ಜಸ್ಟ್ ನ್ಯೂಸ್

ಬ್ಯಾಂಕ್ ಅಧಿಕಾರಿಗಳ ಕಿರುಕುಳ; ರೈತರ ಪ್ರತಿಭಟನೆ

ಪಾವಗಡ: ತಾಲ್ಲೂಕಿನ ಕೆಲ ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲದ ವಿಚಾರವಾಗಿ ರೈತರಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.

ಬ್ಯಾಂಕ್ ಅಧಿಕಾರಿಗಳು ರೈತರಲ್ಲಿ ಭಯ ಹುಟ್ಟಿಸಿ ಪೂತರ್ಿ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಚನ್ನಕೇಶವ ಪುರದ ಬ್ಯಾಂಕ್ ವ್ಯವಸ್ಥಾಪಕ  ಸಾಲ ಇರುವ ರೈತರಿಗೆ ಇಲ್ಲದ ಕಿರುಕುಳ ನೀಡುತ್ತಿದ್ದು, ಅಸಲು-ಬಡ್ಡಿ ಎರಡನ್ನು ಕಟ್ಟಿದರೆ ಮಾತ್ರ ಸಾಲ ನವೀಕರಣ ಮಾಡಿಕೊಡುತ್ತೇನೆ, ಇಲ್ಲವಾದರೇ ರಿನಿವಲ್ ಮಾಡಲು ಸಾಧ್ಯವಿಲ್ಲ. ನಮಗೆ ಮೇಲಾಧಿಕಾರಿಗಳ ಆದೇಶವಾಗಿದೆ ಎಂದು ರೈತರ ಸಾಲದ ಮೊತ್ತಕ್ಕೆ ಬಡ್ಡಿಗೆ ಚಕ್ರಬಡ್ಡಿ ಹಾಕಿ ರೈತರನ್ನು ಆತಂಕಕ್ಕೀಡು ಮಾಡುತ್ತಿದ್ದಾರೆ. ತಾಲ್ಲೂಕಿನ ಹಲವು ಬ್ಯಾಂಕ್ ಗಳಲ್ಲಿ   ರೈತರನ್ನು ಸುಖಾ ಸುಮ್ಮನೆ ಅಲೆಯುವಂತೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು.

ಮಳೆ-ಬೇಳೆಯಿಲ್ಲದೆ ರೈತರು ಕಂಗಲಾಗಿದ್ದಾರೆ. ಇಂತಹ ಸಮಯದಲ್ಲಿ ಅಸಲು-ಬಡ್ಡಿಯನ್ನು ಎಲ್ಲಿಂದ ತಂದು ಕಟ್ಟಬೇಕು. ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುವ ಬ್ಯಾಂಕ್ ಅಧಿಕಾರಿಗಳನ್ನು ಸರ್ಕಾರ ಕೂಡಲೇ ಅಮಾನತ್ತು ಮಾಡಬೇಕು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ತಾಲ್ಲೂಕಿಗೆ ಆಗಮಿಸಿ ಬ್ಯಾಂಕ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು. ರೈತರಿಗಾಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು

ಸಾಲದ ನೆಪದಲ್ಲಿ ರೈತರಿಗೆ ಕಿರುಕುಳ ನೀಡಿ ರೈತರಿಗೆ ತೊಂದರೆ ನೀಡಿದಲ್ಲಿ ಬ್ಯಾಂಕ್ ಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು. ರೈತರಿಗೆ ತೊಂದರೆ ಆದಲ್ಲಿ ಬ್ಯಾಂಕ್ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ನಿರತರು ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ನೀಡಿದರು.

ರೈತ ಮುಖಂಡ ಪೂಜಾರಪ್ಪ, ಕೃಷ್ಣರಾವ್, ಸಿದ್ದಪ್ಪ, ಈರಭದ್ರಪ್ಪ, ಗುಜ್ಜನಡು ಜಿ.ಬಿ.ರಾಮಾಂಜಿ, ಹನುಮಂತರಾಯ, ಚಿತ್ತಪ್ಪ, ಲಕ್ಷ್ಮನಾಯ್ಕ, ನಾರಯಣನಾಯ್ಕ, ಚಿತ್ತಯ್ಯ, ನರಸಪ್ಪ, ನಾರಯಣಪ್ಪ, ಜಂಪಣ್ಣ, ಅಶ್ವತ್ಥಪ್ಪ ಉಪಸ್ಥಿತರಿದ್ದರು.

Comment here