Friday, February 27, 2026
Google search engine
Home Blog Page 245

ಭಾರತ ವಿಶ್ವಗುರು: ಸ್ವಾಮಿ ಜಪಾನಂದ ಜಿ

ಪಾವಗಡ: ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಭಾನುವಾರ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರಿಗೆ ಪಡಿತರ ವಿತರಿಸಿ ಅವರು ಮಾತನಾಡಿದರು.

ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರಪಂಚದ ಇತರೆ ದೇಶಗಳು ಅನುಕರಣೆ ಮಾಡುತ್ತಿವೆ. ದೇಶದ ಸಂಪ್ರದಾಯಗಳನ್ನು ಟೀಕಿಸುತ್ತಿದ್ದ ದೇಶಗಳೇ ಇಂದು ಕೈ ಕುಲುಕುವುದನ್ನು ಬಿಟ್ಟು ನಮಸ್ಕರಿಸುವುದನ್ನು ಅನುಕರಿಸುತ್ತಿವೆ. ಆಹಾರ ಪದ್ದತಿಗಳನ್ನು, ಜೀವನ ಶೈಲಿಯನ್ನು ಬದಲಿಸಿಕೊಳ್ಳಲಾಗುತ್ತಿದೆ. ವೈಜ್ಞಾನಿಕ ನೆಲೆಗಟ್ಟಿನ ಆಧಾರದ ಮೇಲೆ ಆಚರಿಸಲಾಗುತ್ತಿದ್ದ ಪದ್ದತಿಗಳನ್ನು ಮತ್ತೆ ಅನುಸರಿಸಲಾಗುತ್ತಿದೆ ಎಂದರು.

ಇತರೆ ದೇಶಗಳು ಕೊರೊನಾ ನಿಯಂತ್ರಿಸಲು ಸಾಹಸ ಪಡುತ್ತಿವೆ. ದೇಶದಲ್ಲಿ ನಿಯಂತ್ರಿಸಲಾಗುತ್ತಿದೆ. ಇದಕ್ಕೆ ಇಲ್ಲಿನ ಜನರಲ್ಲಿನ ರೋಗ ನಿರೋಧಕ ಶಕ್ತಿ, ಆಚಾರ, ವಿಚಾರ, ಜೀವನ ಶೈಲಿಯೂ ಕಾರಣ. ಕೊರೊನಾ ನಿಯಂತ್ರಿಸುವಲ್ಲಿ ದೇಶ ಪ್ರಥಮ ಸ್ಥಾನ ಪಡೆದಿದೆ. ವಿಶ್ವ ಸಂಸ್ಥೆ. ವಿಶ್ವ ಆರೋಗ್ಯ ಸಂಸ್ಥೆ ದೇಶದ ನಿರ್ಧಾರ, ಕ್ರಮಗಳನ್ನು ಶ್ಲಾಘಿಸುತ್ತಿವೆ. ಇವೆಲ್ಲವನ್ನು ಗಮನಿಸಿದಾಗ ದೇಶ ಶಿಘ್ರ ವಿಶ್ವಗುರುವಿನ ಸ್ಥಾನ ಪಡೆಯಲಿದೆ ಎಂದರು.

ಇತಿಹಾಸ ಲೇಖಕ ವಿ.ಆರ್.ಚೆಲುವರಾಜನ್, ಸ್ವಾಮಿ ಜಪಾನಂದ ಜಿ ಅವರು ಕೊರೊನಾ ಆರಂಭಿಕ ಹಂತದಲ್ಲಿದ್ದಾಗಲೇ ತಾಲ್ಲೂಕಿನ ಬಡ ಜನತೆಗೆ ಪಡಿತರ, ಕೂಲಿ ಕಾರ್ಮಿಕರಿಗೆ ಪರಿಹಾರ ಧನ, ಆಹಾರ ವಿತರಿಸಲು ಆರಂಭಿಸಿದರು. ರಾಜ್ಯದಲ್ಲಿಯೇ ಪ್ರ ಪ್ರಥಮವಾಗಿ ಕೂಲಿ ಕಾರ್ಮಿಕರ ಖಾತೆಗೆ ಹಣ ಹಾಕಿ ಊಟವನ್ನು ವಿತರಿಸಲಾಗುತ್ತಿದೆ.

ಪುರಸಭೆಯ ಕರ್ಮಚಾರಿಗಳಿಗೆ, ಹೋಂ ಗಾರ್ಡ್ , ಗ್ರಾಮ ಸೇವಕರು, ಸವಿತಾ ಸಮಾಜ, ಮಡಿವಾಳ ಸಮಾಜ, ಚಮ್ಮಾರರಿಗೆ, ಅಕ್ಕಸಾಲಿಗರಿಗೆ, ಟೈಲರ್ ಗಳಿಗೆ, ತಾಲ್ಲೂಕು ಫೋಟೋಗ್ರಾಫರ್ ಗಳಿಗೆ, ಮನೆಗೆಲಸ ಮಾಡುವವವರಿಗೆ, ಲಾರಿ ಚಾಲಕರುಗಳಿಗೆ, ತಾಲ್ಲೂಕಿನ ಅರ್ಚಕರಿಗೆ, ಬಡ ಆರ್ಯವೈಶ್ಯ ಜನರಿಗೆ, ಅತ್ಯಂತ ಕಡುಬಡವರಾದ ಬಿದಿರು ಕೆಲಸದವರಿಗೆ, ಮಹಾರಾಷ್ಟ್ರದ ರಾಯಘಡದಿಂದ ಬಂದಂತಹ ಕಾರ್ಮಿಕರಿಗೆ, ವಕೀಲರಿಗೆ, ಉತ್ತರ ಪ್ರದೇಶದಿಂದ ಬಂದಂತಹ ಕಾರ್ಮಿಕರಿಗೆ, ಬಿಹಾರ ರಾಜ್ಯದಿಂದ ಬಂದಂತಹ ಕಾರ್ಮಿಕರಿಗೆ, ದೂರದ ರಾಯಚೂರು ಪ್ರದೇಶದಿಂದ ಬಂದಂತಹ ಕಾರ್ಮಿಕರಿಗೆ, ಹಕ್ಕಿಪಿಕ್ಕಿ ಜನಾಂಗದವರಿಗೆ, ಬುಡಕಟ್ಟು ಜನಾಂಗದವರಿಗೆ ಪಡಿತರ ವಿತರಿಸಿದ್ದಾರೆ.

ಸಮಾಜದ ಎಲ್ಲ ವರ್ಗದವರಿಗೂ ರಾಜ್ಯದ ಯಾವುದೇ ಸಂಘ ಸಂಸ್ಥೆ ಇಷ್ಟು ಪ್ರಮಾಣದ ಸಹಾಯ ನೀಡಿಲ್ಲ. ಸ್ವಾಮೀಜಿ ಉತ್ತಮ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.

ಎಸ್.ಎಸ್.ಕೆ ಸಂಘದ ಕಾರ್ಯದರ್ಶಿ ಪಿ.ವಿ.ಸುಬ್ಬನರಸಿಂಹ, ವಕೀಲ ಯಜ್ಞ ನಾರಾಯಣ ಶರ್ಮ, ಶೋಭ, ಜಯಶ್ರೀ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗೆ ಕಿಯೋಸ್ಕ್ ಹಸ್ತಾಂತರ

0

https://youtu.be/7FcRjkc2LfM

ಪಾವಗಡ: ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸುರಕ್ಷತೆಗೆ ಗಂಟಲು ದ್ರವ ತೆಗೆಯುವ ಕಿಯೋಸ್ಕ್ ಕೊಡುಗೆಯಾಗಿ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ವೆಂಕಟೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭಾನುವಾರ ಗಂಟಲು ದ್ರವ ತೆಗೆಯುವ ಕಿಯೋಸ್ಕ್ ಹಸ್ತಾಂತರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆ ನಡೆಸಲು ಕಿಯೋಸ್ಕ್ ಬೇಕಿದೆ ಎಂದು ವೈದ್ಯರು ಮನವಿ ಮಾಡಿದರು. ಕೂಡಲೇ ಕಾರ್ಯ ಪ್ರವೃತ್ತರಾಗಿ ತಯಾರಿಕಾ ಕಂಪನಿಗೆ ಬೇಡಿಕೆ ಸಲ್ಲಿಸಿ ತರಿಸಿಕೊಳ್ಳಲಾಗಿದೆ. ಇದರಿಂದ ಸುರಕ್ಷತೆ ಹಾಗೂ ಧೈರ್ಯವಾಗಿ ವೈದ್ಯರು ಗಂಟಲು ದ್ರವ ತೆಗೆಯಬಹುದಾಗಿದೆ ಎಂದರು.

ಪಟ್ಟಣದ ಬ್ಯಾಂಕ್, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣದಲ್ಲಿನ ಸುಮಾರು 2 ಸಾವಿರ ಮಂದಿ ಬಡ ಜನತೆ, ಗ್ರಾಮಗಳಿಂದ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ಹಣ್ಣು ವಿತರಿಸಲಾಗುತ್ತಿದೆ. ಆಹಾರ ವಿತರಿಸುವ ಕಾರ್ಯಕ್ರಮ ಲಾಕ್ ಡೌನ್ ಮುಕ್ತಾಯವಾಗುವವರೆಗೆ ಮುಂದುವರೆಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲ್ಲೂಕಿನ ಜನತೆಗೆ ಅಗತ್ಯ ಸಹಾಯ ಸಹಕಾರ ನೀಡಲಾಗುವುದು. ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಿಸುವ ಹಾಗೂ ಜನತೆಯ ಹಿತದೃಷ್ಠಿಯಿಂದ ವಿವಿಧ ಇಲಾಖೆ ಸಿಬ್ಬಂದಿ, ವೈದ್ಯರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಎಚ್.ವಿ.ವೆಂಕಟೇಶ್ ಅವರು ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿದರು.

ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ, ಪುರಸಭೆ ಸದಸ್ಯ ರಾಜೇಶ್, ರವಿ, ಎಂ.ಎ.ಜಿ ಇಮ್ರಾನ್, ವೆಂಕಟರವಣಪ್ಪ, ಮಣಿ, ಎಂ.ಎಸ್.ವಿಶ್ವನಾಥ್, ಅಶ್ವಥ್, ಅಶೋಕ್, ಅಮರ್, ಷಾ ಬಾಬು, ರಿಜ್ವಾನ್, ಕಿರಣ್, ಅವಿನಾಶ್, ಹನುಮೇಶ್ ಉಪಸ್ಥಿತರಿದ್ದರು.

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ


ದಿನಾಂಕ : 26, ಏಪ್ರಿಲ್ 2020
ಸ್ಥಳ : ಬೆಂಗಳೂರು (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ಉತ್ತರಾಯಣ
ಮಾಸ : ವೈಶಾಖ ಮಾಸ
ಋತು : ವಸಂತ ಋತು
ಕಾಲ : ಬೇಸಿಗೆಕಾಲ
ವಾರ : ಭಾನುವಾರ
ಪಕ್ಷ : ಶುಕ್ಲಪಕ್ಷ
ತಿಥಿ : ತದಿಗೆ
(ನಿನ್ನೆ ಬೆಳಿಗ್ಗೆ 11 ಗಂ॥ 51 ನಿ।। ರಿಂದ
ಇಂದು ಮಧ್ಯಾಹ್ನ 1 ಗಂ॥ 20 ನಿ।। ತನಕ)
ನಕ್ಷತ್ರ : ರೋಹಿಣಿ
(ನಿನ್ನೆ ರಾತ್ರಿ 8 ಗಂ॥ 57 ನಿ।। ರಿಂದ
ಇಂದು ರಾತ್ರಿ 10 ಗಂ॥ 54 ನಿ।। ತನಕ)
ಯೋಗ : ಶೋಭನ
ಕರಣ : ಗರಜೆ
ವರ್ಜ್ಯಂ : (ಇಂದು ಮಧ್ಯಾಹ್ನ 2 ಗಂ॥ 15 ನಿ।। ರಿಂದ ಇಂದು ಸಂಜೆ 3 ಗಂ॥ 58 ನಿ।। ತನಕ)
ಅಮೃತಕಾಲ : (ಇಂದು ರಾತ್ರಿ 7 ಗಂ॥ 26 ನಿ।। ರಿಂದ ಇಂದು ರಾತ್ರಿ 9 ಗಂ॥ 9 ನಿ।। ತನಕ)
ದುರ್ಮುಹೂರ್ತ : (ಇಂದು ಸಂಜೆ 4 ಗಂ॥ 52 ನಿ।। ರಿಂದ ಇಂದು ಸಂಜೆ 5 ಗಂ॥ 42 ನಿ।। ತನಕ)
ರಾಹುಕಾಲ : (ಇಂದು ಸಂಜೆ 4 ಗಂ॥ 58 ನಿ।। ರಿಂದ ಇಂದು ರಾತ್ರಿ 6 ಗಂ॥ 33 ನಿ।। ತನಕ)
ಗುಳಿಕ : (ಇಂದು ಸಂಜೆ 3 ಗಂ॥ 23 ನಿ।। ರಿಂದ ಇಂದು ಸಂಜೆ 4 ಗಂ॥ 58 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 12 ಗಂ॥ 13 ನಿ।। ರಿಂದ ಇಂದು ಮಧ್ಯಾಹ್ನ 1 ಗಂ॥ 48 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 5 ಗಂ॥ 53 ನಿ।। ಗೆ
ಸೂರ್ಯಾಸ್ತದ : ಸಂಜೆ 6 ಗಂ॥ 34 ನಿ।। ಗೆ
ರವಿರಾಶಿ : ಮೇಷ
ಚಂದ್ರರಾಶಿ : ವೃಷಭ

ರಾಶಿ ಭವಿಷ್ಯ

ಮೇಷ ರಾಶಿ : 26 Apr 2020
ಧ್ಯಾನ ಮತ್ತು ಯೋಗವನ್ನು ಆಧ್ಯಾತ್ಮಿಕ ಹಾಗೂ ಭೌತಿಕ ಲಾಭಗಳಿಗಾಗಿ ಆಚರಿಸಬೇಕು. ತಮ್ಮ ಆಪ್ತರು ಅಥವಾ ಸಂಬಂಧಿಕರೊಂದಿಗೆ ಸೇರಿ ವ್ಯಾಪಾರವನ್ನು ಮಾಡುತ್ತಿರುವ ಜನರು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹೆಜ್ಜೆಯನ್ನು ಹಾಕುವ ಅಗತ್ಯವಿದೆ , ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ. ನಿಮ್ಮ ನೋಟವನ್ನು ವರ್ಧಿಸುವ ಮತ್ತು ಪ್ರಬಲ ಪಾಲುದಾರರನ್ನು ಆಕರ್ಷಿಸಲು ಬದಲಾವಣೆಗಳನ್ನು ಮಾಡಿ. ನಿಮ್ಮ ಸಂಗಾತಿ ಇಂದು ನಿಮಗೆ ವಿಶೇಷವಾದದ್ದೇನಾದರೂ ಕೊಳ್ಳಬಹುದು. ಅದೃಷ್ಟ ಸಂಖ್ಯೆ: 6

ವೃಷಭ ರಾಶಿ :26 Apr 2020
ಒಟ್ಟಾರೆ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯವೂ ಮತ್ತು ಕಷ್ಟಕರವೂ ಆಗಿರುತ್ತದೆ. ದಿನದ ಆರಂಭದಲ್ಲಿ ಇಂದು ನೀವು ಯಾವುದೇ ಆರ್ಥಿಕ ನಷ್ಟವನ್ನು ಹೊಂದಿರಬಹುದು.ಇದರಿಂದ ನಿಮ್ಮ ಪೂರ್ತಿ ದಿನ ಹದಗೆಡಬಹುದು. ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು, ಇದು ಮನೆಯಲ್ಲಿ ಆತಂಕದ ಕ್ಷಣಗಳು ತರುತ್ತದೆ. ರಹಸ್ಯ ಪ್ರಣಯಗಳು ನಿಮ್ಮ ಖ್ಯಾತಿಯನ್ನು ನಾಶಮಾಡಬಹುದು. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ಇಂದು ನೀವು ಎಲ್ಲಾ ಕೆಲಸಗಳನ್ನು ಹೊರತುಪಡಿಸಿ, ಬಾಲ್ಯದಲ್ಲಿ ನೀವು ಮಾಡಲು ಇಷ್ಟಪಟ್ಟ ಕೆಲಸಗಳನ್ನು ಮಾಡಲು ಇಷ್ಟಪಡುತ್ತೀರಿ. ಅದೃಷ್ಟ ಸಂಖ್ಯೆ: 5

ಮಿಥುನ ರಾಶಿ : 26 Apr 2020
ನಿಮ್ಮ ದೊಡ್ಡ ಆಸ್ತಿಯೆಂದರೆ ನಿಮ್ಮ ಹಾಸ್ಯಪ್ರಜ್ಞೆಯಾಗಿದೆ ಇದನ್ನು ನಿಮ್ಮ ಅನಾರೋಗ್ಯ ಗುಣಪಡಿಸಲು ಬಳಸಲು ಪ್ರಯತ್ನಿಸಿ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ, ಇದು ನಿಮ್ಮ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಾಗೂ ಮನೆಯ ಉದ್ವಿಗ್ನತೆಗಳನ್ನು ಶಮನ ಕಾಣಿಸುತ್ತದೆ ಇದುವರೆಗೂ ಒಂಟಿಯಾಗಿ ಇರುವವರು ಇಂದು ಯಾರೋ ವಿಶೇಷ ಭೇಟಿಯಾಗುವ ಸಾಧ್ಯತೆ ಇದೆ ಆದರೆ ವಿಷಯವನ್ನು ಮುಂದುವರಿಸುವ ಮೊದಲು, ಆ ವ್ಯಕ್ತಿ ಯಾರೊಂದಿಗಾದರೂ ಸಂಬಂಧದಲ್ಲಿ ಇದ್ದರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ವೃತ್ತಿಪರ ರಂಗದಲ್ಲಿ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆಯಿದೆ. ಈ ರಾಶಿಚಕ್ರದ ಜನರಿಗೆ ಇಂದು ತಮ್ಮನ್ನು ತಾವೇ ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ಅದೃಷ್ಟ ಸಂಖ್ಯೆ: 3

ಕರ್ಕ ರಾಶಿ :26 Apr 2020
ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ- ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ. ಪಾಲಕರು ಮತ್ತು ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸಲು ಅವರಿಗೆ ಸಾಧ್ಯವಾದದ್ದನ್ನೆಲ್ಲ ಮಾಡುತ್ತಾರೆ. ಪ್ರೇಮ ಜೀವನ ಸ್ವಲ್ಪ ಕಠಿಣವಾಗಿರಬಹುದು. ಕೆಲವರಿಗೆ ವ್ಯಾಪಾರ ಮತ್ತು ಶಿಕ್ಷಣ ಪ್ರಯೋಜನ ತರುತ್ತದೆ. ಅದೃಷ್ಟ ಸಂಖ್ಯೆ: 7


ಕನ್ಯಾ ರಾಶಿ : 26 Apr 2020
ಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ಪ್ರೀತಿ – ಸಾಂಗತ್ಯ ಮತ್ತು ಬಂಧ ಏರಿಕೆಯಲ್ಲಿರುತ್ತವೆ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳು ಇಂದು ಹೆಚ್ಚಿವೆ. ಪ್ರಮುಖ ಫೈಲ್ ಎಲ್ಲಾ ರೀತಿಯಲ್ಲೂ ಪೂರ್ಣವಾಗಿದೆಯೆಂದು ಖಚಿತವಾಗುವತನಕ ನಿಮ್ಮ ಬಾಸ್‌ಗೆ ಅದನ್ನು ಹಸ್ತಾಂತರಿಸಬೇಡಿ.
ಅದೃಷ್ಟ ಸಂಖ್ಯೆ: 5

ಸಿಂಹ ರಾಶಿ : 26 Apr 2020
ನಿಮ್ಮ ಶಕ್ತಿಯನ್ನು ಸ್ವಯಂ ಸುಧಾರಣೆ ಯೋಜನೆಗಳಲ್ಲಿ ಹಾಗೂ ನಿಮ್ಮನ್ನು ಉತ್ತಮವಾಗಿಸುವ ಯೋಜನೆಗಳಲ್ಲಿ ಹಾಕಿ. ಇಂದು, ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ, ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ, ನಿಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. ಬೇಕಷ್ಟು ಮೊದಲೇ ಯೋಜಿಸಿದ ಪ್ರಯಾಣದ ಕಾರ್ಯಕ್ರಮಗಳು ಕುಟುಂಬದಲ್ಲಿನ ಆರೋಗ್ಯದ ಸಮಸ್ಯೆಗಳಿಂದಾಗಿ ಮುಂದೂಡಲಾಗಬಹುದು. ನಿಮ್ಮ ಸಂಗಾತಿಯ ಕೆಟ್ಟ ಆರೋಗ್ಯದಿಂದಾಗಿ ಇಂದು ಪ್ರಣಯಕ್ಕೆ ಧಕ್ಕೆಯಾಗುತ್ತದೆ. ಅರ್ಹ ನೌಕರರಿಗೆ ಬಡ್ತಿ ಅಥವಾ ಆರ್ಥಿಕ ಲಾಭ. ಜನರೊಂದಿಗೆ ಮಾತನಾಡುವಲ್ಲಿ ಇಂದು ನೀವು ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಬಹುದು.
ಅದೃಷ್ಟ ಸಂಖ್ಯೆ: 5


ತುಲಾ ರಾಶಿ : 26 Apr 2020
ತುಂಬಾ ಪ್ರಯಾಣ ನಿಮಗೆ ದಣಿವಾಗಿಸುತ್ತದೆ ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮಗೆ ಕೆಟ್ಟ ಹವ್ಯಾಸಗಳ ಪ್ರಭಾವ ಬೀರಬಹುದಾದ ಕೆಟ್ಟ ಜನರಿಂದ ದೂರವಿರಿ. ಪ್ರಣಯದ ಅವಕಾಶಗಳಿವೆ – ಆದರೆ ಅವು ಕ್ಷಣಿಕವಾಗಿರುತ್ತವೆ. ನೀವು ಕೆಲಸ ಮಾಡುವ ಬಗ್ಗೆ ಖಚಿತವಾಗಿಲ್ಲದಿದ್ದರೆ ಯಾವ ಭರವಸೆಯನ್ನೂ ನೀಡಬೇಡಿ. ಅದೃಷ್ಟ ಸಂಖ್ಯೆ: 6


ವೃಶ್ಚಿಕ ರಾಶಿ : 26 Apr 2020
ತಂದೆಯು ನಿಮ್ಮನ್ನು ಆಸ್ತಿಯ ಉತ್ತರಾಧಿಕಾರಿತ್ವದಿಂದ ತಪ್ಪಿಸಬಹುದು. ಆದರೆ ಧೃತಿಗೆಡಬೇಡಿ. ಅಭ್ಯುದಯ ಮನಸ್ಸಿಗೆ ಮುದ ನೀಡಿದರೆ ಅಭಾವ ಅದನ್ನು ಬಲಗೊಳಿಸುತ್ತದೆಂದು ನೆನಪಿಡಿ. ನಿಮ್ಮ ಸಹೋದರ-ಸಹೋದರಿಯರಲ್ಲಿ ಒಬ್ಬರು ಇಂದು ನಿಮ್ಮಿಂದ ಹಣವನ್ನು ಎರವಲು ಪಡೆಯಬಹುದು, ನೀವು ಅವರಿಗೆ ಹಣವನ್ನು ಸಾಲವಾಗಿ ಕೊಡುತ್ತೀರಿ ಆದರೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಮಕ್ಕಳು ಕ್ರೀಡೆ ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನಿಮ್ಮ ಪ್ರೀತಿ ಅಸಮ್ಮತಿಯನ್ನು ಆಮಂತ್ರಿಸಬಹುದು. ಕೆಲಸದ ಸ್ಥಳದಲ್ಲಿ ಸಾಮರ್ಥ್ಯವನ್ನು ಸುಧಾರಿಸಲು ನಿಮ್ಮ ಕೌಶಲ್ಯದ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಆರೋಗ್ಯದಿಂದಾಗಿ ಯಾರನ್ನಾದರೂ ಭೇಟಿಯಾಗುವ ನಿಮ್ಮ ಯೋಜನೆ ಹಾಳಾದಲ್ಲಿ ನೀವು ಒಟ್ಟಿಗೆ ಇನ್ನೂ ಉತ್ತಮವಾಗಿ ಕಲ ಕಳೆಯುತ್ತೀರಿ. ಅದೃಷ್ಟ ಸಂಖ್ಯೆ: 8

ಧನು ರಾಶಿ : 26 Apr 2020
ನಗುವಿನ ಚಿಕಿತ್ಸೆ ಎಲ್ಲಾ ಸಮಸ್ಯೆಗಳಿಗೂ ಮದ್ದಾಗಿರುವುದರಿಂದ ನಿಮ್ಮ ಅನಾರೋಗ್ಯ ಗುಣಪಡಿಸಲು ನಗುವಿನ ಚಿಕಿತ್ಸೆ ಬಳಸಿ. ನಿಮ್ಮ ತಾಯಿಯ ಬದಿಯಿಂದ ಇಂದು ಹಣಕಾಸಿನ ಲಾಭವನ್ನು ಪಡೆಯುವ ಪೂರ್ಣ ಸಾಧ್ಯತೆ ಇದೆ.ನಿಮ್ಮ ಮಾಮ ಅಥವಾ ತಾತ ನಿಮಗೆ ಆರ್ಥಿಕ ಬೆಂಬಲ ಮಾಡಬಹುದು. ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಪ್ರೀತಿ ತೋರಿಸಬೇಕು. ನುರಿತ ಜನರೊಡನೆ ಒಡನಾಟ ಹೊಂದಿ ಮತ್ತು ಅವರು ನಿಮಗೆ ಭವಿಷ್ಯದ ಪ್ರವೃತ್ತಿಗಳ ಬಗ್ಗೆ ಒಳನೋಟ ನೀಡಬಲ್ಲರು.
ನಿಮ್ಮ ಜೀವನ ಸಂಗಾತಿಯು ಈ ಅಗತ್ಯದ ಕಾಲದಲ್ಲಿ ಅವರ ಕುಟುಂಬದ ಸದಸ್ಯರಿಗೆ ಹೋಲಿಸಿದರೆ ನಿಮ್ಮ ಕುಟುಂಬದ ಸದಸ್ಯರಿಗೆ ಕಡಿಮೆ ಕಾಳಜಿ ಮತ್ತು ಪ್ರಾಮುಖ್ಯತೆಯನ್ನು ನೀಡಬಹುದು. ಅದೃಷ್ಟ ಸಂಖ್ಯೆ: 5

ಕುಂಭ ರಾಶಿ : 26 Apr 2020
ನೀವು ಇತರರೊಡನೆ ನಿಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಂತೆ ನಿಮ್ಮ ಆರೋಗ್ಯ ಅರಳುತ್ತದೆ. ಆದರೆ ಇದನ್ನು ನಿರ್ಲಕ್ಷಿಸುವುದು ನಿಮಗೆ ತೊಂದರೆ ತರುತ್ತದೆ. ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ, ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ನೀವು ಒಬ್ಬಂಟಿಯೆನಿಸಿದಾಗ ನಿಮ್ಮ ಕುಟುಂಬದ ಸಹಾಯ ತೆಗೆದುಕೊಳ್ಳಿ. ಇದು ಖಿನ್ನತೆಯಿಂದ ನಿಮ್ಮನ್ನು ಉಳಿಸುತ್ತದೆ. ಇದು ನಿಮಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಸಹಾಯ ಮಾಡುತ್ತದೆ. ನಿಮ್ಮ ಪ್ರಿಯತಮೆಯ ಕಠಿಣ ಪದಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು. ಪ್ರೀತಿ ಮಿತಿಯಿಲ್ಲದ್ದಾಗಿದೆ, ಅಪಾರವಾಗಿದೆ; ನೀವು ಈ ಮುಂಚೆ ಈ ವಿಷಯಗಳನ್ನು ಕೇಳಿರಬೇಕು. ಆದರೆ ಇಂದು, ನೀವು ಇದನ್ನು ಅನುಭವಿಸುತ್ತೀರಿ. ಇಂದು ಸಮಯದ ಸೌಂದರ್ಯವನ್ನು ನೋಡುತ್ತಾ, ನೀವು ನಿಮಗಾಗಿ ಸಮಯವನ್ನು ತೆಗೆಯಬಹುದು.
ಅದೃಷ್ಟ ಸಂಖ್ಯೆ: 3

ಮಕರ ರಾಶಿ : 26 Apr 2020
ನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಥಿಯೇಟರ್ ಅಥವಾ ನಿಮ್ಮ ಸಂಗಾತಿಯ ಜೊತೆಗಿನ ಊಟ ನಿಮ್ಮನ್ನು ಒಂದು ಶಾಂತವಾದ ಮತ್ತು ಅದ್ಭುತ ಲಹರಿಯಲ್ಲಿರಿಸುವಂತೆ ತೋರುತ್ತದೆ. ನೀವು ವಾಸ್ತವಾಂಶಗಳನ್ನು ಎದುರಿಸುತ್ತಿದ್ದ ಹಾಗೆ ಪ್ರೀತಿಪಾತ್ರರನ್ನು ಮರೆಬೇಕಾಗುತ್ತದೆ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ – ನೀವು ಒಂದು ಬಾರಿ ಒಂದೇ ಹೆಜ್ಜೆಯಿಟ್ಟರೆ ಇದು ಪ್ರಮುಖ ಬದಲಾವಣೆ ತರುತ್ತದೆ. ಒಂದು ತಮಾಷೆಯ ಮಾತುಕತೆಯಲ್ಲಿ ಒಂದು ಹಳೆಯ ಸಮಸ್ಯೆ ಭುಗಿಲೇಳಬಹುದು, ಹಾಗೂ ಇದು ಅಂತಿಮವಾಗಿ ವಾದಕ್ಕೀಡುಮಾಡಬಹುದು. ಅದೃಷ್ಟ ಸಂಖ್ಯೆ: 5

ಮೀನ ರಾಶಿ : 26 Apr 2020
ನಿಮ್ಮ ಮುಖದಲ್ಲಿ ನಿರಂತರವಾದ ನಗುವಿರುವ ಮತ್ತು ಅಪರಿಚಿತರೂ ಪರಿಚಿತರಂತೆ ತೋರುವ ಒಂದು ದಿನ. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು. ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ಯುವಕರು ಶಾಲಾ ಯೋಜನೆಗಳಲ್ಲಿ ಕೆಲವು ಸಲಹೆ ಪಡೆಯಬಹುದು. ಇತರರ ಹಸ್ತಕ್ಷೇಪ ವ್ಯಾಜ್ಯವುಂಟುಮಾಡುತ್ತದೆ. ನೀವು ಹಿಂದಿನಿಂದಲೂ ಕೆಲಸದಲ್ಲಿ ಯಾರಾದರ ಜೊತೆಗಾದರೂ ಮಾತನಾಡಲು ಪ್ರಯತ್ನಿಸುತ್ತಿದ್ದಲ್ಲಿ, ಇಂದು ನಿಮ್ಮ ಅದೃಷ್ಟ ಖುಲಾಯಿಸುತ್ತದೆ.
ಅದೃಷ್ಟ ಸಂಖ್ಯೆ: 9

ರಂಗಭೂಮಿಯ ಮಹಾನ್ ‘ಕಳ್ಳ’ ಬಿ ಜಯಶ್ರೀ

0

ಜಿ.ಎನ್.ಮೋಹನ್


ನನ್ನೆದುರು ಕುಳಿತಿದ್ದ ಬಿ ಜಯಶ್ರೀ ಒಂದು ಕ್ಷಣ ಮಾತು ನಿಲ್ಲಿಸಿದರು.
ಕನ್ನಡಕ ತೆಗೆದರು
ಸೀರೆಯಂಚು ಕಣ್ಣಿನ ಬಳಿ ಬಂತು.

ನಾನು ಗಾಬರಿಯಾಗಿ ಅವರತ್ತ ನೋಡಿದೆ.
ಅವರು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು.
ಇನ್ನಿಲ್ಲದಂತೆ ಉಕ್ಕುತ್ತಿದ್ದ ಕಣ್ಣೇರು ಅವರ ಸೀರೆಯಂಚನ್ನು ಇನ್ನಷ್ಟು ಮತ್ತಷ್ಟು ಒದ್ದೆ ಮಾಡುತ್ತಲೇ ಇತ್ತು.

ನಾನು ದಿಗ್ಭ್ರಾಂತನಾಗಿದ್ದೆ.
ಯಾಕೆಂದರೆ ನಾನು ನನ್ನ ಹೈ ಸ್ಕೂಲ್ ದಿನಗಳಿಂದಲೂ ಜಯಶ್ರೀಯವರನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ.
ಜಯಶ್ರೀ ನನಗೆ ರಂಗದ ಮೇಲೆ ಹೆಜ್ಜೆ ಹಾಕುವುದನ್ನು ಹೇಳಿಕೊಟ್ಟಿದ್ದಾರೆ
ನಗಿಸುವುದು, ಅಳಿಸುವುದು ಎರಡೂ ಹೇಳಿಕೊಟ್ಟಿದ್ದಾರೆ.
ಆದರೆ ಅವರು ಅಳುವುದನ್ನು ಹೇಳಿಕೊಟ್ಟಿರಲಿಲ್ಲ, ಅತ್ತೂ ಇರಲಿಲ್ಲ.

ಬಿ ಜಯಶ್ರೀ ಎಂದರೆ ಸಾಕು ಒಂದು ದೊಡ್ಡ ಆತ್ಮವಿಶ್ವಾಸದ ಪ್ರತೀಕ
ಅಂತಹ ಬಿ ಜಯಶ್ರೀ ಅಂದು ನನ್ನೆದುರು ಕಣ್ಣೀರಾಗಿ ಹೋಗಿದ್ದರು.

ಕಲಾಕ್ಷೇತ್ರದ ಬದಿಯ ಪಾರ್ಕ್ ನಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದಾಗ ನಾನು ‘ನಿಮ್ಮ ಹೆಸರಿನಲ್ಲೇ ಜಯ ಇದೆ.
ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಇತ್ತು ಅಲ್ಲವಾ’ ಎಂದೆ.

ಅಷ್ಟೇ ಸಾಕಾಗಿ ಹೋಗಿತ್ತು.
ಜಯಶ್ರೀ ಮೌನಕ್ಕೆ ಶರಣಾದರು.

ಸ್ವಲ್ಪ ಹೊತ್ತು ಅಷ್ಟೇ
ಬೆದರಿದ ಕುರಿಮರಿಯಂತಾಗಿ ಹೋಗಿದ್ದ ನನ್ನತ್ತ ನೋಡಿ ನಕ್ಕು ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಟ್ಟವರೇ
‘ಎದ್ದೇಳು’ ಎಂದರು.

ನಾನು ಇದೇನಪ್ಪಾ ಎಂದುಕೊಂಡೆ.
ತಕ್ಷಣ ಅವರು ‘ಬಿದ್ದಮೇಲೆ ಎದ್ದೇಳಲೇಬೇಕಲ್ಲಪ್ಪ, ಹಾಗೆ ಬಿದ್ದು ಎದ್ದಿದ್ದೇನೆ
ಬದುಕು ಗೆದ್ದಿದ್ದೇನಾ ಗೊತ್ತಿಲ್ಲ’ ಎಂದರು.

‘ನಾನು ಉಟ್ಟ ಬಟ್ಟೆಯಲ್ಲಿ ಮಗುವನ್ನೆತ್ತಿಕೊಂಡು ಮನೆಯಿಂದ ಹೊರಬಂದೆ. ಚಿಕ್ಕ ಮಗು. ಅದಕ್ಕೆ ಹಾಲಿಗಾದರೂ ಹಣ ಬೇಕಲ್ಲ, ವೈರ್ ಬುಟ್ಟಿಗಳನ್ನು ಹೆಣೆದು ಬಂದ ಹಣದಲ್ಲಿ ಮಗುವಿಗೆ ಅಮುಲ್ ತರುತ್ತಿದ್ದೆ. ಗೊತ್ತಿಲ್ಲ ಅದಕ್ಕೆ ಏನೋ ಅವಳನ್ನು ನಾನು ಅಮ್ಮು ಅಂತಲೇ ಕರೆಯುತ್ತಿದ್ದೆ’ ಎಂದವರೇ ‘ನಾನೇ ಇಷ್ಟಪಟ್ಟು ಮದುವೆ ಮಾಡಿಕೊಂಡ ಗಂಡ ಆತ. ಎಲ್ಲ ಗಂಡಿನ ಒಳಗೂ ಹ್ಯಾಮ್ಲೆಟ್ ನಾಟಕದ ಇಯಾಗೋ ಥರಾ ಒಬ್ಬ ಇರುತ್ತಾನೆ. ಸಂಶಯದ ಮೇಲೆ ಕೂತವ. ಅವನೂ ಅಷ್ಟೇ’.

‘ನನ್ನ ಮದುವೆಗೆ ಬರಲಿಕ್ಕಾಗಲಿಲ್ಲ ಎಂದು ಮುಂದೊಂದು ದಿನ ಓಂ ಪುರಿ ಇಬ್ಬರಿಗೂ ವಿಶ್ ಮಾಡಲು ಬೆಂಗಳೂರಿನ ನನ್ನ ಮನೆಗೆ ಬಂದ. ನನ್ನ ಗಂಡ ಇಡೀ ದಿನ ಮನೆಗೆ ಬರಲಿಲ್ಲ. ಕಾದೂ ಕಾದೂ ಓಂ ಪುರಿ ಗಿಫ್ಟ್ ಕೊಟ್ಟು, ಊಟ ಮಾಡಿ ಹೋದ. ರಾತ್ರಿ ಮನೆಗೆ ಬಂದ ಗಂಡನಲ್ಲಿ ಸಂಶಯ ತಲೆ ಎತ್ತಿ ಬುಸುಗುಡುತ್ತಿತ್ತು. ನಾನಿಲ್ಲದಾಗ ಇನ್ನೊಬ್ಬ ಗಂಡಸು ಮನೆಗೆ ಬರುವುದು ಎಂದರೆ ಏನು ಎಂದು ಕೂಗಾಡಲು ಆರಂಭಿಸಿದ. ಅದು ನನ್ನ ಅದುವರೆಗಿನ ನೋವುಗಳ ಕ್ಲೈಮಾಕ್ಸ್. ಮಾರನೆಯ ದಿನ ಬೆಳ್ಳಂಬೆಳಗ್ಗೆ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಬಿದ್ದೆ’ ಎಂದರು.

‘ಅಲ್ಲಿಂದ ನಾನು ಬದುಕನ್ನು ಎದುರಿಸಲು ಕಲಿತದ್ದು ಇದೇ ಇದೇ ಕಲಾಕ್ಷೇತ್ರದಿಂದ. ನನಗೆ ಇಬ್ಬರು ತಾಯಂದಿರು. ಒಂದು ಅಮ್ಮ ಮಾಲತಮ್ಮ, ಇನ್ನೊಂದು ಈ ರಂಗಭೂಮಿ’ ಎಂದರು.

ಜಯಶ್ರೀ ಹೆಸರಲ್ಲಿ ಒಂದು ರೆಕಾರ್ಡ್ ಇದೆ. ಅದು ರಂಗಭೂಮಿ ಕ್ಷೇತ್ರದಲ್ಲಿ ಒಂದೇ ಮನೆಗೆ ಎರಡು ‘ಪದ್ಮಶ್ರೀ’ ಬಂದ ರೆಕಾರ್ಡ್. ಒಂದು ತಾತ ಗುಬ್ಬಿ ವೀರಣ್ಣನವರಿಗೆ, ಇನ್ನೊಂದು ಮೊಮ್ಮಗಳು ಬಿ ಜಯಶ್ರೀಗೆ. ನೋವಿಗೂ ಕಣ್ಣೀರು ಬರುತ್ತೆ ಎಂದು ಕಂಡಿದ್ದ ಜಯಶ್ರೀ ಸಂತೋಷಕ್ಕೂ ಕಣ್ಣೀರಿಡುವ ಅನೇಕ ಪ್ರಸಂಗಗಳನ್ನು ರಂಗಭೂಮಿ ಅವರಿಗೆ ಸೃಷ್ಟಿ ಮಾಡಿಕೊಟ್ಟಿತು.

‘ನಾನು ಎನ್ ಎಸ್ ಡಿ ಮೆಟ್ಟಿಲು ಹತ್ತಲು ಶ್ರೀರಂಗರೇ ಕಾರಣ. ಇದೇ ಕಲಾಕ್ಷೇತ್ರದಲ್ಲಿ ಶ್ರೀರಂಗರು ನಾಟಕದ ಕಾರ್ಯಾಗಾರ ನಡೆಸಿದ್ದರು. ಅದರಲ್ಲಿ ನಾನಿದ್ದೆ. ಅದೇನನಿಸಿತೋ, ಈ ಹುಡುಗಿಯನ್ನು ಎನ್ ಎಸ್ ಡಿ ಗೆ ಕಳಿಸಿ ಎಂದರು. ಕಾರ್ಪೊರೇಷನ್ ಸ್ಕೂಲ್ ನ ಅತಿ ಶಿಸ್ತಿನಲ್ಲಿ ಬೆಳೆದು. ಕಾಲೇಜಿನ ನಿರ್ಭಿಡೆಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ, ಕನ್ನಡದಲ್ಲಿ ಡುಮ್ಕಿ ಹೊಡೆದಿದ್ದ ಹುಡುಗಿ ಅಂತೂ ಎನ್ ಎಸ್ ಡಿ ಮೆಟ್ಟಿಲು ಹತ್ತಿದಳು’ ಎಂದು ನಕ್ಕರು.

ಜಯಶ್ರೀ ಎಂದರೆ ನನಗೆ ಎದೆಯಲ್ಲಿ ಸದಾ ಡವ ಡವವೇ. ಏಕೆಂದರೆ ಹಾಗೆ ಎನ್ ಎಸ್ ಡಿ ಪದವಿ ಮುಗಿಸಿ ಬಂದ ಹೊಸದರಲ್ಲೇ ಅವರು ಬಾಲಭವನದಲ್ಲಿ ಮಕ್ಕಳಿಗೆ ರಂಗ ಶಿಕ್ಷಕರೂ ಆಗಿದ್ದರು. ಅಲ್ಲಿ ನಾನು ನಾಟಕದ ಸ್ಟೂಡೆಂಟ್. ಸಿಕ್ಕಾಪಟ್ಟೆ ಗಲಾಟೆ ಮಾಡುವವರ ಹೆಸರಲ್ಲಿ ನನ್ನದೇ ಮೊದಲ ಹೆಸರು. ಆಗ ಎಲ್ಲರೂ ನನ್ನನ್ನು ಅಟ್ಟುತ್ತಿದ್ದುದು ಜಯಶ್ರೀ ಎಂಬ ರಿಮ್ಯಾನ್ಡ್ ಹೋಮ್ ಗೆ. ಜಯಶ್ರೀ ಮುಖ ಗಂಭೀರ ಮಾಡಿಕೊಂಡು ದೊಡ್ಡದಾಗಿ ಕಣ್ಣು ಬಿಟ್ಟರೆಂದರೆ ನಮ್ಮ ಕಥೆ ಅಲ್ಲಿಗೆ ಮುಗಿದುಹೋಗುತ್ತಿತ್ತು. ಹಾಗಾಗಿ ನಾವು ಆಮೇಲೆ ಎಷ್ಟೇ ಆತ್ಮೀಯರಾದರೂ ‘ಎದೆಯೊಳಗೆ ತಮ ತಮ ತಮಟೆ’ ಭಯದಿಂದ ಬಡಿದುಕೊಳ್ಳುತ್ತಲೇ ಇರುತ್ತದೆ.

‘ಹಾಂ, ಎನ್ ಎಸ್ ಡಿಯಿಂದ ಬಂದವಳೇ ‘ಜಸ್ಮಾ ಓಡನ್’ ಅಂತ ನಾಟಕ ಮಾಡಿದಿದೆ.. ಜಸ್ಮಾ ಎನ್ನುವ ಒಡ್ಡಿಯ ಕಥೆ ಅದು. ಓಹ್ ಅದು ನನಗೆ ಕೊಟ್ಟ ತೃಪ್ತಿ ಇದೆಯಲ್ಲಾ..’ ಎಂದು ಜಯಶ್ರೀ ನನ್ನೆಡೆಗೆ ತಿರುಗಿದಾಗ
ನಾನು ಅವರ ಆ ಅದೇ ಕಣ್ಣುಗಳನ್ನು ನೋಡುತ್ತಿದೆ.

ಕೆಲವೇ ನಿಮಿಷದ ಹಿಂದೆ ಕಣ್ಣೀರು ಸುರಿಸಿದ್ದ ಆ ಅದೇ ಕಣ್ಣುಗಳಲ್ಲಿ ಈಗ ಆತ್ಮವಿಶ್ವಾಸ ತುಳುಕುತ್ತಿತ್ತು.

ಜಯಶ್ರೀ ಎಂದರೆ ಹಾಗೆ.. ನೆಲಕ್ಕೊದ್ದು ಮುಗಿಲಿಗೆ ಜಿಗಿಯುವ ಹುಮ್ಮಸ್ಸಿನವರು.

‘ಜಸ್ಮಾ ಓಡನ್’ ಅವರಿಗೆ ಎರಡು ಕಾರಣಕ್ಕಾಗಿ ನೆನಪಿನಲ್ಲಿ ಉಳಿಯುವ ನಾಟಕ. ಒಂದು ಅದು ಜಯಶ್ರೀಗೆ ರಂಗಭೂಮಿ ಎನ್ನುವ ಸಂಗಾತಿಯನ್ನು ಕೊಟ್ಟಿತು ಮತ್ತು ನಿಜಕ್ಕೂ ಒಬ್ಬ ಸಂಗಾತಿಯನ್ನು ಕೊಟ್ಟಿತು. ಅವರು ಆನಂದರಾಜು. ‘ನನ್ನನ್ನು ನೆರಳಿನಂತೆ ನೋಡಿಕೊಳ್ಳುತ್ತಾರೆ. ಇದೇ ಮೆಟ್ಟಿಲ ಮೇಲೆ ಸಿಕ್ಕರು. ನನ್ನ ಜೊತೆ ನಡೆಯುತ್ತಾ ಬಂದರು’ ಎಂದು ನಗು ತುಳುಕಿಸಿದರು.

ನಾನು ಅವರ ಕೆನ್ನೆ ನೋಡುತ್ತಿದ್ದೆ. ಒಂದಿಷ್ಟು ಕೆಂಪಾಗಿತ್ತು.

ನೆನಪಿರಲಿ ನೀವು ಬಾಲ ನಟಿ ಕೇಳಿರುತ್ತೀರಿ ಆದರೆ ಬಿ ಜಯಶ್ರೀ ಅದಕ್ಕೂ ಮೀರಿದವರು- ಗರ್ಭ ನಟಿ.

ಜಯಶ್ರೀಯನ್ನು ಹೊಟ್ಟೆಯಲ್ಲಿ ಹೊತ್ತೇ ಅವರ ತಾಯಿ ಗುಬ್ಬಿ ಕಂಪನಿಯ ಹಲವು ನಾಟಕಗಳಲ್ಲಿ ಸೈ ಅನಿಸಿಕೊಂಡಿದ್ದರು.

‘ಹೌದಲ್ವಾ’ ಎಂದು ನಾನು ಕೇಳಿದಾಗ ಮತ್ತೆ ಜಯಶ್ರೀ ನಿಟ್ಟುಸಿರಿಟ್ಟರು.
ನೆನಪಿನ ಸುರುಳಿಯೊಂದು ಬಿಚ್ಚಿಕೊಂಡಿತು.

ಗುಬ್ಬಿ ಕಂಪನಿ ಎಂದರೆ ಸಾಕು ಜನ ಎಲ್ಲೆಲ್ಲಿಂದಲೋ ಹುಚ್ಛೆದ್ದು ಬರುತ್ತಿದ್ದರು. ಅಂತಹದೇ ಒಂದು ಷೋ. ‘ಅಕ್ಕಮಹಾದೇವಿ’ ನಾಟಕ. ಅಕ್ಕಮಹಾದೇವಿ ಆಗಿ ನಟಿಸಬೇಕಿದ್ದ ಸ್ವರ್ಣಮ್ಮನವರಿಗೆ ಸಿಡುಬು ಕಾಣಿಸಿಕೊಂಡಿತು.. ತಾತ ಗುಬ್ಬಿ ವೀರಣ್ಣ ಷೋ ಕ್ಯಾನ್ಸಲ್ ಮಾಡಲು ಮುಂದಾದರು. ಆಗ ನನ್ನ ಅಮ್ಮ ಬೇಡ ಎಲ್ಲೆಲ್ಲಿಂದಲೋ ಜನ ಬಂದಿದ್ದಾರೆ ತೊಂದರೆ ಆಗುತ್ತೆ. ಆ ಪಾತ್ರ ನಾನೇ ನಿಭಾಯಿಸುತ್ತೇನೆ ಎಂದರಂತೆ.

ಪಾತ್ರಕ್ಕೆ ಮೇಕ್ ಅಪ್ ಮಾಡಿ ಇನ್ನೇನು ರಂಗದ ಮೇಲೆ ಹೋಗಲು ಸಜ್ಜಾಗಿದ್ದಾರೆ. ಆಗ ನನ್ನ ಅಪ್ಪ ಅಲ್ಲಿಗೆ ಬಂದವರೇ ನಾಟಕ ಮಾಡಿದರೆ ಸುಟ್ಟು ಹಾಕಿಬಿಡ್ತೀನಿ ಎಂದು ಅಡ್ಡ ನಿಂತಿದ್ದಾರೆ. ಅಮ್ಮ ಎದೆಗೆಡಲಿಲ್ಲ. ‘ಅಪ್ಪನ ಮರ್ಯಾದೆ ಉಳಿಸುತ್ತಿದ್ದೇನೆ. ಸುಡುವುದಾದರೆ ಸುಡಿ, ರಂಗಭೂಮಿಯ ಮೇಲೆಯೇ ಸಾಯುವ ಯೋಗ ಎಲ್ಲರಿಗೂ ಬರುವುದಿಲ್ಲ’ ಎಂದು ನಾಟಕ ಮಾಡಿದರು.

ಅಂದು ರಾತ್ರಿ ಬಿಟ್ಟು ಹೋದ ಅಪ್ಪನನ್ನ ಮತ್ತೆ ನಾನು ನೋಡಿದ್ದು 15 ವರ್ಷಗಳ ನಂತರ. ಅದೂ ಗುಬ್ಬಿ ಕಂಪನಿಯಲ್ಲೇ. ‘ದಶಾವತಾರ’ ನಾಟಕಕ್ಕೆ ನಾವು ರೆಡಿ ಆಗ್ತಿದ್ದಾಗ. ಆ ವೇಳೆಗೆ ನನ್ನೊಳಗೆ ಅಪ್ಪ ಎನ್ನುವವನು ಸತ್ತು ಹೋಗಿ ಸಾಕಷ್ಟು ಕಾಲವಾಗಿತ್ತು.

ನಾನು ಚಕ್ರವ್ಯೂಹವನ್ನು ಹೊಕ್ಕಿದ್ದೇನೆ ಹಾಗೆಯೇ ಅದರಿಂದ ಹೊರಗೂ ಬಂದಿದ್ದೇನೆ ಎನ್ನುವಾಗ ಜಯಶ್ರೀ ಅವರ ಮುಖದಲ್ಲಿ ಇಣುಕಿದ ಆ ಕಾನ್ಫಿಡೆನ್ಸ್ ನನಗೆ ಇಂದಿಗೂ ಮರೆಯಲು ಸಾಧ್ಯವಿಲ್ಲ.

ಜಸ್ಮಾ ಓಡನ್, ಘಾಶೀರಾಮ್ ಕೊತ್ವಾಲ್ ಮೂಲಕ ಬಿ ಜಯಶ್ರೀ ಜರ್ನಿ ಇನ್ನಿಲ್ಲದಂತೆ ಸಾಗಿತು. ಪದ್ಮಶ್ರೀ, ರಾಜ್ಯಸಭಾ ಸದಸ್ಯತ್ವ ಜಯಶ್ರೀಗೆ ಕಾನ್ಫಿಡೆನ್ಸ್ ಹೆಚ್ಚಿಸಿದ ಇನ್ನೆರಡು ಅಂಶಗಳಷ್ಟೇ..

ಹೀಗೆಲ್ಲಾ ಮಾತನಾಡಿಕೊಳ್ಳುವಾಗಲೇ ನಾನು ಅವರ ದೃಷ್ಟಿ ನಿವಾಳಿಸಿದೆ.
ಜಯಶ್ರೀ ಜೋರಾಗಿ ನಕ್ಕುಬಿಟ್ಟರು.

‘ಈಗ ನೀನೊಬ್ಬ ಸಿಕ್ಕಿದೆಯಪ್ಪಾ ದೃಷ್ಟಿ ತೆಗೆಯೋಕೆ..’ ಎಂದವರೇ ‘ನನ್ನ ಅಮ್ಮ ಪ್ರತೀ ಷೋ ಮುಗಿಸಿ ಬಂದಾಗಲೂ ನನ್ನ ದೃಷ್ಟಿ ತೆಗೆಯುತ್ತಿದ್ದರು. ಈಗ ಆನಂದರಾಜು ಅದನ್ನ ಮಾಡ್ತಾನೆ’ ಅಂತ ನಕ್ಕರು.

ನನಗೆ ಜಯಶ್ರೀಯವರನ್ನು ಇನ್ನಷ್ಟು ಚುಡಾಯಿಸುವ ಮನಸ್ಸಾಯಿತು.
‘ಛೀ ಕಳ್ಳಿ’ ಎಂದೆ
ತಕ್ಷಣ ಜಯಶ್ರೀ ಗಹಗಹಿಸಿ ನಕ್ಕರು.

‘ಯಸ್, ಅರುಂಧತಿಯಿಂದಾಗಿಯೇ ನಾನು ಕಳ್ಳಿ ಆದದ್ದು’ ಎಂದು ಕಣ್ಣು ಮಿಟುಕಿಸಿದರು.
‘ರಂಗಶಂಕರ’ಕ್ಕಾಗಿ ಒಂದು ವೃತ್ತಿ ನಾಟಕ ಮಾಡು ಎಂದರು ಅರುಂಧತಿ ನಾಗ್. ‘ಸದಾರಮೆ’ಯೇ ಆಗಲಿ ಎನ್ನುವ ಆಸೆ ಅವರಲ್ಲಿತ್ತು.
ಆದರೆ ಕಳ್ಳನ ಪಾತ್ರ ಮಾಡೋರು ಯಾರು ಎಂದೆ. ಯಾಕೆಂದರೆ ಅದು ನನ್ನ ತಾತನ ಕಲ್ಟ್ ರೋಲ್.
ಇನ್ಯಾರು ನೀನೇ ಅಂದರು. ‘ನಾನು ಕಳ್ಳಿ ಅಲ್ಲಲ್ಲ.. ಕಳ್ಳ ಆಗೋದೇ’ ಎಂದರು.

ಆ ವೇಳೆಗೆ ನಾವು ನಮಗೆ ಗೊತ್ತಿಲ್ಲದ ಹಾಗೆ ಸಂಸ ಕಲಾಕ್ಷೇತ್ರದ ರಂಗವೇರಿದ್ದೆವು.

ರಂಗಭೂಮಿಯ ಮಹಾನ್ ಕಳ್ಳನಿಗೆ ಅಲಿಯಾಸ್ ಕಳ್ಳಿಗೆ ಮನದುಂಬಿ ಒಂದು ಸಲಾಂ ಕೊಟ್ಟೆ

ಮನಸ್ಸು ಮಾತ್ರ ‘ಸದಾರಮೆ’ಯ
‘ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವೂ..
ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವೂ…’
ಹಾಡನ್ನು ಗುನುಗುತ್ತಿತ್ತು.

ತಿಮ್ಮಮ್ಮನಹಳ್ಳಿ ಯುವಕರಿಗೆ ಪ್ರೋತ್ಸಾಹ

ಪಾವಗಡ ತಾಲ್ಲೂಕು ಆಂಧ್ರ ಗಡಿಯಲ್ಲಿ ತಿಮ್ಮಮ್ಮನಹಳ್ಳಿ  ಗ್ರಾಮದ ಸ್ವಯಂ ಸೇವಕರು 3 ಚೆಕ್ ಪೋಸ್ಟ್ ನಿರ್ಮಿಸಿ  ಕೊರೊನಾ ಪೀಡಿತ ಪ್ರದೇಶದಿಂದ ತಾಲ್ಲೂಕಿಗೆ ಬಾರದಂತೆ ಹಗಲಿರುಳು ಕಾವಲು ಕಾಯುತ್ತಿದ್ದಾರೆ. ಗ್ರಾಮದ ಸ್ವಯಂ ಸೇವಕರಿಗೆ ಹೆಲ್ಪ್ ಸೊಸೈಟಿ ಮತ್ತು ಸನ್ ರೈಸ್ ಹಾಸ್ಪಿಟಲ್ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಿ ಶನಿವಾರ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಮಾನವ ಹಕ್ಕುಗಳ  ತಾಲೂಕು ಘಟಕದ ಅಧ್ಯಕ್ಷ ಪಳವಳ್ಳಿ ಪಿ.ಬಿ. ದಿನೇಶ ಕುಮಾರ್, ಸಮಾಜ ಸೇವಕ ಶ್ರೀನಿವಾಸ ನೇಕಾರ್, ಗೌತಮ್,  ಶ್ರೀಕಾಂತ,  ಕಾರ್ತಿಕ್, ಸಂಜೀವ ರೆಡ್ಡಿ ಇತರರು ಇದ್ದರು.

ಮೇ‌ 3ರ‌ ನಂತರವೂ ದೇವಸ್ಥಾನಗಳಿಗೆ ಹೋಗದಿರಿ: ಸುರೇಶಗೌಡ

Tumkuru: ಲಾಕ್ ಡೌನ್ ಮುಗಿದ 3 ನಂತರವೂ ಜಾತ್ರೆ, ದೇವಸ್ಥಾ‌ನ, ಹಬ್ಬ ಹರಿದಿ‌ನಗಳಿಗೆ ಹೋಗಬೇಡಿ ಎಂದು ಮಾಜಿ ಶಾಸಕ‌ ಬಿ.ಸುರೇಶಗೌಡ ತಿಳಿಸಿದರು.

ಬೆಳಗಾವಿ ಹೋಬಳಿ ಸೋರೇಕುಂಟೆಯಲ್ಲಿ ಉಚಿತ ಪಡಿತರ, ಮಾಸ್ಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಕೊರೊನಾ ಸೋಂಕಿ‌ನಿಂದಾಗಿ ಆರ್ಥಿಕತೆಯ‌ ಬುಡವೇ ಅಲುಗಾಡಿದೆ. ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ನಷ್ಟವಾಗಿದೆ ಎಂದರು.

ಸೊರೆಕುಂಟೆ ಪಂಚಾಯತಿಯ ವ್ಯಾಪ್ತಿಯ ಪ್ರತಿ ಮನೆ, ಮನೆಗೆ ಉಚಿತ ಮಾಸ್ಕ್, ಹಾಗೂ ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೂ ಮತ್ತು ಹೊರ ರಾಜ್ಯಗಳಿಂದ ಕೂಲಿಗಾಗಿ ಬಂದಿರುವ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು ಜಿಲ್ಲಾ ಪಂ ಸದಸ್ಯರ ಯಜಮಾನರಾದ ಡಾ” ನಾಗರಾಜ, ಗ್ರಾಮ ಪಂ ಅಧ್ಯಕ್ಷರಾದ ಕಲ್ಪನಾ ರವೀಶ್, ಸದಸ್ಯರಾದ ಸೋಮಣ್ಣ, ರಂಗನಾಥ್, ರಂಗಪ್ಪ, ನರಸಿಂಹಯ್ಯ, ದೇವರಾಜು, ಮುಖಂಡರಾದ, ಪರಮೇಶ್, ಚಂದ್ರಣ್ಣ, ವಕೀಲರಾದ ವೀರಣ್ಣ, ಕೃಷ್ಣಮೂರ್ತಿ, ಶಿವಲಿಂಗಯ್ಯ, ಕಾಂತರಾಜು, ಮಂಜುನಾಥ್, ಜಡಿಯಪ್ಪ, ದೊಡ್ಡಯ್ಯ, ಸಿದ್ದಗಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

ಬೆಳ್ಳಾವಿ ಹೋಬಳಿ ನೆಲಹಾಳ್ ಗ್ರಾಮ ಪಂಚಾಯ್ತಿಯ ಚಿಕ್ಕ ಸೀಬಿ ಗ್ರಾಮದಲ್ಲಿ ಮನೆ ಮನೆಗೆ ಉಚಿತ ಮಾಸ್ಕ್ ಹಾಗೂ ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೆ ರೇಷನ್ ಕಿಟ್ನ್ನು ವಿತರಿಸುವ ಮೂಲಕ ಜನಗಳಿಗೆ ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಿದರು ಜಿಲ್ಲಾ ಪಂಚಾಯತ್ ಸದಸ್ಯರ ಯಜಮಾನರಾದ ಡಾ”ನಾಗರಾಜ, ಮುಖಂಡರಾದ ಶಿವಣ್ಣ, ವೀರಾಚಾರಿ, ಮಂಜಣ್ಣ ತಿಮ್ಮಣ್ಣ, ವೆಂಕಟೇಶ್, ಮುಂತಾದವರು ಇದ್ದರು.

ಅದೊಂದು ತಪ್ಪು ಮಾಡಿದ ವಿದ್ಯಾರ್ಥಿಗಳು ಎದ್ದು ನಿಲ್ಲಿ…

1

ರಂಗನಕೆರೆ ಮಹೇಶ್


ಅತ್ಮೀಯ ಸ್ನೇಹಿತ ಶಿಕ್ಷಕರೊಬ್ಬರು ತಮ್ಮ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಇಕೋ ಕ್ಲಬ್ ಉದ್ಘಾಟನೆ ಮಾಡಿದ್ದೇವೆ. ಮಕ್ಕಳಿಗೆ ಪರಿಸರ ಮತ್ತು ಕೃಷಿ ಬಗ್ಗೆ ತಿಳಿಸಲು ಉಪನ್ಯಾಸ ಕಾರ್ಯಕ್ರಮಕ್ಕೆ ತಾವು ಬರಬೇಕು ಎಂದು ಆಹ್ವಾನವಿತ್ತರು.

ನನ್ನ ನೆಚ್ಚಿನ ವಿಷಯವಲ್ಲದೆ ಭಾವಿ ಪ್ರಜೆಗಳಲ್ಲಿ ಅರಿವು ಮೂಡಿಸುವ ಕೆಲಸವಾದ ಕಾರಣ ಮರು ಮಾತನಾಡದೆ ಯಾವುದೇ ಕೆಲಸವಿದ್ದರು ಬಿಟ್ಟು ಬರುವುದಾಗಿ ಶಿಕ್ಷಕರಿಗೆ ತಿಳಿಸಿದೆ.

ನಿಗದಿಯಂತೆ ಕಾರ್ಯಕ್ರಮಕ್ಕೆ ಹೋದೆ. ನಾನು ಹೋಗುವ ವೇಳೆಗೆ ಸುಮಾರು 250ಕ್ಕೂ ಶಾಲಾ ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಆಸೀನರಾಗಿದ್ದರು. ನನಗಿಂತ ಮೊದಲು ಇನ್ನೊಬ್ಬ ಅತಿಥಿ ಆಯುರ್ವೆದ ಸಸ್ಯಗಳ ಬಗ್ಗೆ ತಿಳಿಸಿದರು.

ನಂತರ ನನ್ನ ಸರದಿ ಆರಂಭವಾದಾಗ ಸಮಯ ಮೀರಿತ್ತು. ನೀರು, ಶುದ್ಧ ಗಾಳಿ, ಉತ್ತಮ ಪರಿಸರ ರಾಸಾಯನಿಕ ಮುಕ್ತ ಕೃಷಿ ಸೇರಿದಂತೆ ಸುಮಾರು ಒಂದು ಗಂಟೆ ಮಕ್ಕಳಿಗೆ ತಿಳಿಸಿದೆ.

ಊಟದ ಸಮಯ ಮೀರಿದರೂ ಸಹ ವಿದ್ಯಾರ್ಥಿಗಳು ಪರಿಸರ ಮತ್ತು ಕೃಷಿಯ ಪಾಠವನ್ನು ತಕರಾರು ಮಾಡದೆ ಆಲಿಸಿದರು. ಕೊನೆಗೆ ಮಕ್ಕಳಲ್ಲಿ ಆಹಾರದ ಬಗ್ಗೆ ಅರಿವು ಮೂಡಿಸುತ್ತಾ ಅನ್ನವನ್ನು ಎಸೆಯಬಾರದು ಅದು ಮಹಾಪಾಪ.

ನಾವು ಅಕ್ಷರ ದಾಸೋಹದಡಿ ಮಧ್ಯಾಹ್ನ ಮಾಡುವ ಬಿಸಿಯೂಟದ ಒಂದು ಕೆ.ಜಿ.ಅಕ್ಕಿ ಬೆಳೆಯಲು ಸುಮಾರು 800 ಲೀಟರ್ ನೀರು ವ್ಯರ್ಥವಾಗುತ್ತದೆ. ನಾವು ಅಂದು ಕೊಂಡಂತೆ ನೀರು ಅಪರಿಮಿತ ಗಣವಾಗಿರುವುದರಿಂದ ನೀವು ಅನ್ನವನ್ನು ಎಸೆದರೆ ಅದು ಸಾವಿರಾರು ಲೀಟರ್ ನೀರನ್ನು ವ್ಯರ್ಥ ಮಾಡಿದಂತೆ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೆ.

ನನ್ನ ಮಾತಿನ ಮಧ್ಯೆ ನನಗೆ ಆಹ್ವಾನ ನೀಡಿದ್ದ ಶಿಕ್ಷಕರು ನಿನ್ನೆ ತಾನೇ ಅದೊಂದು ತಪ್ಪು ಮಾಡಿದ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಲ್ಲಿ ಎಂದು ಆದೇಶಿಸಿದರು.

ತಕ್ಷಣ ಸುಮಾರು ಎಂಟು ಮಂದಿ ವಿದ್ಯಾರ್ಥಿಗಳು ಎದ್ದು ನಿಂತರು. ನಾನು ಕ್ಷಣ ಕಾಲ ಮಾತು ನಿಲ್ಲಿಸಿ ವಿದ್ಯಾರ್ಥಿಗಳನ್ನು ತಾವು ಏನು ತಪ್ಪು ಮಾಡಿದ್ದೀರಾ ಎಂದು ಪ್ರಶ್ನಿಸಿದೆ. ಆದರೆ ಯಾರೂ ಮಾತನಾಡಲಿಲ್ಲ. ಕೊನೆಗೆ ಶಿಕ್ಷಕರು ಶಾಲೆಯಲ್ಲಿ ಮಧ್ಯಾಹ್ನ ನೀಡಿದ್ದ ಬಿಸಿಯೂಟದ ಅನ್ನವನ್ನು ಕೈಯಿಂದ ನುಣ್ಣಗೆ ಮಾಡಿ ಗೋಡೆಗೆ ಸಿಮೆಂಟ್ ನೊರೆಯುವಂತೆ ನೊರೆದು ಮಾಡಿದ ಮಹಾ ತಪ್ಪಿನ ಬಗ್ಗೆ ವಿವರಿಸಿದರು.

ಏಕೆಂದರೆ ನಾನು ಕೆಲ ವರ್ಷಗಳ ಹಿಂದೆ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷನಾಗಿದ್ದಾಗ ಅಲ್ಲಿನ ವಿದ್ಯಾರ್ಥಿಗಳು ತಾವು ತಟ್ಟೆಗೆ ಹಾಕಿಸಿಕೊಂಡ ಅನ್ನವನ್ನು ಮರಳಿನಲ್ಲಿ ಹೂಳುತ್ತಿದ್ದುದು ನನ್ನ ಮನದಲ್ಲಿ ಇನ್ನೂ ಮಾಸದೆ ಉಳಿದಿತ್ತು.

ಆದರೆ ಈ ಶಾಲೆಯ ವಿದ್ಯಾರ್ಥಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನ್ನವನ್ನು ಗೋಡೆಗೆ ನೊರೆದಿದ್ದು ತುಂಬಾ ನೋವು ತಂದಿತು.

ಮಕ್ಕಳಾದ ಕಾರಣ ಏನೂ ಮಾಡಲು ಸಾಧ್ಯವಾಗದೆ ಎಲ್ಲರನ್ನು ಒಟ್ಟಿಗೆ ನಿಲ್ಲಿಸಿ ಇನ್ನು ಮುಂದೆ ಎಂದು ಅನ್ನು ಎಸೆಯುವುದಿಲ್ಲ. ಅಲ್ಲದೆ ಇಂತಹ ಹೀನ ಕೃತ್ಯವನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿದೆ.

ವಿದ್ಯಾರ್ಥಿಗಳು ಸಹ ನನ್ನ ಒಂದು ಗಂಟೆ ಹೇಳಿದ ವಿಷಯ ಮನದಲ್ಲಿ ಹೋಗಿದ್ದರಿಂದ ತಾವು ಮಾಡಿದ ತಪ್ಪಿನ ಅರಿವಾಗಿ ಉಳಿದ ವಿದ್ಯಾರ್ಥಿಗಳೆದರು ತಲೆ ತಗ್ಗಿಸಿ ನಿಂತಿರು.
ಆದರೆ ನನ್ನ ಪ್ರಶ್ನೆ ಆದಲ್ಲ ರಾಗಿ, ನವಣೆ, ಸಾಮೆ, ಭತ್ತ ಬೆಳೆಯುವ ರೈತ ಕುಟುಂಬದಿಂದ ಬರುತ್ತಿರುವ ಮಕ್ಕಳು ಅವುಗಳನ್ನು ಬೆಳೆಯುವುದು ಎಷ್ಟು ಕಷ್ಟ ಎಂದು ಗೊತ್ತಿದ್ದರೂ ಹೀಗೆ ವ್ಯರ್ಥ ಮಾಡುತ್ತಿರುವಾಗ ನಗರ ಪ್ರದೇಶ ಮಕ್ಕಳಿಗೆ ಇದಾವುದರ ತಿಳುವಳಿಕೆ ಇರುವುದಿಲ್ಲ.

ಇನ್ನೂ ಆ ಮಕ್ಕಳು ಅನ್ನವನ್ನು ಇನ್ನೆಷ್ಟು ವ್ಯರ್ಥ ಮಾಡಬಹುದು. ಮತ್ತೆ ಅವರಿಗೆ ಈ ಬಗ್ಗೆ ಅರಿವು ಮೂಡಿಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.

ಅಲ್ಲಿ ಎಲ್ಲವನ್ನೂ ಶಿಕ್ಷಕರೇ ಕಲಿಸುತ್ತಾರೆ ಎಂಬ ಭ್ರಮೆಯಲ್ಲಿ ನಾವು ಪೋಷಕರಿದ್ದೇವೆ. ಆದರೆ ನಮ್ಮ ಮಕ್ಕಳು ಶಾಲೆಯಲ್ಲಿ ಕಳೆಯುವುದು ಕೇವಲ ಆರು ಗಂಟೆ ಮಾತ್ರ. ಆ ವೇಳೆಯಲ್ಲಿ ಶಿಕ್ಷಕರು ಮಕ್ಕಳಿಗೆ ಏನೆಲ್ಲಾ ಹೇಳಲು ಸಾಧ್ಯ. ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮಕ್ಕಳಿಗೆ ಇಂತಹ ವಿಷಯವನ್ನು ಮನೆಯಲ್ಲಿಯೇ ತಿಳಿ ಹೇಳಬೇಕು.

ಬಹುಷಃ 70 ರ ದಶಕದಲ್ಲಿ ಭಾರತ ದೇಶದಲ್ಲಿ ಬಂದಿದ್ದ ಅನ್ನದ ಬರ ಮುಂದೆನಾದರೂ ಬಂದರೆ ಆಗ ನಮಗೆ ಅನ್ನದ ಮಹತ್ವ ತಿಳಿಯಬಹುದೇನೋ…?

ಕರ್ನಾಟಕದಲ್ಲೂ ಪ್ಲಾಸ್ಮಾ ಥೆರಪಿ ಚಿಕಿತ್ಸೆ: ಸಚಿವ

Tumkuru: ಕೊರೊನಾ ವೈರಸ್‍ನಿಂದ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮ ಥೆರಪಿ ನೀಡುವ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ನಿಯಂತ್ರಣದ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಕರ್ನಾಟಕ ಮೊದಲ ಬಾರಿಗೆ ದಿಟ್ಟ ಹೆಜ್ಜೆ ಇಡುತ್ತಿದೆ. ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಡಾ.ಯುಎಸ್ ವಿಶಾಲ್ ರಾವ್ ನೇತೃತ್ವದ ತಂಡ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಸಿದ್ಧರಾಗಿದ್ದಾರೆ ಎಂದರು.

ರಾಜ್ಯದಲ್ಲಿ 489 ಪಾಸಿಟಿವ್ ಪ್ರಕರಣಗಳಲ್ಲಿ 153 ಜನರು ಗುಣಮುಖರಾಗಿದ್ದಾರೆ. ಇವರನ್ನು ಸಂಪರ್ಕ ಮಾಡುತ್ತಿದ್ದೇವೆ. ಇವರು 15 ದಿನಕ್ಕೊಮ್ಮೆ ರಕ್ತ ನೀಡಬಹುದು.ಗುಣಮುಖರಾದವರು ಸ್ವಯಂ ಪ್ರೇರಣೆಯಿಂದ ಬಂದು ನಮಗೆ ಸಹಕಾರ ನೀಡಬೇಕು ಎಂದರು.

ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವರು, ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯವು ಕೋವಿಡ್-19ರ ನಿಯಂತ್ರಣದಲ್ಲಿ 11ನೇ ಸ್ಥಾನದಲ್ಲಿದೆ. ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸೇರಿದಂತೆ ಒಟ್ಟು 10 ಇಲಾಖೆಗಳ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲೆಗೆ ಅಗತ್ಯವಾದ 8000 ರ್ಯಾಪಿಡ್ ಟೆಸ್ಟ್ ಕಿಟ್‍ಗಳನ್ನು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣ ಬಂದಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದು, 1 ಗುಣಮುಖ, ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೈನ್ಮೆಂಟ್ ವಲಯವೆಂದು ಸೀಲ್‍ಡೌನ್ ಮಾಡಿರುವ ಕಡೆ ಹೆಚ್ಚಿನ ಬಂದೋಬಸ್ತ್ ಹೇರಬೇಕು ಎಂದರು.

ಕೊರೊನಾ ಪರೀಕ್ಷೆಗೆ ಬಂದ ಸಿಬ್ಬಂದಿ ಮೇಲೆ ತುಮಕೂರಿನಲ್ಲಿ ಗಲಾಟೆ

Tumkuru; ಮಂಡ್ಯದಿಂದ ತುಮಕೂರಿನ ದಿಬ್ಬೂರು ವಸತಿ ಸಮುಚ್ಚಯದ 17ನೇ ಬ್ಲಾಕ್ ನಲ್ಲಿ ಉಳಿದುಕೊಂಡಿದ್ದ ನಾಲ್ವರನ್ನು ಪರೀಕ್ಷೆಗಾಗಿ ಕರೆದುಕೊಂಡು ಹೋಗಲು ಬಂದ ವೈದ್ಯ ಸಿಬ್ಬಂದಿಯ ಮೇಲೆ ಗಲಾಟೆ ಮಾಡಿರುವ ಘಟನೆ ನಡೆದಿದೆ.

ಇಂದು ಬೆಳಗ್ಗೆ ಬಂದ ನಾಲ್ವರು 17ನೇ ಬ್ಲಾಕ್ ನ ಮನೆಯಲ್ಲಿ ಉಳಿದುಕೊಂಡಿದ್ದರು. ಈ ವಿಷಯವನ್ನು ಆರೋಗ್ಯ ಸಿಬ್ಬಂದಿಗೆ ತಿಳಿಸಲಾಯಿತು.

ಸ್ಥಳಕ್ಕೆ ಬಂದ ಆರೋಗ್ಯ ಸಿಬ್ಬಂದಿ ಮಂಡ್ಯದಿಂದ ಬಂದ ನಾಲ್ವರಿಗೆ ರಕ್ತಮಾದರಿ ಮತ್ತು ಗಂಟಲು ದ್ರವ ಸಂಗ್ರಹಿಸಲು ಜಿಲ್ಲಾಸ್ಪತ್ರೆಗೆ ಬರಬೇಕು ಎಂದು ಮನವಿ ಮಾಡಿದರು.

ಆಗ ಮಂಡ್ಯದಿಂದ ಬಂದವರ ನೆರವಿಗೆ ಬಂದ 30-40 ಮಂದಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ. ಅವರು ಪರೀಕ್ಷೆಗೆ ಏಕೆ ಬರಬೇಕು ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಸಣ್ಣಮಟ್ಟ ಗಲಾಟೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆನಿರತರನ್ನು ಸಮಾಧಾನಪಡಿಸಿದರು ಎಂದು ಹೇಳಲಾಗಿದೆ.

ಪೊಲೀಸರು ಬಂದ ನಂತರ ನಾಲ್ವರನ್ನು ಕೊರೊನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಂಡ್ಯದಿಂದ ಆ ನಾಲ್ವರು ಇಲ್ಲಿಗೇಕೆ ಬಂದರು ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಯೋಗರಾಜ ಭಟ್ಟರೆಂಬ ಅರೆರೆರೆ ‘ಪಂಚರಂಗಿ’

ಜಿ ಎನ್ ಮೋಹನ್


ಯೋಗರಾಜ್ ಭಟ್ ತಕ್ಷಣ ನನ್ನ ಮುಖ ನೋಡಿದರು.
ಅದರಲ್ಲಿ ಆಶ್ಚರ್ಯ ಕುಣಿಯುತ್ತಿತ್ತು
ನಾನು ಇಷ್ಟೇ ಬಾಯಿ ಬಿಟ್ಟಿದ್ದೆ.
‘ತಿಳುವಳ್ಳಿಯಲ್ಲಿದ್ರಲ್ಲಾ., ಅಲ್ಲಿಂದಲೇ ತಿಳುವಳಿಕೆ ಬಂತಾ’ ಅಂತ
ಸಾವರಿಸಿಕೊಂಡವರೇ, ‘ಥ್ಯಾಂಕ್ಸ್ ನನಗೆ ತಿಳುವಳಿಕೆ ಇದೆ ಅಂತ ಅದ್ಕೊಂಡವರು ನೀವೊಬ್ರೆ’ ಅಂದರು.

‘ಇವನಿಗೆ ತಿಳುವಳಿಕೇನೇ ಇಲ್ಲ ಅಂತಲೇ ಎಲ್ಲರೂ ನನ್ನನ್ನ ಬ್ರಾಂಡ್ ಮಾಡಿಬಿಟ್ಟಿದ್ರು. ಸ್ಕೂಲ್ ಗೆ ಸೇರಿಸಿದ ಮೊದಲ ದಿನಾನೇ ಎಲ್ಲರೂ ಪ್ರೇಯರ್ ಹೇಳ್ತಿರೋವಾಗ ನಾನು ಮೇಲೆ ವಿಮಾನ ಹೋಗಿದ್ದು ನೋಡಿ ಹೋಯ್ ಅಂತ ಕಿರುಚಿದ್ದೆ. ಎಲ್ಲರೂ ಪ್ರೇಯರ್ ಬಿಟ್ಟು ನನ್ನನ್ನ ನೋಡ್ತಾ ನಿಂತುಕೊಂಡ್ರು. ಅಲ್ಲಿಂದಲೇ ಈ ಪಟ್ಟ ಶುರುವಾಯ್ತು’ ಅಂದರು.

‘ಈಟಿವಿ’ಯ ಸುದ್ದಿ ವಿಭಾಗದ ಮುಖ್ಯಸ್ಥನಾಗಿ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿ ಯಲ್ಲಿ ಕುಳಿತಿದ್ದ ನನಗೆ ಕನ್ನಡವೇ ಕೈಗೆ ಸಿಗದ ವಸ್ತುವಾಗಿ ಹೋಗಿತ್ತು. ಕನ್ನಡ ಮಾತನಾಡುವವರು ಸಿಕ್ಕರೆ ಸಾಕಪ್ಪಾ ಎಂಟು ಹಪಾಹಪಿಸುತ್ತಿರುವಾಗಲೇ ಭಟ್ಟರ ‘ಗಾಳಿಪಟ’ ಅಲ್ಲಿಗೂ ಹಾರುತ್ತಾ ಬಂತು. ನಾನು ಸೀದಾ ರಾಮೋಜಿರಾಯರ ಬಳಿ ಹೋಗಿ ನಾನು ‘ಗಾಳಿಪಟ’ ನೋಡಬೇಕು ಅಂದೆ. ವಿವರಿಸಿ ಹೇಳಿ ಅವರ ಮುಖದ ಮೇಲೆ ಮೂಡಿದ ಸುಕ್ಕುಗಳನ್ನೆಲ್ಲಾ ಕಡಿಮೆ ಮಾಡಿದೆ.

ನನ್ನ ಡಿಮ್ಯಾಂಡ್ ಇದ್ದದ್ದು ಆಷ್ಟೇ ಫಿಲಂ ಸಿಟಿಯ ಬಸ್ ಕೊಡಿ ಇಲ್ಲಿರೋ ಕನ್ನಡದವರನ್ನೆಲ್ಲ ತುಂಬಿಕೊಂಡು ಸಿನೆಮಾಗೆ ಕರಕೊಂಡು ಹೋಗ್ತೀನಿ ಅಂತ. ಯಸ್ ಅಂದರು. ನಮ್ಮ ಫಿಲಂ ಸಿಟಿಯಲ್ಲಿದ್ದ ಅಷ್ಟೂ ಪಡ್ಡೆಗಳನ್ನು ಕಟ್ಟಿಕೊಂಡು ಮಲ್ಟಿಪ್ಲೆಕ್ಸ್ ಹುಡುಕುತ್ತಾ ಹೋಗಿದ್ದೆ.

ಈ ನೆನಪು ಇನ್ನೂ ಹಸಿರಾಗಿತ್ತು. ಅಷ್ಟೇ ಅಲ್ಲ ಅದು ಮರೆತು ಹೋಗುವ ಅನುಭವವೂ ಅಲ್ಲ.

‘ಮುಂಗಾರು ಮಳೆ’, ‘ಗಾಳಿಪಟ’ವನ್ನು ಕನ್ನಡದವರು ಮಾತ್ರವೇ ಅಲ್ಲದೆ ಎಲ್ಲಾ ಭಾಷಿಕರು ದಂಡು ಕಟ್ಟಿಕೊಂಡು ಎಲ್ಲೆಡೆ ನನ್ನಂತೆಯೇ ನೋಡಿದ್ದರು. ಇದು ಅಚ್ಚರಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲ ಕನ್ನಡ ಸಿನೆಮಾಕ್ಕೆ ಹೊಸ ಬ್ರಾಂಡ್ ಅಂಬಾಸಡರ್ ಉದಯವಾಗಿತ್ತು.

ಇದೆಲ್ಲಾ ತಲೆಯಲ್ಲಿಟ್ಟುಕೊಂಡು ಯೋಗರಾಜ ಭಟ್ಟರ ಅಂತರಾಳಕ್ಕೆ ಇಳಿದುಬಿಡಬೇಕು ಎಂದು ಹಾಕಿದ ಮೊದಲ ಪ್ರಶ್ನೆಗೇ ಅವರು ಪಕ ಪಕ ನಕ್ಕುಬಿಟ್ಟಿದ್ದರು. ಇವನು ನನ್ನ ಸೀರಿಯಸ್ಸಾಗಿ ತೆಗೆದುಕೊಂಡುಬಿಟ್ಟಿದ್ದಾನೆ ಅಂತ

ಅದಕ್ಕೆ ಕಾರಣವೂ ಇತ್ತು. ಇವರು ಮಾತಾಡೋದು ಅರ್ಥವೇ ಆಗಲ್ಲ ಎನ್ನುವುದರಿಂದ ಹಿಡಿದು ‘ಹುಚ್ಚು ಭಟ್ರು’ ಅನ್ನೋ ಬೆಂಗಳೂರಿಗರ ಹಣೆಪಟ್ಟಿಯೂ ಸೇರಿ ಊರಲ್ಲಿ ಮರಕ್ಕೆ ಕಟ್ಟಿ ಹಾಕಿ ಒದೆಯುವವರೆಗೆ ಇವರ ಚರಿತ್ರೆ ಘನವಾದದ್ದನ್ನು ಸಾರಿತ್ತು.

ಭಟ್ರೇ ಅದೇನದು ಮರಕ್ಕೆ ಕಟ್ಟಿಹಾಕಿದ್ದು ಅಂದೆ.

‘ಅಯ್ಯೋ ಅದೇನು ಕೇಳ್ತೀರಿ. ನಾನು ಮನುಷ್ಯನೇ ಅಲ್ಲ ಅನ್ನೋ ತೀರ್ಮಾನಕ್ಕೆ ಎಲ್ಲಾ ಬಂದುಬಿಟ್ಟರು. ಟೀಚರ್ ಶಾಲೆಯಿಂದ ನನ್ನನ್ನ ಎಳಕೊಂಡು ಬಂದು ಇವನನ್ನ ಸಂಭಾಳಿಸೋಕೆ ಆಗಲ್ಲ ಇವನನ್ನ ಶಾಲೆಗೆ ಕಳಿಸಬೇಡಿ ಅಂತ ಬಿಕ್ಕಿ ಬಿಕ್ಕಿ ಅತ್ತರು. ಅವರು ನಿಲ್ಲಿಸಿದ ಮೇಲೆ ಅಮ್ಮನ ಜೋರು ಅಳು ಶುರುವಾಯ್ತು.

ಟೀಚರ್ ಗಾಬರಿಯೆದ್ದು ಯಾಕೆ ಅಂದ್ರು. ಆಗ ಅಮ್ಮ ‘ಮನೇನಲ್ಲೂ ಇವನನ್ನ ಸಂಭಾಳಿಸೋಕೆ ಅಗಲ್ಲಮ್ಮ ಅದಕ್ಕೇ ಸ್ಕೂಲ್ ಗೆ ಹಾಕಿದ್ದೇವೆ’ ಅಂತ ಅಳ್ತಿದ್ದರು. ನನ್ನದು ಅಂತ ರೆಕಾರ್ಡ್ ಅಂತ ಹೆಮ್ಮೆಯಿಂದ ನನ್ನತ್ತ ನೋಡಿದರು.

ಅಪ್ಪನ ಊರು ಮಂದರ್ತಿ, ಅಮ್ಮನ ಊರು ಉಡುಪಿ ಬಳಿ ಪೆರಂಪಳ್ಳಿ.
ಆದರೂ ಯೋಗರಾಜ ಭಟ್ಟರಿಗೆ ನಾನು ಹಾನಗಲ್ ನ ತಿಳುವಳ್ಳಿಯವನು ಅಂತ ಹೇಳಿಕೊಳ್ಳೋದಕ್ಕೆ ಇನ್ನಿಲ್ಲದ ಅಭಿಮಾನ.

‘ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಕನ್ನಡ ನೆಟ್ಟಗೆ ಮಾತನಾಡಲು ನಾಲಿಗೆ ತಿದ್ದಿಕೊಂಡದ್ದು, ಎಲ್ಲಾ ಹುಚ್ಚಾಟ ಮಾಡಿದ್ದು ತಿಳುವಳ್ಳಿಯಲ್ಲಿ. ಅಲ್ಲಿ ನಮ್ಮಪ್ಪ ಹೋಟೆಲ್ ನಡೆಸ್ತಿದ್ದರು. ಒಂದು ವಿಶ್ವವಿದ್ಯಾಲಯ ಕಲಿಸುವ ಎಲ್ಲವನ್ನೂ ನಾನು ಆ ಹೋಟೆಲ್ ನಲ್ಲಿಯೇ ಕಲಿತೆ’ ಎಂದರು.

ತಕ್ಷಣ ನೆನಪಿಗೆ ಬಂದದ್ದು ಭಟ್ಟರೇ ಡಿಸೈನ್ ಮಾಡಿದ ಪ್ಯಾಂಟು.

ಹೋಟೆಲ್ ನಲ್ಲಿ ಸಪ್ಲೈ ಮಾಡೋವಾಗ ಅಡುಗೆ ಮಾಡೋವಾಗ ಮೈ ಮೇಲೆ ಸಿಕ್ಕಿದ್ದೆಲ್ಲಾ ಚೆಲ್ಲಿ ಅದನ್ನ ಒಗೆಯಲು ಎಲ್ಲರೂ ಗೊಣಗಾಡ್ತಿದ್ರಂತೆ. ಆಗ ಭಟ್ರು ಈ ಸಹವಾಸಾನೇ ಬೇಡ ಅಂತ ಶಾಮಿಯಾನಾವನ್ನೇ ಹರಿದು ಅದರಲ್ಲಿ ಪ್ಯಾಂಟ್ ಹೊಲಿದು ಹಾಕ್ಕೊಂಡಿದ್ರು.

ಅಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಊರಲ್ಲಿ ಜಾತ್ರೆ ಆದಾಗ ಜ್ಯೂಸು ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಮೇಲಿಂದ ಮೇಲೆ ಮಾಡಬೇಕಲ್ಲ ಅಂತ ಭಟ್ರು ಒಂದು ಪ್ಲಾನ್ ಮಾಡಿದ್ರು. ನೀರಿನ ಟ್ಯಾಂಕ್ ಗೇ ರಸ್ನಾ ಪೌಡರ್, ಸಕ್ಕರೆ ಹಾಕಿ ನಲ್ಲಿ ಆನ್ ಮಾಡಿದ್ರೆ ಜ್ಯೂಸು ಬರೋ ಹಾಗೆ ಮಾಡಿದ್ರು.

‘ಅದು ಸರಿ, ಮರಕ್ಕೆ ನಿಮ್ಮನ್ನ ಕಟ್ಟಿ ಹಾಕಿದ್ದು ಯಾಕೆ?’ ಅಂತ ವಿಕ್ರಮನನ್ನ ಬೆನ್ನು ಹತ್ತಿದ ಬೇತಾಳದಂತೆ ನಾನು ಭಟ್ಟರನ್ನು ಎಳೆದುಕೊಂಡು ಟ್ರ್ಯಾಕ್ ಗೆ ತಂದೆ.

‘ಅಯ್ಯೋ ಅದೇನು ಕೇಳ್ತೀರಿ, ಭಾನುವಾರ ಬೆಳಗ್ಗೆ ಆಗ್ತಿದಂಗೆ ಅಪ್ಪ ನನ್ನನ್ನ ಮನೆಯ ಅಂಗಳದಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ನಾಲ್ಕು ಬಿಡ್ತಾ ಇದ್ರೂ. ಆಮೇಲೆ ಊರಿನಲ್ಲಿ ಎಲ್ಲರಿಗೂ ಅವನನ್ನ ಮರಕ್ಕೆ ಕಟ್ಟಿ ಹಾಕಿದೀನಿ ಹೋಗಿ ಒದೀರಿ ಅಂತ ಬೇರೆ ಹೇಳಿಕೊಂಡು ಬರ್ತಿದ್ರು.

ಊರಿನವರು ಇಲ್ಲ ಅವನು ಇವತ್ತು ಏನೂ ಮಾಡಿಲ್ಲವಲ್ಲ ಅಂದ್ರೆ ಇವತ್ತು ಮಾಡಿಲ್ಲ ಆದ್ರೆ ನಾಳೆ ಮಾಡೋನೇ ಅದ್ರಿಂದ ಇವತ್ತೇ ಒದೀರಿ ಅಂತ ಕುಮ್ಮಕ್ಕು ಕೊಡ್ತಾ ಇದ್ರೂ’ ಅಂತ ಗಹಗಹಿಸಿ ನಕ್ಕರು. ನಾನೂ ಸುಮಾರು ಹೊತ್ತು ಕಂಪನಿ ಕೊಟ್ಟೆ.

‘ಮುಂಗಾರು ಮಳೆ’ಯ16 ಪ್ರಿಂಟ್ ರೆಡಿ ಮಾಡಿಕೊಂಡು ಕುಳಿತಿದ್ದ ಭಟ್ಟರಿಗೆ ಆರ್ಡರ್ ಬಂದಿದ್ದು ಬರೋಬ್ಬರಿ136 ಪ್ರಿಂಟ್ ಗೆ.

ಯೋಗರಾಜ ಭಟ್ಟರಿಗೆ ಸಿನೆಮಾ ಅನ್ನೋದು ಅವರ 10 ರ ಜೊತೆಗಿನ ಹನ್ನೊಂದನೆಯ ಜರ್ನಿ ಅಷ್ಟೇ.. ಎಂ ಎ ಓದಬೇಕು ಅಂತ ಮೈಸೂರಿಗೆ ಹೋದರು, ಎಲ್ ಎಲ್ ಬಿ ಮಾಡೋದಕ್ಕೆ ಸೇರಿಕೊಂಡರು, ಮೈಸೂರಿನಲ್ಲಿದ್ದಾಗ ಫ್ರೆಂಡ್ ನ ಸಹವಾಸದಲ್ಲಿ ಸುಮಾರು ಸಿನೆಮಾ ನೋಡಿದ್ರು ಕಥೆ, ಕವಿತೆ ಬರೆದ್ರು. ಕಥೆ ಓದಿದೋರು ನೀನು ಡೈರೆಕ್ಟರ್ ಆಗಿಬಿಡು ಅಂದ್ರು. ‘ವೈ ನಾಟ್’ ಅಂತ ಭಟ್ರು ಅದೂ ಆದರು ಅನ್ನೋದು ಇವರ ಸಿನೆಮಾ ಜರ್ನಿಯ ಸಿಂಗಲ್ ಲೈನ್ ಸ್ಟೋರಿ.

‘ಸಿನೆಮಾಗೆ ಸಹಾಯಕ ನಿರ್ದೇಶಕ ಆಗಿ ಎಂಟ್ರಿ ಕೊಟ್ಟ ಮೇಲೂ ಫೀಡಿಂಗ್ ಬಾಟಲ್, ಸೊಳ್ಳೆ ಬ್ಯಾಟ್ ಮಾರ್ತಿದ್ದೆ’ ಅಂತ ನನ್ನತ್ತ ತಿರುಗಿ ಸಿನೆಮಾ ಫೀಲ್ಡ್ ಗೆ ಕನ್ನಡಿ ಹಿಡಿದರು.

‘ಎಷ್ಟೆಲ್ಲಾ ಕಥೆ ಇದೆ ನಿಮ್ಮ ಲೈಫ್ ನಲ್ಲಿ’ ಅಂದೆ. ಮತ್ತೆ ಭಟ್ರು ನನ್ನನ್ನು ಅಪರೂಪದ ಪ್ರಾಣಿ ಎನ್ನುವಂತೆ ನೋಡುತ್ತಾ ‘ನೀವು ಮಾತ್ರ ಹಾಗಂದಿದ್ದು. ಆದ್ರೆ ಜನ ಇವನ ಸಿನೆಮಾದಲ್ಲಿ ಕಥೇನೇ ಇರಲ್ಲ ಅಂತ ಗೊಣಗ್ತಾರೆ’ ಅಂದರು. ಮುಖದಲ್ಲಿ ಮಂದಹಾಸವಿತ್ತು.

‘ಉಪ್ಪು ಹುಳಿ ಸರಿಯಾಗಿದ್ರೆ ಏನು ಬೇಕಾದರೂ ತಿನ್ನಬಹುದು. ಸಿನೆಮಾ ಸಹಾ ಅಷ್ಟೇ. ಉಪ್ಪು ಹುಳಿ ಸರಿ ಇದ್ರೆ ಕ್ಲಿಕ್ ಆಗೇ ಆಗುತ್ತೆ. ಕೆಲವು ಅಡುಗೆಗೆ ಉಪ್ಪು ಹಿಡಿಯಲ್ಲ, ಇನ್ನು ಕೆಲವಕ್ಕೆ ಖಾರ. ಹಾಗಾಗಿ ಅದನ್ನ ಗುರುತಿಸಿ ಸರಿಯಾಗಿ ಅಡುಗೆ ಮಾಡೋದಿದೆಯಲ್ಲ ಅದೇ ಸಕ್ಸಸ್ ಸೂತ್ರ’ ಅಂದರು.

ಇವರು ಸಿನೆಮಾಗಳು, ಅಡುಗೆಗಳು, ಪಾಕಗಳು… ಅಂತೆಲ್ಲ ಮಾತನಾಡುತ್ತಿದ್ದಾಗ ನನ್ನ ತಲೆಯಲ್ಲಿ ಗಿರ್ ಅಂತ ಸುತ್ತುತ್ತಾ ಇದ್ದದ್ದು ಎರಡು ಅಡುಗೆ ಮನೆಯ ವಿಷಯಗಳು. ಒಂದು ತೆಂಗಿನಕಾಯಿ ಇನ್ನೊಂದು ಇಡ್ಲಿ.

ನಾನು ಆ ಎರಡರ ಬಗ್ಗೆ ಹೇಳಿದ್ದೇ ತಡ ಯೋಗರಾಜ್ ಭಟ್ರಿಗೆ ನೆನಪಿನ ಯಾನಕ್ಕೆ ಒಂದು ದೋಣಿ ರೆಡಿ ಮಾಡಿಕೊಟ್ಟಂತಾಯ್ತು.

ಹೌದು ನಾನು ನನ್ನ ಹೆಂಡತಿಗೆ ಇಟ್ಟಿದ್ದ ಅಡ್ಡ ಹೆಸರೇ ‘ತೆಂಗಿನಕಾಯಿ’ ಅಂತ.

ನನಗೆ ಇಡ್ಲಿ ಸಖತ್ ಇಷ್ಟ ಇತ್ತು.
ಒಂದು ಸಲಕ್ಕೆ 12 ಇಡ್ಲಿ, ಚಟ್ನಿ, ಮೊಸರು ಎಲ್ಲಾ ಒಂದೇ ಸಲಕ್ಕೆ ಕಲಸಿ ಆಹಾ ಪರಮ ಸುಖ ಅನುಭವಿಸುತ್ತಿದ್ದೆ ಅಂತ ತಮ್ಮ ಲೋಕದಲ್ಲಿ ಲೀನವಾದರು.

ಮತ್ತೆ ಭಟ್ಟರನ್ಯಾಕೆ ಇವತ್ತಿನ ಸಿನೆಮಾಗಳು, ಜಯಂತ ಕಾಯ್ಕಿಣಿ ಹಾಡುಗಳು, ಗಾಳಿಪಟಗಳು, ಪಂಚರಂಗಿಗಳು, ವಾಸ್ತು ಪ್ರಕಾರಗಳು, ನಿಮ್ಮ ಕಥೆಗಳು, ಕವನಗಳು ಅಂತೆಲ್ಲಾ ವಾಸ್ತವಕ್ಕೆ ಎಳೆದುಕೊಂಡು ಬರಬೇಕು ಅಂತ ಅವರನ್ನ ಅವರ ಇಡ್ಲಿ ಲೋಕದಲ್ಲಿಯೇ ಕೈಬಿಟ್ಟೆ.