Friday, May 8, 2026
Google search engine
Home Blog Page 233

ಇಂದು ತಾಯಂದಿರ ದಿನವಂತೆ

1

*ಅಮ್ಮನಿಗೆ*

ಇಂದು ತಾಯಂದಿರ ದಿನವಂತೆ,
ನನ್ನಮ್ಮನಿಗಿಲ್ಲ ಇದಾವುದರ ಚಿಂತೆ!
‘ಎಂದೂ ಇಲ್ಲದ ಪ್ರೀತಿ ಮಗನಿಗೆ!’
ಉಸುರುವಳು ಅಮ್ಮ ತಣ್ಣಗೆ,
ಶುಭಾಶಯಿಸ ಹೋಗೆ ಅವಳಿಗೆ.

ದಿನವಿಡೀ ಮನೆಯೊಳಗೇ ಹೆಣಗುವಳು.
ಇದ್ದದ್ದೇ ಅವಳಿಗೂ ನನಗೂ ಮಾತುಗಳು.
ಅವಳ ಕೋಪ-ತಾಪ, ಸಿಟ್ಟು-ಪಟ್ಟುಗಳು
ತಾಳುವವು ಬಾಣಗಳ ರೂಪ,
ಒಮ್ಮೊಮ್ಮೆ ಕಂಬನಿಯಾಲಾಪ.

ದೇವರಿಗೆ ಹರಕೆ ಹೊತ್ತು ಹಡೆದಿದ್ದಳಂತೆ,
ಚಿಕ್ಕಂದಿನಿಂದವಳ ಗೋಳಿಡಿಸಿದ್ದೀನಂತೆ.
ಹಸಿವು ನೀರಡಿಕೆಗಳ ಮರೆತು ಸವೆಯುತ್ತಲೇ ಇದ್ದಾಳೆ,
ತನ್ನ ಮರೆತು ತನ್ನವರಿಗಾಗಿ ಬದುಕುತಿದ್ದಾಳೆ,
ನಿನ್ನನ್ನೂ ಗಮನಿಸಿಕೋ ಎಂದರೆ ಗೊತ್ತೆನ್ನುತ್ತಾಳೆ!

ಕೊಡಲೇನು ಉಡುಗೊರೆಯ ಅವಳಿಗೆ?
ನಾ ಕೊಡಿಸುವ ಒಡವೆ-ವಸ್ತ್ರ ಪೆಟ್ಟಿಗೆಗೆ,
ಅವಳಿಗೆಂದೊಯ್ವ ತಿನಿಸು ಮಕ್ಕಳು-ಮೊಮ್ಮಕ್ಕಳಿಗೆ,
ಹೇಳದುಳಿಹ ಪ್ರೀತಿ ಅವಳ ಪಾಲಿಗೆ,
ತೋರದುಳಿದಿಹ ಭಕ್ತಿಯೇ ಅವಳಡಿಗೆ.

ಅಮ್ಮ ಶ್ರೀಮತಿ ಕಾಮಕ್ಕನೊಂದಿಗೆ ಶಶಿಕುಮಾರ ವೈ. ಬಿ.

ಅಮ್ಮನ ನೆನಪು ಸದಾ ಕಾಡುತ್ತೆ..

ತುಳಸೀತನಯ

ಅಮ್ಮ ನಮ್ಮ ಜೊತೆಗಿರುವ ಪೋಟೋ ನೋಡ್ದಾಗ ಕೇವಲ‌ ಒಂದು ಪೋಟೋ ಅನ್ಸುತ್ತೆ ಅಷ್ಟೇ. ಆದರೆ ಅದರ ಹಿಂದಿನ ಭಾವನೆಗಳು ಅಗಣ್ಯ, ಅನನ್ಯ, ಅಭೂತ.

ಇದ್ದಾಗ ವ್ಯಕ್ತಿ ಸದರ ಅನ್ಸತ್ತೆ. ನಮ್ಮನ್ನ ಅಗಲಿದಾಗ ಆ ನೋವು ಯಾರಿಂದಲೂ ತುಂಬಲಾಗಲ್ಲ.
ಇದು ಎಲ್ಲರಿಗೂ, ಎಲ್ಲರ ಬದುಕಿಗೂ, ಎಲ್ಲ ಕಾಲಕ್ಕೂ ಅನ್ವಯ ಕೂಡ. ಇದಕ್ಕೆ ಯಾರೂ ಹೊರತಾಗಿಲ್ಲ. ನಮ್ಮಲ್ಲಿ ನಾವು ಯಾರನ್ನೆ ಕಳೆದುಕೊಂಡ್ರು ಆ ಜಾಗನ ಮತ್ತೊಬ್ರು ತುಂಬೋಕಾಗಲ್ಲ.

ಸುಖ, ಸಂತೋಷ, ನೆಮ್ಮದಿ ಬೇರೆಲ್ಲೂ ಇಲ್ಲ. ಅದು ನಮ್ಮ ಸುತ್ತನೆ ಇದೆ. ನಾವು ಅದನ್ನ ಹುಡಕಬೇಕಷ್ಟೆ. ನಮ್ಮಲ್ಲಿನ ಸಣ್ಣ, ಸಣ್ಣ ವಿಷಯ, ವಿಚಾರದಲ್ಲೂ ಖುಷಿ ಇದೆ. ಆದ್ರೆ ದಡ್ರು ನಾವು ಒಣ ಪ್ರತಿಷ್ಟೆಯಲ್ಲಿ ನಮ್ಮನ್ನ ನಾವು ಹುದುಗಿಟ್ಟುಕೊಳ್ಳುತ್ತಿದ್ದೇವೆ.

ನಾವು ಮೊದಲು ಭಾವನಾ ಜೀವಿಗಳಾದರೆ ನಮ್ಮಲ್ಲಿ ಎಲ್ಲರೂ, ಎಲ್ಲರಿಗೂ, ಎಲ್ಲಾ ಸಮಯದಲ್ಲೂ ಅರ್ಥವಾಗ್ತಾರೆ. ಆ ಪ್ರಯತ್ನ ಕೂಡ ನಾವೇ ಮಾಡಬೇಕು.

ಇವತ್ತು ಅಮ್ಮ ನಮ್ಮನ್ನ ಅಗಲಿ ಕೇವಲ ನೆನಪಾಗಿದ್ದಾರೆ. ನಾಳೆ ನಾವು ಕೂಡ ಬದುಕಿನ ಪಯಣ ಮುಗಿಸಿ ಬಾರದ ಊರಿಗೆ ಸೇರಿ ನೆನಪಾಗಬಹುದು. ಆ ಮುನ್ನ ಒಂದೇ ಒಂದು ಕ್ಷಣ ನಮ್ಮನ್ನ ನಾವು ಅವಲೋಕಿಸಿ ಕೊಳ್ಳಬೇಕು.

ನಾನು ಯಾರು, ನನ್ನ ಸಂಬಂಧಗಳು ಯಾವು ಅಂತ. ಆಗ ನಮ್ಮ ಕುಟುಂಬದ ಸಣ್ಣ ಜೀವನು ಭಾವನಾ ಜೀವಿಯಾಗೇ ಕಾಣತ್ತೆ. ನಮ್ಮ ಬದುಕು ಬಲಿಷ್ಟಗೊಳ್ಳುತ್ತೆ.

ನಮ್ಮಮ್ಮ ಬರೀ ವ್ಯಕ್ತಿಯಾಗಿರಲಿಲ್ಲ. ಅದೊಂದು ಶಕ್ತಿ. ಆ ಜೀವ ನಮ್ಮ ಕುಟುಂಬದ ಎಲ್ಲರ ಅಂತರಂಗದಲ್ಲಿ‌ ಹಸಿರಾಗಿದೆ. ಯಾಕಂದ್ರೆ ಅವರು ಅವಿದ್ಯಾವಂತರಾದರೂ ಯಾವ ವಿಶ್ವವಿದ್ಯಾಲಯದಲ್ಲೂ ಕಲಿಸದ ಜೀವನ ಪಾಠ ನಮಗೆ ಕಲಿಸಿಬಿಟ್ಟಿದ್ದಾಳೆ.

ನಾವೆಲ್ಲರೂ ಚೆನ್ನಾಗಿರಬೇಕು.‌ ನನ್ನ ಮಕ್ಳು, ಮೊಮ್ಮಕ್ಳು ಒಗ್ಗಾಟ್ಟಾಗಿ ಒಂದು ಕಡೆ ಸೇರಿ ನಗ್ತಾನಗ್ತಾ ಇರಬೇಕು ಅನ್ನೊದಷ್ಟೆ ಅವರ ಆಂಬೋಣವಾಗಿತ್ತು.

ನನ್ನ ಪ್ರಕಾರ ಅವರು ಎಲ್ಲೂ ಹೋಗಿಲ್ಲ. ನಮ್ಮಲ್ಲೇ ಇದ್ದಾರೆ. ನಮ್ಮ ಒಗ್ಗಟ್ಟಿನ ಪ್ರೀತಿಯಲ್ಲಿ ಅವರ ಹೆಸರು ಸದಾ ಹಸಿರಾಗಿದ್ದೆ ಇರತ್ತೆ. ನಮ್ಮ ದೇಹದ ಕೊನೆ ಉಸಿರಿರುವ ತನಕ ಅವಳ ಮಕ್ಕಳಾದ ನಾವು ಒಬ್ಬರನ್ನ ಒಬ್ಬರು‌ ಬಿಡದೇ ಒಂದಾಗಿ ಇರೋದೆ ಅವಳ ಆಶಯ.

ಅದಕ್ಕೆ ಬದ್ದರಾಗಿರೋದೆ ನಾವು ಅವಳಿಗೆ ಸಲ್ಲಿಸುವ ಕೃತಜ್ಞತೆ, ಗೌರವ. ಅವಳಿಗಾಗಿ ತೀರಿಸಬೇಕಾದ ಖುಣ‌ ಕೂಡ ಆಗಿದೆ.

ಮಮತೆಯ ಕರುಣಾಮಯಿ ಅಮ್ಮ ನಮ್ಮ ಬದುಕು ಬರೆದವಳು.
ಸದಾಕಾಲ ತುಂಬಾನೇ ನೆನಪಾಗ್ತಾಳೆ.
ಅವಳು ಸತ್ತರೂ ನಮ್ಮೆಲ್ಲರ ಹೃದಯ ಮಂದಿರದಲ್ಲಿ‌ ಜೀವಂತ, ಅಜರಾಮರ. ಯಾಕಂದ್ರೆ ಅವಳು ನಮ್ಮಮ್ಮ. ಕೆಡುಕೇ ಗೊತ್ತಿರದ ಪ್ರೀತಿಯ ಗಣಿ. ಅದಕ್ಕೆ‌ ಕಳೆದು ಹೋದ ಅವಳ ನೆನಪು ಸದಾ ಕಾಡತ್ತೆ.

ಅಮ್ಮ ಎಂಬ ವಿಶ್ವವಿದ್ಯಾಲಯ

0

ಇಂದು ತಾಯಂದಿರ ದಿ‌ನ. ಇದರ ಅಂಗವಾಗಿ ಶಿಲ್ಪಧನಂಜಯ ಅವರು ಬರೆದಿರುವ ಅಮ್ಮಂದಿರ ಕುರಿತ ಆಪ್ತತೆಯ ಕವನ ನಮ್ಮ ಎಲ್ಲ ಓದುಗರಿಗಾಗಿ. ಅಮ್ಮನ ಜತೆಗಿನ ಒಂದೆರಡು ನೆನಪು, ಸೆಲ್ಫಿ ಇಲ್ಲಿಗೆ 9844817737 ಕಳುಹಿಸಿದರೆ ಪ್ರಕಟಿಸಲಾಗುವುದು.

ಅಮ್ಮ ವಿಶ್ವವಿದ್ಯಾಲಯ
ಅಮ್ಮನಿಂದ ಕಲಿತದ್ದು
ಬದುಕಿಗೆ …..

ಅಮ್ಮ ತನ್ನ ಬೆಚ್ಚಗಿನ
ಒಡಲಿನಲಿ ಮಗು ರಕ್ಷಿಸಿ
ನೊವಿನಲ್ಲೂ ಅಪ್ಪಿ ಮುತ್ತಿಡುವಳು…..

ಮಗು ಎಡವಿದಾಗ ಹೆಚ್ಚು ಮರುಗುವಳು
ಆತ್ಮ ವಿಶ್ವಾಸ ತುಂಬುವಳು
ಮುತ್ತಿಟ್ಟು ಮುದ್ದಾಡುವಳು…….

ಮಗುವಿನ ತೊದಲ ನುಡಿಗೆ ಸಾಕ್ಷಿಯಾಗುವಳು
ಅನ್ನ ತಿನ್ನಲು ಚಂದಮಾಮ ಕರಿಯುವಳು
ಅಂಬೆಗಾಲ ಇಡುವಾಗ ಖುಷಿ ಪಡುವಳು………

ನಡೆಯಲು ಕಲಿಸಿ ಎಲ್ಲವನ್ನು ಕಲಿಸಿ
ತಾನು ಕಲಿಯುವಳು
ಮೊದಲ ಅಕ್ಷರ ತಿದ್ದಿಸುವಳು……..

ಜೀವನ ಕಲಿಸುವಳು ತಪ್ಪನ್ನು ತಿದ್ದುವಳು
ತನ್ನ ಕನಸುಗಳ ರಕ್ಕೆ ಕಟ್ಟುವಳು ಮಗುವಿಗೆ
ಹಾರಲು ಬಿಡುವಳು ಅಮ್ಮ ……..

ರಾಜ್ಯದಲ್ಲಿ ಭಾನುವಾರ ಕೊರೊನಾ ಅಟ್ಟಹಾಸ: ನಡುಗಿದ ಜನರು

ತುಮಕೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು ಭಾನುವಾರ 53 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆಯಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.

ಶಿವಮೊಗ್ಗದಲ್ಲಿ 8 :

ಗ್ರೀನ್ ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಇಂದು ಒಂದೇ ದಿನದಲ್ಲಿನ 8 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಹಮದಾಬಾದ್‌ನಲ್ಲಿ ನಡೆದ ತಬ್ಲಿಘ್ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಎಲ್ಲರನ್ನು ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ಅಟ್ಟಹಾಸ :

ಕುಂದಾನಗರಿ ಬೆಳಗಾವಿಯಲ್ಲಿ 22 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 107 ಕ್ಕೆ ಏರಿಕೆಯಾಗಿದೆ. ಇವರೆಲ್ಲರೂ ರಾಜಸ್ಥಾನದ ಅಜ್ಮಿರ್ ದರ್ಗಾಕ್ಕೆ ತೆರಳಿದ್ದರು ಎನ್ನಲಾಗಿದೆ.

ಬಾಗಲಕೋಟೆಯ 8 ಜನರಿಗೆ :

ಬಾಗಲಕೋಟೆಯ 8 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 59 ಕ್ಕೆ ಏರಿಕೆಯಾಗಿದೆ.

ಉತ್ತರ ಕನ್ನಡದಲ್ಲಿ 7 ಜನರಿಗೆ ಸೋಂಕು

ಇನ್ನು ಉತ್ತರ ಕನ್ನಡದಲ್ಲಿ 7 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ.

ಒಟ್ಟು ಪ್ರಕರಣಗಳು

ಉತ್ತರ ಕನ್ನಡ – 07
ಬೆಂಗಳೂರು – 03
ಕಲಬುರಗಿ – 03

ಬೆಳಗಾವಿ – 22
ಬಾಗಲಕೋಟೆ – 08
ಶಿವಮೊಗ್ಗ – 08

ಚಿಕ್ಕಬಳ್ಳಾಪುರ – 01
ದಾವಣಗೆರೆ – 01

ಅಮ್ಮ, ಅಮ್ಮಾ ನಮ್ಮಮ್ಮ…

0

ನನಗೆ ಈಗಲೂ ನಮ್ಮಮ್ಮನ್ನೇ ಸರ್ವಸ್ಸ.

ಅಮ್ಮ ಅಂದರೆ ನನಗಿಷ್ಟ

ಅಮ್ಮನ ಹೆಸರು ಲಲಿತಮ್ಮ

ನನಗೋ ಅಮ್ಮನ ಸಾನಿಧ್ಯವೇ ಸ್ವರ್ಗ ಸುಖ

ಅಮ್ಮ ಜತೆ ಎಷ್ಟಿ ಮಾತಿದ್ದರೂ ಸಾಲದು

ನನಗೆ… ನನ್ನಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು.


ಅಮ್ಮನ ಪ್ರೀತಿಯ ಮಗಳು ಕಾವ್ಯ.

ಅಮ್ಮನ ಬಗ್ಗೆ‌ ನೀವು ಬರೆದು ಕಳುಹಿಸಿ- ವಾಟ್ಸಾಪ್:9844817737

ಅಮ್ಮನಿಗೊಂದು ಸಲಾಂ

0

ನಮ್ಮ ಪ್ರೀತಿಯ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು.

ಅಮ್ಮ‌ ಅಂದರೆ ಅಚ್ಚುಮೆಚ್ಚು. ಅಮ್ಮ ಮಾಡುವ ಊಟ, ಅಮ್ಮನ ಮಾತು… ಅಮ್ಮನ ಜತೆ ಮುನಿಸಿನಾಟ ಇನ್ನೂ ಚೆಂದ.

Happy mothers day amma


ನಂದಿತಾ, ದೇವಿಕಾ, ಬೆಂಗಳೂರು

ನೀವು ಬರೆಯಿರಿ: ವಾಟ್ಸಾಪ್ ನಂ: 9844817737

‘ಅಮ್ಮ’ ವಿಜಯಮ್ಮ

ಜಿ ಎನ್ ಮೋಹನ್


ಇವತ್ತು ಅಮ್ಮನ ದಿನ ಎಂದರು
ನನಗೆ ಆ ದಿನ, ಈ ದಿನಗಳ ಬಗ್ಗೆಯೇ ತಕರಾರಿದೆ
ಆದರೂ ಅಮ್ಮ ಎಂದ ತಕ್ಷಣ ನೆನಪಿಗೆ ಬಂದದ್ದು ನನ್ನ ಅಮ್ಮ ವಿಜಯಮ್ಮ
ನಾನು ಈ ಹಿಂದೆ ಬರೆದಿದ್ದ ಒಂದು ಪುಟ್ಟ ನೋಟ್ ಇಲ್ಲಿದೆ
—–

ಈ ವಾರ ಎರಡು ಘಟನೆಗಳಿಗೆ ನಾನು ಸಾಕ್ಷಿಯಾದೆ
ಒಂದು ವೇದಿಕೆಯ ಮೇಲೆ,
ಇನ್ನೊಂದು ತೆರೆಯ ಮೇಲೆ

ಒಂದು ಅಪ್ಪ,
ಇನ್ನೊಂದು ಅಮ್ಮ

ಒಬ್ಬ ಪುರುಷ,
ಇನ್ನೊಬ್ಬ ಮಹಿಳೆ

ಒಬ್ಬ ಅಮೀರ್ ಖಾನ್,
ಇನ್ನೊಬ್ಬರು ವಿಜಯಮ್ಮ

**

‘ಅಮ್ಮ’ ಎಂದೇ ನಮ್ಮೆಲ್ಲರಿಂದಲೂ ಕರೆಸಿಕೊಳ್ಳುವ ಡಾ ವಿಜಯಾ ಅವರು ಬರೆದ ಲೇಖನಗಳ ಸಂಕಲನ ‘ಚಿತ್ತ ಕೆತ್ತಿದ ಚಿತ್ರ’ ಬಿಡುಗಡೆಯಿತ್ತು.

ಇಡೀ ಕಾರ್ಯಕ್ರಮದ ಉದ್ದಕ್ಕೂ ಅಮ್ಮ ತಲೆ ತಗ್ಗಿಸಿಯೇ ಕುಳಿತಿದ್ದರು.

ಯಾವಾಗಲೂ ತಲೆ ಎತ್ತಿ ನಡೆಯುವ, ಸುತ್ತ ಇದ್ದವರ ಜೊತೆ ಗದ್ದಲ ಮಾಡುತ್ತಾ ಕೂರುವ, ಒಂದು ಕ್ಷಣವೂ ನಗು ವೇಸ್ಟ್ ಆಗಬಾರದು ಎನ್ನುವಂತೆ ನೋಡಿಕೊಳ್ಳುವ ಅಮ್ಮ ಅವತ್ತು ತಲೆ ತಗ್ಗಿಸಿ ಕುಳಿತೇ ಇದ್ದರು ಮತ್ತು ಮೌನಕ್ಕೆ ಶರಣಾಗಿ ಹೋಗಿದ್ದರು

ಅವರು ಮಾತನಾಡುವ ಸಮಯ ಬಂದಾಗ –
ನಾನು ಈ ಮಕ್ಕಳಿಗೆ ನಿಮಗೆ ಏನು ಬೇಕು ಎಂದು ಕೇಳಲಿಲ್ಲ,
ನಿಮಗೆ ಏನು ಇಷ್ಟ ಎಂದು ಕೇಳಲಿಲ್ಲ.
ಬದಲಿಗೆ ನನಗೆ ಆಗಿದ್ದು ಮಾಡುತ್ತಾ ಹೋದೆ.
ಅವರು ನನಗೆ ಹೊಂದಿಕೊಳ್ಳುತ್ತಾ ಹೋದರು.

ನನ್ನ ಸಮಯ, ಅನಿವಾರ್ಯತೆ ನನ್ನನ್ನು ಹಾಗೆ ಕೇಳದಂತೆ ಮಾಡಿಬಿಟ್ಟಿತ್ತು.

ಅವರಿಗೆ ನಾನು ಋಣಿಯಾಗಿರಬೇಕು

**
ಕೈಯಲ್ಲಿ ಕತ್ತರಿ ಹಿಡಿದಿದ್ದ ಆತ ಎದುರು ನಿಂತಿದ್ದ.
ಮುಂದೆ ಕುಳಿತಿದ್ದ ಹುಡುಗಿ ಕಣ್ಣೀರಾಗಿ ಹೋಗಿದ್ದಳು

ಪಪ್ಪಾ.. ಬೇಡ ಪಪ್ಪಾ.. ಎನ್ನುತ್ತಾ ರೋಧಿಸುತ್ತಿದ್ದಳು
ಎದುರಿಗೆ ನಿಂತಿದ್ದ ತಂಗಿಯ ಮುಖದಲ್ಲೂ ಗಾಬರಿ ಚಿಮ್ಮುತ್ತಿತ್ತು

ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಆಕೆಯ ಅಮ್ಮ ನೋವು ತಿನ್ನುತ್ತಾ ಇದ್ದರು.

ಅವರ ಎದುರು ನಿಂತ ಆ ಅಪ್ಪ ಅಮೀರ್ ಖಾನ್ ಅಲಿಯಾಸ್ ಮಹಾವೀರ್ ಸಿಂಗ್ ಪೋಗಟ್

ಮುಖದಲ್ಲಿ ಮಾತ್ರ ಒಂದು ಗೆರೆಯೂ ಹೆಚ್ಚು ಕಮ್ಮ್ಮಿಯಾಗಲಿಲ್ಲ
ಆತ ನಿಶ್ಚಯಿಸಿ ಆಗಿತ್ತು

ಎದುರಿಗಿದ್ದ ಕ್ಷೌರಿಕ ತನ್ನ ಬೆಳೆದ ಮಗಳ ತಲೆಗೂದಲು ಕತ್ತರಿಸಲೇಬೇಕು.
ಕತ್ತರಿಸುತ್ತಾನೆ ಅಷ್ಟೇ.. ಎನ್ನುವುದೂ ಅವನಿಗೆ ಗೊತ್ತಿತ್ತು.
ಇಲ್ಲದಿದ್ದರೆ ಆತನಿಗೆ ಅದನ್ನು ಕತ್ತರಿಸಿ ಹಾಕುವುದೂ ಗೊತ್ತಿತ್ತು.

**

ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳನ್ನು ಹಡೆದ,
ಇನ್ನೂ ಕನಸುಗಳ ವಸಂತ ಕಾಲಿಡುವ ಮುಂಚೆಯೇ ಮನೆಯಿಂದ ಹೊರಬೀಳಬೇಕಾಗಿ ಬಂದ
ವಿಜಯಮ್ಮ ಗುಬ್ಬಿಯಾಗಿ ಹೋಗಿದ್ದರು

ನಾನು ‘ಏನು ಬೇಕು ನಿಮಗೆ’ ಎಂದು ಕೇಳದೇ ಬೆಳಸಿದ ಮಕ್ಕಳು ಇಂದು
ಹೀಗೆಲ್ಲಾ ನನಗಾಗಿ ನಿಂತಿದ್ದಾರಲ್ಲ ಎಂದು

ಕ್ಷಮಿಸಿ ಮಕ್ಕಳೇ ಎನ್ನುವ ಮಾತು ಗಂಟಲಲ್ಲಿತ್ತೇನೋ

ಎಂದೂ ವಿಚಲಿತವಾಗದ ಅಮ್ಮನ ಕಂಠವೂ ಅಂದು ಒಂದಿಷ್ಟು ಅಲುಗಿತ್ತು.

ಕಣ್ಣಂಚಿಗೆ ಬಂದ ನೀರು ಹೊರಗೆ ಜಾರಲಿಲ್ಲ ಅಷ್ಟೇ

ತನ್ನ ಸ್ಥಿತಿಯಿಂದಾಗಿ ಮಕ್ಕಳ ಕನಸನ್ನು ಕೊಂದೆನಲ್ಲಾ ಎಂದು ಅವರಿಗೆ ಅನಿಸಿತ್ತು

ತನ್ನ ಸ್ಥಿತಿಯಿಂದಾಗಿ ಮಕ್ಕಳ ಬೇಕು ಬೇಡ ನೋಡಲಾಗಲಿಲ್ಲವಲ್ಲ ಎಂದು ಮನಸ್ಸು ನೊಂದಿತ್ತು

**
ಆ ಕತ್ತರಿ ಹಿಡಿದು ಕೂದಲನ್ನು ಕತ್ತರಿಸುತ್ತಾ ಇದ್ದವನ ಎದುರು ನಿಂತಿದ್ದ
ಆತನೂ ವಿಚಲಿತನಾಗಿರಲಿಲ್ಲ
ಏಕೆಂದರೆ ಆತನಿಗೆ ಕನಸುಗಳಿತ್ತು
ಆತನಿಗೆ ಅದನ್ನು ನನಸು ಮಾಡಿಕೊಳ್ಳಲಾಗಿರಲಿಲ್ಲ

ಆತ ಒಂದೇ ಮಾತಿನಲ್ಲಿ ಹೇಳಿಬಿಟ್ಟಿದ್ದ
ನನ್ನ ಕನಸನ್ನು ಇವರ ಮೂಲಕ ನನಸು ಮಾಡಿಕೊಳ್ಳುತ್ತೇನೆ

ಹಾಗಾಗಿಯೇ ಇವನು ಮಕ್ಕಳ ಕನಸೇನು ಎಂದು ಕೇಳಲು ಸಿದ್ಧನಿರಲಿಲ್ಲ
ಮಕ್ಕಳ ಬೇಕು ಬೇಡಗಳನ್ನು ತಿಳಿಯಲು ಬಿಲ್ ಕುಲ್ ಒಪ್ಪಿರಲಿಲ್ಲ
ಮಕ್ಕಳೇ ತಮ್ಮ ಇಷ್ಟಗಳನ್ನು ಹೇಳುತ್ತಿದ್ದರೂ ಕಿವಿಗೊಟ್ಟಿರಲಿಲ್ಲ
ಬೇಕು ಎನ್ನುವುದಕ್ಕಿಂತಲೂ ಹೆಚ್ಚಾಗಿ ಇದು ಬೇಡಪ್ಪಾ ಎಂದು ಗೋಗರೆಯುವಾಗಲೂ ಆತ ಅದಕ್ಕೆ ಸೊಪ್ಪು ಹಾಕಿರಲಿಲ್ಲ

**

ವ್ಯತ್ಯಾಸ ಇಷ್ಟೇ ಇತ್ತು
ಮಕ್ಕಳ ಕನಸು ಏನೆಂದು ತಿಳಿಯಲಾಗಲಿಲ್ಲವಲ್ಲ ಎಂದು ಅವಲತ್ತುಕೊಳ್ಳುತ್ತಿದ್ದ ಅಮ್ಮನನ್ನು
ಸಮಾಜ ಇನ್ನಿಲ್ಲದಂತೆ ಕಾಡಿಸಿತ್ತು, ನೋಯಿಸಿತ್ತು,
ಕೀಳರಿಮೆಯಿಂದ ಒದ್ದಾಡುವಂತೆ ಮಾಡಿತ್ತು

ಆದರೆ ಅಲ್ಲಿ ನಿಮ್ಮ ಕನಸುಗಳು ನನಗೆ ಬೇಕಿಲ್ಲ ನನ್ನ ಗುರಿ ಅಷ್ಟೇ ನನಗೆ
ಎಂದವನ ಜೊತೆ ಇಡೀ ದೇಶ ನಿಂತುಬಿಟ್ಟಿತ್ತು

ಶಹಬಾಷ್ ಗಿರಿ ನೀಡಿತ್ತು

ಮೂರು ದಿನಕ್ಕೆ ನೂರು ಕೋಟಿಗೂ ಹೆಚ್ಚು ಹಣ ಬಾಚಿಕೊಳ್ಳುವಂತೆ ಮಾಡಿತ್ತು

**
ಒಂದೆಡೆ ಬಿಕ್ಕುತ್ತಿದ್ದ ಅಮ್ಮ
ಇನ್ನೊಂದೆಡೆ ಸಂಭ್ರಮಿಸಿ ಮೀಸೆ ತಿರುವುತ್ತಿದ್ದ ಅಪ್ಪ

**
ಒಂದೆಡೆ ಚಿತ್ತ, ಚಿತ್ರ ಬರೆಯಲು ಯತ್ನಿಸುತ್ತಿತ್ತು
ಇನ್ನೊಂದೆಡೆ ದಂಗಲ್ ಬೆಳ್ಳಿ ತೆರೆಯೇರಿ ದೇಶ ಉನ್ಮಾದ ಚಿಮ್ಮಿಸುತ್ತಿತ್ತು

**

ಆ ಮಕ್ಕಳಿಗೆ ಕನಸಿತ್ತು.
ಎಲ್ಲರಂತೆ ಎಲ್ಲರಷ್ಟೇ ಸಮಯ ಮಲಗಬೇಕು,
ಎಲ್ಲರಂತೆ ಕನಸು ಬೀಳಬೇಕು
ಎಲ್ಲರಿಗೂ ಬೆಳಕಾದಾಗಲೇ ಬೆಳಕಾಗಬೇಕು ಎಂದು

ಎಲ್ಲರಂತೆ ಪಾನಿಪೂರಿ ತಿನ್ನಬೇಕು
ಎಲ್ಲರಂತೆ ತಲೆಗೂದಲಿರಬೇಕು
ಎಲ್ಲರಂತೆ ಅದಕ್ಕೆ ಟೇಪು, ಒಂದಿಷ್ಟು ಹೂವು
ತಲೆಗಿಷ್ಟು ಎಣ್ಣೆಎಲ್ಲರಂತೆ ತುಟಿಗೆ ಲಿಪ್ ಸ್ಟಿಕ್

ಎಲ್ಲರಂತೆ ಒಂದಿಷ್ಟು ಐಸ್ ಕ್ರೀಮ್
ಎಲ್ಲರಂತೆ ಒಂದಿಷ್ಟು ಡಾನ್ಸ್

ಚಿನ್ನ ಚಿನ್ನ ಆಸೈ..

ಅಪ್ಪನ ಮುಂದೆ ಅವರು ಅದನ್ನು ಹೇಳಿಕೊಂಡಿದ್ದರೂ ಕೂಡಾ

**
ಆ ಮಕ್ಕಳಿಗೆ ಕನಸಿತ್ತೋ ಇಲ್ಲವೋ ಗೊತ್ತೇ ಆಗಿರಲಿಲ್ಲ
ಅವರು ಹೇಳಲೂ ಇಲ್ಲ
ಬದುಕು ಕಟ್ಟಲು ಹೊರಟಿದ್ದ ಅಮ್ಮನ ಹಿಂದೆ ನಡೆದು ಬಂದುಬಿಟ್ಟವು ಬೆನ್ನಿಗಿದ್ದ ನೆರಳಿನಂತೆ

**
ಒಬ್ಬ ಅಪ್ಪ
ಒಬ್ಬ ಅಮ್ಮ

**
ಒಬ್ಬ ಪುರುಷ
ಒಬ್ಬ ಮಹಿಳೆ

**
ಒಂದು ಮಣ್ಣಿನ ಅಖಾಡ
ಇನ್ನೊಂದು ಬದುಕಿನ ಅಖಾಡ

ಎಲ್ಲಿ ಹೋದಳು ಅಮ್ಮ?

0

ಇಂದು ತಾಯಂದಿರ‌‌‌ ದಿನ. ಅಮ್ಮನೊಟ್ಟಿಗಿನ ಸೆಲ್ಫಿ,‌‌ಅಮ್ಮನ ಚಿತ್ರ ಕಳುಹಿಸಿ, ಒಂದೆರಡು‌‌ ನೆನಪಿನ ಸಾಲು ಬರೆಯಿರಿ: ವಾಟ್ಸಾಪ್ ಮಾಡಿ ;9844817737

ತುರುವೇಕೆರೆ ಪ್ರಸಾದ್


ಎಲ್ಲಿ ಹೋದಳು ಅಮ್ಮ?
ಹಿಟ್ಟು ತಿರುವಿದ ಕೋಲು
ನಾಯಿ ನೆಕ್ಕುತ್ತಿದೆಯಲ್ಲ
ಎಸರಿಗಿಟ್ಟ ಪಾತ್ರೆ
ಬೋರಲಾಗಿದೆಯಲ್ಲ
ಮನೆ ತುಂಬಾ ಹೊಗೆ
ಅಮ್ಮ ಕಾಣುತ್ತಿಲ್ಲ !

ಹೀಗೆಂದೂ ಹೋದವಳಲ್ಲ
ಅರ್ಧ ಸಾರಿಸಿಟ್ಟು
ಕೊಚ್ಚೆ ಮಾಡಿದವಳಲ್ಲ
ಹೆಜ್ಜೆ ಗುರುತು ಮನೆ ತುಂಬಾ
ಎತ್ತ ಹೋದಳೋ ಕಾಣುತ್ತಿಲ್ಲ .

ನಡುಮನೆಯಲ್ಲಿ ಹೂ, ಹಣ್ಣು, ಬಾಗಿನ
ಅಣಿಮಾಡಿಟ್ಟ ಅರಸಿನ ಕುಂಕುಮ
ಹೊಸ ಹೆಣ್ಣು ಮನೆ ತುಂಬುವ ಹೊತ್ತಿನಲ್ಲಿ
ಅಮ್ಮ ಕಾಣುತ್ತಿಲ್ಲ ತಲೆ ಬಾಗಿಲಲ್ಲಿ .

ಮಗಳು ಹಡೆಯುವ ಹೊತ್ತು
ಸೂರಿಗೆ ಮುಚ್ಚಿದ ತಗಡು ಕಿತ್ತು
ಕಾಗೆ ಹದ್ದುಗಳು ರಾಪಾಡುತ್ತಿದ್ದರೂ
ಅಮ್ಮ ಕಾಣುತ್ತಿಲ್ಲ ಯಾಕಿವತ್ತು?

ಹೊಕ್ಕುಗಟ್ಟಿ ನಿಂತ ನಂದಾದೀಪ
ಯಾರೋ ಹೋದ ಹಾಗೆ
ಯಾರೋ ಬಂದ ಹಾಗೆ
ನೆರಳುಗಳ ಮಧ್ಯೆ
ಕಾಣುತ್ತಿಲ್ಲ ಅಮ್ಮನ ಮುಖ .

ಕಾದು ಕಾದು ಸಾಕಾಗಿ
ಮಂಡಪರಿ ಮಲಗಿದಾಗ
ಕನ್ನಡಿಯಲ್ಲಿ ನಕ್ಕಳು ಅಮ್ಮ
ಎದ್ದು ಹೋಗಿ ನೋಡಿದರೆ
ಖಾಲಿ ಗಾಜಿನ ಮಧ್ಯೆ ಕಾಸಗಲ ಕುಂಕುಮ
ಅಮ್ಮನ ಕನ್ನಡಿ ಸವೆದು ಹೋದ ಗಾಜು
ಆಚೀಚೆ ಏಕ; ಇಲ್ಲ ಬಿಂಬ
ತನ್ನನ್ನೆಂದೂ ನೋಡಿಕೊಳ್ಳದೆ
ನಮ್ಮನ್ನಷ್ಟೇ ನೋಡಿದ್ದಾಳೆಂಬ
ಸತ್ಯವ ತೆರೆದಿಟ್ಟು
ಎತ್ತಲೋ ಹೊರಟು ಹೋಗಿದ್ದಾಳೆ ಅಮ್ಮ
ಋಣ ತೀರುವ ಮುನ್ನ !
~ತುರುವೇಕೆರೆ ಪ್ರಸಾದ್

ಹೆಚ್ಚಿದ ಕೋವಿಡ್ ಸೋಂಕಿತರ ಸಂಖ್ಯೆ: ತುಮಕೂರಿಗೆ ಹೊಸ ಮಾರ್ಗ ಸೂಚಿ

ತುಮಕೂರು

ಕೋವಿಡ್ 19 ಪಾಸಿಟಿವ್ ಹೆಚ್ಚಾಗಿ ಕಂಡು ಬಂದ ಹಿನ್ನೆಲೆ ಜಿಲ್ಲಾ ಪೋಲಿಸ್ ವತಿಯಿಂದ ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ತುಮಕೂರು ನಗರಕ್ಕೆ ಪ್ರವೇಶ ಕಲ್ಪಿಸುವ ರ ಅಸರಸ್ತೆಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ನಗರದಿಂದ ಒಳಗೆ ಬರುವ-ಹೊರಗೆ ಹೋಗುವ ವಾಹನಗಳಿಗೆ ಮಾರ್ಗ ಸೂಚಿ ತಿಳಿಸಲಾಗಿದೆ. ಸಾರ್ವಜನಿಕರು ಅದನ್ನ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ ತಿಳಿಸಿದ್ದಾರೆ.

ತುಮಕೂರು ನಗರದ ಒಳಗೆ ಸಂಚಾರ ಮಾಡುವ ವಾಹನಗಳಿಗೆ ಯಾವುದೇ ನಿಯಮಗಳಿಲ್ಲ.

ತುಮಕೂರು ನಗರಕ್ಕೆ ಹೊರಗಿನಿಂದ ಪ್ರವೇಶಿಸುವ ವಾಹನಗಳು ಈ ಮಾರ್ಗವನ್ನ ಅನುಸರಿಸಬೇಕು.

👉 ಬೆಂಗಳೂರು ಕಡೆಯಿಂದ ತುಮಕೂರು ನಗರದ ಒಳಗಡೆ ಬರುವ ಎಲ್ಲಾ ವಾಹನ ಸವಾರರು ಕ್ಯಾತ್ಸಂದ್ರ ಜಾಸ್ ಟೋಲ್ ಗೇಟ್ ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸತಕ್ಕದ್ದು.

👉 ಕ್ಯಾತ್ಸಂದ್ರ ಸಿಂ ಎಂ ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಮಾಜಿ ಎಂ ಎಲ್ ಎ ಕೆ ಎನ್ ರಾಜಣ್ಣ ರವರ ಮನೆಯ ಮುಂದಿನ ಸರ್ವಿಸ್ ರಸ್ತೆಯಿಂದ ಅಗ್ನನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರಕ್ಕೆ ಬರಬಹುದು.

👉 ಬೆಂಗಳೂರು ಕಡೆಯಿಂದ ಗುಬ್ಬಿ ತಿಪಟೂರು ಚಿಕ್ಕನಾಯಕನಹಳ್ಳಿ ಶಿವಮೊಗ್ಗ ಕಡೆಗೆ ಹೋಗುವ ವಾಹನಗಳು ಕ್ಯಾತ್ಸಂದ್ರ ಜಾಸ್ ಟೋಲ್ ಗೇಟ್ ಬಳಿಯ ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗತಕ್ಕದ್ದು.

👉 ಮೈಸೂರು ಕುಣಿಗಲ್ ಕಡೆಯಿಂದ ಬರುವವರು ಕುಣಿಗಲ್ ಜಂಕ್ಷನ್ ಮೂಲಕ ತುಮಕೂರು ನಗರದ ಒಳಗಡೆ ಬರತಕ್ಕದ್ದು. ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ತುಮಕೂಉರ ನಗರದ ಒಳಗಡೆ ಬರುವವರು ಗುಬ್ಬರಿಂಗ್ ರಸ್ತೆ ಜಂಕ್ಷನ್ ಮೂಲಕ ಬರತಕ್ಕದ್ದು

👉 ಶಿರಾ-ಚಿತ್ರದುರ್ಗ-ದಾವಣಗೆರೆ ಕಡೆಗಳಿಂದ ಬರುವವರು ಲಿಂಗಾಪುರ ಅಂಡರ್-ಪಾಸ್ ಹಳೇ ಎನ್.ಹೆಚ್.4 ರಸ್ತೆ ಮೂಲಕ ಶಿರಾಗೇಟ್ ಗೆ ತಲುಪಬಹುದು.

👉 ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಟಗೆರೆ, ಮಧುಗಿರಿ ಕಡೆಯಿಂದ ಬರುವವರು ಶಿರಾಗೇಟ್ – ಅಂತರಸನಹಳ್ಳಿ ಅಂಡರ್ ಪಾಸ್ ಮೂಲಕ ಪ್ರವೇಶಿಸಬಹುದಾಗಿರುತ್ತದೆ

ಜಾಹಿರಾತು

ತುಮಕೂರು ನಗರದಿಂದ ಹೊರಗೆ ತೆರಳುವ ವಾಹನಗಳು.

👉 ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ- ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನ ಸವಾರರು ಗುಬ್ಬಿರಿಂಗ್ ರಸ್ತೆ ಜಂಕ್ಷನ್ – ರಿಂಗ್ ರಸ್ತೆ ಮೂಲಕ ಕ್ಯಾತ್ಸಂದ್ರ ಜಾಸ್ ಟೋಲ್ ಮೂಲಕ ಹೋಗತಕ್ಕದ್ದು

👉 ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೋಗುವವರು ಬಟವಾಡು ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ ಮತ್ತು ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬಹುದಾಗಿದೆ.

👉 ತುಮಕೂರು ನಗರದಿಂದ ಶಿರಾ ಕಡೆಗೆ ಮತ್ತು ವಸಂತನರಸಾಪುರ ಕಡೆಗೆ ಹೋಗುವವರು ಶಿರಾಗೇಟ್ ಮೂಲಕ ಶ್ರೀದೇವಿ ಮೆಡಿಕಲ್ ಕಾಲೇಜಿನ ಮುಂದಿನ ಹಳೆ ಎನ್.ಹೆಚ್.4 ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ – 48 ರಸ್ತೆಯಲ್ಲಿ ಹೋಗಬಹುದು.

👉 ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಟಗೆರೆ, ಮಧುಗಿರಿ ಕಡೆಗೆ ಹೋಗುವವರು ಶಿರಾಗೇಟ್ – ಅಂತರಸನಹಳ್ಳಿ ಅಂಡರ್ ಪಾಸ್ ಮೂಲಕ ಹೋಗಬಹುದಾಗಿರುತ್ತದೆ.

ಎಲ್ಲಾ ವಾಹನ ಸವಾರರು ಈ ಹೊಸ ಮಾರ್ಗ ಸೂಚಿಯನ್ನ ಅನುಸರಿಸಿ ಕೋವಿಡ್ 19 ತಡೆಗಟ್ಟಲು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಮನವಿ ಮಾಡಿದ್ದಾರೆ.

ಅಮ್ಮನ ಪ್ರಪಂಚದ ಒಳಗೊಮ್ಮೆ….

0

ಇಂದು ತಾಯಂದಿರ ದಿ‌ನ. ಇದರ ಅಂಗವಾಗಿ ಮಮತಾ ಗೌಡ ಅವರು ಬರೆದಿರುವ ಅಮ್ಮಂದಿರ ಕುರಿತ ಆಪ್ತತೆಯ ಬರಹ ನಮ್ಮ ಎಲ್ಲ ಓದುಗರಿಗಾಗಿ. ಅಮ್ಮನ ಜತೆಗಿನ ಒಂದೆರಡು ನೆನಪು, ಸೆಲ್ಫಿ ಇಲ್ಲಿಗೆ 9844817737 ಕಳುಹಿಸಿದರೆ ಪ್ರಕಟಿಸಲಾಗುವುದು.

ಅಮ್ಮ

ಎಂಬ ಅಕ್ಷರವೇ ಮಕ್ಕಳ ತೊದಲ ನುಡಿ ಮತ್ತು ಮೊದಲ ನುಡಿ. ಹುಟ್ಟಿದಾಕ್ಷಣ ಅಮ್ಮ ಎಂದಾಗ ಒಮ್ಮೆ ತನ್ನ ಕಷ್ಟಗಳನ್ನೆಲ್ಲ ಒಂದೇ ಬಾರಿ ಮರೆತುಬಿಡುವವಳು ತಾಯಿ. ತಾಯಿಯೇ ಮೊದಲ ದೇವರು. ಈ ಬರಹ ನನ್ನ ತಾಯಿ ಮಂಜುಳಾರವರಿಗೆ ಸಮರ್ಪಣೆ.

ನಾ ಕಂಡ ಅದ್ಭುತ ಮತ್ತು ಪ್ರತ್ಯಕ್ಷ ದೇವತೆ ನನ್ನ ತಾಯಿ, ಸದಾ ಹಸನ್ಮುಖಿ , ನಗು ಮುಖದ ಚೆಲುವೆ ಅವಳೆಂದರೆ ಬಹಳ ಇಷ್ಟ ! ಎಂದು ಎಲ್ಲರಂತೆ ಹೇಳುವುದಿಲ್ಲ. ಅವಳಲ್ಲಿ ಸದಾ ಜಗಳವಾಡುತ್ತಾ ಬೆಳೆದವಳು ನಾನು.ಅವಳಿಗೆ ಮುನಿಸು ನನ್ನ ಮೇಲೆ ಸದಾ, ಆದರೆ ನನ್ನ ತಾಯಿಯನ್ನು ನಾನು ಸದಾ ನನ್ನ ಮನಸ್ಸಿನಲ್ಲಿ ಆರಾಧಿಸುತ್ತೇನೆ – ಸಾವಿರ ಕಾರಣಗಳು ಬೇಕಿಲ್ಲ ಅವಳ ಪೂಜಿಸಲು, ಒಂದೇ ಕಾರಣ ಸಾಕು ಅವಳು ನನ್ನ ಜನ್ಮದಾತೆ – ನನ್ನ ಮಾತೆ.

ಅವಳಿಗೆ ಮುನಿಸು ನನ್ನ ಮೇಲೆ ಸದಾ, ಆದರೆ ನನ್ನ ತಾಯಿಯನ್ನು ನಾನು ಸದಾ ನನ್ನ ಮನಸ್ಸಿನಲ್ಲಿ ಆರಾಧಿಸುತ್ತೇನೆ – ಸಾವಿರ ಕಾರಣಗಳು ಬೇಕಿಲ್ಲ ಅವಳ ಪೂಜಿಸಲು, ಒಂದೇ ಕಾರಣ ಸಾಕು ಅವಳು ನನ್ನ ಜನ್ಮದಾತೆ – ನನ್ನ ಮಾತೆ.

ಅಮ್ಮ ಎಂಬ ನಿಜ ದೈವ ಇರುವಾಗ ಇಲ್ಲಿ ಬೇರೆ ದೇವರ ಅವಶ್ಯಕತೆ ನಮಗೇಕೆ? ಈ ಸಮಯದಲ್ಲಿ ಕೆಲವು ಸಲಹೆಗಳು ನಿಮಗಾಗಿ:

· ಅಮ್ಮನ ಮನಸ್ಸು ನೋಯಿಸಬೇಡಿ – ಪ್ರತಿ ಹೆಣ್ಣನ್ನು ತಾಯಿಯಂತೆ ಕಾಣಿ.

· ನೀವು ಎಷ್ಟೇ ಕೆಲಸದ ಒತ್ತಡದಲ್ಲಿದ್ದರು ಅವಳಿಗೊಮ್ಮೆ ಕರೆ ಮಾಡಿ ಮಾತನಾಡಿ.

· ಸಣ್ಣ – ಪುಟ್ಟ ಉಡುಗೊರೆಗಳೇ ಸಾಕು ಅವಳ ಮೆಚ್ಚಿಸಲು.

· ನಿರೀಕ್ಷೆಗಳನ್ನು ಬಯಸದಿರಿ ( ಹಣ, ಆಸ್ತಿ ಇತ್ಯಾದಿ).

· ಬೇರೆಯವ ಮಧ್ಯೆ ಅವಳು ತಲೆ ತಗ್ಗಿಸುವ ಕೆಲಸ ಮಾಡಬೇಡಿ.

· ಅವಳ ಆಶೀರ್ವಾದ ಪಡೆಯಲು ಎಂದು ಹಿಂಜರಿಯದಿರಿ.

ಇದಕ್ಕೆ ಕಾರಣ ಅಮ್ಮಂದಿರ ಪ್ರಪಂಚ ತುಂಬಾ ಚಿಕ್ಕದು – ಮನೆ, ಗಂಡ, ಮಕ್ಕಳು ಇಷ್ಟೇ ಅವಳ ಪ್ರಪಂಚ. ಅವಳ ಪ್ರಪಂಚ ತೀರ ಚಿಕ್ಕದು ನಾಲ್ಕು ಗೋಡೆಗಳ ಮಧ್ಯೆ ಅವಳ ಬದುಕು ಶುರು ಮತ್ತೆ ಅಂತ್ಯ ಎರಡನ್ನೂ ಕಾಣುತ್ತದೆ. ಅದಕ್ಕಾಗಿ ಅವಳನ್ನು ಸದಾ ಸಂತೋಷದಿಂದ ನೋಡಿಕೊಳ್ಳಿ. ನಾನೇಕೆ ನನ್ನ ತಾಯಿಯನ್ನು ಬಹಳಷ್ಟು ಪ್ರೀತಿಸುತ್ತೇನೆಂದರೆ ನಾವು ನಾಲ್ಕು ಜನ ಹೆಣ್ಣು ಮಕ್ಕಳು ನನ್ನ ತಾಯಿ ಎಂದೂ ಗಂಡು ಮಗು ಬೇಕು ಎಂದು ಬಯಸಲಿಲ್ಲ. ನಮ್ಮಲ್ಲೇ ಗಂಡು ಮಕ್ಕಳನ್ನು ಕಂಡ ಹೆಣ್ಣು ಹುಲಿಗಳಂತೆ ಬೆಳಸಿದ್ದಾಳೆ. ನಾವು ಬದುಕುವುದನ್ನು ನೋಡಿ ಸಂತೋಷಿಸುತ್ತಾಳೆ. ತಾಯಿಯೇ.

ಅವಳ ಪ್ರಪಂಚ ತೀರ ಚಿಕ್ಕದು ನಾಲ್ಕು ಗೋಡೆಗಳ ಮಧ್ಯೆ ಅವಳ ಬದುಕು ಶುರು ಮತ್ತೆ ಅಂತ್ಯ ಎರಡನ್ನೂ ಕಾಣುತ್ತದೆ. ಅದಕ್ಕಾಗಿ ಅವಳನ್ನು ಸದಾ ಸಂತೋಷದಿಂದ ನೋಡಿಕೊಳ್ಳಿ. ನಾನೇಕೆ ನನ್ನ ತಾಯಿಯನ್ನು ಬಹಳಷ್ಟು ಪ್ರೀತಿಸುತ್ತೇನೆಂದರೆ ನಾವು ನಾಲ್ಕು ಜನ ಹೆಣ್ಣು ಮಕ್ಕಳು ನನ್ನ ತಾಯಿ ಎಂದೂ ಗಂಡು ಮಗು ಬೇಕು ಎಂದು ಬಯಸಲಿಲ್ಲ. ನಮ್ಮಲ್ಲೇ ಗಂಡು ಮಕ್ಕಳನ್ನು ಕಂಡ ಹೆಣ್ಣು ಹುಲಿಗಳಂತೆ ಬೆಳಸಿದ್ದಾಳೆ. ನಾವು ಬದುಕುವುದನ್ನು ನೋಡಿ ಸಂತೋಷಿಸುತ್ತಾಳೆ. ತಾಯಿಯೇ ಆಗೇ.

“ತಾಯಿಗಿಂತ ಬಂದುವಿಲ್ಲ ಉಪ್ಪಿಗಿಂತ ರುಚಿಯಿಲ್ಲ “ – ಹೌದು ವೇದ ಸುಳ್ಳಾದರೂ ಗಾದೆ ಸುಳ್ಳಾಗದು. ಈ ಗಾದೆಯ ಅರ್ಥ ಅಕ್ಷರಶಃ ಸತ್ಯ. ಮಕ್ಕಳನ್ನು ಹೆತ್ತು ಹೊತ್ತು ಬೆಳೆಸುವ ಕಲೆ ಅವಳಿಗಷ್ಟೇ ಗೊತ್ತು. ಒಳ್ಳೆಯ ಭವಿಷ್ಯ ಬರೆಯುವ ಬ್ರಹ್ಮ ಅವಳು.

ಒಂದು ಹೆಣ್ಣು ತಾಯಿಯಾದಾಗ ಅವಳು ಅನುಭವಿಸುವ ಸಂತೋಷ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ತನ್ನಲ್ಲಿ ಸಾವಿರ ಆಸೆಗಳ ಹುಟ್ಟು ಹಾಕಿ ನಮಗೆ ಜನ್ಮ ನಿಡುತ್ತಾಳೆ. ನಾವಾಡುವ ತೊದಲ ನುಡಿಗಾಗಿ ಕಾಯುತ್ತಾಳೆ. ಅಂಬೆಗಾಲಿಡಲು ಸಂಭ್ರಮಿಸುತ್ತಾಳೆ. ನಿಸ್ವಾರ್ಥ ಮನಸ್ಸಿನ ಮೃದು ಸ್ವಭಾವದ ಅಂತಃಕರಣ ಅವಳದು. ಅವಳಿಗೆ ಮಕ್ಕಳ ಸಂತೋಷವೇ ಮುಖ್ಯ. ಆಸೆಗಳೆ ಇಲ್ಲದಂತೆ ಬದುಕಲು ಅವಳಿಂದ ಮಾತ್ರ ಸಾಧ್ಯ. ಮಕ್ಕಳ ಜಗತ್ತಿನಲ್ಲಿ ಅವಳನ್ನೇ ಅವಳು ಮಾರಿಯುತ್ತಾಳೆ – ಅವಳು ಎಷ್ಟರ ಮಟ್ಟಿಗೆ ನಿಸ್ವಾರ್ಥಿ ಎಂದರೆ ದೇವರಲ್ಲಿಯೂ ಸಹ ಅವಳಿಗಾಗಿ ಏನನ್ನು ಬೇಡುವುದಿಲ್ಲ. ಇಡೀ ಜನ್ಮವನ್ನೇ ಗಂಡ ಮತ್ತು ಮಕ್ಕಳಿಗಾಗಿ ಮೀಸಲಿಡುತ್ತಾಳೆ – ಅವಳಿಗೆ ಪ್ರೀತಿಸುವುದೇ ಹೊರತು ಬೇರೇ ಪ್ರಪಂಚವೆ ತಿಳಿಯದು.

ಪ್ರೀತಿಯಲ್ಲಿ ಮೈ ಮರೆತ ಅವಳು – ಅವಳ ಆರೋಗ್ಯದ ಬಗ್ಗೆ ಕೂಡ ಯೋಚಿಸುವುದಿಲ್ಲ. ಸದಾ ನಮಗಾಗಿ ಬದುಕುವಳು. ನಮಗಾಗಿ ಅವಳ ಹೋರಾಟ ! – ಮಧ್ಯೆ ರಾತ್ರಿ ಮಕ್ಕಳು ಮನೆಗೆ ಬಂದರು ಅವರಿಗಾಗಿ ಎಚ್ಚರದಿಂದ ಕಾಯುವಳು ತಾಯಿ ಮಾತ್ರ ಅವಳ ಸೇವೆಗೆ ಕೋಟಿ ಕೊಟ್ಟರು ಸಾಲದು ತಾಯಿಯ ಋಣ ತೀರಿಸಲು ಏಳು ಜನ್ಮಗಳಲ್ಲೂ ಸಾದ್ಯವಿಲ್ಲ.
ಮಕ್ಕಳ ಜಗತ್ತಿನಲ್ಲಿ ಅವಳನ್ನೇ ಅವಳು ಮಾರಿಯುತ್ತಾಳೆ – ಅವಳು ಎಷ್ಟರ ಮಟ್ಟಿಗೆ ನಿಸ್ವಾರ್ಥಿ ಎಂದರೆ ದೇವರಲ್ಲಿಯೂ ಸಹ ಅವಳಿಗಾಗಿ ಏನನ್ನು ಬೇಡುವುದಿಲ್ಲ. ಇಡೀ ಜನ್ಮವನ್ನೇ ಗಂಡ ಮತ್ತು ಮಕ್ಕಳಿಗಾಗಿ ಮೀಸಲಿಡುತ್ತಾಳೆ – ಅವಳಿಗೆ ಪ್ರೀತಿಸುವುದೇ ಹೊರತು ಬೇರೇ ಪ್ರಪಂಚವೆ ತಿಳಿಯದು.

ಪ್ರೀತಿಯಲ್ಲಿ ಮೈ ಮರೆತ ಅವಳು – ಅವಳ ಆರೋಗ್ಯದ ಬಗ್ಗೆ ಕೂಡ ಯೋಚಿಸುವುದಿಲ್ಲ. ಸದಾ ನಮಗಾಗಿ ಬದುಕುವಳು. ನಮಗಾಗಿ ಅವಳ ಹೋರಾಟ ! – ಮಧ್ಯೆ ರಾತ್ರಿ ಮಕ್ಕಳು ಮನೆಗೆ ಬಂದರು ಅವರಿಗಾಗಿ ಎಚ್ಚರದಿಂದ ಕಾಯುವಳು ತಾಯಿ ಮಾತ್ರ ಅವಳ ಸೇವೆಗೆ ಕೋಟಿ ಕೊಟ್ಟರು ಸಾಲದು ತಾಯಿಯ ಋಣ ತೀರಿಸಲು ಏಳು ಜನ್ಮಗಳಲ್ಲೂ ಸಾದ್ಯವಿಲ್ಲ.

ಭೂವಿಯಲ್ಲಿರುವ ಅತ್ಯಂತ ದುಬಾರಿ ವಸ್ತು ಎಂದರೆ ಅದು ತಾಯಿ ಮಾತ್ರ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುವರೇ ಹೊರತು ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ತಾಯಿ ದೇವರ ಪ್ರತಿನಿಧಿಯಾಗಿ ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು – ಸಾವಿರ ದೇವರ ಸುತ್ತುವ ಬದಲು ತಾಯಿಯನ್ನು ನೆಮ್ಮದಿಯಿಂದ ನೋಡಿಕೊಳ್ಳಿ.

ಕೊನೆಗೆ ದೇವರಾದರೂ ತಾಯಿಯ ಗರ್ಭದಲ್ಲೇ ಜನಿಸಬೇಕು – ತಾಯಿ ಪ್ರೀತಿಯ ಪರಿ ನೋಡಿಯೇ ತೀರ ಬೇಕು. ನವಮಾಸಗಳ ಹೊತ್ತು – ಹೆತ್ತು, ತಿದ್ದಿ ಬುದ್ದಿ ಹೇಳಿ – ನಮ್ಮನ್ನು ದೇಶದ ಪ್ರಜೆಗಳಾಗಿಸಿದ್ದಕ್ಕೆ – ನನ್ನೆಲ್ಲ ತಾಯಂದರಿಗೂ ತಾಯಿಯ ದಿನದ ಶುಭಾಶಯಗಳು.

Regards,

Mamathagowda

ಒಕೆ. Thanks madam
Show quoted text