Friday, May 8, 2026
Google search engine
Home Blog Page 224

ಕೊರೊನಾ ವಾರಿಯರ್ಸ್ ಗೆ ಗೌರವ ಸೂಚಿಸಲು ಹಾರಾಟ‌‌ ನಡೆಸುತ್ತಿದ್ದ ಜೆಟ್ ಪತನ

ಟೊರೆಂಟೊ: ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸೂಚಿಸಲಿ ಹಾರಾಟ ನಡೆಸುತ್ತಿದ್ದ ಸ್ನೋಬರ್ಡ್ ಜೆಟ್ ಮನೆಗೆ ಅಪ್ಪಳಿಸಿದ್ದು, ಮಹಿಳಾ ಪೈಲಟ್ ಸಾವಿಗೀಡಾಗಿದ್ದಾರೆ.

ಈ ಬಗ್ಗೆ ಕೆನಡಾ ಪ್ರಧಾನಿ ವಿಷಾದ ವ್ಯಕ್ತಪಡಿಸಿದ್ದಾರೆ.

ಘಟ‌ನೆಯಲ್ಲಿ ಮತ್ತೊಬ್ಬ ಪೈಲಟ್ ಕ್ಯಾಪ್ಟನ್ ರಿಚರ್ಡ್ ಮ್ಯಾಕ್ಡೊಗಾಲ್ ಗಾಯಗೊಂಡಿದ್ದಾರೆ.

ಜೆಟ್ ಪತನವಾದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿಮಾನ ಮೇಲಕ್ಕಾರಿದ ಕೆಲವೇ ನಿಮಿಷದಲ್ಲಿ‌‌ ನೆಲಕ್ಕೆ ಅಪ್ಪಳಿಸಿದೆ.

ಕೇವಲ ಪುರುಷ

0

ದೇವರಹಳ್ಳಿ ಧನಂಜಯ


ಜಗತ್ತಿಗೆ ಗಾಢ ನಿದ್ರೆ
ಎಚ್ಚರ ತಪ್ಪಿದ ಜನಸ್ತೋಮ
ಕೊನೆಯಿಲ್ಲದ ಕನಸ ಕನವರಿಕೆ
ಚಿರ ಎಚ್ಚರದ ನನಸಿಗೆ
ಚಡಪಡಿಸಿದ ಕೇವಲ ಪುರುಷ.

ಕತ್ತಲ ಆಗಸದಿ ಶಶಿ ತೇಲಿದಂತೆ
ಒಳ ಬಾನು ಬೆಳಗಿತು
ಅರಿವ ಚಂದಿರ ಮೂಡಿ
ಬುದ್ಧನ ಹಗುರ ಹೆಜ್ಜೆಗಳು
ಕೊನೆಯಿಲ್ಲದ ಕತ್ತಲ ದಾಟುವ
ಕನಸ ಹೊತ್ತು ನಡೆದಿವೆ.

ನೆಲಬಾನು ತಬ್ಬಿರುವ
ಆಕಾಶಕ್ಕೆ ತೋಳು ಚಾಚಿರುವ
ಮರದ ಬುಡ ಅವನಿಗೆ ಅಮ್ಮನ ಮಡಿಲು.
ಇಲ್ಲಿಗೆ ಬರುವ ಮುನ್ನತನ್ನೊಳಗೆ
ಕಾಲು,ಕಾಲ ಸವೆದಿವೆ
ಕುಳಿತಲ್ಲೇ ಎಷ್ಟು ನಡೆದಿರಬಹುದು!

ವಿಶ್ರಾಂತಿ ತೆಗೆದುಕೋ ಮಗುವೇ
ಕೋಡು ಕುರುಡುಗಳ ಹೊತ್ತು
ಬಹಳ ಧಣಿದಿರುವೆ
ನಿನ್ನಂತೆಯೇ ನಾನೂ
ನಿಂತಲ್ಲೇ ನಡೆಯುತ್ತಿರುವೆ
ಅನುಭೂತಿ ಗೊಂಡಿತು ಮರ

ಅವನಿಗೋ ಕಾಲ ಬೇರಾಗಿಸುವ ಬಯಕೆ
ಬೇರ ಕಾಲಾಗಿಸುವ ತವಕ ಅರಳಿಮರಕೆ
ಒಳಗಣ್ಣು ಮುಚ್ಚಿಬಿಟ್ಟೀತೆಂಬ ಭಯ ಇಬ್ಬರಿಗೂ
ಸಾಗುತ್ತಲೇ ಇವೆ ನಿದ್ರೆ ಇಲ್ಲದ ರಾತ್ರಿಗಳು
ಛಲ ಬಿಡದ ಮರದ ಚಿಗುರಿನಲಿ
ಬುದ್ಧ ಮತ್ತೆ ಮತ್ತೆ ಮೂಡುತ್ತಿದ್ದಾನೆ.

ಮೊದಲ‌‌ ಬಸ್ ಕಂಡು ಕುಣಿದಾಡಿದ ಹುಳಿಯಾರು ಜನ…

Publicstory.in


ಹುಳಿಯಾರು: ಎರಡು ತಿಂಗಳ ಲಾಕ್ ಡೌನ್ ನಂತರ ಹುಳಿಯಾರಿಗೆ ಮೊದಲನೆಯ ಬಸ್ ಬಂದ ಸಂಭ್ರಮ….

ತಿಪಟೂರಿನಿಂದ ಹುಳಿಯಾರಿಗೆ ಇದೀಗ ಬಸ್ ಬಂದಿದ್ದು ಮತ್ತೆ ಮತ್ತಿಘಟ್ಟ ಮೂಲಕ ತಿಪಟೂರಿಗೆ ತಲುಪಲಿದೆ.

ಬಸ್ ಚಾರ್ಜ್ ಎಂದಿನಂತೆಯೇ ಇದೆ.

30 ಜನರಿಗೆ ಮಾತ್ರ ಅವಕಾಶ. ಎಲ್ಲರಿಗೂ ಮಾಸ್ಕ್ ಕಡ್ಡಾಯ.

ಥರ್ಮಲ್ ಸ್ಕ್ಯಾನಿಂಗ್ ಮಾಡಿಕೊಂಡು ಮೊಬೈಲ್ ನಂಬರ್ ಹಾಗೂ ವಿಳಾಸದ ಮಾಹಿತಿ ಪಡೆಯಲಿದ್ದಾರೆ.

ಮುಂಜಾನೆಯಿಂದಲೂ ಹೊಸದುರ್ಗ ಹಾಗೂ ಬೆಂಗಳೂರಿಗೆ ಹೋಗಲು ಪ್ರಯಾಣಿಕರು ಕಾದಿದ್ದರು.

ಥರ್ಮಲ್ ಸ್ಕ್ಯಾನಿಂಗ್ ಮಾಡುವ ಅವಕಾಶ ಕಲ್ಪಿಸಿದಲ್ಲಿ ಮಾತ್ರವೇ ಬರುವುದಾಗಿ ಸಂಬಂಧಪಟ್ಟ ಕೆಎಸ್ಆರ್ಟಿಸಿ ಡಿಪೋದವರು ಮಾಹಿತಿ ನೀಡಿದ್ದರು. ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲದ್ದರಿಂದ ಪ್ರಯಾಣಿಕರು ವಾಪಸ್ ಮನೆಗೆ ಹಿಂದಿರುಗಿದರು.

ತಾಲೂಕು ಆಡಳಿತ ಈ ಬಗ್ಗೆ ಗಮನಹರಿಸಿ ಆರೋಗ್ಯ ಇಲಾಖೆಯವರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲು ನೇಮಿಸುವ ಮೂಲಕ ಪ್ರಯಾಣಿಕರಿಗೆ ಪರಸ್ಥಳಕ್ಕೆ ತೆರಳಲು ಅವಕಾಶ ಮಾಡಿಕೊಡಲು ಪ್ರಯಾಣಿಕರು ಮನವಿ ಮಾಡಿದ್ದಾರೆ

ಎಸ್ಸೆಸ್ಸೆಲ್ಸಿ: ಜೂನ್ 25ಕ್ಕೆ ಇಂಗ್ಲಿಷ್, 29ಕ್ಕೆ ವಿಜ್ಞಾನ ಪರೀಕ್ಷೆ

Publicstory. in


ತುಮಕೂರು: ಲಾಕ್ ಡೌನ್ ನಿಂದಾಗಿ ಮುಂದೂಡಲ್ವಟ್ಟಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂನ್ 25ರಿಂದ ಜುಲೈ.4ವರೆಗೆ ಹಾಗೂ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂನ್ 18ಕ್ಕೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರ ತಿಳಿಸಿದ್ದರು.

ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಷಯವಾರು ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

ವಿಷಯವಾರು ಪರೀಕ್ಷಾ ದಿನಾಂಕ ಈ ಕೆಳಕಂಡಂತಿದೆ.

  • ಜೂನ್ 25 – ಇಂಗ್ಲೀಷ್/ಕನ್ನಡ(ದ್ವಿತೀಯ ಭಾಷೆ)
  • ಜೂನ್ 27 – ಗಣಿತ ಪರೀಕ್ಷೆ
  • ಜೂನ್ 29 – ವಿಜ್ಞಾನ
  • ಜುಲೈ 1 – ಸಮಾಜ ವಿಜ್ಞಾನ
  • ಜುಲೈ 2 – ಕನ್ನಡ (ಪ್ರಥಮ ಭಾಷೆ)
  • ಜುಲೈ 3 – ಹಿಂದಿ (ತೃತೀಯ ಭಾಷೆ)

  • ಇದನ್ನೂ ಓದಿ

  • 5 ತಿಂಗಳು ಆಟ ಆಡಿ ಸಿಕ್ಕಿ ಬಿದ್ದ ಚಿರತೆ

    5 ತಿಂಗಳು ಆಟ ಆಡಿ ಕೊನೆಗೂ ಬೋನಿಗೆ ಬಿತ್ತು ಚಿರತೆ

    ಹುಳಿಯಾರು: ಕಳೆದ‌ ಐದು ತಿಂಗಳಿಂದ ಜನರನ್ನು, ‌ಅರಣ್ಯ ಇಲಾಖೆ ಸಿಬ್ಬಂದಿಗೆ ಚೆಳ್ಳೆ ಹಣ್ಣು‌ ತಿನ್ನಿಸುತ್ತಾ ಓಡಾಡಿಕೊಂಡಿದ್ದ ಚಿರತೆ ಮಂಗಳವಾರ ಕೊನೆಗೂ ಬೋನಿಗೆ ಬಿತ್ತು.

    ಬುಕ್ಕಾಪಟ್ಟಣ ಅರಣ್ಯ ವ್ಯಾಪ್ತಿಯ ಮಾರೊಹೊಳೆ‌‌ ಗ್ರಾಮದ ಜನರಿಗೆ ಈ ಚಿರತೆ‌ ವಿಪರೀತ ಉಪಟಳ ನೀಡುತ್ತಿತ್ತು.

    ಗ್ರಾಮದ ಜಾನುವಾರು, ನಾಯಿಗಳನ್ನು ಕ್ಷಣ ಮಾತ್ರದಲ್ಲಿ ತಿಂದು ಓಡುತ್ತಿತ್ತು.

    ಚಿರತೆ ಉಪಟಳಕ್ಕೆ ಜನರು‌ ತೋಟಗಳಿಗೆ ಹೋಗುವುದನ್ನು ಬಿಟ್ಟಿದ್ದರು.

    ಅರಣ್ಯ ಇಲಾಖೆ ಸಿಬ್ಬಂದಿ‌ ಐದು ತಿಂಗಳಿಂದ ಬೋನು ಇಟ್ಟು ಕಾಯುತ್ತಿದ್ದರು. ಆದರೂ ಬೋನಿಗೆ ಚಿರತೆ ಬೀಳುತ್ತಿರಲಿಲ್ಲ. ಕೊನೆಗೂ ಮಂಗಳವಾರ ಸಿಕ್ಕಿ ಬಿದ್ದಿದೆ.

    ಇದನ್ನು ಓದಿ


    ರಾಮನಗರ: ಬಯಲಿಗೆ ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಭಯಾನಕವಾಗಿ ಎರಗಿರುವ ಚಿರತೆ ಆಕೆಯ ತಲೆಯನ್ನು ದೇಹದಿಂದ ಕಿತ್ತು ಅಲ್ಲಿಂದ ಪರಾರಿಯಾಗಿದೆ.

    ಜಿಲ್ಲೆಯ ಕೊಟ್ಟುಗಾನಹಳ್ಳಿಯಲ್ಲಿ ಈಚೆಗೆ ಘಟನೆ ನಡೆದಿದ್ದು, 68 ವರ್ಷದ ಗಂಗಮ್ಮ ಮೃತ ಮಹಿಳೆ.

    ಶನಿವಾರ ಮುಂಜಾನೆ ಮನೆಯಿಂದ ಹೊರಗೆ ಬಯಲಿಗೆ ಬಹಿರ್ದೆಸೆಗೆ ತೆರಳಿದಾಗ ಈ ದಾಳಿ ನಡೆಸಿದೆ.

    ಆಕೆ ಒಬ್ಬರೇ ಇದ್ದುದ್ದರಿಂದ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

    ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಶವವನ್ನು ನೆಲಮಂಗಲ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ನೀಡಲಾಗುವುದು. ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಕೆಲವೇ ದಿನಗಳ ಹಿಂದಷ್ಟೇ ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ರಾತ್ರಿ ಮನೆಯೊಳಗೆ ನುಗ್ಗಿದ ಚಿರತೆ ಮೂರು ವರ್ಷದ ಮಗುವನ್ನು ಹೊತ್ತುಕೊಂಡು ಹೋಗಿತ್ತು.

    127 ಮಂದಿಗೆ ಕೋವಿಡ್ 19 ಸೋಂಕು

    ಬೆಂಗಳೂರು :  ರಾಜ್ಯದಲ್ಲಿ ಮಂಗಳವಾರ 127 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 1373 ಗೆ ತಲುಪಿದೆ.

    530 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. ಇಂದು ಸೋಂಕಿಗೆ ಮೂರು ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 40 ಕ್ಕೆ ತಲುಪಿದೆ.

    ಬಳ್ಳಾರಿ ಮೂಲದ 61 ವರ್ಷದ ವ್ಯಕ್ತಿ ಸೋಂಕಿನಿಂದ ಬೆಳಗ್ಗೆ ಮೃತಪಟ್ಟಿದ್ದಾರೆ. ವಿಜಯಪುರ ಮೂಲದ 65 ವರ್ಷದ ವ್ಯಕ್ತಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಆಸ್ಪತ್ರೆಗೆ ಬರುವ ವೇಳೆ ಸಾವನ್ನಪ್ಪಿದ್ದಾರೆ. ಅವರಿಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ

    ಬೆಂಗಳೂರಿನ 54 ವರ್ಷದ ಹೃದ್ರೋಗದಿಂದ ಬಳಲುತ್ತಿದ್ದರು. 18 ರಂದು ಮೃತಪಟ್ಟಿದ್ದರು. ವ್ಯಕ್ತಿಯ ವರದಿ ಇಂದು ಬಂದಿದ್ದು ಕೊರೊನಾ ಸೋಂಕು ಇರುವುದು ಧೃಡವಾಗಿದೆ.

    ಮಂಡ್ಯ ಜಿಲ್ಲೆಯಲ್ಲಿ 62 ಮಂದಿ, ದಾವಣಗೆರೆ 19,
    ಕಲಬುರಗಿ 11, ಶಿವಮೊಗ್ಗ 12, ಬೆಂಗಳೂರು 06, ಉಡುಪಿ 04, ಚಿಕ್ಕಮಗಳೂರು 02, ಹಾಸನ 03, ಉತ್ತರ ಕನ್ನಡ 04, ಯಾದಗಿರಿ 01, ವಿಜಯಪುರ 01, ಚಿತ್ರದುರ್ಗ 01, ಗದಗ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

    ಉದ್ಯೋಗಿಗಳಿಗೆ ಬೇಸರ ಮೂಡಿಸಿದ ಕೇಂದ್ರ ಸರ್ಕಾರದ‌ ನಿರ್ಧಾರ

    ತುಮಕೂರು

    ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲಾಕ್ ಡೌನ್ ವೇಳೆ ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂಬ ಆದೇಶ ನೀಡಿತ್ತು. ಈ ಆದೇಶವನ್ನು ಈಗ ಹಿಂಪಡೆದಿದೆ. ಇದರಿಂದ ಕಂಪನಿಗಳಿಗೆ ನೆಮ್ಮದಿ ಸಿಕ್ಕಿದೆ. ಆದರೆ ಉದ್ಯೋಗಿಗಳಿಗೆ ಬೇಸರ ಉಂಟು ಮಾಡಿದೆ.

    ಮಾರ್ಚ್ 29ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ಲಾಕ್ ಡೌನ್ ವೇಳೆ ಎಲ್ಲ ಕಂಪನಿಗಳು ಬಾಗಿಲು ಮುಚ್ಚಿದ್ದರೂ ತಿಂಗಳ ಕೊನೆಯಲ್ಲಿ ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂದು ಹೇಳಲಾಗಿತ್ತು.

    ಕರ್ನಾಟಕದ ಫಿಕಸ್ ಪ್ಯಾಕ್ಸ್ ಪ್ರೈವೇಟ್ ಲಿಮಿಟೆಡ್ ಕೇಂದ್ರದ ಈ ನಿರ್ಧಾರವನ್ನು ಪ್ರಶ್ನಿಸಿತ್ತು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪೂರ್ಣ ಸಂಬಳ ನೀಡದ ಕಂಪನಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು ಎಂದು ತೀರ್ಪು ನೀಡಿತ್ತು.

    ಖಾಸಗಿ ಬಸ್ ಮಾಲೀಕರಿಗೆ ಸಿಹಿ ಸುದ್ದಿ

    ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಸಡಿಲಿಕೆ ಮಾಡಿದೆ. ನಿಯಮ ಹಾಗು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಖಾಸಗಿ ಬಸ್ ಸಂಚಾರ ಆರಂಭಕ್ಕೂ ಕೂಡ ಅನುಮತಿ ನೀಡಿದೆ.

    ಒಂದು ಬಸ್ಸಿನಲ್ಲಿ ಕೇವಲ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅವಕಾಶವಿದೆ. ಜೊತೆಗೆ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಯ್ದು ಕೊಳ್ಳಬೇಕು ಎಂದು ಸೂಚಿಸಲಾಗಿದೆ.

    ಆದರೆ ಇಷ್ಟು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ದರೆ ತಾವು ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ತೆರಿಗೆ ವಿನಾಯಿತಿ ನೀಡಬೇಕು ಎಂದು ಸರ್ಕಾರದ ಮುಂದೆ‌ ಬಸ್ ಮಾಲೀಕರು ಬೇಡಿಕೆ ಇಟ್ಟಿದ್ದಾರೆ.

    ರಾಜ್ಯ ಸರ್ಕಾರ ಬಸ್ ಮಾಲೀಕರ ಬೇಡಿಕೆಗೆ ಸ್ಪಂದಿಸಲು ಮುಂದಾಗಿದ್ದು, ತೆರಿಗೆ ವಿನಾಯಿತಿ ಕುರಿತಂತೆ ಇನ್ನೆರಡು ದಿನಗಳಲ್ಲಿ ಪೂರಕ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

    ಅನೈತಿಕ ಸಂಬಂಧ ಯುವಕನ ಬರ್ಬರ ಕೊಲೆ

    ತುಮಕೂರು:

    ಕುಡಿದ ಅಮಲಿನಲ್ಲಿ ಅನೈತಿಕ ಸಂಬಂಧ ವಿಚಾರ ಬಹಿರಂಗಗೊಂಡು ಸ್ನೇಹಿತರ ನಡುವೆ ಜಗಳವಾಗಿ ಯುವಕನ ಹೊಟ್ಟೆಗೆ ಬರ್ಬರವಾಗಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.

    ಕೊಲೆಯಾದ ಗಿರೀಶ

    ಮಲ್ಲೇಶಪುರ ಗ್ರಾಮದ ಲೇಟ್ ಹನುಮಂತರಾಯಪ್ಪನ ಮಗ ಗಿರೀಶ್(26) ಕೊಲೆಯಾದ ಯುವಕ. ಅದೇ ಗ್ರಾಮದ ನಟೇಶ ಕೊಲೆ ಮಾಡಿರುವ ಆರೋಪಿ.

    ಬೆಂಗಳೂರು ನಗರದಲ್ಲಿ ಗಿರೀಶ ಕಾರು ಚಾಲಕನಾಗಿದ್ದ. ಕೊರೊನಾ ಲಾಕ್ ಡೌನ್ ನಿಂದ ಕಳೆದ 20ದಿನದ ಹಿಂದೆ ಸ್ವಗ್ರಾಮ ಮಲ್ಲೇಶಪುರಕ್ಕೆ ಬಂದಿದ್ದ.

    ಕೊಲೆಗೈದ ನಟೇಶ
    ಕೊಲೆ ನಡೆದ ಸ್ಥಳ

    ಸೋಮವಾರ ತಡರಾತ್ರಿ ಮಲ್ಲೇಶಪುರದ ನಂಜುಂಡಪ್ಪನ‌ ಮಗ ನಟೇಶ ಮತ್ತು ಗಿರೀಶ್ ನಡುವೆ ಕುಡಿದ ಅಮಲಿನಲ್ಲಿ ಅನೈತಿಕ ಸಂಬಂದದ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಿರೀಶನ ಕೊಲೆಯಲ್ಲಿ ಘಟನೆ ಅಂತ್ಯ ಕಂಡಿದೆ.

    ಗಿರೀಶ,ನಟೇಶನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅದನ್ನು ಕುಡಿದ ಮತ್ತಲ್ಲಿ ನಟೇಶನಿಗೆ ಹೇಳಿದ್ದರಿಂದ ಆಕ್ರೋಶಗೊಂಡ ಆತ ಚಾಕುವಿನಿಂದ ಗಿರೀಶನ ದೇಹಕ್ಕೆ 9 ಕಡೆಗಳಲ್ಲಿ ಬರ್ಬರವಾಗಿ ಚುಚ್ಚಿ‌ ಕೊಲೆ ಮಾಡಿದ್ದಾನೆ.

    ಕೊಲೆ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

    ತುಮಕೂರು ಎಸ್ಪಿ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಎಂ.ಪ್ರವೀಣ್, ಕೊರಟಗೆರೆ ಸಿಪಿಐ ಎಫ್.ಕೆ.ನಧಾಪ್, ಪಿಎಸೈ ಎಚ್.ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಏನೆಲ್ಲಾ ಕಥೆ ಇದೆ ಈ ಜೆರ್ಸಿ ನಂಬರ್ ಗಳಲ್ಲಿ

    ಜಿ ಎನ್ ಮೋಹನ್


    7 ಈಗ 18 ಕ್ಕೆ ದಾರಿ ಮಾಡಿಕೊಟ್ಟಿದೆ

    7 ಸಾಧಿಸಿದ ದಿಗ್ವಿಜಯ ಇನ್ನಿಲ್ಲದ್ದು

    18 ಸಹಾ ಇನ್ನು ಮುಂದೆ ಅಂತಹದೇ ದಿಗ್ವಿಜಯ ಸಾಧಿಸುತ್ತದೆ ಅನ್ನುವುದು ಎಲ್ಲರ ನಿರೀಕ್ಷೆ

    ಇದು ಸುಳ್ಳಾಗುವುದಿಲ್ಲ ಎನ್ನುವುದನ್ನು 18 ಈಗಾಗಲೇ ಸಾಬೀತು ಪಡಿಸಿದೆ.

    ಎದುರಿಗೆ ಎಂತ ದೇಶವಾದರೂ ಇರಲಿ ಅವರನ್ನು ಕಟ್ಟಿ ಹಾಕಿ, ಅವರನ್ನು ಮಣಿಸಿ ಜಯದ ನಗು ಚೆಲ್ಲಿದೆ

    7 ಎನ್ನುವುದು ಶಾಂತ ಸಮುದ್ರವಾದರೆ, 18 ಅಬ್ಬರ- ಆರ್ಭಟದ ಸಮುದ್ರ

    ಏನಿದು, ಏನಿದೇನಿದು??
    ಎನ್ನುತ್ತೀರಾ

    ಇದು ಸಂಖ್ಯಾಶಾಸ್ತ್ರದ ಕಾಲ. ಹಾಗಾಗಿ ನಾನೂ ಅಂಕಿ ಸಂಖ್ಯೆಯ ಬೆನ್ನಟ್ಟಿ ಹೋಗಿದ್ದೇನೆ ಎಂದು ಷರಾ ಬರೆದಿರಾ..?

    ಒಂದು ನಿಮಿಷ ತಾಳಿ

    ಒಂದು ಪುಟ್ಟ ಕ್ಲೂ ಕೊಡುತ್ತೇನೆ

    7 ಎನ್ನುವುದನ್ನು ಮಹೇಂದ್ರ ಸಿಂಗ್ ಧೋನಿ, 18 ಎನ್ನುವುದನ್ನು ವಿರಾಟ್ ಕೊಹ್ಲಿ ಎಂದು ಓದಿಕೊಳ್ಳಿ

    ಆಹಾ! ಎಲ್ಲಾ ಅರ್ಥವಾಯಿತು ಅಂದಿರಾ..?

    ಆಗಿರಬಹುದು, ಆದರೆ ಅರ್ಥ ಆಗದಿರುವ ಸಂಗತಿ ಇನ್ನೂ ಇದೆ.

    ಮಹೇಂದ್ರ ಸಿಂಗ್ ಧೋನಿಗೆ ನಾನೇಕೆ 7 ಎಂದೂ, ವಿರಾಟ್ ಕೊಹ್ಲಿಯನ್ನು 18 ಎಂದೇ ಗುರುತಿಸಿದ್ದು ಏಕೆ?

    ನೀವು ಸದಾ ಕ್ರಿಕೆಟ್ ಅನ್ನೇ ಉಸಿರಾಡಿದ್ದರೆ, ಅದೇ ನಿಮ್ಮ ದೇವರಾಗಿದ್ದರೆ, ಖಂಡಿತಾ ಉತ್ತರ ನಿಮಗೆ ನೀರು ಕುಡಿದಷ್ಟೇ ಸುಲಭ.

    7 ಧೋನಿಯ ಜೆರ್ಸಿ ಸಂಖ್ಯೆಯಾದರೆ, 18 ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ

    ಜೆರ್ಸಿ ಅಂದರೆ ಮತ್ತೆ ಇದೇನೋ ಅಂತ ಹುಬ್ಬೇರಿಸುತ್ತಾ ಕೂರುವುದು ಬೇಡ. ಸಿಂಪಲ್ಲಾಗಿ ಹೇಳಬೇಕೆಂದರೆ ಮೈದಾನದಲ್ಲಿ ಆಟಗಾರರು ಧರಿಸುವ ಮೇಲಂಗಿ ಅಷ್ಟೇ

    ಇದ್ಯಾವಾಗ ನೀವು ಈ ಸಂಖ್ಯಾ ಶಾಸ್ತ್ರಕ್ಕೆ ಜೋತು ಬಿದ್ದದ್ದು ಎನ್ನುತ್ತೀರಾ..?

    ಇದೆ ಅದಕ್ಕೆ ಕಾರಣ ಖಂಡಿತಾ ಇದೆ.

    ಆ ಒಂದು ದಿನ ನಾನು ಕಣ್ಣುಜ್ಜಿ ಎದ್ದು ಕುಳಿತಾಗ ಜಗತ್ತು ಎಂದಿನಂತೆ ಇರಲಿಲ್ಲ

    ಆ ‘ದಯಾಮಯ’ನು ಜಗತ್ತಿನಿಂದ ಎಲ್ಲಾ ಸಂಖ್ಯೆಗಳನ್ನು ಅಳಿಸಿಹಾಕಿ ಕೇವಲ 10 ಎನ್ನುವ ಸಂಖ್ಯೆಯನ್ನೇ ಉಳಿಸಿಹೋಗಿದ್ದಾನೆನೋ ಎನ್ನುವಂತೆ ಕಾಣುತ್ತಿತ್ತು.

    ಪತ್ರಿಕೆ ಪುಟ ತೆರೆದರೆ 10, ಟಿ ವಿ ಆನ್ ಮಾಡಿದರೆ 10, ಹೊರಗೆ ಕಾಲಿಟ್ಟರೆ ಗೋಡೆಗಳ ಮೇಲೆ 10, ನಾಲ್ಕು ಜನರ ಜೊತೆ ಮಾತನಾಡಿದರೆ 10, ಕಣ್ಣೀರಿಡುತ್ತಿರುವವರ ಬಳಿ ಕಾರಣ ಕೇಳಿದರೆ ಉತ್ತರ 10, ಕೈನಲ್ಲಿ ಫಲಕ ಹಿಡಿದಿದ್ದರೆ ಅದರಲ್ಲಿ ಬರೆದ ಸಂಖ್ಯೆ 10, ನೂರೆಂಟು ಜನ ಹಿಡಿದ ಬ್ಯಾನರ್ ನಲ್ಲಿ ಅದೇ ಸಂಖ್ಯೆ- 10..

    ಹೀಗೆ ಜಗತ್ತು ಅಂದು 10ಮಯವಾಗಿ ಹೋಗಿತ್ತು

    ಆಗಲೇ ನನಗೆ ಇನ್ನಿಲ್ಲದ ಕುತೂಹಲ ಮೂಡಿದ್ದು ಏನಪ್ಪಾ ಇದು 10 ಅಂತ

    ಇಡೀ ಜಗತ್ತು ಈ ದಿನ ಈ ಸಂಖ್ಯೆಯ ಬೆನ್ನು ಬಿದ್ದಿದೆಯಲ್ಲ ಅಂತ ಹುಡುಕ ಹೊರಟವನಿಗೆ ಉತ್ತರ ಸಿಗಲು ತುಂಬಾ ತಡವೇನೂ ಆಗಲಿಲ್ಲ

    ಅಂದು ಡಿಯಾಗೋ ಮರಡೋನ ಫುಟ್ ಬಾಲ್ ಗೆ ವಿದಾಯ ಹೇಳಿದ್ದ.

    ಜಗತ್ತು ಶಾಕ್ ಗೆ ಒಳಗಾಗಿತ್ತು

    ದೇವರ ಮಹಾನ್ ಸೃಷ್ಟಿ ಎನಿಸಿಹೋಗಿದ್ದ, ಮಿಂಚಿನ ಕಾಲ್ಚಳಕದ, ಗಾಳಿಯೂ ಇವನೂ ಅವಳಿ ಜವಳಿ ಇರಬೇಕು ಎಂದು ಜಗತ್ತು ಅಂದುಕೊಳ್ಳುವಷ್ಟು ವೇಗವಾಗಿ ಚಲಿಸುತ್ತಿದ್ದ ಮರಡೋನ ಇನ್ನು ನಾನು ಫುಟ್ ಬಾಲ್ ಆಡುವುದಿಲ್ಲ ಎಂದು ವಿದಾಯ ಹೇಳಿದ ದಿನ. ಆತನ ಜೆರ್ಸಿ ಆರ್ಥಾತ್ ಕ್ರೀಡಾಂಗಣದಲ್ಲಿ ಆತನ ಅಂಗಿಯ ಸಂಖ್ಯೆ 10

    ಹಾಗಾಗಿ ಎಲ್ಲೆಲ್ಲೂ ಆ 10 ನಂಬರ್ ಟಿ ಶರ್ಟ್ ತೊಟ್ಟು, ಆ 10 ನಂಬರ್ ಫಲಕ ಹಿಡಿದವರ ಜಾತ್ರೆ.

    ಇಂತಹದೇ ಇನ್ನೊಂದು ದಿನ ಬಂತು. ದೇಶದ ಮೂಲೆ ಮೂಲೆಯಲ್ಲಿ ಜಗತ್ತಿನ ಎಲ್ಲೆಡೆ ಮತ್ತೆ 10 ಆರ್ಭಟಿಸಿದ ದಿನ.

    ಜಗತ್ತಿನ ಕ್ರಿಕೆಟ್ ದೇವರು ಆಟಕ್ಕೆ ವಿದಾಯ ಹೇಳಿದ ದಿನ

    ಸುಂದರ ಆಟದ, ಅದಕ್ಕಿಂತಲೂ ಆಕರ್ಷಕ ವ್ಯಕ್ತಿತ್ವದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು

    ಅವರ ಜೆರ್ಸಿ ಸಂಖ್ಯೆಯೂ 10

    ಅಲ್ಲಿಂದ ಆರಂಭವಾಯಿತು ನೋಡಿ ನನ್ನ ಸಂಖ್ಯಾಶಾಸ್ತ್ರ.

    ಎಲ್ಲರೂ ಕ್ರಿಕೆಟ್ ಆಟದ ವರದಿ ಓದುತ್ತಿದ್ದರೆ ನಾನು ಅವರ ಜೆರ್ಸಿ ಸಂಖ್ಯೆ ಗುರುತು ಹಾಕಿಕೊಳ್ಳುತ್ತಿದ್ದೆ. ಟಿವಿಯಲ್ಲಿ ಒಲಂಪಿಕ್ಸ್ ಪಂದ್ಯಾವಳಿಗಳಲ್ಲಿ ನನ್ನ ಕಣ್ಣು ಹೋಗುತ್ತಿದ್ದದ್ದು ಆಟದ ವೈಖರಿಗಿಂತ ಟಿ ಶರ್ಟ್ ಹೊತ್ತಿದ್ದ ಸಂಖ್ಯೆಯತ್ತ…
    ಎಲ್ಲರಿಗೂ ಆಟವಾದರೆ, ನನಗೆ ಮಾತ್ರ ಅದು ಪಾಠ

    ಜೆರ್ಸಿ, ಯೂನಿಫಾರ್ಮ್, ಸ್ವೆಟರ್, ಶರ್ಟ್ ಅಂತೆಲ್ಲ ಮೊದಲು ಹಲವಾರು ರೀತಿ ಕರೆಯಲಾಗುತ್ತಿತ್ತು. ಅದಕ್ಕೂ ಒಂದೇ ಹೆಸರು ಚಾಲ್ತಿಗೆ ಬಂದರೆ ಒಳ್ಳೆಯದಲ್ಲವಾ ಅಂತ ಯೋಚಿಸಿ ಜಗತ್ತಿನ ಎಲ್ಲಾ ಕ್ರೀಡೆಗಳೂ ಈಗ ಬಹುತೇಕ ಅಲಿಖಿತವಾಗಿ ಒಪ್ಪಿಕೊಂಡಿರುವುದು ಜೆರ್ಸಿ ಎನ್ನುವ ಹೆಸರನ್ನು.

    ತಂಡವಾಗಿ ಆಡುವ ಆಟಗಳಲ್ಲಿ ನಂಬರ್ ಎನ್ನುವುದು ಈಗ ತೀರಾ ತೀರಾ ಪ್ರಮುಖವಾಗಿ ಹೋಗಿದೆ. ಅದಕ್ಕೆ ಇಂತಹದ್ದು ಅನ್ನುವುದೊಂದೇ ಅಲ್ಲ ಹಲವಾರು ಕಾರಣಗಳು. ಟಿ ವಿ ಯಲ್ಲಿ ನೋಡುವಾಗ ಗುರುತು ಹಿಡಿಯಲು ಈ ನಂಬರ್ ಎಷ್ಟು ಸುಲಭ ಉಪಾಯ ನೋಡಿ.

    ಹಾಗಾಗಿಯೇ ಯಾವಾಗ ಕ್ರಿಕೆಟ್, ಫುಟಬಾಲ್, ಕಬಡ್ಡಿ ಹೀಗೆ ತಂಡದ ಆಟಗಳು ಟಿ ವಿ ಯುಗಕ್ಕೆ ಕಾಲಿಟ್ಟವೋ ಅದಕ್ಕೆ ತಕ್ಕಂತೆಯೇ ಹೊಸ ಹೊಸ ಬದಲಾವಣೆಯೂ ಆಗಿದೆ. ಅದರಲ್ಲಿ ಈ ನಂಬರ್ ನಮೂದಿಸುವ ಕ್ರಮವೂ ಒಂದು. ಟೆಲಿವಿಷನ್ ಒಂದೇ ಕಾರಣ ಎಂದುಕೊಂಡುಬಿಡಬೇಡಿ ಒಂದು ತಂಡದಲ್ಲಿ ಆಟಗಾರರು, ಕೋಚ್ ಗಳು, ಸ್ಕೋರ್ ಬರೆದುಕೊಳ್ಳುವವರು, ಅಧಿಕಾರಿಗಳು ಹೀಗೆ ಹಲವು ವರ್ಗದ ಗುರುತು ಹಿಡಿಯಲೂ ಸಹಾ ಇದು ಒಳ್ಳೆಯದೇ.

    ಅಷ್ಟೇನಾ ಅನ್ನುತ್ತೀರಾ, ಅಷ್ಟೇ ಅಲ್ಲ.. ಈ ಸಂಖ್ಯಾ ಶಾಸ್ತ್ರದ ಹಿಂದಿನ ಕಥೆ.

    ಸಂಖ್ಯೆ ಕೊಡಬೇಕು ಅಂತೇನೋ ಆಯಿತು. ಆದರೆ ಈ ಸಂಖ್ಯೆಯನ್ನು ಎಲ್ಲಿ ಬರೆಯುವುದು.. ಜೆರ್ಸಿಯ ಹಿಂಬದಿಯಲ್ಲೋ, ಮುಂಬದಿಯಲ್ಲೋ, ತೋಳಿನ ಮೇಲೋ, ಅಥವಾ ಆಟಗಾರರ ಶಾರ್ಟ್ಸ್ ಮೇಲೋ, ಅಥವಾ ಅವರು ಬಳಸುವ ಹೆಡ್ ಗೇರ್ ಗಳ ಮೇಲೋ .. ಹೀಗೆ ಸಮಸ್ಯೆ ಸಣ್ಣದೇನಲ್ಲಾ.

    ಅಷ್ಟೇ ಅಲ್ಲ.. ಸಂಖ್ಯೆ ಮಾತ್ರ ಬರೆಯಬೇಕೋ ಅಥವಾ ಅದರ ಜೊತೆಗೆ ಹೆಸರೂ ಬರೆಯಬೇಕೋ . ಕೊನೆಗೆ ಒಂದು ಕಾಮನ್ ಆದ ಸೂತ್ರವಂತೂ ಇದೆ ಜೆರ್ಸಿಯ ಹಿಂಬಾಗದಲ್ಲಿ ಸಂಖ್ಯೆ ಅದರ ಕೆಳಗೆ ಹೆಸರಲ್ಲ, ಸರ್ ನೇಮ್ ಬರೆಯಬೇಕು ಅಂತ

    ಒಮ್ಮೆ ನಿಮ್ಮ ಫೇವರೈಟ್ ಆಟಗಾರರ ಜೆರ್ಸಿಯನ್ನ ಮನಸಿನಲ್ಲೇ ಒಂದು ಸುತ್ತು ಹಾಕಿ ಬನ್ನಿ
    ಕರೆಕ್ಟ್ ಅಲ್ಲವಾ..

    ಒಂದು ನಿಮಿಷ.. ನಿಮ್ಮ ಫೇವರೈಟ್ ಆಟಗಾರರ ಜೆರ್ಸಿ ನಂಬರ್ ಗೊತ್ತಾಯ್ತು ಅಂತ ಖುಷಿ ಪಡೋಕೆ ಮುಂಚೆ ನಾನು ಇನ್ನೂ ಒಂದು ಕ್ವಿಜ್ ಕೇಳ್ತೀನಿ ಆ ನಂಬರ್ ರೇ ಯಾಕೆ ಅವರಿಗೆ ಕೊಟ್ಟಿದ್ದಾರೆ. ಹೇಳಿ ನೋಡೋಣ.

    ಅದನ್ನ ಊಹೆ ಮಾಡ್ತಾ ಇರಿ ಅಷ್ಟೊತ್ತಿಗೆ ನಾನು ಈ ನಂಬರ್ ಕಥೆ ಹೇಗೆ ಶುರು ಆಯ್ತಪ್ಪಾ ಅನಂತ ಒಂದು ಝಲಕ್ ಕೊಟ್ಟುಬಿಡ್ತೀನಿ

    ಫುಟ್ ಬಾಲ್ ನ ಚರಿತ್ರೆ ಹಾಗೂ ಅಂಕಿಸಂಖ್ಯೆ ಗಾಗಿಯೇ ಇರುವ ಅಂತಾರಾಷ್ಟ್ರೀಯ ಮಂಡಳಿ ಪ್ರಕಾರ ಫುಟ್ ಬಾಲ್ ನಲ್ಲಿ ಈ ಜೆರ್ಸಿ ನಂಬರ್ ಆರಂಭಿಸುವ ಪರಿಪಾಠ ಶುರು ಆದದ್ದು 1911 ರಲ್ಲಿ. ಸಿಡ್ನಿಯಲ್ಲಿ ಜರುಗಿದ ಆಸ್ಟ್ರೇಲಿಯನ್ ರೂಲ್ಸ್ ಫುಟ್ ಬಾಲ್ ನಲ್ಲಿ. ಆದರೆ ಇದೇ ಸರಿ ಅಂತೇನೂ ಇಲ್ಲ. ಯಾಕೆಂದರೆ 1903 ರಲ್ಲಿ ಸಿಕ್ಕಿರುವ ಫುಟ್ ಬಾಲ್ ಫೋಟೋಗಳಲ್ಲೂ ನಂಬರ್ ಇದೆ. ಕ್ರಿಕೆಟ್ ನಲ್ಲಿ 1995-96 ರಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಿದ ವರ್ಲ್ಡ್ ಕಪ್ ಸೀರಿಸ್ ನಲ್ಲಿ ನಂಬರ್ ಕೊಡುವ ಪದ್ಧತಿ ಆರಂಭ ಆಯ್ತು. ವರ್ಲ್ಡ್ ಕಪ್ ನಲ್ಲಿ ಇದು ಜಾರಿಗೆ ಬಂದಿದ್ದು 1999 ರಲ್ಲಿ.

    ಅದೇ ರೀತಿ ಯಾವುದೇ ಟೀಮ್ ಆಟಗಳಿರಲಿ ಆ ಎಲ್ಲಕ್ಕೂ ಒಂದೊಂದು ಕಾಲದಲ್ಲಿ ಈ ಜೆರ್ಸಿ ಸಂಖ್ಯೆ ಮೆಲ್ಲನೆ ಹೆಜ್ಜೆ ಹಾಕಿ ಒಳಗಡೆ ಬಂದಿದೆ. ಈ ಸಂಖ್ಯೆ ಒಂದೊಂದು ಆಟಕ್ಕೆ ಒಂದೊಂದು ಥರ, ಒಂದೊಂದು ದೇಶಕ್ಕೆ ಒಂದು ಥರ, ಒಂದೇ ಆಟದಲ್ಲಿ ವಿವಿಧ ಪ್ರಾಕಾರಕ್ಕೆ ವಿವಿಧ ಹೀಗೆ..

    ಈ ನಂಬರ್ ಕೊಡೋದು ಹೇಗಪ್ಪಾ ಅಂತ ತಲೆ ಕೆಡಿಸಿಕೊಂಡಿದ್ದ ಕಥೆಗಳೂ ಇದೆ. ಆಗ ಫುಟ್ ಬಾಲ್ ತಂಡಗಳು ಮೊದಲು ಇದಕ್ಕೆ ಪರಿಹಾರ ಹುಡುಕಿಕೊಂಡು ಬಿಟ್ಟವು. ಅವರ ಪ್ರಕಾರ ಗೋಲ್ ಕೀಪರ್ ಗೆ 1 ನೇ ನಂಬರ್ ಮೀಸಲು ಉಳಿದ ನಂಬರ್ ಗಳಲ್ಲಿ ಮೊದಲು ಡಿಫೆಂಡರ್ ಗಳಿಗೆ, ನಂತರ ಮಿಡ್ ಪ್ಲೇಯರ್ ಗಳಿಗೆ, ಆಮೇಲೆ ಫಾರ್ವರ್ಡ್ ಗಳಿಗೆ.

    ಆಮೇಲೆ ಅದೂ ಬದಲಾಗಿದೆ. ಫುಟ್ ಬಾಲ್ ಇರಲಿ, ಕ್ರಿಕೆಟ್ ಇರಲಿ ಇವತ್ತು ನೀವು 00 ಯಿಂದ 99 ರವರೆಗೂ ಇರೋ ಜೆರ್ಸಿನ ನೋಡಬಹುದು ಅಂದಹಾಗೆ 99 ಯಾರ ಜೆರ್ಸಿ ನಂಬರ್ ಹೇಳಿ, ನಮ್ಮ ಕ್ರಿಕೆಟ್ ಟೀಮ್ ನಲ್ಲಿ. ‘ದಾದಾ’ದು. ಸೌರವ್ ಗಂಗೂಲಿ 99 ನಂಬರ್ ಜೊತೆಗೆ ಆಡಿದ್ದು.

    ಈ 10 ನಂಬರ್ ಇದೆಯಲ್ಲ ಅದಕ್ಕೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ..

    ಯಾಕೆ ಅಂದ್ರೆ ಫುಟ್ ಬಾಲ್ ನಲ್ಲಿ ಪೀಲೆ, ಮರಡೋನ ಈ ನಂಬರ್ ಜೊತೆ ಆಟ ಆಡಿದ್ರು. ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್

    ಹಾಗಾಗಿ ಈ 10 ಸಂಖ್ಯೆ ಸಹಾ ದೇವರ ಸ್ಥಾನ ಪಡೆದುಕೊಂಡು ಬಿಡ್ತು.

    ಎಲ್ಲರಿಗೂ ದೇವರು ಸಿಗಲ್ವಲ್ಲ ಹಾಗಾಗಿ ಈ 10 ಯಾರು ಬೇಕಾದ್ರೂ ತಗೊಳ್ಳಬಹುದಾ ಅನ್ನೋ ಚರ್ಚೆ ಶುರುವಾಗೋಯ್ತು. 10 ಹಾಕಿದೋರೆಲ್ಲಾ ದೇವರು ಆಗೋದಿಕ್ಕೆ ಸಾಧ್ಯ ಇಲ್ವಲ್ಲಾ.. ಅಥವಾ ಯಾರು ಬೇಕಾದರೂ ದೇವರ ವೇಷದಲ್ಲಿ ಬರೋದಿಕ್ಕೆ ಆಗೋದಿಲ್ವಲ್ಲ..

    ಏನು ಮಾಡೋದು 10 ಅನ್ನೋದು ಸಂಖ್ಯೆ ಮಾತ್ರ ಅಲ್ಲ ಅದು ಉನ್ಮಾದ, ಪ್ರೀತಿ, ಹುಚ್ಚಿನ ಪರಮ ಅವತಾರ ಹಾಗಾಗಿ ಕ್ರೀಡಾ ರಂಗ ಒಂದು ಯೋಚನೆ ಮಾಡ್ತು ಕೆಲವು ನಂಬರ್ ಗಳನ್ನ ಶಾಶ್ವತವಾಗಿ ದೇವರ ಸ್ಥಾನಕ್ಕೆ ಏರಿಸಿ ಸುಮ್ಮನಾಗಿಬಿಡೋದು ಅಂತ. ಅಂದ್ರೆ ಅದನ್ನ ಇನ್ನು ಮುಂದೆ ಯಾರೂ ಬಳಸೋ ಹಾಗಿಲ್ಲ. ಅವರ ಜೊತೆ ಅವರು ಬಳಸುತ್ತಿದ್ದ ನಂಬರ್ ಗೂ ನಿವೃತ್ತಿ ಕೊಟ್ಟು ಬಿಡೋದು ಅಂತ.

    ಇನ್ನೂ ಕೆಲವು ಯೋಚನೆ ಬಂತು ಒಬ್ಬ ಆಟಗಾರ ತಾನು ಬಳಸುತ್ತಿದ್ದ ಜೆರ್ಸಿ ಸಂಖ್ಯೆಯನ್ನ ತಾನು ನಿವೃತ್ತಿ ಹೊಂದುವಾಗ ಅವನಿಗೆ ಬೇಕಾದವರಿಗೆ ಕೊಡಬಹುದು ಅಂತ. ಇನ್ನೂ ಒಂದಷ್ಟು ಕ್ರಮ ಬಂತು ಅಪ್ಪ, ಮಗ ಇಬ್ಬರೂ ಅದೇ ಕ್ರೀಡೆಯಲ್ಲಿದ್ದರೆ ಅಪ್ಪನ ನಂತರ ಮಗ ಬೇಕಾದ್ರೆ ಅದನ್ನ ಬಳಸಬಹುದು ಅಂತ.

    ಅಮಿತಾಬ್ ಬಚ್ಚನ್ ದೊಡ್ಡ ಹೆಸರು ಮಾಡಿಬಿಟ್ಟರು, ಸಹಜವಾಗೇ ಅಭಿಷೇಕ್ ಮೇಲೂ ಜನ ಅದೇ ನಿರೀಕ್ಷೆ ಮಾಡ್ತಾರೆ. ಆತ ಸೂಪರ್ ಡೂಪರ್ ಪರ್ಫಾರ್ಮೆನ್ಸ್ ಕೊಡಬೇಕು ಅಂತ

    ಅಷ್ಟು ಸುಲಭಾನಾ.. ದೊಡ್ಡವರ ಷೂ ಮಕ್ಕಳಿಗೂ ಆಗಿಬರೋದು?. ಹಾಗಾಗಿ ಬೇಕಾದಷ್ಟು ಮಕ್ಕಳು ಅಪ್ಪನ ಆ ಸಂಖ್ಯೆಯ ಭಾರವೇ ನಮಗೆ ಬೇಡ ಅಂತ ಅದನ್ನು ತಗೊಳ್ಳದೆ ದೂರ ಉಳಿದ ಪ್ರಸಂಗ ಸಹಾ ಉಂಟು. ಇನ್ನು ಕೆಲವರು ದಿಢೀರ್ ಜನಪ್ರಿಯ ಆಗಿಬಿಡ್ತೀವಿ ಅನ್ನೋ ಆಸೆಗೆ ತಗೊಂಡು ಸುಸ್ತು ಹೊಡೆದದ್ದೂ ಉಂಟು.

    ಒಂದು ನೆನಪಿರಲಿ ಸುಮ್ನೆ ಜೆರ್ಸಿ ಹೊಲಿಸಿಕೊಂಡು ಮೈದಾನಕ್ಕೆ ಇಳಿದುಬಿಡೋದಿಕ್ಕೆ ಆಗೋದಿಲ್ಲ.ಆಟಗಾರರ ಯೂನಿಫಾರ್ಮ್ ಹೇಗಿರಬೇಕು ಅನ್ನೋದಕ್ಕೆ 92 ಪುಟದ ಸ್ಟೈಲ್ ಗೈಡ್ ಇದೆ.

    ಇರ್ಲಿಬಿಡಿ, ಈಗ ನಮ್ಮ ಟೀಮ್ ಕಡೆ ಬರೋಣ..

    ‘ಮಿಸ್ಟರ್ ಕೂಲ್’ ಯಾಕೆ 7 ನೇ ನಂಬರ್ ಆನ್ ಆಯ್ಕೆ ಮಾಡಿಕೊಂಡರು?. ಉತ್ತರ ಸಿಂಪಲ್ ಅವರ ಬರ್ತ್ ಡೇ ಜುಲೈ 7 . ಯುವರಾಜ್ ಸಿಂಗ್ ಡಿಟ್ಟೋ . ಅವರ ಬರ್ತ್ ಡೇ 12 ರಂದು. ಜೆರ್ಸಿ ನಂಬರ್ ಸಹಾ 12. ಗೌತಮ್ ಗಂಭೀರ್ ಉತ್ತರಾನೂ ಡಿಟ್ಟೋ ಆದ್ರೆ ಸ್ವಲ್ಪ ಟ್ವಿಸ್ಟ್. ಗೌತಿ ಹುಟ್ಟಿದ ಹಬ್ಬ 14 ಹಾಗಾಗಿ ಎರಡೂ ಸಂಖ್ಯೆ ಕೂಡಿಸಿ ಜೆರ್ಸಿ ನಂಬರ್ 5. ರಾಹುಲ್ ದ್ರಾವಿಡ್ ಉತ್ತರ ಮಾತ್ರ ಬೆಸ್ಟ್. ಜಗತ್ತಿನ ಹೆಂಗಳೆಯರೆಲ್ಲಾ ಫಿದಾ ಆಗಬೇಕು. ಯಾಕೆಂದರೆ ಅವರ ಜೆರ್ಸಿ ನಂಬರ್ ಆಯ್ಕೆ ಮಾಡಿದ್ದು ತಮ್ಮ ಬರ್ತ್ ಡೇಟ್ ಗಾಗಿ ಅಲ್ಲ ತನ್ನ ಹೆಂಡತಿಯ ಬರ್ತ್ ಡೇಟ್ ಮೇಲೆ -19

    ಹಾಗಾದ್ರೆ ‘ಮಿಸ್ಟರ್ ಅಬ್ಬರ’ ವಿರಾಟ್ ಕೊಹ್ಲಿ 18 ಯಾಕೆ ಆಯ್ಕೆ ಮಾಡಿಕೊಂಡಿದ್ದು. ಇದಕ್ಕೆ ಸಿಂಪಲ್ಲಾಗಿ ಏನೇನೋ ಉತ್ತರ ಇದೆ. ಆದರೆ ಹಾರ್ಟ್ ಟಚಿಂಗ್ ಏನು ಗೊತ್ತಾ 18 ನೇ ತಾರೀಕು ಅವರ ತಂದೆ ಇಲ್ಲವಾದರು. ಆಗ ವಿರಾಟ್ ವಯಸ್ಸು 18. ಆ ನೆನಪು ಕಾಡಿಯೇ ಅವರ ಜೆರ್ಸಿ ನಂಬರ್ 18.

    ವೀರೇಂದ್ರ ಸೆಹ್ವಾಗ್ ನಂಬರ್ ಮಾತ್ರ ವಿಚಿತ್ರ 00. ಮೊದಲು ಇವರ ಜೆರ್ಸಿ ನಂಬರ್ 88 ಇತ್ತು. ಆದರೆ ಜ್ಯೋತಿಷಿ ಹೇಳಿದ್ರು. ಬಿಲ್ಕುಲ್ ಲಕ್ ಇಲ್ಲ ಅಂತ ಕೊನೆಗೆ 00 ಗೆ ಸೆಟ್ಲ್ ಆದರು. ಸುರೇಶ್ ರೈನಾ ದು ಇನ್ನೊಂದು ಥರಾ ಮಜಾ ಕಥೆ. ಅವರಿಗೆ 13 ನಂಬರ್ ಬಂತು. ಪಾಪ ಆ ಸಂಖ್ಯೆ ಕಡೆ ಯಾರೂ ಮುಖ ತಿರುವು ನೋಡೋಲ್ಲ. ಹಾಗಾಗಿ ರೈನಾ ಫೀಲ್ಡ್ ಗೆ ಇಳಿದಾಗ ಒಂದರ ಮೇಲೆ ಟೇಪ್ ಅಂಟಿಸ್ಕೊಂಡು ಅದನ್ನ 3 ಅನ್ನೋ ಹಾಗೆ ಕಾಣೋ ಥರಾ ಮಾಡಿಕೊಳ್ತಾರೆ.

    ಜಹೀರ್ ಖಾನ್ ಗೆ 7 ಬೇಕಿತ್ತು. ಅದು ಅವರ ಲಕಿ ನಂಬರ್ ಅಂತೆ. ಆದರೆ ಕ್ಯಾಪ್ಟನ್ ನಂಬರ್ಸಹಾ 7. ನನಗೆ ಬೇಕು ಕೊಡು ಅಂತ ಕೇಳೋಕೆ ಆಗುತ್ತಾ. ಒಂದು ಐಡಿಯಾ ಮಾಡಿದ್ರು 34 ತಗೊಂಡ್ರು ಎರಡೂ ಸಂಖ್ಯೆ ಸೇರಿದ್ರೆ 7 ಆಲ್ವಾ. ರವೀಂದ್ರ ಜಡೇಜಾ ಹುಟ್ಟಿದ್ದು 6-12-1988. ಈ ಎಲ್ಲಾ ಸಂಖ್ಯೆ ಸೇರಿಸಿದರೆ 44. ಹಾಗಾಗಿ ಈ ಎರಡೂ ಸಂಖ್ಯೆ ಸೇರಿಸಿ 8 ಮಾಡಿಕೊಂಡ್ರು.

    ಹೀಗೆ ನನ್ನ ಸಂಖ್ಯಾ ಶಾಸ್ತ್ರ ಮುಂದುವರೆದಿದೆ.

    ನೀವು ಹೇಳಿದ್ರಲ್ಲಿ ಇದು ಕರೆಕ್ಟು, ಅದಲ್ಲ ಅಂತ ನೀವು ಹೇಳೋ ಹಾಗೇ ಇಲ್ಲ. ಯಾಕಂದ್ರೆ ನಾನು ಫುಟ್ ಬಾಲೂ ಆಡಲ್ಲ, ಕ್ರಿಕೆಟ್ ಸಹಾ ಆಡಲ್ಲ. ಬರೀ ಜೆರ್ಸಿ ನೋಡ್ತೀನಿ, ನಂಬರ್ ಬರ್ಕೊಳ್ತೀನಿ, ಗೂಗಲ್ ಮಾಡ್ತೀನಿ, ಸಿಕ್ಕ ಕಥೆ ನಿಮ್ಮ ಮುಂದೆ ಬಿಚ್ಚಿಡ್ತೀನಿ..