Friday, May 8, 2026
Google search engine
Home Blog Page 229

ಆ ಎರಡು ಜೊತೆ ಚಪ್ಪಲಿಗಳು

ಜಿ ಎನ್ ಮೋಹನ್


ಫಳಕ್ಕನೆ ಒಂದು ಹನಿ ಕಣ್ಣೀರು ಯಾರಿದ್ದರೇನಂತೆ ಎಂದು ಕೆನ್ನೆ ಮೇಲೆ ಜಾರಿಯೇ ಬಿಟ್ಟಿತು

ಆಗಿದ್ದು ಇಷ್ಟೇ-

ಅದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ
ನಾನೇ ನಿರ್ವಹಣೆ ಮಾಡುತ್ತಿದ್ದೆ

ವೇದಿಕೆಗೆ ಕರೆಯಲು ಎಲ್ಲಾ ಅತಿಥಿಗಳೂ ಬಂದಿದ್ದಾರೋ ಎಂದು ನೋಡಲು ಬಂದವನು
ಮತ್ತೆ ವೇದಿಕೆ ಹತ್ತಲು ಹೋಗುತ್ತಿದ್ದೆ

ಆಗ.. ಆಗ.. ಕಣ್ಣಿಗೆ ಕಾಣಿಸಿಕೊಂಡುಬಿಟ್ಟಿತ್ತು ಆ ಎರಡು ಜೊತೆ ಚಪ್ಪಲಿಗಳು

ಎರಡು ಜೊತೆ ಹವಾಯ್ ಚಪ್ಪಲಿಗಳು ನುಗ್ಗಾಗಿ ಒಂದು ಮೂಲೆಯಲ್ಲಿ ಬಿದ್ದಿತ್ತು

ಯಾರದ್ದು ಈ ಚಪ್ಪಲಿ ಎಂದು ಕೇಳಲು ಬಾಯಿ ತೆರೆದೆ
ತಕ್ಷಣ ಹೊಳೆದು ಹೋಯಿತು

‘ಶಿವನೇ ನಿನ್ನಾಟ ಬಲ್ಲವರು ಯಾರ್ಯಾರೋ
ಶಿವನೇ ನಿನ್ನಾಟ ಬಲ್ಲವರು ಯಾರವರೋ..’

ಎಂದು ತಂಬೂರಿ ಮೀಟುತ್ತಾ ಬೋರಮ್ಮ ಏರು ಕಂಠದಲ್ಲಿ ಆ ಶಿವನನ್ನು ಮೆಚ್ಚಿಸುತ್ತಿದ್ದರು

ಪಕ್ಕದಲ್ಲಿ ತಂಬೂರಿ ಜವರಯ್ಯ ಕಂಜರಕ್ಕೆ ಸಣ್ಣ ಪೆಟ್ಟು ಕೊಡುತ್ತಾ ಸಾಥ್ ನೀಡಿದ್ದರು

ವಸ್ತುಷಃ ಇನ್ನೊಂದೇ ಲೋಕಕ್ಕೆ ಪ್ರತಿಯೊಬ್ಬರನ್ನೂ ಸೆಳೆದೊಯ್ಯುತ್ತಿದ್ದ,
ನಾದದ ನದಿಯೊಂದು ಹರಿಯುವಂತೆ ಮಾಡಿದ್ದ ತಂಬೂರಿ ಜವರಯ್ಯ ಹಾಗೂ ಬೋರಮ್ಮನವರ ಚಪ್ಪಲಿಗಳು ಅವು

ಯಾಕೋ ನನಗೆ ಮತ್ತೆ ವೇದಿಕೆಗೆ ಹೆಜ್ಜೆಯಿಡುವ ಮನಸ್ಸೇ ಬರಲಿಲ್ಲ

ನಾದದ ಶ್ರೀಮಂತಿಕೆಯನ್ನೇ ಕಂಠದಲ್ಲಿ ಮೊಗೆದಿಟ್ಟುಕೊಂಡಿದ್ದ ದಂಪತಿಗಳ ಚಪ್ಪಲಿಗಳು ಮಾತ್ರ
ತಮ್ಮ ಕಡು ದುಃಖದ ಕಥೆಗಳನ್ನು ಹೇಳುತ್ತಾ ಬಿದ್ದಿದ್ದವು

ಇಡೀ ರಾತ್ರಿ ಎಂದರೆ ರಾತ್ರಿ, ಇಡೀ ಬೆಳಗು ಎಂದರೆ ಬೆಳಗು
ಇಲ್ಲ ಹಗಲೂ ರಾತ್ರಿ ಹಾಡಿ ಎಂದರೂ ಒಂದೇ ಸಮನೆ ಹಾಡುವ

‘ಇಲ್ಲೀಗೆ ಹರ ಹರ, ಇಲ್ಲೀಗೆ ಶಿವ ಶಿವ’
ಎಂದು ಮುಗಿತಾಯ ಮಾಡಲು ಗೊತ್ತಿಲ್ಲದ ಜೀವಗಳು ಅಲ್ಲಿ ಹೊಸ ಲೋಕ ಸೃಷ್ಟಿಸುತ್ತಾ ಕುಳಿತಿದ್ದವು

ರಾಗಿ ಕಲ್ಲಿನ ಮೇಲೆ ಚೆಲ್ಲೀದೆ ನಮ್ಮ ಹಾಡು
ಬಲ್ಲಂತ ಜಾಣರು ಬರಕೊಳ್ಳಿ। ನಮ ಹಾಡ
ಬಳ್ಳ ತಕ್ಕೊಂಡು ಆಳಕೊಳ್ಳಿ.. ಎನ್ನುವ ಹಾಗೆ

ಅವತ್ತೂ ಹೀಗೇ ಆಗಿತ್ತು

ಇಡೀ ಕನ್ನಡ ನಾಡು ನುಡಿಯ ಸಂಭ್ರಮದಲ್ಲಿತ್ತು
ನಾಡಿಗೆ ಗೌರವ ತಂದವರನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ ಪದಕವನ್ನು ಅವರ ಕೊರಳಿಗೆ ಹಾಕಲು ಸಜ್ಜಾಗಿತ್ತು

ಆಗ ಅದೇ ಸಂಜೆ ನಾನು ಸುಳ್ಯದ ಕಾಡುಮೇಡುಗಳ ಒಳಗಿರುವ ಚಂದ್ರಗಿರಿ ಅಂಬು ಅವರ ಮನೆಯಲ್ಲಿದ್ದೆ

ಮನೆ ಎಂದರೆ ಮನೆ ಅಷ್ಟೇ
ಅದನ್ನು ಗುಡಿಸಲು ಎಂದರೆ ಗುಡಿಸಲು
ಎರಡೂ ಅಲ್ಲ ಅಂದರೆ ಎರಡೂ ಅಲ್ಲ ಎನ್ನುವ ಪರಿಸ್ಥಿತಿ ಅಲ್ಲಿತ್ತು.

ಒಂದು ಕಾಲಕ್ಕೆ ಕಣ್ಣ ಮುಂದೆ ಯಕ್ಷ ಕಿಂಕರರನ್ನು ತಂದು ನಿಲ್ಲಿಸುತ್ತಿದ್ದ
ದೇವ ದಾನವರನ್ನು ತಮ್ಮ ಧೀಂಗಿಣದಲ್ಲಿ ಧರೆಗಿಳಿಸಿಬಿಡುತ್ತಿದ್ದ
ಒಂದೇ ಒಂದು ಅಟ್ಟಹಾಸದಲ್ಲಿ ಅಷ್ಟೂ ಖಳರನ್ನು ನೆನಪಿಸಿಬಿಡುತ್ತಿದ್ದ ಅಂಬು ಹಣ್ಣಾಗಿ ಮಲಗಿದ್ದರು

ನಾಡು ಸಂಭ್ರಮದಲ್ಲಿತ್ತು
ಇನ್ನು ನಾನು ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ ಎನ್ನುವುದು ಅವರಿಗೆ ಗೊತ್ತಾಗಿ ಹೋಗಿತ್ತು
ಬಣ್ಣ ಕಳಚುವ ಸಮಯ ಸನ್ನಿಹಿತವಾಗಿತ್ತು

ನಾನು ಅವರ ಜೊತೆ ಒಂದೆರಡು ಮಾತು ಆಡುತ್ತಾ
‘ಅಜ್ಜಾ ನಿಮಗೆ ಬಂದ ರಾಜ್ಯೋತ್ಸವ ಪದಕ ಎಲ್ಲಿ’ ಎಂದೆ

ಅವರ ಕಣ್ಣು ಆಗಲೇ ಮಬ್ಬಾಗಿ ಹೋಗಿತ್ತು
ಹಾಗಾಗಿ ನನಗೆ ಅಲ್ಲಿ ಯಾವ ಭಾವನೆಯಿತ್ತೋ ಖಂಡಿತಾ ಓದಲಾಗಲಿಲ್ಲ

ಅದು ಎಂದೋ ಮಾರಿಯಾಯ್ತು ಎಂದರು
ನಾನು ಶಾಕ್ ಹೊಡೆದು ಕುಳಿತೆ

ಯಾಕಜ್ಜಾ ಎನ್ನುವ ನನ್ನ ದನಿ ನನಗೇ ಕೇಳಿಸದಷ್ಟು ಕ್ಷೀಣವಾಗಿತ್ತು

‘ಅದರಲ್ಲಿ ಬಂಗಾರದ ಲೇಪ ಇರುತ್ತಪ್ಪಾ ಅದನ್ನ ಮಾರಿ ಒಂದು ತಿಂಗಳು ಹೆಚ್ಚು ಬದುಕಿದೆ’ ಎಂದರು

ಅದೇ ವೇಳೆ ಅಂದರೆ ಅದೇ ವೇಳೆಗೆ ಸರಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ಹಲವು ಕಲಾವಿದರ ಕೊರಳಿಗೆ ಅದೇ ಬಂಗಾರದ ಲೇಪವಿರುವ ಪದಕ ತೊಡಿಸುತ್ತಿದ್ದರು

ಯಾಕೋ ನನಗೆ ವೇದಿಕೆಯಲ್ಲಿ ಸಂಭ್ರಮ ಪಡುತ್ತಾ ಇದ್ದವರ ಭವಿಷ್ಯವನ್ನು ಕಣ್ಣಾರೆ ಕಾಣುತ್ತಿದ್ದೇನೆ ಎನಿಸಿ ಮರಗಟ್ಟಿದೆ

ಇನ್ನೊಂದು ಸಲ ಹೀಗಾಯ್ತು

ಎಲಿಸವ್ವ ಮಾದರ ಬಂದಿದ್ದರು

ಬಾರೆ ನವುಲ ಹಕ್ಕಿ ಸರಸೋತಿ …
ಎಂದು ಆಕೆ ದನಿ ತೆಗೆದರೆ ಹಾಡುತ್ತಿರುವ ಆಕೆಯೇ ಸರಸೋತಿ ಎನಿಸಿ ಹೋಗಿತ್ತು

ಅಂತಹ ಎಲಿಸವ್ವ ಒಮ್ಮೆ ಮದುವೆ ಮನೆಯಲ್ಲಿ ಸೋಬಾನದ ಪದಗಳನ್ನು ಹೇಳುತ್ತಾ ಕುಳಿತಿದ್ದರು

‘ಗಟ್ಟಿ ಮೇಳ.. ಗಟ್ಟಿ ಮೇಳ’ ಎಂದದ್ದಷ್ಟೇ ಅವರಿಗೆ ಗೊತ್ತು ಆಮೇಲೆ ಏನಾಯ್ತು ಎನ್ನುವುದೇ ಅವರಿಗೆ ಗೊತ್ತಾಗಲಿಲ್ಲ

ಗೊತ್ತಾಗುವ ಸಮಯ ಬಂದಾಗ ಆಕೆಯ ಒಂದು ಕಣ್ಣೇ ಹೋಗಿತ್ತು

ಮಾಂಗಲ್ಯ ಕಟ್ಟುವ ವೇಳೆಗೆ ಜನ ಅಕ್ಷತೆ ಕಾಳು ತೂರಿದ್ದರು
ಹಾಡುತ್ತಾ ಕುಳಿತ ಎಲಿಸವ್ವನ ಕಣ್ಣಿನತ್ತ ಆ ಕಾಳುಗಳು ತೂರಿ ಬಂದವು

‘ಯಾಕವ್ವಾ ಯಾರೂ ದವಾಖಾನಿಗೆ ಕರಕೊಂಡು ಹೋಗ್ಲಿಲ್ವಾ’ ಅಂದೆ
‘ಕರಕೊಂಡು ಹೋಗೋದಕ್ಕೆ ರಗಡ್ ಮಂದಿ ಆದಾರ
ಆದರೆ ಖರ್ಚು ನಿಭಾಯ್ಸೋ ಶಕ್ತಿ ಆ ಹಣಮಪ್ಪ ನಮಗೆ ಕೊಟ್ಟಿಲ್ಲ’ ಎಂದರು

ಎಚ್ ಎಲ್ ನಾಗೇಗೌಡರು ‘ಆದಿವಾಸಿ ಮಹಿಳೆಯರ ಜಾನಪದ ಕಲಾಮೇಳ’ ಮಾಡಬೇಕು ಎಂದು ಮುಂದಾದರು
ಹಗಲೂ ರಾತ್ರಿ ಅದರ ರೂಪು ರೇಷೆ ಸಿದ್ಧಮಾಡಿಕೊಟ್ಟೆ

ಆಗ ಒಂದಷ್ಟು ದಿನ ಜೋಗತಿಯೊಬ್ಬಳ ಜೊತೆ ಓಡಾಡಬೇಕಾಯಿತು
‘ಅಣ್ಣಾ ಮಾಸಾಶನ ಸಿಗಬೋದ’ ಅಂದಳು
‘ಯಾಕವ್ವಾ’ ಅಂದೆ
‘ಮೈ ಮಾರಿಕೊಳ್ಳೋದಾದ್ರೂ ನಿಲ್ಲಿಸ್ತೀನಿ ಅಣ್ಣಾ’ ಎಂದು ಕಣ್ಣೀರಾದಳು

‘ಜಾನಪದ ಜಂಗಮ’ ಎನ್ನುವ ಬಿರುದನ್ನೇ ಇತ್ತರು ಎಸ್ ಕೆ ಕರೀಂ ಖಾನ್ ಅಜ್ಜನಿಗೆ

ಬೀದಿ ಬೀದಿಯಲ್ಲಿ, ಸಂತೆ ಸೇರುವಲ್ಲಿ ಜಾನಪದ ಗೀತೆಗಳ ಮೂಲಕವೇ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಿದ ಕಂಠ ಅದು

ನಾನು ಅವರ ಕೋಣೆಯ ಬಾಗಿಲು ತಟ್ಟಿದಾಗ ಅವರೂ ತಮ್ಮ ದಿನಗಳನ್ನು ಲೆಕ್ಕ ಮಾಡುತ್ತಿದ್ದರು

ಹೋಟೆಲ್ ನವರು ಕೊಟ್ಟ ಒಂದು ಕೋಣೆಯಲ್ಲೇ ಬದುಕು ತಳ್ಳುತ್ತಾ ಇದ್ದರು
ಔಷಧಿ ಬೇಕಿತ್ತು ಹಣವಿರಲಿಲ್ಲ

ಅವರ ಜೊತೆ ದಿನಗಟ್ಟಲೆ ಕಾಡು ಕಣಿವೆ ನದಿ ಸಮುದ್ರ ಎಲ್ಲವನ್ನೂ ಸುತ್ತಿದ್ದೆ

ಜೋಶ್ ಬಂದಾಗ ಆ ತಣ್ಣನೆಯ ರಾತ್ರಿಯನ್ನು ಸೀಳುವಂತೆ ಎತ್ತರದ ಕಂಠದಲ್ಲಿ ಹಾಡುವುದು ಕೇಳಿದ್ದೆ

ಅವರು ಈಗ ಒಂದು ಹಸುವಿನಂತೆ ಕಂಗಾಲಾಗಿ ನನ್ನೆಡೆ ನೋಡುತ್ತಿದ್ದರು

‘ಯಾಕೆ ಸರ್ ಸರ್ಕಾರವನ್ನ ಕೇಳಬಹುದಿತ್ತಲ್ಲಾ’ ಎಂದೆ

ಅವರು ಅಂತಹ ನೋವಿನಲ್ಲೂ ನಕ್ಕುಬಿಟ್ಟರು

ಸ್ವಾತಂತ್ರ್ಯ ಹೋರಾಟಗಾರರಿಗಿರುವ ಪಿಂಚಣಿ ಕೇಳಲು ಹೋದೆ
ನೀವು ಹೋರಾಟಗಾರ ಎನ್ನುವುದಕ್ಕೆ ಪ್ರೂಫ್ ಬೇಕು’ ಎಂದರು
‘ಏನು ಮಾಡಬೇಕು ಹೇಳಿ’ ಅಂದೆ
‘ನಿಮ್ಮ ಜೊತೆ ಆ ಕಾಲದಲ್ಲಿ ಹೋರಾಡಿದ ಇಬ್ಬರ ಸಹಿ ಬೇಕು’ ಅಂದರು

‘ಆ ಕಾಲದಲ್ಲಿದ್ದವರ ಪೈಕಿ ಎಲ್ಲರೂ ಸತ್ತು ಎಷ್ಟೋ ವರ್ಷವಾಗಿತ್ತು
ಅವರ ಸಹಿ ಕೇಳುವುದು ಹೇಗೆ’

‘ನಾನು ಎರಡು ಸಹಿ ಕೊಡಲಿಲ್ಲ ಸ್ವಾತಂತ್ರ್ಯ ಹೋರಾಟಗಾರ ಎಂದು ಅನಿಸಿಕೊಳ್ಳಲಿಲ್ಲ
ಪಿಂಚಣಿ ಸಿಗಲಿಲ್ಲ’ ಎಂದರು

ಅದೇ ಅದೇ ಕರೀಂ ಖಾನ್ ಅಜ್ಜನ ಜೊತೆ ಸಮುದ್ರದ ಬದಿಯಲ್ಲಿ, ಬೆಳದಿಂಗಳ ಕೆಳಗೆ ಕುಣುಬಿಯರ ಕಾಲೋನಿಯಲ್ಲಿ ಹೆಜ್ಜೆ ಹಾಕುತ್ತಿದ್ದೆ

ಹಾದೀಲಿ ಹೋಗೋರೆ ಹಾಡೆಂದು ಕಾಡ್ಬೇಡಿ
ಹಾಡಲ್ಲ ನನ್ನ ಒಡಲುರಿ। ದೇವರೇ
ಬೆವರಲ್ಲ ನನ್ನ ಕಣ್ಣೀರು

ಅಂತ ಹಾಡಿದ್ದು ನೆನಪಾಯ್ತು

ಈಗ ಆ ಎರಡು ಚಪ್ಪಲಿಗಳತ್ತ ನೋಡಿದರೆ ಅವೂ ಅದೇ ಹಾಡು ಹಾಡುತ್ತಿದ್ದವು

ಹಾಡಲ್ಲ ನನ್ನ ಒಡಲುರಿ ದೇವರೇ ಅಂತ

ಯುವಕರಿಗೆ ಸೇನೆಯಲ್ಲಿ ಅವಕಾಶ

ಯುವ ವೃತ್ತಿಪರರೂ ಸೇರಿದಂತೆ ದೇಶದ ನಾಗರಿಕರು ಸೇನಾಧಿಕಾರಿಗಳು ಹಾಗೂ ಸೇನೆಯ ಇನ್ನಿತರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಮೂರು ವರ್ಷಗಳ ಮಟ್ಟಿಗೆ ಅವಕಾಶ ನೀಡುವ ಕುರಿತು ಭಾರತೀಯ ಸೇನೆ ಗಂಭೀರ ಪರಿಶೀಲನೆ ನಡೆಸಿದೆ.

ಮೊದಲ ಹಂತದಲ್ಲಿ 100 ಅಧಿಕಾರಿಗಳು ಹಾಗೂ ಒಂದು ಸಾವಿರ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದೆ.

ಮೂರು ವರ್ಷಗಳ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಿಗುವ ಈ ಅವಕಾಶವನ್ನು ‘ಟೂರ್‌ ಆಫ್‌ ಡ್ಯೂಟಿ’ ಎಂದು ಕರೆಯಲಾಗುತ್ತದೆ.

ಸೇನೆಯನ್ನು ಆಯ್ಕೆ ಮಾಡಿಕೊಳ್ಳದ ಆದರೆ ತಾತ್ಕಾಲಿಕ ಅವಧಿಗೆ ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆ ಈ ರೀತಿಯ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ಪತ್ರೆಗೆ ದಾಖಲು

ತುಮಕೂರು:

ಒಂದು ಕಾಲಕ್ಕೆ ಇಡೀ ಭೂಗತ ಲೋಕವನ್ನೆ ಆಳಿದ ಮಾಜಿ ಭೂಗತ ದೊರೆ ಹಾಗು ಸಮಾಜ ಸೇವಕ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರಿಗೆ ನಿನ್ನೆ ಆರೋಗ್ಯದಲ್ಲಿ ಏರುಪೇರಾಗಿತ್ತು‌ . ಈ ಹಿನ್ನೆಲೆ ಅವರನ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಐದಾರು ತಿಂಗಳ ಕೆಳಗೆ ಕ್ಯಾನ್ಸರ್ ಇರುವುದು ಖುದ್ದು ಮುತ್ತಪ್ಪ ರೈ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕ್ಯಾನ್ಸರ್ ಇರುವುದರಿಂದ ಕರ್ನಾಟಕ ರಾಜ್ಯ ಅಥ್ಲೆಟ್ ಅಸೋಸಿಯೇಷನ್ ಗೆ ರಾಜೀನಾಮೆ ನೀಡಿದ್ದರು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ
ದಿನಾಂಕ : 14, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಗುರುವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಸಪ್ತಮಿ
(ನಿನ್ನೆ ಬೆಳಿಗ್ಗೆ 6 ಗಂ॥ 1 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 52 ನಿ।। ತನಕ)
ನಕ್ಷತ್ರ : ಶ್ರವಣ
(ನಿನ್ನೆ ಪ್ರಾತಃಕಾಲ 4 ಗಂ॥ 55 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 24 ನಿ।। ತನಕ)
ಯೋಗ : ಬ್ರಹ್ಮ
ಕರಣ : ಬವ
ವರ್ಜ್ಯಂ : (ಇಂದು ಬೆಳಿಗ್ಗೆ 10 ಗಂ॥ 46 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 30 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 9 ಗಂ॥ 12 ನಿ।। ರಿಂದ ಇಂದು ರಾತ್ರಿ 10 ಗಂ॥ 56 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 10 ಗಂ॥ 2 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 53 ನಿ।। ತನಕ)(ಇಂದು ಸಂಜೆ 3 ಗಂ॥ 13 ನಿ।। ರಿಂದ ಇಂದು ಸಂಜೆ 4 ಗಂ॥ 4 ನಿ।। ತನಕ)
ರಾಹುಕಾಲ : (ಇಂದು ಮಧ್ಯಾಹ್ನ 1 ಗಂ॥ 49 ನಿ।। ರಿಂದ ಇಂದು ಸಂಜೆ 3 ಗಂ॥ 26 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 8 ಗಂ॥ 58 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 35 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 49 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 44 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 40 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಮಕರ

ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ : 14 May 2020
ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ದೀರ್ಘಕಾಲದ ಲಾಭಗಳಿಗೆ ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಶಿಫಾರಸು ಮಾಡಲಾಗಿದೆ. ನಿಮ್ಮ ಸಕಾಲಿಕ ಸಹಾಯ ಯಾರಾದರೊಬ್ಬರ ದೌರ್ಭಾಗ್ಯವನ್ನು ನಿವಾರಿಸುತ್ತದೆ. ನಿಮ್ಮ ಉತ್ಸಾಹ ನಿಮ್ಮ ಪ್ರೀತಿಯನ್ನು ಸಂಕಟಕ್ಕೆ ಸಿಲುಕಿಸಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಅದೃಷ್ಟ ಸಂಖ್ಯೆ: 7

ವೃಷಭ ರಾಶಿ ಭವಿಷ್ಯ : 14 May 2020
ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ತಪ್ಪಿಸಿ. ಈ ರಾಶಿಚಕ್ರಕ್ಕೆ ಸಂಬಂಧಿಸಿದ ಕೆಲವರು ಇಂದು ಭೂಮಿಗೆ ಸಂಬಂಧಿಸಿದ ವಿಷಯದ ಬಗ್ಗೆ ಹಣವನ್ನು ಖರ್ಚುಮಾಡಬಹುದು ಹಳೆಯ ಸ್ನೇಹಿತರು ಬೆಂಬಲ ನೀಡುತ್ತಾರ ಮತ್ತು ಉಪಯುಕ್ತವಾಗಿರುತ್ತಾರೆ. ನಿಮ್ಮ ಪ್ರೀತಿಯನ್ನು ಅಮೂಲ್ಯ ವಸ್ತುಗಳಂತೆ ಹೊಸತನದಿಂದಿಡಿ. ನೀವು ಕೆಲಸದಲ್ಲಿ ತುಂಬ ಒತ್ತಡ ಹೇರಿದಲ್ಲಿ ಕೋಪ ಹೆಚ್ಚಾಗುತ್ತದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಇತರರರ ಅವಶ್ಯಕತೆಗಳನ್ನು ತಿಳಿಯಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ: 6

ಮಿಥುನ ರಾಶಿ ಭವಿಷ್ಯ : 14 May 2020
ನಿಮ್ಮ ಪ್ರಚಂಡ ಬೌದ್ಧಿಕ ಸಾಮರ್ಥ್ಯ ಅಂಗವೈಕಲ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೇವಲ ಸಕಾರಾತ್ಮಕ ಆಲೋಚನೆಗಳ ಜೊತೆ ಮಾತ್ರ ನೀವು ಈ ಸಮಸ್ಯೆಯ ವಿರುದ್ಧ ಹೋರಾಡಬೇಕು. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ. ಅದೃಷ್ಟ ಸಂಖ್ಯೆ: 4

ಕರ್ಕ ರಾಶಿ ಭವಿಷ್ಯ : 14 May 2020
ನಿಮ್ಮ ಹೆಂಡತಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಮ್ಮನ್ನು ನೀವೇ ಒಂದು ಪ್ರೀತಿಯ ಪೋಷಿಸುವ ಜೋಡಿಯೆನ್ನುವುದನ್ನು ಪುನಃ ಕಂಡುಹಿಡಿಯಲು ಸ್ವಲ್ಪ ಸಮಯ ಖರ್ಚು ಮಾಡಿ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣವನ್ನು ಆವಾಹಿಸಿಕೊಳ್ಳುತ್ತಾರೆ. ಇದು ಪರಸ್ಪರ ಸಂಪರ್ಕದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಇದು ಮತ್ತೊಂದು ಚೈತನ್ಯದಾಯಕ ದಿನವಾಗಿರುತ್ತದೆ ಮತ್ತು ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬದು. ಅದೃಷ್ಟ ಸಂಖ್ಯೆ: 8

ಸಿಂಹ ರಾಶಿ ಭವಿಷ್ಯ : 14 May 2020
ನೀವು ಕೆಲವು ಗಂಭೀರ ತೊಂದರೆಗಳನ್ನು ಎದುರಿಸಲು ಸಾಧ್ಯತೆಯಿರುವುದರಿಂದ ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ವಿಶೇಷವಾಗಿ ಸಣ್ಣ ಹುಚ್ಚಲ್ಲದೇ ಬೇರೇನೂ ಅಲ್ಲದ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಯೋಜಿತವಲ್ಲದ ಮೂಲಗಳಿಂದ ಹಣದ ಲಾಭ ನಿಮ್ಮ ದಿನವನ್ನು ಬೆಳಗಿಸುತ್ತದೆ. ನೀವು ಪಾರ್ಟಿ ನೀಡಲು ಯೋಜಿಸುತ್ತಿದ್ದಲ್ಲಿ ನಿಮ್ಮ ಎಲ್ಲಾ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ – ನಿಮ್ಮನ್ನು ಅಸ್ತುಷ್ಟಗೊಳಿಸುವ ಬಹಳಷ್ಟು ಜನರಿರುತ್ತಾರೆ. ಅನಗತ್ಯ ಅನುಮಾನ ಸಂಬಂಧಗಳನ್ನು ಹದಗೆಡಿಸುವ ಕೆಲಸ ಮಾಡುತ್ತದೆ. ನೀವು ಸಹ ನಿಮ್ಮ ಪ್ರೀತಿಪಾತ್ರರ ಮೇಲೆ ಅನುಮಾನ ಮಾಡಬಾರದು. ಅದೃಷ್ಟ ಸಂಖ್ಯೆ: 6

ಕನ್ಯಾ ರಾಶಿ ಭವಿಷ್ಯ : 14 May 2020
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆವರಿಸಬಹುದು. ಖಾಲಿ ಮೆದುಳು ದೆವ್ವಗಳ ಕಾರ್ಖಾನೆಯಾದ್ದರಿಂದ ದೈಹಿಕ ವ್ಯಾಯಾಮದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಏಕೆಂದರೆ ನೀವು ಅದನ್ನು ಮಾಡದಿದ್ದರೆ ಅವರ ಆರೋಗ್ಯವು ಹದಗೆಡಬಹುದು ಮತ್ತು ಅವರ ಆರೋಗ್ಯದ ಮೇಲೆ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. ಅದೃಷ್ಟ ಸಂಖ್ಯೆ: 4

ತುಲಾ ರಾಶಿ ಭವಿಷ್ಯ : 14 May 2020
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹೆಜ್ಜೆಯನ್ನು ಹಾಕುವ ಅಗತ್ಯವಿದೆ , ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ಅದೃಷ್ಟ ಸಂಖ್ಯೆ: 7

ವೃಶ್ಚಿಕ ರಾಶಿ ಭವಿಷ್ಯ : 14 May 2020
ಇಂದಿನ ಮನರಂಜನೆ ಕ್ರೀಡಾ ಚಟುವಟಿಕೆಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ಇಂದಿನವರೆಗೂ ಹಣವನ್ನು ಯೋಚಿಸದೆ ಖರ್ಚು ಮಾಡುತ್ತ್ತಿದ್ದ ಜನರು, ಅವರಿಗೆ ಇಂದು ಹಣದ ತುಂಬಾ ಅಗತ್ಯವಿರಬಹುದು ಮತ್ತು ಜೀವನದಲ್ಲಿ ಹಣದ ಏನು ಮೌಲ್ಯವಿದೆ ಎಂದು ನಿಮಗೆ ಅರ್ಥವಾಗಬಹುದು. ನಿಮ್ಮ ಬಿಡುವಿನ ವೇಳೆಯನ್ನು ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸಲು ಬಳಸಿ. ನೀವು ಕುಟುಂಬಕ್ಕೆ ಇದರಿಂದ ಸಂತೋಷವಾಗುತ್ತದೆ. ಅದೃಷ್ಟ ಸಂಖ್ಯೆ: 9

ಧನು ರಾಶಿ ಭವಿಷ್ಯ : 14 May 2020
ನಿಮ್ಮ ಸಂಗಾತಿಯ ನಿಷ್ಠಾವಂತ ಹೃದಯ ಮತ್ತು ಅದ್ಭುತ ಚೈತನ್ಯ ನಿಮಗೆ ಸಂತೋಷ ನೀಡಬಹುದು. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಯುವಕರನ್ನು ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ. ಅದೃಷ್ಟ ಸಂಖ್ಯೆ: 6

ಮಕರ ರಾಶಿ ಭವಿಷ್ಯ : 14 May 2020
ನಿಮ್ಮ ಭಾವನೆಗಳನ್ನು ವಿಶೇಷವಾಗಿ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಹೊಸ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರಿ ಮತ್ತು ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಅದೃಷ್ಟ ಸಂಖ್ಯೆ: 6

ಕುಂಭ ರಾಶಿ ಭವಿಷ್ಯ : 14 May 2020
ರಕ್ತದೊತ್ತಡವಿರುವ ರೋಗಿಗಳು ತಮ್ಮ ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಕೊಲೆಸ್ಟರಾಲ್ ನಿಯಂತ್ರಣದಲ್ಲಿರಿಸಲು ಕೆಂಪು ವೈನ್ ತೆಗೆದುಕೊಳ್ಳಬಹುದು. ಇದು ಅವರಿಗೆ ಮತ್ತಷ್ಟು ವಿಶ್ರಾಂತಿ ತರುತ್ತದೆ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಥಿಯೇಟರ್ ಅಥವಾ ನಿಮ್ಮ ಸಂಗಾತಿಯ ಜೊತೆಗಿನ ಊಟ ನಿಮ್ಮನ್ನು ಒಂದು ಶಾಂತವಾದ ಮತ್ತು ಅದ್ಭುತ ಲಹರಿಯಲ್ಲಿರಿಸುವಂತೆ ತೋರುತ್ತದೆ. ನಿಮ್ಮ ಪ್ರೀತಿ ಸಂಗಾತಿಯ ಸಾಮಾಜಿಕ ಮಾಧ್ಯಮದ ಕಳೆದ ಕೆಲವು ಸ್ಟೇಟಸ್‌ಗಳನ್ನು ಪರಿಶೀಲಿಸಿ, ನೀವು ಒಂದು ಸುಂದರ ಅಚ್ಚರಿಯನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗುತ್ತಿರುವವರು ಶಾಂತವಾಗಿರಬೇಕು. ಅದೃಷ್ಟ ಸಂಖ್ಯೆ:3

ಮೀನ ರಾಶಿ ಭವಿಷ್ಯ : 14 May 2020
ನಗುವಿನ ಚಿಕಿತ್ಸೆ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಿರುವುದರಿಂದ ನಿಮ್ಮ ಅನಾರೋಗ್ಯ ಗುಣಪಡಿಸಲು ನಗುವಿನ ಚಿಕಿತ್ಸೆ ಬಳಸಿ. ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ನಿಮ್ಮ ಪ್ರಯತ್ನಗಳು ಹಾಗೂ ನಿಮ್ಮ ಕುಟುಂಬದ ಸದಸ್ಯರು ಒದಗಿಸಿದ ಬೆಂಬಲದ ಫಲವಾದ ಯಶಸ್ಸು ಮತ್ತು ಸಂತೋಷವನ್ನು ಆನಂದಿಸಲು ಈಗ ಒಂದು ಒಳ್ಳೆಯ ಸಮಯ. ಕೆಲವರಿಗೆ ಹೊಸ ಪ್ರಣಯ ಖಂಡಿತವೆನಿಸುತ್ತದೆ – ನಿಮ್ಮ ಪ್ರೀತಿ ನಿಮ್ಮ ಜೀವನವನ್ನು ಅರಳಿಸುತ್ತದೆ. ಅದೃಷ್ಟ ಸಂಖ್ಯೆ: 1

ಸರ್ಕಾರ ಉರುಳಿಸಲು ನೆರವಾದ ಕೆ.ಎನ್.ರಾಜಣ್ಣಗೆ ಬಿಜೆಪಿಗೆ ಆಹ್ವಾನ: ರಮೇಶ ಜಾರಕಿಹೊಳಿ

ತುಮಕೂರು: ನಾನು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸೇರಿ ರಾಜ್ಯದಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದೆವು. ರಾಜಣ್ಣ ಅವರಿಗೆ ಬಿಜೆಪಿಗೆ ಸೇರಲು ಆಹ್ವಾನ ನೀಡಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೋಳಿ ಹೇಳಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿ,
ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಗೆ ಸೇರುವಂತೆ ಕೆ.ಎನ್ ರಾಜಣ್ಣಗೆ ಕರೆ ನೀಡಿದ್ದೇವೆ. ಆದರೂ ರಾಜಣ್ಣ ಇನ್ನು ಯಾಕೋ ಅಲ್ಲೇ ಇದ್ದಾರೆ ಎಂದರು.

ಈ ಹಿಂದೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಇದ್ದ ಕಾಲದಲ್ಲಿದ್ದ ಕಾಂಗ್ರೆಸ್ ಈಗ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರಿಗೆ ಬೆಲೆ ಇಲ್ಲ. ಪಕ್ಷದಲ್ಲಿ ಯಾವುದೇ ಪ್ರಯೋಜನ ಇಲ್ಲ ಹಾಗಾಗಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಬನ್ನಿ ಎಂದರು ಕೆ.ಎನ್. ರಾಜಣ್ಣ ಬಿಜೆಪಿಗೆ ಇನ್ನು ಬರುತ್ತಿಲ್ಲ ಎಂದು ಸಚಿವರು ಹೇಳಿದರು.

ಬಿಜೆಪಿಗೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಕೆ.ಎನ್. ರಾಜಣ್ಣ ಅವರು ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ತೀರ್ಮಾನ ತೆಗೆದುಕೊಂಡರೆ ಒಳ್ಳೆಯದಾಗಲಿದೆ ಎಂದರು.

ಹುಟ್ಟಿನಿಂದಲೂ ನಾನು ಕಾಂಗ್ರೆಸ್ಸಿಗ. ಪಕ್ಷ ಕಡೆಗಣಿಸಿದಾಗಲೇ ನಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದೇನೆ. ಸರ್ಕಾರವನ್ನೆ ಕೆಡವಿದ್ದೇವೆ ಆದರೆ ರಾಜಣ್ಣ ಅವರು ಬಿಜೆಪಿಗೆ ಬರುತ್ತಿಲ್ಲ. ಆಗಲೂ ಜೊತೆಗಿದ್ದೆವು. ಈಗಲೂ ಜೊತೆಗಿದ್ದೇವೆ ಬಿಜೆಪಿಗೆ ಬನ್ನಿ ಎಂದರು.

ಕೆ ಎನ್ ರಾಜಣ್ಣ ಮಾತನಾಡಿ, ನನ್ನ ಬಗ್ಗೆ ನಿಮಗೆನೂ ಗೊತ್ತಿದೆ ಯಾವುದರಲ್ಲಿ ಕೈವಾಡ ಇದೆ, ಯಾವುದರಲ್ಲಿ ಇಲ್ಲಾ ಅಂತಾ ನಾನು ಯಾವುದರಲ್ಲೂ ಮುಚ್ಚು ಮರೆ ಮಾಡೊದಿಲ್ಲ ಎಂದು ಬಿಜೆಪಿಗೆ ಆಹ್ವಾನ ನೀಡಿದ ವಿಚಾರದ ಮಾತು ಬದಲಿಸಿ ಎತ್ತಿನ ಹೊಳೆ ವಿಚಾರ ಮಾತನಾಡಲು ಶುರು ಮಾಡಿದರು.

ಈ ವೇಳೆ ಸಂಸದ ಜಿ.ಎಸ್.ಬಸವರಾಜು, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ, ಎತ್ತಿನಹೊಳೆ ಮುಖ್ಯ ಎಂಜನಿಯರ್ ಮಾಧವ, ಸೂಪರಿಡೆಂಟ್ ಎಂಜನಿಯರ್ ಶಿವಕುಮಾರ್, ವಿಷೇಶಾಧಿಕಾರಿ ರುದ್ರಯ್ಯ, ಇಇ ರಘುನಂದನ್, ಎಇ ಸುರೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತುರುವೇಕೆರೆ: ಕಲ್ಲಿನಿಂದ ಚಚ್ಚಿ ಕೊಲೆ

Publicstory.in


ತುರುವೇಕೆರೆ: ಹಾಡಹಗಲೆ ಕಲ್ಲಿನಿಂದ ಚಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಹಿಂಬಾಗ ನೆಡೆದಿದೆ.
ಕೊಲೆಗಿಡಾದವನು ನಾಯ್ಕನಘಟ್ಟ ವಾಸಿ ಶಂಕರಪ್ಪ (70) ಗುರುತಿಸಲಗಿದೆ.ಪಟ್ಡಣದ ಪೋಲಿಸರು ಬೇಟಿ ನೀಡಿ ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಂಡ ಸೂಟ್ ಕೇಸ್: ಭಯದಲಿ ಜನರು

Publicstory.in


ಚಿಕ್ಕಮಗಳೂರು: ಇಲ್ಲಿ‌ನ ಬಸವನಹಳ್ಳಿ ಮುಖ್ಯ ರಸ್ತೆ ಮರದ ಬುಡದಲ್ಲಿ ಸೂಟ್‌‌ಕೇಸ್ ಒಂದು ಬಿದ್ದಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು.

ಕ್ರಿಸ್ಟಲ್ ಇನ್ ಹೋಟೆಲ್ ಮುಂಭಾಗದ ಮರದ ಬುಡದಲ್ಲಿ ಈ ಸೂಟ್ ಕೇಸ್ ಇಡಲಾಗಿದೆ.

ಈ ಸೂಟ್ ಕೇಸ್ ಬಿದ್ದಿರುವ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ವಾಹನವೊಂದರಲ್ಲಿ ಸೂಟ್ ಕೇಸ್ ತೆಗೆದುಕೊಂಡು ಹೋದರು.

ಸೂಟ್ ಕೇಸ್ ನಲ್ಲಿ ಏನಿದೆ ಎಂಬುದು ತಿಳಿದುಬಂದಿಲ್ಲ. ತನಿಖೆ ಮುಂದುವರೆದಿದೆ.

ಪ್ರಧಾನಿ, ಸಿಎಂ, ಕೋವಿಡ್ ಪ್ಯಾಕೇಜ್ ಗೆ ಮಾಜಿ ಶಾಸಕ ಸ್ವಾಗತ

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಜಿಲ್ಲಾ ಪಂಚಾಯತಿಯ ಹೊನಸಗೆರೆ ಗ್ರಾಮಪಂಚಾಯತಿಯ ಮುಳುಕುಂಟೆ, ಕೋಡಿಹಳ್ಳಿ,ರಾಮನಹಳ್ಳಿ ಗ್ರಾಮಗಳ ಪ್ರತಿ ಮನೆ ಮನೆಗೆ ಮಾಜಿ ಶಾಸಕ ಬಿ.ಸುರೇಶಗೌಡ ಉಚಿತ ಮಾಸ್ಕ್ ಹಾಗೂ ರೇಷನ್ ಕಿಟ್ ನ್ನು ವಿತರಣೆ ಮಾಡಿದರು.

covid-19 ಪ್ರಯುಕ್ತ ಕಳೆದ ಒಂದೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ಸಂಕಷ್ಟದಲ್ಲಿರುವ ,ಕಟ್ಟಡ ಕಾರ್ಮಿಕರು, ನೇಕಾರರಿಗೆ,ಅಟೋ/ಟ್ಯಾಕ್ಸಿ ಚಾಲಕರಿಗೆ, ಮಡಿವಾಳ,ಕ್ಷೌರಿಕರಿಗೆ,ಹೂ ಬೆಳೆಗಾರರಿಗೆ,ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ,ರಾಜ್ಯದ ಜನಪ್ರಿಯ ಮುಖ್ಯ ಮುಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು 1610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಹಾಗೂ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಜಿರವರು 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಸ್ವಾಗತಾರ್ಹವಾಗಿದ್ದು, ಇದನ್ನು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫಲಾನುಬಾವಿಗಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಜನಗಳಿಗೆ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು, ಜಿಲ್ಲಾ ಪಂ ಸದಸ್ಯರಾದ ಗೂಳೂರು ಶಿವಕುಮಾರ್, ಸಿದ್ದೇಗೌಡರು, ಗ್ರಾಮ ಪಂ ಅಧ್ಯಕ್ಷರಾದ ಶಿವಶಂಕರ್, ಉಪಾಧ್ಯಕ್ಷರಾದ ಮೂರ್ತಣ್ಣ, ಮಾಜಿ ಅಧ್ಯಕ್ಷರಾದ ಶಿವಣ್ಣ,ಗ್ರಾಮ ಪಂ ಸದಸ್ಯರಾದ ಪ್ರಾಣೇಶ್, ಮುಖಂಡರಾದ ಯೋಗೇಶ್, ಮುನಿರಾಜು, ರಮೇಶ್, ಚಿಕ್ಕಣ್ಣ, ಪ್ರಸಾದಣ್ಣ, ಶಂಕರ, ಮಾಜಿ ಗ್ರಾಮ ಪಂ ಅಧ್ಯಕ್ಷರಾದ ಶೆಟ್ಟಳಾಯ್ಯ, ರಮೇಶ್, ಪುಟ್ಟೇಗೌಡರು, ದಯಾನಂದ, ಮುಂತಾದವರು ಉಪಸ್ಥಿತರಿದ್ದರು

ಎತ್ತಿನಹೊಳೆ ಕಾಲಾವಧಿಯಲ್ಲಿ ಪೂರ್ಣ: ಸಚಿವ

Publicstory. in


Tumkuru; ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಗುರುತ್ವಾ ಕಾಲುವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣವಾಗುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಚುರುಕುಗೊಳಿಸಿ ಕಾಲಾವಧಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು.

ಚೇಳೂರು ತೊಳಚನಹಳ್ಳಿ ಹತ್ತಿರ ಮೇಲ್ಗಾಲುವೆಯ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು. ಯೋಜನೆಗಾಗಿ ಭೂಮಿ ಸ್ವಾಧೀನಪಡಿಸಿಕೊಂಡಿರುವ ಭೂಮಾಲೀಕರಿಗೆ ಪರಿಹಾರ ವಿತರಣೆಗಾಗಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಇಲಾಖೆ ಕಾಮಗಾರಿಗಳನ್ನು ವಿಳಂಬಗೊಳಿಸುವಂತಿಲ್ಲ. ಸಕಲೇಶಪುರ ಬಳಿ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, 2021ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಯನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಜಲಸಂಪನ್ಮೂಲ ಇಲಾಖೆಗೆ ಅನುದಾನದ ಕೊರತೆ ಇಲ್ಲ. ಇಲಾಖೆಗೆ ಇನ್ನು ಹೆಚ್ಚಿನ ಅನುದಾನವನ್ನು ನೀಡಲು ಮುಖ್ಯಮಂತ್ರಿಗಳು ಸಿದ್ದರಿದ್ದಾರೆ ಎಂದು ಅವರು ಹೇಳಿದರು.

ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲ ಭಾಗಗಳಿಗೆ ಕುಡಿಯುವ ನೀರನ್ನು ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದು ಅವರು ತಿಳಿಸಿದರು.

ಸಂಸದ ಜಿ.ಎಸ್. ಬಸವರಾಜು, ಶಾಸಕ ನಾಗೇಶ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಪೇಶ್ವೆ, ಎತ್ತಿನ ಹೊಳೆ ಮುಖ್ಯ ಇಂಜಿನಿಯರ್ ಮಾಧವ, ಸೂಪರಿಡೆಂಟ್ ಇಂಜಿನಿಯರ್ ಶಿವಕುಮಾರ್, ವಿಶೇಷಾಧಿಕಾರಿ ರುದ್ರಯ್ಯ, ಇಇ ರಘುನಂದನ್, ಎಇ ಸುರೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು

ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲಿ:  ಅಧಿಕಾರಿಗಳಿಂದ ದಾಳಿ

ಕಡಬ: ಕಡಬದ ಪಂಜ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಸಾಮ್ಯದ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆಗೆ ಅಬಕಾರಿ‌ ಇಲಾಖೆಯ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಹೆಚ್ಚುವರಿ ದರ ವಸೂಲು ಮಾಡುತ್ತಿರುವ ಬಗ್ಗೆ ಕೆಲ ದಿನಗಳಿಂದ ಮದ್ಯ ಖರೀದಿ ಗ್ರಾಹಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಸಾರ್ವಜನಿಕರ ದೂರು ಆಧರಿಸಿ ಮಾಧ್ಯಮ ಪ್ರತಿನಿಧಿಯೊಬ್ಬರು ಮೊದಲು ಮದ್ಯ ಖರೀದಿ ಮಾಡಿದ್ದರು.ಈ ವೇಳೆ ಎಂಎಸ್ಐಲ್ ಸಿಬ್ಬಂದಿ ಅಧಿಕ ದರ ವಸೂಲಿ ಮಾಡಿದ್ದರು. ಈ ಬಗ್ಗೆ ಅಬಕಾರಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿ ನಂತರದಲ್ಲಿ ಸ್ವಲ್ಪ ಸಮಯದ ಬಳಿಕ ಮತ್ತೊಮ್ಮೆ ಮದ್ಯ ಖರೀದಿಸಿ ಬಿಲ್ ಕೇಳಿ ಪಡೆದಿದ್ದರು.ಈ ಸಮಯದಲ್ಲಿ ನಿಗದಿತ ದರ ನಮೂದಿಸಿದ ಬಿಲ್ ನೀಡಲಾಯಿತು.

ಆದರೆ ಮೊದಲ ಖರೀದಿಯ ಬಿಲ್ ಕೇಳಿದಾಗ ವಸೂಲಿ ಮಾಡಿದ ಹಣಕ್ಕಿಂತ ಕಡಿಮೆ ನಮೂದಿಸಿ ಕೊಡಲಾಯಿತು.ಮಾತ್ರವಲ್ಲದೆ ಇಲ್ಲಿ ಮದ್ಯ ಖರೀದಿ ಮಾಡುವಾಗ ಬಿಲ್ ನೀಡಬೇಕೆಂಬ ನಿಯಮ ಇದ್ದರೂ ಬಿಲ್ ನೀಡಲಾಗುತ್ತಿಲ್ಲ.

ಪತ್ರಕರ್ತರು ಈ ವ್ಯತ್ಯಾಸವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿದ್ದರು. ಕೂಡಲೇ ಅಬಕಾರಿ ನಿರೀಕ್ಷಕಿ ಸುಜಾತ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಿವರಣೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

ಅಲ್ಲದೆ , ತನಿಖೆ ಮುಂದುವರಿಸಿದ್ದಾರೆ.
ಎಂಎಸ್ಐಲ್ ನಲ್ಲಿ ದಾಳಿಯಾಗುತ್ತಿದ್ದಂತೆ ಕಡಬದಲ್ಲಿನ ಇತರ ಮದ್ಯದಂಗಡಿಯವರೂ ಅಲರ್ಟ್ ಆಗಿರುವುದು ಕಂಡುಬಂದಿದೆ.