Friday, May 8, 2026
Google search engine
Home Blog Page 227

ಮಾವಿನ ವಾಟೆಯಿಂದ ಮಾಯವಾಗಲಿದೆ ನಿಮ್ಮ ಹೊಟ್ಟೆ ಬಜ್ಜು, ಬಿಳಿ ಕೂದಲಿನ ಸಮಸ್ಯೆ

0

ತುಳಸೀತನಯ


ಇದು ಮಾವಿನ ಹಣ್ಣಿನ ಕಾಲ. ಹಣ್ಣು ತಿಂದು ಓಟೆ ಬಿಸಾಕುವವರೇ ಹೆಚ್ಚು.

ಓಟೆ ಬಿಸಾಕುವ ಮುನ್ನ ಇದನ್ನೊಮ್ಮೆ ಪೂರ್ತಿ‌ ಓದಿದರೆ ವಾಟೆಯೇ ಬೇಕು ಎಂದು ಮುಗಿ ಬೀಳುತ್ತೀರಿ.

ವಾಟೆಯಿಂದ ಒಂದೆರಡಲ್ಲ ಅನೇಕ ಅನುಕೂಲಗಳಿವೆ.

ನಮಗೆ ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನ ಕೆಲವು ಸಣ್ಣ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ.

ನಮ್ಮ ಸುತ್ತಲಿನಲ್ಲಿರುವ ನೈಸರ್ಗಿಕ ವಸ್ತುಗಳಿಂದ ಅನೇಕ ಔಷದೀಯ ಗುಣಗಳಿವೆ. ಆದರೆ ಅಂತಹ ಎಷ್ಟೊ ವಸ್ತು ನಮ್ಮ ಕಣ್ಮುಂದೆ ಇದ್ದರೂ ಆ ಬಗ್ಗೆ ನಮಗೆ ಕಿಂಚಿತ್ತೂ ತಿಳಿದಿರುವುದಿಲ್ಲ.

ಅದರಲ್ಲಿ ಮಾವಿನ ಹಣ್ಣು ಎಷ್ಟು ಜನರಿಗೆ ಗೊತ್ತಿಲ್ಲ ಹೇಳಿ. ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅಷ್ಟೇ ಅಲ್ಲದೆ ಆಯುರ್ವೇದದಲ್ಲಿ ಮಾವಿನ ಮರಕ್ಕೆ ಮತ್ತು ಮಾವಿನ ಎಲೆ ತುಂಬಾ ಪ್ರಾಮುಖ್ಯತೆ ಇದೆ.

ಹಾಗೆಯೇ ನಾವು ಮಾವಿನ ಹಣ್ಣನ್ನು ತಿಂದು ಅದರ ಗೊರಟೆ(ವಾಟೆ) ಎಸೆದು ಬಿಡುತ್ತೇವೆ. ಇದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂಬುದನ್ನು ನಾವಿಂದು‌ ತಿಳಿಯೋಣ. ನೀವು ಒಂದು ಮಾವಿನ ವಾಟೆ (ಗೊರಟೆ) ಇಂದ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಮತ್ತು ನಿಮಗೆ ಏನಾದರೂ ಹೊಟ್ಟೆ ಸಮಸ್ಯೆ ಇದ್ದರೆ ಮತ್ತು ಕೂದಲು ಚೆನ್ನಾಗಿ ಬೆಳೆಯುವುದಕ್ಕೆ ಮತ್ತು ಕೂದಲು ಬಿಳಿ ಇದ್ದರೆ ಅದನ್ನು ಕಪ್ಪುಬಣ್ಣಕ್ಕೆ ತರಲು ಈ ಪದಾರ್ಥ ತುಂಬಾ ಸಹಾಯ ಮಾಡುತ್ತದೆ.

ಅದು ಹೇಗೆಂದರೆ ‌ಮಾವಿನ ವಾಟೆ (ಗೊರಟೆ) ಬೀಜವನ್ನು ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಪುಡಿಯನ್ನು ಮಾಡಿಕೊಳ್ಳಿ.

ನಂತರ ಆ ಪುಡಿಯನ್ನು ತಿಂದು ಸ್ವಲ್ಪ ನೀರನ್ನು ಕುಡಿದರೆ ನಿಮ್ಮ ದೇಹದ ತೂಕವನ್ನು ಮತ್ತು ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.

ಎರಡನೆಯದಾಗಿ ನಿಮ್ಮ ಕೂದಲು ಏನಾದರೂ ಉದುರುತ್ತಿದ್ದರೆ ಸ್ವಲ್ಪ ಪುಡಿಯ ಜೊತೆ ನೀರನ್ನು ಬೆರೆಸಿ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ನಿಮ್ಮ ತಲೆಗೆ ಹಚ್ಚಿದರೆ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ.

ನಂತರ ನಿಮ್ಮ ಕೂದಲು ಕಪ್ಪಾಗಿ ಆಗಬೇಕು ಅಂದರೆ ಸಾಸಿವೆ ಎಣ್ಣೆಯ ಜೊತೆ ನೀವು ಮಾವಿನ ವಾಟೆ ಬೀಜವನ್ನು ಹಾಕಿ ಒಂದು ವಾರ ಒಣಗಿಸಿ ತಲೆಗೆ ಹಚ್ಚಿದರೆ ನಿಮ್ಮ ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ.

ಮುಖದಲ್ಲಿ ಗುಳ್ಳೆಗಳು ಆಗಿದ್ದರೆ ಈ ಪುಡಿಯ ಜೊತೆ ಸ್ವಲ್ಪ ಟೊಮೊಟೊವನ್ನು ಹಾಕಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ನಿಮ್ಮ ಮುಖದಲ್ಲಿರುವ ಗುಳ್ಳೆಗಳು ಬೇಗನೆ ವಾಸಿಯಾಗುತ್ತದೆ.

ಮಹಿಳೆಯ ತಲೆಯನ್ನೇ ಕಿತ್ತುಕೊಂಡು ಹೋದ‌‌ ಚಿರತೆ

Publicstory. in


ರಾಮನಗರ: ಬಯಲಿಗೆ ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಭಯಾನಕವಾಗಿ ಎರಗಿರುವ ಚಿರತೆ ಆಕೆಯ ತಲೆಯನ್ನು ದೇಹದಿಂದ ಕಿತ್ತು ಅಲ್ಲಿಂದ ಪರಾರಿಯಾಗಿದೆ.

ಜಿಲ್ಲೆಯ ಕೊಟ್ಟುಗಾನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 68 ವರ್ಷದ ಗಂಗಮ್ಮ ಮೃತ ಮಹಿಳೆ.

ಶನಿವಾರ ಮುಂಜಾನೆ ಮನೆಯಿಂದ ಹೊರಗೆ ಬಯಲಿಗೆ ಬಹಿರ್ದೆಸೆಗೆ ತೆರಳಿದಾಗ ಈ ದಾಳಿ ನಡೆಸಿದೆ.

ಆಕೆ ಒಬ್ಬರೇ ಇದ್ದುದ್ದರಿಂದ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಶವವನ್ನು ನೆಲಮಂಗಲ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ನೀಡಲಾಗುವುದು. ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೆಲವೇ ದಿನಗಳ ಹಿಂದಷ್ಟೇ ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ರಾತ್ರಿ ಮನೆಯೊಳಗೆ ನುಗ್ಗಿದ ಚಿರತೆ ಮೂರು ವರ್ಷದ ಮಗುವನ್ನು ಹೊತ್ತುಕೊಂಡು ಹೋಗಿ ಕೊಂದು ಹಾಕಿತ್ತು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 16, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಶನಿವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ನವಮಿ
(ನಿನ್ನೆ ಬೆಳಿಗ್ಗೆ 8 ಗಂ॥ 24 ನಿ।। ರಿಂದ
ಇಂದು ಬೆಳಿಗ್ಗೆ 10 ಗಂ॥ 24 ನಿ।। ತನಕ)
ನಕ್ಷತ್ರ : ಶತಭಿಷೆ
(ನಿನ್ನೆ ಬೆಳಿಗ್ಗೆ 8 ಗಂ॥ 32 ನಿ।। ರಿಂದ
ಇಂದು ಬೆಳಿಗ್ಗೆ 11 ಗಂ॥ 7 ನಿ।। ತನಕ)
ಯೋಗ : ವೈಧೃತಿ
ಕರಣ : ಗರಜೆ
ವರ್ಜ್ಯಂ : (ಇಂದು ರಾತ್ರಿ 6 ಗಂ॥ 17 ನಿ।। ರಿಂದ ಇಂದು ರಾತ್ರಿ 8 ಗಂ॥ 4 ನಿ।। ತನಕ)
ಅಮೃತಕಾಲ : (ಇಂದು ಪ್ರಾತಃಕಾಲ 3 ಗಂ॥ 8 ನಿ।। ರಿಂದ ಇಂದು ಪ್ರಾತಃಕಾಲ 4 ಗಂ॥ 54 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 7 ಗಂ॥ 26 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 17 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 8 ಗಂ॥ 57 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 34 ನಿ।। ತನಕ)
ಗುಳಿಕ : (ಇಂದು ಪ್ರಾತಃಕಾಲ 5 ಗಂ॥ 43 ನಿ।। ರಿಂದ ಇಂದು ಬೆಳಿಗ್ಗೆ 7 ಗಂ॥ 20 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 49 ನಿ।। ರಿಂದ ಇಂದು ಸಂಜೆ 3 ಗಂ॥ 26 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 43 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 41 ನಿ।। ಗೆ
ರವಿರಾಶಿ : ವೃಷಭ
ಚಂದ್ರರಾಶಿ : ಕುಂಭ

ಮೇಷ ರಾಶಿ ಭವಿಷ್ಯ : 16 May 2020
ನಿಮ್ಮ ಚೈತನ್ಯವನ್ನು ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ಇದು ನಿಮ್ಮ ಅರ್ಧಾಂಗಿಯ ಜೊತೆ ಪ್ರಣಯಕ್ಕೆ ಉತ್ತಮವಾದ ದಿನ. ತಣ್ಣೀರು ಕುಡಿಯುವುದು, ಇಂದು ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಅದೃಷ್ಟ ಸಂಖ್ಯೆ: 7

ವೃಷಭ ರಾಶಿ ಭವಿಷ್ಯ : 16 May 2020
ನಿಮ್ಮ ಚಿಂತನೆ ಮತ್ತು ಶಕ್ತಿಯನ್ನು ನೀವು ವಾಸ್ತವವಾಗಿ ಏನನ್ನು ನೋಡಬಯಸುತ್ತೀರೋ ಅದನ್ನು ಸಾಧಿಸುವಲ್ಲಿ ನಿರ್ದೇಶಿಸಿ. ಇದುವರೆಗೆ ನಿಮ್ಮ ಸಮಸ್ಯೆಯಂದರೆ ನೀವು ಪ್ರಯತ್ನಿಸದೇ ಕೇವಲ ಆಸೆಪಡುತ್ತೀರಿ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ. ನಿಮ್ಮ ಪ್ರೀತಿ ಒಂದು ಹೊಸ ಎತ್ತರವನ್ನು ತಲುಪುತ್ತದೆ. ಈ ದಿನವು ನಿಮ್ಮ ಪ್ರೀತಿಪಾತ್ರರ ನಗುವಿನಿಂದ ಪ್ರಾರಂಭವಾಗುತ್ತದೆ, ಮತ್ತು ಪರಸ್ಪರರ ಕನಸಿನಲ್ಲಿ ಕೊನೆಗೊಳ್ಳುತ್ತದೆ. ಅದೃಷ್ಟ ಸಂಖ್ಯೆ: 7

ಮಿಥುನ ರಾಶಿ ಭವಿಷ್ಯ : 16 May 2020
ವಿಶ್ರಾಂತಿ ಪ್ರಮುಖವಾದ ಒಂದು ದಿನ – ಇತ್ತೀಚೆಗೆ ನೀವು ಬಹಳಷ್ಟು ಮಾನಸಿಕ ಒತ್ತಡ ಎದುರಿಸುತ್ತಿದ್ದೀರಿ – ಮನೋಲ್ಲಾಸ ಮತ್ತು ಮನೋರಂಜನೆ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಜೀವನದ ಕಳಪೆ ಆರೋಗ್ಯದಿಂದಾಗಿ, ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು, ಆದರೆ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ಹಣವನ್ನು ಉಳಿಸಲಾಗಿದೆ ಇದರಿಂದ ಅದು ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗಿರುತ್ತದೆ. ಅದೃಷ್ಟ ಸಂಖ್ಯೆ: 5

ಕರ್ಕ ರಾಶಿ ಭವಿಷ್ಯ : 16 May 2020
ಏನಾದರೂ ಆಸಕ್ತಿದಾಯಕವಾದದ್ದನ್ನು ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ನಿಮ್ಮ ನಡೆಯಲ್ಲಿ ಉದಾರ ಮನೋಭಾವ ಹೊಂದಿರಿ ಮತ್ತು ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ಉತ್ತಮವಾದ ಪ್ರೀತಿಯ ಕ್ಷಣಗಳನ್ನು ಕಳೆಯಿರಿ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ಅದೃಷ್ಟ ಸಂಖ್ಯೆ: 8

ಸಿಂಹ ರಾಶಿ ಭವಿಷ್ಯ : 16 May 2020
ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡಬೇಡಿ. ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ ನೀವು ನಿಮ್ಮ ಯಾವುದೇ ವಿಶ್ವಾಸಾರ್ಹರಿಂದ ಸಲಹೆಯನ್ನು ತೆಗೆದುಕೊಳ್ಳಬೇಕು. ಕೋಪ ಅಲ್ಪಾವಧಿ ಹಾಗೂ ಅದು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸಬಹುದೆಂದು ಅರ್ಥ ಮಾಡಿಕೊಳ್ಳುವ ಸಮಯ. ಅದೃಷ್ಟ ಸಂಖ್ಯೆ: 7

ಕನ್ಯಾ ರಾಶಿ ಭವಿಷ್ಯ : 16 May 2020
ಉತ್ತಮ ಆರೋಗ್ಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ, ಗ್ರಹ ಮತ್ತು ನಕ್ಷತ್ರಗಳ ಚಲನೆಯಿಂದ ಇಂದು ನಿಮಗಾಗಿ ಹಣವನ್ನು ಸಂಪಾದಿಸುವ ಅನೇಕ ಅವಕಾಶಗಳು ಉಂಟಾಗುತ್ತವೆ. ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ. ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿ ಘಟನೆಗಳನ್ನು ಕ್ಷಮಿಸಿ. ಅದೃಷ್ಟ ಸಂಖ್ಯೆ: 5

ತುಲಾ ರಾಶಿ ಭವಿಷ್ಯ : 16 May 2020
ನಿಮ್ಮಲ್ಲಿ ಶಕ್ತಿಯ ಕೊರತೆಯಿರದೇ ಆತ್ಮವಿಶ್ವಾಸದ ಕೊರತೆಯಿರುವುದರಿಂದ ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಿ. ಭೂಮಿ ಅಥವಾ ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಇಂದು ನಿಮಗೆ ಮಾರಕವಾಗಬಹುದು, ಸಾಧ್ಯವಾದಷ್ಟು ಈ ವಿಷಯಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಮ್ಮಲ್ಲಿ ಕೆಲವು ಆಭರಣ ಅಥವಾ ಗೃಹಬಳಕೆಯ ಸಾಧನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಯಾರಾದರೂ ನಿಮಗೆ ಪ್ರೇಮ ನಿವೇದನೆ ಮಾಡುವ ಸಾಧ್ಯತೆಗಳಿವೆ. ಅದೃಷ್ಟ ಸಂಖ್ಯೆ: 7

ವೃಶ್ಚಿಕ ರಾಶಿ ಭವಿಷ್ಯ : 16 May 2020
ನೀವು ವ್ಯಾಯಾಮದ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ಆಲೋಚಿಸದೆ ನೀವು ಯಾರಿಗೂ ತಮ್ಮ ಹಣವನ್ನು ಕೊಡಬಾರದು, ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ದೊಡ್ಡ ತೊದರೆಗೊಳಗಾಗಬಹುದು. ನೀವು ಸಾಮಾಜಿಕ ಕಾರ್ಯಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದಲ್ಲಿ ಸ್ನೇಹಿತರು ಮತ್ತು ಹೊಸ ಪರಿಚಯಸ್ಥರನ್ನು ಪಡೆಯುತ್ತೀರಿ. ನಿಮ್ಮ ಮನದನ್ನೆಯ ವಿಚಿತ್ರ ನಡವಳಿಕೆ ಇಂದು ನಿಮ್ಮ ಪ್ರೇಮವನ್ನು ಘಾಸಿಗೊಳಿಸುತ್ತದೆ. ಅದೃಷ್ಟ ಸಂಖ್ಯೆ: 9

ಧನು ರಾಶಿ ಭವಿಷ್ಯ : 16 May 2020
ನಿಮ್ಮ ದೇಹದ ಪುನಃಶ್ಚೇತನಕ್ಕಾಗಿ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ನೀವು ಆಯಾಸ ಹಾಗೂ ನಿರಾಸೆಯಲ್ಲಿ ಸಿಲುಕುತ್ತೀರಿ. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ನೀವು ಅತೀ ಉದಾರಿಯಾಗಿದ್ದಲ್ಲಿ – ನಿಮ್ಮ ನಿಕಟ ಜನರು ನಿಮ್ಮ ಅನುಚಿತ ಲಾಭ ತೆಗೆದುಕೊಳ್ಳಬಹುದು. ಮೊಂಬತ್ತಿ ಬೆಳಕಿನಲ್ಲಿ ಪ್ರೀತಿಪಾತ್ರರ ಜೊತೆ ಆಹಾರ ಹಂಚಿಕೊಳ್ಳುವುದು. ಅದೃಷ್ಟ ಸಂಖ್ಯೆ: 6

ಮಕರ ರಾಶಿ ಭವಿಷ್ಯ : 16 May 2020
ನೀವು ಕೆಲವು ಗಂಭೀರ ತೊಂದರೆಗಳನ್ನು ಎದುರಿಸಲು ಸಾಧ್ಯತೆಯಿರುವುದರಿಂದ ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ವಿಶೇಷವಾಗಿ ಸಣ್ಣ ಹುಚ್ಚಲ್ಲದೇ ಬೇರೇನೂ ಅಲ್ಲದ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ – ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ. ಆದರೆ ನಿಮ್ಮ ಸಹನೆ ಕಳೆದುಕೊಳ್ಳಬೇಡಿ, ಏಕೆಂದರೆ ಇದು ಬೆಂಕಿಗೆ ತುಪ್ಪ ಸುರಿಯುತ್ತದೆ. ನೀವು ಸಹಕರಿಸದಿದ್ದಲ್ಲಿ ಯಾರೂ ನಿಮ್ಮ ಜೊತ ಜಗಳ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಶ್ರಮಿಸಿ. ಅದೃಷ್ಟ ಸಂಖ್ಯೆ: 6

ಕುಂಭ ರಾಶಿ ಭವಿಷ್ಯ : 16 May 2020
ವಿಶ್ರಾಂತಿಯ ಸಲುವಾಗಿ ನಿಕಟ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಜೊತಗಿರುವವರ ಜೊತೆ ವಾದವಿವಾದಕ್ಕೆ ತೊಡಗಬೇಡಿ. ಯಾವುದೇ ಭಿನ್ನಾಭಿಪ್ರಾಯದ ವಿಷಯಗಳಿದ್ದಲ್ಲಿ – ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಿ. ಇಂದು ನೀವು ನಿಮ್ಮ ಜೀವನದ ತೊಂದರೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ ಆದರೆ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ಅದೃಷ್ಟ ಸಂಖ್ಯೆ: 4

ಮೀನ ರಾಶಿ ಭವಿಷ್ಯ : 16 May 2020
ತುಂಬಾ ಪ್ರಯಾಣ ನಿಮಗೆ ದಣಿವಾಗಿಸುತ್ತದೆ ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ. ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ ಮಾಡದೇ ಜೀವನದ ಪಾಠಗಳನ್ನು ಕಲಿಯಲು ಪ್ರಯತ್ನಿಸಿ. ಇಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇಂದು ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ಆಗಾಗ್ಗೆ ಯೋಚಿಸುವ ಕೆಲಸಗಳನ್ನು ಮಾಡುತ್ತೀರಿ. ಅದೃಷ್ಟ ಸಂಖ್ಯೆ: 1

ಮುತ್ತಪ್ಪ‌ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಗುಂಡು: 6 ಮಂದಿ ಬಂಧನ

ರಾಮನಗರ: ಮಾಜಿ‌ ಭೂಗತ ದೊರೆ, ಸಮಾಜ ಸೇವಜ ಮುತ್ತಪ್ಪ‌ ರೈ ಅವರ ಅಂತ್ಯಕ್ರಿಯೆ ವೇಳೆ ಆರು ಮಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಮುತ್ತಪ್ಪ ರೈ ಅವರ ಎರಡನೇ ಪುತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವಾಗ ಗಾಳಿಯಲ್ಲಿ ಗುಂಡು ಹಾರಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಮುತ್ತಪ್ಪ ರೈ ಅವರ ಆರು ಜನ ಗನ್‌ಮ್ಯಾನ್ ಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಸಂಜೆ ಬಿಡದಿಯಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಆರೋಪಿಗಳು ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಗನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಮೋನಪ್ಪ, ಚಾತರ್ ಸಿಂಗ್,ಗಿರೀಶ್, ಲಕ್ವಿರ್ ಸಿಂಗ್, ರಂಜಿತ್ ರೈ‌ ಹಾಗೂ ಸುನಿಲ್ ಎನ್ನಲಾಗಿದೆ.

ಕೊರೊನಾ: ಎರಡು ಪಾಳಿಯಲ್ಲಿ ಶಾಲೆ ನಡೆಸಲು ಸರ್ಕಾರ ಚಿಂತನೆ

ಸುರೇಶ ಬೆಳಗಜೆ


ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2020-21ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಪಾಳಿ ಪದ್ಧತಿ ಶಾಲೆಯ ಚಿಂತನೆಯನ್ನು ಮುಂದಿಟ್ಟಿದೆ.

ಬೆಳಿಗ್ಗೆ 8 ರಿಂದ ಆರಂಭಿಸಿ ಮಧ್ಯಾಹ್ನ 12.20 ವರೆಗೆ ಮೊದಲನೇ ಪಾಳಿ ಮತ್ತು 12.10ರಿಂದ ಸಂಜೆ 5ವರೆಗೆ ಎರಡನೇ ‌ಪಾಳಿ ಎಂಬ ಸೂಚನೆ ಇಲಾಖೆಯದು‌.

ಕೋವಿಡ್ 19 ಬಂದಿರುವ ಕಾರಣ ಇದು ಅನಿವಾರ್ಯ ಆಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದರ ಅನುಷ್ಠಾನ ಕಷ್ಟಸಾಧ್ಯ ಎಂಬ ಆತಂಕ ಶಿಕ್ಷಕ ವರ್ಗದಲ್ಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಒಂದು ತಾಲ್ಲೂಕಿನಿಂದ ಇನ್ನೊಂದು ತಾಲ್ಲೂಕಿನ ಹಳ್ಳಿಗೆ ಹೋಗಲು ಎರಡು ಗಂಟೆ ಪ್ರಯಾಣ ಮಾಡುವ ಸಾಕಷ್ಟು ಶಿಕ್ಷಕರಿದ್ದಾರೆ.

ಹಳ್ಳಿ ಪ್ರದೇಶಗಳಲ್ಲಿ ಮುಂಜಾನೆ ಬೇಗನೆ ಬಸ್ಸುಗಳೂ ಇರುವುದಿಲ್ಲ. ಹೀಗಿರುವಾಗ ಎಂಟು ಗಂಟೆಗೆ ಶಾಲೆ ತಲುಪಲು ಕಷ್ಟವಾಗದೇ ಎಂಬ ಪ್ರಶ್ನೆ ಶಿಕ್ಷಕರೊಬ್ಬರದು.

ಇದನ್ನೂ ಓದಿ:ತಿಪಟೂರು ಕೆರೆ ಕಟ್ಟುವಾಗಿನ ಅನುಭವ

ಮುಂಜಾನೆಯ ನಿತ್ಯ ವಿಧಿಗಳನ್ನು ಮುಗಿಸಿ ಬೆಳಿಗ್ಗೆ ಎಂಟರೊಳಗೆ ಮಕ್ಕಳನ್ನು ಕಳುಹಿಸುವುದು ಪೇಟೆಯಲ್ಲಿ ಇರುವವರಿಗೆ ಕಷ್ಟವೇನಲ್ಲ. ಆದರೆ, ಹಳ್ಳಿಯಲ್ಲಿ ‌ಇದು ಕಷ್ಟಸಾಧ್ಯ ಎಂಬ ಅನಿಸಿಕೆ ಪೋಷಕಿ ಸೀಮಾ ಅವರದು.

ಮುಂಜಾನೆಯ ಉಪಾಹಾರದ ಸಮಸ್ಯೆಯೂ ಕಾಡಬಹುದು ಎಂದು ಪೋಷಕ ಉಮೇಶ್ ನುಡಿಯುತ್ತಾರೆ. ಜಿಲ್ಲಾ ಪಂಚಾಯತ್ ಈ ವಿಚಾರದಲ್ಲಿ ನಿರ್ಣಯ ಮಾಡುವ ಅವಕಾಶವೇನೋ ಇದೆ. ಅದರೆ, ಅವರಿಗೂ ಶಾಲೆಗೆ ಮಕ್ಕಳು ಮತ್ತು ಶಿಕ್ಷಕರು ಎಷ್ಡೆಷ್ಟು ದೂರದಿಂದ ಬರುತ್ತಾರೆ ಎಂಬ ಅರಿವು ಇರುವುದಿಲ್ಲ. ಇದರಿಂದ ಸಮಸ್ಯೆ ಪರಿಹಾರ ಕಷ್ಟ ಎಂದೂ ಅವರ ಅಭಿಪ್ರಾಯ.

ಅವಧಿ ಕಡಿತ ಮಾಡುವುದು, ಅಗತ್ಯ ಇದ್ದಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಕೊಟ್ಟಿರುವುದು ಸ್ವಾಗತಾರ್ಹ. ಅಂಗನವಾಡಿ, ಸಮುದಾಯ ಭವನಗಳನ್ನು ಬಳಸಿಕೊಳ್ಳುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಯೋಚನೆ ಕಾರ್ಯಯೋಗ್ಯವೇ ಎಂಬ ಪ್ರಶ್ನೆ ಶಿಕ್ಷಕರ ಸಂಘದ ಪದಾಧಿಕಾರಿ ಒಬ್ಬರದು.

ಸರ್ಕಾರಿ ಪ್ರಾಥಮಿಕ ಶಾಲೆಯೇ ಇರಲಿ; ಪ್ರೌಢಶಾಲೆಯೇ ಇರಲಿ- ಅವುಗಳಲ್ಲಿ ಪ್ರತಿಯೊಂದು ವಿಷಯವನ್ನು ಅದನ್ನು ಬಲ್ಲವರೇ ಬೋಧಿಸುತ್ತಿಲ್ಲ. ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಹಲವು ವಿಷಯಗಳನ್ನು ಬೋಧಿಸುವುದು ಅನಿವಾರ್ಯ ಎನಿಸುತ್ತದೆ.

ಹೀಗಿರುವಾಗ ಪ್ರಾಥಮಿಕ ಶಾಲೆಗಳ ಅರ್ಹ ಶಿಕ್ಷಕರು ಪ್ರೌಢಶಾಲೆಯಲ್ಲಿ ಮತ್ತು ಅಗತ್ಯ ಇದ್ದರೆ ಪ್ರೌಢಶಾಲಾ ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲಿ ಪಾಠ ಮಾಡಬಹುದೆಂಬ ಯೋಜನೆ ಕೇವಲ ‘ಕಾಗದದ ಹುಲಿ’ ಆದೀತು ಎಂದು ನಿವೃತ್ತ ಶಿಕ್ಷಕರೊಬ್ಬರ ಅಭಿಮತ.

ಹಳ್ಳಿಗಳಲ್ಲಿ ಅಂಗನವಾಡಿ, ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢ ಶಾಲೆ ಅಕ್ಕಪಕ್ಕದಲ್ಲಿ ಇರುವುದಿಲ್ಲ. ಜತೆಗೆ ವಾಹನ ಸೌಲಭ್ಯವೂ‌ ಕಷ್ಟಸಾಧ್ಯ. ಕನಿಷ್ಠ ಒಂದೆರಡು ಕಿಮೀ ದೂರದಲ್ಲಿರುವ ಇನ್ನೊಂದು ಶಾಲೆಯಲ್ಲಿ ತರಗತಿ ಮಾಡಲು ತೆರಳುವುದು ಹೇಗೆ ಎಂದೂ ಅವರು ಪ್ರಶ್ನೆ ಮುಂದಿಡುತ್ತಾರೆ.

ಶಿಕ್ಷಕರ ಲಭ್ಯತೆ ಮತ್ತು ಕ್ಷೇತ್ರ ಶಿಕ್ಷಣಾದಿಕಾರಿ ಅನುಮೋದನೆ ಮೇರೆಗೆ ಶಿಕ್ಷಕರನ್ನು ಪಾಳಿಗಳಲ್ಲಿ ನಿಯೋಜಿಸುವ ಚಿಂತನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುತ್ತದೆ.

ಹಳ್ಳಿಗಳ ಸರ್ಜಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿದಂತೆ ಶಿಕ್ಷಕರ ಸಂಖ್ಯೆಯನ್ನೂ ಕಡಿಮೆ ಮಾಡುತ್ತಾರೆ. ಹೀಗಿರುವಾಗ ಶಿಕ್ಷಕ ವರ್ಗ ಬೆಳಿಗ್ಗೆಯಿಂದ ಸಂಜೆವರೆಗೆ ದುಡಿಯುವ ಸ್ಥಿತಿ ಬಂದೀತು. ಇದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಶಿಕ್ಷಣ ತಜ್ಞರೊಬ್ಬರು ಹೇಳುತ್ತಾರೆ.

ಪಾಳಿ ಪದ್ಧತಿ- ಪಕ್ಕದ ಶಾಲೆಗಳ ಕೊಠಡಿ ಬಳಕೆಯಂಥ ಯೋಜನೆ ಆದೇಶ ಮಾಡುವಾಗ ಆಕರ್ಷಕವಾಗಿ ಕಾಣುತ್ತದೆ. ಅದರ ಅನುಷ್ಠಾನಕ್ಕೆ ಮುಂದಾದಾಗ ಹತ್ತೆಂಟು ಹುಳುಕುಗಳು ಹೊರಬರುತ್ತವೆ ಎಂದು ಶಿಕ್ಷಕರು ಹೇಳುತ್ತಾರೆ.

ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯ

ಪಾವಗಡ: ಕಾರ್ಮಿಕರ ಸುರಕ್ಷತೆಗೆ ಸರ್ಕಾರ ಅಗತ್ಯ ಸವಲತ್ತು ಕಲ್ಪಿಸಬೇಕು ಎಂದು ಆಗ್ರಹಿಸಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಕಾರ್ಮಿಕರು ಗುರುವಾರ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕ ವರ್ಗ ಕೊರೊನಾ ತಡೆಗಟ್ಟುವಲ್ಲಿ ಹಗಲಿರುಳು ಶ್ರಮಿಸುತ್ತಿದೆ. ಸರ್ಕಾರ ಇವರಿಗೆ ಯಾವುದೇ ಸುರಕ್ಷತಾ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿದರು.
ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ ನಡೆಸಬೇಕು. ಕಂಟೈನ್ ಮೆಂಟ್ ಮತ್ತು ಕೆಂಪು ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ವಿತರಿಸಬೇಕು. ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದವರಿಗೆ 50 ಲಕ್ಷ ವಿಮೆ ನೀಡಬೇಕು. ಎನ್.ಎಚ್.ಎಂ ನೌಕರರಿಗೆ ಪ್ರತಿ ತಿಂಗಳು 25 ಸಾವಿರ ಪ್ರೋತ್ಸಾಹ ಧನ ಕೊಡಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೆ 7500 ರೂ ಕೊಡಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಮದ್ಲೇಟಪ್ಪ, ಅಧ್ಯಕ್ಷೆ ಸುಶೀಲಮ್ಮ, ರಾಮಂಜಿನಪ್ಪ, ರಮೀಜಾ, ಅರುಣ, ರಾಧಮ್ಮ ಉಪಸ್ಥಿತರಿದ್ದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಎ.ಹನುಮಂತರಾಯಪ್ಪ ನಿಧನ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಮದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಎ.ಹನುಮಂತರಾಯಪ್ಪ ಅನಾರೋಗ್ಯದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.
ಬಿಎಸ್ಸಿ ಬಿಎಡ್ ಎಂಎಸ್ಸಿ ಪದವಿ ಪಡೆದಿದ್ದ ಇವರು 1970 ರಲ್ಲಿ ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾರಾಗಿ, 1995 ರಿಂದ 2000 ವರೆಗೂ ಪಾವಗಡದಲ್ಲಿ ಬಿಇಓ ಆಗಿ ಕಾರ್ಯನಿರ್ವಹಣೆ. 2000-2003 ರವರೆಗೂ ತುಮಕೂರು ಡಯಟ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು.
ನಿವೃತ್ತಿಯ ನಂತರವೂ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತ ಮನೆ ಪಾಠ ಹೇಳಿಕೊಡುತ್ತಿದ್ದರು. ಹೆಂಡತಿ ರಾಮಕ್ಕ, ಮಗ ದೀಪಕ್ ಹಾಗು ಸೊಸೆ ಮೊಮ್ಮಕ್ಕಳನ್ನ ಅಗಲಿದ್ದಾರೆ. ಮಂಗಳವಾರ ಮೈನರ್ ಹಾರ್ಟ್ ಅಟ್ಯಾಕ್ ಆಗಿ ಜಯದೇವ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಬುಧವಾರ ದೈವಾಧೀನರಾದ್ರು, ಗುರುವಾರ ಸ್ವ ಗ್ರಾಮದಲ್ಲಿ ಮಣ್ಣು ಮಾಡಿದ್ದಾರೆ. ನೆಚ್ಚಿನ ಮುಖ್ಯ ಶಿಕ್ಷಕ, ಬಿಇಒ,ಪ್ರೊಫೆಸರ್ ರನ್ನು ಕಳೆದುಕೊಂಡ ತಾಲ್ಲೂಕಿನ ವಿದ್ಯಾರ್ಥಿಗಳು, ಶಿಕ್ಷಕರು ಶ್ರದ್ದಾಂಜಲಿ ಸಮರ್ಪಿಸಿದ್ದಾರೆ.

ನೈರ್ಮಲ್ಯೀಕರಣ ಸುರಂಗ ಕ್ಕೆ ಚಾಲನೆ

ಪಾವಗಡ:  ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಹಿರಿಯ ಸಿವಿಲ್  ನ್ಯಾಯಾದೀಶ ವಿ.ಹನುಮಂತಪ್ಪ ನೈರ್ಮಲ್ಯೀಕರಣ ಸುರಂಗ (ATS Elgi Disinfectant Spraying Machine) ಉದ್ಘಾಟಿಸಿದರು.

ವೈದ್ಯ ಡಾ. ಜಿ. ವೆಂಕಟರಾಮಯ್ಯ, ನೈರ್ಮಲ್ಯೀಕರಣ ಸುರಂಗದಿಂದ ಆಸ್ಪತ್ರೆ ಸಿಬ್ಬಂದಿ, ವೈದ್ಯರು ನರ್ಭೀತಿಯಿಂದ ಕಾರ್ಯ ನಿರ್ವಹಿಸಬಹುದು. ಆಸ್ಪತ್ರೆಗೆ ಬರುವ ರೋಗಿಗಳಿಗೂ ಇದರಿಂದ ಅನುಕೂಲವಾಗುತ್ತದೆ. ಕೊರೊನಾ ನಿಯಂತ್ರಿಸುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

ಪಾವಗಡದ ಕೊಳಚೆ ಪ್ರದೇಶಗಳು, ಕಾಲೋನಿಗಳು ಮತ್ತು ಬುಡಕಟ್ಟು ಜನಾಂಗದವರು ಇರುವ ಸ್ಥಳಗಳಿಗೆ ಭೇಟಿ ನೀಡಿ ಶುಚಿತ್ವದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುತ್ತಾ ಆರಂಭಿಸಿದ ಯೋಜನೆ ಇಂದಿಗೂ ಅತ್ಯಂತ ಮಹತ್ತರವಾದ ಪರಿಣಾಮವನ್ನು ಸಾರ್ವಜನಿಕರಲ್ಲಿ ಬೀರಿದೆ ಎಂದು ವಿವರಿಸಿದರು.

ಆಶ್ರಮ ಹಾಗೂ ಇನ್ ಫೋಸಿಸ್   ವಿತಿಯಿಂದ ನಡೆಸಲಾದ   ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿ ಜನತೆಯ ಮನಸ್ಸಿನಲ್ಲಿ ಮುದ್ರಿತವಾಗಿದೆ.  ಸಾವಿರಾರು ಜನಕ್ಕೆ ಉಚಿತ ಊಟ, ದಿನಸಿ, ಆಹಾರ ಪದಾರ್ಥ   ನಿರಂತರವಾಗಿ ನೀಡುತ್ತಾ ಬರುತ್ತಿರುವುದನ್ನು ಸ್ಮರಿಸಿದರು. ಇದೆಲ್ಲದರ ಜೊತೆ ಪಾವಗಡದ ಸುಮಾರು 850 ಕಾರ್ಮಿಕರ ಖಾತೆಗಳಿಗೆ ಪ್ರತಿದಿನ ರೂ.200/- ಜಮಾ ಆಗುತ್ತಿರುವುದು ಅತ್ಯುತ್ತಮವಾದ ಕೆಲಸ.  ಒಂದು ಸ್ವಯಂ ಸೇವಾ ಸಂಸ್ಥೆ ಈ ತೆರನಾದ ಕೆಲಸಗಳನ್ನು ಕೈಗೊಂಡಿರುವುದು ದೇಶಕ್ಕೆ   ಮಾದರಿ ಎಂದು ಪೂರ್ಣ ಕಂಠದಿಂದ ಪೂಜ್ಯ ಸ್ವಾಮೀಜಿ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸ್ವಾಮಿ ಜಪಾನಂದಜಿ, ನ್ಯಾಯಾದೀಶ ವಿ.ಹನುಮಂತಪ್ಪ,  ಜಗದೀಶ್ ಬಿಸೆರೊಟ್ಟಿ,  ಭರತ್ ಯೋಗೇಶ್ ಕರಗುದರಿ, ಸರ್ಕಾರಿ ವಕೀಲ  ವಿ.ಮಂಜುನಾಥ್,  ವಕೀಲ ಯಜ್ಞನಾರಾಯಣ ಶರ್ಮ,  ಎಂ.ಭಗವಂತಪ್ಪ, ಪುರಸಭೆ ಸದಸ್ಯ ಸುದೇಶ್ ಬಾಬು  ಉಪಸ್ಥಿತರಿದ್ದರು.

ವಕೀಲರಿಗೆ ನೆರವಾದ ಶಾಸಕ: ವಿಶೇಷ ಪ್ಯಾಕೆಜ್ ಗೆ ಒತ್ತಾಯ

Publicstory.in


Tumkuru: ಕೋವಿಡ್-19 ಲಾಕ್ ಡೌನ್‍ ನಿಂದ ಸಂಕಷ್ಟದಲ್ಲಿರುವ ವಕೀಲರಿಗೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಆಹಾರದ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಮಿಕರಿಗೆ ಶ್ರಮಿಕರಿಗೆ ಸಹಾಯಹಸ್ತ ಚಾಚಿದಂತೆ ರಾಜ್ಯದ ಎಲ್ಲ ವಕೀಲರಿಗೆ ಸಹ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸುತ್ತೇನೆ ಎಂದರು.

ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ, ಕಿರಿಯ ವಕೀಲರಿಗೆ ನಾನು ಆರ್ಥಿಕವಾಗಿಯೂ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಮಾತನಾಡಿ ಇದುವರೆಗೂ ಯಾರೂ ಸಹ ಆರ್ಥಿಕವಾಗಿ ಹಿಂದುಳಿದ ವಕೀಲರ ಕಷ್ಟಕ್ಕೆ ಧಾವಿಸಿರಲಿಲ್ಲ ಗೌರಿಶಂಕರ್ ಸಂಘಕ್ಕೆ ಆಗಮಿಸಿ ಆರ್ಥಿಕವಾಗಿ ಹಿಂದುಳಿದ ವಕೀಲರಿಗೆ ದಿನಸಿ ಕಿಟ್ ಗಳನ್ನು ನೀಡಿರುವುದು ನಮಗೆ ಸಂತೋಷವಾಗಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್,ದೇವರಾಜು,ಖಜಾಂಚಿ ಪಾತಣ್ಣ,ಶೆಟ್ಟಿಹಳ್ಳಿ ರಮೇಶ, ಎನ್.ಆರ್. ಲೋಕೇಶ್, ಹಾಲನೂರುಅನಂತ್, ಹೀರೇಹಳ್ಳಿ ಮಹೇಶ್, ಬಿ.ಜಿ.ಸತೀಶ್, ಕಾಮೇಗೌಡ, ಕೋಳಿಹಳ್ಳಿ ಬಸವರಾಜು, ಬಿ.ಆರ್.ರಾಮಕೃಷ್ಣಯ್ಯ, ಸಿರಾಗೇಟ್‍ಸೋಮಣ್ಣ. ಎಂ.ಸಿ.ಚಂದ್ರಯ್ಯ, ನಾಗೇಶ್, ಬೆಳಗುಂಬ ವೆಂಕಟೇಶ್ ಹಾಜರಿದ್ದರು.

ಕರ್ಣ ಏಕೆ ಅರ್ಜುನಗಿಂತ ಉದಾರವಾದಿ…

0

ರಘುನಂದನ್ ಎ.ಎಸ್.


‘ಕರ್ಣ ನನಗಿಂತ ಉದಾರವಾದಿ ಎಂದು ಹೇಳುತ್ತಾರೆ ಏಕೆ?’ ಎಂದು ಅರ್ಜುನನು ಒಮ್ಮೆ ಕೃಷ್ಣನನ್ನು ಕೇಳಿದನು.

ಆಗ ಕೃಷ್ಣನು ಚಿನ್ನದ ಪರ್ವತವನ್ನು ತೋರಿಸಿ ಅದನ್ನು ಒಂದೇ ದಿನದಲ್ಲಿ ಜನರಿಗೆ ಹಂಚಿ ಮುಗಿಸುವಂತೆ ಹೇಳಿದನು.
ಅರ್ಜುನ, ಪರ್ವತಕ್ಕೆ ಹೋಗಿ ಪರ್ವತ ಬಂಡೆಯನ್ನು ಒಡೆದು ಜನರಿಗೆ ಕೊಟ್ಟನು. ಅದನ್ನು ಪೂರ್ಣಗೊಳಿಸಲು ಅವನಿಗೆ ಹಲವಾರು ದಿನಗಳು ಬೇಕಾಯಿತು.

ನಂತರ, ಅದೇ ಕೆಲಸವನ್ನು ಕರ್ಣನಿಗೆ ಹಂಚಲಾಯಿತು. ಅವನು ಜನರಿಗೆ ಅಗತ್ಯವಾದ ಪರಿಕರಗಳನ್ನು ನೀಡಿ ಜನರು ಪರ್ವತವನ್ನು ಒಡೆಯಲು ಮತ್ತು ಅವರು ಬಯಸಿದದನ್ನು ತೆಗೆದುಕೊಳ್ಳಲು ಹೇಳಿದನು. ಎಲ್ಲರೂ ಒಟ್ಟುಗೂಡಿ ಪರ್ವತವನ್ನು ಹೊಡೆದರು. ಅವರು ಬಯಸಿದ್ದನ್ನು ತೆಗೆದುಕೊಂಡರು. ಮತ್ತು ಕೆಲವೇ ಗಂಟೆಗಳಲ್ಲಿ, ಇಡೀ ಪರ್ವತವು ಕಣ್ಮರೆಯಾಯಿತು.

ಆಗ ಕೃಷ್ಣನು ಅರ್ಜುನನಿಗೆ, “ನೀನು ಎಲ್ಲವನ್ನೂ ಮಾಡಬೇಕೆಂದು ಬಯಸಿದ್ದೀ. ಅದಕ್ಕಾಗಿಯೇ ಇದು ಹಲವಾರು ದಿನಗಳನ್ನು ತೆಗೆದುಕೊಂಡಿತು. ಎಷ್ಟು ನೀಡಬೇಕೆಂದು ನೀನು ನಿರ್ಧರಿಸಿದ್ದೀರ. ತಂಡದ ಸಾಮರ್ಥ್ಯ ಮತ್ತು ಅಗತ್ಯವಿರುವ ತಂಡದ ಕೆಲಸಗಳನ್ನು ನೀನು ಬಳಸಿಕೊಂಡಿಲ್ಲ, ಅಥವಾ ಪರ್ವತವನ್ನು ಒಡೆಯಲು ಅಗತ್ಯವಾದ ಸಾಧನಗಳನ್ನು ನೀನು ಬಳಸಲಿಲ್ಲ. ನೀನು ಏನು ಮಾಡುತ್ತಿದ್ದೀ ಎಂಬುದಕ್ಕೆ ನೀನು ಕ್ರೆಡಿಟ್ ಬಯಸಿದ್ದೀ”.
“ಆದರೆ ಕರ್ಣನ ಗುರಿ ಒಂದು ದಿನದಲ್ಲಿ ಪರ್ವತವನ್ನು ಮುರಿದು ಜನರಿಗೆ ವಿತರಿಸುವುದು ಮಾತ್ರ. ಅವನು ತಂಡದ ಸಾಮರ್ಥ್ಯವನ್ನು, ತಂಡದ ಕೆಲಸಗಳನ್ನು ಮತ್ತು ಅಗತ್ಯವಾದ ಸಾಧನಗಳನ್ನು ಬಳಸಿದನು ಮತ್ತು ಅದನ್ನು ತಮ್ಮ ಕೈಯಿಂದ ಕೊಟ್ಟಿದ್ದಕ್ಕಾಗಿ ಅವನು ಪ್ರಶಂಸೆ ಮತ್ತು ಬಹುಮಾನವನ್ನು ನಿರೀಕ್ಷಿಸಲಿಲ್ಲ”.

ನಾಯಕರು ತಂಡದ ಕ್ರೆಡಿಟ್ ಅನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ, ಅವರು ವಿಪತ್ತಿನ ಸಮಯದಲ್ಲಿ ಮುಂಭಾಗದಲ್ಲಿ ನಿಲ್ಲುತ್ತಾರೆ, ಸರಿಯಾದ ತಂಡದ ಸದಸ್ಯರನ್ನು ಸರಿಯಾದ ಸ್ಥಳಗಳಲ್ಲಿ ಬಳಸುತ್ತಾರೆ, ಸರಿಯಾದ ಸಾಧನಗಳನ್ನು ಬಳಸುತ್ತಾರೆ ಮತ್ತು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ದೊಡ್ಡ ಕಾರ್ಯಗಳನ್ನು ಪೂರ್ಣಗೊಳಿಸಲು ತಂಡವನ್ನು ಒಟ್ಟುಗೂಡಿಸುತ್ತಾರೆ.