಿವಲಿಂಗವಿಟ್ಟು ಪೂಜಿಸುತ್ತಾರೆ. ಯಾವುದೇ ಕಟ್ಟಡಗಳಿಲ್ಲದೆ, ಕರಿಯ ಬಂಡೆಗಳಿಂದ ದೇವಸ್ಥಾನವಾಗಿದೆ .ಉತ್ತರ ಮಳೆ ಶುರುವಾಗುವ ಸಂಧಭ೯ ದಲ್ಲಿ ಉತ್ತರ ಮಳೆ ಅಂಭು ಎಂದು ಜಾತ್ರೆ ನಡೆಯುತ್ತದೆ.ಆದರೆ ದಶರಥನ ಜಾತ್ರೆ ಯಲ್ಲ. ಕಂಚೀಪುರದಲ್ಲಿರುವ ಸುಗ್ರೀವನ ಜಾತ್ರೆ ಕಂಚೀದೇವರು ಎಂದೆ ಪ್ರಸಿದ್ಧಿ ಇದೆ ದೇವರಿಗೆ .ಕಂಚೀಪುರದಿಂದ ಬರುವ ಕಂಚೀದೇವರ ಜಾತ್ರೆಯನ್ನು ದಶರಥರಾಮೇಶ್ವರ ವಜ್ರದಲ್ಲಿ ನೆರವೇರಿಸುತ್ತಾರೆ.ಕಂಚೀದೇವರ ವಿಶೇಷ ವೆಂದರೆ ದೇವರಿಗೆ ಹರಕೆಯ ರೂಪದಲ್ಲಿ ದುಡ್ಡನ್ನು ತೂರುವುದು ಅಥವಾ ಸೂರೆಬಿಡುವುದು. ದೇವರಿಗೆ ಅದೇ ಪ್ರಿಯ ಭಕ್ತರು ಲಕ್ಷ ಗಟ್ಟಲೆ ದುಡ್ಧು ತೂರುತ್ತಾರೆ…. ಮೊದಲೆಲ್ಲ ಬಡವರ ಮಕ್ಕಳು ದುಡ್ಡನ್ನು ಹಾದು ಕೊಂಡು ಜೀವನ ನೆಡೆಸಲಿ ಎನ್ನುವ ಕಲ್ಪನೆ ಇರಬೇಕು …ಅಲ್ಲಿ ಇದೊಂದು ವಿಶೇಷವಿದೆ. ಬುತ್ತಿಬಾನ ಜಾತ್ರೆ ಶುರುವಾಗುವ ಮೂರು ದಿನಕ್ಕೆ ಮುಂಚೆಯೆ ಮೊಸರು ಅನ್ನ, ಈರುಳ್ಳಿ ಬೆಳ್ಳುಳ್ಳಿ ಪದಾರ್ಥಗಳನ್ನು ಬಿದಿರು ಕುಕ್ಕೆ ಬಾಳೆ ಎಲೆ ಹಾಕಿ ಇದನೆಲ್ಲ ಕಟ್ಟಿ ಉತ್ತರೆ ಗುಡ್ಧದಲ್ಲಿ ಇಟ್ಟಿರುತ್ತಾರೆ.ಜಾತ್ರೆಯ ದಿನ ದೇವರೊಟ್ಟಿಗೆ ತಲೆಯ ಮೇಲೆ ಹೊತ್ತು ತರುತ್ತಾರೆ. ಅದನ್ನು ಜನವೆಲ್ಲ ಮುಟ್ಟಿ ನಮಸ್ಕರಿಸುತ್ತಾರೆ ಅದನ್ನು ಮುಟ್ಟಿದರೆ ಕೆಲವು ಖಾಯಿಲೆಗಳು ಉಷಾರಾಗುತ್ತವೆ ಎಂಬ ನಂಬಿಕೆ ಇದೆ .ಜಾತ್ರೆ ಆದ ಮೇಲೆ ಬುತ್ತಿ ಬಾನ ಬಿಚ್ಚಿ ಅದರೊಳಗಿನ ಅನ್ನವನ್ನು ಪ್ರಸಾದ ವಾಗಿ ಕೊಡುತ್ತಾರೆ.ಅದನ್ನು ತಿನ್ನಲೆ ಬೇಕೆನ್ನುವ ಆಶಯ ಮತ್ತು ನಂಬಿಕೆ .ಮೊದಲು ಮಂಗಗಳಿಗೆ ಎಡೆ ಹಾಕುತ್ತಾರೆ. ಮೊದಲ ಪ್ರಾಶಸ್ತ್ಯ ಅಲ್ಲಿ ವಾನರ ಸೇನೆಗಳಿಗೆ ಎನ್ನುವುದು ವಿಶೇಷ.ಅಲ್ಲಿ ಪರೆವು ಅಂತ ಭಕ್ತರಿಗೆಲ್ಲ ಊಟದ ವ್ಯವಸ್ಥೆ ಮಾಡಿರುತ್ತಾರೆ. ಮುದ್ದೆ ಅನ್ನ ಸಾಂಬಾರು ಬೆಳೆದ ಎಲ್ಲಾ ಬೇಳೆಗಳ ತರಕಾರಿಗಳ ಸಾಂಬಾರು ಮಾಡಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುತ್ತಾರೆ .ಇದು ಚಿತ್ರದುರ್ಗ ಜಿಲ್ಲೆ ಹೊಸದುಗ೯ ತಾಲ್ಲೂಕಿಗೆ ಸೇರಿದೆ. ಹುಳಿಯಾರು ಮಾಗ೯ದ ಮೂಲಕವು ಇಲ್ಲಿಗೆ ಹೋಗಬಹುದು.

ಕೊನೆಗೂ ಸೆರೆಯಾದ ಹುಲಿರಾಯ

Publicstory. in


ಮಡಿಕೇರಿ: ಪೊನ್ನಂಪೇಟೆ – ಗೋಣಿಕೊಪ್ಪಲು ಭಾಗದಲ್ಲಿ ಅನೇಕ ತಿಂಗಳಿಂದ ಓಡಾಡುತ್ತ ಜನರಲ್ಲಿ ನಡುಕ ಹುಟ್ಟೊಸಿದ ಹುಲಿಯನ್ನು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರಿನ ಕಾಫಿ ತೋಟದಲ್ಲಿ ಮಂಗಳವಾರ ತಡರಾತ್ರಿ ಕೊನೆಗೂ ಸೆರೆ ಹಿಡಿಯಲಾಯಿತು.

ವಿರಾಜಪೇಟೆ ತಾಲ್ಲೂಕಿನ ಕುಮಟೂರು, ನಡಿಕೇರಿ, ತೂಚಮಕೇರಿ, ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಹುಲಿ ಸೆರೆಗೆ ಅನೇಕ ಬೋನ್ ಗಳನ್ನು ಅರಣ್ಯ ಇಲಾಖೆ ಇಟ್ಟಿತ್ತು.

ಸಾಕಾನೆಗಳ ಸಹಾಯದಿಂದಲೂ ಹುಲಿ‌‌ ಸೆರೆಗೆ ನಡೆಸಿದ ಕಾರ್ಯಾಚರಣೆಯೂ ಫಲಪ್ರದ ಆಗಿರಲಿಲ್ಲ.

ಕೊನೆಗೂ ಬೋನಿಗೆ ಹುಲಿ ಬಿತ್ತು. ಇದರಿಂದಾಗಿ ಈ ಭಾಗದ ಜನರಲ್ಲಿ ನೆಮ್ಮದಿಯ ಸಂಭ್ರಮ ಕಾಣಿಸಿತು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 20, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಬುಧವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ತ್ರಯೋದಶಿ
(ನಿನ್ನೆ ಸಂಜೆ 5 ಗಂ॥ 31 ನಿ।। ರಿಂದ
ಇಂದು ರಾತ್ರಿ 7 ಗಂ॥ 41 ನಿ।। ತನಕ)
ನಕ್ಷತ್ರ : ಅಶ್ವಿನಿ
(ನಿನ್ನೆ ರಾತ್ರಿ 7 ಗಂ॥ 54 ನಿ।। ರಿಂದ
ಇಂದು ರಾತ್ರಿ 10 ಗಂ॥ 36 ನಿ।। ತನಕ)
ಯೋಗ : ಸೌಭಾಗ್ಯ
ಕರಣ : ಗರಜೆ
ವರ್ಜ್ಯಂ : (ಇಂದು ರಾತ್ರಿ 6 ಗಂ॥ 9 ನಿ।। ರಿಂದ ಇಂದು ರಾತ್ರಿ 7 ಗಂ॥ 55 ನಿ।। ತನಕ)
ಅಮೃತಕಾಲ : (ಇಂದು ಮಧ್ಯಾಹ್ನ 2 ಗಂ॥ 35 ನಿ।। ರಿಂದ ಇಂದು ಸಂಜೆ 4 ಗಂ॥ 21 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 11 ಗಂ॥ 45 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 37 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 49 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 10 ಗಂ॥ 34 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 7 ಗಂ॥ 19 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 56 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 42 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 42 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಮೇಷ
ವಿಶೇಷ 20. ಮಾಸ ಶಿವರಾತ್ರಿ

ಮೇಷ ರಾಶಿ ಭವಿಷ್ಯ : 20 May 2020
ನಿಮ್ಮ ಸಕಾರಾತ್ಮಕ ದೃಷ್ಟಿಕೋನ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿಸಬಹುದಾದ ಸಾಧ್ಯತೆಗಳಿವೆ. ಇಂದು ಸಾಲಗಾರನು ನಿಮಗೆ ಹೇಳದೆ ನಿಮ್ಮ ಖಾತೆಗೆ ಹಣವನ್ನು ಸೇರಿಸಬಹುದು. ಇದರ ಬಗ್ಗೆ ತಿಳಿದು ನೀವು ಆಶ್ಚರ್ಯಚಕಿತರಾಗಬಹು ಮತ್ತು ಸಂತೋಷವು ಪಡೆಯಬಹುದು. ಮಕ್ಕಳು ಅಧ್ಯಯನದಲ್ಲಿ ಅವರ ನಿರಾಸಕ್ತಿಯಿಂದಾಗಿ ಶಾಲೆಯಲ್ಲಿ ನಿರಾಸೆಯುಂಟುಮಾಡಬಹುದು. ಅದೃಷ್ಟ ಸಂಖ್ಯೆ: 8

ವೃಷಭ ರಾಶಿ ಭವಿಷ್ಯ : 20 May 2020
ನಿಮ್ಮ ಶೀಘ್ರ ಕ್ರಮ ನಿಮ್ಮನ್ನು ಪ್ರೇರೇಪಿಸುತ್ತದೆ. ಯಶಸ್ಸು ಸಾಧಿಸಲು-ಸಮಯದ ಜೊತೆ ನಿಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ-ಇದು ನಿಮ್ಮ ದೃಷ್ಟಿಯನ್ನು ವಿಸ್ತಾರಗೊಳಿಸುತ್ತದೆ ನಿಮ್ಮ ವ್ಯಕ್ತಿತ್ವವನ್ನು ವೃದ್ಧಿಸುತ್ತದೆ- ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಮನಸ್ಸನ್ನು ಪಕ್ವಗೊಳಿಸುತ್ತದೆ. ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭ ತರುತ್ತವೆ. ಕುಟುಂಬದ ಬಾಧ್ಯತೆಗಳನ್ನು ಮರೆಯಬೇಡಿ. ಅದೃಷ್ಟ ಸಂಖ್ಯೆ: 7

ಮಿಥುನ ರಾಶಿ ಭವಿಷ್ಯ : 20 May 2020
ಒಂದು ಹಂತವನ್ನು ದಾಟಿ ನಿಮ್ಮನ್ನು ದಂಡಿಸಬೇಡಿ ಮತ್ತು ಸರಿಯಾದ ವಿಶ್ರಾಂತಿ ತೆಗೆದುಕೊಳ್ಳಿ. ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಮಕ್ಕಳ ಚಿಂತೆಗಳನ್ನು ಬೆಂಬಲಿಸುವುದು ಅಗತ್ಯ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿ ತೋರಿಸಬೇಕು. ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಒಳ್ಳೆಯ ದಿನ. ಅದೃಷ್ಟ ಸಂಖ್ಯೆ: 5

ಕರ್ಕ ರಾಶಿ ಭವಿಷ್ಯ : 20 May 2020
ಇಂದು ನೀವು ಪ್ರಮುಖ ನಿರ್ಧಾರ ಕೈಗೊಳ್ಳಬೇಕು – ಇದು ನಿಮ್ಮನ್ನು ಒತ್ತಡ ಹಾಗೂ ಉದ್ವೇಗಕ್ಕೆ ಒಳಪಡಿಸುತ್ತದೆ. ಆರ್ಥಿಕ ಭಾಗವು ಬಲಗೊಳ್ಳುವ ಪೂರ್ಣ ಸಾಧ್ಯತೆ ಇದೆ.ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ, ಇಂದು ನೀವು ಆ ಹಣವನ್ನು ಮರಳಿ ಪಡೆಯುವ ನಿರೀಕ್ಷೆಯಿದೆ ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಗಳ ಭೇಟಿ ಸಾಧ್ಯವಿದೆ. ಇಂದು ನೀವು ಒಂದು ಹೃದಯ ಒಡೆಯುವುದನ್ನು ತಪ್ಪಿಸುತ್ತೀರಿ. ಜಂಟಿ ಯೋಜನೆಗಳು ಮತ್ತು ಪಾಲುದಾರಿಕೆಗಳಿಂದ ದೂರವಿರಿ. ಅದೃಷ್ಟ ಸಂಖ್ಯೆ: 9

ಸಿಂಹ ರಾಶಿ ಭವಿಷ್ಯ 20 May 2020
ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಒಳ್ಳೆಯದೂ ಹಾಗೂ ಕೆಟ್ಟದೆಲ್ಲವೂ ಮನಸ್ಸಿನ ಮೂಲಕವೇ ಬರುವುದರಿಂದ ಬುದ್ದಿ ಜೀವನದ ಹೆಬ್ಬಾಗಿಲಾಗಿದೆ. ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ. ಅದೃಷ್ಟ ಸಂಖ್ಯೆ: 7

ಕನ್ಯಾ ರಾಶಿ ಭವಿಷ್ಯ : 20 May 2020
ಸ್ನೇಹಿತರಿಂದ ಒಂದು ವಿಶೇಷ ಅಭಿನಂದನೆ ಸಂತೋಷದ ಮೂಲವಾಗುತ್ತದೆ. ಇದೇಕೆಂದರೆ ನೀವು ನಿಮ್ಮ ಜೀವನವನ್ನು ಮರಗಳಂತೆ ಮಾಡಿಕೊಳ್ಳುತ್ತೀರಿ-ಅವುಗಳು ತಾವು ಸೂರ್ಯನಡಿ ನಿಂತು ಶಾಖದ ಬೇಗೆ ತಡೆದುಕೊಂಡು ಇತರರಿಗೆ ನೆರಳು ನೀಡುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಪಾರ್ಟಿ ನೀಡಲು ಯೋಜಿಸುತ್ತಿದ್ದಲ್ಲಿ ನಿಮ್ಮ ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ – ನಿಮ್ಮನ್ನು ಅಸ್ತುಷ್ಟಗೊಳಿಸುವ ಬಹಳಷ್ಟು ಜನರಿರುತ್ತಾರೆ. ಇಂದು ಪ್ರೀತಿಯಲ್ಲಿ ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ. ಅದೃಷ್ಟ ಸಂಖ್ಯೆ: 5

ತುಲಾ ರಾಶಿ ಭವಿಷ್ಯ : 20 May 2020
ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಕುಟುಂಬದ ಕಾರ್ಯಕ್ರಮದಲ್ಲಿ ಹೊಸ ಸ್ನೇಹಿತರು ಕಾಣುತ್ತಾರೆ. ಆದರೆ ನಿಮ್ಮ ಆಯ್ಕೆಯಲ್ಲಿ ಎಚ್ಚರಿಕೆಯಿಂದಿರಿ. ಒಳ್ಳೆಯ ಸ್ನೇಹಿತರು ನೀವು ಯಾವಾಗಲೂ ಉಳಿಸಿಕೊಳ್ಳಬಯಸುವ ನಿಧಿಯಂತೆ. ಇಂದು ನೀವು ನಿಮ್ಮ ಅತ್ಯುತ್ತಮ ನಡವಳಿಕೆಯನ್ನು ಹೊಂದಿರಬೇಕು – ಏಕೆಂದರೆ ನಿಮ್ಮ ಪ್ರೇಮಿ ಅಸಮಾಧಾನಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅದೃಷ್ಟ ಸಂಖ್ಯೆ: 8

ವೃಶ್ಚಿಕ ರಾಶಿ ಭವಿಷ್ಯ 20 May 2020
ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಿಮ್ಮ ಜೀವನದ ಕಳಪೆ ಆರೋಗ್ಯದಿಂದಾಗಿ, ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು, ಆದರೆ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ಹಣವನ್ನು ಉಳಿಸಲಾಗಿದೆ ಇದರಿಂದ ಅದು ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗಿರುತ್ತದೆ. ಮನೆಯಲ್ಲಿ ಸಮಸ್ಯೆಗಳು ಉದ್ಭವವಾಗುವಂತೆ ತೋರುತ್ತಿರುವುದರಿಂದ ನಿಮ್ಮ ಮಾತುಗಳ ಬಗ್ಗೆ ಎಚ್ಚರ ವಹಿಸಿ. ಅದೃಷ್ಟ ಸಂಖ್ಯೆ: 1

ಧನು ರಾಶಿ ಭವಿಷ್ಯ : 20 May 2020
ನಿಮ್ಮ ವಿಶ್ವಾಸ ಮತ್ತು ಚೈತನ್ಯ ಇಂದು ಅಧಿಕವಾಗಿರುತ್ತದೆ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ನೀವು ನಿಮ್ಮ ದೈನಂದಿನ ಕಾರ್ಯಕ್ರಮಗಳಿಂದ ಬಿಡುವು ಮಾಡಿಕೊಂಡು ನಿಮ್ಮ ಸ್ನೇಹಿತರೊಂದಿಗೆ ಇಂದು ಹೊರಗೆ ಹೋಗಬೇಕು. ನಿಮ್ಮ ಪ್ರಿಯತಮೆ ಇಡೀ ದಿನ ನಿಮಗಾಗಿ ಪರಿತಪಿಸುತ್ತಾಳೆ. ಒಂದು ಅಚ್ಚರಿಯನ್ನು ಯೋಜಿಸಿ ಮತ್ತು ಇದನ್ನು ನಿಮ್ಮ ಜೀವನದ ಅತ್ಯಂತ ಸುಂದರ ದಿನವನ್ನಾಗಿ ಮಾಡಿ. ಅದೃಷ್ಟ ಸಂಖ್ಯೆ: 7

ಮಕರ ರಾಶಿ ಭವಿಷ್ಯ : 20 May 2020
ಅಸಾಧ್ಯವಾದ ಅನಗತ್ಯ ಚಿಂತನೆಯಲ್ಲಿ ನಿಮ್ಮ ಶಕ್ತಿ ವ್ಯರ್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ. ನಿಧಿಗಳ ಹಠಾತ್ ಒಳಹರಿವು ನಿಮ್ಮ ಪಾವತಿಗಳು ಮತ್ತು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ತೊಂದರೆ ಹೊಂದಿರುತ್ತೀರಿ – ಆದರೆ ನಿಮ್ಮ ಸುತ್ತಲಿರುವವರನ್ನು ಟೀಕಿಸಬೇಡಿ ಇಲ್ಲದಿದ್ದಲ್ಲಿ ನೀವು ಏಕಾಂಗಿಯಾಗುತ್ತೀರಿ. ನೀವು ಇಂದು ನೈಸರ್ಗಿಕ ಸೌಂದರ್ಯದಿಂದ ವಿಸ್ಮಯಗೊಳ್ಳುವ ಸಾಧ್ಯತೆಯಿದೆ. ಅದೃಷ್ಟ ಸಂಖ್ಯೆ: 7

ಕುಂಭ ರಾಶಿ ಭವಿಷ್ಯ : 20 May 2020
ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಿ ಮತ್ತು ನಿಮ್ಮ ವ್ಯಾಯಾಮವನ್ನು ತಪ್ಪದೆ ಮಾಡಿ. ಬಯಸದೆ ಇರುವ ಯಾವುದೇ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು , ಅವರು ಬರುವುದರಿಂದಾಗಿ ನೀವು ಬರುವ ತಿಂಗಳಿಗೆ ಮುಂದೂಡಲಾಯಿಸಿರುವ ಮನೆಯ ಆ ವಸ್ತುಗಳ ಮೇಲು ಖರ್ಚು ಮಾಡಬಹುದು . ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನೀವು ಸಂತೋಷ ನೀಡುವ ಮೂಲಕ ಮತ್ತು ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ನಿಮ್ಮ ಜೀವನವನ್ನು ಸಮರ್ಥಗೊಳಿಸಲಿದ್ದೀರಿ. ಅದೃಷ್ಟ ಸಂಖ್ಯೆ: 4

ಮೀನ ರಾಶಿ ಭವಿಷ್ಯ : 20 May 2020
ಪ್ರವಾಸ-ಪಾರ್ಟಿಗಳು ಮತ್ತು ಆನಂದ ವಿಹಾರಗಳು ಇಂದು ನಿಮ್ಮನ್ನು ಉತ್ತಮ ಮೂಡ್‌ನಲ್ಲಿಡುತ್ತವೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಒಬ್ಬರು ಇನ್ನೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಮೂಲಕ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿ. ಅವುಗಳನ್ನು ಸಾರ್ವಜನಿಕಗೊಳಿಸಿದರೆ ನಿಮಗೆ ಅಪಖ್ಯಾತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅದೃಷ್ಟ ಸಂಖ್ಯೆ: 2