Friday, May 8, 2026
Google search engine
Home Blog Page 231

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಕೆಪಿಆರ್‍ಎಸ್ ಖಂಡನೆ

publicstory. in


Tumkuru: ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ಬದಲು ಅವರ ಬೆನ್ನಿಗೆ ಇರಿಯುವ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತೊಡಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತುಮಕೂರು ಜಿಲ್ಲಾ ಸಂಚಾಲಕರ ಸಿ.ಆಜ್ಜಪ್ಪ ಸಹ ಸಂಚಾಲಕ ಬಿ.ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸದ್ದಿಲ್ಲದೆಯೆ ಒಪ್ಪಿಗೆ ನೀಡಲಿದೆಯೇ ರಾಜ್ಯ ಸರ್ಕಾರ

( ಈ ಸುದ್ದಿಯನ್ನು ಮೊದಲು ಬ್ರೇಕಿಂಗ್ ಮಾಡಿದ್ದು https://publicstory.in/ )

ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ರೈತರ ಮರಣಶಾಸನವಾಗಿದೆ. ಕಾರ್ಪೋರೇಟ್ ಕಂಪನಿಗಳ ಲೂಟಿಗೆ ಅವಕಾಶ ಮಾಡಿಕೊಟ್ಟಿದೆ. ಕಾಯ್ದೆಗೆ ತಿದ್ದುಪಡಿ ಮಾಡಿ ಏಪಿಎಂಸಿ ನಿಯಂತ್ರಣವನ್ನು ತೆಗೆದು ಹಾಕಿ ಅದರ ಮಾಹಿತಿಯನ್ನು ತನಗೆ ನೀಡುವಂತೆ ಕೇಂದ್ರ ಸರಕಾರ ಕೇಳಿದೆ.
ಅದರಂತೆ, ರಾಜ್ಯ ಸರಕಾರವು ಲೂಟಿಕೋರರ ಸೇವೆಗೆ ತುದಿಗಾಲ ಮೇಲೆ ನಿಂತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ – 1966 ಮತ್ರು ನಿಯಮಗಳು – 1968 ರ ಕಲಂ 8, 66,67 ಮತ್ತು 70 ರಂತೆ ಏಪಿಎಂಸಿಯ ಹೊರಗೆ ನಡೆಯುವ ಮಾರುಕಟ್ಟೆಯ ಮೇಲೆ ಏಪಿಎಂಸಿ ನಿಯಂತ್ರಣ ಹೇಳುತ್ತದೆ.

ಎಪಿಎಂಸಿ ಯಾಚೆ ಹೊರಗಡೆ, ರೈತರಿಂದ ಕೃಷಿ ಉತ್ಪನ್ನಗಳನ್ನು ಲೈಸೆನ್ಸ್ ಹೊಂದಿಲ್ಲದ ವರ್ತಕರು ಖರೀದಿಸುವಂತಿಲ್ಲ ಮತ್ತು ವರ್ತಕರು ಮನಬಂದಂತೆ ರೈತರ ಶೋಷಣೆಯನ್ನು ನಡೆಸಲು ಮತ್ತು ಏಪಿಎಂಸಿ ಆದಾಯದ ವಂಚನೆಯನ್ನು ಮಾಡಲು ಅವಕಾಶ ನೀಡುತ್ತಿಲ್ಲ. ನಿಯಮ ಮೀರಿದರೆ ಅಂತಹ ವರ್ತಕರ ಮೇಲೆ ಕಲಂ 114, 116, 117 ರಂತೆ ಕ್ರಿಮಿನಲ್ ದಾವೆ ಹೂಡಲು ಅವಕಾಶಗಳಿತ್ತು.

ಈಗ ಇವುಗಳನ್ನೇ ತಗೆದು ಹಾಕಿದಲ್ಲಿ ರೈತರ ಶೋಷಣೆ ವ್ಯಾಪಕವಾಗಿ ಹೆಚ್ಚಾಗಲಿದೆ. ಎಪಿ ಎಂಸಿ ಗಳಿಗೆ ಆದಾಯ ಮತ್ತು ವ್ಯಾಪಾರವಿಲ್ಲದೇ ಮತ್ತು ಅವುಗಳ ಅಗತ್ಯವಿಲ್ಲದೇ ರಾಜ್ಯದ ಎಲ್ಲಾ ಎಪಿಎಂಸಿ ಇಲ್ಲದಂತಾಗುತ್ತವೆ. ಇದು ಮುಖ್ಯವಾಗಿ, ರೈತರನ್ನು ಮತ್ತು ಕೃಷಿಕೂಲಿಕಾರರನ್ನು ವ್ಯವಸಾಯದಿಂದ ಹೊರದೂಡಲಿದೆ.

ರಾಜ್ಯ ಸರಕಾರ ಇಂತಹ ಗಂಭೀರವಾದ ಜನ ವಿರೋಧಿ ತಿದ್ದುಪಡಿಯ ಕುರಿತು ಕ್ರಮ ವಹಿಸಬಾರದು. ಬದಲಿಗೆ ಎಪಿಎಂಸಿಗಳನ್ನು ಬಲಪಡಿಸಲು ಮತ್ತು ಖಾಸಗೀ ಮಾರುಕಟ್ಟೆ ನಿಷೇಧಿಸಲು ಅಗತ್ಯ ಕ್ರಮ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು

ಜಿ ಎನ್ ಮೋಹನ್


ಪಪ್ಪಾ, I landed..
ಅಂತ ಒಳಗಿನಿಂದಲೇ ಮಗಳು ಕಾಲ್ ಮಾಡಿದಳು. ವಿಮಾನ ಆಗಷ್ಟೇ ನೆಲ ತಾಕಿತ್ತು.

ಇನ್ನು 15 ನಿಮಿಷದಲ್ಲಿ ಆಕೆ ಹೊರಗೆ ಬರುತ್ತಾಳೆ ಅಂತ ಹುರುಪಿನಿಂದ ನಿಂತಿದ್ದೆ.
ಆ ಹುರುಪು ಎರಡು ನಿಮಿಷ ಕೂಡಾ ಉಳಿಯಲಿಲ್ಲ.
ವಿಮಾನ ನಿಲ್ದಾಣದ ಹೊರಗೆ ಬೀಸುತ್ತಿದ್ದ ಗಾಳಿ ಮೊದಲು ‘ಆಹಾ..’ ಎನ್ನುವಂತೆ ಮಾಡಿತ್ತು.

ನಾನು ಆ ಗಾಳಿಗೆ ಮೈಯರಳಿಸಿ ನಿಂತಿದ್ದೆ.
ಆದರೆ ಅದೇ ಗಾಳಿ ಈಗ ನನ್ನ ಮೈ ಒಳಗೆ ಇಳಿಯಲು ಆರಂಭಿಸಿತು. ಒಳಗೆ ಚಂಡಮಾರುತ.
ಮೈ ಗಡ ಗಡ ನಡುಗಲು ಶುರುವಾಯಿತು
ಇದ್ದ ಸ್ವೆಟರ್ ಅನ್ನೂ ಮುಲಾಜಿಲ್ಲದೆ ಮಣಿಸಿ ಹಾಕಿದ ಥಂಡಿ ನನ್ನ ಹಲ್ಲಿಗೆ ನಾಟ್ಯ ಮಾಡುವುದನ್ನು ಕಲಿಸುತ್ತಿತ್ತು

15 ನಿಮಿಷ ಕಳೆಯುವುದರೊಳಗೆ ನಾನು ನಾನಾಗಿಯೇ ಇರಲಿಲ್ಲ.

ಆಗ ಗೊತ್ತಾಯಿತು ಚಳಿ ಎಂದರೆ ಏನು ಅಂತ..

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್ ‘ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಎನ್ನುವ ಕವಿತೆಯ ಮೇಲೆ ಕೈ ಆಡಿಸುತ್ತಿದ್ದೆ

ತಕ್ಷಣ ನನ್ನ ಮೈ ಮನಸ್ಸು ಎರಡಕ್ಕೂ ಇನ್ನಿಲ್ಲದ ಚಳಿ ಆವರಿಸಿಕೊಂಡುಬಿಟ್ಟಿತ್ತು.

ನಾನು ವಾಷಿಂಗ್ಟನ್ ನಲ್ಲಿದ್ದ ದಿನಗಳು
ಸಿ ಎನ್ ಎನ್ ಚಾನಲ್- ‘ಇಲ್ಲಿ ಸುಂದರವಾದ ಹವಾಮಾನವಿದೆ.
ಸೂರ್ಯ ಕಾಣಿಸಿಕೊಂಡಿದ್ದಾನೆ’ ಎಂದು ಪತ್ರ ಕಳಿಸಿತ್ತು
ನಾನು ವಾಹ್! ಎಂದುಕೊಂಡೆ

ಆ ವೇಳೆಗಾಗಲೇ ಪೆಟ್ಟಿಗೆಯಲ್ಲಿ ತುರುಕಿಕೊಂಡಿದ್ದ ಹತ್ತಾರು ಬೆಚ್ಚನೆಯ ಬಟ್ಟೆಗಳನ್ನು
ನಿಮ್ಮ ಸಹವಾಸ ನನಗೇಕೆ ಎನ್ನುವಂತೆ ಗೇಟ್ ಪಾಸ್ ನೀಡಿದೆ

ಯಾಕೆಂದರೆ ಆ ವೇಳೆಗೆ ಕ್ಯೂಬಾ ಗೆ ಹೋಗಿ ಬಂದಿದ್ದೆ
ಹವಾಮಾನದ ಬಗ್ಗೆ ಗೂಗಲಿಸಿ ನೋಡುವ ಕಾಲವಲ್ಲ ಅದು
ಫೋನ್ ಮಾಡಿ ಕೇಳಲು ಕ್ಯೂಬಾದಲ್ಲಿ ಯಾರೊಬ್ಬರೂ, ಯಾರಿಗೂ ಗೊತ್ತಿರಲಿಲ್ಲ.
ಹೋಗಲಿ ಹೋಗಿ ಬಂದವರನ್ನು ಕೇಳೋಣ ಎಂದರೆ ಹೋಗಿ ಬಂದವರಾದರೂ ಯಾರು?

ಹಾಗಾಗಿ ನಾನು ಚಳಿಗೂ ಇರಲಿ, ಬಿಸಿಲಿಗೂ ಇರಲಿ, ಮಳೆ ಬಿದ್ದರೆ ಅದಕ್ಕೂ ತಯಾರ್ ಎನ್ನುವಂತೆ ಬಟ್ಟೆಗಳನ್ನೆಲ್ಲ ಗುಡ್ಡೆ ಹಾಕಿಕೊಂಡೇ ಹೋಗಿದ್ದೆ

ಅಲ್ಲಿ ಹೋಗಿ ನೋಡಿದರೆ ಅದು ಬಿಸಿಲಲ್ಲ, ರಣ ಬಿಸಿಲು

ಎಲ್ಲಿ ನೋಡಿದರೂ ತುಂಡು ಚಡ್ಡಿ ಬಿಟ್ಟರೆ ಎಲ್ಲರೂ ಮೈ ಬಿಟ್ಟುಕೊಂಡು ಓಡಾಡುವರೇ..
ನನ್ನನ್ನು ನೋಡಿ ನನ್ನ ಸೂಟ್ಕೇಸ್ ಇನ್ನಿಲ್ಲದಂತೆ ನಗುತ್ತಿತ್ತು

ಹಾಗೆ ಈ ಬಾರಿ ಪಿಗ್ಗಿ ಬೀಳಬಾರದು ಎಂದು,
ಅಲ್ಲದೆ ಸಿ ಎನ್ ಎನ್ ಸುಂದರ ಹವಾಮಾನ ಇದೆ ಎಂದು ಹೇಳಿದ ಎರಡೂ ಕಾರಣಕ್ಕೆ
ಬೆಚ್ಚನಾ ಮನೆಗೆ ಇಷ್ಟೊಂದು ಬಟ್ಟೆ ಏಕೆ ಎನ್ನುವಂತೆ ಹೋಗಿಬಿಟ್ಟೆ

ಹೋದ ಮೇಲೆ ಗೊತ್ತಾಯಿತು. ಅಮೆರಿಕನ್ನರ ಪ್ರಕಾರ ಸುಂದರ ಹವಾಮಾನ ಎಂದರೆ ಏನು ಅಂತ
ಅಲ್ಲಿ ಇರುವುದು ಮೂರು ಕಾಲ ಚಳಿ, ಚಳಿ ಮತ್ತು ಭಯಂಕರ ಚಳಿ

ಹಾಗಾಗಿ ಅಲ್ಲಿ ಸೂರ್ಯ ಕಂಡ ಎಂದರೆ ಸಾಕು ಸುಂದರ ಹವಾಮಾನ
ನಾನೋ ಥರ್ಮಲ್ಸ್ ಏರಿಸಿಕೊಂಡಿದ್ದರೂ, ಬೆಚ್ಚನೆಯ ಕೋಟು, ಮಫ್ಲರ್ ಸುತ್ತಿಕೊಂಡಿದ್ದರೂ ಇನ್ನಿಲ್ಲದಂತೆ ನಡುಗಿ ಹೋದೆ

ಮೈ ಮೇಲೆ ಏನೇನೋ ಇಲ್ಲವೇನೋ ಎನ್ನುವಂತೆ ಚಳಿ ಕತ್ತಿ ಅಲುಗಿನಂತೆ ನನ್ನೊಳಗೆ ನುಗ್ಗಿ ಇರಿದಿರಿದು ಹಾಕುತ್ತಿತ್ತು

ಇದ್ದಲ್ಲೇ ಮರಗಟ್ಟುತ್ತಾ ಹೋದೆ. ಶ್ರವಣಬೆಳಗೊಳದ ಮೇಲಿನ ಶಿಲೆಯಾಗಿ ಹೋಗಿದ್ದೆ.
ಇನ್ನು ಹಾಗೇ ಇದ್ದರೆ ಸತ್ತೇ ಹೋಗುತ್ತೇನೆ ಎನಿಸಿ ನಾನು ಟ್ಯೂಬ್ ಸ್ಟೇಷನ್ ಗೆ ಜಾರಿಕೊಂಡೆ

ಯಾರಾದರೂ ನೀವು ವಾಷಿಂಗ್ಟನ್ ನಲ್ಲಿ ಏನು ನೋಡಿದಿರಿ ಎಂದು ಕೇಳಿದರೆ
ನಾನು ‘ಟ್ಯೂಬ್ ಸ್ಟೇಷನ್’ ಅಂತ ಮಾತ್ರ ಉತ್ತರ ಕೊಡಲು ಸಾಧ್ಯ ಎನ್ನುವಷ್ಟು ಅಲ್ಲಿ ಸೇರಿಹೋಗುತ್ತಿದ್ದೆ.

ಏಕೆಂದರೆ ನೆಲದೊಳಗಿನ ಈ ಸ್ಟೇಷನ್ನುಗಳಲ್ಲಿ ಬಿಸಿ ಗಾಳಿ ಬಿಡುತ್ತಿದ್ದರು
ಅದಿಲ್ಲದಿದ್ದರೆ ನಾನು ಏನಾಗಿ ಹೋಗುತ್ತಿದ್ದೆನೋ

ಚಳಿ ಎನ್ನುವುದು ಈಗಲೂ ನನಗೆ ಒಂದು ದುಃಸ್ವಪ್ನ.
ನನಗೆ ಚಳಿ ಹಿಡಿದು ಒದ್ದಾಡುವುದಕ್ಕಿಂತ ಹೆಚ್ಚಾಗಿ
ನಾನು ಅಲ್ಲಿ ಚಳಿ ಅನುಭವಿಸಿದ ನೆನಪಿಗೇ ಮರಗಟ್ಟಿ ಹೋಗುತ್ತೇನೆ

ಕ್ಯೂಬಾದಲ್ಲಿ ಅಧಿವೇಶನಕ್ಕೆ ನೂರಾರು ದೇಶಗಳಿಂದ ಬಂದವರು ಅಧಿವೇಶನ ಎನ್ನುವುದನ್ನು ಬದಿಗೆ ಸರಿಸಿ ದೆವ್ವ ಹಿಡಿದವರಂತೆ ಆ ಸುಡುವ ಸೂರ್ಯನ ಅಡಿ ಬೆತ್ತಲಾಗಿ ಬಿದ್ದುಕೊಳ್ಳುತ್ತಿದ್ದರು ಅವರು ಇನ್ನೇನು ಸತ್ತೇ ಹೋಗುತ್ತಾರೆ ಎಂದು ನನಗೆ ಭಯವಾಗುವಷ್ಟು

ಏಕೆಂದರೆ ಅವರು ಸೂರ್ಯನನ್ನೇ ನೋಡದ ದೇಶದವರು ಹಿಮ, ಚಳಿ ಮಧ್ಯೆ ಬದುಕು ಸಾಗಿಸುವವರು
ಸೂರ್ಯನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳಲೂ ಆಗದೆ ನಾನು ಕಂಪಿಸುತ್ತಿದ್ದೆ

ಆಗಲೇ, ಆಗಲೇ ಈ ಚಿತ್ರ ನನ್ನ ಕಣ್ಣಿ ಬಿದ್ದು ಹೋಯಿತು.

ಅದು ಕೆನಡಾದ ಒಂದು ಪುಟ್ಟ ಊರು- ಹ್ಯಾಲಿಫ್ಯಾಕ್ಸ್

ಅಲ್ಲೊಬ್ಬ ಪುಟಾಣಿ ಹುಡುಗಿ ತನ್ನ ಗೆಳತಿಯರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಚಳಿಯಲ್ಲಿ ಗಡ ಗಡ ನಡುಗುತ್ತ ಊರಿನ ಪ್ರತೀ ಲೈಟು ಕಂಬಕ್ಕೂ ಒಂದು ಕೋಟು ತೊಡಿಸುತ್ತಿದ್ದಳು

ಅದೂ ಹೊಚ್ಚ ಹೊಸ ಕೋಟು

ಅದರಲ್ಲೊಂದು ಪುಟ್ಟ ಚೀಟಿ- ನೀವು ಚಳಿಯಲ್ಲಿ ಗಡ ಗಡ ನಡುಗುತ್ತಿದ್ದರೆ ನಾವು ಮನೆಯಲ್ಲಿ ಬೆಚ್ಚನೆ ಮಲಗುವುದು ಹೇಗೆ? ಅಂತ

ಆಕೆ ಎಂಟು ವರ್ಷದ ಪುಟಾಣಿ. ಹುಟ್ಟುಹಬ್ಬ ಹತ್ತಿರ ಬಂದಾಗ ಅಮ್ಮ ತಾರಾ ಸ್ಮಿತ್ ಅತ್ಕಿನ್ ಕೇಳಿದಳು- ಈ ಸಲಾ ಏನಾದರೂ ಹೊಸ ಥರಾ ಮಾಡೋಣ ಅಂತ

ಮಗಳ ಬರ್ತ್ ಡೇ ಕೇಕ್ ಗೆ, ಗಿಫ್ಟ್ ಗೆ, ಅದಕ್ಕೆ ಇದಕ್ಕೆ ಅಂತ ಇಟ್ಟಿದ್ದ ದುಡ್ಡೆಲ್ಲವನ್ನೂ ಬೆಚ್ಚಗಿನ ಜಾಕೆಟ್ ಖರೀದಿಸಲು ಬಳಸಿದರು

ಆ ಪುಟ್ಟ ಹುಡುಗಿ ತನ್ನ ಗೆಳತಿಯರನ್ನ ಗುಡ್ಡೆ ಹಾಕಿಕೊಂಡವಳೇ ಹೊರಟೇಬಿಟ್ಟಳು
ಕೊಂಡು ತಂದಿದ್ದ ಹತ್ತಾರು ಜಾಕೆಟ್ ಗಳನ್ನು ಕಂಬಕ್ಕೆ ಸುತ್ತಿದರು

ಆಮೇಲೆ ಅವರಿಗೆ ಪೇಚಾಟವಾಯಿತು ಇದು ಯಾಕೆ ಅಂತ ಗೊತ್ತಾಗುತ್ತೋ ಇಲ್ಲವೋ ಅಂತ
ಆಗ ಮುದ್ದಾಗಿ ಬರೆದರು-
‘ನಾನು ಇಲ್ಲಿ ಕಳೆದು ಹೋಗಿ ಬಂದಿಲ್ಲ, ನಿಮ್ಮನ್ನು ಹುಡುಕುತ್ತ ಬಂದಿದ್ದೇನೆ’
‘ನೀವು ನನ್ನನ್ನು ತೊಟ್ಟರೆ ನನಗದೇ ಖುಷಿ. ಬಿ ಹ್ಯಾಪಿ ಅಲ್ವೇಸ್’ ಅಂತ ಜಾಕೆಟ್ ತನ್ನದೇ ಕಥೆ ಹೇಳಿತು

ಹಾಗೆ ಜಾಕೆಟ್ ಹೊತ್ತ ಕಂಬಗಳ ಫೋಟೋ ಇಡೀ ಊರನ್ನೇ ಬೆರಗು ಮಾಡಿ ಹಾಕಿತು.

ಎಲ್ಲೆಲ್ಲಿಂದಲೋ ಊರ ಜಾತ್ರೆ ಬರುವಂತೆ ಜನ ಬಂದರು ಮಕ್ಕಳ ಪ್ರೀತಿಗೆ ಖುಷಿಯಾಗಿ ಹೋದರು.
ಫೋಟೋಗಳನ್ನು ಕ್ಲಿಕ್ಕಿಸಿದರು

ಇದು ಯಾವಾಗ್ ಫೇಸ್ ಬುಕ್ ನಲ್ಲಿ ಕಂಡಿತೋ ಅಲ್ಲಿಗೆ ಜಗತ್ತೂ ಬೆರಗಾಯಿತು.
ಹೌದಲ್ಲಾ ನನ್ನದೊಂದು ಪುಟ್ಟ ಹೆಜ್ಜೆ ಏನೆಲ್ಲಾ ಮಾಡಿಬಿಡಬಹುದು ಅಂತ

ಮುಂದಿನ ವರ್ಷ ಪುಟಾಣಿ ಮತ್ತೆ ಹುಟ್ಟುಹಬ್ಬಕ್ಕೆ ಸಜ್ಜಾಗುತ್ತಿದ್ದಳು.
ಒಂದು ದಿನ ಹೊರಗೆ ಬಂದು ನೋಡುತ್ತಾಳೆ. ಅವಳ ಬೆರಗಿಗೆ ಮಿತಿ ಇರಲಿಲ್ಲ

ಮನೆಯ ಹೊರಗೆ ನೂರಾರು ಬಾಕ್ಸ್ ಗಳು.
ಏನಿದು ಎಂದು ನೋಡಿದರೆ ಎಲ್ಲದರಲ್ಲಿಯೂ ಬಣ್ಣ ಬಣ್ಣದ ಹೊಚ್ಚ ಹೊಸ ಜಾಕೆಟ್ ಗಳು
ಅಮ್ಮ, ಮಗಳು ದಂಗಾಗಿ ಹೋದರು

ಯಾವಾಗ ಬೀದಿಯಲ್ಲಿ ನರಳುವ, ಸೂರಿಲ್ಲದೆ ಚಳಿಯನ್ನೇ ಹೊದ್ದು ಸಾಯುವವರ ಕಡೆ ಇವರು ಹೋಗುತ್ತಿದ್ದಾರೆ ಎಂದು ಗೊತ್ತಾಯಿತೋ
ಊರಿಗೆ ಊರೇ ಇವರ ಜೊತೆ ನಿಂತು ಬಿಟ್ಟಿತು
ನಮ್ಮದೂ ಒಂದಿಷ್ಟು ಎಂದು ಜಾಕೆಟ್ ಖರೀದಿಸಿ ಕಳಿಸಿದರು

ಮೊದಲು ಒಂದತ್ತು ಕಂಬ ಮಾತ್ರ ಜಾಕೆಟ್ ತೊಟ್ಟಿದ್ದರೆ ಈಗ ಊರಿನ ಕಂಬಗಳೆಲ್ಲಕ್ಕೂ ಮಕ್ಕಳು ತೊಡಿಸಿದ ಜಾಕೆಟ್ ಹೊತ್ತು ನಿಂತಿದ್ದವು
ಹಾಗೆ ಪುಟ್ಟ ಪುಟ್ಟ ಕೈಗಳು ದೊಡ್ಡ ದೊಡ್ಡ ಕೆಲಸ ಮಾಡಿಬಿಟ್ಟವು.

ಅಲ್ಲಿಯವರೆಗೂ ರಟ್ಟಿನ ಡಬ್ಬಿಗಳಲ್ಲಿ ಮುದುರಿ ಹೋಗುತ್ತಿದ್ದ, ಕಣ್ಣಲ್ಲಿ ಸಾವಿನ ಬಿಂಬವನ್ನಷ್ಟೇ ಕಾಣುತ್ತಿದ್ದ ಎಷ್ಟೋ ಜೀವಗಳು ಒಂದಿಷ್ಟು ಬೆಚ್ಚಗಾದವು.

ಮೊನ್ನೆ ಗುಲ್ಬರ್ಗದ ಸೇಡಂ ನಿಂದ ಮಹಿಪಾಲರೆಡ್ಡಿ ಮುನ್ನೂರು ಫೋನ್ ಮಾಡಿದ್ದರು

‘ಅಮ್ಮ ಪ್ರಶಸ್ತಿ’ ನೀಡುವಾಗ ಹಾರ ತುರಾಯಿ ಶಾಲಿನ ಬದಲು ಈ ಬಾರಿ ಕೌದಿ ಕೊಡೋಣ ಎಂದುಕೊಂಡಿದ್ದೇನೆ ಎಂದರು

ಹೌದಲ್ಲಾ!, ಚಳಿಗೆ ಬೆಚ್ಚಗಿರಲು, ಅಷ್ಟೇ ಅಲ್ಲ ಅಮ್ಮನ ನೆನಪನ್ನು ಸದಾ ನಮ್ಮೊಡನಿಡಲು ಇದಕ್ಕಿಂತ ಇನ್ನೇನು ಬೇಕು ಅನಿಸಿತು

ಆ ಬೆಚ್ಚನೆಯ ಭಾವ ಇಷ್ಟೆಲ್ಲಾ ಚಳಿಯನ್ನು ನೆನಪಿಸಿತು.1

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಜಾಹಿರಾತು

ಪಂಚಾಂಗ

ದಿನಾಂಕ : 12, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಮಂಗಳವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಪಂಚಮಿ
(ನಿನ್ನೆ ಬೆಳಿಗ್ಗೆ 6 ಗಂ॥ 37 ನಿ।। ರಿಂದ
ಇಂದು ಪ್ರಾತಃಕಾಲ 5 ಗಂ॥ 54 ನಿ।। ತನಕ)
ನಕ್ಷತ್ರ : ಉತ್ತರಾಷಾಢ
(ಇಂದು ಪ್ರಾತಃಕಾಲ 4 ಗಂ॥ 12 ನಿ।। ರಿಂದ
ಮರುದಿನ ಪ್ರಾತಃಕಾಲ 4 ಗಂ॥ 55 ನಿ।। ತನಕ)
ಯೋಗ : ಶುಭ
ಕರಣ : ತೈತಿಲ
ವರ್ಜ್ಯಂ : (ಇಂದು ಬೆಳಿಗ್ಗೆ 12 ಗಂ॥ 26 ನಿ।। ರಿಂದ ಇಂದು ಮಧ್ಯಾಹ್ನ 2 ಗಂ॥ 4 ನಿ।। ತನಕ)
ಅಮೃತಕಾಲ : (ನಿನ್ನೆ ರಾತ್ರಿ 11 ಗಂ॥ 23 ನಿ।। ರಿಂದ ಇಂದು ಪ್ರಾತಃಕಾಲ 0 ಗಂ॥ 58 ನಿ।। ತನಕ)(ಇಂದು ರಾತ್ರಿ 10 ಗಂ॥ 19 ನಿ।। ರಿಂದ ಇಂದು ರಾತ್ರಿ 11 ಗಂ॥ 57 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 8 ಗಂ॥ 19 ನಿ।। ರಿಂದ ಇಂದು ಬೆಳಿಗ್ಗೆ 9 ಗಂ॥ 10 ನಿ।। ತನಕ)(ಇಂದು ಬೆಳಿಗ್ಗೆ 10 ಗಂ॥ 11 ನಿ।। ರಿಂದ ಇಂದು ಬೆಳಿಗ್ಗೆ 11 ಗಂ॥ 2 ನಿ।। ತನಕ)
ರಾಹುಕಾಲ : (ಇಂದು ಸಂಜೆ 3 ಗಂ॥ 25 ನಿ।। ರಿಂದ ಇಂದು ಸಂಜೆ 5 ಗಂ॥ 1 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 12 ಗಂ॥ 12 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 48 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 8 ಗಂ॥ 58 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 34 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 45 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 39 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಧನು

ಮೇಷ ರಾಶಿ ಭವಿಷ್ಯ : 12 May 2020
ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇಂದು ಮನೆಯ ಯಾವುದೇ ಎಲೆಕ್ಟ್ರಾನಿಕ್ ಸರಕುಗಳ ಕೆಟ್ಟು ಹೋಗುವ ಕಾರಣದಿಂದಾಗಿ ನಿಮ್ಮ ಹಣ ಖರ್ಚಾಗಬಹುದು. ನಿಮ್ಮ ಆಹ್ಲಾದಕರ ವರ್ತನೆ ಕುಟುಂಬ ಜೀವನವನ್ನು ಬೆಳಗುತ್ತದೆ. ಕೆಲವೇ ಜನರು ಇಂಥ ಪ್ರಾಮಾಣಿಕ ನಗುವಿರುವ ವ್ಯಕ್ತಿಯನ್ನು ನಿರ್ಲಕ್ಷಿಸಬಲ್ಲರು. ನೀವು ಇತರರ ಜೊತೆ ಚೆನ್ನಾಗಿರಬಹುದಾದಾಗ -ನೀವು ಒಂದು ಸುವಾಸನಾಯುಕ್ತ ಹೂವಿನ ಹಾಗೆ ಇರುತ್ತೀರಿ. ನಿಮ್ಮ ಶಾಶ್ವತವಾದ ಪ್ರೀತಿ ನಿಮ್ಮ ಪ್ರೀತಿಪಾತ್ರರಿಗೆ ಒಂದು ಸೆಲೆಯಾಗಿದೆ. ಅದೃಷ್ಟ ಸಂಖ್ಯೆ: 6

ವೃಷಭ ರಾಶಿ ಭವಿಷ್ಯ : 12 May 2020
ನಿಮ್ಮ ವಿಶ್ವಾಸ ಮತ್ತು ಚೈತನ್ಯ ಇಂದು ಅಧಿಕವಾಗಿರುತ್ತದೆ. ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹೆಜ್ಜೆಯನ್ನು ಹಾಕುವ ಅಗತ್ಯವಿದೆ , ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು ಸಂಬಂಧಿಗಳಿದ್ದಲ್ಲಿ ಸಣ್ಣ ಪ್ರಯಾಣ ನಿಮ್ಮ ದೈನಂದಿನ ಒತ್ತಡದ ಜೀವನದಿಂದ ನಿಮಗೆ ಸುಖ ಮತ್ತು ವಿಶ್ರಾಂತಿಯನ್ನು ತರುತ್ತದೆ ಪ್ರಣಯ ನಿಮ್ಮ ಹೃದಯವನ್ನು ಆಳುತ್ತದೆ. ಅದೃಷ್ಟ ಸಂಖ್ಯೆ: 5

ಮಿಥುನ ರಾಶಿ ಭವಿಷ್ಯ : 12 May 2020
ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ತೈಲದಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ. ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ. ದೂರದ ಸ್ಥಳದ ಸಂಬಂಧಿಗಳು ಇಂದು ನಿಮ್ಮನ್ನು ಸಂಪರ್ಕಿಸಬಹುದು. ಪ್ರೀತಿ ಯಾವಾಗಲೂ ಭಾವಪೂರ್ಣವಾಗಿದೆ, ಮತ್ತು ನೀವು ಇಂದು ಇದನ್ನು ಅನುಭವಿಸುತ್ತೀರಿ. ನಿಮ್ಮ ಮಾರ್ಗದಲ್ಲಿ ಸುಧಾರಣೆ ಮತ್ತು ಆಫೀಸಿನ ಕೆಲಸದಲ್ಲಿ ಗುಣಮಟ್ಟದ ಸುಧಾರಣೆಯನ್ನು ಅನುಭವಿಸುತ್ತೀರಿ. ಅದೃಷ್ಟ ಸಂಖ್ಯೆ: 4

ಕರ್ಕ ರಾಶಿ ಭವಿಷ್ಯ : 12 May 2020
ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ ಮತ್ತು ನೀವು ಒಂದು ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ವಿದೇಶದಲ್ಲಿ ಮಲಗಿರುವ ನಿಮ್ಮ ಭೂಮಿಯನ್ನು ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಅದು ನಿಮಗೆ ಲಾಭದಾಯಕವಾಗಲಿದೆ. ನೀವು ಹೆಚ್ಚೇನೂ ಮಾಡದೇ ಇತರರ ಗಮನ ಸೆಳೆಯಲು ಇದೊಂದು ಪರಿಪೂರ್ಣ ದಿನ. ಇಂದು ನಿಮ್ಮ ಪ್ರೀತಿಪಾತ್ರರು ತನ್ನ ಮನಸ್ಥಿತಿಯನ್ನು ನಿಮ್ಮ ಮುಂದೆ ಇಡಲು ಸಾಧ್ಯವಾಗುವುದಿಲ್ಲ ಇದರಿಂದಾಗಿ ನೀವು ಅಸಮಾಧಾನಗೊಳ್ಳಬಹುದು. ಅದೃಷ್ಟ ಸಂಖ್ಯೆ: 7

ಸಿಂಹ ರಾಶಿ ಭವಿಷ್ಯ : 12 May 2020
ನೀವು ಆರೋಗ್ಯ ಸಮಸ್ಯೆಯಿಂದಾಗಿ ಒಂದು ಪ್ರಮುಖ ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಕೆಲವು ಹಿನ್ನಡೆ ಎದುರಿಸುವ ಸಾಧ್ಯತೆಯಿದೆ. ಆದರೆ ನಿಮ್ಮನ್ನು ಮೇಲೆತ್ತಲು ನಿಮ್ಮ ತಾರ್ಕಿಕತೆಯನ್ನು ಬಳಸಿ. ಎಲ್ಲಾದರೂ ಹೂಡಿಕೆ ಮಾಡಿರುವ ಜನರು, ಇಂದಿನ ದಿನ ಅವರಿಗೆ ಆರ್ಥಿಕ ನಷ್ಟ ಸಂಭವಿಸಬಹುದು ನಿಮ್ಮ ಸಮಸ್ಯೆಗಳನ್ನು ಗಂಭೀರವಾಗಿರುತ್ತವೆ- ಆದರೆ ನಿಮ್ಮ ಸುತ್ತಲಿನ ಜನರು ನ ಅನುಭವಿಸುತ್ತಿರುವ ನೋವನ್ನು ಗಮನಿಸುವುದಿಲ್ಲ-ಬಹುಶಃ ಅವರು ಇದು ತಮ್ಮ ವ್ಯವಹಾರವಲ್ಲವೆಂದು ಭಾವಿಸಬಹುದು. ಅದೃಷ್ಟ ಸಂಖ್ಯೆ: 5

ಕನ್ಯಾ ರಾಶಿ ಭವಿಷ್ಯ : 12 May 2020
ಸ್ವಲ್ಪ ವ್ಯಾಯಾಮದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ – ನಿಮ್ಮ ಬಗ್ಗೆ ನೀವೇ ಒಳ್ಳೆಯ ಅಭಿಪ್ರಾಯ ಇಟ್ಟುಕೊಳ್ಳುವುದು ಮುಖ್ಯ – ಇದನ್ನು ದಿನವೂ ಮಾಡುವುದನ್ನು ರೂಢಿ ಮಾಡಿಕೊಳ್ಳಿ ಹಾಗೂ ಅದನ್ನು ಕಟ್ಟುನಿಟ್ಟಾಗಿ ಅನುಸರಿಸಿ. ನಿಮ್ಮ ಜೀವನದ ಕಳಪೆ ಆರೋಗ್ಯದಿಂದಾಗಿ, ನಿಮ್ಮ ಹಣವನ್ನು ಇಂದು ಖರ್ಚು ಮಾಡಬಹುದು, ಆದರೆ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ಹಣವನ್ನು ಉಳಿಸಲಾಗಿದೆ ಇದರಿಂದ ಅದು ಕೆಟ್ಟ ಸಮಯದಲ್ಲಿ ನಿಮಗೆ ಉಪಯುಕ್ತವಾಗಿರುತ್ತದೆ. ಅದೃಷ್ಟ ಸಂಖ್ಯೆ: 4

ತುಲಾ ರಾಶಿ ಭವಿಷ್ಯ : 12 May 2020
ನೀವು ಹೇರಳ ಶಕ್ತಿಯನ್ನು ಹೊಂದಿರುತ್ತೀರಿ – ಆದರೆ ಕೆಲಸದ ಒತ್ತಡ ನಿಮ್ಮನ್ನು ಉದ್ವಿಗ್ನಗೊಳಿಸುವಂತೆ ತೋರುತ್ತದೆ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಕುಟುಂಬದ ಸದಸ್ಯರು ಬೆಂಬಲ ನೀಡಿದರೂ ತುಂಬ ಬೇಡಿಕೆಯಿಡುತ್ತಾರೆ. ಭಾವಪೂರ್ಣ ಪ್ರೀತಿಯ ಭಾವಪರವಶತೆಯನ್ನು ಇಂದು ಅನುಭವಿಸಬಹುದು. ಅದಕ್ಕಾಗಿ ಸ್ವಲ್ಪ ಸಮಯ ತೆಗೆದಿಡಿ. ಅದೃಷ್ಟ ಸಂಖ್ಯೆ: 6

ವೃಶ್ಚಿಕ ರಾಶಿ ಭವಿಷ್ಯ : 12 May 2020
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ನೀವು ಅತೀ ಉದಾರಿಯಾಗಿದ್ದಲ್ಲಿ – ನಿಮ್ಮ ನಿಕಟ ಜನರು ನಿಮ್ಮ ಅನುಚಿತ ಲಾಭ ತೆಗೆದುಕೊಳ್ಳಬಹುದು. ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಒಳ್ಳೆಯದನ್ನು ಯೋಚಿಸುತ್ತಾನೆ, ಆದ್ದರಿಂದ ಕೆಲವೊಮ್ಮೆ ನಿಮ್ಮ ಮೇಲೆ ಕೋಪವನ್ನು ಸಹ ತೋರಿಸಬಹುದು. ಅದೃಷ್ಟ ಸಂಖ್ಯೆ: 8

ಧನು ರಾಶಿ ಭವಿಷ್ಯ : 12 May 2020
ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ನಿಮ್ಮ ಪ್ರೇಮ ಜೀವನ ಶರದೃತುವಿನಲ್ಲಿನ ಮರದ ಎಲೆಯಂತಿರುತ್ತದೆ. ಯಾವುದೇ ಜಂಟಿ ಯೋಜ್ನಯ್ಲಲಿ ಭಾಗವಹಿಸಬೇಡಿ – ಪಾಲುದಾರರು ನಿಮ್ಮ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಇಂದು ಮನೆಯಲ್ಲಿ ಯಾವುದೇ ಪಾರ್ಟಿಯಿಂದಾಗಿ, ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗಬಹುದು. ನಿಮ್ಮ ಸಂಗಾತಿ ಇಂದು ಕೆಲವು ಕಷ್ಟಕರ ಸಂದರ್ಭಗಳಲ್ಲಿ ನಿಮಗೆ ಬಂಬಲ ನೀಡಲು ಹೆಚ್ಚು ಆಸಕ್ತಿ ತೋರಿಸದಿರಬಹುದು. ಅದೃಷ್ಟ ಸಂಖ್ಯೆ: 5

ಮಕರ ರಾಶಿ ಭವಿಷ್ಯ : 12 May 2020
ಕೆಲಸದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ಸ್ವಲ್ಪ ಉದ್ವೇಗ ತರಬಹುದು. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ನೀವು ಕೆಲವು ಪ್ರವಾಸೀ ತಾಣಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ರೇಮ ಜೀವನವನ್ನು ಉಜ್ವಲಗೊಳಿಸಬಹುದು. ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ಭಾಗವನ್ನು ನೀವಿಂದು ನೋಡಬಹುದು. ಈ ರಾಶಿಚಕ್ರದ ಜನರು ಬಹಳ ಆಸಕ್ತಿದಾಯಕರು. ಅದೃಷ್ಟ ಸಂಖ್ಯೆ: 5

ಕುಂಭ ರಾಶಿ ಭವಿಷ್ಯ : 12 May 2020
ನಿಮ್ಮ ಮೇಲೆ ಬಹಳಷ್ಟು ಅವಲಂಬಿಸಿರುತ್ತದೆ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳಲು ಮಾನಸಿಕ ಸ್ಪಷ್ಟತೆ ಅಗತ್ಯವಾಗಿರುತ್ತದೆ. ಆಪ್ತ ಸ್ನೇಹಿತನ ಸಹಾಯದಿಂದ ಇಂದು ಕೆಲವು ವ್ಯಾಪಾರಿಗಳಿಗೆ ಹಣದ ಲಾಭವಾಗುವ ಸಾಧ್ಯತೆ ಇದೆ. ಈ ಹಣ ನಿಮ್ಮ ಅನೇಕ ಸಮಸೆಗಳನ್ನು ದೂರ ಮಾಡಬಹುದು. ನಿಮ್ಮ ಸಂಗಾತಿಯ ಆರೋಗ್ಯ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು ನಿಮ್ಮ ಶಾಶ್ವತವಾದ ಪ್ರೀತಿ ನಿಮ್ಮ ಪ್ರೀತಿಪಾತ್ರರಿಗೆ ಒಂದು ಸೆಲೆಯಾಗಿದೆ. ಅದೃಷ್ಟ ಸಂಖ್ಯೆ: 3

ಮೀನ ರಾಶಿ ಭವಿಷ್ಯ : 12 May 2020
ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಕುಟುಂಬದ ಯಾವುದೇ ಸದಸ್ಯರ ಕಾಯಿಲೆ ಬೀಳುವ ಕಾರಣದಿಂದಾಗಿ ನೀವು ಆರ್ಥಿಕ ತೊಂದರೆಗೊಳಗಾಗಬಹುದು. ಆದಾಗ್ಯೂ ಈ ಸಮಯದಲ್ಲಿ ನೀವು ಹಣಕ್ಕಿಂತ ಹೆಚ್ಚಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ. ಏಕಪಕ್ಷೀಯ ವ್ಯಾಮೋಹ ಇಂದು ಹಾನಿಕಾರಕವೆಂದು ಸಾಬೀತಾಗುತ್ತದೆ. ನಿಮ್ಮ ಪ್ರೀತಿಯ ಸಂಬಂಧ ಮಾಂತ್ರಿಕ ತಿರುವು ಪಡೆಯುತ್ತಿದೆ; ಸುಮ್ಮನೇ ಅದನ್ನು ಅನುಭವಿಸಿ. ಅದೃಷ್ಟ ಸಂಖ್ಯೆ: 9

IAS ಅಧಿಕಾರಿ ಮಣಿವಣ್ಣನ್ ವರ್ಗಾವಣೆಗೆ ಹೆಚ್ಚಿದ‌ ವಿರೋಧ

Publicstory.in


Bengaluru: ಕೋವಿಡ್ ಪರಿಹಾರ ಕಾಯ೯ಗಳ ನಡುವೆ ಕಾಮಿ೯ಕ ಕಾಯ೯ದಶಿ೯ ಮಣಿವಣ್ಣನ್ ವಗಾ೯ವಣೆ ಸಿಪಿಐ(ಎಂ) ಖಂಡಿಸಿದೆ.

ಕೋವಿಡ್ ಪರಿಹಾರ ಕಾಯ೯ ಕೈಗೊಳ್ಳುವಲ್ಲಿ ರಾಜ್ಯ ಸಕಾ೯ರದ ವಿವಿಧ ಇಲಾಖೆಗಳಲ್ಲೆ ಪರಿಣಾಮಕಾರಿಯಾಗಿ ಕಾಯ೯ನಿವ೯ಹಿಸಿದ್ದ ಕಾಮಿ೯ಕ ಇಲಾಖೆಯ ಪ್ರಧಾನ ಕಾಯದಶಿ೯ಗಳಾದ ಮಣಿವಣ್ಣನ್ ಅವರನ್ನು ರಾಜ್ಯ ಸಕಾ೯ರವು ವಗಾ೯ವಣೆ ಮಾಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಉತ್ತರ ಪ್ರದೇಶ, ಗುಜರಾತ್, ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಂದಿರುವ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡುವ ಕ್ರಮಗಳನ್ನು ಸುಗ್ರೀವಾಜ್ಞೆ ಹೊರಡಿಸುವ ತನ್ನ ಕೈಂಕಯ೯ಕ್ಕೆ ಅನುವುಗೊಳಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್ ಅವರಿಗೆ ಕಾಮಿ೯ಕ ಇಲಾಖೆಯ ಪ್ರಧಾನ ಕಾಯ೯ದಶಿ೯ ಹೊಣೆಯನ್ನು ವಹಿಸಿದೆ ಎಂಬ ಗಂಭೀರ ಆರೋಪ ಮಾಡಿದೆ.

ರಾಜ್ಯದ ಕಾಮಿ೯ಕರ ಹಿತಕ್ಕಿಂತ ಕಾಪೋ೯ರೇಟ್ ಬಂಡವಾಳದ ಹಿತವೇ ರಾಜ್ಯ ಸಕಾ೯ರಕ್ಕೆ ಮುಖ್ಯ ವಾಗಿದೆ ಎಂಬುದನ್ನು ಬಿಜೆಪಿ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.
ಏನಾದರು ಮಾಡಿ ಕಾಮಿ೯ಕ ಕಾನೂನುಗಳಿಂದ ಬಂಡವಾಳಗಾರರಿಗೆ ವಿನಾಯಿತಿ ನೀಡಲು ಕೋವಿಡ್ ಪರಿಹಾರವನ್ನು ಸಹಾ ಬಲಿಕೊಡಲು ರಾಜ್ಯ ಸಕಾ೯ರ ಹಿಂಜರಿಯದು ಎಂಬುದನ್ನು ಇದು ತೋರುತ್ತದೆ ಎಂದು ಹೇಳಿದೆ.

ತನ್ನ ಬಂಡವಾಳಗಾರರ ಪರ ನೀಲುಮೆಯ ಸಾಧನೆಗಾಗಿ ಒಬ್ಬ ದಕ್ಷ ಮತ್ತು ಕೋವಿಡ್ ಪರಿಹಾರ ಕಾಯ೯ವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಲ್ಲಿ ಯಶಸ್ಸು ಕಾಣುತ್ತಿದ್ದ ಅಧಿಕಾರಿಯನ್ನು ಸಹ ಸಹಿಸದು ಬಿಜೆಪಿ ಸರಕಾರ ಎಂದು ಸಿಪಿಐ(ಎಂ) ಖಂಡಿಸಿದೆ.

ರಾಜ್ಯ ಬಿಜೆಪಿ ಸಕಾ೯ರದ ಇಂತಹ ಕ್ರಮಗಳೆ ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಜನತೆಗೆ ಪರಿಹಾರವನ್ನು ಸಮ೯ಪಕವಾಗಿ ಸಮಥ೯ವಾಗಿ ನಿವ೯ಹಿಸುವಲ್ಲಿ ವಿಫಲವಾಗುತ್ತಿದೆ. ರಾಜ್ಯ ಸಕಾ೯ರದಲ್ಲಿನ ದ್ವಿಅಧಿಕಾರ ಕೇಂದ್ರಗಳು ಹಾಗು ಸೂಪರ್ ಸಿಎಂ ಸಂತೋಷ್ ಕಪಿಮುಷ್ಟಿಯಲ್ಲಿ ರಾಜ್ಯ ಸಕಾ೯ರವು ಸಿಲುಕಿರುವ ಪರಿಣಾಮ ಇಂತಹ ದೂರದೃಷ್ಟಿ ಹೀನ ಆಡಳಿತಾತ್ಮಕ ಕ್ರಮಗಳನ್ನು ರಾಜ್ಯದ ಜನತೆ ಕಣುವಂತಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೋವಿಡ್ ಲಾಕ್ಡೌನ್ ಸಂತ್ರಸ್ತರಿಗೆ ಪರಿಹಾರವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಮಣಿವಣ್ಣನ್ ವಗಾ೯ವಣೆಯನ್ನು ಕೂಡಲೆ ರದ್ದುಪಡಿಸಿ ಕಾಮಿ೯ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯಾಗಿ ಅವರನ್ನೇ ಮುಂದುವರಿಸ ಬೇಕೆಂದು ಸಿಪಿಐ (ಎಂ) ರಾಜ್ಯ ಸಕಾ೯ರವನ್ನು ಒತ್ತಾಯಿಸಿದೆ ಎಂದು ಸಿಪಿಐ (ಎಂ)
ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್, ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಕೊರೊನಾ ನಿರ್ವಹಣೆ: ತುಮಕೂರಿನ ಆಸ್ಪತ್ರೆಗಳು, ಪೊಲೀಸರು ಒಂದು ಒಳನೋಟ…

0

ಡಾ.ಜಿ.ಅಚ್ಯುತರಾವ್
ಜನಾಭಿವೃದ್ಧಿ ಪರಿಣಿತರು,ಸರ್ಕಾರದ ಸಾಮಾಜಿಕ ಬದ್ಧತಾ ಕಾರ್ಯಕ್ರಮಗಳ ಸಲಹೆಗಾರರು
ನಿರೂಪಣೆ: ತುರುವೇಕೆರೆ ಪ್ರಸಾದ್


ಕರೋನಾ ವೈರಸ್ ಸೊಂಕಿನ ಭೀತಿಯ ಸಂಕಷ್ಟದ ಸಮಯದಲ್ಲಿ ನಾನು ನಾಡಿನಾದ್ಯಂತ ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಹಲವು ಪಟ್ಟಣಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಸಂಚರಿಸಿದ್ದೇನೆ.

ಗ್ರಾಮೀಣ ಜನರ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಮತ್ತು ಕುಂದುಕೊರೆತೆಗಳ ಸೂಕ್ಷ್ಮ ಅಧ್ಯಯನ ನಡೆಸಿದ್ದೇನೆ.

ನನ್ನ ಅನುಭವ ಹಾಗೂ ನಾನು ಕಂಡುಕೊಂಡು ಕೆಲವು ವಾಸ್ತವಾಂಶಗಳನ್ನು ಸರ್ಕಾರ, ಜನಪ್ರತಿನಿಧಿಗಳು ಹಾಗೂ ನಾಗರಿಕರಾದ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನಮ್ಮ ರೆಡ್‍ಕ್ರಾಸ್ ಸಂಸ್ಥೆ ಸರ್ಕಾರ ಹಾಗೂ ಹಾಲು ಒಕ್ಕೂಟ ನೀಡುತ್ತಿದ್ದ ಹಾಲನ್ನು ಸುಮಾರು 1200 ಬಡವರು,ಕಡುಬಡವರು ಮತ್ತು ನಿರಾಶ್ರಿತರಿಗೆ ತಲುಪಿಸುವ ಗುರುತರವಾದ ಜವಾಬ್ಧಾರಿ ವಹಿಸಿತ್ತು.

ಇದನ್ನು ನಾವು ಸಮರ್ಥವಾಗಿ ನಿರ್ವಹಿಸಿದ್ದೇವೆ. ಹಾಲು ವಿತರಣೆಯನ್ನು ನಾವು ಒಂದು ನೆವವಾಗಿಸಿಕೊಂಡು ಜನರಲ್ಲಿದ್ದ ಕೊರೊನಾ ಕುರಿತ ಆತಂಕ ಹಾಗೂ ತಲ್ಲಣಗಳನ್ನು ದೂರ ಮಾಡಲು ಪ್ರಯತ್ನಿಸಿದ್ದೇವೆ.

ಲಾಕ್‍ಡೌನ್ ಪ್ರಾರಂಭದ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಗೊಂದಲ ಹಾಗೂ ಆತಂಕಗಳಿತ್ತು. ಅವಶ್ಯ ವಸ್ತುಗಳ ಕೊರತೆಯಿಂದ ಎಲ್ಲಿ ಅರಾಜಕತೆ ನಿರ್ಮಾಣವಾಗುತ್ತದೋ ಎಂಬ ಗಾಬರಿಯಿತ್ತು.

ನಾವು ಹಾಲು ವಿತರಿಸುವ ನೆಪದಲ್ಲಿ ಪ್ರತಿದಿನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾರಂಭಿಸಿದೆವು, ಅವರಿಗೆ ಸಾಂತ್ವನ ಹೇಳುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿದೆವು.

ಇದರ ಪರಿಣಾಮವಾಗಿ ಅವರಲ್ಲಿದ್ದ ಆತಂಕ, ಗೊಂದಲಗಳು ಮಾಯವಾಗಿ ಸಾಮಾಜಿಕ ಸಮಾನತೆ, ಪ್ರಬುದ್ಧತೆ ಹಾಗೂ ತಮ್ಮ ಕಷ್ಟ ಮರೆತು ಇತರರಿಗೆ ಸಹಾಯ ಮಾಡುವ ಅಂತಃಕರಣ, ತಮಗೆ ತಾವೇ ಸಹಾಯಮಾಡಿಕೊಳ್ಳುವ ಪ್ರವೃತ್ತಿ ಮೂಡಲಾರಂಭಿಸಿತು.

ಜನ ತಾವೇ ಸ್ವಯಂ ಸೇವಕರಾಗಿ ತಮಗಿಂತ ಕಷ್ಟದಲ್ಲಿರುವವರಿಗೆ ಸ್ವಯಂಪ್ರೇರಣೆಯಿಂದ ಸಹಾಯ ಮಾಡಲಾರಂಭಿಸಿದರು.
ಜನರ ಈ ಸಹಭಾಗಿತ್ವವನ್ನೇ ನಾವು ಸಾಮಾಜಿಕ ಕುಂದುಕೊರತೆಗಳನ್ನು ಬಗೆಹರಿಸಲೂ ಬಳಸಿಕೊಂಡೆವು.

ಕರೋನ ವಿರುದ್ಧ ಹೋರಾಟದಲ್ಲಿ ನೈರ್ಮಲ್ಯ ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ನಾವು ಹಾಲು ಹಂಚುತ್ತಿದ್ದ ಪ್ರದೇಶಗಳಲ್ಲಿ ನಡೆಯುತ್ತಿದ್ದ ರೇಶನ್ ವಿತರಣೆ, ಅಲ್ಲಿನ ನೈರ್ಮಲ್ಯ, ಕುಡಿಯುವ ನೀರಿನ ವ್ಯವಸ್ಥೆ, ಸಾಮಾಜಿಕ ಸ್ಥಿತಿಗತಿ ಮೊದಲಾದವುಗಳ ಕುರಿತು ಅವರಲ್ಲಿ ಜಾಗೃತಿ ಮೂಡಿಸಿದೆವು,

ತತ್ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರೇ ತಮ್ಮ ತಮ್ಮ ಪ್ರದೇಶಗಳ ಕೊಂದುಕೊರತೆಗಳನ್ನು ನಿವಾರಿಸಿಕೊಳ್ಳುವತ್ತ ಗಮನ ಹರಿಸಿದರು. ಸಾಮಾಜಿಕ ಅಭಿವೃದ್ಧಿಯ ಪರಿಕಲ್ಪನೆ ಜನರಲ್ಲೇ ಮೂಡಲಾರಂಭಿಸಿತು.

ಇಂತಹ ಕ್ರಿಯೆ ಮತ್ತು ಪ್ರತಿಕ್ರಿಯೆಯ ಪರಿಣಾಮವಾಗಿ ನಮ್ಮ ಜವಾಬ್ಧಾರಿಯೂ ಸಹ ಹೆಚ್ಚಾಗುತ್ತಾ ಹೋಯಿತು. ಜನ ಮತ್ತು ವಿತರಣಾ ವ್ಯವಸ್ಥೆಯ ಮಧ್ಯೆ ನಾವು ಕೊಂಡಿಯಾಗಿ ಕೆಲಸ ಮಾಡಿದೆವು.

ಇಂತಹ ಸಮುದಾಯ ಅಭಿವೃದ್ಧಿ ಕಾರ್ಯಗಳಿಂದ ಸೃಷ್ಟಿಯಾಗುವ ಸಾಮಾಜಿಕ ಬಂಡವಾಳ ಅತ್ಯಂತ ಮೌಲ್ಯಯುತವಾದದ್ದು ಎಂಬುದನ್ನು ನಾವು ಮರೆಯಬಾರದು.

ನಾನು, ಮನೀಶ್ವರ ಶಿಕ್ಷಣ ಟ್ರಸ್ಟ್ ನ ಮಹಾಪೋಷಕರಾದ ಶಿವಪ್ಪ, ಡಾ.ಶರತ್, ಗಿರೀಶ್, ಮೆಂಟರ್ ಗೋಪಿಕೃಷ್ಣ ಹಾಗೂ ಶೈಕ್ಷಣಿಕ ನಿರ್ದೇಶಕಿ ಡಾ.ಶೀಲಾ ಖರೆ ಇವರೆಲ್ಲಾ ಒಂದು ತಂಡವಾಗಿ ಸಂಚಾರಿ ರೇಡಿಯೋ ಕೇಂದ್ರದೊಂದಿಗೆ ಹಳ್ಳಿಗಳಿಗೆ ಹೋಗುತ್ತಿದ್ದೇವೆ. ಹಾಡುಗಳು, ಲಾವಣಿಗಳು, ಪ್ರಕಟಣೆಗಳೊಂದಿಗೆ ಗಡಿಭಾಗದ ಹಳ್ಳಿಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ.

ಊರ ಮುಖಂಡರು, ಯುವಕರು, ಗೃಹಿಣಿಯರು, ಆಟೋ ಚಾಲಕರು, ಕೂಲಿ ಕಾರ್ಮಿಕರು,ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ರೇಡಿಯೋ ಮೂಲಕ ತಮ್ಮ ಅಭಿಪ್ರಾಯ, ಕಷ್ಟಕಾರ್ಪಣ್ಯವನ್ನು ಹಂಚಿಕೊಳ್ಳುತ್ತಾರೆ. ಕೊರೊನಾ ಅಲ್ಲದೆ ಇತರೆ ಕಾಯಿಲೆಗಳಿಂದ ನರಳುವವರಿಗೆ, ಔಷಧೋಪಚಾರ ಬೇಕಾಗಿರುವವರಿಗೆ ಸಲಹೆ,ಉಪಚಾರ, ಮಾರ್ಗದರ್ಶನ,ಸಹಾಯಹಸ್ತವನ್ನು ಡಾ.ಶರತ್ ತಂಡ ನೀಡುತ್ತದೆ.

ಇದೇ ವೇಳೆ ಹಳ್ಳಿಗಳಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ನಿರ್ಗತಿಕರು, ಪಾಳ್ಯಗಳಲ್ಲಿ ವಾಸಿಸುವವರು, ಬುಡಕಟ್ಟು ಜನಾಂಗದವರು,ಅಲೆಮಾರಿಗಳು, ವಲಸೆ ಕಾರ್ಮಿಕರು ಹೀಗೆ ಜನಜೀವನದ ಒಂದು ಸಮೀಕ್ಷೆಯೂ ಸಮಾನಾಂತರವಾಗಿ ನಡೆಯುತ್ತದೆ. ಸಂಜೆ ವೇಳೆಗೆ ಒಂದು ಹಳ್ಳಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ‘ ಅರಳೀಕಟ್ಟೆ’ ಮಾದರಿಯಲ್ಲಿ ಒಂದು ಚಿಕ್ಕ ಸಂವಾದ ಏರ್ಪಡಿಸಲಾಗುತ್ತದೆ.

ಅಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹಳ್ಳಿಯ ಬಡಜನರ ಸಮಸ್ಯೆಗಳ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಊರಿನ ರಾಜಕೀಯ ವ್ಯಕ್ತಿಗಳು, ಮುಖಂಡರೊಂದಿಗೆ ಚರ್ಚೆ ನಡೆಯುತ್ತದೆ. ಇದೆಲ್ಲದರ ಫಲಶೃತಿಯಾಗಿ ಸುತ್ತ ನಾಲ್ಕೈದು ಹಳ್ಳಿಗಳ ಒಂದು ಹೊಸ ಯುವತಂಡವೇ ಕೊರೋನಾ ವಿರುದ್ಧ ಹೋರಾಡಲು ಸಜ್ಜಾಗಿ ನಿಲ್ಲುತ್ತಿವೆ.

ಇನ್ನು ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ಒಂದಿಷ್ಟು ಅನುಭವಗಳನ್ನು ನಾನು ನಿಮ್ಮ ಗಮನಕ್ಕೆ ತರಲೇಬೇಕು. ಕೊರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರ ಬಡವರಿಗೆ, ಕಡುಬಡವರಿಗೆ ಅಗತ್ಯಕ್ಕೆ ಮೀರಿ ಸಹಾಯ ಮಾಡಿದೆ.

ತನ್ನ ಸಂಗ್ರಹದಲ್ಲಿದ್ದ ಸಾಕಷ್ಟು ಆಹಾರಧಾನ್ಯಗಳನ್ನು ಜನರಿಗೆ ವಿತರಿಸಿದೆ. ಸರ್ಕಾರದ ಬಳಿ ಇನ್ನು ಕೇವಲ 7-8 ತಿಂಗಳಿಗಾಗುವಷ್ಟು ಆಹಾರ ಧಾನ್ಯ ಇರಬಹುದು.

ಕೃಷಿ ಚಟುವಟಿಕೆಗಳೂ ಸ್ಥಬ್ಧಗೊಂಡಿರುವ ಈ ಹೊತ್ತಿನಲ್ಲಿ ಮುಂದಿನ ಪರ್ಯಾಯ ಏನು ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ. ಇದು ಕೇವಲ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ, ಇದು ಜಾಗತಿಕ ಸಮಸ್ಯೆ. ಯಾವ ಆಹಾರ ಧಾನ್ಯವನ್ನೂ ಅಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ.

ನಮಗೆ ಬೇಕಾದ ಪ್ರಮಾಣದ ಆಹಾರ ಧಾನ್ಯಗಳನ್ನು ನಾವೇ ಬೆಳೆಯಬೇಕಿದೆ.ಮುಂಗಾರು ಪ್ರಾರಂಭವಾಗಿದೆ, ಅಲಸಂಡೆ, ಹೆಸರುಕಾಳು ಬೆಳೆಯಲು ರೈತರು ಉತ್ಸುಕರಾಗಿದ್ದಾರೆ. ಬೀಜ, ಗೊಬ್ಬರ ಇದೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ ದರ ನಿಗಧಿಮಾಡಿಲ್ಲ ಎಂದು ರೈತರನ್ನು ವಾಪಸ್ ಕಳಿಸಲಾಗುತ್ತಿದೆ.

ಗೊಬ್ಬರದ ದಾಸ್ತಾನನ್ನೂ ಸಹ ಅಧಿಕಾರಿಗಳು ಧೃಡೀಕರಿಸುತ್ತಿಲ್ಲ. ಉತ್ಪಾದಕ ಚಟುವಟಿಕೆಗಳು ಕುಂಠಿತವಾದರೆ ರೈತರ ಆತ್ಮವಿಶ್ವಾಸ ಮತ್ತು ರೋಗನಿರೋಧಕ ಶಕ್ತಿ ಎರಡೂ ಕುಂಠಿತವಾಗುತ್ತದೆ ಎಂಬುದನ್ನು ನಾವು ಮರೆಯಬಾರದು
ರೈತರು ಮತ್ತು ಕೃಷಿ ಕಾರ್ಮಿಕರ ಮೇಲೆ ಸಾಮಾಜಿಕ ಅಂತರದ ಕಲ್ಪನೆಯನ್ನು ತೀವ್ರವಾಗಿ ಹೇರಲಾಗದು.

ಅದು ಅಷ್ಟು ಕಾರ್ಯಸಾಧುವಲ್ಲ. ಕೃಷಿಕರ ಭೂಮಿ, ತೋಟಗಳಲ್ಲಿ ಕೊರೊನಾ ವೈರಸ್ ಇಲ್ಲ. ಮಧ್ಯಮವರ್ಗ ಮತ್ತು ಮೇಲ್ವರ್ಗಗಳ ಜನರು ಒಂಟಿಯಾಗಿ ಬದುಕುವ ಪ್ರವೃತ್ತಿ ಹೊಂದಿದ್ದಾರೆ.ಆದರೆ ಕೃಷಿಕರು ಭೌತಿಕವಾಗಿ ಹಾಗೂ ಮಾನಸಿಕವಾಗಿ ಪರಸ್ಪರ ಅವಲಂಭಿಗಳಾಗೇ ಬದುಕುತ್ತಾರೆ.ಅದೇ ಅವರ ಜೀವನ ಶೈಲಿ, ಹೀಗಾಗಿ ಸಾಮಾಜಿಕ ಅಂತರ ಎಂಬುದೇ ಒಂದು ಗುಮ್ಮ ಎನ್ನುವಂತಾದರೆ ಅವರು ಕೃಷಿ ಚಟುವಟಿಕೆಗಳಿಂದ ದೂರವಿರುವ ಅಪಾಯವಿದೆ. ಇದರಿಂದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ. ಅವರಲ್ಲೇ ಕರೋನ ಬಗ್ಗೆ ಜಾಗೃತಿ ಮೂಡಿಸಿ ತಮ್ಮನ್ನು ತಾವು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಜವಾಬ್ಧಾರಿ ಬರುವಂತೆ ಮಾಡಬೇಕಿದೆ.

ಇಂತಹ ಜಾಗೃತಿಯನ್ನು ಕೇವಲ ಪೋಲೀಸ್ ಇಲಾಖೆ ಅಥವಾ ಕಂದಾಯ ಇಲಾಖೆ ಮಾಡಲಾಗುವುದಿಲ್ಲ. ಅದು ಕಟ್ಟ ಕಡೆಯ ವ್ಯಕ್ತಿಗೂ ತಲುಪುವ ಖಾತರಿಯೂ ಇಲ್ಲ. ಹಾಗಾಗಿ ನೈರ್ಮಲ್ಯತೆ ಮತ್ತು ರೋಗ ತಡೆಗಟ್ಟುವ ವಿಷಯದಲ್ಲಿ ಸರ್ಕಾರ ಮತ್ತು ಜನರು ಸ್ಥಳೀಯ ಗ್ರಾಮ ಪಂಚಾಯಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಗ್ರಾಮಪಂಚಾಯಿತಿಗಳು ಈಗ ಸರ್ಕಾರ ಹೇಳಿದ್ದಷ್ಟನ್ನೇ ಮಾಡುವ ಕೀಲುಬೊಂಬೆಗಳಾಗಿವೆ. ಈ ವ್ಯವಸ್ಥೆ ಹೋಗಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರವೇ ರಚಿಸಿರುವ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿ ಈ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು. ಸರ್ಕಾರ ಇದಕ್ಕಾಗಿ ಪ್ರತಿವರ್ಷ ಕೊಡುವ ರೂ. 10ಸಾವಿರ ಅನುದಾನ ಮತ್ತು ಇತರೆ ಸ್ಥಳೀಯ ಸಂಪನ್ಮೂಲಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು.

ಹಾಗೆಯೇ ಇಂತಹ ರಚನಾತ್ಮಕ ಕಾರ್ಯದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಜನರ ಸಶಕ್ತೀಕರಣ ಮಾಡುವ ಜವಾಬ್ಧಾರಿ ಸರ್ಕಾರದ ಮೇಲಿದೆ.

ವಿಕೋಪದ ಸಂದರ್ಭದಲ್ಲೂ ಜನಾಭಿವೃದ್ಧಿಯ ಕಡೆ ಗಮನಹರಿಸದಿದ್ದರೆ ಮತ್ತೆ ಯಾವಾಗ ಇಂತಹ ಕೆಲಸ ಮಾಡಲು ಸಾಧ್ಯ? ಹಳ್ಳಿಗಳಲ್ಲಿ ದಿನಸಿ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ಬೆಲೆಗೆ ಮಾರಲಾಗುತ್ತಿದೆ.

ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಗಳನ್ನು ಪ್ರತಿ ಕಿರಾಣಿ ಅಂಗಡಿಯ ಮುಂಭಾಗ ಅಂಟಿಸಬೇಕು.

ಸಮುದಾಯದ ಆರೋಗ್ಯ ನಿರ್ವಹಣೆ ಜವಾಬ್ಧಾರಿ 30-35 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲಿದೆ. ಆದರೆ ಎಲ್ಲದಕ್ಕೂ ಇವರು ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳತ್ತ ಕೈ ತೋರಿಸಿ ತಮ್ಮ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಈ ತಾಲ್ಲೂಕು ಆಸ್ಪತ್ರೆಗಳದ್ದು ಇನ್‍ಸ್ಟಿಟ್ಯೂಶನಲ್ ಸರ್ವೀಸ್, ಅವರು ತಮ್ಮಲ್ಲಿ ದಾಖಲಾಗುವ ಪ್ರಕರಣಗಳನ್ನು ನಿರ್ವಹಿಸಲೇ ಸಾಕಷ್ಟು ಹೈರಾಣಾಗುವ ಪರಿಸ್ಥಿತಿ ಇದೆ.

ಸುಮಾರು ಇನ್ನೂ ಎರಡು ವರ್ಷಗಳ ಕಾಲ ಕರೋನಾ ವೈರಸ್ ಹೆಚ್ಚು ಅಪಾಯಕಾರಿಯಾಗಿಯೇ ಇರುವ ಸಂಭವ ಇರುತ್ತದೆ. ಹಾಗಾಗಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ವೈರಸ್, ಬ್ಯಾಕ್ಟೀರಿಯಾ ಮೊದಲಾದವುಗಳನ್ನು ಎದುರಿಸಲು ಬೇಕಾದ ಸಿದ್ಧತೆಗಳು ಇರಬೇಕು. ಆದರೆ ಈಗ ಪಿಎಚ್‍ಸಿಗಳ ಸ್ಥಿತಿಗತಿ ತುಂಬಾ ಶೋಚನೀಯವಾಗಿದೆ. ಒಬ್ಬ ಗರ್ಭಿಣಿಗೆ ಸಾಮಾನ್ಯ ತಪಾಸಣೆ ನಡೆಸಲೂ ಅವರು ಆಸ್ಪತ್ರೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಈ ರೀತಿ ಜನರಿಗೆ ಸುರಕ್ಷತೆಯೇ ಇಲ್ಲವೆಂದ ಮೇಲೆ ಸರ್ಕಾರದ ಜನಾಭಿವೃದ್ದಿ ಆಶಯಕ್ಕೆ ಯಾವ ಅರ್ಥವಿದೆ?

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ ಬಂದು 10 ವರ್ಷಕ್ಕೂ ಹೆಚ್ಚು ಸಮಯವಾಯ್ತು. ಕೊರೊನಾದಂತಹ ವೈರಸ್ ಸೊಂಕಿನ ಈ ಪರ್ವಕಾಲದಲ್ಲಿ ವಿಪತ್ತು ನಿರ್ವಹಣೆಯ ಕಾರ್ಯಕ್ರಮಗಳನ್ನು ಪಿಎಚ್‍ಸಿಗಳಲ್ಲಿ ಅನುಷ್ಠಾನಗೊಳಿಸಬೇಕು. ಈಗಿರುವ ಪರಿಸ್ಥಿತಿಯಲ್ಲಿ ಅದೆಲ್ಲಿ ಸಾಧ್ಯ?


ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಸೇರಿ ಕನಿಷ್ಟ 11 ಮಂದಿ ಸಿಬ್ಬಂದಿ ಇರಬೇಕು. ಬಹುತೇಕ ಪಿಎಚ್‍ಸಿಗಳಲ್ಲಿ ವೈದ್ಯರೇ ಇಲ್ಲ, ಎಎನ್‍ಎಮ್‍ಗಳು, ದಾದಿಯರು, ಫಾರ್ಮಾಸಿಸ್ಟ್, ಪೆಥಾಲಜಿಸ್ಟ್ ಯಾರೂ ಇಲ್ಲ. ಇದೆಲ್ಲಾ ಸರಿ ಹೋಗುವುದು ಯಾವಾಗ? ನಮ್ಮ ಗ್ರಾಮೀಣ ಜನರಿಗೆ ಆರೋಗ್ಯ ಸುರಕ್ಷತೆ ಸಿಗುವುದು ಯಾವಾಗ?


ಇನ್ನು ಪೋಲೀಸರು ಲಾಕ್‍ಡೌನ್ ಸಮಯದಲ್ಲಿ ಅತ್ಯಂತ ಶ್ರಮಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೆಲವು ಪೋಲೀಸ್ ಸಿಬ್ಬಂದಿ ಹಳ್ಳಿ ಜನರಿಗೆ ಅನಗತ್ಯ ಕಿರುಕುಳ ಕೊಡುತ್ತಿದ್ದಾರೆ. ಅವರ ಕಷ್ಟ ಸುಖ ವಿಚಾರಿಸದೆ ಬೈಗಳು ಅಥವಾ ಲಾಠಿ ಪ್ರಯೋಗ ಮಾಡುತ್ತಿದ್ದಾರೆ.

ಮಾತ್ರೆ ತರಲು ಪಟ್ಟಣಕ್ಕೆ ಬರುವ ಗ್ರಾಮಸ್ಥರಿಗೆ ಹೊಸ ಪ್ರಿಸ್ಕ್ರಿಪ್ಶನ್ ತೋರಿಸಲು ಒತ್ತಾಯಿಸಲಾಗುತ್ತಿದೆ. ಬಿ,ಪಿ, ಶುಗರ್ ಕಾಯಿಲೆಗಳಿಗೆ ಯಾರು ಪ್ರತಿದಿನ ಪ್ರಿಸ್ಕ್ರಿಪ್ಶನ್ ಬರೆಸುತ್ತಾರೆ? ದ್ವಿಚಕ್ರವಾಹನ ಕಿತ್ತು ಇಟ್ಟುಕೊಂಡು ಆರೋಗ್ಯ ಸಮಸ್ಯೆ ಇರುವವರನ್ನು ಬೀದಿ ಬೀದಿಗಳಲ್ಲಿ ನಡೆಸಲಾಗುತ್ತಿದೆ. ಇದು ಅತಿರೇಕದ ನಡವಳಿಕೆ ಹಾಗೂ ಅತ್ಯಂತ ಅಮಾನವೀಯವಾದುದು.

ವಿಪತ್ತಿನ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಅವಕಾಶ ಕಾನೂನಿನಲ್ಲಿದೆ. ಪೋಲೀಸ್ ಇಲಾಖೆಯ ಮೇಲೆ ತೀವ್ರ ಒತ್ತಡ ಇದ್ದರೆ ರೆಡ್‍ಕ್ರಾಸ್ ಯುವ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು, ಎನ್‍ಸಿಸಿ ಪಡೆ, ರೋಟರಿ, ಲಯನ್ಸ್ ಇತರೆ ಸ್ವಯಂ ಸೇವಾಸಂಸ್ಥೆಯ ಸಹಾಯ ಪಡೆಮರೆಯಬಾರದು.

ಕೊರೊನಾ ಭೀತಿಯ ಸಮಯದಲ್ಲಿ ನಾವು ಜನರನ್ನು ಗೊಂದಲಕ್ಕೆ, ಆತಂಕಕ್ಕೆ ತಳ್ಳುವ ಸಂದರ್ಭ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು.


ನಂ.6, ಪಂಚವಟಿ
13ನೇ ವಾರ್ಡ್, ಗಾಂಧಿನಗರ
ತುರುವೇಕೆರೆ-572227
ತುಮಕೂರು ಜಿಲ್ಲೆ
ಮೊಬೈಲ್:9448677560

ನಿನ್ನ ಪ್ರೇಮದ ಸುಳಿಯಲ್ಲಿ…

0
ಮಮತಾಗೌಡ


ನಿನ್ನ ಪ್ರೀತಿಯ ಸುಳಿಯಲ್ಲಿ ಸಿಲುಕಿದ ನನಗೆ ನೀನೆ ಪ್ರಪಂಚ, ನಿನಗೆ ನನ್ನ ಪ್ರೀತಿಯ ಪರಿಯ ಪರಿಚಯವೇ ಇಲ್ಲ. ನಿನ್ನ ಕಂಡ ಪ್ರೀತಿಗೆ ಹಂಬಲಿಸಿದೆ ನನ್ನ ಮನ!. ಆದರೆ ನೀನಗೇನೂ ಮುನಿಸು, ಒಮ್ಮೆ ತಿರುಗಿ ನೋಡು ನಿನಗಾಗಿ ನಾನು ತುದಿಗಾಲಿನಲ್ಲಿ ನಿಂತಿರುವೆ. ಒಮ್ಮೆ ಬಾ ಎಂದು ಕರೆದರೆ ಓಡಿ ಬರುವೆ ನೀನೆ ಎಲ್ಲ ನನಗೆ

ನಿನ್ನ ಕಂಡ ಪ್ರೀತಿಗೆ ಹಂಬಲಿಸಿದೆ ನನ್ನ ಮನ!. ಆದರೆ ನೀನಗೇನೂ ಮುನಿಸು, ಒಮ್ಮೆ ತಿರುಗಿ ನೋಡು ನಿನಗಾಗಿ ನಾನು ತುದಿಗಾಲಿನಲ್ಲಿ ನಿಂತಿರುವೆ. ಒಮ್ಮೆ ಬಾ ಎಂದು ಕರೆದರೆ ಓಡಿ ಬರುವೆ ನೀನೆ ಎಲ್ಲ ನನಗೆ ನಿನ್ನ ಪ್ರೀತಿಗೆ ಪ್ರತಿ ಕ್ಷಣ –ಕ್ಷಣದಲ್ಲೂ ನನ್ನ ಮನ ಹಾತೊರಿಯುತ್ತಿದೆ.

ಹುಣ್ಣಿಮೆಯ ಬೆಳದಿಂಗಳಲ್ಲಿ ಚಂದ್ರನ ಬಿಂಬದಲ್ಲಿ ನಿನ್ನ ರೂಪ ತಿಳಿ ನೀರಿನಂತೆ ನನ್ನ ಕಣ್ಮುಂದೆ ಬಂದಾಗ ನನಗೆ ನಾನೇ ನಾಚಿ ನಿರಾಗೋ ಕ್ಷಣಗಳನ್ನು ಏಣಿಸಲು ಒಮ್ಮೆ ಬಾರೋ ಕಣ್ಮುಂದೆ. ನೀ ಬಂದ ಕ್ಷಣ ನನ್ನ ಜೀವನದಲ್ಲಿ ಅದೇ ಮಹಾಯುಗಾದಿಯಂತೆ ಆಚರಿಸುತ್ತೇನೆ.

ನಿನ್ನೊಮ್ಮೆ ಕೆಣಕುವ ಆಸೆ – ನನ್ನ ಕಣ್ಣುಗಳನ್ನ ತುಂಬಿಕೊಳ್ಳುವ ಆಸೆಗೆ ತಣ್ಣೀರೆರಚದಿರು ನನ್ನ ಬಂಗಾರ, ನಿನ್ನೆಲ್ಲ ಕನಸುಗಳಿಗೆ ಜೊತೆ – ಜೊತೆಯಲಿ ಹೆಜ್ಜೆ ಹಾಕಿ ನಡೆಯುವ ಛಲ ನನ್ನದು ಸಪ್ತಪದಿಯ ಬಳಿ ನಿಂತು ನೀಡುವ ಕುಂಕುಮಕ್ಕೆ ನನ್ನ ಹಣೆ ಹಾತೊರಿಯುತ್ತಿದೆ. ನೀ ಕಟ್ಟುವ ಮಂಗಳಸೂತ್ರಕ್ಕೆ ನನ್ನ ಬಾಳು ಬೆಳದಿಂಗಳಾಗಲಿ, ನೀ ತೊಡಿಸುವ ಕಾಲುಂಗರಕ್ಕೆ ನನ್ನ ಕಾಲ್ಬೆರಳು ತುದಿ – ತವಕದಿಂದ ಕಾದಿದೆ ನಿನ್ನ ಜೊತೆಗೂಡಿ ಇಡುವ ಏಳು ಹೆಜ್ಜೆಗಳು ನನ್ನ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅಬ್ಬಾ! ಏನೆಲ್ಲಾ ಕನಸುಗಳು ನಿನ್ನ ಜೊತೆಗೂಡಿ ಬದುಕುವಾಗ ನನ್ನ ಬಾಳು ಸ್ವರ್ಗಕ್ಕೆ ಏಳೇ ಮೆಟ್ಟಿಲುಗಳಂತೆ ಕಾಣುತ್ತದೆ.

ನೀ ಕಟ್ಟುವ ಮಂಗಳಸೂತ್ರಕ್ಕೆ ನನ್ನ ಬಾಳು ಬೆಳದಿಂಗಳಾಗಲಿ, ನೀ ತೊಡಿಸುವ ಕಾಲುಂಗರಕ್ಕೆ ನನ್ನ ಕಾಲ್ಬೆರಳು ತುದಿ – ತವಕದಿಂದ ಕಾದಿದೆ ನಿನ್ನ ಜೊತೆಗೂಡಿ ಇಡುವ ಏಳು ಹೆಜ್ಜೆಗಳು ನನ್ನ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅಬ್ಬಾ! ಏನೆಲ್ಲಾ ಕನಸುಗಳು ನಿನ್ನ ಜೊತೆಗೂಡಿ ಬದುಕುವಾಗ ನನ್ನ ಬಾಳು ಸ್ವರ್ಗಕ್ಕೆ ಏಳೇ ಮೆಟ್ಟಿಲುಗಳಂತೆ ಕಾಣುತ್ತದೆ.

ಒಮ್ಮೆ ನಾ ಕಂಡ ಕನಸಲ್ಲಿ ಚಂದ್ರನ ಮಧ್ಯೆ ನಿಂತು ನಿನ್ನ ಹೃದಯದಲ್ಲಿ ಕಟ್ಟಿರುವ ಉಯ್ಯಾಲೆಯಲ್ಲಿ ಕೂತು ತೂಗಿದ ಕ್ಷಣ – ಇನ್ನೂ ಮರೆಯಲು ಸಾಧ್ಯವೇ ಇಲ್ಲ. ನಿನ್ನ ಕದ್ದು ನೋಡಿದ ಆ ಕ್ಷಣ ಪದೇ ಪದೇ ನೋಡಬೇಕೆಂಬ ಹಂಬಲ – ನಿನ್ನ ಮತ್ತೆ ಮತ್ತೆ ಕದ್ದು ನೋಡುವಾಗ ನನಗೆ ಏನು ಖುಷಿ – ಕದ್ದು ನೋಡುವಾಗ ನೀ ಎಲ್ಲಿ ನನ್ನ ನೋಡುವೆಯೋ ಎಂಬ ಭಯ. ಪ್ರಪಂಚವನ್ನೇ ಸುತ್ತುವ ಆಸೆ ನಿನ್ನ ಜೊತೆಸೇರಿ, ಕೈ ಕೈ ಇಡಿದು ಸುತ್ತುವಾಗ ಮಳೆ ಬರಲಿ ಎಂದು ಬಯಸುವೇ.

ಪ್ರೀತಿಯೆಂಬ ಎರಡಾಕ್ಷರಕ್ಕೆ – ಅಬ್ಬಾ! ಎಂತ ಶಕ್ತಿ – ದೇವ –ದೇವತೆಗಳೇ ತಮ್ಮ ಪ್ರೀತಿಗೆ ತಪಸ್ಸು ಮಾಡಿದ್ದಾರಂತೆ, ಇನ್ನೂ ನಾವೆಲ್ಲ ಯಾವ ಮಹಾ? ಅದೇನೇ ಆಗಲಿ ನಿನ್ನ ಹೃದಯದ ಮಹಾರಾಣಿಯಾಗುವ ಕ್ಷಣಗಣನೆ ಶುರುವಾಗಿದೆ. ಇಷ್ಟರಲ್ಲೇ ನನ್ನ ಪ್ರೀತಿ ನಿವೇದನೆ ನಿನ್ನ ಮುಂದೆ ಹೇಳಬೇಕೆಂದು ನಿರ್ದರಿಸಿದ್ದೇನೆ, ನನ್ನ ನಿರ್ದಾರ ಎಂದು ಹುಸಿಯಾಗದಿರಲ್ಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಪ್ರೀತಿ ಎಂಬ ಗಿಡಕ್ಕೆ ನೀರೇರದು ಬೆಳೆಸಿರುವೆ, ನೀನ್ನೊಲವ ಬಯಸವ ನಿನ್ನೊಲವಿಗೆ ನೀ ಕೊಡವ ಉಡುಗೊರೆ ಏನೆಂದು ನೀನೆ ನೀರ್ದರಿಸು, ನಿನಗಾಗಿ ಕಾದ ನನ್ನ ಪ್ರೀತಿಗೆ ಒಲವಿನ ಉಡುಗೊರೆಯ ಒತ್ತು ಬರುವೆಯಾ?

ನಾ ಬಯಸುವ ನನ್ನ ಜೀವ ನಿನಾಗುವೆ, ನಾ ಬಯಸುವ ನನ್ನ ಜೀವಕ್ಕೆ ನೀ ನನ್ನ ಹೃದಯ ಬಡಿತವಾಗು. ನೀನಾಗಾಗಿ ನಾನು ನನಗಾಗಿ ನೀನು ಅಷ್ಟೇ ಎಂದಿದೆ ಮನ, ನಾ ನಿನ್ನ ಬಾಳ ಬೆಳಕಾಗುವೆ ಸದಾ.

ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಶಾಸಕರ ಶ್ಲಾಘನೆ

Publicstory. in


ತುಮಕೂರು: ಗ್ರಾಮಾಂತರದ ಗೂಳೂರಿನಲ್ಲಿ 300 ಕ್ಕೂ ಹೆಚ್ಚಿನ ಆಶಾಕಾರ್ಯಕರ್ತೆಯರಿಗೆ ಬಾಗಿನ, ಆಹಾರದಕಿಟ್, ತರಕಾರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ನೀಡಿ ಹೂ ಮಳೆ ಸುರಿಸಿ ಸೊಮವಾರ ಶಾಸಕ ಬಿ.ಸಿ.ಗೌರಿಶಂಕರ್ ಸನ್ಮಾನಿಸಿದರು. ಇದೇ ಸಂಧರ್ಭದಲ್ಲಿ ಗರ್ಭಿಣಿ ಹೆಣ್ಣು ಮಗಳಿಗೆ ಸೀಮಂತ ನೆರವೇರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗೌರಿಶಂಕರ್ ಕೊರೋನಾ ನಿರ್ವಹಣೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಂತ ಶ್ಲಾಘನೀಯ. ತುಮಕೂರು ಗ್ರಾಮಾಂತರದ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬವನ್ನು ತೊರೆದು ನಮ್ಮೆಲ್ಲರ ತಾಯಂದಿರಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ಭಾವುಕರಾದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕರೋನಾ ನಿರ್ವಹಣೆಯಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿಸಿ ಗೌರಿಶಂಕರ್ ಅವರು ತಮ್ಮ ಕೈಮೀರಿದ ನಿಸ್ವಾರ್ಥವಾದ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರದ ಎಲ್ಲ‌‌ ಆಶಾ ಕಾರ್ಯಕರ್ತೆಯರು ಇದ್ದರು. ಸೀರೆ, ನಗದು, ಆಹಾರದ ಕಿಟ್ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಹೂ ಮಳೆ ಸುರಿಸಿದರು.

ಶಾಸಕರ ನೆರವಿಗೆ ಆಶಾ ಕಾರ್ಯಕರ್ತೆಯರು ಭಾವುಕರಾದರು.

ಇವರ ಕೆಲಸಕ್ಕೆ ಫಿದಾ ಆಗುತ್ತಿದ್ದಾರೆ ತುಮಕೂರು ಜಿಲ್ಲೆ ಜನರು….

Publicstory. in


Tumkuru: ಮಾಜಿ ಶಾಸಕ ಸುರೇಶ್ ಗೌಡ ಅವರ ಕೆಲಸಕ್ಕೆ ಜಿಲ್ಲೆಯ ಜನರು ಫಿದಾ ಆಗ ತೊಡಗಿದ್ದಾರೆ.

ಕೆಲವು ಸಮಾಜ ಸೇವಕರು ನಿಧಾನವಾಗಿ ಮರೆಯಾದರು. ಕೆಲವು ಜನಪ್ರತಿನಿಧಿಗಳ ತಮ್ಮ. ಕಾರ್ಯಕರ್ತರನ್ನು ಮುಂದೆ ಬಿಟ್ಟು ಅವರು ಮನೆಯಲ್ಲಿದ್ದಾರೆ.ಒಂದಿಷ್ಟು ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.

ಆದರೆ ಸುರೇಶಗೌಡರ ಕೆಲಸ ಮಾತ್ರ ಇವರೆಲ್ಲರಿಗಿಂತ ಭಿನ್ನವಾಗಿದೆ.ಕಳೆದ ಒಂದು ತಿಂಗಳಿಂದ ಅವರು ಕ್ಷೇತ್ರ ಬಿಟ್ಟು ಕದಲಿಲ್ಲ. ಒಂದಿಷ್ಟು ಆಹಾರ ಕಿಟ್ ಹಂಚುವ, ಮಾಸ್ಕ್ ಹಂಚುವ ಕೆಲಸವನ್ನು ಎಲ್ಲ ಶಾಸಕರು, ಮಾಜಿ ಶಾಸಕರು ಒಂದಿಷ್ಟು‌ ಮಾಡಿದ್ದಾರೆ. ಆದರೆ ಸುರೇಶ್ ಗೌಡ ಅವರ ಕೆಲಸ ಇಡೀ ಜಿಲ್ಲೆಯ ಜನರು ತಲೆದೂಗುವಂತೆ ಮಾಡಿದೆ.

ಪ್ರತಿ ಗ್ರಾಮ ಗ್ರಾಮಗಳಿಗೆ ಭೇಟಿ ನೀಡ್ತಿದ್ದಾರೆ. ಬಡವರು, ಪಡಿತರ ಚೀಟಿ ಇಲ್ಲದವರನ್ನು ಹುಡುಕಿ ಹುಡುಕಿ ಆಹಾರ ಧಾನ್ಯದ ಕಿಟ್ ಹಂಚುವ ಕೆಲಸ ಮಾಡುತ್ತಿದ್ದಾರೆ.

ಈ ಕೆಲಸಕ್ಕಿಂತಲೂ ಅವರು ಗಮನ ಸೆಳೆದಿರುವುದು ಕೊರೊನಾ ಕುರಿತು ಮೂಡಿಸುತ್ತಿರುವ ಜಾಗೃತಿ ಕೆಲಸಕ್ಕಾಗಿ.

ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಏನು ಮಾಡಬೇಕು, ಹೇಗಿರಬೇಕು ಎಂಬುದನ್ನು ಪ್ರತಿ ಗ್ರಾಮ, ಗ್ರಾಮಕ್ಕೆ ತೆರಳಿ ಹೇಳುತ್ತಿದ್ದಾರೆ.ಇದಕ್ಕಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಸಹ ಕ್ಷೇತ್ರಕ್ಕೆ ಕರೆಸಿಕೊಂಡಿದ್ದರು. ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಗೋಪಾಲಯ್ಯ ಹೀಗೆ ಅನೇಕರ ದಂಡು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದು ಹೋಗಿದೆ.

ಲಾಕ್ ಡೌನ್ ಬಳಿಕ ತುಮಕೂರು ಜಿಲ್ಲೆಯ ಯಾವ ಕ್ಷೇತ್ರಕ್ಕೂ ಇಷ್ಟು ದೊಡ್ಡ ಸಂಖ್ಯೆಯ ಮುಖಂಡರು, ಸಚಿವರು ಭೇಟಿ ನೀಡಿಲ್ಲ. ಆದರೆ ಈ ಕ್ಷೇತ್ರಕ್ಕೆ ಪದೇ ಪದೇ ಭೇಟಿ ನೀಡತೊಡಗಿದ್ದಾರೆ.‌ ಇದಕ್ಕೆ ಸುರೇಶಗೌಡ ‌ಕಾರಣ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ನಾವು ನೀಡುತ್ತಿರುವ ಸಹಾಯ ಸಹಾಯವೇ ಅಲ್ಲ. ಆರುನೂರು ರಿಂದ ಏಳು ನೂರು ರೂಪಾಯಿ ವೆಚ್ಚದ ಆಹಾರದ ಕಿಟ್ಟನ್ನು ನೀಡುತ್ತಿದ್ದೇವೆ. ಇದನ್ನು ಯಾರೂ ಸಹ ಸಹಾಯ ಎಂದು ಭಾವಿಸಬಾರದು ಎನ್ನುತ್ತಾರೆ ಅವರು.


ನಾನು ಶಾಸಕನಾಗಿದ್ದಾಗ ಕ್ಷೇತ್ರದ‌ ನಲವತ್ತು ಸಾವಿರ ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮ್ ಒದಗಿಸಿದ್ದೇನೆ. ಹೀಗಾಗಿ ತೋಟಗಾರಿಕೆ ಹುಲುಸಾಗಿದೆ. ಎಲ್ಲ ಹೋಬಳಿಗಳಲ್ಲಿ ಕೋಟ್ಯಂತರ ವೆಚ್ಚ ಮಾಡಿ ಶಾಲೆಗಳನ್ನು ಕಟ್ಟಿಸಿದ್ದೇನೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿದೆ. ನನಗೆ ಜನರ ಹಿತ ಮುಖ್ಯ ಹೊರತು, ಬೇರೇನೂ ಇಲ್ಲ ಎಂದು ಅವರು ಹೇಳಿದರು.


ಉಳ್ಳವರು ಸಹಾಯ ಮಾಡಬೇಕು ಹಾಗೂ ಉಳ್ಳವರು ಯಾವುದೇ ಕಾರಣಕ್ಕೂ ನೆರವನ್ನು ತೆಗೆದುಕೊಳ್ಳಬಾರದು ಎಂದು ನಿರ್ಭಿಡೆಯಿಂದ ಹೇಳುತ್ತಿರುವ ಅವರು ಜನರು ರಕ್ಷಣೆ ಪಡೆಯುವುದು ಹೇಗೆಂಬ ಬಗ್ಗೆಯೇ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.

ಕ್ಷೇತ್ರದ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಿಸುವ ಕೆಲಸವನ್ನು ಮಾಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಬಳಸಿ ಕೊರೊನಾದಿಂದ ದೂರ ಇರಬೇಕು. ಆದಷ್ಟು ಮನೆಯಲ್ಲಿ ಆಚೆ ಬರಬಾರದು ಎಂದು ಧೈರ್ಯ ತುಂಬುತ್ತಿದ್ದಾರೆ.

ಗ್ರಾಮ ಗ್ರಾಮಗಳಲ್ಲೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೆಲಸವನ್ನು ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸುಲಭವಾಗಿ ತೆಗೆದುಕೊಳ್ಳಬಾರದು ಎಂದು ಮನವೊಲಿಸುತ್ತಿದ್ದಾರೆ.

ರೈತರು ಬೆಳೆದಿರುವ ತರಕಾರಿ ಹಣ್ಣು ಮತ್ತಿತರ ಸಾಮಗ್ರಿಗಳನ್ನು ಖರೀದಿಸುವ ಕೆಲಸವನ್ನು ಸಹ ಅವರು ಮಾಡುತ್ತಿದ್ದಾರೆ. ಹಾಗೆ ಖರೀದಿ ಮಾಡಿದ ಸಾಮಗ್ರಿಗಳನ್ನು ಕ್ಷೇತ್ರದ ಬಡ ಜನರಿಗೆ ವಿತರಿಸುತ್ತಿದ್ದಾರೆ.

ಈ ಕೆಲಸವೇ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಮ್ಮ ಕ್ಷೇತ್ರದ ಶಾಸಕರು, ಮಾಜಿ ಶಾಸಕರು, ಸಂಸದರು ಎಲ್ಲಿಗೆ ಹೋಗಿದ್ದಾರೆ ಎಂಬ ಪ್ರಶ್ನೆಗಳನ್ನು ಆಯಾ ಕ್ಷೇತ್ರದ ಜನರು ಸಾಮಾಜಿಕ ಮಾಧ್ಯಗಳಲ್ಲಿ ಕೇಳತೊಡಗಿದ್ದಾರೆ.

ಈ ಸಂಕಷ್ಟ ಕಾಲದಲ್ಲಿ ಜನಪ್ರತಿನಿಧಿಗಳು ಮನೆ ಮನಕ್ಕೆ ಬರಬೇಕು. ಗ್ರಾಮಗಳಲ್ಲಿ ಬಿಡಾರ ಹೊಡಬೇಕು.ಆ ಮೂಲಕ ಗ್ರಾಮದ ಸಂಕಷ್ಟವನ್ನು ಅರಿಯಬೇಕು ಎಂಬುದು ಜನರ ಮಾತಾಗಿದೆ.


ತೋರಿಕೆಗಾಗಿ, ರಾಜಕಾರಣಕ್ಕಾಗಿ ಈ ಕೆಲಸವನ್ನು ಯಾರೂ ಮಾಡಬಾರದು. ಇದು ರಾಜಕಾರಣದ ಅಥವಾ ವೋಟ್ ಬ್ಯಾಂಕ್ ಕೆಲಸವಲ್ಲ. ಜನರಿಗೆ ನಾವು ಮಾಡಬೇಕಾದ ಕರ್ತವ್ಯ ಎಂದು ಸುರೇಶ್ ಗೌಡ ತಿಳಿಸಿದರು.


ಗ್ರಾಮೀಣ ಭಾಗದ ಜನರು ರೋಗವನ್ನು ನಿರ್ಲಕ್ಷಿಸುವುದು ಹೆಚ್ಚು. ಇದರಿಂದ ಮುಂದೆ ಅಪಾಯಕ್ಕೆ ಸಿಗ್ತಾರೆ. ಈ ಕಾರಣದಿಂದಲೇ ಅವರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎನ್ನುತ್ತಾರೆ ಅವರು.

ಕೆಲವರು ಸುರೇಶ್ ಗೌಡ ಇದನ್ನು ರಾಜಕಾರಣಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಆದರೆ ಇಂಥ ಕೆಲಸಗಳು ಪ್ರತಿ ಕ್ಷೇತ್ರಗಳಲ್ಲಿ ಆಗಬೇಕು ಹಾಗಾದಾಗ ಮಾತ್ರ ಜಿಲ್ಲೆಯ ಜನರು ಸಂಕಷ್ಟದಿಂದ ಪಾರಾಗಬಹುದು ಎಂದರು.

ನಮ್ಮ ಕೆಲಸವನ್ನು ನಾವು ಮಾಡಬೇಕು. ಜನರ ಕೆಲಸ ಎಂದರೆ ಜನಾರ್ದನ ಕೆಲಸ ಅಲ್ಲವೇ ಎಂದು ಮಾತಿಗೆ ವಿರಾಮ ಹಾಕಿ‌ದ ಸುರೇಶಗೌಡರು ಮತ್ತೊಂದು‌ ಗ್ರಾಮದತ್ತ ಹೊರಟರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸದ್ದಿಲ್ಲದೆ ಒಪ್ಪಿಗೆ ನೀಡಲಿದೆಯೇ ಸಚಿವ ಸಂಪುಟ?

Publicstory. in


Tumkuru: ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸದ್ದಿಲ್ಲದೇ ರಾಜ್ಯದಲ್ಲಿ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಆ ಕಾಯ್ದೆ ಜಾರಿಗೊಳಿಸಲು ವೈಯಕ್ತಿವಾಗಿ ನನಗೂ ಇಷ್ಟ ಇಲ್ಲ. ಆದರೆ ನಮ್ಮದೇ ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಎಂದು ಸಚಿವರೊಬ್ಬರು publicstory.in ಗೆ ತಿಳಿಸಿದರು.

ಮಸೂದೆ ಜಾರಿಯಾದರೆ ಎಪಿಎಂಸಿಗಳು ದುರ್ಬಲವಾಗಲಿದವೆ. ಇದು ರೈತರ ಹಕ್ಕನ್ನು ಮೊಟಕುಗೊಳಿಸಿದೆ ಎಂದು ರೈತ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಎಪಿಎಂಸಿ ಕಾಯಿದೆ ಪ್ರಕಾರ ರೈತರು ತಮ್ಮ ಉತ್ಪನ್ನಗಳ ಎಪಿಎಂಸಿಯ ಮಂಡಿಗಳಲ್ಲಿ ಮಾರಾಟ ಮಾಡಬೇಕು.ಹೊಸ ಮಸೂದೆ ಜಾರಿಯಾದರೆ ಎಪಿಎಂಸಿ ವರೆಗೂ ಕೂಡ ರೈತರ ಉತ್ಪನ್ನಗಳ ಖರೀದಿ ಮಾಡಲು ಅವಕಾಶ ಸಿಗಲಿದೆ. ಅಲ್ಲದೇ ಎಪಿಎಂಸಿಯೊಳಗೆ ಮಾರುಕಟ್ಟೆ ಸೆಸ್ ವಸೂಲಿ ಮಾಡಲು ಅವಕಾಶ ಕೊಟ್ಟರೆ ಹೊರಗಡೆ ಇದಕ್ಕೆ ವಿನಾಯಿತಿ ನೀಡಲಾಗಿದೆ.

ಹೊಸ ಮಸೂದೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು. ವಿಧಾನಸಭೆಯಲ್ಲೂ ಕೂಡ ಮಸೂದೆಗೆ ಅಂಗೀಕಾರವನ್ನು ನೀಡಲಾಗಿತ್ತು. ಆದರೆ ರೈತರು ಮತ್ತು ವ್ಯಾಪಾರಿಗಳ ವಿರೋಧದ ನಡುವೆ ಮಸೂದೆ ವಾಪಸ್ ಪಡೆಯಲಾಗಿದೆ.

ಕರ್ನಾಟಕದಲ್ಲಿ ಯಾವುದೇ ಚರ್ಚೆ ಇಲ್ಲದೇ ಕೇಂದ್ರ ಸರ್ಕಾರದ ಈ ಕಾಯ್ದೆ ಜಾರಿಗೆ ತರಲು ಹೊರಟಿರುವ ರಾಜ್ಯ ಸರಕಾರ ಕ್ರಮ ಸರಿ ಇಲ್ಲ ಎಂದು ಬೆಲೆ ಕಾವಲು ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಕೇಳಿ ಹೇಳಿದ್ದಾರೆ.

ಈ ಮಸೂದೆ ಜಾರಿಯಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರ ಉತ್ಪನ್ನಗಳ ಬೆಲೆ ಕಳೆದುಕೊಳ್ಳಲಿವೆ ಎಂದು ವಕೀಲ ಸಿ.ಕೆ. ಮಹೇಂದ್ರ ಹೇಳಿದ್ದಾರೆ.

ಎಪಿಎಂಸಿ ಹೊರಭಾಗದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಉತ್ಪನ್ನಗಳ ಅಂಕಿ ಅಂಶಗಳು ಸಿಗಲು ಕೂಡ ಕಷ್ಟವಾಗಲಿದೆ. ಇದು ಬೆಂಬಲ ಬೆಲೆ ನಿರ್ಧರಿಸುವಲ್ಲಿ ತೊಡಕನ್ನುಂಟು ಮಾಡಲಿದೆ ಎಂದು ಮಾರುಕಟ್ಟೆ ತಜ್ಞ ರು ಹೇಳುತ್ತಾರೆ.

ಕಾಯ್ದೆಯು ಮೇಲ್ನೋಟಕ್ಕೆ ಪ್ರಗತಿಪರ ಎಂದು ಕಂಡು ಬಂದರೂ ಆದರೆ ಇಡೀ ಕೃಷಿ ವಲಯವನ್ನು ಕಾರ್ಪೊರೇಟ್ ವಲಯಕ್ಕೆ ಮೀಸಲಿಡುವ ಹುನ್ನಾರ ಇದರ ಹಿಂದೆ ಅಡಗಿದೆ. ಇದರೊಂದಿಗೆ ಇಡೀ ಎಪಿಎಂಸಿಗಳನ್ನು ದುರ್ಬಲಗೊಳಿಸಲಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಯಾವಾಗಲೂ ರೈತ ಪರವಾಗಿ ಯೋಚನೆ ಮಾಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕಾಯ್ದೆ ಜಾರಿಗೆ ಅವಕಾಶ ಮಾಡಿಕೊಡಬಾರದು ಹಲವು ವ್ಯಾಪಾರಿಗಳು, ರೈತ ಮುಖಂಡರು ಅಭಿಪ್ರಾಯಪಟ್ಟರು.

ಸಂಕ್ರಮಣ” ದ ಚಂಪಾ ” ಅವಧಿ” ಯ ಜಿಎನ್ಮೋ…

0

ಪ್ರಕಾಶ ಕಡಮೆ


ಚಂದ್ರಶೇಖರ ಪಾಟೀಲ್ ಮತ್ತು ಜಿ.ಎನ್.ಮೋಹನ
ಸೃಜನ ಶೀಲ ಸಾಹಿತ್ಯದ ಹೆಬ್ಬಾಗಿಲಿನ ಒಳಪ್ರವೇಶದ
ರೂವಾರಿಗಳಿದ್ದಂತೆ.

ಈ ಸುಂಕದ ಕಟ್ಟೆಯಿಂದ ಯಾರು ದಾಟಿ ಮುಂದೆ
ಸಾಗುವರು ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ
ಗುರುತು ಮೂಡಿಸಿದಂತೆ. ಆದರೆ ಈ ಸುಂಕ ದಾಟಲು ಯಾರೂ ಇಲ್ಲಿ ತೆರಿಗೆ ಕೊಡಬೇಕಾಗಿಲ್ಲ.ಅವರವರ
ಬರವಣಿಗೆಯ ಗುಣಮಟ್ಟವೇ ಇಲ್ಲಿ ಮಾನದಂಡ.

ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ
ಚಂಪಾ ಕನ್ನಡ ಸಾಹಿತ್ಯದಲ್ಲಿ ” ಸಂಕ್ರಮಣ ” ದ
ಮೂಲಕ ಸಣ್ಣದೊಂದು ಕ್ರಾಂತಿಯನ್ನೇ ಮಾಡುತ್ತಾ
ಬಂದಿರುವರು. ಪ್ರತೀ ವರ್ಷ ಸಾಹಿತ್ಯ ಸ್ಪರ್ಧೆ ಏರ್ಪಡಿಸಿ ಹೊಸ ಹೊಸ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿ ಸುತ್ತಾ ಬಂದು ಅಂತವರು ಈ ಸಾಹಿತ್ಯ ಲೋಕದಲ್ಲಿ ನೆಲೆನಿಲ್ಲಲು ಬೆಳಕಿನ ದಾರಿ ತೋರಿಸುವರು.

ದಾರಿ ತೋರಿಸುವಿಕೆ ಏನೋ ಅವರದು ; ನೆಲೆ ನಿಲ್ಲುವಿಕೆ ಓದು – ಅಧ್ಯಯನದ ಮೇಲೆ ನಿರ್ಣಯವಾಗುವದು.
ಸಂಕ್ರಮಣದಲ್ಲಿ ಬರಹ – ಕವನ ಪ್ರಕಟವಾದರೆ ಅದು ನಾಡಿನ ಗಮನ ಸೆಳೆದಂತೆ. ಚಂಪಾ ಎಂದಿಗೂ
ಯಾರ ಬರಹಕ್ಕೂ ಬಿಡೆಗೊಳಗಾಗದೇ ಗುಣಮಟ್ಟದ ಸಾಹಿತ್ಯವನ್ನು ನೀಡುತ್ತಾ ಬಂದಿರುತ್ತಾರೆ. ಬರಹಗಾರನೂ ಅಷ್ಟೇ ಸಮಾಜಮುಖಿ ಧೋರಣೆಯಿಂದ ಕನ್ನಡ ಸಾಹಿತ್ಯದಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವನು.

ಚಂಪಾ ಒಬ್ಬ ಅಪ್ಪಟ ಜವಾರಿ ಕವಿ , ಒಳ್ಳೆಯ ನಾಟಕಕಾರ , ಪತ್ರ ಪ್ರಿಯರಾದ ಇವರ ಕೈ ಬರಹದ
ಅಕ್ಷರಗಳು ಕನ್ನಡ ಸಾಹಿತ್ಯ ಲೋಕಕ್ಕೇ ಪರಿಚಿತ.
ಗೋಕಾಕ ಚಳುವಳಿಯ ಮೂಲಕ ಇವರೊಬ್ಬ
ಮಹಾನ್ ಸಂಘಟಕ. ಎಲ್ಲಕಿಂತ ಮುಖ್ಯವಾಗಿ
ಚಂಪಾ ಒಬ್ಬ ಸ್ನೇಹ ಜೀವಿ. ಅವರೊಡನೆಯ
ಗೆಳೆತನಕ್ಕೆ ವಯಸ್ಸಿನ ಹಂಗಿಲ್ಲ.ಇಂದಿನ ಎಲ್ಲಾ ಪ್ರಮುಖ ಬರಹಗಾರರೂ “ಸಂಕ್ರಮಣ” ದ ಮೂಲಕವೇ ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವೇಶ ನೀಡಿದವರೇ ;

ಇಲ್ಲಿಂದ ಪ್ರವೇಶ ಪಡೆಯದ ಕೆಲವರು ನಂತರದ
ದಿನಗಳಲ್ಲಾದರೂ ಸಂಕ್ರಮಣದ ಓಡನಾಡಿಗಳೇ.

” ಅವಧಿ ” ಯುವ ಕನ್ನಡ ಮನಸುಗಳ ನಾಡಿ
ಮಿಡಿತದ ಸದ್ದು. ಇದಕೆಲ್ಲಾ ಕಾರಣ ಜಿ.ಎನ್.ಮೋಹನ ಎಂಬ ಮೋಡಿಗಾರ. ಪತ್ರಿಕೆ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿ
ಈಗ ಕಳೆದೊಂದು ದಶಕದಿಂದ ” ಅವಧಿ” ಯ ಮೂಲಕ ಯುವ ಮನಸುಗಳ ಹೃದಯಕ್ಕೆ ; ಹಿರಿಯರ ಪ್ರಬುದ್ಧ ಬರಹಗಳಿಂದ ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿರುವರು. ಪ್ರತಿಯೊಬ್ಬ ಯುವ ಬರಹಗಾರನೂಸಹ ಯಾವದಾದರೂ ತನ್ನದೊಂದು ಬರಹ ಅವಧಿಯಲ್ಲಿ ಬರಲೆಂದು ಆಶಿಸುವನು ಮತ್ತು ಕಾಯುವನು.

ಅವಧಿಯ ಅಂಗಳವೇ ಹಾಗಿದೆ. ಮೋಹನ್ ಈ
ಒಂದು ಚಿಕ್ಕ ಸಮಯದಲ್ಲಿ ಎಷ್ಟೆಲ್ಲಾ ಹೊಸ ಹೊಸ ಕನ್ನಡದ ಪ್ರತಿಭೆಗಳನ್ನು ಬೆನ್ನು ಚಪ್ಪರಿಸಿ ನಾಡಿಗೆ ಪರಿಚಯಿಸಿದರು. ಇವರೆಲ್ಲರೂ ಸಹ ಈಗ ಕನ್ನಡದ
ಪ್ರಮುಖ ಬರಹಗಾರರೇ.

ಮೋಹನ ತಾವೂ ಬೆಳೆದರು, ಹೊಸಬರನ್ನೂ ಬೆಳೆಸಿದರು. ಮತ್ತೊಬ್ಬರ ಏಳ್ಗೆಯನ್ನು ಕಂಡು ಖುಷಿಪಡುವ ಜೀವ ಇವರದು. ” ಬಹುರೂಪಿ ” ಪ್ರಕಾಶನದ ಮೂಲಕ ಮೋಹನ್ ಇಂದು ಅಕ್ಷರ ಲೋಕಕ್ಕೆ ಹೊಸ ಬೆರಗನ್ನು ನೀಡಲು ಪ್ರಾರಂಭಿಸಿರುವರು. ಇದರಿಂದಾಗಿಯೇ ಇಂದು
ಮೋಹನ್ ಕನ್ನಡ ಸಾಹಿತ್ಯ ಲೋಕದಲ್ಲಿ ಎಲ್ಲರ ಪ್ರೀತಿ ಆದರಕ್ಕೆ ಕಾರಣರು.

ಇವರೊಳಗೊಬ್ಬ ಕವಿ ಸದಾ ಜಾಗ್ರತನಾಗಿದ್ದು , ಅವಧಿಗೆ ಹೊಸ ಹೊಸ ಪ್ರತಿಭೆಗಳ ಶೋಧನೆಗೆ ಸದಾ ಕಣ್ಣಾಗಿರುವರು.ಅವಧಿಯ ಎಲ್ಲಾ ಬರಹಗಳೂ ಪ್ರಗತಿಪರ ನಿಲುವಿನದಾಗಿದ್ದು ಮಾನವೀಯ ಮೌಲ್ಯಗಳ ಬೆಸುಗೆಯಾಗಿರುತ್ತದೆ.

ಇವುಗಳಿಂದಾಗಿಯೇ ಇಂದು ” ಸಂಕ್ರಮಣ” ದ ಚಂಪಾ ” ಅವಧಿ” ಯ ಜಿಎನ್ಮೋ ಶುದ್ಧ ಪ್ರತಿಭೆ , ಶುದ್ಧ ಕನ್ನಡಕ್ಕಾಗಿ ಪರಿಶುದ್ಧ ಮನಸ್ಸಿನಿಂದ ಹೊಸ ಹೊಸ ಕನ್ನಡತನದ ಶೋಧ ಗಳಿಗೆ ಕಣ್ಗಾವಲಾಗಿರುವರು.ಕನ್ನಡ ಸಾಹಿತ್ಯದಲ್ಲಿಯ ಇವರ ಜನಪರ, ಪ್ರಗತಿಪರ ಕಾಳಜಿಗೆ ನಮ್ಮದೊಂದು ಸಲಾಮ್ .