Thursday, February 19, 2026
Google search engine
Home Blog Page 282

ಪಾವಗಡ; ಜ್ಯೇಷ್ಠಾದೇವಿ, ಶನೈಶ್ಚರ ಸ್ವಾಮಿ ಬ್ರಹ್ಮ ರಥೋತ್ಸವ

ಪಾವಗಡ: ಪಟ್ಟಣದಲ್ಲಿ ಭಾನುವಾರ  ಜ್ಯೇಷ್ಠಾದೇವಿ ಸಹಿತ ಶನೈಶ್ಚರ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಬ್ರಹ್ಮ ರಥೋತ್ಸವದ ಅಂಗವಾಗಿ  ಶನಿವಾರ ಜ್ಯೇಷ್ಠಾದೇವಿ, ಶನೈಶ್ಚರ ಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಪಂಚಾಮೃತ ಅಭಿಷೇಕ, ಚಂಡಿಹೋಮ,  ಸತ್ಯನಾರಾಯಣ ವ್ರತ, ಸೂರ್ಯಾರಾಧನೆ, ಎಲೆ ಪೂಜೆ, ಪೂರ್ಣಾಹುತಿ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆಯಿತು.

ಹೋಮ, ಮಹಾ ಮಂಗಳಾರತಿ ನಂತರ ವಾದ್ಯ ಗೋಷ್ಠಿಯೊಂದಿಗೆ ಉತ್ಸವ ಮೂರ್ತಿಗಳನ್ನು ರಥದ ಬಳಿಗೆ ಕರೆತರಲಾಯಿತು. ರಥೋತ್ಸವದಲ್ಲಿ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನೆರೆದಿದ್ದ  ಭಕ್ತರು  ದವನ ಸಿಕ್ಕಿಸಿದ್ದ ಬಾಳೆಹಣ್ಣನ್ನು ರಥದತ್ತ  ಎಸೆದರು.

ದೇಗುಲವನ್ನು ವಿವಿಧ ಹೂಗಳು,  ಬಣ್ಣದ ರಂಗೋಲಿಗಳಿಂದ ಅಲಂಕರಿಸಲಾಗಿತ್ತು.

 

ಸಭಾ ಗೌರವ ಕಾಪಾಡದ ಸಚಿವ ಮಾಧುಸ್ವಾಮಿ:ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿ ಅಸಮಾಧಾನ

Publicstory. in


Turuvekere: ಸಣ್ಣ.ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಧಾರ್ಮಿಕ ಸಭಾ ವೇದಿಕೆಯಿಂದ ನಿರ್ಗಮಿಸುವ ಮುನ್ನಾ ದಿವ್ಯ ಸಾನ್ನಿಧ್ಯ ವಹಿಸಿದ್ದ ನನಗೆ ಕನಿಷ್ಟ ಸೌಜನ್ಯಕ್ಕಾದರೂ ಹೇಳದೆ ತೆರಳಿದ ಸಚಿವರ ನಡೆ ಸಾಧುವಲ್ಲ ಎಂದು ಬೆಟ್ಟದಹಳ್ಳಿ ಗವಿ ಮಠದ ಚಂದ್ರಶೇಖರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹಟ್ಟಿಹಳ್ಳಿಯಲ್ಲಿ ಶುಕ್ರವಾರ ನಡೆದ ದೇವಸ್ಥಾನ ಉದ್ಘಾಟನಾ ಧಾರ್ಮಿಕ ಸಭೆಯಲ್ಲಿ ಸಚಿವ ಮಾಧುಸ್ವಾಮಿಯವರು ಮತ್ತೊಂದು ಕಾರ್ಯಕ್ರಮಕ್ಕೆ ತೆರಳುವಾಗ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದರು.

ಅದೇ ವೇಳೆ ಶಾಸಕ ಮಸಾಲ ಜಯರಾಮ್ ಸ್ವಾಮೀಜಿಗೆ ಹೇಳಿ ಸಚಿವರನ್ನೇ ಹಿಂಬಾಲಿಸಿದರು. ಇದರಿಂದ ಅಸಮಧಾನಗೊಂಡ ಸ್ವಾಮೀಜಿಗಳು ಸಚಿವ ಮಾಧುಸ್ವಾಮಿಯವರು ಸಭಾ ಗೌರವ ಕಾಪಾಡಲಿಲ್ಲ ಎಂದು ಬೇಸರ ತೋರಿಕೊಂಡತು.

ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದವರು ದೇಗುಲ ಸಮಿತಿಯವರು ನೀಡುವ ಗೌರವಕ್ಕಾದರೂ 5 ನಿಮಿಷಗಳ ಸಮಯ ಹೆಚ್ಚಿಗೆ ನೀಡಬಹುದಿತ್ತು. ವೇದಿಕೆಯಲ್ಲಿದ್ದ ನನಗೆ ಒಂದು ಮಾತು ಹೇಳಬಹುದಿತ್ತು. ಸಚಿವರ ಈ ನಡೆ ಜನರಿಗೆ ಯಾವ ರೀತಿಯ ಸಂದೇಶ ನೀಡಬಲ್ಲದು ಎಂದು ಕಿಡಿಕಾರಿದರು.

ಯಾರಿಗೂ ಅಧಿಕಾರ ಅಂತಸ್ತು ಶಾಶ್ವತವಲ್ಲ. ಇದು ರೊಟ್ಟಿ ಮಗುಚಿದ ಕಾಲ ಯಾವಾಗ ಏನು ಬೇಕಾದರೂ ಆಗಬಹುದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

AAP ಮತ್ತೇ ಅಧಿಕಾರಕ್ಕೆ

ದೆಹಲಿ: ದೆಹಲಿಯಲ್ಲಿ ಮತ್ತೇ ಆಮ್ ಆದ್ಮಿ ಪಾರ್ಟಿ ,(aap) ಅಧಿಕಾರಕ್ಕೆ ಬರಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆ ಗಳು ಹೇಳಿವೆ.

ಅತಿ ಉತ್ಸಾಹದಿಂದ ಚುನಾವಣೆ ಎದುರಿಸಿದ್ದ ಹಿಂದುತ್ವ, ಪೌರತ್ವ ಕಾಯ್ದೆ ಮುಂದು ಮಾಡಿದ್ದ ಬಿಜೆಪಿ ಅಧಿಕಾರದ ಹತ್ತಿರವೂ ಸುಳಿಯುವುದಿಲ್ಲ ಎಂದು ಹೇಳಿವೆ.

ಎಲ್ಲ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಹೆಚ್ಚು ಎಂದರೆ 25 ಸ್ಥಾನಗಳನ್ನು ಗಳಿಸಬಹುದು ಎಂದು ಹೇಳಿವೆ.

ಎಎಪಿ 50 ರಿಂದ 54 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿವೆ.

ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಕ್ಷೇತ್ರಗಳಲ್ಲೂ ಎಎಪಿ ಸೋಲುಂಡಿತ್ತು. ಬಿಜೆಪಿ ಎಲ್ಲ ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡು ಬೀಗಿತ್ತು.

ವಿಧಾನಸಭಾ ಚುನಾವಣೆಯಲ್ಲಿ ದೆಹಲಿ ಜನರು ಬಿಜೆಪಿಗೆ ಒಲವು ತೋರಿದಂತಿಲ್ಲ ಎಂಬುದನ್ನು ಸಮೀಕ್ಷೆ ಹೇಳಿವೆ.

12 ದೇವಾಲಯಗಳಿಂದ ಹೊರಡಲಿದೆ ಸಪ್ತಪದಿ ರಥ

Publicstory. In


Tumkur: ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾರ್ಯಕ್ರಮದಲ್ಲಿ ಪ್ರತಿ ನವ-ಜೋಡಿಗೆ ಅಗತ್ಯತೆಗನುಣವಾಗಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5000 ರೂ.ಗಳನ್ನು ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ 10000 ರೂ.ಗಳನ್ನು ಮತ್ತು ವಧುವಿಗೆ ಚಿನ್ನದ ತಾಳಿ, 2 ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ ಅಂದಾಜು 40,000 ರೂ.ಗಳಲ್ಲಿ) ಒಟ್ಟು 55,000 ರೂ.ಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.

ರಾಜ್ಯದ ಆಯ್ದ 12 ದೇವಾಲಯಗಳಿಂದ ಫೆ. 13 ರಂದು ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ಸಪ್ತಪದಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ, ಕರಪತ್ರಗಳು ಇರುತ್ತವೆ. ಈ ರಥ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಈ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿದೆ ಎಂದರು.

ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಹಾಗೂ ಬಡವರಿಗೆ ನೆರವಾಗುವ ದೃಷ್ಠಿಯಿಂದ ಸರ್ಕಾರ ಜಾರಿಗೊಳಿಸಿರುವ ಈ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ಜತೆ ಹೆಚ್ಚಿನ ಸಂಖ್ಯೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

 ಪ್ರಯಾಣಿಕರ ಆಭರಣ ಕಳವು

ಕೇರಳ: ಮಂಗಳೂರಿಗೆ ರೈಲಿನ ಮೂಲಕ ಆಗಮಿಸುತ್ತಿದ್ದ ಪ್ರಯಾಣಿಕರ ಚಿನ್ನದ ಆಭರಣಗಳನ್ನು ಶನಿವಾರ ಕಳ್ಳರು ಕಳವು ಮಾಡಿದ್ದಾರೆ.

ಎರಡು ಪ್ರತ್ಯೇಕ ರೈಲುಗಳಲ್ಲಿ ಕಳ್ಳತನ ನಡೆದಿದ್ದು ಪ್ರಯಾಣಿಕರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚ\nಸೂಪರ್‌ ಫಾಸ್ಟ್‌ ಚೆನ್ನೈ–ಮಂಗಳೂರು ರೈಲಿನಲ್ಲಿ ತಿರುಪುರ್‌ ಮತ್ತು ತಿರೂರ್‌ ಮಧ್ಯೆ ಕಳ್ಳತನ ನಡೆದಿದೆ. ಕಣ್ಣೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈ–ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಿಮಾರನ್‌ ಎಂಬ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರುಲಾಗಿದೆ.

ಚೆನ್ನೈ–ಮಂಗಳೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ತಿರುವನಂತಪುರ– ಮಂಗಳೂರು ಮಲಬಾರ್‌ ಎಕ್ಸ್‌ಪ್ರೆಸ್‌ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಕಳ್ಳತನ ನಡೆದಿದೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.

ಸೂಪರ್‌ ಫಾಸ್ಟ್‌ ಚೆನ್ನೈ–ಮಂಗಳೂರು ರೈಲಿನಲ್ಲಿ ತಿರುಪುರ್‌ ಮತ್ತು ತಿರೂರ್‌ ಮಧ್ಯೆ ಕಳ್ಳತನ ನಡೆದಿದೆ. ಕಣ್ಣೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈ–ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಿಮಾರನ್‌ ಎಂಬ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ 22 ಸಾವಿರ ರೂಪಾಯಿ ನಗದನ್ನು ಕಳ್ಳತನ ಮಾಡಲಾಗಿದೆ.

ತಿರುವನಂತಪುರದ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೂವರು ಸದಸ್ಯರಿದ್ದ ಕುಟುಂಬವೊಂದು ಮಲಬಾರ್‌ ಎಕ್ಸ್‌ಪ್ರೆಸ್‌ನಲ್ಲಿ ಕಣ್ಣೂರು ಬಳಿಯ ಪಯ್ಯನ್ನೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ಇವರ ಬಳಿಯಿದ್ದ ಸುಮಾರು 72 ಗ್ರಾಂ ಚಿನ್ನವನ್ನು ಕಳ್ಳರು ಕದ್ದಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

Tumukuru: ನೀನಾಸಂ ನಾಟಕ

Publicstory. in


Tumkur: ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 10 ರಂದು ಸೋಮವಾರ ಸಂಜೆ 6.45 ಕ್ಕೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನೀನಾಸಂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ನೊಬೆಲ್ ಪಾರಿತೋಷಕ ಪ್ರಶಸ್ತಿ ಪುರಸ್ಕøತ ಫ್ರೆಂಚ್ ನಾಟಕಕಾರ ಮಾರಿಸ್ ಮೆಟರ್‍ಲಿಂಕ್ ರಚಿಸಿರುವ ಅಂತರಂಗ ಎಂಬ ಈ ನಾಟಕವನ್ನು ಹೆಸರಾಂತ ನಿರ್ದೇಶಕ ಶಂಕರ್ ವೆಂಕಟೇಶ್ವರನ್ ನಿರ್ದೇಶಿಸಿದ್ದಾರೆ.

ಜಾಹೀರಾತು

ಈ ನಾಟಕಕ್ಕೆ 40 ರುಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ ಎಂದು ಝೆನ್ ಟೀಮ್‍ನ ಮುಖ್ಯಸ್ಥ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.

1 ಗಂಟೆ 20 ನಿಮಿಷ ಅವಧಿಯ ಈ ನಾಟಕ ವಿಶಿಷ್ಟ ರಂಗಕೃತಿ. ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಈ ನಾಟಕ ನಮ್ಮ ತಿಳಿವಿನ ಆಚೆಗಿರುವ ಅರಿವಿಲ್ಲದ ಸ್ಥಿತಿಯ ಬಗ್ಗೆ. ನಮ್ಮ ಮನಸ್ಸಿನ ಕಗ್ಗತ್ತಲೆಯೊಳಗೆ ನಾವೆ ಬಚ್ಚಿಟ್ಟುಕೊಂಡಿರುವ ಸಂಗತಿಯೊಂದನ್ನು ಅನಾವರಣಗೊಳಿಸುತ್ತದೆ.

ಸಂಕೇತವಾದಿ ಚಳವಳಿಯ ಪ್ರಮುಖನಾದ ಮಾರಿಸ್ ಮೆಟರ್‍ಲಿಂಕ್ ತನ್ನ ನಾಟಕದಲ್ಲಿ ಮುಖ್ಯವಾಗಿ ಸಾವು ಹಾಗೂ ಬದುಕಿನ ಅರ್ಥವನ್ನು ವಿಷಯವಾಗಿಟ್ಟುಕೊಂಡು ರಚಿಸಿದ್ದಾನೆ. ಎಲ್ಲರ ಬದುಕೂ ಸೂತ್ರದ ಗೊಂಬೆಗಳಂತೆಯೇ ತೆಳುವಾದ ದಾರವೊಂದನ್ನು ಆಶ್ರಯಿಸಿ ನೇತಾಡುತ್ತಿದೆ. ಇಂಥ ಲೋಕದೊಳಕ್ಕೆ ನಮ್ಮನ್ನು ಕರೆದೊಯ್ಯುವ ಮೆಟರ್‍ಲಿಂಗ್ ಈ ಜಗದ ಕಗ್ಗತ್ತಲೆಯನ್ನು ಅಷ್ಟಿಷ್ಟು ಬೆಳಗಿಸಿ ನಮ್ಮ ತಿಳಿವಿನಾಚೆಯ ವಲಯದೊಳಗಿರುವ ಸಂಗತಿಗಳ ದರ್ಶನ ಮಾಡಿಸುತ್ತಾನೆ.

ಅಪೌಷ್ಟಿಕತೆ ದೂರಮಾಡಲು ಅಕ್ಷರ‌ ದಾಸೋಹ ಸಹಕಾರಿ

Publicstory.in


Sira: ರಾಜ್ಯದ ಸರ್ಕಾರಿ‌ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಬಿಸಿಯೂಟ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಅಪೌಷ್ಟಿಕತೆ ದೂರಮಾಡಲು ಸಹಕಾರಿಯಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್ ಹೇಳಿದರು.

ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿ ಶಾಲೆಗಳ ಅಕ್ಷರ ದಾಸೋಹ ಸಿಬ್ಬಂದಿಗೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ
ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಅಡುಗೆ ಸಿಬ್ಬಂದಿಯ ಪರಿಶ್ರಮದಿಂದ ಇಂದು ಮಕ್ಕಳಿಗೆ ಯಾವುದೇ ಲೋಪವಿಲ್ಲದೆ ಅಕ್ಷರ‌ ದಾಸೋಹ ನಡೆಯುತ್ತಿದ್ದು, ತಾಯಂದಿರ ಸೇವೆ ಹೀಗೇ ಮುಂದುವರೆಯುವ ಮೂಲಕ‌ ಸರ್ಕಾರದ ಆಶಯ ಈಡೇರಲಿ ಎಂದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎನ್.ಕುಮಾರ್ ಮಾತನಾಡಿ, ಮಕ್ಕಳಿಗೆ ಸ್ವಚ್ಛತೆಯಿಂದ ಅಡುಗೆ ತಯಾರಿಸುವ ಮೂಲಕ ಮಗುವಿನ, ಶಾಲೆಯ, ಶಿಕ್ಷಣ ಇಲಾಖೆಯ ಆರೋಗ್ಯ ಕಾಪಾಡುತ್ತಿರುವುದು ಪ್ರಶಂಸಾರ್ಹ. ಹಿಂದಿನ ಕಾಲದಲ್ಲಿ ಮನೆತುಂಬಾ ಮಕ್ಕಳಿರುತ್ತಿದ್ದರು. ಪ್ರಸ್ತುತ ವಿಘಟನೆ ಹೊಂದಿದ ಕುಟುಂಬಗಳಲ್ಲಿ ಒಂದು ಅಥವಾ ಎರಡು ಮಕ್ಕಳು‌ ಮಾತ್ರ ಶಾಲೆಗೆ ಬರುತ್ತಾರೆ. ಅವರಿಗೆ ಯಾವುದೇ ಅವಘಡಗಳು ನಡೆಯದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ತಾಲ್ಲೂಕು ಪಂಚಾಯತಿ ವತಿಯಿಂದ ನೀಡುತ್ತಿರುವ ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಲು‌ ತಿಳಿಸಿದರು.

ಕಾರ್ಯಾಗಾರದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರ್,
ಸುರಕ್ಷತೆ‌ ಕುರಿತ ಸಂಪನ್ಮೂಲ ವ್ಯಕ್ತಿ ಈಶ್ವರ್, ಕಾರ್ಮಿಕ ಇಲಾಖೆಯ ಲೇಪಾಕ್ಷಿ, ಸಿ ಆರ್ ಪಿಗಳಾದ ಕೃಷ್ಣಮೂರ್ತಿ, ಶ್ರೀರಾಮ‌ನಾಯಕ, ಭೂತನಾಯಕ ಇತರರು ಪಾಲ್ಗೊಂಡಿದ್ದರು.

Work initiated on GI for ball copra

Tumkur: A geographical indication (GI) is a sign used on products that have a specific geographical origin and possess qualities or a reputation that are due to that origin.

The masses are constantly identifying and using those products that have been tied to a fixed location or thereby defining the quality or features of certain products. The use of such a place name is geographical Location. To avoid misleading the public and to avoid inappropriate competition, WTO members have agreed to the TRIPS Agreement to secure a lasting protection for GIs.
With the addition of Geographical Origin to the specific quality or features of the products,

GI tag has secured a new dimension in the market. There are over 100 registered Geographical Indications in India today, such as agricultural products, textiles and handicrafts. Darjeeling tea is the most common example in India. Champagne wine is a reputed GI globally.

In this regard, it is an urgent task to register our proud product known as ‘Tiptur Copra’ worldwide. So if interested persons, organizations and NGOs devote their time and effort in sharing their Knowledge, Expertise, Experience, documents and technical aspects on the product, they are most welcome.

Come, let us all get together and take a special place in the domestic and foreign markets, avoiding the fake and illegal competition for our Unique Copra made by traditional method of our ancestors.

Please feel free to call or message,
Srikanth 9632904901
srikanthkelahatti@gmail.com
State Secretary, Price Monitoring Committee, Tiptur

Tumukuru city: ಸೋರಿಕೆ ಪರಿಶೀಲನೆ‌‌ ನೆಪ: ಬೇಕಾಬಿಟ್ಟಿ ನೀರು ಬಿಟ್ಟರು ರಸ್ತೆಗೆ…ಇನ್ನೂ ನಿಂತಿಲ್ಲ ನೀರು….

ಕೆ.ಇ.ಸಿದ್ದಯ್ಯ


ತುಮಕೂರು: ನಗರದ ಕೆಲವು ಬಡಾವಣೆಗಳಲ್ಲಿ ಸೋರಿಕೆ ಪರಿಶೀಲಿಸುವ ನೆಪದಲ್ಲಿ ದಿನಪೂರ್ತಿ ನಲ್ಲಿಗಳಲ್ಲಿ ನೀರು ಹರಿದು ವ್ಯರ್ಥವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.

ಸೋಮೇಶ್ವರ ಪುರಂ, ಎಸ್.ಐ.ಟಿ, ಸಾಬರಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ನಲ್ಲಿಗಳಲ್ಲಿ ನೀರು ಬಿಡುತ್ತಿದ್ದು ತೊಟ್ಟಿಗಳು ತುಂಬಿ ರಸ್ತೆಗೆ ಹರಿದು ಹೋಗುತ್ತಿದೆ.

ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದ್ದರೂ ಹೀಗೆ ನೀರು ಪೋಲಾಗುತ್ತಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿಲ್ಲದ ಕಾರಣಕ್ಕೆ ವಾರಕ್ಕೆ ಒಮ್ಮೆ ನೀರು ಬಿಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುವಂತೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕೆಲವು ಕಡೆಗಳಲ್ಲಿ ನಲ್ಲಿಗಳಿಗೆ ಮೀಟರ್ ಅಳವಡಿಸಿದೆ. ಪರೀಕ್ಷಾರ್ಥವಾಗಿ ನೀರು ಹರಿಸಿದರೆ ಮೀಟರ್ ಗಳು ಚಾಲ್ತಿಯಾಗುತ್ತವೆ. ಮೀಟರ್ ಓಡಿದರೆ ಸುಖಾಸುಮ್ಮನೆ ನೀರಿನ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಕೆಲವು ದೂರಿದ್ದಾರೆ.

ಬಹುತೇಕ ಬಡಾವಣೆಯ ಕೆಲವು ಕಡೆ ನಲ್ಲಿಗಳಿಗೆ ಮೀಟರ್ ಆಳವಡಿಸಿಲ್ಲ. ಆದರೂ ನೀರು ಸೋರಿಕೆಯ ಕುರಿತು ಟೆಸ್ಟ್ ಮಾಡಲು ನಲ್ಲಿಗಳಲ್ಲಿ ನೀರು ಹರಿಸುತ್ತಿದ್ದಾರೆ. ಅರ್ಧ ಗಂಟೆ ನೀರು ಹರಿಸಿ ಟೆಸ್ಟ್ ಮಾಡಿದರೆ ಆಗುವುದಿಲ್ಲವೇ? ಪರೀಕ್ಷೆ ಮಾಡೋದು ಅಂದ್ರೆ ಇಡೀ ದಿನ ನೀರು ಬಿಡಬೇಕೇ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಹಾಕುತ್ತಾರೆ.

ರೈಸಿಂಗ್ ಮೇನ್ ಗೆ ಪೈಪ್ ಗಳನ್ನು ಸಂಪರ್ಕ ಕಲ್ಪಿಸಿರುವ ಜಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಅಂದರೆ ವೈಜ್ಞಾನಿಕವಾಗಿ ನಲ್ಲಿಗಳನ್ನು ಅಳವಡಿಸಿಲ್ಲ. ಅಷ್ಟೇ ಅಲ್ಲದೆ ಖಾಲಿ ಇರುವ ಮನೆಗಳಲ್ಲಿ ನಲ್ಲಿಗಳ ಸಂಪರ್ಕವನ್ನು ಸಂಪುಗಳಿಗೆ ಬಿಟ್ಟಿಲ್ಲ. ಬದಲಿಗೆ ಮನೆಯ ಆವರಣದಲ್ಲಿ ನಲ್ಲಿಯನ್ನು ಬೇಕಾಬಿಟ್ಟಿ ಹಾಕಿದ್ದು ನೀರು ವ್ಯರ್ಥವಾಗಲು ಕಾರಣವಾಗಿದೆ.

ಕೆಲವು ಕಡೆ ನಲ್ಲಿಗಳಿಗೆ ಮೀಟರ್ ಅಳವಡಿಸಿದ್ದರೂ ಮೀಟರ್ ಅಳವಡಿಕೆಗೂ ಮೊದಲು ಪೈಪ್ ಗಳನ್ನು ತೆಗೆದು ಬಿಟ್ಟಿದ್ದಾರೆ. ಇದರಿಂದಲೂ ಕೂಡ ನೀರು ಪೋಲಾಗುತ್ತಿದೆ. ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಬೇಸಿಗೆಗೆ ಆಗುವಷ್ಟು ನೀರು ಇದೆಯೇ ಎಂಬ ಬಗ್ಗೆಯೂ ಯಾರೂ ಯೋಚಿಸಿದಂತೆ ಕಾಣುತ್ತಿಲ್ಲ.

ತುಮಕೂರಿನ ಕೀರ್ತಿ ಹೆಚ್ಚಿಸಿದ ಕಡಬಾದ ಮಕ್ಕಳು

Bangalore: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ತುಮಕೂರು ಜಿಲ್ಲೆಯ ವಾಲಿಬಾಲ್ ತಂಡ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಫೆಬ್ರವರಿ 3 ರಿಂದ 9ರವರೆಗೆ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಿನಿ ಒಲಂಪಿಕ್ ನಡೆಯುತ್ತಿದ್ದು ಎಂಟು ಅತ್ಯುತ್ತಮ ತಂಡಗಳು ಭಾಗವಹಿಸಿವೆ. ತುಮಕೂರು ಜಿಲ್ಲೆಯಿಂದಲೂ ಅತ್ಯುತ್ತಮ ವಾಲಿಬಾಲ್ ತಂಡ ಮಿನಿ ಒಲಂಪಿಕ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡು ಬಂದಿದೆ.

ಗುಬ್ಬಿ ತಾಲೂಕು ಕಡಬಾದ ಕರ್ನಾಟಕ ಪಬ್ಲಿಕ್ ಶಾಲೆಯ 10 ಮಕ್ಕಳು ಮತ್ತು ಇತರೆ ಶಾಲೆಯಿಂದ ಇಬ್ಬರು ಮಕ್ಕಳು ಸೇರಿ ತುಮಕೂರು ಜಿಲ್ಲೆಯಿಂದ ವಾಲಿಬಾಲ್ ತಂಡ ದೇಶದಲ್ಲಿ ಅದೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಿನಿ ಒಲಂಪಿಕ್ ಕ್ರೀಡಾ ಕೂಟ ನಡೆಯುತ್ತಿದ್ದು ತುಮಕೂರು ತಂಡ ದ್ವಿತೀಯ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಡಬಾದ ಕರ್ನಾಟಕ ಪಬ್ಲಿಕ್ ಶಾಲೆಯ ಮೂವರು ಮಕ್ಕಳು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಈ ತಂಡದಲ್ಲಿಯೂ ಅವರು ಇದ್ದರು. ನಮ್ಮದು ಬೆಸ್ಟ್ ತಂಡವಾಗಿತ್ತು ಮತ್ತು ಬಲಿಷ್ಟವಾಗಿತ್ತು. ಹೀಗಾಗಿ ನಮ್ಮ ತಂಡ ದ್ವಿತೀಯ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಕೋಚ್ ವಸೀಂ ಪಬ್ಲಿಕ್ ಸ್ಟೋರಿ.ಇನ್ ಜೊತೆ ದೂರವಾಣಿಯಲ್ಲಿ ತಿಳಿಸಿದರು.

ಮಹಿಳಾ ವಾಲಿಬಾಲ್ ತಂಡವೂ ಮಿನಿ ಒಲಂಪಿಕ್ ಕ್ರೀಡೆಯಲ್ಲಿ ಭಾಗಿಯಾಗಿತ್ತು. ಉತ್ತಮ ಪ್ರದರ್ಶನ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ ಎಂದರು.

14 ವರ್ಷದ ಒಳಗಿನ ಮಕ್ಕಳು ಈ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ ಕ್ರೀಡಾ ಕೂಟಕ್ಕೆ ಅನ್ವಯವಾಗುವ ನಿಯಮಗಳನ್ನು ಇಲ್ಲೂ ಕ್ರೀಡೆಯಲ್ಲಿ ವಿಧಿಸಲಾಗಿತ್ತು.

ಬೆಂಗಳೂರು ವಾಲಿಬಾಲ್ ತಂಡದ ವಿರುದ್ಧ ತುಮಕೂರು ತುಂಡ ಸೆಣಸಿ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿಪದಕವನ್ನು ಗೆದ್ದುಕೊಂಡು ಬಂದಿದೆ.