Wednesday, February 25, 2026
Google search engine
Home Blog Page 280

ಕುಷ್ಠರೋಗ ದೇವರ ಶಾಪ ಅಲ್ಲ

Publicstory. in


Tumkuru: ಕುಷ್ಠರೋಗ ದೇವರ ಶಾಪ ಎಂದು ಭಾವಿಸದೆ ಒಂದು ಸಾಂಕ್ರಾಮಿಕ ಕಾಯಿಲೆ ಎಂದು ತಿಳಿದು ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಚರ್ಮದ ಮೇಲೆ ಬಂದರೆ ಚರ್ಮರೋಗ ತಜ್ಞರ ಬಳಿ ಪರೀಕ್ಷಿಸಿಕೊಂಡರೆ ಪ್ರಾಥಮಿಕ ಹಂತದಲ್ಲೇ ಕುಷ್ಠರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಬಹುದಾದ ಕಾಯಿಲೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.M.ಚೇತನ್ ತಿಳಿಸಿದರು.

ಅವರು ಸಿದ್ದಗಂಗಾ ಮಠದಲ್ಲಿ ಫೆಬ್ರುವರಿ 13ರಂದು ಕುಷ್ಠರೋಗ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಎಲ್ಲಾ ಮಚ್ಚೆಗಳು ಕುಷ್ಠರೋಗ ಆಗಿರುವುದಿಲ್ಲ ಆದರೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಕುಷ್ಠರೋಗ ಆಗಿರಲು ಸಾಧ್ಯ. ಮೊದಲ ಹಾಗೂ ಎರಡನೇ ಹಂತದಲ್ಲಿ ರೋಗಿಗಳನ್ನು ಪತ್ತೆಹಚ್ಚಿ ಸರಿಯಾದ ವೇಳೆಯಲ್ಲಿ ನಿಗದಿತ ಚಿಕಿತ್ಸೆ ನೀಡಿದಾಗ ಎಲ್ಲಾ ಕುಷ್ಠರೋಗಿಗಳು ಈ ಕಾಯಿಲೆಯಿಂದ ಗುಣಮುಖರಾಗಬಹುದು ಎಂದರು.

ಕುಷ್ಠರೋಗಿಗಳನ್ನು ಕಡೆಗಣಿಸದೆ ಅವರಿಗೆ ಚಿಕಿತ್ಸೆಗೆ ಸಹಾಯ ಸಹಕಾರ ನೀಡಿ ರೋಗದಿಂದ ವಾಸಿಯಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಜಪಾನಂದ ಸ್ವಾಮೀಜಿ ಮಾತನಾಡಿ, ಒಳ್ಳೆಯ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡಿ ಕುಷ್ಠರೋಗ ನಿಯಂತ್ರಣಕ್ಕೆ ಮುಂದಾಗೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಾಜಣ್ಣ, ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಪಾವಗಡ ಕೇಂದ್ರದ ಯೋಜನಾಧಿಕಾರಿ ನಾಗರಾಜು, ಹಿರಿಯ ಆರೋಗ್ಯ ಸಹಾಯಕ ರುದ್ರಮೂರ್ತಿ, ಸತೀಶ್ ಬಾಬು ಸೇರಿದಂತೆ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Mobile: ಮಕ್ಕಳ‌ ಮೇಲೆ ಗೀಳು

Tumkuru: ಮೊಬೈಲ್ ಗೀಳು ಹಾಗೂ ಟಿ. ವಿ.ಯಲ್ಲಿ ಬರುವ ಧಾರವಾಹಿಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಮಕ್ಕಳು ಚಟುವಟಿಕೆ ಆಧಾರಿತ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ಯಶಸ್ಸನ್ನು ಸಾಧಿಸಬೇಕೆಂದು ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಬಿ. ಮರುಳಯ್ಯ ಅಭಿಪ್ರಾಯಪಟ್ಟರು.

ಬಾಲಭವನ ಸಮಿತಿ ಬೆಂಗಳೂರು, ತುಮಕೂರು ಜಿಲ್ಲಾ ಬಾಲಭವನ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಸಹ ಯೋಗದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಚಟುವಟಿಕೆಗಳ ಕಾರ್ಯಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಮಕೂರು ವಿಜ್ಞಾನ ಕೇಂದ್ರದ ಸಹಕಾರ್ಯದರ್ಶಿ ಪಿ. ಪ್ರಸಾದ್ ಮಾತನಾಡಿ, ಅಂಕಗಳಿಗೆ ಮಾರುಹೋಗದೆ ಅನುಭವ ಹಾಗೂ ಚಟುವಟುಕೆಗಳ ಮೂಲಕ ವೈಜ್ಞಾನಿಕ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡು ಯಶಸ್ಸು ಕಾಣಿರೆಂದು ಮಕ್ಕಳಿಗೆ ಕವಿಮಾತು ಹೇಳಿದರು.

ಕಾರ್ಯಾಗಾರದಲ್ಲಿ ತುಮಕೂರಿನ ಪಶ್ಚಿಮ ಬಡಾವಣೆ , ಮಾರ್ಕೆಟ್ ಚೌಕ ಹಾಗೂ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಪರಿಸರ ಅಧ್ಯಯನ , ಮಾಡು-ನೋಡು , ಓರಿಗಮಿ, ಪವಾಡ ರಹಸ್ಯ ಬಯಲು ಹಾಗೂ ವಿಜ್ಞಾನ ಚಲನಚಿತ್ರಗಳ ವೀಕ್ಷಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಸ್. ರವಿಶಂಕರ್ , ಉಪಾಧ್ಯಕ್ಷ ಎಂ. ಹನುಮದಾಸ್ , ಸಹಕಾರ್ಯದರ್ಶಿ ಟಿ. ಎಸ್. ನಿತ್ಯಾನಂದ, ಜಿಲ್ಲಾ ಬಾಲಭವನದ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಪಿ. ಮಮತ, ಶಿಕ್ಷಕರಾದ ಕೇಶವ ಮೂರ್ತಿ ಹಾಗೂ ಲತಾ ಭಾಗವಹಿಸಿದ್ದರು.

ಇಬ್ಬರು ಗಂಧ ಚೋರರ ಬಂಧನ

ಗುಬ್ಬಿ : ನಿಟ್ಟೂರು ಹೋಬಳಿಯ ಮಾರ ಶೆಟ್ಟಿ ಹಳ್ಳಿ ಅರಣ್ಯ ವಲಯದಲ್ಲಿ ಗಂಧದ ಮರ ಕಡಿದು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗುಬ್ಬಿ ಅರಣ್ಯ ಇಲಾಖೆ ಸಿಬ್ಬಂದಿ ಬಂದಿಸಿದ್ದಾರೆ.

ಬಂಧಿತರಿಂದ ಸುಮಾರು 35 ಕೆ.ಜಿ ತೂಕದ ಗಂಧದ ತುಂಡುಗಳನ್ನು ವಶ ಮಾಡಿಕೊಂಡಿದ್ದು ಅಂದಾಜು 20 ಸಾವಿರ ಮೌಲ್ಯ ಎನ್ನಲಾಗಿದೆ.

ಆರೋಪಿಗಳು ಗುಬ್ಬಿ ತಾಲೂಕಿನ ಎಲ್ಲಾಪುರ ಗ್ರಾಮದ ಕರಯ್ಯಪ್ಪ ಹಾಗೂ ಭೋಜಣ್ಣ ಕುರುಬರಹಳ್ಳಿ. ತುರುವೇಕೆರೆ ತಾಲ್ಲೂಕಿನ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ ಎಂದು
ಅರಣ್ಯ ಇಲಾಖೆಯ ವಲಯ ಅರಣ್ಯಧಿಕಾರಿ ಸಿ. ರವಿ ತಿಳಿಸಿದರು.

SI ಅಮಾನತ್ತು; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನತೆ

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಪಾವಗಡ ಠಾಣೆ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ ಅವರನ್ನು ಎಸ್ ಪಿ ಡಾ.ಕೋನ ವಂಶಿಕೃಷ್ಣ ಅವರು ಅಮಾನತ್ತುಗೊಳಿಸಿದ್ದಾರೆ.

ವಂಚನೆ, ಕಳ್ಳತನ, ಜೇಬುಗಳ್ಳತನ ಸೇರಿದಂತೆ ಹಲವು ದೂರನ್ನ‌ ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪ ಇವರ ಮೇಲಿತ್ತು. ಶಂಕರ ನಾಯ್ಕ ಎಂಬುವರು ಪೊಲೀಸ್ ಠಾಣೆ ಮುಂಭಾಗ ಇದ್ದ ಎಟಿಎಂ ನಲ್ಲಿ ಹಣ ಡ್ರಾ ಮಾಡುವಾಗ ವಂಚಕನೊಬ್ಬ ಅವರ ಎಟಿಎಂ ಬದಲಿಸಿ 1 ಲಕ್ಷ ರೂ ಹಣ ಡ್ರಾ ಮಾಡಿ ಪರಾರಿಯಾಗಿದ್ದ. ರಾಜವಂತಿ ಗ್ರಾಮದ ಅಡವಪ್ಪ ಅವರಿಗೂ ಇದೇ ರೀತಿ ವಂಚಿಸಿ 25 ಸಾವಿರ ರೂ ಹಣ ವಂಚಿಸಲಾಗಿತ್ತು. ಆದರೆ ಇವರಿಬ್ಬರು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸದೆ ಕೇವಲ ಸೀಮಿಸ್  ನೀಡಲಾಗಿತ್ತು.

ಜೇಬುಗಳ್ಳ ತನ್ನ ಜೇಬಿನಲ್ಲಿದ್ದ 80 ಸಾವಿರ ರೂಪಾಯಿ ಹಣ ಕಳವು ಮಾಡಿದ್ದಾನೆ ಎಂದು ದೇಗುಲಕ್ಕೆ ಆಗಮಿಸಿದ್ದ ಭಕ್ತನೋರ್ವ ನೀಡಿದ್ದ ದೂರನ್ನು ಪಡೆದು ಪ್ರಕರಣ ದಾಖಲಿಸದ ಆರೋಪ ರಾಘವೇಂದ್ರ ಅವರ ಮೇಲಿತ್ತು. ಎಸ್.ಪಿ ಅವರು ಸೂಚಿಸಿದ ನಂತರ ಜೇಬು ಕಳ್ಳತನದ ಪ್ರಕರಣ ದಾಖಲಿಸಲಾಗಿತ್ತು.

ಇಷ್ಟೆಲ್ಲದರ ಜೊತೆಗೆ ತುಮಕೂರಿಗೆ ಕ್ರೈಂ ಮೀಟಿಂಗ್ ಗಾಗಿ ಹೋಗುತ್ತಿದ್ದ ಅವರು ಮರಳಿ ಕೇಂದ್ರ ಸ್ಥಾನಕ್ಕೆ ಬರುತ್ತಿರಲಿಲ್ಲ. ನಂತರದ ದಿನವೂ ತಡವಾಗಿ ಠಾಣೆಗೆ  ಆಗಮಿಸುತ್ತಿದ್ದರು. ಈ ಬಗ್ಗೆ ಸರ್ಕಲ್ ಇನ್ ಸ್ಪೆಕ್ಟರ್ ಕೇಳಿದಾಗ ಬೇ ಜವಬ್ಧಾರಿ ಉತ್ತರ ನೀಡುತ್ತಿದ್ದರು. ಈ ಬಗ್ಗೆಯೂ ಎಸ್ ಪಿ ಅವರಿಗೆ ವರದಿ ಹೋಗಿತ್ತು ಎಂದು ತಿಳಿದು ಬಂದಿದೆ.

ಸಬ್ ಇನ್ ಸ್ಪೆಕ್ಟರ್ ಅಮಾನತ್ತುಗೊಂಡಿರುವ ವಿಚಾರ ತಿಳಿದು ಪಟ್ಟಣದ ಕೆಲವರು ಶನೈಶ್ಚರ ವೃತ್ತದಲ್ಲಿ ಪಟಾಕಿ ಸಿಡಿಸಿದರು. ಅಮಾನತ್ತುಗೊಳಿಸಿ ಕ್ರಮ ತೆಗೆದುಕೊಂಡ ಪೊಲೀಸ್ ವರಿಷ್ಠಾಧಿಕಾರಿ ಪರವಾಗಿ ಘೋಷಣೆ ಕೂಗಿದರು.

 

ಬ್ಯಾಂಕ್ ಅಧಿಕಾರಿಗಳ ಕಿರುಕುಳ; ರೈತರ ಪ್ರತಿಭಟನೆ

ಪಾವಗಡ: ತಾಲ್ಲೂಕಿನ ಕೆಲ ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲದ ವಿಚಾರವಾಗಿ ರೈತರಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಬ್ಯಾಂಕ್ ಅಧಿಕಾರಿಗಳು ರೈತರಲ್ಲಿ ಭಯ ಹುಟ್ಟಿಸಿ ಪೂತರ್ಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಚನ್ನಕೇಶವ ಪುರದ ಬ್ಯಾಂಕ್ ವ್ಯವಸ್ಥಾಪಕ  ಸಾಲ ಇರುವ ರೈತರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದು, ಅಸಲು-ಬಡ್ಡಿ ಎರಡನ್ನು ಕಟ್ಟಿದರೆ ಮಾತ್ರ ಸಾಲ ನವೀಕರಣ ಮಾಡಿಕೊಡುತ್ತೇನೆ, ಇಲ್ಲವಾದರೇ ರಿನಿವಲ್ ಮಾಡಲು ಸಾಧ್ಯವಿಲ್ಲ. ನಮಗೆ ಮೇಲಾಧಿಕಾರಿಗಳ ಆದೇಶವಾಗಿದೆ ಎಂದು ರೈತರ ಸಾಲದ ಮೊತ್ತಕ್ಕೆ ಬಡ್ಡಿಗೆ ಚಕ್ರಬಡ್ಡಿ ಹಾಕಿ ರೈತರನ್ನು ಆತಂಕಕ್ಕೀಡು ಮಾಡುತ್ತಿದ್ದಾರೆ. ತಾಲ್ಲೂಕಿನ ಹಲವು ಬ್ಯಾಂಕ್ ಗಳಲ್ಲಿ   ರೈತರನ್ನು ಸುಖಾ ಸುಮ್ಮನೆ ಅಲೆಯುವಂತೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು.

ಮಳೆ-ಬೇಳೆಯಿಲ್ಲದೆ ರೈತರು ಕಂಗಲಾಗಿದ್ದಾರೆ. ಇಂತಹ ಸಮಯದಲ್ಲಿ ಅಸಲು-ಬಡ್ಡಿಯನ್ನು ಎಲ್ಲಿಂದ ತಂದು ಕಟ್ಟಬೇಕು. ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುವ ಬ್ಯಾಂಕ್ ಅಧಿಕಾರಿಗಳನ್ನು ಸರ್ಕಾರ ಕೂಡಲೇ ಅಮಾನತ್ತು ಮಾಡಬೇಕು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಾಲ್ಲೂಕಿಗೆ ಆಗಮಿಸಿ ಬ್ಯಾಂಕ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು. ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು

ಸಾಲದ ನೆಪದಲ್ಲಿ ರೈತರಿಗೆ ಕಿರುಕುಳ ನೀಡಿ ರೈತರಿಗೆ ತೊಂದರೆ ನೀಡಿದಲ್ಲಿ ಬ್ಯಾಂಕ್ ಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು. ರೈತರಿಗೆ ತೊಂದರೆ ಆದಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ನಿರತರು ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ನೀಡಿದರು.

ರೈತ ಮುಖಂಡ ಪೂಜಾರಪ್ಪ, ಕೃಷ್ಣರಾವ್, ಸಿದ್ದಪ್ಪ, ಈರಭದ್ರಪ್ಪ, ಗುಜ್ಜನಡು ಜಿ.ಬಿ.ರಾಮಾಂಜಿ, ಹನುಮಂತರಾಯ, ಚಿತ್ತಪ್ಪ, ಲಕ್ಷ್ಮನಾಯ್ಕ, ನಾರಯಣನಾಯ್ಕ, ಚಿತ್ತಯ್ಯ, ನರಸಪ್ಪ, ನಾರಯಣಪ್ಪ, ಜಂಪಣ್ಣ, ಅಶ್ವತ್ಥಪ್ಪ ಉಪಸ್ಥಿತರಿದ್ದರು.

ಸಿದ್ಧಾರ್ಥ ಸಂಪದ ಬಿಡುಗಡೆ

Publicstory. In


Tumkuru; ಮಾಧ್ಯಮ ವಿದ್ಯಾರ್ಥಿಗಳು ಭಾಷೆ, ಸಾಹಿತ್ಯದ ಅರಿವು ಹಾಗೂ ವ್ಯಾಕರಣದ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಾಹಿತಿ ಡಾ.ಮಕ್ತುಂಬಿ ಕರೆ ನೀಡಿದರು.

ನಗರದ ಎಸ್‍ಎಸ್‍ಐಟಿ ಕ್ಯಾಂಪಸನಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಮಾಧ್ಯಮ ವಿದ್ಯಾರ್ಥಿಗಳು ಪ್ರಕಟಿಸುತ್ತಿರುವ 43ನೇ ಸಿದ್ಧಾರ್ಥ ಸಂಪದ ವಾರಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ವ್ಯಾಕರಣಾಂಶವು ಸಂಪೂರ್ಣ ಅರ್ಥವನ್ನೇ ಬದಲಿಸಬಲ್ಲದು, ಆದ್ದರಿಂದ ವಾಕ್ಯರಣ ಮತ್ತು ಭಾಷೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ ವರದಿ ತಯಾರಿಸಿ ಎಂದು ಸಲಹೆ ನೀಡಿದರು.

ಇತ್ತೀಚಿನ ದಿನದಲ್ಲಿ ಟೆಲಿವಿಷನ್ ಮಾಧ್ಯಮಗಳಲ್ಲಿ ಆಗುತ್ತಿರುವ ಭಾಷೆಯ ಕಗ್ಗೋಲೆಯನ್ನುವರ್ಣಿಸಲು ಸಾಧ್ಯವಿಲ್ಲ. ಆದರೆ ಮುದ್ರಣ ಮಾಧ್ಯಮ ಆ ಹಂತತಲುಪದಿರುವುದಕ್ಕೆ ಖುಷಿ ಪಡಬಹುದು ಸಾಹಿತ್ಯದ ಆಸಕ್ತಿ, ಬರವಣಿಗೆಯ ವೈವಿದ್ಯತೆಯನ್ನು ವಿದ್ಯಾರ್ಥಿಗಳು ರೂಪಿಸಿಕೊಂಡಾಗ ಪತ್ರಿಕೋದ್ಯಮ ವೃತ್ತಿಬದುಕಿಗೆ ನೆರವಾಗುತ್ತದೆ ಎಂದರು.

ಆಡಳಿತಾಧಿಕಾರಿ ಡಾ.ವೈ.ಎಂ ರೆಡ್ಡಿ ಮಾತನಾಡಿ, ಪತ್ರಿಕೆಯು ಅತ್ಯುತ್ತಮ ಪುಟವಿನ್ಯಾಸದೊಂದಿಗೆ ಉತ್ತಮ ಗುಣಮಟ್ಟದಿಂದ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ.ವಿದ್ಯಾರ್ಥಿಗಳು ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ ಇಷ್ಟಪಟ್ಟು ಕೆಲಸ ಮಾಡುವುದರಿಂದ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.

ನಿರ್ದೇಶಕ ಡಾ.ಬಿ.ಟಿ ಮುದ್ದೇಶ್ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಯನ್ನು ಸಿದ್ಧಗೊಳಿಸುವ ಮುಂಚೆ ಹೆಚ್ಚು ಪತ್ರಿಕೆಗಳನ್ನು ಓದಿ ಮನನ ಮಾಡಿಕೊಳ್ಳಬೇಕು. ಇದರಿಂದ ಗುಣಮಟ್ಟದ ಬರವಣಿಗೆ ಮೂಡಲು ಸಾಧ್ಯ.ಭವಿಷ್ಯದ ಪತ್ರಕರ್ತರಾಗುತ್ತಿರುವವರು ಸುತ್ತಮುತ್ತಲಿನ ವಾತಾವರಣವನ್ನು ಸೂಕ್ಷ್ಮಗಳನ್ನು ಗಮನಿಸಬೇಕು ಎಂದರು.

ಕೊನೆಗೂ ಸೆರೆ ಸಿಕ್ಕಿತು ಮಗು ಕೊಂದ ಚಿರತೆ

Gubbi: ಗುಬ್ಬಿ ತಾಲೂಕಿನ ಮಣಿಕುಪ್ಪೆಯಲ್ಲಿ ಬಾಲಕನೊಬ್ಬನನ್ನು ಕೊಂದು ರಕ್ತಹೀರಿದ್ದ ನರಭಕ್ಷಕ ಚಿರತೆಯು ಅರಣ್ಯಾಧಿಕಾರಿಗಳು ಇಟ್ಟ ಬೋನಿಗೆ ಬಿದ್ದಿದೆ.

ಬಡೇಸಾಬರ ಪಾಳ್ಯದ ಅರಣ್ಯದ ಅಂಚಿನಲ್ಲಿಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು ಅದನ್ನು ನೋಡಲು ನೂರಾರು ಮಂದಿ ಆಗಮಿಸಿದ್ದಾರೆ.

ಅರಣ್ಯಾಧಿಕಾರಿಗಳು ಚಿರತೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಬಿಡುತ್ತಾರೋ ಅಥವಾ ಗುಂಡಿಕ್ಕಿ ಕೊಲ್ಲುತ್ತಾರೋ ನೋಡಬೇಕು. ನರಭಕ್ಷಕ ಚಿರತೆಯನ್ನು ಗುಂಡಿಕ್ಕಿ ಕೊಲ್ಲುವಂತೆ ಆದೇಶಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು.

ಜೆಪಿ ಕಣ್ಣಲ್ಲಿ ಸಿದ್ಧಗಂಗೆ ಜಾತ್ರೆಯ ಝಲಕ್

Publicstory. in


Tumkuru: ಸಿದ್ದಗಂಗೆ ಜಾತ್ರೆ ಎಂದರೆ ರಾಜ್ಯದೆಲ್ಲಡೆ ಸಂಭ್ರಮವೋ ಸಂಭ್ರಮ. ರಾಸುಗಳ ಮಾರಾಟದ ಭರಾಟೆ ತಿಂಗಳ ಪೂರಾ ರೈತರಿಗೆ ಹಬ್ಬದ ವಾತಾವರಣ.

ಜವಾರಿ ಹೋರಿಗಳನ್ನು ಕೊಳ್ಳಲು ಉತ್ತರ ಕರ್ನಾಟಕದ ಮಂದಿ ಇಲ್ಲಿಗೆ ದಾಂಗುಡಿ ಇಡುತ್ತಾರೆ. ನಮ್ಮ ಅಮೃತ್ ಮಹಲ್, ಹಳ್ಳಿಕಾರ್ ತಳಿಗಳು ಅಲ್ಲಿನ ಕೃಷಿಯ ಜೀವನಾಡಿಗಳಾಗಿವೆ.

ಉತ್ತರ ಕರ್ನಾಟಕ, ಬಯಲು ಸೀಮೆ ಬೆಸೆಯುವ ಪರಿ ಇದು. ಇದರ ಜತೆಗೆ ನಡೆಯುವ ಕೃಷಿ ವಸ್ತು ಪ್ರದರ್ಶನದ ಲೋಕವೇ ಬೇರೆ.ಇಲ್ಲಿ ಅನಾವರಣಗೊಳ್ಳುವ ಕೃಷಿ ಲೋಕಕ್ಕೆ ಬೆರಗಾಗದೇ ಇರುವವರೇ ಇಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ಜನರು ಈಗಾಗಲೇ ತಪೋಕ್ಷೇತ್ರ ಸಿದ್ಧಗಂಗೆ ಕಡೆಗೆ ಹರಿದು ಬರುತ್ತಿದ್ದಾರೆ.

ಪತ್ರಿಕಾ ಛಾಯಾ ಗ್ರಹಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜೆಪಿ ಅವರ ಕ್ಯಾಮೆರಾ ಕಣ್ಣಲ್ಲಿ ಜಾತ್ರೆ ಯ ಒಂದು ಝಲಕ್ ಇಲ್ಲಿದೆ.

ಸಿದ್ಧಗಂಗೆ ಜಾತ್ರೆ, ವಸ್ತುಪ್ರದರ್ಶನಕ್ಕೆ ಚಾಲನೆ

Tumkur: ಜಾತ್ರೆಗೆ ಬರುವ ರೈತರು ಮತ್ತು ಸಾಮಾನ್ಯ ಜನ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಕೃಷಿ ಮತ್ತು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏರ್ಪಡಿಸಿರುವ ಕೃಷಿ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಮಾಧುಸ್ವಾಮಿ ಇಲ್ಲಿ 1964 ರಿಂದ ಪ್ರದರ್ಶನ ನಡೆದುಕೊಂಡು ಬರುತ್ತಿದೆ. ಜಾತ್ರೆಯೂ ಕೂಡ ನಡೆಯುತ್ತಿದೆ. ಜಾತ್ರೆಗೆ ಬರುವ ರೈತರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶ ವಸ್ತುಪ್ರದರ್ಶನದ ಹಿಂದೆ ಇದೆ ಎಂದರು.

ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಂತಹ ವಸ್ತು ಪ್ರದರ್ಶನವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಜಾತ್ರೆಗೆ ಬಂದ ಜನರಿಗೆ ಅರಿವು ಮೂಡಿಸುವುದು, ಈ ಕೃಷಿ ಮತ್ತು ವಸ್ತುಪ್ರದರ್ಶನ ನೋಡಿ ರೈತರು ಹೊಸ ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ರೈತರು ಕೃಷಿಯಲ್ಲಿ ವರಮಾನ ಹೇಗೆ ಪಡೆಯಬಹುದು. ಬೆಳೆಗಳ ಕುರಿತು ಮಾಹಿತಿ, ರೈತರಿಗೆ ಬೇಕಾಗಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಜನರನ್ನು ಸೇರಿಸುವುದು ಕಷ್ಟದ ಕೆಲಸ. ಹಾಗಾಗಿ ಈ ಜಾತ್ರೆಯ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಫಿಟ್ ವೆಲ್ ಕಾರ್ಮಿಕರ ಪ್ರತಿಭಟನೆ

Publicstory. in


Tumkuru: ತಾತ್ಕಾಲಿಕ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಾಯಂಗೊಳಿಸಬೇಕು. ಸೇವಾ ಭದ್ರತೆ ನೀಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫಿಟ್‍ವೆಲ್ ಟೂಲ್ಸ್ ಅಂಡ್ ಫೋರ್ಜಿಂಗ್ ಕಾರ್ಮಿಕರ ಸಂಘ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಸತ್ಯಾಗ್ರಹ 10ನೇ ದಿನಕ್ಕೆ ಕಾಲಿಟ್ಟಿದೆ.

ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ 5ಕೆಎಚ್‍ಟಿ ಫೇಸ್‍ನ ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರ್ಮಿಕರು ಕಳೆದ 9 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಆಡಳಿತ ಮಂಡಳಿ ತಿರುಗಿಯೂ ನೋಡುತ್ತಿಲ್ಲ. ಕಾರ್ಮಿಕರ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.

ಕಾರ್ಮಿಕ ಅಧಿಕಾರಿಗಳು ಬಂದು ಆಡಳಿತ ಮಂಡಳಿಯವರ ಜೊತೆ ಮಾತುಕತೆ ನಡೆಸಿದರೂ ಅವರ ಮಾತಿಗೂ ಕಿಮ್ಮತ್ತು ಇಲ್ಲವಾಗಿದೆ. ಅಧಿಕಾರಗಳೆಂದರೆ ಆಡಳಿತ ಮಂಡಳಿ ಅಸಡ್ಡೆ ತೋರುತ್ತಿದ್ದಾರೆ ಎಂದು ಧರಣಿನಿರತರು ದೂರಿದರು.

ಅಢಳಿತ ಮಂಡಳಿ ಕಾರ್ಮಿಕರ ಒಗ್ಗಟ್ಟನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಹತ್ತಾರ ವರ್ಷಗಳಿಂದ ಗುತ್ತಿಗೆ ಮತ್ತು ತಾತ್ಕಲಿಕ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ನಿಯಮದಂತೆ ಖಾಯಂಗೊಳಿಸಬೇಕು. ಇದುವರೆಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಮನೆ ಬಾಡಿಗೆ ಭತ್ಯೆಯನ್ನು ನೀಡದೆ ಆಡಳಿತ ಮಂಡಳಿ ದೌರ್ಜನ್ಯ ಎಸಗುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ರಜೆಗಳನ್ನು ನೀಡುತ್ತಿಲ್ಲ. ಪ್ರಯಾಣ ಭತ್ಯೆಯನ್ನು ಕೊಡುತ್ತಿಲ್ಲ. ನಾವು ವಾರದ ಮತ್ತು ಇತರೆ ರಜೆಗಳನ್ನು ಹಾಕಿದರೆ ಪಂಚ್ ಲಾಕ್ ಮಾಡಿ ಕಾರ್ಮಿಕರನ್ನು ಕಾರ್ಖಾನೆಯ ಹೊರಗೆ ನಿಲ್ಲಿಸಿ ಅವಮಾನ ಮಾಡುತ್ತಿದ್ದಾರೆ. ಇದನ್ನು ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮೂರು ದಿನಗಳ ಹಿಂದೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು. ಆಡಳಿತ ಮಂಡಳಿಯವರ ಜೊತೆ ಮಾತುಕತೆಗಾಗಿ ಕರೆಸಿದರು. ಮೇನೇಜರ್ ಇಲ್ಲವೆಂಬ ಕುಂಟು ನೆಪ ಹೇಳಿ ಸಾಗಹಾಕಿದರು.

ಕಾರ್ಮಿಕ ಅಧಿಕಾರಿಗಳಿ ಮಾತಿಗೆ ಕೂಡ ಆಡಳಿತ ಮಂಡಳಿ ಬೆಲೆ ನೀಡುತ್ತಿಲ್ಲ. ಕಾರ್ಮಿಕರ ನಡುವೆ ಬಿರುಕು ಮೂಡಿಸಲು ಕೇವಲ 22 ಮಂದಿ ಕಾರ್ಮಿಕರನ್ನು ಕಾಯಂ ಮಾಡಲಾಗಿದೆ. ತಾತ್ಕಾಲಿಕ ಆಧಾರ ಮತ್ತು ಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರು 200ಕ್ಕೂ ಹೆಚ್ಚು ಮಂದಿ ಇದ್ದೇವೆ. ಆದರೆ ನಮ್ಮನ್ನು ಕಾಯಂಗೊಳಿಸುವ ಮತ್ತು ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಆಡಳಿತ ಮಂಡಳಿಯವರು ಸತಾಯಿಸುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರು ದೂರಿದರು.