ಕೇರಳ: ಮಂಗಳೂರಿಗೆ ರೈಲಿನ ಮೂಲಕ ಆಗಮಿಸುತ್ತಿದ್ದ ಪ್ರಯಾಣಿಕರ ಚಿನ್ನದ ಆಭರಣಗಳನ್ನು ಶನಿವಾರ ಕಳ್ಳರು ಕಳವು ಮಾಡಿದ್ದಾರೆ.
ಎರಡು ಪ್ರತ್ಯೇಕ ರೈಲುಗಳಲ್ಲಿ ಕಳ್ಳತನ ನಡೆದಿದ್ದು ಪ್ರಯಾಣಿಕರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚ\nಸೂಪರ್ ಫಾಸ್ಟ್ ಚೆನ್ನೈ–ಮಂಗಳೂರು ರೈಲಿನಲ್ಲಿ ತಿರುಪುರ್ ಮತ್ತು ತಿರೂರ್ ಮಧ್ಯೆ ಕಳ್ಳತನ ನಡೆದಿದೆ. ಕಣ್ಣೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈ–ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಿಮಾರನ್ ಎಂಬ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರುಲಾಗಿದೆ.
ಚೆನ್ನೈ–ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ತಿರುವನಂತಪುರ– ಮಂಗಳೂರು ಮಲಬಾರ್ ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಕಳ್ಳತನ ನಡೆದಿದೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.
ಸೂಪರ್ ಫಾಸ್ಟ್ ಚೆನ್ನೈ–ಮಂಗಳೂರು ರೈಲಿನಲ್ಲಿ ತಿರುಪುರ್ ಮತ್ತು ತಿರೂರ್ ಮಧ್ಯೆ ಕಳ್ಳತನ ನಡೆದಿದೆ. ಕಣ್ಣೂರಿನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚೆನ್ನೈ–ಮಂಗಳೂರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪೊನ್ನಿಮಾರನ್ ಎಂಬ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ 22 ಸಾವಿರ ರೂಪಾಯಿ ನಗದನ್ನು ಕಳ್ಳತನ ಮಾಡಲಾಗಿದೆ.
ತಿರುವನಂತಪುರದ ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೂವರು ಸದಸ್ಯರಿದ್ದ ಕುಟುಂಬವೊಂದು ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಕಣ್ಣೂರು ಬಳಿಯ ಪಯ್ಯನ್ನೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿತ್ತು. ಇವರ ಬಳಿಯಿದ್ದ ಸುಮಾರು 72 ಗ್ರಾಂ ಚಿನ್ನವನ್ನು ಕಳ್ಳರು ಕದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.