Friday, May 8, 2026
Google search engine
Home Blog Page 235

ಬೆಳಗುಂಬದ ಸರ್ಕಾರಿ ಶಾಲೆ ಕ್ವಾರಂಟೈನ್ ಗೆ: ಜಿಲ್ಲಾಧಿಕಾರಿಗೆ ಪತ್ರ

Publicstory. in


ತುಮಕೂರು: ತಾಲ್ಲೂಕಿನ ಬೆಳಗುಂಬದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕೊರೊನಾ ಸಂಬಂಧಿಸಿದ ವ್ಯಕ್ತಿಗಳಿಗೆ ಕ್ವಾರಂಟೈನ್ ಗೆ ಬಳಸಿಕೊಳ್ಳಬಾರದು ಎಂದು ಗ್ರಾಮ ಪಂಚಾಯತಿ ಸದಸ್ಯ ಬೆಳಗುಂಬ ವೆಂಕಟೇಶ್ ಒತ್ತಾಯಿಸಿದ್ದಾರೆ.

ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮವು ತುಮಕೂರು ನಗರಕ್ಕೆ ಹೊಂದಿಕೊಂಡಿದ್ದು, ಇದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಈವರೆಗೂ ಈ ಗ್ರಾಮವು ಕೊರೊನಾ ಆತಂಕದಿಂದ ಮುಕ್ತವಾಗಿದ್ದು, ಇಲ್ಲಿನ ಗ್ರಾಮಸ್ಥರು ನಿಶ್ಚಿಂತರಾಗಿದ್ದಾರೆ. ಸರ್ಕಾರದ ಕ್ರಮಗಳು ಮತ್ತು ಗ್ರಾಮಸ್ಥರ ಸಹಕಾರ ಇದಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ದಿನಾಂಕ 08-05-2020, ಶುಕ್ರವಾರ ರಾತ್ರಿಯಿಂದ ಇದ್ದಕ್ಕಿದ್ದಂತೆ ಬೆಳಗುಂಬ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ಬೆಳಗುಂಬ ಗ್ರಾಮದ ಒಳಭಾಗದಲ್ಲೇ ಇರುವ ಹಾಗೂ ಸುತ್ತಲೂ ವಾಸದ ಮನೆಗಳನ್ನು ಹೊಂದಿರುವ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊರೊನಾ ಸಂಬಂಧಿತ ವ್ಯಕ್ತಿಗಳಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗುವುದೆಂಬ ವದಂತಿ ದಟ್ಟವಾಗಿ ಹಬ್ಬಿದ್ದು, ಇದು ಸ್ಥಳೀಯ ಗ್ರಾಮಸ್ಥರನ್ನು ತೀವ್ರವಾದ ಆತಂಕಕ್ಕೆ ತಳ್ಳಿದೆ ಎಂದು ತಿಳಿಸಿದ್ದಾರೆ.

ಈವರೆಗೆ ಈ ಗ್ರಾಮವು ಯಾವುದೇ ಸೋಂಕಿಲ್ಲದೆ, ಇಲ್ಲಿನ ಜನರು ಸುರಕ್ಷಿತವಾಗಿದ್ದಾರೆ. ಆದರೆ ಈಗ ಗ್ರಾಮದ ಮಧ್ಯೆ ಇರುವ ಈ ಶಾಲೆಯನ್ನು ಕ್ವಾರಂಟೈನ್ ಗೆ ಬಳಸಿಕೊಂಡರೆ, ಈ ಗ್ರಾಮದಲ್ಲಿ ಕೊರೊನಾ ಸೋಂಕು ಹರಡಬಹುದೆಂಬ ಭೀತಿ ಗ್ರಾಮಸ್ಥರನ್ನು ಕಾಡತೊಡಗಿದೆ ಎಂದು ವಿವರಿಸಿದ್ದಾರೆ.

ಬೆಳಗುಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಗೆ ಬಳಸಬಾರದೆಂಬುದು ಬೆಳಗುಂಬ ಗ್ರಾಮಸ್ಥರ ಒಕ್ಕೊರಲ ಬೇಡಿಕೆಯಾಗಿದೆ. ಆದ್ದರಿಂದ ದಯವಿಟ್ಟು ತಾವು ಈ ಬಗ್ಗೆ ವಿಶೇಷ ಗಮನವನ್ನು ನೀಡಿ, ಬೆಳಗುಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಗೆ ಉಪಯೋಗಿಸಿಕೊಳ್ಳಬಾರದೆಂದು ತಮ್ಮಲ್ಲಿ ಕಳಕಳಿಯಿಂದ ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ.

ಲೈಫ್ ಎಂಬ 13 ಎಪಿಸೋಡ್

ಜಿ ಎನ್ ಮೋಹನ್


ಅದು ಸರಿ 10:10 ಯಾಕೆ ಅಂತ ಕೇಳಿದೆ

ಅವನು ಅವಾಕ್ಕಾಗಿ ಹೋದ
ಆ ಪ್ರಶ್ನೆ ಖಂಡಿತಾ ಅವನು ನಿರೀಕ್ಷಿಸಿರಲಿಲ್ಲ

ಬರುವ ಪ್ರಶ್ನೆ ಏನಿರಬಹುದು ಎಂದು ಆತ ಮೊದಲೇ ಲೆಕ್ಕ ಮಾಡಿ ಇಟ್ಟುಕೊಂಡಿದ್ದ
ಹಾಗಾಗಿ ಉತ್ತರಗಳೂ

ಆದರೆ ಇದು ಅವನಿಗೆ ಖಂಡಿತಾ ಅನಿರೀಕ್ಷಿತ
ಹಾಗಾಗಿ ತಬ್ಬಿಬ್ಬಾಗಿ ನನ್ನ ಮುಖ ನೋಡಿದ
ಏನೋ ಒಂದು ಉತ್ತರ ಕೊಟ್ಟು ಪಾರಾಗುವ ಪ್ರಶ್ನೆಯೂ ಅದಾಗಿರಲಿಲ್ಲ
ಹಾಗಾಗಿ ‘ಒಂದು ನಿಮಿಷ ತಾಳಿ’ ಎಂದವನೇ ಎಲ್ಲೆಲ್ಲಿಗೋ ನಂಬರ್ ತಿರುಗಿಸತೊಡಗಿದ

ಅದು ಒಂದು ಪತ್ರಿಕಾ ಗೋಷ್ಠಿ
ಟೈಟಾನ್ ವಾಚ್ ಕಂಪನಿ ‘ರಂಗೋಲಿ’ ಅನ್ನುವ ತನ್ನ ಹೊಸ ಸೀರೀಸ್ ಬಿಡುಗಡೆ ಮಾಡಲು ಸಜ್ಜಾಗಿತ್ತು
ಅದಕ್ಕಾಗಿ ಆ ಕಂಪನಿ ಕರೆದಿದ್ದ ಗೋಷ್ಠಿ ಅದು

ನಾನು ‘ರಂಗೋಲಿ’ ಅನ್ನೋ ಹೆಸರು ಏಕೆ ಇಟ್ಟಿರಿ,
ಯಾಕೆ ಅಷ್ಟೊಂದು ರೇಟು
ಯಾವಾಗ ಮಾರ್ಕೆಟ್ ಗೆ ಬಿಡ್ತೀರಿ
ರಿಪೇರಿಗೆ ಬಂದರೆ ಎಲ್ಲಿ ಹೋಗ್ಬೇಕು ಅನ್ನೋ ಪ್ರಶ್ನೆ ಕೇಳಲಿಲ್ಲ

ನಾನು ಕೇಳಿದ್ದು-
ಯಾಕೆ ಎಲ್ಲಾ ವಾಚ್ ನಲ್ಲೂ ಮುಳ್ಳುಗಳು 10:10 ಮಾತ್ರ ತೋರಿಸುತ್ತೆ

ನೀವು ಅಂಗಡೀನಲ್ಲಿ ಇಡೋ ಡಿಸ್ಪ್ಲೇ ಪೀಸ್ ನಲ್ಲಿ
ಕೊಡೋ ಜಾಹೀರಾತಲ್ಲಿ
ಈಗ ನಮ್ಮೆದುರು ನೀವು ಇಟ್ಟಿರೋ ಸೆಟ್ ನಲ್ಲಿ ಕೂಡಾ.. ಅಂದೆ

ಬಹುಷಃ ಆತನೂ ಆಗ ಅದನ್ನು ಮನವರಿಕೆ ಮಾಡಿಕೊಂಡನೋ ಏನೋ
ಉತ್ತರ ಹುಡುಕಲಾರಂಭಿಸಿದ

ಅದಕ್ಕೂ ಸಾಕಷ್ಟು ಮುಂಚೆ ಹೀಗೆ ಒಂದು ಪ್ರಶ್ನೆ ಕೇಳಿದ್ದೆ
ವಾಚ್ ಅಂಗಡಿಯವರಿಗಲ್ಲ
‘ವಾಚ್ ಡಾಗ್’ ಅನಿಸಿಕೊಂಡಿದ್ದ ದೂರದರ್ಶನದ ಮುಂದೆ

ಯಾವುದೋ ಕಾರಣಕ್ಕಾಗಿ ದೂರದರ್ಶನದ ನಿರ್ದೇಶಕರು ದೆಹಲಿಯಿಂದ ಇಲ್ಲಿಗೆ ಬಂದಿದ್ದರು

ಅದು ಇನ್ನೂ ಖಾಸಗಿ ಚಾನಲ್ ಗಳನ್ನು ಕಾಣದ ಕಾಲ
ದೂರದರ್ಶನ ಒಂದೇ ಮನರಂಜನೆಗೆ ಕಿಟಕಿ
ಆದರೆ ಎಲ್ಲಾ ಧಾರಾವಾಹಿಗಳು 13 ವಾರಕ್ಕೆ ಮುಗಿದು ಹೋಗುತ್ತಿದ್ದವು

ನನಗೆ ಅದೇ ಕುತೂಹಲ- ಸಾವಿರಲಿ ನೋವಿರಲಿ, ನಲಿವಿರಲಿ ಒಲವಿರಲಿ
ಅದು ಹೇಗಪ್ಪಾ ಸರಿಯಾಗಿ 13 ವಾರವನ್ನೇ ಆಯ್ಕೊಂಡು ಅಡ್ಜಸ್ಟ್ ಆಗಿಬಿಡುತ್ತೆ ಅಂತ

ಹಾಗಾಗಿ ದೆಹಲಿಯಿಂದ ನಿರ್ದೇಶಕರು ಬಂದು ಪತ್ರಿಕಾ ಗೋಷ್ಟಿ ಮುಗಿಸಿದಾಗ ಈ ಪ್ರಶ್ನೆ ಹಾಕಿಬಿಟ್ಟಿದ್ದೆ

ಅವರೋ ದೂರದರ್ಶನದ ಒಳಗಿನ ನೂರೆಂಟು ಕಷ್ಟ ಕೋಟಲೆ ಬಗ್ಗೆ
ಸರ್ಕಾರಿ ಪರ ನಿಲುವಿನ ಬಗ್ಗೆ,
ಇಲ್ಲಾ ಪ್ರಸಾರ ಭಾರತಿ ಬಗ್ಗೆ ಪ್ರಶ್ನೆ ಬರುತ್ತೇನೋ ಅಂದುಕೊಂಡಿದ್ದರು

ನಾನು ಯಾಕೆ ನಿಮ್ಮ ಎಲ್ಲಾ ಧಾರಾವಾಹಿಗಳೂ 13 ಎಪಿಸೋಡ್ ನಲ್ಲಿ ಮುಗಿದು ಹೋಗಿಬಿಡುತ್ತೆ ಅಂತ ಕೇಳಿದ್ದೆ
ಥೇಟ್ ವಾಚ್ ಕಂಪನಿಯವನ ಥರವೇ ನಿರ್ದೇಶಕರೂ ಮುಖ ಮಾಡಿದ್ದರು

ವಾಚ್ ಕಂಪೆನಿಯವನು ಅಲ್ಲಿ ಇಲ್ಲಿ ಫೋನ್ ತಿರುಗಿಸಿ ಆದ ಮೇಲೆ ಹೇಳಿದ
ನೋಡಿ ವಾಚ್ ನಲ್ಲಿ 10 10 ಸಮಯ ಇದ್ರೆ ಬೊಂಬಾಟ್ ಆಗಿರುತ್ತೆ

ಏಕೆ ಅಂದ್ರೆ ಮುಳ್ಳುಗಳೆರಡೂ 10 10 ರಲ್ಲಿದ್ದಾಗ ಮಾತ್ರ ನಮ್ಮ ಕಂಪನಿ ಲೋಗೋ ಚೆನ್ನಾಗಿ ಕಾಣುತ್ತೆ
ಡೇಟು ಸರಿಯಾಗಿ ಕಾಣಿಸುತ್ತೆ

ನನಗೋ ಪ್ರಶ್ನೆಗಳು ಮುಗಿದಿರಲಿಲ್ಲ
ಸರಿ 8 20 ಕ್ಕೆ ಸೆಟ್ ಮಾಡಿದ್ರೂ ಹಾಗೇ ಇರುತ್ತಲ್ಲ
ನಿಮ್ಮ ಲೋಗೋ, ಡೇಟು ಎಲ್ಲಾ ಅಂದೆ

ಅವನು ಮತ್ತೆ ಫೋನ್ ತಿರುಗಿಸಲು ಆರಂಭಿಸಿದ

ಆಮೇಲೆ ಅವನ ಮುಖ ಎಷ್ಟು ಹಸನ್ಮುಖವಾಗಿ ಹೋಯಿತು ಎಂದರೆ
32 ಹಲ್ಲೂ ಕಿರಿದು ಹೇಳಿದ
ಸಮಯ 10 10 ಕ್ಕೆ ಇಟ್ಟರೆ ಅದು ನಗುಮುಖದ ಥರಾ ಕಾಣುತ್ತೆ ಹ್ಯಾಪಿ ಫೀಲಿಂಗ್ ಕೊಡುತ್ತೆ
8 20ಕ್ಕೆ ಇಟ್ಟರೆ ಅದು ದುಃಖದ ಮುಖದ ಥರಾ ಕಾಣುತ್ತೆ

ಅಷ್ಟೇ ಅಲ್ಲ ಸರಿಯಾಗಿ ನೋಡಿ ಅದು
V ಅಂದ್ರೆ Victory ಸಿಂಬಲ್ ಥರಾ ಕಾಣಲ್ವಾ..? ಅಂದಿದ್ದ

ದೂರದರ್ಶನದ ನಿರ್ದೇಶಕರೇನೂ ಯಾರಿಗೂ ಫೋನ್ ತಿರುಗಿಸಲಿಲ್ಲ
ನನಗೇ ಕೇಳಿದರು- ಒಂದು ತಿಂಗಳಿಗೆ ಎಷ್ಟು ವಾರ?

ನಾನೋ ಇದೇನಪ್ಪ ಪ್ರಶ್ನೆಗೆ ಪ್ರಶ್ನೆನೇ ಉತ್ತರ ಅಂದುಕೊಂಡು
ನನಗೆ ಗೊತ್ತಿರೋ ಗಣಿತ ತಿರುವಾಕಿ 4 ಅಂದೆ
ಹಾಗಾದ್ರೆ 13 ಅಂದ್ರೆ ಎಷ್ಟು ತಿಂಗಳಾಯಿತು ಎಂದರು
4×3=12
ಮೂರು ತಿಂಗಳು ಅಂದೆ

ಅದೇ ಕಾರಣ
ಸರ್ಕಾರಿ ವ್ಯವಹಾರದಲ್ಲಿ ಒಂದು ವರ್ಷ ಅಂದ್ರೆ 4 ಕ್ವಾರ್ಟರ್
ಒಂದು ಕ್ವಾರ್ಟ್ರ್ ಅಂದ್ರೆ 3 ತಿಂಗಳು
ನಾವು ಇಡೀ ಯೋಜನೇ ತಯಾರಿಸೋದೇ ಮೂರು ತಿಂಗಳ ನಾಲ್ಕು ಅವಧಿಗೆ
ಹಾಗಾಗಿ ಎಂತಹ ಕಥೆಯಾದರೂ, ಚರಿತ್ರೆ ಪುರಾಣವಾದರೂ ಮೂರು ತಿಂಗಳಿಗೆ ಮುಕ್ತಾಯ ಎಂದರು

ಎರಡೂ ಗೋಷ್ಠಿಗಳಿಂದ ಆಚೆ ಎದ್ದು ಬಂದ ನಾನು ಈಗ ಟೈಟಾನ್ ವಾಚ್ ನಂತೆ, ದೂರದರ್ಶನ ಸೀರಿಯಲ್ ನಂತೆ ಆಗಿ ಹೋಗಿದ್ದೇನೆ

ಏನೇ ಇರಲಿ, ಎಂತಹ ಅಳುವ ಕಡಲನ್ನು ಈಜುತ್ತಿದ್ದರೂ
ನಗೆಯ ಹಾಯಿ ದೋಣಿ ಏರಿದವನಂತೆ ಇರಬೇಕು ಅನ್ನುವುದು ಮನದಟ್ಟಾಗಿ ಹೋಗಿದೆ

ನಾನು ಸದಾ10 10 ರ ಮುಳ್ಳಿನಂತೆ ..
ಎಲ್ಲರಿಗೂ ನನ್ನ ಇರುವು ಗೊತ್ತಾಗುವಂತೆ
ಬಿದ್ದು ಹೋದ ಬದುಕಿದ್ದರೂ ನಗು ಮುಖ ಹೊತ್ತು
ಸದಾ ಎರಡು ಬೆರಳೆತ್ತಿ ವಿಕ್ಟರಿ ಸೈನ್ ತೋರಿಸಿತ್ತಾ ಬದುಕುತ್ತಿದ್ದೇನೆ

ಅಷ್ಟೇ ಅಲ್ಲ
ನನ್ನ ನೋವು, ನಲಿವು, ಸುಖ ದುಃಖ ಹಾಡು ಪಾಡು ಎಲ್ಲವನ್ನೂ
13 ವಾರಕ್ಕೆ ಅಂದರೆ ಸರಿಯಾಗಿ ಮೂರು ತಿಂಗಳಿಗೆ
ಮುದುರಿ ಸುತ್ತಿಡುತ್ತೇನೆ

ನನ್ನ ಎಂತಹ ಗೋಳಿದ್ದರೂ, ಕಥೆ ಇದ್ದರೂ, ರಂಗಿನಾಟವಿದ್ದರೂ
ಯಸ್, ಮೂರು ತಿಂಗಳು ಅಥವಾ 13 ಎಪಿಸೋಡ್ ಗಳು ಮಾತ್ರ

ಆಮೇಲೆ ಹೊಸದೇ ಕಥೆ.. ಹೊಸದೇ ಹಾಡು.. ಹೊಸದೇ ಪಾಡು

ಇಬ್ಬರು ತಬ್ಲಿಘಿಗಳ ಸ್ಥಳಾಂತರ ಹೆಚ್ಚಿದ ಆತಂಕ

ತುಮಕೂರು ಜಿಲ್ಲೆ ಪಾವಗಡದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ತಬ್ಲಿಘಿಗಳಲ್ಲಿ ಇಬ್ಬರನ್ನು ಶುಕ್ರವಾರ ರಾತ್ರಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಗುಜರಾತ್ ನಿಂದ ಬಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಅವರಲ್ಲಿ ಇಬ್ಬರನ್ನು ತುಮಕೂರಿಗೆ ಕಳುಹಿಸಿರುವುದು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.

ಕ್ವಾರಂಟೈನ್ ಮಾಡಲಾದ ಕುರುಬರಹಳ್ಳಿ ಗೇಟ್ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಭಾಗದ ಗ್ರಾಮಗಳ ಜನತೆ ಓಡಾಡದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ.

ದಿನ ಭವಿಷ್ಯ

ಜಾಹಿರಾತು

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668

ಪಂಚಾಂಗ

ದಿನಾಂಕ : 9, ಮೇ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಶನಿವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಬಿದಿಗೆ
(ನಿನ್ನೆ ಮಧ್ಯಾಹ್ನ 1 ಗಂ॥ 7 ನಿ।। ರಿಂದ
ಇಂದು ಬೆಳಿಗ್ಗೆ 10 ಗಂ॥ 19 ನಿ।। ತನಕ)
ನಕ್ಷತ್ರ : ಅನೂರಾಧ
(ನಿನ್ನೆ ಬೆಳಿಗ್ಗೆ 8 ಗಂ॥ 41 ನಿ।। ರಿಂದ
ಇಂದು ಬೆಳಿಗ್ಗೆ 6 ಗಂ॥ 34 ನಿ।। ತನಕ)
ಯೋಗ : ಪರಿಘ
ಕರಣ : ಗರಜೆ
ವರ್ಜ್ಯಂ : ಇಂದು ಯಾವುದೇ ವರ್ಜ್ಯಂ ಇಲ್ಲ.
ಅಮೃತಕಾಲ : ಇಂದು ಯಾವುದೇ ಅಮೃತಕಾಲ ಇಲ್ಲ.
ದುರ್ಮುಹೂರ್ತ : (ಇಂದು ಬೆಳಿಗ್ಗೆ 7 ಗಂ॥ 28 ನಿ।। ರಿಂದ ಇಂದು ಬೆಳಿಗ್ಗೆ 8 ಗಂ॥ 19 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 8 ಗಂ॥ 59 ನಿ।। ರಿಂದ ಇಂದು ಬೆಳಿಗ್ಗೆ 10 ಗಂ॥ 35 ನಿ।। ತನಕ)
ಗುಳಿಕ : (ಇಂದು ಪ್ರಾತಃಕಾಲ 5 ಗಂ॥ 46 ನಿ।।
ರಿಂದ ಇಂದು ಬೆಳಿಗ್ಗೆ 7 ಗಂ॥ 22 ನಿ।। ತನಕ)
ಯಮಗಂಡ : (ಇಂದು ಮಧ್ಯಾಹ್ನ 1 ಗಂ॥ 48 ನಿ।। ರಿಂದ ಇಂದು ಸಂಜೆ 3 ಗಂ॥ 24 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 46 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 38 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ವೃಶ್ಚಿಕ

ರಾಶಿ ಭವಿಷ್ಯ

ಮೇಷ ರಾಶಿ ಭವಿಷ್ಯ : 9 May 2020
ಕುಟುಂಬದ ವೈದ್ಯಕೀಯ ವೆಚ್ಚದಲ್ಲಿ ಹೆಚ್ಚಳವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ -ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ದಿನವಿಡೀ ಬೇಸರಗೊಳ್ಳುವ ಬದಲು, ಬ್ಲಾಗಿಂಗ್ ಮಾಡಿ ಅಥವಾ ಆಸಕ್ತಿದಾಯಕ ಪುಸ್ತಕವನ್ನು ಓದಿ. ಅದೃಷ್ಟ ಸಂಖ್ಯೆ: 1

ವೃಷಭ ರಾಶಿ ಭವಿಷ್ಯ : 9 May 2020
ಮಕ್ಕಳೊಂದಿಗೆ ಆಟವಾಡುವುದು ನಿಮಗೆ ಯಾವತ್ತೂ ಅದ್ಭುತ ಚಿಕಿತ್ಸೆಯ ಅನುಭವ ನೀಡುತ್ತದೆ. ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ. ಗೃಹ ಜೀವನ ಶಾಂತಿಯುತ ಮತ್ತು ಉತ್ತಮವಾಗಿರುತ್ತದೆ ಪ್ರೀತಿಯ ಸಂತೋಷವನ್ನು ಅನುಭವಿಸಬಹುದು. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ಅದೃಷ್ಟ ಸಂಖ್ಯೆ: 9

ಮಿಥುನ ರಾಶಿ ಭವಿಷ್ಯ : 9 May 2020
ನೀವು ಯೋಗ ಧ್ಯಾನದೊಂದಿಗೆ ದಿನವನ್ನು ಪ್ರಾರಂಭಿಸಬಹುದು. ಇದನ್ನು ಮಾಡುವುದರಿಂದ ನಿಮಗೆ ಪ್ರಯೋಜನಕಾರಿಯಾಗುತ್ತದೆ ಮತ್ತು ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ವಿದೇಶಿ ಸಂಪರ್ಕಗಳನ್ನು ಹೊಂದಿರುವ ವ್ಯಾಪಾರಿಗಳಿಗೆ ಇಂದು ಹಣದ ನಷ್ಟವಾಗುವ ಸಾಧ್ಯತೆ ಇದೆ ಆದ್ದರಿಂದ ಇಂದು ಯೋಚಿಸಿ ಅರ್ಥಮಾಡಿಕೊಂಡು ನಡೆಯಿರಿ ನಿಮ್ಮ ಸಹಾನುಭೂತಿ ಮತ್ತು ತಿಳುವಳಿಕೆಗೆ ಪ್ರತಿಫಲ ದೊರಕುತ್ತದೆ. ಆದರೆ ಯಾವುದೇ ಆತುರದ ತೀರ್ಮಾನ ಒತ್ತಡ ಉಂಟುಮಾಡಬಹುದಾದ್ದರಿಂದ ಎಚ್ಚರಿಕೆಯಿಂದಿರಿ. ನಿಮ್ಮ ಪ್ರಿಯತಮೆಯ ಕಠಿಣ ಪದಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು.ಅದೃಷ್ಟ ಸಂಖ್ಯೆ: 7

ಕರ್ಕ ರಾಶಿ ಭವಿಷ್ಯ : 9 May 2020
ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬ ನಿಮ್ಮ ಸಹಯಕ್ಕೆ ಬರುತ್ತದೆ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ. ನೀವು ಒಂದು ಅಭ್ಯಾಸವನ್ನು ಕರಗತ ಮಾಡಿಕೊಂಡವರನ್ನು ಗಮನಿಸುವುದರ ಮೂಲಕ ಕೆಲವು ಪಾಠಗಳನ್ನು ಕಲಿಯಬಹುದು. ಅದೃಷ್ಟ ಸಂಖ್ಯೆ: 2

ಸಿಂಹ ರಾಶಿ ಭವಿಷ್ಯ : 9 May 2020
ನಿಮ್ಮ ಬಾಲ್ಯದ ನೆನಪುಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ನಿಮಗೆ ನೀವೇ ಅನಗತ್ಯ ಮಾನಸಿಕ ಒತ್ತಡ ನೀಡಬಹುದು. ನಿಮ್ಮ ಪ್ರಮುಖ ಆತಂಕ ಮತ್ತು ಒತ್ತಡದ ಒಂದು ಕಾರಣವೆಂದರೆ ಕೆಲವೊಮ್ಮೆಯಾದರೂ ನೀವು ಮಗುವಿನಂತಿರುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೀರಿ ಎಂದು ಚಿಂತಿಸುವುದಾಗಿದೆ. ಅದೃಷ್ಟ ಸಂಖ್ಯೆ: 9

ಕನ್ಯಾ ರಾಶಿ ಭವಿಷ್ಯ : 9 May 2020
ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ – ನೀವೇನೇ ಮಾಡಿದರೂ ಸಾಮಾನ್ಯವಾಗಿ ನೀವು ತೆಗೆದುಕೊಳ್ಳುವ ಅರ್ಧ ಸಮಯದಲ್ಲಿ ಅದನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ಎಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ನಿಮ್ಮ ಕುಟುಂಬ ಸದಸ್ಯರು ಹೇಳಿದ್ದೆಲ್ಲವಕ್ಕೂ ನೀವು ಒಪ್ಪದಿರಬಹುದು – ಆದರೆ ನೀವು ಅವರ ಅನುಭವದಿಂದ ಕಲಿಯಲು ಪ್ರಯತ್ನಿಸಬೇಕು. ಇಂದು ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬೇಡಿ – ಇದು ನಂತರ ನಿಮ್ಮನ್ನು ಪಶ್ಚಾತ್ತಾಪಗೊಳ್ಳುವಂತೆ ಮಾಡುತ್ತದೆ. ಅದೃಷ್ಟ ಸಂಖ್ಯೆ: 7

ತುಲಾ ರಾಶಿ ಭವಿಷ್ಯ : 9 May 2020
ಅತಿಯಾಗಿ ತಿನ್ನುವುದು ಮತ್ತು ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಬೇಕು. ನೀವು ವಿಧ್ಯಾರ್ಥಿಯಾಗಿದ್ದರೆ ಮತ್ತು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಬಯಸುತ್ತಿದ್ದರೆ ಆರ್ಥಿಕ ಬಿಕ್ಕಟ್ಟು ಇಂದು ನಿಮ್ಮ ಹಣೆಯ ಮೇಲೆ ಸುಕ್ಕು ತರಬಹುದು. ಮನೆಯಲ್ಲಿನ ಹಬ್ಬದ ವಾತಾವರಣ ನಿಮ್ಮ ಉದ್ವೇಗವನ್ನು ಶಮನಗೊಳಿಸುತ್ತದೆ. ನೀವು ಇದರಲ್ಲಿ ಭಾಗವಹಿಸುತ್ತೀರಿ ಮತ್ತು ಕೇವಲ ಮೂಕ ಪ್ರೇಕ್ಷಕರಾಗಿ ಮಾತ್ರ ಉಳಿಯುವುದಿಲ್ಲವೆಂದು ಖಚಿತಪಡಿಸಿಕೊಳ್ಳಿ. ಅದೃಷ್ಟ ಸಂಖ್ಯೆ: 1

ವೃಶ್ಚಿಕ ರಾಶಿ ಭವಿಷ್ಯ : 9 May 2020
ನಿಮ್ಮ ನೀಡುವ ವರ್ತನೆ ಪರೋಕ್ಷವಾಗಿ ನಿಮಗೆ ಆಶೀರ್ವಾದವೇ ಆಗುತ್ತದೆ, ಏಕೆಂದರೆ ನೀವು ಅನುಮಾನ, ನಿರಾಸೆ, ವಿಶ್ವಾಸರಾಹಿತ್ಯ ಅಹಂಭಾವ ಮತ್ತು ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಕುಟುಂಬದ ಪರಿಸ್ಥಿತಿ ಇಂದು ನೀವು ಯೋಚಿಸುವ ಹಾಗೆ ಇರುವುದಿಲ್ಲ. ಇಂದು ಮನೆಯಲ್ಲಿ ಯಾವುದೇ ವಿಷಯದ ಬಗ್ಗೆ ಅಪಶ್ರುತಿ ಉಂಟಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿಯಲ್ಲಿ ನಿಮ್ಮನ್ನು ನಿಯಂತ್ರಿಸಿ. ನೀವು ಹಂಚಿಕೊಂಡ ಉತ್ತಮ ಸಮಯವನ್ನು ನೆನಪಿಸಲು ನಿಮ್ಮ ಸ್ನೇಹವನ್ನು ನೆನಪು ಮಾಡಿಕೊಳ್ಳುವ ಸಮಯ. ಅದೃಷ್ಟ ಸಂಖ್ಯೆ: 3

ಧನು ರಾಶಿ ಭವಿಷ್ಯ : 9 May 2020
ಹಲ್ಲು ನೋವು ಅಥವಾ ಹೊಟ್ಟೆ ಹಾಳಾಗುವಿಕೆ ನಿಮಗೆ ಕೆಲವು ಸಮಸ್ಯೆಗಳನ್ನು ತರಬಹುದು. ತಕ್ಷಣ ಪರಿಹಾರ ಪಡೆಯಲು ವೈದ್ಯರ ಸಲಹೆ ಪಡೆಯಿರಿ. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ನಿಮ್ಮ ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದಾದ ಸಮಸ್ಯೆಗಳನ್ನು ತಪ್ಪಿಸುವುದು ಒಳ್ಳೆಯದು. ಕೆಲವರಿಗೆ ಹೊಸ ಪ್ರಣಯ ನಿಮ್ಮ ಚೈತನ್ಯವನ್ನು ಪ್ರೇರೇಪಿಸಬಹುದು ಹಾಗೂ ನಿಮ್ಮನ್ನು ಹರ್ಷಚಿತ್ತರಾಗಿರಿಸಬಹುದು. ಅದೃಷ್ಟ ಸಂಖ್ಯೆ: 9

ಮಕರ ರಾಶಿ ಭವಿಷ್ಯ : 9 May 2020
ದೈಹಿಕ ಲಾಭಕ್ಕಾಗಿ ವಿಶೇಷವಾಗಿ ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಲಬಹವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ಕುಟುಂಬದ ಸದಸ್ಯರ ಒಳ್ಳೆಯ ಸಲಹೆ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಂದು ನಿಮ್ಮ ಯಾವುದೇ ಭರವಸೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದೃಷ್ಟ ಸಂಖ್ಯೆ: 9

ಕುಂಭ ರಾಶಿ ಭವಿಷ್ಯ : 9 May 2020
ತುಂಬಾ ಚಿಂತೆ ಮತ್ತು ಒತ್ತಡ ರಕ್ತದೊತ್ತಡವನ್ನು ಉಂಟುಮಾಡಬಹುದು. ಹಿಂದಿನ ಬಂಡವಾಳದಿಂದ ಆದಾಯವನ್ನು ನಿರೀಕ್ಷಿಸಿದ್ದಲ್ಲಿ. ನಿಮ್ಮ ಅಸಡ್ಡೆಯ ವರ್ತನೆ ಪೋಷಕರನ್ನು ಚಿಂತೆಗೀಡು ಮಾಡಬಹುದು. ನೀವು ಯಾವುದೇ ಹೊಸ ಯೋಜನೆಯನ್ನು ಆರಂಭಿಸುವ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು. ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಬೇಕಾದ ಭಾವನೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ನಿಮ್ಮ ಸಂಗಾತಿಯು ಇಂದು ಕೆಲವು ಕುಖ್ಯಾತ ವಿಷಯಗಳ ಜೊತೆಗೆ ನಿಮ್ಮ ಹದಿಹರೆಯದ ದಿನಗಳನ್ನು ನೆನಪಿಸುತ್ತಾರೆ. ಅದೃಷ್ಟ ಸಂಖ್ಯೆ: 6

ಮೀನ ರಾಶಿ ಭವಿಷ್ಯ : 9 May 2020
ನಿಮ್ಮ ಶೀಘ್ರ ಕ್ರಮ ನಿಮ್ಮ ಸುದೀರ್ಘವಾದ ಸಮಸ್ಯೆಯನ್ನು ಪರಿಹರಿಸುತ್ತದೆ. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನಿಮ್ಮ ಮನದನ್ನೆಯ ವಿಚಿತ್ರ ನಡವಳಿಕೆ ನಿಮ್ಮ ಮನಸ್ಥಿತಿಗೆ ಅಸಮಾಧಾನ ತರಬಹುದು. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಅದೃಷ್ಟ ಸಂಖ್ಯೆ: 4

ರೈತರು ಮತ್ತು ಆ ಹನ್ನೆರಡು ವರ್ಷ

0

ರಘುನಂದನ್ ಎ.ಎಸ್.


ಒಮ್ಮೆ, ಭಗವಾನ್ ಇಂದ್ರನು ರೈತರೊಂದಿಗೆ ಅಸಮಾಧಾನಗೊಂಡನು, 12 ವರ್ಷಗಳವರೆಗೆ ಮಳೆ ಇರುವುದಿಲ್ಲ ಮತ್ತು ನೀವು ಬೆಳೆಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದನು.

ಆಗ ರೈತರು ಭಗವಾನ್ ಇಂದ್ರನಿಂದ ಕೃಪೆ ನೀಡಲು ಕೋರಿದರು. ಶಿವನು ತನ್ನ ದಮರು ನುಡಿಸಿದರೆ ಮಾತ್ರ ಮಳೆ ಸಾಧ್ಯ ಯಾಕೆ ಎಂದು ಇಂದ್ರನು ಹೇಳಿದನು. ಆದರೆ ಇಂದ್ರನು ರಹಸ್ಯವಾಗಿ ಶಿವನನ್ನು ಡಮರು ನುಡಿಸಲು ಒಪ್ಪಬೇಡವೆಂದು ವಿನಂತಿಸಿದನು. ರೈತರು ಶಿವನನ್ನು ಬೇಡಿದಾಗ ಶಿವನು 12 ವರ್ಷಗಳ ನಂತರ ದಮರು ನುಡಿಸುವುದಾಗಿ ಹೇಳಿದನು.

ನಿರಾಶೆಗೊಂಡ ರೈತರು 12 ವರ್ಷಗಳವರೆಗೆ ಕಾಯಲು ನಿರ್ಧರಿಸಿದರು.

ಆದರೆ ಒಬ್ಬ ರೈತ ನಿಯಮಿತವಾಗಿ ಅಗೆಯುವುದು, ಸಂಸ್ಕರಿಸುವುದು ಮತ್ತು ಗೊಬ್ಬರವನ್ನು ಮಣ್ಣಿನಲ್ಲಿ ಇಡುವುದು ಮತ್ತು ಯಾವುದೇ ಬೆಳೆ ಹೊರಹೊಮ್ಮದಿದ್ದರೂ ಬೀಜಗಳನ್ನು ಬಿತ್ತುವುದು ಮುಂದುವರಿಸಿದನು.

ಇತರ ರೈತರು ಆ ರೈತನನ್ನು ಗೇಲಿ ಮಾಡುತ್ತಿದ್ದರು. 3 ವರ್ಷಗಳು ಕಳೆದ ನಂತರ ಎಲ್ಲಾ ರೈತರು 12 ವರ್ಷಗಳವರೆಗೆ ಮಳೆ ಬರುವುದಿಲ್ಲ ಎಂದು ನಿಮ್ಮ ಸಮಯವನ್ನು ಏಕೆ ವ್ಯರ್ಥ ಮಾಡುತ್ತಿದ್ದೀರಿ ಎಂದು ಆ ರೈತನಿಗೆ ಹೇಳುತ್ತಿದ್ದರು.

ಆ ರೈತ ಉತ್ತರಿಸುತ್ತಾ, “ಬೆಳೆ ಹೊರಬರುವುದಿಲ್ಲ ಎಂದು ನನಗೆ ತಿಳಿದಿದೆ ಆದರೆ ನಾನು ಅದನ್ನು” ಅಭ್ಯಾಸ “ದ ವಿಷಯವಾಗಿ ಮಾಡುತ್ತಿದ್ದೇನೆ. 12 ವರ್ಷಗಳ ನಂತರ ನಾನು ಬೆಳೆಗಳನ್ನು ಬೆಳೆಯುವ ಮತ್ತು ಹೊಲದಲ್ಲಿ ಕೆಲಸ ಮಾಡುವ ಪ್ರಕ್ರಿಯೆಯನ್ನು ಮರೆತುಬಿಡುತ್ತೇನೆ ಹಾಗಾಗಿ ಅದನ್ನು ಮುಂದುವರಿಸಬೇಕು. ಆಗಲೇ 12 ವರ್ಷಗಳ ನಂತರ ಮಳೆ ಬರುವ ಕ್ಷಣದಲ್ಲಿ ಬೆಳೆ ಬೆಳೆಯಲು ನಾನು ಸಮರ್ಥನಾಗಿರುತ್ತೇನೆ ” ಎಂದನು.

ಅವನ ವಾದವನ್ನು ಕೇಳಿದ ಪಾರ್ವತಿ ದೇವಿಯು ಶಿವನ ಮುಂದೆ ಅವರ ಆ ವೃತ್ತಿಯನ್ನು ಹೊಗಳಿದರು ಮತ್ತು “ನೀವು 12 ವರ್ಷಗಳ ನಂತರ ದಮರು ನುಡಿಸುವುದನ್ನು ಸಹ ಮರೆತುಬಿಡಬಹುದು!” ಹಾಗಾಗಿ ನೀವೂ ಕೂಡ ಅಭ್ಯಾಸ ಮಾಡಿ ಎಂದು ಹೇಳಿದರು.

ಆಗ ತನ್ನ ಆತಂಕದಲ್ಲಿದ್ದ ಮುಗ್ಧ ಭಗವಾನ್ ಶಿವನು ದಮರು ನುಡಿಸಲು ಪ್ರಯತ್ನಿಸಿದನು, ಮತ್ತು ದಮರಿನ ಶಬ್ದವನ್ನು ಕೇಳಿದ ಕೂಡಲೇ ಮಳೆ ಬಂತು ಮತ್ತು ನಿಯಮಿತವಾಗಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನು ತನ್ನ ಬೆಳೆ ತಕ್ಷಣವೇ ಹೊರಹೊಮ್ಮಿತು ಮತ್ತು ಇತರರು ನಿರಾಶೆಗೊಂಡರು.

ಇದು ನಿಮ್ಮನ್ನು ಪರಿಪೂರ್ಣರನ್ನಾಗಿ ಮಾಡುವ ಅಭ್ಯಾಸವಾಗಿದೆ.

ಆದ್ದರಿಂದ, ಸರ್ಕಾರ ಯಾವಾಗ ಬೇಕಾದರೂ ಲಾಕ್‌ಡೌನ್ ತೆರವು ಮಾಡಲಿ, ನೀವು ಯಾವುದೇ ವ್ಯಾಪಾರ ಅಥವಾ ವೃತ್ತಿಯಲ್ಲಿರಲಿ, ನಿಮ್ಮ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಿ, ನಿಮ್ಮಲ್ಲಿರುವದನ್ನು ಅಭ್ಯಾಸ ಮಾಡಿ, ನಿಮ್ಮ ಜ್ಞಾನವನ್ನು ಅಪ್‌ಗ್ರೇಡ್ ಮಾಡಿ. ಆಗ ನೀವು ನಿಜವಾಗಿಯೂ ಒಂದು ಗೆಲುವಿನ ಗರಿ ಏರಲು ಸಾಧ್ಯ..

ದುಬಾರಿ ದರ ವಸೂಲಿಗಿಳಿದ ಸಕಾ೯ರ: ಸಿಪಿಐ(ಎಂ) ಖಂಡನೆ

Bengaluru: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ಉಚಿತ ರೈಲುಗಳ ವ್ಯವಸ್ಥೆ ಮಾಡಲು ಹಲವು ಒತ್ತಾಯ ಬಂದಿದ್ದರೂ ಸಹಾ ಕೇಂದ್ರ ಅಥವಾ ರಾಜ್ಯ ಸಕಾ೯ರವು ಉಚಿತ ರೈಲಿನ ವ್ಯವಸ್ಥೆ ಮಾಡದೆ ಕಾಮಿ೯ಕರಿಂದಲೆ ಪ್ರಯಾಣ ದರ ಪಡೆಯುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

40 ದಿನಗಳಿಗೂ ಹೆಚ್ಚು ಲಾಕ್ಡೌನ್ ನಿಂದಾಗಿ ಕೆಲಸ ಆದಾಯ ವಿಲ್ಲದೆ ಹಸಿವಿನಿಂದ ಬಳಲಿದ್ದ ಅಸಂಘಟಿತ ಕಾಮಿ೯ಕರಿಗೆ ದೂರದ ತಮ್ಮ ಊರುಗಳಿಗೆ ಹೋಗಲು ಕೊನೆಗೆ ರೈಲುಗಳನ್ನು ಪುನರಾರಂಭ ಮಾಡಿದ ರಾಜ್ಯ ಸಕಾ೯ರವು ತಲಾ 970 ರೂಗಳನ್ನು ಲಖನೌಗೆ ಹೋಗುವ ಕಾಮಿ೯ಕರಿಂದ ರಾಜ್ಯ ಸಕಾ೯ರ ಒದಗಿಸುವ ಬಿಎಂಟಿಸಿ ಬಸ್ ಸೇವೆ ವೆಚ್ಚವನ್ನು ಸೇರಿಸಿ ಪಡೆಯುತ್ತಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

4 ಜನರ ಕುಟುಂಬಕ್ಕೆ 4 ಸಾವಿರ ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ. ಮೊದಲಿಗೆ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ಮುನ್ನ ಬಿಎಂಟಿಸಿ ಬಸ್ ಏರುವ ಮೊದಲು 970 ರೂಗಳ ಬಿಎಂಟಿಸಿ ಟಿಕೆಟ್ ಖರೀದಿ ಮಾಡಬೇಕು, ಹೋಗುವ ದಾವಂತದಲ್ಲಿ ಕೆಲವೊಮ್ಮೆ ಚಿಲ್ಲರೆ ಕೇಳಿದರೆ ಎಲ್ಲಿ ಹೋಗಲು ಬಿಡುವುದಿಲ್ಲವೊ ಎಂಬ ಆತಂಕದಲ್ಲಿ 30ರೂಗಳನ್ನು ಕೇಳಲಿಲ್ಲ ಎಂಬ ಅಳಕನ್ನು ಕೆಲವರು ತೊಡಿಕೊಂಡಿದ್ದಾರೆ.
ಆನಂತರ ರೈಲು ಏರಿದ ಮೇಲೆ ಬಿಎಂಟಿಸಿ ಟಿಕೆಟ್ ಪಡೆದು ರೈಲ್ವೆಯ 830 ರೂಗಳ ಟಿಕೆಟ್ಗಳನ್ನು ಪ್ರತಿ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಬಿಎಂಟಿಸಿ ಪ್ರತಿ ಕಾಮಿ೯ಕರಿಂದ 140 ರೂಗಳನ್ನು ಬಹುತೇಕ ವಾಯು ಸಾರಿಗೆ ಧರದಲ್ಲಿ ಸಾಮಾನ್ಯ ಬಸ್ಗಳಲ್ಲಿ ವಲಸೆ ಕಾಮಿ೯ಕರಿಂದ ಪಡೆಯುತ್ತಿರುವುದು ರಾಜ್ಯ ಸಕಾ೯ರದ ಲೂಟಿ ಕೋರತನವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಕೇಂದ್ರ ಸಕಾ೯ರವು ಉಚಿತ ರೈಲು ನೀಡುವ ಬದಲು, ಸೂಪರ್‌‌‌ ಫಾಸ್ಟ್ ರೈಲಿನ ದರವನ್ನು ವಸೂಲಿ ಮಾಡುತ್ತಿದೆ. ಶ್ರೀಮಂತರಿಗೆ, ಬಂಡವಾಳಗಾರರಿಗೆ ಲಕ್ಷಾಂತರ ಕೋಟಿ ರೂಗಳ ಅನುದಾನವನ್ನು ನೀಡುವ, ಸಾಲಮನ್ನ ಮಾಡುವ ಕೇಂದ್ರ ಬಿಜೆಪಿ ಸರಕಾರ ಬಡ ಕಾಮಿ೯ಕರಿಗೆ ಉಚಿತ ರೈಲಿನ ವ್ಯವಸ್ಥೆ ಮಾಡದೆ ತನ್ನ ಕಾಮಿ೯ಕ ವಿರೋಧಿ ನೀತಿಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.

ಅಂತರ ರಾಜ್ಯ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಕಳುಹಿಸದಿರಲು ಶತ ಪ್ರಯತ್ನ ಮಾಡಿ ವಿಫಲವಾದ ರಾಜ್ಯ ಸಕಾ೯ರವು ಬಿಎಂಟಿಸಿ ಸೇವೆಗೆ ದುಬಾರಿ ದರ ಪಡೆದು ವಲಸೆ ಕಾಮಿ೯ಕರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರಗಳು ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಸೆ ಕಾಮಿ೯ಕರ ನೆರವಿಗೆ ಧಾವಿಸದೆ ಪ್ರತಿ ಹಂತದಲ್ಲೂ ಅವರನ್ನು ದೋಚುತ್ತಿರುವ ಕ್ರಮವು ಸಕಾ೯ರಗಳು ನಿವ೯ಹಿಸ ಬೇಕಾದ ಸಂವಿಧಾನಿಕ ಕತ೯ವ್ಯವನ್ನೂ ಬಿಜೆಪಿ ಮರೆತಿರುವುದರ ಪ್ರತೀಕ ಎಂದು ಸಿಪಿಐ(ಎಂ) ಖಂಡಿಸಿದೆ. ಕೂಡಲೇ ಉಚಿತ ರೈಲಿನ ವ್ಯವಸ್ಥೆಯನ್ನು ಪಿಎಂ ಕೇರ್ ನಿಧಿಯಿಂದ ಮಾಡಬೇಕು, ರಾಜ್ಯ ಸಕಾ೯ರವು ಉಚಿತ ಬಿಎಂಟಿಸಿ ಸೇವೆ ಒದಗಿಸ ಬೇಕೆಂದು ಸಿಪಿಐ (ಎಂ) ಒತ್ತಾಯಿಸಿದೆ.

ಲೈಫ್ ಇನ್ಶುರೆನ್ಸ್ ಏಕೆ ಬೇಕು?

ರಘುನಂದನ್ ಎ.ಎಸ್.


Life insurance (ಲೈಫ್ ಇನ್ಶುರೆನ್ಸ್) ಎನ್ನುವುದು ಪಾಲಿಸಿದಾರನು ಮರಣದ ನಂತರ ಅವನ / ಅವಳ ಕುಟುಂಬ ಸದಸ್ಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ದೊರಕಿಸುತ್ತದೆ . ನಿಮ್ಮ ಸಂಗಾತಿ ಮತ್ತು ಮಕ್ಕಳನ್ನು ಬೆಂಬಲಿಸುವ ನಿಮ್ಮ ಕುಟುಂಬದಲ್ಲಿ ನೀವು ಗಳಿಸುವ ಏಕೈಕ ಸದಸ್ಯರೆಂದು ಭಾವಿಸೋಣ.

ಅಂತಹ ಘಟನೆಯಲ್ಲಿ, ನಿಮ್ಮ ಸಾವು ಇಡೀ ಕುಟುಂಬವನ್ನು ಆರ್ಥಿಕವಾಗಿ ಧ್ವಂಸಗೊಳಿಸುತ್ತದೆ. ನೀವು ಹಾದುಹೋಗುವ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಅಂತಹ ವಿಷಯ ಸಂಭವಿಸುವುದಿಲ್ಲ ಎಂದು ಜೀವ ವಿಮಾ ಪಾಲಿಸಿಗಳು ಖಚಿತಪಡಿಸುತ್ತವೆ.

*ಜೀವ ವಿಮಾ ಪಾಲಿಸಿಗಳ ವಿಧಗಳು*

ಜೀವ ವಿಮೆಯ ವಿಷಯದಲ್ಲಿ ಪ್ರಾಥಮಿಕವಾಗಿ ಏಳು ವಿಭಿನ್ನ ರೀತಿಯ ವಿಮಾ ಪಾಲಿಸಿಗಳಿವೆ. ಇವು:

ಟರ್ಮ್ ಪ್ಲಾನ್ – ಟರ್ಮ್ ಪ್ಲಾನ್‌ನಿಂದ ಸಾವಿನ ಲಾಭವು ನಿಗದಿತ ಅವಧಿಗೆ ಮಾತ್ರ ಲಭ್ಯವಿದೆ, ಉದಾಹರಣೆಗೆ, ಪಾಲಿಸಿ ಖರೀದಿಸಿದ ದಿನಾಂಕದಿಂದ 40 ವರ್ಷಗಳು.

ದತ್ತಿ/ಎಂಡೋಮೆಂಟ್ಯೋ ಯೋಜನೆ – ಎಂಡೋಮೆಂಟ್ ಯೋಜನೆಗಳು ಜೀವ ವಿಮಾ ಪಾಲಿಸಿಗಳಾಗಿದ್ದು, ಅಲ್ಲಿ ನಿಮ್ಮ ಪ್ರೀಮಿಯಂನ ಒಂದು ಭಾಗವು ಸಾವಿನ ಲಾಭದ ಕಡೆಗೆ ಹೋಗುತ್ತದೆ, ಉಳಿದವುಗಳನ್ನು ವಿಮಾ ಪೂರೈಕೆದಾರರು ಹೂಡಿಕೆ ಮಾಡುತ್ತಾರೆ. ಮೆಚುರಿಟಿ ಪ್ರಯೋಜನಗಳು, ಸಾವಿನ ಲಾಭ ಮತ್ತು ಆವರ್ತಕ ಬೋನಸ್‌ಗಳು ದತ್ತಿ ನೀತಿಗಳಿಂದ ಲಾಭಗಳಾಗಿವೆ.

ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಯೋಜನೆಗಳು ಅಥವಾ ಯುಲಿಪ್ಗಳು – ದತ್ತಿ ಯೋಜನೆಗಳಂತೆಯೇ, ನಿಮ್ಮ ವಿಮಾ ಕಂತುಗಳ ಒಂದು ಭಾಗವು ಮ್ಯೂಚುಯಲ್ ಫಂಡ್ ಹೂಡಿಕೆಗಳ ಕಡೆಗೆ ಹೋಗುತ್ತದೆ, ಉಳಿದವು ಸಾವಿನ ಲಾಭದ ಕಡೆಗೆ ಹೋಗುತ್ತವೆ.

ಸಂಪೂರ್ಣ ಜೀವ ವಿಮೆ – ಹೆಸರೇ ಸೂಚಿಸುವಂತೆ, ಅಂತಹ ನೀತಿಗಳು ನಿರ್ದಿಷ್ಟ ಅವಧಿಗೆ ಬದಲಾಗಿ ವ್ಯಕ್ತಿಯ ಇಡೀ ಜೀವನಕ್ಕೆ ಜೀವ ರಕ್ಷಣೆಯನ್ನು ನೀಡುತ್ತವೆ. ಕೆಲವು ವಿಮಾದಾರರು ಇಡೀ ಜೀವ ವಿಮಾ ಅವಧಿಯನ್ನು 100 ವರ್ಷಗಳಿಗೆ ನಿರ್ಬಂಧಿಸಬಹುದು.

ಮಕ್ಕಳ ಯೋಜನೆ – ಇನ್ವೆಸ್ಟ್ಮೆಂಟ್ ಕಮ್ ಇನ್ಶುರೆನ್ಸ್ ಪಾಲಿಸಿ, ಇದು ನಿಮ್ಮ ಮಕ್ಕಳಿಗೆ ಜೀವನದುದ್ದಕ್ಕೂ ಹಣಕಾಸಿನ ನೆರವು ನೀಡುತ್ತದೆ. ಸಾವಿನ ಪ್ರಯೋಜನವು ಪೋಷಕರ ಮರಣದ ನಂತರ ಒಂದು ದೊಡ್ಡ ಮೊತ್ತದ ಪಾವತಿಯಾಗಿ ಲಭ್ಯವಿದೆ.

ಮನಿ-ಬ್ಯಾಕ್ – ಅಂತಹ ನೀತಿಗಳು ನಿಯಮಿತ ಮಧ್ಯಂತರಗಳ ನಂತರ ಯೋಜನೆಯ ಮೊತ್ತದ ಒಂದು ನಿರ್ದಿಷ್ಟ ಶೇಕಡಾವನ್ನು ಪಾವತಿಸುತ್ತವೆ. ಇದನ್ನು ಬದುಕುಳಿಯುವ ಲಾಭ ಎಂದು ಕರೆಯಲಾಗುತ್ತದೆ.

ನಿವೃತ್ತಿ ಯೋಜನೆ – ಪಿಂಚಣಿ ಯೋಜನೆಗಳು ಎಂದೂ ಕರೆಯಲ್ಪಡುವ ಈ ನೀತಿಗಳು ಹೂಡಿಕೆ ಮತ್ತು ವಿಮೆಯ ಸಮ್ಮಿಲನವಾಗಿದೆ. ಪ್ರೀಮಿಯಂನ ಒಂದು ಭಾಗವು ಪಾಲಿಸಿದಾರರಿಗೆ ನಿವೃತ್ತಿ ಕಾರ್ಪಸ್ ಅನ್ನು ರಚಿಸುವ ಕಡೆಗೆ ಹೋಗುತ್ತದೆ. ಪಾಲಿಸಿದಾರ ನಿವೃತ್ತಿಯಾದ ನಂತರ ಇದು ಒಟ್ಟು ಮೊತ್ತ ಅಥವಾ ಮಾಸಿಕ ಪಾವತಿಯಾಗಿ ಲಭ್ಯವಿದೆ.

*ಜೀವ ವಿಮೆಯ ಪ್ರಯೋಜನಗಳು*

ನೀವು ಜೀವ ವಿಮಾ ಯೋಜನೆಯನ್ನು ಹೊಂದಿದ್ದರೆ, ಇದರಿಂದ ಈ ಕೆಳಗಿನ ಅನುಕೂಲಗಳನ್ನು ಆನಂದಿಸಬಹುದು.

ತೆರಿಗೆ ಪ್ರಯೋಜನಗಳು – ನೀವು ಜೀವ ವಿಮಾ ಕಂತುಗಳನ್ನು ಪಾವತಿಸಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 (ಸಿ) ಮತ್ತು 10 (10 ಡಿ) ಅಡಿಯಲ್ಲಿ ನೀವು ಭಾರತದಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತೀರಿ. ಹೀಗಾಗಿ, ಜೀವ ವಿಮಾ ಯೋಜನೆಯನ್ನು ಆರಿಸುವುದರ ಮೂಲಕ ನೀವು ಗಣನೀಯ ಪ್ರಮಾಣದ ಹಣವನ್ನು ತೆರಿಗೆಯಾಗಿ ಉಳಿಸಬಹುದು.

ಉಳಿತಾಯದ ಅಭ್ಯಾಸವನ್ನು ಪ್ರೋತ್ಸಾಹಿಸುತ್ತದೆ – ನೀವು ಪಾಲಿಸಿ ಪ್ರೀಮಿಯಂಗಳನ್ನು ಪಾವತಿಸಬೇಕಾದ ಕಾರಣ, ಅಂತಹ ವಿಮಾ ಪಾಲಿಸಿಯನ್ನು ಖರೀದಿಸುವುದು ಹಣವನ್ನು ಉಳಿಸುವ ಅಭ್ಯಾಸವನ್ನು ಉತ್ತೇಜಿಸುತ್ತದೆ.

ಕುಟುಂಬದ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತದೆ – ನಿಮ್ಮ ನಿಧನದ ನಂತರವೂ ನಿಮ್ಮ ಕುಟುಂಬದ ಆರ್ಥಿಕ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದನ್ನು ನೀತಿ ಖಚಿತಪಡಿಸುತ್ತದೆ.

ನಿಮ್ಮ ನಿವೃತ್ತಿಯನ್ನು ಯೋಜಿಸಲು ಸಹಾಯ ಮಾಡುತ್ತದೆ – ಕೆಲವು ಜೀವ ವಿಮಾ ಪಾಲಿಸಿಗಳು ಹೂಡಿಕೆ ಆಯ್ಕೆಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಪಿಂಚಣಿ ಯೋಜನೆಗಳು ನೀವು ನಿವೃತ್ತಿಯಾದ ಕೂಡಲೇ ಒಂದು ದೊಡ್ಡ ಮೊತ್ತದ ಪಾವತಿಯನ್ನು ನೀಡುತ್ತವೆ, ಇದು ನಿಮ್ಮ ನಿವೃತ್ತಿ ಬಳಿಕ ಆರ್ಥಿಕವಾಗಿ ಸಹಾಯ ಮಾಡುತ್ತದೆ.

ವಿಮೆ ಎಂಬುದು ವಿಜ್ಞಾಪನೆಯ ವಿಷಯವಾಗಿದೆ. ನೀತಿ ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಓದಿ.

ಮೂವರು ತಬ್ಲಿಘಿಗಳಿಗೆ ಕೊರೊನಾ ಪಾಸಿಟಿವ್: ಪಾವಗಡದಲ್ಲಿ ಹೆಚ್ಚಿತು ಆತಂಕ

ತುಮಕೂರು: ಒಂದೇ ಬಸ್ ನಲ್ಲಿ ಆಗಮಿಸಿರುವ 33 ಮಂದಿ ತಬ್ಲಿಘಿಗಳ ಪೈಕಿ ಚಿತ್ರದುರ್ಗದಲ್ಲಿ ಕ್ವಾರಂಟೈನ್ ನಲ್ಲಿದ್ದ 3 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟ ಕೂಡಲೇ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಆತಂಕ ಶುರುವಾಗಿದೆ.  ಚಿತ್ರದುರ್ಗದಲ್ಲಿರುವ 15 ಮಂದಿ ತಬ್ಲಿಘಿಗಳ ಜೊತೆ  ಪಾವಗಡ ತಾಲ್ಲೂಕು ವೈ. ಎನ್ ಹೊಸಕೋಟೆ ಗ್ರಾಮದ 13 ಮಂದಿಯೂ ಬಸ್ ನಲ್ಲಿ ಸತತ 24 ಗಂಟೆಗಳ ಕಾಲ ಪ್ರಯಾಣ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.

ಮೇ-5 ರಂದು ಗುಜರಾತ್ ನ ಅಹಮದಾಬಾದ್ ನಿಂದ   ರಾಜ್ಯಕ್ಕೆ 33 ಮಂದಿ ತಬ್ಲಿಘಿಗಳು ಬಸ್ ಮೂಲಕ ಆಗಮಿಸಿದ್ದರು. ಇವರು ಗುಜರಾತ್ ಸರ್ಕಾರದ ಅನುಮತಿ ಪಡೆದಿದ್ದರು. ಆದರೆ ರಾಜ್ಯ ಸರ್ಕಾರಕ್ಕೆ ಇವರು ಬರುವ ಮಾಹಿತಿ ಇರಲಿಲ್ಲ.

ಚಿತ್ರದುರ್ಗ ಚೆಕ್ ಪೋಸ್ಟ್ ಬಳಿ ಪೊಲೀಸರು ಬಸ್ ತಡೆದು ಪರಿಶೀಲಿಸಿದಾಗ 33 ಮಂದಿ ಒಂದೇ ಬಸ್ ನಲ್ಲಿ ಬಂದಿರುವ ಮಾಹಿತಿ ತಿಳಿದಿದೆ. ಕೂಡಲೇ  ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ಮಾಹಿತಿ ಸಿಕ್ಕಿತ್ತು.

ವೈ.ಎನ್.ಹೊಸಕೋಟೆಯ ತಬ್ಲಿಘಿಗಳನ್ನು ಕುರುಬರಹಳ್ಳಿ ಗೇಟ್ ಬಳಿ ಕ್ವಾರಂಟೈನ್ ಮಾಡುವ ಬಗ್ಗೆ ಕುರುಬರಹಳ್ಳಿ, ನಲಿಗಾನಹಳ್ಳಿ, ಗುಂಡಾರ್ಲಹಳ್ಳಿ, ತಾಂಡ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾತ್ರಿಯಿಡೀ ವಸತಿ ನಿಲಯದ ಮುಂದೆ ಕುಳಿತು ಬೇರೆಡೆ ಸ್ಥಳಾಂತರಿಸುವಂತೆ ಜನತೆ ಒತ್ತಾಯಿಸಿದ್ದರು. ವೈ.ಎನ್.ಹೊಸಕೋಟೆ ಬಳಿಯೇ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿ ಎಂದು ಪಟ್ಟು ಹಿಡಿದಿದ್ದರು.

ಚಿತ್ರದುರ್ಗದಲ್ಲಿ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಸಿಕ್ಕ ಕೂಡಲೇ ತಾಲ್ಲೂಕು ಆಡಳಿತ, ಅಧಿಕಾರಿಗಳು ಕುರುಬರ ಹಳ್ಳಿ ಗೇಟ್ ಬಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

 

 

ವಿಮೆ ಮತ್ತಷ್ಟು ತಿಳಿಯೋಣ‌ ಬನ್ನಿ…

Raghunandan Publicstory


ಯಾವುದೇ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಒಂದು ವಲಯವಾಗಿ ವಿಮೆ ಹೇಗೆ ಮತ್ತು ಏಕೆ ಪ್ರಮುಖವಾಗಿದೆ ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.

1.ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸುರಕ್ಷತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.

2.ದೀರ್ಘಕಾಲೀನ ಹಣಕಾಸು ಸಂಪನ್ಮೂಲಗಳನ್ನು ಉತ್ಪಾದಿಸುತ್ತದೆ.

3.ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

4.ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಕುಟುಂಬಗಳಿಗೆ ಬೆಂಬಲವನ್ನು ಒದಗಿಸುತ್ತದೆ.

ಈಗ ವಿಮೆಗಳ ವಿಧಗಳ ಬಗ್ಗೆ ತಿಳಿಯೋಣ –


ವಿಮೆ ಜನರ ಆರೋಗ್ಯ ಅಥವಾ ಸ್ವತ್ತುಗಳ ಕೆಲವು ಅಂಶಗಳನ್ನು ಕಾಪಾಡುವ ಗುರಿಯನ್ನು ಹೊಂದಿದೆ.
ಕೆಲವು ಪ್ರಮುಖ ವಿಮೆಯನ್ನು ಹೆಸರಿಸಲು:

ಜೀವ ವಿಮೆ
ಮೋಟಾರ್ ವಿಮೆ
ಆರೋಗ್ಯ ವಿಮೆ
ಪ್ರವಾಸ ವಿಮೆ
ಆಸ್ತಿ ವಿಮೆ
ಮೊಬೈಲ್ ವಿಮೆ
ಸಾಗರ ವಿಮೆ ಇತ್ಯಾದಿ.

ಈಗ, ಸಾಮಾನ್ಯ ಜನರಿಗೆ ವಿಮೆ ಅಗತ್ಯವಿರುವ ಕೆಲವು ವಿಮೆಗಳ ಬಗ್ಗೆ ತಿಳಿಯೋಣ –

ಮೋಟಾರ್ ವಿಮೆ


ಮೋಟಾರು ವಿಮೆ ನಿಮ್ಮ ಕಾರು ಅಥವಾ ಬೈಕು ಒಳಗೊಂಡ ಅಪಘಾತಗಳ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡುವ ಪಾಲಿಸಿಗಳನ್ನು ಸೂಚಿಸುತ್ತದೆ. ಮೂರು ವರ್ಗದ ಮೋಟಾರು ವಾಹನಗಳಿಗೆ ಮೋಟಾರು ವಿಮೆಯನ್ನು ಪಡೆಯಬಹುದು.
ಎ. ಕಾರು ವಿಮೆ
ಬಿ. ದ್ವಿಚಕ್ರ ವಾಹನ ವಿಮೆ
ಸಿ. ವಾಣಿಜ್ಯ ವಾಹನ ವಿಮೆ

2. ಆರೋಗ್ಯ ವಿಮೆ.


ಆರೋಗ್ಯ ವಿಮೆಯು ಒಂದು ರೀತಿಯ ಸಾಮಾನ್ಯ ವಿಮೆಯನ್ನು ಸೂಚಿಸುತ್ತದೆ, ಇದು ಪಾಲಿಸಿದಾರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಿದಾಗ ಅವರಿಗೆ ಹಣಕಾಸಿನ ನೆರವು ನೀಡುತ್ತದೆ.

*ಆರೋಗ್ಯ ವಿಮಾ ಪಾಲಿಸಿಗಳ ವಿಧಗಳು*


ಭಾರತದಲ್ಲಿ ಎಂಟು ಮುಖ್ಯ ರೀತಿಯ ಆರೋಗ್ಯ ವಿಮಾ ಪಾಲಿಸಿಗಳು ಲಭ್ಯವಿದೆ. ಅವುಗಳೆಂದರೆ:
ಎ. ವೈಯಕ್ತಿಕ ಆರೋಗ್ಯ ವಿಮೆ
ಬಿ. ಫ್ಯಾಮಿಲಿ ಫ್ಲೋಟರ್ ವಿಮೆ
ಸಿ. ಕ್ರಿಟಿಕಲ್ ಇಲ್ನೆಸ್ ಕವರ್ –
ಡಿ.ಸೀನಿಯರ್ ಸಿಟಿಜನ್ ಆರೋಗ್ಯ ವಿಮೆ
ಇ.ಗ್ರೂಪ್ ಆರೋಗ್ಯ ವಿಮೆ
ಎಫ್. ಹೆರಿಗೆ ಆರೋಗ್ಯ ವಿಮೆ
ಜಿ. ವೈಯಕ್ತಿಕ ಅಪಘಾತ ವಿಮೆ
ಎಚ್. ಪ್ರಿವೆಂಟಿವ್ ಹೆಲ್ತ್ ಕೇರ್ ಯೋಜನೆಗಳು.

ಇತ್ತೀಚಿನ ದಿನಗಳಲ್ಲಿ, ಜನರ ಜೀವನ ಶೈಲಿಯಲ್ಲಿನ ಬದಲಾವಣೆ ಕಾರಣಗಳಿಂದ ಅರೋಗ್ಯ ವಿಮೆಯು ಬಹು ಮುಖ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ.

(ಮುಂದುವರೆಯುವುದು)