Friday, May 8, 2026
Google search engine
Home Blog Page 226

ಗಂಡನಿಗೆ ಕೆಲಸದ ಒತ್ತಡ: ಕಾನ್ ಸ್ಟೆಬಲ್ ಪತ್ನಿ ಆತ್ಮಹತ್ಯೆ

ಚಾಮರಾಜನಗರ : ಪೊಲೀಸ್ ಕಾನ್ ಸ್ಟೆಬಲ್ ಒಬ್ನರ ಪತ್ನಿ ನೇಣು ಬಿಗಿದುಕೊಂಡು ಸಾವಿಗೀಡಾದ ಘಟನೆ ಗಡಿನಾಡು ಚಾಮರಾಜನಗರದಲ್ಲಿ ನಡೆದಿದೆ.

ನಾಗರತ್ನ(೧೯) ಆತ್ಮಹತ್ಯೆ ಮಾಡಿಕೊಂಡವರು. ಗಂಡ ಪರುಷರಾಮ್.
ಪರಶುರಾಮ್ ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಂಪತಿ ಸಂಬಂಧಿಕರೊಬ್ಬರ ಮದುವೆಗೆ ಹೋಗಬೇಕಾಗಿತ್ತು. ರಜೆ ನೀಡದ ಕಾರಣ ಪರುಷರಾಮ್ ಮದುವೆಗೆ ಹೋಗಲು ನಿರಾಕರಿಸಿದ್ದರು.

ಇದೇ ಕಾರಣಕ್ಕಾಗಿ ಗಂಡ ಹೆಂಡತಿ ನಡುವೆ ಜಗಳ ನಡೆದಿತ್ತು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಕೊಳ್ಳೇಗಾಲದ ಪೋಲಿಸ್ ಕ್ವಾರ್ಟರ್ಸ್ ನಲ್ಲಿ ಘಟನೆ ನಡೆದಿದ್ದು,ಸ್ಥಳಕ್ಕೆ ಎಸ್.ಪಿ, ಡಿಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾವು ಯಾರ ಜಾತಿಯರನ್ನೆಲ್ಲ ಮುಟ್ಟಬೇಕು …?

0

ಶಿಲ್ಪಾ ಎಂ.ತಾರೀಕಟ್ಟೆ


ಜಾತಿ ತಾರತಮ್ಯ ಮತ್ತು ಜಾತಿ ವ್ಯವಸ್ಥೆಯ ಮೂಢನಂಬಿಕೆಗಳು ಬದಲಾಗಬೇಕಿರುವುದು ಮತ್ತು ಸುಧಾರಿಸಬೇಕಾಗಿರುವುದು ಶಿಕ್ಷಣದಿಂದ.

ಜಾತಿ ವ್ಯವಸ್ಥೆ ಮತ್ತು ತಾರತಮ್ಯದಿಂದ ಮಕ್ಕಳ ಮೇಲೆ ಅದ್ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಯಾವ ಶಾಲೆಯಲ್ಲಾದರೂ ಒಂದು ಗಂಟೆ ಸೀಮಿತ ಅವಧಿಯನ್ನು ಮೀಸಲಾಗಿಸಿ ಅರಿವು ಮೂಡಿಸುತಿದ್ದಾರೆಯೆ ?

ಸಮಾಜ ಶಾಸ್ತ್ರ ದಲ್ಲಿ ಹೇಳಿದ್ದಾರೆ, ಜಾತಿ ವ್ಯವಸ್ಥೆ ಇತ್ತು, ಮೀಸಲಾತಿಗಳಿವೆ. ಇದನ್ನು ಹೊಗಲಾಡಿಸಲೂ ಆಗ ಪ್ರಯತ್ನ ಪಟ್ಟರು. ಇಷ್ಟು ಹೇಳಿ ಅದಕ್ಕೂಂದಿಷ್ಟು ವಿವರಣೆ ಬರೆಯಿಸಿ ಅಂಕಗಳಿಗೆ ಮೀಸಲು ಮಾಡುತ್ತಿದ್ದಾರೆ ಜಾತಿ ವ್ಯವಸ್ಥೆಯನ್ನು.

ಅಂಕಗಳಿಗೆ ಮೀಸಲಾಗದೆ ಇದು ಉತ್ತಮ ಸಮಾಜವಾಗಲೂ ಪರಿಣಾಮಕಾರಿಯಾಗಬೇಕಾಗಿದೆ.

ಪ್ರಾಥಮಿಕ ಶಾಲೆಗಳಿಂದ, ಕಾಲೇಜ್ ಮಟ್ಟದವರೆಗೂ ಜಾತಿ ವಿಷವನ್ನು ಗೊತ್ತಿದ್ದೂ ಗೊತ್ತಿಲ್ಲದೆಯೂ ಹೇಗೆಲ್ಲ ಬಿತ್ತುತ್ತಿದ್ದಾರೆ ಎಂದರೆ.

ಪ್ರಾಥಮಿಕ ಶಾಲೆಯ ಹಂತದಲ್ಲಿರುವಾಗ ಜಾತಿಯ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ನಮಗೆ ಮನೆಯಲ್ಲಿ ಕಲಿಸುತ್ತ ಹೋಗುತ್ತಾರೆ. ನಾವು ಈ ಜಾತಿ ಬೇರೆ ಜಾತಿಗಳು ಯಾವವು ಯಾರನೆಲ್ಲ ಮುಟ್ಟಬೇಕು ಮುಟ್ಟಬಾರದು ಊಟದ ಬಾಕ್ಸ್ ಮುಟ್ಟಿಸ ಬಾರದು, ಊಟ ಹಂಚಿ ತಿನ್ನಬಾರದು.

ಹಿರಿಯರ ತಪ್ಪು ಅನ್ನಲೂ ಆಗುವುದಿಲ್ಲ. ಅವರಿಗೂ ನಮಗೆ ಸಿಕ್ಕಿರುವ ಶಿಕ್ಷಣವೆ ಸಿಕ್ಕಿರುವುದು. ಶಾಲೆಯ ಶಿಕ್ಷಕರು ಕೂಡ ನೀನು ಯಾವ ಜಾತಿಗೆ ಸೇರಿದವರು ಎಂದು ಕೇಳುವ ಧ್ಯೆಯ೯ವನ್ನು ಮಾಡುತ್ತಾರೆ .

ಒಮ್ಮೆ ನಮ್ಮ ಶಾಲೆಯಿಂದ ಮಕ್ಕಳಿಗಾಗಿ ಸಿನಿಮಾ ವೀಕ್ಷಿಸಲು ಶಿಕ್ಷಕರು ಕರೆದುಕೊಂಡು ಹೋಗಿದ್ದರು. ಅದೇ ನಗರದಲ್ಲಿ ಅವರ ಮನೆ ಇದ್ದ ಕಾರಣ ಕೆಲವು ಮಕ್ಕಳನ್ನು ಮನೆಗೆ ಕರೆದರು, ನಾವು ಸಹಜವಾಗಿ ಖುಷಿ ಪಟ್ಟೆವು. ಅಷ್ಟರಲ್ಲಿ ನಮ್ಮ ಜೊತೆಯ ಇದ್ದ ಅಸ್ಪ್ರಶ್ಯ ಜಾತಿಗೆ ಸೇರಿದ ಮಕ್ಕಳು ನಾವು ಬರುತ್ತೀವಿ ಎನ್ನುತ್ತಿದ್ದಂತೆ ಅಷ್ಟಕ್ಕೆ ಸುಮ್ಮನೆ ನಿಂತ ನಮ್ಮ ಮೇಡಂ ಮನೆಗೆ ಕರೆದು ಕೊಂಡು ಹೋಗಲಿಲ್ಲ. ಮೇಡಂಗೆ ಗೊತ್ತಿಲ್ಲದೆ ಮಕ್ಕಳಲ್ಲಿ ಜಾತಿ ತಾರತಮ್ಯವನ್ನು ಬಿತ್ತಿದರು.

ನಾವು ಫ್ರೌಡಶಾಲೆ ಹಂತಕ್ಕೆ ಬಂದಾಗ ನನ್ನ ಅಸ್ಪ್ರಶ್ಯ ಜಾತಿಯ ಗೆಳತಿಯರಿಗೆಲ್ಲ ಕೊನೆ ಬೆಂಚೆ ಖಾಯಂ ಮಾಡಿಕೊಂಡಿದ್ದರು. ಕಾರಣ ಚಿಕ್ಕ ವಯ್ಯಸ್ಸಿಂದಾದ ತಾರತಮ್ಯಗಳು ಕೀಳರಿಮೆ ಮೂಡಿಸಿದ್ದವು .

ಯಾವುದೇ ಆಟದ ಅಂಗಳದಲ್ಲೂ ಅವರನ್ನು ಹುಡುಕಬೇಕಿತ್ತು. ಯಾವ ಆಟದಲ್ಲೂ ಅವರು ಇರುತ್ತಿರಲಿಲ್ಲ. ಯಾವುದೇ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲೂ ಕೂಡ. ಅವಕಾಶದ ಕೊರತೆಯೂ ಅಥವಾ ಆಸಕ್ತಿಯ ಕೊರತೆಯೋ .ಆದರೆ ಶಿಕ್ಷಣ ಕಲಿಸಬೇಕಾಗಿತ್ತು ಮತ್ತು ಕಲ್ಪಿಸಬೇಕಾಗಿತ್ತು ಅವಕಾಶವನ್ನು ಆಸಕ್ತಿ ಯನ್ನೂ .

ನನ್ನ ಗೆಳತಿ ಯಾರೋ ಅವಳ ಬಾಕ್ಸ್ ಮುಟ್ಟಿದರೆಂದು ಅಳುತ್ತಿದ್ದಳು. ಮನೆಗೆ ಬಾಕ್ಸ್ ತೆಗೆದುಕೊಂಡು ಆಗುವುದಿಲ್ಲವೆಂದು. ಅಯ್ಯೋ, ಮನೇಲಿ ಹೇಳಬೇಡ ಅಷ್ಟೇ ಎಂದು ಸಮಾಧಾನಿಸಿದೆವು. ಆದರೆ ಅವಳು ಇಲ್ಲ, ನಮ್ಮ ಮನೆ ದೇವರಿಗೂ ಇದು ಆಗಲ್ಲವೆಂದು‌ ಹೇಳಿದಾಗ ನಾವು ಹೆದರಿದೆವು. ಕಾರಣ, ಅವಳಿಗೂ ನಮಗೂ ಸಮಾನ ಶಿಕ್ಷಣವೆ ಆಗಿತ್ತು.

ಇಂದು ನಾನು ಪ್ರಶ್ನೆ ಹಾಕಿಕೊಳ್ಳುತ್ತೇನೆ. ಇಂದು ಅವಳ ಮಕ್ಕಳಿಗೆ ಅವಳು ಎಂತಹ ಶಿಕ್ಷಣ ಕೊಟ್ಟಿರಬಹುದೆಂದು.

ಶಾಲೆಯಲ್ಲಿ ಸಮಾನತೆಯ ವಾತಾವರಣದ ಅನುವನ್ನು ಮಾಡಿಕೊಡಬಹುದಿತ್ತು. ಕೊನೆಯ ಬೆಂಚ್ ಅನ್ನು ಅವರಿಗೆ ಖಾಯಂಗೊಳಿಸದೆ ಎಲ್ಲರೊಟ್ಟಿಗೆ ಬೆರೆಯುವ ಅವಕಾಶ ಮಾಡಬಹುದಿತ್ತು. ಮತ್ತು ಸ್ಪರ್ಧೆ ಗಳ ಲ್ಲಿ ಸಮಾನ ಅವಕಾಶ ಕೊಟ್ಟು ಆತ್ಮವಿಶ್ವಾಸವನ್ನು ತುಂಬಬಹುದಿತ್ತು .ಮೇಡಂ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೊಗಬಹುದಿತ್ತು .

ಹೇಳುತ್ತಾರೆ ಈಗ ಸ್ವಲ್ಪ ಸುಧಾರಿಸಿದೆ ಎಂದು. ನಾನು ನಂಬುವುದಿಲ್ಲ. ಜಾತಿಗಳು ಆಗ ಕೇಳಿದರೆ ಗೊತ್ತಾಗುತಿತ್ತು. ಈಗ ಜಾತಿಗಳೆಲ್ಲ ಬ್ಯೆಕ್, ಕಾರ್,ಮನೆ ಹೆಸರುಗಳ ಮುಂದೆ ನಿಂತಿವೆ.

ದೇವಸ್ಥಾನ ದ ಮುಂದೆ ನಿಲ್ಲಬೇಕಾದ ಹೆಣ್ಣುಮಕ್ಕಳ ಕ್ಯೂ
ಗ್ರಂಥಾಲಯದ ಮುಂದೆ ನಿಂತರೆ ದೇಶ ಉದ್ದಾರ ಆಗುತ್ತದೆ; ಇದು ಅಂಬೇಡ್ಕರ್ ಹೇಳಿರುವ ಮಾತು. ಇದನ್ನು ನಾನು ಓದಿದ ಯಾವ ಶಾಲೆಯಲ್ಲೂ ಇದರ ವಿವರಣೆ ಸಿಗಲಿಲ್ಲ.

ಇಂತಹ ವಿವರಣೆ ಮತ್ತು ಇಂತಹ ಶಿಕ್ಷಣಗಳು ಸಿಗಬೇಕಿದೆ. ದೇವಸ್ಥಾನದಲ್ಲೂ ಜಾತಿಯ ತಾರತಮ್ಯ ಗಳು ಇವೆ. ಗ್ರಂಥಾಲಯಗಳಲ್ಲಿ ಇಲ್ಲ. ನಮ್ಮ ಮಕ್ಕಳನ್ನು ದೇವಸ್ಥಾನಕ್ಕೆ ಕಳುಹಿಸದೆ ಗ್ರಂಥಾಲಯಗಳಿಗೆ ಕಳುಹಿಸಬೇಕಾಗಿದೆ.

ಇದಕ್ಕೆಲ್ಲ ಮೂಲ ಸಮಸ್ಯೆ ಶಿಕ್ಷಣ .ಶಿಕ್ಷಣ ದಿಂದ ಬದಲಾಗದ ಹೊರತು ಇದು ಯಾರಿಂದಲೂ ಬದಲಾಗಲೂ ಸಾಧ್ಯ ವಿಲ್ಲ..

ಮಕ್ಕಳು-ಮಣ್ಣು ಬೇರ್ಪಡಿಸಿದರೆ ಮುಂದೆ ಕಾದಿದೆ ಸಂಕಷ್ಟ…..

0

ರಂಗನಕೆರೆ ಮಹೇಶ್


ನಮ್ಮೂರಿನ ಮುಖ್ಯರಸ್ತೆ ಡಾಂಬರು ರಸ್ತೆಯಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು…ಒಂದು ದಿನ ಬೆಳ್ಳಂಬೆಳಿಗ್ಗೆ ನಮ್ಮೂರಿನಿಂದ ಪಕ್ಕದೂರಿಗೆ ಹೋಗುತ್ತಿದ್ದೆ. ರಸ್ತೆ ಪಕ್ಕದಲ್ಲಿ ಸಣ್ಣ ಮಕ್ಕಳು ಆಟದಲ್ಲಿ ತೊಡಗಿದ್ದನ್ನು ನೋಡೋಣ ಅಂತ ಬೈಕ್ ಇಳಿದೆ.

ನಿಜಕ್ಕೂ ಮಕ್ಕಳ ರಸ್ತೆ ಕಾಮಗಾರಿಯ ಆಟ ನನ್ನನ್ನು ಬೆಕ್ಕಸಬೆರಗಾಗಿಸಿತು. ರಸ್ತೆ ಕಾಮಗಾರಿಗಾಗಿ ಹಾಕಿದ್ದ ಮರಳು, ಜಲ್ಲಿ ಬಳಸಿ ಮಕ್ಕಳು ರಸ್ತೆ ನಿರ್ಮಾಣದಲ್ಲಿ ಥೇಟ್ ಮುಖ್ಯರಸ್ತೆ ಮಾಡಿದಂತೆಯೇ ಮಾಡುತ್ತಿದ್ದರು.

ಅವರ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿಯನ್ನು ಗಮನಿಸಿದ್ದ ಮಕ್ಕಳು ಇದೇ ರೀತಿಯ ಆಟದಲ್ಲಿ ತೊಡಗಿದ್ದರು.
ಪ್ರಸ್ತುತ ದಿನಗಳಲ್ಲಿ ಮಣ್ಣಿನ ಸಂಪರ್ಕ ಮಕ್ಕಳನ್ನು ದೂರಕ್ಕೆ ಕೊಂಡೊಯ್ದಿದೆ.

ಮಕ್ಕಳು ಮಣ್ಣಿನೊಂದಿಗೆ ಆಟವಾಡುವುದು ಬಹು ಅಪರೂಪವಾಗಿದೆ. ಇಂದು ತಾಯಂದಿರು ಸಹ ಮಣ್ಣಿನೊಂದಿಗೆ ಮಕ್ಕಳನ್ನು ಬೆರೆಯಲು ಬಿಡುತ್ತಿಲ್ಲ. ಶಾಲೆಯಿಂದ ಮನೆಗೆ ಬಂದರೆ ಸಾಕು ಬರೀ ಓದು, ಟ್ಯೂಷನ್, ಹೋಮ್ ವರ್ಕ್ ಮಾಡುವ ಯಂತ್ರಗಳನ್ನಾಗಿಸುತ್ತಿದ್ದೇವೆ.

ಇನ್ನೂ ಕೆಲ ಪೋಷಕರು ಎಂಜಿನಿಯರ್, ವೈದ್ಯರನ್ನಾಗಿಸಬೇಕೇಂಬ ಭ್ರಮೆಯಲ್ಲಿ ಅವರ ಸುತ್ತ ಭ್ರಮಾಲೋಕವನ್ನೇ ಸೃಷ್ಟಿಸುತ್ತಿದ್ದೇವೆ.

ಮಕ್ಕಳು ಏನಾದರೂ ಆಗಲಿ ಅವರು ಶೇ.95 ಅಂಕ ಪಡೆದರೇ ಸಾಕು ಎಂದು ಅಂಕದ ಹಿಂದೆ ಬಿದ್ದು ಬಿಟ್ಟಿದ್ದೇವೆ. ಮಕ್ಕಳು ಸಹ ತಮಗೆ ಬೇಡವೆನಿಸಿದರೂ ಪೋಷಕರ ಒತ್ತಾಯಕ್ಕಾಗಿ ಯಂತ್ರಗಳಾಗುತ್ತಿದ್ದಾರೆ.

ಪ್ರಸ್ತುತ ಶಿಕ್ಷಣ ನೀತಿಯೂ ಸಹ ಪೋಷಕರ ಮನಸ್ಥಿತಿಗೆ ಹೊರತಾಗಿಲ್ಲ. ಅಲ್ಲಿಯೂ ಸಹ ಮಕ್ಕಳಿಗೆ ಮಣ್ಣಿನ ಸಂಪರ್ಕದಿಂದ ಕಡಿತಗೊಳಿಸುತ್ತಿದ್ದಾರೆ.

ಇಂದು ಶಾಲೆಗಳಲ್ಲಿ ಪಠ್ಯಕ್ಕೆ ಕೊಡುವಷ್ಟು ಮಹತ್ವವನ್ನು ಮಾರಲ್ ಏಜುಕೇಷನ್, ಫಿಜಿಕಲ್ ಏಜುಕೇಷನ್ ಇವುಳಿಗೆ ಕೊಡುತ್ತಿಲ್ಲ. ಅಲ್ಲಿಯೂ ಸಹ ಮಕ್ಕಳನ್ನು ಕೀ ಕೊಟ್ಟರೆ ಮಾತ್ರ ಹೋಗುವ ಗೊಂಬೆಗಳನ್ನಾಗಿಸುತ್ತಿದ್ದೇವೆ.

ಪ್ರಸ್ತುತ ಮಕ್ಕಳ ಆಟದ ಸಮಯವನ್ನೇ ನುಂಗಿ ಹಾಕಿದ್ದಾರೆ. ಮಣ್ಣಿನ ಜತೆ ಬೇರೆಯುವ ದೈಹಿಕ ಶಿಕ್ಷಣವನ್ನು ನೀಡದೆ ವಂಚಿಸಲಾಗುತ್ತಿದೆ.

ಬಹು ವರ್ಷಗಳಿಂದ ದೈಹಿಕ ಶಿಕ್ಷಕರನ್ನು ನೇಮಿಸಿಕೊಳ್ಳದ ಕಾರಣ ಇಡೀ ತಾಲ್ಲೂಕು ಕೇಂದ್ರಕ್ಕೆ 10 ರಿಂದ 15 ಶಿಕ್ಷಕರು ಇದ್ದರೆ ಅದೇ ಹೆಚ್ಚು ಎಂಬಂತಾಗಿದೆ. ಮತ್ತೆ ಕೆಲ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿರುವ ಶಾಲೆಗಳಲ್ಲಿ ಅವರ ಸಮಯವನ್ನು ಪಠ್ಯ ಬೋಧನೆಗೆ ಬಳಸಿಕೊಳ್ಳಲಾಗುತ್ತಿದೆ.

ಈಗಾಗಲೇ ನಿವೃತ್ತಿ ಹಂತದಲ್ಲಿರುವ ಬಹು ಮಂದಿ ಶಿಕ್ಷಕರು ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ಮಣ್ಣಿನ ಜತೆ ಬೇರೆಯುವ ಕಬಡ್ಡಿ, ಖೋ..ಖೋ..ದಂತ ಆಟಗಳು ಮೂಲೆ ಸೇರುತ್ತಿವೆ. ಪೋಷಕರು ಮತ್ತು ಶಾಲೆಗಳು ಮಣ್ಣಿನ ಸಂಪರ್ಕ ಕಡಿದು ಹಾಕುತ್ತಿರುವ ಹೊತ್ತಲ್ಲಿ ನಿಧಾನವಾಗಿ ಮಕ್ಕಳು ಯಾಂತ್ರಿಕತೆಯತ್ತಾ ವಾಲುತ್ತಿದ್ದಾರೆ.

ಅವರೂ ಸಹ ಆಧುನಿಕ ಭರಾಟೆಯಲ್ಲಿ ಜನರನ್ನು ಒಂಟಿಯಾಗಿಸಿರುವ ಮೊಬೈಲ್ ಲೋಕದಲ್ಲಿ ಮುಳುಗುತ್ತಿದ್ದಾರೆ. ಮಣ್ಣಿನ ವಾಸನೆಯನ್ನೂ ಸವಿಯದೆ ಮೊಬೈಲ್ ವಾಸನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಮಕ್ಕಳು ಸಹ ಗುಂಪು ಸೇರದೆ ಒಂಟಿ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಒಂಟಿ ಜೀವನ ಮಕ್ಕಳ ಮುಂದಿನ ಭವಿಷ್ಯವನ್ನೇ ನುಂಗಿ ಹಾಕುತ್ತಿದೆ. ಮುಂದಾದರೂ ಹೆಚ್ಚೆತ್ತು ಮಣ್ಣಿನ ಸಂಪರ್ಕ ಮಾಡಿಸದೆ ಹೋದರೆ ಮಣ್ಣಿನ ಸಂಸ್ಕೃತಿಯಾದ ಕೃಷಿ ಇಂದಿನ ಮಕ್ಕಳಿಂದ ಮರೆಯಾಗುತ್ತದೆ.

ಒಂದೇ ನಾಣ್ಯದ ಎರಡು ಮುಖಗಳಾಗಿರುವ ಮಕ್ಕಳು ಮತ್ತು ಮಣ್ಣನ್ನು ಬೇರ್ಪಡಿಸಿದರೆ ನಾವು ಭೂತಾಯಿಗೆ ಮಾಡುವ ಬಹು ದೊಡ್ಡ ಮೋಸ ಎಂಬುದನ್ನು ನಾವು ಮನಗಾಣಬೇಕು…

ಒಂಟಿತನದ ನೋವಿಗಿಂಥ…

0

ಶಂಕರ್ ಬರಕನಹಾಲ್


ನಾಗರಿಕತೆಗೆ ಮನುಷ್ಯ ಒಗ್ಗಿಕೊಂಡಂತೆ
ಆಂತರ್ಯದಲಿ ನಡೆಯುವ
ಅವಾ-ಭಾವಗಳ ನಡುವಿನ ಗುದ್ದಾಟದಲೇ ದಿನವಿಡೀ ಕಳೆಯುವ
ನಮಗೇ ಏಕಾಂತದ ನೈಜಸುಖ ಎಂದಿಗೂ ಅರ್ಥವಾಗುವುದಿಲ್ಲ.!

ವೈಯಕ್ತಿಕವಾದ ದ್ವೇಷ ,ಅಸೂಹೆ , ಪರರನ್ನು ಓಲೈಸಬೇಕೆಂಬ ಕೆಟ್ಟ ಹಠ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ‌ ಯೋಚನಾ ಲಹರಿಗೆ ಚೌಕಟ್ಟು ವಿಧಿಸುವ ದೊಡ್ಡ ಬೇಲಿಗಳು‌.!

ನಾವೆಷ್ಟು ಈ ರೀತಿಯಾದ ದೌರ್ಬಲ್ಯಗಳಿಗೆ ಒಳಗಾಗುತ್ತೀವೆಯೋ, ಅಷ್ಟೇ ಬೇಗ ಪ್ರಪಂಚಕ್ಕೆ ನಮಗರಿವಿಲ್ಲದ ಹಾಗೇ ತೀರಾ ಸಣ್ಣವರಾಗಿ ಕಾಣುತ್ತಿರುತ್ತೇವೆ.!

ನಮ್ಮ‌ ವ್ಯಕ್ತಿತ್ವ ಏನೆಂಬುದನು ಪ್ರಪಂಚಕ್ಕೆ‌ ನಿರೂಪಿಸಬೇಕಾದ ಯಾವುದೇ ಅಗತ್ಯ ಎಂದಿಗೂ ಯಾರಿಗೂ ಇರಬಾರದು.!

ನಮ್ಮ ಆತ್ಮ-ಮನಸ್ಥಿತಿಯ ನೈಜ ಶಕ್ತಿ ಏನೆಂಬುದ ಈ ಒಂದೇ ಒಂದು ಧೋರಣೆ ನಮಗೆ ಸವಿವರವಾಗಿ ಅರ್ಥಮಾಡಿಸಿ ಬಿಡುತ್ತದೆ.!

ಅವನ‌ ಕೆಲವು ನಡವಳಿಕೆ-ಧೋರಣೆಗಳನ್ನು ಬೇರೆ ಆಯ್ಕೆ ಇರದೇ.
ಅದನ್ನೇ ಸರಿ ಎಂದು ಸ್ವೀಕರಿಸಿ,
ಬದುಕಲ್ಲಿ ಅಳವಡಿಸಿಕೊಳ್ಳಲು ಅವನು ಸಿದ್ಧನಾಗುತ್ತಾ ಹೋಗುತಿದ್ದಾನೆ‌.!

ಸರಿ-ತಪ್ಪು ಎಂದು ವೈಯಕ್ತಿಕವಾಗಿ ತುಲನೆ ಮಾಡದೇ,
ಪ್ರಶ್ನೆ-ಉತ್ತರಗಳ‌ ಸಹವಾಸಕ್ಕೆ ಹೋಗದೆ ಸ್ವಾಭಾವಿಕವಾಗಿ ಸ್ವೀಕರಿಸುವ ಮನಸ್ಸು ನಮ್ಮದಾಗಿರಬೇಕಷ್ಟೇ.!

ಒಟ್ಟಾರೆಯಾಗಿ,ಧನಾತ್ಮಕ-ನಕರಾತ್ಮಕ ಅಂಶಗಳೆಲ್ಲವನೂ ಯಾವುದೇ ಮರ್ಜಿಗೆ ಒಳಗಾಗದೇ, ಮುಕ್ತವಾಗಿ ಅಂತರಾಳದಲ್ಲಿ‌ ಅವಲೋಕಿಸುತ್ತಾ ಹೋದಂತೆ, ನಮ್ಮ ಮನಸಾಕ್ಷಿ ಒಂದು ನಿರ್ಧಾರಕ್ಕೆ ಬರುತ್ತದೆ.
ಅದೇ ಅಂತಿಮ.!

ಕೊರೊ‌ನಾ: ಹಳ್ಳಿಗಳತ್ತ BSP‌ ಚಿತ್ತ…

ತುಮಕೂರು::ಜಿಲ್ಲೆಯ ಬಹುಜನ ಸಮಾಜ ಪಕ್ಷದ (BSP) ಪ್ರಧಾನ ಕಾರ್ಯದರ್ಶಿ J.C ರಂಗಧಾಮಯ್ಯ ಸಾರಥ್ಯದಲ್ಲಿ ಮಧುಗಿರಿ ತಾಲ್ಲೂಕು ಬಿಎಸ್ಪಿ ಪಕ್ಷದ ಘಟಕದ ವತಿಯಿಂದ ಐ ಡಿ ಹಳ್ಳಿ ಹೋಬಳಿ ಜನಕಲೋಟಿ ಗ್ರಾಮದಲ್ಲಿ ಹಂದಿಜೋಗಿ, ಹಕ್ಕಿಪಿಕ್ಕಿ ಸಮುದಾಯದ 25 ಕುಟುಂಬಗಳಿಗೆ ನೆರವು ನೀಡಲಾಯಿತು.

ಇದೇ ಗ್ರಾಮದ 75 ದಲಿತ ಕುಟುಂಬಗಳಿಗೂ‌ ಆಹಾರದ ಕಿಟ್ ವಿತರಿಸಲಾಯಿತು. ಲಾಕ್ ಡೌನ್ ಕಾರಣ ಈ ಕುಟುಂಬಗಳು ಸಂಕಷ್ಟದಲ್ಲಿದ್ದವು.

ಅಕ್ಕಿ, ಈರುಳ್ಳಿ, ಉಪ್ಪು ಹಾಗೂ ಮಾಸ್ಕ್ ಗಳನ್ನು ಇಡೀ ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಿಎಸ್ಪಿ ಪಕ್ಷದ ವತಿಯಿಂದ ವಿತರಿಸಲಾಯಿತು.

ಬಿಎಸ್ಪಿ ಪಕ್ಷವು ಒಂದು ರಾಜಕೀಯ ಪಕ್ಷವಾಗಿರದೇ ಇದು ಒಂದು ಸಾಮಾಜಿಕ ಪರಿವರ್ತನೆಯ ಚಳುವಳಿಯ ರಾಜಕೀಯ ಆಂದೋಲನವಾಗಿದೆ. ಅಂಬೇಡ್ಕರ್ ರವರು ಕನಸಿನಂತೆ ಬಹುಜನ ಸಮಾಜವು ಅಳುವ ಸಮಾಜವಾಗ ಬೇಕು ಎಂಬ ಕನಸನ್ನು ಈಡೇರಿಸಲು ದಾದಾಸಾಹೇಬ್ ಕಾನ್ಸಿರಾಮ್ ರವರು 1984 ರಲ್ಲಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ಪಕ್ಷ ಕೆಲಸ ಮಾಡುತ್ತಿದೆ ಎಂದು ರಂಗಧಾಮಯ್ಯ ಹೇಳಿದರು.

ತಾಲ್ಲೂಕು ಅಧ್ಯಕ್ಷರಾದ ಗೋಪಾಲ್, SDMC ಅಧ್ಯಕ್ಷರು ಚೌಡಪ್ಪ, ಜಯರಾಮಯ್ಯ ಶ್ರೀನಿವಾಸ, ಬೆಟ್ಟರಾಜು, ನವೀನ್ ಹಾಗೂ ಜಾನಿನಾಗರಾಜ್ ಜನಕಲೋಟಿ ಊರಿನ ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 17, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಭಾನುವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ದಶಮಿ
(ನಿನ್ನೆ ಬೆಳಿಗ್ಗೆ 10 ಗಂ॥ 25 ನಿ।। ರಿಂದ
ಇಂದು ಬೆಳಿಗ್ಗೆ 12 ಗಂ॥ 43 ನಿ।। ತನಕ)
ನಕ್ಷತ್ರ : ಪೂರ್ವಾಭಾದ್ರೆ
(ನಿನ್ನೆ ಬೆಳಿಗ್ಗೆ 11 ಗಂ॥ 8 ನಿ।। ರಿಂದ
ಇಂದು ಮಧ್ಯಾಹ್ನ 1 ಗಂ॥ 59 ನಿ।। ತನಕ)
ಯೋಗ : ವಿಷ್ಕಂಭ
ಕರಣ : ಭದ್ರೆ
ವರ್ಜ್ಯಂ : ಇಂದು ಯಾವುದೇ ವರ್ಜ್ಯಂ ಇಲ್ಲ.
ಅಮೃತಕಾಲ : (ಇಂದು ಪ್ರಾತಃಕಾಲ 5 ಗಂ॥ 2 ನಿ।। ರಿಂದ ಇಂದು ಬೆಳಿಗ್ಗೆ 6 ಗಂ॥ 49 ನಿ।। ತನಕ)
ದುರ್ಮುಹೂರ್ತ : (ಇಂದು ಸಂಜೆ 4 ಗಂ॥ 57 ನಿ।। ರಿಂದ ಇಂದು ಸಂಜೆ 5 ಗಂ॥ 48 ನಿ।। ತನಕ)
ರಾಹುಕಾಲ : (ಇಂದು ಸಂಜೆ 5 ಗಂ॥ 3 ನಿ।। ರಿಂದ ಇಂದು ರಾತ್ರಿ 6 ಗಂ॥ 40 ನಿ।। ತನಕ) ಗುಳಿಕ : (ಇಂದು ಸಂಜೆ 3 ಗಂ॥ 26 ನಿ।। ರಿಂದ ಇಂದು ಸಂಜೆ 5 ಗಂ॥ 3 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 49 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 43 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 41 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಕುಂಭ

ಮೇಷ ರಾಶಿ ಭವಿಷ್ಯ : 17 May 2020
ಇತರರನ್ನು ಟೀಕಿಸುವ ನಿಮ್ಮ ಅಭ್ಯಾಸದಂದಾಗಿ ಇಂದು ನೀವೇ ಕೆಲವು ಟೀಕೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ನಿಮ್ಮ ಹಾಸ್ಯಪ್ರಜ್ಞೆ ಜಾಗೃತವಾಗಿರಲಿ ಮತ್ತು ನಿಮ್ಮ ಸ್ವರಕ್ಷಣೆ ಕಡಿಮೆಯಿರಲಿ. ಹೀಗಿದ್ದಲ್ಲಿ ಟೀಕೆಯನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚಿರುತ್ತದೆ. ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ., ಆಗೇ ನೀವು ಮಾಡದಿದ್ದರೆ ನಿಮ್ಮ ಕೆಲಸ ಹೋಗಬಹುದು. ಅದೃಷ್ಟ ಸಂಖ್ಯೆ: 1

ವೃಷಭ ರಾಶಿ ಭವಿಷ್ಯ : 17 May 2020
ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಯಾವುದೇ ಅನುಭವದ ವ್ಯಕ್ತಿಯ ಸಲಹೆ ಇಲ್ಲದೆ, ನಿಮಗೆ ಆರ್ಥಿಕ ನಷ್ಟವಾಗುವ ಯಾವುದೇ ಕೆಲಸವನ್ನು ಮಾಡಬೇಡಿ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಎಲ್ಲಿಗಾದರೂ ಹೊರಗೆ ಹೋಗುತ್ತಿದ್ದರೆ ಬಟ್ಟೆಗಳನ್ನು ಚಿಂತನಶೀಲವಾಗಿ ಧರಿಸಿ. ನೀವು ಹಾಗೆ ಮಾಡದಿದ್ದರೆ ನಿಮ್ಮ ಪ್ರೇಮಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದೃಷ್ಟ ಸಂಖ್ಯೆ: 9

ಮಿಥುನ ರಾಶಿ ಭವಿಷ್ಯ : 17 May 2020
ತುಂಬಾ ಚಿಂತೆ ಮತ್ತು ಒತ್ತಡ ನಿಮ್ಮ ಆರೋಗ್ಯವನ್ನು ನಾಶಮಾಡಬಹುದು. ನೀವು ಮಾನಸಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಗೊಂದಲ ಮತ್ತು ಹತಾಶೆಯನ್ನು ತಡೆಗಟ್ಟಬೇಕು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ನಿಮ್ಮ ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರತಿ ದಿನ ಪ್ರೀತಿಯಲ್ಲಿ ಬೀಳುವ ನಿಮ್ಮ ಸ್ವಭಾವವನ್ನು ಬದಲಾಯಿಸಿ. ನಿಮ್ಮ ಆಯಸ್ಕಾಂತೀಯ- ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ಹೃದಯಗಳನ್ನು ಸೆರೆಹಿಡಿಯುತ್ತದೆ. ಅದೃಷ್ಟ ಸಂಖ್ಯೆ: 7

ಕರ್ಕ ರಾಶಿ ಭವಿಷ್ಯ : 17 May 2020
ಮದ್ಯಪಾನ ಮಾಡಿದಲ್ಲಿ ಅದು ನಿಮ್ಮ ನಿದ್ರೆಗೆ ಭಂಗ ತಂದು ಆಳವಾದ ವಿಶ್ರಾಂತಿ ತೆಗೆದುಕೊಳ್ಳುವುದನ್ನು ತಡೆಗಟ್ಟಬಹುದಾದ್ದರಿಂದ ಹಾಗೆ ಮಾಡಬೇಡಿ. ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ಒಬ್ಬ ಹಿರಿಯ ವ್ಯಕ್ತಿಯ ಆರೋಗ್ಯ ಕೊಂಚ ಆತಂಕಕ್ಕೆ ಕಾರಣವಾಗುತ್ತದೆ. ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ ಭವಿಷ್ಯ : 17 May 2020
ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲೂ ಒಂದು ಒಳ್ಳೆಯ ದಿನ. ತನ್ನ ಹಣವನ್ನು ಹೇಗೆ ಸಂಗ್ರಹಿಸುವುದು ಎಂಬ ಈ ಕೌಶಲ್ಯವನ್ನು ಇಂದು ನೀವು ಕಲಿಯಬಹುದು ಮತ್ತು ಈ ಕೌಶಲ್ಯವನ್ನು ಕಲಿತು ನೀವು ನಿಮ್ಮ ಹಣವನ್ನು ಉಳಿಸಬಹುದು. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ. ಅದೃಷ್ಟ ಸಂಖ್ಯೆ: 9

ಕನ್ಯಾ ರಾಶಿ ಭವಿಷ್ಯ : 17 May 2020
ನಿಮ್ಮ ದೊಡ್ಡ ಆಸ್ತಿಯೆಂದರೆ ನಿಮ್ಮ ಹಾಸ್ಯಪ್ರಜ್ಞೆಯಾಗಿದೆ ಇದನ್ನು ನಿಮ್ಮ ಅನಾರೋಗ್ಯ ಗುಣಪಡಿಸಲು ಬಳಸಲು ಪ್ರಯತ್ನಿಸಿ. ನೀವು ನಿಮ್ಮ ತಂತ್ರಗಳನ್ನು ಅಳವಡಿಸಿದಲ್ಲಿ ಇಂದು ಸ್ವಲ್ಪ ಹೆಚ್ಚುವರಿ ಹಣ ಸಂಪಾದಿಸುತ್ತೀರಿ. ಸಂತೋಷದ – ಚೈತನ್ಯದಾಯಕ – ಪ್ರಿಯವಾದ ಚಿತ್ತದ – ನಿಮ್ಮ ಖುಷಿಯ ಸ್ವಭಾವ ನಿಮ್ಮ ಸುತ್ತಲಿನವರಿಗೆ ಸಂತೋಷ ಮತ್ತು ಖುಷಿಯನ್ನು ತರುತ್ತದೆ. ಪ್ರೀತಿಗಾಗಿ ವಿಶೇಷ ದಿನ- ರಾತ್ರಿಗಾಗಿ ಯಾವುದಾದರೂ ಯೋಜನೆ ಹಾಕಿ ಮತ್ತು ಇದನ್ನು ಸಾಧ್ಯವಾದಷ್ಟು ಪ್ರಣಯಮಯವಾಗಿಸಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ: 7

ತುಲಾ ರಾಶಿ ಭವಿಷ್ಯ : 17 May 2020
ತುಂಬಾ ಉತ್ಸಾಹ ಮತ್ತು ಸ್ಫೋಟಕ ಭಾವೋದ್ರೇಕಗಳು ನಿಮ್ಮ ನರಮಂಡಲಕ್ಕೆ ಹಾನಿ ಮಾಡಬಹುದು. ಇದನ್ನು ತಪ್ಪಿಸಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಇದು ಮತ್ತೊಂದು ಚೈತನ್ಯದಾಯಕ ದಿನವಾಗಿರುತ್ತದೆ ಮತ್ತು ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ಮತ್ತು ಆನಂದ ತೆರೆದಿಡುತ್ತದೆ. ಇಡೀ ಬ್ರಹ್ಮಾಂಡದ ಭಾವಪರವಶತೆ ಪ್ರೀತಿಯಲ್ಲಿರುವವರ ನಡುವೆ ನಡೆಯುತ್ತದೆ. ಹೌದು, ನೀವು ಅದೃಷ್ಟವಂತರು. ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ ಭವಿಷ್ಯ 17 May 2020
ತೊಂದರೆಗಳ ಬಗ್ಗೆ ಚಿಂತಿಸುವ ಮತ್ತು ಅವುಗಳನ್ನು ದೊಡ್ಡದಾಗಿಸುವ ನಿಮ್ಮ ಸ್ವಭಾವ ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸಬಹುದು. ವಿದೇಶಿ ಸಂಪರ್ಕಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಇಂದು ಹಣದ ನಷ್ಟವಾಗುವ ಸಾಧ್ಯತೆ ಇದೆ ಆದ್ದರಿಂದ ಇಂದು ಯೋಚಿಸಿ ಅರ್ಥಮಾಡಿಕೊಂಡು ನಡೆಯಿರಿ ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ಅದೃಷ್ಟ ಸಂಖ್ಯೆ: 3

ಧನು ರಾಶಿ ಭವಿಷ್ಯ : 17 May 2020
ಧ್ಯಾನ ಮತ್ತು ಯೋಗವನ್ನು ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳಿಗಾಗಿ ಆಚರಿಸಬೇಕು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಸ್ನೇಹಿತರೊಂದಿಗಿನ ಸಂಜೆ ಹೆಚ್ಚು ಮನರಂಜನೀಯವಾಗಿರುತ್ತದೆ ಮತ್ತು ಸಂತೋಷದಿಂದ ತುಂಬಿರುತ್ತದೆ. ಒಂದು ಅಚ್ಚರಿಯ ಸಂದೇಶ ನಿಮಗೆ ಸಿಹಿ ಕನಸುಗಳನ್ನು ನೀಡುತ್ತದೆ. ಅದೃಷ್ಟ ಸಂಖ್ಯೆ: 9

ಮಕರ ರಾಶಿ ಭವಿಷ್ಯ : 17 May 2020
ಕಣ್ಣಿನ ಪೊರೆ ರೋಗಿಗಳಿಗೆ ಧೂಮಪಾನವು ಅವರ ಕಣ್ಣುಗಳಿಗೆ ಮತ್ತಷ್ಟು ಹಾನಿಯುಂಟುಮಾಡಬಹುದಾದ್ದರಿಂದ ಅವರು ಕಲುಷಿತ ಪರಿಸರದಲ್ಲಿ ಹೋಗಬಾರದು. ಸಾಧ್ಯವಾದರೆ ಸೂರ್ಯನ ಬೆಳಕಿಗೆ ಅತಿಯಾದ ಒಡ್ಡಿಕೊಳ್ಳುವಿಕೆಯನ್ನು ತಪ್ಪಿಸಿ. ವೆಚ್ಚದ ಏರಿದರೂ ಆದಾಯದಲ್ಲಿನ ಹೆಚ್ಚಳ ನಿಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತದೆ. ಒಬ್ಬ ದೂರದ ಸಂಬಂಧಿಯಿಂದ ಒಂದು ಅನಿರೀಕ್ಷಿತ ಸಂದೇಶ ಇಡೀ ಕುಟುಂಬಕ್ಕೆ ಸಂಭ್ರಮ ತರುತ್ತದೆ. ಅದೃಷ್ಟ ಸಂಖ್ಯೆ: 8

ಕುಂಭ ರಾಶಿ ಭವಿಷ್ಯ : 17 May 2020
ನೀವು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿರದಿದ್ದಲ್ಲಿ ನಿಮಗೆ ತುಂಬಾ ದಣಿವಾದಂತೆನಿಸುತ್ತದೆ ಮತ್ತು ನಿಮಗೆ ಅಧಿಕ ವಿಶ್ರಾಂತಿ ಬೇಕಾಗುತ್ತದೆ. ಇಂದು ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ಇತ್ತೀಚೆಗೆ ನಿಮ್ಮ ವೈಯಕ್ತಿಕ ಜೀವನ ನಿಮ್ಮ ಗಮನದ ಕೇಂದ್ರಬಿಂದುವಾಗಿದೆ – ಆದರೆ ಇಂದು ನೀವು ಸಾಮಾಜಿಕ ಕೆಲಸ, ದಾನದ ಮೇಲೆ ಗಮನ ಹರಿಸುತ್ತೀರಿ – ಮತ್ತು ಸಮಸ್ಯೆಯ ಜೊತೆ ನಿಮ್ಮ ಬಳಿ ಬರುವವರಿಗೆ ಸಹಾಯ ಮಾಡುತ್ತೀರಿ. ಅದೃಷ್ಟ ಸಂಖ್ಯೆ: 6

ಮೀನ ರಾಶಿ ಭವಿಷ್ಯ : 17 May 2020
ನಿಮ್ಮ ಆರೋಗ್ಯ ಇಂದು ಪರಿಪೂರ್ಣವಾಗಿಲ್ಲದಿದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಕೊಡುವುದು ಕಷ್ಟವಾಗಬಹುದು. ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ಅದೃಷ್ಟ ಸಂಖ್ಯೆ: 4

ಮುಂಜಾನೆ ಮಾತು: ಕಾಮನಬಿಲ್ಲಿನಂತೆ ಏಕೆ ಮಿಂಚಬೇಕು ಗೊತ್ತೇ?

0

ರಘುನಂದನ್ ಎ.ಎಸ್.


ಒಮ್ಮೆ ಬಣ್ಣಗಳ ನಡುವೆ ತಮ್ಮ ಹಿರಿಮೆ, ಹಾಗು ಪ್ರಾಮುಖ್ಯತೆ ಬಗ್ಗೆ ಪರಸ್ಪರ ವಾಗ್ವದ ನಡೆಯುತ್ತಿತ್ತು.

ಮೊದಲಿಗೆ ಹಸಿರು ಬಣ್ಣವು ತಾನು ಉಸಿರು /ಜೀವದ ಸಂಕೇತ. ತಾನಿಲ್ಲದೆ ವನ, ಬನ, ಮೃಗ ಮನುಷ್ಯರೆಲ್ಲರೂ ಶೂನ್ಯ ಎಂದಿತು.

ನಂತರ ನೀಲಿ ಬಣ್ಣವು ತಾನು ಪ್ರಶಾಂತತೆಯನ್ನು ಸೂಚಿಸುತ್ತಾ, ಮನುಷ್ಯ ತನ್ನನ್ನ ಸಾಗರದ ನೀಲಿ ಮತ್ತು ಆಕಾಶದ ನೀಲಿ ಎಂದೇ ಹೋಲಿಸುತ್ತಾರೆ ಅಂದಿತು.

ಆಗ ಕಿತ್ತಳೆಯು ತನ್ನನ್ನು ತಾನು ಶಕ್ತಿ, ಅರೋಗ್ಯ ಹಾಗು ಜೀವಸತ್ವಗಳಿಗೆ ಹೋಲಿಸಿಕೊಂಡಿತು.

ನಂತರ ಅಧಿಕಾರಶಾಹಿಯಂತೆ ಗರ್ಜಿಸಿದ ಕೆಂಪು ಬಣ್ಣವು, ಶೌರ್ಯ, ಪರಾಕ್ರಮದ ಪ್ರತಿಬಿಂಬ, ಮನುಷ್ಯರ ರಕ್ತವು ನನ್ನದೇ ಬಣ್ಣವೆಂದು ಘರ್ಜಿಸಿತು.

ಹಳದಿಯು ತನ್ನನ್ನ ತಿಳಿನಗೆ, ಬೆಳಗಿನ ಸೂರ್ಯನಿಗೆ ಹೋಲಿಸುತ್ತಾ ಸಂತಸ ಪಡುತ್ತಿತ್ತು.

ಆಗ ನೇರಳೆ ಬಣ್ಣವು ತಾನು ಅಧಿಕಾರ ಮತ್ತು ಬುದ್ಧಿವಂತಿಕೆಯ ರಾಯಭಾರಿಯೆಂದು ವಿವರಿಸಿತು.

ಹೀಗೇ ಹಿರಿಮೆ ಮತ್ತು ಶ್ರೇಷ್ಠತೆ ಬಗ್ಗೆ ಜಗಳ ಬೆಳೆಯುತ್ತಲೇ ಇತ್ತು.

ಇದ್ದಕ್ಕಿದ್ದಂತೆ ಮಿಂಚು, ಗುಡುಗು ತುಂಬಿದ ಭಾರೀ ಮಳೆ ಎಡಬಿಡದೆ ಸುರಿಯ ತೊಡಗಿತು.

ಆಗ ಗುಡುಗು “ನಿಮ್ಮ ಜಗಳವನ್ನು ನಿಲ್ಲಿಸಿ, ನೀವು ಅನನ್ಯ ಮತ್ತು ವಿಭಿನ್ನ. ಒಟ್ಟಾಗಿದ್ದರೆ ಮಾತ್ರ ಜಯ. ಆಗಲೇ ಕಾಮನಬಿಲ್ಲಿನಂತ ಮನಮೋಹಕತೆ ಉದಯಿಸಲು ಸಾಧ್ಯ. ಅದೇ ನಿಮ್ಮ ನಿಜವಾದ ಅಸ್ತಿತ್ವ. ಒಬ್ಬರನ್ನೊಬ್ಬರು ಶ್ಲಾಘಿಸಿ ಒಟ್ಟಿಗೆ ಬದುಕಿ. ಸ್ವಾರ್ಥದಿಂದ ತಾನೊಬ್ಬನ ಏಳಿಗೆ, ಆದರೆ ಒಟ್ಟಾಗಿ ಶ್ರಮಿಸಿದರೆ ಸಮುದಾಯದ ಏಳಿಗೆ” ಎಂದು ಝಾಡಿಸಿದಾಗ ಬಣ್ಣಗಳೆಲ್ಲವೂ ಮೌನಕ್ಕೆ ಶರಣಾದವು.

“ನಾವು ಸ್ವಾರ್ಥ ತುಂಬಿದ ಮೌಢ್ಯರೋ ಅಥವಾ ಕಾಮನಬಿಲ್ಲಿನಂತೆ ಮಿಂಚುವರವರೊ…? ನಮಗೆ‌ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ ಎಂದ ಬಾಲಕ

ನವದೆಹಲಿ: ಬಾಲಕನ್ನೊಬ್ಬ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುತ್ತೇವೆ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಇಂಧೂರ್ ನ ಇಂಡೆಕ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಕಿಗೆ ಈ ಬಾಲಕ ಮತ್ತು ಬಾಲಕನ ಕುಟುಂಬ ಚಿಕಿತ್ಸೆ ಪಡೆದಿದೆ.

ಸೋಕಿನಿಂದ ಗುಣಮುಖರಾದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಈ ಆರು ವರ್ಷದ ಬಾಲಕ ಹಮ್ ಮೋದಿಂಕೊ ಮಾರಂಗೇ ಎಂದು ಹೇಳಿದ್ದಾನೆ.

ಈ ಸಣ್ಣ ಮಗು ಹೀಗೆ ಹೇಳಲು ಏನು ಕಾರಣ. ಮಗುವಿನ ಬಾಯಿಂದ ಇಂತ ಮಾತುಗಳು ಹೇಗೆ ಬರಲು ಸಾಧ್ಯ ಎಂಬ ಮಾತುಗಳು ಕೇಳಿಬಂದಿವೆ.

ಈ ವಿಡಿಯೊ ವನ್ನು ಬಿಜೆಪಿ ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದು, ಈ ಮುಗ್ದ ಮಗುವಿನ ಮನಸ್ಸಿನಲ್ಲಿ ವಿಷ ತುಂಬಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

4G ಸಿನಿಮಾ‌‌ ಬಿಡುಗಡೆಗೆ ಮುನ್ನ ಸಾವಿನ ಹಾದಿ ತುಣಿದ ನಿರ್ದೇಶಕ

Publicstory.in


ಕೊಯಮತ್ತೂರು: ರಸ್ತೆ ಅಪಘಾತದಲ್ಲಿ ತಮಿಳಿನ ಯುವ‌ ನಿರ್ದೇಶಕ ಎ.ವಿ ಅರುಣ್ ಸಾವಿಗೀಡಾಗಿದ್ದು, ತಮಿಳು ಸಿನಿಮಾ ರಂಗ ಕಂಬನಿ ಮಿಡಿದಿದೆ.

ಇವರು ನಿರ್ದೇಶಿಸಿದ್ದ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

ಎ.ವಿ ಅರುಣ್ ಪ್ರಸತ್.ನಿರ್ದೇಶನದಲ್ಲಿ 4G ಚೊಚ್ಚಲ ಸಿನಿಮಾವನ್ನು ನಿರ್ದೇಶ‌ ಮಾಡಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಿರಲಿಲ್ಲ.

ಕೊಯಮತ್ತೂರಿನ ಮೆಟ್ಟುಪಾಳಂ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಒಂದು ಮೊಟ್ಟೆಯ ಕಥೆ..

ಜಿ ಎನ್ ಮೋಹನ್


‘ಮಹಾತ್ಮ ಗಾಂಧಿ’ ಅಂದೆ..

‘ಆಮೇಲೆ?’ ಅಂದರು

‘ಜವಾಹರಲಾಲ್ ನೆಹರೂ’ ಅಂದೆ

ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು..

‘ಆಮೇಲೆ..??’ ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು.

ಲೆಕ್ಕ ಹಾಗೇ ಮುಂದುವರಿಯಿತು.

ಎಲ್ ಕೆ ಅಡ್ವಾಣಿ, ಟಿ ಎನ್ ಶೇಷನ್, ಓಂ ಪುರಿ, ಶ್ಯಾಮ್ ಬೆನಗಲ್, ರಜನೀಕಾಂತ್, ಅನುಪಮ್ ಖೇರ್, ಕಟ್ಟಪ್ಪ… ವೀರೇಂದ್ರ ಸೆಹ್ವಾಗ್, ಲಾಲ್ ಬಹದ್ದೂರ್ ಶಾಸ್ತ್ರಿ, ಕರುಣಾನಿಧಿ..

ಎದುರಿಗಿದ್ದವರ ಹತ್ತೂ ಬೆರಳು ಮಡಚಿ ಹೋಗಿ ಆಗಲೇ ಸಾಕಷ್ಟು ಸಮಯವಾಗಿತ್ತು.

ಎದುರಿಗಿದ್ದವರು ಗಹಗಹಿಸಿ ನಗಲು ಶುರು ಮಾಡಿದರು

ಅವರಿಗೆ ನನ್ನ ‘ಕ್ವಿಜ್’ ನ ಉತ್ತರ ಗೊತ್ತಾಗಿ ಹೋಗಿತ್ತು.

‘ಸರಿಯಪ್ಪ ನಿನ್ನ ಹೆಸರೇ ಬಿಟ್ಟುಬಿಟ್ಟೆಯಲ್ಲ..’ ಎಂದು ನಕ್ಕರು.

ನಾನು ಗಂಭೀರವಾಗಿ ‘ನೋಡು ಗುರೂ, ಮೋಹನದಾಸ ಕರಮಚಂದ ಗಾಂಧಿ ಅವರಿಂದ ಹಿಡಿದು ಈ ಜಿ ಎನ್ ಮೋಹನ್ ಅವರವರೆಗೆ ನಮ್ಮ ಸಂತತಿ ಜೋರಾಗಿಯೇ ಇದೆ’ ಎಂದೆ.

ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ, ಹಲವು.. ಹಲವು ಮೊಟ್ಟೆಯ ಕಥೆ.

‘ಒಂದಾನೊಂದು ಕಾಲದಾಗ ಏಸೊಂದ ಮುದ ಇತ್ತಾ…’ ಅನ್ನುವಂತೆ ನಾನು ‘ನನಗೆ ಚೆಗೆವಾರನಷ್ಟೇ ದಟ್ಟ ಕೂದಲಿತ್ತು ಗೊತ್ತಾ’ ಎಂದರೆ ಎದುರಿಗಿದ್ದವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.

ನಾನೋ ಮಂಗಳೂರಿಗಿಷ್ಟು, ಗುಲ್ಬರ್ಗಕ್ಕಿಷ್ಟು, ಹೈದರಾಬಾದ್ ಗಿಷ್ಟು ಎಂದು ಮೂರು ಮಕ್ಕಳಿಗೆ ಆಸ್ತಿ ಮೂರು ಪಾಲು ಮಾಡಿಕೊಟ್ಟ ಹಿರಿಯನಂತೆ ನನ್ನ ಕೂದಲನ್ನು ಪಾಲು ಮಾಡಿಕೊಟ್ಟುಬಿಟ್ಟಿದ್ದೆ. ಮೂರೂ ಸ್ಥಳದಲ್ಲಿನ ಗಡಸು ನೀರು ನನ್ನ ಸೊಂಪು ಕೂದಲನ್ನು ನನ್ನ ಕಣ್ಣ ಮುಂದೆಯೇ ಬಚ್ಚಲ ಪಾಲಾಗಿಸಿತ್ತು.

ಆದರೆ ನನಗೇನೂ ಎದೆ ದಸಕ್ ಅನ್ನಲಿಲ್ಲ. ಯಾಕೆಂದರೆ ನನ್ನ ತಲೆ ನನಗೆ ಕಂಡರೆ ತಾನೇ. ಅದು ಎದುರಿಗಿದ್ದವರ ಸಮಸ್ಯೆ ಎಂದು ಕೈ ಚೆಲ್ಲಿ ನಿರಾಳನಾಗಿಬಿಟ್ಟಿದ್ದೆ.

ಹೀಗಿರುವಾಗಲೇ ನನಗೆ ಟಿ ಎಸ್ ಸತ್ಯನ್, ಖ್ಯಾತ ಛಾಯಾಗ್ರಾಹಕ ಸತ್ಯನ್ ಸಿಕ್ಕಿ ಹಾಕಿಕೊಂಡುಬಿಟ್ಟಿದ್ದು.

ಅಂತರ್ಜಾಲ ತಾಣ ‘ಚುರುಮುರಿ’ ಮೇಲೆ ಕೈಯಾಡಿಸುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ‘ಯುರೇಕಾ!’ ಎಂದು ಕೂಗಿಬಿಡಬೇಕು ಎನಿಸಿತು. ಯಾಕೆಂದರೆ ಆ ಟಿ ಎಸ್ ಸತ್ಯನ್ ಬಾಲ್ಡಿ ಜಗತ್ತಿನ ಮೇಲೆ ಚಂದನೆಯ ಸ್ಪಾಟ್ ಲೈಟ್ ಚೆಲ್ಲಿದ್ದರು.

ಮಾರ್ಕ್ಸ್ ಗೊತ್ತಲ್ವಾ.. ಅದೇ ಕಾರ್ಲ್ ಮಾರ್ಕ್ಸ್. ಆತ ‘ಜಗತ್ತಿನ ಕಾರ್ಮಿಕರೇ ಒಂದಾಗಿ ನೀವು ಕಳೆದುಕೊಳ್ಳುವುದೇನಿಲ್ಲ, ಸಂಕೋಲೆಗಳನ್ನು ಹೊರತು…’ ಅಂತ ಕರೆ ಕೊಟ್ಟಿದ್ದ.

ಅದೇ ರೀತಿ ದೆಹಲಿಯಲ್ಲೂ ಒಂದು ಮಹತ್ವದ, ಸುವರ್ಣಾಕ್ಷರದಲ್ಲಿ ಕೆತ್ತಿ ಇಡಬೇಕಾದ ಘೋಷಣೆಯೊಂದು ಹೊರಹೊಮ್ಮಿತು. ‘ಜಗತ್ತಿನ ಬಾಲ್ಡಿಗಳೇ ಒಂದಾಗಿ, ನೀವು ಕಳೆದುಕೊಳ್ಳುವುದೇನಿಲ್ಲ, ಕೂದಲೊಂದನ್ನು ಬಿಟ್ಟು..’

ಹಾಂ.. ಹೀಗೂ ಉಂಟೇ! ಅಂತ ನನ್ನ ಕೇಳಿದರೆ ನಾನು ತಾನೇ ಏನು ಹೇಳಲು ಸಾಧ್ಯ. ‘ಹೀಗೂ ಉಂಟು..’ ಎಂದು ಸಂಭ್ರಮಪಡುವುದನ್ನು ಬಿಟ್ಟು..

ಒಂದು ದಿನ ದೆಹಲಿಯ ವಕೀಲರೊಬ್ಬರು ನೋಡುತ್ತಾರೆ. ತಮ್ಮ ಮನೆಯಲ್ಲಿ ಕುಳಿತಿದ್ದ ಅಷ್ಟೂ ಜನರನ್ನು.. ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಹೇಗೆ ಜ್ಞಾನೋದಯವಾಗಿಹೋಯ್ತೋ ಆ ರೀತಿ ಆ ವಕೀಲರಿಗೂ ಆ ಕ್ಷಣದಲ್ಲಿ ಜ್ಞಾನೋದಯವಾಗಿ ಹೋಯ್ತು

ಯಾಕೆಂದರೆ ಅವರ ಮನೆಯಲ್ಲಿ ಆಗ ಕುಳಿತಿದ್ದ 20 ಜನರಲ್ಲಿ 15 ಮಂದಿ ಬಾಲ್ಡಿಗಳೇ..

ಆಗಲೇ ಅವರಿಗೆ ಅನಿಸಿಹೋಯಿತು. ಬಾಲ್ಡಿಗಳನ್ನು ಕಾಪಾಡಬೇಕು ಎಂದು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಅರಿವಾಗುತ್ತದೆ’ ಎನ್ನುವಂತೆ ಬಾಲ್ಡಿಗಳಿಗಷ್ಟೇ ಬಾಲ್ಡಿಗಳ ದುಃಖ ಗೊತ್ತಾಗಲು ಸಾಧ್ಯ ಎಂದು ತೀರ್ಮಾನಿಸಿದವರೇ ಸಂಘ ಸ್ಥಾಪಿಸಿಯೇಬಿಟ್ಟರು.

ಅದೂ ಅಂತಿಂತ ಸಂಘವಲ್ಲ- ಅದರ ಹೆಸರು ‘ಬಾಲ್ಡೀಸ್ ಇಂಟರ್ನ್ಯಾಷನಲ್’. ಅದರ ಕಾರ್ಯಾಚರಣೆಯ ಸ್ಥಳವೂ ಅಂತಿಂತಹದ್ದಲ್ಲ ಫೈವ್ ಸ್ಟಾರ್ ಹೋಟೆಲ್

ಪ್ರತೀ ತಿಂಗಳ ಮೊದಲ ಹಾಗೂ ಕೊನೆಯ ಗುರುವಾರ ಬಾಲ್ಡಿಗಳ ಸಭೆ. ಕಷ್ಟ ಸುಖ ಮಾತಾಡಿಕೊಂಡು ಸಿಕ್ಕಿದ್ದೆಲ್ಲಾ ಹೀರುತ್ತಾ ತಾವು ಬಾಲ್ಡಿಗಳಾಗಲು ತಮ್ಮ ಹೆಂಡತಿಯರು ಕಾರಣವೋ, ಹೆಲ್ಮೆಟ್ ಗಳು ಕಾರಣವೋ, ದೆಹಲಿಯ ಈ ದರಿದ್ರ ಹವಾಮಾನ ಕಾರಣವೋ ಅಥವಾ ಜೀನ್ಸ್ ಗಳೇ ಈ ನಡುವೆ ಎಕ್ಕುಟ್ಟಿಹೋಗಿದೆಯೋ ಎಂದು ಚರ್ಚಿಸುತ್ತಾ ಕೂತು ಎದ್ದು ಹೋಗುತ್ತಿದ್ದರು.

19 ಜನ ಬಾಲ್ಡಿಗಳ ಘನ ಸದಸ್ಯತ್ವದಲ್ಲಿ ಸಂಘ ಆರಂಭವಾಗಿ ಹೋಯ್ತು. ಆದರೆ ಈ ಸಂಘ ಬದುಕುಳಿಯುತ್ತೆ ಎನ್ನುವ ನಂಬಿಕೆ ಆ ಸದಸ್ಯರಿಗೇ ಇರಲಿಲ್ಲ.

ತಮ್ಮ ಕಣ್ಣ ಮುಂದೆಯೇ ತಮ್ಮ ಕೂದಲುಗಳು ಉದುರಿಹೋದಂತೆ ಈ ಸಂಘವೂ ಉದುರಿಹೋಗುತ್ತದೆ ಎಂದು ಭಾವಿಸಿದ್ದರು. ಆದರೆ ಆಶ್ಚರ್ಯ ಪರಮಾಶ್ಚರ್ಯ ಸಂಘದ ಸದಸ್ಯತ್ವ ನೋಡ ನೋಡುತ್ತಿದ್ದಂತೆ 150 ಕ್ಕೇರಿತು.

ಸಂಘದ ಸದಸ್ಯರಾಗಲು ಇದ್ದ ಎರಡು ಕಂಡೀಷನ್ ಪೈಕಿ ಒಂದನ್ನು ಹೇಳಲೇಬೇಕಿಲ್ಲ ಅವರು ಬಾಲ್ಡ್ ಆಗಿರಬೇಕು.. ಅಂದ ಮಾತ್ರಕ್ಕೆ ಸಂಘದ ಸದಸ್ಯತ್ವ ಸಿಕ್ಕಿಬಿಡುತ್ತಿರಲಿಲ್ಲ ತಾವು ಬಾಲ್ಡ್ ಎನ್ನುವ ಬಗ್ಗೆ ಹೆಮ್ಮೆ ಇರಬೇಕು, ಅಹಂ ಇರಬೇಕು, ಕೊಬ್ಬಿರಬೇಕು.. ಇದು ಎರಡನೆಯ ಕಂಡೀಶನ್. ಕೂದಲಿದ್ದ ತಲೆ ನೋಡಿದರೆ ಸಾಕು ಉಕ್ಕೀ ಉಕ್ಕಿ ನಗು ಬರಬೇಕು..

ಈ ಸಂಘ ಘನಂಧಾರಿ ಸಂಘವೇ. ಇದು ಗೌರವ ಸದಸ್ಯತ್ವವನ್ನೂ ಕೊಡುತ್ತಿತ್ತು. ಹಾಗೆ ಒಂದು ಸಲ ಗೌರವ ಸದಸ್ಯತ್ವ ಕೊಟ್ಟಿದ್ದು ಯಾರಿಗೆ ಗೊತ್ತಾ- ಐ ಕೆ ಗುಜ್ರಾಲ್ ಗೆ.

ಬಾಲ್ಡಿ ಸಂಘದಲ್ಲಿ ಬರೀ ಆಟ ಕೂಟ ಅಲ್ಲ, ವಿಚಾರ ವಿನಿಮಯವೂ ಆಗುತ್ತಿತ್ತು ಆದರೆ ಭಾಷಣಕಾರರಾಗಿ ಬರುವವರು ಸಹಾ -.ಗೊತ್ತಾಯ್ತಲ್ವಾ..

ಒಂದು ಸಲ ಹೀಗೆ ಎಲ್ಲಾ ಸಭೆ ಸೇರಿದ್ದಾರೆ. ಆಗ ಒಬ್ಬ ಸರ್ದಾರ್ಜಿ ಅಲ್ಲಿಗೆ ಎಂಟ್ರಿ ಕೊಟ್ಟರು. ತಮಗೂ ಸಂಘದ ಸದಸ್ಯತ್ವ ಕೊಡಬೇಕು ಅಂತ. ತಲೆಗೆ ಭಾರೀ ಪಂಜಾಬಿ ಪಗಡಿ. ಇವರು ಸಂಘಕ್ಕೆ ಅರ್ಹರೋ ಇಲ್ಲವೋ ಯಾರಿಗೆ ಗೊತ್ತು. ಪಗಡಿ ಬಿಚ್ಚಿ ಎನ್ನೋಣ ಅಂದರೆ ಆ ದಿನ ಸದಸ್ಯರ ಹೆಂಡಿರು ಮಕ್ಕಳೆಲ್ಲಾ ಇದ್ದಾರೆ.

ಕೊನೆಗೆ ಆ ಮಹನೀಯರನ್ನ ಒಂದಷ್ಟು ಜನ ಪಕ್ಕದಲ್ಲಿದ್ದ ಟಾಯ್ಲೆಟ್ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿಂದಲೇ ವಿಜಯದ ಕಹಳೆ ಮೊಳಗಿಸಿದರು. ಆ ಸರ್ದಾರ್ಜಿ ಹೊರಬಂದಾಗ ಎಲ್ಲರೂ ತಬ್ಬಿದ್ದೇನು, ಚಿಯರ್ಸ್ ಹೇಳಿದ್ದೇನು..

ಅಲ್ಲಿದ್ದ ಬಾಲ್ದಿಗಳಲ್ಲೇ ಸುಮಾರು ಕೆಟಗರಿಗಳಿತ್ತು- ಮೂನ್ ಶೈನ್, ಸನ್ ಶೈನ್, ವಿಲ್ ಶೈನ್..

ಹಸ್ತಸಾಮುದ್ರಿಕೆ ಎನ್ನುವುದನ್ನೇ ಈ ಸಂಘ ಗೇಲಿ ಮಾಡುತ್ತಿತ್ತು. ಏಕೆಂದರೆ ಈ ಸಂಘದ ಸದಸ್ಯರ ಥಿಯರಿ ಪ್ರಕಾರ ಭವಿಷ್ಯ ಹುಡುಕಲು ಕೈಯನ್ನೇ ನೋಡಬೇಕಾದ್ದೇನಿಲ್ಲವಂತೆ. ಫಳ ಫಳ ಹೊಳೆಯುವ ತಲೆ ನೋಡಿದರೆ ಸಾಕು ಎನ್ನುವುದು ಎಲ್ಲರ ನಂಬಿಕೆಯಾಗಿತ್ತು.

ಈ ಸಂಘದ ಅತಿ ಹಿರಿಯ ಸದಸ್ಯರಾದ ಉದ್ಯಮಿ ಕೆ ಜಿ ಕೋಸ್ಲಾ ಯಾವಾಗಲೂ ಹೇಳುತ್ತಿದ್ದರು. ಮುಂದೆ ಬಾಲ್ಡಿ ಆಗಿದ್ದರೆ ಆತ ಚಿಂತಕ, ಹಿಂದೆ ಬಾಲ್ಡಿ ಆಗಿದ್ದರೆ ರಸಿಕ. ಹಿಂದೆ ಮುಂದೆ ಎರಡೂ ಬಾಲ್ಡಿ ಆಗಿದ್ದವರು ಚಿಂತಕ -ರಸಿಕರು.. ಹೀಗೆ.. ಆಹಾ ಎನ್ನದೆ ನನಗೇನು ಬೇರೆ ದಾರಿಯಿದೆ?.

ಹೀಗಿರುತ್ತಲೊಂದು ದಿನ ಈ ಸಂಘಕ್ಕೆ ಹೊಳೆದು ಹೋಯ್ತು. ಜಗತ್ತಿನ ಬಾಲ್ಡಿಗಳೇ ನೀವು ಕಳೆದುಕೊಳ್ಳುವುದೇನಿಲ್ಲ ಎಂದು ಹೇಳಿದ್ದು ಆಗಿದೆ. ಹಾಗಾದರೆ ಕಳೆದುಕೊಳ್ಳುವವರಾದರೂ ಯಾರು ಅಂತ ಯೋಚಿಸಿದಾಗ ಫಕ್ಕನೆ ಹೊಳೆದದ್ದು ಯಸ್! ನಿಮ್ಮ ಊಹೆ ಸರಿ ಅದು- ಕ್ಷೌರಿಕರು..

ಹೀಗೆಲ್ಲಾ ಓದುತ್ತಾ ಓದುತ್ತಾ ಕುಳಿತಾಗ ನನ್ನ ಎದುರಿದ್ದ ಫೋನ್ ‘ಟ್ರಿಣ್’ ಎಂದಿತು. ಫೋನ್ ಎತ್ತಿದೆ. ಆ ಕಡೆ ಇದ್ದವರು ‘ಏನು ಗೊತ್ತಾ ನಮ್ಮ ರಾಮೋಜಿ ಫಿಲಂ ಸಿಟಿಗೆ ಸಿಹಿಕಹಿ ಚಂದ್ರು ಬಂದಿದ್ದಾರೆ, ಸೀರಿಯಲ್ ಡಿಸ್ಕಷನ್ ಗೆ’ ಎಂದರು.

ನಾನು ಆಗ ‘ಈಟಿವಿ’ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥ. ಹಾಗೆ ಬೆಂಗಳೂರಿನಿಂದ ಬಂದ ಯಾರೇ ಆದರೂ ನಮ್ಮ ಹುಡುಗರ ಬಳಿ ಕರೆತರುತ್ತಿದ್ದೆ. ತೆಲುಗುವೀಡಿನಲ್ಲಿ ಒಂದಷ್ಟು ಕನ್ನಡದಲ್ಲಿ ಮಾತಾಡಿ ಬರ ತೀರಿಸಿಕೊಳ್ಳಲಿ ಅಂತ.

ಹಾಗೆ ಬಂದ ಸಿಹಿ ಕಹಿ ಚಂದ್ರುಗೆ ಒಬ್ಬ ಹುಡುಗ, ಸೊಂಪುಗೂದಲಿನವ ಕೇಳಿಯೇಬಿಟ್ಟ- ‘ನಿಮ್ಮ ಬಾಲ್ಡಿ ತಲೆಯ ರಹಸ್ಯವೇನು?’ ಅಂತ.

ಚಂದ್ರು ಹಿಂದೆ ಮುಂದೆ ನೋಡಲೇ ಇಲ್ಲ-
ಸಿಂಪಲ್, ಕೂದಲು ಸೊಂಪಾಗಿ ಬೆಳೆಯಲು ಗೊಬ್ಬರ ಬೇಕು. ಯಾರ ತಲೆಯಲ್ಲಿ ಗೊಬ್ಬರ ತುಂಬಿದೆಯೋ ಅವರಿಗೆ ಕೂದಲಿದೆ. ನನ್ನ ತಲೆಯಲ್ಲಿ ಗೊಬ್ಬರ ಇಲ್ಲ. ಹಾಗಾಗಿ ನಾನು ಬಾಲ್ಡಿ ಎಂದರು.

ಸುತ್ತಾ ಇದ್ದವರೆಲ್ಲಾ ಶಾಕ್ ಆಗಿ ನಿಂತಿದ್ದರು.
ಒಂದೇ ಒಂದು ದನಿ ‘ಹೋ’ ಎಂದು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡುತ್ತಿತ್ತು.
ಆ ದನಿ ಯಾರದು ಎಂದು ಸುತ್ತಾ ನೋಡಿದೆ.
ಅದು ನನ್ನದೇ …