Friday, May 8, 2026
Google search engine
Home Blog Page 232

‘ಎಮೋಜಿ ಗಂಡಾ ಹೆಣ್ಣಾ?’

ಜಿ ಎನ್ ಮೋಹನ್


‘ಎಮೋಜಿ ಗಂಡಾ ಹೆಣ್ಣಾ?’ ಅಂತ ಕೇಳಿದೆ

ತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು.

ಎಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ.. ಅದಕ್ಕೆ ಗಂಡು ಹೆಣ್ಣು ಅಂತಾ ಉಂಟಾ??

ಹೌದಪ್ಪಾ, ನೀನೇನೋ ಎಮೋಜಿ ಗಂಡಾ ಹೆಣ್ಣಾ ಅಂದುಬಿಟ್ಟೆ, ಎರಡೂ ಅಲ್ಲದವರು ಏನು ಮಾಡ್ತಾರೆ ಅಂತ ಇನ್ನೊಬ್ಬರು ಬಾಣ ತೂರಿಬಿಟ್ಟರು.

ಇದೇ ಪ್ರಶ್ನೆಯನ್ನ ಎಮೋಜಿಗಳನ್ನು ರೂಪಿಸುವ, ಆರಿಸುವ, ಜನರ ಮುಂದಿಡುವ ‘ಯುನಿಕೋಡ್’ ಸಂಸ್ಥೆಯ ಮುಂದೆ ಹಿಡಿದು ನಿಂತದ್ದು ಇಡೀ ಜಗತ್ತು.

‘ಅದು ಸರಿ, ನೀವೇನೋ ‘ಹಾಯ್’ ಅನ್ನೋಕೆ ‘ಬಾಯ್’ ಅನ್ನೋಕೆ, ‘ಹೈ ಫೈವ್’ಗೆ ಅಂತ ಬೇಕಾದಷ್ಟು ಎಮೋಜಿ ರೂಪಿಸಿದ್ದೀರಲ್ಲಾ.. ಅದರಲ್ಲಿ ಯಾಕೆ ಸ್ವಾಮಿ ಹೆಣ್ಣು ಮಕ್ಕಳಿಲ್ಲ.. ಅವರಿಗೆ ಹಾಯ್, ಬಾಯ್ ಅನ್ನೋಕೆ ಬರಲ್ವಾ, ಅಥವಾ ಅವರು ಗಂಡಸರ ಥರಾ ಕೆಲಸ ಮಾಡ್ತಿಲ್ವಾ..?’ ಅಂತ ಒಂದಷ್ಟು ಸಂಘಟನೆಗಳು ಎದ್ದು ನಿಂತೇ ಬಿಟ್ಟವು.

ಆದರೆ ಇನ್ನಷ್ಟು ಮಹಿಳೆಯರು ಇದ್ದರು ಎಂಜಿನಿಯರ್ ಗಳು, ನರ್ಸ್ ಗಳು, ಸಂಶೋಧಕರು..

ಅವರಿಗೆ ತಮ್ಮ ವೃತ್ತಿ ಸೂಚಿಸುವ ಎಮೋಜಿ ಬಳಸಬೇಕು ಅಂದ್ರೆ ಆಯ್ಕೆಯೇ ಇಲ್ಲ. ಯಾಕೆಂದರೆ ಇರುವುದೆಲ್ಲಾ ಗಂಡಸರ ಚಿತ್ರವೇ.

ಎಮೋಜಿ ಪ್ರಪಂಚಕ್ಕೆ ಕಾಮಾಲೆ ಕಣ್ಣು. ಹಾಗಾಗಿ ಅದು ನೇರಾ ನೇರ ಲಿಂಗ ವಿರೋಧಿಯಾಗಿ, ವರ್ಣ ಭೇದ ಮಾಡುವ, ಜಗತ್ತು ಅತಿ ವೇಗದಲ್ಲಿ ಓಡುತ್ತಿದೆ ಎನ್ನುವುದನ್ನು ಅರಗಿಸಿಕೊಳ್ಳಲಾಗದ ಒಂದು ಮನಸ್ಸನ್ನೇ ಬಿಂಬಿಸುತ್ತಿತ್ತು. ಜಗತ್ತಿನ ಎಲ್ಲಾ ಸಂಕುಚಿತ ನೋಟ ಅಲ್ಲಿತ್ತು.

ಆದರೆ ಎಮೋಜಿ ಎಂದರೆ ಅದೊಂದು ಚಿತ್ರ ಅಷ್ಟೇ ಎಂದು ಒಪ್ಪಿಕೊಳ್ಳಲು ಜಗತ್ತಿನ ಅನೇಕರು ಸಿದ್ಧರಿರಲಿಲ್ಲ. ಏಕೆಂದರೆ ಎಮೋಜಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎನ್ನುವ ಅರಿವು ಅವರಿಗಿತ್ತು.

ಭಾಷೆ ಎಂದರೆ ಅಕ್ಷರ ಎನ್ನುವ ನೋಟವನ್ನೇ ಈ ಎಮೋಜಿ ಆಗಮನ ನಿವಾಳಿಸಿಹಾಕುತ್ತಿತ್ತು.

ಭಾಷೆ ಎನ್ನುವುದು ಅಕ್ಷರದಿಂದ ಕ್ರಮೇಣ ಚಿತ್ರಗಳಾಗುವತ್ತ ವಾಲಿಕೊಳ್ಳುತ್ತಿತ್ತು. ಹೊಸ ಪೀಳಿಗೆಗೆ, ಧಾವಂತದ ಪೀಳಿಗೆಗೆ ಅಕ್ಷರವೇ ಶತ್ರು ಎನ್ನುವ ಕಾಲ ಬಂದುಹೋಗಿತ್ತು. ಆ ಕಾರಣಕ್ಕೆ ಒಂದು ಬೆರಳ ಸ್ಪರ್ಶದಲ್ಲಿ ಒಂದು ವಾಕ್ಯವನ್ನೋ, ಒಂದು ಭಾವನೆಯನ್ನೋ, ಒಂದು ಪ್ರಶ್ನೆಯನ್ನೋ, ಒಂದು ಮನೋಲೋಕವನ್ನೋ ಬಿಚ್ಚಿಟ್ಟುಬಿಡುವ ಎಮೋಜಿಗಳನ್ನು ಆ ಜನಾಂಗ ಬಾಚಿಕೊಳ್ಳಲು ಶುರುವಾಗಿತ್ತು.

ಕಾಮಿಕ್ಸ್ ಗಳನ್ನು ನೀವು ಓದಿದ್ದರೆ ಸ್ವಲ್ಪ ಯೋಚಿಸಿ ಅದರಲ್ಲಿ ‘ವಾಹ್! ಐಡಿಯಾ’ ಅನ್ನುವುದನ್ನು ಹೇಗೆ ತೋರಿಸುತ್ತಾರೆ. ಸಿಂಪಲ್. ಒಂದು ‘ಝಗ್’ ಎಂದು ಹತ್ತಿರುವ ಬಲ್ಬ್ ಮೂಲಕ. ಅದೇ ಅದೇ ಒಂದು ರೀತಿಯಲ್ಲಿ ಈ ಎಮೋಜಿಗಳು ಹುಟ್ಟಿಬಿಡಲು ಕಾರಣವಾಗಿ ಹೋಯಿತು.

ಶಿಗೇತಕ ಕುರಿಟ ಎನ್ನುವ ಕಲಾವಿದ ಜಪಾನ್ ನಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ಮಂಗಾ’ ಕಾಮಿಕ್ಸ್ ನೋಡುತ್ತಾನೆ. ಅಲ್ಲಿ ಒಂದಲ್ಲ ಎರಡಲ್ಲ ಈ ರೀತಿ ಎಷ್ಟೊಂದು ಸಿಂಬಲ್ ಗಳಿತ್ತು, ಚೀನೀ ಅಕ್ಷರಗಳೂ ಚಿತ್ರಗಳೇ, ಜೊತೆಗೆ ಜಗತ್ತಿನ ಎಲ್ಲೆಡೆ ಆ ವೇಳೆಗಾಗಲೇ ಹವಾಮಾನ ವರದಿ ನೀಡಲು ಬಳಸುತ್ತಿದ್ದುದು ಚಿತ್ರಗಳನ್ನೇ.

ಆಗ ಅವನಿಗೆ ಮಾತಿಗೆ ಚಿತ್ರವನ್ನೇ ಕೊಡಬಹುದಲ್ಲಾ ಎನಿಸಿತು. ಅಲ್ಲಿಂದ ಶುರುವಾಯಿತು ನೋಡಿ ಅವನ ಹೊಸ ವರಸೆ. ಆತ ಜಪಾನಿನ ಬೀದಿ ಬೀದಿ ಅಲೆದ. ಮಾರುಕಟ್ಟೆಯಲ್ಲಿ, ಟ್ರಾಫಿಕ್ ಸಿಗ್ನಲ್ ಗಳಲ್ಲಿ, ಶಾಲೆ ಕಾಲೇಜು ಬಳಿ ನಿಂತ. ಕಣ್ಣಿಗೆ ಕಂಡ ಅಷ್ಟನ್ನೂ ಮನಸ್ಸಿನೊಳಗೆ ಸೇರಿಸುತ್ತಾ ಹೋದ. ಆ ನಂತರ ಇಡೀ ನಗರದಲ್ಲಿ ಸರ್ವೇಸಾಮಾನ್ಯವಾಗಿ ಜನ ಬಳಸುವ ಹಾವಭಾವಗಳಿಗೆ ಚಿತ್ರದ ರೂಪು ಕೊಟ್ಟ. ಮೊದಲ ಕಂತಾಗಿ 180 ಎಮೋಜಿಗಳು ರೂಪುಗೊಂಡವು.

ಅದು 1999- ಶುರುವಾಯಿತು ನೋಡಿ ಹೊಸ ಭಾಷೆಯ ಆಗಮನ.

ಅದಾದ ಒಂದು ವರ್ಷಕ್ಕೇ ಭಾಷೆಗೆ ಭಾಷ್ಯ ಬರೆಯುವ ಯುನಿಕೋಡ್ ಸಂಸ್ಥೆಗೆ ಇದು ಮುಂದಿನ ದಿನಗಳಲ್ಲಿ ಇಡೀ ಜಗತ್ತನ್ನು ಹೇಗೆ ಮೋಡಿ ಮಾಡಿಬಿಡುತ್ತದೆ ಎನ್ನುವುದರ ಸುಳುಹು ಸಿಕ್ಕಿಹೋಯಿತು.

ಒಂದು ವರ್ಷ ಆಗುವಷ್ಟರಲ್ಲೇ ಯುನಿಕೋಡ್ ತಜ್ಞರು ಕುಳಿತು ಜಪಾನಿಗೆ ಮಾತ್ರ ಸೀಮಿತವಾಗಿದ್ದ ಈ ಚಿತ್ರ ಭಾಷೆಗೆ ಜಾಗತಿಕ ಸ್ಪರ್ಶ ನೀಡಲು ಶುರು ಮಾಡಿದರು. ‘ಆಪಲ್’ ಮೊಬೈಲ್ ನಲ್ಲಿ ಆನಂತರ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಎಮೋಜಿಗಳು ಕ್ಯಾಟ್ ವಾಕ್ ಮಾಡಲು ವೇದಿಕೆ ಸಜ್ಜಾಯಿತು.

ಆದರೆ ಇಲ್ಲೊಂದು ಸಮಸ್ಯೆ ಇತ್ತು.

ಜಪಾನಿನಲ್ಲಿ ಬದನೇಕಾಯಿ ಅಂದರೆ ಅಮೆರಿಕಾದಲ್ಲಿ ಅದಕ್ಕೆ ತೀರಾ ತೀರಾ ಕೆಟ್ಟ ಅರ್ಥ. ಇಂತಹ ದೇಶದಿಂದ ದೇಶಕ್ಕೆ ಬದಲಾಗಿಬಿಡುವ ಅರ್ಥಗಳನ್ನು ನೀಡುವ ಚಿತ್ರಗಳಿಗೆ ಕೊಕ್ ನೀಡಲಾಯಿತು. ಇನ್ನೊಂದೆಡೆ ಜಪಾನಿನಲ್ಲಿ ಶಿರಬಾಗಿ ನಮಸ್ಕರಿಸುವ ಪದ್ಧತಿ ಇದೆ. ಅಂತಹ ಜಪಾನೀ ಸಂಸ್ಕಾರಕ್ಕೆ ಮಾತ್ರ ಒಗ್ಗುವಂತಿದ್ದ ಎಮೋಜಿಗಳಿಗೆ ವಿದಾಯ ಹೇಳಲಾಯಿತು.

ಜಗತ್ತಿನಲ್ಲಿ ಅತಿ ವ್ಯಾಪಕವಾಗಿ ಬಳಸುವ ಆಪರೇಟಿವ್ ಸಿಸ್ಟಮ್ ಗಳಿಗೆ ಹೊಂದಿಕೆಯಾಗಲು, ಎಲ್ಲರಿಗೂ ಸಲ್ಲುವ ಭಾಷೆ ರೂಪಿಸುವುದೇ ಯುನಿಕೋಡ್ ಸಂಸ್ಥೆ. ಆ ಸಂಸ್ಥೆಯೇ ಬೆರಳು ಕಚ್ಚುವಂತೆ ಎಮೋಜಿಗಳು ಮಿಡತೆಯ ಧಾಳಿಯಂತೆ ಜಗತ್ತನ್ನು ಆಕ್ರಮಿಸಿಕೊಂಡುಬಿಟ್ಟವು.

ಆಗಲೇ ಆಕ್ಸ್ ಫರ್ಡ್ ಡಿಕ್ಷನರಿ ಸಹಾ ರಂಗ ಪ್ರವೇಶ ಮಾಡಿದ್ದು. ಯಾವಾಗಲೂ ಪದಗಳನ್ನು ಮಾತ್ರ ಗಮನಿಸಿ ಅದನ್ನು ತನ್ನ ನಿಘಂಟಿಗೆ ಸೇರಿಸಿಕೊಳ್ಳುವ ಮೂಲಕ ಅದಕ್ಕೆ ಮಾನ್ಯತೆ ಕೊಡುತ್ತಿದ್ದ ಆಕ್ಸ್ ಫರ್ಡ್ ನಿಘಂಟು 2015ರಲ್ಲಿ ಒಂದು ಎಮೋಜಿಯನ್ನು ತನ್ನ ನಿಘಂಟಿನ ಒಳಗೆ ಭಾಷೆಯಾಗಿ ಬಿಟ್ಟುಕೊಂಡಿತು.

ಅದು ಕಣ್ಣಲ್ಲಿ ನೀರು ಬರುವಂತೆ ನಗು ಉಕ್ಕಿಸುತ್ತಿರುವ ಎಮೋಜಿ.

ಆಗಲೇ ಆಕ್ಷ್ ಫರ್ಡ್ ನ ಭಾಷಾ ಪಂಡಿತರು ಹೇಳಿದ್ದು. ಕಾಲ ಬದಲಾಗುತ್ತಿದೆ. ಹಾಗೆಯೇ ಭಾಷೆಯೂ.. ಭಾಷೆ ಬದಲಾಗುತ್ತಿರುವುದನ್ನು ಮಡಿವಂತಿಕೆಯಿಂದ ನೋಡಬೇಡಿ ಎಂದು.

ಸರಿಬಿಡಪ್ಪಾ, ಎಮೋಜಿ ಏನೋ ಭಾಷೆ ಆಯಿತು. ಆದರೆ ಈ ಗಂಡು, ಹೆಣ್ಣು, ಉಭಯಲಿಂಗಿಗಳು ಇವೆಲ್ಲಾ ಯಾಕೆ ಎನ್ನುವ ಬಾಣವನ್ನು ಹಿಡಿದು ನನ್ನ ಗೆಳೆಯರು ಇನ್ನೂ ಕುಳಿತಿದ್ದರು.

ಆಗಲೇ ನಾನು ಈ ಎಮೋಜಿ ಹಾಗೂ ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಭಾಷಣ ಮಾಡಬೇಕಾಗಿ ಬಂದದ್ದು.

ನೋಡಿ ಎಮೋಜಿ ಎನ್ನುವುದು ಒಂದು ಭಾಷೆ ಆಗಿಬಿಟ್ಟಾಗ ಅದು ಸಂಸ್ಕೃತಿಯನ್ನೂ ಪ್ರತಿನಿಧಿಸಬೇಕು ಅಂದೆ. ಗೊತ್ತಾಗಲಿಲ್ಲ ಎನ್ನುವಂತೆ ಮೂತಿ ತಿರುವಿದರು.

ಆಗಲೇ ನಾನು ಈ ಎಮೋಜಿಗಳ ಬಳಕೆಯ ಬಗ್ಗೆ ಮಿಶಿಗನ್ ವಿಶ್ವವಿದ್ಯಾಲಯ ಇತ್ತೀಚೆಗೆ ತಾನೇ ನಡೆಸಿದ ಸಮೀಕ್ಷೆಯನ್ನು ಬಿಚ್ಚಿಡಬೇಕಾಗಿ ಬಂತು.

ನೋಡಿ ಯಾವ ದೇಶ ಯಾವ ಎಮೋಜಿಯನ್ನು ಬಳಸುತ್ತಿದೆ ಎನ್ನುವುದರಲ್ಲಿಯೇ ಆ ದೇಶದ ಅಂತರಂಗವನ್ನು ಅರ್ಥ ಮಾಡಿಕೊಂಡುಬಿಡಬಹುದು. ಫ್ರಾನ್ಸ್ ನಲ್ಲಿ ಲವ್ ಸಿಂಬಲ್ ಗಳು ಇರುವ ಎಲ್ಲಾ ಎಮೋಜಿ ಪಾಪ್ಯುಲರ್. ಆಸ್ಟ್ರೇಲಿಯಾ, ಜೆಕೊಸ್ಲೊವಾಕಿಯಾ ಇಲ್ಲೆಲ್ಲಾ ಖುಷ್ ಖುಷಿಯಾಗಿರುವ ಎಮೋಜಿಗಳ ಬಳಕೆ ಜಾಸ್ತಿ. ಆದರೆ ಅದೇ ದಕ್ಷಿಣ ಅಮೆರಿಕಾದ ದೇಶಗಳಲ್ಲಿ ನೆಗೆಟಿವ್ ಎಮೋಜಿಗಳು ಹೆಚ್ಚು. ಅಳು, ಬೇಸರ ಹತಾಶೆ.. ಹೀಗೆ.

ಅದಕ್ಕೇ ಎಮೋಜಿ ಅಂದ್ರೆ ಬರೀ ಎಮೋಜಿ ಅಲ್ಲ ಅದು ಒಂದು ನೋಟ ಅಂದೆ.

ಕೇಳುತ್ತಿರುವವರ ಮುಖದಲ್ಲಿ ಗೊಂದಲದ ಒಂದು ರೇಖೆಯೂ ಅಲುಗಿರಲಿಲ್ಲ.

ಸರಿ ಬಿಡಿ, ಬಾರ್ಬಿ ಡಾಲ್ ಬಂತಲ್ವಾ, ಅದು ಒಂದು ಗೊಂಬೆ ಅಷ್ಟೇ ಆದರೆ ಆ ಗೊಂಬೆ ವಿರುದ್ಧ ಜಗತ್ತಿನ ಎಲ್ಲಾ ಕಡೆ ಜೋರು ಅಪಸ್ವರ ಬಂತಲ್ಲಾ ಯಾಕೆ ಎಂದೆ. ಆಗ ಎದುರಿಗಿದ್ದ ಮುಖಗಳಲ್ಲಿ ಒಂದಿಷ್ಟು ಭಾವ ಬದಲಾಯಿತು.

ಬಾರ್ಬಿ ಬಂದಾಗಲೇ ಚರ್ಚೆ ಶುರುವಾಯಿತು. ಕೆಂಚು ಕೂದಲು, ಬೆಕ್ಕಿನ ಕಣ್ಣು, ಸಣ್ಣ ಸೊಂಟ ಇದ್ದಾರೆ ಮಾತ್ರ ಮಹಿಳೇನಾ ನಾವೇನು ಮನುಷರಲ್ವೇ ಅಂತಾ.. ಆ ಸಮಸ್ಯೆ ಮಹಿಳೆಯರದ್ದು ಮಾತ್ರವೇ ಆಗಿರಲಿಲ್ಲ ಗಂಡಸರು ಮಕ್ಕಳಿಗೂ ಇದೇ ಬಣ್ಣದ ಸಮಸ್ಯೆ ಕಾಡಲು ಶುರುವಾಯ್ತು.

ಬಾರ್ಬಿ ಡಾಲ್ ಯಾವಾಗ ಮಾರುಕಟ್ಟೆಗೆ ಬಂತೋ ಅವಳ ಸೊಂಟ ಬಣ್ಣ ನೋಡಿಯೇ ಜಗತ್ತಿನಾದ್ಯಂತ ಅಪಸ್ವರದ ಅಲೆಗಳು ಎದ್ದಿತು. ಇದು ಬಿಳಿ ಬಣ್ಣದವರು ಬೇಕೆಂದೇ ನಮ್ಮ ಮೇಲೆ ಹೇರುತ್ತಿರುವ ವರ್ಣ ಬೇಧ ಅಂತ. ಬಿಳಿ ಮಾತ್ರ ಶ್ರೇಷ್ಠ ಅನ್ನೋ ಪರೋಕ್ಷ ಹುನ್ನಾರದ ವಿರುದ್ಧ ಬರೀ ಬೀದಿ ಮೆರವಣಿಗೆ ಮಾತ್ರವೇ ನಡೆಯಲಿಲ್ಲ, ಅನೇಕ ಕಂಪನಿಗಳು ಬಾರ್ಬಿಗೆ ಪ್ರತಿಯಾಗಿ ಬಿಳಿ ಅಲ್ಲದ ಬಾರ್ಬಿಗಳನ್ನು ಮಾರುಕಟ್ಟೆಗೆ ಬಿಟ್ಟವು.

ಈಗಲೂ ಅದೇ ದನಿ ಎದ್ದಿತು. ಎಮೋಜಿಗಳ ವಿರುದ್ಧ. ಒಂದೆಡೆ ಮಹಿಳೆಯರ ಬಗ್ಗೆ ತಾರತಮ್ಯವನ್ನ ತೋರಿಸ್ತಿದೆ ಅಂತ ಜೋರು ದನಿ ಇನ್ನೊಂದೆಡೆ ವರ್ಣ ಬೇಧಕ್ಕೆ ಅಡಿಪಾಯ ಹಾಕ್ತಿದ್ದಾರೆ.

ಜನ ಸುಮ್ಮನೆ ಕೂಡಲಿಲ್ಲ. ಈ ಎಮೋಜಿ ಮಾಡೋರು ಯಾರು ಅಂತ ಹುಡುಕಿದರು. ಅವರ ಮುಂದೆ ಸಲಹೆಗಳ ರಾಶಿಯೇ ಬಿತ್ತು. ಆಗಲೇ ಯೂನಿಕೋಡ್ ಸಂಸ್ಥೆ ಎಚ್ಛೆತ್ತುಕೊಂಡಿದ್ದು.

ಯುನಿಕೋಡ್ ಕನ್ಸೋರ್ಟಿಯಂ ಅಂತ ಇದೆ. ಅದು ಸಭೆ ಕೂತು ಜಗತ್ತಿನ ಎಲ್ಲೆಡೆಯಿಂದ ಬರುವ ಸಲಹೆಗಳನ್ನ ಪರಿಶೀಲಿಸುತ್ತೆ. ಅದು ಯಾಕೆ, ಅದರ ಪರಿಣಾಮ ಏನು, ಜನ ಬಳಸ್ತಾರಾ ಈ ಎಲ್ಲಾ ಲೆಕ್ಕ ಇಟ್ಟುಕೊಂಡು ಒಂದಷ್ಟು ಹೊಸ ಎಮೋಜಿಗಳನ್ನ ಆಯ್ಕೆ ಮಾಡುತ್ತೆ. ಏನಿಲ್ಲಾ ಅಂದ್ರೂ ಎರಡು ವರ್ಷ ಬೇಕು ಹೊಸ ಎಮೋಜಿ ನಮ್ಮ ಮೊಬೈಲ್ ನಲ್ಲೋ, ಕಂಪ್ಯೂಟರ್ ನಲ್ಲೋ ಇಣುಕೋಕೆ.

ನೀವು ಎಮೋಜಿ ಬಳಸ್ತಾ ಇದ್ದೀರಾ.. ಹಾಗಂತ ಪ್ರಶ್ನೆ ಕೇಳೋದೇ ಮೂರ್ಖತನ.. ಇರ್ಲಿಬಿಡಿ ನೀವು ಬಳಸ್ತಾ ಇರೋ ಎಮೋಜಿಗಳಲ್ಲಿ ಒಂದಷ್ಟು ಬದಲಾವಣೆ ಆಗಿದೆ ಗಮನಿಸಿದ್ದೀರಾ.. ಮೊದಲು ಫೇಸ್ ಬುಕ್ ನಲ್ಲಿ ಲೈಕ್ ಸಿಂಬಲ್ ಒತ್ತುವಾಗ ಒಂದೇ ಸಿಂಬಲ್ ಬರ್ತಿತ್ತು ಈಗ ಏನಿಲ್ಲಾ ಅಂದ್ರೂ ಐದು ಸಿಂಬಲ್ ಇರುತ್ತೆ. ಯಾಕೇಳಿ. ಅದು ಬರೀ ಕೆಂಚು, ಬಿಳಿ ಅಲ್ಲ, ಈಗ ಕಂದು, ಕಪ್ಪು, ಅರೆಗಪ್ಪು ಹೀಗೆ ಬದಲಾಗಿದೆ. ಎಮೋಜಿಗಳು ಜಗತ್ತಿನಲ್ಲಿ ಬರೀ ಬಿಳಿಯರು ಇಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ತಾ ಇವೆ.

ಅಷ್ಟೇ ಅಲ್ಲ, ಈಗ ಸುಮ್ಮನೆ ವಾಟ್ಸ್ ಅಪ್ ನ ಎಮೋಜಿ ಲಿಸ್ಟ್ ಗೆ ಹೋಗಿ ನೋಡಿ ಅಲ್ಲೂ ಏನೇನೋ ಚೇಂಜ್ ಆಗಿದೆ. ಮೊದಲು ಗಂಡಸರೇ ಇದ್ದ ಜಾಗದಲ್ಲಿ ಎಷ್ಟೊಂದು ಹೆಂಗಸರೂ ಬಂದಿದ್ದಾರೆ. ಹೆಣ್ಣು ಅಂದ್ರೆ ಬರೀ ಮನೆಕೆಲಸದವಳು ಅಂದುಕೊಂಡಿದ್ದ ಇದೇ ಎಮೋಜಿ ಈಗ ಅವಳನ್ನ ಸಮಾಜವನ್ನ ಮುನ್ನಡೆಸುವವಳಾಗಿ ಬದಲು ಮಾಡಿದ್ದಾರೆ. ಅಷ್ಟೇ ಅಲ್ಲಾ.. ಆ ಹೆಂಗಸರ ಬಣ್ಣ, ಭಾವನೆಗಳಲ್ಲೂ ವೆರೈಟಿ ಬಂದಿದೆ.

ಇಷ್ಟಕ್ಕೆ ಕೊನೆ ಮಾಡಬಹುದಿತ್ತೇನೋ.. ಆದರೆ ಎಮೋಜಿ ಗಂಡಾ ಹೆಣ್ಣಾ..ಅಂತ ಕೇಳಿದಾಗ ಗೊಳ್ ಅಂತ ನಕ್ಕಿದ್ರಲ್ಲಾ ಅದು ನನ್ನ ತಲೆಯಲ್ಲಿ ಕೊರೀತಾ ಇತ್ತು.

ಎಮೋಜಿ ಅಂದ್ರೆ ಬರೀ ಗಂಡು ಹೆಣ್ಣು ಮಾತ್ರ ಅಲ್ಲಾ ಮಚ್ಚಾ.. ಉಭಯಲಿಂಗಿಗಳೂ ಸಹಾ.. ಬೇಕಾದ್ರೆ ಮತ್ತೆ ವಾಟ್ಸ್ ಅಪ್ ನೋಡು ಅಂದೆ.

ಗೆಳೆಯರು ತಕ್ಷಣ ಸ್ಮಾರ್ಟ್ ಫೋನ್ ಸವರಲು ಶುರು ಮಾಡಿದರು.. ಅರೆ.. ಎಂಬ ಉದ್ಘಾರ ತೆಗೆದರು. ಯಾಕೆಂದರೆ ಈಗ ಎಮೋಜಿಗಳಲ್ಲಿ ‘ಗೇ’ಗಳಿದ್ದಾರೆ ‘ಲೆಸ್ಬಿಯನ್’ಗಳಿದ್ದಾರೆ. ಅವರು ಸಂಸಾರ ಮಾಡುವ ಕಲ್ಪನೆಗೂ ಚಿತ್ರ ರೂಪ ಬಂದಿದೆ.

ಈ ಎಲ್ಲಾ ಬದಲಾವಣೆ ಆಗಿದ್ದು ಯಾಕೆ ಗೊತ್ತಾ?

ಎಮೋಜಿಗಳು ಅಪ್ಪ ಹಾಕಿದ ಆಲದ ಮರಕ್ಕೆ ನೇತು ಹಾಕಿಕೊಂಡಿಲ್ಲ ಅವು. ಈಗಿನ ಲಿಂಗ ರಹಿತ ಸಮಾಜದ ಭಾಷೆಯನ್ನೂ ಮಾತನಾಡುತ್ತಿದೆ. ಈಗಿನ ಆಲೋಚನೆಗಳನ್ನು ಒಳಗೊಳ್ಳುತ್ತಿದೆ.

ಹೀಗೆ ಹೇಳುತ್ತಿರುವಾಗಲೇ ಆ ಕಡೆಯಿಂದ ಫೋನ್- ಏನು ಗೊತ್ತಾ ಈ ಬಾರಿ ಮೊಲೆ ಊಡಿಸುತ್ತಿರುವ ಮಹಿಳೆಯ ಚಿತ್ರ ಎಮೋಜಿ ಆಗಿ ಆಯ್ಕೆ ಆಗಿದೆಯಂತೆ ಅಂತ.

ಹೌದಲ್ಲಾ..! ಮೊನ್ನೆ ಮೊನ್ನೆ ತಾನೇ ಮೊಲೆ ಊಡಿಸುತ್ತಾ ಆಸ್ಟ್ರೇಲಿಯಾದ ಸೆನೆಟ್ ನಲ್ಲಿ ಭಾಷಣ ಮಾಡಿದ ಲಾರೀಸಾ ವಾಟರ್ಸ್ ನೆನಪಾದರು ಜನ ಚೇಂಜ್ ಕೇಳ್ತಾರೆ.. ‘ಎಮೋಜಿ’ ಚೇಂಜ್ ಆಗ್ತಿದೆ.

ಕಾರ್ಮಿಕರ ಕೆಲಸದ ಅವಧಿ ಯಡಿಯೂರಪ್ಪ ಹೆಚ್ವಿಸದಿರಲಿ

ಬೆಂಗಳೂರು: ಕೋವಿಡ್ ನೆಪದಲ್ಲಿ ಬಂಡವಾಳಗಾರರಿಗೆ ಕಾಮಿ೯ಕ ಕಾನೂನುಗಳಿಂದ ವಿನಾಯಿತಿ ನೀಡಲು ಸುಗ್ರೀವಾಜ್ಞೆ ತರುವ ಯತ್ನವನ್ನು ರಾಜ್ಯ ಸಕಾ೯ರವು ಕೂಡಲೇ ಕೈಬಿಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಆಗ್ರಹಿಸಿವೆ.

ಕೇಂದ್ರ ಸಕಾ೯ರವು ತರಲು ಉದ್ದೇಶಿಸಿರುವ ಕಾಪೊ೯ರೇಟ್ ಬಂಡವಾಳದ ಪರ ಕಾಮಿ೯ಕರ ಕಾನೂನುಗಳ ತಿದ್ದುಪಡಿ ಭಾಗವಾಗಿ ರಾಜಸ್ಥಾನ ಸಕಾ೯ರದಿಂದ ಆರಂಭಿಸಿ, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಉತ್ತರ ಪ್ರದೇಶದ ಸಕಾ೯ರಗಳು ಕೈಗೊಳ್ಳುತ್ತಿರುವ ಕ್ರಮಗಳ ಹಾದಿಯಲ್ಲಿ ಕನಾ೯ಟಕ ರಾಜ್ಯ ಸಕಾ೯ರವು ಮುಂದಾಗ ಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಕೈಗಾರಿಕಾ ರಂಗದಲ್ಲಿ ಮುಂದುವರೆದ ರಾಜ್ಯಗಳ ಸಾಲಿನಲ್ಲಿರುವ ಕನಾ೯ಟಕ ರಾಜ್ಯವನ್ನು ಇಂತಹ ಕ್ರಮಗಳು ಆಥಿ೯ಕವಾಗಿ ದುಬ೯ಲ ಗೊಳಿಸಲಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕೊಳ್ಳುವ ಶಕ್ತಿಯನ್ನು ಅದು ಕುಂದಿಸಲಿದೆ. ಕೋವಿಡ್ ಲಾಕ್ಡೌನ್ ನಿಂದಾಗಿ ಉಂಟಾಗಿರುವ ಆಥಿ೯ಕ ಸಂಕಷ್ಟವು ಮತ್ತಷ್ಟು ತೀವ್ರಗೊಳ್ಳಲಿದೆ. ಕಾಮಿ೯ಕರನ್ನು ಗುಲಾಮರನ್ನಾಗಿಸಲಿದೆ ಎಂದು ಸಿಪಿಐ(ಎಂ) ರಾಜ್ಯ ಸಕಾ೯ರವನ್ನು ಎಚ್ಚರಿಸಿದೆ.

ಇತರೆ ರಾಜ್ಯ ಸಕಾ೯ರಗಳ ಜೊತೆ ಬಂಡವಾಳಗಾರರನ್ನು ಓಲೈಸಲು ಕನಾ೯ಟಕ ರಾಜ್ಯ ಸಕಾ೯ರವು ಪೈಪೋಟಿಗೆ ಇಳಿದು ಕಾಮಿ೯ಕ ಕಾನೂನುಗಳನ್ನು ಅಮಾನತ್ತುಗೊಳಿಸಲು ಅಥವಾ ವಿನಾಯಿತಿ ನೀಡಲು, ಕೆಲಸದ ಅವಧಿ ಹೆಚ್ಚಳ ಮುಂತಾದ ಕ್ರಮಗಳಿಗೆ ಮುಂದಾದರೆ ಅದು ರಾಜ್ಯದ ದುಡಿಯುವ ಜನತೆಗೆ ಮಾಡುವ ದ್ರೋಹವಾಗತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ. ಉದ್ದೇಶಿತ ವಿನಾಯಿತಿಯಿಂದಾಗಿ ರಾಜ್ಯದ 91 ಶೇಕಡ ಕಾಖಾ೯ನೆಗಳು ಕಾಮಿ೯ಕ ಕಾನೂನುಗಳ ,ವ್ಯಾಪ್ತಿಯಿಂದ ಹೊರಗುಳಿಯಲಿವೆ. ಕಾಮಿ೯ಕರನ್ನು ಬಳಸಿ ಬಿಸಾಕಲು ಬಂಡವಾಳಿಗರಿಗೆ ಮುಕ್ತ ಅವಕಾಶ ಲಭಿಸಲಿದೆ. ಅಂತಹ ಅನಾಹುತಕಾರಿ ಕ್ರಮಕ್ಕೆ ರಾಜ್ಯ ಸಕಾ೯ರವು ಮುಂದಾಗಬಾರದೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಉದ್ದೇಶಿತ ತಿದ್ದುಪಡಿಗಳು ಅಥವಾ ಮಾಲೀಕರಿಗೆ ರಿಯಾಯಿತಿ / ವಿನಾಯಿತಿ ನೀಡಲು ಉದ್ದೇಶಿಸಿರುವ ಕ್ರಮಗಳು ಭಾರತದ ಸಂವಿಧಾನದ ವಿಧಿ 21ಮತ್ತು 24 ರ ಸ್ಪಷ್ಟ ಉಲ್ಲಂಘನೆಯಾಗಲಿದೆ. ವಿಧಿ 53 ರಲ್ಲಿನ ನಿದೇ೯ಶಕ ತತ್ವವನ್ನು ನಿರಾಕರಿಸುತ್ತದೆ.ವಿಧಿ 213, 232 A ಮತ್ತು B ಅಡಿಯ ಅಧಿಕಾರದ ದುರುಪಯೋಗವಾಗುತ್ತದೆ. ಭಾರತವು ಸಹಿ ಮಾಡಿರುವ ಅಂತರಾಷ್ಟ್ರೀಯ ಕಾಮಿ೯ಕ ಸಂಘಟನೆಯ ಕೆಲಸದ ಅವಧಿ, ಶಾಸನಬದ್ದ ನಿರೀಕ್ಷಣೆ, ಸುರಕ್ಷತೆ ಮುಂತಾದ ಒಡಂಬಡಿಕೆಗಳಿಗೆ ವ್ಯತಿರಿಕ್ತವಾಗಲಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಆರೋಗ್ಯ ವಿಮೆ ಏಕೆ‌ ಬೇಕು?

ರಘುನಂದನ್ ಎ.ಎಸ್.


ಆರೋಗ್ಯ ವಿಮೆಯು ವಿಮೆ ಕಂಪನಿಯು ವಿಮಾದಾರನು ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಅಪಘಾತಕ್ಕೊಳಗಾದಾಗ ವೈದ್ಯಕೀಯ ವೆಚ್ಚಗಳಿಗೆ ಆರ್ಥಿಕವಾಗಿ ಖಾತರಿಯನ್ನು ನೀಡುವುದಾಗಿದೆ. ಆದಾಯ ತೆರಿಗೆಯಿಂದ ಕಡಿತವನ್ನು ನೀಡುವ ಮೂಲಕ ಸರ್ಕಾರವು ಆರೋಗ್ಯ ವಿಮೆಯನ್ನು ಉತ್ತೇಜಿಸುತ್ತದೆ.

ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗಿದೆ ಏಕೆಂದರೆ ವೈದ್ಯಕೀಯ ಆರೈಕೆ ಖಾಸಗಿ ಆಸ್ಪತ್ರೆಗಳಲ್ಲಿ ತುಂಬಾ ದುಬಾರಿಯಾಗಿದೆ.

ಕೇವಲ ಒಂದು ಸಣ್ಣ ವಾರ್ಷಿಕ ಪ್ರೀಮಿಯಂ ಪಾವತಿಸುವುದರ ಮೂಲಕ ಇದನ್ನು ತಪ್ಪಿಸಬಹುದು, ಇದು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.

ಉತ್ತಮ ಆರೋಗ್ಯ ವಿಮಾ ಪಾಲಿಸಿಯು ಸಾಮಾನ್ಯವಾಗಿ ವೈದ್ಯರ ಸಮಾಲೋಚನೆ ಶುಲ್ಕಗಳು, ವೈದ್ಯಕೀಯ ಪರೀಕ್ಷೆಗಳ ವೆಚ್ಚಗಳು, ಆಂಬ್ಯುಲೆನ್ಸ್ ಶುಲ್ಕಗಳು, ಆಸ್ಪತ್ರೆಗೆ ದಾಖಲು ಮಾಡುವ ವೆಚ್ಚಗಳು ಮತ್ತು ಆಸ್ಪತ್ರೆಗೆ ದಾಖಲಾದ ನಂತರದ ಚೇತರಿಕೆ ವೆಚ್ಚಗಳನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ಒಳಗೊಂಡಿರುತ್ತದೆ.

ವಿಮಾ ಪಾಲಿಸಿ ಪ್ರಯೋಜನಗಳು


1. ನಗದುರಹಿತ ಚಿಕಿತ್ಸೆ: ನೀವು ವಿಮೆ ಮಾಡಿದ್ದರೆ, ನಿಮ್ಮ ವಿಮಾ ಕಂಪನಿಯು ವಿವಿಧ ಆಸ್ಪತ್ರೆ ನೆಟ್‌ವರ್ಕ್‌ಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವುದರಿಂದ ನೀವು ಹಣವಿಲ್ಲದ ಚಿಕಿತ್ಸೆಯನ್ನು ಪಡೆಯಬಹುದು.

2. ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚದ ವ್ಯಾಪ್ತಿ: ವಿಮಾ ಪಾಲಿಸಿಯು ಖರೀದಿಸಿದ ವಿಮಾ ಯೋಜನೆಗಳನ್ನು ಅವಲಂಬಿಸಿ 60 ದಿನಗಳ ಅವಧಿಯವರೆಗೆ ಪೂರ್ವ ಮತ್ತು ನಂತರದ ಆಸ್ಪತ್ರೆಗೆ ದಾಖಲಾಗುವ ಶುಲ್ಕವನ್ನು ಸಹ ಒಳಗೊಂಡಿದೆ.

3. ಸಾರಿಗೆ ಶುಲ್ಕಗಳು: ವಿಮೆ ಪಾಲಿಸಿಯು ವಿಮಾದಾರರ ಸಾಗಣೆಗೆ ಆಂಬ್ಯುಲೆನ್ಸ್‌ಗೆ ಪಾವತಿಸಿದ ಮೊತ್ತವನ್ನು ಸಹ ಒಳಗೊಂಡಿದೆ.

4. ಯಾವುದೇ ಕ್ಲೈಮ್ ಬೋನಸ್ (ಎನ್‌ಸಿಬಿ): ಹಿಂದಿನ ವರ್ಷದಲ್ಲಿ ಯಾವುದೇ ಚಿಕಿತ್ಸೆಗೆ ವಿಮಾದಾರನು ಹಕ್ಕು ಸಲ್ಲಿಸದಿದ್ದರೆ ವಿಮಾದಾರನಿಗೆ ಪಾವತಿಸುವ ಬೋನಸ್ ಅಂಶ ಇದು.

5. ವೈದ್ಯಕೀಯ ತಪಾಸಣೆ: ವಿಮಾ ಪಾಲಿಸಿಯು ಆರೋಗ್ಯ ತಪಾಸಣೆಗೆ ಆಯ್ಕೆಗಳನ್ನು ಸಹ ಒದಗಿಸುತ್ತದೆ. ನಿಮ್ಮ ಹಿಂದಿನ ಎನ್‌ಸಿಬಿಗಳನ್ನು ಆಧರಿಸಿ ಕೆಲವು ವಿಮೆದಾರರು ಉಚಿತ ಆರೋಗ್ಯ ತಪಾಸಣೆಯನ್ನು ಸಹ ಒದಗಿಸುತ್ತಾರೆ.

6. ಕೊಠಡಿ ಬಾಡಿಗೆ: ವಿಮಾದಾರನು ಪಾವತಿಸುವ ಪ್ರೀಮಿಯಂಗೆ ಅನುಗುಣವಾಗಿ ವಿಮಾ ಪಾಲಿಸಿಯು ಕೋಣೆಯ ವೆಚ್ಚಗಳನ್ನು ಸಹ ಒಳಗೊಂಡಿದೆ.

7. ತೆರಿಗೆ ಲಾಭ: ಆರೋಗ್ಯ ವಿಮೆಯ ಮೇಲೆ ಪಾವತಿಸುವ ಪ್ರೀಮಿಯಂ ಅನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆಯಿಂದ ಕಡಿತಗೊಳಿಸಲಾಗುತ್ತದೆ.

ಆರೋಗ್ಯ ವಿಮೆ ಯೋಜನೆ ಅಥವಾ ಪೂರೈಕೆದಾರರನ್ನು ಆಯ್ಕೆಮಾಡುವಾಗ, ಸಮ್ ಇನ್ಸೂರ್ಡ್, ಪ್ರವೇಶ ವಯಸ್ಸು, ನವೀಕರಣ ಷರತ್ತು, ಆಸ್ಪತ್ರೆ ಕೊಠಡಿ ಬಾಡಿಗೆ ಕ್ಯಾಪಿಂಗ್, ಇನ್ಕ್ಲೂಡಿಂಗ್/ಎಸ್ಕ್ಲ್ಯೂಡಿಂಗ್ ಡೀಸೀಸ್, ಬೋನಸ್ ಮತ್ತು ಉತ್ತಮ ಯೋಜನೆಯನ್ನು ನಿರ್ಧರಿಸಲು ಇತರ ಪ್ರಯೋಜನಗಳನ್ನು ನೋಡಬೇಕು.

ಆರೋಗ್ಯ ವಿಮೆಯನ್ನು ಆಯ್ಕೆಮಾಡುವಾಗ, 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಯಾವುದೇ ಆರೋಗ್ಯ ತಪಾಸಣೆಗ ಒಳಗಾಗಬೇಕಾಗಿಲ್ಲ. ಆದಾಗ್ಯೂ, ಈಗಾಗಲೇ ಕಾಯಿಲೆಗಳು ಯಾವುದಾದರೂ ಇದ್ದರೆ ಅದನ್ನು ಬಹಿರಂಗಪಡಿಸುವ ಅವಶ್ಯಕತೆಯಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರು ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು.

ನೆನಪಿನ ಅಂಗಳದಿ ಕಾಡುವ ನೆನಪು ನನ್ನ ಅಜ್ಜಿ

0

ಶಿಲ್ಪ ಟಿ.ಎಂ


ಈಗಲೂ ದೊಡ್ದಮನೆಯ ಗುಡಿಸಿ ಸಾರಿಸಿರುವಳೇ ನನ್ನಜ್ಜಿ‌ ಎಂದು ನೋಡಲು ಕೂತಹಲ ನನಗೆ.

ಅಜ್ಜಿ‌ ಇನ್ನಿಲ್ಲವಾದರೂ ದೊಡ್ಡಮನೆಯನ್ನು ಅವಳು ಗುಡಿಸಿ, ‌ಸಾರಿಸುತ್ತಿರಬಹುದು ಎಂದು‌ ಇಣುಕಿ ನೋಡುವ ದಿನಗಳೆಷ್ಟೋ ನನಗೆ ಗೊತ್ತಿಲ್ಲ.

ಎಮ್ಮೆಯ ಹಾಲು ಕರೆಯುತ್ತಿದ್ಧ ನನ್ನಜ್ಜಿಯ ಹಿಂದೆ ಚೆಂಬು ಹಿಡಿದು ಹಾಲಿಗೆ ಕಾದು ಅವಳನ್ನೊಮ್ಮೆ ನೋಡುವ ಆಸೆ ,ಹಸಿಮಟ್ಟೆ ಹೊಲೆಗೆ ಇಟ್ಟು ಹಾಲು ಕೆಂಪಗೆ ಕಾಯಿಸಿ ಗಟ್ಟಿ ಮೊಸರಿನ ರುಚಿಯ ತೋರಿಸಿವಳೆ ಮತ್ತೊಮ್ಮೆ ?

ತೊಗರಿ ಬೇಳೆಯ ವಡೆಯನ್ನು ಹೆಂಚ ಮೇಲೆ ಬೇಯಿಸಿ ಸ್ವಲ್ಪ ದೂರದಲ್ಲಿದ್ದ ಮನೆಗೆ ತಲುಪಿಸಿ ವಡೆ ಮಾಡಿದಿನಿ ತಿನ್ನಿ ಎಂದಾಗ ಓದಲು ಕೂತ್ತಿದ್ದ ನಾವು ಓಡಿ ಬಂದು ತಿಂದು ಚಪ್ಪರಿಸುವಾಗ ಅವಳ ಆತ್ಮೀಯ ನಗು, ಇಂದು ಏನೇ ತಿಂದರು ಚಪ್ಪರಿಸುವಂತಿಲ್ಲ .!!ಎಮ್ಮೆ ಹಿಡಿದು, ಕಡ್ಡಿ ಸಿಗಿಯಲು ಚಾಕು ಸೊಂಟಕ್ಕೆ ಸಿಗಿಸಿ ತಾತನ ಜೊತೆ ತೊಟಕ್ಕೆ ಹೊರಟರೆ ವಾಪಸ್ಸು ಆಗುವಾಗ ಅವಳ ಸೆರಗೊಳಗೆ ಅಣಬೆ ಇರಬಹುದಾ, ಬಾರೆ ಹಣ್ಣು ಇರಬಹುದಾ ಎಂದು ಪ್ರಶ್ನೆ ಮೂಡಿ ಅವಳ ಹಿಂದೆಯೆ ಕಾಲು ಓಡುತ್ತಿದ್ದವು.

ಹಣಬೆ ಸಾರಿಗೆ ರಾತ್ರಿ ನೀನು ನನ್ನ ಕರೆಯಬೇಕು, ಊಟ ಮಾಡಲ್ಲ ಎಂದು ಹೇಳಿ ಓದಲು ಕುಳಿತರೆ ಅಣಬೆ ಸಾರಿನ ಘಮದ ಮೇಲೆ ನನ್ನ ಗಮನವಿರುತ್ತಿತ್ತು ……ಬಟ್ಟೆ ತೊಳೆಯಲು ಕೆರೆಗೆ ಹೋದರೆ ಅಜ್ಜಿ ಅಲ್ಲಿಯ ಸೀಬಿ ಗೆಡ್ಡೆ ಕಿತ್ತು ತಂದು ಪಲ್ಲ್ಯ ಮಾಡಿ ನಮಗೆ ತಪ್ಪದೆ ತಲುಪಿಸುತಿದ್ದಳು.

ಹೆಚ್ಚು ನೆನಪಾಗುವುದು ತಲೆಗೆ ಹರಳೆಣ್ಣೆ ಊಟಕ್ಕೆ ಹಪ್ಪಳ ಚಿನಕುರಳಿ ಕೊಳ್ಳುವಾಗ ,ಅವಳು ಅದೆಲ್ಲವ ಮಾಡಿ ಮಡಿಕೆ ಸಾಲಿನಲ್ಲಿ ಜೊೀಪಾನ ಮಾಡಿದ್ಧಳು ಕೊಳ್ಳುವಾಗಿಲ್ಲ …!!!

ಅವಳ ನೆನಪಾಗುವುದು ಸಣ್ಣಗೆ ಇಡುವ ನಮ್ಮ ಹಣೆಯ ಬೊಟ್ಟು ಕಾಣದಾದಗ, ಹಣೆಯ ಅಷ್ಟಗಲ ಕುಂಕುಮ ,ತಲೆಯ ಚೆಂಡು ಹೂ …. ಸಕ್ಕರೆ ಖಾಯಿಲೆಯಿಂದ ಕಾಲು ಕಳೆದುಕೊಂಡಿದ್ಧ ತಾತನನ್ನು ಒಬ್ಬಳೆ ನಿಭಾಯಿಸಿದಳು. ಇನ್ನೆರಡೆ ವರ್ಷಕ್ಕೆ ಸಾವಿನ ಹೆಜ್ಜೆ ಇಟ್ಟು ಕಟ್ಟೆಯ ಕಡೆ ನೆಡೆದ ಅವಳ ಹೆಜ್ಜೆ ಗುರುತುಗಳು ಪ್ರಶ್ನೆ ಮಾಡುತ್ತಿವೆ ?

ಅವಳನ್ನು ಅಪ್ಪಿದ ಕಟ್ಟೆ ಇಂದು ತುಂಬಿಲ್ಲವೇಕೆಂದು ….. ಹಾಲು ಕರೆಯುವ ಎಮ್ಮೆ ಇಲ್ಲ , ಕ್ವಾಡೊಲೆಯಲ್ಲಿ ಕಾದ ಹಾಲಿಲ್ಲ, ಮಜ್ಜಿಗೆ ಮಂತಿನ ಶಬ್ದವಿಲ್ಲ, ಹಣಬೆ ಸಾರಿನ ಘಮವಿಲ್ಲ ……. !!!

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಜಾಹಿರಾತು

ಪಂಚಾಂಗ

ದಿನಾಂಕ : 11, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಸೋಮವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಚೌತಿ
(ನಿನ್ನೆ ಬೆಳಿಗ್ಗೆ 8 ಗಂ॥ 7 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 36 ನಿ।। ತನಕ)
ನಕ್ಷತ್ರ : ಪೂರ್ವಾಷಾಢ
(ಇಂದು ಪ್ರಾತಃಕಾಲ 4 ಗಂ॥ 15 ನಿ।। ರಿಂದ
ಮರುದಿನ ಪ್ರಾತಃಕಾಲ 4 ಗಂ॥ 11 ನಿ।। ತನಕ)
ಯೋಗ : ಸಾಧ್ಯ
ಕರಣ : ಬಾಲವ
ವರ್ಜ್ಯಂ : (ಇಂದು ಪ್ರಾತಃಕಾಲ 2 ಗಂ॥ 41 ನಿ।। ರಿಂದ ಇಂದು ಪ್ರಾತಃಕಾಲ 4 ಗಂ॥ 13 ನಿ।। ತನಕ)(ಇಂದು ಮಧ್ಯಾಹ್ನ 1 ಗಂ॥ 49 ನಿ।। ರಿಂದ ಇಂದು ಸಂಜೆ 3 ಗಂ॥ 24 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 11 ಗಂ॥ 23 ನಿ।। ರಿಂದ ಮರುದಿನ ಪ್ರಾತಃಕಾಲ 0 ಗಂ॥ 58 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 12 ಗಂ॥ 37 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 28 ನಿ।। ತನಕ)(ಇಂದು ಸಂಜೆ 3 ಗಂ॥ 12 ನಿ।। ರಿಂದ ಇಂದು ಸಂಜೆ 4 ಗಂ॥ 3 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 7 ಗಂ॥ 21 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 57 ನಿ।। ತನಕ)
ಗುಳಿಕ : (ಇಂದು ಮಧ್ಯಾಹ್ನ 1 ಗಂ॥ 48 ನಿ।। ರಿಂದ ಇಂದು ಸಂಜೆ 3 ಗಂ॥ 24 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 10 ಗಂ॥ 35 ನಿ।। ರಿಂದ ಇಂದು ಬೆಳಿಗ್ಗೆ 12 ಗಂ॥ 11 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 45 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 39 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ಧನು

ಮೇಷ ರಾಶಿ ಭವಿಷ್ಯ : 11 May 2020
ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ. ಆದರೆ ತುಂಬಾ ಸಂತೋಷ ಸ್ವಲ್ಪ ಸಮಸ್ಯೆಗಳನ್ನು ಉಂಟುಮಾಡಬಹುದಾದ್ದರಿಂದ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಇಂದು ನೀವು ಒಳ್ಳೆಯ ಹಣ ಮಾಡುತ್ತೀರಿ – ಆದರೆ ವೆಚ್ಚಗಳಲ್ಲಿ ನಿಮಗೆ ಉಳಿಸಲು ಕಷ್ಟವಾಗಿಸುತ್ತದೆ. ಸ್ನೇಹಿತರು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಉತ್ತಮ ಸಲಹೆ ನೀಡುತ್ತಾರೆ. ಅದೃಷ್ಟ ಸಂಖ್ಯೆ: 1

ವೃಷಭ ರಾಶಿ ಭವಿಷ್ಯ : 11 May 2020
ನೀವು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಇದು ನಿಮ್ಮನ್ನು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಕ್ರಿಯಗೊಳಿಸುತ್ತದೆ. ಪ್ರಮುಖ ಜನರು ವಿಶೇಷ ವರ್ಗ ಹೊಂದಿರುವ ಯಾವುದಕ್ಕಾದರೂ ಹಣಕಾಸು ನೀಡಲು ಸಿದ್ಧವಾಗಿರುತ್ತಾರೆ. ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವುದು. ಇಂದು ನೀವು ಎಂತಹ ಒಳ್ಳೆಯ ಕೆಲಸ ಮಾಡಿದ್ದೀರೆಂದು ತೋರಿಸಲು ನಿಮ್ಮ ಪ್ರೀತಿ ಅರಳುತ್ತದೆ. ಇಂದು ನೀವು ಕಚೇರಿಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ. ನಿಮ್ಮ ವಿಶೇಷ ಯಾರಾದರೂ ಮಾತ್ರ ಇಂದು ನಿಮಗೆ ದ್ರೋಹ ಮಾಡಬಹುದು. ಅದೃಷ್ಟ ಸಂಖ್ಯೆ: 1

ಮಿಥುನ ರಾಶಿ ಭವಿಷ್ಯ : 11 May 2020
ನಿಮ್ಮ ಸಂಗಾತಿಯ ಆರೋಗ್ಯ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ. ಇತರರಿಗೆ ನಿಮ್ಮ ಸಮಯ ನೀಡಲು ಒಳ್ಳೆಯ ದಿನ. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ನೀವು ನಿಮ್ಮ ಕೆಲಸದಲ್ಲಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ಸಕಾಲಿಕ ಮತ್ತು ಶೀಘ್ರ ಕ್ರಮ ನಮ್ಮನ್ನು ಉಳಿದವರಿಗಿಂತ ಮುಂದಿಡುತ್ತದೆ. ಅದೃಷ್ಟ ಸಂಖ್ಯೆ: 8

ಕರ್ಕ ರಾಶಿ ಭವಿಷ್ಯ : 11 May 2020
ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಪ್ರಯತ್ನಿಸಿ ಮತ್ತು ತಡರಾತ್ರಿ ಕೆಲಸ ಮಾಡುವುದನ್ನು ತಪ್ಪಿಸಿ. ಯಾರಾದರೂ ನಿಮ್ಮ ನೆರೆಹೊರೆಯವರು ಇಂದು ನಿಮ್ಮ ಹತ್ತಿರ ಹಣ ಸಾಲ ಕೇಳಲು ಬರಬಹುದು, ಅವರಿಗೆ ಸಾಲ ಕೊಡುವುದಕ್ಕಿಂತ ಮುಂಚೆ ಅವರ ನಂಬಿಕೆಯನ್ನು ಅಗತ್ಯವಾಗಿ ಪರೀಕ್ಷಿಸಿ, ಇಲ್ಲದಿದ್ದರೆ ಹಣದ ನಷ್ಟವಾಗುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ ಭವಿಷ್ಯ : 11 May 2020
ನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಕಳೆದ ದಿನಗಳನ್ನು ಹೋಲಿಸಿದರೆ ಇಂದು ಆರ್ಥಿಕ ಉತ್ತಮವಾಗಲಿದೆ ಮತ್ತು ನೀವು ಹೆಚ್ಚಿನ ಹಣವನ್ನು ಪಡೆಯುತ್ತೀರಿ . ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಪ್ರೇಮನಿವೇದನೆ ನಿಮ್ಮ ಹೊರೆಯನ್ನು ಇಳಿಸುವುದರಿಂದ ನಿಮಗೆ ಆನಂದವಾಗಬಹುದು. ನಿಮ್ಮ ಬಾಸ್ ಗಮನಿಸುವ ಮೊದಲೇ ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಿ. ಅದೃಷ್ಟ ಸಂಖ್ಯೆ: 1

ಕನ್ಯಾ ರಾಶಿ ಭವಿಷ್ಯ : 11 May 2020
ನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ದೂರದ ಸಂಬಂಧಿಗಳಿಂದ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವುದು. ಅದೃಷ್ಟ ಸಂಖ್ಯೆ:8

ತುಲಾ ರಾಶಿ ಭವಿಷ್ಯ : 11 May 2020
ನೀವು ಇಂದು ಮಾಡುವ ಕೆಲವು ದೈಹಿಕ ಬದಲಾವಣೆಗಳು ಖಂಡಿತವಾಗಿಯೂ ನಿಮ್ಮ ನೋಟವನ್ನು ವರ್ಧಿಸುತ್ತವೆ. ಇಂವು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ ಮಗಳ ಅನಾರೋಗ್ಯ ನಿಮ್ಮ ಮನಸ್ಸಿಗೆ ಅಸಮಾಧಾನ ತರುತ್ತದೆ. ಅವಳು ತನ್ನ ಅನಾರೋಗ್ಯದ ಜೊತೆ ಹೋರಾಡುತ್ತಿದ್ದ ಹಾಗೆ ಅವಳ ಚೈತನ್ಯವನ್ನು ಉದ್ದೀಪನಗೊಳಿಸಲು ಅವಳಿಗೆ ನಿಮ್ಮ ಪ್ರೀತಿಯನ್ನು ನೀಡಿ. ಪ್ರೀತಿಯ ಶಕ್ತಿ ಗಮನಾರ್ಹವಾದ ಚಿಕಿತ್ಸೆಯ ಸಾಮರ್ಥ್ಯವನ್ನು ಹೊಂದಿದೆ. ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ ಭವಿಷ್ಯ : 11 May 2020
ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ -ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನಿಮ್ಮ ಕತ್ತಲೆಯ ಜೀವನ ನಿಮ್ಮ ಸಂಗಾತಿಗೆ ಒತ್ತಡ ತರಬಹುದು. ಅದೃಷ್ಟ ಸಂಖ್ಯೆ: 3

ಧನು ರಾಶಿ ಭವಿಷ್ಯ : 11 May 2020
ಸಾಮಾಜಿಕ ಜೀವನಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಕೆಲಸದ ಸ್ಥಳದಲ್ಲಿ ಅಥವಾ ವ್ಯಾಪಾರದಲ್ಲಿ ನಿಮ್ಮ ಯಾವುದೇ ಅಜಾಗರೂಕತೆ ಇಂದು ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ನಿಮ್ಮ ಮಕ್ಕಳು ನಿಮ್ಮ ಉದಾರ ವರ್ತನೆಯ ದುರುಪಯೋಗ ಮಾಡಲು ಬಿಡಬೇಡಿ. ನಿಮ್ಮ ಸಂಪೂರ್ಣ ಹಾಗೂ ಪ್ರಶ್ನಾತೀತ ಪ್ರೀತಿ ಒಂದು ಜಾದುವಿನಂಥ ಸೃಜನಶೀಲ ಶಕ್ತಿಯನ್ನು ಹೊಂದಿದೆ. ವಿವಾದಗಳಿರಲಿ ಅಥವಾ ಕಚೇರಿ ರಾಜಕೀಯವಿರಲಿ; ನೀವು ಇಂದು ಎಲ್ಲದರಲ್ಲೂ ಅದ್ಭುತವಾಗಿರುತ್ತೀರಿ. ಅದೃಷ್ಟ ಸಂಖ್ಯೆ: 9

ಮಕರ ರಾಶಿ ಭವಿಷ್ಯ : 11 May 2020
ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹಣ ನಿಮಗೆ ಅಗತ್ಯವಾಗಿದೆ ಆದರೆ ನಿಮ್ಮ ಸಂಬಂಧಗಳನ್ನು ಹಾಳುಮಾಡುವಷ್ಟು ಹಣದ ಬಗ್ಗ್ಗೆ ಗಂಭೀರವಾಗಬೇಡಿ. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಇಂದು ನೀವು ನಿಮ್ಮ ಸ್ನೇಹಿತನ ಅನುಪಸ್ಥಿತಿಯಲ್ಲಿ ಅವರ ಸುಗಂಧವನ್ನು ಅನುಭವಿಸುತ್ತೀರಿ. ಪ್ರಮುಖ ವ್ಯಾಪಾರ ಸಮಾಲೋಚನೆಯ ಬಗ್ಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಅದೃಷ್ಟ ಸಂಖ್ಯೆ: 9

ಕುಂಭ ರಾಶಿ ಭವಿಷ್ಯ : 11 May 2020
ನಿಮ್ಮ ಇತರರನ್ನು ಶ್ಲಾಘಿಸುವ ಮೂಲಕ ಅವರ ಯಶಸ್ಸನ್ನು ಆನಂದಿಸುವ ಸಾಧ್ಯತೆಗಳಿವೆ. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು ಕೇಳಬಹುದು. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ-ನಿಮ್ಮ ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಟೀಕೆ ಎದುರಿಸಬೇಕಾಗಬಹುದು. ಇಂದು ಪ್ರಣಯದ ಯಾವುದೇ ಆಸೆಯಿಲ್ಲ ನಿಮ್ಮ ಸಂಗಾತಿಯ ಪ್ರೀತಿ ನಿಜವಾಗಿಯೂ ಭಾವಪೂರ್ಣವಾಗಿದೆ ಎಂದು ಇಂದು ನೀವು ತಿಳಿದುಕೊಳ್ಳುತ್ತೀರಿ. ಅದೃಷ್ಟ ಸಂಖ್ಯೆ: 7

ಮೀನ ರಾಶಿ ಭವಿಷ್ಯ : 11 May 2020
ನಿಮ್ಮ ಸಂಜೆ ವಿಭಿನ್ನ ಪ್ರತಿಕ್ರಿಯೆಗಳಿಂದ ಗುರುತಿಸಲ್ಪಡುತ್ತದೆ ಹಾಗೂ ಇದು ನಿಮ್ಮನ್ನು ಉದ್ವಿಗ್ನವಾಗಿರಿಸಬಹುದು. ಆದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ – ನಿಮ್ಮ ಸಂತೋಷ ನಿಮಗೆ ನಿರಾಸೆಗಿಂತ ಹೆಚ್ಚು ಆನಂದ ನೀಡುತ್ತದೆ. ಅದೃಷ್ಟ ಸಂಖ್ಯೆ: 5

My Mother

0

ಗೌತಮಕೃಷ್ಣ ಎಂ.


I love you mom

I like my mother most

Mom

Mama

Mother give me life

I love my mother

And

Today is the 10th may

Today is mothers day

My mother is the best in the world

I love my mother for ever !

ಅನ್ನ ಹಾಕವ್ವೋ ಇವತ್ತೂ ಇಟ್ಟೇ ತಿನ್ಬೇಕ ಅಂದ್ರೇ…

0

ಶೋಭಾ


ದೇವರು ಭಕ್ತಿಯಿಂದ ಬೇಡಿದ್ರೆ ಕೇಳಿದನ್ನೆಲ್ಲಾ ಕೊಡ್ತಾನಂತೆ. ದೇವರು ಅಂತಾ ಇದ್ದಾರೋ ಇಲ್ವೋ ಗೊತ್ತಿಲ್ಲ ಆದರೆ ಅದೊಂದು ನಂಬಿಕೆ ಮಾತ್ರ, ಇದೆ.

ನಾನು ಮಾತ್ರ ಒಬ್ಬಳನ್ನ ನೋಡಿದ್ದೀನಿ ಅವರು ಖಂಡಿತವಾಗಿಯೂ ದೇವರೆ . ದೇವರು ಕೇಳಿದ್ದು ಮಾತ್ರ ಕೊಟ್ರೇ ಇವಳು ಕೇಳೋ ಮುಂಚೇನೆ ಕೊಡ್ತಾಳೆ ಬೇಕಾದರೆ ತನ್ನ ಸರ್ವಸ್ವವನ್ನೂ ಕೂಡ. ಅವಳು ಅಮ್ಮಾ….!!

ನೆನಪಿದ್ಯಾ ಆ ದಿನಗಳು ಹಬ್ಬಕ್ಕೆ ನಮಗೆಲ್ಲಾ ಹೊಸ ಬಟ್ಟೆ ಹಾಕ್ಸಿ ತಾನು ಮಾತ್ರ ಹಳೆಯ ಸೀರೆಯಲ್ಲೆ ಸಮಾಧಾನ ಪಟ್ಕೊತಿದ್ಲು. ಕೇಳಿದ್ರೇ ಹೇಳುತಿದ್ಲು, ಏ.. ನನಗ್ಯಾಕ್ ಹೊಸಬಟ್ಟೆ ನನ್ನ ಹತ್ರ ಈಗ್ಲೇ ಬೇಕಾದಷ್ಟು ಇದೆ ಅಂತ.

ನಿಜಕ್ಕೂ ಅವಳಲ್ಲಿ ಬೇಕಾದಷ್ಟು ಇತ್ತು. ಅದು ಅವಳ ನಿಷ್ಕಲ್ಮಷವಾದ ಪ್ರೀತಿ. ಪ್ರತಿ ಸಲ ನಾವು ಆಟ ಆಡಲು ಹೋಗಿ ಗಾಯ ಮಾಡ್ಕೊಂಡು ಬಂದಾಗೆಲ್ಲಾ ಸರೀಗ್ ಬೈತಿದ್ಲು. ಆಗ ಆ ಗಾಯಕ್ಕೆ ಮುಲಾಮು ಹಚ್ಚೋವಾಗೆಲ್ಲಾ ಆಕೆಯ ಕಣ್ಣಲ್ಲಿ ಜಿನುಗುತಿದ್ದ ನೀರು ಹೇಳ್ತಿತ್ತೂ, ಬಿದ್ದಿದ್ದೂ ನಾನಾದ್ರೂ ನೋವಾಗಿರೋದು ಅವಳಿಗೆ ಅಂತಾ…

ಇವತ್ತು ನಾವೆಲ್ಲಾ ಸಾಕಷ್ಟು ಬೆಳೆದಿದ್ದೀವಿ, ಅಗತ್ಯಕ್ಕಿಂತ ಜಾಸ್ತಿನೆ ಬೆಳೆದಿದ್ದೀವಿ.
ನಮ್ಮ ಅಮ್ಮನತ್ರ ಕೂತ್ಕೊಂಡು ಮಾತಾಡೋಕು ಟೈಮ್ ಇಲ್ಲದಷ್ಟು ಬೆಳೆದಿದ್ದೀವಿ. ಟೈಮ್ ಇದ್ರೂ ಏನ್ ಮಾತಾಡೋದು ಅವಳತ್ರ, ಅವಳಿಗೆ ಏನ್ ತಾನೆ ಗೊತ್ತಿದೆ ಅಂತ….?

ಆದರೆ ತನ್ನ ಒಡಲೊಳಗಿನ ನೋವು ಮಾತ್ರ ಆಕೆ ಯಾರಿಗೂ ಕಾಣದಂತೆ ತನ್ನ ಸೆರಗಂಚಿನಲ್ಲಿ ಬಚ್ಚಿಟ್ಟುಕೊಂಡು ಏನೂ ಅರಿಯದವಳಂತೆ ಒಲೆಯ ಮೇಲೆ ಅರ್ಧಂಬರ್ಧ ತಿರುವಿ ಇಟ್ಟಿದ್ದ ಇಟ್ಟಿನ ಪಾತ್ರೆ ಓಗೊಲೆ ಮೇಲೆತ್ತಿಡಲು ಹೋಗ್ತಾಳೆ. ಅದು ಅಮ್ಮಾ.

ಎಷ್ಟೋ ಸಲ ದೀಪಾವಳಿಯ ದಿನ ಎಲ್ಲರ ಮನೆಯಲ್ಲೂ ಪಟಾಕಿಯ ಸದ್ದು ಸಡಗರ ಸಂಭ್ರಮದೊಂದಿಗೆ ಹಬ್ಬವನ್ನು ಮಾಡ್ತಿದ್ದಾಗ, ತನ್ನ ಮಕ್ಕಳಿಗೆ ಪಟಾಕಿ ತಂದುಕೊಡಲು ಕಾಸಿಲ್ಲದೆ ಮನೆಯಿಂದ ಆಚೆ ಬಿಡದೆ “ಪಟಾಕಿಯ ಬೆಂಕಿ ಕಣ್ಣಿಗೆ ಬಡಿಯುತ್ತೆ ಅಂತ ಸುಳ್ಳು ಹೇಳಿ ತನ್ನ ಮಡಿಲಿನಲ್ಲಿಟ್ಟುಕೊಂಡು ಹಬ್ಬದ ಅಡುಗೆ ಅಂತ ಮಾಡಿದ್ದ ಬೆಳಿಗ್ಗೆ ಅನ್ನಕ್ಕೆ ಚೂರು ಮೊಸರಾಕಿ ತಿನ್ನಿಸಿ ಮಲಗಿಸಿ ತಾನು ಹಸಿದು ಮಲಗಿದವಳ ಮೊಗ್ಗಲ ದಿಂಬೆಲ್ಲಾ ನೆಂದು ನೀರಾಗಿರುತಿತ್ತೂ. ಯಾಕಂದ್ರೆ ಅನ್ನ ಕಾಣ್ತಾ ಇದ್ದದ್ದೇ ಹಬ್ಬ ಹರಿದಿನಗಳಲ್ಲಿ ಮಾತ್ರ, ಅದೂ ಚೂರು ಪಾರು.
ಅದು ಅಮ್ಮ.

ಒಮ್ಮೆ ಉಗಾದಿ ಹಬ್ಬದ ದಿನ ಮನೆಯ ಬಾಗಿಲಿಗೆ ಹಸಿರು ತೋರಣ ತೊಡಿಸಿ ಸಿಂಗಾರ ಮಾಡುವಾಗ ನಮಗೆಲ್ಲಾ ಪಕ್ಕದ ಮನೆಯ ಊರಣದ ಘಮ ಮೂಗಿಗೆ ತಟ್ಟಿತ್ತು ಆ ಮನೆಯಲ್ಲಿ ಮಕ್ಕಳು ಎಣ್ಣೆ ಸ್ನಾನ ಮಾಡಿ ಹೊಗೆದಿಟ್ಟಿದ್ದ ಅಂಗಿಯನ್ನು ತೊಟ್ಟು ಬೀದಿಯಲ್ಲಾ ನಲವತ್ತು ರೌಂಡ್ ಹಾಕೊಂಡು ಬಂದಿದ್ರೂ ಮನೆಯೊಳಗೆ ಊರಣದ ಘಮಲು ಬರುತ್ತಿರಲಿಲ್ಲ.

ಹಬ್ಬದ ದಿನ ಅಪ್ಪ ಮನೆಗೆ ಬರುವ ದಾರಿಯನ್ನು ಅಮ್ಮಾ ಕಾದು ಕೂತಿರಬೇಕಿತ್ತು. ಅಪ್ಪ ತಂದ ಜೋಳಿಗೆಯಲ್ಲಿ ಅಮ್ಮ ಅಕ್ಕಿ ಕಾಳುಗಳನ್ನು ಹೆಕ್ಕಿ ತೆಗೆದು ಸಿಕ್ಕಿದ ಪಾವೋ ಅಚ್ಚೇರೋ ಅಕ್ಕಿಯನ್ನ ತೊಳೆದು ಸಗಣಿಯಿಂದ ತಾರಿಸಿ ರಂಗೋಲೆ ಬಿಟ್ಟು ವಪ್ಪಾ ಮಾಡಿದ್ದ ಆ ಹಸಿ ಒಲೆಯಮೇಲೆ ಇಡುತಿದ್ಲು.

ಬೆಂದ ಅನ್ನವನ್ನ ಮೊದಲು ದೇವರಿಗೆ ಎಡೆ ಇಟ್ಟು ಪೂಜೆ ಆದ ನಂತರವಷ್ಟೇ ಮಕ್ಕಳಿಗೆ ತಣಿಗೆಯಲ್ಲಿ ಮುದ್ದೆ ಸಾರು. “ಅನ್ನ ಹಾಕವ್ವೋ ಇವತ್ತೂ ಇಟ್ಟೇ ತಿನ್ಬೇಕ ಅಂದ್ರೇ…

ಹೇಳೋಳೂ, ಹೂಂ ಅದು ಉಣ್ಕೋ ಆಮೇಲೆ ಹೊಟ್ಟೆ ತುಂಬಾ ಅನ್ನ ಉಣ್ಣೂವಂತೆ ಅಂತಾ ನೀರು ತರೋಕೆ ಕೋಣೆಯೊಳಕ್ಕೆ ಹೋದರೆ ಇಟ್ಟು ಉಂಡೂ ಅವ್ವಾ ಅನ್ನಾ ಅನ್ನೋವರೆಗೂ ಆಚೆ ಬರ್ತಿರಲಿಲ್ಲಾ. ಯಾಕಂದ್ರೆ ಅವಳಿಗೆ ಅಳೋಕೆ ಅಂತ ಜಾಗ ಇದ್ದದ್ದೇ ಕೋಣೆಯಲ್ಲಿದ್ದ ಸಣ್ಣ ಜಾಗ.
ಅದು ಅಮ್ಮಾ .

ಮಾರನೇ ದಿನ ವಸ್ತೊಡಕು. ಎಲ್ಲರ ಮನೆಯಲ್ಲೂ ಬೆಳಿಗ್ಗೆ ಇಂದಲೇ ಕೋಳಿ/ಮಾಂಸ ಘಮ್ ಅನ್ನೋ ವಾಸನೆಯೊಂದಿಗೆ ಎಚ್ಚರ ಆಗ್ತಿದ್ದ ಮಕ್ಕಳಿಗೆ ಅವಳೇಳೋಳೂ ಅಪ್ಪನು ತರೋಕ್ಕೋಗವ್ರೆ ಬರ್ತರೆ ಮಖಾ ತೊಳ್ಕಂಡೂ ಅನ್ನ ಉಣ್ಕಳಿ ಅಷ್ಟರಲ್ಲಿ ನಿಮ್ಮಪ್ಪ ತಂದ್ಮೇಲೆ ನಾವು ಮಾಡೂವ ಅಂತಾ ಹೇಳಿ ಮಖಾ ತೊಳೆದು ನೆನ್ನೆ ಮಿಕ್ಕಿದ್ದ ಇಟ್ಟೋ ಅನ್ನಕ್ಕೋ ಮೊಸರು ಜಾಸ್ತಿ ಬೇಕಾಗುತ್ತೆ ಅಂತಾ ನೀರ್ ಮಜ್ಜಿಗೆ ಮಾಡಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪುಹಾಕಿ ಮಕ್ಕಳಿಗೆ ಕೊಟ್ಟು ಮದ್ಯಾಹ್ನ ಎರಡು, ಮೂರು,ನಾಲ್ಕು, ಗಂಟೆ ಆದರು ಬಾರದನ್ನು ಕಂಡ ಅವ್ವಾ ಮನೆಯ ಮೊಗ್ಗಲಲ್ಲೆ ಇದ್ದ ಹಿಪ್ಪುನೇರಳೆ ತೋಟಕ್ಕೆ ಹೋಗಿ ಉಪ್ಸಾರಿಗೆ ಬೇಕಾಗುವ ಸೊಪ್ಪು ತಂದು ಮುದ್ದೆ ಮಾಡಿ ಉರುಳಿಕಾಳು ಉರಿದು ಉಪ್ಸಾರ್ ಮಾಡಿ ಹಸಿವು ತಾಳದೆ ಸುಸ್ತಾಗಿ ಮಲಗಿದ್ದ ಮಕ್ಕಳಿಗೆಬ್ಬಸಿ ತಣಿಗೆಗೆ ಹಾಕೊಟ್ಟರೆ ಮೃಷ್ಟಾನ್ನ ಭೋಜನ ಸಿಕ್ಕಂತೆ ತಿಂದು ಮುಗಿಸಿದ್ರೂ ಐದೂ ಮಕ್ಕಳು. ಮಕ್ಕಳಿಗೆ ಮರೆತೆ ಹೋಗಿತ್ತೂ ಅವತ್ತು ವಸ್ತೊಡಕು ಅಂತಾ. ಅದು ಅಮ್ಮ.

ಹೌದಲ್ವಾ…
ಹಾಗಿದ್ರೇ ಒಂದು ಸಲ ಕಣ್ ಮುಚ್ಕೊಳ್ಳಿ, ಮುಚ್ಕೊಂಡ್ರಾ…
ನಿಮ್ಮ ತಾಯಿ ನಿಮಗೆ ಅಂತ ಏನೆಲ್ಲಾ ಕಷ್ಟಪಟ್ಟಿದ್ದಾರೆ ಅಂತಾ ಒಮ್ಮೆ ಯೋಚನೆಮಾಡಿ, ಯೋಚನೆಮಾಡಿ. ಅಂತಾ ತಾಯಿನಾ ನಾವು ದೂರ ಮಾಡ್ಕೊತ್ತಿದ್ದೀವಿ ಅಂತ ನೋವಾಗುತ್ತಲ್ವಾ..? ನೋವಾಗುತ್ತಲ್ವಾ..?

ಆಗಿದ್ದಾಗೋಗಿದೆ ಬಿಟ್ಬಿಡಿ. ಇವತ್ತು ಮತ್ತೆ ಮಕ್ಕಳಾಗಿ. ಒಂದ್ಸಲ ನಿಮ್ಮ ತಾಯಿನ ಪ್ರೀತಿಯಿಂದ ತಬ್ಕೊಳ್ಳಿ. ತುಂಬಾ ಬೆಳೆದಿದ್ದೀವಿ ಹೇಗಪ್ಪಾ ತಬ್ಕೊಳ್ಳೋದು ಅಂತ ನಾಚಿಕೆ ಅನ್ಸುತ್ತಾ..? ತಾಯಿ ಮುಂದೆ ಮತ್ತೆ ಮಗುವಾಗಲು ಅದೆಂಥಾ ನಾಚಿಕೆ. ಒಂದ್ಸಲ ಅವಳನ್ನ ತಬ್ಕೊಳ್ಳಿ ಆ ಜೀವಾ ನ , ಒಂದೇ ಒಂದು ಸಲ ಕೇಳಿ, ”ಹೇಗಿದ್ದೀಯಾ” ಅಂತಾ…
ನೀವು ಆ ರೀತಿ ಕೇಳಿದ ತಕ್ಷಣ ಆ ಜೀವ ಬಹಳ ಖುಷಿಪಡುತ್ತೆ….
JUST LOVE YOUR LIFE
LOVE YOUR MOTHER.

ಇಂದಿಗೂ “ಅಮ್ಮಾ” ಅಂದ್ರೇ ಅದೊಂದು ಮಹಾನ್ ಗ್ರಂಥಗಳಲ್ಲಡಗಿರುವ ಶಬ್ದವೇ ”ಶಕ್ತಿ” ಆ “ಮಹಾಶಕ್ತಿ”ಯೇ ಅಮ್ಮನ ರೂಪದಲ್ಲಿ ಬಂದು ನಮಗೆ ಜನುಮ ನೀಡಿ ಬದುಕು ಕಟ್ಟಿಕೊಡುತ್ತಾಳೆ. ಅವಳೇ ಅಮ್ಮಾ…..

ಅಮ್ಮ ಯಾವತ್ತೂ ಅಮ್ಮನೇ. ಇದು ಮನೆಯಲ್ಲೂ ಸತ್ಯ, ದೇಶದಲ್ಲೂ ಸತ್ಯ ಪ್ರಪಂಚಕ್ಕೂ “ಅಮ್ಮ” ಅನ್ನೋ ಮಾತೇ ಸತ್ಯ…
ಅಮ್ಮನ ಹೆಸರಿನಲ್ಲೆ ಅಡಗಿದೆಯೊಂದು ದಿವ್ಯ “ಮಹಾಶಕ್ತಿ “

ಅಮ್ಮ ಯಾವತ್ತೂ ನಿರಂತರ

0

ಧನಂಜಯ ಕುಚ್ಚಂಗಿಪಾಳ್ಯ


ಅಮ್ಮ ಅಮ್ಮ …ನೋವು ಕಂಡಾಕ್ಷಣ… ಆ ನೋವು ದೇಹಕ್ಕೆ ತಗುಲಿದಾಕ್ಷಣ… ಏಕೆ ಹೀಗೆ? ಅದೇ ಅಮ್ಮ ನಿಗೂ ತಾನೂ ಜನ್ಮ ಕೊಟ್ಟ ಮಗುವಿಗೂ ಇರುವ ಅವಿನಾಭಾವ ಸಂಬಂಧ..

ಜೊತೆಗಿರಲಿ ,ಇಲ್ಲದಿರಲಿ ನೋವಿಗೆ ಮೊದಲ ಮದ್ದು ಅಮ್ಮ ಎಂಬ ಶಬ್ದ. ಮೊದಲ ಗುರೂವು ಅಮ್ಮ, ಕೊನೆಯ ನೋವಿಗೊ ಅಮ್ಮ.. ಜಗತ್ತಿನಲ್ಲಿ ಪರ್ಯಾಯ ಪದವಿಲ್ಲ.. ಇಂಥ ಅಮ್ಮನಿಗೂ ಒಂದೂ ದಿನ ಮೀಸಲೇ…! ಆಶ್ಚರ್ಯ.. ತೀರಿಸಲಾಗದ, ವರ್ಣಿಸಲಾಗದ,ಈ ಅಮ್ಮನಿಗೆ ಪ್ರತಿ ನಿಮಿಷವೂ ಪ್ರತಿ ಜೀವಿಗೂ ಅಮ್ಮಂದಿರ ದಿನವೇ..

ಸಂಬಂಧಗಳಲ್ಲಿ ಯಾವುದೇ ದಾಕ್ಷಿಣ್ಯಕ್ಕೊಳಗಾಗದೇ ಪ್ರತಿ ಕ್ಷಣ ಅಮ್ಮನ ಸೇವೆ ಮಾಡುವವರೇ ಅಮ್ಮನ ದಿನಾಚರಣೆಗೆ ಅರ್ಹರು.. ತೋರಿಕೆಯ ವ್ಯಕ್ತಿಯಲ್ಲ ಅಮ್ಮ.. ಒಂದು ದಿನಕ್ಕೆ ಮೀಸಲಲ್ಲ ಅಮ್ಮ..

ಅಮ್ಮ ಯಾವತ್ತೂ ನಿರಂತರ.. ಸಂಬಂಧಗಳ ಸುಳಿಯಲ್ಲಿ ಸಿಕ್ಕಿ ಕೊಂಡ ನಮಗೆಲ್ಲಾ ಅಮ್ಮನ ಋಣವನ್ನು ತೀರಿಸಬೇಕಾದ್ದು ನಮ್ಮಲ್ಲೆರ ಆದ್ಯ ಕರ್ತವ್ಯ… ಏಕೆಂದರೆ ಅಮ್ಮ ಇರುವವರೆಗೂ ನಾವೆಲ್ಲರೂ ಇರಬಲ್ಲೆವು..

ಆದರೆ ನಾವಿರುವವರೆಗೂ ಅಮ್ಮ ಇರುವುದಿಲ್ಲ… ಇದನ್ನು ನೆನಪಿನಲ್ಲಿ ಇಟ್ಟುಕೊಂಡು ಈ ಮಾಹನ್ ವ್ಯಕ್ತಿತ್ವಕ್ಕೆ ಸದಾ ಸೇವೆ ಸಲ್ಲಿಸುತ್ತಾ, ಪ್ರತಿ ದಿನವನ್ನು ಅಮ್ಮನ ದಿನವಾಗಿಸೋಣ….

ವೈ.ಎನ್.ಹೊಸಕೋಟೆಗೆ ತಬ್ಲಿಘಿಗಳ ಬ್ಯಾಗ್?

ಕೊರೊನಾ ಮುಕ್ತವಾಗಿದ್ದ ಪಾವಗಡದಲ್ಲಿ 3 ಮಂದಿ ತಬ್ಲಿಘಿಗಳಿಗೆ ಕೋವಿಡ್ 19 ದೃಢಪಟ್ಟು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿತ್ತು. ಇದೀಗ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳ ಬ್ಯಾಗ್ ಗಳನ್ನು ವೈ.ಎನ್.ಹೊಸಕೋಟೆಯ ಅವರ ಮನೆಗಳಿಗೆ ವ್ಯಕ್ತಿಯೊಬ್ಬರು ಕಾರ್ ನಲ್ಲಿ ಕೊಂಡೊಯ್ದು ತಲುಪಿಸಿದ್ದಾರೆ ಎಂಬ ವಿಚಾರ ವಿವಾದವನ್ನು ಸೃಷ್ಠಿಸಿದೆ. 

ತಬ್ಲಿಘಿಗಳ ಬ್ಯಾಗ್ ಗಳನ್ನು ಶನಿವಾರ ವೈ.ಎನ್.ಹೊಸಕೋಟೆಯ ವ್ಯಕ್ತಿಯೊಬ್ಬ ಕಾರ್ ನಲ್ಲಿ ತಂದು ತಬ್ಲಿಘಿಗಳ  ಕುಟುಂಬ ಸದಸ್ಯರಿಗೆ ತಲುಪಿಸಿದ್ದಾನೆ.  ತಬ್ಲಿಘಿಗಳಲ್ಲಿ ಒಬ್ಬರ ಮಗಳು    ಬ್ಯಾಗ್ ಕಂಡ ಕೂಡಲೇ ಅಪ್ಪ ಜಮಾತ್ ಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್ ಇದು ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡ  ಗ್ರಾಮಸ್ಥರು  ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ತಬ್ಲಿಘಿಗಳ ಮನೆಗೆ ಹೋಗಿ  ತಂದಿದ್ದ  ವಾಹನಕ್ಕೆ ಔಷಧಿ ಸಿಂಪಡಿಸಿ  ಬ್ಯಾಗ್ ಒಂದನ್ನು ಸುಟ್ಟು ಹಾಕಿಸಿದ್ದಾರೆ.

    ಗ್ರಾಮದ ಕೆಲ ಮುಖಂಡರು  ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳನ್ನು ಭೇಟಿ ಮಾಡಿ ಬಂದಿದ್ದಾರೆ.  ಬಿಗಿ ಭದ್ರತೆ ನಡುವೆ ಬ್ಯಾಗ್ ಗಳನ್ನು ಸಾಗಿಸಿರುವುದು, ಮುಖಂಡರು ಭೇಟಿ ಮಾಡಿ ಬಂದಿರುವ ವಿಚಾರ ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.   

ತಬ್ಲಿಘಿಗಳು ಕ್ವಾರಂಟೈನ್ ನಲ್ಲಿದ್ದರು ಸ್ಥಳೀಯರು   ಮನೆ ಊಟ, ಬಿರಿಯಾನಿಯನ್ನು ಸರಬರಾಜು ಮಾಡುತ್ತಿದ್ದಾರೆ. ಲೋಕಲ್ ಏರಿಯಾ ಆದ್ದರಿಂದ ಆ ಚರ್ಯೆಯನ್ನು ನಿಲ್ಲಿಸುವುದಾಗಿಲೀ, ಸಂಭಾವ್ಯ ಸೋಂಕು ತಡೆಯುವುದಾಗಲೀ ಕಷ್ಟಸಾಧ್ಯವಾಗಿದೆ ಎಂದು ಸ್ಥಳೀಯರು ಆವೇದನೆ ವ್ಯಕ್ತಪಡಿಸಿದ್ದಾರೆ

ವಿದ್ಯುತ್ ಹರಿದು ರೈತ ಸಾವು

ತುಮಕೂರು: ವಿದ್ಯುತ್  ಹರಿದು ಪಾವಗಡ ತಾಲ್ಲೂಕಿನ ವಡ್ಡರಹಟ್ಟಿ ಗುಂಡು ತೋಪು ಬಳಿ ಶನಿವಾರ ಸಂಜೆ ರೈತರೊಬ್ಬರು ಮೃತಪಟ್ಟಿದ್ದಾರೆ.
ಗಂಗಪ್ಪ(60) ಮೃತರು.  “ಸಾಲದ ಹೊರೆ ಹೆಚ್ಚಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಬ್ಯಾಡನೂರು ಗ್ರಾಮದಲ್ಲಿ 2 ಎಕರೆ ಜಮೀನಿದೆ.   ಬ್ಯಾಂಕಿನಲ್ಲಿ 1.78 ಲಕ್ಷ ಹಾಗೂ ಕೈ ಸಾಲ ಇದೆ. ಸಾಲ ಜಾಸ್ತಿ ಇದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಸಾಲ ತೀರಿಸಲು ಆಗುತ್ತಿಲ್ಲ ಎಲ್ಲಿಯಾದರೂ ಹೋಗಿ ಸಾಯಬೇಕೆನ್ನಿಸುತ್ತಿದೆ ಎಂದು ಮನೆಯಲ್ಲಿ ಆಗಾಗ ಹೇಳುತ್ತಿದ್ದರು”.  ಎಂದು ಮೃತರ ಮಗ ರಾಮಾಂಜಿನಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.